SEARCH HERE

Tuesday 1 January 2019

ಆಂಡಾಳ್ Aandaal ಗೋದಾ ದೇವಿ ಗೋಧಾ goda devi goda stuti


ಆಂಡಾಳ್ (ಗೋದಾ ದೇವಿ )
ತಿರುನಕ್ಷತ್ರ : ತಿರುವಾಡಿಪ್ಪೂರಂ
ಅವತಾರ ಸ್ಥಳ : ಶ್ರೀವಿಲ್ಲಿಪುತ್ತೂರ್
ಆಚಾರ್ಯರು : ಪೆರಿಯಾಳ್ವಾರ್
ಕೃತಿಗಳು : ತಿರುಪ್ಪಾವೈ, ನಾಚ್ಚಿಯಾರ್ ತಿರುಮೊೞಿ 

ತಿರುಪ್ಪಾವೈ ೬೦೦೦ ಪಡಿ  ವ್ಯಾಖ್ಯಾನದಲ್ಲಿ ಪೆರಿಯಾವಾಚ್ಚಾನ್ ಪಿಳ್ಳೈ  ಮೊದಲಿಗೆ  ಎಲ್ಲಾ ಆಳ್ವಾರುಗಳಿಗಿಂತಲೂ ಗೋದೆಗಿರುವ ವೈಶಿಷ್ಟ್ಯವನ್ನು ಎತ್ತಿ ತೋರಿದ್ದಾರೆ. ಅವರು ಜೀವಾತ್ಮಾಗಳಲ್ಲಿರುವ ವಿವಿಧ ಸ್ತರಗಳನ್ನು ತೋರಿ, ಅವರುಗಳ ನಡುವೆ ಇರುವ ವ್ಯತ್ಯಾಸಗಳನ್ನೂ ಅದ್ಭುತವಾಗಿ ತೋರಿದ್ದಾರೆ.

ಸಂಸಾರಿಗಳಿಗೂ ಮತ್ತು ಆತ್ಮ ಸ್ವರೂಪವನ್ನರಿತ ಋಷಿಗಳಿಗೂ ನಡುವಣ ಭೇದವು ಚಿಕ್ಕ ಕಲ್ಲಿಗೂ ದೊಡ್ಡ ಪರ್ವತಕ್ಕೂ ಇರುವ ಭೇದದಂತೆ.ಅಂತಹ ಋಷಿಗಳಿಗೂ  ಮತ್ತು ಆಳ್ವಾರುಗಳಿಗೂ (ಭಗವಂತನ ಕೃಪೆಯಿಂದ ಅನುಗ್ರಹಿಸಲ್ಪಟ್ಟ ಜ್ಞಾನವನ್ನು ಹೊಂದಿದವರು, ಮತ್ತು ಅದೇ ಕಾರಣದಿಂದಾಗಿ ಪರಿಶುದ್ಧರಾಗಿರುವವರು) ನಡುವಣ ವ್ಯತ್ಯಾಸವು ಅದೇ ಚಿಕ್ಕ ಕಲ್ಲಿಗೂ ದೊಡ್ಡ ಪರ್ವತಕ್ಕೂ ಇರುವಷ್ಟು.ಇತರ ಆಳ್ವಾರುಗಳಿಗೂ ಮತ್ತು ಪೆರಿಯಾಳ್ವಾರ್‌ರಿಗೂ  ನಡುವೆ ಅದೇ ಚಿಕ್ಕ ಕಲ್ಲಿಗೂ ದೊಡ್ಡ ಪರ್ವತಕ್ಕೂ ಇರುವ ವ್ಯತ್ಯಾಸ.ಹಾಗೆಯೇ ಪೆರಿಯಾಳ್ವಾರ್ ಮತ್ತು ಅಂಡಾಳ್ ನಡುವಣ ವ್ಯತ್ಯಾಸವೂ ಚಿಕ್ಕ ಕಲ್ಲಿಗೆ ಮತ್ತು ದೊಡ್ಡ ಪರ್ವತಕ್ಕೆ ಇರುವ ಅಂತರವನ್ನು ಹೋಲುತ್ತದೆ. ಅದಕ್ಕೆ ಕಾರಣಗಳೇನೆಂದರೆ :ಎಲ್ಲಾ ಆಳ್ವಾರುಗಳೂ ಮೊದಲು ಶ್ರೀಮನ್ನಾರಾಯಣನಿಂದ ಅನುಗ್ರಹಿಸಲ್ಪಟ್ಟು ನಂತರದಲ್ಲಿ ಸಂಸಾರಿಗಳನ್ನು ಎಚ್ಚರಿಸಿದರು (ಭಗವಂತನ ಬಗೆಗೆ ಜ್ಞಾನವನ್ನು ನೀಡಿದರು). ಆದರೆ ಅಂಡಾಳ್ ಸಾಕ್ಷಾತ್ ಭೂಮಿ ದೇವಿಯ ಅವತಾರವಾಗಿದ್ದು ತಾನೇ ಭಗವಂತನನ್ನು ಎಚ್ಚರಗೊಳಿಸಿ ಎಲ್ಲರನ್ನು ರಕ್ಷಿಸುವ ಜವಾಬ್ದಾರಿಯನ್ನು ಜ್ಞಾಪಿಸಿದಳು. ನಂಪಿಳ್ಳೈ ತಮ್ಮ ತಿರುವಿರುತ್ತಮ್ ಮತ್ತು ತಿರುವಯ್ಮೊೞಿ ವ್ಯಾಖ್ಯಾನಗಳಲ್ಲಿ ತೋರಿಸಿರುವಂತೆ ಆಳ್ವಾರುಗಳೆಲ್ಲರೂ ಮೊದಲು ಸಂಸಾರಿಗಳಾಗಿದ್ದು ನಂತರದಲ್ಲಿ ಭಗವಂತನಿಂದ ಅನುಗ್ರಹ ಹೊಂದಿದವರು. ಆದರೆ ಆಂಡಾಳ್ ಸಾಕ್ಷಾತ್ ಭೂಮಿದೇವಿಯ ಅವತಾರ. ಅವಳು ನಿತ್ಯಸೂರಿಯೇ ಆಗಿದ್ದು ವಿಶೇಷವಾಗಿ ಭಗವಂತನ ದಿವ್ಯ ಮಹಿಷಿಯರಲ್ಲಿ ಒಬ್ಬಳು. ಪೆರಿಯಾವಾಚ್ಚಾನ್ ಪಿಳ್ಳೈಯೂ ನಂಪಿಳ್ಳೈ ವ್ಯಾಖ್ಯಾನವನ್ನನುಸರಿಸಿ ಅದೇ ಶೈಲಿಯಲ್ಲಿ ವ್ಯಾಖ್ಯಾನಿಸಿರುವುದು ವಿಶೇಷ.ಗೋದೆಯು ಸ್ವತಃ ಸ್ತ್ರೀಯಾಗಿದ್ದು ಆಕೆಯ ಸ್ವರೂಪಕ್ಕನುಗುಣವಾಗಿ ಭಗವಂತನೊಂದಿಗೆ ಪತಿ-ಪತ್ನಿ ಸಂಬಂಧದಲ್ಲಿ ತೊಡಗಿಸಿಕೊಳ್ಳತಕ್ಕವಳು (ಮಿಕ್ಕ ಎಲ್ಲಾ ಆಳ್ವಾರುಗಳೂ ಪುರುಷರಾಗಿ ಅವತರಿಸಿದ ಕಾರಣ ಸ್ತ್ರೀಸ್ವಭಾವವನ್ನು ಆಪಾದಿಸಿಕೊಳ್ಳಬೇಕಿತ್ತು). ಅಲ್ಲದೆ, ಆಕೆಗೆ ಭಗವಂತನಲ್ಲಿದ್ದ ಪ್ರೇಮ ಸಹಜವಾಗಿ ಉಳಿದ ಆಳ್ವಾರುಗಳ ಪ್ರೀತಿಗಿಂತ ಹೆಚ್ಚಾಗಿತ್ತು.

 ಪಿಳ್ಳೈಲೋಕಾಚಾರ್ಯರು ಜನ್ಮ-ವರ್ಣ ಇತ್ಯಾದಿಗಳ ಭೇದವಿಲ್ಲದೆ ಭಾಗವತರ ವೈಭವವನ್ನು ವರ್ಣಿಸುತ್ತಾರೆ. ಇದರಲ್ಲಿ ಭಗವದನುಭವ/ಕೈಂಕರ್ಯಕ್ಕೆ ಪೂರಕವಾದ ಅನೇಕ ಜನ್ಮಗಳನ್ನಪೇಕ್ಷಿಸಿದ ಅನೇಕ ಉನ್ನತ ವ್ಯಕ್ತಿಗಳ ಉದಾಹರಣೆಗಳನ್ನು ನೀಡುತ್ತಾರೆ. ಈ ಸೂತ್ರದಲ್ಲಿ ಅವರು ಪೆರಿಯಾಳ್ವಾರ್ ಮತ್ತು ಆಂಡಾಳ್ ಇಬ್ಬರೂ ಬ್ರಾಹಣೋತ್ತಮರಾಗಿ ಜನಿಸಿದ್ದರೂ ಕೂಡ ತಾವುಗಳು ಸ್ವತಃ ಬೃಂದಾವನದಲ್ಲಿ ಒಬ್ಬ ಗೋಪಿಕೆಯ ಜನ್ಮವನ್ನು ಬಹಳವಾಗಿ ಅಪೇಕ್ಷಿಸಿದರು ಎಂಬುದನ್ನು ತೋರಿದ್ದಾರೆ. ಗೋದೆಯು ಭಗವಂತನಿಗೆ ಸಂತೋಷ ಉಂಟುಮಾಡುವ ಕೈಂಕರ್ಯವೇ ನಮ್ಮೆಲ್ಲರ ಮುಖ್ಯ ಗುರಿ, ಮತ್ತು ಪ್ರತಿಯೊಬ್ಬರೂ ಅಂತಹ ಕೈಂಕರ್ಯವು ಯಾವುದೇ ರೀತಿಯದ್ದಾದರೂ ಅದರ ಮಹತ್ತ್ವವನ್ನರಿತು ಅದಕ್ಕೆ ಹಂಬಲಿಸಬೇಕು ಎಂಬುದನ್ನು ಸ್ಪಷ್ಟವಾಗಿಯೇ ತೋರಿದ್ದಾಳೆ. 

 ಒಮ್ಮೆ ಎಂಬೆರುಮಾನಾರ್‌ರ ಶಿಷ್ಯರು ಅವರಲ್ಲಿ ತಿರುಪ್ಪಾವೈ ಉಪನ್ಯಾಸವನ್ನು ಮಾಡಿ ತಮಗೆಲ್ಲ ಅದರ ಅರ್ಥಗಳನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತಾರ‍ೆ. ಅದಕ್ಕೆ ಎಂಬೆರುಮಾನಾರ್ “ನಿಮಗೆ ‘ತಿರುಪ್ಪಲ್ಲಾಣ್ಡು’ ಪ್ರಬಂಧಕ್ಕೆ ಅರ್ಥವನ್ನು ಹೇಳಲು ಮತ್ತು ಕೇಳಲು ಜನ ಸಿಗುತ್ತಾರೆ, ಆದರೆ ‘ತಿರುಪ್ಪಾವೈ’ಗೆ ಅರ್ಥವನ್ನು ಹೇಳಲೋ ಕೇಳಲೋ ಜನ ಸುಲಭದಲ್ಲಿ ಸಿಗರು” ಎನ್ನುತ್ತಾರ‍ೆ. ಇದರ ಅರ್ಥ- ಪೆರಿಯಾಳ್ವಾರ್‌ರು ತಿರುಪ್ಪಲ್ಲಾಣ್ಡನ್ನು ಭಗವಂತನಿಗೆ ಮಂಗಳಾಶಾಸನವಾಗಿ (ಪ್ರಥಮ ಪರ್ವ-ಮೊದಲ ಹಂತ) ಹಾಡಿದ್ದಾರೆ. ಇದೇ ನಿಷ್ಠೆಯಲ್ಲಿರುವ ಅನೇಕರು ನಮಗೆ ಸುಲಭದಲ್ಲಿ ದೊರಕಬಹುದು.  ಆದರೆ ತಿರುಪ್ಪಾವೈಯನ್ನು ಆಂಡಾಳ್ ಭಾಗವತರಿಗೆ ಮಂಗಳಾಶಾಸನವಾಗಿ (ಚರಮ ಪರ್ವ – ಅಂತಿಮ ಹಂತ) ಹಾಡಿದ್ದಾಳೆ. ಈ ಉತ್ತಮ ನಿಷ್ಠೆಯಲ್ಲಿರುವ ಜನರು ಸಿಗುವುದು ಬಹಳ ದುರ್ಲಭ ಎಂಬುದಾಗಿದೆ. “ಗಂಡಸರು ತಿರುಪ್ಪಾವೈಯನ್ನು ಕೇಳಲು ಮತ್ತು ವಿವರಿಸಲು ಯೋಗ್ಯರಲ್ಲ” ಎನ್ನುತ್ತಾರೆ ಎಂಬೆರುಮಾನಾರ್. ಇದರರ್ಥ- ತನ್ನ ಗಂಡನ ಮೇಲೆ ಅವಲಂಬಿತಳಾದ ಸ್ತ್ರೀಯಂತೆ ಒಬ್ಬನಿಗೆ ಭಗವಂತನ ಮೇಲೆ ಸಂಪೂರ್ಣವಾದ ಅವಲಂಬನೆಯ ಅರಿವು ಮೂಡಿದರೆ, ಆಗ ಮಾತ್ರ ತಿರುಪ್ಪಾವೈಯಲ್ಲಿ ಹೇಳಿರುವ ಗೂಢಾರ್ಥಗಳು ಗೋದೆಯ ಮನಸ್ಸಿಗೆ ಅನುಸಾರವಾಗಿ ಗೋಚರವಾಗುತ್ತದೆ ಎಂಬುದಾಗಿದೆ.  ಅಷ್ಟೇ ಅಲ್ಲದೆ, “ಸ್ತ್ರೀಯರಲ್ಲೂ ಸಹ, ನಿತ್ಯ ಭಗವಂತನ ಅನುಭವವನ್ನೇ ಅಪೇಕ್ಷಿಸುವ (ಮತ್ತು ಅದರಂತೆಯೇ ಆ ಅನುಭವದಲ್ಲೇ ಮುಳುಗಿರುವ) ಸಾಕ್ಷಾತ್ ಭಗವಂತನ ದಿವ್ಯಮಹಿಷಿಯರೇ ಕೂಡ ಸುಲಭದಲ್ಲಿ ತಿರುಪ್ಪಾವೈ ಅರ್ಥಗಳನ್ನು ವಿವರಿಸಲೋ ಕೇಳಲೋ ಸಾಧ್ಯವಿಲ್ಲ. ಎಲ್ಲ ಆಳ್ವಾರುಗಳ ಉತ್ತಮ ಅಂಶಗಳ ರಾಶಿಯಾದ ಅಂಡಾಳ್ ಮಾತ್ರವೇ ತಿರುಪ್ಪಾವೈನ ಮೂಲ ಅರ್ಥವನ್ನು ಮತ್ತು ಅದರ ಭಾವನ್ನು ತೋರಬಲ್ಲಳು” ಎನ್ನುತ್ತಾರೆ ಎಂಬೆರುಮಾನಾರ್. ಆಂಡಾಳ್‌ ಮತ್ತು ಅವಳ ತಿರುಪ್ಪಾವೈಗೆ ಅಷ್ಟರ ಮಟ್ಟಿಗೆ ಮಹಿಮೆಯಿದೆ.

ಮಾಮುನಿಗಳು ಸಹ ಆಂಡಾಳ್‌ನ ಹಿರಿಮೆಯನ್ನು ತನ್ನ ಉಪದೇಶ ರತ್ತಿನಮಾಲೈಯಲ್ಲಿ ತೋರಿದ್ದಾರೆ.
ಮಾಮುನಿಗಳು ತನ್ನನ್ನು ರಕ್ಷಿಸಲು ಆಂಡಾಳ್ ಪರಮಪದದ ಅತ್ಯುನ್ನತವಾದ ಆನಂದವನ್ನು ಬಿಸುಟು ಈ ಸಂಸಾರಮಂಡಲದಲ್ಲಿ ಪೆರಿಯಾಳ್ವಾರರ ಮಗಳಾಗಿ ಜನಿಸಿದಳಲ್ಲ (ಸ್ವಾನುಭವ) ಎಂದು ಭಾವುಕರಾಗುತ್ತಾರೆ. ಹೇಗೆ ಒಬ್ಬ ತಾಯಿಯು ನೀರಿನಲ್ಲಿ ಮುಳುಗುತ್ತಿರುವ ತನ್ನ ಮಗುವನ್ನು ರಕ್ಷಿಸಲು ತಾನೇ ನೀರಿಗೆ ಧುಮುಕುವಳೋ, ಹಾಗೆಯೇ ಎಲ್ಲರಿಗೂ ತಾಯಿಯಾದ ಅಂಡಾಳ್ ಸಂಸಾರದಲ್ಲಿ ಮುಳುಗುತ್ತಿರುವ ಜೀವಿಗಳನ್ನು ರಕ್ಷಿಸಲು ತಾನೇ ಈ ಸಂಸಾರಕ್ಕೆ ಬಂದಳು.

ಹೇಗೆ ಗೋದೆಗೆ ಮತ್ತೊಬ್ಬರು ಸಮನಾಗಲಾರರೋ, ಹಾಗೆಯೇ ಗೋದೆಯ ಜನ್ಮ ದಿನವಾದ “ತಿರುವಾಡಿಪ್ಪೂರ”ಕ್ಕೂ ಸರಿಸಮನಾದ ದಿನ ಬೇರಿಲ್ಲ ಎನ್ನುತ್ತಾರೆ. ಅಂಡಾಳ್ “ಅಂಜು ಕುಡಿ”ಗೆ ಸಂತತಿ ಎಂದೂ, ಅವಳು ಉಳಿದ ಆಳ್ವಾರ್‌ಗಳಿಗಿಂತಲೂ ಮೇಲಾದವಳೆಂದೂ ಹೇಳಿ, ಆಕೆ ಅತಿಚಿಕ್ಕ ಪ್ರಾಯದಲ್ಲೇ ಭಗವಂತನಲ್ಲಿ ಅಪಾರಪ್ರೀತಿ ಬೆಳೆಸಿಕೊಂಡಿದ್ದನ್ನು ತೋರಿದ್ದಾರೆ. ಪಿಳ್ಳೈಲೋಕಂ ಜೀಯರ್ ತಮ್ಮ ವ್ಯಾಖ್ಯಾನದಲ್ಲಿ “ಅಂಜು ಕುಡಿಯ ಸಂತತಿ” ಎಂಬುದರ ಅರ್ಥವನ್ನು ಹೀಗೆ ವಿವರಿಸಿದ್ದಾರೆ:ಪಂಚಪಾಂಡವರ ಕುಲದಲ್ಲಿ ಜನಿಸಿದ ಪರೀಕ್ಷಿತನಂತೆ ಎಲ್ಲ ಆಳ್ವಾರುಗಳಿಗೂ ಸೇರಿದ ಕುಲದಲ್ಲಿ ಜನಿಸಿದ ಸಂತತಿ.ಪ್ರಪನ್ನ ಕುಲಕ್ಕೆ ಸೇರಿದ ಆಳ್ವಾರ್‌ಗಳ ಸಂತತಿ.ಸದಾಕಾಲವೂ ಭಗವಂತನ ಯೋಗಕ್ಷೇಮದ ಬಗ್ಗೆಯೇ ಚಿಂತೆಯಿಂದಿರುವ (ಅಚ್ಚಮ್=ಭಯ/ಚಿಂತೆ; ಅಂಜುಕುಡಿ=ಅಂಜುವವರು), ಮತ್ತು ಅದೇ ಕಾರಣಕ್ಕೆ ಸದಾ ಭಗವಂತನಿಗೆ ಮಂಗಳಾಶಾಸನಪರರಾಗಿರುವ ಪೆರಿಯಾಳ್ವಾರ್‌ರ ಸಂತತಿ.

ಆಂಡಾಳಿನ ಆಚರ್ಯ ನಿಶ್ಟೆ ಪರಿಶುದ್ದವಾದದು. ಆಂಡಾಳ್ ಎಂಬೆರುಮಾನನ್ನು ಪ್ರೀತಿಯಿಂದ ಕೊಂಡಡಿದಾರೆ. ಅದಕ್ಕೆ ಕಾರಣ ಪರಿಯಾೞ್ವಾರರು ಮತ್ತು ಎಲ್ಲ ಅೞ್ವಾರ್ರಿನ ಎಂಬೆರುಮಾನಿನ ಮೇಲೆ ಇರುವ ಮಮತೆಯೆ ಮತ್ತು ಪ್ರೆಮವೆ. ಇದನ್ನು ನಾವು ಇಲ್ಲಿ ನೋಡಬಹುದು:

ಆಂಡಾಳ್  ( ಗೋದಾ ದೇವಿ )ಚರಿತ್ರೆ

ಆಂಡಾಳ್ ಶ್ರೀವಿಲ್ಲಿಪುತೂರ್ನಲ್ಲಿ ಜನಿಸಿದರು (ಈಗ ನಾಚಿಯಾರ್ ಸನ್ನಿದಿಯಾಗಿದೆ) ತುಳಸಿ ಮಾಡದ ಹತ್ತಿರ. ಸೀತಾ ಪಿರಾಟ್ಟಿ ಹೇಗೆ ಭೂಮಿಯಿಂದ (ಜನಕ ಮಹಾರಾಜ ಭೂಮಿ ಉಳುವಾಗ) ಅವತರಿಸಿದರು, ಅದರಿಂದ ಸೀತಾಯಂದು ಹೆಸರಿಟ್ಟರು. ಹಾಗೆಯೆ ಪೆರಿಯಾೞ್ವಾರ್ ಆಂಡಾಳು ಕೂಡ ಭೂಮಿ ಪಿರಾಟ್ಟಿಯ ಅವತಾರ ತುಳಸಿ ಮಾಡದ ಹತ್ತಿರ ಮತ್ತು ಅವರನ್ನು ಕೋದೈಯಂದು(ಕೋದೈಯಂದರೆ ಮಾಲೈ/ಹುವಿನ ಹಾರ) ಹೆಸರಿಟ್ಟರು.

ಅವರು ಚಿಕ್ಕ ವಯಸಿನಿಂದಲೆ, ಪೆರಿಯಾೞ್ವಾರಿಂದ ಎಮ್ಪೆರುಮಾನಿನ ಲೀಲೆಗಳನ್ನು ತಿಳಿದುಕೊಂಡೆ ಬೆಳೆದರು. ಪೆರಿಯಾೞ್ವಾರವರು ಹುವಿನ ಹಾರವನ್ನು ನಿತ್ಯವು ಕಟ್ಟಿ ಮತ್ತು ಅದನ್ನು ವಟ ಮಹಾಧಾಮ (ವಟ ಪೆರುಂ ಕೊಯಿಲುಡಯಾನ್ ಎಂದು ತಮಿೞಿನಲ್ಲಿ). ಆಂಡಾಳ್ ಎಮ್ಪೆರುಮಾನಿನ ಮೇಲೆ ತುಂಭ ಪ್ರೆಮದಿಂದಿದರು ಮತ್ತು ಅವರನ್ನೆ ಮದುವೆಯಗಲು ಬಯಸಿದರು. ಒಮ್ಮೆ ಪೆರಿಯಾೞ್ವರಿನ ಗೈರುಹಾಜರಿಯಲ್ಲಿ, ಆಂಡಾಳ್, ಎಮ್ಪೆರುಮಾನಿಗೆ ಸಮರ್ಪಿಸ ಬೇಕಾದ ಹುವಿನ ಹಾರವನ್ನು ದರಿಸಿಕೊಂಡು ಮತ್ತು ಅ ಹಾರ ತನಗೆ ಸರಿಯಾಗಿದಯ ಮತ್ತು ತಾನು ಎಮ್ಪೆರುಮಾನಿಗೆ ಸಾರಿಯದ ಜೊಡಿಯೆ ಎಂದು ಪರಿಕ್ಷಿಸಿದರು. ಪೆರಿಯಾೞ್ವಾರ್ ಬಂದಮೇಲೆ ಹಾರವನ್ನು ಎಮ್ಪೆರುಮಾನಿಗೆ ಸಮರ್ಪಿಸಿದರು. ಇದು ಹೀಗೆ ನೆಡಯುತಿತು, ಒಂದು ದಿನ ಆಂಡಾಳ್ ಎಮ್ಪೆರುಮಾನಿಗೆ ಸಮರ್ಪಿಸುವ ಹಾರವನ್ನು ದರಿಸಿರುವುದನ್ನು ಕಂಡು, ಅವರು ತುಂಬಾ ಕೊಪಗೊಂಡರು. ಅವರು ದುಃಖದಿಂದ ಆದಿನ ಎಮ್ಪೆರುಮಾನಿಗೆ ಹಾರವನ್ನು ಸಮರ್ಪಿಸಲಿಲ್ಲ. ಅ ರಾತ್ರಿ ಎಮ್ಪೆರುಮಾನು ಪೆರಿಯಾೞ್ವಾರಿನ ಕನಸಿನಲ್ಲಿ ಬಂದು, ಏಕೆ ಹಾರವನ್ನು ತೆಗೆದುಕೊಂಡು ಬರಲಿಲ್ಲ ಎಂದು ಕೆಲಿದರು. ಆೞ್ವಾರು, ತಮ್ಮ ಮಗಳಡ ಆಂಡಾಳ್ ಎಮ್ಪೆರುಮಾನಿಗೆ ಸಮರ್ಪಿಸ ಬೇಕಾದ ಹಾರವನ್ನು ತನ್ನು ದರಿಸಿಕೊಂಡಿದರಿಂದ, ಅ ಹಾರವು ಎಮ್ಪೆರುಮಾನಿಗೆ ಯೋಗ್ಯವಲ್ಲದಾಗಿದೆ ಎಂದರು. ಆಗ ಎಮ್ಪೆರುಮಾನು ತಮಗೆ ಆಂಡಳ್ ಮೊದಲು ದರಿಸಿದ ಮಾಲೆಯಲ್ಲಿ ವಿಶೆಷವಾದ ಭಕ್ತಿಯಿದು, ಅದು ತಮಗೆ ತುಂಬಾ ಪ್ರೀತಿ ಪಾತ್ರವಾಗಿದೆ ಎಂದರು. ಇದನ್ನು ಕೇಳಿದ ಆೞ್ವಾರು ತುಂಬಾ ಸಂತುಷ್ಟಗೊಂಡರು ಮತ್ತು ಆನಂತರ ಅವರಿಗೆ ಆಂಡಾಳ್ ಮೇಲೆ ಸ್ನೇಹ ಮತ್ತು ಆದರದಿಂದಿದರು. ತದನಂತರ, ಪ್ರತಿ ದಿನವು ಅವರು ಆಂಡಳಿಗೆ ಮೊದಲು ಮಾಲೆಯನ್ನು ಕೊಟ್ಟಿದ ಮೇಲೆ ಎಮ್ಪೆರುಮಾನಿಗೆ ಮಾಲೆಯನ್ನು ಸಮರ್ಪಿಸುತ್ತಾರೆ.

