SEARCH HERE

Friday 1 October 2021

ಯಮಧರ್ಮ ರಾಜರ ಪಟ್ಟಣ ಪ್ರಯಾಣ ಯಮ yamadharma place

 



.

ಮರಣದಲ್ಲಿ ಆನಂದ  !!!


ಮರಣದಲ್ಲಿ ಆನಂದವಿದೆಯೇ ಎಂದು ಆಶ್ಚರ್ಯವಾಗುತ್ತಿದೆಯಾ? ಹೌದು ಮರಣವನ್ನು ಕೂಡ ಆನಂದದಿಂದ ತೆಗೆದುಕೊಳ್ಳುವವರು ಈ ಜಗತ್ತಿನಲ್ಲಿ ಇದ್ದಾರೆ.

"ಅನಾಯಾಸೇನ ಮರಣಂ....

ವಿನಾ ದೈನ್ಯೇನ ಜೀವನಂ ....!"

ಅನಾಯಾಸವಾದ ಮರಣ ನನಗೆ ಸಿಗಲಿ...ಸಾವು 

ಹೇಗೆ ಬಂತೆಂಬುದೇ ಗೊತ್ತಾಗದಂತೆ ಇರಲಿ....

ದೈನ್ಯದ...ಇನ್ನೊಬ್ಬರ ಭಿಕ್ಷೆಯಲ್ಲಿ.....ಹಂಗಿನ ಬದುಕು ಬೇಡ....".. ಹಿಂದಿನ ಕಾಲದಲ್ಲಿ ಹಿರಿಯರು ದೇವರಲ್ಲಿ ಈ ಪ್ರಾರ್ಥನೆಯನ್ನು ಕೂಡ ಇಡುತ್ತಿದ್ದರು.

ಕಷ್ಟವಿಲ್ಲದ ಬದುಕು ಮತ್ತು ಸಾವು - ಪ್ರತಿಯೊಬ್ಬರು ಬಯಸುವುದು ಅದನ್ನೇ ಅಲ್ಲವೇ. ದೈನ್ಯವಿಲ್ಲದ ಜೀವನ - ಅರ್ಥಾತ್ ತಕ್ಕಮಟ್ಟಿಗೆ ಸ್ವಾವಲಂಬಿಯಾಗಿರಲು ಬೇಕಾಗುವಷ್ಟು ದ್ರವ್ಯ - ಎಲ್ಲರು ಬಯಸುವಂತದೆ. ಮರಣಕಾಲದಲ್ಲಿ ಹೆಚ್ಚು ಶ್ರಮಪಡದೆ, ಬೇರೆಯವರಿಗೆ ಭಾರವಾಗದೆ ಪ್ರಾಣ ಬಿಡುವುದು ಸಹ ಅಂತೆಯೇ. ಇವೆರಡನ್ನು ಕೇಳಿಕೊಳ್ಳುವ ಪ್ರಾರ್ಥನೆ ಎಷ್ಟು ಭಾವೋಚಿತ !

ಅನಾಯಾಸೇನ ಮರಣಂ:

ಎಲ್ಲರೂ ಹೇಳುವಂತೆ ‘ಅನಾಯಾಸ ಮರಣ’ ಎಂದರೆ ನೋವಿಲ್ಲದೆ ಸಾಯುವುದು, ಕಾಯಿಲೆ ಅನುಭವಿಸದೆ ಸಾಯುವುದು, ಪರಾವಲಂಬಿತರೆನಿಸದೆ ಮರಣ ಹೊಂದುವುದು, ನಿದ್ರೆಯಲ್ಲಿ ಅಸು ನೀಗುವುದು, ನೆಚ್ಚಿನ ಕೆಲಸಮಾಡುತ್ತ ಪ್ರಾಣತ್ಯಾಗಮಾಡುವುದು. 


ಮನುಷ್ಯನಿಗೆ ಸಪ್ತ ವಿಧ ಮೃತ್ಯು (ಮರಣ)ಗಳಿವೆ.


1.ಕಾಲ ಮರಣ 2. ಅಕಾಲ ಮರಣ 3.ವ್ಯಾಳ ಮರಣ 4. ಘೋರ ಮರಣ 5. ಕ್ಷುದ್ರ ಮರಣ 6. ದುಷ್ಟ ಮರಣ 7. ಅರಿಷ್ಟಮರಣ ಎಂದು ಒಟ್ಟು ಏಳು ವಿಧದ ಮರಣವಿದೆ ಎಂದು ಶಾಸ್ತ್ರಕಾರರು ಹೇಳುತ್ತಾರೆ. ಆ ಮರಣಗಳಲ್ಲಿಯೂ ಸಾತ್ವಿಕ ಮರಣ, ರಾಜಸ ಮರಣ, ತಾಮಸ ಮರಣಗಳೆಂದು ಇರುತ್ತವೆ.

ಇವುಗಳನ್ನು ತಿಳಿದುಕೊಳ್ಳೋಣ


ಸಾತ್ವಿಕ ಮರಣ

ಕಾಲನ ಕರೆಗೆ ಓಗೊಟ್ಟು ಮುಂಚಿತವಾಗಿ ಸಿದ್ಧತೆ ಗೊಂಡ ಮರಣ..   ಕಾಲ ಮರಣ.


ಮರಣಕಾಲವನ್ನು ನಿರೀಕ್ಷಣೆ ಮಾಡಿ ಸ್ವಾಗತಿಸಿ ಆನಂದದಿಂದ ದೇಹತ್ಯಾಗಮಾಡಿ ಮುಕ್ತಿಹೊಂದಿದ ಪುರಾಣಪುರುಷರು ನಮ್ಮಲ್ಲಿ ಅನೇಕರಿದ್ದಾರೆ.


ಹಿಂದೊಮ್ಮೆ ಮುನಿಶಾಪಕ್ಕೊಳಗಾದ ಪರೀಕ್ಷಿತ ರಾಜನು ತಕ್ಷಕ ಎಂಬ ಸರ್ಪ ಕಚ್ಚಿ ಎಳು ದಿನಗಳೊಳಗೆ ತಾನು ಸಾಯುತ್ತೇನೆಂದು ಚಿಂತಿಸತೊಡಗಿದ. ಈ ಮಧ್ಯೆ ಅವನು ಶುಕಮುನಿಯಿಂದ ಭಾಗವತ ಕಥೆಗಳನ್ನು ಕೇಳುತ್ತಾ ಆರು ದಿನಗಳನ್ನು ಕಳೆದನು. ಮೃತ್ಯುಭಯದಿಂದ ಕಂಪಿಸುತ್ತಿರುವ ರಾಜನ ದುರವಸ್ಥೆಯನ್ನು ಕಂಡು ಶುಕಮುನಿ ಅವನ ಮೃತ್ಯುಭಯ ನಿವಾರಣೆಗಾಗಿ ಒಂದು ಕಥೆಯನ್ನು ಹೇಳಿದರು. 


ಒಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ. ಅವನು ಒಮ್ಮೆ ಬೇಟೆಯಾಡಲು ಹೋದ. ಬೇಟೆಯಾಡುತ್ತಿರಲು ರಾತ್ರಿಯಾಗಿ ಹಿಂತಿರುಗಲು ದಾರಿ ತಪ್ಪಿತು. ರಾತ್ರಿಯಾಗುತ್ತಾ ಬಂದುದರಿಂದ ಎಲ್ಲಿಯಾದರೂ ಆಶ್ರಯ ಸಿಕ್ಕೀತೆಂದು ಆ ದಾರಿಯಲ್ಲಿ ಮುಂದುವರಿಯಲು,  ಅಲ್ಲೊಂದು ಬೇಡನ ಗುಡಿಸಲು ಇರುವುದನ್ನು ಕಂಡನು. ಗುಡಿಸಲಿನ ಹತ್ತಿರ ಹೋದಾಗ ಅಸಹ್ಯವಾದ ದುರ್ವಾಸನೆ ಮೂಗಿಗೆ ಹೊಡೆಯುತಿತ್ತು. ಬೇರೆ ದಾರಿ ಇಲ್ಲದ ಕಾರಣ ರಾಜನು ಅದರೊಳಗೆ ಪ್ರವೇಶಿಸಿದ.

ಅಲ್ಲಿದ್ದ ಬೇಡನು ಹೆಳವನಾಗಿದ್ದ. ಗುಡಿಸಲಿನ ಹೊರಗೆ ಹೋಗಲು ಅಶಕ್ತನಾದುದರಿಂದ ಅವನು ಮಲ  ಮೂತ್ರಗಳನ್ನು ಅಲ್ಲಿಯೇ ಮಾಡುತ್ತಿದ್ದ. ರಾಜನು ಬೇಡನೊಡನೆ,  ನಾನು ಬೇಟೆಯಾಡುತಿರಲು ರಾತ್ರಿಯಾಗಿ ಹಿಂತಿರುಗಲು ರಾತ್ರಿಯಾಯಿತು. ಈ ರಾತ್ರಿ ಇಲ್ಲಿ ಇರಲು ಅವಕಾಶ ಮಾಡಿ ಕೊಡಿ ಎಂದು ಕೇಳಿಕೊಂಡನು. ಆಗ ಬೇಡನು,  ಈ ಮೊದಲು ಆಶ್ರಯ ಕೇಳಿ ಬಂದವರಿಗೆ ನಾನು ಆಶ್ರಯ ಕೊಟ್ಟಿದ್ದೆ. ಆದರೆ ಅವರೆಲ್ಲ ಹೊರಡುವ ಸಮಯ ನನ್ನೊಡನೆ ಜಗಳ ಮಾಡಿ ಈ ದುರ್ಗಂಧಮಯ ಗುಡಿಸಲು ತಮ್ಮದು ಎಂದು ಹೇಳಿ ಇಲ್ಲೇ ಇರಲು ಬಯಸಿದರು ಎಂದನು. 

ಬೇಡನ ಮಾತನ್ನು ಕೇಳಿ ರಾಜನು ನಗುತ್ತಾ,  ಮಹಾಶಯರೇ, ನಾನು ಮಹಾರಾಜಾ. ನನಗೆ ಅರಮನೆ ಇದೆ. ಒಂದು ರಾತ್ರಿ  ಮಾತ್ರ ಇಲ್ಲಿ ಇರಲು ಅವಕಾಶ ಮಾಡಿ ಕೊಡಿ ಎಂದು ಕೇಳುತ್ತಿದ್ದೇನೆ. ನಾನು ಜಗಳ ಮಾಡುವುದೂ ಇಲ್ಲ,  ಈ ಕುಟೀರ ನನ್ನದು ಎಂದು ಹೇಳುವುದು ಇಲ್ಲ. ನಾನು ಬೆಳಿಗ್ಗೆ ಎದ್ದು ಹೋಗುವುದು ಎಂದು ಪ್ರತಿಜ್ಞೆ ಮಾಡುತ್ತೇನೆ ಎಂದನು. 

ಬೇಡನು ಮನಸಿಲ್ಲದ ಮನಸ್ಸಿನಿಂದ ರಾಜನ ಮಾತನ್ನು ಒಪ್ಪಿಕೊಂಡ. ರಾಜ ಆ ರಾತ್ರಿ ಕುಟೀರದ ಒಂದು ಮೂಲೆಯಲ್ಲಿ ನಿದ್ರಿಸಿದ. ಆದರೆ ಬೆಳಗಾದ ಕೂಡಲೇ, ಅರಮನೆಯ ಸುಖ ಮತ್ತು ತನ್ನ ಕರ್ತವ್ಯಗಳೆಲ್ಲವನ್ನು ಮರೆತು ಅಲ್ಲಿಯೇ ಇರಲು ಇಚ್ಛಿಸಿದ. ಬೇಡ ರಾಜನೊಡನೆ ಜಗಳವಾಡಿದ. ಆದರೂ ರಾಜನು ಕುಟೀರ ದಿಂದ ಹೊರ ಹೋಗಲು ಒಪ್ಪದೆ ಅಲ್ಲಿಯೇ ಉಳಕೊಂಡ. 


ಕಥೆ ಕೇಳಿದ ಮೇಲೆ ಶುಖಮುನಿಯು ಪರೀಕ್ಷಿತ ರಾಜನೊಂದಿಗೆ, ಆ ರಾಜನು ಬೇಡನೊಡನೆ ಜಗಳ ಮಾಡಿದ್ದು ಸರಿಯೇ ? ಎಂದು ಪ್ರಶ್ನಿಸಿದನು. ಆಗ ಪರೀಕ್ಷಿತನು, ಮಹಾತ್ಮರೇ ನನ್ನ ದ್ರಷ್ಟಿ ಯಲ್ಲಿ ಆ ರಾಜ ಮೂರ್ಖ. ಅರಮನೆ ಯನ್ನು ಬಿಟ್ಟು ದುರ್ಗಂಧಮಯವಾದ ಈ ಕುಟೀರದಲ್ಲಿರಲು ಹೇಗೆ ಮನಸ್ಸು ಬಂತು ?  ಎಂದು ಹೇಳಿ ಕುತೂಹಲ ತಡೆಯಲಾರದೆ ಆ ಮೂರ್ಖ ರಾಜ ಯಾರೆಂದು ಕೇಳಿದನು. 


