SEARCH HERE

Friday 1 October 2021

ಹಗರಣ ನ್ಯಾಷನಲ್ ಹೆರಾಲ್ಡ್ ಕೇಸ್

 NATIONAL HERALD CASE


ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್

ಇಂದಿನ ನ್ಯೂಸ್ ನೋಡಿ ತಿಳಕೊಂಡಿದ್ದರ ಸಂಕ್ಷೀಪ್ತ

೧೯೩೭ ರಲ್ಲಿ ನೆಹರೂರವರು ಕಾಂಗ್ರೆಸ್ ಮುಖವಾಣಿಯಾಗಿ ಒಂದು ಪತ್ರಿಕೆ ಬೇಕೆಂದು ಬಯಸಿದಾಗ ನ್ಯಾಷನಲ್ ಹೆರಾಲ್ಡ್  ಪತ್ರಿಕೆ ಶುರುವಾಗುತ್ತದೆ

ಅದರ ಪಬ್ಲಿಕೇಶನ್ ಹೌಸ್ associated journals Ltd. (AJL)

AJL ನ್ನು 5000 ಸ್ವಾತಂತ್ರ್ಯ ಹೋರಾಟಗಾರು ದುಡ್ಡು ಹಾಕಿ ಶುರುಮಾಡಿದರು. They were share holders.

ನಂತರದ ವರ್ಷ ಗಳಲ್ಲಿ ಕಾಂಗ್ರೆಸ್ ಸರಕಾರ ಅದಕ್ಕೆ AJLಗೆ ಪತ್ರಿಕೆ ನಡೆಸಲು ದೆಹಲಿ, ಮುಂಬಯ್ ಮುಂತಾದ ನಗರಗಳಲ್ಲಿ  ಜಮೀನು ನೀಡುತ್ತದೆ. ಅವುಗಳ ಇಂದಿನ value ಸುಮಾರು 5000 ಕೋಟಿ.

ನಂತರ 2008 ರಲ್ಲಿ 90 ಕೋಟಿ ನಷ್ಟದೊಂದಿಗೆ ಪತ್ರಿಕೆ ಮುಚ್ಚಲ್ಪಡುತ್ತದೆ.

ಆಗ ಅದರಲ್ಲಿ 1057 ಜನ share holders ಉಳಿದಿದ್ದರು.

2010 ರಲ್ಲಿ young Indian pvt Ltd. company 50 ಲಕ್ಷದ ಬಂಡವಾಳದೊಂದಿಗೆ ಹುಟ್ಟಿಕೊಳ್ಳುತ್ತದೆ. ಅದರಲ್ಲಿ ರಾಹುಲ್, ಸೋನಿಯಾ ತಲಾ 38% ಒಟ್ಟೂ 76% ಮತ್ತು ಉಳಿದ 24% ಗೆ ಮೊತಿಲಾಲ್ ವೋರಾ, ಆಸ್ಕರ್ ಪರ್ನಾಂಡಿಸ್ , ಸಾಮ್ ಪಿಟ್ರೊಡಾ ಮುಂತಾದವರು ಪಾಲುದಾರರಾಗಿರುತ್ತಾರೆ.

2011 ರಲ್ಲಿ ಯಂಗ್ ಇಂಡಿಯಾ ಕಂಪೆನಿ ಕಾಂಗ್ರೆಸ್ ಪಕ್ಷದಿಂದ 90 ಕೋಟಿ ಸಾಲ ಪಡೆದು ಅದನ್ನು AJL ನ 90 ಕೋಟಿ ಸಾಲ ತೀರಿಸಿ AJL ನ್ನು ಮತ್ತು ಅದರ 5000 ಕೋಟಿ ಆಸ್ತಿಯನ್ನು ತನ್ನದಾಗಿಸಿಕೊಳ್ಳುತ್ತದೆ.

ಆಗ AJL share holders raised objections, actually they were supposed to take decision abt AJL.

ಇದು money laundering ಎಂದು ಸುಬ್ರಹ್ಮಣ್ಯ ಸ್ವಾಮಿಯವರು ದೆಹಲಿ ಮತ್ತು ಪಟಿಯಾಲಾ ಕೋರ್ಟಗಳಲ್ಲಿ ಕೇಸ್ ಹಾಕಿದರು. ಅದರ ವಿಚಾರಣೆಯ ಮುಂದುವರಿದ ಭಾಗವೇ ಇಂದಿನ ED ವಿಚಾರಣೆ.