ಆಂಡಾಳ್ ನಾಚಿಯಾರ್ರವರು ಎಮ್ಪೆರುಮಾನಿನ ಮೇಲೆ ಇರುವ ಪರಮ ಭಕ್ತಿಯಿಂದ ಜನಿಸಿದರು, ಏಕೆಂದರೆ ಅವರು ಭೂಮಿ ಪಿರಾಟ್ಟಿಯ ಅಂಶ. ಎಮ್ಪೆರುಮಾನಿನ ಕಡೆಗೆ ಇರುವ ಅವರ ಪ್ರೆಮ ಮತ್ತೆಲ್ಲ ಆೞ್ವಾರರಿಗಿತಲು ತುಂಬಾ ಅಪಾರವದದು. ಎಮ್ಪೆರುಮಾನಿನಿಂದ ಅಗಲಿಕೆಯನ್ನು ತಾಳಲಾರದೆ,ಆಂಡಳ್ರವರು ಅವರನ್ನು ಮದುವೆಯಾಗಲು ದಾರಿಯನ್ನು ಹುಡುಕಲು ತೊಡಗಿದರು. ರಾಸಲೀಲೈಯಿನ ಸಂದರ್ಭದಲ್ಲಿ, ಗೋಪಿಯರು ಕೃಷ್ಣನ ಎಮ್ಪೆರುಮಾನಿನ ಗೈರುಹಜರಿಯಲ್ಲಿ ಯಾವ ದಾರಿಯನ್ನು ಅರಿಸಿದರೋ, ಅದನ್ನೇ ಆಂಡಾಳ್ ಕೂಡ ಪಾಲಿಸಿದರು. ಆಂಡಾಳ್ ವಟ ಪೆರುಂ ಕೊಯಿಲುಡಯಾನ್ನನ್ನು  ಕೃಷನೆಂದು ಭಾವಿಸಿ, ನಂದಗೋಪನ ಮನೆಯೆ ಅವರ ದೆಗುಲವೆಂದು, ಸ್ರೀವಿಲ್ಲಿಪುತುರೆ ಗೊಕುಲವೆಂದು ಮತ್ತು ಅವರ ಸ್ನೆಹಿತರೆ ಗೋಪಿಯರೆಂದುಕೊಂಡರು. 

ಎಮ್ಪೆರುಮಾನು ಬಂದು ಆಂಡಾಳನ್ನು ಅಂಗೀಕರಿಸು. ಆಂಡಾಳ್ ತಾಳಲಾರದ ದುಃಖದಿಂದ, ಎಮ್ಪೆರುಮಾನನ್ನು ತನ್ನ ನಾಚಿಆರ್ ತಿರುಮೋೞಿಯಲ್ಲಿ ಕರೆಯುತಾಳೆ. ನಮ್ಮ ಸಂಪ್ರದಾಯದಲ್ಲಿ ಇರುವ ಸುಮಾರು ಎಲ್ಲ ತತ್ವಗಳನ್ನು ನಾಚಿಆರ್ ತಿರುಮೋೞಿನಲ್ಲಿ ತಿಳಿಸಿದಾರೆ. ನಾಚಿಆರ್ ತಿರುಮೋೞಿಯಿನ ಅರ್ಥವನ್ನು ಆಲಿಸು ಅಥವ ವಾಚನಮಾಡಲು ಮನಸು ತುಂಬಾ ಪಕ್ವಪಡದಿರಬೇಕು.  “ಯಾರಾದರು ತಮ್ಮನ್ನು ಎಮ್ಪೆರುಮಾನನ್ನು ಬಿಟ್ಟು ಬೇರೆಯವರಿಗೆ ಮದುವೆ ಮಾಡಲು ಬಯಸಿದರೆ, ತಮ್ಮ ಪ್ರಾಣವನ್ನು ತ್ಯಜಿಸುತ್ತಾರೆ” ಎಂದು ಹೇಳಿದಾರೆ.  ಎಮ್ಪೆರುಮಾನಿನ ಜೊತೆ ತಮ್ಮ ಮದುವೆಯಾಗುವಂತೆ ಕನಸು ಕಾಣುತ್ತಾರೆ. ಪೆರಿಯಾೞ್ವಾರ್ ಆಂಡಾಳ್ಗೆ ಎಮ್ಪೆರುಮಾನಿನ ಅರ್ಚಾವತಾರ ವೈಭವವನ್ನು ವಿವರಿಸುತ್ತಾರೆ. ಆದರಿಂದ ಆಂಡಾಳ್ ತಿರುವರಂಗನಾತನ ಮೇಲೆ ತುಂಬಾ ಪ್ರೆಮ ಬೆಳೆಸಿಕೊಳ್ಳುತ್ತಾರೆ. ಆೞ್ವಾರ್ಗೆ ಆಂಡಾಳಿನ ಅಭಿಲಾಷೆಯನ್ನು ಹೇಗೆ ನೆರವೇರಿಸುಬೇಕು ಎಂದು ಆತಂಕಗೊಳ್ಳುತ್ತಾರೆ. ಒಮ್ಮೆ ತಮ್ಮ ಕನಸಿನಲ್ಲಿ ಬಂದ ತಿರುವರಂಗನಾತನು, ಆಂಡಾಳನ್ನು ಶ್ರೀರಂಗಮ್ಗೆ ಕರೆತರಲು ಹೇಳುತ್ತಾರೆ. ಈ ಪ್ರಕಾರ ತಿರುವರಂಗನಾತನು ಆಂಡಾಳಿನ ಜೊತೆ ಮದುವೆಯಗಲು. ಆೞ್ವಾರ್ರು ತುಂಬಾ ಸಂತೋಷಗೊಳ್ಳುತ್ತಾರೆ. ಈ ಮಧ್ಯದ ಕಾಲದಲ್ಲಿ ಶ್ರೀರಂಗನಾತನು ಸುಂದರವಾದ ಪಲಕ್ಕು, ಚಾಮರ, ಕೊಡೆ ಮತ್ತು ಅವರ ಕೈಂಕರ್ಯರ್ತಿಗಳನ್ನು ಶ್ರೀವಿಲ್ಲಿಪುತೂರಿಗೆ ಆಂಡಾಳನ್ನು ಕರೆತರಲು ಹೇಳುತ್ತಾರೆ. ಆೞ್ವಾರ್ರು, ವಟ ಪೆರುಂ ಕೊಯಿಲುಡಯ ಪೆರುಮಾಳಿನ ಅನುಮತಿಪಡೆದು, ಶ್ರೀರಂಗಮ್ಗೆ ಆಂಡಾಳ್ ಜೊತೆ ಪಲಕ್ಕಿನಲ್ಲಿ ವಾಧ್ಯ ಮತ್ತು ಭರ್ಜರಿಯಾದ ಮೆರವಣಿಗೆಯ ಜೊತೆ ಹೊರಡುತ್ತಾರೆ.

ಶ್ರೀರಂಗಮ್ಗೆ ಬಂದಮೇಲೆ, ಸುಂದರವಾಗಿ ಅಲಂಕಾರ ಮಾಡಿಕೊಂಡ ಆಂಡಾಳ್, ದೇವಸ್ಥಾನದ ಮುಂದೆ ಪಲಕ್ಕಿನಿಂದ ಹೊರಬಂದು, ಪೆರಿಯ ಪೆರುಮಾಳಿನ ಗರ್ಬಗ್ರುಹವನ್ನು ಪ್ರವೇಷಿ, ಎಮ್ಪೆರುಮಾನನ್ನು ನಮಸ್ಕರಿಸುತ್ತಾರೆ. ತಕ್ಷಣವೆ ಆಂಡಾಳ್ರವರು ಪರಮಪದವನ್ನು ಸೇರುತ್ತಾರೆ.
*****

 +91 99021 75880


ಗೋದಾಸ್ತುತಿಃ (ಸಂಗ್ರಹ) - 1

ಶ್ರೀ ವಿಷ್ಣು ಚಿತ್ತಕುಲನಂದನ ಕಲ್ಪವಲ್ಲೀಂ
ಶ್ರೀರಂಗರಾಜಹರಿಚಂದನಯೋಗದೃಶ್ಯಾಮ್ |
ಸಾಕ್ಷತ್ ಕ್ಷಮಾಂ ಕರುಣಯಾ ಕಮಲಾಮಿವಾನ್ಯಾಂ
ಗೋದಾಮನನ್ಯ ಶರಣಃ ಶರಣಂ ಪ್ರಪದ್ಯೇ ||1||

ಶ್ರೀ ವಿಷ್ಣುಚಿತ್ತಕುಲನಂದನಕಲ್ಪವಲ್ಲೀಂ = ಶ್ರೀ ವಿಷ್ಣುಚಿತ್ತರ ಕುಲವೆಂಬ ನಂದನವನದಲ್ಲಿ ಕಲ್ಪಲತೆಯಂತೆ ಅವತರಿಸಿದ, 
ಶ್ರೀರಂಗರಾಜಹರಿಚಂದನ ಯೋಗದೃಶ್ಯಾಂ = ಶ್ರೀರಂಗನಾಥನ ದೇಹದಲ್ಲಿ ಲೇಪಿಸಿರುವ ಶ್ರೀಗಂಧದ ಸಂಬಂಧದಿಂದ (ನೋಡಲು) ಬಲು ಸುಂದರಳಾದ, ಸಾಕ್ಷಾತ್ - ನೇರವಾಗಿ, 
ಕ್ಷಮಾಂ = (ಅವತರಿಸಿರುವ) ಭೂಮಿತಾಯಿಯೇ ಆದ ('ಕ್ಷಮಾ' ಅಥವಾ 'ತಾಳ್ಮೆ'ಯ ಗುಣವೇ ಮೂರ್ತಿವೆತ್ತಂತಿರುವ)
ಕರುಣಯಾ = (ಪರದುಃಖ ನಿರಾಚಿಕೀರ್ಷಾ - ಇತರರು ದುಃಖದಲ್ಲಿರುವ ಅದರಿಂದ ಅವರನ್ನು ಪಾರು ಮಾಡುವ) ದಯಾಗುಣದಿಂದ, 
ಅನ್ಯಾಂ = ಬೇರೊಬ್ಬಳಾದ,
ಕಮಲಾಂ ಇವ = ಮಹಾಲಕ್ಷ್ಮಿಯಂತಿರುವ, 
ಗೋದಾಂ = ಗೋದಾದೇವಿಯನ್ನು,
ಅನನ್ಯ ಶರಣಃ = ಅನನ್ಯಗತಿಕನಾದ ನಾನು,
ಶರಣಂ = ರಕ್ಷಕಳನ್ನಾಗಿ,
ಪ್ರಪದ್ಯೇ = ಆಶ್ರಯಿಸಿದ್ದೇನೆ  ||1||

    ದೇವೇಂದ್ರನ ಉಪವನಕ್ಕೆ ನಂದನವನವೆಂದು ಹೆಸರು. ಅಲ್ಲಿ ದೇವತೆಗಳೆಲ್ಲರಿಗೂ ಸಂತೋಷವನ್ನುಂಟುಮಾಡುವ ನಾನಾತರಹವಾದ ಪುಷ್ಪಗಳು ಎಲ್ಲ ಕಾಲಗಳಲ್ಲಿಯೂ ಅರಳಿರುತ್ತವೆ. ಅಂತೆಯೇ ಭಗವಂತನಿಗೂ ಮತ್ತಿತರ ಚೇತನವರ್ಗಕ್ಕೂ ಸಂತೋಷವನ್ನುಂಟುಮಾಡುವ, ಎಂದೂ ಬಾಡದ 'ಅಹಿಂಸಾ ಪ್ರಥಮಂ ಪುಷ್ಪಂ, ಪುಷ್ಪಮಿಂದ್ರಿಯ ನಿಗ್ರಹಃ, ಸರ್ವಭೂತದಯಾ ಪುಷ್ಪಂ ಕ್ಷಾಂತಿಃ ಪುಷ್ಪವಿಶೇಷತಃ | ಶಾಂತಿಃ ಪುಷ್ಪಂ ತಪಃ ಪುಷ್ಪಂ ಧ್ಯಾನಂ ಪುಷ್ಪಂ ತಥೈವ ಚ | ಸತ್ಯಂ ಚಾಷ್ಟವಿಧಂ ಪುಷ್ಟಂ ವಿಷ್ಣೋಃ ಪ್ರಿತಿಕರಂ ಮಹತ್||" - ಎಂದು ಹೇಳಲಾಗುವ ಅತ್ಯುತ್ತಮವಾದ ದಿವ್ಯವಾದ ಪುಷ್ಪಭರಿತವಾಗಿದ್ದುದು ಶ್ರೀ ವಿಷ್ಣುಚಿತ್ತರಕುಲ. ವಿಶೇಷವಾಗಿ ಈ ಕುಲದಲ್ಲಿ ಅರಳಿರುವ ಪುಷ್ಪಗಳು ಭಗವಂತನಿಗೆ ಸಂತೋಷವನ್ನುಂಟುಮಾಡುವುದರಿಂದ (ನದಯತಿ ಇತಿನಂದನಂ) ಈ ಕುಲವು ನಂದನವನದಂತೆ ಇದ್ದಿತು. ಇಂದ್ರನ ನಂದನವನದಲ್ಲಿ ಯಾರು ಏನು ಕೇಳಿದರೂ ಕೊಡುವ "ಕಲ್ಪವೃಕ್ಷ" ಇರುವಂತೆ, ಶ್ರೀ ವಿಷ್ಣುಚಿತ್ತರ ಕುಲವೆಂಬ ನಂದನವನದಲ್ಲಿ ಎಲ್ಲ ಚೇತನವರ್ಗಕ್ಕೂ, ಪರಮಾತ್ಮನಿಗೂ ಕೇಳುವುದೆಲ್ಲವನ್ನೂ ಅನುಗ್ರಹಿಸಿಕೊಡುವವಳಾಗಿ ಗೋದಾದೇವಿಯು ಕಲ್ಪಲತೆಯಂತಿದ್ದಾಳೆ. 

    ಶ್ರೀರಂಗನಾಥನು ತನ್ನ ದಿವ್ಯದೇಹದಲ್ಲಿ ಶ್ರೀಗಂಧವನ್ನು ಲೇಪನ ಮಾಡಿಕೊಂಡಿದ್ದಾನೆ ಅವನ ದೇಹಾಲಿಂಗನದಿಂದ ಅವನ ವಕ್ಷಸ್ಥಲದಲ್ಲಿನ ಶ್ರೀಗಂಧವು ಗೋದಾದೇವಿಯ ದೇಹಕ್ಕೆ ಅಂಟಿಕೊಂಡು, ಮೊದಲೇ ಸೌಂದರ್ಯದಿಂದ ಕೂಡಿದ್ದರೂ, ಈಗ ಇನ್ನೂ ಅಧಿಕವಾದ ಸೊಬಗಿನಿಂದ ಗೋದೆಯು ಬಹಳ ಸುಂದರವಾಗಿ ಕಾಣುತ್ತಿದ್ದಾಳೆ. 

    ಕ್ಷಮಾಗುಣವೇ ಮೂರ್ತಿವೆತ್ತಂತಿರುವುದರಿಂದಲೂ ಮತ್ತು ಸಾಕ್ಷಾತ್ ಭೂದೇವಿ (ಕ್ಷಮಾ)ಯ ಅವತಾರವೇ ಆಗಿದ್ದ ಗೋದಾದೇವಿಯು, ಸಂಸಾರ ಸಾಗರದಲ್ಲಿ ನಾನಾತರಹವಾದ ಜನ್ಮಮರಣ ಚಕ್ರದಲ್ಲಿ ಸಿಲುಕಿ ತೋಳಲುತ್ತಿರುವ ಚೇತನರನ್ನು ಕಂಡು, ಅವರನ್ನು ಆ ದುಃಖದಿಂದ ಪಾರುಮಾಡಬೇಕೆಂಬ ದಯಾಗುಣದಿಂದ ಅವರಿಗೆ ತನ್ನ ಪದ್ಯಮಾಲಿಕೆಗಳ ಮೂಲಕ, ಸಂಸಾರದಿಂದ ಮುಕ್ತಿ ಪಡೆಯಲು ಮಾಡಲೇಬೇಕಾದ 'ಶರಣಾಗತಿ' - ಎಂಬ ಉಪಾಯಾನುಷ್ಠಾನ ಕ್ರಮವನ್ನು ಬೋಧಿಸಿ, ಚೇತನೋದ್ಧಾರ ಮಾಡಿದುದನ್ನು ನೋಡಿದರೆ, ಈಕೆಯೂ ದಯಾಗುಣವೇ ಮೂರ್ತಿವೆತ್ತಂತಿರುವ ಮತ್ತೊಬ್ಬಳಾದ ಮಹಾ ಲಕ್ಷ್ಮೀದೇವಿಯೋ ಎಂದು ತೋರುವ, ಗೋದಾದೇವಿಯನ್ನೇ ಪರಮಾತ್ಮನನ್ನು ಸೇರಲು, ಭಕ್ತಿಯೋಗಾದಿಗಳನ್ನು ಮಾಡಲು ಅಶಕ್ತನಾದ, ಅನನ್ಯಗತಿಕನಾದ ನಾನು, ರಕ್ಷಕಳನ್ನಾಗಿ ಆಶ್ರಯಿಸಿದ್ದೇನೆ. ||1||
*****


ಗೋದಾಸ್ತುತಿಃ (ಸಂಗ್ರಹ) - 2

ವೈದೇಶಿಕಃ ಶ್ರುತಿಗಿರಾಮಪಿ ಭೂಯಸೀನಾಂ

ವರ್ಣೇಷು ಮಾತಿ ಮಹಿಮಾ ನಹಿ ಮದೃಶಾಂತೇ |
ಇತ್ಥಂ ವಿದನ್ತಮಪಿ ಮಾಂ ಸಹಸೈವ ಗೋದೇ
ಮೌನದ್ರುಹೋ ಮುಖರಯಂತಿ ಗುಣಾಸ್ತ್ವದೀಯಾಃ ||2||

ಭೂಯಸೀನಾಂ = ಅಧಿಕವಾಗಿರುವ,

ಶ್ರುತಿಗಿರಾಮಪಿ = ವೇದಮಂತ್ರಗಳಿಂದ ಕೂಡಿದ್ದರೂ,
ವೈದೇಶಿಕಃ = ನಿನ್ನ ಮತ್ತು ಪರಮಾತ್ಮನ ವಿಷಯವನ್ನು ಈ ರೀತಿ ಇದ್ದಾರೆಂದು ನಿರ್ದೇಶಿಸಿ ಹೇಳಲು ಸ್ಪಷ್ಟವಾಗಿ ನಿನ್ನ ಎಲ್ಲ ಗುಣಗಳ ಪರಿಚಯವಿಲ್ಲದಿರುವ ವೇದವೂ,
ತೇ = ನಿನ್ನ,
ಮಹಿಮಾ = ಮಹತ್ತರವಾದ ಅನಂತವಾದ ಗುಣಗಳನ್ನು,
ವರ್ಣೇಷು = ವರ್ಣನಮಾಡುವಲ್ಲಿ, ತಮ್ಮ ವರ್ಣ ಅಥವಾ ಅಕ್ಷರಗಳಿಂದ,
ಮಾದೃಶಾಂ = ನಮ್ಮಂತೆಯೇ,
ನಹಿಮಾತಿ = ಅಳೆಯಲು ಸಾಧ್ಯವಿಲ್ಲದಾಗುತ್ತದೆ. 
ಇತ್ಥಂ = ಈ ರೀತಿಯಾಗಿ, 
ವಿದನ್ತಮಪಿ = ತಿಳಿದವನಾದರೂ, 
ಮಾಂ = ನನ್ನನ್ನು,
ತ್ತ್ವದೀಯಾಃ = ನಿನ್ನ,
ಮೌನದ್ರುಹಃ = ಮೌನವನ್ನು ಮುರಿಯುವ,
ಗುಣಾಃ = ಗುಣಗಳು,
ಸಹಸಾ = (ಶುಭಾಶ್ರಯವಾದ ದಿವ್ಯಮಂಗಳ ಮೂರ್ತಿಯನ್ನು) ದರ್ಶನ ಮಾಡಿದಕೂಡಲೆ,
ಮುಖರಯಂತಿ = ಮೊಳಗುವಂತೆ ಮಾಡುತ್ತವೆ. 

    ಅನಂತವಾದ ವೇದಗಳೂ, ಅನಂತ ಕಲ್ಯಾಣಗುಣಗಳಿಂದ ಕೂಡಿದ ಪರಮಾತ್ಮನ ಮತ್ತು ಶ್ರೀಭೂನೀಳಾದೇವಿಯರ, ಮಹಿಮೆಯನ್ನೂ 'ಇಷ್ಟೇ' ಎಂದು ಅಳೆದು ವರ್ಣಿಸಲು ಸಾಧ್ಯವಿಲ್ಲದುದಾಗಿದೆ ಆದುದರಿಂದಲೇ ಶ್ರುತಿಯೂ 'ಯತೋವಾಚೋ ನಿವರ್ತಂತೇ | ಅಪ್ರಾಪ್ಯ ಮನಸಾ ಸಹ' - ಎಂದು, ಈ ವಿಷಯದಲ್ಲಿ ನಮ್ಮಂತೆಯೇ ತನ್ನ ಅಶಕ್ತತೆಯನ್ನು ತೋರಿಕೊಂಡಿದೆ. ಇದನ್ನರಿತ ನಾನೂ ಮೌನದಿಂದಿದ್ದರೂ, ನಿನ್ನನ್ನು ದರ್ಶನ ಮಾಡಿದಕೂಡಲೆ ಮೌನವನ್ನು ಮುರಿಯುವ ನಿನ್ನ ಗುಣಗಳು ನನ್ನನ್ನೂ ನಿನ್ನ ಮಹಿಮೆಯನ್ನು ಮೊಳಗುವಂತೆ ಮಾಡುತ್ತಿದೆ ಅಂದರೆ ನಿನ್ನನ್ನು ದರ್ಶನ ಮಾಡಿದವರಿಗೆ ನೀನು ಈ ರೀತಿಯಾಗಿ ನಿನ್ನನ್ನು ಸ್ತೋತ್ರಮಾಡವ ವಾಕ್ಸಂಪತ್ತನ್ನು ಅನುಗ್ರಹಿಸುವವಳಾಗಿದ್ದೇಯೆ - ಎಂದು ಈ ಶ್ಲೋಕದಲ್ಲಿ ಗೋದಾದೇವಿಯ 'ಗೋದಾ' ಶಬ್ದಾರ್ಥವನ್ನೇ ಆಚಾರ್ಯರು ವರ್ಣಿಸಿದ್ದಾರೆ. 


    ವಿಷ್ಣುಚಿತ್ತರು ತಮ್ಮ ತುಳಸೀವನದಲ್ಲಿ ಕಂಡ ಶಿಶುವನ್ನು ತಮ್ಮ ಮನೆಗೆ ತಂದು ನಾಮಕರಣವನ್ನು ಮಾಡಲು ತೊಡಗಿದಾಗ ತಮ್ಮ ಜ್ಞಾನದೃಷ್ಟಿಯಿಂದ ಈ ಶಿಶುವನ್ನು ನೋಡಿದಾಗ ಆ ಶಿಶುವು ಮುಂದೆ ತನ್ನನ್ನು ದರ್ಶನ ಮಾಡಿದವರೆಲ್ಲರಿಗೂ ಒಳ್ಳೆಯ ವಾಕ್ಸಂಪತ್ತನ್ನು ಅನುಗ್ರಹಿಸುವವಳಾಗುತ್ತಾಳೆ ಎಂದರಿತು 'ಗಾಃ = ಮಾತನ್ನು, ದದಾತಿ = ಕೊಡುವವಳು' - ಎಂಬ ಅರ್ಥ ಬರುವ 'ಗೋದಾ' ಎಂದು ಅನ್ವರ್ಥವಾದ ನಾಮಕರಣ ಮಾಡಿದರು - "ದದಾತಿ ಗಾ ಇತ್ಯರವಿಂದ ಚಕ್ಷಸೇ ಗೋದೇತಿ ನಾಮ್ನಾ ತ್ವಭಿಧಾಂತು ಚಕ್ರಿರೇ ||"

*********

ಗೋದಾಸ್ತುತಿಃ (ಸಂಗ್ರಹ) - 3

ತ್ವತ್ಪ್ರೇಯಸಃ ಶ್ರಮಣಯೋರಮೃತಾಯಮಾನಾಂ

ತುಲ್ಯಾಂ ತ್ವದೀಯ ಮಣಿನೂಪುರ ಶಿಂಜಿತಾನಾಂ |
ಗೋದೇ ತ್ವಮೇವ ಜನನಿ ತ್ವದಭಿಷ್ಟ ವಾರ್ಹಾಂ
ವಾಚಂ ಪ್ರಸನ್ನಮಧುರಾಂ ಮಮ ಸಂವಿಧೇಹಿ ||3||

ಜನನಿ = ಎಲೈ ತಾಯಿಯಾದ,

ಗೋದೇ = ಗೋದಾದೇವಿಯೇ,
ತ್ವಮೇವ = ನೀನೇ,
ಮಮ = ನನಗೆ,
ತ್ವತ್ಪ್ರೇಯಸಃ = ನಿನ್ನ ಪ್ರಿಯನಾದ ಶ್ರೀಮನ್ನಾರಾಯಣನ,
ಶ್ರವಣಯೋಃ = ಎರಡು ಕಿವಿಗಳಿಗೂ,
ಅಮೃತಾಯಮಾನಾಂ = ಇಂಪಾಗಿ ಅಮೃತದಂತಿರುವ,
ತ್ವದೀಯ = ನಿನ್ನ,
ಮಣಿನೂಪುರಶಿಂಜಿತಾನಾಂ = ಗೆಜ್ಜೆಗಳಿಂದ ಕೂಡಿದ ಕಾಲಂದಿಗೆಗಳ ಧ್ವನಿಯನ್ನು,
ತುಲ್ಯಾಂ = ಹೋಲುವ,
ತ್ವದಭಿಷ್ಟವಾರ್ಹಾಂ = ನಿನ್ನನ್ನು ಸ್ತುತಿಸಲು ಯೋಗ್ಯವಾದ,
ಪ್ರಸನ್ನ ಮಧುರಾಂ = ಪ್ರಸನ್ನವಾಗಿಯೂ ಇಂಪಾಗಿಯೂ ಇರುವ,
ವಾಚಂ = ಮಾತನ್ನು,
ಸಂವಿಧೇಹಿ - ಅನುಗ್ರಹಿಸಿಕೊಡು. 

