ಈ ಹಾಡಿನ ಹಿಂದಿನ ಅಸಲಿ ಸತ್ಯ ಗೊತ್ತಾ..! `ಆನೆ ಬಂತೊಂದು ಆನೆ..' ಹಾಡು ಹುಟ್ಟಿದ್ದು ಹೇಗೆ..?’
ಆನೆ ಬಂತೊಂದಾನೆ…
ಯಾವೂರ ಆನೆ..?
ಬಿಜಾಪುರ ಆನೆ…
ಇಲ್ಲಿಗ್ಯಾಕ ಬಂತು..?
ಹಾದಿ ತಪ್ಪಿ ಬತ್ತು…
ಹಾದಿಗೊಂದು ದುಡ್ಡು…
ಬೀದಿಗೊಂದು ದುಡ್ಡು…
ಚಿಕ್ಕ ಆನೆ ಬೇಕಾ… ದೊಡ್ಡ ಆನೆ ಬೇಕಾ… ಹೀಗೆ ಸಾಗುವ ಈ ಹಾಡು `ಶಿಶುಗೀತೆ’ಯಲ್ಲ ಅನ್ನೋದು ನಿಮಗೆ ಗೊತ್ತಾ..? `ಅಳುತ್ತಿರುವ ಮಕ್ಕಳನ್ನ ಸಮಾಧಾನ ಪಡಿಸಲು’ ಶತಮಾನಗಳಿಂದ ನಮ್ಮ ಹಿರಿಯರು ಹಾಡುತ್ತಾ ಬಂದಿದ್ದಾರೆ. ನೀವೂ ಕೂಡಾ ನಿಮ್ಮ ಮಕ್ಕಳನ್ನು ಮೊಳಕಾಲ ಮೇಲೆ ಕೂಡಿಸಿಕೊಂಡು ಈ ಗೀತೆಯನ್ನ ಹಾಡಿರ್ತಿರಿ. ಅಸಲು ಈ ಹಾಡು ಹೇಗೆ ಹುಟ್ಟಿತು ಅಂತ ಗೊತ್ತಾದರೆ ಮುಂದ್ಯಾವತ್ತೂ ಈ ಗೀತೆಯನ್ನು ನೀವು ಮಕ್ಕಳ ಮುಂದೆ ಹೇಳಲ್ಲ..! ಹಾಗಾದರೆ ಏನಿದೆ ಈ ಹಾಡಿನ ಅಸಲಿ ಇತಿಹಾಸ..? ಇಲ್ಲಿದೆ ಓದಿ…
ಬಿಜಾಪುರದಲ್ಲಿದ್ದವಾ ಆನೆಗಳು..?
ಈ ಹಾಡನ್ನು ಹಾಡಿದವರಿಗೆ ಹಾಗೂ ಕೇಳಿದವರಿಗೆ ಥಟ್ ಅಂತ ಮೂಡೋ ಪ್ರಶ್ನೆಯೆಂದರೆ `ಬಿಜಾಪುರದಲ್ಲಿ ಆನೆಗಳಿದ್ದವಾ..? ಅನ್ನೋದು. ಹೌದು, ಈ ಗೀತೆಯಲ್ಲಿ `ಬಿಜಾಪುರದ ಆನೆ’ ಅಂತಲೇ ಯಾಕೆ ಬಳಸಲಾಯ್ತ ಅನ್ನೋದು ಈವರೆಗೆ ಹಲವರಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಅಷ್ಟೆಅಲ್ಲ, ಈ ಹಾಡು ಬರೆದವರ್ಯಾರು..? ಇದು ಜಾನಪದವಾ..? ಕಾಲ್ಪನಿಕ ಗೀತೆಯಾ..? ಹೀಗೆ ಹಲವಾರು ಪ್ರಶ್ನೆಗಳು ಈ ಗೀತೆಯ ಬಗ್ಗೆ ಎಲ್ಲರನ್ನೂ ಕಾಡುತ್ತಲೇ ಬಂದಿದ್ದಾವೆ.
