ಓಂ ಸಹ ನಾ’ವವತು | ಸಹ ನೌ’ ಭುನಕ್ತು | ಸಹ ವೀರ್ಯಂ’ ಕರವಾವಹೈ | ತೇಜಸ್ವಿನಾವಧೀ’ತಮಸ್ತು ಮಾ ವಿ’ದ್ವಿಷಾವಹೈ” || ಓಂ ಶಾಂತಿಃ ಶಾಂತಿಃ ಶಾಂತಿಃ’ ||
ಓಂ || ಸಹಸ್ರಶೀರ್’ಷಂ ದೇವಂ ವಿಶ್ವಾಕ್ಷಂ’ ವಿಶ್ವಶಂ’ಭುವಮ್ | ವಿಶ್ವಂ’ ನಾರಾಯ’ಣಂ ದೇವಮಕ್ಷರಂ’ ಪರಮಂ ಪದಮ್ | ವಿಶ್ವತಃ ಪರ’ಮಾನ್ನಿತ್ಯಂ ವಿಶ್ವಂ ನಾ’ರಾಯಣಗ್‍ಮ್ ಹ’ರಿಮ್ | ವಿಶ್ವ’ಮೇವೇದಂ ಪುರು’ಷ-ಸ್ತದ್ವಿಶ್ವ-ಮುಪ’ಜೀವತಿ | ಪತಿಂ ವಿಶ್ವ’ಸ್ಯಾತ್ಮೇಶ್ವ’ರಗ್ಂ ಶಾಶ್ವ’ತಗ್‍ಮ್ ಶಿವ-ಮಚ್ಯುತಮ್ | ನಾರಾಯಣಂ ಮ’ಹಾಙ್ಞೇಯಂ ವಿಶ್ವಾತ್ಮಾ’ನಂ ಪರಾಯ’ಣಮ್ | ನಾರಾಯಣಪ’ರೋ ಜ್ಯೋತಿರಾತ್ಮಾ ನಾ’ರಾಯಣಃ ಪ’ರಃ | ನಾರಾಯಣಪರಂ’ ಬ್ರಹ್ಮ ತತ್ತ್ವಂ ನಾ’ರಾಯಣಃ ಪ’ರಃ | ನಾರಾಯಣಪ’ರೋ ಧ್ಯಾತಾ ಧ್ಯಾನಂ ನಾ’ರಾಯಣಃ ಪ’ರಃ | ಯಚ್ಚ’ ಕಿಂಚಿಜ್ಜಗತ್ಸರ್ವಂ ದೃಶ್ಯತೇ” ಶ್ರೂಯತೇஉಪಿ’ ವಾ ||
ಅಂತ’ರ್ಬಹಿಶ್ಚ’ ತತ್ಸರ್ವಂ ವ್ಯಾಪ್ಯ ನಾ’ರಾಯಣಃ ಸ್ಥಿ’ತಃ | ಅನಂತಮವ್ಯಯಂ’ ಕವಿಗ್‍ಮ್ ಸ’ಮುದ್ರೇஉಂತಂ’ ವಿಶ್ವಶಂ’ಭುವಮ್ | ಪದ್ಮಕೋಶ-ಪ್ರ’ತೀಕಾಶಗ್ಂ ಹೃದಯಂ’ ಚಾಪ್ಯಧೋಮು’ಖಮ್ | ಅಧೋ’ ನಿಷ್ಟ್ಯಾ ವಿ’ತಸ್ಯಾಂತೇ ನಾಭ್ಯಾಮು’ಪರಿ ತಿಷ್ಠ’ತಿ | ಜ್ವಾಲಮಾಲಾಕು’ಲಂ ಭಾತೀ ವಿಶ್ವಸ್ಯಾಯ’ತನಂ ಮ’ಹತ್ | ಸಂತತ’ಗ್‍ಮ್ ಶಿಲಾಭಿ’ಸ್ತು ಲಂಬತ್ಯಾಕೋಶಸನ್ನಿ’ಭಮ್ | ತಸ್ಯಾಂತೇ’ ಸುಷಿರಗ್‍ಮ್ ಸೂಕ್ಷ್ಮಂ ತಸ್ಮಿನ್” ಸರ್ವಂ ಪ್ರತಿ’ಷ್ಠಿತಮ್ | ತಸ್ಯ ಮಧ್ಯೇ’ ಮಹಾನ’ಗ್ನಿರ್-ವಿಶ್ವಾರ್ಚಿ’ರ್-ವಿಶ್ವತೋ’ಮುಖಃ | ಸೋஉಗ್ರ’ಭುಗ್ವಿಭ’ಜಂತಿಷ್ಠ-ನ್ನಾಹಾ’ರಮಜರಃ ಕವಿಃ | ತಿರ್ಯಗೂರ್ಧ್ವಮ’ಧಶ್ಶಾಯೀ ರಶ್ಮಯ’ಸ್ತಸ್ಯ ಸಂತ’ತಾ | ಸಂತಾಪಯ’ತಿ ಸ್ವಂ ದೇಹಮಾಪಾ’ದತಲಮಸ್ತ’ಕಃ | ತಸ್ಯಮಧ್ಯೇ ವಹ್ನಿ’ಶಿಖಾ ಅಣೀಯೋ”ರ್ಧ್ವಾ ವ್ಯವಸ್ಥಿ’ತಃ | ನೀಲತೋ’-ಯದ’ಮಧ್ಯಸ್ಥಾದ್-ವಿಧ್ಯುಲ್ಲೇ’ಖೇವ ಭಾಸ್ವ’ರಾ | ನೀವಾರಶೂಕ’ವತ್ತನ್ವೀ ಪೀತಾ ಭಾ”ಸ್ವತ್ಯಣೂಪ’ಮಾ | ತಸ್ಯಾ”ಃ ಶಿಖಾಯಾ ಮ’ಧ್ಯೇ ಪರಮಾ”ತ್ಮಾ ವ್ಯವಸ್ಥಿ’ತಃ | ಸ ಬ್ರಹ್ಮ ಸ ಶಿವಃ ಸ ಹರಿಃ ಸೇಂದ್ರಃ ಸೋஉಕ್ಷ’ರಃ ಪರಮಃ ಸ್ವರಾಟ್ ||
ಋತಗ್‍ಮ್ ಸತ್ಯಂ ಪ’ರಂ ಬ್ರಹ್ಮ ಪುರುಷಂ’ ಕೃಷ್ಣಪಿಂಗ’ಲಮ್ | ಊರ್ಧ್ವರೇ’ತಂ ವಿ’ರೂಪಾ’ಕ್ಷಂ ವಿಶ್ವರೂ’ಪಾಯ ವೈ ನಮೋ ನಮಃ’ ||
ಓಂ ನಾರಾಯಣಾಯ’ ವಿದ್ಮಹೇ’ ವಾಸುದೇವಾಯ’ ಧೀಮಹಿ | ತನ್ನೋ’ ವಿಷ್ಣುಃ ಪ್ರಚೋದಯಾ”ತ್ ||
ಓಂ ಶಾಂತಿಃ ಶಾಂತಿಃ ಶಾಂತಿಃ’ ||
****
95. ನಾರಾಯಣ ಸೂಕ್ತ (ಮುಂದುವರೆದುದು)
#ವೇದಪರಿಚಯ
ಅಧೋನಿಷ್ಟ್ಯಾ ವಿತಸ್ತ್ಯಾಂತೇ ನಾಭ್ಯಾಮುಪ-ರಿ ತಿಷ್ಠತಿ|
ಜ್ವಾಲಮಾಲಾಕುಲಂ ಭಾತೀ ವಿಶ್ವಸ್ಯಾಯತನಂ ಮಹತ್||
ಶರೀರದ ಸಂರಚನೆಯೊಂದಿಗೆ ಸಂಲಗ್ನವಾಗುವಂತೆ ನೀಡಲಾಗಿರುವ ವಿವರಣೆಯು ಶರೀರದ ಪಾವಿತ್ರ್ಯತೆಯನ್ನು ತಿಳಿಸುವಂತಿದೆ. ಮೇಲೆ ಹೇಳಿದ ಹೃದಯಕಮಲವು ಕುತ್ತಿಗೆಯಿಂದಾರಂಭಿಸಿ, ಹೊಕ್ಕುಳಿನಿಂದ ಮೇಲುಭಾಗದವರೆಗಿನ ವಿತಸ್ತಿ ಎಂಬಲ್ಲಿದೆ. ಅಲ್ಲಿಂದ ಪರಬ್ರಹ್ಮನು ಜ್ವಾಲೆಯಮಾಲೆಯಂತೆ ಪರಿಶೋಭಿತನಾಗಿ ವಿಶ್ವಕ್ಕೆ ನೆಲೆಯಾಗಿರುವ ಮಹಾನ್ ಎನ್ನಿಸಿದ್ದಾನೆ.