    ಗೋದೆಯು ಸರ್ವಾಭರಣಭೂಷಿತಳಾಗಿದ್ದಾಳೆ. ವಿಶೇಷವಾಗಿ ಇವಳು ಧರಿಸಿರುವ ಮಣಿಗಳಿಂದ ಕುಡಿದ ಕಾಲಂದಿಗೆಗಳು, ಈಕೆ ನಡೆಯುವಾಗ 'ಘಲ್, ಘಲ್, ಘಲ್' ಎಂದು ಧ್ವನಿಗೈಯುತ್ತವೆ. ಆ ಗೆಜ್ಜೆಯ ಶಬ್ದವು, ಗೋದೆಯ ಪ್ರಿಯನಾದ ನಾರಾಯಣನ ಕಿವಿಗಳಿಗೆ ಅಮೃತದಂತೆ ಸುಖದಾಯಕವಾಗಿ ಸಂತೋಷವನ್ನುಂಟುಮಾಡುತ್ತದೆ. ಆದುದರಿಂದ ಆಚಾರ್ಯರು ಈ ಪದ್ಯದಲ್ಲಿ, ಜಗನ್ಮಾತೆಯಾದ ಗೋದಾದೇವಿಯಲ್ಲಿ 'ತಾಯಿ! ನಿನ್ನ ಪ್ರಿಯನ ಕಿವಿಗಳಿಗೆ ಅಮೃತದಂತಿರುವ, ನಿನ್ನ ಮಣಿಗಳಿಂದ ಕೂಡಿದ ಕಾಲಂದಿಗೆಗಳ ಧ್ವನಿಯನ್ನು ಹೋಲುವ, ಮಧುರವಾಗಿಯೂ ಕೋಮಲವಾಗಿಯೂ ಇರುವ ನಿನ್ನ ಪದ್ಯಮಾಲಿಕೆಗಳ ಮುಖಾಂತರ ಇಂಪಾಗಿ ಗಾನಮಾಡಿ ಪರಮಾತ್ಮನನ್ನು ವಶಪಡಿಸಿಕೊಂಡಿರುವ ನಿನ್ನನ್ನು ಸ್ತೋತ್ರ ಮಾಡಲು ಯೋಗ್ರವಾದ, ಪ್ರಸನ್ನವಾಗಿಯೂ ಇಂಪಾಗಿಯೂ ಇರುವ ವಾಕ್ಸಂಪತ್ತನ್ನು ನನಗೆ ನೀನೇ ಅನುಗ್ರಹಿಸಿಕೊಡು ಎಂದು ಪ್ರಾರ್ಥಿಸಿದ್ದಾರೆ.

*********

ಗೋದಾಸ್ತುತಿಃ (ಸಂಗ್ರಹ) - 4

ಕೃಷ್ಣಾನ್ವಯೇನ ದಧತೀಂ ಯಮುನಾನುಭಾವಂ

ತೀರ್ಥೈರ್ಯಥಾವದವಗಾಹ್ಯ ಸರಸ್ವತೀಂ ತೇ |
ಗೋದೇ ವಿಕಸ್ವರಧಿಯಾಂ ಭವತೀ ಕಟಾಕ್ಷಾತ್ 
ವಾಚಃ ಸ್ಫುರಂತಿ ಮಕರಂದಮುಚಃ ಕವೀನಾಮ್ ||4||

ಗೋದೇ= ಎಲೈ! ಗೋದಾದೇವಿಯೇ,

ಕೃಷ್ಣಾನ್ವಯೇನ = ಕೃಷ್ಣನ ಸಂಬಂಧದಿಂದ ಕೂಡಿದ,
ತೀರ್ಥೈಃ = ತೀರ್ಥದಿಂದ ಕೂಡಿದ,
ಯಮುನಾನು ಭಾವಂ = ಯಮುನೆಯ ಅನುಭವವನ್ನು ಹೊಂದಿರುವ,
ತೇ = ನಿನ್ನ,
ಸರಸ್ವತೀಂ = ಮಾತಿನಲ್ಲಿ,
ತೀರ್ಥೈ = ಆಚಾರ್ಯಾದಿಗಳಿಂದ ಕಾಲಕ್ಷೇಪ ಮಾಡಿ,
ಯಥಾವತ್ = ನೀನು ಹೇಳಿರುವಂತೆಯೇ,
ಅವಗಾಹ್ಯ = ಮುಳುಗಿ,
ಭವತೀ = ನಿನ್ನ, 
ಕಟಾಕ್ಷಾತ್ = ವೀಕ್ಷಣದಿಂದ,
ವಿಕಸ್ವರಧಿಯಾಂ = ಅರಳಿದ ಬುದ್ಧಿಯಿಂದ (ವಿಕಸಿತವಾದ ಜ್ಞಾನದಿಂದ) ಕೂಡಿದ,
ಕವೀನಾಂ = ಕವಿಗಳ,
ವಾಚಃ = ಮಾತಾದರೋ,
ಮಕರಂದಮುಚಃ = ಮಧುವನ್ನು ಸ್ರವಿಸುತ್ತಿರುವದಾಗಿ,
ಸ್ಫುರಂತಿ = ಪ್ರಕಾಶಿಸುತ್ತಿದೆ. 

    ಯಾವ ವಸ್ತುವೇ ಆಗಲೀ, ತಾನೂ ಜನ್ಮಮರಣ ಚಕ್ರದಿಂದ ಕೂಡಿದ ಸಂಸಾರ ಸಾಗರವನ್ನು, ಸ್ವತಃ ದಾಟುವ ಸಾಮರ್ಥ್ಯವನ್ನು ಹೊಂದಿರುವುದೇ ಅಲ್ಲದೆ ಮತ್ತೊಬ್ಬರನ್ನೂ ಸುಲಭವಾಗಿ ದಾಟಿಸುವಂತಹ ಸಾಮರ್ಥ್ಯವನ್ನು ಹೊಂದಿದ್ದರೆ ಆ ವಸ್ತುವನ್ನು - 'ತೀರ್ಥವೆನ್ನುತ್ತಾರೆ ಯಮುನಾನದಿಯ ಜಲದಲ್ಲಿ ಶ್ರೀಕೃಷ್ಣನು ತನ್ನ ಜಲಕ್ರೀಡೆ, ರಾಸಕ್ರೀಡೆಗಳನ್ನು ಆಡುತ್ತಿದ್ದನು ಆಗ ಇವನ ದಿವ್ಯದೇಹದ ಸಂಬಂಧದಿಂದ ಆ ಜಲವು ತೀರ್ಥವಾಯಿತು ಈ ರೀತಿಯಾದ ತೀರ್ಥದಿಂದ ತುಂಬಿರುವುದರಿಂದ ಯಮುನಾನದಿಗೇ ಒಮದು ಮಹತ್ವವೇರ್ಪಟ್ಟಿತು ಇದರಿಂದಲೇ ಕೃಷ್ಣಾನುಭವ ಮಾಡುವ ಭಾಗ್ಯವೂ ಲಭಿಸಿತು ಅಂತೆಯೇ ಗೋದಾದೇವಿಯು ಹಾಡಿಕೊಟ್ಟಿರುವ ಪದ್ಯಗಳಲ್ಲಿಯೂ ಶ್ರೀಕೃಷ್ಣನ ದಿವ್ಯವಾದ ಕಲ್ಯಾಣಗುಣಗಳ ವರ್ಣಗಳು ತುಂಬಿರುವುದರಿಂದ ತೀರ್ಥತ್ವವನ್ನು ಹೊಂದಿ (ಓದುಗರಿಗೆ) ಕೃಷ್ಣಾನುಭವವುಂಟುಮಾಡುತ್ತದೆ ನಮ್ಮನ್ನು ಸಂಸಾರದಿಂದ ದಾಟಿಸುವ ಸಾಮರ್ಥ್ಯವುಳ್ಳ ತೀರ್ಥ ಶಬ್ದ ವಾಚ್ಯರಾದ ಆಚಾರ್ಯರ ಕಾಲಕ್ಷೇಪಗಳಿಂದ ಗೋದೆಯ ಪದ್ಯಮಾಲಿಕೆಗಳೆಂಬ ತೀರ್ಥದಲ್ಲಿ ಇಳಿದು ಸ್ನಾನಮಾಡಿದ ಕವಿಗಳಾದರೋ ಗೋದೆಯ ವಿಶೇಷವಾದ ಕಟಾಕ್ಷದಿಂದ ಸಂಕುಚಿತವಾದ ಅವರ ಜ್ಞಾನವು ವಿಕಸಿತವಾಗಿ ಪರಮಾತ್ಮನನ್ನೂ ಮತ್ತು ತಾಯಿಯನ್ನೂ ನೋಡಿ ಅವರ ಕಲ್ಯಾಣ ಗುಣಗಳನ್ನು ಹಾಡುತ್ತಾರೆ ಆಗ ಕೇವಲ ಪ್ರಾಕೃತವಾದ ವಸ್ತುವನ್ನು ವರ್ಣಿಸುವ ಕವಿಗಳ ವಾಣಿಯಂತಿಲ್ಲದೆ ಇವರ ವಾಣಿಯು ಪರಮಾತ್ಮನ ಕಲ್ಯಾಣ ಗುಣವೆಂಬ ಮಕರಂದವನ್ನು ಸ್ರವಿಸುವುದಾಗಿ ಪ್ರಕಾಶಿಸುತ್ತದೆ.

********


ಗೋದಾಸ್ತುತಿಃ (ಸಂಗ್ರಹ) - 5


ಅಸ್ಮಾದೃಶಾಮಪಕೃತೌ ಚಿರದೀಕ್ಷಿತಾನಾಂ

ಅಹ್ನಾಯ ದೇವಿ ದಯತೇ ಯದಸೌ ಮುಕುಂದಃ |
ತನ್ನಿಶ್ಚಿತಂ ನಿಯಮಿತಃ ತಪಮೌಳಿದಾಮ್ನಾ
ತಂತ್ರೀನಿನಾದಮಧುರೈಶ್ಚಗಿರಾಂ ನಿಗುಮ್ಭೈಃ ||5||

ದೇವಿ = ಎಲೈ! ಗೋದಾದೇವಿಯೇ,

ಯತ್ = ಯಾವ,
ಅಪಕೃತೌ = ಅಪಚಾರವನ್ನೆಸಗುವದರಲ್ಲಿಯೇ,
ಚಿರದೀಕ್ಷಿತಾನಾಂ = ಚಿರಕಾಲದಿಂದ ದೀಕ್ಷಾ ಬದ್ಧರಾಗಿರುವ,
ಅಸ್ಮಾದೃಶಾಂ = ನಮ್ಮ ವಿಷಯದಲ್ಲಿಯೂ
ಅಸೌ = ಈ ದಂಡಧರನಾದ,
ಮುಕುಂದಃ = ಶ್ರೀಯಃಪತಿಯು,
ಅಹ್ನಾಯ = ಕೂಡಲೆ (ಇದ್ದಕ್ಕಿದ್ದ ಹಾಗೆ) 
ದಯತೆ = ದಯೆ ತೋರುತ್ತಾನೆಯೋ,
ತತ್ = ಅದಾದರೋ,
ನಿಶ್ಚಿತಂ = ನಿಶ್ಚಯವಾಗಿಯೂ,
ತವ = ನಿನ್ನ,
ಮೌಳಿದಾಮ್ನಾ = ಮುಡಿಯಲ್ಲಿ ಮುಡಿದಿದ್ದ ಪುಷ್ಪಮಾಲಿಕೆಯಿಂದಲೂ,
ಚ = ಮತ್ತು,
ಗಿರಾಂ = ನಿನ್ನ ಮಾತಿನ,
ವೀಣೇಯ ಧ್ವನಿಯಂತೆ ಇಂಪಾಗಿರುವ,
ನಿಗುಂಭೈಃ = ಕೂಡಿ ಸಲ್ಪಟ್ಟಿರುವ ಶಬ್ದಗಳಿಂದಲೂ,
ನಿಯಮಿತಃ = ಕಟ್ಟುಹಾಕಲ್ಪಟ್ಟಿರುವನಾಗಿರುವುದರಿಂದಲೇ (ಆದುದು).

    ಪರಮಾತ್ಮನು ದಂಢಧರ, ಚೇತನರು ಮಾಡುವ ಪುಣ್ಯಪಾಪ ಕರ್ಮಗಳಿಗನುಗುಣವಾಗಿ ಅವರಿಗೆ ಫಲವನ್ನು ನೀಡುವನು ಹೀಗಿರುವಲ್ಲಿ ಅನಾದಿ ಕಾಲದಿಂದ ನಾನಾ ರೀತಿಯಾದ ಭಗವಂತನ ನಿಗ್ರಹಕ್ಕೆ ಪಾತ್ರರಾಗುವ ನಿರಂತರವಾದ ಕೆಟ್ಟ ಕೆಲಸಗಳನ್ನೇ ಮಾಡುತ್ತಿರುವ ನಾವು ಪರಮಾತ್ಮನನ್ನು ನಮಸ್ಕರಿಸಲು ಹೋದಾಗ, ಆ ಪರಮಾತ್ಮನು - ಗೋದೆಯ ಅವತಾರ ಕಾಲದಲ್ಲಿಯೇ ಅವಳು ಮುಡಿದುಕೊಟ್ಟ ಮಾಲಿಕೆಯಲ್ಲಿ ವಿಶೇಷವಾದ ಆದರವನ್ನು ತೋರಿದವನು ಈಗಲೂ ಪಕ್ಕದಲ್ಲಿಯೇ ನಿಂತಿರುವ ಗೋದೆಯ ಮುಡಿಯಲ್ಲಿದ್ದ ಮಾಲಿಕೆಗಳ ಪರಿಮಳದ ಸೊಬಗನ್ನು ಅನುಭವಿಸುತ್ತಲೂ ಮತ್ತು ವೀಣೆಯ ಧ್ವನಿಯಂತೆ ಇಂಪಾದ ಶಬ್ಧಗಳನ್ನೇ ಕೂಡಿಸಿ ಮಾತಾಡುವ ಗೋದೆಯ ಮಾತಿಗೂ ಮನಸೋತು, ತಾನು ದಂಡಧರನೆಂಬುದನ್ನೂ ಮರೆತು, ತನ್ನಲ್ಲಿಗೆ ಬಂದಿರುವ ಸಾಪರಾಧನಾದ ಚೇತನನನ್ನೂ ಕರುಣೆಯಿಂದಲೇ ಕಟಾಕ್ಷಿಸಿ ಅನುಗ್ರಹಿಸುತ್ತಾನೆ. 


    ಚೇತನರು ಎಷ್ಟೇ ಅಪರಾಧಗಳನ್ನೆಸಗಿದ್ದರೂ, ಗೋದೆಯು ತನ್ನ ಅವತಾರ ಕಾಲದಲ್ಲಿ, ಲಲಿತವಾದ ಮಧುರವಾದ ಪದಗಳನ್ನು ಕೂಡಿಸಿ ರಚಿಸಿ ಕೊಟ್ಟಿರುವ ಪದ್ಯಮಾಲಿಕೆಗಳನ್ನೂ,, ಭಗವಂತನಲ್ಲಿಗೆ ಹೋದಾಗ ಅನುಸಂಧಾನ ಮಾಡುತ್ತಲಿದ್ದರೆ ಆ ಗೋದೆಯ ಶ್ರೀ ಸೂಕ್ತಿಗಳ ಶ್ರವಣದಿಂದ ಮನಸೋತ ಪರಮಾತ್ಮನು ನಮ್ಮ ಅಪರಾಧವನ್ನು ಗಣನೆಗೇ ತೆಗೆದುಕೊಳ್ಳದೆ, ಅವನ ನಿಗ್ರಹಕ್ಕೆ ಪಾತ್ರರಾಗಬೇಕಾದ ನಮ್ಮನ್ನೂ ದಯೆಯಿಂದ ವೀಕ್ಷಿಸಿ ತನ್ನ ಅನುಗ್ರಹಕ್ಕೆ ಪಾತ್ರರನ್ನಾಗಿಸುತ್ತಾನೆ ಎಂಬ ಭಾವವೂ ಇಲ್ಲಿ ಧ್ವನಿತವಾಗುತ್ತದೆ. ಆದುದರಿಂದಲೇ ಪ್ರತಿನಿತ್ಯವೂ ಭಗವದಾರಾಧನದ ಕೊನೆಯಲ್ಲಿ 'ಶಾತ್ತುವೊರೈ' (ಮೊರೈ = ಪ್ರಾರ್ಥನೆಯನು, ಶಾತ್ತುವುದು = ವಿಜಾ ಪಿಸುವುದು) ಸಮಯದಲ್ಲಿ ಗೋದೆ ಹಾಡಿಕೊಟ್ಟಿರುವ ತಿರುಪ್ಪಾವೈ ಗ್ರಂಥದ ಕೊನೆಯ ಎರಡು ಪದ್ಯಗಳನ್ನು ಹಾಡುವುದು ನಮ್ಮ ಸಂಪ್ರದಾಯದಲ್ಲಿ ಬೆಳೆದುಕೊಂಡು ಬಂದಿದೆ.

*****

ಗೋದಾಸ್ತುತಿಃ (ಸಂಗ್ರಹ) - 6


ಶೋಣಾಧರೇಃಪಿ ಕುಚಯೋರಪಿ ತುಂಗಭದ್ರಾ 

ವಾಚಾಂ ಪ್ರವಾಹನಿವಹೇಪಿ ಸರಸ್ವತೀತ್ವಮ್ |
ಅಪ್ರಾಕೃತೈರಪಿ ರಸೈರ್ವಿರಜಾಸ್ಸ್ವಭಾವಾತ್ 
ಗೋದಾಃಪಿ ದೇವಿ ಕಮಿತುರ್ನನು ನರ್ಮದಾಸಿ ||6||

ದೇವಿ = ಗೋದಾದೇವಿಯೇ,

ತ್ವಂ = ನೀನು,
ಶೋಣಾಧರೇಪಿ = ಕೆಂತುಟಿಗಳಿಂದ ಕುಡಿದವಳಾಗಿ,
ತುಂಗ = ಎತ್ತರವಾದ,
ಭದ್ರಾ -= ಮಂಗಳ ಸ್ವರೂಪವಾದ,
ಕುಚಯೋಃ = ಸ್ತನಕಲಷಗಳಿಂದಲೂ ಕೂಡಿ,
ಪ್ರವಾಹನಿವಹೈ = ಅತ್ಯಧಿಕವಾದ ಪ್ರವಾಹದಂತಿರುವ,
ವಾಚಾಂ = ಮಾತುಗಳಿಂದ
ಸರಸ್ವತಿ = ಸಾಕ್ಷಾತ್ 'ವಾಗ್ದೇವಿ' ಎಂದು ಪಸಿದ್ಧವಾದ ಸರಸ್ವತಿಯಂತೆಯೇ ಇದು,
ಸ್ವಭಾವತ್ - ಸ್ವಭಾವತಃ,
ಅಪ್ರಾಕೃತ್ಯೆಃ ರಸೈಃ = ಅಲೌಕಿಕವಾದ ಭಗವದ್ಗುಣಾನುಭವವೆಂಬ ಭಕ್ತಿರಸದಿಂದ ಕುಡಿ,
ವಿರಜಾ = ರಜೋಗುಣದ ಸೋಂಕೂ ಇಲ್ಲದೆ, ಶುದ್ಧ ಸತ್ತ್ವಮಯಳಾಗಿ,
ಕಮಿತುಃ - ನೀನು ಪ್ರಿಯನಾದ ನಾರಾಯಣನಿಗೆ,
ಗೋದಾ ಅಪಿ = ಒಳ್ಳೆಯ ಶ್ರುತಿಶತಸ್ಸಿದ್ಧವಾದ ಪಾರಾರ್ಥ್ಯವನ್ನೂ ಬೋಧಿಸಿದವಳಾಗಿ,
ನರ್ಮದಾ = ಹಾಸ್ಯವನ್ನುಂಟುಮಾಡುವವಳಾಗಿಯೂ
ಆಸ್ಗಿ = ಇರುವೆ,
ನನು = ಅಲ್ಲವೇ?

ದೇವಿ! = ಎಲೈ! ಗೋದಾದೇವಿಯೇ,

ತ್ವಂ - ನೀನು,
ಆಧರೆ = ನಿನ್ನ ಕೆಳತುಟಿಯಲ್ಲಿ, 
ಶೋಣಾ - ಶೋಣಾ ನದಿಯಾಗಿಯೂ,
ಕುಚಯೋಃ - ಎರಡು ಸ್ತನಕಲಷಗಳಿಲ್ಲಿಯೂ,
ತುಂಗಭದ್ರಾ = ತುಂಗಾ ಮತ್ತು ಬದ್ದರ ನದಿಯಾಗುಯೂ, 
ವಾಚಾಂ = ಮಾತಿನ,
ಪ್ರವಾಹನಿವಹೇ = ಅತ್ಯಧಿಕವಾದ ಪ್ರವಾಹದಲ್ಲಿ,
ಸರಸ್ವತೀ = ಸರಸ್ವತೀ ನದಿಯಾಗಿಯೂ,
ಅಪ್ರಾಕೃತೈಃ = ಅಲೌಕಿಕವಾದ,
ರಸೈಃ = ಅಭಿರುಚಿಯಿಂದ ಕೊಡಿರುವಿಕೆಯಲ್ಲಿ
ಸ್ವಭಾವಾತ್ = ಸಹಜವಾದ ಸ್ವಭಾವದಿಂದಲೇ,
ವಿರಜಾ = ಪ್ರಕೃತಿ ಮಂಡಲದಾಚೆ ಇರುವ ವಿರಜಾ ನದಿಯಾಗಿಯೂ,
ಗೋದಾಪಿ = ಗೋದಾವರೀ ನದಿಯಾಗಿಯೂ
ಕಮಿತುಃ = ನಿನ್ನ ಪ್ರಿಯನಿಗೆ 
ನರ್ಮದಾ = ನರ್ಮದಾ ನದಿಯ ರೂಪದಲ್ಲಿಯೂ,
ಆಸಿನನು = ಇರುತ್ತೀಯಲ್ಲವೆ? 

    ಗೋದಾದೇವಿಯ ಕೆಂತುಟಿಗಳಿಂದ ಕೂಡಿ, ಎತ್ತರವಾದ ಪೃಥುಸ್ತನಗಳಿಂದ ಸ್ತ್ರೀಸಹಜವಾದ ಸೌಂದರ್ಯದಿಂದ ಕೂಡಿ ಮಂಗಳಸ್ವರೂಪಳಾಗಿದ್ದಾಳೆ ನಿರಂತರದ, ಅತ್ಯಧಿಕವಾದ ಪ್ರವಾಹದಂತೆ, ತಡೆಯಿಲ್ಲದೆ ಭಗವಂತನ ಕಲ್ಯಾಣಗುಣಗಳನ್ನು ತನ್ನ ಶ್ರೀ ಸೂಕ್ತಿಗಳಲ್ಲಿ ಹಾಡಿವಿಕೆಯಲ್ಲಿ ಸಾಕ್ಷಾತ್ ವಾಗ್ದೇವಿಯೆಂದು ಪ್ರಸಿದ್ಧಳಾದ ಸರಸ್ವತೀ ದೇವಿಯಂತೆಯೇ ಇದ್ದಾಳೆ. ಸ್ವಭಾವತಃ ಹುಟ್ಟಿದಂದಿನಿಂದ ಅಪ್ರಾಕೃತವಾದ ಅಲೌಕಿಕವಾದ ಭಗವಂತನ ಗುಣಾನುಭವವೆಂಬ ಭಕ್ತಿರಸಮೊಂದರಲ್ಲಿಯೇ ಆಸಕ್ತಿಯನ್ನು ಹೊಂದಿದವಳಾಗಿ, ರಜಸ್ತಮೋಗುಣಗಳಿಂದ ದೂರಳಾಗಿ, ತನ್ನ ಪ್ರಿಯನಿಗೆ, ಭೋಗ್ಯವಾದ ಮತನ್ನಾಡುತ್ತಲೇ, ಶ್ರುತಿಶತಸಿದ್ಧವಾದ ಅವನ ಪಾರಾರ್ಥ್ಯವನ್ನು ಅವನಿಗೂ ಬೋಧಿಸಿದವಳಾಗಿ ಹಾಸ್ಯವನ್ನುಂಟುಮಾಡುವಂತೆ ಮಾತಾಡುವವಳಾಗಿಯೂ ಇದ್ದಾಳೆ. 


    ಪರಮಾತ್ಮನು ಲೀಲಾವಿಭೂತಿಯಲ್ಲಿ ಸೃಷ್ಟಿಸಿರುವ ಭಾರತದ ಎಲ್ಲ ನದಿಗಳ ಸ್ವರೂಪವನ್ನೂ ಗೋದೆಯ ದಿವ್ಯಮಂಗಲ ಸ್ವರೂಪದಲ್ಲಿಯೇ ಕಾಣುತ್ತನೆ. ಎಂದು ಆಚಾರ್ಯರು ಇಲ್ಲಿ ಶ್ಲೇಷಾಲಂಕರದಿಂದ ವರ್ಣಿಸಿದ್ದಾರೆ. 


    ಕೆಮ್ಮಣ್ಣಿನ ಮೇಲೆ ಹರಿಯುತ್ತಿದ್ದು ಕೆಂಪಗೆ ಕಾಣುವ "ಶೋಣಾ" ನದಿಯನ್ನು ಗೋದೆಯ ಕೆಂತುಟಿಗಳಲ್ಲಿಯೂ, ಎತ್ತರವಾದ ಪರ್ವತಗಳಲ್ಲಿ ಹುಟ್ಟಿ ಹರಿಯುವ ತುಂಗಾ ಮತ್ತು ಭದ್ರನದಿಯನ್ನು ಇವಳ ಪೃಥುಸ್ತನಕಲಗಳಲ್ಲಿಯೂ, ನಿರಂತರವಾದ ಪ್ರವಾಹದಂತೆ ಹೊರಹೊಮ್ಮುವ ಇವಳ ಮಾತಿನಲ್ಲಿ ಸರಸ್ವತೀ ನದಿಯನ್ನೂ ಆಪ್ರಾಕೃತವಾದ ರಜೋಗುಣದ ಸ್ಪರ್ಶವಿಲದಲದ ಇವಳ ಭಕ್ತಿರಸ ಪ್ರವಾಹದಲ್ಲಿ ಅಪ್ರಾಕೃತವಾದ ವಿರಜಾನದಿಯನ್ನೂ ಸ್ವಭಾವತಃ ಗೋದಾವರಿ ಮತ್ತು ನರ್ಮದಾ ನದಿಯ ಸ್ವರೂಪವನ್ನೂ ಈಕೆಯ ದಿವ್ಯ ಮಂಗಳ ವಿಗ್ರಹದಲ್ಲಿ ಪರಮಾತ್ಮನು ಕಾಣುತ್ತಾನೆ ಎಂದು ಆಚಾರ್ಯರು ಇಲ್ಲಿ ವರ್ಣಿಸಿದ್ದಾರೆ. 