ಇತಿಹಾಸಕಾರರು ಹೇಳೊದೇನು..?
ಜನಮಾನಸದಲ್ಲಿ ಶಿಶುಗೀತೆಯಾಗಿಯೇ ಉಳಿದಿರೋ ಈ ಹಾಡು `ಶಿಶುಗೀತೆ’ ಅಲ್ಲವಂತೆ. ಈ ಹಾಡಿಗೆ ಸುಮಾರು 450 ವರ್ಷಗಳ ಇತಿಹಾಸವಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. 16ನೇ ಶತಮಾನದಲ್ಲಿ ಬಿಜಾಪುರ, ಬೀದರ ಮತ್ತು ಗೋಲ್ಕೊಂಡದಲ್ಲಿ ಬಹುಮನಿ ಸುಲ್ತಾನರ ಆಡಳಿತವಿತ್ತು. ಆ ವೇಳೆ ವಿಜಯನಗರ ಸಾಮ್ರಾಜ್ಯವೂ ವೈಭವದಿಂದ ಮೇರೆಯುತ್ತಿತ್ತು. ಶ್ರೀಕೃಷ್ಣದೇವರಾಯರ ಕಾಲದಲ್ಲಿ ವಿಜಯನಗರ ಸಮ್ರಾಜ್ಯ ಭಾರತದಲ್ಲಿಯೇ ಅತ್ಯಂತ ಸಂಪತ್ಭರಿತ ರಾಜ್ಯವಾಗಿತ್ತು. ಕೃಷ್ಣದೇವರಾಯರ ಕಾಲಾನಂತರ ಅಧಿಕಾರಕ್ಕೆ ಬಂದ ರಾಮರಾಯರ ಆಡಳಿತದಲ್ಲೂ ವಿಜಯನಗರ ಸಾಮ್ರಾಜ್ಯ ತನ್ನ ವೈಭವವನ್ನು ಮುಂದುವರೆಸಿಕೊಂಡು ಹೋಗುತ್ತಿತ್ತು.
ಹೀಗಿರುವಾಗ ಬಿಜಾಪುರದ ಸುಲ್ತಾನರು ಸೇರಿದಂತೆ ಬೀದರ್ ಹಾಗೂ ಗೋಲ್ಕೊಂಡಗಳ ಬಹುಮನಿ ಸುಲ್ತಾನರ ಕಣ್ಣು ವಿಜಯನಗರ ಸಾಮ್ರಾಜ್ಯದ ಸಂಪತ್ತಿನ ಮೇಲೆ ಬೀಳುತ್ತೆ. ವಿಜಯನಗರದ ಸಂಪತ್ತನ್ನು ಲೂಟಿ ಹೊಡೆಯಲು ತಿರ್ಮಾನಿಸೋ ಬಹುಮನಿ ಸುಲ್ತಾನರುಗಳ ಒಕ್ಕೂಟ, 1565ರಲ್ಲಿ `ರಕ್ಕಸ ಮತ್ತು ತಂಗಡಿ’ ಎಂಬ ಹಳ್ಳಿಗಳ ನಡುವಿನಲ್ಲಿದ್ದ ತಾಳೀಕೋಟೆ ಎಂಬಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಗೆಲ್ಲುತ್ತಾರೆ. ಅಲ್ಲಿಗೆ ಭಾರತದಲ್ಲಿದ್ದ ಕೊನೆಯ ಹಿಂದೂ ಸಾಮ್ರಾಜ್ಯ ಅವನತಿಯಾಗುತ್ತೆ.
