read more
read more here
karteeka maasa KARTEEKA MASA
uttan dwadashi or tulasi fest TULASI FESTdhatri havana DHATRI HAVANA
deepavali fest DEEPAVALI
It falls on the 1st day of the bright fortnight of the Hindu lunar month Kartika. It is celebrated to symbolise Deity Vishnu’s conquest over the demon king, Bali.
In a year, there are three and a half auspicious moments (muhurta); among them, Balipratipada is the half auspicious moments. During a calendar year, there are some auspicious days, some inauspicious days, and some days have both or only one aspect. If one performs certain important acts such as wedding, buying properties, etc. during auspicious time, then that act proves to be beneficial. The three and a half auspicious days are such that one can perform any act during the entire day because every moment of these days is auspicious.
Importance of celebrating Balipratipada
Creation of negative energy
It is said that negative energy was created on the day of Bali-pratipada. On this day, proportion of ‘Yama’ and ‘Tiryak’ frequencies is more in the Universe. When these frequencies come together, the negative energies under the control of King Bali create more negative energies. On this day, ritualistic worship of King Bali is done where an offering (Naivaidya) is made to him to satisfy his thirst and hunger. This keeps King Bali and the negative energies under his control, happy for the whole year in ‘Paatal’, and not cause any trouble to lives on earth. With this, the Jiva (soul) on earth is able to practice spirituality without obstacles. Hindu Dharma gives as much importance to this day of appeasing the negative energies as any other important festival. Hence, it will be clear how impartial and tolerant the Hindu Dharma is, as it thinks of righteous along with unrighteous.
Spiritual significance of Balipratipada
Now, let us understand the spiritual meaning behind the celebration of the fourth day of Diwali.
In Tretayuga, there was King named Bali, who was immensely generous. Many people used to visit him for various reasons. At that time, whatever guests would ask for, King Bali used to give it to them without thinking about it. Though generosity is a virtue; but a virtue becomes a defect when used in excess or incorrectly.
Scriptures have clearly described what should be given, when and where. It is also said that an offering should be made to the deserving; not to the undeserving. When an undeserving person acquires wealth he becomes arrogant and behaves as per his will. King Bali disregarded this principle and whatever one would ask for; he would give it to them. This created havoc in the world, as people started behaving as per their wishes. When Deity Vishnu came to know about this, He decided to incarnate as Vaamana (Small boy).
Deity Vishnu incarnated as a boy wearing the sacred thread (janave). Vaamana means small or tiny. The boy is small in size and chants, ‘Give me alms’, as He asks for alms from people.
When Deity Vishnu incarnated as Vaamana and approached King Bali for alms, the king asked Him, “What do you want?” Vaamana asked for land which covered three of His footsteps. Unaware of who Vaamana was, and not realising the consequence of this offering the king agreed to fulfil His wish. Immediately Vaamana assumed a colossal form and covered the earth with one footstep. With the second footstep, He covered the remaining parts of the Creation. Then Vaamana turned to King Bali and asked, ‘I have already covered everything in just two footsteps, now, where do I place the third footstep?’ King Bali told Him to place the third footstep on his head. Vaamana had decided to send King Bali to the negative regions, and asked him, ‘Do you wish to ask for any boon?’, King Bali replied ‘Now my entire kingdom on the Earth will be gone and You will send me to the negative regions, so may this event of You taking the three steps be represented on the Earth for three days of the year as my reign.’ Those three days are the fourteenth day (Chaturdashi) and the new moon (Amavasya) day of the dark fortnight of Ashwin and the first day of (Pratipada) the bright fortnight of Kartika. This is also called Bali’s reign. The scriptures mention that during Bali’s reign one could behave as per own wish.
However, one should refrain from acts prohibited by the scriptures. Eating prohibited foods, smoking and drinking prohibited drinks are the three prohibited acts. Hence on these days people can have a display of fireworks but they do not consume alcohol. Since the scriptures permit this tradition, people enjoy themselves on these days.
On Balipratipada, a picture of King Bali and his Queen Vindhyavali is drawn with a special powder of soft white stone (rangoli) on the floor, and it is decorated with five colours. It is then worshipped and offered meat and liquor (Naivedya). Then for the sake of Bali, lamps and clothes are donated.
On this day, after an early morning bath with an oil massage (abhyangasnan) women move lit lamps in front of their husbands’ faces. In the afternoon, they feast on a meal with delicacies. People don new attire and celebrate the whole day through.
There is also a practice of worshipping the mountain Govardhan (Govardhana puja). A mountain of cow dung is made and durva (a sacred grass) and flowers are tucked into it. Pictures of Shrikrushṇa, the cowherds, Deity Indra, cows and calves are arranged alongside, and they are worshipped. A procession is also taken out.
********
BALIPADYAMI by NARAHARI SUMADHWA
What is Bali Padyami?
Bali Padyami falls on Karthika Shudda Padya. This day is reserved for Bali Chakravarthi. It is the day on which Bali Chakravarthi will be the Chakravarthi for the entire world. It is the day on which Vamana roopi Srihari pushed Bali Chakravarthi to sutala loka. This is the boon given by Vamanaroopi paramathma after the nigraha of Bali. Vamana also gave the boon that “Karthika Shudda paadya day will be reserved for Bali Chakravarthi. On this day whatever daanaas given like Godaana, vastradaana, bhoodaana and other daanaas will please Vamana” “Deepa Prajvalana on this day will make Lakshmidevi to stay in their house”
Who is Bali Chakravarthi?
Bali Chakravarthi is the great grand son of Prahladaraja and the son of Virochana. His real name is Indrasena. Born in the daithyakula of Hiranyakashipu, he was the daithya chakravarthi. Even though he was a daithya, he ruled the state with proper dharmaniste and he was an expert in giving daanaas. Bali Chakravarthi led the Daithya team during Samudra mathana. He will become Indra in Saavarni manvantra.
Story as per Skanda purana (Reva khanda) – In his previous janma, he was a business man and was fond of women and was always wasting his time with various prostitute women. He had never done any punya kaarya at all. But during his last stages, he gave the daana of whatever he had with him to various brahmins. He died and the yama doothaas took him to Yamaloka. There, Chitragupta opened his file and submitted before Yamadharmaraaja. His file was fully covered with sins only. Yama Dharma verified the file and surprised to note that he had the punya of daana at his last stage. He had the punya of becoming Indra for 3 muhurthas. Yamadharma asked Indrasena as to whether he intends to use the punya first or the paapa first. Punya phala to become the Indra. He opted for Indra’s throne for 3 muhurthas. Yama Dharma agreed and asked Indra to give the throne for 3 muhurthas to Indrasena.
After sitting in the throne for a very short time, he gave the daana whatever available in Indraloka to Vasistaru, Vishwamitraru, etc. This punya of giving daana at Indraloka ensured that all his sins were destroyed and he was eligible for Indra throne. As such, he was born as the son of Virochana and got the throne of Daithya vamsha. Finally with the anugraha of Vamana he was eligible for Indra throne, which he would get in Saavarni manvantra.
Bali Chakravarthi’s son is Baanasura, another daithya. He had thousand arms, he was a follower of Shiva. Banasura had a boon from Shiva to fight with Krishna and was killed by Krishna.
Why is Bali Chakravarthi in Paataala loka ?
Bali Chakravarthi had the control of the entire world and he had occupied all the kingdoms and occupied the Devaloka also by pushing out Devendra. He wanted to be the Indra. For getting the throne of Indra, one must do atleast 100 Ashwamedha Yajna. He had completed 99 Ashwamedha Yaagaas, and was doing the 100th. He was doing the Yajna under the pourohitya of Shukracharyaru, who is the daithya guru. Indra (Purandara named Indra) approached Srihari and sought his help. At the same time, Aditi, the mother of Devates asked her husband Kashyapa Rushigalu to protect gods from Balichakravarthi. So, both Aditi-Kashyapas approached Srihari for help. Srihari decided to born as their son “Vamana” for the nigraha of the daithya.
Bali was in the finishing stage of his Yajna. Vamana came to the place of Yajna. On seeing the handsome, attractive young brahmachari, Vamana, Bali stood and did the paada prakshalana of Vamana and asked him as to what he wants – a beautiful girl, kingdom, or ornaments, etc. Vamana said that he does not require anything, except 3 steps of land. Shukracharya, the daithya guru, warned Bali Chakravarthi and told him not to accede to Vamana’s request. But Bali went ahead for the daana of the 3 steps to Vamana. Getting angry at Bali, Shukracharya cursed him that Bali shall loose all his kingdom.
Bali Chakravarthi did the sankalpa and started giving the three steps to Vamana. Vamana extended himself to be that of Trivikrama to extend to the entire world from his very first step itself. From the second step he occupied the atala, vitala, sutala, patala lokaas also. For the third step, there was no place. He is said to have been bounded with the ropes of Varuna by Garuda since Vamana could not place his foot anywhere on the earth and Bali offered his head itself and asked Trivikrama Vamana to keep his leg on his head. Brahma then asks Vamana to release Bali and Vamana keeping his Vishnu paada which has the Ganga sannidhana, pushed him down to earth to Paataala loka, and even today he is guarding him in his Upendra Roopa. Bali Chakravarthi will be the next Indra in the coming Manvantara.
Bali Padyami half Muhurtha –
There are 3½ muhurthaas which are termed as Good Muhurthaas. They are Vijayadashami, Ugadi and Akshaya Triteeya which are full day muhurthaas, whereas Bali Padyami is termed as Half Muhurthaas (for the first half day). On this day, we need not look at the panchanga for taaraabala, chandrabala, for the shubhakarya. Whatever good works done on this day will fetch more punya. On this day also we have to do tailabhyanjana snaana.
Balipoojakrama –
He was also given the boon that he will be allowed to rule the entire universe for one day in a year and on that day he can visit the earth, which is the Balipadyami day – the Kaarthika Shudda Padya.
We have to sketch the Balichakravarthi’s figure in rangoli or Gomaya. Then we have to invite Bali. We have to put curds in front of Bali. Ladies will enter the house, by pouring milk from outside, which is a method of inviting Lakshmi. From the Gomaya itself, we have to sketch the the fort with four gates and in the centre of the fort, one has to put the pillaari gopura and do the pooja with the following mantra.
baliraaja namastubhyaM virOchanasuta prabhO: |
bhaviShyEMdra suraaraatE pUjOyaM pratigRuhyataam |
baliraaja namastubhyaM daityadaanavavaMdita: |
iMdrashatrO amaraavatE viShNusaannidhyadO bhava|
Source : Sri Chaturvedi Vedavyasachar’s Chaitraadimaasa kartavyagalu,
Vratamuktaavali from Rayara Mutt,
Vaarshika vishEshadinagalu from Dr Satyanaraayanacharya
ಬಲಿಪಾಡ್ಯಮಿಯನ್ನು ಕಾರ್ತಿಕ ಶುದ್ಧ ಪಾಡ್ಯದಂದು ಆಚರಿಸಲಾಗುತ್ತದೆ
ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ |
ಇಂದ್ರಶತ್ರೋ ಅಮರಾವತೇ ವಿಷ್ಣುಸಾನ್ನಿಧ್ಯತೋ ಭವ |
बलिराज नमस्तुभ्यं दैत्यदानव वंदित ।
इंद्रशत्रो अमरावते विष्णुसान्निध्यतो भव ।
ಬಲಿಪಾಡ್ಯಮಿಯ ವಿಶೇಷತೆ ಏನು ?
ಪರಮಾತ್ಮನು ಕಶ್ಯಪ ಅದಿತಿಗಳ ಪ್ರಾರ್ಥನೆಯಂತೆ ಅವರ ಮಗನಾಗಿ ವಾಮನನಾಗಿ ಅವತರಿಸಿ, ಇಂದ್ರಾದಿ ದೇವತೆಗಳಿಗೆ ಕಂಟಕನಾಗಿದ್ದ ದೈತ್ಯಚಕ್ರವರ್ತಿ ಬಲಿಚಕ್ರವರ್ತಿಯನ್ನು ನಿಗ್ರಹಿಸಿ, ಅವನಿಂದ ಮೂರು ಹೆಜ್ಜೆ ದಾನ ಪಡೆದು ಅವನನ್ನು ಸುತಳ ಲೋಕಕ್ಕೆ ಅಟ್ಟಿ, ಅಲ್ಲಿ ಅವನ ಮನೆ ಬಾಗಿಲಲ್ಲೇ ನಿಂತ ದಿನವೇ ಬಲಿಪಾಡ್ಯಮಿ. ಇದನ್ನು ಕಾರ್ತೀಕ ಶುದ್ಧ ಪ್ರತಿಪತ್ ದಿನದಂದು ಆಚರಿಸಲಾಗುತ್ತದೆ. ಬಲಿಯ ಪ್ರಾರ್ಥನೆಯಂತೆ ಈ ದಿನವನ್ನು ಅವನ ಹೆಸರಿನಿಂದ ಪ್ರಖ್ಯಾತಿಗೊಳಿಸಿ ಅನುಗ್ರಹಿಸಿದ ವಾಮನರೂಪಿ ಹರಿಯು. ಈ ದಿನದಂದು ವಿಶೇಷ ಕಾರ್ಯಗಳಿಗೆ ಮುಹೂರ್ತವನ್ನು ನೋಡಬೇಕಾಗಿಲ್ಲ. ಸ್ವಯಂಸಿದ್ಧ 3½ ಮುಹೂರ್ತಗಳಲ್ಲಿ ಅರ್ಧ ಮುಹೂರ್ತ ಬಲಿಪಾಡ್ಯಮಿಯೆಂದು ಪ್ರಸಿದ್ಧ. ಉಳಿದ ಮೂರು ಮುಹೂರ್ತಗಳು ವಿಜಯದಶಮಿ, ಅಕ್ಷಯತೃತೀಯ, ಮತ್ತು ಯುಗಾದಿ. ಬಲಿಪಾಡ್ಯಮಿಯಂದು ಅರ್ಧದಿನದವರೆಗೂ ಸ್ವಯಂಸಿದ್ಧ ಮುಹೂರ್ತವಾಗಿದ್ದು, ಇಂದೂ ಕೂಡ ತೈಲಾಭ್ಯಂಜನವನ್ನು ಮಾಡಬೇಕು. ಮತ್ತು ಈ ದಿನ ದೀಪದಾನ, ಗೋದಾನ, ವಸ್ತ್ರದಾನ, ಮಂಗಳವಸ್ತ್ರಗಳ ದಾನ ಮಾಡಿದರೆ ವಾಮನ ರೂಪಿ ಪರಮಾತ್ಮನು ಸುಪ್ರೀತನಾಗುತ್ತಾನೆ. ಈದಿನ ದೀಪಪ್ರಜ್ವಲವನ್ನು ಮಾಡುವುದರಿಂದ ಲಕ್ಷ್ಮೀದೇವಿಯು ಸುಪ್ರೀತಳಾಗಿ ಸ್ಥಿರವಾಗಿ ನೆಲೆಸುತ್ತಾಳೆ.
