nirmita tvam pura devair arcita tvam surasuraih
tulasi hara me papam pujam grhna namostute
(Hari Bhakti Vilasa 9/101 from Skanda Purana)
Oh Tulasi, you previously appeared in this world due to the demigods. The demigods and demons together worship you. Please remove all of my sins. I pay my obeisances unto you.
NOTE: Anyone who has received initiation in the Vaishnava mantras is obliged to engage in regular worship of the Deity, including offering all he eats to the Lord. When devotees make such food offerings, they should remember to place Tulasi leaves or flowers on them because Lord Vishnu does not accept any food without Tulasi. Tulasi is most beloved of Lord Krishna and thus Her leaves and flowers are also most dear to Him. The term varknarcavatara meaning the Lord's incarnation meant for accepting worship (arcavatara) in the form of a tree (varkna) is applied to Tulasi-devi. Her leaves and flowers are therefore prescribed as an essential part of the worship of the Lord's other arcavatara, i.e., the deity form of the Lord in the temple. These regulations are found in all the scriptural texts that describe the procedures by which one is to worship such deity forms of the Lord."
Srila Bhaktisiddhanta Sarasvati Thakura, Gaudiya Bhasya.
ya drsta nikhila agha sangha samani sprsta vapuh pavani
roganam abhivandita nirasini siktantaka trasini
pratya satti vidhayini bhagavatah krsnasya samropita
nyasta taccarane vimukti phalada tasyai namah
(Hari Bhakti Vilasa 9/104 from Skanda Purana, Avanti khanda)
Just by looking at you (Tulasi), all sins become removed. Just by touching you, one's body becomes pure. By praying to Her, all diseases practically become removed. If one waters Her or makes Her wet, the fear of Yamaraja (death personified) is destroyed. Just by planting or transplanting, one achieves nearness to the Supreme Personality of Godhead. If someone offers Tulasi at the lotus feet of Lord Sri Krsna, She awards liberation and devotion to Him, therefore I pay my humble obeisances to such a wonderful Tulasi-devi.
pradaksinam bhramitva ye namaskurvanti nityasah
na tesam duritam kincid aksinam avasisyate
(Hari Bhakti Vilasa 9/111 from Agastya samhita)
If someone daily goes around Tulasi and pays obeisances to Her, there is no more sin to be destroyed in him.
hitva tirtha-sahasrani sarvan api siloccayan
tulasi kanane nityam kalau tisthati kesavah
(Hari Bhakti Vilasa 9/116 from Skanda Purana)
In Kali-yuga, Lord Sri Kesava, after giving up thousands of places of pilgrimage and holy days, He resides in the forest of Tulasi-devi.
drstva sprstva tatha dhyata kirtita namita srta
ropita sevita nityam pujita tulasi subha
navadha tulasim nityam ye bhajanti dine dine
yuga koti sahasrani te vasanti harer grhe
(Hari Bhakti Vilasa 9/126,127 from Skanda Purana, conversation between Lord Brahma and Narada Muni)
Any person who daily sees Tulasi, touches Tulasi, chants Tulasi's prayers, meditates on Tulasi, pays obeisances to Her, hears about Her, transplants, waters and worships Her, he achieves all auspiciousness. Any person who does these nine kinds of service goes to the abode of the Supreme Lord Hari and remains there eternally.
snane dane tatha dhyane prasane kesava arcane
tulasi dahate papam ropane kirtane kalau
(Hari Bhakti Vilasa 9/132 from Skanda Purana, Avanti khanda)
In Kali-yuga Tulasi-devi burns up all of a person's sins who bathes Her, gives Her in charity, meditates on Her, eats Her leaves, worships Lord Sri Kesava with Her, transplants Her or sings Her glories.
tulasi alankrta ye ye tulasi nama japakah
tulasi vana palaye te tyajya durato bhatah
(Hari Bhakti Vilasa 9/133 from Skanda Purana, Kasi khanda, Yamaraja instructs his messengers)
Oh messengers, anybody who is decorated with Tulasi wood or chants Her name, always protects a Tulasi forest, you should give up bringing such persons to my abode.
darsanam narmadayas tu ganga snanam visam vara
tulasi dala samsparsah samam etat trayam smrtam
ropanat palanat sekad darsanat sparsanat nrnam
tulasi dahate papam vaca manah kaya sancitam
(Hari Bhakti Vilasa 9/139,140 from Padma Purana)
Oh best of the Vaisyas, seeing Narmada, taking bath in the Ganges, and touching Tulasi leaves are equally meritorious. If somebody plants, protects, waters, sees or touches Tulasi, then that person's sins acquired by body, mind and words are burnt into ashes.
yad grhe tulasi bhati raksabhir jalasecanaih
tad grham yama dutas ca durato varjayanti hi
(Hari Bhakti Vilasa 9/145 from Padma Purana, Kartika mahatmya)
In any house where Tulasi Maharani is very carefully protected and watered, the messengers of Yamaraja give up that house from a distance.
visnos trailokya nathasya ramasya janakatmaja
priya tathaiva tulasi sarva lokaika pavani
(Hari Bhakti Vilasa 9/151 from Agastya samhita)
As the daughter of Janaka, Sri Sitadevi, is very dear to Lord Rama, the master of the three worlds, similarly, Tulasi-devi, who purifies all of the planets, is very dear to Him.
tulasi vapita yena punyarame vane grhe
paksindra tena satyoktam lokah sapta pratisthitah
(Hari Bhakti Vilasa 9/157 from Garuda Purana)
Oh king of the birds (Garuda), anyone who has planted a garden of Tulasi, either in the forest or in the house, I truthfully say that he has won the seven planetary systems.
sansara-papa vicchedi ganga nama prakirtitam
tatha tulasya bhaktis ca hari kirti pravaktari
(Hari Bhakti Vilasa 9/161 from Brhan Naradiya Purana)
As by chanting the name of Ganges, one becomes free from all kinds of worldly sins, if someone chants the name of Tulasi or chants the glories of Lord Hari with devotion, he gets the same merit.
trnani tulasi mulat yavantyapahinoti vai
tavattir brahma hatya hi chinaty eva nasamsayah
(Hari Bhakti Vilasa 9/165 from Brhan Naradiya Purana, conversation between Yamaraja and Bhagiratha)
Anybody who removes the straw or dirt from the root of a Tulasi-devi, as many as he has removed, that many sinful reactions of killing brahmanas will be removed from him without a doubt.
durlabha tulasi seva durlabha sungatih satam
durlabha hari bhaktis ca sansararnava-patina
(Hari Bhakti Vilasa 9/170 from Brhan Naradiya Purana)
Those people who have fallen in the midst of this material world, among them worship of Tulasi is very rare, the association of real saintly persons is very rare, and real devotion to Lord Hari is also very rare.
yasmin grhe dvija srestha tulasimula mrttika
sarvada tisthate dehe devata na sa manusa
tulasi mrttika yatra kastham patran ca vesmani
tisthate muni sardula niscalam vaisnava padam
(Hari Bhakti Vilasa 9/183,186 from Skanda Purana, conversation between Lord Brahma and Narada Muni)
Oh best among the brahmanas, in anybody's house or on his body, if the mud from Tulasi is available, they are not just men, but they are equal to the demigods. Oh best among the sages, in anyone's house, if there is the clay of Tulasi, Tulasi wood, and Tulasi leaves available, that house is certainly a place of Lord Vishnu.