*****

ಗೋದಾಸ್ತುತಿಃ (ಸಂಗ್ರಹ) - 7


ವಲ್ಮೀಕತಃ ಶ್ರವಣತೋ ವಸುಧಾತ್ಮನಸ್ತೇ

ಜಾತೋ ಬಭೂವ ಸ ಮುನಿಃ ಕವಿಸಾರ್ವಭೌಮಃ |
ಗೋದೇ ಕಿಮದ್ಬುತಮಿದಂ ಯದಮಿ ಸ್ವದನ್ತೇ 
ವಕ್ತ್ರಾರವಿಂದ ಮಕರಂದನಿಭಾಃ ಪ್ರಬಂಧಾಃ ||7||

ಗೋದೇ = ಎಲೈ ಗೋದಾದೇವಿಯೇ,

ವಸುಧಾತ್ಮನಃ = ಭೂಮಿಯ ರೂಪದಲ್ಲಿರುವ,
ತೇ = ನಿನ್ನ,
ಶ್ರವಣತಃ = ಕಿವಿಯಾದ,
ವಲ್ಮೀಕತಃ = ಹುತ್ತದಿಂದ,
ಜಾತಃ = ಹುಟ್ಟಿದ,
ಸಃ ಮುನಿಃ = ಆ ವಾಲ್ಮೀಕಿ ಮಹರ್ಷಿಗಳು,
ಕವಿಸಾರ್ವಭೌಮಃ = ಕವಿಗಳಲ್ಲಿಯೇ ಶ್ರೇಷ್ಟರಾಗಿ (ಆದಿಕವಿಯೆಂಬ ಬಿರುದಾಂಕಿತರಾಗಿ)
ಬಭೂವ = ಅದರು (ಈ ರೀತಿಯಿರಲು, ಇನ್ನು)
ಯಾತ್ = ಯಾವ ನಿನ್ನಿಂದ ರಚಿಸಲ್ಪಟ್ಟ,
ಅಮಿ ಪ್ರಬಂಧಾಃ = ದಿವ್ಯಸೂಕ್ತಿಗಳು,
ವಕ್ತ್ರಾರವಿಂದ ಮಕರಂದ ನಿಭಾಃ = ಮುಖಕಮಲದಿಂದ ಹೊರಹೊಮ್ಮಿದ ಮದುವಿನಂತೆ,
ಸ್ವದನ್ತೇ = ಭೋಗ್ಯವಾಗಿರುತ್ತದೆ,
ಇದಂ = ಎಂಬ ಈ ವಿಷಯವು,
ಅದ್ಭುತಂ ಕಿಮ್ = ಆಶ್ಚರ್ಯವಾದುದೇನು? (ಖಂಡಿತ ಇಲ್ಲ).

    ಭೂದೇವಿಯ ಅವತಾರವೇ ಗೋದಾದೇವಿ. ಭೂದೇವಿಯು ಭೂಮಿಯ ಸ್ವರೂಪದಲ್ಲಿಯೂ ಇದ್ದಾಳೆ. ಈ ಸ್ವರೂಪದಲ್ಲಿ, ವಾಲ್ಮೀಕಿಯು ಹುಟ್ಟಿದ 'ವಲ್ಮೀಕ' ಅಥವಾ ಹುತ್ತವು, ಆಕೆಯ ಕಿವಿಯಂತಿದ್ದಿತು. ಆದುದರಿಂದ ಆ ಭೂದೇವಿಯ ಕಿವಿಯಿಂದ ಉತ್ಪನ್ನವಾದ ಆ ವಾಲ್ಮೀಕಿ ಮುನಿಯೇ, ಲೋಕದಲ್ಲೆಲಾ ಶ್ರೇಷ್ಟವಾದ ಕವಿಯಾಗಿ 'ಕವಿಸಾರ್ವಭೌಮ', 'ಆದಿಕವಿ' ಇತ್ಯಾದಿ ಹೆಸರನ್ನು ಪಡೆದಿರುವಲ್ಲಿ, ಇನ್ನು ಆಕೆಯ ಮುಖಾರವಿಂದದಿಂದ ಉತ್ಪನ್ನವಾದ ಆಕೆಯ ಶ್ರೀ ಸೂಕ್ತಿಗಳಾದರೋ ಮಕರಂದ (ಜೇನುತುಪ್ಪ)ದಂತೆ ಭೋಗ್ಯ-ಭೂತವಾಗಿರುತ್ತದೆ - ಎಂಬಲ್ಲಿ ಆಶ್ಚರ್ಯವೇನಿದೆ? 

*****


ಗೋದಾಸ್ತುತಿಃ (ಸಂಗ್ರಹ) - 8

ಭೋಕ್ತುಂ ತವ ಪ್ರಿಯತಮಂ ಭವತೀವ ಗೋದೇ

ಭಕ್ತಿಂ ನಿಜಾಂ ಪ್ರಣಯ ಭಾವನಯಾ ಗೃಣಂತಃ |
ಉಚ್ಚಾವಚೈಃ ವಿರಹಸಂಗಮಚೈರುದಂತೈಃ 
ಶೃಂಗಾರಯಂತಿ ಹೃದಯಂ ಗುವಸ್ತ್ವದೀಯಾಃ ||8||

ಗೋದೇ = ಎಲೈ ಗೋದಾದೇವಿಯೇ,

ತವ = ನಿನ್ನ,
ಪ್ರಿಯತಮಂ = ಆಪ್ತಪ್ರಿಯನಾದ ಶ್ರಿಯಃಪತಿಯನ್ನು
ಭವತೀ ಇವ = ನಿನ್ನಂತೆಯೇ 
ಭೋಕ್ತುಂ = ಅನುಭವಿಸಬೇಕೆಂದು
ಗುರವಃ = ಆಳ್ವಾರಾಚಾರ್ಯರುಗಳು,
ನಿಜಾಂ = ತಮ್ಮ
ಭಕ್ತಿಂ = ಭಕ್ತಿಯನ್ನು
ಪ್ರಣಯಭಾವನಯಾ = ಪ್ರೇಮ ಭಾವನೆಯಿಂದ
ಗೃಣಂತಃ = ತೋಡಿಕೊಳ್ಳಬೇಕೆಂಬ ಆಸೆಯಿಂದ ಕೂಡಿದವರಾಗಿ
ಹೃದಯಂ = ತಮ್ಮ ಮನಸ್ಸನ್ನು
ತ್ವದೀಯಾಃ = ನಿನ್ನ
ಉಚ್ಚಾ ವಚೈಃ = ಉನ್ನತವಾದ ಸ್ಥಿತಿಯಲ್ಲಿರುವ
ವಿರಹಸಂಗಮಜೈಃ = ಪ್ರಿಯನ ವಿರಹದಿಂದುತ್ಪನ್ನವಾದ
ಉದಂತೈಃ = ಭಾವನೆಗಳಿಂದ
ಶೃಂಗಾರಯಂತಿ = ಅಲಂಕರಿಸಿಕೊಳ್ಳುತ್ತಾರೆ (ಪ್ರಿಯಪ್ರೇಯಸಿಯರ ಪ್ರೇಮಭಾವನೆಯಿಂದುದಯಿಸುವ ಶೃಂಗಾರರಸಕ್ಕೆ ಪಾತ್ರರನ್ನಾಗಿಸಿಕೊಳ್ಳುತ್ತಾರೆ).

    'ಪೂ ಸಂಜ್ಞೇ ತು ಪುರೇ ತಸ್ಮಿನ್ ಶಯನಾತ್ ಪುರುಷೋ ಹರೀಃ' - 'ಪೂ' ಎಂಬ ಹೆಸರಿನಿಂದ ಕೂಡಿದ ಎಲ್ಲ ವ್ಯಷ್ಟಿ ಶರೀರದಲ್ಲಿಯೂ ಅಂದರೆ, ಎಲ್ಲ ಚೇತನಾ ಚೇತನಗಳಲ್ಲಿಯೂ ಯಾರು ವಾಸಿಸುತ್ತಿರುತ್ತಾನೆಯೋ ಅವನು 'ಪುರುಷ', ಮತ್ತು 'ಸಃ ಯತ್ ಪೂವಃ ಆಸ್ಮಾತ್ ಸರ್ವಸ್ಮಾತ್, ಸರ್ವಾನ್ ಪಾಪ್ಮನಃ ಔಷತ್ ತಸ್ಮಾತ್ ಪುರುಷಃ' ಎಂಬ ವ್ಯುತ್ಪತ್ತಿಯಿಂದ ಎಲ್ಲ ಚೇತನಾಚೇತನಗಳಿಗಿಂತಲೂ ಪೂರ್ವದಲ್ಲಿಯೂ ಇದ್ದು, ಎಲ್ಲರ ಪಾಪವನ್ನೂ ದಹಿಸುವ ಶಕ್ತಿಯನ್ನು ಹೊಂದಿ ಮೋಕ್ಷಪ್ರದಾನ ಮಾಡುವ ಸಾಮರ್ಥ್ಯವಿರುವವನು 'ಪುರುಷ' ಶಬ್ದವಾಚ್ಯನಾಗುತ್ತಾನೆ. [ಸರ್ವ ಪೂರ್ವವರ್ತಿತ್ವ ಸರ್ವಪಾಪ್ಮಪ್ರದಾಹಕತ್ವರೂಪಕಾರಣತ್ವ ಮೋಕ್ಷಪ್ರದತ್ವ ಶಕ್ತಿತಯಾ ಚ ಪುರುಷತ್ವಮ್‌ತಸ್ಯ ಶ್ರೀಯಃಪತೇಃ ಏವ]


    ಆದುದರಿಂದ ಪುರುಷಸೂಕ್ತ ಪ್ರತಿಪಾದ್ಯನಾದ ಪರಮಪುರುಷನೊಬ್ಬನೇ ಪುರುಷಶಬ್ದವಾಚ್ಯನಾಗಿದ್ದಾನೆ. ಆದುದರಿಂದ ಇತರ ಚೇತನರೆಲ್ಲರೂ ಸ್ತ್ರೀ-ಪ್ರಾಯರು ಆದುದರಿಂದ ಆ ಪರಮಪುರುಷನನ್ನು ಸತೀಭಕ್ತಿಯಿಂದ ಅವನು ತನ್ನ ಪ್ರಿಯನೆಂದೂ ತಾನು ಅವನ ಪ್ರೇಯಸಿಯೆಂದೂ ಉಪಾಸನೆ ಮಾಡಿ ಅನುಭವಿಸುವುದು ತಥ್ಯವಾದುದಾಗಿ ಭೋಗ್ಯತಮವಾಗಿರುತ್ತದೆ. ಗೋದಾ-ದೇವಿಯೂ ತನ್ನ ಅವತಾರ ಕಾಲದಲ್ಲಿ ಈ ಪ್ರಿಯ ಪ್ರೇಯಸಿಯ ಭಾವನೆಯಿಂದಲೇ ಪರಮಾತ್ಮನನ್ನು ಅನುಭವಿಸಿದಳು ಇವಳ ಈ ಪ್ರೇಮಭಾವನೆ ಇವಳ ಶ್ರೀ ಸೂಕ್ತಿಗಳಲ್ಲಿ ಎದ್ದು ಕಾಣುತ್ತದೆ ಇದನ್ನು ಕಂಡ ನಮ್ಮ ಆಚಾರ್ಯರಾದ ನಮ್ಮಾಳ್ವಾರ್ರವರೂ ಮತ್ತು ತಿರುಮಂಗೈ ಆಳ್ವಾರವರೂ ಗೋದೆಯಂತೆಯೇ ತಾವೂ ಪರಮಾತ್ಮನನ್ನನುಭವಿಸಬೇಕೆಂದು ಅವಳ ಶ್ರೀ ಸೂಕ್ತಿಗಳಲ್ಲಿ ಆಕೆಯ ತನ್ನ ಪ್ರಿಯನ ಅಗಲಿಕೆಯಲ್ಲಿರುವಲ್ಲಿ ಉಂಟಾದ ದುಃಖವನ್ನು ಪರಮಾತ್ಮನಲ್ಲಿ ತೋಡಿಕೊಂಡಂತೆ, ತಾವೂ 'ಪರಾಂಕುಶನಾಯಿಕಾ' ಮತ್ತು 'ಪರಕಾಲ ನಾಯಿಕಾ' ರೂಪದಲ್ಲಿ ತಮ್ಮ ಭಕ್ತಿಯನ್ನು ಪ್ರೇಮ ಭಾವನೆಯಿಂದ ತೋಡಿಕೊಳ್ಳಲು ಗೋದೆಯ ವಿರಹ ವ್ಯಥೆಯಿಂದ ಹೊರಹೊಮ್ಮಿದ ಭಾವನೆಗಳಿಂದ ತಮ್ಮ ಹೃದಯವನ್ನೂ ಅಲಂಕರಿಸಿಕೊಂಡು (ಪ್ರೇಮ) ಶೃಂಗಾರಭಾವವನ್ನು ತಾಳಿದರು.


    ಗೋದೆಯು ನಾಯಿಕಾಭಾವದಿಂದ ಹಾಡುವಲ್ಲಿ, ತನ್ನ ಸ್ತ್ರೀಸಹಜವಾದ ಪ್ರೇಮವನ್ನು ಹೊರಗಡಹಿದ್ದಾಳೆ ಅದರಲ್ಲಿ ಕೃತ್ರಿಮತೆ ಇಲ್ಲ ಆಳ್ವಾರುಗಳಾದರೋ ತಾತ್ತ್ವಿಕವಾಗಿ ಸ್ತ್ರೀಪ್ರಾಯರಾದರೂ ಲೌಕಿಕವಾಗಿ ಪುರುಷನ ರೂಪದಲ್ಲಿ ಅವತರಿಸಿ ನಾಯಿಕಾಭಾವನೆಯೆಂಬ ಮುಖವಾಡದಿಂದ ತಮ್ಮ ಶ್ರೀ ಸೂಕ್ತಿಯನ್ನು ಹಾಡುವಲ್ಲಿ ಕೃತ್ರಿಮತೆ ಕಂಡುಬರುತ್ತದೆ. ಹಾಗಿದ್ದರೂ ಗೋದೆಯ ಈ ಪ್ರೇಮ ಭಾವನೆಯಿಂದಲೇ ಪರಮಾತ್ಮನನ್ನು ಅವರೂ ಒಲಿಸಿಕೊಂಡು ಅನುಭವಿಸಿದರು. 

*****

ಗೋದಾಸ್ತುತಿಃ (ಸಂಗ್ರಹ) - 9

ಮಾತಃ ಸಮುತ್ಥಿತಮತೀಮಧಿವಿಷ್ಣುಚಿತ್ತಂ

ವಿಶ್ವೋಪಜೀವ್ಯಮಮೃತಂ ವಚಸಾ ದುಹಾನಾಮ್ |
ತಾಪಚ್ಛಿದಂ ಹಿಮರುಚೇರಿವ ಮೂರ್ತಿತಮನ್ಯಾಂ
ಸನ್ತಃ ಪಯೋಧಿದುಹಿತುಃ ಸಹಜಾಂ ವಿದುಸ್ತ್ವಾಮ್ ||9||

ಮಾತಃ = ಎಲೈ! ತಾಯಿಯೇ!

ಅಧಿವಿಷ್ಣುಚಿತ್ತಂ = ವಿಷ್ಣುಚಿತ್ತರನ್ನಾಶ್ರಯಿಸಿ (ಅವರ ಮನೆಯಲ್ಲಿ),
ಸಮುತ್ಥಿತವತೀಂ = ಅವತರಿಸಿ ತೋರಿಕೊಂಡ,
ವಿಶ್ವೋಪಜೀವ್ಯಂ = ಯಾವ ಭೇದಭಾವವೂ ಇಲ್ಲದೆ ಪ್ರಪಂಚದಲ್ಲಿನ ಎಲ್ಲ ಚೇತನರೂ ಉಜ್ಜೀವಿಸಲು (ಮಾಡಲೇಬೇಕಾದ 'ಶರಣಾಗತಿ' ಎಂಬ),
ಅಮೃತಂ = ಜನ್ಮಪುರಣರಾಹತ್ಯವನ್ನುಂಟುಮಾಡುವ ಅಮೃತಪ್ರಾಯವಾದ ಉಪಾಯಾನುಷ್ಠಾನಕ್ರಮವನ್ನು,
ವಚಸಾ = ಮಾತಿನಿಂದ (ನಿನ್ನ ಶ್ರೀ ಸೂಕ್ತಿಗಳಿಂದ),
ದುಹಾನಾಮ್ = ಕರೆದ (ಪ್ರಕಾಶಪಡಿಸಿದ), 
ತಾಪಚ್ಛಿದಂ = ತಾಪವನ್ನು ಹೋಗಲಾಡಿಸುವ,
ಹಿಮರುಚೇಃ = ಶೀತಕಾರಣನಾದ ಚಂದ್ರನ,
ಅನ್ಯಾಂ = ಬೇರೊಂದು,
ಮೂರ್ತಿಮಿವ = ಮೂರ್ತಿಯಂತಿರುವ,
ತ್ವಾಂ = ನಿನ್ನನ್ನು,
ಸನ್ತಃ = ಸತ್ಪುರುಷರು, 
ಪಯೋಧಿದುಹತುಃ = ಸಮುದ್ರರಾಜನ ಮಗಳಾದ ಮಹಾಲಕ್ಷ್ಮಿಯ,
ಸಹಜಾಂ = ಜೊತೆಯಲ್ಲಿಯೇ ಹುಟ್ಟಿದವಳೆಂದು, 
ವಿದುಃ = ತಿಳಿದಿದ್ದಾರೆ.

    ವಿಷ್ಣುಚಿತ್ತರ ಮನೆಯಲ್ಲಿ ಅವತರಿಸಿದ ಗೋದಾದೇವಿಯಾದರೋ, ಪ್ರಪಂಚದಲ್ಲಿನ ಎಲ್ಲ ಚೇತನರೂ ಉಜ್ಜೀವಿಸಿ ಪರಿಪೂರ್ಣ ಬ್ರಹ್ಮಾನಂದವನ್ನು ಪಡೆಯಲು ಮಾಡಲೇಬೇಕಾದ, ಅತಿ ಸುಲಭವಾಗಿಯೂ ಸುಕರವಾಗಿಯೂ ಇರುವ 'ಶರಣಾಗತಿ' - ಎಂಬ ಉಪಾಯ ಮತ್ತು ಅದರ ಅನುಷ್ಠಾನಕ್ರಮವನ್ನು ತನ್ನ ಶ್ರೀ ಸೂಕ್ತಿಗಳ ಮುಖಾಂತರ ಪ್ರಕಾಶಪಡಿಸಿದ್ದಾಳೆ. ಈ ಶರಣಾಗತ್ಯನುಷ್ಠಾನದಿಂದ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕವೆಂಬ ತಾಪತ್ರಯಗಳೂ ನೀಗಿ ಶರಣಾಗತನಾದ ಚೇತನನು ಸಂತೋಷದಿಂದಿರುತ್ತಾನೆ. ಹಿಂದೊಮ್ಮೆ ದೇವಾಸುರರು ಅಮೃತವನ್ನು ಪಡೆಯಲು ಜಲಧಿಮಥನವನ್ನು ಮಾಡುವಾಗ ಮಹಾಲಕ್ಷ್ಮಿಯು ಉತ್ಪನ್ನಳಾದ ಬಳಿಕ ಶೀತಕಿರಣನಾದ ಚಂದ್ರನೂ ಉತ್ಪನ್ನನಾದನು ಎಲ್ಲರ ತಾಪವನ್ನೂ ಹೊಗಲಾಡಿಸುವ ಮಹಾಲಕ್ಷ್ಮಿಯ ಉತ್ಪನ್ನಳಾದ ಬಳಿಕ ಅದೇ ಗರ್ಭದಿಂದಲೇ ಚಂದ್ರನೂ ಉತ್ಪನ್ನನಾದುದರಿಂದಲೇ, ಚಂದ್ರನು ಆಕೆಗೆ ತಮ್ಮನೆಂದೂ ಮತ್ತು ಅವಳ ತಾಪಹಾರಕವಾದ ಗುಣ ಇವನಲ್ಲಿಯೂ ಸಂಕ್ರಾಂತವಾಗಿ ಲೋಕದಲ್ಲಿ ದುಃಖದಿಂದಿರುವ ವ್ಯಕ್ತಿಗಳು ಚಂದ್ರನನ್ನು ನೋಡಿದಾಗ, ಅವರ ದುಃಖವನ್ನು ದೂರ ಮಾಡಿ ಅವರಿಗೆ ಆಹ್ಲಾದವನ್ನುಂಟುಮಾಡಿತ್ತಾನೆ. ಈ ರೀತಿಯಾಗಿ ಚಂದ್ರನು ಮಹಾಲಕ್ಷ್ಮಿಯ ಸಹೋದರನಾದ ಮಾತ್ರದಿಂದಲೇ ಲೌಕಿಕವಾದ ತಾಪವನ್ನು ತಾತ್ಕಾಲಿಕವಾಗಿ ಹೋಗಲಾಡಿಸಿದರೆ ಗೋದೆಯಾರೋ ತನ್ನ ಶ್ರೀ ಸೂಕ್ತಿಯ ಮುಖಾಂತರ, ಲೋಕದಲ್ಲಿನ ಎಲ್ಲ ಚೇತನರ ಸರ್ವವಿಧವಾದ ತಾಪತ್ರಯಗಳನ್ನೂ ಮುಂದೆಂದೂ ತಲೆಯೆತ್ತದಂತೆ ಕಿತ್ತೊಗೆದು, ಅನಂತವಾದ ಆನಂದವನ್ನನುಗ್ರಹಿಸುವವಳಾದುದರಿಂದ, ಈಕೆಯೂ ಸಮುದ್ರ ರಾಜನ ಮುಳಾದ ಮಹಾಲಕ್ಷ್ಮಿಯ ತಂಗಿ (ಸಹೋದರಿ)ಯೇ ಆಗಿರುತ್ತಾಳೆ ಎಂದು ಮಹಾತ್ಮರು ತಿಳಿಯುತ್ತಾರೆ 

*******

ಗೋದಾಸ್ತುತಿಃ (ಸಂಗ್ರಹ) - 10

ತಾತಸ್ತುತೇ ಮಧುಭಿದಃ ಸ್ತುತಿಲೇಶವಸ್ಯಾತ್

ಕರ್ಣಾಮೃತೈಃ ಸ್ತುತಿಶತೈರನವಾಪ್ತಪೂರ್ವಮ್ |
ತ್ವನ್ಮೌಳಿಗಂಧಸುಭಗಾಮುಪಹೃತ್ಯಮಾಲಾಂ
ಲೇಭೇಮಹತ್ತರಪದಾನುಗುಣಂ ಪ್ರಸಾದಮ್ ||10||

(ಎಲೈ ಗೋದಾದೇವಿಯೇ) ತೇ = ನಿನ್ನ,

ತಾತ = ತಂದೆಯಾದ ವಿಷ್ಣು ಚಿತ್ತರಾದರೋ,
ಸ್ತುತಿಲೇಶವಶ್ಯಾತ್ = ಅತ್ಯಲ್ಪವಾಗಿ ಸ್ತುತಿಸುವುದರಿಂದಲೇ ವಶನಾಗುವ,
ಮಧುಭಿದಃ = ಮಧುಸೂದನನಿಂದ, 
ಕರ್ಣಾಮೃತೈಃ = (ಅವನ) ಕಿವಿಗಳಿಗೆ ಅಮೃತಪ್ರಾಯವಾದ,
ಸ್ತುತಿಶತೈಃ = ನೂರಾರು ಸ್ತೋತ್ರರೂಪವಾದ ಪದ್ಯಮಾಲಿಕೆಗಳನ್ನು ಹಾಡುವಿಕೆಯಿಂದಲೂ,
ಪೂರ್ವಂ = ಮೊದಲು,
ಅನವಾಪ್ತ = ಹೊಂದದಿದ್ದ,
ಮಹತ್ತರಪದಾನುಗುಣಂ = ಪೆರಿಯಾಳ್ವಾರೆಂಬ ಅತಿ ಮಹತ್ವದಿಂದ ಕೂಡಿದ ಪದವಿಯನ್ನು ಪಡೆಯಲು ಅನುಗುಣವಾದ,
ಪ್ರಸಾದಂ = ಅನುಗ್ರಹವನ್ನು,
ತ್ವನ್ಮೌಳಿ = ನಿನ್ನ ಮುಡಿಯ,
ಗಂಧ=ಪರಿಮಳದಿಂದ, 
ಸುಭಗಾಂ = ಸುಂದರವಾದ, 
ಮಾಲಾಂ = (ನೀನು ಮುಡಿದು ಕೊಟ್ಟ) ಮಾಲಿಕೆಯನ್ನು,
ಉಪಹೃತ್ಯ = ರಂಗನಾಥನಿಗೆ ತಂದುಕೊಟ್ಟು,
ಲೇಭೇ = ಪಡೆದರು.

    ಎಲೈ! ಗೋದಾದೇವಿಯೇ, ನಿನ್ನ ತಂದೆಯಾದ ವಿಷ್ಣುಚಿತ್ತರಾದರೋ, ಅತ್ಯಲ್ಪವಾದ ಸ್ತುತಿಗಳಿಗೆ ವಶನಾಗುವ ಆ ಮಧುಸೂದನನಿಂದ, ಅವನನ್ನು ಅವನ ಕಿವಿಗಿಂಪಾಗಿ ಅಮೃತಪ್ರಾಯವಾದ ನೂರಾರು ಪದ್ಯಗಳಿಂದ ಸ್ತುತಿಯೂ ಹಿಂದೆ (ಯಾವ ಒಬ್ಬ ಆಳ್ವಾರರೂ) ಪಡೆಯದಿದ್ದ 'ಪೆರಿಯಾಳ್ವಾರ್' ಎಂಬ ಮಹತ್ತರವಾದ ಪದವಿಯನ್ನು ಪಡೆಯಲು ಅನುಗುಣವಾದ, ಅವನ ಅನುಗ್ರಹವನ್ನು, ನಿನ್ನ ಮುಡಿಯ ಸಂಸರ್ಗದಿಂದ ಪರಿಮಳಗೊಂಡು ಮಹತ್ತ್ವದಿಂದ ಕೂಡಿದ, ನೀನು ಮುಡಿದುಕೊಟ್ಟ ಮಾಲಿಕೆಗಳನ್ನು ರಂಗನಾಥನಿಗೆ ತಂದುಕೊಟ್ಟುದುದರಿಂದ ಪಡೆದರು. 