ಆಗ ಶುಕ ಮುನಿಯು ಶಾಂತವಾಗಿ, {ಮಹಾರಾಜರೇ, ಆ ರಾಜನು ಮತ್ತಾರೂ ಅಲ್ಲ. ನೀವೇ ಆಗಿರುವಿರಿ. ಈ ಮಲ ಮೂತ್ರಗಳಿಂದ ಕೂಡಿದ ಈ ಶರೀರವೆಂಬ ಕುಟೀರದಲ್ಲಿ ಎಷ್ಟರ ಮಟ್ಟಿಗೆ ನಿಮ್ಮ ಆತ್ಮ ಇರಬೇಕಿತ್ತೋ, ಅಷ್ಟರವರೆಗೆ ವಾಸ ಮಾಡಿಯಾಯಿತು. ಈ ಶರೀರರೂಪಿ ಕುಟೀರದಿಂದ ನಿಮ್ಮ ಆತ್ಮಕ್ಕೆ ಹೊರಟು ಹೋಗುವ ಸಮಯ ಬಂದಿದೆ. ನಿಮ್ಮ ಆತ್ಮ ಎಲ್ಲಿಂದ ಬಂದಿದೆಯೋ ಅಲ್ಲಿಗೆ ಹೋಗಬೇಕಾಗಿದೆ. ಆದರೆ ನೀವು ಈಗ ಈ ದುರ್ಗಂಧಮಯವಾದ ಶರೀರ ರೂಪಿ ಕುಟೀರವನ್ನು ಬಿಟ್ಟು ಹೋಗಲು ಇಚ್ಛಿಸದೆ  ಚಿಂತಿಸುತ್ತಾ ಇದ್ದೀರಿ .  ಇದು ಸರಿಯೇ?  ಎಂದು ಕೇಳಿದರು. ಪರೀಕ್ಷಿತ ರಾಜನು ಶುಖ ಮುನಿ ಹೇಳಿದ ಕಥೆಯ ಮರ್ಮ ವನ್ನು ಸರಿಯಾಗಿ ಅರಿತುಕೊಂಡ. ಅಜ್ಞಾನ ದಲ್ಲಿದ್ದ ಅವನಿಗೆ ಸುಜ್ಞಾನ ಬಂತು. ಈ ಕಥೆ ಯ ಪ್ರಭಾವವು ಅವನ ಮರಣ ಭೀತಿ ಯನ್ನು ದೂರ ಮಾಡಿತು.  ಅವನು ಸಂತೋಷದಿಂದ ಇಹಲೋಕವನ್ನು ತ್ಯಜಿಸಲು ಉದ್ಶುಕ್ತನಾದ

ಹೀಗೆ  ನಮ್ಮ ಪರೀಕ್ಷಿತ ಮಹಾರಾಜರು

ದಧೀಚಿ ಮುನಿಗಳು ಇನ್ನೂ ಅನೇಕರು  ಪುರಾಣದ ಕಥೆಗಳಲ್ಲಿ ನಾವು ಇದನ್ನು ಗಮನಿಸಬಹುದು


 ಬ್ರಹ್ಮ ರಂದ್ರದ ಮೂಲಕ ಅಷ್ಟಾಂಗಯೋಗ ಗಳಿಂದ ಸರ್ವಜೀವ ತತ್ವವನ್ನು ದೇಹದಿಂದ ಜೀವನನ್ನು ಪ್ರತ್ಯೇಕಿಸುವುದು ಈ ಮರಣ.

 ಖಟ್ವಾಂಗ ಮಹಾರಾಜರು ಸಹ ಇದೇ ತರಹದ ಮರಣವನ್ನುಪ್ಪುತ್ತಾರೆ. ತಂದೆ ಉದ್ದಾಲಕರು ಬಾಲಕ ನಚಿಕೇತರಿಗೆ ಸತ್ತು ಹೋಗು, ನಿನ್ನನ್ನು ಯಮನಿಗೆ ದಾನ ಕೊಟ್ಟಿದ್ದೇನೆ ಎಂದಾಗ ಸ್ವಲ್ಪವೂ ವಿಚಲಿತರಾಗದೇ ಸಂತೋಷದಿಂದ ಯಮನ ಬಳಿ ತೆರಳುತ್ತಾರೆ. ಜ್ಞಾನಿಗಳು, ಸಿದ್ಧ ಪುರುಷರು ಯೋಗಿಗಳು, ಋಷಿಗಳು, ಸಾಧಕರು ಮರಣಾನಂದವನ್ನು ಹೊಂದಿ ಸ್ವರ್ಗಕ್ಕೇರಿದ ಅನೇಕ ಉದಾಹರಣೆಗಳು ನಮ್ಮ ಪುರಾಣ-ಇತಿಹಾಸಗಳಲ್ಲಿ ಸಿಗುತ್ತವೆ.

ವಿಷಯ ಸುಖವನ್ನು ತ್ಯಜಿಸಿ ಏಕಾಂಗಿಗಳಾಗಿ ಬೆಟ್ಟಗುಡ್ಡಗಳಲ್ಲಿ ಗವಿಗಹ್ವರಗಳಲ್ಲಿ ಕಾಡುಮೇಡುಗಳಲ್ಲಿ ಅಲೆಯುತ್ತಾ ಗಡ್ಡೆ ಗೆಣಸು, ಹಣ್ಣು ಹಂಪಲು, ಸೊಪ್ಪು ಸದೆ ತಿನ್ನುತ್ತಾ ಜಪತಪಗಳನ್ನಾಚರಿಸುತ್ತಾ ಕೊನೆಯುಸಿರನ್ನು ಆನಂದವಾಗಿ ಬಿಟ್ಟವರೂ ಅನೇಕರಿದ್ದಾರೆ. ಜಗತ್ ಪ್ರಸಿದ್ಧರಾದ ಯತಿ ಗುರುರಾಘವೇಂದ್ರ ಸ್ವಾಮಿಗಳು ಸಮಚಿತ್ತರಾಗಿ ಮೋಕ್ಷ ಮಾರ್ಗಕ್ಕಾಗಿ ಆನಂದರಾಗಿ ಸಜೀವ ಬೃಂದಾವನ ಪ್ರವೇಶ ಮಾಡಿ ಜಪತಪ ಮಾಡುತ್ತಾ ಗಳಿಸಿದ ಪುಣ್ಯವನ್ನು ಭಕ್ತರಿಗೆ ಇಂದಿಗೂ ಧಾರೆ ಎರೆಯುತ್ತಾಸಂಕಷ್ಟಗಳನ್ನು ದೂರಮಾಡುತ್ತಿರುವ ವಿಷಯ ನಾವೆಲ್ಲರೂ ಬಲ್ಲೆವು.


ಯಥಾಯೋಗ್ಯ ಜ್ಞಾನಾರ್ಜನೆ, ನವವಿಧ ಭಕುತಿ, ದಾನ ಧರ್ಮ, ಅತಿಥಿ ಅಭ್ಯಾಗತರ ಸೇವೆ, ಸತ್ಕರ್ಮಾಚರಣೆ, ತಂದೆತಾಯಂದಿರ ಪೋಷಣೆಯಂಥ ಕರ್ತವ್ಯಗಳನ್ನು ಮಾಡುತ್ತಾ ಜೀವನ ಸಾಗಿಸಿ, ವಿಷಯ ವೈರಾಗ್ಯವನ್ನು ತಳೆದು ನಾರಾಯಣ ಸ್ಮರಣೆ ಮಾಡುತ್ತ ಮರಣವನ್ನಪ್ಪಿದ್ದರೆ ಅದು ಕಾಲ ಮರಣ


ಮಾನಸಿಕ ಅಸ್ವಸ್ಥತೆಯಿಂದ ಭಾವೋದ್ರೇಕಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು, ಆಕಸ್ಮಿಕ ಅಪಘಾತಗಳಲ್ಲಿ ಮರಣವನ್ನಪ್ಪುವುದು, ಪ್ರವಾಹ, ಭೂಕಂಪ, ಬರಗಾಲಗಳಿಗೆ ಸಿಕ್ಕು ಮರಣಿಸುವುದು ಮರಣವನ್ನಪ್ಪಿದವರಿಗೂ, ಬಂಧು ಬಾಂಧವರಿಗೂ ದುಃಖಕರದ ಸಂಗತಿಯಾಗುತ್ತದೆ. 


