Yagnavalkya Muni
Yagnavalkya Jayanti is on Karteeka shukla shashti
ಬಹಳ ವರ್ಷಗಳ ಹಿಂದೆ ಬ್ರಹ್ಮರಾತ ಎಂಬ ಋಷಿ ಇದ್ದರು. ಅವರ ಹೆಂಡತಿ ಸುನಂದಾದೇವಿ. ಪತಿಗೆ ತಕ್ಕ ಸತಿ ಎನಿಸಿದ್ದರು. ದಂಪತಿಗಳ ಜೀವನ ಅನ್ಯೋನ್ಯವಾಗಿದ್ದರೂ, ಮಕ್ಕಳಿಲ್ಲದ ಕೊರಗು ಇವರನ್ನು ತುಂಬಾ ಬಾಧಿಸುತ್ತಿತ್ತು. ಇದಕ್ಕಾಗಿ ದೀರ್ಘಕಾಲ ಯಜ್ಞೇಶ್ವರನನ್ನು ಕುರಿತು ತಪಸ್ಸು ಮಾಡಿದರು. ಆತನ ಕೃಪೆಯಿಂದ ಒಂದು ಗಂಡು ಮಗುವನ್ನು ಪಡೆದರು. ಮಗನಿಗೆ ಯಾಜ್ಞವಲ್ಕ್ಯ ಎಂದು ನಾಮಕರಣ ಮಾಡಿದರು. ಯಾಜ್ಞವಲ್ಕ್ಯ ಬಾಲ್ಯದಿಂದಲೂ ಚುರುಕಾಗಿದ್ದ. ಜೊತೆಗೆ ದೈವಭಕ್ತಿ ಉಳ್ಳವನಾಗಿದ್ದ. ಬ್ರಹ್ಮರಾತರು ಮಗನಿಗೆ ಕಿರಿಯ ವಯಸ್ಸಿನಲ್ಲಿಯೇ ಉಪನಯನ ಸಂಸ್ಕಾರವನ್ನು ಮುಗಿಸಿ, ಯಜುರ್ವೇದವನ್ನು ಕಲಿತು ಬರಲು ವೈಶಂಪಾಯನ ಎಂಬುವವರ ಬಳಿಗೆ ಕಳುಹಿಸಿಕೊಟ್ಟರು. ವೈಶಂಪಾಯನರು ಯಾಜ್ಞವಲ್ಕ್ಯನ ಸೋದರಮಾವನೇ ಆಗಿದ್ದರು. ವೈಶಂಪಾಯನರಿಂದ ಚೂಟಿಯ ಬಾಲಕನಾದ ಯಾಜ್ಞವಲ್ಕ್ಯ ಬೇಗ ಬೇಗ ಯಜುರ್ವೇದದ ಮಂತ್ರಗಳನ್ನು ಅರ್ಥಮಾಡಿಕೊಳ್ಳುತ್ತಾ ಕಲಿಯತೊಡಗಿದ. ಅವರ ಅಚ್ಚುಮೆಚ್ಚಿನ ಶಿಷ್ಯ ಎನಿಸಿದ. ಒಂದು ಬಾರಿ ವೈಶಂಪಾಯನರು ಖಾಯಿಲೆಯಿಂದ ಹಾಸಿಗೆ ಹಿಡಿದರು. ರೋಗ ನಿವಾರಣೆಗಾಗಿ ಅವರ ಶಿಷ್ಯರಾದ ಚರಕ ಮೊದಲಾದ ವೈದ್ಯವಿದ್ವನ್ಮಣಿಗಳು ವ್ರತ ಆಚರಿಸಲು ನಿರ್ಧರಿಸಿದರು. ವಿಷಯ ಯಾಜ್ಞವಲ್ಕ್ಯನಿಗೆ ತಿಳಿಯಿತು. ರೋಗ ನಿವಾರಣೆಗಾಗಿ ಇವರು ವ್ರತ ಆಚರಿಸುವುದನ್ನು ಕಂಡು, ಯಾಜ್ಞವಲ್ಕ್ಯನಿಗೆ ನಗು ಬಂತು. ಅವನು ತನ್ನ ಗುರುವಿನೊಂದಿಗೆ ತಿಳಿಸಿದ: “ಗುರುಗಳೇ ಈ ಒಂದು ಪುಟ್ಟ ಖಾಯಿಲೆಗೆ ಇಷ್ಟೊಂದು ಮಂದಿ ವೃಥಾ ವ್ರತ ಆಚರಿಸಬೇಕೇ? ನಾನೊಬ್ಬನೇ ವ್ರತವನ್ನು ಕೈಗೊಂಡು, ನಿಮ್ಮ ಅಸ್ವಸ್ಥತೆಯನ್ನು ನಿವಾರಿಸುತ್ತೇನೆ.”
ತನ್ನ ಹಿರಿಯ ಶಿಷ್ಯರ ಬಗ್ಗೆ ಈ ರೀತಿಯ ಅಸಡ್ಡೆಯ ಮಾತುಗಳನ್ನು ಕೇಳಿ, ಬಾಲಕನಾದ ಯಾಜ್ಞವಲ್ಕ್ಯನ ಬಗ್ಗೆ ವೈಶಂಪಾಯನ ಗುರುಗಳಿಗೆ ಕೋಪ ಬಂತು. ಹೀಗೆಲ್ಲಾ ಆಡುವುದು ಬಾಲಕನ ಉದ್ಧಟತನ ಎಂದೇ ಭಾವಿಸಿದರು. ಸಿಟ್ಟಿನಿಂದಲೇ ಹೇಳಿದರು:
“ಹಿರಿಯ ಶಿಷ್ಯರ ಬಗ್ಗೆ ಹೀಗೆಲ್ಲಾ ಹೀನವಾಗಿ ಮಾತಾಡುವ ನಿನ್ನಿಂದ ನಾನು ಯಾವುದೇ ವ್ರತವನ್ನೂ ಬಯಸುವುದಿಲ್ಲ. ಹೊರಟುಹೋಗು.”
ಇನ್ನೊಮ್ಮೆ ವೈಶಂಪಾಯನರು ಅನಿವಾರ್ಯ ನಿಮಿತ್ತ ಸಭೆಯೊಂದರಲ್ಲಿ ಹಾಜರಾಗಲು ಸಾಧ್ಯ ಆಗಲಿಲ್ಲ. ಸಭೆಯ ನಿಯಮದಂತೆ ಇಂತಹ ಅಪರಾಧದಿಂದ ಬಹ್ಮಹತ್ಯಾ ದೋಷ ಪ್ರಾಪ್ತವಾಯಿತು. ಮನನೊಂದ ವೈಶಂಪಾಯನ ತನ್ನ ಶಿಷ್ಯರನ್ನು ಕರೆದು ಹೇಳಿದರು:”ನನಗೆ ತಗುಲಿರುವ ಬ್ರಹ್ಮಹತ್ಯಾ ನಿವಾರಣೆಗಾಗಿ ನೀವೆಲ್ಲಾ ಈ ಶಾಪದ ಪ್ರಾಯಶ್ಚಿತ್ತ ಮಾಡಿರಿ.” ಯಾಜ್ಞವಲ್ಕ್ಯ ಮತ್ತೆ ತನ್ನ ಹುಡುಗತನದ ಧಾಟಿಯಲ್ಲಿಯೇ ಹೇಳಿದ:
“ಗುರುಗಳೇ, ನೀವು ಒಪ್ಪುವುದಾದರೆ ಅವರೆಲ್ಲಾ ಮಾಡುವ ವ್ರತವನ್ನು ನಾನೊಬ್ಬನೇ ಯಶಸ್ವಿಯಾಗಿ ಪೂರೈಸುತ್ತೇನೆ.”
ವೈಶಂಪಾಯನರಿಗೆ ಈಗ ಇನ್ನೂ ಕೋಪ ಬಂತು. ’ಹುಡುಗತನದಲ್ಲಿ ಅಸಭ್ಯನಂತೆ ಹೀಗೆಲ್ಲಾ ಮಾತಾಡುತ್ತಿರುವನಲ್ಲಾ!’ ಅಂದುಕೊಂಡು: “ಹಿರಿಯ ಬ್ರಾಹ್ಮಣರನ್ನು ಹೀಗೆಲ್ಲಾ ಅವಮಾನದ ರೀತಿಯಲ್ಲಿ ತಿರಸ್ಕರಿಸಿ ಮಾತಾಡುತ್ತಿವೆಯಾ ? ನಿನಗೆ ನಾನು ಕಲಿಸಿರುವ ಯಜುರ್ವೇದದ ಮಂತ್ರ ರಹಸ್ಯಗಳೆಲ್ಲವೂ ಮರೆತುಹೋಗಲಿ. ನೀನು ನನ್ನ ಆಶ್ರಮದಲ್ಲಿರಲು ಅನರ್ಹ ಆದ್ದರಿಂದ ಹೊರಟುಹೋಗು.” ಯಾಜ್ಞವಲ್ಕ್ಯ ಹೋದ ಉದ್ದೇಶವನ್ನು ಪೂರೈಸದೆ ಹಿಂದಿರುಗಿದುದನ್ನು ಕಂಡು ಬ್ರಹ್ಮರಾತರಿಗೆ ತುಂಬಾ ದುಃಖ ಆಯಿತು. ಆದರೂ ದುಃಖವನ್ನು ನುಂಗಿಕೊಂಡು, ಋಗ್ವೇದವನ್ನಾದರೂ ಕಲಿತು ಬರಲಿ, ಅಂದುಕೊಂಡು ಪೈಲ ಮುನಿಗಳ ಶಿಷ್ಯರಾದ ಬಾಷ್ಕಲ ಮುನಿಗಳ ಆಶ್ರಮಕ್ಕೆ ಕಳುಹಿಸಿಕೊಟ್ಟರು. ತನ್ನ ತಪ್ಪನ್ನು ಅರ್ಥಮಾಡಿಕೊಂಡಿದ್ದ. ಯಾಜ್ಞವಲ್ಕ್ಯ ಅಹಿತಕರ ರೀತಿಯಲ್ಲಿ ಯಾವ ಮಾತೂ ಆಡದೇ, ಋಗ್ವೇದ ಮಂತ್ರ ರಹಸ್ಯವನ್ನು ಅರಿತು, ಹಿಂದಿರುಗಿದ. ಮಗನ ವಿದ್ಯಾಭ್ಯುದಯವನ್ನು ಮನಗಂಡು ಹಿರಣ್ಯನಾಭರ ಬಳಿಗೆ ಕಳುಹಿಸಿ, ಸಾಮವೇದದಲ್ಲೂ ಮಗನು ಪರಿಣತನೆನಿಸುವಂತೆ ಮಾಡಿದರು. ಇನ್ನೂ ಮುಂದೆ ಅರುಣಿ ಮಹರ್ಷಿಗಳ ಸೇವೆಯಲ್ಲಿದ್ದು ಅಥರ್ವವೇದದಲ್ಲೂ ಯಾಜ್ಞವಲ್ಕ್ಯ ಪಾಂಡಿತ್ಯ ಪಡೆದನು.
ಇಷ್ಟಾದರೂ ಅವನಿಗೆ ತಾನು ಯಜುರ್ವೇದ ಮಂತ್ರ ರಹಸ್ಯವನ್ನು ತಿಳಿಯುವುದರಲ್ಲಿ ವಿಫಲನಾದೆನಲ್ಲಾ ಎಂಬ ಕೊರಗು ಇತ್ತು. ಇದಕ್ಕಾಗಿ ತನ್ನ ತಂದೆ ಉಪನಯನ ಸಮಯದಲ್ಲಿ ಉಪದೇಶಿಸಿದ ಗಾಯತ್ರಿ ಮಂತ್ರದ ಮಹಿಮೆಯಿಂದ ಗಾಯತ್ರೀ ದೇವಿಯ ಕೃಪೆ ಪಡೆದನು. ದೇವಿ ಪ್ರತ್ಯಕ್ಷಳಾಗಿ ಉದ್ದೇಶ ಸಾಧನೆಗಾಗಿ ಸೂರ್ಯದೇವನನ್ನು ಆರಾಧಿಸಲು ಸಲಹೆ ನೀಡಿದಳು. ಅದರಂತೆ ಸೂರ್ಯನನ್ನೇ ಕುರಿತು ಘೋರ ತಪಸ್ಸನ್ನು ಆಚರಿಸಲು ನಿಶ್ಚಯಿಸಿದನು. ಚಿಕ್ಕ ವಯಸ್ಸಿನಲ್ಲೇ ಹೀಗೆಲ್ಲಾ ಸನ್ಯಾಸಿ ಜೀವನದಲ್ಲಿ ಪ್ರವೇಶಿಸುವುದನ್ನು ಕಂಡ, ಬ್ರಹ್ಮರಾತರು ಕದಿರಮುನಿಗಳ ಮಗಳಾದ ಕಾತ್ಯಾಯನಿ ಎಂಬುವಳೊಂದಿಗೆ ಮದುವೆ ಮಾಡಿ ಮುಗಿಸಿದರು. ಮದುವೆ ಅವನ ತಪಸ್ಸಿಗೆ ವಿಘ್ನ ಆಗಲಿಲ್ಲ. ಸೂರ್ಯದೇವನು ಅವನ ತಪಸ್ಸನ್ನು ಮೆಚ್ಚಿ, ಪ್ರತ್ಯಕ್ಷ ಆದ. ಯಾಜ್ಞವಲ್ಕ್ಯನ ಕೋರಿಕೆಯಂತೆ ಯಜುರ್ವೇದ ಮಂತ್ರವನ್ನು ಉಪದೇಶಿಸಿದ. ಇಂತಹ ದಿವ್ಯಜ್ಞಾನವನ್ನು ಪಡೆದ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಎನಿಸಿದ. ಯಜುರ್ವೇದವನ್ನು ಕುರಿತು “ಶುಕ್ಲ ಯಜುರ್ವೇದ” ಎಂಬ ಉದ್ಗ್ರಂಥವನ್ನು ರಚಿಸಿದ. ಇದರಿಂದ ಯಾಜ್ಞವಲ್ಕ್ಯರ ಕೀರ್ತಿ ಎಲ್ಲೆಲ್ಲೂ ಹರಡಿತು. ಶುಕ್ಲ ಯಜುರ್ವೇದದ ಪಾರಾಯಣ ಪ್ರವಚನವನ್ನು ತನ್ನ ಆಶ್ರಮದಲ್ಲಿ ಪ್ರಾರಂಭಿಸಿದ. ಇದನ್ನು ಕೇಳಲು ಋಷಿ-ಮುನಿಗಳೇ ಅಲ್ಲದೇ, ವಿಖ್ಯಾತ ರಾಜರುಗಳೂ ಬರುತ್ತಿದ್ದರು.. ಅಂತಹವರಲ್ಲಿ ವಿಥಿಲಾ ಪಟ್ಟಣದ ಜನಕರಾಜನೂ ಒಬ್ಬ. ಪ್ರವಚನದಿಂದ ಪ್ರಭಾವಿತನಾಗಿ, ಯಾಜ್ಞವಲ್ಕ್ಯರ ಪರಮ ಶಿಷ್ಯನೆನಿಸಿದ. ವೇದಮಂತ್ರಗಳಿಗೆ ಯಾಜ್ಞವಲ್ಕ್ಯರೇ ಸೂಕ್ತ ರೀತಿಯ ಅರ್ಥ ವಿವರಣೆಯನ್ನು ನೀಡುತ್ತಾ, ನೆರೆದಿದ್ದವರೆಲ್ಲರ ಮನ ಗೆದ್ದರು. ಯಾಜ್ಞವಲ್ಕ್ಯರ ಕೀರ್ತಿ ಈಗ ದೇಶ-ವಿದೇಶಗಳಲ್ಲಿಯೂ ಹರಡಿತು. ಇಂತಹ ಪ್ರವಚನ ಸಭೆಯಲ್ಲಿ ಪುರುಷರೇ ಅಲ್ಲದೆ, ಮಹಿಳೆಯರೂ ಭಾಗವಹಿಸಿದ್ದರು. ಅಂತಹವರಲ್ಲಿ ಗಾರ್ಗಿ ಹಾಗೂ ಮೈತ್ರೇಯಿ ಪ್ರಮುಖರು. ಮೈತ್ರೇಯಿ ಯಾಜ್ಞವಲ್ಕ್ಯರ ಪಾಂಡಿತ್ಯ ಪ್ರೌಢಿಮೆಯಿಂದ ತುಂಬಾ ಪ್ರಭಾವಿತಳಾದಳು. ಅವರೊಂದಿಗೆ ಬಾಳುವೆಯನ್ನು ನಡೆಸಿ, ಬ್ರಹ್ಮದರ್ಶನವನ್ನು ಪಡೆಯಲು ಬಯಸಿದಳು. ಇದಕ್ಕಾಗಿ ತಮ್ಮ ಪತ್ನಿ, ಕಾತ್ಯಾಯಿನಿಯ ಅನುಮತಿಯನ್ನು ಪಡೆಯಲು ಯಾಜ್ಞವಲ್ಕ್ಯರು ತಿಳಿಸಿದರು. ಕಾತ್ಯಾಯನಿ ತ್ಯಾಗಮಯಿ ಹಾಗೂ ಕರುಣಾಮಯಿ, ಮೈತ್ರೇಯಿಯ ಅಪೇಕ್ಷೆಯನ್ನು ಸಮ್ಮತಿಸಿದಳು. ಅಂದಿನಿಂದ ಮೈತ್ರೇಯಿ ಯಾಜ್ಞವಲ್ಕ್ಯರೊಂದಿಗೇ ಜೀವನವನ್ನು ಜರುಗಿಸುತ್ತಾ, ಮುನ್ನಡೆದಳು. ಇದೇ ಸಂದರ್ಭದಲ್ಲಿ ರಾಜರ್ಷಿ ಎನಿಸಿದ್ದ ಜನಕ ಮಹಾರಾಜ ಜ್ಞಾನಯಾಗ ಒಂದನ್ನು ನಡೆಸಿದ. ಈ ಯಾಗದಲ್ಲಿ ಭಾಗವಹಿಸಲು ನಾನಾ ಕಡೆಯಿಂದ ವಿದ್ವಾಂಸರು ಹಾಗೂ ಋಷಿ-ಮುನಿಗಳು ಆಗಮಿಸಿದರು. ಯಾಜ್ಞವಲ್ಕ್ಯರೂ ಆಗಮಿಸಿದ್ದರು. ಬ್ರಹ್ಮನಿಷ್ಟರು ಯಾರು ಎಂಬುದರ ಬಗ್ಗೆ ತೀರ್ಮಾನಿಸುವುದು ಯಾಗಸಭೆಯ ಉದ್ದೇಶ ಆಗಿತ್ತು. ಹಾಗೆ ತೀರ್ಮಾನಿಸಲ್ಪಟ್ಟವರಿಗೆ ಸರ್ವಜ್ಞ ಕಿರೀಟವನ್ನು ಅಲಂಕರಿಸಲ್ಪಟ್ಟಿರುವ ಒಂದು ಸಾವಿರ ಗೋವುಗಳನ್ನು ಕೊಟ್ಟು ಗೌರವಿಸುವುದಾಗಿಯೂ ಯಾಗಸಭೆಯಲ್ಲಿ ಜನಕರಾಜ ಘೋಷಿಸಿದ.
