ಕಲ್ಲು ಸಕ್ಕರೆ ಎಲ್ಲರಿಗೂ ಗೊತ್ತು. ಕಲ್ಲು ಸಕ್ಕರೆ ಅಂದರೆ ಬರೀ ಸಿಹಿಯಲ್ಲ ಜೊತೆಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.
ಸಂಸ್ಕೃತ ಭಾಷೆಯಲ್ಲಿ >ಶೀತ, ಕಂದ ಶರ್ಕರ.
ಹಿಂದಿ ಹಾಗೂ ಉರ್ದು ಭಾಷೆಯಲ್ಲಿ> ಖಡಿ ಶಕ್ಕರ
खड़ी शक्कर/ मीश्री .
ಆಂಗ್ಲ ಭಾಷೆಯಲ್ಲಿ >Rock sugar.
ಈ ಕಲ್ಲು ಸಕ್ಕರೆ ಯನ್ನು ಕಬ್ಬಿನ ಹಾಲನ್ನು ಘನೀಕೃತ ಗೊಳಿಸಿ ಯಾವುದೇ ರಾಸಾಯನಿಕ ವಸ್ತು ಸೇರಿಸದೆ ಹರಳುಗಳ ರೂಪದಲ್ಲಿ ತಯಾರಿಸಲಾಗುತ್ತದೆ.
ಕೆಂಪು ಕಲ್ಲು ಸಕ್ಕರೆ ತಾಳೆ ಮರದ ಹಾಲಿನಿಂದ ತಯಾರಿಸಲಾಗುತ್ತದೆ. ಇದರ ಬೆಲೆ ಜಾಸ್ತಿ , ಸಿಗುವುದು ಅಪರೂಪ.
ಕಲ್ಲುಸಕ್ಕರೆ ತಂಪು ಗುಣ ಹೊಂದಿದ್ದು ಶರೀರಕ್ಕೆ ಪುಷ್ಟಿದಾಯಕವಾಗಿದೆ.
ಕಲ್ಲು ಸಕ್ಕರೆ/ ಒಣ ಕೊಬ್ಬರಿ/ ಒಣ ಖರ್ಜೂರ
ಬದಾಮು/ ಗೋಡಂಬಿ ಚೂರು ಮಾಡಿ ಒಣ ದ್ರಾಕ್ಷಿ ಸೇರಿಸಿ ಬೆಳೆಯುವ ಮಕ್ಕಳಿಗೆ ತಿನ್ನಿಸಬೇಕು.
{ಕಲ್ಲು ಸಕ್ಕರೆ ಯ ಪ್ರಯೋಜನಗಳು}
*ಅಕ್ರೋಟ (Walnut) ಹಾಗೂ ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಮೆದುಳಿಗೆ ಶಕ್ತಿದಾಯಕ.
ಸೋಂಪು ಕಾಳು ಕಲ್ಲು ಸಕ್ಕರೆಯ ಸೇವನೆಯು ಕಣ್ಣುಗಳ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ.
ಕಾಳುಮೆಣಸಿನ ಪುಡಿ ಕಲ್ಲು ಸಕ್ಕರೆಯ ಸೇವನೆ ಕೆಮ್ಮು ನಿವಾರಿಸುತ್ತದೆ. ಗಂಟಲಿಗೂ ಹಿತಕಾರಿ.
ಮೂಗಿನಿಂದ ರಕ್ತ ಸೋರುತ್ತಿದ್ದರೆ ಕಲ್ಲು ಸಕ್ಕರೆ ಪುಡಿಯನ್ನು ಮೂಗಿನ ಹತ್ತಿರ ಹಿಡಿದು ವಾಸನೆಯನ್ನು ಆಘ್ರಾಣಿಸಬೇಕು.
ಬಾಯಿ ಹುಣ್ಣಿಗೆ ಕಲ್ಲುಸಕ್ಕರೆ ಜೀರಿಗೆ ರಾಮಬಾಣ
ಏಲಕ್ಕಿ ಪುಡಿಯನ್ನು ಸೇರಿಸಿ ತಿನ್ನಬಹುದು.
