SEARCH HERE

Tuesday, 30 November 2021

ಬನದ ಹುಣ್ಣಿಮೆ ಕುಮಾರವ್ಯಾಸ ಜಯಂತಿ banada hunnime kumaravyasa jayanti pushya pournima

note: from this day -magha snanarambha ಮಾಘಸ್ನಾನಾರಂಭ

ಬನದ ಹುಣ್ಣಿಮೆ, ಶಾಕಾಂಬರಿ ರಥೋತ್ಸವ - by narahari sumadhwa

Shakambari Purnima is observed during full moon day, or Pournami, in Pushya maasa.


Who is Shakambari? –

ಶಾಕಾಂಬರಿ –  ಶಾಕ + ಅಂಬರಿ shaaka + ambari

shaaka – means vegetables ambari – means one who wears

It is said that Goddess Durga appeared as Shakambari after a dry period of hundred years.  She brought  fruits, flowers, vegetables and herbs to suffice the hunger of the people.

Goddess Shakambari incarnated on  Shakambari Pournami day.  The day also marks the end of the  week long Shakambari Navratri festival which began on Pushya Shudda Astami

Goddess Shakambari is worshipped during the period in Karnataka, Maharashtra, Uttar Pradesh and Rajasthan.   We as Madhwas must worship Goddess Shakambari alongwith Maharudradevaru – tadantargatha – Bharatiramana Mukyapranantargatha – Sri Lakshmi Narasimha Devaru.

On Pushya Shukla Chaturdashi we have do the naivedya of vegetables to Banashankari (Parvathi)  and we have to give daana to brahmana – muthaideyaru.  That is why this Vratha is called as Shakambari Vratha 

This Vratha is followed for 7 days from Pushya shudda Astami to Pushya pournami.  On all these days, different palyas of  vegetables (anishidda) to be prepared.

On the Hunnime day, deepotsava, special pooja and deepa daana to be done.

POURNAMI – ALAKSHMI NAASHA  ಅಲಕ್ಷ್ಮೀನಾಶ

On Pushyamasa Hunnime day, if it has pushya nakshatra, we must take snaana with lepana of  white sasive on our body and after snaana we must have nutana vastra dharana, we must have the darshana of the mirror, phalapushpa, cow and brahmana.   On this day one must do pooja of Chandra, Indira and Bruhaspathi.


ಬನಶಂಕರಿ ಅಥವಾ ಶಾಕಾಂಬರಿ – ಇದು ದುರ್ಗಾ ಮಾತೆಯ ಮತ್ತೊಂದು ಹೆಸರು.   ಪುಷ್ಯಮಾಸದ ಶುದ್ಧ ಚತುರ್ದಶಿ ಮತ್ತು ಪೂರ್ಣಿಮೆಯಂದು ಬನಶಂಕರಿ ಪೂಜೆಯನ್ನು ಮಾಡುವ ಸಂಪ್ರದಾಯವಿದೆ.  ಈ ಪೂಜೆಯು ೭ ದಿನಗಳ ಪರ್ಯಂತ ವಿಶೇಷವಾಗಿ ನಡೆಯುತ್ತದೆ – ಅಂದರೆ ಪುಷ್ಯ ಶುದ್ಧ ಅಷ್ಟಮಿಯಿಂದ ಹುಣ್ಣಿಮೆ ಪರ್ಯಂತ ಜರುಗುತ್ತದೆ.  ಈ ಸಂದರ್ಭದಲ್ಲಿ ಪ್ರತಿಯೊಂದು ದಿನವೂ ನಿಷಿದ್ದವಲ್ಲದ ಒಂದೊಂದು ತರಕಾರಿ ಪಲ್ಯವನ್ನು ದುರ್ಗಾಮಾತೆಗೆ ನಿವೇದಿಸಲಾಗುತ್ತದೆ.  ಆದ್ದರಿಂದಲೇ ಈ ವ್ರತಕ್ಕೆ ಶಾಕಾಂಬರಿ ವ್ರತವೆಂದು ಹೆಸರು.  ಶಾಕ + ಅಂಬರಿ = ಶಾಕಾಂಬರಿ – ಯಾರು ಧರಿಸುತ್ತಾರೋ ಅವರೇ ಶಾಕಾಂಬರಿ