ಸಂತತಗ್ಂ ಶಿಲಾಭಿಸ್ತು ಲಂಬತ್ಯಾಕೋಶಸನ್ನಿಭಮ್|
ತಸ್ಯಾಂತೇ ಸುಷಿರಗ್ಂ ಸೂಕ್ಷ್ಮಂ ತಸ್ಮಿನ್ ಥ್ಸರ್ವಂ ಪ್ರತಿಷ್ಠಿತಮ್||
ಕೆಳಮುಖನಾಗಿ ಇಳಿಬಿದ್ದಿರುವ ಹೃದಯಕಮಲದ ಸುತ್ತಲೂ ಅನೇಕ ನಾಡಿಗಳಿವೆ. ಅದರ ನಡುವೆ ಸುಷುಮ್ನಾ ಎಂಬ ಸೂಕ್ಷ್ಮವಾದ ನಾಡಿಯ ಅಂತರ್ಭಾಗವಿದೆ. ಅದರೊಳಗೆ ಸಕಲ ಜಗತ್ತು ಅಡಗಿದೆ.
ತಸ್ಯ ಮಧ್ಯೇ ಮಹಾನಗ್ನಿರ್ವಿಶ್ವಾರ್ಚಿರ್ವಿಶ್ವತೋ ಮುಖಃ|
ಸೋಗ್ರಭುಗ್ವಿಭಜಂತಿಷ್ಠನ್ನಾಹಾರಮಜರಃ ಕವಿಃ|
ತಿರ್ಯಗೂರ್ಧ್ವಮಧಶ್ಯಾಯೀ ರಶ್ಮಯಸ್ತಸ್ಯ ಸಂತತಾ||
ಅದರ ಮಧ್ಯದಲ್ಲಿ ಎಲ್ಲ ಕಡೆ ಜ್ವಾಲೆಗಳನ್ನು ಹರಡಿಕೊಂಡಿರುವ ಅಗ್ನಿಯಿರುವುದು. ತನಗೆ ದೊರಕಿದ ಹವಿರ್ಭಾಗವನ್ನು ಆ ಅಗ್ನಿಯು ಶರೀರದ ಇತರ ಅಂಗಾಗಗಳಿಗೂ ಆಹಾರವಾಗಿ ನೀಡುವುದು. ಆದರೆ ಈ ಹಂತದಲ್ಲಿ ಅಗ್ನಿಯು ಜೀರ್ಣವಾಗದೇ ಉಳಿದುಕೊಳ್ಳುವದರಿಂದ ಅದಕ್ಕೆ ನಿರಂತರತೆಯಿದೆ. ಹಾಗಾಗಿ ಅದು ಅಜರ. ಅದರ ಕಿರಣಗಳು ಮೇಲೆ, ಕೆಳಗೆ, ಅಡ್ಡಲಾಗಿ ಹರಡಿಕೊಂಡಿವೆ.