ತನ್ನ ವೈರಿಯ ನಾಶಕ್ಕಾಗಿ ಅಥವಾ ಶತ್ರುದೇಶದ ನಾಶಕ್ಕಾಗಿ ಮುಂತಾದ ದ್ವೇಷದಿಂದ ಆತ್ಮಾಹುತಿ ಮಾಡಿಕೊಳ್ಳುವುದು ಒಂದು ತೆರನಾದರೆ ಜನರ, ದೇಶದ ರಕ್ಷಣೆಗಾಗಿ ಹೋರಾಡಿ ಕ್ಷತ್ರಿಯರು, ವೀರಯೋಧರು ರಣರಂಗದಲ್ಲಿ ವೀರಮರಣ ಹೊಂದುವುದು ಮೋಕ್ಷಯೋಗ್ಯವೆಂದು ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳುತ್ತಾನೆ.


ನಾವೂ ಸಹ ಸುಸಂಪನ್ನರಾಗಿ, ಶೀಲವಂತರಾಗಿ ಶಾಸ್ತ್ರಸಮ್ಮತವಾದ ಮತ್ತು ವಸ್ತು ನಿಷ್ಠವಾದ ಬದುಕನ್ನು ಬದುಕಿ ವಿಷಯ ವೈರಾಗ್ಯವನ್ನು ತಾಳಿ, ಮರಣಕಾಲವನ್ನು ನಿರೀಕ್ಷಣೆ ಮಾಡಿ ನಾರಾಯಣ ಸ್ಮರಣೆ ಮಾಡುತ್ತಾ ಮರಣಿಸಿದರೆ ನಮಗೆ ಮರಣಾನಂದವು ದೊರಕುತ್ತದೆ. ಮರಣ ಬರುವ ಮೊದಲೇ ಮನಸ್ಸಿಗೆ ಇದರ ವಿಷಯದ ಅರಿವಾಗುತ್ತದೆ ಇದರೊಂದಿಗೆ ಆನಂದವು ಕೂಡ


ನಮ್ಮ ನವದ್ವಾರದಿಂದ ಹೊರಬೀಳುವ ಕೊಳೆಯನ್ನು ನಾವು ಹೇಗೆ ಸ್ವಚ್ಛಗೊಳಿಸಿಕೊಂಡು ತಾಜಾತನದ ಆನಂದವನ್ನು ಅನುಭವಿಸುತ್ತೇವೆಯೋ ಹಾಗೆ ಈ ಪಂಚಭೂತದಿಂದಾದ, ಸಪ್ತಧಾತುಗಳಿಂದಾದ ತ್ರಿಗುಣಗಳಿಂದ ಯುಕ್ತವಾದ ದೇಹವು ಸಂಸಾರದಲ್ಲಿ ನಲುಗಿ ಬಳಲಿದೆ, ಮುಪ್ಪಾಗಿದೆ. ಅಂಥ ಈ ದೇಹವನ್ನು ತ್ಯಜಿಸಿ ಇನ್ನೊಂದು ಯೋಗ್ಯ ಸಾಧನದೇಹವನ್ನು ಪಡೆದು ಸಾಧನೆ ಮಾಡೋಣ ಎಂಬ ಜ್ಞಾನದಿಂದ ದೇಹತ್ಯಾಗ ಮಾಡಿದರೆ ಸಿಗುವ ಆನಂದವೇ ಮರಣಾನಂದ''. ಇದುವೇ ಮನುಷ್ಯ ಜನ್ಮದ ಸಾರ್ಥಕ್ಯದ ಚಿನ್ನೆ.

****


ಯಮಧರ್ಮರಾಜರ ಪಟ್ಟಣ

"ಪುರಾಣೋಕ್ತ ಶ್ರೀ ಯಮಧರ್ಮರಾಜರ ಪಟ್ಟಣ ( ಯಮಪುರಿ ) - ಒಂದು ಚಿಂತನೆ " 


ಮೃತನಾದ ವ್ಯಕ್ತಿಗೆ ಮರಣಾನಂತರ 13 ನೇ ದಿನದ ಸಾಯಂಕಾಲದಿಂದ " ಯಮಮಾರ್ಗ " ಪ್ರಯಾಣ ಪ್ರಾರಂಭವಾಗುತ್ತದೆ. 


ವರ್ಷಕ್ಕೆ 12 ದಿನಗಳಿರುವಂತೆ ಮೃತನು ಶ್ರೀ ಯಮಧರ್ಮರಾಜರ ಆಸ್ಥಾನಕ್ಕೆ ಈ ಕೆಳಕಂಡ ಯಮಪಟ್ಟಣಗಳ ಮೂಲಕ ಪ್ರಯಾಣ ಮಾಡುತ್ತಾನೆ!! 


" ಸೌರೀಪುರಂ " 


ಇದನ್ನು " ಮಂಜೂಷ ನರಕ " ಎನ್ನುತ್ತಾರೆ. 


ಸೂರ್ಯನ ಕಿರಣಗಳ ಶಾಖವನ್ನು ( ತಾಪ ) ಪಡೆದಿರುವ ಈ ನರಕ " ಸೌರಿ " ಎನ್ನಲಾಗಿದೆ.


ಮೃತ ಜೀವಿಯು ಇಲ್ಲಿಗೆ ಬಂದಾಗ " ಮಂಜೂಷ ನರಕ " ವು ಚೆನ್ನಾಗಿ ಕಾದಿರುವ ಕಬ್ಬಿಣದ ಪೆಟ್ಟಿಗೆಯಂತೆ ಇರುತ್ತದೆ. 


ಇದರ ಸುತ್ತಲೂ - ಮೇಲೆ , ಕೆಳಗೆ ಜ್ವಾಲೆಗಳಿರುವ ಅಗ್ಗಿಷ್ಟಿಕೆಗಳು ಉರಿಯುತ್ತಿರುತ್ತವೆ.


ಪಾಪಿಗಳು ಈ ಪೆಟ್ಟಿಗೆಯಲ್ಲಿ ಹಸಿವು - ಬಾಯಾರಿಕೆ - ಬಿಸಿಲುಗಳಿಂದ ಕಂಗೆಡುತ್ತಾರೆ. 


ಈ ಎರಡನೇ ಮಾಸಿಕದಲ್ಲಿ ನೀಡಿದ ಪಿಂಡದಾನ; ಉದಕುಂಭ ದಾನ; ದೀಪ ದಾನ ಮತ್ತು ದಕ್ಷಿಣೆಗಳಿಂದ ಪ್ರೇತನಿಗೆ ತಾಪದಾಯಕವಾಗಲಾರದು.


ಇಲ್ಲಿಯೇ ತಪ್ತ ಕುಂಡವಿರುವುದು. 


" ಅಥಿತಿ ಅಭ್ಯಾಗತರಿಗೆ ಅನ್ನಾದಿ ದಾನ ಮಾಡದವನು ಈ ನರಕದಲ್ಲಿ ಮುಳ್ಳಾಗಬೇಕಾಗುತ್ತದೆ.