ಧ್ವನಿ ಒಡೆದಾಗ ಒಣ ಶುಂಠಿ, ಕಲ್ಲು ಸಕ್ಕರೆ ಪುಡಿ ಮಾಡಿ ಸೇವನೆ ಮಾಡಬಹುದು.
ಬಿಳಿ ಈರುಳ್ಳಿ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಕಿಡ್ನಿ ಸ್ಟೋನ್ ಕರಗಿಸಲು ಸಹಕಾರಿಯಾಗಿದೆ.
ಗಂಟಲು ನೋವಿಗೆ ಗಸಗಸೆ ಕಲ್ಲು ಸಕ್ಕರೆ ಸೇವನೆ ಒಳ್ಳೆಯದು.
*ಮೂಲವ್ಯಾಧಿಗೆ ನಾಗಕೇಸರ ಕಲ್ಲು ಸಕ್ಕರೆ ಸೇವನೆ ಮಾಡಬಹುದು.
ಭೇದಿಗೆ ಧನಿಯ ಪೌಡರ್ ಬೆರೆಸಿ ಸೇವಿಸಬೇಕು.
*ಹೊಟ್ಟೆ ನೋವಿಗೆ 10ರಿಂದ15 ಬೇವಿನ ಎಲೆ ಗಳ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಉತ್ತಮ.
ಕಲ್ಲು ಸಕ್ಕರೆ ಬೆಳೆಯುವ ಮಕ್ಕಳಿಗೆ ತಿನ್ನಿಸಬೇಕು. ಇದರಿಂದ ದೇಹಕ್ಕೆ ಬಲ ಬರುತ್ತದೆ. ಮೆದುಳಿಗೂ ಒಳ್ಳೆಯದು.
ನಿಂಬು ಶರಬತ್ತು ತಯಾರಿಸುವಾಗ ಕಲ್ಲು ಸಕ್ಕರೆ ಬಳಸುವುದರಿಂದ ವಿಶೇಷ ರುಚಿ ನೀಡು ತ್ತದೆ. ಹಾಗೂ ಗುಲಾಬ್ ಜಾಮೂನು ತಯಾರಿಸುವಾಗ ಸಕ್ಕರೆ ಬದಲು ಕಲ್ಲು ಸಕ್ಕರೆ ಯ ಪಾಕ ಉತ್ತಮ.
15 ಗ್ರಾಂ ಕಲ್ಲು ಸಕ್ಕರೆ 60 ಕ್ಯಾಲೊರಿ ಹೊಂದಿದೆ ಎಂದು ಹೇಳಲಾಗುತ್ತದೆ. ಮಧುಮೇಹಿಗಳಿಗೆ ಇದು ಸೂಕ್ತವಲ್ಲ.
ದೇಹಕ್ಕೆ ತಂಪು ನೀಡುವುದಲ್ಲದೆ ಬಲವನ್ನೂ ನೀಡುವ ಈ ಕಲ್ಲು ಸಕ್ಕರೆ ಯನ್ನು ಹಿತಮಿತವಾಗಿ ಬಳ ಸುವುದು ಒಳ್ಳೆಯದು.
***
ಕಲ್ಲು ಸಕ್ಕರೆ ಸೇವನೆಯಿಂದ ಪಡೆಯಿರಿ ಆರೋಗ್ಯ ಪ್ರಯೋಜನಗಳು
1.ಹವಾಮಾನ ಬದಲಾವಣೆಯಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಶೀತ, ಕೆಮ್ಮು ಕಾಣಿಸಿಕೊಳ್ಳುತ್ತದೆ. ಶೀತ,
ಮೂಗಿನ ರಕ್ತಸ್ರಾವವನ್ನು ತಕ್ಷಣವೇ ನಿಲ್ಲಿಸಲು ಕಲ್ಲು ಸಕ್ಕರೆ ಸಹಾಯ ಮಾಡುತ್ತದೆ.