********

ಗೋದಾಸ್ತುತಿಃ (ಸಂಗ್ರಹ) - 11

ದಿಕ್‌ದಕ್ಷಿಣಾಪಿ ಪರಿಪಕ್ತ್ತಿಮ ಪುಣ್ಯಲಭ್ಯಾತ್

ಸರ್ವೋತ್ತರಾಭವತಿ ದೇವಿ ತವಾವತಾರಾತ್ |
ಯತ್ರೈವ ರಂಗಪತಿನಾ ಬಹುಮಾನಪೂರ್ವಂ
ನಿದ್ರಾಳುನಾಪಿ ನಿಯತಃ ನಿಹಿತಾಃ ಕಟಾಕ್ಷಾಃ ||11||

ದೇವಿ! = ಎಲೈ! ಗೋದಾದೇವಿಯೇ,

ದಕ್ಷಿಣಾದಿಕ್ ಅಪಿ = (ಯಾವ ಸುಭಕೆಲಸಗಳಿಗೂ ಅರ್ಹತೆಯಿಲ್ಲದ) ದಕ್ಷಿಣ ದಿಕ್ಕಾದರೋ,
ಪರಿಪಕ್ತ್ರಿಮ = ಪಕ್ವವಾದ,
ಪುಣ್ಯಲಭ್ಯಾತ್ = ಪುಣ್ಯಫಲಗಳನ್ನು ಹೊಂದಿದುದರಿಂದ
ತವ = ನಿನ್ನ,
ಅವತಾರಾತ್ = ಅವತಾರವು ಆ ದಿಕ್ಕಿನಲ್ಲಾದುದರಿಂದ,
ಸರ್ವೋತ್ತರಾ = ಎಲ್ಲ ದಿಕ್ಕುಗಳಿಗಿಂತಲೂ ಮೇಲ್ಮೈಯುಳ್ಳದುದಾಗಿ (ಉತ್ತರದಿಕ್ಕಿಗಿಂತಲೂ ಮಹತ್ವ ಉಳ್ಳದುದಾಗಿ),
ಭವತಿ = ಆಗಿದೆ,
ಯತ್ರೈವ = ಯಾವ ನಿನ್ನ ಅವತಾರವಾದ ದಕ್ಷಿಣ ದಿಕ್ಕಿನಲ್ಲಾದರೋ,
ನಿದ್ರಾಳುನಾ = ಉಭಯ ವಿಭೂತಿಗಳ ರಕ್ಷಣೆಯನ್ನು ಚಿಂತಿಸುತ್ತಾ ನಿದ್ರಿಸುವವನಂತಿರುವ,
ರಂಗಪತಿನಾ ಅಪಿ = ಶ್ರೀರಂಗನಾಥನಿಂದಲೂ,
ಬಹುಮಾನಪೂರ್ವಂ = ಅತ್ಯಾದರದಿಂದ,
ನಿಹಿತಾಃ = ಬೀರುವ,
ಕಟಾಕ್ಷಾಃ = ವೀಕ್ಷಣೆಯಾದರೋ,
ನಿಯತಃ = ಕಟ್ಟಲ್ಪಟ್ಟಿದೆ.

    ಎಲೈ! ಗೋದಾದೇವಿಯೇ, "ಪ್ರಾಚೀನಮುದೀಚೀನಂಮೇಧ್ಯಂ ಪ್ರತೀಚೀನಂದಕ್ಷಿಣಾಮೇಧ್ಯಂ" ಎಂದು ಶ್ರುತಿಯಲ್ಲೇ ಅಪವಿತ್ರವೆಂದು ಪ್ರತಿಪಾದಿತವಾಗಿ, ಶುಭಕೆಲಸಗಳಿಗೆ ಅನರ್ಹವಾದ ದಕ್ಷಿಣದಿಕ್ಕದರೋ ತನ್ನ ಪರಿಪಕ್ವವಾದ ಪುಣ್ಯಫಲದಿಂದ, ನೀನು ಆ ದಿಕ್ಕಿನಲ್ಲಿ ಅವತರಿಸುವಂತಾದುದರಿಂದ, ಎಲ್ಲ ದಿಕ್ಕುಗಳಿಗಿಂತಲೂ ಮೇಲ್ಮೈಯನ್ನು ಪಡೆಯಿತು ಅದೇನೆಂದರೆ, ಶ್ರೀರಂಗಕ್ಷೇತ್ರದಲ್ಲಿ ಬಿಜಯಮಾಡಿಸಿರುವ ರಂಗನಾಥನಾದರೋ ಆದಿಶೇಷನ ಮೇಲೆ ಮಲಗಿಕೊಂಡು ತನ್ನ ಉಭಯ ವಿಭೂತಿಗಳ ರಕ್ಷಣೆಯ ಚಿಂತನೆ ಮಾಡುತ್ತಾ ನಿದ್ರಿಸುವಂತಿದ್ದರೂ ನಿನ್ನ ಅವತಾರ ಸ್ಥಳವಾದ ಶ್ರೀ ವಿಲ್ಲಿಪುತ್ತೂರಿರುವ ದಕ್ಷಿಣ ದಿಕ್ಕಿಗೆ ತಿರುಗಿ ಮಲಗಿ ತನ್ನ ಕಟಾಕ್ಷವನ್ನು ಬೀರುತ್ತಿದ್ದಾನೆ ಈ ರೀತಿಯಾದ ಭಗವಂತನ ಕಟಾಕ್ಷವನ್ನು ಪಡೆಯುವ ಭಾಗ್ಯವೆಂಬ ಮೇಲ್ಮೈ ಬೇರೆ ಯಾವ ದಿಕ್ಕಿಗೂ ಸಿಗಲಿಲ್ಲ ಇದು ಕೇವಲ ನಿನ್ನ ಅವತಾರದಿಂದಲೇ ದಕ್ಷಿಣ ದಿಕ್ಕಿಗೆ ಬಂದ ಭಾಗ್ಯವಿಶೇಷವು. 

********

ಗೋದಾಸ್ತುತಿಃ (ಸಂಗ್ರಹ) - 12

ಪ್ರಾಯೇಣ ದೇವಿ ಭವತೀವ್ಯಪದೇಶಯೋಗಾತ್

ಗೋದಾವರೀ ಜಗದಿದಂ ಪಯಸಾ ಪುನೀತೇ |
ಯಸ್ಯಾಂ ಸಮೇತ್ಯ ಸಮಯೇಷು ಚಿರಂ ನಿವಾಸಾತ್
ಭಾಗೀರಥೀ ಪ್ರಭೃತಯೋಪಿ ಭವಂತಿ ಪುಣ್ಯಾಂಃ ||12||

ದೇವಿ! = ಎಲೈ! ಗೋದಾದೇವಿಯೇ!,

ಭವತೀ = ನಿನ್ನ ವೈಪದೇಶ.
ಯೋಗಾತ್ = 'ಗೋದಾ' ಎಂಬ ಹೆಸರಿನ ಸಂಬಂದದಿಂದ,
ಗೋದಾವರೀ = ಗೋದಾವರೀ ನದಿಯಾದರೋ,
ಇದಂ ಜಗತ್ = ಈ ಜಗತ್ತನ್ನು,
ಪ್ರಾಯೇಣ = ಬಹುಶಃ,
ಪಯಸಾ = ತನ್ನ ತೀರ್ಥದಿಂದ,
ಪುನೀತೇ = ಪವಿತ್ರಗೊಳಿಸುತ್ತಿದೆ.
ಯಸ್ಯಾಂ = ಯಾವ ಗೋದಾವರೀ ನದಿಯಲ್ಲಿ
ಸಮಯೇಷು = ಕೆಲವು ಸಮಯಗಳಲ್ಲಿ
ಸಮೇತ್ಯ = ಕೂಡಿಕೊಂಡು,
ಚಿರಂ = ಚಿರಕಾಲ,
ನಿವಾಸಾತ್ = ವಾಸಮಾಡಿದ ದೆಸೆಯಿಂದ,
ಭಾಗೀರಥೀ ಪ್ರಭೃತಯಃ ಅಪಿ = ಗಂಗೆಯೇ ಮೊದಲಾದ ನದಿಗಳೂ,
ಪುಣ್ಯಾಃ = ಪುಣ್ಯನದಿಗಳಾಗಿ,
ಭವಂತಿ = ಆಗಿವೆ. 

    ಎಲೈ! ಗೋದಾದೇವಿಯೇ! ನಿನ್ನ 'ಗೋದಾ' ಎಂಬ ಹೆಸರಿನ ಯೋಗದಿಂದಲೇ, ಗೋದಾವರೀ ನದಿಯೂ, ಈ ಜಗತ್ತನ್ನೇ ಬಹುಶಃ ತನ್ನ ತೀರ್ಥದಿಂದ ಪವಿತ್ರಗೊಳಿಸುತ್ತಿದೆ. ಅದೂ ಅಲ್ಲದೆ, ಯಾವ ಈ ಗೋದಾವರಿ ನದಿಯಲ್ಲಿ ಆಗಾಗ್ಗೆ ಕೆಲವು ಸಮಯಗಳಲ್ಲಿ ಕೂಡಿಕೊಂಡು ಚಿರಕಾಲ ವಾಸಮಾಡಿದುದರಿಂದಲೇ, ವಿಷ್ಣುಪಾದೋದ್ಭವೆಯಾದ ಗಂಗೆಯೇ ಮೊದಲಾದ ನದಿಗಳೂ ಪುಣ್ಯನದಿಗಳಾಗಿವೆ. [ಅಂದರೆ ಎಲ್ಲ ಪುಣ್ಯನದಿಗಳ ಮತ್ತು ಜಗತ್ತಿನ ಪಾವನತ್ವಕ್ಕೂ ಗೋದೆಯೇ ಕಾರಣ - ಎಂದು ಆಚಾರ್ಯರು ಇಲ್ಲಿ ವರ್ಣೀಸಿದ್ದಾರೆ.]

********

ಗೋದಾಸ್ತುತಿಃ (ಸಂಗ್ರಹ) - 14

ತ್ವದ್ಭುಕ್ತ ಮಾಲ್ಯಸುರಭೀಕೃತಚಾರುಮೌಳೇಃ

ಹಿತ್ವಾ ಭುಜಾಂತರಗತಾಮಪಿ ವೈಜಯಂತೀಮ್ |
ಪತ್ಯುಸ್ತವೇಶ್ವರಿ ಮಿಥಃ ಪ್ರತಿಘಾತಲೋಲಾಃ 
ಬರ್ಹಾತಪತ್ರರುಚಿಮಾರಚಯಂತಿ ಭೃಂಗಾಃ ||14||

ಈಶ್ವರಿ = ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಗೋದಾ ದೇವಿಯೇ!,

ತ್ವದ್ಭುಕ್ತಮಾಲ್ಯ = ನೀನು ಮುಡಿದುಕೊಟ್ಟ ಮಾಲಿಕೆಗಳಿಂದ,
ಸುರಭೀಕೃತ = ಪರಿಮಳಗೊಂಡು,
ಚಾರು = ಸುಂದರವಾದ,
ಮೌಳೇಃ = ಶಿರಸ್ಸಿನಿಂದ ಕೂಡಿದ,
ತವ = ನಿನ್ನ,
ಪತ್ಯುಃ = ಪತಿಯ,
ಭುಜಾಂತರಗತಾಂ = ಎರಡು ಭುಜಗಳ ಮಧ್ಯದಲ್ಲಿರುವ ವಕ್ಷಸ್ಥಲದಲ್ಲಿರುವ,
ವೈಜಯಂತೀ ಅಪಿ = 'ವೈಜಯಂತಿ' ಎಂಬ ವನಮಾಲೆಯನ್ನೂ ಕೂಡ,
ಹಿತ್ವಾ = ತ್ಯಾಗಮಾಡಿ,
ಭೃಂಗಾಃ = ದುಂಬಿಗಳಾದರೋ (ನಿನ್ನ ಪತಿಯ ತಲೆಯಮೇಲೆ)
ಮಿಥಃ = ಪರಸ್ಪರ,
ಪ್ರತಿಘಾತಲೋಲಾಃ = ಒಂದಕ್ಕೊಂದು ತಗಲುತ್ತಾ ಆಟವಾಡುತ್ತಾ,
ಬರ್ಹಾ = ನವಿಲುಗರಿಯ,
ಆತಪತ್ರಂ = ಕೊಡೆಯ ರೂಪವನ್ನು,
ಅರಚಯಂತಿ = ಉಂಟುಮಡುತ್ತಿವೆ.

    ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಎಲೈ! ಗೋದಾ ದೇವಿಯೇ! ನೀನು ಮುಡಿದುಕೊಟ್ಟ ಮಾಲಿಕೆಗಳನ್ನು ತನ್ನ ತಲೆಯಲ್ಲಿ ಮುಡಿದಿರುವುದರಿಂದಲೇ ಪರಿಮಳಗೊಂಡು ಸುಂದರವಾದ ಶಿರಸ್ಸಿನಿಂದ ಕೂಡಿದ, ನಿನ್ನ ಪತಿಯ ವಕ್ಷಸ್ಥಲದಲ್ಲಿರುವ, 'ಸರ್ವಗಂಧಃ' ಎಂದು ಉಪನಿಷತ್ಪ್ರತಿಪಾದ್ಯನಾದ ಸರ್ವೇಶ್ವರನ ಸಂಸರ್ಗದಿಂದ ನಿರಂತರವಾದ ಪರಿಮಳಭರಿತವಾದ, 'ವೈಜಯಂತೀ' ಎಂಬ ವನಮಾಲೆಯನ್ನೂ ತ್ಯಾಗ ಮಾಡಿದ ದುಂಬಿಗಳಾದರೋ ನಿನ್ನ ಪತಿಯ ಶಿರಸ್ಸಿನ ಮೇಲೆ, ನೀನು ಮುಡಿದು ಕೊಟ್ಟ ಪುಷ್ಪದ ಮಧುವನ್ನು ಪಾನಮಾಡಲು, 'ತಾನು ಮೊದಲು, ತಾನು ಮೊದಲು' ಎಂದು ಪರಸ್ಪರ ಘರ್ಷಣೆ ಮಾಡುತ್ತಾ ಅಲೆಯುತ್ತಲೆ ನಿನ್ನ ಪ್ರಿಯನಿಗೆ ಸಪ್ತವರ್ಣಗಳಿಂದ ಕೂಡಿದ ನವಿಲುಗರಿಯ ಕೊಡೆಯೊಂದನ್ನು ಹಿಡಿದಿರುವಂತೆ ಮಾಡುತ್ತಿವೆ. (ಇದಾದರೋ ವಿವಾಹದ ಕಾಶಿಯಾತ್ರೆಯ ಸಮಯದಲ್ಲಿ ನಿನ್ನ ಪತಿ ಹಿಡಿದಿರುವ ಕೊಡೆಯಂತೆ ಕಾಣುತ್ತದೆ.) ||14||

*****

ಗೋದಾಸ್ತುತಿಃ (ಸಂಗ್ರಹ) - 15

ಆಮೋದವತ್ಯಪಿ ಸದಾ ಹೃದಯಂಗಮಾಪಿ 

ರಾಗಾನ್ವಿತಾಃಪಿ ಲಲಿತಾಃಪಿ ಗುಣೋತ್ತರಾಃಪಿ |
ಮೌಳಿಸ್ರಜಾ ತವ ಮುಕುಂದಕಿರೀಟಭಾಜಾ 
ಗೋದೇ ಭವತ್ಯಧರಿತಾ ಖಲು ವೈಜಯಂತೀ ||15||

ಗೋದೇ = ಎಲೈ! ಗೋದಾದೇವಿಯೇ!, 

ಸದಾ = ಎಲ್ಲ ಕಾಲದಲ್ಲಿಯೂ 
ಆವೋದವತ್ಯಪಿ = ಪರಿಪೂರ್ಣವಾದ ಪರಿಮಳದಿಂದ ಕೂಡಿದ್ದರೂ, 
ಹೃದಯಂಗಮಾಃಪಿ = ಮನಸ್ಸನ್ನು ತಣಿಸುವಂತಿದ್ದರೂ, 
ರಾಗಾಃನ್ವಿತಾಃಪಿ = ಭಗವಂತನಲ್ಲಿ ಅನುರಾಗದಿಂದ ಕೂಡಿದ್ದರೂ (ಕೆಂಪುವರ್ಣದಿಂದ ಶೋಭಿತವಾಗಿದ್ದರೂ )
ಲಲಿತಾಃಪಿ = ಕೋಮಲವಾಗಿದ್ದರೂ, 
ಗುಣೋತ್ತರಾಃಪಿ = ಮಾಲಿಕೆಯಲ್ಲಿರಬೇಕಾದ ಎಲ್ಲ ವಿಧವಾದ ಗುಣಗಳಿಂದ ಕೂಡಿದ ಮೇಲ್ಮೈ ಯುಳ್ಳದುದಾಗಿದ್ದರೂ, 
ವೈಜಯಂತಿ = ಭಗವಂತನ ವಕ್ಷಸ್ಥಳದಲ್ಲಿರುವ 'ವೈಜಯಂತಿ' ಮಾತೆಯಾದರೋ,
ಮುಕುಂದ ಕಿರೀಟಭಾಜಾ = ಶ್ರೀಕೃಷ್ಣನ ಕಿರೀಟದಲ್ಲಿ ಪ್ರಕಾಶಿಸುತ್ತಿರುವ, 
ತವ = ನಿನ್ನ, 
ಮೌಳಿಸ್ರಜಾ = ಮುಡಿದಲ್ಲಿ ಮುಡಿದುಕೊಟ್ಟ ಮಾಲಿಕೆಯಿಂದ, 
ಆಧಾರಿತಾ = ತಿರಸ್ಕೃತವಾದುದಾಗಿ,
ಭವತಿಖಲು = ಇರುವುದಲ್ಲವೇ 

    ಎಲೈ! ಗೋದಾದೇವಿಯೇ, ಎಲ್ಲ ಕಾಲದಲ್ಲಿಯೂ ಪರಿಪೂರ್ಣವಾದ ಪರಿಮಳದಿಂದ ಕೂಡಿ, ಮನಸ್ಸನ್ನು ತಣಿಸುವಂತಿದ್ದರೂ, ಭಗವಂತನಲ್ಲಿ ಅನುರಾಗದಿಂದ ಕೂಡಿ (ಕೆಂಪುವರ್ಣದಿಂದ ಶೋಭಿತವಾಗಿ) ಕೋಮಲವಾಗಿದ್ದು, ಮಾಲಿಕೆಯಲ್ಲಿರಬೇಕಾದ ಎಲ್ಲ ವಿಧವಾದ ಗುಣಗಳಿಂದಲೂ ಕೂಡಿದ ಮೇಲ್ಮೈಯುಳ್ಳದುದಾಗಿದ್ದರೂ, ಬಹಳ ಕಾಲದಿಂದ ಭಗವಂತನಿಂದ ವಕ್ಷಸ್ಥಲದಲ್ಲಿ ಧರಿಸಲ್ಪಟ್ಟ 'ವೈಜಯಂತಿ' ಮಾಲಿಕೆಯಾದರೋ, ಶ್ರೀಕೃಷ್ಣನ ಕಿರೀಟದಲ್ಲಿ ಪ್ರಕಾಶಿಸುತ್ತಿರುವ, ನಿನ್ನ ಮುಡಿಯಲ್ಲಿ ನೀನು ಮುಡಿದುಕೊಟ್ಟ ಮಾಲಿಕೆಗಳಿಂದ ತಿರಸ್ಕೃತವಾದುದಾಗಿ ಇರುವುದಲ್ಲವೇ ! 


    ಸ್ವತಃ ಸರ್ವರಸನೂ, ಸರ್ವಗಂಧನೂ ಆದ ಪರಮಾತ್ಮನು, ಎಲ್ಲ ವಿಧವಾದ ಪರಿಮಳವೇ ಮೊದಲಾದ ಗುಣಗಳಿಂದ ಕೂಡಿದ 'ವೈಜಯಂತೀ' ಮಾಲೆಯನ್ನು ಧರಿಸಿದ್ದರೂ, 'ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ' - ಎಂದು ಭಗವದ್ಗೀತೆಯಲ್ಲಿ ತಾನೇ ಹೇಳಿರುವಂತೆ, ಗೋದೆಯ ಅವತಾರ ಕಾಲದಲ್ಲಿ ಮುಗ್ದವಾದ ಭಕ್ತಿಯಿಂದ ಆಕೆ ಮುಡಿದು ಕೊಟ್ಟ ಪುಷ್ಪವೇ ತನಗೆ ಭೋಗ್ಯವಾದುದೆಂದು ಪೆರಿಯಾಳ್ವಾರವರಿಗೆ ಹೇಳಿ, ಆ ಪುಷ್ಪಮಾಲಿಕೆಗಳನ್ನು ತರಿಸಿಕೊಂಡು ತನ್ನ ಮುಡಿಯಲ್ಲಿ ಧರಿಸಿ ತನ್ನ ಸಂತೋಕ್ಕೆ ಪಾರವೇ ಇಲ್ಲದೆ, ಮೊದಲಿಗಿಂತಲೂ ವಿಶೇಷವಾದ ಕಾಂತಿಯಿಂದ ಕೂಡಿದವನಾಗಿ, ಆಳ್ವಾರರಿಗೆ ದರ್ಶನವಿತ್ತು, ಗೋದೆಗೆ 'ಶೂಡಿಕ್ಕೂಡುತ್ತ ನಾಚ್ಚಿಯಾರ್' ತಾನು ಮುಡಿದುಕೊಟ್ಟ ತಾಯಿ' ಎಂಬ ಹೆಸರು ಬರುವಂತೆ ಮಾಡಿದನು - ಎಂಬ ವೃತ್ತಾಂತವನ್ನು ಸ್ಮರಿಸಿಕೊಂಡು ಆಚಾರ್ಯರು ಈ ಶ್ಲೋಕವನ್ನು ಹಾಡಿದ್ದಾರೆ.

*****

ಗೋದಾಸ್ತುತಿಃ (ಸಂಗ್ರಹ) - 16

ತ್ವನ್ಮೌಳಿದಾಮನಿ ವಿಭೋಃ ಶಿರಸಾ ಗೃಹೀತೇ 

ಸ್ವಚ್ಛಂದಕಲ್ಪಿತ ಸಪೀತಿರಸಪ್ರಮೋದಾಃ |
ಮಂಜಸ್ವನಾ ಮಧುಲಿಹೋ ವಿದಧುಃ ಸ್ವಯಂತೇ 
ಸ್ವಾಯಂವರಂ ಕಮಪಿ ಮಂಗಳತೂರ್ಯ ಘೋಷಮ್ ||16||

(ಎಲೈ! ಗೋದಾದೇವಿಯೇ) ವಿಭೋಃ = ವಿಭುವಾದ ನಿನ್ನ ಪತಿಯ 

ಶಿರಸಾ = ತಲೆಯಿಂದ, 
ಗೃಹೀತೇ = ಧರಿಸಲ್ಪಟ್ಟಿರುವ,
ತ್ವತ್ = ನಿನ್ನ,
ಮೌಳಿದಮನಿ = ಮುಡಿಯಲ್ಲಿ ಧರಿಸಿದ್ದ ಮಾಲಿಕೆಗಳಲ್ಲಿ,
ಸ್ವಚ್ಛಂದಕಲ್ಪಿತ = ತನ್ನ ಇಷ್ಟಬಂದಂತೆ ಕಲ್ಪಿಸಿಕೊಂಡು,
ಸಪೀತಿರಸಪ್ರಮೋದಾಃ = ಮಧುಪಾನ ಮಾಡಿರುವುದರಿಂದ ಸಂತುಷ್ಟಗೊಂಡಿರುವ,
ಮಧುಲಿಹಃ = ದುಂಬಿಗಳಾದರೋ,
ಮಂಜುಸ್ವನಾಃ = ಇಂಪಾಗಿ ಧ್ವನಿಗೈಯುತ್ತಾ,
ತೇ = ನಿನ್ನ, 
ಸ್ವಾಯಂವರಂ = ಸ್ವಯಂವರ ಮಹೋತ್ಸವದ ಸಮಯದಲ್ಲಿ,
ಕಮಪಿ = ವರ್ಣಿಸಲಸದಳವಾದ ಆದ್ವಿತೀಯವಾದ, 
ಮಂಗಳತೂರ್ಯ ಘೋಷಮ್ = ಮಂಗಳವಾದ್ಯ ಘೋಷವನ್ನು, 
ಸ್ವಯಂ = ತಾವಾಗಿಯೇ,
ವಿದಧುಃ = ಮಾಡಿದುವು. 

ಎಲೈ! ಗೋದಾದೇವಿಯೇ, ವಿಭುವಾದ ಪರಮಾತ್ಮನು, ನೀನು ಮುಡಿದುಕೊಟ್ಟ ಮಾಲಿಕೆಯಲ್ಲಿ ಅತಿಯಾದ ಆಸೆಯುಳ್ಳವನಾಗಿ, ನಿನ್ನ ತಂದೆಗೆ, ಅದನ್ನು ತಂದುಕೊಡಬೇಕೆಂದು ಅಜ್ಞಾಪಿಸಿದನು. ಅಂತೆಯೇ ನಿನ್ನ ತಂದೆಯು ಆ ಮಾಲಿಕೆಗಳನ್ನು ತರಲು, (ಭಾವಿ ಮಾವನಾಗುವ) ಅವರಲ್ಲಿ ವಿಶೇಷವಾದ ಗೌರವದಿಂದ ತಲೆಬಾಗಿ, ಅವರಿಂದ ಆ ಮಾಲಿಕೆಗಳನ್ನು ಪಡೆದು ತನ್ನ ಶಿರಸ್ಸಿನಲ್ಲಿ ಧರಸಿಕೊಂಡನು. ಬಳಿಕ ನಿನ್ನನ್ನು ವಿವಾಹವಾಗಲು ನಿನ್ನ ಬಳಿಗೆ ಗೋದೆಯನ್ನು ಕರೆತರಲು ಅರಸನ ಮುಖಾಂತರ ಆಳ್ವಾರರಿಗೂ ಅಜ್ಞಾಪಿಸಲು ನಿನ್ನನ್ನು ಶ್ರೀರಂಗನಾಥನ ಸನ್ನಿಧಿಗೆ ಕರೆದೊಯ್ದಾಗ, ನೀನು ಆತನನ್ನು ವರಿಸುವ ಸಮಯದಲ್ಲಿ ಸ್ವಯಂವರ ಮಂಟಪದಲ್ಲಿ, ಆ ರಂಗನಾಥನು ನೀನು ಮುಡಿದುಕೊಟ್ಟ ಮಾಲಿಕೆಗಳನ್ನು ತಲೆಯಲ್ಲಿ ಧರಿಸಿದವನಾಗಿ ಬರುತ್ತಿರಲು, ಆ ಪುಷ್ಪಮಾಲಿಕೆಗಳಲ್ಲಿದ್ದ ಮಧುವನ್ನು ಯಥೇಷ್ಟವಾಗಿ ಪಾನಮಾಡಿ ಮದಿಸಿದ ದುಂಬಿಗಳು ತಮ್ಮ ಇಂಪಾದ ಧ್ವನಿಯಿಂದ, ವರ್ಣಿಸಲಸದಳವಾದ ಮಂಗಳವಾದ್ಯ ಘೋಷವನ್ನು ಸಂತೋಭರದಲ್ಲಿ ಯಾರೂ ಪ್ರೇರಿಸದೆ ತಾವಾಗಿಯೇ ಮಾಡಿದುವು.