tulasi mula sambhuta hari bhakta padodbhava
gangodbhava ca mrllekha nayaty acyuta rupatam
(Hari Bhakti Vilasa 9/189)
Any person who puts on tilaka from the mud or clay from the root of Tulasi, mud from the lotus feet of Sri Vaisnava, and mud from the Ganges is said to be equal to the form of Lord Sri Vishnu.
patram puspam phalam kastham tvat sakha-pallavankuram
tulasi sambhavam mulam pavanam mrttikady api
(Hari Bhakti Vilasa 9/191 from Prahlada samhita and Visnu dharmottara)
Leaves of Tulasi, flowers of Tulasi, fruits of Tulasi, branches of Tulasi, bark of Tulasi, sprout of Tulasi, blossom or bud of Tulasi, and clay of Tulasi are all completely purified.
yah kuryat tulasi kasthair aksa malam surupinim
kantha malam ca yatnena krtam tasyaksayam bhavet
(Hari Bhakti Vilasa 9/199 from Skanda Purana, Agastya samhita, conversation between Lord Brahma and Narada Muni)
Any person who makes a beautiful japamala or neck beads out of Tulasi wood and uses them, if he does not perform any worship to Lord Sri Visnu, all of his activities become unlimitedly resultful.
yasya nabhi sthitam patram mukhe sirasi karnayoh
tulasi sambhavam nityam tirthais tasya makhais ca kim
(Hari Bhakti Vilasa 9/200 from Skanda Purana, conversation between Lord Brahma and Narada Muni)
If anyone daily has Tulasi leaves on his navel, in his mouth, on his head, or on both of his ears, what is the use of him going to the places of pilgrimage in this world?
yah kascit vaisnavo loke mithyacaro'py anasrami
punati sakalan lokan sirasa tulasim vahan
(Hari Bhakti Vilasa 9/202 from Skanda Purana)
If any Vaisnava in this world becomes a liar or becomes degraded from his own ashrama, if he has a Tulasi leaf on his head, he can alone purify the three worlds.
Srila Sanatana Gosvami gives his Digdarsani-tika commentary on this verse, stating that if Vaisnavas wear articles which have been offered to the Supreme Lord, then one may question how a Vaisnava can wear something which has not been offered to the Supreme Lord. In answer to this, it can be stated that only a lying or cheating "Vaisnava" can do such a thing because they are all hypocrites and not real Vaisnavas.
bhaksitam lubdhakenapi patram tulasi sambhavam
pascad distantam apanno bhasmi bhutam kalevaram
sita sitam yatha niram sarva papa ksayavaham
tatha ca tulasi patram prasitam sarva kamadam
(Hari Bhakti Vilasa 9/213,214 from Skanda Purana, conversation between Vasistha and King Mandhata)
Even if a most sinful hunter eats a Tulasi leaf and dies afterwards, whatever sins he has in his body turn into ashes. As whitish and blackish water (Ganges and Yamuna water) remove all kinds of sins, in the very same way white (green) and black Tulasis removes all kinds of sins, and if he eats these leaves (after offering them to Lord Krsna), all of his desires are perfectly achieved.
krtva papa sahasrani purve vayasi manavah
tulasi bhaksanan mucyet srutam etat pura hareh
(Hari Bhakti Vilasa 9/218 from Skanda Purana, conversation between Vasishtha and King Mandhata)
If any person in his young age commits thousands of sins but later on eats a Tulasi leaf, he becomes free from all sins. This narration was heard previously near Lord Sri Hari.
kim citram asyah patitam tulasya
dalam jalam va patitam punite
lagnadi bhala sthalam alavala
mrtsnapi krtsna agha vinasanaya
srimat tulasyah patrasya mahatmyam yadyapi drsam
tathapi vaisnavas tan na grahyam krsnarpanam vina
(Hari Bhakti Vilasa 9/226,227)
What can I say about the wonderful glories of Tulasi? Her fallen leaves, Her rotten leaves and Her water, even if fallen (mixed with Her mud?) is purifying. If even a minute quantity of the mud which has emanated from the Tulasi root has been placed on one's head, all of one's sins are removed. Although Tulasi is so glorious (and Her leaves are so purifying), still Vaisnavas never eat Tulasi leaves without first offering them to the Supreme Personality of Godhead, Krishna.
**********
Story Of Srimati Tulasi-Devi
Tulasi - Devi Story_pdf
Asta-Nama-Stava from the Padma Purana The Eight Names of Vrinda-devi
Vrindavani, vrinda, visvapujita, pushpasara, nandini, Krishna-jivani, visva-pavani, tulasi
VRINDAVANI - One who first manifested in Vrindavan.
VRINDA - The goddess of all plant and trees ( even if one Tulasi plant is present in a forest it can be called Vrindavana.)
VISHVAPUJITA - One whom the whole universe worships.
PUSHPASARA - The topmost of all flowers, without whom Krishna does not like to look upon other flowers.
NANDINI - Seeing whom gives unlimited bliss to the devotees.
KRISHNA-JIVANI - The life of Sri Krishna.
VISHVA-PAVANI - One who purifies the three worlds.
TULASI - One who has no comparison.
Anyone while worshiping Tulasi-devi chants these eight names will get the same results as one who performs the Ashvamedha sacrifice. And one who on the full-moon day of Kartika (Tulasi-devi's appearance day) worships Her with this Mantra will break free from the bonds of this miserable world of birth and death, and very quickly attains Goloka Vrndavan. On the full moon-day of Kartik Lord Sri Krishna Himself worships Srimati Tulasi-devi with this Mantra.
One who remembers this Mantra will very quickly attain devotion to Lord Krishna's Transcendental Lotus Feet.