2.ಮೂಗಿನ ರಕ್ತಸ್ರಾವವನ್ನು ತಕ್ಷಣವೇ ನಿಲ್ಲಿಸಲು ಕಲ್ಲು ಸಕ್ಕರೆ ಸಹಾಯ ಮಾಡುತ್ತದೆ. ನಿಮಗೆ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ, ಕಲ್ಲು ಸಕ್ಕರೆ ತುಂಡುಗಳನ್ನು ನೀರಿನೊಂದಿಗೆ ಸೇವಿಸಿ.
3.ಸೇವಿಸಿದ ಆಹಾರ ಜೀರ್ಣವಾಗದಿದ್ದರೆ ಅಜೀರ್ಣ ಉಂಟಾಗಿ, ಮಲಬದ್ಧತೆ ಸಮಸ್ಯೆ ಎದುರಾಗಬಹುದು. ಉತ್ತಮ ಜೀರ್ಣಕ್ರಿಯೆಗೆ ಕಲ್ಲು ಸಕ್ಕರೆ ಸೇವಿಸಿ.
4.ಕಲ್ಲು ಸಕ್ಕರೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಋತುಚಕ್ರದ ವೇಳೆ ಕಿರಿ ಕಿರಿ ಅನುಭವಿಸುವ ಮಹಿಳೆಯರು ಕಲ್ಲು ಸಕ್ಕರೆ ಸೇವಿಸಿ.
5.ದೇಹ ಆಯಾಸಗೊಂಡರೆ ಯಾವುದಕ್ಕೂ ಮನಸ್ಸು ಇರಲ್ಲ. ಹೀಗಾಗಿ ಕಲ್ಲು ಸಕ್ಕರೆ ಸೇವಿಸಿ. ಕಲ್ಲು ಸಕ್ಕರೆ ಸೇವಿಸಿದರೆ ಮನಸಿಗ್ಗೆ ನೆಮ್ಮದಿ ಅನಿಸುತ್ತದೆ.
***
ಸಕ್ಕರೆಯ ದುಷ್ಪರಿಣಾಮಗಳು
ಸಕ್ಕರೆಯನ್ನು ಶುದ್ಧೀಕರಿಸುವಾಗ (ರಿಫೈನಿಂಗ್) ಅದರಲ್ಲಿನ ಸುಮಾರು ೬೪ ಅನ್ನಘಟಕಗಳು ನಾಶವಾಗುತ್ತವೆ. ಜೀವಸತ್ವಗಳು (ವಿಟಮಿನ್ಸ್), ಖನಿಜದ್ರವ್ಯಗಳು (ಮಿನರಲ್ಸ್), ಕಿಣ್ವಗಳು (ಎಂಜೈಮ್ಸ್), ಎಮಿನೋ ಆಸಿಡ್ಸ, ತಂತು (ಫೈಬರ್) ಇತ್ಯಾದಿಗಳೆಲ್ಲವೂ ನಾಶವಾಗುತ್ತವೆ ಮತ್ತು ಉಳಿಯುವುದೆಂದರೆ ಯಾವುದೇ ಪೋಷಕಾಂಶವಿಲ್ಲದ ಹಾನಿಕರವಾದ ಸುಕ್ರೋಜ್ ಮಾತ್ರ!
