SEARCH HERE

Tuesday 30 November 2021

ದೇವರ್ಷಿ ನಾರದ

 ದೇವರ್ಷಿ ನಾರದರು🙏🌹

ಒಂದು ಚಿಂತನ..

✍️...ಶ್ರೀಸುಗುಣವಿಠಲ.

🌹🌹🌹🌹🌹🌹

  ಭಗವಂತನ ಈ ಸೃಷ್ಠಿಯಲ್ಲಿ ನಾವು ಚೇತನ&ಅಚೇತನ ಎಂಬ ಎರಡು ವರ್ಗಗಳನ್ನು ಕಾಣುತ್ತೇವೆ‌ ಸ್ವತಂತ್ರವಾಗಿ ಆಲೋಚನೆ ಮಾಡುವ ,ತನ್ನ ಜೀವನವನ್ನು ತನಗೆ ಬೇಕಾದಂಥ ರೀತಿಮಲ್ಲಿ ರೂಪಿಸಬಲ್ಲ ಬುದ್ಧಿಶಕ್ತಿ, ಪ್ರಜ್ಞೆ, ಕೇವಲ ಮನುಷ್ಯನಿಗೆ ಮಾತ್ರವೇ ಉಂಟು. ಮತ್ತಾವ ಚೇತನಕ್ಕೂ ಇದು ಇಲ್ಲಾ.ಆದ್ದರಿಂದಲೇ "ಮಾನವ ಜನ್ಮ ದೊಡ್ಡದು...*ಎಂದಿದ್ದಾರೆ ದಾಸಾರ್ಯರು.ಈ ಮಾನವ ಜನ್ಮ ಬರಲೂ ಸಹ ಮುಂಚೇ ಜೀವಿಯು ೮೪ ಲಕ್ಷ ಜನ್ಮಗಳನ್ನು ಹಾದು ಬಂದಿದ್ದು ಇದನ್ನು ಹಾನಿಮಾಡಿಕೊಳ್ಳದೇ  ಸತ್ಯದ ಜಿಜ್ಞಾಸೆಯಿಂದ  ತಮ್ಮ ಜೀವನವನ್ನೇ ಮುಡುಪಾಗಿಟ್ಟು ತಪಸ್ಸು, ಧ್ಯಾನ, ಜ್ಞಾನಗಳ ಮೂಲಕ  ಪರಿಹಾರಗಳನ್ನು ಕಡುಹಿಡಿದು  ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿರು ಮಹಾಪುರುಷರೇ..

ಋಷಿಗಳು.

ಇಂಥಹ ಋಷಿಗಳಿಂದ ನಮಗೆ ಬಂದಿರುವ ಆಧ್ಯಾತ್ಮವಿದ್ಯೆ ಯನ್ನು 

ವೇದಗಳು ಅಥವಾ 

ಶ್ರುತಿಗಳು ಎನ್ನುತ್ತಾರೆ.ಇವು ಋಷಿಗಳ ಸ್ವಕಪೋಲಕಲ್ಪಿತ ಜ್ಯಾನವಲ್ಲಾ..ಸಾಕ್ಷಾತ್ ದೇವರಿಂದಲೇ ಅವರ ಶುದ್ಧ ಚಿತ್ತದಲ್ಲಿ ಅಭಿವ್ಯೆಕ್ತವಾದವುಗಳು‌.

ಇಂಥ ಮಹಾ ಋಷಿಗಳ ಸಾಲಿನಲ್ಲಿ 

ದೇವರ್ಷಿ ಗಳೆನಿಸಿದವರು..ನಮಗೆಲ್ಲಾ ಚಿರಪರಿಚಿತ ಪಾತ್ರಧಾರಿಗಳೂ ಆದ..

ನಾರದ ಮಹರ್ಷಿಗಳು.

ನಾರದ ಮುನಿಗಳ ಹೆಸರನ್ನು ಯಾರು ಕೇಳಿಲ್ಲ..? ಪ್ರತಿಯೊಂದು ಪುರಾಣ, ಹರಿಕಥೆ, ಪೌರಾಣಿಕ, ಯಕ್ಷಗಾನ..ಇತಿಹಾಸಾದಿ  ಪ್ರತಿಯೊಂದರಲ್ಲೂ  ತ್ರಿಯುಗಗಳಲ್ಲಿಯೂ..ಅವರ ಪಾತ್ರ ಹಿರಿದಾದುದು.

ನಾರ ಎಂದರೆ..ಮನುಷ್ಯರಿಗೆ ಪ್ರಯೋಜನವಾಗುವ ಜ್ಞಾನ...

ದ..ಎಂದರೇ..ಕೊಡುವವರು..