ಈ ಕೇಸುಗಳಲ್ಲಿ young Indian company ಯ directors ಇಂದಿಗೂ ಜಾಮೀನಿನ ಮೇಲಿದ್ದಾರೆ. 

ಕಾಂಗ್ರೆಸ್ ಜನರು ಪಕ್ಷಕ್ಕೆ ಕೊಟ್ಟ ದುಡ್ಡನ್ನು business ಗೆ ಬಳಸುವಂತಿರಲಿಲ್ಲ ಅದೂ ಇನ್ನೊಂದು ತಪ್ಪು.

ಪಕ್ಷದ ದುಡ್ಡಿನಿಂದ, ಜನರಿಂದ ಕಟ್ಟಲ್ಪಟ್ಟ public Ltd company ಯ ಆಸ್ತಿ ಜನರೇ ಕೊಟ್ಟ ದುಡ್ಡು ಬಳಸಿಕೊಂಡು ಕೇಲವೇ private ಜನರಿಗೆ ಸೇರಿತು. !!

***


ಬೂದಿಯ ರಾಶಿಯಿಂದ ಅರಮನೆಯನ್ನು ನಿರ್ಮಿಸುವುದನ್ನು ಬಲ್ಲಿರಾ....

"ನ್ಯಾಷನಲ್ ಹೆರಾಲ್ಡ್" ಕೇಸ್ ಏನು ಎಂಬುದರ ಬಗ್ಗೆ ಸರಳ ಪದಗಳಲ್ಲಿ ತಿಳಿಯಿರಿ?

-

★  1930 ರಲ್ಲಿ ನೆಹರೂರು ಅಂದಿನ ಸ್ವಾತಂತ್ರ್ಯ ಹೋರಾಟಗಾರರ ಸಹಯೋಗದೊಂದಿಗೆ  #ನ್ಯಾಷನಲ್ ಹೆರಾಲ್ಡ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಕ್ರಮೇಣ ಈ ಪತ್ರಿಕೆ 5000 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿತು. ತುಂಬಾ ಅಚ್ಚರಿಯ ಸಂಗತಿ ಎಂದರೆ #ನ್ಯಾಷನಲ್ ಹೆರಾಲ್ಡ್ ಇಷ್ಟೊಂದು ಸಂಪತ್ತು ಗಳಿಸಿದ್ದರೂ ಸಹ 2000ನೇ ಇಸವಿಯಲ್ಲಿ ಈ ಪತ್ರಿಕೆ ಭಾರೀ ನಷ್ಟದ ಸುಳಿಗೆ ಸಿಲುಕಿ 90 ಕೋಟಿ ಸಾಲದಲ್ಲಿತ್ತು.

★ "ನ್ಯಾಷನಲ್ ಹೆರಾಲ್ಡ್" ನ ಅಂದಿನ ನಿರ್ದೇಶಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮೋತಿಲಾಲ್ ವೋರಾರು ಈ ಪತ್ರಿಕೆಯನ್ನು 'ಯಂಗ್ ಇಂಡಿಯಾ ಲಿಮಿಟೆಡ್' ಎಂಬ ಕಂಪನಿಗೆ ಮಾರಾಟ ಮಾಡಲು ನಿರ್ಧರಿಸಿದರು.

★ ಈಗ ತುಂಬಾ ಮಜವಾದ ಸಂಗತಿ ಕೇಳೀ....

ಈ 'ಯಂಗ್ ಇಂಡಿಯಾ' ದ ನಿರ್ದೇಶಕರು ಯಾರು?

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಸ್ಕರ್ ಫರ್ನಾಂಡೀಸ್ ಮತ್ತು ಮೋತಿಲಾಲ್ ವೋರಾ.

★ ಯಂಗ್ ಇಂಡಿಯಾವು #NationalHerald ನ 90 ಕೋಟಿ ಸಾಲವನ್ನು ಮರುಪಾವತಿ ಮಾಡಲಿದೆ ಮತ್ತು ಅದಕ್ಕೆ ಪ್ರತಿಯಾಗಿ ಯಂಗ್ ಇಂಡಿಯಾಗೆ, "ನ್ಯಾಷನಲ್ ಹೆರಾಲ್ಡ್" ನ 5000 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಹಸ್ತಾಂತರಿಸಬೇಕು ಎಂದು ಒಪ್ಪಂದವಾಯಿತು.