********
read more uttan dwadashi ಉತ್ಥಾನ ದ್ವಾದಶಿ
Snaana Kaale Tulasyaange
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ|
ನಮಸ್ತೇ ನಾರದನುತೇ ನಾರಾಯಣ ಮನಃಪ್ರಿಯೇ||
ತುಲಸಿ ಅರ್ಘ್ಯ ಮಂತ್ರ -
ಶ್ರಿಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ |
ಭಕ್ತ್ಯಾದತ್ತಂ ಮಯಾರ್ಘ್ಯಂ ಹಿ ತುಲಸಿ ಪ್ರತಿಗೃಹ್ಯತಾಂ ||
ನವವಿಧ ತುಲಸಿ ಪೂಜಾ -
ದೃಷ್ಟ್ವಾ ಸ್ಪೃಷ್ಟ್ವಾ ಸ್ಮೃತ್ವಾ ಧ್ಯಾತ್ವಾ ನಾಮತಃ ಸ್ತುತಾ |
ರೂಪಿತಾ ಸೇಚಿತಾ ನಿತ್ಯಂ ಪೂಜಿತಾ ತುಲಸೀ ಶುಭಾ |
ತುಲಸೀ ಪ್ರಾರ್ಥನ –
ಮನಪ್ರಸಾದ ಜನನೀ ಸುಖಸೌಭಾಗ್ಯವರ್ಧಿನೀ |
ಆಧಿಂ ವ್ಯಾಧಿಂ ಚ ಹರಂ ಮೇ ತುಲಸೀ ತ್ವಾಂ ನಮಾಮ್ಯಹಂ |
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವ ವೇದಾಶ್ಚ ತುಲಸಿತ್ವಾಂ ನಮಾಮ್ಯಹಂ ||
ಪ್ರದಕ್ಷಿಣೆ ಮಂತ್ರ
ತುಅಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ ||
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸಂತಸ್ತಥಾ |
ವಾಸುದೇವೋ ದಯೋದೇವಾಃ ವಸಂತಿ ತುಲ್ಳಸೀವನೇ ||
ಪ್ರಸೀದ ತುಲಸೀ ದೇವಿ | ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸೀತ್ವಾಂ ನಮಾಮ್ಯಹಂ ||
ತುಲಸಿ ಪ್ರದಕ್ಷಿಣ ಕೃತ್ವ ಮಂತ್ರ -
ತುಲಸಿ ಲಾನನಂ ಯತ್ರ ಯತ್ರ ಪದ್ಮ ವನಾನಿ ಚ |
ವಸಂತಿ ವೈಷ್ಣವ ಯತ್ರ ತತ್ರ ಸನ್ನಿಹಿತೋ ಹರಿಃ ||
ಪುಷ್ಕರಾಧ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ |
ವಾಸುದೇವಾದಯೋ ದೇವಾ ವಸಂತಿ ತುಲಸಿವನೇ ||
ಪ್ರಸೀದ ತುಲಸಿದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಂ ||
ತುಲಸಿ ಮೃತ್ತಿಕಾಧಾರಣ ಮಂತ್ರ-
ಲಲಾಟೇ ಯಸ್ಯ ದೃಶ್ಯತೇ ತುಲಸಿಮೂಲಮೃತ್ತಿಕಾ |
ಯಮಸ್ತಮ್ ನೇಕ್ಷಿತುಂ ಶಕ್ತಃ ಧೂತಾ ಭಯಂಕರಾಃ ||
ತುಲಸೀಯನ್ನು ಕೀಳುವಾಗ –
ತುಲಸ್ಯ ಮೃತಜನ್ಮಾಸಿ ಸದಾ ತ್ವಾಂ ಕೇಶವಪ್ರಿಯೇ |
ಕೇಶವಾರ್ಥಂ ಚಿನೋಮಿ ತ್ವಾಂ ಕ್ಷಮಸ್ವ ಹರಿವಲ್ಲಭೇ |
ತುಲಸೀ ಮಾಲಾಧಾರಣ ಮಂತ್ರ –
ತುಲಸೀಕಾಷ್ಠಸಂಭೂತೇ ಮಾಲೇ ಕೃಷ್ಣಜನಪ್ರಿಯೇ |
ಭಿಭರ್ಮಿ ತಾಮಹಂ ಕಂಠೇ ಕುರು ಮಾಂ ಕೃಷ್ಣವಲ್ಲಭಮ್ |
ತುಲಸೀದಳ ಮಾಲಾಹೀಂ ಕೃಷ್ಣೋಚ್ಚಿಷ್ಠಾ ತು ಯೋ ವಹೇತ್ |
ಪದೇಪದೇಶ್ವಮೇಧಾನಾಂ ದಶನಾಂ ಲಭತೇ ಫಲಂ |
ತುಳಸಿ ಶ್ಲೋಕಗಳು
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣ ಮನಃ ಪ್ರಿಯೇ ||
ಯಾ ದೃಷ್ಠಾ ನಿಖಿಲಾಘಸಂಘಶಮನೀ ಸ್ಪೃಷ್ಟ್ವಾವಪುಪಾವನಿ|
ರೋಗಾಣಾಮಭಿವಂದಿತಾ ನಿರಸನಿ ಸಿಕ್ತಾಂತಕತ್ರಾಸಿನಿ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ |
ನ್ಯಸ್ತಾ ತಚ್ಚರಣೇ ವಿಮುಕ್ಥಿಫಲದಾ ತಸ್ಯೈ ತುಲಸ್ಯೈ ನಮ: |
ಪ್ರಸೀದ ತುಲಸೀದೇವೀ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೋತೇ ತುಲಸೀ ತ್ವಾಂ ನಮಾಮ್ಯಹಂ |
*****
ಹಿಂದೂ ಧರ್ಮವು "ತುಳಸಿ" ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. ಪವಿತ್ರ ತುಳಸಿ ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣಬಹುದು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ಸಂರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗು ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.
**********
🙏೧. ಕುಂಡದಲ್ಲಿ ಹಾಕಿದರೆ ಅಷ್ಟು ಬೆಳವಣಿಗೆ ಆಗುವುದಿಲ್ಲ, ಬೇರು ಬಿಡುವುದಕ್ಕೆ ಸ್ಥಳಾವಕಾಶ ಕಮ್ಮಿ ಇರುತ್ತೆ..
🙏೪. ಅಶುಚಿಯಾದ ನೀರನ್ನು, ಮಡಿಯಿಲ್ಲದ ನೀರನ್ನು ಹಾಕಿದರೂ ತುಳಸೀಗಿಡ ಒಣಗುವುದು..
🙏೫. ತುಳಸೀ ಗಿಡಕ್ಕೆ ಗಿಡ ಬೆಳೆದ ಹಾಗೇ ಬೇರೆ ಮಣ್ಣನ್ನು ಹಾಕುತ್ತಿರಬೇಕು, ಇಲ್ಲದಿದ್ದರೆ ಫಲವತ್ತತೆ ಇಲ್ಲದೇ ಬೇಗ ಒಣಗುವುದು..
🙏೬. ತುಂಬಾ ತುಳಸೀ ಗಿಡ ಒಣಗುತ್ತಿದ್ದರೆ ಮೃತ್ತಿಕೆಯನ್ನು ತಂದು ತುಳಸೀ ಗಿಡದಲ್ಲಿ ಹಾಕಿ , ಚೆನ್ನಾಗಿ ಬೆಳೆಯುವುದು..
🙏೭. ಮನೆಯ ಮೇಲೆ ದುಷ್ಟಗ್ರಹ ಪ್ರಭಾವ ಬಿದ್ದಾಗ, ಮಾಟ ಮಂತ್ರ ದೋಷವಾದಾಗ , ಅದನ್ನು ತುಳಸೀ ತಡೆಯುವುದು..
ಕೆಲವೊಂದು ಅಹಿತಕರ ಸನ್ನಿವೇಶದಿಂದ ನಿಮ್ಮನ್ನು ರಕ್ಷಿಸುವ ಸಮಯದಲ್ಲಿ ತುಳಸೀ ಒಣಗುವುದು ಉಂಟು..
ಇದು ಎಚ್ಚರಿಕೆಯ ಸಂದೇಷವೂ ಕೂಡ..
🙏೯. ತುಳಸೀಗಿಡದ ಮುಂದೆ ಪ್ರತಿದಿನ ದೀಪ ಹಚ್ಚುವುದರಿಂದ ದುಷ್ಟಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ, ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಲಕ್ಷ್ಮೀಕಟಾಕ್ಷವಾಗುವುದು..