ಯಾರು ಈ ಬಲಿಚಕ್ರವರ್ತಿ –
ಯಾರು ಈ ಬಲಿಚಕ್ರವರ್ತಿ – ಕಶ್ಯಪ ದಿತಿಗಳ ವಂಶದಲ್ಲಿ ಬಂದ ಪ್ರಹ್ಲಾದರಾಜರ ಮೊಮ್ಮಗನೇ ಈ ಬಲಿಚಕ್ರವರ್ತಿ. ಹಿರಣ್ಯಕಶಿಪುವಿನ ಮಗ ಪ್ರಹ್ಲಾದರಾಜರು – ಅವರ ಮಗ ವಿರೋಚನ – ಅವರ ಮಗನೇ ಬಲಿಚಕ್ರವರ್ತಿ. ಬಲಿಯ ಮಗ ಬಾಣಾಸುರ. ಬಲಿಯ ನಿಜವಾದ ಹೆಸರು ಇಂದ್ರಸೇನ. ಇವನು ದೈತ್ಯಕುಲದಲ್ಲಿ ಹುಟ್ಟಿದ್ದರೂ ತನ್ನ ಆಡಳಿತದಲ್ಲಿ ಧರ್ಮನಿಷ್ಟೆ ಮತ್ತು ದಾನದಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ. ಸಮುದ್ರಮಥನ ಕಾಲದಲ್ಲಿ ದೈತ್ಯರ ಗುಂಪಿನ ನಾಯಕನಾಗಿದ್ದವನು ಈ ಬಲಿಚಕ್ರವರ್ತಿಯೇ. ಮುಂದಿನ ಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಗೆ ಬರುವವನು ಈ ಬಲಿಯೇ.
ಬಲಿಚಕ್ರವರ್ತಿ ದೈತ್ಯನಾಗಿದ್ದರೂ ಸಾತ್ವಿಕ ಸ್ವಭಾವದವನಾಗಿದ್ದ. ಕೆಲವೊಮ್ಮೆ ಅವನಲ್ಲಿ ಅಸುರಾವೇಶವಿರುತ್ತಿತ್ತು. ಬಲಿ ತನ್ನ ಅಸುರಾವೇಶದಲ್ಲಿ ಪರಮಾತ್ಮನ ಅವಹೇಳನ ಮಾಡಿದ್ದನ್ನು ಸಹಿಸದ ಪ್ರಹ್ಲಾದರಾಜ ಶಪಿಸಿದ್ದ – “ನಿನ್ನ ಸಮಸ್ತ ಸಾಮ್ರಾಜ್ಯ ನಾಶವಾಗಲಿ”. ಆಗ ಪಶ್ಚಾತ್ತಾಪವಾಗಿ ಕ್ಷಮೆ ಯಾಚಿಸಿದ್ದ. ತನ್ನ ತಾತನ ಶಾಪವು ಅವನ ಅವನತಿಗೆ ಕಾರಣವಾಯಿತು
ಬಲಿಚಕ್ರವರ್ತಿಯು ಇಡೀ ವಿಶ್ವವನ್ನೇ ತನ್ನ ಹದಬಸ್ತಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ, ಇಂದ್ರಲೋಕವನ್ನೂ ಆಕ್ರಮಿಸಿ, ಇಂದ್ರನನ್ನು ಕೆಳಗಿಳಿಸಿದನು. ತಾನೇ ಇಂದ್ರನಾಗಲು ಉದ್ಯುಕ್ತನಾಗಿ, 100 ಅಶ್ವಮೇಧ ಯಾಗವನ್ನು ಮಾಡಲು ಆರಂಭಿಸಿ, 99 ಯಾಗವನ್ನು ಪೂರೈಸಿದನು. 100ನೇ ಯಾಗವನ್ನು ದೈತ್ಯಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ ಆರಂಭಿಸಿದನು. ಆಗ ಇಂದ್ರನಾಗಿದ್ದ ಪುರಂದರನೆಂಬ ಇಂದ್ರನು ತನ್ನ ಹುದ್ದೆ ಕಳೆದುಕೊಳ್ಳುವ ಭೀತಿಯಿಂದ ಶ್ರೀಹರಿಯನ್ನು ಪ್ರಾರ್ಥಿಸಿದನು. ಅದೇ ಸಂದರ್ಭದಲ್ಲಿ ಅದಿತಿಯೂ ಪರಮಾತ್ಮನನ್ನು ತನ್ನ ಮಗನಾದ ಪುರಂದರನಿಗೆ ಇಂದ್ರಪದವಿಯನ್ನು ಉಳಿಸಿಕೊಡಲು ಪ್ರಾರ್ಥಿಸಿ, ಕಠಿಣ ವ್ರತಗಳ ಮಾಡಲು, ಅವರ ಪ್ರಾರ್ಥನೆಯಂತೆ, ದೇವತೆಗಳ ಪ್ರಾರ್ಥನೆಯಂತೆ, ದುಷ್ಟ ಬಲಿಯ ನಿಗ್ರಹಿಸಲು ಕಶ್ಯಪ ಅದಿತಿಗಳ ಮಗನಾಗಿ ಭಾದ್ರಪದ ಶುದ್ಧ ದ್ವಾದಶಿಯಂದು ಶ್ರವಣ ನಕ್ಷತ್ರದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಜನಿಸಿದನು
ಬಲಿಯ ನೂರನೇ ಅಶ್ವಮೇಧ ಯಾಗ ಮುಕ್ತಾಯ ಹಂತದಲ್ಲಿದ್ದಾಗ ವಾಮನ ರೂಪಿ ಪರಮಾತ್ಮನು ಯಾಗಮಂಟಪ ಪ್ರವೇಶಿಸಿದನು. ಅತಿ ಸುಂದರ ಬ್ರಹ್ಮಚಾರಿಯ ದರ್ಶನದಿಂದ ಪುಳಕಿತನಾದ ಬಲಿಯು ಅವನಿಗೆ ನಮಸ್ಕರಿಸಿ, ಪಾದಪ್ರಕ್ಷಾಲನೆ ಮಾಡಿ, ನಿನಗೆ ಏನು ಬೇಕೆಂದು ಕೇಳಿದನು. ವಾಮನನಾದರೋ ನನಗೆ ಏನೂ ಬೇಡ, ಕೇವಲ ತನ್ನ ಮೂರು ಹೆಜ್ಜೆ ಭೂಮಿಯನ್ನು ನೀಡಿದರೆ ಸಾಕೆನಲು, ಗುರು ಶುಕ್ರಾಚಾರ್ಯರು ಎಚ್ಚರಿಸಿದರೂ ಕೇಳದೆ ಆ ಮೂರು ಹೆಜ್ಜೆ ಭೂಮಿಯನ್ನು ನೀಡಲು ಉದ್ಯುಕ್ತನಾದನು. ತನ್ನ ಮೊದಲ ಹೆಜ್ಜೆಯಿಂದ ಪರಮಾತ್ಮನು ಇಡೀ ಭೂಲೋಕವನ್ನೇ ಆಕ್ರಮಿಸಿ, ತನ್ನ ಎರಡನೇ ಹೆಜ್ಜೆಯಿಂದ ತ್ರಿವಿಕ್ರಮನಾಗಿ ಬೆಳೆದು, ಆಕಾಶವನ್ನೂ ಆಕ್ರಮಿಸಿ, ಮೂರನೇ ಹೆಜ್ಜೆ ಎಲ್ಲಿಡಲೆಂದು ಪ್ರಶ್ನಿಸಿದಾಗ, ತನ್ನ ತಲೆಯನ್ನೇ ತೋರಿದ ಬಲಿಚಕ್ರವರ್ತಿ. ಬ್ರಹ್ಮದೇವರಿಂದ ಪ್ರಾರ್ಥಿತನಾದ ಪರಮಾತ್ಮನು ತನ್ನ ಪಾದಕಮಲವನ್ನು ಬಲಿಯ ತಲೆಯ ಮೇಲಿಟ್ಟು, ಅವನನ್ನು ಪಾತಾಳ ಲೋಕಕ್ಕೆ ತಳ್ಳಿ, ಅಲ್ಲಿ ತನ್ನದೇ ಒಂದು ರೂಪದಿಂದ – ಉಪೇಂದ್ರರೂಪದಿಂದ ಈಗಲೂ ಬಲಿಯ ಮನೆ ಕಾಯುತಿಹನು, ಮತ್ತು ಅವನಿಗೆ ಮುಂದಿನ ಮನ್ವಂತರದಲ್ಲಿ ನೀನೇ ಇಂದ್ರನಾಗೆಂದು ಅನುಗ್ರಹಿಸಿದನು.
ಬಲಿಪಾಡ್ಯ ಬಲಿಚಕ್ರವರ್ತಿಯ ಸಂಹಾರ ದಿನವೇ ?
ಇಲ್ಲ. ಬಲಿ ಚಕ್ರವರ್ತಿಯ ಅಹಂಕಾರ ಮತ್ತು ತಾಮಸ ಬುದ್ಧಿಯ ಮರ್ದನ ಮಾಡಿ, ಅವವನ್ನು ವಾಮನ ರೂಪಿ ಪರಮಾತ್ಮ ಅನುಗ್ರಹಿಸಿದ ದಿನ.
ಬಲಿಪಾಡ್ಯಮಿ ಮಾಡಬೇಕಾದ್ದು –
ಅಭ್ಯಂಜನ ಸ್ನಾನ. ಯಥಾ ಶಕ್ತಿ ದಾನ ಮಾಡಬೇಕು. ದೀಪ ಪ್ರಜ್ವಲನ, ಮತ್ತು ದೀಪ ದಾನ / ವಸ್ತ್ರ ದಾನ, ಮಂಗಳ ವಸ್ತ್ರ ದಾನ ಮಾಡಬೇಕು.
ಬಲಿಪೂಜಾಕ್ರಮ –
ರಂಗೋಲಿಯಿಂದ ಬಲಿಪ್ರತಿಮೆ ಚಿತ್ರವನ್ನು ಬರೆಯಬೇಕು ಅಥವಾ ಗೋಮಯದಿಂದ ಚಿತ್ರವನ್ನು ಬರೆಯಬಹುದು.
ಆಚಮನ, ಪ್ರಾಣಾನಾಯಮ್ಯ, ದೇಶಕಾಲಂ ಸಂಕೀರ್ತ್ಯ, ಸರ್ವಸಂಪದಭಿವೃದ್ಧ್ಯರ್ಥಂ ವೃಷ್ಟಿಪುಷ್ಟ್ಯಾದಿ ಸಿದ್ಧ್ಯರ್ಥಂ ಬಲೀಂದ್ರಾಂತರ್ಗತ ಶ್ರೀಮದ್ರಾಘವೇಂದ್ರತೀರ್ಥ ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವೃಷಾಕಪಿ ವಾಮನಪೂಜಾಂ ಕರಿಷ್ಯೇ | ಎಂದು ಸಂಕಲ್ಪಿಸಿ, ಮೊದಲು ವಾಮನನನ್ನು ಪೂಜಿಸಿ ಬಲೀಂದ್ರನನ್ನು ಷೋಡಚೋಪಚಾರಗಳಿಂದ ಪೂಜಿಸಬೇಕು.
ಶ್ರೀಭೂಮಿಸಹಿತಂ ದಿವ್ಯಂ ಮುಕ್ತಾಹಾರ ವಿಭೂಷಿತಂ |
ನಮಾಮಿ ವಾಮನಂ ವಿಷ್ಣುಂ ಭುಕ್ತಿಮುಕ್ತಿ ಫಲಪ್ರದಂ |
ಎಂದು ವಾಮನನನ್ನು ಪ್ರಾರ್ಥಿಸಿ, ನಂತರ ಬಲಿ ಪ್ರಾರ್ಥನೆ
ನಂತರ ಬಲಿಯನ್ನು ಮತ್ತು ಅವನ ಅಂತರ್ಗತನಾದ ವಾಮನರೂಪಿ ಪರಮಾತ್ಮನನ್ನೂ ಆವಾಹಿಸಬೇಕು.
ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ |
ಭವಿಷ್ಯೇಂದ್ರ ಸುರಾರಾತೇ ಪೂಜೋಽಯಂ ಪ್ರತಿಗೃಹ್ಯತಾಂ |
ಬಲಿರಾಜ ನಮಸ್ತುಭ್ಯಂ ದೈತ್ಯ ದಾನವ ವಂದಿತ |
ಇಂದ್ರ ಶತ್ರೋಽಮರಾರಾತೇ ವಿಷ್ಣುಂ ಸಾನ್ನಿಧ್ಯದೋ ಭವ |
ಬಲೀಂದ್ರಮಂತ್ರ –
ಅಸ್ಯಶ್ರೀ ಬಲೀಂದ್ರಮಂತ್ರಸ್ಯ ಶುಕ್ರ ಋಷಿ: |
ಅನುಷ್ಟಪ್ ಛಂದ: | ಬಲೀಂದ್ರಾಂತರ್ಗತ ಶ್ರೀ ವಾಮನೋ ದೇವತಾ |
ಓಂ ಶ್ರೀ ಹೃದಯಾಯ ನಮ: |
ಓಂ ಶ್ರೀ ಬಲೀಂದ್ರಾಯ ಶಿರಸೇ ಸ್ವಾಹಾ |
ಓಂ ಭಗವತೇ ಶಿಖಾಯೈ ವಷಟ್ |
ಓಂ ಓಂ ಕವಚಾಯಹುಂ |
ಓಂ ಭಗವತೇ ಅಸ್ತ್ರಾಯ ಫಟ್ |
ಓಂ ಭೂರ್ಭುವ: ಸ್ವರೋಮಿತಿ ದಿಗ್ಭಂಧ: |
ಬಲಿ ಧ್ಯಾನಂ |
ದ್ಯಾಯೇದ್ ಬಲೀಂದ್ರಂ ಜಗದೇಕನಾಥಂ |
ಮುಕ್ತಾಫಲಾಲಂಕೃತಸರ್ವಗಾತ್ರಂ |
ನಕ್ಷತ್ರನಾಥಂ ಭುವನಾರ್ಘವಸ್ತ್ರಂ |
ಪ್ರಿಯಂ ಮುರಾರೇ: ಕರವಾಲಹಸ್ತಂ |
ದ್ವಾದಶನಾಮ ಪೂಜಾ
ಬಲೀಂದ್ರಾಯ ನಮ: | ಜಗದೇಕನಾಥಾಯ ನಮ: |
ಮುಕ್ತಾಫಲಾಲಂ ಕೃತಾಯ ನಮ: |
ನಕ್ಷತ್ರನಾಥಾಯ ನಮ: | ಕರವಾಲಹಸ್ತಾಯ ನಮ: |
ಭಗವತೇ ನಮ: | ವಿಷ್ಣುಭಕ್ತಾಯ ನಮ: |
ದೈತ್ಯಪತಯೇ ನಮ: |
ಯೋಗಸಿಂಹಾಸನಸ್ಥಿತಾಯ ನಮ : |
ಬಲಿರಾಜಾಯ ಸಪರಿವಾರಾಯ ನಮ : |
ಧೂಪ, ದೀಪ, ನೈವೇದ್ಯ, ನೀರಾಜನ, ಮಂತ್ರಪುಷ್ಪಾದಿಗಳಿಂದ ಪೂಜಿಸಿ ಪ್ರಾರ್ಥಿಸಬೇಕು –
ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ |
ಇಂದ್ರಸ್ಥಾನೇ ಸಮಾಸೀನ ವಿಷ್ನುಸಾನ್ನಿಧ್ಯದೋ ಭವ |
ಅನಯಾ ಪೂಜಯಾ ಬಲೀಂದ್ರಾಂತರ್ಗತ ಶ್ರೀ ವೃಷಾಕಪಿ ವಾಮನ: ಪ್ರೀಯತಾಂ |
- narahari sumadhwa
***
ಬಲಿಪಾಡ್ಯ (#ದೀಪಾವಳಿ #ಪಾಡ್ಯ) ಹಬ್ಬವನ್ನು ಆಚರಿಸುವ ಪದ್ಧತಿ
೧. ತಿಥಿ : ಕಾರ್ತಿಕ ಶುಕ್ಲ ಪ್ರತಿಪದಾ
೨. ಇತಿಹಾಸ : ಬಲಿರಾಜನು ಅತ್ಯಂತ ದಾನಶೂರನಾಗಿದ್ದನು. ಬಾಗಿಲಿಗೆ ಬಂದ ಅತಿಥಿಯು ಏನೇ ಬೇಡಿದರೂ ಅದನ್ನು ಅವನಿಗೆ ದಾನವೆಂದು ಕೊಡುತ್ತಿದ್ದನು. ‘ದಾನ ಕೊಡುವುದು’ ಒಂದು ಒಳ್ಳೆಯ ಗುಣವಾಗಿದ್ದರೂ ಗುಣದ ಅತಿರೇಕವು ದೋಷವೇ ಆಗಿದೆ. ಯಾರಿಗೆ ಏನು, ಯಾವಾಗ ಮತ್ತು ಎಲ್ಲಿ ದಾನ ಕೊಡಬೇಕು ಎನ್ನುವುದನ್ನು ಶಾಸ್ತ್ರ ಮತ್ತು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸತ್ಪಾತ್ರರಿಗೆ ದಾನ ಕೊಡಬೇಕು, ಅಪಾತ್ರರಿಗೆ ಕೊಡಬಾರದು. ಅಪಾತ್ರರಿಗೆ ಸಂಪತ್ತನ್ನು ದಾನ ಮಾಡಿದರೆ ಅವರು ಮದೋನ್ಮತ್ತರಾಗಿ ಮನಬಂದಂತೆ ವರ್ತಿಸುತ್ತಾರೆ. ಬಲಿರಾಜನು ಯಾರಿಗಾದರೂ, ಯಾವಾಗ ಬಂದರೂ ಮತ್ತು ಅವರು ಏನು ಕೇಳಿದರೂ ದಾನವೆಂದು ಕೊಡುತ್ತಿದ್ದನು. ಆಗ ಭಗವಾನ ಶ್ರೀವಿಷ್ಣುವು ವಟುವಿನ ಅವತಾರ (ವಾಮನಾವತಾರ) ತಾಳಿದನು. (ವಟುವು ಚಿಕ್ಕವನಾಗಿರುತ್ತಾನೆ ಮತ್ತು ‘ಓಂ ಭವತಿ ಭಿಕ್ಷಾಂ ದೇಹಿ|’ ಅಂದರೆ ‘ಭಿಕ್ಷೆ ಕೊಡಿ’ ಎಂದು ಕೇಳುತ್ತಾನೆ.) ವಾಮನನು ಬಲಿರಾಜನ ಬಳಿ ಹೋಗಿ ಭಿಕ್ಷೆಯನ್ನು ಕೇಳಿದಾಗ, ಬಲಿರಾಜನು ‘ಏನು ಬೇಕು’ ಎಂದು ಕೇಳಿದನು. ಆಗ ವಾಮನನು ತ್ರಿಪಾದ (ಮೂರು ಹೆಜ್ಜೆ) ಭೂಮಿಯನ್ನು ದಾನವಾಗಿ ಕೇಳಿದನು. ‘ವಾಮನನು ಯಾರು ಮತ್ತು ಆ ದಾನದಿಂದ ಏನಾಗಲಿದೆ’ ಎನ್ನುವುದರ ಜ್ಞಾನವಿಲ್ಲದ ಬಲಿರಾಜನು ದಾನಕೊಡಲು ಒಪ್ಪಿಕೊಂಡನು. ವಾಮನನು ವಿರಾಟರೂಪವನ್ನು ತಾಳಿ ಒಂದು ಕಾಲಿನಿಂದ ಸಂಪೂರ್ಣ ಭೂಮಿಯನ್ನು ವ್ಯಾಪಿಸಿದನು. ಎರಡನೆಯ ಕಾಲಿನಿಂದ ಇಡಿ ಅಂತರಿಕ್ಷವನ್ನು ವ್ಯಾಪಿಸಿಕೊಂಡನು ಹಾಗೂ ಅವನು ‘ಮೂರನೆಯ ಕಾಲನ್ನು ಎಲ್ಲಿಡಲಿ?’ ಎಂದು ಬಲಿರಾಜನನ್ನು ಕೇಳಿದನು. ಆಗ ಬಲಿರಾಜನು, ‘ಮೂರನೆಯ ಕಾಲನ್ನು ನನ್ನ ತಲೆಯ ಮೇಲೆ ಇಡಿ’ ಎಂದು ಹೇಳಿದನು. ಆಗ ಮೂರನೆಯ ಪಾದವನ್ನು ಆತನ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುವುದೆಂದು ನಿರ್ಧರಿಸಿ ವಾಮನನು, ‘ನಿನಗೆ ಏನಾದರೂ ವರ ಕೇಳುವುದಿದ್ದರೆ ಕೇಳು (ವರಂ ಬ್ರೂಹಿ)’ ಎಂದನು. ಆಗ ಬಲಿರಾಜನು ‘ಪೃಥ್ವಿಯ ಮೇಲಿನ ನನ್ನ ಎಲ್ಲ ರಾಜ್ಯವು ಮುಕ್ತಾಯವಾಗಲಿದೆ ಮತ್ತು ನೀವು ನನ್ನನ್ನು ಪಾತಾಳಕ್ಕೆ ತಳ್ಳುವವರಿದ್ದೀರಿ. ಆದುದರಿಂದ ಈ ಮೂರು ಪಾದ ಭೂಮಿದಾನದಿಂದ ಘಟಿಸಿದಂತಹ ಪೃಥ್ವಿಯ ರಾಜ್ಯವು ಪ್ರತಿವರ್ಷವೂ ಮೂರು ದಿನಗಳ ಕಾಲವಾದರೂ ನನ್ನ ರಾಜ್ಯವೆಂದು ಗುರುತಿಸಲ್ಪಡಲಿ. ಪ್ರಭೂ, ಯಮನ ಪ್ರೀತ್ಯರ್ಥವಾಗಿ ದೀಪದಾನವನ್ನು ಮಾಡುವವರಿಗೆ ಯಮಯಾತನೆಯಾಗದಿರಲಿ, ಅವರಿಗೆ ಅಪಮೃತ್ಯು ಬರದಿರಲಿ ಮತ್ತು ಅವರ ಮನೆಯಲ್ಲಿ ಲಕ್ಷಿ ಯು ನಿರಂತರವಾಗಿ ವಾಸಿಸಲಿ’ ಎಂದು ವರವನ್ನು ಬೇಡಿದನು. ಆ ಮೂರು ದಿನಗಳೆಂದರೆ ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪ್ರತಿಪದಾ. ಇದಕ್ಕೆ ಬಲಿರಾಜ್ಯವೆನ್ನುತ್ತಾರೆ.
೩. ಮಹತ್ವ : ಇದು ಮೂರೂವರೆ ಮುಹೂರ್ತಗಳಲ್ಲಿನ ಅರ್ಧ ಮುಹೂರ್ತವಾಗಿದೆ. ಇದನ್ನು ‘ವಿಕ್ರಮ ಸಂವತ್ಸರ’ ಕಾಲಗಣನೆಯ ವರ್ಷಾರಂಭದ ದಿನವೆಂದು ಆಚರಿಸಲಾಗುತ್ತದೆ.
೪. ಹಬ್ಬವನ್ನು ಆಚರಿಸುವ ಪದ್ಧತಿ
ಅ. ಬಲಿಪಾಡ್ಯದಂದು ನೆಲದ ಮೇಲೆ ೫ ಬಣ್ಣಗಳ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರ ಪೂಜೆಯನ್ನು ಮಾಡುತ್ತಾರೆ. ನಂತರ ಬಲಿಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ. ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿಯನ್ನು ಬೆಳಗುತ್ತಾರೆ. ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡುತ್ತಾರೆ. ಈ ದಿನ ಪಕ್ವಾನ್ನದ ಭೋಜನ ಮಾಡುತ್ತಾರೆ.
ಆ. ‘ಬಲಿರಾಜ್ಯದಲ್ಲಿ ಶಾಸ್ತ್ರದಲ್ಲಿ ಹೇಳಿದ ನಿಷಿದ್ಧ ಕರ್ಮಗಳನ್ನು ಬಿಟ್ಟು ಜನರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಬೇಕೆಂದು’ ಧರ್ಮಶಾಸ್ತ್ರವು ಹೇಳುತ್ತದೆ. ಅಭಕ್ಷ್ಯಭಕ್ಷಣ, ಅಪೇಯಪಾನ ಮತ್ತು ಅಗಮ್ಯಾಗಮನ ಇವು ನಿಷಿದ್ಧ ಕರ್ಮಗಳಾಗಿವೆ; ಶಾಸ್ತ್ರದ ಸಮ್ಮತಿ ಇರುವುದರಿಂದ ಜನರು ಪರಂಪರೆಯಂತೆ ವಿನೋದವಿಲಾಸ ಮಾಡುತ್ತಾರೆ.
ಇ. ಈ ದಿನ ಜನರು ಹೊಸ ಬಟ್ಟೆಬರೆಗಳನ್ನು ಧರಿಸಿ ಇಡಿ ದಿನವನ್ನು ಆನಂದದಲ್ಲಿ ಕಳೆಯುತ್ತಾರೆ. ಈ ದಿನ ಗೋವರ್ಧನ ಪೂಜೆಯನ್ನು ಮಾಡುವ ಪದ್ಧತಿಯಿದೆ. ಇದಕ್ಕಾಗಿ ಸೆಗಣಿಯ ಪರ್ವತವನ್ನು ಮಾಡಿ ಅದರ ಮೇಲೆ ಗರಿಕೆ ಮತ್ತು ಹೂವುಗಳನ್ನು ಚುಚ್ಚುತ್ತಾರೆ. ಕೃಷ್ಣ, ಇಂದ್ರ, ಹಸು ಮತ್ತು ಕರುಗಳ ಚಿತ್ರ ಅಥವಾ ಮೂರ್ತಿಗಳನ್ನು ಜೊತೆಗಿಟ್ಟು, ಅವುಗಳನ್ನು ಪೂಜಿಸಿ ಮೆರವಣಿಗೆ ಮಾಡುತ್ತಾರೆ.