ಈ ಬಗ್ಗೆ ಇನ್ನೂ ನಿರ್ಧರಿಸುವ ಮೊದಲೇ ಯಾಜ್ಞವಲ್ಕ್ಯರು ತಮ್ಮ ಶಿಷ್ಯನಾದ ಸಾಮಶ್ರವನಿಗೆ ಹೇಳಿದರು:
“ಶಿಷ್ಯನೇ, ಆ ಸಾವಿರ ಗೋವುಗಳನ್ನೂ ನೀನು ಈಗಲೇ ನಮ್ಮ ಆಶ್ರಮಕ್ಕೆ ಹೊಡೆದುಕೊಂಡು ಹೋಗು.”
ಸಭೆಯಲ್ಲಿ ಗೊಂದಲ ಎದ್ದಿತು. “ ತೀರ್ಮಾನಿಸುವ ಮೊದಲೇ ಹೀಗೆಲ್ಲಾ ಮಾಡುವುದು ಸರಿಯಲ್ಲ” ಎಂದು ಯಾಜ್ಞವಲ್ಕ್ಯರ ಬಗ್ಗೆ ಟೀಕಿಸತೊಡಗಿದರು.
ಯಾಜ್ಞ ವಲ್ಕ್ಯರು ನಗುತ್ತಲೇ ಹೇಳಿದರು, “ನೀವೆಲ್ಲರೂ ಬ್ರಹ್ಮ ವಿದ್ಯೆಯ ಬಗ್ಗೆ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ನಾನು ಸಿದ್ಧ.
ಎಲ್ಲರೂ ತಮ್ಮ ಪರವಾಗಿ ಪ್ರಶ್ನೆಗಳನ್ನು ಕೇಳಲು ಗಾರ್ಗಿಯನ್ನು ಪ್ರತಿನಿಧಿಯ ರೂಪದಲ್ಲಿ ಆರಿಸಿದರು. ಗಾರ್ಗಿ ಯಾಜ್ಞವಲ್ಕ್ಯರ ಪರಮಶಿಷ್ಯೆ. ಯಾಜ್ಞವಲ್ಕ್ಯರೂ ಸಮ್ಮತಿಸಿದರು.
“ಯಾಜ್ಜವಲ್ಕ್ಯರೇ, ಈ ಜಗತ್ತಿನಲ್ಲಿರುವುದೆಲ್ಲವೂ ನೀರಿನ ಮೇಲೆ ಇದ್ದು ನೇಯಲ್ಪಟ್ಟಿದೆ ಎಂದು ಹೇಳುತ್ತಾರೆ. ಆ ನೀರು ಯಾವುದರ ಮೇಲೆ ನೇಯಲ್ಪಟ್ಟಿದೆ?”
“ಮಾರುತದ ಮೇಲೆ”
“ಮಾರುತ ಯಾವುದರ ಮೇಲೆ ನೇಯಲ್ಪಟ್ಟಿದೆ?”
“ಆಕಾಶದ ಮೇಲೆ”
“ಆಕಾಶ?”
“ಸ್ವರ್ಗೀಯ ಬಾನಿನ ಪ್ರದೇಶದ ಮೇಲೆ”
“ಆ ಸ್ವರ್ಗೀಯ ಪ್ರದೇಶ?”
“ಸೂರ್ಯನ ಮೇಲೆ”
“ಆ ಸೂರ್ಯ?”
“ಚಂದ್ರನ ಮೇಲೆ”
“ಚಂದ್ರ?”
“ನಕ್ಷತ್ರಗಳ ಮೇಲೆ”
“ನಕ್ಷತ್ರಗಳು?”
“ದೇವತೆಗಳು ವಾಸಿಸುವ ನೆಲೆಯ ಮೇಲೆ” ಹೀಗೆ ಎಲ್ಲಾ ವಿಕಟ ರೀತಿಯ ಪ್ರಶ್ನೆಗಳಿಗೂ ಯಾಜ್ಞವಲ್ಕ್ಯರು ನೀರು ಕುಡಿಯುವಷ್ಟು ಸುಲಭವಾಗಿ ಉತ್ತರ ಹೇಳಿ ಮುಗಿಸಿದರು.
ಜನಕಮಹಾರಾಜನಿಗೆ ತನ್ನ ಗುರುವಿನ ವಾದ ವೈಖರಿ ಅಚ್ಚುಮೆಚ್ಚಿನದೆನಿಸಿತು. ಯಾಜ್ಞವಲ್ಕ್ಯರಿಗೆ ಸರ್ವಜ್ಞ ಕಿರೀಟದಿಂದ ಅಲಂಕರಿಸಲಾಯಿತು. ಚಿನ್ನದ ಪದಕಗಳಿಂದ ಅಲಂಕರಿಸಿದ ಸಹಸ್ರ ಗೋವುಗಳನ್ನು ನೀಡಿ, ಸನ್ಮಾನಿಸಲಾಯಿತು. ಮುಂದೆ ಯಾಜ್ಞವಲ್ಕ್ಯರು ಹಲವಾರು ಅಮೂಲ್ಯ ಕೃತಿಗಳನ್ನು ಬ್ರಹ್ಮವಿದ್ಯೆಯ ಬಗ್ಗೆ ರಚಿಸಿದರು. ಇವುಗಳಲ್ಲಿ “ಯಾಜ್ಞವಲ್ಕ್ಯಸ್ಮೃತಿ” ಅತಿ ಮುಖ್ಯವಾದುದು. ಈ ವೇಳೆಗೆ ಯಾಜ್ಞವಲ್ಕ್ಯರನ್ನು ಮುಪ್ಪು ಕಾಡತೊಡಗಿತು. ಇನ್ನು ಲೌಕಿಕ ಜೀವನದಿಂದ ದೂರವಾಗಿ, ಬ್ರಹ್ಮವಿದ್ಯಾ ಚಿಂತನೆ ಯಲ್ಲಿಯೇ ಕಾಲವನ್ನು ಕಳೆಯಲು ನಿರ್ಧರಿಸಿದರು. ತಮ್ಮಲ್ಲಿದ್ದ ಸಕಲ ಸಂಪತ್ತನ್ನು ತಮ್ಮ ಇಬ್ಬರು ಪತ್ನಿಯರಿಗೂ ಸಮನಾಗಿ ಹಂಚಿದರು. ಕಾತ್ಯಾಯನಿ ಏನೋ ಪ್ರಸಾದರೂಪದಲ್ಲಿ ಸ್ವೀಕರಿಸಿದಳು. ಆದರೆ ಮೈತ್ರೇಯಿ ಪ್ರಶ್ನಿಸಿದಳು: “ಭಗವಾನ್, ನಾನು ಈ ಲೋಕದ ಇಂತಹ ಐಶ್ವರ್ಯದಿಂದ ಅಮೃತತ್ವ ಅಂದರೆ ಬ್ರಹ್ಮಲೋಕವನ್ನು ತಲುಪಲು ಸಾಧ್ಯವೇ?” ತಮ್ಮ ಮಡದಿಯ ಪ್ರಶ್ನೆಯಿಂದ ಅಚ್ಚರಿಗೊಂಡ ಯಾಜ್ಞವಲ್ಕ್ಯರು ಹೇಳಿದರು: “ಇಲ್ಲ, ಲೌಕಿಕ ಸಿರಿಯಿಂದ ಅಮರತ್ವ ಲಭಿಸದು.” “ಹಾಗಿದ್ದ ಮೇಲೆ ನನಗೆ ಇದ್ಯಾವುದರ ಅಗತ್ಯವೂ ಇಲ್ಲ. ನಾನೂ ನಿಮ್ಮೊಂದಿಗೆ ತಪಸ್ಸಿನಲ್ಲೇ ಮುಳುಗಿ, ಬ್ರಹ್ಮಪದವಿಯನ್ನು ಪಡೆಯುವೆನು.” ಇದೇ ಉದ್ದೇಶದಿಂದ ಈರ್ವರೂ ಹಿಮಾಲಯದ ತಪ್ಪಲಿನಲ್ಲಿ ತಪೋನಿರತರಾದರು. ದಿನಕ್ರಮೇಣ ಭೌತಿಕ ಶರೀರವನ್ನು ತ್ಯಜಿಸಿ, ಬ್ರಹ್ಮನಲ್ಲಿ ಲೀನರಾದರು.
***
ಲೌಕಿಕ-ಅಲೌಕಿಕ, ಪ್ರವೃತ್ತಿ-ನಿವೃತ್ತಿ, ಐಹಿಕ-ಪಾರಮಾರ್ಥಿಕ, ತ್ಯಾಗ-ಭೋಗಗಳ ಸಮನ್ವಯದೊಂದಿಗೆ ಅರ್ಥಪೂರ್ಣ ಬದುಕನ್ನು ಮಾಡಿದವರು ಋಷಿವರೇಣ್ಯರ ಸಾಲಿನಲ್ಲಿ ದೇದೀಪ್ಯಮಾನವಾಗಿ ಪ್ರಕಾಶಿಸುವ ಅದ್ವಿತೀಯ ತೇಜಸ್ವಿಗಳೇ ಶ್ರೀ ಯಾಜ್ಞವಲ್ಕ್ಯರು. ಕಠಿಣ ಸಾಧನೆಗೆ ಹೆಸರಾದ ಇವರು ದಾರ್ಶನಿಕ, ಸ್ಮತಿಕಾರ, ಪ್ರತಿಮ ಮೇಧಾವಿಗಳು. ಯಾಜ್ಞವಲ್ಕ ಜಯಂತಿ ಪ್ರಯುಕ್ತ ಈ ಲೇಖನ.
‘ಅಸತೋಮಾ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ’ನನ್ನನ್ನು ಅವ್ಯವಸ್ಥೆಯಿಂದ ವ್ಯವಸ್ಥೆಯತ್ತ ಅಜ್ಞಾನಾಂಧಾಕಾರದಿಂದ ಜ್ಞಾನದ ಬೆಳಕಿನತ್ತ ನಡೆಸು. ಸಾವಿನಿಂದ ಅಮೃತದತ್ತ ನಡೆಸು ಎಂದು ಜನಸಾಮಾನ್ಯರ ಬಾಯಲ್ಲೂ ನಿತ್ಯ ನಲಿದಾಡುವ ವಿಶ್ವಪ್ರಸಿದ್ಧ ಸೂಕ್ತಿಗಳನ್ನು ಹೇಳಿದವರೂ ಯಾಜ್ಞವಲ್ಕ್ಯರೇ. ಇಂತಹ ಅಮೋಘ ತತ್ತ್ವವನ್ನು ಜಗತ್ತಿಗೆ ಸಾರಿದ ಯಾಜ್ಞವಲ್ಕ ್ಯರ ವ್ಯಕ್ತಿತ್ವ ಮೇರು ಸದೃಶವಾದುದು. ಯಾಜ್ಞವಲ್ಕ್ಯರಿಗೆ ಬ್ರಹ್ಮರಾತ, ದೈವರಾತ, ವಾಜಸನೇಯ ಎಂಬಿತ್ಯಾದಿ ಹೆಸರುಗಳೂ ಇವೆ. ಯಜ್ಞಯಾಗಗಳಲ್ಲಿ ಅವರು ಸದಾ ಭಾಗವಹಿಸುತ್ತ, ಸದಾ ದೀಕ್ಷಾವಸ್ತ್ರ ಧಾರಣ ಮಾಡುತ್ತಿದ್ದುದರಿಂದ ಅವರಿಗೆ ಯಾಜ್ಞವಲ್ಕ್ಯರೆಂದೂ, ಸದಾ ಅಧ್ಯಾತ್ಮಚಿಂತಕರಾದುದರಿಂದ ಬ್ರಹ್ಮರಾತಿಯೆಂದು, ನಿತ್ಯ ಅನ್ನದಾನ ಸೂರ್ಯನ ಉಪಾಸನೆಯಿಂದ ವೇದವಾಙ್ಮಯವನ್ನು ಕಂಡುಹಿಡಿದಿದ್ದರಿಂದ ವಾಜಸನೇಯ ಎಂಬ ಹೆಸರೂ, ಸತತವಾದ ಯಜ್ಞಯಾಗಾದಿಗಳಿಂದ ದೇವತೆಗಳನ್ನು ಒಲಿಸಿಕೊಂಡಿದ್ದರಿಂದ ದೈವರಾತರೆಂಬ ಹೆಸರೂ ಅನ್ವರ್ಥವಾಗಿ ಬಂದವು.
ಆದಿತ್ಯದರ್ಶನಕ್ಕಾಗಿ ಅವರು ಹಗಲಿರುಳೂ ಗಾಯತ್ರೀಧ್ಯಾನದಲ್ಲಿ ತೊಡಗಿದರು. ವರ್ಷವಿಡೀ ತಪಶ್ಚರ್ಯೆಯಲ್ಲಿ ಮುಳುಗಿದರು. ಅದೊಂದು ದಿನ ಭಗವಾನ್ ಭಾಸ್ಕರನು ಇವರ ತಪಸ್ಸಿಗೆ ಮೆಚ್ಚಿ ಅಶ್ವರೂಪದಲ್ಲಿ ಪ್ರತ್ಯಕ್ಷನಾಗಿ ವೇದವನ್ನು ಉಪದೇಶಿದನು. ಸೂರ್ಯನಿಂದ ಉಪದೇಶಿಸಲ್ಪಟ್ಟ ಆ ಮಂತ್ರಭಾಗವು ಯಾಜ್ಞವಲ್ಕ್ಯರ ಮುಖದಿಂದ ಪ್ರವಹಿಸತೊಡಗಿತು. ಅದನ್ನು ಅವರ ಶಿಷ್ಯರಾದ ಕಣ್ವ ಮತ್ತು ಮಾಧ್ಯಂದಿನ ಎಂಬ ಇಬ್ಬರು ಅಕ್ಷರಗಳಲ್ಲಿ ಸೆರೆಹಿಡಿದರು. ಈ ವೇದವೇ ಮುಂದೆ ಶುಕ್ಲ ಯರ್ಜುವೇದವೆಂದು ಖ್ಯಾತಿಹೊಂದಿತು. ವೇದಗಳಲ್ಲಿ ಮುಖ್ಯವಾಗಿ ಸಂಹಿತೆ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತೆಂದು ನಾಲ್ಕು ಭಾಗಗಳನ್ನು ಕಾಣುತ್ತೇವೆ. ಒಟ್ಟಿಗೆ ಇದ್ದ ವೇದರಾಶಿಯನ್ನು ಹೀಗೆ ಈ ನಾಲ್ಕು ಭಾಗಗಳಾಗಿ ವಿಂಗಡಿಸಿದವರೇ ಯಾಜ್ಞವಲ್ಕ್ಯರು ಎಂಬ ಪ್ರತೀತಿಯಿದೆ.