******

ಗೋದಾಸ್ತುತಿಃ (ಸಂಗ್ರಹ) - 17

ವಿಶ್ವಾಯಮಾನರಜಸಾ ಕಮಲೇನ ನಾಭೌ

ವಕ್ಷಃಸ್ಥಲೇ ಚ ಕಮಲಾಸ್ತನ ಚಂದನೇನ |
ಆಮೋದಿತೋಪಿ ನಿಗಮೈರ್ವಿಭುರಂಘ್ರಿಯುಗ್ಮೇ
ಧತ್ತೇ ನತೇನ ಶಿರಸಾ ತವ ಮಾಳಿಮಾಲಾಮ್ ||17||

ವಿಭುಃ = ವಿಭುತ್ವವುಳ್ಳ ಶ್ರೀರಂಗನಾಥನು,

ವಿಶ್ವಾಯಮಾನರಜಸಾ = ಇಡೀ ಪ್ರಪಂಚವನ್ನೇ ತನ್ನ ಪರಾಗಗಳಾಗಿವುಳ್ಳ,
ಕಮಲೇನ = ಕಮಲದ ಹೂವಿನಿಂದ,
ನಾಭೌ = ಹೊಕ್ಕಳು ಪ್ರದೇಶದಲ್ಲಿಯೂ,
ವಕ್ಷಃಸ್ಥಲೇ = ಎದೆಯಲ್ಲಿ,
ಕಮಲಾಸ್ತನಚಂದನೇನ = ಮಹಾಲಕ್ಷ್ಮಿಯ ಸ್ತನಕಲಷಗಳ ಮೇಲಿನ ಶ್ರೀಗಂಧದಿಂದ,
ಅಂಘ್ರಿಯುಗ್ಮೆ = ಪಾದಗಳೆರಡರಲ್ಲಿಯೂ,
ನಿಗಮೈಃ = ವೇದಗಳಿಂದಲೂ,
ಆಮೋದಿತೋಪಿ = ಪರಿಮಳಗೊಂಡಿದ್ದರೂ,
ತವ = ನಿನ್ನ,
ಮೌಳಿಮಾಲಾಂ = ತಲೆಯಲ್ಲಿ ಮುಡಿದ ಮಾಲೆಯನ್ನು,
ನತೇನ = ಬಗ್ಗಿದ,
ಶಿರಸಾ = ತಲೆಯಿಂದ,
ಧತ್ತೆ = ಧರಿಸುತ್ತಾನೆ. ||17||

    ಎಲೈ! ಗೋದಾದೇವಿಯೇ!, ವಿಭುವಾದ ಶ್ರೀರಂಗನಾಥನು, ಇಡೀ ವಿಶ್ವವನ್ನೇ ತನ್ನ ಪರಾಗಗಳಾಗಿವುಳ್ಳ ಕಮಲದಿಂದ ತನ್ನ ನಾಭಿದೇಶದಲ್ಲಿಯೂ, ವಕ್ಷಸ್ಥಲದಲ್ಲಿ ಮಹಾಲಕ್ಷ್ಮಿಯನ್ನು ಆಲಿಂಗನ ಮಾಡಿಕೊಂಡಾಗ, ಅವಳ ಸ್ತನಕಲಷಗಳ ಮೇಲೆ ಲೇಪನ ಮಾಡಿಕೊಂಡಿದ್ದ ಶ್ರೀಗಂಧವು ಅಂಟಿಕೊಂಡಿರುವುದರಿಂದಲೂ, ಎರಡು ಅಡಿದಾವರೆಗಳಲ್ಲಿಯೂ ನಿರಂತರವಾಗಿ ವೇದಮಾತೆಯು ಬಂದು ಸೇವೆ ಮಾಡುವುದರಿಂದಲೂ ಪರಿಮಳಗೊಂಡಿದ್ದರೂ, ನಿನ್ನ ವಿವಾಹ ಸಂಬಂಧವಾದ ಮಾಲಿಕಾರೋಪಣ ಮಹೋತ್ಸವದ ಸಮಯದಲ್ಲಿ ನಿನ್ನ ತಲೆಯಲ್ಲಿ ಮುಡಿದ ಮಾಲೆಯನ್ನು ಅವನ ಕತ್ತಿನಲ್ಲಿ ಹಾಕುವ ಸಮಯದಲ್ಲಿ, ಅದನ್ನು ಅತ್ಯಾದರದಿಂದ ತಲೆಭಾಗಿ ಧರಿಸಿದನು. 

*******

ಗೋದಾಸ್ತುತಿಃ (ಸಂಗ್ರಹ) - 18

ಚೂಡಾಪದೇನ ಪರಿಗೃಹ್ಯ ತವೋತ್ತರೀಯಂ

ಮಾಲಾಮಪಿ ತ್ವದಳಕೈರಧಿವಾಸ್ಯ ದತ್ತಾಮ್ |
ಪ್ರಾಯೇಣ ರಂಗಪತಿರೇಷ ಬಿಭರ್ತಿ ಗೋದೇ 
ಸೌಭಾಗ್ಯ ಸಂಪದಭಿಷೇಕ ಮಹಾಧಿಕಾರಮ್ ||18||

ಗೋದೇ = ಎಲೈ! ಗೋದಾದೇವಿಯೇ,

ಏಷಃ ರಂಗಪತಿಃ = ಈ ರಂಗನಾಥನಾದರೋ,
ತವ = ನಿನ್ನ,
ಉತ್ತರೀಯಂ = ಮೇಲ್ವಸ್ತ್ರವನ್ನೂ,
ತ್ವದಳಕೈಃ =ನಿನ್ನ ಮುಂಗುರುಳುಗಳೊಡನೆ,
ಅಧಿವಾಸ್ಯ = ಕೆಲಕಾಲವಿದ್ದು,
ದತ್ತಾಂ = ಕೊಡಲ್ಪಟ್ಟ,
ಮಾಲಾಮಪಿ = ಮಾಲಿಕೆಯನ್ನೂ,
ಚೂಡಾಪದೇನ = ತನ್ನ ತಲೆಯಿಂದ, 
ಪರಿಗೃಹ್ಯ = ಸ್ವೀಕರಿಸಿ,
ಪ್ರಾಯೇಣ = ಬಹುಶಃ,
ಸೌಭಾಗ್ಯ ಸಂಪದಭಿಷೇಕ = ತನ್ನ ಸೌಭಾಗ್ಯವೆಂಬ ಐಶ್ವರ್ಯ ಸಾಮ್ರಾಜ್ಯದಲ್ಲಿ ಅಭಿಷಿಕ್ತನಾಗಿರುವ,
ಮಹಾಧಿಕಾರಂ = ಅತಿದೊಡ್ಡದಾದ ಅಧಿಕಾರವನ್ನು,
ಭಿಭರ್ತಿ = ಹೊಂದಿದವನಾದನು ||18||

    ಎಲೈ! ಗೋದಾದೇವಿಯೇ! ಈ ರಂಗನಾಥನಾದರೋ, ನಿನ್ನ ವಿವಾಹ ಕಾಲದಲ್ಲಿ ಮಾಲಿಕಾರೋಪಣ ಸಮಯದಲ್ಲಿ ನಿನ್ನ ಕೈಯಿಂದ ಮಾಲಿಕೆ ಹಾಕುವಾಗ, (ಬೀಸುತ್ತಿದ್ದ ಗಾಳಿಯಿಂದ ಆಕಸ್ಮಾತ್ತಾಗಿ) ಅವನ ತಲೆಯಮೇಲೆ ಬಿದ್ದ ನಿನ್ನ ಮೇಲ್ವಸ್ತ್ರ ಅಥವಾ ಸೀರೆಯ ಸೆರಗನ್ನೂ ಮತ್ತು ನಿನ್ನ ಮುಂಗುರುಳುಗಳೊಡನೆ ಕೆಲಕಾಲ ಸಂಪರ್ಕವನ್ನು ಪಡೆದ, ನಿನ್ನಿಂದ ಕೊಡಲ್ಪಟ್ಟ ಮಾಲಿಕಗಳನ್ನೂ ತನ್ನ ತಲೆಯಿಂದ ಸ್ವೀಕರಿಸಿ (ಅಂದರೆ, ನಿನ್ನ ಉತ್ತರೀಯವನ್ನು ಅಧಿಕಾರದ ಗೌರವಾರ್ಥವಾಗಿ ಶಿರಸ್ಸಿನಲ್ಲಿ ಕಟ್ಟಿದ ಪರಿವಟ್ಟವಾಗಿಯೂ, ಪುಷ್ಪಮಾಲಿಕೆಯನ್ನು ಗೌರವಾರ್ಥವಾಗಿ ಹಾಕಿದ ಮಾಲಿಕೆಯಂತೆಯೂ ಧರಿಸಿ) ಬಹುಶಃ ನಿನ್ನೊಡನೆ ಕೂಡಿ ನಿನ್ನ ಸೊಬಗನ್ನು ಅನುಭವಿಸುವಿಕೆಯಾದರೋ, ತನ್ನ ಸೌಭಾಗ್ಯದಿಂದ ತಾನು ಪಡೆದ ಐಶ್ವರ್ಯ ಸಾಮ್ರಾಜ್ಯವೆಂದೂ, ಅದರಲ್ಲಿ ತಾನು ಅಭಿಷಿಕ್ತನಾಗಿ ತನ್ನ ಪ್ರಭುತ್ವವನ್ನು ನಿನ್ನಲ್ಲಿ ತೋರಿ ನಿನ್ನನ್ನು ಅನುಭವಿಸುವ ಅತಿದೊಡ್ಡದಾದ ಅಧಿಕಾರವೊಂದನ್ನು ತಾನು ಪಡೆದವನಂತೆ ಸಂತುಷ್ಟಾಂತರಂಗನಾದನು. 

*******

ಗೋದಾಸ್ತುತಿಃ (ಸಂಗ್ರಹ) - 19

ತುಂಗೈರಕೃತ್ರಿಮಗಿರಃ ಸ್ವಯಮುತ್ತಮಾಂಗೈಃ

ಯಂ ಸರ್ವಗಂಧ ಇತಿ ಸಾದರಮುದ್ವಹನ್ತಿ |
ಆಮೋದಮನ್ಯಮಧಿಗಚ್ಛತಿ ಮಾಲಕಾಭಿಃ 
ಸೋಪಿ ತ್ವದೀಯ ಕುಟಿಲಾಳಕವಾಸಿಕಾಭಿಃ ||19||

(ಎಲೈ! ಗೋದಾದೇವಿಯೇ) ಆಕೃತಿಮಗಿರಃ = ಕ್ರತ್ರಿಮವಲ್ಲದ ಅಪೌರುಷೇಯವಾದ ವೇದಗಳಾದರೋ, 

ಸ್ವಯಂ=ತಾವಾಗಿಯೇ, 
ತುಂಗೈಃ = ಶ್ರೇಷ್ಠವಾದ,
ಉತ್ತಮಾಂಗೈಃ = ('ವೇದಶಿರಸ್'-ಎಂದು ಪ್ರಸಿದ್ಧವಾದ) ಉಪನಿಷತ್ತುಗಳಿಂದ,
ಯಂ = ಯಾವ ಪರಮಾತ್ಮನನ್ನು,
ಸರ್ವಗಂಧಃ ಇತಿ = ಸರ್ವಗಂಧನೆಂದು,
ಸಾದರಂ = ಅತ್ಯಾದರದಿಂದ,
ಉದ್ವಹನ್ತಿ=ಉಚ್ಛಕಂಠದಿಂದ ಹೇಳುತ್ತದೆಯೋ,
ಅಪಿ=ಅದೇ ಪರಮಾತ್ಮನಾದರೋ,
ತ್ವದೀಯ=ನಿನ್ನ,
ಕುಟಿಲ=ಗುಂಗುರುಗುಂಗುರಾದ,
ಅಲಕ=ಮುಂಗುರುಳುಗಳೊಡನೆ,
ವಾಸಿತಾಭಿಃ = ವಾಸಿಸುತ್ತಿದ್ದ,
ಮಾಲಿಕಾಭಿಃ = ಮಾಲಿಕೆಗಳಿಂದ,
ಅನ್ಯಂ= (ಅನುಪಮವಾದ) ಬೇರೊಂದು ರೀತಿಯ,
ಆಮೋದಂ=ಪರಿಮಳವನ್ನು,
ಅಧಿಗಚ್ಛತಿ=ಹೊಂದುತ್ತಾನೆ. 

    ಎಲೈ! ಗೋದಾದೇವಿಯೇ! ಅಪೌರುಷೇಯವಾದ ವೇದಗಳಾದರೋ ತಾವಾಗಿಯೇ, ಶ್ರೇಷ್ಠವಾದ ತಮ್ಮ ಉಪನಿಷದ್ವಾಣಿಗಳಿಂದ, ಯಾವ ಪರಮಾತ್ಮನನ್ನು 'ಸರ್ವಗಂಧಃ', 'ಸರ್ವವಿಧವಾದ ಪರಿಮಳವನ್ನೂ ಹೊಂದಿರುವವನು' -ಎಂದು ಅತ್ಯಾದರದಿಂದ ಉಚ್ಛಕಂಠದಿಂದ ಘೋಷಿಸುತ್ತದೆಯೋ, ಅದೇ ಪರಮಾತ್ಮನು, ನಿನ್ನ ಗುಂಗುರುಗುಂಗುರಾದ ಮುಂಗುರುಳುಗಳೊಡನೆ ವಾಸಿಸುತ್ತಿದ್ದ ಮಾಲಿಕೆಗಳಿಂದ ಅನುಪಮವಾದ ಬೇರೊಂದು ರೀತಿಯ ಪರಿಮಳವನ್ನು ಹೊಂದುತ್ತಾನೆ. ||19||

******

ಗೋದಾಸ್ತುತಿಃ (ಸಂಗ್ರಹ) - 20

ಧನ್ಯೇ ಸಮಸ್ತಜಗತಾಂ ಪಿತುರುತ್ತಮಾಂಗೇ

ತ್ವನ್ಮೌಳಿಮಾಲ್ಯ ಭರಸಂಭರಣೇನ ಭೂಯಃ |
ಇಂದೀವರಸ್ರಜಮಿವಾದಧತಿ ತ್ವದೀಯಾ-
ನ್ಯಾಕೇಕರಾಣಿ ಬಹುಮಾನವಿಲೋಕಿತಾನಿ ||20||

ಸಮಸ್ತ ಜಗತಾಂ = ಎಲ್ಲ ಲೋಕಗಳಿಗೂ,

ಪಿತುಃ = ತಂದೆಯಾದ ರಂಗನಾಥನು,
ಧನ್ಯೇ = ತನ್ನ ಸ್ಥಿತಿಯು ಸಾರ್ಥಕವಾದ 
ಉತ್ತಮಾಂಗೇ=ತನ್ನ ಮುಡಿಯಲ್ಲಿ,
ತನ್ಮೌಳಿ ಮಾಲ್ಯಭರ = ನೀನು ಮಡಿದುಕೊಟ್ಟ ಮಾಲೆಗಳ ಭಾರವನ್ನು,
ಸಂಭರಣೇನ = ಆದರದಿಂದ ಧರಿಸಿದುದರಿಂದ 
ಭೂಯಃ = ಮತ್ತೆ
ತ್ವದೀಯಾನಿ = ನಿನ್ನ
ಬಹುಮಾನ= ಆದರಪೂರ್ವಕವಾಗಿ,
ಆಕೇಕರಾಣಿ = ಅರ್ಧತೆರೆದು ಅರ್ಧಮುಚ್ಚಿದ ಕಣ್ಣಿನಲ್ಲಿ ಕಣ್ಣುಗುಡ್ಡೆಯನ್ನು ತಿರುಗಿಸುತ್ತಾ ನೋಡುವ
ವಿಲೋಚಿತಾನಿ = ದೃಷ್ಟಿಯಿಂದ,
ಇಂದೀವರಸ್ರಜಂ = ಮತ್ತೊಂದು ಕನ್ನೈದಿಲೆಯ ಮಾಲಿಕೆಯನ್ನು
ಆದಧತಿ ಇವ = ಧರಿಸಿದವನಂತೆ ಕಾಣುತ್ತಿದ್ದನು. 

    ಎಲ್ಲ ಜಗತ್ತಿಗೂ ತಂದೆಯಾದ ರಂಗನಾಥನು, ಸಾರ್ಥಕ್ಯತೆಯನ್ನು ಪಡೆದ ತನ್ನ ಮುಡಿಯಲ್ಲಿ, ನೀನು ಮುಡಿದುಕೊಟ್ಟ ಮಾಲಿಕೆಗಳ ಭಾರವನ್ನು ಆದರದಿಂದ ಧರಿಸಿದುದನ್ನು ಕಂಡು, ನೀನಾದರೋ ನಿನ್ನ ಪ್ರೇಮಪೂರಿತವಾದ ಕಣ್ಣನ್ನು, ಕಡೆಗಣ್ಣಿನ ಕಡೆ ಮುಚ್ಚಿಕೊಂಡು, ಉಳಿದ ಭಾಗದಲ್ಲಿ ತೆರೆದುಕೊಂಡು ಕಣ್ಣಿನ ಗುಡ್ಡೆಗಳನ್ನು ತಿರುಗಿಸುತ್ತಾ ಅವನ ಬಿಂಬವನ್ನು ಅಡಿಯಿಂದ ಮುಡಿಯವರೆಗೂ ನೋಡಿದಾಗ ಕನ್ನೈದಿಲೆಯಂತಿರುವ ನಿನ್ನ ಕಣ್ಣಿನ ಕಟಾಕ್ಷವು ಅವನ ಬಿಂಬದ ಸುತ್ತಲೂ ಬೀಳಲಾಗಿ ಅದು ಪ್ರತಿಫಲಿತವಾಗಿ ನಿನ್ನ ಪ್ರಿಯನು ಮತ್ತೊಂದು ಕನ್ನೈದಿಲೆಯ ಮಾಲಿಕೆಯನ್ನೇ ಧರಿಸಿದವನಂತೆ ಕಾಣುತ್ತಿದ್ದನು. 

*********

ಗೋದಾಸ್ತುತಿಃ (ಸಂಗ್ರಹ) - 21

ರಂಗೇಶ್ವರಸ್ಯ ತವ ಚ ಪ್ರಣಯಾನುಬಂಧಾತ್

ಅನ್ಯೋನ್ಯಮೂಲ್ಯಪರಿವೃತ್ತಿಮಭಿಷ್ಟುವಂತಃ |
ವಾಚಾಲಯಂತಿ ವಸುಧೇ ರಸಿಕಾ ಸ್ತ್ರೀಲೋಕಿಂ
ನ್ಯೂನಾಧಿಕತ್ವಸಮತಾವಿಷಯೈರ್ವಿವಾದೈಃ ||21||
*
ವಸುಧೇ=ಎಲೈ ಭೂದೇವಿಯ ಅವತಾರಗಳಾದ ಗೋದಾದೇವಿಯೇ! 
ರಂಗೇಶ್ವರಸ್ಯ = ಶ್ರೀರಂಗನಾಥನ,
ಚ = ಮತ್ತು,
ತವ = ನಿನ್ನ,
ಪ್ರಣಯಾನು = ಬಂಧಾತ್ = ಪ್ರೇಮಪಾಶದಿಂದ,
ಅನ್ಯೋನ್ಯ = ಪರಸ್ಪರ,
ಮಾಲ್ಯಪರಿವೃತ್ತಿಂ = ಮಾಲಿಕೆಗಳನ್ನು ಬದಲಾಯಿಸಿಕೊಳ್ಳುವಿಕೆಯನ್ನು,
ಅಭಿಷ್ಟುವಂತಃ = ಸ್ತೋತ್ರಮಾಡುತ್ತಿದ್ದ,
ರಸಿಕಾಃ = ಶೃಂಗಾರರಸವನ್ನು ಅನುಭವಿಸುವ ರಸಿಕರಾದರೋ,
ನ್ಯೂನ = (ನಿಮ್ಮಿಬ್ಬರಲ್ಲಿ ಒಬ್ಬರು) ಕಡಿಮೆಯೆಂದೂ,
ಅಧಿಕ = ಒಬ್ಬರು ಅಧಿಕರೆಂದು,
ಸಮತಾ = ಇಬ್ಬರೂ ಸಮರೆಂದೂ,
ವಿಷಯೈಃ = ಹೇಳುವ ವಿಷಯಗಳಿಂದ ಕೂಡಿದ, ವಿವಾಧೈಃ = ವಾದವಿವಾದದ ಮಾತುಗಳಿಂದ 
ತ್ರಿಲೋಕೀಂ = ಮೂರು ಲೋಕಗಳನ್ನೂ, 
ವಾಚಾಲಯಂತಿ = ಮಾತಾಡುವಂತೆ ಮಾಡುತ್ತಿದ್ದರು ||21||
        
    ಎಲೈ! ಭೂದೇವಿಯ ಅವತಾರಳಾದ ಗೋದಾದೇವಿಯೇ, ಪರಸ್ಪರ ಪ್ರೇಮದಿಂದ ನಡೆದ ನಿನ್ನ ಮತ್ತು ರಂಗನಾಥನ ವಿವಾಹದ ಮಾಲಿಕಾರೋಪಣ ಪ್ರಸಂಗದಲ್ಲಿ, ನೀವಿಬ್ಬರೂ ಪ್ರೇಮಪಾಶದಿಂದ ಮಾಲಿಕೆಗಳನ್ನು ಬದಲಾಯಿಸಿ ಕೊಳ್ಳುವುದನ್ನು ಸ್ತೋತ್ರಮಾಡುತ್ತಿದ್ದ, ಪ್ರಿಯಪ್ರೇಯಸಿಯರ ಪ್ರೇಮ ಭಾವವನ್ನೇ ಸ್ಥಾಯಿಭಾವವಾಗಿವುಳ್ಳ ಶೃಂಗಾರರಸೈಕಲೋಲರಾದ ರಸಿಕರು,
ಸೌಂದರ್ಯ, ವಿಭವ, ಐಶ್ವರ್ಯ ಮತ್ತು ಪ್ರೇಮಭಾವದಿಂದ ಕೂಡಿದ ನಿಮ್ಮಿಬ್ಬರಲ್ಲಿ ಬಾಲ್ಯದಿಂದಲೂ ಪರಮಾತ್ಮನನ್ನೇ ವಿವಾಹವಾಗಬೇಕೆಂದು ದೃಢ ಸಂಕಲ್ಪ ಮಾಡಿ, ತನ್ನ ಪ್ರೇಮಪಾಶದಿಂ್ ಪ್ರಿಯನನ್ನು ಕಟ್ಟಿಹಾಕಿ ವಿವಾಹವಾದ ಗೋದಾದೇವಿಯೇ, ರಂಗನಾಥನಿಗಿಂತಲೂ ಅಧಿಕಳೆಂದು ಕೆಲವರು ಹೇಳಿದರೆ, ಕೆಲವರು ತನ್ನ ಪ್ರಿಯನಾದ ರಂಗನಾಥನಿಗೋಸ್ಕರ ಹಾತೊರೆಯುತ್ತಿದ್ದ ಗೋದೆಯ ಮೇಲೆ ವಿಶೇಷ ಕರುಣೆಯನ್ನು ತೋರಿ, ಬಂದು ವಿವಾಹವಾದ ಉಭಯ ವಿಭೂತಿ ನಾಯಕನಾದರೂ, ಕರುಣೆಯೇ ಮೂರ್ತಿವೆತ್ತಂತಿರುವ ರಂಗನಾಥನೇ ಅಧಿಕನೆಂದೂ, ಮತ್ತೆ ಕೆಲವರು ಜಗತ್ತಿನ ಮಾತಾಪಿತೃಗಳಾದ ಗೋದಾ ರಂಗನಾಥರಿಬ್ಬರೂ ಪರಸ್ಪರ, ಒಬ್ಬರ ಪ್ರೇಮಕ್ಕೆ ಮತ್ತೊಬ್ಬರ ಕರುಣೆ ಸಾಟಿಯಾಗಿರುವುದರಿಂದ ಸಮರೆಂದೂ, ಮಾತನಾಡುತ್ತಿದ್ದ ವಾದವಿವಾದಗಳಿಂದ ಮೂರು ಲೋಕದವರೂ ಇದರಲ್ಲಿ ಪಾಲ್ಗೊಂಡು ಮಾತನಾಡುವಂತೆ ಮಾಡಿದರು. 
*********

ಗೋದಾಸ್ತುತಿಃ (ಸಂಗ್ರಹ) - 22

ದೂರ್ವಾದಳಪ್ರತಿಮಯಾ ತವದೇವಿ ಕಾನ್ತ್ಯಾ 

ಗೋರೋಚನಾ ರುಚಿರಯಾ ಚ ರುಚೇಂದಿರಾಯಾಃ |
ಅಸೀದನುಜ್ಝಿತ ಶಿಖಾವಳಕಂಠಶೋಭಂ
ಮಾಂಗಲ್ಯದಂ ಪ್ರಣಮತಾಂ ಮಧುವೈರಿಗಾತ್ರಮ್ ||22||

ದೇವಿ = ಎಲೈ! ಗೋದಾದೇವಿಯೇ,

ತವ = ನಿನ್ನ, 
ದೂರ್ವಾದಳ ಪ್ರತಿಮಯಾ = ಗರಿಕೆಯ ಹುಲ್ಲಿನಂತಿರುವ ದೇಹದ,
ಕಾಂತ್ಯಾ = ಕಾಂತಿಯಿಂದಲೂ,
ಚ = ಮತ್ತು,
ಇಂದಿರಾಯಾಃ = ಮಹಾಲಕ್ಷ್ಮಿಯ,
ಗೋರೋಚನಾರುಚಿರಯಾ = ಗೋರೋಚನದಂತೆ ದೇಹಕಾಂತಿಯುಳ್ಳ,
ರುಚಾ = ಕಾಂತಿಯಿಂದಲೂ,
ಪ್ರಣಮತಾಂ = ತನ್ನಲ್ಲಿ ಶರಣುಹೋದವರಿಗೆ,
ಮಾಂಗಲ್ಯದಂ = ಮಂಗಳವನ್ನುಂಟುಮಾಡುವ,
ಮಧುವೈರಿಗಾತ್ರಂ = ಮಧುಸೂದನನ ದೇಹವಾದರೋ,
ಅನುಜ್ಝಿತ = ಎಂದೂ ಬಿಡದಿರುವ,
ಶಿಖಾವಳ = ನವಿಲಿನ,
ಕಂಠಶೋಭಂ = ಕುತ್ತಿಗೆಯ ಕಾಂತಿಯನ್ನು ಹೊಂದಿದುದಾಗಿ 
ಆಸೀತ್ = ಇದ್ದೀತು. ||22||

