SEARCH HERE

Friday 1 October 2021

ಸ್ವಸ್ತಿಕ swastika

 ಸ್ವಸ್ತಿಕ ಚಿಹ್ನೆಯನ್ನು ಶುಭ ಸೂಚನೆಯೆಂದು ಪರಿಗಣಿಸಲಾಗುತ್ತದೆ. ಮನೆಯ ಮುಖ್ಯದ್ವಾರದಲ್ಲಿ ಸ್ವಸ್ತಿಕವನ್ನು ಹಾಕುವುದು ಒಳ್ಳೆಯದು ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿದೆ🌸


🍀ಹಿಂದೂ ಧರ್ಮದಲ್ಲಿ ಸ್ವಸ್ತಿಕಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಇದು ಎರಡು ಪದಗಳಿಂದ ಮಾಡಲ್ಪಟ್ಟಿದೆ, ಇದರಲ್ಲಿ 'ಸು' ಎಂದರೆ ಮಂಗಳಕರ ಮತ್ತು 'ಅಸ್ತಿ' ಎಂದರೆ ಇರುವುದು. ಅಂದರೆ, ಸ್ವಸ್ತಿಕದ ಮೂಲಭೂತ ಅರ್ಥವೆಂದರೆ 'ಶುಭಕರವಾಗಿರಲಿ' ಅಥವಾ 'ಕ್ಷೇಮವಾಗಿರಲಿ' ಎಂಬುದಾಗಿದೆ. ಪ್ರತಿ ಶುಭ ಕಾರ್ಯದಲ್ಲಿ ಸ್ವಸ್ತಿಕವನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ಇದನ್ನು ಗಣಪತಿಯ ಸಂಕೇತವಾಗಿಯೂ ಪರಿಗಣಿಸಲಾಗಿದೆ🍀


🍀ಜನರು ತಮ್ಮ ಮನೆಯ ಮುಖ್ಯ ದ್ವಾರದಲ್ಲಿ ಪೂರ್ಣ ನಂಬಿಕೆ ಮತ್ತು ಗೌರವದಿಂದ ಸ್ವಸ್ತಿಕ ಚಿಹ್ನೆಯನ್ನು ಹಾಕುತ್ತಾರೆ. ಸ್ವಸ್ತಿಕವನ್ನು ಸಾತಿಯಾ ಎಂದೂ ಕರೆಯುತ್ತಾರೆ. ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಮಾಡಿದ ಸ್ವಸ್ತಿಕವನ್ನು ತುಂಬಾ ಮಂಗಳಕರ ಎನ್ನುವ ನಂಬಿಕೆಯಿದೆ. ಮನೆಯ ಮುಖ್ಯದ್ವಾರದಲ್ಲಿ ಸ್ವಸ್ತಿಕವನ್ನು ಹಾಕುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ🍀


🌼ಮುಖ್ಯ ದ್ವಾರದಲ್ಲಿ ಸ್ವಸ್ತಿಕವನ್ನು ಹಾಕುವಾಗ ಯಾವೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಗೊತ್ತಾ🌼


🌹ಮುಖ್ಯ ಬಾಗಿಲಿನ ಮೇಲೆ ಯಾವಾಗಲೂ ಸಿಂಧೂರದಿಂದ ಸ್ವಸ್ತಿಕವನ್ನು ಮಾಡಬೇಕು. ಸಿಂಧೂರದಿಂದ ಮಾಡಿದ ಸ್ವಸ್ತಿಕವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ದಾರಿಯನ್ನು ತೆರೆಯುತ್ತದೆ ಎನ್ನುವ ನಂಬಿಕೆಯಿದೆ🌹


🌹ನೀವು ಮುಖ್ಯ ಬಾಗಿಲಿನ ಮೇಲೆ ಸ್ವಸ್ತಿಕವನ್ನು ಮಾಡುವ ಮುನ್ನ ಮುಖ್ಯ ದ್ವಾರವನ್ನು ಸರಿಯಾದ ರೀತಿಯಲ್ಲಿ ಶುದ್ಧಗೊಳಿಸಿಕೊಳ್ಳಬೇಕು. ಮುಖ್ಯ ದ್ವಾರದ ಮೇಲೆ ಧೂಳು ಮತ್ತು ಮಣ್ಣಿನಿಂದ ಕೊಳಕು ಇರಬಾರದು ಎಂಬುದನ್ನು ನೆನಪಿನಲ್ಲಿಡಿ🌹


🌹ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕವನ್ನು ಮಾಡಿದ ನಂತರ, ಸುತ್ತಲೂ ಶೂ ಮತ್ತು ಚಪ್ಪಲಿಗಳ ರಾಶಿ ಇರಬಾರದು ಎಂಬುದನ್ನು ನೆನಪಿನಲ್ಲಿಡ🌹


🌹ಬಾಗಿಲಿನಲ್ಲಿ ಸ್ವಸ್ತಿಕವನ್ನು ಹಾಕುವಾಗ ನೀವು ಅದರ ಗಾತ್ರವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಸ್ವಸ್ತಿಕದ ಗಾತ್ರಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ🌹



🌼ವಾಸ್ತು ದೋಷಗಳನ್ನು ಕಡಿಮೆ ಮಾಡಲು ಅಥವಾ ನಿರ್ಮೂಲನೆ ಮಾಡಲು ಒಂಬತ್ತು ಬೆರಳುಗಳಷ್ಟು ಉದ್ದ ಮತ್ತು ಅಗಲವಾಗಿ ಸ್ವಸ್ತಿಕವನ್ನು ಮಾಡುವುದು ಒಳ್ಳೆಯದು ಎಂದು ನಂಬಲಾಗಿದೆ🌼


🪷ಸ್ವಸ್ತಿಕ ಹಾಕಲು ಕಾರಣ🪷


🌸ಮನೆಯ ಮುಂದೆ ಮರ, ಕಂಬ ಕಂಡರೆ ಅದು ನಕಾರಾತ್ಮಕ ಶಕ್ತಿಯ ಸಂಕೇತ. ಇದರ ದುಷ್ಪರಿಣಾಮಗಳನ್ನು ತಡೆಯಲು ಪ್ರತಿದಿನ ಮುಖ್ಯ ದ್ವಾರದ ಮೇಲೆ ಸ್ವಸ್ತಿಕವನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ🌸


🌸ಮುಖ್ಯ ದ್ವಾರದಲ್ಲಿ ಹಾಕಿದ ಸ್ವಸ್ತಿಕ ಚಿಹ್ನೆಯ ಸುತ್ತಲೂ ಅರಳಿ, ಮಾವು ಅಥವಾ ಅಶೋಕ ಎಲೆಗಳ ಹಾರವನ್ನು ಇಡಬೇಕು. ಅಥವಾ ಈ ಎಲೆಗಳನ್ನು ಸ್ವಸ್ತಿಕದ ಸುತ್ತ ಇಡಬೇಕು. ಈ ರೀತಿ ಮಾಡುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ🌸


🌸ಮುಖ್ಯ ಬಾಗಿಲನ್ನು ಹೊರತುಪಡಿಸಿ, ನೀವು ಮನೆಯ ಅಂಗಳದ ಮಧ್ಯದಲ್ಲಿಯೂ ಸಹ ಸ್ವಸ್ತಿಕವನ್ನು ಹಾಕಬಹುದು. ಈ ಕಾರಣದಿಂದಾಗಿ, ಪೂರ್ವಜರು ನಿಮ್ಮ ಮನೆಯ ಅಂಗಳದಲ್ಲಿ ನೆಲೆಸುತ್ತಾರೆ ಮತ್ತು ಅವರು ನಿಮ್ಮನ್ನು ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆಯಿದೆ🌸


🚩ಶ್ರೀ ಭಗವಂತ ಪರಶುರಾಮ🚩

***

*ಸ್ವಸ್ತಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ*


ಭಾರತೀಯ ಮನೆಗಳ ಪ್ರವೇಶ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆ ಸಾಮಾನ್ಯವಾಗಿರುತ್ತದೆ. ಅನಾದಿ ಕಾಲದಿಂದಲೂ ಬಳಸುತ್ತಿರುವ ಈ ಚಿಹ್ನೆಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಗಣೇಶನನ್ನು ಪ್ರತಿನಿಧಿಸುವ ಈ ಚಿಹ್ನೆಯ ವಿಶೇಷವೇನು ? ವಾಸ್ತು ಶಾಸ್ತ್ರ ಏನು ಹೇಳುತ್ತದೆ ?