೫. ಭಾವಾರ್ಥ – ಈಶ್ವರೀ ಕಾರ್ಯವೆಂದು ಜನತೆಯ ಸೇವೆಯನ್ನು ಮಾಡುತ್ತಾ ದೇವತ್ವಕ್ಕೆ ತಲುಪಿದ ಬಲಿಯನ್ನು ನೆನಪಿಸಿಕೊಳ್ಳುವುದು! :ಬಲಿಪಾಡ್ಯದಂದು ಬಲಿಯ ಪೂಜೆಯನ್ನು ಮಾಡುತ್ತಾರೆ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮತಾಳಿದ್ದರೂ ಅವನ ಪುಣ್ಯದಿಂದಾಗಿ ಅವನ ಮೇಲೆ ವಾಮನದೇವರ ಕೃಪೆಯಾಯಿತು. ಅವನು ಈಶ್ವರೀ ಕಾರ್ಯವೆಂದು ಜನರ ಸೇವೆಯನ್ನು ಮಾಡಿದನು. ಅವನು ಸಾತ್ತ್ವಿಕ ವೃತ್ತಿಯ ಮತ್ತು ದಾನಿರಾಜನಾಗಿದ್ದನು. ಪ್ರತಿಯೊಬ್ಬ ಮನುಷ್ಯನು ಪ್ರಾರಂಭದಲ್ಲಿ ಅಜ್ಞಾನಿಯಾಗಿರುವುದರಿಂದ ಅವನಿಂದ ಅಯೋಗ್ಯ ಕೃತಿಗಳು ಘಟಿಸುತ್ತಿರುತ್ತವೆ. ಆದರೆ ಜ್ಞಾನ ಮತ್ತು ಈಶ್ವರೀಕೃಪೆಯಿಂದ ಅವನು ದೇವತ್ವವನ್ನು ಪ್ರಾಪ್ತಮಾಡಿ ಕೊಳ್ಳಬಹುದು ಎಂಬುದು ಈ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಇಂತಹ ನಿರ್ಭಯತೆಯಿಂದ ಸತ್ಯಕರ್ಮವನ್ನು ಮಾಡಿದರೆ ಅವನಿಗೆ ಮೃತ್ಯುವಿನ ಭಯವೇ ಇರುವುದಿಲ್ಲ. ಯಮನೂ ಕೂಡಾ ಅವನ ಮಿತ್ರ ಅಥವಾ ಬಂಧುವಾಗುತ್ತಾನೆ.
ಭಗವಂತನು ವಾಮನ ಅವತಾರದಲ್ಲಿ ‘ಭಗವಂತನು ಸರ್ವಸ್ವವನ್ನು ಅರ್ಪಿಸುವವನ ದಾಸನಾಗುವ ತಯಾರಿಯನ್ನೂ ಇಟ್ಟುಕೊಂಡಿರುತ್ತಾನೆ’ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಬಲಿಯು ವಾಸ್ತವದಲ್ಲಿ ಅಸುರರ ಕುಲದವನಾಗಿದ್ದರೂ ಅವನ ಉದಾರ ತತ್ತ್ವದಿಂದಾಗಿ ಮತ್ತು ಅವನು ಭಗವಂತನಿಗೆ ಶರಣಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನ ಮಾಡಿ ಅವನ ಜೀವನಕ್ಕೆ ಹೊಸ ಸ್ವರೂಪವನ್ನು ನೀಡಿದನು ಮತ್ತು ಅವನ ಉದ್ಧಾರವನ್ನು ಮಾಡಿದನು. ಅವನ ರಾಜ್ಯದಲ್ಲಿದ್ದ ಅಸುರವೃತ್ತಿಗೆ ಪೋಷಕವಾಗಿರುವ ಭೋಗಮಯ ವಿಚಾರಗಳನ್ನು ತೆಗೆದುಹಾಕಿ, ಅಲ್ಲಿ ತ್ಯಾಗಭಾವನೆಯನ್ನು ಅಂಕುರಿಸಿ, ಜನತೆಗೆ ದೈವೀವಿಚಾರಗಳನ್ನು ನೀಡಿ ಸುಖ ಮತ್ತು ಸಮೃದ್ಧಿಯ ಜೀವನವನ್ನು ಪ್ರದಾನಿಸಿದನು.’
ಕೃಪೆ :Whatsapp
***
ಬಲಿ ಚಕ್ರವರ್ತಿಯು ಭೂಲೋಕ ಆಳುತ್ತಿದ್ದ ರಾಜ. ವಿಜಯಶಾಲಿಯಾದ ರಾಜನು ದೇವಲೋಕವನ್ನೂ ಗೆದ್ದುಕೊಂಡು ತನ್ನದಾಗಿಸಿಕೊಂಡನು. ಇದರಿಂದ ಇಂದ್ರಾದಿ ದೇವತೆಗಳು ದೇವಲೋಕವನ್ನು ಬಿಡುವಂತಾಯಿತು. ಅವರು ವಿಷ್ಣುವಿನಲ್ಲಿ ಮೊರೆ ಹೋದರು. ಆಗ ಶ್ರೀ ವಿಷ್ಣು ವಾಮನ ಅವತಾರ ತಾಳಿ ಬಲಿಯ ಬಳಿ ಬಂದು, ತನಗೆ ೩ ಹೆಜ್ಜೆ ಇಡುವಷ್ಟು ಜಾಗ ಕೊಡು ಎಂದು ಕೇಳಿದನು. ಒಂದು ಹೆಜ್ಜೆಯಿಂದ ಭೂಲೋಕವೆಲ್ಲ ಮುಚ್ಚಿತು, ಇನ್ನೊಂದು ಹೆಜ್ಜೆಯಿಂದ ಆಕಾಶವೆಲ್ಲ ಮುಚ್ಚಿ ಹೋಯಿತು. ಮೂರನೆಯ ಹೆಜ್ಜೆ ಎಲ್ಲಿ ಇಡಲಿ ಎಂದು ವಾಮನ ಕೇಳಲು, ಬಲಿಯು ನನ್ನ ತಲೆ ಮೇಲೆ ಇಡು ಎಂದನು. ಹೀಗ ವಿಷ್ಣುವು ಬಲಿಯ ತಲೆಯನ್ನು ಮೆಟ್ಟಿ ಅವನನ್ನು ಪಾತಾಳಕ್ಕೆ ತುಳಿದನು. ಬಲಿಯ ಧರ್ಮ ನಿಷ್ಠೆಯನ್ನು ಮೆಚ್ಚಿ ವಿಷ್ಣುವು ಅವನಿಗೆ ಪಾತಾಳದ ಅಧಿಪತ್ಯ ಕೊಟ್ಟನು. ಜೊತೆಗೆ ವರುಷಕ್ಕೆ ಒಂದು ದಿನ ಭೂಲೋಕಕ್ಕೆ ಮರಳಿ ಬಂದು, ಭೂಲೋಕವನ್ನು ಆಳುವಂತೆ ಅನುಗ್ರಹಿಸಿದನು. ಇದೆ ಬಲಿಪಾಡ್ಯಮಿ. ಈ ದಿನ ಗೊಪೂಜೆಯೂ ನಡೆಯುತ್ತದೆ. ಮನೆಯಲ್ಲಿ ಬೆಳ್ಳಿ ಕೃಷ್ಣ, ಬೆಳ್ಳಿ ಹಸು ಪ್ರತಿಮೆಗಳಿಗೆ ಪೂಜೆ ಮಾಡುತ್ತಾರೆ. ಕೆಲವರ ಮನೆಯಲ್ಲಿ ಕೆರಕ ಇಟ್ಟು ಪೂಜೆ ಮಾಡುತ್ತಾರೆ. ಕೆರಕ ಎಂದರೆ ಹಸುವಿನ ಸಗಣಿಯ ಉಂಡೆಗೆ ಚೆಂಡುಹೂವು ಇಡುತ್ತಾರೆ. ಇದು ಗಣಪತಿಯ ಸ್ವರೂಪ ಎಂದು ಭಾವಿಸುತ್ತಾರೆ. ಬಲಿ ಚಕ್ರವರ್ತಿಯ ರಾಜ್ಯವು ಐಶ್ವರ್ಯ, ಅಭಿವೃದ್ಧಿ ಹೊಂದಿತ್ತು. ಅಂತಯೇ ನಮ್ಮ ಬಾಳಲ್ಲೂ ಲಕ್ಷ್ಮೀ ಸ್ಥಿರವಾಗಿ ನೆಲಿಸಿ, ಅಭಿವೃದ್ಧಿ ಸಿಗಲಿ ಎಂದು ಪ್ರಾರ್ಥನೆ ಮಾಡುವ ಪದ್ಧತಿ.
ದೀಪಾವಳಿ ಹಬ್ಬದಲ್ಲಿ ನೇಮ, ಉಪವಾಸ, ವ್ರತ ಕಥೆ ಇವ್ಯಾವುದೂ ಇಲ್ಲ. ಹಾಗಾಗಿ ಇದು ಸಂತಸ, ಸಡಗರ, ಸಂಭ್ರಮದ ಹಬ್ಬ :) ಬೆಳಿಗ್ಗೆ ಎದ್ದು ಅಭ್ಯಂಜನ ಸ್ನಾನ ಮಾಡಿ, ದೇವರ ಪೂಜೆ ಮಾಡಿ,ಹೊಸ ಉಡುಗೆ ಹಾಕಿಕೊಂಡು, ರುಚಿಯಾದ ಹಬ್ಬದ ಅಡಿಗೆ ಊಟ ಮಾಡಿ, ವಿಧ ವಿಧವಾದ ಪಟಾಕಿ ಹೊಡೆದು ಆನಂದಿಸುವ ಹಬ್ಬ ಇದು.
ದೀಪಾವಳಿಯ ಬೆಳಕು ಎಲ್ಲರ ಬಾಳನ್ನೂ ಪ್ರಕಾಶಗೊಳಿಸಲಿ ಎಂದು ಆಶಿಸುತ್ತೇನೆ)
*******
ಸಂಚಿಕೆ-2
ಕಾರ್ತೀಕಶುಕ್ಲಪ್ರತಿಪತ್ ಮಹತ್ವ
ಗೋವರ್ಧನ ಪೂಜಾವಿಧಿ
ಬಲಿಪಾಡ್ಯಮಿಯಂದು ಗೋಮಯದಿಂದ ಅಥವ ಅನ್ನದಿಂದ ಗೋವರ್ಧನ ಪರ್ವತವನ್ನು ರಚಿಸಿ ಶ್ರೀಗೋಪಾಲಕೃಷ್ಣ ಪ್ರೀತ್ಯರ್ಥಂ ಗೋವರ್ಧನ ಪೂಜಾಂ ಕರಿಷ್ಯೇ ಎಂದು ಸಂಕಲ್ಪ ಮಾಡಿ ಗೋವರ್ಧನಾಭಿಮಾನಿ ಶ್ರೀಕೃಷ್ಣನನ್ನು ಆವಾಹಿಸಿ ಷೋಡಶೋಪಚಾರಗಳಿಂದ ಪೂಜಿಸಬೇಕು .
ಗೋಪಾಲಮೂರ್ತೆ ವಿಶ್ವೇಶ ಶಕ್ರೋತ್ಸವ ವಿಭೇದಕ |
ಗೋವರ್ಧನ ಕೃತಚ್ಛತ್ರಂ ಪೀಡಾಂ ಮೇ ಹರ ಗೋಪತೆ ||
ಗೋವರ್ಧನ ಧರಾಧಾರ ಗೂಕುಲತ್ರಾಣ ಕಾರಣ |
ವಿಷ್ಣುಬಾಹು ಕೃತಚ್ಛಾಯಾಂ ಗವಾಂಕೂಟಿಪ್ರದೋ ಭವ ||
ಲಕ್ಷ್ಮೀರ್ಯಾ ಲೋಕಪಾಲಾನಾಂ ಧೇನುರೂಪೇಣಸಂಸ್ಥಿತಾ |
ಘೃತಂ ವಹತಿ ಯಜ್ಞಾರ್ಥೇ ಮಮಪಾಪಂ ವ್ಯಪೋಹತು ||
ಈ ಮಂತ್ರಗಳಿಂದ ಪ್ರಾರ್ಥಿಸಿ ಗೋವುಗಳನ್ನು ಅಲಂಕರಿಸಿ ಪೂಜಿಸಬೇಕು .
ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ.
********
" ಬಲಿ ಪಾಡ್ಯಮಿ "
ದೀಪಾವಳಿ ಅಮವಾಸ್ಯೆ ಮರುದಿನ ಬರುವ ಕಾರ್ತಿಕ ಶುದ್ಧ ಪಾಡ್ಯವೇ ಬಲಿಪಾಡ್ಯಮಿ. ಭೋಲೋಕವನ್ನು ಆಳುತ್ತಿದ್ದ ಬಲಿ ಚಕ್ರವರ್ತಿಯ ಉಪಟಳ ತಾಳಲಾರದೇ , ದೇವತೆಗಳ ಕೋರಿಕೆ ಯಂತೆ ವಿಷ್ಣು ' ವಾಮನ ' ರೂಪ ಧರಿಸಿ ಭೂಲೋಕಕ್ಕೆ ಬರುತ್ತಾನೆ.