ನಾರದ ಎಂದರೇ  ಮಾನವರಿಗೆ ಸರಿಯಾದ ಜ್ಞಾನ ಕೊಟ್ಟು ಸರಿದಾರಿಯನ್ನು ತೋರಿಸುವವರು.ಇವರು ಬರೀ ಜಗಳ ಹಚ್ಚುವವರಲ್ಲಾ...ಬದಲಾಗಿ ಜಗಳ ಹಚ್ಚಿದರೂ..ಸಜ್ಜನರ ಉದ್ಧಾರಕ್ಕಾಗಿ.. ಭಗವಂತನ ಜ್ಞಾನ ತತ್ವ ಪ್ರಸಾರಕ್ಕಾಗಿ..ಲೋಕಕಲ್ಯಾಣಕ್ಕಾಗಿ ಭಗವಂತನ ಅಣತಿ ಪಾಲನೆಗಾಗಿ ಮಾತ್ರ‌. 

ದೇವರ್ಷಿಗಳೆಂದೇ ಪ್ರಸಿದ್ರರಾದ ನಾರದರು..ನಮ್ಮ ಧಾರ್ಮಿಕ ಸಾಹಿತ್ಯದಲ್ಲಿ  ಸುಪ್ರಸಿದ್ರರಾದ &ಆಕರ್ಷಕ ವ್ಯೆಕ್ತಿಗಳು.

*ಋಗ್ವೇದ ಸಂಹಿತೆಯ "ಇಂದ್ರ ಸುತೇಷು" ಎಂಬ ಸೂಕ್ತದ((೮.೧೩) ಋಷಿಗಳು ನಾರದ- ಕಾಣ್ವರು. ಹಾಗೆಯೇ 

ಸುಖಾಯ ಆ ನಿವೀದಿತ..ಎಂದು ಪ್ರಾರಂಭವಾಗುವ (೯.೧೦೪.೧೦೫) ಸೂಕ್ತಗಳಿಗೆ ನಾರದರು &ಪರ್ವತರು ದ್ರಷ್ಟಾರ ಋಷಿಗಳು. ಅಥರ್ವಣವೇದದಲ್ಲಿಯೂ (೫,೧೯,೯,೧೨,೪,೧೬) ಮಂತ್ರದ್ರಷ್ಟಾರರಾದ ನಾರದರನ್ನು ಕಾಣುತ್ತೇವೆ.

ಛಾಂದೋಗ್ಯ ಉಪನಿಷತ್ ನ ಭೂಮವಿದ್ಯೆಯಲ್ಲಿ (ಅ.೭) ನಾರದರನ್ನು ಸನತ್ಕುಮಾರರ ಶಿಷ್ಯರನ್ನಾಗಿ ತೋರಿದೆ. ಪುರಾಣಗಳಲ್ಲಂತೂ ಹಲವಾರು ಕಡೆ ಕಾಣುತ್ತೇವೆ‌.

ಭಾಗವತದಲ್ಲಿ (೧,೫, ೨೩-೨೨,೧,೬,೫-೩೬) ನಾರದರ ಕಥೆ ಸ್ವಲ್ಪವಿಸ್ತಾರವಾಗಿಯೇ ಬಂದಿದೆ‌.

ಹಿಂದಿನ ಜನ್ಮದಲ್ಲಿ  ಶೂದ್ರ ದಾಸಿಯೊಬ್ಬಳ ಮಗನಾಗಿ  ಹುಟ್ಟಿ, ಐದು ವರ್ಷದ ಬಾಲಕನಾಗಿರುವಾಗಲೇ ತಮ್ಮ ಊರಿಗೆ ಚಾತುರ್ಮಾಸ್ಯ ವ್ರತಕ್ಕಾಗಿ  ಬಂದ ಸಾಧುಸಂತರು ಕೆಲವರನ್ನು ಶ್ರದ್ಧೆಯಿಂದ ಸೇವಿಸಿ ,ಅವರಿಂದ ಮಂತ್ರೋಪದೇಶ ಪಡೆದರು.  ತಾಯಿ ಹಾವು ಕಚ್ಚಿ ಸತ್ತದ್ದರಿಂದ ಅನಾಥನಾದ ಬಾಲಕ ಭಗವಂತನ ಮಂತ್ರೋಶ್ಚಾರಣೆ ಮಾಡುತ್ತಾ.ಧ್ಯಾನಮಗ್ನನಾಗಿರಲು ಒಂದು ಕ್ಷಣಕಾಲ ಭಗವಂತನ ರೂಪದ ದರ್ಶನ ವಾಯಿತೂ. ಮತ್ತೆ ಆ ರೂಪವನ್ನೂ ನೋಡಬಯಸಿ ಪ್ರಾರ್ಥಿಸಿದಾಗ...ಈ ಜನ್ಮದಲ್ಲಿ ಇಷ್ಟೇ ಪ್ರಾಪ್ತಿ ಯೆಂದು..ಹರಿನಾಮಸಂಕೀರ್ತನೆಯಲ್ಲಿ ಕಾಲಕಳೆಯಬೇಕೆಂದು ಆಕಾಶವಾಣಿ ನಡಿಯಿತು. ಅದರಂತೆ ಆ ಜನ್ಮವನ್ನು ನೀಗಿಸಿ ಆ ದೇಹ ಪತನವಾದ ಮೇಲೆ.ಬ್ರಹ್ಮದೇವರ ಮಾನಸ ಪುತ್ರರಾಗಿ  ಜನಿಸಿ, ದೇವರ್ಷಿ ಪದವಿಗೆ ಭಾಜನರಾದರು.

