SEARCH HERE

Tuesday, 1 January 2019

ಮೂವತ್ಮೂರು ಕೋಟಿ ದೇವರು 330 million gods


ಪುರಾಣಗಳಲ್ಲಿ ಹಾಗೂ ಬೃಹದಾರಣ್ಯಕ ಉಪನಿಷತ್ತಿನಲ್ಲಿ, ಮುವತ್ಮೂರು ದೇವತೆಗಳನ್ನು ಹೇಳಿದ್ದಾರೆ.
ಪೃಥ್ವಿ ಸ್ಥಾನದ ಎಂಟು ವಸುಗಳು;
ಮಧ್ಯಸ್ಥಾನದ ಹನ್ನೊಂದು ರುದ್ರರು;
ಸ್ವರ್ಗಸ್ಥಾನದ ಹನ್ನೆರಡು ಆದಿತ್ಯರು; 
ಹಾಗೂ ಪ್ರಜಾಪತಿ ಮತ್ತು ವಷಟ್ಕಾರರೇ ಈ ಮುವತ್ಮೂರು ದೇವತೆಗಳು. 

***

ನಮ್ಮ ಸನಾತನ ಧರ್ಮದಲ್ಲಿ 33 ಕೋಟಿ ದೇವಾನು ದೇವತೆಗಳಿದ್ದಾರೆಂದು ನಂಬಿದ್ದೇವೆ.. ದೇವರುಗಳ ಹೆಸರೇಳಿ ಎಂದು ಕೇಳಿದರೆ 33 ಕೋಟಿ ದೇವರುಗಳ ಹೆಸರನ್ನು ಹೇಳಬಲ್ಲೆವೇ....? ಖಂಡಿತ ಸಾಧ್ಯವಿಲ್ಲ..
ಅಬ್ಬಬ್ಬಾ ಎಂದರೆ ನೂರು , ನೂರೈವತ್ತು ದೇವರುಗಳ ಹೆಸರನ್ನು ಹೇಳಬಹುದು.. 

33 ಕೋಟಿ ದೇವರುಗಳ ಹೆಸರನ್ನು ತಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ..


koti in sanskrit also means supreme. But 'Koti' in Sanskrit has many meanings like 'highest point' , 'Excellence' , 'Edge' , 'Point', 'Pitch' , 'Alternative' etc

ಕೋಟಿ ಎಂಬ ಶಬ್ದ ಸಂಸ್ಕೃತದಿಂದ ಬಂದಿದ್ದು..
ಕೋಟಿ ಎಂಬುದು (Crore) ಹೌದು ನಿಜ..
ಆದರೆ ಅದರ ಮತ್ತೊಂದು ಅರ್ಥ ವಿಧ (Types) ಅಂದರೆ ಸನಾತನ ಧರ್ಮದಲ್ಲಿ 33 ಕೋಟಿ ದೇವರುಗಳಿವೆ ಎಂಬರ್ಥದಲ್ಲಿ ಕೋಟಿ ಶಬ್ದವನ್ನು ಬಳಸಬೇಕಿಲ್ಲ...

ಇದರ ಸ್ಪಷ್ಟಾರ್ಥ ,

33 ದೇವರುಗಳ ಪರಿವಾರವೆಂದು..

ಅವು :
12 ಆದಿತ್ಯರು + 11 ರುದ್ರರು + 8 ವಸುಗಳು + ಪ್ರಜಾಪತಿ ಬ್ರಹ್ಮ + ಶ್ರೀಹರಿ ವಿಷ್ಣು = ಒಟ್ಟಿಗೆ 33 ದೇವಕುಟುಂಬಗಳು..

12 ಆದಿತ್ಯರು (ದ್ವಾದಶಾದಿತ್ಯರು) - 
1. ತ್ವಷ್ಟ ,
2. ಪೂಷ , 
3. ವಿವಸ್ವಾನ್ , 
4. ಮಿತ್ರ , 
5. ಧಾತಾ , 
6. ವಿಷ್ಣು , 
7. ಭಗ , 
8. ವರುಣ , 
9. ಸವಿತೃ , 
10. ಶಕ್ರ , 
11. ಅಂಶ , 
12. ಅರ್ಯಮಾ. 