ಬಲಿ ಚಕ್ರವರ್ತಿಗೆ ತನ್ನ 03 ಪಾದಗಳನ್ನು ಇಡುವಷ್ಟು ಜಾಗ ಕೊಡಲು ಕೇಳುತ್ತಾನೆ.
ಮೊದಲನೇ ಪಾದದಿಂದ ಭೂಲೋಕ ಮುಚ್ಚಿತು.
ಎರಡನೇ ಪಾದದಿಂದ ಆಕಾಶ ಮುಚ್ಚಿತು.
ಮೂರನೇ ಪಾದ ವಿಡಲು ಸ್ಥಳವೇ ಇಲ್ಲದ್ದರಿಂದ ಬಲಿಯು ತಮ್ಮ ಪಾದವನ್ನು ನನ್ನ ತೆಲೆಯ ಮೇಲೆ ಇಡಬೇಕೆಂದು ಪ್ರಾರ್ಥಿಸಿದನು. ವಾಮನನು ತನ್ನ ಪಾದವನ್ನು ಬಲಿಯ ಮೇಲಿಡಲು ಬಲಿಯು ಪಾತಾಳಕ್ಕೆ ತಳ್ಳಲ್ಪಟ್ಟನು. ಬಲಿಯು ವಿಷ್ಣುವಿನ ಪರಮ ಭಕ್ತನಾಗಿದ್ದರಿಂದ ಬಲಿಯ ಕೋರಿಕೆಯಂತೆ ವರುಷಕ್ಕೆ ಒಂದು ದಿನ ಭೂಲೋಕಕ್ಕೆ ಬಂದು ರಾಜ್ಯವಾಳು ಎಂದು ಅನುಗ್ರಹಿಸುತ್ತಾನೆ. ಬಲಿಯು ಪಾಡ್ಯಯೆಂದು ಬರುತ್ತಾನೆ ಎಂದು ಪುರಾಣದಲ್ಲಿ ಉಲ್ಲೇಖಿಸಿದೆ.
ಬಲಿಯು ರಾಜ್ಯವಾಳುತ್ತಿದ್ದಾಗ ಅಪಾರವಾದ ಸಂಪತ್ತು ಇತ್ತು.ಆ ಸಂಪತ್ತು ಶಾಶ್ವತವಾಗಿ ಇಲ್ಲಿಯೇ ನೆಲಸಲಿಯೆಂದು ಪ್ರಾರ್ಥಿಸುವ ಹಬ್ಬ ಈ " ಬಲಿಪಾಡ್ಯಮಿ ".
ಇದರ ಮರುದಿನ ' ಯಮಿ ' ಯ ಹಬ್ಬ.ಇದನ್ನು ಉತ್ತರ ಭಾರತದಲ್ಲಿ ಹೆಚ್ಚು ಆಚರಿಸುತ್ತಾರೆ.
ಯಮಿಯ ಹಬ್ಬ - ಆಣ್ಣ - ತಂಗಿಯ ವಾತ್ಯಲ್ಯ ತೋರುವ ಹಬ್ಬವಾಗಿದೆ.
ಇದರೊಂದಿಗೆ 05 ದಿನಗಳ ದೀಪವಳಿ ಉತ್ಸವ ಮಂಗಳವಾಗುತ್ತದೆ.
***
ಮಹಾವಿಷ್ಣು ವಾಮನನಾಗಿ ಬಲಿ ಚಕ್ರವರ್ತಿಯ ತಲೆಮೇಲೆ ಮೂರನೇ ಹೆಜ್ಜೆಯಿಟ್ಟು ಪಾತಾಳಕ್ಕೆ ತಳ್ಳಿದ ಜೊತೆಗೆ ಪಾತಾಳ ಅಂದರೆ ಅದು ಬೇರೆ ಯಾವೊದೊ ಒಂದು ಲೋಕ ! ಎಂದು ತಿಳಿದಿದ್ದರೆ ಅದು ತಪ್ಪು.
ಪೂರ್ಣ ಓದಿ ಮಹತ್ವದ ಇತಿಹಾಸ ವಿಷಯ ತಿಳಿದು ಹೆಮ್ಮೆಯಿಂದ ಹೇಳಿ ನಾವು ಹಿಂದೂಸ್ಥಾನಿಗಳು ಎಂದು.
ಪಾತಾಳ ಅಂದರೆ ಈಗಿನ ದಕ್ಷಿಣ ಅಮೆರಿಕದ ಪೆರು ದೇಶ(ಸುತಲ) !!
ನಾ ವಾಮನಮೂರ್ತಿ ಮತ್ತು ಬಲಿಚಕ್ರವರ್ತಿಯ ಸಂಕ್ಷಿಪ್ತವಾಗಿ ಭಾರತೀಯರು ಹೆಮ್ಮೆ ಪಡುವಂತ ಇತಿಹಾಸ.
ಬಲಿ ಚಕ್ರವರ್ತಿಯು ಏಶಿಯಾ, ಯುರೋಪ್ ಹಾಗೂ ಆಫ್ರಿಕಾ ಖಂಡಗಳು ಈತನ ಆಳ್ವಿಕೆಯಲ್ಲಿತ್ತು ಬಲಿ ಉತ್ತಮ ರಾಜನಾಗಿದ್ದರು ದೇವತೆಗಳು ವಿರೋಧಿಯಾಗಿ ಬೆಳೆಯತ್ತಿದ್ದ. ಮುಂದೆ ಇವನಿಂದ ಅಪಾಯ ತಪ್ಪಿದ್ದಲ್ಲ ಎಂದು ತಿಳಿದು ದೇವತೆಗಳ ಮೊರೆಗೆ ಮಹಾವಿಷ್ಣು ವಾಮನವತಾರಿಯಾಗಿ ಮಹಾನ್ ಶಕ್ತಿಶಾಲಿಯಾದ ಮತ್ತು ದಾನಿಯಾದ ರಾಕ್ಷಸ ದೊರೆ ಬಲಿಯಿಂದ ಮೂರು ಹೆಜ್ಜೆಗಳು ಭೂಭಾಗ ದಾನ ಪಡೆದು ಮೂರು ಹೆಜ್ಜೆಗಳಿಗೆ ಈಗಿನ ಏಶಿಯಾ, ಯುರೋಪ್,ಮತ್ತು ಆಫ್ರಿಕಾ ಖಂಡಗಳು ಅಳೆದ. (ಈಗಲೂ ಭಾರತದಲ್ಲಿ ಹೆಜ್ಜೆಗಳನ್ನು ಅಳತೆಯಾಗಿ ಬಳಸುವ ರೂಡಿಯಲ್ಲಿದೆ.) ಈಗೇ ಮೂರು ಹೆಜ್ಜೆಗಳಲ್ಲಿ ದಾನ ನೀಡಿದ ಭೂಭಾಗದಲ್ಲಿ ಬಲಿಚಕ್ರವರ್ತಿ ಗೆ ಇರಲು ಹಕ್ಕಿಲ್ಲದೆ ಇರುವುದರಿಂದ, ಬಲಿಯನ್ನು ದಟ್ಟವಾದ ಕಾಡುಗಳಿಂದ ಕೂಡಿದ ದಕ್ಷಿಣ ಅಮೆರಿಕಕ್ಕೆ ಕಳುಹಿಸಿದ !
ಸಮುದ್ರ ಮಾರ್ಗವಾಗಿ ಬಲಿ ಚಕ್ರವರ್ತಿಯನ್ನು ಕಳಿಸುವಾಗ ಹಾಗೆ ಬರಿಗೈಯಲ್ಲಿ ಕಳಿಸಲಿಲ್ಲ ಅಷ್ಟ ಐಶ್ವರ್ಯಗಳೊಂದಿಗೆ ಮತ್ತೆ ಅಲ್ಲಿ ನೆಲೆಸಲು ಅನುಕೂಲವಾಗಲು ರಾಕ್ಷಸರ ಆರ್ಕಿಟೆಕ್ಚರ್ #ಮಯ ನೊಂದಿಗೆ ಅಸುರರು, ದೈತ್ಯರು,ದಾನವರು, ಕಳುಹಿಸಿ ನಾಗ ಜನಾಂಗ ಮತ್ತು ಸರ್ಪಕುಲದವರ ಅಳಿಯ #ಆಸ್ತಿಕ ಮಹರ್ಷಿಗಳ ಜನಾಂಗವನ್ನು ಈಗಿನ ರಾ ಏಜೆಂಟ್ ಗಳಂತೆ ಬಲಿಯ ಚಲನವಲನಗಳ ಮಾಹಿತಿ ಪಡೆಯಲು ನೇಮಿಸಿ ಮಹಾವಿಷ್ಣು ಕಳುಹಿಸಿದರು.
ಅದು ಭಾರತದ ಪೂರ್ವದಿಂದ ದಕ್ಷಿಣ ಅಮೆರಿಕದ ಈಗಿನ ಪೆರು(ಸುತಲ)ಕ್ಕೆ ಸಮುದ್ರಮಾರ್ಗದಲ್ಲಿ ಕಳುಹಿಸಿದ. ಇದು ಬೇರೆ ದಾರಿಗಳಿಗಿಂತ ದಕ್ಷಿಣ ಅಮೆರಿಕಾಕ್ಕೆ ಹತ್ತಿರದ ದಾರಿ! ಒಮ್ಮೆ ಚಿತ್ರಗಳನ್ನು ನೋಡಿ ಅಥವಾ ಅಟ್ಲಾಸ್ ನೋಡಿ.
ನಮಗೆ ಪಾತಾಳ ಅಂದಕ್ಷಣ ನೀರಿನ ಕೆಳಗೆ ಹೋಗಬೇಕು (ಅಂದರೆ ಸಮುದ್ರದಲ್ಲಿ ಪ್ರಯಾಣಿಸಬೇಕು) ಮತ್ತೊಂದು ಪಾತಾಳ ಎಲ್ಲಿದೆ ಅಂದಕ್ಷಣ ಭೂಮಿಯ ಕೆಳಗಿದೆಯೆಂದು ಕಾಲು ಒತ್ತಿ ತೋರಿಸುತ್ತೇವೆ ಅಂದರೆ ಭಾರತದಲ್ಲಿ ಒಂದು ರಂಧ್ರವನ್ನು ಕೊರೆದರೆ ಅದು ದಕ್ಷಿಣ ಅಮೆರಿಕಾಗೆ ತಲುಪುತ್ತದೆ. ಯಾರಾದರೂ ಟ್ರೈ ಮಾಡುವವರು ಮಾಡಿ ಹೇಳಿ. ಸುಳ್ಳಲ್ಲ ಸ್ವಾಮಿ.
ಬಲಿ ಚಕ್ರವರ್ತಿಯ ದಾನಕ್ಕೆ ಮೆಚ್ಚಿ ಮಹಾವಿಷ್ಣುನಲ್ಲಿ ಕೊರಿಕೆಯ ಮೇರೆಗೆ ಬಲೇಂದ್ರನಿಗೆ ಭಾರತವರ್ಷಕ್ಕೆ ವರ್ಷಕೊಮ್ಮೆ ಬೇಟಿ ಕೊಡಲು ಅನುಮತಿಸಿದ. ಇಂದಿಗೂ ಕೇರಳದಲ್ಲಿ ವೈಭವದ ಓಣಂ ಹಬ್ಬವನ್ನು ಹತ್ತುದಿನಗಳ ಕಾಲ ಆಚರಿಸುತ್ತಾರೆ. ಈ ಸಮಯದಲ್ಲಿ ಬಲೀಂದ್ರ ನೌಕೆಯಲ್ಲಿ ಸಮುದ್ರ ಯಾನ ಮಾಡಿದ ನೆನಪಿಗಾಗಿ ಬೊಟ್ ಸ್ಪರ್ಧೆಗಳನ್ನು ಕಾಣಬಹುದು. ಹಾಗೂ ಹತ್ತುದಿನಗಳು ಬಲಿಯು ಪಾತಾಳದಿಂದ ಅಂದರೆ ದಕ್ಷಿಣ ಅಮೆರಿಕದಿಂದ ಭರತವರ್ಷಕ್ಕೆ ಬಂದು ಇರುವ ಸಂಕೇತವಾಗಿ ಕೇರಳದ ಕೊಚ್ಚಿ ಬಳಿಯಿರುವ ಕಾಕ್ಕನಾಡು ಪ್ರದೇಶದಲ್ಲಿ ಬಲಿಗಾಗಿ ನಿರ್ಮಿಸಿದ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರವೇ ಓಣಂ ಉತ್ಸವ ಪ್ರಾರಂಭವಾಗುತ್ತದೆ.
ಇಲ್ಲಿಗಮನಿಸುವಅಂಶವೇನೆಂದರೆ
೧.ಬಲಿಯ ಆಪ್ತ, ಮಯ ಶ್ರೇಷ್ಠ ವಾಸ್ತುಶಿಲ್ಪಿ . ಮಾಯನ್ಸ್ ನಾಗರಿಕತೆಯು ಇವನ ಹೆಸರಿಂದಲೇ ಬಂದಿದ್ದು. ಮಯ ಅತುಲ,ತಲಾತಲ ಎಂಬ ಪ್ರದೇಶಗಳನ್ನು ಕಟ್ಟಿದ. ಬಲಿಗಾಗಿ ಆಶ್ಮನಗರವನ್ನು ನಿರ್ಮಿಸಿದ. ಇದರ ಅವಶೇಷಗಳು ಹಲವನ್ನು ಈಗಲು ನೋಡಬಹುದು.