    ಎಲೈ! ಗೋದಾದೇವಿಯೇ, ತನ್ನಲ್ಲಿ ಶರಣುಹೋದ ಚೇತನರಿಗೆ ಮಂಗಳವನ್ನುಂಟುಮಾಡುವ, ಮಧುಸೂದನನಾದರೋ ಸ್ವತಃ ನೀಲಮೇಘಶ್ಯಾಮನು, ಅವನೊಡನೆಯೇ ನಿರಂತರವಾಗಿರುವ ಮಹಾಲಕ್ಷ್ಮಿಯಯದರೋ ಗೋರೋಚನದ ವರ್ಣದಿಂದ ಶೋಭಿಸುತ್ತಾಳೆ. ನೀನಾದರೋ ಗರಿಕೆಯ ಹುಲ್ಲಿನಂತೆ ಹಸಿರು ಬಣ್ಣದಿಂದ ಶೋಭಿಸುತ್ತಿದ್ದೀಯೆ. ನಿಮ್ಮ ಮೂವರ ಕಾಂತಿಯೂ ಒಂದಕ್ಕೊಂದು ಸಮ್ಮಿಶ್ರಣಗೊಂಡು ಮಧುಸೂದನನ ದೇಹವಾದರೋ ನವಿಲಿನ ಕಂಠದ ಕಾಂತಿಯಿಂದ ಶೋಭಿಸುತ್ತಿದೆ. ||22||

*****

ಗೋದಾಸ್ತುತಿಃ (ಸಂಗ್ರಹ) - 24

ಆರ್ದ್ರಾಪರಾಧಿನಿ ಜನೇಪ್ಯಭಿರಕ್ಷಣಾರ್ಥಂ

ರಂಗೇಶ್ವರಸ್ಯ ರಮಯಾ ವಿನಿವೇದ್ಯಮಾನೇ |
ಪಾರ್ಶ್ವೇಪರಕ್ರ ಭವತೀ ಯದಿ ತತ್ರ ನಾಸೀತ್ 
ಪ್ರಾಯೇಣ ದೇವಿ ವದನಂ ಪರಿವರ್ತಿತಂ ಸ್ಯಾತ್ ||24||

ದೇವಿ = ಎಲೈ! ಗೋದಾದೇವಿಯೇ,

ಆರ್ದ್ರಾಪರಾಧಿನಿ = ಆಗತಾನೆ ಅಪರಾಧವೆನ್ನೆಸಗಿರುವ,
ಜನೇಪಿ = ಚೇತನರ ವಿಷಯದಲ್ಲಿಯೂ,
ಅಭಿರಕ್ಷಣಾರ್ಥಂ = ತಾನಾಗಿ ಎದುರುಗೊಂಡು ರಕ್ಷಿಸುವ ಸಲುವಾಗಿ,
ರಮಯಾ = ಮಹಾಲಕ್ಷ್ಮಿಯಿಂದ,
ರಂಗೇಶ್ವರಸ್ಯ = ರಂಗನಾಥನ ಸನ್ನಿಧಾನದಲ್ಲಿ,
ವಿನಿವೇದ್ಯಮಾನೇ = ವಿಜ್ಞಾಪಿಸಲ್ಪಡುತ್ತಿರಲು,
ತತ್ರ = ಅಲ್ಲಿ,
ಪರತ್ರ = ಬೇರೊಂದು,
ಪಾರ್ಶ್ವೇ = ಪಕ್ಕದಲ್ಲಿ,
ಯದಿ = ಒಂದು ವೇಳೆ,
ಭವತೀ = ನೀನಾದರೊ,
ನ ಅಸೀತ್ = ಇಲ್ಲದಿದ್ದರೆ,
ಪ್ರಾಯೇಣ = ಬಹುಶಃ,
ವದನಂ = ಆ ರಂಗನಾಥನ ಮುಖವಾದರೋ,
ಪರಿವರ್ತಿತಂ = ಬೇರೊಂದು ದಿಕ್ಕಿಗೆ ತಿರುಗಿ ಕೊಂಡುದುದಾಗಿ,
ಸ್ಯಾತ್ = ಆಗುತ್ತಿದ್ದಿತು 

    ಎಲೈ! ಗೋದಾದೇವಿಯೇ, ಆಗ ತಾನೇ ಅಪರಾಧವನ್ನೆಸಗುತ್ತಿರುವ ಚೇತನರಲ್ಲಿಯೂ, ಅವರು ಕೇಳದಿದ್ದರೂ, ತಾನಾಗಿ ತನ್ನ ವಾತ್ಸಲ್ಯ, ದಯಾ, ಕ್ಷಮಾದಿಗುಣಗಳಿಂದ ಅವರನ್ನು ರಕ್ಷಿಸುವ ಸಲುವಾಗಿ, ಆ ಚೇತನರು ಆಬುದ್ಧಿ ಕೃತವಾಗಿ, ಆಕಸ್ಮಿಕವಾಗಿ ಮಾಡಿದ ಯಾದೃಚ್ಛಿಕ, ಪ್ರಾಸಂಗಿಕ ಸುಕೃತಗಳನ್ನು ರಂಗನಾಥನಲ್ಲಿ ಮಹಾಲಕ್ಷ್ಮಿಯು ವಿಜ್ಞಾಪಿಸುತ್ತಿರಲು, ಕರ್ಮಾನುಗುಣವಾಗಿ ಚೇತನರಿಗೆ ಫಲವನ್ನು ಕೊಡುವ ದಂಡಧರನಾದ ಪರಮಾತ್ಮನು ಮಹಾಲಕ್ಷ್ಮಿಯ ಕಡೆಯಿಂದ ಮತ್ತೊಂದು ಕಡೆಗೆ ತಿರುಗೋಣವೆಂದರೆ, ಆ ಪಾರ್ಶ್ವದಲ್ಲಿ ನೀನಿದ್ದು, ನೀನೂ ಆ ಚೇತನರನ್ನು ರಕ್ಷಿಸಿಯೇ ತೀರಬೇಕೆಂದು ಒತ್ತಾಯಪಡಿಸುವುದರಿಂದ ಪರಮಾತ್ಮನು ಬೇರೆ ಯಾವ ಕಡೆಯೂ ತಿರುಗದೆ ಮಹಾಲಕ್ಷ್ಮಿಯ ಮಾತಿಗೆ ಓಗೊಟ್ಟು ಆ ಚೇತನರ ಮೇಲೆ ತನ್ನ ಕೃಪಾಕಟಾಕ್ಷ ಬೀರಿ, ಅವರು ತನ್ನಲ್ಲಿ ಬಂದು ಶರಣಾಗತಿಮಾಡುವಂತೆ ಮಾಡಿ ರಕ್ಷಿಸುತ್ತಾನೆ. ಹೀಗಿರಲು, ಆ ಪರಮಾತ್ಮನ ಒಂದು ಪಾರ್ಶ್ವದಲ್ಲಿ ಒಂದು ವೇಳೆ ನೀನಿಲ್ಲದಿದ್ದರೆ ಅವನ ಮುಖವೇ ಬೇರೊಂದು ಕಡೆಗೆ ತಿರುಗಿ ಆ ಚೇತನರನ್ನು ನಿಗ್ರಹಿಸುತ್ತಿದ್ದನು.ಆದುದರಿಂದ ಚೇತನೋದ್ಧಾರವೆಂಬುದು ಪ್ರಧಾನವಾಗಿ ನಿಮ್ಮಿಬ್ಬರ ತಾಯಂದಿರಿಂದಲೇ ನಡೆಯುತ್ತದೆಯಲ್ಲವೇ ||24||

*****

*ಗೋದಾಸ್ತುತಿಃ (ಸಂಗ್ರಹ) - 25

ಗೋದೇ ಗುಣೈರಪನಯನ್ ಪ್ರಣತಾಪರಾಧಾನ್ 

ಭ್ರೂಕ್ಷೇಪ ಏವ ತವ ಭೋಗರಸಾನುಕೂಲಃ |
ಕರ್ಮಾನುಬನ್ಧಿ ಫಲದಾನರಶಸ್ಯ ಭರ್ತುಃ
ಸ್ವಾತಂತ್ರ್ಯದುರ್ವ್ಯಸನಮರ್ಮಭಿದಾ ನಿದಾನಮ್ ||25||

ಗೋದೇ = ಎಲೈ! ಗೋದಾದೇವಿಯೇ,

ಪ್ರಣತಾಪರಾಧಾನ್ = ನಿನ್ನಲ್ಲಿ ಶರಣುಹೋದ ಚೇತನರ ಅಪರಾಧವನ್ನು,
ಗುಣೈಃ = (ನಿನ್ನ) ದಯಾ, ಕ್ಷಮಾ ವಾತ್ಸಲ್ಯಾದಿ ಗುಣಗಳಿಂದ,
ಅಪನಯನ್ = ಹೋಗಲಾಡಿಸುವ,
ಭೋಗರಸಾನುಕೂಲಃ = ನಿನ್ನ ಪತಿಯು ಪ್ರೇಮ ಭೋಗರಸವನ್ನು ಅನುಭವಿಸಲು ಅನುಕೂಲವಾದ,
ತವ = ನಿನ್ನ,
ಭ್ರೂಕ್ಷೇಪಃ ಏವ = ಹುಬ್ಬು ಕುಣಿಸುವಿಕೆ ಯಾದರೋ,
ಕರ್ಮಾನುಬಂಧಿ = ಕರ್ಮಗಳಿಗನುಗುಣವಾಗಿ, 
ಫಲದಾನರತಸ್ಯ = ಫಲವನ್ನು ಕೊಡುವುದರಲ್ಲಿಯೇ ನಿರತನಾದ, 
ಭರ್ತುಃ = ನಿನ್ನ ಪತಿಯ, 
ಸ್ವಾತಂತ್ರ್ಯ = ಸ್ವಾತಂತ್ರ್ಯದಿಂದ
ದುರ್ವ್ಯಸನ = ಉಂಟಾಗುವ ದುಃಖದ,
ಮರ್ಮಭಿದಾ = ಮರ್ಮಸ್ಥಾನವನ್ನೇ ಭೇಧಿಸುವ,
ನಿದಾನಮ್ = ಆದಿ ಕಾರಣವಾದುದಾಗಿರುತ್ತದೆ. ||25||

    ಎಲೈ! ಗೋದಾದೇವಿಯೇ!, ನಿನ್ನಲ್ಲಿ ಶರಣುಹೋದ ಚೇತನರ ಅಪವಾದವನ್ನು, ನಿನ್ನ ಕ್ಷಮಾ, ದಯಾ, ವಾತ್ಸಲ್ಯಾದಿ ಗುಣಗಳಿಂದ ಹೋಗಲಾಡಿಸುವ, ನಿನ್ನ ಪತಿಯು ತನ್ನ ಪ್ರೇಮಭೋಗದ ರಸವನ್ನು ಅನುಭವಿಸಲು ಅನುಕೂಲವಾದ, ನಿನ್ನ ಹುಬ್ಬು ಕುಣಿಸುವಿಕೆಯಾದರೋ, ಕರ್ಮಗಳಿಗನುಗುಣವಾಗಿ ಫಲವನ್ನು ಕೊಡುವುದರಲ್ಲಿಯೇ ನಿರತನಾದ ನಿನ್ನ ಪತಿಯ ಸ್ವಾತಂತ್ರ್ಯದಿಂದ ಉಂಟಾಗುವ ದುಃಖದ ಮರ್ಮಸ್ಥಾನವನ್ನೇ ಭೇದಿಸುವ ಆದಿಕಾರಣವಾಗಿರುತ್ತದೆ ಅಂದರೆ ಕೇವಲ ನಿನ್ನ ಹುಬ್ಬುಕುಣಿಸುವಿಕೆಯಿಂದಲೆ ನಿನ್ನ ಪತಿಯನ್ನು ವಶಪಡಿಸಿಕೊಂಡು, ನಿನ್ನಲ್ಲಿ ಶರಣಾಗತರಾದ ಚೇತನರನ್ನು ಧಂಢಧರನಾದ ಪರಮಾತ್ಮನು ನಿಗ್ರಹಿಸದೇ ಅನುಗ್ರಹಿಸುವಂತೆ ನೀನು ಮಾಡುತ್ತಿಯೆ

********

ಗೋದಾಸ್ತುತಿಃ (ಸಂಗ್ರಹ) - 26

ರಂಗೇ ತಟತ್ ಗುಣವತೋರಮಯೈವ ಗೋದೇ 

ಕೃಷ್ಣಾಂಬುದಸ್ಯ ಘಟಿಕಾಂ ಕೃಪಯಾ ಸುವೃಷ್ಟ್ಯಾ |
ದೌರ್ಗತ್ಯದುರ್ವಿಷವಿನಾಶ ಸುಧಾನದೀಂ ತ್ವಾಂ 
ಸನ್ತಃ ಪ್ರಪದ್ಯ ಶಮಯನ್ತ್ಯಚಿರೇಣ ತಾಪಾನ್ ||26||

ಗೋದೇ = ಎಲೈ! ಗೋದಾದೇವಿಯೇ,

ರಂಗೇ = ಶ್ರೀರಂಗದಲ್ಲಿ,
ತಟಿತ್ ಗುಣವತಃ = ಮಿಂಚಿನ ಬಳ್ಳಿಯ ಗುಣದಿಂದ ಕೂಡಿದ,
ರಮಯಾ = ಮಹಾಲಕ್ಷ್ಮಿಯಿಂದ ಕೂಡಿದ,
ಕೃಷ್ಣಾಂಬುದಸ್ಯ = (ನೀಲಮೇಘಶ್ಯಾಮನಾದ) ಕೃಷ್ಣವಾದ ಮೋಡದಿಂದ,
ಕೃಪಯಾ = ದಯೆಯಿಂದ, 
ಸುವೃಷ್ಟ್ಯಾ = ಚೆನ್ನಾಗಿ ಮಳೆಯಾದುದಿರಿಂದ,
ಘಟಿತಾಂ = ಉಂಟಾದ,
ದೌರ್ಗತ್ಯ=ದುರ್ಗತಿಯಿಂದ ಉಂಟಾದ,
ದುರ್ವಿಷ=ಕೆಟ್ಟ ವಿಷವನ್ನು,
ವಿನಾಶ=ನಾಶಪಡಿಸುವ,
ಸುಧಾನದೀಂ = ಅಮೃತದ ನದಿಯಂತಿರುವ,
ತ್ವಾಂ=ನಿನ್ನನ್ನು,
ನಸ್ತಃ = ಸತ್ಪುರುಷರು, 
ಪ್ರಪದ್ಯ= ಆಶ್ರಯಿಸಿ, 
ಅಚಿರೇಣ=ಕೆಲವೇ ಸಮಯದಲ್ಲಿ,
ತಾಪಾನ್ = ಆಧಿಭೌತಿಕ, ಆಧಿದೈವಿಕ ಆಧ್ಯಾತ್ಮಿಕ ತಾಪಗಳನ್ನು,
ಶಮಯಂತಿ = ಶಮನಮಾಡಿಕೊಳ್ಳುತ್ತಾರೆ. 

    ಎಲೈ! ಗೋದಾದೇವಿಯೇ ರಂಗನಾಥನು ನೀರುಂಡ ಮೇಘದಂತೆ ನೀಲಮೇಘಶ್ಯಾಮನಾಗಿದ್ದಾನೆ. ಅವನ ವಕ್ಷಸ್ಥಲದಲ್ಲಿರುವ ಲಕ್ಷ್ಮಿಯು "ನೀಲತೋಯದ ಮಧ್ಯಸ್ಥಾವಿದ್ಯುಲ್ಲೇಖೇವ ಭಾಸ್ಪರಾ" ಎಂದು ಹೇಳುವಂತೆ ಮಿಂಚಿನ ಬಳ್ಳಿಯಂತಿದ್ದಾಳೆ ಅವನ ಕೃಪೆಯೆಂಬ ಮಳೆಯಿಂದಾದ ಅಮೃತ ರಸನದಿಯ ಪ್ರವಾಹದಂತೆ ನೀನಿದ್ದೀಯೇ, ಆದುದರಿಂದಲೇ, ಸತ್ಪುರುಷರು, ದುರ್ಗತಿಯಿಂದುಂಟಾದ ಕೆಟ್ಟ ವಿಷದಂತಿರುವ ಜನ್ಮ ಮರಣ ಚಕ್ರದಿಂದ ಕೂಡಿದ ಸಂಸಾರವನ್ನು ನಾಶಪಡಿಸುವ, ಅಮೃತರಸನದಿಯಂತಿರುವ ನಿನ್ನನ್ನೂ ಮತ್ತು ನಿನ್ನ ಶ್ರೀಸೂಕ್ತಿಯನ್ನೂ ಆಶ್ರಯಿಸಿ, ಕೆಲವೇ ಸಮಯದಲ್ಲಿ ಆಧಿಭೌತಿಕ, ಆಧಿ ದೈವಿಕ ಮತ್ತು ಆಧ್ಯಾತ್ಮಿಕವೆಂಬ ತಾಪತ್ರಯಗಳನ್ನೂ ಶಮನಗೊಳಿಸಿ ಕೊಳ್ಳುತ್ತಾರೆ. 

*********

ಗೋದಾಸ್ತುತಿಃ (ಸಂಗ್ರಹ) - 27

ಜಾತಾಮಪರಾಧಮಪಿ ಮಾಮನುಕಂಪ್ಯ ಗೋದೇ 

ಗೋಪ್ತ್ರೀಯದಿ ತ್ವಮಸಿ ಯುಕ್ತಮಿದಂ ಭವತ್ಯಾಃ |
ವಾತ್ಸಲ್ಯನಿರ್ಭರತಯಾ ಜನನೀ ಕುಮಾರಂ 
ಸ್ತನ್ಯೇನ ವರ್ಧಯತಿ ದಷ್ಟಪಯೋಧರಾಪಿ ||27||

ಗೋದೇ = ಎಲೈ ಗೋದಾದೇವಿಯೇ,

ಜಾತಾಪರಾಧಂ = ಅಪರಾಧವನ್ನೇ ಎಸಗುತ್ತಿರುವ,
ಮಾಂ ಅಪಿ = ನನ್ನನ್ನೂ ಕೂಡ,
ಯದಿ = ಒಂದು ವೇಳೆ,
ಅನುಕಂಪ್ಯ = ದಯತೋರಿ,
ಗೋಪ್ತ್ರೀ = ರಕ್ಷಿಸುವವಳಾಗಿರುವ,
ಇದಂ = ಈ ನಿನ್ನ ಗುಣವು,
ಭವತ್ಯಾಃ - ನಮಗೆ,
ಯುಕ್ತಂ = ಯೋಗ್ಯವಾಗಿಯೇ ಇದೆ. (ಏಕೆಂದರೆ), 
ಜನನೀ = ತಾಯಿಯಾದರೋ,
ದಷ್ಟಪಯೋಧರಾಪಿ = ಕಚ್ಚಲ್ಪಟ್ಟ ಮೊಲೆಯುಳ್ಳವಳಾದರೂ, 
ಕುಮಾರಂ = (ಕಚ್ಚಿದ) ತನ್ನ ಶಿಶುವನ್ನು,
ವಾತ್ಸಲ್ಯನಿರ್ಭರತಯಾ = ಅತ್ಯಧಿಕವಾದ ವಾತ್ಸಲ್ಯ ಗುಣದಿಂದ,
ಸ್ತನ್ಯೇನ = ತನ್ನ ಮೊಲೆಹಾಲನ್ನುಣಿಸಿಯೇ, 
ವರ್ಧಯತಿ - ಪೋಷಿಸುತ್ತಾಳೆ. 

    ಎಲೈ! ಗೋದಾದೇವಿಯೇ, ಅಪರಾಧವನ್ನೇ ಎಸಗುತ್ತಿರುವ, ನನ್ನನ್ನೂ ಒಂದು ವೇಳೆ ನೀನು ಕೃಪೆತೋರಿ ರಕ್ಷಿಸುವವಳಾದರೆ, ಈ ನಿನ್ನ ಗುಣವಾದರೋ ನಿನಗೆ ಉಚಿತವಾದುದೇ ಆಗಿದೆ. ಏಕೆಂದರೆ, ತಾಯಿಯಾದವಳು ತನ್ನ ಶಿಶುವು ಸ್ತನ್ನಪಾನ ಮಾಡುವಲ್ಲಿ ಕೆಲವೇಳೆಯ್ಲಲ್ಲಿ ಸ್ತನಗಳನ್ನು ಕಚ್ಚಿದರೂ, ತನ್ನ ಸ್ತನವನ್ನು ಅದು ಕಚ್ಚಿತೆಂದು ಅದರ ದೋಷವನ್ನು ಗ್ರಹಿಸಿ ಅದರ ಮೇಲೆ ಕೋಪತೋರದೆ, 'ದೋಷ ಅದರ್ಶಿತ್ವಂ ವಾತ್ಸಲ್ಯಂ' - ಎಂದು ಹೇಳುವಂತೆ, ಆ ಶಿಶುವಿನ ದೋಷವನ್ನು ಲೆಕ್ಕಿಸದೆ ವಾತ್ಸಲ್ಯಪೂರ್ಣಳಾಗಿ ಮತ್ತೆ ಅದಕ್ಕೆ ತನ್ನ ಸ್ತನ್ಯಪಾನ ಮಾಡಿಸಿ ಅದನ್ನು ಪೋಷಿಸುತ್ತಾಳೆಯಲ್ಲವೇ

*********

ಗೋದಾಸ್ತುತಿಃ (ಸಂಗ್ರಹ) - 28

ಶತಮಖಮಣಿನೀಲಾ ಚಾರುಕಲ್ಹಾರಹಸ್ತಾ

ಸ್ತನಭರ ನಮಿತಾಂಗೀ ಸಾನ್ದ್ರವಾತ್ಸಲ್ಯಸಿಂಧುಃ |
ಅಲಕವಿನಿಹಿತಾಭಿಃ ಸ್ರಗ್ಭಿರಾಕೃಷ್ಟನಾಥಾ 
ವಿಲಸತು ಹೃದಿ ಗೋದಾ ವಿಷ್ಣುಚಿತ್ತಾತ್ಮಜ್ಞಾನಃ ||28||

ಶತಮುಖಮಣಿನಿಲಾ = ಇಂದ್ರನೀಲಮಣಿಯಂತೆ ನೀಲವರ್ಣದಿಂದ ಕೂಡಿರುವವಳೂ,

ಚಾರುಕಲ್ಹಾರಹಸ್ತಾ = ಸುಂದರವಾದ ಕಲ್ಹಾರ ಪುಷ್ಪವನ್ನು ಕೈಯಲ್ಲಿ ಹಿಡಿದಿರುವವಳೂ,
ಸ್ತನಭರ=ಸ್ತನಕಲಷಗಳ ಭಾರದಿಂದ,
ನಮಿತಾಂಗಿ=ಬಾಗಿದ ದೇಹವುಳ್ಳವಳೂ,
ಸಾಂದ್ರವಾತ್ಸಲ್ಯಸಿಂಧು=ಗಾಢವಾದ ವಾತ್ಸಲ್ಯಗುಣದ ಕಡಲಿನಂತಿರುವವಳೂ,
ಅಲಕವಿನಿಹಿತಾಭಿಃ=ತನ್ನ ಮುಂಗುರುಳುಗಳೊಡನೆ ಮುಡಿದು ತೆಗೆದುಕೊಟ್ಟ,
ಸ್ರಗ್ಭಿಃ=ಮಾಲಿಕೆಗಳಿಂದ,
ಆಕೃಷ್ಟನಾಥಾ=ತನ್ನ ಪತಿಯಾದ ರಂಗನಾಥನನ್ನೇ ಆಕರ್ಷಿಸಿದವಳು,
ವಿಷ್ಣುಚಿತ್ತಾತ್ಮಜಾ=ಪೆರಿಯಾಳ್ವಾರರ ಮಗಳೂ ಆದ,
ಗೋದಾ=ಗೋದಾ ದೇವಿಯು,
ನಃ=ನಮ್ಮ,
ಹೃದಿ=ಮನಸ್ಸಿನಲ್ಲಿ,
ವಿಲಸತು=ಪ್ರಕಾಶಿಸುತ್ತಿರಲಿ 

    ಇಂದ್ರ ನೀಲಮಣಿಯಂತೆ ನೀಲವರ್ಣದಿಂದ ಕೂಡಿರುವವಳೂ, ಸುಂದರವಾದ ಕಲ್ಹಾರಪುಷ್ಪವನ್ನು ಕೈಯಲ್ಲಿಪಿಡಿದಿರುವವಳೂ, ಸ್ತನಕಲಷಗಳ ಭಾರದಿಂದ ಬಗ್ಗಿದ ದೇಹವುಳ್ಳವಳೂ, ಗಾಢವಾದ ವಾತ್ಸಲ್ಯಗುಣದ ಕಡಲಿನಂತಿರುವವಳೂ, ತನ್ನ ಮುಂಗುರುಳುಗಳೊಡನೆ ತಾನು ಮುಡಿದು ತೆಗೆದುಕೊಟ್ಟ ಮಾಲಿಕೆಗಳಿಂದಲೇ ತನ್ನ ಪತಿಯಾದ ರಂಗನಾಥನನ್ನೂ ತನ್ನ ಕಡೆಗೆ ಆಕರ್ಷಿಸಿಕೊಂಡವಳೂ ಆದ ಪೆರಿಯಾಳ್ವರವರ ಮಗಳಾದ ಗೋದಾದೇವಿಯು, ನಮ್ಮ ಹೃದಯದಲ್ಲಿ ನಿರಂತರವಾಗಿ ಪ್ರಕಾಶಿಸುತ್ತಿರಲಿ. 