ಜೀವನ ಪದ್ಧತಿ ಕಲಿಸುವ ಯಾಜ್ಞವಲ್ಕ್ಯ ಸ್ಮತಿ
ಯಾಜ್ಞವಲ್ಕ್ಯರು ಬ್ರಹ್ಮಜ್ಞಾನದ ಸಂಬಂಧ ಜನಕನ ಆಸ್ಥಾನದಲ್ಲಿ ನಡೆಸಿದ ಪ್ರಶ್ನೋತ್ತರಗಳು ಅವೆಲ್ಲ ಬೃಹದಾರಣ್ಯಕ ಉಪನಿಷತ್ತಿನ ಮುನಿ ಕಾಂಡವೆಂಬ 3ನೇ ಅಧ್ಯಾಯದಲ್ಲಿ ಸಂಗ್ರಹಿತವಾಗಿದೆ. ಪತ್ನಿ ಮೈತ್ರೇಯಿಗೆ ಬೋಧಿಸಿದ ಅಮೃತತ್ವ ಮೋಕ್ಷದ ಬಗೆಗಿನ ಉಪದೇಶಗಳು ಮಹತ್ವದ ಸ್ಥಾನಪಡೆದಿವೆ. ಅವರು ಯಾಜ್ಞವಲ್ಕ್ಯ ಸ್ಮತಿ ಮತ್ತು ಯೋಗಶಾಸ್ತ್ರ ಎಂಬ ಗ್ರಂಥ ರಚಿಸಿದ್ದು, ಯಾಜ್ಞವಲ್ಕ್ಯ ಸ್ಮತಿ ಧರ್ಮಸಮ್ಮತವಾಗಿ ನಿತ್ಯ ಜೀವನ ನಡೆಸುವ ಪರಿಯನ್ನು ಸೂಚಿಸುತ್ತದೆ.
ಜನಕನಿಂದ ಸನ್ಮಾನ
ವೇದದ ಕರ್ಮಾಂಗ ಮತ್ತು ಜ್ಞಾನಾಂಗಗಳೆರಡರಲ್ಲೂ ಅಸೀಮ ಪಾಂಡಿತ್ಯವನ್ನು ಗಳಿಸಿ ಜನಕಮಹಾರಾಜನ ಆಸ್ಥಾನದ ವಿದ್ವಾಂಸರಾಗಿದ್ದ ಯಾಜ್ಞವಲ್ಕ್ಯರು ತ್ರೇತಾಯುಗದಲ್ಲಿ ಮಾನ್ಯವಾಗಿದ್ದ ಯಾಜ್ಞವಲ್ಕ್ಯಸ್ಮತಿಯ ಕರ್ತೃವೂ ಹೌದು. ಯಾಜ್ಞವಲ್ಕ್ಯರ ಸುದೀರ್ಘವಾದ ಚರ್ಚೆ-ಸಂವಾದಗಳು ಬೃಹದಾರಣ್ಯಕೋಪನಿಷತ್ತಿನ ಮುನಿಕಾಂಡದಲ್ಲಿ ನಿರೂಪಿತವಾಗಿವೆ. ರಾಜರ್ಷಿ ಜನಕಮಹಾರಾಜನ ಕುಲಗುರುವಾಗಿದ್ದರು. ಒಮ್ಮೆ ಜನಕನಿಗೆ ಬ್ರಹ್ಮಜ್ಞರಾರೆಂದು ತಿಳಿದುಕೊಳ್ಳುವ ಆಸೆಯಾಯಿತು. ಬಹುದಕ್ಷಿಣಾ ಎಂಬ ಯಜ್ಞಕ್ಕೆ ಕುರುಪಾಂಚಾಲಾದಿಗಳಿಂದ ವಿದ್ವಾಂಸರನ್ನು ಬರ ಮಾಡಿಕೊಂಡ ಪ್ರತಿ ಕೊಂಬಿಗೆ ಚಿನ್ನದ ಹತ್ತು ಪದಕಗಳನ್ನು ಕಟ್ಟಿದ ಸಾವಿರ ಗೋವುಗಳನ್ನು ತೋರಿಸಿ, ಬ್ರಹ್ಮನನ್ನು ಅರಿತವರು ಅವುಗಳನ್ನು ಹೊಡೆದುಕೊಂಡು ಹೋಗಲಿ ಎಂದ. ಯಾಜ್ಞವಲ್ಕ್ಯರು ತಮ್ಮ ಶಿಷ್ಯನನ್ನು ಕರೆದು ಆಶ್ರಮಕ್ಕೆ ಗೋವುಗಳನ್ನು ಹೊಡೆದುಕೊಂಡು ಹೋಗಲು ಅಪ್ಪಣೆ ಮಾಡಿದರು. ಜನಕ ಸಭೆಯಲ್ಲಿ ಯಾಜ್ಞವಲ್ಕ್ಯರು ತಾವು ಬ್ರಹ್ಮಿಷ್ಠರೆಂದು ನೇರವಾಗಿ ಹೇಳಿಕೊಳ್ಳದೆ ವಿದ್ವಾಂಸರು ಒಬ್ಬರ ಪ್ರಶ್ನೆಗಳನ್ನೆಸೆದಾಗ ಅದಕ್ಕೆ ಸಮರ್ಥವಾಗಿ ಉತ್ತರಿಸುತ್ತ ಪರೀಕ್ಷವಾಗಿ ತಾವು ಬ್ರಹ್ಮಿಷ್ಠಪಣಕ್ಕೆ ಯೋಗ್ಯರೆಂದು ತೋರಿಸಿಕೊಟ್ಟರು.
ಸ್ತ್ರೀಗೂ ಬ್ರಹ್ಮಜ್ಞಾನ
ಉಪನಿಷತ್ತುಗಳು ಅನೇಕ. ಅವುಗಳಲ್ಲಿ ಬೃಹದಾರಣ್ಯಕೋಪನಿಷತ್ತು ಒಂದು. ಯಾಜ್ಞವಲ್ಕ್ಯರ ಆತ್ಮತತ್ತ್ವ ಬೋಧೆ ಹೃದಯಂಗಮವಾಗಿ ಪ್ರಕಟಗೊಂಡಿದ್ದು ಇದರಲ್ಲೇ. ಅವರ ಮಡದಿ ಮೈತ್ರೇಯಿ ಆ ಕಾಲದ ಪ್ರಖ್ಯಾತ ಬ್ರಹ್ಮವಾದಿನಿಯಾಗಿದ್ದು ಯಾಜ್ಞವಲ್ಕ್ಯರೊಡನೆ ಆತ್ಮತತ್ತ್ವ ಜಿಜ್ಞಾಸೆಗೆ ಉಪಕ್ರಮಿಸಿದ್ದು ಈ ಉಪನಿಷತ್ತಲೇ. ಅಧ್ಯಾತ್ಮವಿದ್ಯೆಯಂತಹ ಶ್ರೇಷ್ಠ ಅಸಾಧಾರಣ ಬ್ರಹ್ಮವಿದ್ಯೆಯನ್ನು ತಮ್ಮ ಪತ್ನಿ ಮೈತ್ರೇಯಿಗೆ ಬೋಧಿಸಿ, ಸ್ತ್ರೀಯರೂ ಬ್ರಹ್ಮಜ್ಞಾನ ಪಡೆಯಲು ಅರ್ಹರು ಎಂಬ ಕ್ರಾಂತಿಕಾರಕ ಬಿತ್ತಿದ ಮಹಾಪುರುಷ ಯಾಜ್ಞವಲ್ಕ್ಯರು. ಅವರಿಗೆ ಕಾತ್ಯಾಯಿನಿ ಮತ್ತು ಮೈತ್ರೇಯಿ ಎಂಬ ಇಬ್ಬರು ಪತ್ನಿಯರಿದ್ದರು. ತಮ್ಮ ಜೀವಿತಕಾಲದಲ್ಲಿ ರಾಜಮಾನ್ಯರಾಗಿ ಅನೇಕವಿಧವಾದ ಸಂಪತ್ತು – ಸಮೃದ್ಧಿಯನ್ನು ಗಳಿಸಿದವರಾದರೂ ತಮ್ಮ ಬದುಕಿನ ಉತ್ತರಾರ್ಧಕಾಲದಲ್ಲಿ ತಮ್ಮ ಮಡದಿಯಾದ ಮೈತ್ರೇಯಿ ಮತ್ತು ಕಾತ್ಯಾಯನಿಯರಿಗೆ ಸಂಪತ್ತನ್ನು ಹಂಚಿ ವಾನಪ್ರಸ್ಥರಾಗುವುದಕ್ಕೆ ಯಾಜ್ಞವಲ್ಕ್ಯರು ನಿರ್ಣಯಿಸುತ್ತಾರೆ.
ಜೇಷ್ಠಪತ್ನಿಯಾದ ಮೈತ್ರೇಯಿಯು ಪತಿಯಲ್ಲಿ ಅಮೃತ ತತ್ತ್ವವನ್ನು ಹೊಂದುವ ಬಗೆಯನ್ನು ಅಪೇಕ್ಷಿಸಿದಾಗ ಮಹರ್ಷಿಗಳಿಗೆ ಸಂತೋಷವಾಗಿ ಪತ್ನಿಗೆ ತತ್ತ್ವಬೋಧೆ ಮಾಡುತ್ತಾರೆ.
ಯಾಜ್ಞವಲ್ಕ್ಯರ ಕೊಡುಗೆ ಕೇವಲ ಧರ್ಮಶಾಸ್ತ್ರ ಮತ್ತು ಮಾತ್ರವಲ್ಲದೇ ಖಗೋಳಶಾಸ್ತ್ರಕ್ಕೂ ಸಂದಿದೆಯೆಂದು ಶತಪಥಬ್ರಾಹ್ಮಣವು ಹೇಳುತ್ತದೆ. ಅಧ್ಯಾತ್ಮಿಕ ಪ್ರಪಂಚದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಯಾಜ್ಞವಲ್ಕ್ಯರ ಶ್ರೇಷ್ಠ ತತ್ತ್ವಗಳನ್ನು, ಅವರನ್ನು ಅರ್ಥಪೂರ್ಣ ರೀತಿಯಲ್ಲಿ ಸ್ಮರಿಸಿಕೊಳ್ಳುವುದೇ ನಿಜವಾದ ಜಯಂತಿ ಆಚರಣೆ ಎನಿಸುತ್ತದೆ.
ಪ್ರಾತರ್ದ್ಯೂತಪ್ರಸಂಗೇನ ಮಧ್ಯಾಹ್ನೇ ಸ್ತ್ರೀಪ್ರಸಂಗತ: |
ರಾತ್ರೌ ಚೋರಪ್ರಸಂಗೇನ ಕಾಲೋ ಗಚ್ಛತಿ ಧೀಮತಾಮ್ ||
ಬೆಳಗ್ಗೆ ಮಹಾಭಾರತ, ಮಧ್ಯಾಹ್ನ ರಾಮಾಯಣ ಹಾಗೂ ರಾತ್ರಿ ಶ್ರೀಮದ್ಭಾಗವತಾಮೃತಗಳ ರಸಾಸ್ವಾದನೆಯಿಂದ ಬುದ್ಧಿವಂತರು ಕಾಲಯಾಪನೆ ಮಾಡುತ್ತಾರೆ.
ಪುರಾಣನ್ಯಾಯಮೀಮಾಂಸಾ: ಧರ್ಮಶಾಸ್ತ್ರಾಂಗಮಿಶ್ರಿತಾ: |
ವೇದಾ: ಸ್ಥಾನಾನಿ ವಿದ್ಯಾನಾಂ ಧರ್ಮಸ್ಯ ಚ ಚತುರ್ದಶ ||
೧)ಪುರಾಣಸಮೂಹ(ಅಷ್ಟಾದಶಪುರಾಣೋಪಪುರಾಣೌಪಪುರಾಣಗಳು),
೨)ಷಡ್ದರ್ಶನಗಳು(ಕಪಿಲನ ಸಾಂಖ್ಯ, ಪತಂಜಲಿಯ ಯೋಗ, ಗೌತಮನ ನ್ಯಾಯ, ಕಣಾದನ ವೈಶೇಷಿಕ, ಜೈಮಿನಿಯ ಪೂರ್ವಮೀಮಾಂಸಾ, ಬಾದರಾಯಣವ್ಯಾಸನ ಉತ್ತರಮೀಮಾಂಸಾ/ವೇದಾಂತ/ಬ್ರಹ್ಮಸೂತ್ರಗಳು- ಒಟ್ಟು ೬),
೩)ಸ್ಮೃತಿ-ಉಪಸ್ಮೃತಿಗಳು(ಧರ್ಮಶಾಸ್ತ್ರಗಳು),
೪)ವೇದಾಂಗ ಶಿಕ್ಷಾ(ಪಾಣಿನೀಯಶಿಕ್ಷಾ ಮುಂತಾದವು)
೫)ವೇದಾಂಗ ವ್ಯಾಕರಣ(ಪಾಣಿನೀಯ ಅಷ್ಟಾಧ್ಯಾಯೀ ಸೂತ್ರಗಳೇ ಮುಂತಾದವು)
೬)ವೇದಾಂಗ ಛಂದಸ್(ಪಿಂಗಳಾಚಾರ್ಯತಕೃತ),
೭)ವೇದಾಂಗ ನಿರುಕ್ತ(ಯಾಸ್ಕಮುನಿ ವಿರಚಿತ ವೈದಿಕ ಶಬ್ದಕೋಷ),
೮)ವೇದಾಂಗ ಜ್ಯೋತಿಷ,
೯)ವೇದಾಂಗ ಕಲ್ಪ/ಕಲ್ಪಸೂತ್ರಗಳು(ಬೌಧಾಯನ, ಆಶ್ವಲಾಯನಾದಿ ವಿವಿಧ ಸೂತ್ರಪ್ರವರ್ತಕ ಋಷಿಮುನಿಪ್ರಣೀತ ಶ್ರೌತಸೂತ್ರಗಳು, ಧರ್ಮಸೂತ್ರಗಳು, ಗೃಹ್ಯಸೂತ್ರಗಳು ಮತ್ತು ಶುಲ್ಬಸೂತ್ರಗಳು),
೧೦)ಋಗ್ವೇದ(ಛಂದೋಮಯ ಪದ್ಯರೂಪದ ದೇವತಾಸ್ತುತಿಪರ ಋಕ್ಕುಗಳು) ಹಾಗೂ ಇದರ ಉಪವೇದವಾದ ಆಯುರ್ವೇದ,
೧೧)ಯಜುರ್ವೇದ(ಯಜ್ಞಪರವಾದ ಛಂದ:ಪ್ರಧಾನವಲ್ಲದ ನಿಗದ/ಗದ್ಯ/ಯಜುಸ್ಸುಗಳು) ಹಾಗೂ ಇದರ ಉಪವೇದವಾದ ಧನುರ್ವೇದ,
೧೨)ಸಾಮವೇದ(ದೇವತೋಪಾಸನಾಪರ ಸಪ್ತಸ್ವರಮಯ ಗಾಯನರೂಪೀ ಸಾಮನ್ ಗಳು) ಹಾಗೂ ಇದರ ಉಪವೇದವಾದ ಗಾಂಧರ್ವವೇದ(ಸಂಗೀತಶಾಸ್ತ್ರದ ಮೂಲ),
೧೩)ಅಥರ್ವವೇದ(ಲೌಕಿಕವಿಜ್ಞಾನ,ವಾಸ್ತು,ಔಷಧಿ,ಚಿಕಿತ್ಸೆ,ಮಂತ್ರವಾದ,ತಾಂತ್ರಿಕವಿಚಾರಪ್ರಧಾನ ಮಂತ್ರಗಳು) ಹಾಗೂ ಇದರ ಉಪವೇದವಾದ ಸ್ಥಾಪತ್ಯವೇದ/ವಾಸ್ತುಶಾಸ್ತ್ರ,
೧೪)ಪಂಚಮವೇದವೆನಿಸಿರುವ ವ್ಯಾಸಮಹಾಭಾರತ, ವಾಲ್ಮೀಕಿ ರಾಮಾಯಣಾದಿ ಇತಿಹಾಸಗಳು ಹಾಗೂ ನಾರದಪಾಂಚರಾತ್ರಾದಿ ಆಗಮಶಾಸ್ತ್ರಗಳು.
ಇವು ೧೪, ಧರ್ಮದ ಮತ್ತು ವಿದ್ಯೆಗಳ ಮೂಲಸ್ಥಾನಗಳು ಎಂಬುದು, ಇಡಿಯ ಶುಕ್ಲಯಜುರ್ವೇದದ ದ್ರಷ್ಟಾರರಾದ, ಸ್ಮೃತಿಕಾರರೂ ಆಗಿರುವ ಬ್ರಹ್ಮಜ್ಞಾನಿ ಯಾಜ್ಞವಲ್ಕ್ಯರ ಅಭಿಮತ.
******
Excellent... Everywhere "I" takes the placement in one or the other form... That is why the Great Sage "ಯಾಜ್ಞವಲ್ಕ್ಯ" Give a wonderful statement which really touches the core of Heart...