ಸಂತಾಪಯತಿ ಸ್ವಂ ದೇಹಮಾಪಾದತಲ ಮಸ್ತಕಃ|
ತಸ್ಯ ಮಧ್ಯೇ ವಹ್ನಿ ಶಿಖಾ ಅಣೀಯೋರ್ಧ್ವಾ ವ್ಯವಸ್ಥಿತಃ||
ಈ ಅಗ್ನಿಯು ಕಾಲಿನಿಂದಾರಂಭಿಸಿ, ತಲೆಯವರೆಗೂ ತಾಪಮಾನವನ್ನು ಉಳಿಸಿಕೊಂಡಿರುತ್ತದೆ. ಇದರ ಮಧ್ಯದಲ್ಲಿ ಸೂಕ್ಷ್ಮವಾದ ವ್ಯವಸ್ಥಿತವಾಗಿ ಮೇಲುದಿಕ್ಕಿಗೆ ಉರಿಯುತ್ತಿರುವ ಅಗ್ನಿಯ ಜ್ವಾಲೆಯಿದೆ.
ನೀಲತೋ ಯದಮಧ್ಯಸ್ಥಾದ್ವಿದ್ಯುಲ್ಲೇಖೇವ ಭಾಸ್ವರಾ|
ನೀವಾರಶೂಕವತ್ತನ್ವೀ ಪೀತಾಭಾಸ್ವತ್ಯಣೂಪಮಾ||
ಈ ಜ್ವಾಲೆಯು ನೀಲವರ್ಣದ ಮೋಡದ ನಡುವೆ ಹೊಳೆಯುವ ಮಿಂಚಿನಂತೆ ಹೊಳೆಯುತ್ತಿರುತ್ತದೆ. ನವಣೆಯೆಂಬ ತೃಣಧಾನ್ಯದಂತೆ ಚೂಪಾಗಿ, ತೆಳ್ಳಗೆ, ಹಳದಿ ಬಣ್ಣದಲ್ಲಿ ಅಣುವಿನಂತೆ ಪ್ರಕಾಶಿಸುತ್ತದೆ.
ತಸ್ಯಾಶ್ಶಿಖಾಯಾಮಧ್ಯೇ ಪರಮಾತ್ಮಾ ವ್ಯವಸ್ಥಿತಃ|
ಸ ಬ್ರಹ್ಮ ಸ ಶಿವಃ ಸ ಹರಿಃ ಸೇಂದ್ರ ಸ್ಸೋಕ್ಷರಃ ಪರಮ ಸ್ಸ್ವರಾಟ್||
ಈ ಶಿಖೆಯ ಮಧ್ಯದಲ್ಲಿ ಪರಮಾತ್ಮನು ನೆಲೆಗೊಂಡಿದ್ದಾನೆ. ಆತನೇ ಬ್ರಹ್ಮ, ಶಿವ, ಇಂದ್ರ, ಅಕ್ಷರ (ಅ-ಕ್ಷರ – ನಾಶವಿಲ್ಲದವ) ಪರಮ ಹಾಗೂ ಸ್ವರಾಜನಾಗಿದ್ದಾನೆ.
ಮೇಲಿನ ವಿವರಣೆಗಳನ್ನು ಆಧರಿಸಿ ರಚಿಸಿದ ವರ್ಣಚಿತ್ರವೊಂದನ್ನು ಊಹಿಸಿಕೊಳ್ಳಿ. ಕಲಾವಿದನ ಕಲ್ಪನೆಯನ್ನು ಪದಗಳಲ್ಲಿ ಸಾಕಾರಮಾಡಿರುವ ಈ ಸೂಕ್ತದ ಸೌಂದರ್ಯ ಅನುಪಮವಾದುದು. ಅಂತೆಯೇ ಮಾನವ ಶರೀರದ ಪಾವಿತ್ರ್ಯತೆಯನ್ನು ಇದರ ಮೂಲಕ ಅರಿತವನಿಗೆ, ಅದನ್ನು ಒಂದು ನಿಧಿಯೆಂಬಂತೆ ಕಾಪಾಡಿಕೊಳ್ಳಲು ಪ್ರೇರಣೆ ನೀಡುತ್ತದೆ.
*****
*

No comments:
Post a Comment