🙏೧೦. ತುಳಸೀ ಪೂಜೆಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡುವುದು ಶುಭ, ಉತ್ತರ ಅಥವಾ ಈಶಾನ್ಯ ಅಭಿಮುಖವಾಗಿ ಮಾಡುವುದು ಅತ್ಯಂತ ಶುಭ..
ನೀವು ತುಳಸೀ ಬಿಡಿಸುವಾಗ ತುಳಸಿ ನೆಲಕ್ಕೆ ಬಿದ್ದರೆ "ಬ್ರಹ್ಮಹತ್ಯಾ" ದೋಷ ಬರುವುದು..
ನೆಲಕ್ಕೆ ಬಿದ್ದ ತುಳಸೀ ಪೂಜಿಸಬಾರದು.
********
ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ
ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ
ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.
ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:
ಆವಾಹನೆ -
ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.
ಆಸನ-
ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.
ಪಾದ್ಯ -
ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
ಅರ್ಘ್ಯ -
ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
ಆಚಮನ -
ಕುಡಿಯುವುದಕ್ಕೆ ನೀರು ಕೊಡುವುದು.
ಸ್ನಾನ -
ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.
ವಸ್ತ್ರ -
ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು.
ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.
ಪುಷ್ಪ ಮಾಲ -
ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.
ಅರ್ಚನೆ/ಅಷ್ಟೋತ್ತರ -
ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.
ಧೂಪ -
ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.
ದೀಪ -
ದೀಪ ಸಮರ್ಪಣೆ ಮಾಡುವುದು.
ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.
ನೀರಾಜನ -
ಕರ್ಪುರದಿಂದ ಮಂಗಳಾರತಿ ಮಾಡುವುದು.
ನಮಸ್ಕಾರ -
ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.
ಪ್ರಾರ್ಥನೆ
ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.
ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ.
***********
Tulasi Pooja everyday by women
ಶ್ರೀ ತುಳಸಿ ಪೂಜೆಯನ್ನು ಮದುವೆಯಾದ ಸ್ತ್ರೀಯರು, ಸುಮಂಗಲಿಯರು, ಹೆಣ್ಣು ಮಕ್ಕಳು ಎಲ್ಲರೂ ಪ್ರತಿದಿನ ಅರಷಿನಾದಿ ಮಂಗಳದ್ರವ್ಯಗಳಿಂದ ಸ್ನಾನ ಮಾಡಿ ಶುಭ್ರರಾಗಿ ಕುಂಕುಮಾದಿಗಳನ್ನು ಧರಿಸಿ ಪ್ರತಿದಿನ ತಪ್ಪದೇ ಶ್ರೀ ತುಳಸಿ ಪೂಜೆ ಮಾಡಬೇಕು.
ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.
|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||
|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||
ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.
ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.
|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ
ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ ||
|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||
|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||
ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.
ಶ್ರೀ ತುಳಸಿ ಪ್ರಾರ್ಥನೆ
ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |
ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||
ಶ್ರೀ ತುಳಸಿ ಧ್ಯಾನ
ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |
ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||
ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |
ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ ||
ಶ್ರೀ ತುಳಸಿ ಪ್ರಣಾಮ
ವೃಂದಾಯೈ ತುಳಸಿ ದೇವ್ಯೈ
ಪ್ರಿಯಾಯೈ ಕೇಶವಸ್ಯ ಚ
ಕೃಷ್ಣ ಭಕ್ತಿ ಪರದೆ ದೇವಿ
ಸತ್ಯವತ್ಯೈ ನಮೋ ನಮಃ
ಶ್ರೀ ತುಳಸಿ ಪ್ರದಕ್ಷಿಣ ಮಂತ್ರ
ಯಾನಿ ಕಾನಿ ಚಪಾಪಾನಿ
ಬ್ರಹ್ಮ ಹತ್ಯಾದಿಕಾನಿ ಚ
ತಾನಿ ತಾನಿ ಪ್ರನಶ್ಯಂತಿ
ಪ್ರದಕ್ಷಿಣಃ ಪದೇ ಪದೇ
ಶ್ರೀ ತುಳಸಿ ನಮಸ್ಕಾರ
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |
ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||
ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||
ಅಷ್ಟ ನಾಮ ಸ್ತವ (ಪದ್ಮ ಪುರಾಣದಿಂದ)
|| ವೃಂದಾವನಿ, ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||
ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.
ಸಮಯಾವಕಾಶ ಇರುವವರು ಶ್ರೀ ತುಳಸಿ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿದರೆ ಉತ್ತಮ.
********
ತಂ ನಾರಸಿಂಹಂ ನಮಾಮಿ !
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಯಾ ದೃಷ್ಟಾ ನಿಖಿಲಾಘಸಂಘಶಮನೀ
ಸ್ಪೃಷ್ಟಾ ವಪುಃ ಪಾವನೀ
ರೋಗಾಣಾಮಭಿವಂದಿತಾ ನಿರಸನೀ
ಸಿಕ್ತಾಂತಕತ್ರಾಸಿನೀ !
ಪ್ರತ್ಯಾಸತ್ತಿವಿಧಾಯಿನೀ ಭಗವತಃ
ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ
ತಸ್ಯೈ ತುಲಸ್ಯೈ ನಮಃ !! ೧೧ !!
ಅರ್ಥ :- ಯಾರನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಪಾಪಗಳ ಸಮೂಹಗಳು ಸುಟ್ಟು ಭಸ್ಮ ಆಗ್ತಾವೋ, ಯಾರನ್ನು ಸ್ಪರ್ಶ ಮಾಡಿದರೆ ಸಾಕು ನಮ್ಮ ದೇಹ, ಮನಸ್ಸು ಪವಿತ್ರವಾಗ್ತಾವೋ, ಯಾರನ್ನು ನಮಸ್ಕಾರ ಮಾಡಿದರೆ ನಮ್ಮ ಎಲ್ಲಾ ರೋಗಗಳು (ಸಂಸಾರ ಎಂಬ ರೋಗ) ನಾಶವಾಗ್ತಾವೋ, ಅಂಥ ತುಳಸಿದೇವಿಯ ಚರಣಗಳಲ್ಲಿ ನಮ್ಮ ತಲೆಯನ್ನು ಇಟ್ಟರೆ (ನಮಸ್ಕಾರ ಮಾಡಿದರೆ) ಅವಳು (ತುಳಸಿದೇವಿಯು) ಭಗವಂತನ ಬಗ್ಗೆ ಯಥಾರ್ಥಜ್ಞಾನವನ್ನು ನೀಡಿ ಮೋಕ್ಷಫಲವನ್ನು ಕೊಡುತ್ತಾಳೆ. ಕೊಡುವ ಶಕ್ತಿ ದೇವರ ಅನುಗ್ರಹದಿಂದ ಅವಳಿಗೆ ಇದೆ. ಅಂಥ ತುಳಸೀದೇವಿಗೆ ನಮಸ್ಕಾರಗಳು.
ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರಿಗೂ ಯಥಾರ್ಥಜ್ಞಾನವನ್ನು ನೀಡಿ ಮೋಕ್ಷವನ್ನು ದಯಪಾಲಿಸಲಿ.
ಸರ್ವೇ ಜನಾಃ ಸುಖಿನೋ ಭವಂತು !