ಸಕ್ಕರೆಯನ್ನು ಶುದ್ಧೀಕರಿಸುವಾಗ ಸುಮಾರು ೬೪ ಅನ್ನಘಟಕಗಳು ನಾಶವಾಗುತ್ತವೆ
ಸಕ್ಕರೆಯನ್ನು ಶುದ್ಧೀಕರಿಸುವಾಗ (ರಿಫೈನಿಂಗ್) ಅದರಲ್ಲಿನ ಸುಮಾರು ೬೪ ಅನ್ನಘಟಕಗಳು ನಾಶವಾಗುತ್ತವೆ. ಜೀವಸತ್ವಗಳು (ವಿಟಮಿನ್ಸ್), ಖನಿಜದ್ರವ್ಯಗಳು (ಮಿನರಲ್ಸ್), ಕಿಣ್ವಗಳು (ಎಂಜೈಮ್ಸ್), ಎಮಿನೋ ಆಸಿಡ್ಸ, ತಂತು (ಫೈಬರ್) ಇತ್ಯಾದಿಗಳೆಲ್ಲವೂ ನಾಶವಾಗುತ್ತವೆ ಮತ್ತು ಉಳಿಯುವುದೆಂದರೆ ಯಾವುದೇ ಪೋಷಕಾಂಶವಿಲ್ಲದ ಹಾನಿಕರವಾದ ಸುಕ್ರೋಜ್ ಮಾತ್ರ!
ಸಕ್ಕರೆಯ ವಿವಿಧ ದುಷ್ಪರಿಣಾಮಗಳು
೧. ಸಕ್ಕರೆಯು ಶರೀರದಲ್ಲಿನ ಎಡ್ರಿನ್ಯಾಲಿನ್‌ನ ಪ್ರಮಾಣವನ್ನು ಹೆಚ್ಚಿಸುವುದರಿಂದ ಪ್ರತಿರೋಧಕ ಶಕ್ತಿಯ ಮೇಲೆ ಪರಿಣಾಮವಾಗುವುದು : ನಮ್ಮ ದೇಹಕ್ಕೆ ಕೆಲಸವನ್ನು ಮಾಡಲು ಇಂಧನದ ಅರ್ಥಾತ್ ಗ್ಲುಕೋಜಿನ ಆವಶ್ಯಕತೆ ಇರುತ್ತದೆ. ಶರೀರವು ನಾವು ತಿಂದ ಅನ್ನವನ್ನು ವಿವಿಧ ಕಿಣ್ವಗಳ (ಎಂಜೈಮ್ಸ್‌ಗಳ) ಸಹಾಯದಿಂದ ಗ್ಲುಕೋಜಿಗೆ ರೂಪಾಂತರಿಸುತ್ತಿರುತ್ತದೆ. ನೈಸರ್ಗಿಕ ಹಣ್ಣು, ತರಕಾರಿ, ಧಾನ್ಯ ಮತ್ತು ದ್ವಿದಳ ಧಾನ್ಯಗಳಲ್ಲಿ ಗ್ಲುಕೋಸ್ ಇರುತ್ತದೆ. ಆದರೆ ದುರ್ದೈವದಿಂದ, ‘ನಮಗೆ ಅತ್ಯಾವಶ್ಯಕವಾದ ಗ್ಲುಕೋಸ್ ಎಂದರೆ ಶುದ್ಧ (ರಿಫೈನ್ಡ್) ಸಕ್ಕರೆ’ ಎಂಬ ತಪ್ಪು ಕಲ್ಪನೆಯಾಗಿದೆ. ಶರೀರಕ್ಕೆ ಸಕ್ಕರೆಯನ್ನು ಏನು ಮಾಡಬೇಕು ಎಂಬ ಪ್ರಶ್ನೆಯಿರುತ್ತದೆ. ಸಕ್ಕರೆಯು ನಮ್ಮ ಶರೀರದಲ್ಲಿನ ಎಡ್ರಿನ್ಯಾಲಿನ್‌ನ ಪ್ರಮಾಣವನ್ನು ಹೆಚ್ಚಿಸುತ್ತದೆ. ಎಡ್ರಿನ್ಯಾಲಿನಿನಿಂದ ನಮ್ಮ ಶರೀರವು ಯುದ್ಧಸದೃಶ ಪರಿಸ್ಥಿತಿಯಲ್ಲಿರುತ್ತದೆ. ಶರೀರದಲ್ಲಿ ಸ್ನಿಗ್ಧಾಮ್ಲ (ಕೊಲೆಸ್ಟ್ರಾಲ್) ಮತ್ತು ಕ್ವಾರ್ಟಿಝೋನ್‌ಗಳ ಪ್ರಮಾಣ ಹೆಚ್ಚಾಗುತ್ತದೆ. ಕ್ವಾರ್ಟಿಝೋನ್ ನಮ್ಮ ಪ್ರತಿರೋಧ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.
