SEARCH HERE

Friday, 1 October 2021

ಹುರಿಗಡಲೆ

ಹುರಿಗಡಲೆ ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವುದರಿಂದ ಹಿಡಿದು ತೂಕವನ್ನು ಕಂಟ್ರೋಲ್ ಮಾಡುವವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.

 ಹುರಿಗಡಲೆಯು ನಾಲಗೆಗೆ ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ? ಹುರಿಗಡಲೆಯನ್ನು ಕೆಲವರು ಹಾಗೇ ತಿಂದ್ರೆ ಇನ್ನೂ ಕೆಲವರು ಹುರಿಗಡಲೆ ಚಟ್ನಿ ಮಾಡಿ ತಿನ್ನುತ್ತಾರೆ. ಒಟ್ಟಾರೆ ನೀವು ಯಾವುದೇ ರೀತಿಯಲ್ಲಿ ತಿಂದ್ರೂ ಕೂಡಾ ಹುರಿಗಡಲೆಯಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ.

​ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ

ಓರ್ವ ವ್ಯಕ್ತಿ ಆರೋಗ್ಯದಿಂದಿರಬೇಕಾದರೆ ಆತನ ಜೀರ್ಣಕ್ರಿಯೆ ಸರಿಯಾಗಿರಬೇಕು. ದುರ್ಬಲ ಜೀರ್ಣಕ್ರಿಯೆಯಿಂದ ವಿವಿಧ ರೋಗಗಳನ್ನು ಎದುರಿಸಬೇಕಾಗುತ್ತದೆ. ನೀವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಬೆಳಗಿನ ಆಹಾರದಲ್ಲಿ ನೀವು ಸ್ವಲ್ಪ ಹುರಿಗಡಲೆಯನ್ನು ಸೇರಿಸಿಕೊಳ್ಳಬಹುದು. ಹುರಿಗಡಲೆ ನಿಮ್ಮ ಜೀರ್ಣ ಶಕ್ತಿಯನ್ನು ಸಮತೋಲನಗೊಳಿಸುದಲ್ಲದೆ ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.

1.​ರಕ್ತವನ್ನು ಶುದ್ಧಗೊಳಿಸುತ್ತದೆ

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹುರಿಗಡಲೆಯನ್ನು ತಿನ್ನುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಎಲ್ಲಾ ವಿಷಗಳು ಸುಲಭವಾಗಿ ಹೊರಹಾಕಲ್ಪಡುತ್ತವೆ. ಹುರಿಗಡಲೆ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

2.​ಪುರುಷರಿಗೂ ಒಳ್ಳೆಯದು

ಹುರಿಗಡಲೆಯನ್ನು ತಿನ್ನುವುದು ಪುರುಷರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ಹುರಿಗಡಲೆ ತಿನ್ನುವುದರಿಂದ ಪುರುಷರಿಗೆ ಸಂಬಂಧಿಸಿದ ವೈಯಕ್ತಿಕ ಸಮಸ್ಯೆಗಳು ದೂರವಾಗುತ್ತವೆ. ಇದರಿಂದ ವೀರ್ಯದ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ವೀರ್ಯದ ಗುಣಮಟ್ಟವೂ ಸುಧಾರಿಸುತ್ತದೆ. ಲೈಂಗಿಕ ಸಮಸ್ಯೆ ದೂರವಾಗುತ್ತದೆ. ಹುರಿಗಡಲೆಯು ಪುರುಷತ್ವವನ್ನು ಹೆಚ್ಚಿಸುತ್ತದೆ.

3.​ತೂಕ ನಿಯಂತ್ರಣ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಹಿಡಿ ಹುರಿಗಡಲೆಯನ್ನು ತಿನ್ನುವ ಮೂಲಕ ನಿಮ್ಮ ತೂಕವನ್ನು ಸಹ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹುರಿಗಡಲೆಯಲ್ಲಿ ಕ್ಯಾಲೋರಿ ಕಡಿಮೆ ಇದೆ ಫೈಬರ್ ಹಾಗೂ ಪ್ರೋಟಿನ್ ಅಧಿಕ ಪ್ರಮಾಣದಲ್ಲಿರುತ್ತದೆ. ನೀವು ಸ್ಥೂಲಕಾಯತೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಬೆಳಗಿನ ಉಪಾಹಾರಕ್ಕಾಗಿ ನೀವು ಹುರಿಗಡಲೆಯನ್ನು ತಿನ್ನಬಹುದು. ಹುರಿಗಡಲೆ ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ, ಬೇಗನೇ ಹಸಿವಾಗುವುದಿಲ್ಲ. ಹಾಗಾಗಿ ನಿಮ್ಮ ತೂಕವು ನಿಯಂತ್ರಣದಲ್ಲಿರುತ್ತದೆ.

4.​ಮಲಬದ್ಧತೆ ಸಮಸ್ಯೆ

ಮಲಬದ್ಧತೆ ಹೋಗಲಾಡಿಸಲು ಹುರಿಗಡಲೆ ಪ್ರಯೋಜನಕಾರಿಯಾಗಿದೆ. ನೀವು ಕೆಲವು ಹುರಿಗಡಲೆಯನ್ನು ಹುರಿದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ಮಲಬದ್ಧತೆಯ ಸಮಸ್ಯೆಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ನೀಡುತ್ತದೆ. ನಿಮಗೆ ಮಲಬದ್ಧತೆ ಇದ್ದರೆ, ನೀವು ಕೆಲವು ದಿನಗಳವರೆಗೆ ನಿರಂತರವಾಗಿ ಹುರಿಗಡಲೆಯನ್ನು ತಿನ್ನಬಹುದು.

5.​ರೋಗನಿರೋಧಕ ಶಕ್ತಿ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹುರಿಗಡಲೆ ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಬಲವಾದ ರೋಗನಿರೋಧಕ ಶಕ್ತಿಯು ದೇಹಕ್ಕೆ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಒಂದು ಹಿಡಿ ಹುರಿಗಡಲೆಯನ್ನು ಸೇವಿಸಿದರೆ, ನೀವು ಋತುಮಾನದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

***


No comments:

Post a Comment