ಮಧ್ಯಮ ಷೋಡಶಿಯಲ್ಲಿ ನೀಡುವ ವಿಷ್ಣು - ಶಿವ - ಯಮ - ಸೋಮ - ಹವ್ಯವಾಹನ - ಕಾವ್ಯವಾಹನ - ಕಾಲ - ರುದ್ರ - ಪುರುಷ - ಪ್ರೇತ; ಬ್ರಹ್ಮ - ವಿಷ್ಣು - ಶಿವ - ಯಮ - ತತ್ಪುರುಷ ಪ್ರೇತತ್ವ ನಿವೃತ್ತಿಗಾಗಿ 48 ಶ್ರಾದ್ಧ ಹೇಳಿದೆ. 


ಮೇಲಿನ ಷೋಡಶೀ ಮಾಧ್ಯಮ - ಉತ್ತಮ ಷೋಡಶಗಳಿಂದ ಪ್ರೇತತ್ವ ನಿವೃತ್ತಿಯಾಗಿ " ಪಿತೃ ಪಂಕ್ತಿ ಸೇರಲು "...


ಅರ್ಹನಾಗುವದಲ್ಲದೆ 16 ಕುಂಡಲಗಳಿಂದ ಬಿಡುಗಡೆಯೂ ಆಗುತ್ತದೆ! 


" ನಗೇಂದ್ರ ಭವನ " 


ನ + ಗಚ್ಛತೀತಿ ನಗ: - 


ಎಂಬಂತೆ ಪರ್ವತದಂತೆ ಈ ನರಕ ಅಚಲ. 


ಇಲ್ಲಿ ಬಿದ್ದವರು ಏಳುವುದೂ ಅಸಾಧ್ಯ. 


ಇದಕ್ಕೆ " ಅಪ್ರತಿಷ್ಠ " ಯೆನ್ನಲಾಗಿದೆ.


ಇಲ್ಲಿ ಕೀವು - ಮಲ - ಮೂತ್ರಗಳೇ ತುಂಬಿರುತ್ತದೆ. 


ಬ್ರಾಹ್ಮಣರನ್ನು ಹಿಂಸೆ ಮಾಡಿ ಅವರ ಸ್ವತ್ತನ್ನು ಅಪಹರಿಸಿ; ಶಾರೀರಕ ದಂಡನೆ ನೀಡಿದವರಿಗೆ...


ಈ " ನ + ಗ + ಇಂದ್ರಭವನಂ ".


ಇಲ್ಲಿ ಬಿದ್ದವರು ಮಲ - ಮೂತ್ರ - ಕೀವು - ಮೂತ್ರ ಪಾನ ಮಾಡುತ್ತಾ ಇಂದ್ರಭವನವೆನಿಸಿದ " ಸ್ವರ್ಗ " ಕ್ಕೆ ಹೋಗುವುದೇ ಇಲ್ಲ.


ಪುಣ್ಯವಂತರಿಗೆ ಪುಣ್ಯಪ್ರಭಾವದಿಂದ ಯಮಧರ್ಮರಾಜರೂ ಮತ್ತು ಯಮಭಟರು ಅವರನ್ನು ಪ್ರೀತಿಯಿಂದ ಮಾತನಾಡಿಸುವರು.


ವಸ್ತ್ರ - ಭೂ - ಗೃಹ ದಾನ ಮಾಡಿದ ಪುಣ್ಯವಂತರಿಗೆ ಆಯಾಯ ಪದಾರ್ಥಗಳು ಅವರಿಗೆ ತಲುಪುತ್ತದೆ. 


ಸುಖವಾಗಿ ಇಂದ್ರಭವನ ಸೇರುವರು. ಇವರಿಗೆ ಇಂದ್ರಭವನ ಇಲ್ಲಿಯೇ ಸಿಗುತ್ತದೆ. 


ನ = ನ ವಿದ್ಯತೇ


ಗಂ = ಗಮನಂ


ಇಂದ್ರಭವನಂ ಪ್ರತಿ ಯೇಷಾ೦ ತೇ ।। 


ಸ್ವರ್ಗಕ್ಕೆ ಹೋಗದೆನೆ ನರಕದಲ್ಲಿಯೇ ಸುಖಾದಿಗಳು ಅಭಿಸುವುದರಿಂದ ಇದು " ನಾಗೇಂದ್ರಭವನ ". 


" ಗಂಧರ್ವ ನಗರ "


ಕೀಟ ವಸ್ತುಗಳಿಂದ ದುರ್ಗಂಧ ಹೊರಸೂಸುವ ನರಕ. ಇಲ್ಲಯೇ " ವಿಟ್ ಕುಂಡ " ಇರುವುದು.


ಮಲ - ಮೂತ್ರ - ಕ್ರಿಮಿಗಳಿಂದ ತುಂಬಿದ್ದು -1 ಯೋಜನ ಸುತ್ತಳತೆ ಇದ್ದು ಅತ್ಯಂತ ದುರ್ಗಂಧಮಯ ನರಕ.


ಇದರ ಪಕ್ಕದಲ್ಲಿಯೇ ಮೂತ್ರಕುಂಡವಿದೆ.


ನಂತರದ್ದು ಶ್ಲೇಷ್ಮ ಕುಂಡ. ಕಫ ತುಂಬಿರುವುದು. 


ನೇತ್ರಮಲ ಕುಂಡ, ವಸಾ ಕುಂಡ, ಶುಕ್ರ ಕುಂಡ, ದುರ್ಗಂಧ ರಕ್ತದ " ಅಸೃಕ್ ಕುಂಡ " ವಿದೆ.


ಕರ್ಣವಿಟ್ಕುಂಡ, ಗಾತ್ರಮಲ ಕುಂಡ, ಕಣ್ಣೀರಿನ ಅಶ್ರು ಕುಂಡಗಳಿಂದ ಸುತ್ತುವರೆದಿರುವ ನರಕ. 


ಗಂಧ = ದುರ್ಗಂಧವನ್ನು


ಅರ್ವ೦ತಿ = ಹೊಂದುವುದರಿಂದ " ಗಂಧರ್ವ " ಯೆಂದು ಹೆಸರಿದೆ. 


ಅನ್ನ - ಜಲ - ವಿದ್ಯಾ - ಕನ್ಯಾ - ಭೂ ಮೊದಲಾದ ದಾನ ಮಾಡಿರುವ ಪುಣ್ಯ ಜೀವಿಗಳಿಗೆ ಮಾತ್ರ ಸುಗಂಧವನ್ನು ತಂದು ಸಂತೋಷ ಪಡಿಸುತ್ತಾನೆ. 


ಇದರಿಂದಲೂ ಗಂಧರ್ವವೇ!! 


" ಶೈಲಾಗಮ " 


ಪಾಪಿಗಳು ಈ ಶೈಲಾಗಮಕ್ಕೆ ಬಂದೊಡನೆಯೇ ಭಯಂಕರವಾದ ಬಿಸಿಯಾಗಿರುವ ಕಲ್ಲುಗಳು ತಲೆಯ ಮೇಲೆ ಬೀಳುತ್ತಿರುತ್ತವೆ. 