11 ರುದ್ರರು (ಏಕಾದಶರುದ್ರಾಃ) - 
1. ಮನ್ಯು ,
2. ಮನು , 
3. ಮಹಿನಸ , 
4. ಮಹಾನ್ , 
5. ಶಿವ , 
6. ಋತಧ್ವಜ , 
7. ಉಗ್ರರೇತಾ , 
8. ಭವ , 
9. ಕಾಲ , 
10. ವಾಮದೇವ , 
11. ಧೃತವೃತ..

8 ವಸುಗಳು (ಆಷ್ಟವಸವಃ) - 
1. ದ್ರೋಣ , 
2. ಪ್ರಾಣ , 
3. ಧ್ರುವ , 
4. ಅಕ , 
5. ಅಗ್ನಿ , 
6. ದೋಷ , 
7. ವಸು , 
8. ವಿಭಾವಸು.

ಈ ಜಗತ್ತಿನ ಸೃಷ್ಟಿಕರ್ತ ಬ್ರಹ್ಮ ಹಾಗೂ ಜಗತ್ತಿನ ಪರಿಪಾಲಕ ಮಹಾವಿಷ್ಣು..

ಆದ್ದರಿಂದ 33 ಕೋಟಿ
ದೇವರುಗಳು ಎಂಬುದೇ ತಪ್ಪು ಕಲ್ಪನೆ..
33 ದೇವತಾ ಪರಿವಾರಗಳಷ್ಟೇ..

ವಸ್ತುತಃ ಸನಾತನ ಧರ್ಮದಲ್ಲಿ ದೇವನೊಬ್ಬನೇ..
ಆತ ಬ್ರಹ್ಮನ್..
ದೇವನೊಬ್ಬನಾದರೂ ನಾಮ ಹಲವು..
ಯಾವ ದೇವರನ್ನು ಪೂಜಿಸಿದರೂ ಅದು 
ಸರ್ವಶಕ್ತನಾದ ಬ್ರಹ್ಮನನ್ನೇ ಸೇರುತ್ತದೆ.

"ಏಕಂ ಸದ್ವಿಪ್ರಾಃ ಬಹುಧಾ ವದಂತಿ"
(ಇರುವುದೊಂದೇ ಸತ್ (ಪರಮಾತ್ಮ) ಆದರೆ 
ಜನರು ಬಹಳ ಹೆಸರಿನಿಂದ ಕರೆಯುತ್ತಾರೆ)

******


ಹಿಂದೂ ಧಾರ್ಮಿಕ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿರುವ 33 ಕೋಟಿ ದೇವತೆಗಳು ಯಾರು, ಅವರ ಹೆಸರುಗಳೇನು ಗೊತ್ತೇ!?

ಹಿಂದೂ ಧರ್ಮ – ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳ ಉಲ್ಲೇಖವಿದೆ. ಬಹುತೇಕ ಜನರು ಇಲ್ಲಿ ‘ಕೋಟಿ’ ಅಂದರೆ ಸಂಖ್ಯೆ ಅಂದುಕೊಂಡಿದ್ದಾರೆ. ಮತ್ತು 33 ಕೋಟಿ ಹೆಸರುಗಳನ್ನು ಹೇಳಿರೆಂದು ತಾಕೀತು ಮಾಡುತ್ತಾರೆ. ವಾಸ್ತವದಲ್ಲಿ, ಈ ‘ಕೋಟಿ’ ಸಂಖ್ಯೆಯನ್ನು ಸೂಚಿಸುವ ಕೋಟಿಯಲ್ಲ. ಸಂಸ್ಕೃತದಲ್ಲಿ ‘ಕೋಟಿ’ ಅಂದರೆ ‘ವಿಧ’, ‘ವರ್ಗ’ (type) ಎಂಬ ಅರ್ಥವೂ ಇದೆ.

ಉದಾ: ಉಚ್ಚಕೋಟಿ. ಇದರ ಅರ್ಥ ಉಚ್ಚ ವರ್ಗಕ್ಕೆ ಸೇರಿದವರು ಎಂದು. ಹಾಗೆಯೇ ಮತ್ತೊಂದು ಉದಾಹರಣೆ : ಸಪ್ತಕೋಟಿ ಬುದ್ಧರು. ಇದರ ಅರ್ಥ, ಏಳು ಪ್ರಧಾನ ಬುದ್ಧರು ಎಂದು. 