ಯಾಜ್ಞವಲ್ಕ್ಯರಿಗೆ ಇಬ್ಬರು ಹೆಂಡತಿಯರು, ಒಬ್ಬಳು ಕಾತ್ಯಾಯನಿ ಮತ್ತೊಬ್ಬಳು ಮೈತ್ರೇಯಿ.. ಯಾಜ್ಞವಲ್ಕ್ಯರು ಬಹಳ ದೊಡ್ಡ ಋಷಿಗಳು, ಅವರು ಎಷ್ಟು ದೊಡ್ಡ ಜ್ಞಾನಿ ಎಂದರೆ, ಸೂರ್ಯನಾರಾಯಣನಿಂದಲೇ ನೇರವಾಗಿ ವೇದಮಂತ್ರಗಳ ಉಪದೇಶ ಪಡೆದಂತಹ ಮಹಾನುಭಾವರು, ಆ ವೇದ ಭಾಗವೇ ಮುಂದೆ ಶುಕ್ಲ ಯಜುರ್ವೇದ ಎಂದು ಪ್ರಸಿದ್ದಿ ಪಡೆಯಿತು... ಕಣ್ವ ಮತ್ತು ಮಧ್ಯಂದಿನ ಇಬ್ಬರು ಯಾಜ್ಞವಲ್ಕ್ಯರ ಶಿಷ್ಯರು... ಅವರಿಂದ ಬೆಳೆದು ಬಂದ ಶುಕ್ಲಯಜುರ್ವೇದ ಎರಡು ಕವಲಾಯಿತು ಅದನ್ನೇ ಕಾಣ್ವಶಾಖೆ ಮತ್ತು ಮಾಧ್ಯಂದಿನಶಾಖೆ ಅಂತಾರೆ... ನಮ್ಮಲ್ಲಿ ಇತಿಹಾಸ ತಿಳಿಯದೇ ಅದೆಷ್ಟೋ ಮಂದಿ ತಪ್ಪು ಕಲ್ಪನೆಯನ್ನು ತಾವು ಮಾಡಿಕೊಂಡದ್ದಲ್ಲದೆ ಸಮಾಜದಲ್ಲೂ ಬಿತ್ತುತ್ತಾರೆ... ಮಾಧ್ಯಂದಿನ ಶಾಖೆಯ ಬ್ರಾಹ್ಮಣರನ್ನು ತಪ್ಪಾಗಿ ಮಧ್ಯಾಹ್ನದ ಬ್ರಾಹ್ಮಣರು ಎಂದು ಕರೆಯುವ ಒಂದು ಸಂಪ್ರದಾಯವೇ ಬೆಳೆದು ಬಂದಿದೆ...
ಯಾಜ್ಞವಲ್ಕ್ಯರು, ವೇದವ್ಯಾಸರ ನೇರ ಶಿಷ್ಯರಾದ ವೈಶಂಪಾಯನರ ಶಿಷ್ಯ... ಒಮ್ಮೆ ವೈಶಂಪಾಯನರ ಆಶ್ರಮದಲ್ಲಿ ಒಂದು ಘಟನೆ ನಡೆಯುತ್ತದೆ... ಒಮ್ಮೆ ವೈಶಂಪಾಯನರಿಗೆ ಒಂದು ಬ್ರಹ್ಮಹತ್ಯಾ ದೋಷ ಬಂತು... ಅದೂ ಕೂಡ ಅವರಿಂದ ಉದ್ದೇಶ ಪೂರ್ವಕವಾಗಿ ಆದದ್ದಲ್ಲ... ಹಿಮಾಲಯದ ಎತ್ತರದ ಶಿಖರ ಭಾಗಗಳಲ್ಲಿ ವೈಶಂಪಾಯನರು ಶಿಷ್ಯರೊಂದಿಗೆ ಸಂಚರಿಸುತ್ತಿದ್ದಾಗ ದಾರಿ ಮಧ್ಯದಲ್ಲಿ ಅಕಸ್ಮಾತ್ ಇವರ ಮೈಗೆ ತಾಗಿ ಒಬ್ಬ ಶಿಷ್ಯ ಪ್ರಪಾತದ ಗಂಗೆಯಲ್ಲಿ ಬಿದ್ದು ಸತ್ತುಹೋದ... ಆ ಕಹಿ ಘಟನೆಯಿಂದ ಮನನೊಂದ ವೈಶಂಪಾಯನರು ಆಶ್ರಮಕ್ಕೆ ಬಂದು ತಮ್ಮ ಎಲ್ಲ ಶಿಷ್ಯರ ಬಳಿ ಒಂದು ವಿನಂತಿ ಮಾಡುತ್ತಾರೆ ಎಲ್ಲ ಸೇರಿ ತನಗೆ ಬಂದ ಬ್ರಹ್ಮಹತ್ಯಾ ದೋಷಕ್ಕೆ ಒಂದು ಪ್ರಾಯಶ್ಚಿತ್ತ ಮಾಡಬೇಕು ಅಂತ... ಆಗ ಯಾಜ್ಞವಲ್ಕ್ಯರು ಹೇಳ್ತಾರೆ ಗುರುಗಳೇ, ಸಮ್ಮನೆ ಯಾಕೆ ಎಲ್ಲರಿಗೂ ತೊಂದರೆ ನಾನೊಬ್ಬನೇ ನಿಮ್ಮ ಪರವಾಗಿ ಪ್ರಾಯಶ್ಚಿತ್ತ ಮಾಡುತ್ತೇನೆ ದಯವಿಟ್ಟು ಅನುಮತಿ ಕೊಡಿ ಅಂತಾರೆ...
ಆಗ ವೈಶಂಪಾಯನರು ಸಿಟ್ಟಿಗೆದ್ದವರಂತೆ, ಏನು ಅಷ್ಟೊಂದು ಅಹಂಕಾರವೋ ನಿನಗೆ, ಹಾಗಿದ್ದರೆ ನನ್ನಿಂದ ಕಲಿತ ಎಲ್ಲ ವಿದ್ಯೆಯನ್ನು ಇಲ್ಲಿಯೇ ಬಿಟ್ಟು ಆಶ್ರಮದಿಂದ ಹೊರಟುಹೋಗು ಅಂತಾರೆ... ಆಗ ಯಾಜ್ಞವಲ್ಕ್ಯರು ಕಲಿತ ಎಲ್ಲ ವೇದವಿದ್ಯೆಯನ್ನೂ ಅಲ್ಲಿಯೇ ಕಾರಿಹೋದರು ಅಂತಿದೆ.. ಕಲಿತ ವಿದ್ಯೆಯನ್ನು ಕಾರುವುದು ಹೇಗೆ ಸಾಧ್ಯ...? ಅದರ ಅರ್ಥ ಯಾಜ್ಞವಲ್ಕ್ಯರಿಂದ ಹೊಸ ವೇದಭಾಗ ಆವಿಷ್ಕಾರವಾಗಬೇಕಿತ್ತು ಅದಕ್ಕಾಗಿ ವೈಶಂಪಾಯನರು ಕೂಡ ಸಿಟ್ಟಿಗೆದ್ದವರಂತೆ ನಟಿಸಿದರು... ವೇದವಿದ್ಯೆಯನ್ನು ಕಾರುವುದು ಎಂದರೆ ವೈಶಂಪಾಯನರಿಂದ ಕಲಿತ ವೇದವಿದ್ಯೆಯನ್ನು ಬಿಟ್ಟು ತಾವೇ ಭಗವಂತನಿಂದ (ವಾಜಸನೇಯ) ಕುದುರೆಯ ರೂಪದಿಂದ ಭಗವಂತ ಯಾಜ್ಞವಲ್ಕ್ಯರಿಗೆ ವೇದವಿದ್ಯೆಯನ್ನು ಉಪದೇಶಮಾಡಿದ ಅಂತಾರೆ... ಅದೆ ಶುಕ್ಲಯಜುರ್ವೇದ ಎನಿಸಿಕೊಂಡಿದೆ... ಕೃಷ್ಣದ್ವೈಪಾಯನರಿಂದ ಮೊದಲೇ ಇದ್ದ ಯಜುರ್ವೇದವೇ ಕೃಷ್ಣ ಯಜುರ್ವೇದ ಎನಿಸಿದೆ...
ಇಂತಹ ಮಹಾನ್ ಜ್ಞಾನಿ ಯಾಜ್ಞವಲ್ಕ್ಯರು.... ಅವರಿಗೆ ಒಮ್ಮೆ ಭಗವಂತನನ್ನು ಏಕಾಂತದಲ್ಲಿ ಉಪಾಸನೆ ಮಾಡಬೇಕು ಎಂದು ಕಂಡಿತು ಆಗ ತಮ್ಮ ಇಬ್ಬರು ಮಡದಿಯರನ್ನೂ ಕರೆದು ತಮ್ಮ ಶಿಷ್ಯ ಸಂಪತ್ತು, ಗೋಸಂಪತ್ತು ಆಶ್ರಮದ ಎಲ್ಲದರ ಜವಾಬ್ದರಿಯನ್ನೂ ಅವರೀರ್ವರಿಗೆ ವಹಿಸಿ ತಾವು ಹೊರಡಲು ಸಿದ್ಧರಾದರು... ಯಾಜ್ಞವಲ್ಕ್ಯರ ಮಾತನ್ನು ಅಪ್ಪಣೆಯಾಗಿ ಸ್ವೀಕರಿಸಿದ ಕಾತ್ಯಾಯನಿ ಆಶ್ರಮ ನೋಡಿಕೊಳ್ಳಲು ಸಿದ್ಧಳಾದಳು ಆದರೆ ಮೈತ್ರೇಯಿ ಯಾಜ್ಞವಲ್ಕ್ಯರನ್ನು ಪ್ರಶ್ನೆ ಮಾಡ್ತಾಳೆ.... ಇಷ್ಟು ವರ್ಷಗಳ ಕಾಲ ನೀವೇ ಪ್ರೀತಿಯಿಂದ ಕಟ್ಟಿದ ಶಿಷ್ಯಸಂಪತ್ತು, ಗೋ ಸಂಪತ್ತು ಎಲ್ಲವನ್ನೂ ಎಲ್ಲವನ್ನೂ ಬಿಟ್ಟುಹೋಗಲು ಕಾರಣವೇನು ಅಂತಾಳೆ... ? ಆದಕ್ಕೆ ಯಾಜ್ಞವಲ್ಕ್ಯರು ತಾವು ಇವೆಲ್ಲಕ್ಕಿತಲೂ ಉನ್ನತವಾದ ಸಂಪತ್ತನ್ನು ತಾನು ಅರಸಿ ಹೋಗುತ್ತಿರುವುದಾಗಿ ತಿಳಿಸಿ ಆ ಸಾಧನೆಯಲ್ಲಿ ಯಾವ ಅಡೆತಡೆಯೂ ಇರಬಾರದಾಗಿ ಎಲ್ಲವನ್ನೂ ತೊರೆದು ಹೋಗುತ್ತಿರುವುದಾಗಿ ತಿಳಿಸುತ್ತಾರೆ... ಆಗ ಮೈತ್ರೇಯಿ ಹಾಗಾದರೆ ಅಂತಹ ಸಂಪತ್ತಿನಿಂದ ನಮ್ಮನ್ನು ಏಕೆ ವಂಚಿತರನ್ನಾಗಿ ಮಾಡುತ್ತಿದ್ದೀರಾ... ? ಅಂತಾಳೆ. ಅದಕ್ಕೆ ಯಾಜ್ಞವಲ್ಕ್ಯರು ಗಂಡ ಹೆಂಡತಿ ಎಂಬ ಸಂಬಂಧ ಕೂಡ ತನ್ನ ಸಾಧನೆಗೆ ತೊಡಕಾಗಬಹುದು ಅಂತಾರೆ... ಆದರೂ ಪಟ್ಟುಬಿಡದ ಮೈತ್ರೇಯಿ ಕೊನೆಗೆ ಹೆಂಡತಿಯ ಸ್ಥಾನ ತೊರೆದು ಯಾಜ್ಞವಲ್ಕ್ಯರಿಂದಲೇ ಶಿಷ್ಯತ್ವ ಪಡೆದು, ಯಾಜ್ಞವಲ್ಕ್ಯರ ಜೊತೆಗೆ ಶಿಷ್ಯೆಯಾಗಿ ಸಾಧನೆಗಾಗಿ ತೆರಳುತ್ತಾಳೆ...
ಆಗ ಯಾಜ್ಞವಲ್ಕ್ಯರು ದಾಂಪತ್ಯದ ಮುಖದಲ್ಲೂ ಇರುವ ಮನುಷ್ಯನ ಸ್ವಾರ್ಥದ ಮುಖವನ್ನು ತೆರೆದು ತೋರುತ್ತಾರೆ....
******
ಕ್ರಿ.ಪೂ. 800ರ ಸುಮಾರಿನಲ್ಲಿ ರಚಿತವಾದ ವೇದಗಳ ಋಕ್ಕುಗಳಲ್ಲಿ ಮೈತ್ರೇಯಿ ಹೆಸರು ಉಲ್ಲೇಖಿತವಾಗಿದೆ. ಋಷಿ ಯಾಜ್ಞವಲ್ಕ ್ಯ ಇಬ್ಬರು ಪತ್ನಿಯರಲ್ಲಿ ಮೈತ್ರೇಯಿ ಮೊದಲಿನವಳು. ಇನ್ನೊಬ್ಬಳ ಹೆಸರು ಕಾತ್ಯಾಯಿನಿ. ಋಗ್ವೇದದ 10 ಋಕ್ಕುಗಳು ಇವಳಿಂದ ರಚಿತವಾಗಿದೆಯೆಂದು ತಿಳಿದುಬರುತ್ತದೆ. ಪತಿಯ ವಿಚಾರದಲ್ಲಿ ಬಹಳ ಗೌರವವುಳ್ಳವಳು ಈಕೆ. ಸವತಿ ಕಾತ್ಯಾಯಿನಿಯ ಜತೆ ಯಾವುದೇ ಮನಸ್ತಾಪವಿಲ್ಲದೆ ಬದುಕು ಸಾಗಿಸಿದವಳು. ಬ್ರಹ್ಮಜ್ಞಾನಿಯೂ, ತತ್ವಶಾಸ್ತ್ರಜ್ಞಳೂ ಆದ ಮೈತ್ರೇಯಿಯ ಋಕ್ಕುಗಳಲ್ಲಿ ಪತಿಯಾದ ಯಾಜ್ಞವಲ್ಕ ್ಯನ್ನು ಅತಿಶಯವಾಗಿ ಹೊಗಳುವ, ಕೊಂಡಾಡುವ ವಿಚಾರವಿದೆ. ಕಾತ್ಯಾಯಿನಿ ಒಬ್ಬ ಸಾಮಾನ್ಯ ಗೃಹಿಣಿಯಾಗಿ ಬದುಕಿದರೆ ಮೈತ್ರೇಯಿ ವೇದಕಾಲದ ಅತಿ ಶ್ರೇಷ್ಠ ಬ್ರಹ್ಮವಾದಿನಿಯೂ ಮಂತ್ರದ್ರಷ್ಟ್ರಾರಳೂ ಆಗಿ ಪ್ರಸಿದ್ಧಳಾಗಿದ್ದಾಳೆ.
ಮೈತ್ರೇಯಿಯ ಸಾಂಸಾರಿಕ ಬದುಕಿನಲ್ಲಿ ನಡೆದ ಕುತೂಹಲಕರ ಹಾಗೂ ವಿಚಾರಪ್ರದವಾದ ಘಟನೆಯೊಂದು ಹೀಗಿದೆ. ಪತಿ ಯಾಜ್ಞವಲ್ಕ ್ಯ ರು ಸಂಸಾರದಿಂದ ದೂರವಾಗಿ ಸಂಪೂರ್ಣ ಸನ್ಯಾಸತ್ವವನ್ನು ಹೊಂದುವ ನಿಶ್ಚಯ ಮಾಡಿದ ಸಂದರ್ಭ ಅದು. ಸನ್ಯಾಸತ್ವ ಸ್ವೀಕರಿಸುವ ಮುನ್ನ ತಮ್ಮ ಲೌಕಿಕ ಸಂಪತ್ತುಗಳನ್ನು ಇಬ್ಬರು ಮಡದಿಯರಿಗೂ ಹಂಚಿಕೊಡುವ ಯೋಚನೆ ಮಾಡಿದ ಅವರು ಮನಸ್ಸಿನ ಇಂಗಿತವನ್ನು ಮಡದಿಯರಿಗೆ ತಿಳಿಸುತ್ತಾರೆ. ಆಗ ಮೈತ್ರೇಯಿ ಗಂಡನಲ್ಲಿ ಒಂದು ಪ್ರಶ್ನೆ ಕೇಳುತ್ತಾಳೆ, ‘ನೀವು ಕೊಡುವ ಈ ಸಂಪತ್ತು ನನ್ನನ್ನು ಚಿರಂಜೀವಿಯನ್ನಾಗಿ ಮಾಡುತ್ತದೆಯೇ? ಆಗ ಋಷಿ ಉತ್ತರಿಸುತ್ತಾರೆ, ‘ಸಂಪತ್ತು ಯಾವತ್ತೂ ಯಾರನ್ನೂ ಚಿರಂಜೀವಿಯನ್ನಾಗಿ ಮಾಡುವುದಿಲ್ಲ. ಅದರಿಂದ ವ್ಯಕ್ತಿಯ ಶ್ರೀಮಂತಿಕೆ ಮಾತ್ರ ಹೆಚ್ಚುತ್ತದೆ’. ಅದಕ್ಕೆ ಅವಳು ‘ಹಾಗಿದ್ದರೆ ನನಗೆ ಬೇಕಾದುದು ಈ ನಶ್ವರವಾದ ಲೌಕಿಕ ಸಂಪತ್ತಲ್ಲ. ನಾನು ಶಾಶ್ವತವಾದ ಐಶ್ವರ್ಯವನ್ನು ಆಸೆಪಡುತ್ತಿದ್ದೇನೆ. ಅದನ್ನು ದಯಪಾಲಿಸಿ’ ಎಂದು ಕೇಳುತ್ತಾಳೆ.