ದೇವರ್ಷಿ ನಾರದರಿಗೂ ಸಾಮವೇದ-ಸಂಗೀತಗಳಿಗೂ ನಿಕಟ ಸಂಬಂದವುಂಟು.

ಸಂಗೀತ ಮಕರಂದ ಎಂಬ ಸಂಗೀತಶಾಸ್ತ್ರಗ್ರಂಥವನ್ನು ರಚೀಸಿದವರು ಅವರೇ.  ವೀಣೆಯ ನಿರ್ಮತೃಗಳೂ, ಅವರೇ. ಅವರು ತ್ರಿಲೋಕ ಸಂಚಾರಿಗಳಾಗಿ ಕಷ್ಟದಲ್ಲಿರುವವರಿಗೆ ಸಜ್ಜನರಿಗೆ ಸಹಾಯಕರಾಗಿ, ಧರ್ಮಪ್ರಜ್ಞೆಯನ್ನು ಉಪದೇಶಿಸುತ್ತಾರೆ.ಕೆಲವು ಸಲ ಜನರನ್ನು ತಿದ್ದಿ ಸರಿದಾರಿಗೆ ತರಲು ಕುಚೇಷ್ಟೆಗಳನ್ನು ಮಾಡಿ ಜಗಳವನ್ನು ತಂದೊಡ್ಡುವುದೂ ಉಂಟು! ವಾಲ್ಮೀಕಿಗಳಿಗೆ ರಾಮಾಯಣವನ್ನು ರಚಿಸಲು, ವ್ಯಾಸರಿಗೆ ಭಾಗವತವನ್ನು ರಚಿಸಲು, ಸ್ಪೂರ್ತಿ ನೀಡಿದವರು ನಾರದರೇ. ಪ್ರಹ್ಲಾದನಿಗೆ ತಾಯ ಗರ್ಭದಲ್ಲಿರುವಾಗಲೇ ಭಾಗವತ ಧರ್ಮವನ್ನು  ಉಪದೇಶಿಸಿದವರು ಇವರೇ. (ಕಲಿಯುಗದಲ್ಲಿ ತಮ್ಮ ಅಂಶದಿಂದ  ಶ್ರೀಪುರಂದರದಾಸರಾಗಿ ಅವತರಿಸಿ ದಾಸಶ್ರೇಷ್ಠರೆನಿಸಿ, ಭಗವಂತನ ತತ್ವ ಲೋಕಕ್ಕರುಹಿದವರು ಇವರೇ)

 ಇಂಥಹ ಮಹಾತ್ಮರನ್ನು ಸ್ವಯಂ ಶ್ರೀಕೃಷ್ಣನೇ ಹೃತ್ಪೂರ್ವಕವಾಗಿ ಹೊಗಳಿರುತ್ತಾನೆ.(ಮಹಾಭಾರತ-ಶಾಔತಿಪರ್ವ-ಅ- ೨೩೦) 

ನಾರದರ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಗ್ರಂಥಗಳು:

ನಾರದ ಭಕ್ತಿಸೂತ್ರ,

ನಾರದಸ್ಮೃತಿ,

ನಾರದೀಯ ಶಿಕ್ಷಾ

ನಾರದಪರಿವ್ರಜಕೋಪನಿಷತ್,

ನಾರದೀಯ ಪುರಾಣ,

ನಾರದ ಪಂಚರಾತ್ರ.

ಹೀಗೆ ಈ ಮಹಾಪುರುಷರು ಜೀವನದಲ್ಲಿ ಅತಿ ನಿಕೃಷ್ಟ ಸ್ಥಾನದಿಂದ ಸ್ಥಪ್ರಯತ್ನದ ಮೂಲಕ &ಭಗವಂತನ ಆನುಗ್ರಹದ ಮೂಲಕ ಅತಿ ಉತ್ಕುಷ್ಟ ಸ್ಥಾನವನ್ನು ತಲುಪಿ ದೇವರ್ಷಿ ಪದವನ್ನು ಪಡೆದು ಪರೋಪಕಾರಿಗಳಾಗಿ .ತ್ರಿಲೋಕಸಂಚಾರಿಗಳಾಗಿ.. ಲೋಕಕಲ್ಯಾಣ ವೆಸಗಿದ  ಈ ಮಹಾಮಹಿಮರು ನಮಗೆಲ್ಲಾ ಆದರ್ಶ ಪ್ರಾಯರಾಗಿದ್ದೂ ಅವರಂತೆ  ಸಾಧನೆ‌ಯ ಹಾದಿಯಲ್ಲಿ ನಾವುಗಳೂ ಸಾಗಿ ಜನ್ಮದ ಸಾರ್ಥ್ಯಕ್ಯವನ್ನು ಸಾಧಿಸಿಕೊಳ್ಳುವಂತಾಗಲೀ ಎಂಬ ಯಥಾಮತಿ ಚಿಂತನೆಯೊಂದಿಗೆ ಶ್ರೀಸುಗುಣವಿಠಲಾರ್ಪಣಮಸ್ತು

***

No comments:

Post a Comment