೨. ಸಕ್ಕರೆಯಿಂದ ಶರೀರದಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕದ ಸಮತೋಲನವು ಕೆಡುತ್ತದೆ : ಕಬ್ಬಿನಿಂದ ಸಕ್ಕರೆಯನ್ನು ತಯಾರಿಸುವಾಗ ಸಕ್ಕರೆಯು ಶುಭ್ರವಾಗಲು ನ್ಯಾನೋಫಿಸ್ಟರೇಶನ್ ತಂತ್ರವನ್ನು ಬಳಸಲಾಗುತ್ತದೆ. ಇದರಿಂದ ನಮ್ಮ ಅಂತಃಸ್ರಾವಗಳ ಮೇಲೆ (ಹಾರ್ಮೋನ್‌ಗಳ ಮೇಲೆ) ದುಷ್ಪರಿಣಾಮವಾಗುತ್ತದೆ. ಸಕ್ಕರೆಯನ್ನು ಜೀರ್ಣಿಸಲು ಮತ್ತು ಅದರ ವಿಲೇವಾರಿಗೆ ದೇಹಕ್ಕೆ ತುಂಬಾ ತೊಂದರೆಯಾಗುತ್ತದೆ. ಸಕ್ಕರೆಯಿಂದ ನಮ್ಮ ಶರೀರದಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕಗಳ ಸಮತೋಲನವು ಕೆಡುತ್ತದೆ.
೩. ಸಕ್ಕರೆಯಿಂದಾಗುವ ಇತರ ದುಷ್ಪರಿಣಾಮಗಳು
ಅ. ಹೆಚ್ಚುವರಿ ಸಕ್ಕರೆಯು ದೇಹದಲ್ಲಿ ಮೇದಸ್ಸನ್ನು (ಫ್ಯಾಟ್) ಹೆಚ್ಚಿಸುತ್ತದೆ. ಶರೀರದಲ್ಲಿನ ಅಸಮರ್ಥ ಭಾಗಗಳ ಮೇಲೆ ಕೊಬ್ಬು ಸಂಗ್ರಹವಾಗುತ್ತದೆ, ಉದಾ. ಹೊಟ್ಟೆ, ತೊಡೆ, ಮೂತ್ರಪಿಂಡ, ಹೃದಯ ಈ ಭಾಗಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.
ಆ. ರಕ್ತದೊತ್ತಡ ಮತ್ತು ಸ್ನಿಗ್ಧಾಮ್ಲಗಳನ್ನು (ಕೊಲೆಸ್ಟ್ರಾಲ್) ಹೆಚ್ಚಿಸುತ್ತದೆ.
ಇ. ಶರೀರದ ಸಹನಾಶಕ್ತಿ ಮತ್ತು ಪ್ರತಿರೋಧ ಶಕ್ತಿಯು ಕಡಿಮೆಯಾಗುತ್ತದೆ. ಇದರಿಂದ ಯಾವುದೇ ಆಕ್ರಮಣವನ್ನು (ನೆಗಡಿ, ಸೊಳ್ಳೆ, ಉಷ್ಣತೆ) ಎದುರಿಸುವಾಗ ಶರೀರವು ಆಯಾಸಗೊಳ್ಳುತ್ತದೆ.
ಈ. ಸಕ್ಕರೆಯನ್ನು ಜೀರ್ಣಿಸಿಕೊಳ್ಳಲು ಶರೀರದ ಶಕ್ತಿಯು ವ್ಯಯವಾಗುತ್ತದೆ, ಹಾಗೆಯೇ ಸಕ್ಕರೆಯಿಂದಾದ ದುಷ್ಪರಿಣಾಮಗಳನ್ನು ನಿವಾರಿಸಿಕೊಳ್ಳಲು ದೇಹಕ್ಕೆ ತೊಂದರೆಯಾಗುತ್ತದೆ.