ಮಡದಿಯ ಮಾತಿನಿಂದ ಸುಪ್ರೀತರಾದ ಋಷಿ ಅವಳನ್ನು ಆಧ್ಯಾತ್ಮದತ್ತ ಕರೆದೊಯ್ಯುತ್ತಾರೆ. ತಮ್ಮ ಜ್ಞಾನದಲ್ಲಿ ಸಹಭಾಗಿತ್ವ ನೀಡಿ ಆಕೆಯನ್ನು ಜ್ಞಾನಲೋಕದಲ್ಲಿ ಅಜರಾಮರಳಾಗುವಂತೆ ಮಾಡುತ್ತಾರೆ. ಹೀಗೆ ಸಾಂಸಾರಿಕ ಭೋಗಭಾಗ್ಯಗಳನ್ನು ತ್ಯಜಿಸಿ ಗಂಡನೊಂದಿಗೆ ಸನ್ಯಾಸತ್ವದ ದೀಕ್ಷೆ ಸ್ವೀಕರಿಸಿದ ಮಹಾಪತಿವ್ರತೆ ಮೈತ್ರೇಯಿ ವಿದ್ಯಾವಂತಳಾಗಿ ವೇದಜ್ಞಾನದ ಉತ್ತುಂಗ ಶಿಖರಕ್ಕೇರಿ ಮಹಾ ಮಹಿಳೆ ಎನಿಸಿಕೊಂಡಳು. ಸಂಸಾರಿಯಾಗಿದ್ದಾಗಲೂ ಗಂಡನೊಂದಿಗೆ ಯಾವುದೇ ಕೋಪತಾಪಗಳಿಲ್ಲದೆ ಸವತಿಯೊಂದಿಗೆ ದಾಂಪತ್ಯ ಜೀವನ ಹಂಚಿಕೊಂಡು ಸಂತೋಷವಾಗಿಯೇ ಇದ್ದಳು. ಹಾಗೆಯೇ, ಅವನೊಂದಿಗೆ ಸನ್ಯಾಸವನ್ನೂ ಸಂತೋಷವಾಗಿಯೇ ಸ್ವೀಕರಿಸಿ ಆದರ್ಶ ಮಹಿಳೆಯರ ಸರಣಿಯಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾಳೆ.
********
ಯಜ್ಞವಲ್ಕ ಹಾಗೂ ಮೈತ್ರೇಯಿ
ಬೃಹದಾರಣ್ಯಕೋಪನಿಷತ್ತೆಂಬುದೊಂದು ಪ್ರಮುಖವಾದ ಉಪನಿಷತ್ತು. ಅದರ ಕರ್ತೃ ಯಾಜ್ಞವಲ್ಕ್ಯ ಋಷಿಗಳು.
ಯಾಜ್ಞವಲ್ಕ್ಯ ಮಹರ್ಷಿಗಳಿಗೆ ಇಬ್ಬರು ಪತ್ನಿಯರು. ಒಬ್ಬಳು ಮೈತ್ರೇಯಿ ಮತ್ತೊಬ್ಬಳು ಕಾತ್ಯಾಯಿನಿ ಅವರೊಂದಿಗೆ ಮಹರ್ಷಿಗಳು ಬಹಳಷ್ಟು ಕಾಲ ಸುಖ ಸಂಸಾರ ನಡೆಯಿಸಿಕೊಂಡಿದ್ದರು.
ಸಾಂಸಾರಿಕ ಜೀವನದಲ್ಲಿ ಗಳಿಸಿದ್ದ. ಅಪಾರ ಸಂಪತ್ತನ್ನು ತ್ಯಜಿಸಿ ಸಂನ್ಯಾಸಿಯಾಗಿ ತಪಸ್ಸು ಮಾಡಲು ಮನೆ ಬಿಟ್ಟುಹೋಗುವ ನಿರ್ಣಯ ಮಾಡಿಕೊಂಡು ತಾವು ಆವರೆವಿಗೆ ಗಳಿಸಿದ್ದ ಸಮಷ್ಠಿ ಸಂಪತ್ತನ್ನೆಲ್ಲ ಎರಡು ಭಾಗವಾಗಿ ವಿಭಾಗಿಸಿ ತಮ್ಮ ಇಬ್ಬರು ಪತ್ನಿಯರನ್ನು ಕರೆದು ತಮ್ಮ ತಮ್ಮ ಭಾಗವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದರು.
ಅವರಲ್ಲಿ ಒಬ್ಬಳಾದ ಕಾತ್ಯಾಯಿನಿಯು ತನ್ನ ಭಾಗದ ಸಂಪತ್ತನ್ನು ತಾನು ತೆಗೆದುಕೊಂಡು ಹೋದಳು. ಇನ್ನು ಎರಡನೆಯ ಧರ್ಮಪತ್ನಿಯಾದ ಮೈತ್ರೇಯಿಯಾದರೋ ಹಾಗೆ ಮಾಡಲಿಲ್ಲ. ಆಕೆಯು ವಿಚಾರ ಪರಳಾಗಿದ್ದುದರಿಂದ ತನ್ನಲ್ಲಿಯೇ ಹೀಗೆ ಯೋಚಿಸಿಕೊಂಡಳು.
‘ತನ್ನ ಪತಿಯು ಇಷ್ಟೊಂದು ಅಪಾರವಾದ ಲೌಕಿಕ ಸಂಪತ್ತನ್ನು ಬಿಟ್ಟು ಹೋಗುತ್ತಿದ್ದಾರೆಂದರೆ ಇದರಿಂದ ಯಾವ ಮನಃ ಶಾಂತಿಯೂ ಇಲ್ಲವೆಂದೇ ತಾನೇ ಅರ್ಥ!? ತನ್ನ ಪತಿ ದೇವರಿಗೆ ಶಾಂತಿಯನ್ನು ನೀಡದಿದ್ದ ಈ ಲೌಕಿಕ ಸಂಪತ್ತು ಇನ್ನು ನನಗೆ ಹೇಗೆ ತಾನೇ ಶಾಂತಿಯನ್ನು ನೀಡೀತು? ಅವರಿಗೇ ಬೇಡವಾಗಿರುವ ಸಂಪತ್ತು ಇನ್ನು ನನಗಾದರೂ ಏಕೆ ಬೇಕು? ಅದು ನನಗೆ ಬೇಡವೇ ಬೇಡ!’ ವೆಂದು ತನ್ನಲ್ಲಿಯೇ ಅಲೋಚಿಸಿಕೊಂಡಳು.
ಯಾಜ್ಞವಲ್ಕ್ಯರು ‘ಮೈತ್ರೇಯಿ! ನಾನೀಗ ಈ ಗೃಹಸ್ಥಾಶ್ರಮವನ್ನು ಬಿಡಲು ನಿಶ್ಚಯಿಸಿದ್ದೇನೆ. ಆದ್ದರಿಂದ ನಿನಗೂ ಕಾತ್ಯಾಯಿನಿಗೂ ಇರುವ ನನ್ನ ಸಂಬಂಧವನ್ನು ಪರಿಸಮಾಪ್ತಿಗೊಳಿಸಿಕೊಳ್ಳುವ ದೃಢ ಸಂಕಲ್ಪ ಮಾಡಿದ್ದೇನೆ. ನಿಮ್ಮಿಬ್ಬರ ಭಾವೀ ಭವಿಷ್ಯಕ್ಕಾಗಿ ನನ್ನ ಅಪಾರ ಲೌಕಿಕ ಸಂಪತ್ತನ್ನು ನಿಮ್ಮಿಬ್ಬರಿಗೂ ಸಮನಾಗಿ ಹಂಚಿಕೊಡುವ ವ್ಯವಸ್ಥೆ ಮಾಡಿದ್ದೇನೆ. ನಿನ್ನ ಭಾಗದ ಆಸ್ತಿಯನ್ನು ನೀನು ತೆಗೆದುಕೊಂಡು ಹೋಗು.’ ಮೈತ್ರೇಯಿ ‘ಹೇ ಭಗವಾನ್! ನೀವು ನನಗೆ ನೀಡ ಬಯಸಿರುವ ಧನ ಕನಕಗಳು ನನಗೆ ಅಮೃತತ್ವವನ್ನು ದಯಪಾಲಿಸುವುದೇ?
ಯಾಜ್ಞವಲ್ಕ್ಯರು ‘ಇಲ್ಲಿ ಉಪಕರಣಗಳ್ಳುಳ್ಳ ಜೀವಿತವು ಹೇಗಿರುವುದೋ ಹಾಗೆಯೇ ನಿನ್ನ ಜೀವಿತವೂ ಆಗುವುದು.
ಆದರೆ ಧನದ ಮೂಲಕ ಅಮೃತತ್ವದ ಸಿದ್ಧಿಯು ಎಂದಿಗೂ ಆಗಲಾರದು. ಮೈತ್ರೇಯಿ ‘ಯಾವುದರಿಂದ ನಾನು ಅಮೃತಳಾಗುವುದಿಲ್ಲವೋ ಆ ಧನದಿಂದ ನನಗೆ ಪ್ರಯೋಜನವಾದರೂ ಏನು? ನೀವು ನನಗಾಗಿ ಕೊಡಬಯಸಿರುವ ಈ ನಶ್ವರ ಪ್ರಾಪಂಚಿಕ ಧನ ಸಂಪತ್ತನ್ನು ತೆಗೆದುಕೊಂಡು ನಾನೇನು ಮಾಡಲಿ? ಹೇ ಭಗವಾನ್ ನೀವು ಯಾವುದನ್ನು ಅರಿತುಕೊಂಡಿರುವಿರೋ ಅದನ್ನು ದಯಮಾಡಿ ನನಗೆ ಉಪದೇಶಿಸಿ, ನನ್ನನ್ನು ಉದ್ಧಾರ ಮಾಡಬೇಕು. ಯಾಜ್ಞವಲ್ಕ್ಯ ‘ಎಲೈ ಮೈತ್ರೇಯಿ! ಹಿಂದೆಯೂ ನೀನು ನನಗೆ ಪ್ರಿಯಳಾಗಿದ್ದೆ. ಈಗ ನನಗೆ ಪ್ರಿಯವಾದುದನ್ನೇ ಕುರಿತು ಮಾತನಾಡುತ್ತಿದ್ದೀಯೆ, ತುಂಬಾ ಸಂತೋಷ. ಬಾ ಕುಳಿತುಕೋ. ನಿನಗೆ ಬ್ರಹ್ಮವಿದ್ಯೆಯನ್ನು ವ್ಯಾಖ್ಯಾನ ಮಾಡುತ್ತೇನೆ. ಅದನ್ನೆಲ್ಲಾ ಏಕಾಗ್ರವಾಗಿ ಧ್ಯಾನಿಸಿ ಕೃತಕೃತ್ಯಳಾಗು. ಹೀಗೆಂದು ಬ್ರಹ್ಮವಿದ್ಯೆಯ ಅತ್ಯಂತ ಸೂಕ್ಷ್ಮವಾದ ಪ್ರವಚನವನ್ನು ಯಜ್ಞವಲ್ಕರು ಮೈತ್ರೇಯಿಗೆ ದಯಪಾಲಿಸಿದರು.
********
ಶ್ರೀವಿಷ್ಣುಪುರಾಣ ಸಂಚಿಕೆ - 472 ತೃತೀಯಾಂಶ: ಪಂಚಮೋಧ್ಯಾಯ:
ಶ್ರೀಮನ್ನಾರಾಯಣಾಯ ನಮ:
ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||
********
ಶ್ರೀಪರಾಶರ ಉವಾಚ:
ಯಜುರ್ವೇದತರೋಶ್ಯಾಖಾಸ್ಸಪ್ತವಿಂಶನ್ಮಹಾಮುನಿ:|
ವೈಶಂಪಾಯನನಾಮಾಸೌ ವ್ಯಾಸಶಿಷ್ಯಶ್ಚಕಾರ ವೈ||1||
ಶಿಷ್ಯೇಭ್ಯ: ಪ್ರದದೌ ತಾಶ್ಚ ಜಗೃಹುಸ್ತೇಪ್ಯನುಕ್ರಮಾತ್|
ಯಾಜ್ಞವಲ್ಕ್ಯಸ್ತು ತತ್ರಾಭೂದ್ ಬ್ರಹ್ಮರಾತಸುತೋ ದ್ವಿಜ||2||
ಶಿಷ್ಯ: ಪರಮಧರ್ಮಜ್ಞೋ ಗುರುವೃತ್ತಿಪರಸ್ಸದಾ|
ಋಷಿಯೋದ್ಯ ಮಹಾಮೇರೋ ಸಮಾಜೇ ನಾಗಮಿಷ್ಯತಿ||3||
ತಸ್ಯ ವೈ ಸಪ್ತರಾತ್ರಾತ್ತು ಬ್ರಹ್ಮಹತ್ಯಾ ಭವಿಷ್ಯತಿ|
ಪೂರ್ವಮೇವಂ ಮುನಿಗಣೈಸ್ಸಮಯೋ ಯ: ಕೃತೋ ದ್ವಿಜ||4||
ವೈಶಂಪಾಯನ ಏಕಸ್ತು ತಂ ವ್ಯತಿಕ್ರಾಂತವಾಂಸ್ತದಾ|
ಸ್ವಸ್ರೀಯಂ ಬಾಲಕಂ ಸೋಥ ಪದಾ ಸ್ಪೃಷ್ಟಮಘಾತಯತ್||5||
ಪರಾಶರರು ಹೇಳಿದರು:-
ವ್ಯಾಸಶಿಷ್ಯನಾದ ವೈಶಂಪಾಯನನು ಯಜುರ್ವೇದವೃಕ್ಷವನ್ನು ಇಪ್ಪತ್ತೇಳುಶಾಖೆಗಳನ್ನಾಗಿ ವಿಂಗಡಿಸಿದನು.
ಅವನ್ನು ತನ್ನ ಶಿಷ್ಯರಿಗೆ ಬೋಧಿಸಲಾಗಿ ಅವರು ಅನುಕ್ರಮವಾಗಿ ಆ ಶಾಖೆಗಳನ್ನು ಕಲಿತರು. ಆ ಶಿಷ್ಯರಲ್ಲಿ ಬ್ರಹ್ಮರಾತನ ಮಗನಾದ ಯಾಜ್ಞವಲ್ಕ್ಯ ಎಂಬ ಶಿಷ್ಯನಿದ್ದನು.
ಅವನು ಪರಮಧರ್ಮಜ್ಞನೂ ಗುರುಸೇವಾನಿರತನೂ ಆಗಿದ್ದನು. ಮೈತ್ರೇಯ, ಒಂದು ಸಲ ಮಹಾಮೇರುವಿನಲ್ಲಿ ಮುನಿಗಳೆಲ್ಲರೂ ಸಭೆ ಸೇರಬೇಕೆಂದು ಗೊತ್ತಾಗಿತ್ತು.
ಈ ಸಭೆಗೆ ಏಳು ರಾತ್ರಿಗಳಲ್ಲಿ ಯಾವನು ಬರುವುದಿಲ್ಲವೋ ಆತನಿಗೆ ಬ್ರಹ್ಮಹತ್ಯಾದೋಷವು ಪ್ರಾಪ್ತವಾಗುವುದೆಂದು ಋಷಿಗಳು ನಿಯಮ ಮಾಡಿದ್ದರು.
ಏಳು ರಾತ್ರಿಗಳು ಕಳೆದರೂ ವೈಶಂಪಾಯನನೊಬ್ಬನಿಗೆ ಸಭೆಗೆ ಹೋಗಲಾಗಲಿಲ್ಲ. ಏಕೆಂದರೆ, ಅವನು ಅಕಸ್ಮಾತ್ತಾಗಿ ತನ್ನ ಸೋದರಿಯ ಮಗುವನ್ನು ಕಾಲಿಂದ ತುಳಿಯಲಾಗಿ ಮಗು ಸತ್ತು ಹೋಯಿತು.
