SEARCH HERE

Friday 1 October 2021

ಅಳಲೆ ಕಾಯಿ terminalia chebula

 ಆಯುರ್ವೇದ ವೈದ್ಯಶಾಸ್ತ್ರದ ಸಂಪತ್ತು ಅಳಲೆ ಕಾಯಿ


ಕನ್ನಡ ಭಾಷೆಯಲ್ಲಿ> ಅಳಲೆ ಕಾಯಿ , ಅಣಲೆ ಕಾಯಿ,

ಕರಕ ಕಾಯಿ , ಹರೀತಕಿ.

ಹಿಂದಿ ಭಾಷೆಯಲ್ಲಿ > ಹರಡ , हरड़

ಸಂಸ್ಕೃತ ಭಾಷೆಯಲ್ಲಿ> ಅಮೃತಾ,ಅಭಯಾ,ವಿಜಯಾ

Botanical name> Terminalia chebula

Family> Rangoon creeper family

Name>Black myrobalan.

                    

       ಅಳಲೆ ಕಾಯಿ ಆಯುರ್ವೇದ ದಲ್ಲಿ ಬಹಳ ಪ್ರಮುಖ ವಾದ ಸಸ್ಯವಾಗಿದೆ.ಇದನ್ನು ಉಪ ಯೋಗಿಸುವ ಕ್ರಮ ವನ್ನು ಚೆನ್ನಾಗಿ ತಿಳಿದವರನ್ನು "ಅಳಲೆ ಕಾಯಿ ಪಂಡಿತ " ಎಂದು ಕರೆಯುವರು.  ಇದು ಹಸಿರು ಬಣ್ಣದಿಂದ ಕೂಡಿರುವುದರಿಂದ ಹರೀತಕಿ ಎಂದು ಹೆಸರು.  

        ಇದರಲ್ಲಿ "ಛೋಟಿ ಹರಡ" ಮತ್ತು " ಬಡಿ ಹರಡ" ಎಂಬ ಎರಡು ವಿಧಗಳು ಇದು ಒಂದೇ ಹಣ್ಣಿನ ಎರಡು ಹಂತಗಳು ಛೋಟಿ ಅಂದರೆ ಎಳೆಯ ಅಳಲೆ ಕಾಯಿ ಔಷಧಿಯಲ್ಲಿ ಬಳಸುತ್ತಾರೆ.ಬಲಿತ ಕಾಯಿಗಳನ್ನು ಚರ್ಮವನ್ನು ಹದ ಗೊಳಿಸಲು ಬಳಸುತ್ತಾರೆ.

        ಒಗರು ಮಿಶ್ರಿತ ರುಚಿಯನ್ನು ಹೊಂದಿರುವ ಅಳಲೆ ಕಾಯಿ " ತ್ರಿ ಫಲಾ ಚೂರ್ಣ " ದಲ್ಲಿ ಪ್ರಮುಖ ಘಟಕವಾಗಿದೆ. ಅಳಲೆಕಾಯಿ ಸರ್ವ ರೋಗ ನಿವಾರಕ ವಾಗಿ ಕೆಲಸ ಮಾಡುತ್ತದೆ.

* ಅಳಲೆ ಕಾಯಿ ಅಗಿದು ತಿಂದರೆ ಜಠರಾಗ್ನಿಯನ್ನು ಉದ್ದೀಪನಗೊಳಿಸಿ ಹಸಿವನ್ನು ಹೆಚ್ಚಿಸುತ್ತದೆ.

*ತೇಯ್ದು ಉಪಯೋಗಿಸಿದರೆ ಮಲಬದ್ಧತೆ ನಿವಾರಿ ಸುತ್ತದೆ.

*ಬೆಲ್ಲದೊಂದಿಗೆ ಸೇವಿಸಿದರೆ ತ್ರಿ ದೋಷಗಳನಿವಾರಣೆ.

*ಒಣ ಶುಂಠಿಯೊಂದಿಗೆ ಸೇವಿಸಿದರೆ ಕಫ ನಿವಾರಣೆ.

*ತುಪ್ಪ ಬೆರೆಸಿ ಸೇವಿಸಿದರೆ  ಪಿತ್ತ ನಿವಾರಣೆ.

*ಸೈಂಧವಲವಣ ಸೇರಿಸಿ ಸೇವಿಸಿದರೆ ವಾತ ನಿವಾರಣೆ

*ಅಳಲೆ ಕಾಯಿ ಬೇಯಿಸಿ ತಿಂದರೆ ಅತಿಸಾರ ನಿವಾರಣೆ ಆಗುತ್ತದೆ.

* ಅಳಲೆ ಕಾಯಿ ಚೂರ್ಣ ಒಣ ಶುಂಠಿ ಸೇರಿಸಿ ಕಷಾಯ ತಯಾರಿಸಿ ಆರಿದ ನಂತರ ಜೇನು ಬೆರೆಸಿ ಕುಡಿದರೆ ಕೆಮ್ಮು ಕಫ ನಿವಾರಣೆ ಆಗುತ್ತದೆ.

*ಕಾಲಿನ ಬೆರಳುಗಳ ನಡುವೆ ಸೆಲೆತರೆ ಅಳಲೆ ಕಾಯಿ ಚೂರ್ಣ ಅಥವಾ ತ್ರಿ ಫಲಾ ಚೂರ್ಣ ಹಚ್ಚಬಹುದು.

*ಅಳಲೆ ಕಾಯಿ ಚೂರ್ಣ , ನೆಗ್ಗಿಲು ಮುಳ್ಳಿನ ಚೂರ್ಣ ದ ಕಷಾಯ ತಯಾರಿಸಿ ಜೇನು ಬೆರೆಸಿ ಸೇವಿಸಿದರೆ ಮೂತ್ರಕೃಚ್ಛ ದಲ್ಲಿ ಉಪಯುಕ್ತ.

* ಅಳಲೆ ಕಾಯಿ ಚೂರ್ಣ ಅಥವಾ ತ್ರಿ ಫಲಾ ಚೂರ್ಣ ದಿಂದ ಹಲ್ಲು ಉಜ್ಜಿದರೆ ಹಲ್ಲು ವಸಡು ಗಳಿಗೆ ಉತ್ತಮ

ಹಾಗೂ ಬಾಯಿಯ ದುರ್ಗಂಧ ದೂರವಾಗುತ್ತದೆ.

  

      ಇದಲ್ಲದೇ ಪಾರಂಪರಿಕ ಚಿಕಿತ್ಸಕರು ನುರಿತ ನಾಟಿ ವೈದ್ಯರು ಮೂಲವ್ಯಾಧಿ ,ಗಳಗಂಡ , ಕಾಮಾಲೆ , ಬಾವು ನೋವುಗಳಿಗೆ ,ಕ್ಷಯ ರೋಗದಲ್ಲಿ ಅಳಲೆ ಕಾಯಿ ಬಳಸಿ ಔಷಧೋಪಚಾರ ನೀಡುತ್ತಾರೆ.

ಸಂಗ್ರಹ ಮಾಹಿತಿ ಲೇಖನ> S.H.Nadaf

***


No comments:

Post a Comment