★ ಒಪ್ಪಂದವನ್ನು ಅಂತಿಮಗೊಳಿಸಲು, 'ನ್ಯಾಷನಲ್ ಹೆರಾಲ್ಡ್' ನ ನಿರ್ದೇಶಕರಾದ ಮೋತಿಲಾಲ್ ವೋರಾ ಅವರು "ಅಂದಿನ" ಯಂಗ್ ಇಂಡಿಯಾದ ನಿರ್ದೇಶಕರಾದ ಮೋತಿಲಾಲ್ ವೋರಾ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ, ಏಕೆಂದರೆ ಮೋತಿಲಾಲ್ ವೋರಾರೇ ಎರಡೂ ಕಂಪನಿಗಳ ನಿರ್ದೇಶಕರಾಗಿದ್ದರು.

★ ಈಗ ಇಲ್ಲಿ ಮತ್ತೊಂದು ಹೊಸ ಟ್ವಿಸ್ಟ್ ಬಂದಿತು.

90 ಕೋಟಿಯಷ್ಟು ದೊಡ್ಡ ಮೊತ್ತದ ಸಾಲ ತೀರಿಸಲು #YoungIndia ವು ಕಾಂಗ್ರೆಸ್ ಪಕ್ಷದಿಂದಲೇ 90 ಕೋಟಿ ಸಾಲ ಕೇಳಿತು.

★ #YoungIndia ದ ಸಾಲದ ಬೇಡಿಕೆಯನ್ನು ಇತ್ಯರ್ಥ ಮಾಡಲು ಇದಕ್ಕಾಗಿ ಕಾಂಗ್ರೆಸ್ ಪಕ್ಷವು ವರಿಷ್ಠರ ವಿಶೇಷ ಸಭೆಯನ್ನು ಕರೆಯಿತು. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು, ಕಾಂಗ್ರೆಸ್ ಪಕ್ಷದ ಖಜಾಂಚಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು.

★ ಮತ್ತು ಈ ವರಿಷ್ಠ ವ್ಯಕ್ತಿಗಳು ಯಾರು ಯಾರು......?

ಅಧ್ಯಕ್ಷೆ ಸೋನಿಯಾ, ಉಪಾಧ್ಯಕ್ಷ ರಾಹುಲ್, ಪ್ರಧಾನ ಕಾರ್ಯದರ್ಶಿ ಆಸ್ಕರ್ ಮತ್ತು ಖಜಾಂಚಿ ಮೋತಿಲಾಲ್ ವೋರಾ.

★ ಕಾಂಗ್ರೆಸ್ ಪಕ್ಷದ ವಿಶೇಷ ತುರ್ತು ಸಭೆಯು 'ಯಂಗ್ ಇಂಡಿಯಾ' ವು ಕೇಳಿದ್ದ ಸಾಲವನ್ನು ಕೊಡಲು ಸರ್ವಾನುಮತದಿಂದ ಒಪ್ಪಿಕೊಂಡಿತು. ಮತ್ತು ಅದನ್ನು ಕಾಂಗ್ರೆಸ್ ಪಕ್ಷದ ಖಜಾಂಚಿ ಮೋತಿಲಾಲ್ ವೋರಾರು ಅಂಗೀಕರಿಸಿದರು ಮತ್ತು 'ಯಂಗ್ ಇಂಡಿಯಾ ನಿರ್ದೇಶಕ' ಮೋತಿಲಾಲ್ ವೋರಾ ಆ ಹಣವನ್ನು ತೆಗೆದುಕೊಂಡು ಅದನ್ನು 'ನ್ಯಾಷನಲ್ ಹೆರಾಲ್ಡ್ ' ನಿರ್ದೇಶಕ ಮೋತಿಲಾಲ್ ವೋರಾರಿಗೆ ಕೊಟ್ಟು ಸಾಲ ತೀರಿಸಿದರು.

★ ಇಲ್ಲಿ ಇನ್ನೂ ಸ್ವಲ್ಪ ಮೋಜು ಉಳಿದಿದೆ ನೋಡೀ...