*********

ಗೋದಾಸ್ತುತಿಃ (ಸಂಗ್ರಹ) - 29

ಇತಿ ವಿಕಸಿತಭಕ್ತೇಃ ಉತ್ಥಿತಾಂ ವೆಂಕಟೇಶಾತ್ 

ಬಹುಗುಣರಮಣೀಯಾಂ ವಕ್ತಿಗೋದಾಸ್ತುತಿಂ ಯಃ |
ಸ ಭವತಿ ಬಹುಮಾನ್ಯಃ ಶ್ರೀಮತೋ ರಂಗಭರ್ತ್ತುಃ
ಚರಣಕಮಲಸೇವಾಂ ಶಾಶ್ವತೀಮಭ್ಯುಷ್ಯನ್ ||29||

ವಿಕಸಿತಭಕ್ತೀಃ = ಅರಳಿದ ಭಕ್ತಿಯುಳ್ಳ,

ವೇಂಕಟೀಶಾತ್ = ವೇಂಕಟನಾಥನೆಂಬ ಕವಿಯಿಂದ,
ಇತಿ = ಈ ಮೇಲೆ ಹೇಳಿರುವ (ರೀತಿಯಲ್ಲಿ) 28 ಶ್ಲೋಕಗಳಲ್ಲಿ,
ಉತ್ಥಿತಾಂ = ಹೊರ ಹೊಮ್ಮಿದ, 
ಬಹುಗುಣರಮಣೀಯಾಂ = ಗೋದಾದೇವಿಯ ಅನೇಕ ವಿಧವಾದ ಕಲ್ಯಾಣಗುಣಗಳಿಂದ ಕೂಡಿ ಸುಂದರವಾಗಿರುವ, 
ಗೋದಾಸ್ತುತಿಂ = ಗೋದಾಸ್ತುತಿಂ - ಹೆಸರುಳ್ಳ ಈ ಗೋದಾಸ್ತೋತ್ರವನ್ನು,
ಯಃ = ಯಾವನು,
ವಕ್ತಿ=ಹೇಳುತ್ತಾನೆಯೊ,
ಸ್ತಃ = ಅವನು,
ಶ್ರೀಮತಃ = ಶ್ರಿಯಃಪತಿಯಾದ,
ರಂಗಭರ್ತುಃ = ರಂಗನಾಥನ,
ಶಾಶ್ವತೀಂ = ಎಂದೆಂದಿಗೂ ಶಾಶ್ವತವಾದ,
ಚರಣಕಮಲಸೇವಾಂ = ಆಡಿದಾವರೆಗಳ ಕೈಂಕರ್ಯವನ್ನು,
ಅಭ್ಯುಪೈಷ್ಯನ್ = ಹೊಂದಿದವನಾಗಿ,
ಬಹುಮಾನ್ಯಃ = ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿ, 
ಭವತಿ = ಆಗುತ್ತಾನೆ. 

    ವಿಕಾಸಗೊಂಡ ಭಕ್ತಿಯುಳ್ಳ ವೆಂಕಟನಾಥರಿಂದ, ಈ ಮೇಲೆ ಹೇಳಿರುವ 28 ಪದ್ಯಗಳಲ್ಲಿ ಹೊರಹೊಮ್ಮಿದ, ಗೋದಾದೇವಿಯ ಅನೇಕ ವಿಧವಾದ ಕಲ್ಯಾಣ ಗುಣಗಳಿಂದ ಕೂಡಿ ಸುಂದರವಾಗಿರುವ ಈ ಗೋದಾಸ್ತುತಿಯನ್ನು ಯಾರು ಹೇಳುತ್ತಾರೆಯೋ ಅವರು ಶ್ರಿಯಃಪತಿಯಾದ ಶ್ರೀರಂಗನಾಥನ ಅಡಿದಾವರೆಗಳ ಕೈಂಕರ್ಯವನ್ನು ಎಂದೆಂದಿಗೂ ಶಾಶ್ವತವಾಗಿ ಹೊಂದಿ, ಭಗವಂತನ ಕೃಪೆಗೆ ಪಾತ್ರನಾಗಿ, ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿರುತ್ತಾನೆ. 


ಇಲ್ಲಿ ಶ್ರೀಮದ್ವೇದಾಂತ ದೇಶಿಕರಿಂದ ರಚಿಸಲ್ಪಟ್ಟ ಗೋದಾಸ್ತುತಿಯು ಕನ್ನಡ ಪ್ರತಿಪಾದರ್ಥ ಮತ್ತು ತಾತ್ಪರ್ಯ ಸಹಿತವಾಗಿ ಮುಕ್ತಾಯವಾಗಿದೆ. 

ನಿಷಿದ್ಯಾವಿದ್ಯಾನಾಂ ನಿಖಿಲಕುಮತಿವ್ಯಾಳಗರುಡಃ
ಸಭಾಸೌಭಾಗ್ಯಾನಾಂ ಸರಸಿಕವಿತಾಪದ್ಮಸವಿತಾ |
ಪ್ರಮಾಣಂ ಭಾಷ್ಯಸ್ಯ ಪ್ರಪದನಕಲಾಜನ್ಮಜಲಧಿಃ
ಕರೋತು ಕ್ಷೇಮಂ ನಃ ಕವಿಕಥಿಕಕಂಠೀರವಗುರುಃ ||
ಕವಿತಾರ್ಕಿಕಸಿಂಹಾಯ ಕಲ್ಯಾಣಗುಣಶಾಲಿನೇ |
ಶ್ರೀಮತೇ ವೇಂಕಟೇಶಾಯ ವೇದಾಂತಗುರವೇ ನಮಃ ||
ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ||
||ಶ್ರೀ ಕೃಷ್ಟಾರ್ಪಣಮಸ್ತು||
***


 ಗೋಧಾದೇವಿ ಕಥೆ:- 

ಕೃಷ್ಣನ ಭಕ್ತೆ  'ನೀಲಾಬಾಯಿ (ಕಿಚಡಿ)' ಯಂತೆ, ದಕ್ಷಿಣ ಭಾರತದ ತಮಿಳು ನಾಡಿನ ಆಳ್ವಾರ್ ಸಂತರಲ್ಲಿ ಮಹಾ ಸಂತಳೆಂದು ಪ್ರಸಿದ್ಧಳಾದವಳು "ಗೋಧಾ ದೇವಿ". ಇವಳ ಕುರಿತಾದ ವ್ರಥ ಕಥೆ ಹೆಚ್ಚು ಮಹತ್ವ ಪಡೆದಿದೆ. ತಮಿಳುನಾಡಿನ "ವಿಲ್ಲಿ ಪುತ್ತೂರು" ಎಂಬ ಗ್ರಾಮದಲ್ಲಿ, 'ವಿಷ್ಣುಗುಪ್ತ' ಎಂಬ ವಿಷ್ಣುವಿನ ಅತ್ಯಂತ ನಿಕಟ ಭಕ್ತನಿದ್ದ.‌ ಇವನು  ಸಕಲ ವೇದಾಧ್ಯಯನವನ್ನು ಮಾಡಿ ಸ್ವತಹ ಕವಿಯು ಆಗಿದ್ದನು.  ಆ ಊರಿನ  ವಟಪತ್ರಶಾಯಿ ದೇವಸ್ಥಾನದ ಭಕ್ತನಾಗಿದ್ದು, ವಿಷ್ಣುವಿನ ಪೂಜೆ ಪುನಸ್ಕಾರಗಳನ್ನು , ಸಾಕ್ಷಾತ್ ಮಹಾವಿಷ್ಣು ಎದುರಿಗೆ ನಿಂತಂತೆ ಭಾವಿಸಿ ಆರಾಧಿಸುತ್ತಿದ್ದನು. ತನ್ನ ಮನೆಯ ಮುಂದೆ ಪುಟ್ಟ ಹೂವಿನ ತೋಟವನ್ನು  ಮಾಡಿಕೊಂಡು ಅಲ್ಲಿ ಸಾಕಷ್ಟು ತುಳಸಿ ಗಿಡ, ಹೂವು, ಪತ್ರೆಗಳ ಗಿಡಗಳನ್ನು ಬೆಳೆಸಿ ಬೃಂದಾವನದಂತೆ  ಮಾಡಿದ್ದನು. ಪ್ರತಿನಿತ್ಯವೂ ನಸುಕಿನಲ್ಲಿ ಎದ್ದು ತುಳಸಿ,  ಹೂವುಗಳನ್ನು ಬಿಡಿಸಿ ತಂದು ಸುಂದರವಾದ ಮಾಲೆ ಮಾಡಿ ಮಹಾವಿಷ್ಣುವಿಗೆ ಭಕ್ತಿಯಿಂದ ಹಾಕುತ್ತಿದ್ದನು. ಈತನಿಗೆ ಮದುವೆಯಾಗಿ ಕೆಲ ಕಾಲವಾಗಿದ್ದರೂ ಮಕ್ಕಳಾಗಿರಲಿಲ್ಲ. 

ಒಂದು ದಿನ ಮುಂಜಾನೆ ಎದ್ದು ತುಳಸಿ ಬಿಡಿಸುತ್ತಿರುವಾಗ ಒಂದು ಮಗು ಅಳುತ್ತಿರುವ ಧ್ವನಿ ಕೇಳಿಸಿತು ನೋಡಿದಾಗ ತುಳಸಿ ಗಿಡದ ಕೆಳಗೆ  ಆಗ ತಾನೆ ಜನಿಸಿದ ಪುಟ್ಟ ಹೆಣ್ಣು ಮಗು ನೋಡಿದನು. ಆ ಕಡೆ ಈ ಕಡೆ ಸುತ್ತಮುತ್ತ ನೋಡಿದರೆ ಯಾರು ಕಾಣಲಿಲ್ಲ. ಶ್ರೀ ಭಗವಂತನೇ ಈ ಮಗುವನ್ನು ತನಗೆ ಅನುಗ್ರಹಿಸಿದನೆಂದು ತಿಳಿದು, ಸಂತೋಷದಿಂದ ಮನೆಗೆ ತಂದು ವಿಷ್ಣುಗುಪ್ತ ಮತ್ತು ಆತನ ಪತ್ನಿ ಮಗುವಿಗೆ 'ಗೋದೈ' ಎಂದು ಹೆಸರಿಟ್ಟರು. ಗೋಧೈ ಎಂದರೆ ಭೂಮಿತಾಯಿಯ ಕಾಣಿಕೆ ಎಂದು. ಮಗುವನ್ನು  ಬಹಳ  ಸಂತೋಷದಿಂದ  ಬೆಳೆಸುತ್ತಿದ್ದರು. ಇವಳೇ ಮುಂದೆ  ಗೋಧಾದೇವಿ ಎಂದು ಹೆಸರಾದಳು. 

ಗೊಧಾದೇವಿ ಮಗುವಿರವಾಗಿನಿಂದಲೇ ತಂದೆ ಮಾಡುತ್ತಿದ್ದ ಪೂಜೆಯನ್ನು  ನೋಡುತ್ತಾ ಬೆಳೆದವಳು. ಬಾಲಕಿಯಾಗಿದ್ದಾಗಲೇ ತುಳಸಿ, ಹೂವು ಬಿಡಿಸಿ ತರುವುದು ಮಾಲೆ ಮಾಡುವುದು. ಅದನ್ನು ವಿಷ್ಣು ಗೆ ಹಾಕಿದಾಗ ಮೈಮರೆತು ಅವನನ್ನೇ ನೋಡುವುದು. ಅವನನ್ನು ಕುರಿತು ಸಶ್ರಾವ್ಯವಾಗಿ ಹಾಡುವುದು, ದೇವಾಲಯದ ಆವರಣವನ್ನು ಸ್ವಚ್ಛ ಮಾಡುವುದು, ಮಹಾವಿಷ್ಣುವಿನ ಪೂಜೆಗೆ ಅಗತ್ಯವಾದ  ಕೆಲಸಗಳನ್ನು  ಮಾಡುತ್ತಲೇ ಬೆಳೆದವಳು. ಹೀಗಾಗಿ ಆ ಮಗುವಿಗೆ ಅರಿವಿಲ್ಲದೆ ಮಹಾವಿಷ್ಣುವಿನ ಮೇಲೆ ಶ್ರದ್ದೆ -ಭಕ್ತಿ  ಮೂಡಿತ್ತು. ಬೆಳೆದು ದೊಡ್ಡವಾದಳು. ತಾನು ಮದುವೆಯಾದರೆ  ಶ್ರೀರಂಗನಾಥ ಸ್ವಾಮಿ ಯನ್ನೇ ಮದುವೆಯಾಗುವುದು ಎಂದು ಮನದಲ್ಲೇ ಸಂಕಲ್ಪ ಮಾಡಿದ್ದಳು. ದೊಡ್ಡವಳಾಗುತ್ತಾ ಬಂದಂತೆ ಮನಸ್ಸು  ಪ್ರೌಢವಾಗುತ್ತಿದ್ದಂತೆ, ರಂಗನಾಥನನ್ನು ಆರಾಧಿಸುವ  ಪರಿಯೇ ವಿಭಿನ್ನವಾಗಿತ್ತು. ಅವಳು ಅಂದುಕೊಳ್ಳುತ್ತಿದ್ದಳು. ನಾನು ನಾರಾಯಣನ ಪತ್ನಿಯಾದರೆ ಹೇಗೆ ಕಾಣುತ್ತೇನೆ ಎಂದುಕೊಂಡು ತನ್ನ ತಂದೆ ಮಾಡುತ್ತಿದ್ದ ತುಳಸಿ ಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡು ತನ್ನ ಪರಮಪ್ರಿಯ ನಾದ ಮಹಾ ವಿಷ್ಣುವಿನ ಜೊತೆಯಲ್ಲಿ ಹೇಗೆ ಕಾಣುತ್ತೇನೆ ಎಂದು ಕಲ್ಪಿಸಿಕೊಂಡು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಳು. ನಂತರ ತೃಪ್ತ ಳಾಗಿ ಆ  ಮಾಲೆಯನ್ನು  ತೆಗೆದು ಇಡುತ್ತಿದ್ದಳು. 

ಇದ್ಯಾವುದೂ ತಿಳಿಯದ, ತಂದೆ ವಿಷ್ಣುಗುಪ್ತ ಪ್ರತಿದಿನ ಅದೇ ತುಳಸಿ ಹಾರವನ್ನು ತೆಗೆದುಕೊಂಡು ಹೋಗಿ ವಟಪತ್ರಶಾಹಿ ಮಹಾವಿಷ್ಣುವಿಗೆ ಹಾಕುತ್ತಿದ್ದನು.  ಇದೇ ರೀತಿ ಬಹಳಷ್ಟು ದಿವಸಗಳು ಹೀಗೆ ನಡೆಯಿತು. ಒಂದು ದಿನ ತುಳಸಿ ಹಾರವನ್ನು ತೆಗೆದುಕೊಂಡು ಹೋಗಲು ಬಂದ ವಿಷ್ಣುಗುಪ್ತನಿಗೆ ತನ್ನ ಮಗಳು ತುಳಸಿಹಾರ ಕೊರಳಲ್ಲಿ ಹಾಕಿಕೊಂಡಿರುವುದನ್ನು ನೋಡಿ ಗಾಬರಿಯಾಯಿತು ಮತ್ತು ಸಿಟ್ಟು ಬಂದಿತು. ಮಗಳಿಗೆ ಬುದ್ಧಿ ಹೇಳಿ ಆ ದಿನ 
ತುಳಸಿ ಹಾರವನ್ನು ಮಹಾವಿಷ್ಣುವಿಗೆ ಹಾಕಲಿಲ್ಲ. ಪ್ರಾಯಶ್ಚಿತ್ತಕ್ಕಾಗಿ ತಾನು ಆ ದಿನವೆಲ್ಲ ಉಪವಾಸವಿದ್ದನು. ಆಗ ಮಹಾವಿಷ್ಣು ಕನಸಿನಲ್ಲಿ ಪ್ರಕಟವಾಗಿ, ಈ ದಿನ ತುಳಸಿ ಮಾಲೆಯನ್ನು  ನನಗೆ ಏಕೆ ಹಾಕಲಿಲ್ಲ. ನೀನು ನಿನ್ನ ಮಗಳು ಹಾಕಿಕೊಂಡ  ತುಳಸಿ ಮಾಲೆಯನ್ನೇ ನನಗೆ ಹಾಕಬೇಕು ಎಂದು ಹೇಳಿ ಮಾಯವಾದನು.

ಎಚ್ಚರಗೊಂಡ ವಿಷ್ಣುಗುಪ್ತ ಬಹಳ ಸಂತಸಗೊಂಡು,  ಮಗಳಿಗಿಟ್ಟ "ಗೋಧೈ"
ಹೆಸರನ್ನು ಬಿಟ್ಟು "ಆಂಡಾಳ್"ಎಂದು ಕರೆದನು. "ಆಂಡಾಳ್" ಎಂದರೆ ಭಗವಂತನನ್ನೇ ಆಳಿದವಳು  ಎಂದು ಅರ್ಥ. ಮಗಳು ದೊಡ್ಡವಳಾಗಿ ಮದುವೆ ವಯಸ್ಸಿಗೆ ಬಂದಾಗ, ತಂದೆ ವಿಷ್ಣು ಗುಪ್ತ ಮದುವೆ ಪ್ರಸ್ತಾಪವನ್ನು ಅವಳ ಮುಂದಿಟ್ಟಾಗ ಆಂಡಾಳ್  ತಂದೆಗೆ ಹೇಳುತ್ತಾಳೆ. ನಾನು ಮಹಾವಿಷ್ಣುವನ್ನೇ  ವಿವಾಹ ವಾಗುವುದು. ಇಲ್ಲದಿದ್ದರೆ ನನಗೆ ಮದುವೆ ಬೇಡ ಎಂದಳು. ಮನುಷ್ಯ ಮಾನವರಾದವರು ಭಗವಂತನನ್ನು ವಿವಾಹವಾಗುವುದು ಎಂದರೇನು?  ವಿಷ್ಣುಗುಪ್ತ ಚಿಂತಿಸುತ್ತಾ ಮಲಗಿದನು.‌  ರಾತ್ರಿ ವಿಷ್ಣುಗುಪ್ತ ನ ಕನಸಿನಲ್ಲಿ ಮಹಾವಿಷ್ಣು ಬಂದು ನಿನ್ನ ಮಗಳನ್ನು ಮದುಮಗಳ ಶೃಂಗಾರದಲ್ಲಿ ಸಿಂಗರಿಸಿ ಶ್ರೀರಂಗಂ ನ ರಂಗನಾಥ ಸ್ವಾಮಿ ದೇಗುಲಕ್ಕೆ ಕಳುಹಿಸಿ ಕೊಡು ಎಂದನು. ಮಹಾ ವಿಷ್ಣುವಿನ  ಆದೇಶ ವನ್ನು ಕೇಳಿದ ವಿಷ್ಣುಗುಪ್ತ ಬಹಳ ಹರ್ಷ ಚಿತ್ತನಾಗಿ ಮಗಳನ್ನು ಅಲ್ಲಿಗೆ ಕಳಿಸಲು ತಯಾರಿ ನಡೆಸುತ್ತಾನೆ. ಈ ಕಡೆ  ಶ್ರೀರಂಗದಲ್ಲಿ ಪುರೋಹಿತರು ಹಾಗೂ ಅಲ್ಲಿನ ರಾಜನಾಗಿದ್ದ ವಲ್ಲಭದೇವನ  ಕನಸಿನಲ್ಲಿ ಮಹಾವಿಷ್ಣು ಕಾಣಿಸಿಕೊಂಡು ಮದುವೆ ಸಿದ್ಧತೆಗೆ ತಯಾರಿ ಮಾಡಲು ಹೇಳಿ, ಆಂಡಾಳನ್ನು ಕರೆ ತರಲು ಪಲಕ್ಕಿ ಕಳಿಸುವಂತೆ ರಾಜನಿಗೆ ಹೇಳಿದನು. ಅದೇ ರೀತಿ ರಾಜ ಕಳಿಸಿದ ಪಲ್ಲಕ್ಕಿಯಲ್ಲಿ ಮದುಮಗಳಾಗಿ ಬಂದ ಆಂಡಾಳ್ ಗರ್ಭಗುಡಿ ಯೊಳಗೆ ಹೋದಳು. ಮಹಾವಿಷ್ಣುವಿನ ಪಕ್ಕದಲ್ಲಿ
ನಗುನಗುತ್ತಾ  ಕುಳಿತಳು. ದಿಗ್ಭ್ರಾಂತರಾಗಿ ಎಲ್ಲರೂ ನೋಡು ನೋಡುತ್ತಿದ್ದಂತೆ  ಮಹಾವಿಷ್ಣುವಿನೂಳಗೆ ಐಕ್ಯಳಾದಳು. 

ಆಂಡಾಳ್  ಮಹಾ ವಿಷ್ಣುವಿನ ಕುರಿತು  ಭಕ್ತಿ ಪೂರ್ವಕವಾಗಿ  ರಚಿಸಿದ  ಗೀತಗಳ ಸಂಗ್ರಹವನ್ನು ತಿರುಪ್ಪಾವೈ ಎಂದು ತಮಿಳಿನಲ್ಲಿ ಕರೆಯುತ್ತಾರೆ.  ಶ್ರೀಕೃಷ್ಣನಿಗೆ ಪ್ರಿಯವಾದ ಧನುರ್ಮಾಸದಲ್ಲಿ  ಪ್ರತಿಯೊಂದು  ದಿನವನ್ನು ಅವನ ಆರಾಧನೆಗಾಗಿ ಮುಡಿಪಾಗಿಟ್ಟು  ಅವನಿಗಾಗಿ ರಚಿಸಿದ ಗೀತೆಗಳೆ ,"ತಿರುಪ್ಪಾವೈ" ಇದನ್ನು  ಭಕ್ತಿಯಿಂದ ಹೇಳಿದರೆ  ಮೋಕ್ಷ ಪ್ರಾಪ್ತಿಯಾಗುತ್ತದೆ. ಎಂಬ ನಂಬಿಕೆ ಇದೆ.  ಈ  ಗೀತ ರಚನೆಗಳೆಲ್ಲವೂ  ಶ್ರೀ ವೈಷ್ಣವ ಅಯ್ಯಂಗಾರ ರಿಗಾಗಿಯೇ  ರಚಿಸಿದ ಗೀತೆಗಳು  ಈ ಗೀತೆಗಳನ್ನು  ಮಾರ್ಗಶಿರ  ಧನರ್ಮಾಸ ದಲ್ಲಿ ನಿತ್ಯವೂ ಒಂದೊಂದು ಗೀತೆ ಪಠಿಸಲಾಗುತ್ತದೆ. 

ಎಲ್ಲಾ ಭಕ್ತಿ ಗೀತೆಗಳು ಮಹಾ ವಿಷ್ಣುವಿನ ಕುರಿತಾಗಿದ್ದು , ಇದನ್ನು ಹೇಳುವುದರಿಂದ ಮೋಕ್ಷ ಪ್ರಾಪ್ತಿಗೆ  ಸುಲಭದ ದಾರಿ ಎನ್ನಲಾಗಿದೆ ಇವುಗಳಲ್ಲಿ ಮೊದಲ ಪೀಠಿಕಾ ಗೀತೆಗಳಲ್ಲಿ,  ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸ್ನಾನಾದಿಗಳನ್ನು ಮಾಡಿ ಶ್ರೀ ಕೃಷ್ಣನನ್ನು ಭಕ್ತಿಯಿಂದ ಬೇಡಿಕೊಂಡು ಜಗತ್ತಿನ ರಕ್ಷಣೆಗಾಗಿ ಬೇಡಿ  ಪುಷ್ಪಗಳನ್ನು ಅರ್ಪಿಸಿದರೆ, ಪೂರ್ವಜನ್ಮದ ಪಾಪ ಕರ್ಮಗಳು ಕಳೆಯುತ್ತದೆ. ಹಾಗೂ ಮುಂದಿನ ದಿನಗಳಲ್ಲಿ ಸತ್ಕಾರ್ಯಗಳನ್ನು ಮಾಡಲು ಮನ ಪ್ರೇರೇಪಿಸುತ್ತದೆ ಎಂಬ ನಂಬಿಕೆ ಇದೆ.  ಈ ಗೀತೆಗಳನ್ನು ಸಾಮೂಹಿಕವಾಗಿ ಹೇಳುವುದರಿಂದ ಹೆಚ್ಚು ಸಕಾರಾತ್ಮಕ ಶಕ್ತಿ ಬರುತ್ತದೆ.
ಅಂಡಾಳ್ ಚಿಕ್ಕಂದಿನಲ್ಲಿ, ನಸಿಕನಲ್ಲೇ ಎದ್ದು ನೆರೆಹೊರೆ ಗೆಳತಿಯರೊಡಗೊಡಿ
ಹೂವು ತುಳಸಿ ಬಿಡಿಸಿ ತಂದು, ರಂಗನಾಥನ ದೇಗುಲಕ್ಕೆ ಹೋಗಿ ರಂಗನಾಥ ನನ್ನು ಎಚ್ಚರಗೊಳಿಸುವ ಸುಪ್ರಭಾತವನ್ನು ಹಾಡುತ್ತಿದ್ದಳು. ಬಾಗಿಲು ತೆಗೆಯುವಂತೆ ದೇವಸ್ಥಾನದ ಕಾವಲುಗಾರನನ್ನು ಎಚ್ಚರಿಸುತ್ತಿದ್ದಳು.
ಶ್ರೀ ಕೃಷ್ಣ- ಬಲರಾಮರನ್ನು ಎಬ್ಬಿಸಲು, ಅವರ  ತಾಯಿ-ತಂದೆಯರಿಗೆ ಹೇಳಿದ ಗೀತೆ, ಹಾಗೂ ಶ್ರೀ ಕೃಷ್ಣನ ದರ್ಶನ ಮಾಡಿಸುವಂತೆ, ಭಕ್ತೆ 'ನೀಲಾಬಾಯಿ'ಯ ಅನುಮತಿ ಕೇಳುವುದು. ಇನ್ನು ಹಲವಾರು ಭಕ್ತಿ ಗೀತೆಗಳೂಂದಿಗೆ ಪ್ರಕೃತಿ 
ಕೊಡುಗೆಯಾದ ಹೂವು -ಹಣ್ಣು, ಮರ -ಗಿಡ, ನದಿ- ಕೆರೆ, ಪಶು -ಪಕ್ಷಿ, ಬೆಟ್ಟ- ಗುಡ್ಡ, ಪ್ರಾರ್ಥನೆ, ಕುರಿತಾಗಿ ಭಕ್ತಿಗೀತೆಗಳನ್ನು ರಚಿಸಿದ್ದಾಳೆ. ಇವು ಇಂದಿಗೂ ಪ್ರಸ್ತುತದಲ್ಲಿದ್ದು ಭಕ್ತಾದಿಗಳು ಕೃಷ್ಣನಿಗೆ ಪ್ರಿಯವಾದ ಧನರ್ಮಾಸ ದ  ಮಹಾ ವಿಷ್ಣುವಿನ ಪೂಜೆಯ ಸಮಯದಲ್ಲಿ, ಅಷ್ಟಾವರಾಧನ ಸೇವೆ ಮಾಡುವಾಗ ಆಯಾ ದಿನಕ್ಕೆ ಸಂಬಂಧಪಟ್ಟ ಗೀತೆಯನ್ನು ಭಕ್ತಾದಿಗಳೆಲ್ಲ ಸೇರಿ ಹೇಳುತ್ತಾರೆ.  

ಲೀಲಯಾ ಕುಚೇಲ ಮೌನಿ ಪಾಲಿತಂ ಕೃಪಾಕರಂ
ನೀಲ ನೀಲ ಮೀಂದ್ರ ನೀಲ ನೀಲಕಾಂತಿ ಮೋಹನಂ
ಬಾಲ ನೀಲ ಚಾರು ಕೋಮಲಾಲಕಂ ವಿಲಾಸ
ಗೋಪಾಲ ಬಾಲ  ಜಾರ ಚೋರ
ಬಾಲಕೃಷ್ಣ ಮಾಶ್ರಯೇ !! 
****

No comments:

Post a Comment