*******
"ತುಳಸೀ ಮತ್ತು ವಿಶೇಷತೆಗಳು..
(ತುಳಸೀ ಹಬ್ಬಕ್ಕಾಗಿ)
" ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||
ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ |
ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್ ||
ಸಕಲ ಕಾರ್ಯದ ಕಲ್ಯಾಣಕ್ಕೆ ಕಾರಣವಾದ , ವಿಷ್ಣುಪ್ರಿಯೆಯಾದ, ಶುಭಸೂಚಕಳಾದ, ಮೋಕ್ಷವೀವಳಾದ, ಸರ್ವಸಂಪತ್ಪ್ರದಾಯಿನಿಯಾದ ಜಗನ್ಮಾತೆ ತುಳಸೀ ದೇವಿಯನ್ನು ನಮಸ್ಕರಿಸುತ್ತೇನೆ..
ತುಳಸೀದೇವಿಯೇ ನಿನ್ನ ಮೂಲದಲ್ಲಿಯೇ ಗಂಗಾದಿ ಸರ್ವ ತೀರ್ಥಗಳು ವಾಸಿಸುತ್ತಿರುವವುದು, ನಿನ್ನ ಮಧ್ಯಭಾಗದಲ್ಲಿ ಇಂದ್ರಾದಿ ಸಕಲ ದೇವತೆಗಳು ವಾಸಿಸುತ್ತಿದ್ದಾರೆ, ನಿನ್ನ ಅಗ್ರಭಾಗದಲ್ಲಿ ಸಕಲ ವೇದಗಳೂ ಇರುವುದರಿಂದ ಅಂತಹ ತುಳಸೀ ದೇವಿಗೆ ನಿತ್ಯವೂ ನಮಸ್ಕಾರ ಮಾಡಬೇಕು..
ಸರ್ವದೇವತೆಗಳ ಪ್ರತ್ಯಕ್ಷ ರೂಪವನ್ನು ಹೊಂದಿರುವ ತುಳಸೀ ದೇವಿಯು ಅತ್ಯಂತ ಪವಿತ್ರಳು, ಶುಭಪ್ರದಳೂ, ಪೂಜ್ಯಳಾಗಿ ಕಾಮಧೇನು, ಕಲ್ಪವೃಕ್ಷದಂತೆ ಕಲಿಯುಗದಲ್ಲಿ ಮಹಿಮಾನ್ವಿತ ಸ್ಥಾನವನ್ನು ಹೊಂದಿರುವವಳು ...
ಇಂತಹ ಅಮೃತ ಸಮಾನವಾದ "ತುಳಸೀ" ಗಿಡದ ಪೂಜೆಯನ್ನು ಮಾಡುವುದು ಎಲ್ಲಾ ಸ್ತ್ರೀಯರ ಪ್ರಮುಖ ಕರ್ತವ್ಯವಾಗಿದೆ..
ಪುರುಷರೂ ಮಾಡಬಹುದು..
"ಕೆಲವು ಮುಖ್ಯ ಸೂಚನೆಗಳು"
೧. ತುಳಸೀ ಪೂಜೆಯನ್ನು ನಿತ್ಯವೂ ಮಾಡುವುದರಿಂದ ಸರ್ವಸೌಭಾಗ್ಯವೂ ದೊರೆಯುತ್ತದೆ..
ಇಲ್ಲದಿದ್ದಲ್ಲಿ ಪ್ರತಿ ತಿಂಗಳ ಶುದ್ಧ ದ್ವಾದಶಿಯಂದು ಮಾಡುವುದೂ ತುಂಬಾ ಮುಖ್ತವಾಗಿರುತ್ತದೆ..
೨. ವಿಶೇಷವಾಗಿ ಪ್ರತೀ ವರ್ಷದ ಕಾರ್ತಿಕಮಾಸದ "ಶುದ್ಧ ದ್ವಾದಶಿ" ಯಂದು ತುಳಸೀಪೂಜೆ ಮಾಡಲೇಬೇಕು..
೩. ತುಳಸೀ ಗಿಡವನ್ನು ನೆಲಕ್ಕಿಂತ ಸ್ವಲ್ಪ ಎತ್ತರದ ಪ್ರದೇಶದಲ್ಲಿ ಬೆಳೆಸಬೇಕು..
೪. ಕಾರ್ತಿಕಮಾಸದಲ್ಲಿ ಪೂರ್ತಿಯಾಗಿ ತುಳಸೀ ಗಿಡದ ಸುತ್ತಲೂ "ನೆಲ್ಲಿ ಕಾಯಿ" ದೀಪವನ್ನು ಬೆಳಗಿ ಪೂಜಿಸಿದರೆ ಉತ್ತಮ ಫಲ ದೊರೆಯುವುದು..
ಹಣದ ಸಮಸ್ಯೆ ನಿವಾರಣೆಯಾಗಿ, ಸಂಸಾರದಲ್ಲಿ ನೆಮ್ಮದಿ ಕಾಣುವಿರಿ..
೫. "ಶ್ರೀ ತುಳಸೀ ಮತ್ತು ಕೃಷ್ಣತುಳಸೀಗೆ ಭೇದವಿಲ್ಲ..
೬. ತುಳಸೀ ಪೂಜೆಯಲ್ಲಿ ಸಿಹಿ ನೈವೇದ್ಯ ಮಾಡಬೇಕು..
೭. ಸ್ನಾನಕ್ಕೆ ಮುಂಚೆ ಮತ್ತು ಊಟದ ನಂತರ ತುಳಸಿಯನ್ನು ಬಿಡಿಸಬಾರದು..
೮. ತುಳಸೀದಳವನ್ನು ಆದಷ್ಟೂ ಅಷ್ಟಮೀ, ಅಮಾವಾಸ್ಯೆ, ಹುಣ್ಣಿಮೆ, ಚತುರ್ದಶೀ, ಸಂಕ್ರಮಣ, ಭಾನುವಾರ, ಮಂಗಳವಾರ, ಶುಕ್ರವಾರಗಳಂದು ಕೀಳಬಾರದು..
(ಅನಿವಾರ್ಯ ಪರಿಸ್ಥಿತಿಯಲ್ಲಿ ಪರವಾಗಿಲ್ಲ)
೯. ಪೂಜೆಗಾಗಿ ಇರಿಸಿರುವ ತುಳಸೀ ಗಿಡದಿಂದ ತುಳಸಿಯನ್ನು ಕೀಳಬಾರದು..
೧೦. ತುಳಸೀ ಗಿಡದ ಮೃತ್ತಿಕೆಯು ಕುಂಕುಮದಂತೆಯೇ ಶ್ರೇಷ್ಠ ಸ್ಥಾನ ಹೊಂದಿದೆ..
ಇದನ್ನು ಧರಿಸಿರುವುದರಿಂದ ಯಾವ ದುಷ್ಟಭಯವೂ ಇರುವುದಿಲ್ಲ ಮತ್ತು ಮಾಟ ಮಂತ್ರ ತಟ್ಟುವುದಿಲ್ಲ..