೧.ಬಲಿಯ ಆಪ್ತ, ಮಯ ಶ್ರೇಷ್ಠ ವಾಸ್ತುಶಿಲ್ಪಿ . ಮಾಯನ್ಸ್ ನಾಗರಿಕತೆಯು ಇವನ ಹೆಸರಿಂದಲೇ ಬಂದಿದ್ದು. ಮಯ ಅತುಲ,ತಲಾತಲ ಎಂಬ ಪ್ರದೇಶಗಳನ್ನು ಕಟ್ಟಿದ. ಬಲಿಗಾಗಿ ಆಶ್ಮನಗರವನ್ನು ನಿರ್ಮಿಸಿದ. ಇದರ ಅವಶೇಷಗಳು ಹಲವನ್ನು ಈಗಲು ನೋಡಬಹುದು.
೨. ಸರ್ಪಕುಲದ ಅಳಿಯ ಆಸ್ತಿಕ ಮಹರ್ಷಿಯಿಂದ ಆಜ್ಟೆಕ್ ಜನಾಂಗ ಪ್ರಾರಂಬವಾಯಿತು.
೩. ನಾಗ ಜನಾಂಗೀಯರ ಇಂಕ ಸಾಮ್ರಾಜ್ಯ , ಇವರ ವಂಶವನ್ನು ಈಗಲೂ ಉತ್ತರ ಮತ್ತು ದಕ್ಷಿಣ ಅಮೆರಿಕದ ಹಲವು ಕಡೆ ಕಾಣುತ್ತಾರೆ.
೪. ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲಿ ಮೂಲ ಜನಾಂಗ ಭಾರತೀಯ ಚಹರೆ,ಬಣ್ಣವನ್ನೆ ಹೋಲುವುದನ್ನು ಕಾಣಬಹುದು.
೫. ಮಾಯಾನ್, ಆಜ್ಟೆಕ್, ಇಂಕಾ ಸಾಂಪ್ರದಾಯಿಕ ಹಲವು ಹೋಲಿಕೆ ಕಾಣಬಹುದು ಭಾರತೀಯರಂತೆ ಪೃಕೃತಿಯನ್ನು ಪೂಜಿಸುವರು, ಪುರೋಹಿತಶಾಹಿ, ಪಂಚಾಂಗ ಮುಂತಾದ ಹಲವು ಆಚರಣೆ ನಮ್ಮನ್ನೆ ಹೋಲುತ್ತದೆ.
ಪ್ರಪಂಚದಾದ್ಯಂತ ಭಾರತದಿಂದ ವಲಸೆ ಹೋಗಿ ಅನೇಕ ನಾಗರಿಕತೆಗಳ ಹುಟ್ಟು ಹಾಕಿದ ಇತಿಹಾಸವನ್ನು ನಾವು ಓದದಂತೆ ತಿರುಚಿ ಅರೆಬರೆ ಸಂಸ್ಕೃತ ಕಲಿತ ಮಾಕ್ಸಮಲ್ಲರ್ ನನ್ನು ಮಹಾನ್ ಪಂಡಿತನೆಂದು ತಿಳಿದು ಆಂಗ್ಲರಿಗೆ ಅನುಕೂಲವಾಗಿ ಇತಿಹಾಸ ಬರೆದಿದ್ದನ್ನೆ ಮಹಾನ್ ಇತಿಹಾಸ ಎಂದು ತಿಳಿದ ಮೂರ್ಖರು ನಾವು. ಇತ್ತಿಚೀಗೆ ಅನೇಕ ಸಂಶೋಧನೆಗಳಿಂದ ನೈಜ ಇತಿಹಾಸದ ಪುಸ್ತಕಗಳು ಬಂದಿದೆ .
\ಭೂಮಿಯ ೧೮೫೧-೨೧೫೯ ಮಿಲಿಯನ್ ವರ್ಷಗಳ ಹಿಂದೆ ನಡೆದ ಈ ಐತಿಹಾಸಿಕ ಘಟನೆಗಳನ್ನು ಕಾಲಕ್ರಮೇಣ ಪುರಾಣದ ರೂಪದಲ್ಲಿ ಸ್ವಲ್ಪ ಮಟ್ಟಿಗೆ ಅತಿಶಯವಾಗಿ ಕಥೆಗಳ ರೂಪದಲ್ಲಿ ಬದಲಾಗಿ ಕೇಳುತ್ತೇವೆ. ಆದರೆ ಅದರ ಬಗ್ಗೆ ವೈಜ್ಞಾನಿಕ ಮತ್ತು ಸಂಶೋಧನೆಗಳಿಂದ ಅನ್ವೇಷಿಸಿದಾಗ ಅನೇಕ ಪುರಾಣದ ಕಥೆಗಳು ಇತಿಹಾಸವಾಗಿ ಕಂಡುಬರುತ್ತದೆ. ಅದನ್ನು ಅರ್ಥೈಸಿಕೊಳ್ಳವ ಮನೋಭಾವ ಇರಬೇಕು .
ಮತ್ತೊಂದು ವಿಷಯ ಬಲಿ ಚಕ್ರವರ್ತಿ ಗೇ ಮಹಾವಿಷ್ಣು ಅನ್ಯಾಯ ಮಾಡಿದ ಎಂದು ಬೊಬ್ಬೆ ಹೊಡೆದುಕೊಳ್ಳವ ಜನರೇ ಬಲಿ ಚಕ್ರವರ್ತಿ ಬಲಶಾಲಿಯಾದಂತೆ ಬಲಿಯಲ್ಲೂ ಅನೇಕ ದುರ್ಗಣಗಳು ಹೆಚ್ಚಾಗಿ ಪಾಪ ಕಾರ್ಯಗಳಿಗೆ ಕೈ ಹಾಕಿದಾಗ ಬಲಿಯನ್ನು ಮಟ್ಟಹಾಕಲು ದೇವತೆಗಳ ಕೈಯಲ್ಲೂ ಸಾಧ್ಯವಾಗದಾಗ ಮಹಾವಿಷ್ಣು ವಾಮನ ಅವತಾರ ಎತ್ತಬೇಕಾಯಿತು.
ಬಲಿ ಚಕ್ರವರ್ತಿ ದಾನಕ್ಕೆ ಮೆಚ್ಚಿ ಮಹಾವಿಷ್ಣು ಬಲಿಚಕ್ರವರ್ತಿಯ ಬಲಿ ತೆಗೆದುಕೊಳ್ಳದೆ. ಈ ಭೂ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಿದ ಹಾಗೂ ಬಲಿ ಚಕ್ರವರ್ತಿ ಮೇಲಿನ ಪ್ರೀತಿಗಾಗಿ ಸ್ವತಃ ಬಲಿ ಚಕ್ರವರ್ತಿಯ ದ್ವಾರ ಪಾಲಕನಾಗಿ ಕಾಯುತ್ತಿದ್ದ ಹಾಗೂ ಮುಂದಿನ ಕಲ್ಪದಲ್ಲಿ ಬಲಿ ಚಕ್ರವರ್ತಿಗೆ #ಇಂದ್ರಪದವಿಯ ವರ ನೀಡಿದ್ದು ಮತ್ತೆ ಚಿರಂಜೀವಿ ಯಾಗಿರು ಎಂದು ಇಂದಿಗೂ ಪ್ರಪಂಚದ ಏಳುಜನ ಚಿರಂಜೀವಿ ಗಳಲ್ಲಿ ಒಬ್ಬರಾಗಿರುವ ಬಲಿಂದ್ರನಿಗೆ ವರವಿತ್ತ ಮಹಾವಿಷ್ಣುವಾದ ವಾಮನಮೂರ್ತಿಯೇ ಎಂಬುದು ಮರೆಯಬಾರದು.
(ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ
ಕೃಪಃ ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನಃ)
ಜೊತೆಗೆ ಬಲಿ ಚಕ್ರವರ್ತಿಯನ್ನು ಬರಿಗೈಯಲ್ಲಿ ದಕ್ಷಿಣ ಅಮೆರಿಕಕ್ಕೆ ಕಳಿಸದೆ ಅನೇಕ ಜನಾಂಗ, ಅಷ್ಟ ಐಶ್ವರ್ಯಗಳು ಹಾಗೂ ಅಲ್ಲಿ ವೈಭವದಿಂದ ನೆಲೆಸಲು ದೇವೆತೆಗಳ ಆರ್ಕಿಟೆಕ್ಚರ್ ವಿಶ್ವಕರ್ಮರಿಗೆ ಸರಿಸಾಟಿಯಾದ ರಾಕ್ಷಸರ ಮಯ ಎಂಬುವ ಆರ್ಕಿಟೆಕ್ಚರ್ ರವರನ್ನು ಕಳಿಸಿದ್ದು ಅನ್ಯಾಯ ಎನ್ನಲಾದಿತೆ.
ಬ್ರಿಟಿಷ್ ರು ಬರೆಸಿದ ಡೊಂಗಿ ಇತಿಹಾಸ ಓದುವುದನ್ನು ಬಿಟ್ಟು ನೈಜ ಇತಿಹಾಸದ ಬಗ್ಗೆ ತಿಳಿಯಲು ಪ್ರಯತ್ನಿಸಿ.
ವಂದೇಮಾತರಂ.....
***
***
ಒಂದು ಸಂದೇಹ
ಬಲಿ ಚಕ್ರವರ್ತಿ ದೇವತೆಗಳ ಮೇಲೆ ಯುದ್ಧ ಮಾಡಿ ಅವರನ್ನ ಸೋಲಿಸಿದ ದೇವತೆಗಳನ್ನು ದ್ವೇಷಿಸಿದ. ಆದರೆ ದಾನ ಕೊಡುವಾಗ ಯಾಕೆ ಅವನಿಗೆ ದಾನ ಮಾಡುವ ಒಳ್ಳೆ ಬುಧ್ಧಿಬಂತು.
# # # #
ಬಲಿಯು ದಾನ ಕೊಟ್ಟಿದ್ದು ಒಳ್ಳೆಯ ಬುದ್ಧಿಯಿಂದ ಅಲ್ಲಾ , ಸಜ್ಜನನಾಗಿ ದಾನ ಮಾಡಲಿಲ್ಲ , ಖಳನಂತೆ ವಾಮನನ್ನು ವಂಚಿಸಲು ಯತ್ನಿಸಿದ , ಲೋಕದ ಕಣ್ಣಿಗೆ ತಾನು ನಿರಪರಾಧಿಯಾಗಬೇಕು ಮಾತ್ರವಲ್ಲ ಸತ್ಯಸಂಧ , ದಾನಶೂರ ಎಂದೆಲ್ಲ ಲೋಕವು ಹೊಗಳಬೇಕು ಎನ್ನುವ ದುರ್ಬುದ್ಧಿಯಿಂದ ದಾನ ಮಾಡಿದ , ಆ ದುರ್ಬುದ್ಧಿಯನ್ನು ಕಂಡೇ ಪ್ರಹ್ಲಾದರಾಜರು -
ಯಥಾ ಮೇ ಶಿರಸಶ್ಛೇದಾದಿದಂ ಗುರುತರಂ ವಚಃ|
ತ್ವಯೋಕ್ತಮಚ್ಯುತಾಕ್ಷೇಪಿ ರಾಜ್ಯಭ್ರಷ್ಟಸ್ತಥಾ ಪತ ||
ದಾನಾನ್ಯವಿಧಿದತ್ತಾನಿ ಶ್ರಾದ್ಧಾನ್ಯಶ್ರೋತ್ರಿಯಾಣಿ ಚ |
ಹುತಾನ್ಯಶ್ರದ್ಧಯಾ ಯಾನಿ ತಾನಿ ದಾಸ್ಯಂತಿ ತೇ ಫಲಂ|| -
ಶ್ರೀಹರಿಯನ್ನು ನಿಂದಿಸಿ ಆಡುವ ನಿನ್ನ ಈ ಮಾತುಗಳು ನನಗೆ ಶಿರಶ್ಛೇದಕ್ಕಿಂತ ಹೆಚ್ಚಿನ ವೇದನೆ ಉಂಟುಮಾಡುತ್ತಿರುವದರಿಂದ ನೀನು ರಾಜ್ಯಭ್ರಷ್ಟನಾಗಿ ಪತನ ಹೊಂದು , ವಿಧ್ಯುಕ್ತವಾಗಿ ನೀಡದ ದಾನ , ಶ್ರೋತ್ರಿಯನಿಲ್ಲದ ಶ್ರಾದ್ಧ , ಶ್ರದ್ಧೆಯಿಲ್ಲದ ಹೋಮ - ಇವುಗಳ ಫಲ ನಿನ್ನದಾಗಲಿ " ಎಂದು ಶಾಪವಿತ್ತಿದ್ದರು .
ವಸ್ತುತಃ ಪ್ರಹ್ಲಾದ ರಾಜರು ನೀಡಿದ ಈ ಶಾಪವು ಬಲಿಯಲ್ಲಿ ಆವಿಷ್ಟನಾದ ಬಲಿ ಎಂಬ ಅಸುರನಿಗೆ ನೀಡಿದ್ದು . ಏಕೆಂದರೆ ಭಗವದಭಕ್ತನಾದ ಬಲಿಯಲ್ಲಿ ಆಗಾಗ ಕಂಡುಬರುತ್ತಿದ್ದ ಅಸ್ವಾಭಾವಿಕ ಆಸುರೀಪ್ರವೃತ್ತಿ ಈ ಬಲಿಯಲ್ಲಿ ಆವಿಷ್ಟನಾದ ಬಲಿ ಎಂಬ ಅಸುರನ ಪ್ರಭಾವದಿಂದಲೇ ಬಂದುದು ಎಂಬುದನ್ನು ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಶ್ರೀಮದ್ಭಾಗವತ ತಾತ್ಪರ್ಯದಲ್ಲಿ ಸ್ಪಷ್ಟಪಡಿಸುತ್ತಾ ಬಲಿಯ ಈ ವರ್ತನೆ ಅವನಲ್ಲಿರುವ ಬಲಿ ಎಂಬ ಅಸುರಾವೇಶ ಪ್ರಯುಕ್ತ ಎಂದಿದ್ದಾರೆ . ಶ್ರೀಮದ್ವಾದಿರಾಜಪೂಜ್ಯಚರಣರೂ ಸಹ ಇದನ್ನು -
ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ| ಎಂದಿದ್ದಾರೆ , ಖಳನಂತೆ ಎಂದಿದ್ದಾರೆ ಹೊರತಾಗಿ ಖಳನೇ ಅಂತ ಹೇಳಿಲ್ಲಾ .