********
ಶಿಷ್ಯನಾಹ ಸ ಭೋ ಶಿಷ್ಯಾ ಬ್ರಹ್ಮಹತ್ಯಾಪಹಂ ವ್ರತಮ್|
ಚರಧ್ವಂ ಮತ್ಕೃತೇ ಸರ್ವೇ ನ ವಿಚಾರ್ಯಮಿದಂ ತಥಾ||6||
ಅಥಾಹ ಯಾಜ್ಞವಲ್ಕ್ಯಸ್ತು ಕಿಮೀಭಿರ್ಭಗವನ್ ದ್ವಿಜೈ:|
ಕ್ಲೇಶಿತೈರಲ್ಪತೇಜೋಭಿಶ್ಚರಿಷ್ಯೇಹಮಿದಂ ವ್ರತಮ್||7||
ತತ: ಕ್ರಿುದ್ಧೋ ಗುರು: ಪ್ರಾಹ ಯಾಜ್ಞವಲ್ಕ್ಯಂ ಮಹಾಮುನಿಮ್|
ಮುಚ್ಯತಾಂ ಯತ್ತ್ವಯಾಧೀತಂ ಮತ್ತೋ ವಿಪ್ರಾವಮಾನಕ||8||
ನಿಸ್ತೇಜಸೋ ವದಸ್ಯೇನಾನ್ ಯತ್ತ್ವಂ ಬ್ರಾಹ್ಮಣಪುಂಗವಾನ್|
ತೇನ ಶಿಷ್ಯೇಣ ನಾರ್ಥೋಸ್ತಿ ಮಮಾಜ್ಞಾಭಂಗಕಾರಿಣಾ||9||
ಯಾಜ್ಞವಲ್ಕ್ಯಸ್ತತ: ಪ್ರಾಹ ಭಕ್ತ್ಯೈ ತತ್ತೇ ಮಯೋದಿತಮ್|
ಮಮೈಪ್ಯಲಂ ತ್ವಯಾಧೀತಂ ಯನ್ಮಯಾ ತದಿದಂ ದ್ವಿಜ||10||
ಶ್ರೀಪರಾಶರ ಉವಾಚ:
ಇತ್ಯುಕ್ತೋ ರುಧಿರಾಕಾಂತಿ ಸರೂಪಾಣಿ ಯಜೂಂಷಿ ಸ:|
ಛರ್ದಯಿತ್ವಾ ದದೌ ತಸ್ಮೈ ಯಯೌ ಸ ಸ್ವೇಚ್ಛಯಾ ಮುನಿ:||11||
ಯಜೂಂಷ್ಯಥ ವಿಸೃಷ್ವಾನಿ ಯಾಜ್ಞವಲ್ಕ್ಯೇನ ವೈ ದ್ವಿಜ|
ಜಗೃಹುಸ್ತಿತ್ತಿರಾ ಭೂತ್ವಾ ತೈತ್ತಿರೀಯಾಸ್ತು ತೇ ತತ:||12||
ಆಗ ವೈಶಂಪಾಯನನು ತನ್ನ ಶಿಷ್ಯರನ್ನು ಕರೆದು "ಎಲೈ ಶಿಷ್ಯರೆ, ನಾನು ಬ್ರಹ್ಮಹತ್ಯಾದೋಷಕ್ಕೆ ಒಳಗಾಗಿದ್ದೇನೆ. ಇದರ ಪರಿಹಾರಕ್ಕಾಗಿ ನೀವೆಲ್ಲರೂ ಸೇರಿ ವ್ರತವನ್ನಾಚರಿಸಿರಿ. ಬೇರೆ ವಿಚಾರ ಬೇಡ" ಎಂದು ತಿಳಿಸಿದನು.
ಆಗ ಯಾಜ್ಞವಲ್ಕ್ಯನು "ಗುರುಗಳೇ, ಇವರೆಲ್ಲರೂ ಸೇರಿ ವ್ರತನಿಷ್ಠರಾಗುವುದೇಕೆ? ಅಲ್ಪತೇಜಸ್ಕರಾದ ಈ ದ್ವಿಜರಿಗೆ ಕಷ್ಟವನ್ನು ಕೊಡುವುದೇಕೆ? ನಾನೊಬ್ಬನೇ ಈ ವ್ರತವನ್ನು ನಡೆಸುತ್ತೇನೆ!" ಎಂದನು.
ಆಗ ವೈಶಂಪಾಯನನು ಕ್ರುದ್ಧನಾಗಿ ಯಾಜ್ಞವಲ್ಕ್ಯಮುನಿಯನ್ನು ಕುರಿತು "ಎಲೈ, ಈ ಬ್ರಾಹ್ಮಣರನ್ನು ಅವಮಾನಗೊಳಿಸುತ್ತೀಯಾ? ಅಯೋಗ್ಯ, ನನ್ನಿಂದ ಕಲಿತ ವೇದವನ್ನು ಕಕ್ಕಿಬಿಡು!
ಈ ಬ್ರಾಹ್ಮಣೋತ್ತಮರನ್ನು ತೇಜೋಹೀನರೆಂದು ಧಿಕ್ಕರಿಸುವೆಯಾ? ನನ್ನ ಆಜ್ಞೆಗೆ ವಿರುದ್ಧವಾಗಿ ನುಡಿಯುವ ನಿನ್ನಂಥ ಶಿಷ್ಷನಿಂದ ನನಗೆ ಆಗಬೇಕಾದ್ದೇನೂ ಇಲ್ಲ" ಎಂದು ಅಬ್ಬರಿಸಿದನು.
ಆಗ ಯಾಜ್ಞವಲ್ಕ್ಯನು "ನನಗೆ ನಿಮ್ಮಲ್ಲಿದ್ದ ಭಕ್ತಿಯಿಂದ ಈ ಮಾತನ್ನು ಹೇಳಿದೆನು. ನಿಮ್ಮಿಂದ ಕಲಿತದ್ದೂ ನನಗೆ ಬೇಕಾಗಿಲ್ಲ" ಎಂದು ನುಡಿದು, ರುಧಿರಾಕ್ತಗಳೂ ಮೂರ್ತಿಮಂತಗಳೂ ಆದ ಯಜಸ್ಸುಗಳನ್ನು ವಾಂತಿಮಾಡಿ ವೈಶಂಪಾಯನನಿಗೆ ಒಪ್ಪಿಸಿ ಸ್ವೇಚ್ಛೆಯಾಗಿ ಹೊರಟುಹೊದನು.
ಹೀಗೆ ಯಾಜ್ಞವಲ್ಕ್ಯನಿಂದ ಪರಿತ್ಯಕ್ತಗಳಾದ ಯಜುಸ್ಸುಗಳನ್ನು ಅನ್ಯಶಿಷ್ಯರು ತಿತ್ತಿರಿ ಪಕ್ಷಿಗಳಾಗಿ ಸ್ವೀಕರಿಸಿದರು. ಆದ್ದರಿಂದ ಆ ಯಜುಸ್ಸುಗಳು ತೈತ್ತಿರೀಯ ಎನಿಸಿದವು.
********
ಬ್ರಹ್ಮಹತ್ಯಾವ್ರತಂ ಚೀರ್ಣಂ ಗುರುಣಾ ಚೋದಿತೈಸ್ತು ಯೈ:|
ಚರಕಾಧ್ವರ್ಯವಸ್ತೇ ತು ಚರಣಾತ್ ಮುನಿಸತ್ತಮ||13||
ಯಾಜ್ಞವಲ್ಕ್ಯೋಪಿ ಮೈತ್ರೇಯ ಪ್ರಾಣಾಯಾಮಪರಾಯಣ:|
ತುಷ್ಟಾವ ಪ್ರಯತಸ್ಸೂರ್ಯಂ ಯಜೂಂಷ್ಯಭಿಲಷಂಸ್ತತ:||14||
ಯಾಜ್ಞವಲ್ಕ್ಯ ಉವಾಚ:
ನಮಸ್ಸಮಿತ್ರೇ ದ್ವಾರಾಯ ಮುಕ್ತೇರಮಿತತೇಜಸೇ|
ಋಗ್ಯಜುಸ್ಸಾಮಭೂತಾಯ ತ್ರಯೀಧಾಮ್ನೇ ಚ ತೇ ನಮ:||15||
ನಮೋಗ್ನಿಷೋಮಭೂತಾಯ ಜಗತ: ಕಾರಣಾತ್ಮನೇ|
ಭಾಸ್ಕರಾಯ ಪರಂ ತೇಜಸ್ಸೌಷುಮ್ನಮುರುಬಿಭ್ರತೇ||16||
ಕಲಾಕಾಷ್ಠಾನಿಮೇಷಾದಿ ಕಾಲಜ್ಞಾನಾತ್ಮರೂಪಿಣೇ|
ಧ್ಯೇಯಾಮ ವಿಷ್ಣುರೂಪಾಯ ಪರಮಾಕ್ಷರರೂಪಿಣೇ||17||
ಯಾವ ಶಿಷ್ಯರು ಗುರುವಿನಿಂದ ಪ್ರೇರಿತರಾಗಿ ಬ್ರಹ್ಮಹತ್ಯಾ ನಿವಾರಣಾರ್ಥವಾದ ವ್ರತವನ್ನು ಆಚರಿಸಿದರೋ ಅವರು 'ಚರಣ' ಮಾಡಿದ್ದರಿಂದ ಚರಕಾಧ್ವರ್ಯುಗಳೆನಿಸಿದರು.
ಮೈತ್ರೇಯ, ಇತ್ತ ಯಾಜ್ಞವಲ್ಕ್ಯನು ಯಜುಸ್ಸುಗಳನ್ನು ಪಡೆಯಬೇಕೆಂಬ ಉದ್ದೇಶದಿಂದ ಶುಚಿಯಾಗಿ, ಪ್ರಾಣಾಯಾಮನಿಷ್ಠೆಯಿಂದ ಇದ್ದು ಸೂರ್ಯನನ್ನು ಸ್ತೋತ್ರ ಮಾಡಿದನು.
"ಮುಕ್ತಿಗೆ ದ್ವಾರಸ್ವರೂಪನೂ ಅಸದೃಶ ತೇಜಸ್ವಿಯೂ ಋಗ್ಯಜು:ಸಾಮವೇದಸ್ವರೂಪನೂ ವೇದತ್ರಯಗಳಿಗೆ ಆಕರನೂ ಆದ ಸವಿತೃದೇವನಿಗೆ ನಮಸ್ಕಾರ ಮಾಡುತ್ತೇನೆ.
ಅಗ್ನಿ ಮತ್ತು ಚಂದ್ರರ ಸ್ವರೂಪನೂ ಜಗತ್ತಿಗೆ ಕಾರಣನೂ ಸುಷುಮ್ನಾ ಕಿರಣದ ಪರಮ ತೇಜಸ್ಸನ್ನು ಧಾರಣ ಮಾಡಿರತಕ್ಕವನೂ ಆದ ಭಾಸ್ಕರನಿಗೆ ನಮಸ್ಕಾರ.
ಕಲಾ, ಕಾಷ್ಠಾ, ನಿಮೇಷ - ಮುಂತಾದ ಕಾಲ ಭೇದಗಳನ್ನರಿಯಲು ಕಾರಣಾತ್ಮನೂ ಧ್ಯೇಯನೂ ಪ್ರಣವಸ್ವರೂಪನೂ ವಿಷ್ಣುಸ್ವರೂಪನೂ ಆದ ಸೂರ್ಯದೇವನಿಗೆ ನಮಸ್ಕಾರ."
*****
ಬಿಭರ್ತಿ ಯಸ್ಸುರಗಣಾನಾಪ್ಯಾಯೇಂದು ಸ್ವರಶ್ಮಿಭಿ:|
ಸ್ವಾಧಾಮೃತೇನ ಚ ಪಿತೃಂಸ್ತಸ್ಮೈ ತೃಪ್ತ್ಯಾತ್ಮನೇ ನಮ:||18||
ಹಿಮಾಂಬುಘರ್ಮವೃಷ್ಟೀನಾಂ ಕರ್ತಾ ಭರ್ತಾ ಚ ಯ: ಪ್ರಭು:|
ತಸ್ಮೈ ತ್ರಿಕಾಲರೂಪಾಯ ನಮಸ್ಸೂರ್ಯಾಯ ವೇಧಸೇ||19||
ಅಪಹಂತಿ ತಮೋ ಯಶ್ಚ ಜಗತೋಸ್ಯ ಜಗತ್ಪತಿ:|
ಸತ್ತ್ವಧಾಮಧರೋ ದೇವೋ ನಮಸ್ತಸ್ಮೈ ವಿವಸ್ವತೇ||20||
ಸತ್ಕರ್ಮಯೋಗ್ಯೋ ನ ಜನೋ ನೈವಾಪ: ಶುದ್ಧಿಕಾರಣಮ್|
ಯಸ್ಮಿನ್ನನುದಿತೇ ತಸ್ಮೈ ನಮೋ ದೇವಾಯ ಭಾಸ್ವತೇ||21||
ಸ್ಪೃಷ್ಟೋ ಯದಂಶುಭಿರ್ಲೋಕ: ಕ್ರಿಯಾಯೋಗ್ಯೋ ಹಿ ಜಾಯತೇ|
ಪವಿತ್ರತಾಕಾರಣಾಯ ತಸ್ಮೈ ಶುದ್ಧಾತ್ಮನೇ ನಮ:||22||
ನಮ: ಸವಿತ್ರೇ ಸೂರ್ಯಾಯ ಭಾಸ್ಕರಾಯ ವಿವಸ್ವತೇ|
ಆದಿತ್ಯಾಯಾದಿಭೂತಾಯ ದೇವಾದೀನಾಂ ನಮೋ ನಮ:||23||
ಯಾವಾತನು ತನ್ನ ಕಿರಣಗಳಿಂದ ಚಂದ್ರನನ್ನು ಆಪ್ಯಾಯನಗೊಳಿಸಿ ದೇವತೆಗಳನ್ನು ಪೋಷಿಸುವನೋ ಸ್ವಧಾಮೃತದಿಂದ ಪಿತೃಗಳನ್ನು ತೃಪ್ತಿಗೊಳಿಸುವನೋ ಅಂತಹ ತೃಪ್ತಿಸ್ವರೂಪನಾದ ಸೂರ್ಯದೇವನಿಗೆ ನಮಸ್ಕಾರ.
ಚಳಿ, ಮಂಜು, ಸೆಕೆ, ಮಳೆ - ಇವುಗಳಿಗೆ ಕರ್ತನಾಗಿ ಜಗತ್ತಿಗೆ ಬರ್ತನಾಗಿರುವ ಸ್ವಾಮಿಯೂ ತ್ರಿಕಾಲ ಸ್ವರೂಪನೂ ಆದ ಸೂರ್ಯಭಗವಂತನಿಗೆ ನಮಸ್ಕಾರ.
ಜಗತ್ಪಾಲಕನಾಗಿ ಜಗತ್ತಿನ ಕತ್ತಲೆಯನ್ನು ನಾಶಮಾಡುತ್ತಾ ಸತ್ವಗುಣಶಾಲಿಯಾದ ಸೂರ್ಯದೇವನಿಗೆ ನಮಸ್ಕಾರ.
ಯಾವಾತನು ಉದಿತನಾಗದಿದ್ದರೆ ಜನರಿಗೆ ಶಾಸ್ತ್ರೀಯ ಪುಣ್ಯಕರ್ಮಗಳನ್ನು ಮಾಡಲು ಯೋಗ್ಯತೆಯೇ ಬರುವುದಿಲ್ಲವೋ, ಜಲವು (ಸ್ನಾನದಿಂದ) ಶುದ್ಧಿಗೆ ಕಾರಣವೂ ಆಗುವುದಿಲ್ಲವೋ ಅಂತಹ ತೇಜಸ್ವಿಯಾದ ದೇವನಿಗೆ ನಮಸ್ಕಾರ ಮಾಡುತ್ತೇನೆ.
ಯಾವಾತನ ಕಿರಣಗಳ ಸ್ಪರ್ಶವಾದಾಗ ಜನರು ಕ್ರಿಯೆಗೆ ಅರ್ಹರಾಗುತ್ತಾರೋ ಅಂತಹ ಪವಿತ್ರತೆಗೆ ಕಾರಣನೂ ಶುದ್ಧಾತ್ಮನೂ ಆದ ಸೂರ್ಯದೇವನಿಗೆ ನಮಸ್ಕಾರ.
ದೇವಾದಿಗಳಿಗೆ ಆದಿಭೂತನಾಗಿ ಸವಿತಾ, ಸೂರ್ಯ, ಭಾಸ್ಕರ, ವಿವಸ್ವಾನ್, ಆದಿತ್ಯ - ಎಂದು ಪ್ರಸಿದ್ಧನಾಗಿರುವ ಸ್ವಾಮಿಗೆ ನಮ: ನಮ: ನಮ:.