ಚತುರ್ದಶಿ – ಸರ್ವ ತರಕಾರಿಗಳನ್ನು ಸಮರ್ಪಿಸಲಾಗುತ್ತದೆ.  ಬನದ ಹುಣ್ಣಿಮೆ, ಜಾತ್ರೆ ವಿಶೇಷವಾಗಿ ನಡೆಸಲಾಗುತ್ತದೆ.  ಈ ಉತ್ಸವವನ್ನು ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ರಾಜಾಸ್ಥಾನಗಳಲ್ಲಿ ಆಚರಿಸಲಾಗುತ್ತದೆ.


ಪ್ರಮುಖ ಪ್ರಾಚೀನ ಶಾಕಾಂಬರಿ ದೇವಸ್ಥಾನಗಳು ಕರ್ನಾಟಕದ ಬಾದಾಮಿ ಮತ್ತು ಬೆಂಗಳೂರಿನಲ್ಲೂ, ಮಹಾರಾಷ್ಟ್ರದ ನಾಗೇವಾಡಿ, ಪುಣೆಯಲ್ಲೂ, ಉತ್ತರಪ್ರದೇಶದ ಶಹ್ರಾನ್ಪುರದಲ್ಲೂ, ರಾಜಸ್ಥಾನದ ಸಂಭಾರಿನಲ್ಲೂ, ಮತ್ತೂ ಜಾರ್ಖಂಡಿನಲ್ಲೂ ಕಾಣಬಹುದು.


ಚತುರ್ದಶಿ ಮತ್ತು ಹುಣ್ಣಿಮೆಯಂದು ೧೦೮ ತರಕಾರಿಗಳನ್ನು ಸಮರ್ಪಿಸುವ ಸಂಪ್ರದಾಯವಿದೆ.


ಈದಿನ ಶಾಕಾಂಬರಿ ಹುಟ್ಟಿದ ದಿನ.  ಸಾವಿರಾರು ವರ್ಷಗಳ ಹಿಂದೆ ದುರ್ಗಾಮಾಸುರನೆಂಬ ದೈತ್ಯನನ್ನು ಸಂಹರಿಸಲು, ಯಜ್ಞದಲ್ಲಿ ಉತ್ಪನ್ನಳಾದ ಶಕ್ತಿ ದೇವತೆಯೇ ಶಾಕಾಂಬರಿ.  ಆ ಕಾಲದಲ್ಲಿ ಬಹಳ ದುರ್ಭಿಕ್ಷೆಯಿದ್ದರಿಂದ ತಾನು ಬರುವಾಗ ಹಲವಾರು ತರಕಾರಿಗಳನ್ನು ತಂದು ಜನರನ್ನು ಉದ್ಧರಿಸಿದ್ದಳು.  ಆದ್ದರಿಂದ ಶಾಕಾಂಬರಿಯಾದಳು.


ಹುಣ್ಣಿಮೆಯಂದು ದೀಪೋತ್ಸವ, ದೀಪದಾನಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗಿದೆ.

“ಪುಷ್ಯ ಯೋಗ ಸಹಿತ ಪುಷ್ಯ ಹುಣ್ಣಿಮೆ”

ಪುಷ್ಯಮಾಸದ ಹುಣ್ಣಿಮೆಯಂದು ಪುಷ್ಯಾ ನಕ್ಷತ್ರವಿರುವಾಗ ಬಿಳಿ ಸಾಸಿವೆಯನ್ನು ಶರೀರಕ್ಕೆ ಲೇಪಿಸಿಕೊಂಡು ಸ್ನಾನವನ್ನು ಮಾಡಬೇಕು.  ಸ್ನಾನಾನಂತರ ನೂತನವಸ್ತ್ರಧಾರಣ ಮಾಡಿ ಮಂಗಳ ವಸ್ತುಗಳಾದ ಕನ್ನಡಿ, ಫಲಪುಷ್ಪಗಳು, ಹಸು, ಬ್ರಾಹ್ಮಣರು ಮುಂತಾದವುಗಳನ್ನು ದರ್ಶನ ಮಾಡಿದರೆ ನಮ್ಮ ಮನೆಯಲ್ಲಿರುವ ಅಲಕ್ಷ್ಮೀ ನಾಶವಾಗುತ್ತಾಳೆ, ಲಕ್ಷ್ಮೀ ನೆಲೆಸುತ್ತಾಳೆ.