ವಿಜಯನಗರವನ್ನು ಗೆದ್ದ ಬಹುಮನಿ ಸುಲ್ತಾನರು ಅಲ್ಲಿಯ ಪ್ರಜೆಗಳನ್ನು ಹಿಂಸಿಸಿ ಕೊಲ್ಲುತ್ತಾರೆ. ಜೊತೆಗೆ ಅಲ್ಲಿದ್ದ ಸಂಪತ್ತನ್ನು ಆನೆಗಳ ಮೇಲೆ ಬಿಜಾಪುರಕ್ಕೆ ಸಾಗೀಸುತ್ತಾರೆ. ಹೀಗೆ ಅಪಾರ ಪ್ರಮಾಣದ ಸಂಪತ್ತನ್ನು ಹೊತ್ತುಕೊಂಡು ಆನೆಗಳು ಹೋಗುತ್ತಿರುವಾಗ ದಾರಿಯುದ್ದಕ್ಕೂ ಮುತ್ತು, ರತ್ನ, ವಜ್ರಗಳು ಬೀಳುತ್ತವೆ.
ಸಾಮ್ರಾಜ್ಯವೊಂದರ ಚರಮಗೀತೆಯಾ..?
ಬಹುಮನಿ ಸುಲ್ತಾರಿಂದ ವಿಜಯನಗರ ಸಾಮ್ರಾಜ್ಯದ ಅವನತಿ ಆಗಿತ್ತು. ಅಲ್ಲಿನ ಅಪಾರ ಸಂಪತ್ತನ್ನ ಆನೆಗಳ ಮೂಲಕ ಸುಲ್ತಾನರು ಲೂಟಿ ಮಾಡಿದ್ದರು. ಅದನ್ನು ಕಣ್ಣಾರೆ ಕಂಡ ಅಲ್ಲಿನ ಪ್ರಜೆಗಳು ಮುಂದೆ `ವಿಜಯನಗರವೆಂಬ ಮಹಾನ್ ಸಾಮ್ರಾಜ್ಯದ ಅವನತಿ ಹೇಗಾಯಿತು..’ ಎಂದು ಕೇಳಿದ ತಮ್ಮ ಮಕ್ಕಳಿಗೆ ಈ ಹಾಡಿನ ಮೂಲಕ ಹೇಳುತ್ತಾರೆ. ನೀವು ಗಮನಿಸಬೇಕು…ಈ ಹಾಡಲ್ಲಿ ಪ್ರಶ್ನೆಗಳೂ ಇವೆ ಉತ್ತರಗಳೂ ಇವೆ.
`ಆನೆ ಬಂತೊಂದು ಆನೆ’..
`ಯಾವೂರ ಆನೆ…’
`ಬಿಜಾಪುರದ ಆನೆ…’
`ಇಲ್ಲಿಗೇಕೆ ಬಂತು…’
`ಹಾದಿ ತಪ್ಪಿ (ಮತಿಗೆಟ್ಟು) ಬಂತು…’
`ಶಿರ ಕೊಬ್ರಿಯಂಗೆ ಲಟ ಲಟ ಮುರಿದು…’ (ಸುಲ್ತಾನರ ಸೈನ್ಯ ವಿಜಯನಗರದ ಸೈನಿಕರ ಹಾಗೂ ಪ್ರಜೆಗಳ ಶಿರವನ್ನು ಕೊಬ್ಬರಿಯಂತೆ ಛೇದನ ಮಾಡಿತ್ತು.)
`ಹಾದಿಗೊಂದು ದುಡ್ಡು…’
`ಬೀದಿಗೊಂದು ದುಡ್ಡು…’ (ಆನೆಗಳ ಮೇಲೆ ಸಂಪತ್ತು ಹೊತ್ತೊಯ್ಯುವಾಗ ಬಿದ್ದ ಸಂಪತ್ತು)
ಹೀಗೆ ತಮ್ಮ ಮಕ್ಕಳಿಗೆ ವಿಜಯನಗರದ ಸಮ್ರಾಜ್ಯದ ಅವನತಿಯ ಕಥೆಯನ್ನು ಹೇಳಿದ ಹಿರಿಯರು ಕೊನೆಗೆ ಕೇಳ್ತಾರೆ…
`ದೊಡ್ಡ ಆನೆಬೇಕಾ…ಚಿಕ್ಕ ಆನೆಬೇಕಾ..?
****
No comments:
Post a Comment