ಭಾರತದಲ್ಲಿ ಅನಾದಿ ಕಾಲದಿಂದಲೂ ಬಳಸುತ್ತಿರುವ ಒಂದು ಶುಭ ಚಿಹ್ನೆ ಎಂದರೆ ಅದು ಸ್ವಸ್ತಿಕ. ಭಾರತದಲ್ಲಿ ಹುಟ್ಟಿದಂಥ ಈ ಚಿಹ್ನೆಗೆ ಸುಮಾರು 6000 ವರ್ಷದ ಇತಿಹಾಸವಿದೆ. ಇದು ಮನೆಯಲ್ಲಿ ಇದ್ದರೆ ಮಾಡುವ ಕೆಲಸಗಳು ಶುಭಪ್ರದವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಸ್ವಸ್ತಿಕದಿಂದ ಮನೆಗೆ ಯಾವ ರೀತಿ ಒಳಿತಾಗುತ್ತದೆ ?

          

                                                                                - ಸ್ವಸ್ತಿಕ ಸಂಪತ್ತು ಮತ್ತು ಸಮೃದ್ಧಿಯ ಸಂಕೇತ. ಈ ಚಿಹ್ನೆಯ ಎಡ ಬದಿಯಲ್ಲಿ ಗಣೇಶ ಇರುವನೆಂದು ಸೂಚಿಸುತ್ತದೆ. ಸ್ವಸ್ತಿಕ ಮನೆಯಲ್ಲಿದ್ದರೆ  ಸಂಪತ್ತು ಮತ್ತು ಸಮೃದ್ಧಿ ಮನೆಯಲ್ಲಿ ಸದಾ ತುಂಬಿರುತ್ತದೆ ಎಂದರ್ಥ. 

                                                                                                                           - ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಸ್ವಸ್ತಿಕ ಚಿಹ್ನೆ ಮನೆಯಲ್ಲಿ ಇರುವುದು ಶುಭ ಎಂದು  ವಾಸ್ತು ಶಾಸ್ತ್ರವೂ ಹೇಳುತ್ತದೆ. ಇದು ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ಹೊರ ಹಾಕಿ, ಪಾಲಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ. 

                                                                                                - ದುಷ್ಟ  ಶಕ್ತಿ ದಮನ: ಸ್ವಸ್ತಿಕ ಚಿಹ್ನೆಯನ್ನು ಮನೆ ಮುಂಭಾಗಿಲಿನಲ್ಲಿ ಹಾಕಿದರೆ, ದುಷ್ಟ ಶಕ್ತಿಗಳು ಮನೆಯೊಳಗೆ ಬರೋದಿಲ್ಲ ಎನ್ನಲಾಗುತ್ತದೆ. 

                                                                                                 - ಸ್ವಸ್ತಿಕ್ ಲಾಂಛನದ ಮೇಲೆ ದೇವರ ತೀರ್ಥ ಗಂಗಾ ಜಲ ಮತ್ತು ಹಸುವಿನ ಗಂಜಲವನ್ನು ಚಿಮುಕಿಸುತ್ತಿದ್ದರೆ ಅದರ ಶಕ್ತಿ ಹೆಚ್ಚಾಗುತ್ತದೆ.

                                                                                                                                                             - ಸ್ವಸ್ತಿಕ್ ಲಾಂಛನವನ್ನು ಅಳವಡಿಸಿದ ನಂತರ ಧೂಳು ಬೀಳದೆ ಇರುವ ಹಾಗೆ ಆಗಾಗ ಒರೆಸುತ್ತಿರಬೇಕು.

                                                                                    - ಸ್ವಸ್ತಿಕ್ ಲಾಂಛನವು ಹಿತ್ತಾಳೆ ಅಥವಾ ಪಂಚಲೋಹದಿಂದ ಮಾಡಿದ್ದರೆ ಒಳ್ಳೆಯದು.

                                                                                                  - ಸ್ವಸ್ತಿಕ್ ಲಾಂಛನವು ಮನೆಯಲ್ಲಿ ಸುಖ, ಸಂತೋಷ, ಶಾಂತಿ, ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

                                                                                                            - ಸ್ವಸ್ತಿಕ್ ಲಾಂಛನವು ಮನೆಯ ಸುತ್ತಲಿನ ಜಾಗವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.

                                                                                 - ಮನೆಯ ಗೇಟ್ ಹಾಗೂ ಕಾಂಪೌಂಡ್ ಗೋಡೆ ಮೇಲೆ ಸ್ವಸ್ತಿಕ್ ಲಾಂಛನವನ್ನು ಹಾಕಬೇಕು

***



No comments:

Post a Comment