(Source – Chaturvedi Vedavyasachar)

NARAHARI SUMADHWA

***

ಕುಮಾರವ್ಯಾಸ ಜಯಂತಿ , ಪುಷ್ಯಮಾಸದ ಹುಣ್ಣಿಮೆಯಂದು ಕುಮಾರವ್ಯಾಸ ಜಯಂತಿಯನ್ನು ಕೋಳೀವಾಡದಲ್ಲಿ ಆಚರಿಸುತ್ತಾರೆ ! 

" ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು " ಎಂದು ನಮ್ಮ ಕುವೆಂಪುರವರು ಹೇಳಿದಂತೆ ಕವಿ ಕುಮಾರವ್ಯಾಸ ರಚಿಸಿದ ಮಹಾಕಾವ್ಯ " ಭಾರತ ಕಥಾಮಂಜರಿ " ಯ ಪ್ರತಿ ಪದ್ಯವನ್ನು ಓದುವಾಗಲೂ ಅರಿವಿಗೆ ಬರುತ್ತದೆ !! 

 ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ , ಗದುಗಿನ ಕೋಳೀವಾಡದಲ್ಲಿ ಜನಿಸಿದ ಇವನು ಗದುಗಿನ ವೀರನಾರಾಯಣ ಮೆಚ್ಚಿನ ದೇವರು ! ಪ್ರತೀದಿನ ಗದುಗಿನಿಂದ ಕಾಲ್ನಡಿಗೆಯಲ್ಲಿ ಗುಡಿಗೆ ಬಂದು ದೇವರ ದರ್ಶನ ಪಡೆದು ಸೇವೆ ಮಾಡುತ್ತಿದ್ದ ಅವನಿಗೆ ಕಾವ್ಯರಚನಾ ಶಕ್ತಿ ಆವೀರ್ಭವಿಸಿ ಮಹಾಬ್ರಾಹ್ಮಣನೊಬ್ಬನ ( ಅಶ್ವತ್ಥಾಮ ಚಾರ್ಯ ! ) ಆದೇಶದಂತೆ ವೀರನಾರಾಯಣನ ಸನ್ನಿಧಿಯಲ್ಲಿ ಒದ್ದೆಬಟ್ಟೆ ಉಟ್ಟು ಕಾವ್ಯರಚನೆಗೆ ತೊಡಗಿ ಅದು ಒಣಗುವವರೆಗೂ ಸಾಗುತ್ತಿತ್ತಂತೆ ! ದೇವಸ್ಥಾನದ ನರಸಿಂಹದೇವರು ಆವೀರ್ಭವಿಸಿದ ಕಂಬದಕೆಳಗೆ ಕುಳಿತು ನಾರಾಯಣನ ಬಾಯಿಂದ ಬರುತ್ತಿದ್ದ ಕಾವ್ಯಗಳನ್ನು ಬರೆಯುತ್ತಿದ್ದನಂತೆ !( ಗದುಗಿನ ದೇವಸ್ಥಾನದಲ್ಲಿ ಇಂದಿಗೂ ಆಕಂಬವನ್ನು ನಾವು ಕಾಣಬಹುದಾಗಿದೆ ) " ವೀರ ನಾರಾಯಣನೆ ಕವಿ ಲಿಪಿಗಾರ ಕುವರವ್ಯಾಸ " ! ಆದರೆ ಕಥೆಯನ್ನು ಹೇಳುವಾಗ ಅಶ್ವತ್ಥಾಮ ಒಂದು ಶರತ್ತನ್ನು ವಿಧಿಸಿದ್ದನಂತೆ - ಕಥನಕಾರನ ದನಿಯನ್ನು ಮಾತ್ರಾ ಕೇಳುತ್ತಿರಬೇಕೇ ವಿನಃ ಯಾರೆಂದು ನೋಡುವ ಆಸಕ್ತಿ ತೋರಬಾರದೆಂದು !! ಹೀಗೇ ಪ್ರತೀದಿನ ಕಾವ್ಯರಚನೆ ನೆಡೆಯುತ್ತಿರುವಾಗ ಒಮ್ಮೆ