ಉ. ಹೆಚ್ಚು ಸಕ್ಕರೆಯನ್ನು ಸೇವಿಸುವುದರಿಂದ ಮೆದುಳಿನ ಕಾರ್ಯದ ಮೇಲೆ ಪರಿಣಾಮವಾಗುತ್ತದೆ.
ಊ. ಹೆಚ್ಚು ಸಕ್ಕರೆಯ ಸೇವನೆಯಿಂದ ನಮಗೆ ಅಮಲು ಬರುತ್ತದೆ. ಹಾಗೆಯೇ ಲೆಕ್ಕ ಮಾಡುವ ಶಕ್ತಿ ಕಡಿಮೆಯಾಗುತ್ತದೆ. ಏಕಾಗ್ರತೆ ಇರುವುದಿಲ್ಲ.
ಎ. ಜೀವಕೋಶಗಳ ಸ್ಥಿತಿಸ್ಥಾಪಕತ್ವ ಕಡಿಮೆಯಾಗುತ್ತದೆ.
ಏ. ದೃಷ್ಟಿಯು ಮಂದವಾಗುತ್ತದೆ.
ಐ. ವೃದ್ಧಾಪ್ಯವು ಬೇಗನೇ ಬರುತ್ತದೆ.
ಒ. ರಕ್ತದಲ್ಲಿನ ‘ಈ’ ಜೀವಸತ್ವವು (ವಿಟಮಿನ್) ಕಡಿಮೆಯಾಗುತ್ತದೆ.
ಓ. ದೊಡ್ಡ ಕರುಳಿನ ಅರ್ಬುದ ರೋಗ (ಕ್ಯಾನ್ಸರ್) ಆಗುವ ಸಂಭವವಿರುತ್ತದೆ.
ಔ. ಹೆಚ್ಚುವರಿ ಸಕ್ಕರೆಯು ಪ್ರೊಸ್ಟೇಟ್ ಕ್ಯಾನ್ಸರ್‌ನ ಒಂದು ಕಾರಣವಾಗಬಹುದು.
ಅಂ. ಮಾಸಿಕ ಸರದಿಯ (ಋತುಸ್ರಾವ) ಸಮಯದಲ್ಲಿ ಹೊಟ್ಟೆ ನೋಯಿಸುತ್ತದೆ. ಮಹಿಳೆಯರಲ್ಲಿ ಪ್ರಿಮೆನ್‌ಸ್ಟ್ರುವಲ್ ಸಿಂಡ್ರೋಮ್ ಹೆಚ್ಚಾಗುತ್ತದೆ.
ಸಕ್ಕರೆಯ ಬಗ್ಗೆ ತಜ್ಞರ ಅಭಿಪ್ರಾಯ ಮತ್ತು ನಿಷ್ಕರ್ಷ
೧. ಸಕ್ಕರೆಯುಕ್ತ ಪದಾರ್ಥ ಮತ್ತು ಪೇಯಗಳು ಮದ್ಯಕ್ಕಿಂತ ಹಾನಿಕಾರಕ: ಗೋಧಿಯ ಮೈದಾ ಮತ್ತು ಅದರಿಂದ ತಯಾರಿಸಿದ ಬ್ರೆಡ್, ಪಾವ, ಕೇಕ್ ಮುಂತಾದ ಸಕ್ಕರೆಯುಕ್ತ ಪದಾರ್ಥ ಮತ್ತು ಪೇಯಗಳು ಮದ್ಯಕ್ಕಿಂತ ಹಾನಿಕಾರಕವಾಗಿವೆ. ಹೆಚ್ಚು ಸಕ್ಕರೆಯನ್ನು ಹಾಕಿ ತಯಾರಿಸಿದ ಪದಾರ್ಥಗಳನ್ನು ಇಲಿಗಳಿಗೆ ತಿನ್ನಲು ಹಾಕಿದಾಗ ಅವುಗಳಿಗೆ ಕಣ್ಣಿನ ವಿಕಾರಗಳು ಉಂಟಾದವು. – ಡಾ. ಫ್ರೆಡ್ ಡಿ. ಮಿಲರ್, ಅಮೇರಿಕಾ