ಹಾಗಾದರೆ , ವಾಮನನ ನಿಜರೂಪ ತಿಳಿಯುದಕ್ಕೆ ಮೊದಲೆ ಬಲಿ ವಾಗ್ದಾನ ಮಾಡಿಲ್ಲವೆ ? ಅನಂತರವೂ "ನಾನು ನಿನ್ನ ಪುಟ್ಟ ಹೆಜ್ಜೆಯಷ್ಟೇ ನೆಲಕೊಡುವೆನೆಂದಿದ್ದೆ ಹೆಚ್ಚು ಕೊಡಲಾರೆ " ಎನ್ನದೇ ನಿಷ್ಕಲ್ಮಷ ಹೃದಯದಿಂದ ಸರ್ವಸ್ವವನ್ನೇ ದಾನಮಾಡಿಲ್ಲವೇ ? ಎಂಬುದಾಗಿ ಸಂಶಯ ವ್ಯಕ್ತಪಡಿಸಿದರೆ ಕೂರ್ಮ ಪುರಾಣ ಹಾಗು ವಮನ ಪುರಾಣಗಳಲ್ಲಿ ಸ್ಪಷ್ಟವಾಗಿ ಇದನ್ನು ಅಲ್ಲಗಳೆಯಲಾಗಿದೆ .
ಸ್ವಭಾವತಃ ಸಜ್ಜನನೇ ಆದ ಬಲಿ , ಯಜ್ಞದೀಕ್ಷಿತನಾದವನು ಬೇಡಿದವರಿಗೆ ಅವರ ಇಷ್ಟವನ್ನು ನೀಡಬೇಕಾಗಿರುವದರಿಂದ , ವಾಗ್ದಾನವನ್ನೇನೋ ಮಾಡಿದ , ಆದರೆ ಶುಕ್ರಾಚಾರ್ಯರಿಂದ ಈ ವಾಮನನು ಯಾರು ಎಂದು ತಿಳಿದಮೇಲೂ , ಪುಟ್ಟ ಹೆಜ್ಜೆಯಷ್ಟೇ ಕೊಟ್ಟುಬಿಡುವೆನೆಂಬ ಭಾವನೆಯಿಂದ , ಮೂರಡಿ ನೆಲ ದಾನ ಕೊಡುವೆನೆಂದು ಹಟ ಹಿಡಿಯುತ್ತಾನೆ , ಇದರಲ್ಲಿ ಬಲಿಯ ನಿಶ್ಕಲ್ಮಷತೆ ಇರಲಿಲ್ಲ , ವಚನ ಭ್ರಷ್ಟನೆನಿಸುವ ಭೀತಿಯಿಂದ ಈ ಹಟ ಅಂತ ತಿಳಿದುಕೊಳ್ಳುವದಾದರೆ , ತಾನು ಅಪಹರಿಸಿದ ತನ್ನದಲ್ಲದ ಸೊತ್ತನ್ನು ಅದರ ಒಡೆಯನಿಗೇ ದಾನ ಮಾಡಿದರೆ ವಚನ ಪೂರೈಸಿದಂತೇನೂ ಆಗಲಿಲ್ಲ . ಅಲ್ವಾ?
ಈಗ ಬಲಿಯ ಪರಿಸ್ಥಿತಿ ಹೆಂಗಿತ್ತು ಅಂದ್ರ , ತಾನು ದಾನ ಮಡುವೆನೆಂದರೂ ವಚನಭ್ರಷ್ಟ , ದಾನ ಮಾಡಲಾರೆನೆಂದರೂ ವಚನ ಭ್ರಷ್ಟ , ಇನ್ನು ಇಷ್ಟೇ ಕೊಡುವೆನೆಂದಿದ್ದೆ ಹೆಚ್ಚು ಕೊಡುವದಿಲ್ಲ ಎಂದೆಲ್ಲಾ ಅಂದಿದ್ದರೆ ಇಂತಹ ಸಂತೆ ವ್ಯಾಪಾರದ ಚರ್ಚೆಗೆ ( bargaining) ಆಗ ಅವಕಾಶವೇ ಇರಲಿಲ್ಲ . ಅದಕ್ಕಾಗಿಯೇ ಅಪರಾಧಿಯಾಗಿ ಜಗದೊಡೆಯನ ಮುಂದೆ ನಿಂತಿದ್ದ ಬಲಿಗೆ ಯಾವ ಚರ್ಚರಯನ್ನೂ ಮಾಡುವ ಅವಕಾಶ ಸ್ಥಿತಿಯಲ್ಲಿ ಇರಲಿಲ್ಲ . ಅದಕ್ಕಾಗಿಯೇ ಶ್ರೀಮದ್ವಾದಿರಾಜಪೂಜ್ಯಚರಣರು ಬಲ್ಲಿದಗಂಜಿ ಬರಿಗೈದ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ .
ವಾಮನನೂ ಸಹ ಆ ಸಂದರ್ಭದಲ್ಲಿ ಬಲಿಯ ಸತ್ಯನಿಷ್ಠೆಯನ್ನು ಹೊಗಳಲಿಲ್ಲ . ಅವನು ದಾನಮಾಡುವ ವೈಖರಿಯನ್ನೇ ಸೂಚ್ಯವಾಗಿ -
ಯನ್ಮದಃ ಪುರುಷಸ್ತಬ್ಧೋ ಲೋಕಂ ಮಾಂ ಚಾವಮನ್ಯತೇ - ಈ ಬಲಿಯು ಅಹಂಕಾರಿಯಾಗಿ ಲೋಕವನ್ನೂ ನನ್ನನ್ನೂ ಅವಮಾನಿಸುತ್ತಿದ್ದಾನೆ , ಇದು ದಾನವಲ್ಲ , ನನಗೆ ಅವಮಾನ , ಲೋಕಕ್ಕೆ ಅವಮಾನ , ಸತ್ಯನಿಷ್ಠ ತಾನೆಂದು ಪ್ರದರ್ಶನ ಮಾಡುತ್ತಿದ್ದಾನೆ ".
ಹೀಗೆ ಬಲಿಯು ತನ್ನ ಛಲದ ಮಾತಿನಲ್ಲಿ ತಾನೇ ಸಿಕ್ಕಿಬಿದ್ದು ಸೋತ. ವಾಮನನು ಗೆದ್ದ . ಪ್ರಹ್ಲಾದರಾಜರು ಆ ಸಂದರ್ಭದಲ್ಲಿ ಆನಂದಬಾಷ್ಪ ಸುರಿಸಿದರು .
ಭಗವದಭಕ್ತನಾದ ಬಲಿಯು ಮಾತ್ರ ಕರ್ಮಜ ದೇವತೆಯಾಗಿದ್ದು ಅಪರೋಕ್ಷಿಯಾದ್ದರಿಂದ ಅವನ ಜ್ಞಾನೋತ್ತರ ಕರ್ಮಕ್ಕೆ ಇಂದ್ರ ಪದವಿಯನ್ನು ಹೊಂದಿ ಮುಂದೆ ಮೋಕ್ಷದಲ್ಲಿ ಆನಂದವೃದ್ಧಿಯನ್ನೇ ಹೊಂದಲಿ ಎಂದು ಶ್ರೀಹರಿಯು ಅನುಗ್ರಹಿಸಿದ್ದಾನೆ .
ಹೀಗೆ ಭಗವದಭಕ್ತನಾದ ಬಲಿಯಲ್ಲಿ ಬಲಿ ಎಂಬ ಇನ್ನೊಬ್ಬ ದೈತ್ಯನ ಆವೇಶವಿದ್ದದ್ದರಿಂದ ಈ ರೀತಿಯಾಗಿ ಮೊದಲೇ ಇಂದ್ರಪದವಿಯನ್ನು ಬಯಸಿ ಯಜ್ಞ ಮಾಡಿದ್ದರಿಂದ , ಅವನಲ್ಲಿಯ ಬಲಿ ಎಂಬ ದೈತ್ಯನನ್ನು ವಾಮನನು ಸಂಹಾರಮಾಡಿ ತನ್ನ ಭಕ್ತನಾದ ಬಲಿಯನ್ನು ಸಾವರ್ಣಿ ಮನ್ವಂತರ ಬರುವವರೆಗೆ ಪಾತಾಲದಲ್ಲಿರುವಂತೆ ಆಜ್ಞೆ ಮಾಡಿ ತಾನೇ ಸ್ವತಃ ಆತನ ಬಾಗಿಲು ಕಾಯುವವನಾಗಿ ನಿಂತು ಪರಮಾನುಗ್ರಹ ಮಾಡಿದ ಎಂಬುದಾಗಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಶ್ರೀಮದ್ಭಾಗವತ ತಾತ್ಪರ್ಯ ದಲ್ಲಿ ಸ್ಪಷ್ಟಪಡಿಸಿದ್ದಾರೆ . 🙏🏼
***
read more here
karteeka maasa KARTEEKA MASA
uttan dwadashi or tulasi fest TULASI FESTdhatri havana DHATRI HAVANA
****
karteeka maasa KARTEEKA MASA
uttan dwadashi or tulasi fest TULASI FESTdhatri havana DHATRI HAVANA
****
ಬಲಿಚಕ್ರವರ್ತಿ ಬಗ್ಗೆ ಒಂದು ಚಿಕ್ಕ ಮಾಹಿತಿ... ಯಾವುದೇ ಹಬ್ಬದ ಬಗ್ಗೆ ತಿಳಿದು ಆಚರಿಸಿದಾಗಲೇ ಅದರ ಫಲ ನಮಗೆ ದೊರಕುವಂಥದ್ದು.
ಯಾವುದೇ ಹಬ್ಬ, ಅಥವಾ ಪೂಜೆ ಮಾಡಿದರೂ ಅದರ ಕಥೆ ಹೇಳುವುದು ಮತ್ತು ಕೇಳುವುದರಿಂದ ಪುಣ್ಯ ಪ್ರಾಪ್ತಿ ಯಾಗುತ್ತದೆಯಂತೆ...
ಯಾರು ಈ ಬಲಿಚಕ್ರವರ್ತಿ – ಕಶ್ಯಪ ದಿತಿಗಳ ವಂಶದಲ್ಲಿ ಬಂದ ಪ್ರಹ್ಲಾದರಾಜರ ಮೊಮ್ಮಗನೇ ಈ ಬಲಿಚಕ್ರವರ್ತಿ. ಹಿರಣ್ಯಕಶಿಪುವಿನ ಮಗ ಪ್ರಹ್ಲಾದರಾಜರು – ಅವರ ಮಗ ವಿರೋಚನ – ಅವರ ಮಗನೇ ಬಲಿಚಕ್ರವರ್ತಿ. ಬಲಿಯ ಮಗ ಬಾಣಾಸುರ. ಬಲಿಯ ನಿಜವಾದ ಹೆಸರು ಇಂದ್ರಸೇನ. ಇವನು ದೈತ್ಯಕುಲದಲ್ಲಿ ಹುಟ್ಟಿದ್ದರೂ ತನ್ನ ಆಡಳಿತದಲ್ಲಿ ಧರ್ಮನಿಷ್ಟೆ ಮತ್ತು ದಾನದಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ. ಸಮುದ್ರಮಥನ ಕಾಲದಲ್ಲಿ ದೈತ್ಯರ ಗುಂಪಿನ ನಾಯಕನಾಗಿದ್ದವನು ಈ ಬಲಿಚಕ್ರವರ್ತಿಯೇ. ಮುಂದಿನ ಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಗೆ ಬರುವವನು ಈ ಬಲಿಯೇ.
ಬಲಿಚಕ್ರವರ್ತಿಯು ಇಡೀ ವಿಶ್ವವನ್ನೇ ತನ್ನ ಹದಬಸ್ತಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ, ಇಂದ್ರಲೋಕವನ್ನೂ ಆಕ್ರಮಿಸಿ, ಇಂದ್ರನನ್ನು ಕೆಳಗಿಳಿಸಿದನು. ತಾನೇ ಇಂದ್ರನಾಗಲು ಉದ್ಯುಕ್ತನಾಗಿ, 100 ಅಶ್ವಮೇಧ ಯಾಗವನ್ನು ಮಾಡಲು ಆರಂಭಿಸಿ, 99 ಯಾಗವನ್ನು ಪೂರೈಸಿದನು. 100ನೇ ಯಾಗವನ್ನು ದೈತ್ಯಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ ಆರಂಭಿಸಿದನು. ಆಗ ಇಂದ್ರನಾಗಿದ್ದ ಪುರಂದರನೆಂಬ ಇಂದ್ರನು ತನ್ನ ಹುದ್ದೆ ಕಳೆದುಕೊಳ್ಳುವ ಭೀತಿಯಿಂದ ಶ್ರೀಹರಿಯನ್ನು ಪ್ರಾರ್ಥಿಸಿದನು. ಅದೇ ಸಂದರ್ಭದಲ್ಲಿ ಅದಿತಿಯೂ ಪರಮಾತ್ಮನನ್ನು ತನ್ನ ಮಗನಾದ ಪುರಂದರನಿಗೆ ಇಂದ್ರಪದವಿಯನ್ನು ಉಳಿಸಿಕೊಡಲು ಪ್ರಾರ್ಥಿಸಿ, ಕಠಿಣ ವ್ರತಗಳ ಮಾಡಲು, ಅವರ ಪ್ರಾರ್ಥನೆಯಂತೆ, ದೇವತೆಗಳ ಪ್ರಾರ್ಥನೆಯಂತೆ, ದುಷ್ಟ ಬಲಿಯ ನಿಗ್ರಹಿಸಲು ಕಶ್ಯಪ ಅದಿತಿಗಳ ಮಗನಾಗಿ ಜನಿಸಿದನು.