ಕುತೂಹಲ ಮತ್ತು ಪ್ರಭಲೇಚ್ಛೆ ತಡಯಲಾರದೇ ಹಿಂದುರುಗಿ ನೋಡಿದಾಗ ಸ್ವಯಂ ದೇವರೇ ಕಥನಕಾರನಾಗಿದ್ದು ಕಂಡು ರೋಮಾಂಚಿತನಾಗುತ್ತಾನೆ !  ಆದರೇ ಷರತ್ತು ಮುರಿದಿದ್ದರಿಂದ ದೇವರು ಅದೃಶ್ಯನಾಗಿ ಭಾರತಕತೆ ಅಲ್ಲಿಗೇ ನಿಂತುಬಿಡುತ್ತದೆ !! 

 ಹತ್ತು ಪರ್ವಗಳ ಕುಮಾವ್ಯಾಸ ವಿರಚಿತ ಭಾರತ ಕಥಾಮಂಜರಿಯು ಸಾಹಿತ್ಯಲೋಕದಲ್ಲೊಂದು ಮೈಲಿಗಲ್ಲು ! ಅವನ ಕಥನಕ್ರಮಕ್ಕೆ , ಸಾಹಿತ್ಯಕ್ಕೆ , ಭಾಷೆಯ ನುಡಿ ಬೆಡಗಿಗೆ ಮೈಮರೆಯದವರಿಲ್ಲ !! ಇಲ್ಲಿ ಕವಿಯು ಕೃಷ್ಣಪರಮಾತ್ಮನನ್ನು ಕಥಾ ನಾಯಕನನ್ನಾಗಿಸಿಕೊಂಡು " ತಿಳಿಯ ಹೇಳುವೆ ಕೃಷ್ಣಕಥೆಯನು ಇಳೆಯ ಜಾಣರು ಮೆಚ್ಚುವಂತೆ ಎಂದಿದ್ದಾನೆ - " ಹಲವು ಜನ್ಮದ ಪಾಪ ರಾಶಿಯ ತೊಳೆವ ಜಲವಿದು ಪದುನಾಭನ ಲೀಲಾವಿಲಾಸ ಎಂದಿದ್ದಾನೆ !

 ಮತ್ತೆ ಈ ಭಾರತದ ಕಥೆಯನು ಆದರಿಸಿ ಕೇಳಿದರೆ -

" ವೇದ ಪಾರಾಯಣದ ಫಲ ಗಂಗಾದಿತೀರ್ಥ ಸ್ನಾನ ಫಲ ,ಕೃಚ್ಛ್ರಾದಿ ತಪಸಿನ ಫಲವು , ಜ್ಯೋತಿಸ್ಥೋಮ ಯಾಗಫಲ , ಮೇದಿನಿಯನೊಲಿದಿತ್ತ ಫಲ ವಸ್ರ್ತಾದಿ ಕನ್ಯಾದಾನ ಫಲವಹುದು ಆದರದಿ ಭಾರತದೊಳಂದಕ್ಷರವ ಕೇಳ್ದರಿಗೆ "! ಎಂದಮೇಲೆ ಈ ಗ್ರಂಥ ಅದೆಷ್ಟು ಫಲಗಳನು ಕೊಡ ಬಹುದಲ್ಲವೇ !!!

 ಹತ್ತು ಪರ್ವಗಳ ಈ ಭಾರತ ಕತಾಮಂಜರಿಯು ಗಮಕಕಲಾಭಿಮಾನಿಗಳಿಗೆ ನೆಚ್ಚಿನಗ್ರಂಥವಾಗಿದೆ !

ಹದಿನೈದನೇ ಶತಮಾನದ ಪೂರ್ವಾರ್ಧದಲ್ಲಿದ್ದ ನಾರಣಪ್ಪ " ರೂಪಕ ಸಾಮ್ರಾಜ್ಯ ಚಕ್ರವರ್ತಿ " ಎಂದೇ ಬಿರುದಾಂಕಿತ !