ಯಜುರ್ವೇದ, ಅಥರ್ವ ವೇದ, ಶತಪಥ ಬ್ರಾಹ್ಮಣ ಮೊದಲಾದ ಪ್ರಾಚೀನ ಕೃತಿಗಳಲ್ಲಿ 33 ವಿಧದ ದೇವತೆಗಳನ್ನು ಉಲ್ಲೇಖಿಸಲಾಗಿದೆ. ಇವರೇ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು. ಹಿಂದೂ ಗ್ರಂಥಗಳು ಮಾತ್ರವಲ್ಲ, ಬೌದ್ಧ, ಪಾರಸಿ ಮೊದಲಾದವು ಕೂಡಾ 33 ದೇವವರ್ಗಗಳ ಕುರಿತು ಹೇಳುತ್ತವೆ. ಬೌದ್ಧರ ದಿವ್ಯ ವಾದನ ಮತ್ತು ಸುವರ್ಣ ಪ್ರಭಾಸ ಸೂತ್ರಗಳಲ್ಲಿ ಇದರ ಉಲ್ಲೇಖವಿದೆ.

ಈಗ ದೇವತೆಗಳ ಈ 33 ವರ್ಗಗಳನ್ನೂ, ಅವುಗಳಲ್ಲಿ ಬರುವ ದೇವತೆಗಳ ಹೆಸರನ್ನೂ ನೋಡೋಣ :

12 ಆದಿತ್ಯರು (ದ್ವಾದಶಾದಿತ್ಯರು) : 1. ತ್ವಷ್ಟ  2. ಪೂಷ  3. ವಿವಸ್ವಾನ್  4. ಮಿತ್ರ  5. ಧಾತಾ  6. ವಿಷ್ಣು  7. ಭಗ  8. ವರುಣ  9. ಸವಿತೃ 10. ಶಕ್ರ  11. ಅಂಶ  12. ಅರ್ಯಮ

11 ರುದ್ರರು (ಏಕಾದಶರುದ್ರಾಃ) : 1. ಮನ್ಯು  2. ಮನು  3. ಮಹಿನಸ  4. ಮಹಾನ್  5. ಶಿವ  6. ಋತಧ್ವಜ  7. ಉಗ್ರರೇತಾ  8. ಭವ  9. ಕಾಲ  10. ವಾಮದೇವ  11. ಧೃತವೃತ

8 ವಸುಗಳು (ಆಷ್ಟವಸವಃ) : 1. ದ್ರೋಣ 2. ಪ್ರಾಣ 3. ಧ್ರುವ 4. ಅಕ  5. ಅಗ್ನಿ 6. ದೋಷ 7. ವಸು 8. ವಿಭಾವಸು.

ಮತ್ತಿಬ್ಬರು : 1. ಇಂದ್ರ 2.ಪ್ರಜಾಪತಿ


ತ್ರಯತ್ರಿಂಶತಿ (33) ಕೋಟಿ ದೇವತೆಗಳು ಯಾರೆಲ್ಲ ಎಂದು ತಿಳಿಯಿತಲ್ಲ? ಈ ಹೆಸರುಗಳನ್ನು ಬಾಯಿಪಾಠ ಮಾಡುವುದು ಬಹಳ ಸುಲಭ. ಯಾರಾದರೂ ಇನ್ನು 33 ಕೋಟಿ ದೇವತೆಗಳ ಹೆಸರು ಹೇಳಿ ಎಂದರೆ ಹಿಂದೆ ಮುಂದೆ ನೋಡುವ ಅಗತ್ಯವೇ ಇಲ್ಲ! ಅಲ್ಲವೆ?
*****


ಸಂಸ್ಕೃತದಲ್ಲಿ 'ಕೋಟಿ' ಅಂದರೆ 'ವಿಧ', 'ವರ್ಗ' (type) ಎಂಬ ಅರ್ಥವೂ ಇದೆ.