********
ಹಿರಣ್ಮಯಂ ರಥಂ ಯಸ್ಯ ಕೇತವೋಮೃತವಾಜಿನ:|
ವಹಂತಿ ಭುವನಾಲೋಕಿಚಕ್ಷುಷಂ ನಮಾಮ್ಯಹಮ್||24||
ಶ್ರೀಪರಾಶರ ಉವಾಚ:
ಇತ್ಯೇವಮಾದಿಭಿಸ್ತೇನ ಸ್ತೂಯಮಾನಸ್ಸ ವೈ ರವಿ:|
ವಾಜಿರೂಪಧರ: ಪ್ರಾಹ ವ್ರಿಯತಾಮಿತಿ ವಾಂಛಿತಮ್||25||
ಯಾಜ್ಞವಲ್ಕ್ಯಸ್ತದಾ ಪ್ರಾಹ ಪ್ರಣಿಪತ್ಯ ದಿವಾಕರಮ್|
ಯಜೂಂಷಿ ತಾನಿ ಮೇ ದೇಹಿ ಯಾನಿ ಸಂತಿ ನ ಮೇ ಗುರೌ||26||
ಏವಮುಕ್ತೋ ದದೌ ತಸ್ಮೈ ಯಜೂಂಷಿ ಭಗವಾನ್ ರವೀ|
ಆಯಾತಯಾಮ ಸಂಜ್ಞಾನಿ ಯಾನಿ ವೇತ್ತಿ ನ ತದ್ಗುರು:||27||
ಯಜೂಂಷಿ ಯೈರಧೀತಾನಿ ತಾನಿ ವಿಪ್ರೈರ್ದಿಜೋತ್ತಮ|
ವಾಜಿನಸ್ತೇ ಸಮಾಖ್ಯಾತಾ: ಸೂರ್ಯೋಪ್ಯಶ್ಚೋಭವದ್ಯತ:||28||
ಶಾಖಾಭೇದಾಸ್ತು ತೇಷಾಂ ವೈ ದಶ ಪಂಚ ಚ ವಾಜಿನಾಮ್|
ಕಾಣ್ವಾದ್ಯಾಸ್ಸುಮಹಾಭಾಗ ಯಾಜ್ಞವಲ್ಕ್ಯಾ: ಪ್ರಕೀರ್ತಿತಾ:||28||
ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ಪಂಚಮೋಧ್ಯಾಯ:||
ಯಾವಾತನ ರಥವು ಹಿರಣ್ಮಯ (ಪ್ರಜ್ಞಾರೂಪ) ವಾಗಿದೆಯೋ ಯಾವಾತನಿಗೆ (ಛಂದೋಮಯರಾದ) ಅಮರ ಅಶ್ವಗಣಗಳು ಧ್ವಜಗಳಾಗಿವೆಯೋ ಈ ರಥಾಶ್ವಗಳು ಜಗಚ್ಚಕ್ಷುವಾದ ಯಾವಾತನನ್ನು ಹೊರುತ್ತಿವೆಯೋ ಆ ದೇವನನ್ನು ನಾನು ನಮಸ್ಕರಿಸುತ್ತೇನೆ.
ಹೀಗೆ ನಾನಾ ಪ್ರಕಾರವಾಗಿ ಯಾಜ್ಞವಲ್ಕ್ಯನು ಸ್ತುತಿಸಲು, ಸೂರ್ಯದೇವನು ಅಶ್ವರೂಪದಿಂದ ಪ್ರತ್ಯಕ್ಷನಾಗಿ "ಇಷ್ಟವಾದ ವರವನ್ನು ಬೇಡಿಕೊ" ಎಂದನು.
ಆಗ ಯಾಜ್ಞ್ಯವಲ್ಕ್ಯನು ಸೂರ್ಯನಿಗೆ ಸಾಷ್ಟಾಂಗ ನಮಸ್ಕಾರಮಾಡಿ "ನನ್ನ ಗುರುವಿಗೆ ಗೊತ್ತಿಲ್ಲದಂತಹ ಯಜುಸ್ಸುಗಳನ್ನು ನನಗೆ ಉಪದೇಶಿಸು" ಎಂದು ಕೇಳಿಕೊಂಡನು.
ಆಗ ಭಗವಾನ್ ಸೂರ್ಯದೇವನು ಯಾಜ್ಞ್ಯವಲ್ಕ್ಯನಿಗೆ 'ಆಯಾತಯಾಮ' ಗಳೆನಿಸಿದ, ಆದ್ದರಿಂದಲೇ ಆತನ ಗುರುವಾದ ವೈಶಂಪಾಯನನಿಗೆ ಗೊತ್ತಿಲ್ಲದ ಯಜುಸ್ಸುಗಳನ್ನು ಉಪದೇಶಿಸಿದನು.
(ಆಯಾತಯಾಮ = ಹಲಸದೆ ಇರುವ, ಪ್ರಕೃತದಲ್ಲಿ, ಇತರರಿಗೆ ಗೊತ್ತಿಲ್ಲದ.)
ಈ ಯಜುಸ್ಸುಗಳನ್ನು ಯಾರು ಅಧ್ಯಯನ ಮಾಡಿದರೋ ಅವರು 'ವಾಜಿ'ಗಳೆಂದು ಪ್ರಸಿದ್ಧರಾದರು. ಏಕೆಂದರೆ, ಸೂರ್ಯನು ವಾಜಿ (ಅಶ್ವ) ರೂಪಧರನಾಗಿ ಅವನ್ನು ಉಪದೇಶಿಸಿದನು.
ಈ ವಾಜಿಯಜುಸ್ಸುಗಳಲ್ಲಿ ಕಾಣ್ವ ಮುಂತಾದ ಹದಿನೈದು ಶಾಖಾಭೇದಗಳಿವೆ. ಇವೆಲ್ಲವೂ ಯಾಜ್ಞವಲ್ಕ್ಯಮುನಿಯಿಂದ ಪ್ರವೃತ್ತವಾದವು.
(ಈ ಶಾಖೆಗಳಿಗೆ ಶುಕ್ಲಯಜುರ್ವೇದವೆಂದೂ ವಾಜಸನೇಯ ಎಂದೂ ಹೆಸರಿದೆ.
ಹಿಂದೆ ಹೇಳಿದ ತೈತ್ತಿರೀಯವು ಕೃಷ್ಣಯಜುರ್ವೇದವೆನಿಸಿದೆ.)
ಇಲ್ಲಿಗೆ ಶ್ರೀವಿಷ್ಣುರಾಣದ ತೃತೀಯಾಂಶದಲ್ಲಿ ಐದನೆಯ ಅಧ್ಯಾಯ ಮುಗಿಯಿತು.
***
ಬಿಭರ್ತಿ ಯಸ್ಸುರಗಣಾನಾಪ್ಯಾಯೇಂದು ಸ್ವರಶ್ಮಿಭಿ:|
ಸ್ವಾಧಾಮೃತೇನ ಚ ಪಿತೃಂಸ್ತಸ್ಮೈ ತೃಪ್ತ್ಯಾತ್ಮನೇ ನಮ:||18||
ಹಿಮಾಂಬುಘರ್ಮವೃಷ್ಟೀನಾಂ ಕರ್ತಾ ಭರ್ತಾ ಚ ಯ: ಪ್ರಭು:|
ತಸ್ಮೈ ತ್ರಿಕಾಲರೂಪಾಯ ನಮಸ್ಸೂರ್ಯಾಯ ವೇಧಸೇ||19||
ಅಪಹಂತಿ ತಮೋ ಯಶ್ಚ ಜಗತೋಸ್ಯ ಜಗತ್ಪತಿ:|
ಸತ್ತ್ವಧಾಮಧರೋ ದೇವೋ ನಮಸ್ತಸ್ಮೈ ವಿವಸ್ವತೇ||20||
ಸತ್ಕರ್ಮಯೋಗ್ಯೋ ನ ಜನೋ ನೈವಾಪ: ಶುದ್ಧಿಕಾರಣಮ್|
ಯಸ್ಮಿನ್ನನುದಿತೇ ತಸ್ಮೈ ನಮೋ ದೇವಾಯ ಭಾಸ್ವತೇ||21||
ಸ್ಪೃಷ್ಟೋ ಯದಂಶುಭಿರ್ಲೋಕ: ಕ್ರಿಯಾಯೋಗ್ಯೋ ಹಿ ಜಾಯತೇ|
ಪವಿತ್ರತಾಕಾರಣಾಯ ತಸ್ಮೈ ಶುದ್ಧಾತ್ಮನೇ ನಮ:||22||
ನಮ: ಸವಿತ್ರೇ ಸೂರ್ಯಾಯ ಭಾಸ್ಕರಾಯ ವಿವಸ್ವತೇ|
ಆದಿತ್ಯಾಯಾದಿಭೂತಾಯ ದೇವಾದೀನಾಂ ನಮೋ ನಮ:||23||
ಯಾವಾತನು ತನ್ನ ಕಿರಣಗಳಿಂದ ಚಂದ್ರನನ್ನು ಆಪ್ಯಾಯನಗೊಳಿಸಿ ದೇವತೆಗಳನ್ನು ಪೋಷಿಸುವನೋ ಸ್ವಧಾಮೃತದಿಂದ ಪಿತೃಗಳನ್ನು ತೃಪ್ತಿಗೊಳಿಸುವನೋ ಅಂತಹ ತೃಪ್ತಿಸ್ವರೂಪನಾದ ಸೂರ್ಯದೇವನಿಗೆ ನಮಸ್ಕಾರ.
ಚಳಿ, ಮಂಜು, ಸೆಕೆ, ಮಳೆ - ಇವುಗಳಿಗೆ ಕರ್ತನಾಗಿ ಜಗತ್ತಿಗೆ ಬರ್ತನಾಗಿರುವ ಸ್ವಾಮಿಯೂ ತ್ರಿಕಾಲ ಸ್ವರೂಪನೂ ಆದ ಸೂರ್ಯಭಗವಂತನಿಗೆ ನಮಸ್ಕಾರ.
ಜಗತ್ಪಾಲಕನಾಗಿ ಜಗತ್ತಿನ ಕತ್ತಲೆಯನ್ನು ನಾಶಮಾಡುತ್ತಾ ಸತ್ವಗುಣಶಾಲಿಯಾದ ಸೂರ್ಯದೇವನಿಗೆ ನಮಸ್ಕಾರ.
ಯಾವಾತನು ಉದಿತನಾಗದಿದ್ದರೆ ಜನರಿಗೆ ಶಾಸ್ತ್ರೀಯ ಪುಣ್ಯಕರ್ಮಗಳನ್ನು ಮಾಡಲು ಯೋಗ್ಯತೆಯೇ ಬರುವುದಿಲ್ಲವೋ, ಜಲವು (ಸ್ನಾನದಿಂದ) ಶುದ್ಧಿಗೆ ಕಾರಣವೂ ಆಗುವುದಿಲ್ಲವೋ ಅಂತಹ ತೇಜಸ್ವಿಯಾದ ದೇವನಿಗೆ ನಮಸ್ಕಾರ ಮಾಡುತ್ತೇನೆ.
ಯಾವಾತನ ಕಿರಣಗಳ ಸ್ಪರ್ಶವಾದಾಗ ಜನರು ಕ್ರಿಯೆಗೆ ಅರ್ಹರಾಗುತ್ತಾರೋ ಅಂತಹ ಪವಿತ್ರತೆಗೆ ಕಾರಣನೂ ಶುದ್ಧಾತ್ಮನೂ ಆದ ಸೂರ್ಯದೇವನಿಗೆ ನಮಸ್ಕಾರ.
ದೇವಾದಿಗಳಿಗೆ ಆದಿಭೂತನಾಗಿ ಸವಿತಾ, ಸೂರ್ಯ, ಭಾಸ್ಕರ, ವಿವಸ್ವಾನ್, ಆದಿತ್ಯ - ಎಂದು ಪ್ರಸಿದ್ಧನಾಗಿರುವ ಸ್ವಾಮಿಗೆ ನಮ: ನಮ: ನಮ:.
********
ಹಿರಣ್ಮಯಂ ರಥಂ ಯಸ್ಯ ಕೇತವೋಮೃತವಾಜಿನ:|
ವಹಂತಿ ಭುವನಾಲೋಕಿಚಕ್ಷುಷಂ ನಮಾಮ್ಯಹಮ್||24||
ಶ್ರೀಪರಾಶರ ಉವಾಚ:
ಇತ್ಯೇವಮಾದಿಭಿಸ್ತೇನ ಸ್ತೂಯಮಾನಸ್ಸ ವೈ ರವಿ:|
ವಾಜಿರೂಪಧರ: ಪ್ರಾಹ ವ್ರಿಯತಾಮಿತಿ ವಾಂಛಿತಮ್||25||
ಯಾಜ್ಞವಲ್ಕ್ಯಸ್ತದಾ ಪ್ರಾಹ ಪ್ರಣಿಪತ್ಯ ದಿವಾಕರಮ್|
ಯಜೂಂಷಿ ತಾನಿ ಮೇ ದೇಹಿ ಯಾನಿ ಸಂತಿ ನ ಮೇ ಗುರೌ||26||
ಏವಮುಕ್ತೋ ದದೌ ತಸ್ಮೈ ಯಜೂಂಷಿ ಭಗವಾನ್ ರವೀ|
ಆಯಾತಯಾಮ ಸಂಜ್ಞಾನಿ ಯಾನಿ ವೇತ್ತಿ ನ ತದ್ಗುರು:||27||
ಯಜೂಂಷಿ ಯೈರಧೀತಾನಿ ತಾನಿ ವಿಪ್ರೈರ್ದಿಜೋತ್ತಮ|
ವಾಜಿನಸ್ತೇ ಸಮಾಖ್ಯಾತಾ: ಸೂರ್ಯೋಪ್ಯಶ್ಚೋಭವದ್ಯತ:||28||
ಶಾಖಾಭೇದಾಸ್ತು ತೇಷಾಂ ವೈ ದಶ ಪಂಚ ಚ ವಾಜಿನಾಮ್|
ಕಾಣ್ವಾದ್ಯಾಸ್ಸುಮಹಾಭಾಗ ಯಾಜ್ಞವಲ್ಕ್ಯಾ: ಪ್ರಕೀರ್ತಿತಾ:||28||
ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ಪಂಚಮೋಧ್ಯಾಯ:||
ಯಾವಾತನ ರಥವು ಹಿರಣ್ಮಯ (ಪ್ರಜ್ಞಾರೂಪ) ವಾಗಿದೆಯೋ ಯಾವಾತನಿಗೆ (ಛಂದೋಮಯರಾದ) ಅಮರ ಅಶ್ವಗಣಗಳು ಧ್ವಜಗಳಾಗಿವೆಯೋ ಈ ರಥಾಶ್ವಗಳು ಜಗಚ್ಚಕ್ಷುವಾದ ಯಾವಾತನನ್ನು ಹೊರುತ್ತಿವೆಯೋ ಆ ದೇವನನ್ನು ನಾನು ನಮಸ್ಕರಿಸುತ್ತೇನೆ.
ಹೀಗೆ ನಾನಾ ಪ್ರಕಾರವಾಗಿ ಯಾಜ್ಞವಲ್ಕ್ಯನು ಸ್ತುತಿಸಲು, ಸೂರ್ಯದೇವನು ಅಶ್ವರೂಪದಿಂದ ಪ್ರತ್ಯಕ್ಷನಾಗಿ "ಇಷ್ಟವಾದ ವರವನ್ನು ಬೇಡಿಕೊ" ಎಂದನು.
ಆಗ ಯಾಜ್ಞ್ಯವಲ್ಕ್ಯನು ಸೂರ್ಯನಿಗೆ ಸಾಷ್ಟಾಂಗ ನಮಸ್ಕಾರಮಾಡಿ "ನನ್ನ ಗುರುವಿಗೆ ಗೊತ್ತಿಲ್ಲದಂತಹ ಯಜುಸ್ಸುಗಳನ್ನು ನನಗೆ ಉಪದೇಶಿಸು" ಎಂದು ಕೇಳಿಕೊಂಡನು.
ಆಗ ಭಗವಾನ್ ಸೂರ್ಯದೇವನು ಯಾಜ್ಞ್ಯವಲ್ಕ್ಯನಿಗೆ 'ಆಯಾತಯಾಮ' ಗಳೆನಿಸಿದ, ಆದ್ದರಿಂದಲೇ ಆತನ ಗುರುವಾದ ವೈಶಂಪಾಯನನಿಗೆ ಗೊತ್ತಿಲ್ಲದ ಯಜುಸ್ಸುಗಳನ್ನು ಉಪದೇಶಿಸಿದನು.
(ಆಯಾತಯಾಮ = ಹಲಸದೆ ಇರುವ, ಪ್ರಕೃತದಲ್ಲಿ, ಇತರರಿಗೆ ಗೊತ್ತಿಲ್ಲದ.)
ಈ ಯಜುಸ್ಸುಗಳನ್ನು ಯಾರು ಅಧ್ಯಯನ ಮಾಡಿದರೋ ಅವರು 'ವಾಜಿ'ಗಳೆಂದು ಪ್ರಸಿದ್ಧರಾದರು. ಏಕೆಂದರೆ, ಸೂರ್ಯನು ವಾಜಿ (ಅಶ್ವ) ರೂಪಧರನಾಗಿ ಅವನ್ನು ಉಪದೇಶಿಸಿದನು.
ಈ ವಾಜಿಯಜುಸ್ಸುಗಳಲ್ಲಿ ಕಾಣ್ವ ಮುಂತಾದ ಹದಿನೈದು ಶಾಖಾಭೇದಗಳಿವೆ. ಇವೆಲ್ಲವೂ ಯಾಜ್ಞವಲ್ಕ್ಯಮುನಿಯಿಂದ ಪ್ರವೃತ್ತವಾದವು.
(ಈ ಶಾಖೆಗಳಿಗೆ ಶುಕ್ಲಯಜುರ್ವೇದವೆಂದೂ ವಾಜಸನೇಯ ಎಂದೂ ಹೆಸರಿದೆ.
ಹಿಂದೆ ಹೇಳಿದ ತೈತ್ತಿರೀಯವು ಕೃಷ್ಣಯಜುರ್ವೇದವೆನಿಸಿದೆ.)
ಇಲ್ಲಿಗೆ ಶ್ರೀವಿಷ್ಣುರಾಣದ ತೃತೀಯಾಂಶದಲ್ಲಿ ಐದನೆಯ ಅಧ್ಯಾಯ ಮುಗಿಯಿತು.