ಬಲಿಯ ನೂರನೇ ಅಶ್ವಮೇಧ ಯಾಗ ಮುಕ್ತಾಯ ಹಂತದಲ್ಲಿದ್ದಾಗ ವಾಮನರೂಪಿ ಪರಮಾತ್ಮನು ಯಾಗ ಮಂಟಪ ಪ್ರವೇಶಿಸಿದನು. ಅತಿ ಸುಂದರ ಬ್ರಹ್ಮಚಾರಿಯ ದರ್ಶನದಿಂದ ಪುಳಕಿತನಾದ ಬಲಿಯು ಅವನಿಗೆ ನಮಸ್ಕರಿಸಿ, ಪಾದಪ್ರಕ್ಷಾಲನೆ ಮಾಡಿ, ನಿನಗೆ ಏನು ಬೇಕೆಂದು ಕೇಳಿದನು. ವಾಮನನಾದರೋ ನನಗೆ ಏನೂ ಬೇಡ, ಕೇವಲ ತನ್ನ ಮೂರು ಹೆಜ್ಜೆ ಭೂಮಿಯನ್ನು ನೀಡಿದರೆ ಸಾಕೆನಲು, ಗುರು ಶುಕ್ರಾಚಾರ್ಯರು ಎಚ್ಚರಿಸಿದರೂ ಕೇಳದೆ ಆ ಮೂರು ಹೆಜ್ಜೆ ಭೂಮಿಯನ್ನು ನೀಡಲು ಉದ್ಯುಕ್ತನಾದನು. ತನ್ನ ಮೊದಲ ಹೆಜ್ಜೆಯಿಂದ ಪರಮಾತ್ಮನು ಇಡೀ ಭೂಲೋಕವನ್ನೇ ಆಕ್ರಮಿಸಿ, ತನ್ನ ಎರಡನೇ ಹೆಜ್ಜೆಯಿಂದ ತ್ರಿವಿಕ್ರಮನಾಗಿ ಬೆಳೆದು, ಆಕಾಶವನ್ನೂ ಆಕ್ರಮಿಸಿ, ಮೂರನೇ ಹೆಜ್ಜೆ ಎಲ್ಲಿಡಲೆಂದು ಪ್ರಶ್ನಿಸಿದಾಗ, ತನ್ನ ತಲೆಯನ್ನೇ ತೋರಿದ ಬಲಿಚಕ್ರವರ್ತಿ. ಬ್ರಹ್ಮದೇವರಿಂದ ಪ್ರಾರ್ಥಿತನಾದ ಪರಮಾತ್ಮನು ತನ್ನ ಪಾದಕಮಲವನ್ನು ಬಲಿಯ ತಲೆಯ ಮೇಲಿಟ್ಟು, ಅವನನ್ನು ಪಾತಾಳ ಲೋಕಕ್ಕೆ ತಳ್ಳಿ, ಅಲ್ಲಿ ತನ್ನದೇ ಒಂದು ರೂಪದಿಂದ – ಉಪೇಂದ್ರರೂಪದಿಂದ ಈಗಲೂ ಬಲಿಯ ಮನೆ ಕಾಯುತಿಹನು, ಮತ್ತು ಅವನಿಗೆ ಮುಂದಿನ ಮನ್ವಂತರದಲ್ಲಿ ನೀನೇ ಇಂದ್ರನಾಗೆಂದು ಅನುಗ್ರಹಿಸಿದನು.
ಕೃಷ್ಣಾರ್ಪಣಮಸ್ತು
***
ದೀಪಾವಳಿ: ಬಲಿಪಾಡ್ಯಮಿ, ಗೋಪೂಜೆ ಆಚರಣೆ."
ಬಲಿಪಾಡ್ಯಮಿಯೊಂದಿಗೆ ಮೂರೂ ದಿನಗಳ ದೀಪಾವಳಿ ಹಬ್ಬ ಮುಕ್ತಾಯಗೊಳ್ಳುತ್ತದೆ. ಅಮಾವಾಸ್ಯೆಯ ನಂತರ ಬರುವ ಪಾಡ್ಯಮಿಯಂದು ಬಲಿ ಚಕ್ರವರ್ತಿಯ ಪೂಜೆ ಮಾಡುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎನ್ನಲಾಗುತ್ತದೆ.
ದೀಪಾವಳಿ ಹಬ್ಬದ ಮೂರನೆಯ ಜನರೆಲ್ಲರೂ ಬಲೀಂದ್ರ ಪೂಜೆಯನ್ನು ಮಾಡುತ್ತಾರೆ.ಬಲೀಂದ್ರ ಹಿರಣ್ಯಕಶ್ಯಪನ ವಂಶಸ್ಥ. ಮಹಾ ವಿಷ್ಣು ಭಕ್ತ ಪ್ರಹ್ಲಾದನ ಮೊಮ್ಮಗ,ವಿರೋಚನನ ಮಗ. ಪ್ರಹ್ಲಾದನಂತೆ ಬಲಿಚಕ್ರವರ್ತಿಯೂ ಸಹ ವಿಷ್ಣು ಭಕ್ತನೇ ಆಗಿದ್ದ.ರಾಕ್ಷಸ ಕುಲದಲ್ಲಿ ಹುಟ್ಟಿಯೂ ಕೂಡ ಸಾತ್ವಿಕನಾಗಿದ್ದ ಬಲೀಂದ್ರ.
ಬಲೀಂದ್ರ ಮಹಾ ದಾನಿಯಾಗಿದ್ದ ರಾಜ ಏನೆ ಯಾಚಿಸಲಿ ಬಂದವರಿಗೆಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡುತ್ತಿದ್ಡ.ದಾನ ಮಾಡುವುದ ಶ್ರೇಷ್ಠ ಆದರೆ ಅಪಾತ್ರರಿಗೆ ಕೇಳಿದ ಕೂಡಲೇ ದಾನ ಮಾಡುವುದು ಸೂಕ್ತವಲ್ಲದ ಕಾರಣ.ಕೇಳಿದ ಕೂಡಲೇ ದಾನ ಮಾಡದಂತೆ ರಾಕ್ಷಸರ ಗುರುಗಳಾಗಿದ್ದ ಶುಕ್ರಾಚಾರ್ಯರು ಬಲೀಂದ್ರನಿಗೆ ಸಲಹೆ ನೀಡಿದ್ದರು.ಆದರೆ ಅವರ ಈ ಸಲಹೆಯನ್ನು ಬಲಿಚಕ್ರವರ್ತಿ ಗಂಭೀರವಾಗಿ ಪರಿಗಣಿಸಲಿಲ್ಲ. ಅಪಾತ್ರರಿಗೂ ಸಹ ತನ್ನ ಸಂಪತ್ತನ್ನು ದಾನ ಮಾಡುತ್ತಿದ್ದ. ಹೀಗೆಯೇ ಒಂದು ದಿನ ಬಲೀಂದ್ರ ಅಶ್ವಮೇಧ ಯಾಗ ನಡೆಸುತ್ತಿದ್ದಾಗ ಬಂದವರಿಗೆಲ್ಲಾ ದಾನ ನೀಡಲಾಗುತ್ತಿತ್ತು.ಇದೇ ಸಮಯದಲ್ಲಿ ವಾಮನ ರೂಪವನ್ನು ತಾಳಿ ಶ್ರೀ ವಿಷ್ಣು ಯಾಗ ನಡೆಯುವ ಸ್ಥಳಕ್ಕೆ ಬಂದು ದಾನ ನೀಡಬೇಕಾಗಿ ಕೇಳಿದ.
ದಾನ ಕೇಳಲು ಬಂದಿರುವುದು ಸಾಕ್ಷಾತ್ ವಿಷ್ಣುವೇ ಎಂಬುದನ್ನು ಅರಿತ ಶುಕ್ರಾಚಾರ್ಯರು ಬಲೀಂದ್ರನನ್ನ ಉಳಿಸಲು ಉಪಾಯವೊಂದನ್ನು ಮಾಡಿದರು.ಅದೇನೆಂದರೆ ದಾನ ನೀಡುವಾಗ ಕಮಂಡಲದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ದಾನ ಕೊಡುವವರ ಕೈಗೆ ಹಾಕಲಾಗುತ್ತದೆ.ಈ ಪ್ರಕ್ರಿಯೆಯನ್ನು ತಪ್ಪಿಸಲು ಶುಕ್ರಾಚಾರ್ಯರು ಕಪ್ಪೆರೂಪ ತಾಳಿ ಕಮಂಡಲದ ರಂಧ್ರದಲ್ಲಿ ಸೇರಿಕೊಂಡರು.ಪರಿಣಾಮ ಕಮಂಡಲದಲ್ಲಿನ ನೀರು ಬೀಳಲಿಲ್ಲ.ಶುಕ್ರಾಚಾರ್ಯರ ಉಪಾಯವನ್ನು ಅರಿತ ವಿಷ್ಣು ದರ್ಭೆಯಿಂದ ಕಮಂಡಲದ ನಾಳಕ್ಕೆ ಚುಚ್ಚಿದ ಅದು ಕಪ್ಪೆಯ ಕಣ್ಣನ್ನು ಚುಚ್ಚಿತು.ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು. ನಂತರ ದಾನ ಬಲೀಂದ್ರ ವಾಮಾನನಿಗೆ ದಾನ ನೀಡುವ ಪ್ರಕ್ರಿಯೆ ಆರಂಭಿಸಿದ.
ವಾಮಾನನಿಗೆ ಏನು ಬೇಕು ಎಂದು ಬಲಿಚಕ್ರವರ್ತಿ ಕೇಳಿದಾಗ ನನಗೆ ಮೂರು ಹೆಜ್ಜೆ ಜಾಗ ನೀಡಿದರೆ ಸಾಕು ಎಂದು ಹೇಳಿದ, ಬಲಿಯು ಹೇಳಿದ ನಂತರ ವಾಮನನು ನೋಡುತ್ತಿದ್ದಂತೆ ತ್ರಿವಿಕ್ರಮನಾದ.ತ್ರಿವಿಕ್ರಮನ ಒಂದನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು.ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ತನ್ನ ತಲೆಯ ಮೇಲಿಡುವಂತೆ ಕೇಳಿಕೊಂಡ ಮೂರನೇ ಹೆಜ್ಜೆಯನ್ನು ಆತನ ತಲೆ ಮೇಲಿಟ್ಟು ತ್ರಿವಿಕ್ರಮನು ಬಲಿಚಕ್ರವರ್ತಿಯನ್ನು ಪಾತಾಳಲೋಕಕ್ಕೆ ತಳ್ಳಿದ. ಆದರೆ ಬಲೀಂದ್ರ ವಿಷ್ಣು ಭಕ್ತನಾಗಿದ್ದರಿಂದ ಆತನಿಗೆ ವಿಷ್ಣು ವರ ನೀಡಿದ,ಅದರ ಪ್ರಕಾರ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬಂದು ಜನರಿಂದ ಪೂಜೆಯನ್ನು ಸ್ವೀಕರಿಸಬಹುದು ಎಂಬುದಾಗಿತ್ತು.ಈ ಕಾರಣದಿಂದಲೇ ದೀಪಾವಳಿ ಹಬ್ಬದ ಮೂರು ದಿನಗಳನ್ನು ಅಂದರೆ ಆಶ್ವಯುಜ ಮಾಸದ ಕೃಷ್ಣ ಚತುರ್ದಶಿ,ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯವನ್ನು ಬಲಿರಾಜ್ಯವೆಂದು ಹೇಳುತ್ತಾರೆ.
ಅಷ್ಟೇ ಅಲ್ಲದೆ ಮಹಾಭಾರತದ ಕಾಲಘಟ್ಟದಲ್ಲಿ ಕಾರ್ತಿಕ ಶುದ್ಧ ಪಾಡ್ಯದ ದಿನದಂದು ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋಪಾಲಕರಿಗೆ ರಕ್ಷಣೆ ನೀಡಿದ ಎಂಬ ಪ್ರತೀತಿಯೂ ಇದೆ.ಈ ದಿನದಂದು ಗೋವರ್ಧನ,ಗೋ ಪೂಜೆಯನ್ನು ಮಾಡುವ ಸಂಪ್ರದಾಯವಿದೆ.ಕೃಷ್ಣ, ಗೋಪ-ಗೋಪಿಯರ,ಇಂದ್ರ, ಹಸುಗಳ,ಕರುಗಳ ಚಿತ್ರಗಳನ್ನು ಜೋಡಿಸಿ ಮೆರವಣಿಗೆ ಮಾಡುತ್ತಾರೆ.
(ಕೃಪೆ :- ಜಾಲತಾಣ)
*******
No comments:
Post a Comment