" ಕರ್ನಾಟಕ ಭಾರತ ಕಥಾಮಂಜರಿ " ಕುಮಾರವ್ಯಾಸ ಧಾರ್ಮಿಕ ಗ್ರಂಥ ವನ್ನು ಕನ್ನಡಕ್ಕೆ ತಂದಯ ಶ್ರದ್ಧಾವಂತರಿಗಷ್ಟೇ ಅಲ್ಲಕದೇ ಕನ್ನಡ ಸಾಹಿತ್ಯ ಬೆಳವಣಿಗೆ ಮೇಲೂ ಪ್ರಭಾವ ಬೀರಿದ್ದಾನೆ !

  ಅಂದಿನಿಂದ ಇಂದಿನವರೆಗೂ ಎಲ್ಲೆಡೆಯೂ ಗಮಕಿಗಳು ಮಹಾ ಭಾರತವನ್ನು ವಾಚನ ವ್ಯಾಖ್ಯಾನ ಮಾಡುವ ಮೂಲಕ ಜನರಲ್ಲಿ ಮಹಾಭಾರತ ಕಥೆಯ ಸಂಪೂರ್ಣ ಪರಿಚಯವನ್ನು , ಕೃಷ್ಣಕತೆಯನ್ನು ಎಲ್ಲರಿಗೂ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಆಗುತ್ತಿದ್ದಾರೆ !! 

 ಸ್ವತಃ ನಮ್ಮ ಮಾವನವರೇ ಸುಪ್ರಸಿದ್ದ ಗಮಕಿಗಳಾಗಿದ್ದರು , ಅವರಿಂದ ಕಲಿತು ಮೂರೂ ಜನ ಗಂಡುಮಕ್ಕಳು + ಮಗಳೂ ಗಮಕದಲ್ಲಿ ಪ್ರವೀಣರಾಗಿದ್ದವರೇ ! ಆಕಾಶವಾಣಿಯಲ್ಲಿ ಅನೇಕಬಾರಿ ಕಾರ್ಯಕ್ರಮ ನೀಡಿದ್ದಾರೆ ! ಜಯರಾಮರಾಯರಂತೂ ಅವರ ತಂದೆಯಂತೆಯೇ ಗಮಕಪ್ರವೀಣರಾಗಿ ಡಾಕ್ಟರೇಟ್ ಪಡೆದು ರಾಜ್ಯದೆಲ್ಲೆಡೆ , ವಿದೇಶಗಳಲ್ಲಿ ಭಾರತಕಥಾ ಮಂಜರಿಯನ್ನು ವಾಚನ ವ್ಯಾಖ್ಯಾನವನ್ನು ತಂದೆಯಂತೆಯೇ  ಒಬ್ಬರೇ ಮಾಡುತ್ತಾ  ಅನೇಕ ಪ್ರಶಸ್ತಿ ಗಳನ್ನು ಪಡೆದು ಸಾವಿರಾರು ಕಾರ್ಯಕ್ರಮ ನೀಡಿ ಇಂದಿಗೂ ಕಾರ್ಯಕ್ರಮ ನೀಡುತ್ತಾ ವೀರನಾರಾಯಣನ ಹಾಗೂ ಕುಮಾರವ್ಯಾಸನ ಕೃಪೆಗೆ ಪಾತ್ರರಾಗಿದ್ದಾರೆ ಎನ್ನಬಹುದು !! ಬೆಂಗಳೂರಿನ ಕುಮಾರವ್ಯಾಸ ಮಂಟಪವೊಂದರಲ್ಲೇ ಸುಮಾರು ೩೦೦೦ ಕ್ಕೂ ಮಿಕ್ಕಿ ಗಮಕ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು !!! 

ನಮಗೆ ಇಂತಹಾ ಮಹಾ ಭಾರತಕಥಾಮಂಜರಿ ರಚಿಸಿ ನೀಡಿದ ಕುಮಾರವ್ಯಾಸನಿಗೆ ಅವನ ಜನ್ಮದಿನದಂದು ನಾವೆಲ್ಲಾ ಭಕ್ತಿಯಿಂದ ನಮಿಸೋಣ

***


banashankari utsava, Badami 


***



No comments:

Post a Comment