೧೧. ಲಕ್ಷ್ಮೀ ಪೂಜೆಯನ್ನು ಮಾಡುವವರು ಮೊದಲು ತುಳಸೀ ಪೂಜೆಯನ್ನು ಮಾಡಿ, ನಂತರ ಲಕ್ಷ್ಮೀ ಪೂಜೆ ಮಾಡಿದರೆ ಅತ್ಯಂತ ಶುಭಫಲಗಳು ಶೀಘ್ರವಾಗಿ ಬರುವುದು..
12. ಮನೆಯ ಹತ್ತಿರ ಅಥವಾ ಅಂಗಡಿಯ ಹತ್ತಿರ... ಮಾಟ ಮಂತ್ರದ ವಸ್ತುಗಳು ಬಿದ್ದಿದ್ದರೆ , ಅಂತಹ ವಸ್ತುಗಳ ಮೇಲೆ ತುಳಸೀ ಪತ್ರೆಯನ್ನು ಹಾಕುವುದರಿಂದ , ಆ ಮಾಟ ಮಂತ್ರದಲ್ಲಿನ ವಸ್ತುಗಳ ಶಕ್ತಿ ಪೂರ್ಣವಾಗಿ ಹೊರಟುಹೋಗುತ್ತದೆ..
ಮಾಟ ಮಂತ್ರ ಕೆಲಸ ಮಾಡುವುದಿಲ್ಲ..!
ಇಂತಹ ತುಳಸೀ ಪೂಜೆಯನ್ನು ಪ್ರತಿದಿನ ಮಾಡುವುದು ಅತ್ಯಂತ ಶ್ರೇಯಸ್ಕರವಾದುದು.
**************
ತುಳಸಿಯ ಕೊಯ್ಯುವ ಬಗೆ ತಿಳಿಯೋಣ.
ಪ್ರಸೀದ ಮಮ ದೇವೇಶಿ ಪ್ರಸೀದ ಹರಿ ವಲ್ಲಭೇ। ಕ್ಷೀರೋದ ಮಥನೋದ್ಭೂತೇ ತುಲಸೀ ತ್ವಂ ಪ್ರಸೀದ ಮೇ।।(ದೇವತೆಗಳ ಒಡತಿಯಾದ ತುಳಸಿಯೇ ವಿಷ್ಣು ಪತ್ನಿಯಾದ ನೀನು ನನ್ನ ಮೇಲೆ ಪ್ರಸನ್ನಳಾಗು. ಕ್ಷೀರಸಾಗರವನ್ನು ಮಥಿಸಿದಾಗ ಉದಿಸಿದ ನಿನಗೆ ನನ್ನ ನಮನಗಳು)ಎಂದು ಪ್ರಾಥಿ೯ಸಿ ತುಲಸ್ಯಮೃತ ಜನ್ಮಾಸಿ ಸದಾ ತ್ವಂ ಕೇಶವಪ್ರಿಯೇ। ಕೇಶವಾಥ೯೦ ವಿಚಿನುವೇ ವರದಾ ಭವ ಸುವ್ರತೇ।।(ತುಳಸಿಯೇ ನೀನು ಅಮೃತದಿಂದ ಉದಿಸಿರುವೆ. ಕೇಶವನಿಗೆ ಸದಾ ಪ್ರೀತಿಪಾತ್ರಳಾಗಿರುವೆ.. ಆದ್ದರಿಂದ ಆ ಕೇಶವ ರೂಪೀ ಪರಮಾತ್ಮನ ಪೂಜೆಗಾಗಿ ನಿನ್ನಕೊಯ್ಯುತಿರುವೆ ನನ್ನ ಮೇಲೆ ವರದಾಯಕಳಾಗು) ಎನ್ನುತ್ತಾಉಗುರ ತಾಗಿಸದೇ ಕೊಯ್ಯಬೇಕು.(ಪ್ರಮಾಣ ವಾಕ್ಯ)ನಖ ಸ್ಪಶೇ೯ನ ರಹಿತಂ ಚಿನುಯಾಚ್ಛುಚಿನಾ ಸ್ವಯಂ। ಇದೇರೀತಿ ದೂವಾ೯ದಿ ಸಂಗ್ರಹ ಮಾಡಿಕೊಳ್ಳಬೇಕು. ತುಳಸಿಕೊಯ್ಯುವ ಬಗ್ಗೆ ಇರುವ ಗೊಂದಲ ವಿಮಶೆ೯:-ಭಾನುವಾರೇ ಬೃಗೌ ಭೌಮೇ ವ್ಯತೀಪಾತೇ ಯುಗಾದಿಷು। ನಾಹರೇತ್ತುಲಸೀಪತ್ರಂ ಮಧ್ಯಾಹ್ನೋಪರಿ ವೈಧೃತೌ।। ಸಂಕ್ರಾಂತೇ ಪಕ್ಷಯೋರಂತೇ ದ್ವಾದಶ್ಯಾಂ ನಿಶಿ ಸಂಧ್ಯಯೋಃ। ತುಲಸೀಂ ಯೇ ವಿಚಿನ್ವಂತಿ ತೇ ವೈ ಬ್ರಹ್ಮಹಣಾ ಸ್ಮೃತಾಃ।।(ಭಾನುವಾರ,ಶುಕ್ರವಾರ,ಮಂಗಳವಾರ,ವ್ಯತೀಪಾತ ಯೋಗವಿರುವ ದಿನ ,ನಾಲ್ಕು ಯುಗಾದಿಗಳಲ್ಲಿ ತುಲಸಿಯನ್ನು ಕೊಯ್ಯಬಾರದು. ಮಧ್ಯಾಹ್ನಾನಂತರ ವೈಧೃತಿ ಯೋಗವಿರುವ ದಿನ ಸಂಕ್ರಂತಿ ಪಕ್ಷಗಳೆರಡರ ಕೊನೇ ದಿನ ದ್ವಾದಶೀ ರಾತ್ರಿ ಮಧ್ಯಾಹ್ನ ಹಾಗೂ ಸಾಯಂ ಸಂಧ್ಯಾ ಕಾಲಗಳಲ್ಲಿ ತುಲಸಿಯನ್ನು ಕೊಯ್ಯುವುದು ನಿಷಿದ್ದ. ಈ ಕಾಲದಲ್ಲಿ ಯಾರು ತುಲಸೀ ತೆಗೆಯುತ್ತಾರೋ ಅವರಿಗೆ ಬ್ರಹ್ಮಹತ್ಯಾ ದೋಷವು ಬರುತ್ತದೆ) ಅಪವಾದ ವಾಕ್ಯ.ನಿಷಿದ್ಧ ದಿವಸೇ ವಾsಪಿ ಚಾಮಾವಾಸ್ಯಾಹನಿ ದ್ವಿಜಾಃ। ತುಲಸ್ಯಾಹರಣಂ ಶಸ್ತಂ ಮಮಾಚಾ೯ಯಾಂತು ಶಾಂಡಿಲ।। ದೇವಾಥೇ೯ತುಲಸೀ ಛೇದೇ ಹೋಮಾಥೇ೯ಸಮಿಧಸ್ತಥಾ। ಇಂದುಕ್ಷಯೇ ನ ದುಷ್ಯೇತ ಗವಾಥೇ೯ತು ತೃಣಸ್ಯ ಚ।(ಇತಿ ಪಾದ್ಮೇ)(ಹಿಂದೆ ನಿಷೇಧಿಸಿಹ ದಿನಗಳಲ್ಲಿಪರಮಾತ್ಮನಿಗಾಗಿ ತುಲಸೀ,ಹೋಮಕ್ಕಾಗಿ ಸಮಿತ್ತು ಹಸುಗಳಿಗಾಗಿ ಹುಲ್ಲು ಕೊಯ್ಯುವುದು ದೋಷಕಾರಣವಾಗಲಾರದು) ಸಂಕ್ರಾಂತ್ಯಾದಿ ನಿಷೇಧಸ್ತು ಪರೇಷಾಂ ಪರಿಕೀತಿ೯ತಃ। ಕ್ವಚಿನ್ನ ತುಲಸೀಂ ಛಿಂದ್ಯಾತ್ದ್ವಾದಶ್ಯಾಮೇವ ವೈಷ್ಣವಃ।।(ಗಾರುಡ) ಅನ್ಯೇ ವಿಧಿ ನಿಷೇಧಾಸ್ತು ಅನ್ಯಯೋರೇವ ಕೇವಲಂ ವೈಷ್ಣವೈಸ್ತು ಸದಾ ಗ್ರಾಹ್ಯಾ ತುಲಸೀ ದ್ವಾದಶೀಂ ವಿನಾ।।(ಹಿಂದೆ ಹೇಳಿದ ನಿಷಿದ್ಧ ದಿನಗಳು ಅಮಾವಾಸ್ಯ ಹುಣ್ಣಿಮೆನಿತ್ಯ ಪೂಜಾ ವಿಧಿಯುಳ್ಳ ವೈಷ್ಣವರುತುಲಸಿಕೊಯ್ದರೂ ದೋಷವಿಲ್ಲ. ಆದರೆ ದ್ವಾದಶೀ ದಿನ ಯಾವುದೇ ಕಾರಣಕ್ಕೂ ತುಲಸಿ ಕೊಯ್ಯಬಾರದು. ಉಳಿದ ವಿಧಿ ನಿಷೇದಾದಿಗಳು ಇತರರಿಗೇ ಹೊರತು ನಿತ್ಯ ಶಾಲಗ್ರಾಮಾಚ೯ನೆ ಮಾಡುವವರಿಗಲ್ಲ)