ತಲೆ ಒಡೆಯುತ್ತದೆ. 


" ಶೈಲಾಗಮೇ ಪತಂತೀಹ 

ಶೈಲಾ: ಪ್ರಸ್ಥರ ಸಂಜ್ಞಕಾ: " 


ಯಾರು ಗೋ - ಶಯನ - ಆಸನ - ಪೀಠ - ಘ್ರುತಧೇನು - ತಿಲಧೇನು ಮೊದಲಾದ ದಾನ ಮಾಡಿರುವರೋ ಅಂಥಾ ಪುಣ್ಯ ಜೀವಿಗಳಿಗೆ ಚಿನ್ನದ ಪಲ್ಲಕ್ಕಿ, ದಿವ್ಯ ವಿಮಾನದಲ್ಲಿ ಕರೆದೊಯ್ಯುವರು.


ಕೆಲವರನ್ನು ರಥಗಳಲ್ಲಿಯೂ, ಎತ್ತರವಾದ ಕುದುರೆಯ ಮೇಲೂ ಕರೆದೊಯ್ಯಲಾಗುವುದು. 


ಶೈಲಾ + ಆಗಮವಾಗುವುದು. 


ತಪ್ತ ಪಾಷಣ ಕುಂಡವೂ ಇಲ್ಲಿಯೇ ಇದ್ದು ಕಾದಿರುವ ಕಲ್ಲುಗಳಿಂದ ತುಂಬಿ ಉರಿಯುತ್ತಿರುವ ಕೆಂಡದಂತಿರುವುದು.


ಅಗ್ಗಿಷ್ಟಿಕೆ ದಾನ ಮಾಡಿದವರಿಗೆ ತಪ್ತಾಕುಂಡವು ತಂಪಾದ ಜಲ ಕುಂಡವಾಗುತ್ತವೆ. 


" ಕ್ರೌ೦ಚಪುರಂ " 


ಈ ಪುರದಲ್ಲಿ ಚೂಪಾದ ಕೊಕ್ಕೆಗಳುಳ್ಳ ಕ್ರೌ೦ಚ ಪಕ್ಷಿಗಳು, ಕಾಗೆಗಳು, ಗೂಬೆಗಳು, ಸೊಳ್ಳೆಗಳು, ಚೇಳುಗಳು, ಭಯಂಕರವಾದ ಹದ್ದುಗಳು ತುಂಬಿರುತ್ತವೆ. 


ಪಾಪಿಗಳನ್ನು ನೋಡಿದ ಕೂಡಲೇ ಅವರ ಮೇಲೇರಿ ಮಾಂಸಗಳನ್ನು ಕಿತ್ತು ತಿನ್ನುತ್ತದೆ.


ಈ ನರಕದಲ್ಲಿ ಕುಟಿಲತೆ, ಮೋಸ, ಅನ್ಯಾಯ ಮಾಡುವವರು ಬೀಳುವರು. 


" ಕ್ರೂರಪುರಂ " 


ಈ ಪುರದಲ್ಲಿ ಯಮಕಿಂಕರರೆಲ್ಲರೂ ಕ್ರೂರಿಗಳೇ. 


ದಯಾದಾಕ್ಷಿಣ್ಯ ಯಾವುದೂ ನೋಡಲಾರರು. 


ಇವರಿಗೆ ಕಿಂಚಿತ್ತೂ ದಯವೆಂಬುದೇ ಇಲ್ಲ. 


ಪಾಪಿಗಳಿಗೆ ನಾನಾ ವಿಧ ಹಿಂಸೆ ನೀಡುವರು. 


ವಿಚಿತ್ರ ಹಿಂಸೆಗೆ ಗುರಿ ಪಡಿಸುವರು. 


ಪರನಾರೀ ಗಮನ - ಬ್ರಹ್ಮಹತ್ಯೆ - ಸುರಪಾನಾದಿ ಕ್ರೂರ ಕೃತ್ಯಗಳನ್ನು ಮಾಡುವಾಗ   ವಿವೇಕ ಇದ್ದಿಲ್ಲವೇ? 


ಆಗ ನಗುತ್ತಾ ಮಾಡಿದ್ದನ್ನು ಈಗ ಅಳುತ್ತಾ ಅನುಭವಿಸಿರಿ. 


ಮಿಮರ್ಥಮರ್ಜಿತಂ ಪಾಪಂ 

ಯುಷ್ಮಾಭಿ: ಅವಿವೇಕಿಭಿ: ।

ಯಥಾ ಕೃತ್ಯಾಯನಿ ಪಾಪಾನಿ 

ಯುಷ್ಮಾಭಿ: ಸುಬಹೂನಿ ವೈ ।

ತಥಾ ಪ್ರಾಪ್ತಾನಿ ದುಃಖಾನಿ 

ಕಿಮರ್ಥಮಿಹ ದುಃಖಿತಾ ।। 


" ವಿಚಿತ್ರ ಭವನಂ " 


ಈ ನಗರ ವಿಚಿತ್ರವಾಗಿರುತ್ತದೆ. ಇಲ್ಲಿರುವ ವಸ್ತುಗಳೆಲ್ಲವೂ ವಿಚಿತ್ರವೇ. 


ಯಮದೂತರು ಪಾಪಿಗಳಿಗೆ ಭಯಂಕರ ತೋರಿದರೆ; 


ಪುಣ್ಯಾತ್ಮರಿಗೆ ಸೌಮ್ಯ ರೂಪ ತೋರಿಸುವರು. 


ಅನ್ನದಾನ ಮಾಡಿದವರು ರುಚಿ ರುಚಿ ಪದಾರ್ಥಗಳನ್ನು ತಿನ್ನುತ್ತಾ ಹೊರಡುವರು. 


" ಅನ್ನದಾಸ್ತು ಮುನಿ ಶ್ರೇಷ್ಠ 

ಭುಂಜಂತಃ ಸ್ವಾದು ಯಾಂತಿ ವೈ ।। 


ನೀರು ನೀಡಿದವರು ಹಾಲನ್ನು ಕುಡಿಯುತ್ತಾ ಹೊರಡುವರು.


ವಸ್ತ್ರ ನೀಡಿದವರು ದಿವ್ಯಾ೦ಬರದಿಂದ ಹೊರಡುವರು. 


ಪಾಪಿಗಳು ದಿಗಂಬರರಾಗಿ ಹೊರಡುವರು.


ನೀರನ್ನು ದಾನ ಮಾಡದ ಪಾಪಿಗಳು ಚೆನ್ನಾಗಿ ಕಾದಿರುವ ಎಣ್ಣೆಯನ್ನು ಕುಡಿಯಲು ಕೊಡುವರು. 


ನಾರದೀಯ ಪುರಾಣ... 


ಧರ್ಮಶೂನ್ಯಾ: ನರಾಃ ಯಾಂತಿ 

ದುಃಖೇನ ಭೃಶಮರ್ದಿತಾ ।। 


ಸೂರ್ಯನ ಪ್ರಕರ ಬಿಸಿಲು ಪಾಪಿಗಳಿಗೆ ತಾಪಾದಯಾಕವಾದರೆ; ಪುಣ್ಯವಂತರಿಗೆ ಬೆಳದಿಂಗಳಾಗುವುದು. 