★ ಈಗ ಕಾಂಗ್ರೆಸ್ ಪಕ್ಷವು ಮತ್ತೊಂದು ತುರ್ತು ಸಭೆಯನ್ನು ಕರೆಯಿತು, ಅದರಲ್ಲಿ ಅಧ್ಯಕ್ಷೆ ಸೋನಿಯಾ, ಉಪಾಧ್ಯಕ್ಷ ರಾಹುಲ್, ಪ್ರಧಾನ ಕಾರ್ಯದರ್ಶಿ ಆಸ್ಕರ್ ಮತ್ತು ಖಜಾಂಚಿ ವೋರಾ ಸಾಹೇಬರು ಭಾಗವಹಿಸಿದ್ದರು.

★ ಅವರೆಲ್ಲರೂ ಸೇರಿ ಚರ್ಚೆ ನಡೆಸಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ನ್ಯಾಷನಲ್ ಹೆರಾಲ್ಡ್ ' ಸಾಕಷ್ಟು ಸೇವೆ ಸಲ್ಲಿಸಿದೆ, ಹಾಗಾಗಿ ಅದರ ಮೇಲಿರುವ 90 ಕೋಟಿ ಸಾಲವನ್ನು ಮನ್ನಾ ಮಾಡಬೇಕು ಎಂಬ ತೀರ್ಮಾನವನ್ನು ತೆಗೆದುಕೊಂಡು 'ನ್ಯಾಷನಲ್ ಹೆರಾಲ್ಡ್ ' ನ ಅತೀ  ಸಣ್ಣ ಸಾಲ 90 ಕೋಟಿಯನ್ನು ಮನ್ನಾ ಮಾಡುವ ನಿರ್ಧಾರ ಮಾಡಿದರು.

★ ಮತ್ತು ಈ ರೀತಿಯಲ್ಲಿ #YoungIndia ದ 36% ಷೇರುಗಳು ಸೋನಿಯಾ ಮತ್ತು ರಾಹುಲ್ ಅವರ ಒಡೆತನದಲ್ಲಿದೆ ಮತ್ತು ಉಳಿದ ಷೇರುಗಳು ಆಸ್ಕರ್ ಮತ್ತು ವೋರಾ ಸಾಹಿಬರಿಗೆ ಸೇರಿತು. ಈ ರೀತಿಯಾಗಿ 'ನ್ಯಾಷನಲ್ ಹೆರಾಲ್ಡ್ ' ನ 5000 ಕೋಟಿ ಮೌಲ್ಯದ ಆಸ್ತಿಯನ್ನು ಪಡೆದುಕೊಂಡರು.

★ ಇದರಲ್ಲಿ, ಒಂದು ದೆಹಲಿಯ ಬಹದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ 11 ಅಂತಸ್ತಿನ ಕಟ್ಟಡ ಮತ್ತು ಆ ಕಟ್ಟಡದ ಹಲವು ಭಾಗಗಳಿವೆ. ಅಲ್ಲಿ ಈಗ ಪಾಸ್‌ಪೋರ್ಟ್ ಕಚೇರಿ ಸೇರಿದಂತೆ ಸರಕಾರದ ಹಲವಾರು ಕಚೇರಿಗಳಿಗೆ ಬಾಡಿಗೆಗೆ ಬಿಡಲಾಗಿದೆ.

ಇದನ್ನು ಬೂದಿಯ ರಾಶಿಯಿಂದ ಅರಮನೆಯನ್ನು ನಿರ್ಮಿಸುವುದು ಎಂದು ಕರೆಯಲಾಗುತ್ತದೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 5000 ಕೋಟಿ ಹಗರಣದ ಇದೇ 'ನ್ಯಾಷನಲ್ ಹೆರಾಲ್ಡ್ ಪ್ರಕರಣ' ದಲ್ಲಿ ಜಾಮೀನಿನ ಮೇಲಿದ್ದಾರೆ.

**


CONGRESS HAD FORMED ALLIANCE WITH:


【1】BSP+CONGRESS

Mayawati Finished

【2】SP+CONGRESS

Akhilesh Yadav Finished

【3】RJD+CONGRESS

Lalu Prasad Yadav Finished

【4】JDS+CONGRESS

Kumaraswamy Finished

【5】TDP+CONGRESS

Chandrababu Naidu Finished


【6】SHIV SENA+CONGRESS

Uddhav Thackeray Finishing Touches in Progress !