********
ಬಾಡಿ ಹೋದ ತುಳಸಿಯನ್ನು ತೆಗೆಯಬಹುದೇ, ಹೌದಾದರೆ ಕ್ರಮವನ್ನು ತಿಳಿಸಿ. ಮತ್ತು ಆ ತುಳಸೀ ಗಿಡವನ್ನು ಏನು ಮಾಡಬೇಕು ಎನ್ನುವದನ್ನೂ ಓದಿ
ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ.
ಆ ನಂತರ ಗಿಡ ಬಾಡಿ ಹೋಗುತ್ತದೆ. ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು.
ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು. ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯತಕ್ಕದ್ದಲ್ಲ.
ದ್ವಾದಶಿಯಂತೂ ಸರ್ವಥಾ ತೆಗೆಯಬಾರದು. ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು.
ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ.
ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು.
(ಆದರೆ ದೇವರ ಪೂಜೆಗೆ ತುಳಸಿಯನ್ನು ಬಿಡಿಸುವಂತಿಲ್ಲ. ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.)
ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು.
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು.
ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು.
ಸ್ವಲ್ಪ ದಪ್ಪ ಗಾತ್ರದ ಕಡ್ಡಿಗಳನ್ನು ದೀಪ ಹಚ್ಚಲು ಉಪಯೋಗಿಸಬೇಕು.
ಬೆಂಕಿ ಕಡ್ಡಿಯಿಂದ ಮತ್ತು ಹೂಬತ್ತಿ ಮಂಗಳಾರತಿ ಬತ್ತಿಗಳಿಂದ ದೀಪ ಹಚ್ಚಬಾರದು.
ಮೊದಲು ತುಳಸೀಕಾಷ್ಠವನ್ನು ಹಚ್ಚಿಕೊಂಡು ಆ ತುಳಸೀಕಾಷ್ಠದಿಂದಲೇ ದೀಪಗಳನ್ನು ಹಚ್ಚಬೇಕು.
ಇನ್ನೂ ಸ್ವಲ್ಪ ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು.
ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು.
ದೇವರಿಗೆ ಅತ್ಯಂತ ಪ್ರಿಯ. ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು.
ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ.
ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ.
ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು.
ದೇವರಿಗೆ ಅತ್ಯಂತ ಪ್ರಿಯ. ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ.
"ಯದ್ಯೇಕಂ ತುಲಸೀಕಾಷ್ಠಂ ಮಧ್ಯೇ ಕಾಷ್ಠಶತಸ್ಯ ಚ ದಾಹಕಾಲೇ ಭವೇನ್ಮುಕ್ತಿಃ ಪಾಪಕೋಟಿಯುತಸ್ಯ ಚ"
ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು.
ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು.
ಯಾವ ಕಾರಣಕ್ಕೂ ಬಿಸಾಡಬಾರದು.
**********
from: ವಿಜಯಲಕ್ಷ್ಮೀ ಬೆಂಗಳೂರು
ಕಾರ್ತಿಕ ಮಾಸದಲ್ಲಿ ತುಳಸಿ ಮದುವೆ ಪ್ರಸಿದ್ಧ ಹಬ್ಬ. ಮಠ-ಮಂದಿರಗಳಲ್ಲಿ ಸಾಲು, ಸಾಲು ದೀಪಗಳ ಸಂಭ್ರಮ. ಮನೆ, ಮನೆಯೂ ಹಣತೆಯ ಸಾಲುಗಳಿಂದ ಕಂಗೊಳಿಸುತ್ತದೆ. ಪ್ರತಿ ಹಿಂದು ಧರ್ವಿುಯರ ಮನೆಯ ಅಂಗಳದಲ್ಲಿಯೂ ಕಾಣಸಿಗುವ ಪವಿತ್ರ ಗಿಡ ತುಳಸಿ. ಸಾವಿರಾರು ವರ್ಷಗಳಿಂದ ತುಳಸಿಯನ್ನು ನಾವು ಪೂಜಿಸುತ್ತ ಬಂದಿದ್ದೇವೆ. ಔಷಧ ಗುಣವುಳ್ಳ ಪವಿತ್ರ ತುಳಸಿಯನ್ನು ಪೂಜಿಸುವ ತುಳಸಿ ಹಬ್ಬ ತುಳಸಿ ಮದುವೆ. ಉತ್ಥಾನ ದ್ವಾದಶಿಯಂದು ಮದುವೆ ಎಂದು ಕರೆಯುವ ಪೂಜೆ ಜರುಗುವುದು ವಿಶೇಷ.