" ಬಹ್ವಾಪದಂ " 


ಈ ನಗರದಲ್ಲಿ ಎಲ್ಲಿ ನೋಡಿದರೂ ಆಪತ್ತುಗಳೇ ಬರುತ್ತವೆ. 


ಇಲ್ಲಿ ಕೆಲವೆಡೆ ಕೆಸರು - ಮತ್ತೊಂದು ಕಡೆ ಅಗ್ನಿ - ಇನ್ನೊಂದು ಕಡೆ ಮರಳು, 


ಕೆಲವೆಡೆ ಕಾಡ್ಗಿಚ್ಚು - ಚೂಪಾದ ಕಲ್ಲು ಬೀಳುವಿಕೆ - ಗಾಡಾಂಧಕಾರವಾದ ಗುಹೆಗಳು - ಕೆಲವೆಡೆ ಹುಲಿಗಳ ಆರ್ಭಟ - ಭಯಂಕರ ಚಳಿ ಜ್ವರ ಮುಂತಾದ ಆಪತ್ತುಗಳು ತುಂಬಿರುತ್ತವೆ. 


" ದುಃಖದ " 


ದುಃಖವನ್ನು ನೀಡಲೂ ಸಮರ್ಥ, ಪರಿಹರಿಸಲೂ ಸಮರ್ಥ, ಮೂಗುದಾರವನ್ನು ಹಾಕಿ ಸೆಳೆಯುವರು. 


ಶಿಶ್ನದ ಕೆಳಗೆ ಕಬ್ಬಿಣದ ತುಂಡುಗಳನ್ನು ಜೋತು ಹಾಕಿ ಎಳೆಯುವಂತೆ ಆದೇಶಿಸುವರು. 


" ಮಹಂತಶ್ಚಾಯಸಾಂ ಭಾರಂ 

ಶಿಶ್ನಾಗ್ರೇಣ ಪ್ರಯಾಂತಿ ವೈ: " 


" ನಾನಾಕ್ರಂದಪುರಂ " 


ಈ ನಗರದಲ್ಲಿ ನಾನಾ ವಿಧವಾದ ಪಾಪಿಗಳು ನಾನಾ ವಿಧವಾದ ಶಿಕ್ಷೆಗೆ ಒಳಗಾಗಿ ತಾವು ಮಾಡಿದ ಪಾಪಗಳಿಗೆ ಅಳುತ್ತ ಹೊರಡುವ ನರಕ.


ಶೋಚಂತಃ ಸ್ವಾನಿ ಕರ್ಮಾಣಿ 

ಜ್ಞಾನಾಜ್ಞಾನ ಕೃತಾನಿ ಚ ।

ಛಾಯಾ ಜಲ ವಿಹೀನೇ ತು 

ಪಡಿ ಯಾಂತ್ಯತಿ ದುಃಖತಾಃ ।। 


ಪುಣ್ಯವಂತರು ತಾವು ಮಾಡಿದ ಪುಣ್ಯ ಫಲದಿಂದಾಗಿ ಸಂತೋಷವಾಗಿಯೇ ಹೊರಡುವರು. 


ನಾನಾ + ಆಕ್ರಂದ = ಸಂತೋಷ. ಪಾಪಿಗಳಿಗೆ.. 


ನಾನಾ = ನಾನಾ ರೀತಿಯ


ಆಕ್ರಂದ = ದುಃಖವುಂಟು ಮಾಡುವ ಪುರವು. 


ನಾರದೀಯ ಪುರಾಣ... 


ಯೇ ತು ನಾರದ ಧರ್ಮಿಷ್ಠಾ: 

ದಾನ ಶೀಲಾ ಸುಬದ್ಧಯಃ ।

ಅತೀವ ಸಖ ಸಂಪನ್ನಾಸ್ತೇ 

ನಾಸ್ತಿ ಧರ್ಮ ಮಂದಿರಂ ।। 


" ಸುತಪ್ರಭವನಂ " 


ಈ ಪ್ರದೇಶ ಸಂಪೂರ್ಣವಾಗಿ ಜ್ವಲಿಸುವ ಕೆಂಡಗಳಂತೆ ತುಂಬಿರುತ್ತದೆ. 


ಬ್ರಹ್ಮಪುರಾಣ... 


ಪ್ರತಪ್ತಾಂಗಾರ ಯುಕ್ತೇನ 

ಯಾಂತಿ ಮಾರ್ಗೇಣ ದುಃಖಿತಾಃ ।। 


ಚೆನ್ನಾಗಿ ಸುಡುತ್ತಿರುವ ಮರಳುಗಳಿಂದಲೂ ತುಂಬಿರುತ್ತದೆ. 


ದಾರಿಯುದ್ದಕ್ಕೂ ಚೂಪಾದ ಮೊಳೆಗಳಿರುತ್ತವೆ. 


ಕಬ್ಬಿಣದ ಬಾಗಿಲುಗಳೂ ಕಾಡು ಕೆಂಪಾಗಿರುತ್ತದೆ.


ಅಯಃ ಶೃಂಗಾಟಕೈ: ತಪ್ತೈ : 

ಕ್ವಚಿದ್ ದಾವಾಗ್ನಿನಾ ಯುತಂ ।। 


ಕೆಲವು ಕಡೆ ಕಾದು ಕೆಂಪಾಗಿರುವ ಶಿಲೆಗಳಿರುತ್ತವೆ. 


ವಿಶ್ರಾಂತಿ ಕೇಳಿದಾಗ ಅದರ ಮೇಲೆ ಕೂಡಿಸುವರು.


" ರೌದ್ರಂ " 


ಈ ಭಯಂಕರ ಸ್ಥಳ ಪ್ರವೇಶಿಸುವಾಗಲೇ ಭಯವಾಗುತ್ತದೆ. 


ಅಲ್ಲಿರುವ ಪಾಪಿಗಳು ಮರಳಿನಲ್ಲಿ ಕಂಠದ ವರೆಗೂ ಹೂತು ಹಾಕಿ ಮುದ್ಗರಾದಿಗಳಿಂದ ಹೊಡೆಯುತ್ತಿರುವರು. 


ನಂತರ ಬಿಸಿಬಿಸಿ ಕುಡಿಯುವ ನೀರನ್ನು ಮೈಮೇಲೆರಚುವರು. 


ಮುಂದೆ ಬೆಂಕಿ ಶಿಕ್ಷೆ ಕೆಂಡವನ್ನು ಬಾಯಲ್ಲಿ ಸುರಿಯುವುದು. 


ಸುಳ್ಳು - ಚಾಡಿ - ಕೂಟ ಸಾಕ್ಷಿಗಳಿಗೆ ಇದು ವಿಶೇಷ. ಕಬ್ಬಿಣದ ಕಡಲೆಯಂತಿರುವ ಇದನ್ನು ಅಗಿಯುವುದು ಕಷ್ಟಕರ. 


ವಾಯುವು ಕಲ್ಲು ಮುಳ್ಳು - ಮರಳುಗಳಿಂದ ಜೋರಾಗಿ ಬೀಸುತ್ತದೆ. 