***

2023

ನ್ಯಾಷನಲ್ ಹೆರಾಲ್ಡ್ ಪ್ರಕರಣ : (ನಕಲಿ)ಗಾಂಧಿ ಕುಟುಂಬಕ್ಕೆ ಸೇರಿದ ಕಂಪನಿಗಳು, ಆಸ್ತಿ ಸೇರಿದಂತೆ ಒಟ್ಟು 752 ಕೋಟಿ ರೂಪಾಯಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣ ಹಿನ್ನಲೆ 

1938 ರಲ್ಲಿ ಜವಾಹರಲಾಲ್ ನೆಹರು 5,000 ಸ್ವಾತಂತ್ರ್ಯ ಹೋರಾಟಗಾರರನ್ನು ಷೇರುದಾರರನ್ನಾಗಿಸಿ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ಹುಟ್ಟುಹಾಕಿದರು .ಪತ್ರಿಕೆಯ ಮುಖ್ಯ ಉದ್ದೇಶ ಸ್ವತಂತ್ರ ದಳದ ಕಳವಳಗಳಿಗೆ ಧ್ವನಿಯಾಗುವುದು.ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿತ್ತು.

2008ರಲ್ಲಿ 90 ಕೋಟಿ ರೂ ಸಾಲದ ಹೊರೆಯೊಂದಿಗೆ ಪತ್ರಿಕೆಯನ್ನು ಮುಚ್ಚಲಾಗಿತ್ತು.

ಯಂಗ್ ಇಂಡಿಯಾ ಲಿಮಿಟೆಡ್ ಅನ್ನು ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ 2010ರಲ್ಲಿ ಸ್ಥಾಪಿಸಿದರು ಹಾಗೂ AJL ಸಂಸ್ಥೆಯನ್ನು ಯಂಗ್ ಇಂಡಿಯಾ 2010ರಲ್ಲಿ ಖರೀದಿಸಿತು.AJL  ಷೇರುದಾರರ ಅನುಮತಿ ಪಡೆಯುವುದಿರಲಿ, ಅವರಿಗೆ ಸುಳಿವು ಕೊಡದ ರೀತಿಯಲ್ಲಿ ಷೇರುಗಳನ್ನ ರಾಹುಲ್ ಗಾಂಧಿ ನೇತೃತ್ವದ YIL ವರ್ಗಾವಣೆ ಖರೀದಿ ಮಾಡಿತ್ತು. ಇದು ರಾಹುಲ್ ಹಾಗೂ ಸೋನಿಯಾ ಗಾಂಧಿ  ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅನ್ಯಾಯ ಎಂದು ಆರೋಪ ಮಾಡಲಾಗಿತ್ತು.

ಕಾಂಗ್ರೆಸ್ ಪಕ್ಷ ಮಾಲೀಕತ್ವದ AJL ಅನ್ನು 90.25 ಕೋಟಿ ರೂ ಮೌಲ್ಯದ ಆಸ್ತಿಯ ಹಕ್ಕಗಳನ್ನು ಪಡೆದುಕೊಳ್ಳಲು ರಾಹುಲ್ ಗಾಂಧಿ ನೇತೃತ್ವದ YIL ಕೇವಲ 50 ಲಕ್ಷ ರೂ ಪಾವತಿಸಿತ್ತು.ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2,000 ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು YIL ವಾಮಮಾರ್ಗ ಅನುಸರಿಸಿತ್ತು.

2014ರಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು.ಪಾಟಿಯಾಲ ಹೌಸ್ ನ್ಯಾಯಾಲಯವು 2015ರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂದಿಗೆ ಜಾಮೀನು ನೀಡಿತು.

ಈ ಸಂಬಂಧ ಈ ಹಿಂದೆ ಇಡಿ ಸೋನಿಯಾ ಮತ್ತು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿ ಉತ್ತರ ದಾಖಲಿಸಿತ್ತು.

ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಹಾಗೂ ಯಂಗ್ ಇಂಡಿಯನ್(YI) ಸಂಸ್ಥೆಯ ಒಟ್ಟು 752 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ಥಿ ಹಾಗೂ ಹೂಡಿಕೆ ರೂಪದ ಅಕ್ರಮ ಆದಾಯದವನ್ನು ಮನಿ ಲಾಂಡರಿಂಗ್ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಆದೇಶ ಹೊರಡಿಸಿದೆ.

***

fake currency scam


muslim appeasement law





No comments:

Post a Comment