SEARCH HERE

Friday 1 October 2021

ಮೊಸರು ಮತ್ತು ಸಕ್ಕರೆ

ಮನೆಯಿಂದ ಹೊರಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಏಕೆ ತಿನ್ನುತ್ತಾರೆ?

ಮನೆಯಿಂದ ಹೊರಡುವ ಮೊದಲು ಮೊಸರು-ಸಕ್ಕರೆಯನ್ನು ಏಕೆ ತಿನ್ನುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ನೀವು ಅಂದುಕೊಂಡ ಕೆಲಸ ಯಶಸ್ವಿಯಾಗುತ್ತದೆಂಬ ನಂಬಿಕೆ ಇದರ ಹಿಂದಿದೆ. ಮೊಸರು-ಸಕ್ಕರೆಯನ್ನು ಸೇವಿಸಿದರೆ ನೀವು ದಿನವಿಡೀ ಸಕ್ರಿಯರಾಗಿರುತ್ತೀರಿ. ಇವೆರಡನ್ನು ಒಟ್ಟಿಗೆ ಸೇವಿಸಿದರೆ ನಿಮ್ಮ ದೇಹವು ತಕ್ಷಣವೇ ಗ್ಲೂಕೋಸ್ ಅನ್ನು ಪಡೆಯುತ್ತದೆ.

ಮೊಸರು ಮತ್ತು ಸಕ್ಕರೆಯನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ

ಮೊಸರು-ಸಕ್ಕರೆ ತಿನ್ನುವುದರಿಂದ ನಮ್ಮ ದೇಹವು ತಕ್ಷಣವೇ ಗ್ಲೂಕೋಸ್ ಪಡೆಯುತ್ತದೆ

ಶುಭ ಸಮಾರಂಭದಲ್ಲಿ ಮನೆಯಿಂದ ಹೊರ ಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ತಿನ್ನಿಸುವ ಸಂಪ್ರದಾಯವನ್ನು ನೀವು ನೋಡಿರಬೇಕು. ಇದರ ಹಿಂದೆ ಹಲವು ಕಾರಣಗಳಿವೆ. ಯಾರೇ ಆಗಲಿ ಮನೆಯಿಂದ ಹೊರಹೋಗುವಾಗ ಅವರಿಗೆ ಮೊಸರು ಮತ್ತು ಸಕ್ಕರೆಯನ್ನು ತಿನ್ನಿಸುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ. ಹೀಗಾಗಿಯೇ ಮನೆಯಿಂದ ಹೊರಗೆ ಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಸೇವಿಸಬೇಕೆಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಇದರ ಹಿಂದಿನ ನಿಖರ ಕಾರಣವೇನು? ಮತ್ತು ಇದನ್ನು ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.    

1.ಮೊಸರು ಮತ್ತು ಸಕ್ಕರೆ ತಿನ್ನಲು ಕಾರಣವೇನು..?

ವರದಿಗಳ ಪ್ರಕಾರ ಮೊಸರು-ಸಕ್ಕರೆ ತಿನ್ನುವುದರಿಂದ ನಮ್ಮ ದೇಹವು ತಕ್ಷಣವೇ ಗ್ಲೂಕೋಸ್ ಅನ್ನು ಪಡೆಯುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟಾಗ ಮೊಸರು-ಸಕ್ಕರೆ ತಿನ್ನಿಸಲು ಇದೇ ಮುಖ್ಯ ಕಾರಣ. ನೀವು ಗ್ಲೂಕೋಸ್‌ನೊಂದಿಗೆ ದಿನವಿಡೀ ಸಕ್ರಿಯವಾಗಿರುತ್ತೀರಿ. ಮೊಸರು-ಸಕ್ಕರೆಯಿಂದ ಗ್ಲೂಕೋಸ್ ತಕ್ಷಣವೇ ನಿಮ್ಮ ಮನಸ್ಸು ಮತ್ತು ದೇಹವನ್ನು ಶಕ್ತಿಯಿಂದ ತುಂಬಿಸುತ್ತದೆ, ಇದು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ ಮತ್ತು ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ. ಇದೇ ಕಾರಣಕ್ಕೆ ಹಿರಿಯರು ಮನೆಯಿಂದ ಹೊರಡುವ ಮೊದಲು ಮೊಸರು-ಸಕ್ಕರೆ ಸೇವಿಸುವಂತೆ ಸಲಹೆ ನೀಡುತ್ತಾರೆ.  

2.ಮೊಸರು ತಿನ್ನುವ ಪ್ರಯೋಜನಗಳು

ಮೊಸರು ತಿನ್ನುವುದರಿಂದ  ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಇದರಿಂದ ನಿಮಗೆ ಹೊಟ್ಟೆಯ ಸಮಸ್ಯೆಗಳು ಬರುವುದಿಲ್ಲ. ಬೇಸಿಗೆಯಲ್ಲಿ ಮೊಸರು ಮತ್ತು ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಮನೆಯಿಂದ ಹೊರಡುವ ಮೊದಲು ಮೊಸರು-ಸಕ್ಕರೆಯನ್ನು ಸೇವಿಸಿದರೆ ನಿಮ್ಮ ದೇಹವು ತ್ವರಿತ ಶಕ್ತಿಯನ್ನು ಪಡೆಯುತ್ತದೆ. ಇದಲ್ಲದೆ ಕಡಿಮೆ ನೀರು ಕುಡಿಯುವವರಿಗೆ ಮೊಸರು ಉತ್ತಮ ಆಯ್ಕೆಯಾಗಿದೆ. ಒಟ್ಟಾರೆ ಮೊಸರು ಮತ್ತು ಸಕ್ಕರೆ  ತಿನ್ನುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ದೇಹದಲ್ಲಿ ಉಂಟಾಗುವ ಹಲವು ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

****

 

No comments:

Post a Comment