ನಿಲ್ಲಲು ಸಾಧ್ಯವಾಗದೇ ಎದ್ದು ಬಿದ್ದು ಓಡುತ್ತಾರೆ. 


ಮಹಾಧೂಲಿವಿಮಿಶ್ರೇಣ 

ಮಹಾ ಚಂಡೇನ ವಾಯುನಾ ।

ಮಾಹಾ ಪಾಷಾಣ ವರ್ಷೇಣ 

ಹನ್ಯಮಾನಾ ನಿರಾಶ್ರಯಾ: ।। 


" ಪಯೋವರ್ಷಣ " 


ಈ ಪಟ್ಟಣದಲ್ಲಿ ನೀರೆಲ್ಲವೂ ಅತ್ಯಂತ ಬಿಸಿ. ಕುಡಿಯುವ ನೀರು, ಜಲಪಾತದ ನೀರು, ನದಿ, ಸಮುದ್ರ, ಮಳೆಯ ನೀರು ಎಲ್ಲವೂ ಬಿಸಿ. ಈ ನೀರು ಬಂದು ಮಳೆಯಂತೆ ತಲೆ ಮೇಲೆ ಬೀಳುತ್ತದೆ. 


" ಶೀತಾಢ್ಯ " 


ಈ ನಗರದಲ್ಲಿ ಹಿಮದ ಗಾಳಿ ಪಾಪಿಗಳನ್ನು ನಡುಗಿಸಿ ಬಿಡುತ್ತದೆ. 


ವಸ್ತ್ರ - ಕಂಬಳಿ - ಕೃಷ್ಣಾಜಿನ ದಾನ ಮಾಡಿದವರಿಗೆ ಇವು ಬಾಧಿಸಲಾರವು. 


ಹಲ್ಲು ಕಡಿದು ಕಡಿದು ಹಲ್ಲುಗಳೇ ಪುಡಿ ಪುಡಿಯಾಗುತ್ತವೆ. 


ಚಳಿಯಲ್ಲಿ ಓದುವಾಗ ಕತ್ತಲೆಯಲ್ಲಿ ಮುಗ್ಗರಿಸಿ ಬೀಳುತ್ತಾರೆ. 


ಪರಸ್ಪರ ಡಿಕ್ಕಿ ಹೊಡೆದು ಆಲಂಗಿಸುತ್ತಾರೆ. 


ಮಾರ್ಕಂಡೇಯ ಪುರಾಣ : 


ಶೀತಾರ್ತಾ: ತತ್ರ ಧಾವಂತಿ 

ನರಾಸ್ತಮಸಿ ಧಾರಣೀ ।

ಪರಸ್ಪರಂ ಸಮಾಸಾದ್ಯ 

ಹರಿಹಭ್ಯಾಶ್ರಿಯಂತಿ ಹಿ ।

ದಂತಸ್ತೇಷಾ೦ ಚ ಭಜ್ಯಂತೇ 

ಶೀತಾರ್ತಿ ಪರಿಕಂಪಿತಾಃ ।। 


" ಬಹುಭೀತಿ ಪುರಂ " 


ಈ ನಗರದಲ್ಲಿ ಮುಂದೆ ಅವನು ಅನುಭವಿಸಬೇಕಾದ ನರಕ ದುಃಖಗಳ ರುಚಿ ತೋರಿಸುವರು. 


1. ನಿಕೃ೦ತನ = ಉಗುರು ಕಿತ್ತು ಹಾಕುವುದು


2. ಕಾಲಸೂತ್ರ = ಕುತ್ತಿಗೆಗೆ ನೇಣು ಹಗ್ಗ


3. ಕುಂಭೀಪಾಕ :-


ಮರಳಿನ ಕಣಗಳಂತಿರುವ ಬೆಂಕಿಯ ತುಣುಕುಗಳಿಂದ ತುಂಬಿದ ತಾಮ್ರದ ಕೊಡಗಳಿಂದ ಅಭಿಷೇಕ


4. ತಿಲಪಾಕ = ತಿಲವನ್ನು ಯಂತ್ರಕ್ಕೆ ಹಾಕಿ ತೈಲ ಹಿಂದಿ ತೆಗೆಯುವ ನರಕ


5. ಗುಡಪಾಕ = ಕಬ್ಬಿಣ ರಸವನ್ನು ಕುದಿಸಿ ಬೆಲ್ಲ ತಯಾರಿಸುವುದು 


ಹೀಗೆ 16 ಪಟ್ಟಣಗಳಲ್ಲಿ ಹೋಗುವಾಗ ಪುತ್ರಾದಿಗಳು ನೀಡುವ 16 ಶ್ರಾದ್ಧಗಳಿಂದ ಅನೇಕ ದುಃಖಗಳು ಕಡಿಮೆ ಆಗುತ್ತವೆ. 


ಮಗನು ತಂದೆಯ ಉದ್ಧಿಶ್ಯವಾಗಿ ಏನೇನು ದಾನ ಮಾಡಿರುವನೋ ಅವೆಲ್ಲವೂ ಸೂಕ್ಷ್ಮ ರೂಪದಿಂದ ಸೂರ್ಯನಲ್ಲಿರುತ್ತವೆ. 


ಮೃತನು ಬಂದಾಗ ಆ ಪುಣ್ಯವನ್ನು ಅವನಿಗೆ ಬೇಕಾದ ವಸ್ತುವನ್ನಾಗಿ ಮಾಡಿ ತಲುಪಿಸುತ್ತಾನೆ. 


ಇದರಿಂದ ಸಪಿಂಡೀ ಕಾರಣಕ್ಕೆ ಮೊದಲೇ ಮಾಸಿಕಗಳನ್ನು ಮಾಡಿದ್ದರೂ ತೃಪ್ತಿಯಾಗಲೆಂದು ಮಾಸಿಕಗಳನ್ನು 2 - 3 ಬಾರಿ ಆವೃತ್ತಿ ಮಾಡಿದರೂ ದೋಷವಿಲ್ಲ. 


ಮೃತಸ್ಯ ತೃಪ್ತಯೇ ಕುರ್ಯಾದ್ 

ದ್ವಿ: ತ್ರಿರಾವೃತ್ತಿ ಭೇದತಃ ।

ದ್ವಿಸ್ತ್ರಿರಾವೃತ್ತಿದೋಷೋSತ್ರ 

ನಾಸ್ತಿ ಮಾಸಿಕ ಕರ್ಮಣಿ ।। 


16 ಪಟ್ಟಣಗಳಾದ ಮೇಲೆ ಶ್ರೀ ಯಮಧರ್ಮರಾಜರ ಧರ್ಮಭವನವಿದೆ. 


ಯಮದೂತರ ಪಾಶದಿಂದ ಬಂಧಿಸಲ್ಪಟ್ಟ ಪಾಪಿಯು " ಹಾಹಾ " ಎಂದು ರೋಧಿಸುತ್ತಾ ತನ್ನ ಮನೆಯನ್ನು ಪರಿತ್ಯಜಿಸಿ " ಯಮಪುರಿ " ಯ ದಾರಿಯಲ್ಲಿ ಹೊರಡುತ್ತಾನೆ.

***



No comments:

Post a Comment