ಉದಾ: ಉಚ್ಚಕೋಟಿ, ಇದರ ಅರ್ಥ ಉಚ್ಚ ವರ್ಗಕ್ಕೆ ಸೇರಿದವರು ಎಂದು, ಹಾಗೆಯೇ ಮತ್ತೊಂದು ಉದಾಹರಣೆ : ಸಪ್ತಕೋಟಿ ಬುದ್ಧರು,ಇದರ ಅರ್ಥ, ಏಳು ಪ್ರಧಾನ ಬುದ್ಧರು ಎಂದು.
ಯಜುರ್ವೇದ, ಅಥರ್ವಣ ವೇದ, ಶತಪಥ ಬ್ರಾಹ್ಮಣ
ಮೊದಲಾದ ಪ್ರಾಚೀನ ಕೃತಿಗಳಲ್ಲಿ 33 ವಿಧವಾದದ ದೇವತೆಗಳನ್ನು ಉಲ್ಲೇಖಿಸಲಾಗಿದೆ. ಇವರ 'ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು ಹಿಂದೂ ಗ್ರಂಥಗಳು ಮಾತ್ರವಲ್ಲ, ಬೌದ್ಧ,ಪಾರಸಿ ಮೊದಲಾದವು ಕೂಡಾ 33 ದೇವವರ್ಗಗಳ ಕುರಿತು ಹೇಳುತ್ತವೆ. ಬೌದ್ದರ ದಿವ್ಯ ವಾದನ ಮತ್ತು ಸುವರ್ಣ ಪ್ರಭಾಸ ಸೂತ್ರಗಳಲ್ಲಿ ಇದರ ಉಲ್ಲೇಖವಿದೆ.

ಈಗ ದೇವತೆಗಳ ಈ 33
ವರ್ಗಗಳನ್ನೂ. ಅವುಗಳಲ್ಲಿ ಬರುವ ದೇವತೆಗಳ ಹೆಸರನ್ನೂ ನೋಡೋಣ :

#12_ಆದಿತ್ಯರು_(ದ್ವಾದಶಾಧಿತ್ಯರು) : 1. ತ್ವಷ್ಟ 
2 ಪೂಷ 
3, ವಿವಸ್ವಾನ್ 
4, ಮಿತ್ರ 
5, ಧಾತಾ 
6. ವಿಷ್ಣು 
7. ಭಗ 
8. ವರುಣ: 
9. ಸವಿತೃ 
10. ಶಕ್ರ
11.ಅಂಶ 
12. ಆರ್ಯಮ

#11_ರುದ್ರರು (ಏಕಾದಶರುದ್ರಾ) : 
1 ಮನ್ಯು
2 ಮನು 
3, ಮಹಿನಸ 
4, ಮಹಾನ್
5. ಶಿವ 
6. ಋತಧ್ವಜ 
7. ಉಗ್ರರೇತಾ
8. ಭವ
9 ಕಾಲ
10, ವಾಮದೇವ 
11.ಧೃತವೃತ

#8_ವಸುಗಳು (ಆಷ್ಟವಸವಃ) : 1.ಧರಾ
 2.ಪಾವಕ
3.ಅನಿಲ 
4.ಆಪ 
5.ಪ್ರತ್ಯುಷ 
6.ಪ್ರಭಾಸ 
7.ಸೋಮ 
8.ಧ್ರುವ 

#ಮತ್ತಿಬ್ಬರು : 1. ಇಂದ್ರ
 2.ಪ್ರಜಾಪತಿ

ತ್ರಯತ್ರಿಂಶತಿ (33) ಕೋಟಿ ದೇವತೆಗಳು ಯಾರೆಲ್ಲ ಎಂದು ತಿಳಿಯಿತಲ್ಲ? ಈ ಹೆಸರುಗಳನ್ನು ಬಾಯಿಪಾಠ ಮಾಡುವುದು ಬಹಳ ಸುಲಭ, ಯಾರಾದರೂ ಇನ್ನು 33 ಕೋಟಿ ದೇವತೆಗಳ ಹೆಸರು ಹೇಳಿ ಎಂದರೆ ಹಿಂದೆ ಮುಂದೆ ನೋಡುವ ಅಗತ್ಯವೇ ಇಲ್ಲ! ಅಲ್ಲವೆ?
***


**

No comments:

Post a Comment