SEARCH HERE

Friday, 1 October 2021

ಕೀಲು ನೋವಿನ ಪರಿಹಾರ



ಕೀಲು ನೋವಿನ ಪರಿಹಾರಕ್ಕೆ  ಜ್ಯೂಸ್ !!!!!

🧿🌸🌹🧿🌸🌹🧿🌸🌹

ಸಂಧಿವಾತ ಇಂತಹದ್ದೇ ವಯಸ್ಸಿಗೆ ಬರಬೇಕು ಎಂದೇನೂ ಇಲ್ಲ. ಚಿಕ್ಕ ವಯಸ್ಸಿನಿಂದ ವೃದ್ದರವರೆಗೆ ಯಾರಿಗೂ ಬರಬಹುದು. ಆದರೆ ಸಾಮಾನ್ಯವಾಗಿ ಮೂವತ್ತೈದು ದಾಟಿದ ಬಳಿಕ ಈ ತೊಂದರೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ನೋವು ಕಂಡುಬಂದರೆ ಸಾಮಾನ್ಯವಾಗಿ ಎಲ್ಲರೂ ನೋವು ನಿವಾರಕಗಳನ್ನು ತೆಗೆದುಕೊಂಡು ತಾತ್ಕಾಲಿಕವಾಗಿ ಶಮನ ಮಾಡಿಕೊಳ್ಳುತ್ತಾರೆ. ಆದರೆ ನೋವಿನ ಮೂಲ ಕಾರಣ ಹಾಗೇ ಉಳಿದುಬಿಡುವ ಕಾರಣ ಮುಂದೆ ಈ ನೋವುನಿವಾರಕಗಳ ಪ್ರಭಾವ ಕಡಿಮೆಯಾದ ಬಳಿಕ ಮತ್ತೆ ನೋವು ಮರುಕಳಿಸುತ್ತದೆ. ಕೀಲು ನೋವಿನ ಪರಿಹಾರಕ್ಕೆ ಪೂರಕ ಔಷಧಿ ಯಾವುದು?


ಆದ್ದರಿಂದ ನೋವಿನ ಮೂಲಕಾರಣವನ್ನು ನಿವಾರಿಸದ ಹೊರತು ಈ ನೋವಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಸಂಧುಗಳ ನೋವಿನ ಮೂಲ ಕಾರಣವನ್ನು ನಿವಾರಿಸಲು ಸಮರ್ಥವಾಗಿರುವ ಮನೆಮದ್ದು ಒಂದು ಬಳಕೆಯಲ್ಲಿದ್ದು ಇದನ್ನು ಸತತವಾಗಿ ಏಳು ದಿನಗಳ ಕಾಲ ಸೇವಿಸಿದರೆ ನೋವು ಕಡಿಮೆಯಾಗುವುದು ಮಾತ್ರವಲ್ಲ, ಮುಂದೆ ಮರುಕಳಿಸುವ ಸಾಧ್ಯತೆಯೂ ಅಪಾರವಾಗಿ ಕಡಿಮೆಯಾಗುತ್ತದೆ. 


 ಅನಾನಾಸು ಹಣ್ಣನ್ನು ಪ್ರಮುಖ ಬಳಸಲಾಗುವ ಈ ವಿಧಾನದ ಬಗ್ಗೆ ಅರಿಯೋಣ:


ಅಗತ್ಯವಿರುವ ಸಾಮಾಗ್ರಿಗಳು:


*ಅನಾನಸ್ ಹಣ್ಣಿನ ತುಂಡುಗಳು: ಎರಡು ಕಪ್ 2 ಚಿಕ್ಕದಾಗಿ ಹೆಚ್ಚಿದ್ದು. ಸತತ ಒಂದು ವಾರ ಅನಾನಸ್ ತಿಂದರೆ, ಆರೋಗ್ಯ ವೃದ್ಧಿ!


*ಬಾದಾಮಿ : ನಾಲ್ಕರಿಂದ ಐದು


*ಜೇನು: ಒಂದು ದೊಡ್ಡಚಮಚ


*ಲವಂಗ: ಎರಡರಿಂದ ಮೂರು


*ಮೇಲ್ಕಂಡ ಎಲ್ಲಾ ಸಾಮಾಗ್ರಿಗಳಲ್ಲಿ ನಿಸರ್ಗ ಹಲವು ವಿಧದ ಪೋಷಕಾಂಶಗಳನ್ನಿರಿಸಿದೆ. ಇದರಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳು ಇದ್ದು ಇದರ ಪೋಷಕಾಂಶಗಳು ಸ್ನಾಯು ಮತ್ತು ಅಸ್ಥಿರಜ್ಜುಗಳನ್ನು ದೃಢಗೊಳಿಸಲು ಸಮರ್ಥವಾಗಿವೆ. ಇದರ ಮೂಲಕ ಮೂಳೆಗಳು ಹೆಚ್ಚು ದೃಢಗೊಳ್ಳಲು ಸಾಧ್ಯವಾಗುತ್ತದೆ.


*ಅಲ್ಲದೇ ಸಂಧಿವಾತಕ್ಕೆ ಕಾರಣವಾದ ಉರಿಯೂತ ಇರುವ ಸ್ಥಳಗಳಲ್ಲಿ ಉರಿಯೂತದ ಪ್ರಭಾವವನ್ನು ಕಡಿಮೆಗೊಳಿಸಿ ನೋವು ಕಡಿಮೆಯಾಗುವಂತೆ ಮಾಡುತ್ತದೆ.


*ವಿಶೇಷವಾಗಿ ಅನಾನಾಸಿನಲ್ಲಿರುವ ವಿಟಮಿನ್ ಸಿ, ಮೆಗ್ನೇಶಿಯಂ, ಕ್ಯಾಲ್ಸಿಯಂ ಮತ್ತು ಲ್ಯಾಮೆಬ್ರೇನ್ ಎಂಬ ಪೋಷಕಾಂಶ ಸಂಧಿವಾತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಈ ಪೇಯವನ್ನು ಸತತವಾಗಿ ಏಳು ದಿನಗಳ ಕಾಲ ಕುಡಿಯುತ್ತಾ ಬಂದರೆ ನೋವು ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡುಬರುತ್ತದೆ.


ತಯಾರಿಕಾ ವಿಧಾನ:


*ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯ ದೊಡ್ಡ ಜಾರ್ ನಲ್ಲಿ ಹಾಕಿ ಗೊಟಾಯಿಸಿ


*ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗಾಗಿಸಿ, ತದನಂತರ ಲೋಟಕ್ಕೆ ಸುರಿದುಕೊಂಡು ಕುಡಿಯಿರಿ.


*ಉತ್ತಮ ಪರಿಣಾಮ ಪಡೆಯಲು ದಿನಕ್ಕೆ ಎರಡು ಲೋಟ ಕುಡಿಯಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಕುಡಿದು ಮುಂದಿನ ಒಂದು ಗಂಟೆ ಏನನ್ನೂ ಸೇವಿಸಬಾರದು. ಅಂತೆಯೇ ರಾತ್ರಿ ಮಲಗುವ ಒಂದು ಗಂಟೆಗೂ ಮುನ್ನ ಕುಡಿದು ಕೊಂಚ ನಡೆದಾಡಿ ಮಲಗಬೇಕು. ಒಂದು ವಾರ ಸತತವಾಗಿ ಈ ವಿಧಾನ ಅನುಸರಿಸಿದ ಬಳಿಕ ಗಮನಾರ್ಹ ಬದಲಾವಣೆ ಕಂಡುಬರುತ್ತದೆ.

***

 

No comments:

Post a Comment