***
ಯಾಜ್ಞವಲ್ಕ್ಯ ಜಯಂತಿ.
ತನ್ನಿಮಿತ್ತ ಈ ಲೇಖನ.
ಯಾಜ್ಞ್ಯವಲ್ಕ್ಯ.
ಬ್ರಹ್ಮರಾತ ಮಹರ್ಷಿಯ ಮಗ ಯಾಜ್ಞ್ಯವಲ್ಕ್ಯ.
ಮೊದಲನೆ ಮಹಾಯುಗದ ವೈಶಂಪಾಯನ ಮಹರ್ಷಿಯ ಸೋದರಳಿಯನೂ,ಶಿಷ್ಯನೂ ಆದ ಮಹರ್ಷಿ ಯಾಜ್ಞ್ಯವಲ್ಕ್ಯ.
ಶಿಷ್ಯನಾಗಿದ್ದರೂ ತನ್ನ ಗುರುವಿನಲ್ಲಿ ಕಲಿತ ಇತರ ಶಿಷ್ಯರನ್ನು ತಿರಸ್ಕರಿಸಿದ್ದಕ್ಕಾಗಿ ಗುರುವಿನಿಂದ ಶಾಪಹೊಂದಿ ವೈಶಂಪಾಯನರಲ್ಲಿ ಕಲಿತ ಸಮಸ್ತ ವಿದ್ಯೆಯನ್ನು ಕಕ್ಕುವಂತೆ ಹೇಳಿದಾಗ ವಾಂತಿಯ ರೂಪದಲ್ಲಿ ಹೊರಹಾಕಿದನು.
ಅಲ್ಲಿದ್ದ ಮುನಿಗಳೆಲ್ಲ #ತಿತ್ತಿರಿ ಪಕ್ಷಿ ರೂಪ ತಾಳಿ ಅದನ್ನು ಸ್ವೀಕರಿಸಿದರು.
ಇವೇ ತೈತ್ತರೀಯ ಸಂಹಿತೆ,ಕೃಷ್ಣ_ಯಜುರ್ವೇದ ಎಂದು ಮುಂದೆ ಖ್ಯಾತಿ ಪಡೆಯಿತು.
ನಂತರ ಯಾಜ್ಞ್ಯವಲ್ಕ್ಯನು ಸೂರ್ಯನಿಂದ ಸಕಲ ವಿದ್ಯೆಗಳನ್ನು ಉಪದೇಶಿಸಿಕೊಂಡು ಶುಕ್ಲ ಯಜುರ್ವೇದವನ್ನು ಅಧ್ಯಯನ ಮಾಡಿ ಮಹಾವಿದ್ವಾಂಸ ಎಂದು ಪ್ರಖ್ಯಾತಿಯನ್ನು,ಅಪಾರ ಸಂಪತ್ತನ್ನು,
ಕೀರ್ತಿಯನ್ನು ಗಳಿಸಿದನು.
ಜನಕ ಮಹಾರಾಜನ ಸಭೆಯಲ್ಲಿ ಪ್ರಾಣವನ್ನೆ ಪಣವಾಗಿಟ್ಟು ಶಾಕಲ್ಯ ಮುನಿಯೊಂದಿಗೆ ವಾದಮಾಡಿ ಜಯಿಸಿದನು.
ಸೋತ ಶಾಕಲ್ಯ ಮುನಿಯು ಪ್ರಾಯೋಪವೇಶ ಮಾಡಿ ಪ್ರಾಣತ್ಯಾಗ ಮಾಡಿದನು.
ಜನಕರಾಜನೊಂದಿಗೂ ಬ್ರಹ್ಮವಿದ್ಯೆಯ ವಿಚಾರವಾಗಿ ವಾದಮಾಡಿ ವಿಶೇಷ ಮನ್ನಣೆ ಹೊಂದಿದ್ದನು.
ಇವನಿಗೆ ಇಬ್ಬರು ಪತ್ನಿಯರು.
ಜೀವನದ ಉತ್ತರಾರ್ಧದಲ್ಲಿ ಐಹಿಕ ಜೀವನವು ಅರ್ಥಹೀನವೆಂದು ಎಲ್ಲವನ್ನೂ ತ್ಯಜಿಸಿ ಕೊನೆಗೆ ಪರಿವ್ರಾಜಕನಾದನು.
ಮನುಷ್ಯ ಜೀವನಕ್ಕೆ,
ಸಂಸಾರ,ಸಮಾಜದ ಕರ್ತವ್ಯ,
ಬದ್ಧತೆಯ ಬಗ್ಗೆ ,
ಧರ್ಮ-ಆಚರಣೆಯ ಬಗ್ಗೆ ಗ್ರಂಥವನ್ನು ಬರೆದು ಸಾಮಾಜಿಕ ಕಟ್ಟಳೆಯನ್ನು ರೂಪಿಸಿದನು.
ಇವನ ಗ್ರಂಥವನ್ನು ಯಾಜ್ಞ್ಯವಲ್ಕ್ಯಸ್ಮೃತಿ ಎಂದು ಕರೆಯುತ್ತಾರೆ.
ಪ್ರತ್ಯಕ್ಷ ಬ್ರಹ್ಮನೇ ಇವನು ಎನ್ನಬಹುದಾದ ತಪಸ್ವಿಯಾದ ಯಾಜ್ಞವಲ್ಕ್ಯನು
ಮೊದಲು ಮಿಥಿಲಾನಗರಿಯಲ್ಲಿ ಆಶ್ರಮ ಕಟ್ಟಿಕೊಂಡು ವಾಸಮಾಡುತ್ತಿದ್ದನು.ಆಗ ಆಶ್ರಮದೊಳಗೆ ಬರುತ್ತಿರುವ ನಕುಲನನ್ನು (ಮುಂಗುಸಿ) ನೋಡಿ,ತನ್ನ ಪತ್ನಿ ಗಾರ್ಗಿಗೆ,
"ಗಾರ್ಗಿ,ಹಾಲಿನ ಬಗ್ಗೆ ಗಮನವಿರಲಿ.ಈ ನಕುಲವು ಹಾಲನ್ನು ಕುಡಿಯಲು ಬರುತ್ತಿದೆ.ಅದನ್ನು ಓಡಿಸು" ಎಂದನು.
ಆ ಮುಂಗುಸಿಯು ಹಿಂದೆ ಜಮದಗ್ನಿಯ ಪೂರ್ವಜರಿಂದ ಶಪಿಸಲ್ಪಟ್ಟಿದ್ದರಿಂದ ಮುಂಗುಸಿಯ ರೂಪ ಬಂದಿದ್ದಿತು.
ಯಾಜ್ಞವಲ್ಕ್ಯನ ಮಾತಿನಿಂದ ಕೋಪಗೊಂಡ ಮುಂಗುಸಿಯು,ಮಾನವ ಭಾಷೆಯಲ್ಲಿ,"ಆಹಾ,ನಿನಗೆ ಧಿಕ್ಕಾರ,ಧಿಕ್ಕಾರ,ಧಿಕ್ಕಾರ.
ಪಾಪಕರ್ಮಿಗಳಾದ ಮನುಷ್ಯರು ಎಷ್ಟು ನಿರ್ಲಜ್ಜರು!" ಎಂದು ಹೇಳಿ, "ಅಯ್ಯಾ ಮುನಿಯೇ,
ನಾನು ಕುಲೀನನೆಂಬುದನ್ನು ಬುದ್ಧಿಯುಳ್ಳ ನೀನು ಬಲ್ಲೆ.
ಇದನು ತಿಳಿದಿದ್ದರೂ
ಇದು_ನಕುಲ ಎಂದು ನಿಂದಿಸುತ್ತಿರುವೆಯಲ್ಲ! ನೀನು ಅಧ್ಯಯನ,
ತಪಸ್ಸು,ಯೋಗ ಸಾಧನೆ ಮಾಡಿ,ಯೋಗೇಶ್ವರನಾಗಿ ಏನು ಪ್ರಯೋಜನ? ನಿನಗೂ ನಿನ್ನ ಅಧ್ಯಯನಕ್ಕೂ ಧಿಕ್ಕಾರ!
ನನ್ನನ್ನು ನಕುಲ ಎಂದು ಹೀಯಾಳಿಸಿದೆಯಲ್ಲ,ಇದು ಯಾವ ವೇದ,ಶಾಸ್ತ್ರ,
ಪುರಾಣಗಳಲ್ಲಿ ಹೇಳಿದೆ? ಹೇಳು" ಎಂದಿತು.
ಯಾಜ್ಞವಲ್ಕ್ಯ ಮಹರ್ಷಿಯ ಮೇಲೆ ಕೋಪಗೊಂಡ ಮುಂಗುಸಿಯು,ಅವನಿಗೆ ಧಿಕ್ಕಾರವೆಂದು ಹೇಳಿ, "ಒಬ್ಬನು ತನ್ನ ಕಠಿಣ ಮಾತುಗಳಿಂದ ಎಷ್ಟೆಷ್ಟು ಜನರನ್ನು ನಿಂದಿಸುತ್ತಾನೆಯೋ ಅಷ್ಟಷ್ಟು ಪಾಪಗಳನ್ನ ಸಂಚಯಿಸಿ ನರಕಭಾಜನನಾಗಿ,
ಯಮದೂತರು ಅವನ ಕುತ್ತಿಗೆಯ ಮೇಲೆ ಕಾಲಿಟ್ಟು ತುಳಿದು ಒತ್ತಿ ಹಿಡಿದು,ಕಿವಿಗೆ ಲೋಹದ ಮೊಳೆಗಳನ್ನು ಹೊಡೆಯುತ್ತಾರೆ.ನಿನ್ನಂತಹ ವಾಕ್ಚತುರರು ಧಾರ್ಮಿಕ ವೇಷ ಧರಿಸಿ ಕೃಪಣರ ಹಣವನ್ನು ವಶಮಾಡಿಕೊಳ್ಳುತ್ತಾರೆ.
ಮಾತಿನ ಬಾಣಗಳಿಂದ ಕೊಲ್ಲುವುದಕ್ಕಿಂತ ಆಯುಧಗಳಿಂದ ಕೊಲ್ಲುವುದು ಮೇಲು.
ನಾನು ಸತ್ಕುಲ ಪ್ರಸೂತನಾಗಿದ್ದರೂ ನೀನು ನನ್ನನ್ನು ನಕುಲ ಕುಲಹೀನ,ಕುಲವಿಲ್ಲದವನು ಎಂದೇಕೆ ಹೇಳಿದೆ? ಎಂದು ಕೇಳಿತು.
ಮುಂಗುಸಿಯ ಮಾತನ್ನಾಲಿಸಿ ಆಶ್ಚರ್ಯಚಕಿತನಾದ ಯಾಜ್ಞವಲ್ಕ್ಯನು,
ಮುಂಗುಸಿಗೆ ಕೈಮುಗಿದು, "ಮಹತ್ತರವಾದ ಧರ್ಮಕ್ಕೆ ನಮಸ್ಕಾರ.ಧರ್ಮದ ಉತ್ಪತ್ತಿಯ ಬಗ್ಗೆ ಅಣು ಮಾತ್ರದಷ್ಟೂ ಅರಿಯದ ನಮಗೆ ವಿದ್ಯಾಮದ ಹೇಗೆ ಬರುತ್ತದೆ? ತ್ರಿಮೂರ್ತಿಗಳೇ ಮೋಹ ಹೊಂದುತ್ತಾರೆಂದ ಮೇಲೆ ನಮ್ಮಂಥ ಮನುಷ್ಯರ ಪಾಡೇನು? ಕೆಲವರು ಅಜ್ಞಾನದಿಂದ,
ಕೆಲವರು ಜ್ಞಾನಮದದಿಂದ,ಕೆಲವು ಅಧಮರು ಜ್ಞಾನ ಪಡೆದಿದ್ದರೂ ಆಲಸ್ಯದಿಂದ ನಾಶಹೊಂದಿದರು.
ನಾನು ನಿನ್ನನ್ನು ನಕುಲ ಎಂದು ಹೇಳಿರುವುದು ಕುಲಹೀನ ಎಂಬ ಅರ್ಥದಲ್ಲಿ ಅಲ್ಲ.
ಮುಂಗುಸಿಗೆ ಇರುವ ಹೆಸರು ನಕುಲ.ಅದೇ ಹೆಸರಿನಿಂದ ನಾನು ಹೇಳಿರುವುದು.ಎಲ್ಲರೂ ಮುಂಗುಸಿಗೆ ನಕುಲನೆಂದೇ ಹೇಳುತ್ತಾರೆ.ನಾನೂ ಹಾಗೇ ಕರೆದೆನು.ನನ್ನ ಅವಿನಯವನ್ನು ಕ್ಷಮಿಸು" ಎಂದನು.
ನಕುಲನು,"ಅಯ್ಯಾ ನಿನ್ನ ಮಾತು ವ್ಯರ್ಥ. ನೀನು ನಿನ್ನನ್ನು ಸರ್ವರಿಗೂ ಸಮನಾದವನೆಂದು ಭಾವಿಸಿರುವೆ.ಇದು ಮಹಾತ್ಮರಿಗೆ ಯೋಗ್ಯವಲ್ಲ.
ಜೀವಿಗಳಿಗೂ,ನಿರ್ಜಿಜವಿಗಳಿಗೂ,ಚಲ,ಅಚಲ ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ.
ಶಾಸ್ತ್ರಗಳು ಎಲ್ಲರಿಗಾಗಿ ರಚಿಸಲ್ಪಟ್ಟಿವೆ.ಹಾಗೆಯೇ ಬುದ್ಧಿ,ಮನಸ್ಸುಗಳೂ ಕೂಡ ಸೃಷ್ಟಿಕರ್ತನು ಎಲ್ಲರಿಗೂ ಕೊಟ್ಟಿದ್ದಾನೆ.ಇದೇನೇ ಇರಲಿ,ನನ್ನನ್ನು ಕಠಿಣ ಮಾತಿನಿಂದ ಹೊಡೆದಿದ್ದಕ್ಕೆ ಪ್ರತಿಯಾಗಿ,ನಾನು ನಿನ್ನನ್ನು ಶಪಿಸುತ್ತೇನೆ. ನೀನೂ ನನ್ನಂತೆಯೇ ನಕುಲನಾಗು ಎಂದು ಶಪಿಸಿತು.
ಮುಂಗುಸಿಯ ಶಾಪದಂತೆಯೇ ಯಾಜ್ಞವಲ್ಕ್ಯನು ಮುಂದಿನ ಜನ್ಮದಲ್ಲಿ ಮರುದೇಶದ ಒಬ್ಬ ದುರಾಚಾರಿಯೂ,
ಪಾಪಾತ್ಮನೂ,ದಯಾಹೀನನೂ,ಅತಿವಾದಿಯೂ,ದುಷ್ಟಕುಲಸಂಭೂತನೂ ಆದ ಬ್ರಾಹ್ಮಣನಿಗೆ,ಪೂರ್ವಜನ್ಮದ ಸ್ಮರಣೆಯುಳ್ಳ ಭರ್ತೃಯಜ್ಞ ಎಂಬ ಹೆಸರಿನ ಪುತ್ರನಾಗಿ ಜನಿಸಿದನು.
ತನ್ನ ಪೂರ್ವಸ್ಮರಣೆಯ ಜ್ಞಾನಶಕ್ತಿಯಿಂದ ನೋಡಿ,
ಪವಿತ್ರವೂ ಗುಪ್ತವೂ ಆದ ಮಹೀಸಾಗರಸಂಗಮಕ್ಕೆ ಹೋಗಿ ಸೇರಿ,
ಪಾಶುಪತವ್ರತನಿಷ್ಠನಾಗಿ ಮಹಾಕಾಲನನ್ನು ಆರಾಧಿಸುತ್ತ ನೆಲಸಿದನು.
ಮಹಾಕಾಲನನ್ನು ಪ್ರತಿದಿನ ಆರಾಧಿಸುವವನು ಹಾವು ಪೊರೆಯಿಂದ ಬಿಡುಗಡೆ ಹೊಂದುವಂತೆ ದುಷ್ಕುಲೀನ ದೋಷಗಳಿಂದ,ನೂರು ಜನ್ಮಗಳ ಪಾಪದೋಷಗಳಿಂದ ಮುಕ್ತನಾಗುತ್ತಾನೆ.
ಭರ್ತೃಯಜ್ಞನೂ ದುಷ್ಟ ಬ್ರಾಹ್ಮಣನಿಗೆ ಪುತ್ರನಾಗಿ ಜನಿಸಿದ ಜನ್ಮದೋಷದಿಂದ ಮುಕ್ತನಾದನು.ಹೀಗೆ ದುಷ್ಟಜನ್ಮದಿಂದ ಬಿಡುಗಡೆ ಹೊಂದಿ ಬಭ್ರುವರ್ಣದ ನಕುಲನಿಗೆ ಈ ವಿಷಯವನ್ನು ತಿಳಿಸಿದನು.
ಬಭ್ರುವಿಗೆ ತಿಳಿಸಿದ ಆ ಸ್ಥಳವು ಬಭ್ರುತೀರ್ಥ ಎಂದು ಪ್ರಸಿದ್ಧಿ ಪಡೆಯಿತು.
*****
No comments:
Post a Comment