೨. ಸಕ್ಕರೆಯ ಮಾರಾಟ ಹೆಚ್ಚಾದಂತೆ ಮಧುಮೇಹ ಮತ್ತು ಅರ್ಬುದ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. – ಫ್ಲಿಮರ್ ವಿಜ್, ಲಂಡನ್ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರದ ಅಧ್ಯಾಪಕ
೩. ಸಕ್ಕರೆಯನ್ನು ತಿನ್ನುವುದರಿಂದ ಹಲ್ಲುಗಳು ಹುಳುಕಾಗುತ್ತವೆ: ಸಕ್ಕರೆಯ ರೂಪದಲ್ಲಿರುವ ವಿಷವನ್ನು ತಿನ್ನುವುದರಿಂದ ಬಾಯಿಯಲ್ಲಿರುವ ಒಂದು ವಿಧದ ಅತಿಸೂಕ್ಷ್ಮ ಕೀಟಾಣುಗಳಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಅವುಗಳ ಶಕ್ತಿಯು ಹೆಚ್ಚಾಗಿ ‘ಲ್ಯಾಕ್ಟಿಕ್ ಆಮ್ಲ’ವು ತಯಾರಾಗುತ್ತದೆ. ಈ ಆಮ್ಲದಿಂದ ಹಲ್ಲಿನ ಮೇಲಿನ ಸಂರಕ್ಷಣಾಕವಚವು (ಮೇಲ್ಪದರವು) ನಾಶವಾಗಿ ಹಲ್ಲುಗಳು ಹುಳುಕಾಗುತ್ತವೆ.
೪. ಗುಡ್ಡಗಾಡಿನ ಭಾಗದಲ್ಲಿನ ಆದಿವಾಸಿಗಳ ಆಹಾರದಲ್ಲಿ ಸಕ್ಕರೆ ಇರುವುದಿಲ್ಲ. ಅವರು ನೈಸರ್ಗಿಕ ಆಹಾರವನ್ನು ಸೇವಿಸುತ್ತಾರೆ. ಆದುದರಿಂದ ಅವರು ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರುತ್ತಾರೆ.’ – ಗ್ರ್ಯಾಫಿಶನ್‌ರವರ ಸಂಶೋಧನೆಯ ನಿಷ್ಕರ್ಷ
೫. ಸಕ್ಕರೆ ಎಂದರೆ ಮೋಹಕ ವಿಷಕನ್ಯೆಯಾಗಿದೆ. – ಗುರುದೇವ ಡಾ.ಕಾಟೇಸ್ವಾಮೀಜಿ
ಸಕ್ಕರೆಗೆ ಸರ್ವೋತ್ಕೃಷ್ಟ ಪರ್ಯಾಯವೆಂದರೆ ಬೆಲ್ಲ!
ಸಕ್ಕರೆಗೆ ಎಲ್ಲಕ್ಕಿಂತ ಅತ್ಯುತ್ತಮ ಮತ್ತು ಸುಲಭವಾಗಿ ಸಿಗುವ ರಾಸಾಯನರಹಿತ ಪರ್ಯಾಯವೆಂದರೆ ಬೆಲ್ಲ. ಹಾಗೆಯೇ ಜೇನು, ಕಾಕಂಬಿ (ಕಾಕವಿ), ಕಬ್ಬಿನ ಹಾಲು, ಖರ್ಜೂರ ಇವೂ ಉತ್ತಮ ಪರ್ಯಾಯಗಳಾಗಬಹುದು.
(ಆಧಾರ: ಸನಾತನದ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು’)
***
No comments:
Post a Comment