ಆಷಾಢ ಮಾಸದ ಪ್ರಥಮ ಏಕಾದಶಿಯಂದು ಆರಂಭವಾಗುವ ಚಾತುರ್ಮಾಸ ವ್ರತ ಈ ಉತ್ಥಾನ ದ್ವಾದಶಿಯಂದು ಪರಿಸಮಾಪ್ತಿಗೊಳ್ಳುತ್ತದೆ. ಈ ದಿನ ಕಳೆದ ನಾಲ್ಕು ತಿಂಗಳ ಕಾಲ ಯೋಗನಿದ್ರೆಯಲ್ಲಿರುವ ವಿಷ್ಣುವನ್ನು ಎಬ್ಬಿಸಿ, ತುಳಸಿಯೊಂದಿಗೆ ವಿವಾಹ ಮಾಡಲಾಗುತ್ತದೆ. ತುಳಸಿಗೂ ಭವ್ಯ ಪೌರಾಣಿಕ ಹಿನ್ನೆಲೆಯಿದೆ. ಸಮುದ್ರಮಥನ ಸಮಯದಲ್ಲಿ ಬಂದು ಅಮೃತ ಕಳಸವನ್ನು ಮಹಾವಿಷ್ಣು ಪಡೆದುಕೊಳ್ಳುವಾಗ ಆತನ ನೇತ್ರದಿಂದ ಆನಂದಬಾಷ್ಪ ಉಕ್ಕಿ ಬಂತು. ಅದರ ಒಂದು ಹನಿ ಕಳಸದಲ್ಲಿ ಬಿದ್ದಾಗ ತುಳಸಿ ಗಿಡವಾಯಿತು. ಅಮೃತದಿಂದ ಹುಟ್ಟಿದ ತುಳಸಿಯನ್ನು ಯಾವ ವಿಧದಿಂದ ಪ್ರಯೋಗಿಸಿದರೂ ಸಮಸ್ತ ಮಾನವಕೋಟಿಗೆ ಅಮೃತಮಯ.
ತುಳಸಿಗೆ ವೇದಗಳ ರೂಪ ನೀಡಲಾಗಿದೆ. ಋಗ್ವೇದವೇ ತುಳಸಿಯ ಶರೀರ, ಯಜುರ್ವೆದವೇ ಅವಳ ಮನಸ್ಸು, ಕಲ್ಪಗಳೇ ತುಳಸಿಯ ಹಸ್ತ, ಅಥರ್ವವೇದವೇ ತುಳಸಿಯ ಪ್ರಾಣ. ತುಳಸಿ ಹಬ್ಬದಂದು ನೆಲ್ಲಿ ಟೊಂಗೆಯನ್ನು ಬೃಂದಾವನದಲ್ಲಿ ನೆಟ್ಟು, ನೆಲ್ಲಿಕಾಯಿಯಿಂದಲೇ ಸಂಜೆ ಆರತಿ ಬೆಳಗುವುದು ವಿಶೇಷ. ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ. ಧಾತ್ರಿ ಎಂದರೆ ಲಕ್ಷೀ ಎಂದರ್ಥ. ತುಳಸಿ ಎಲ್ಲಿದೆಯೋ ಅಲ್ಲಿ ಹರಿ ಸನ್ನಿಧಾನವಿದೆ. ಹೀಗಾಗಿ, ಶ್ರೀಹರಿಯ ಜತೆ ಲಕ್ಷ್ಮೀಯನ್ನು ಪೂಜಿಸುವ ಉದ್ದೇಶದಿಂದ ನೆಲ್ಲಿಯ ಟೊಂಗೆಯನ್ನು ತುಳಸಿಯ ಜತೆ ಇಟ್ಟು ತುಳಸಿಗೆ ಮದುವೆ ಮಾಡುತ್ತಾರೆ.
ಸರ್ವರೋಗ ನಿವಾರಕ
ದಿನದ ಪೂಜೆಯಲ್ಲಿಯೂ ಶ್ರೇಷ್ಠವಾದದ್ದು ತುಳಸಿ ಪೂಜೆ. ಸಂಸ್ಕೃತದಲ್ಲಿ ತುಳಸಿ, ಸುಲಭಾ, ಸುರನಾ, ಬಹುಮಂಜರಿ, ಶೂಲಘೀ, ದೇವದುಂದುಭಿ, ಪಾವನಿ, ವಿಷ್ಣುಪ್ರಿಯಾ, ದಿವ್ಯಾ, ಭಾರತೀ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿ ಸರ್ವರೋಗ ನಿವಾರಕ. ತುಳಸಿಯು ಸುತ್ತಮುತ್ತಲಿನ ಗಾಳಿಯನ್ನು ಪರಿಶುದ್ಧಗೊಳಿಸುತ್ತದೆ. ಸುಗಂಧದ್ರವ್ಯ ತುಳಸಿಯಲ್ಲಿ ಏಳು ವಿಧಗಳಿವೆ. ಅದರಲ್ಲಿ ಮುಖ್ಯವಾದುದು ಶ್ರೀ ತುಳಸಿ, ಕೃಷ್ಣ ತುಳಸಿ. ಇದರ ಎಲೆ, ಬೇರು, ಬೀಜ ಹಾಗೂ ಸಂಪೂರ್ಣ ಗಿಡವೇ ಉಪಯುಕ್ತ ಎನ್ನುವುದು ತುಳಸಿಯ ವಿಶೇಷ. ನಮಗೆ ಸಕಲ ವಿಧದ ಉಪಯೋಗವನ್ನು ಕೊಡುವ ಸಸ್ಯವೊಂದನ್ನು ದೈವೀ ಭಾವದಿಂದ ಪೂಜಿಸುವ ನಿಟ್ಟಿನಲ್ಲಿ ತುಳಸಿ ಕಾರ್ತಿಕ ಗಮನ ಸೆಳೆಯುತ್ತದೆ. ಜ್ಞಾನದ ಬೆಳಕಿನಲ್ಲಿ ಉತ್ತಮ ಚಿಂತನೆಗಳು ಪುನರುತ್ಥಾನಗೊಳ್ಳಲು ಉತ್ಥಾನ ದ್ವಾದಶಿ ಪ್ರೇರಕವಾಗಬೇಕಿದೆ.
ಸಂಜೀವಿನಿ
ತುಳಸಿಯ ವಿಶಿಷ್ಟ ಸುವಾ ಸನೆಯು ಕ್ರಿಮಿಕೀಟಗಳನ್ನು ದೂರವಿಡುತ್ತದೆ. ಶೀತ, ನೆಗಡಿ, ಕೆಮ್ಮು ಮೊದಲಾದ ಕಾಯಿಲೆಗಳು ತುಳಸಿಯ ಎಲೆಯಿಂದ ವಾಸಿಯಾಗುತ್ತವೆ. ಇದರಲ್ಲಿ ವಿಷಾಣುಗಳನ್ನು ನಾಶಪಡಿಸುವ ಶಕ್ತಿಯಿದೆ. ಬೃಂದಾವನದಲ್ಲಿ ಉದುರಿರುವ ತುಳಸಿ ಎಲೆಗಳಿಂದ ಮಣ್ಣುಗೂಡಿರುವ ಮೃತ್ತಿಕೆಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಬ್ರಾಹ್ಮಿ ಮುಹೂರ್ತದಲ್ಲಿ ಇದರ ಸೇವನೆ ಹೆಚ್ಚು ಫಲಕಾರಿ. ತುಳಸಿ ಭಾರತೀಯರ ಪಾಲಿಗೆ ಸಂಜೀವಿನಿ. ಯಾವುದೇ ಪೂಜಾ ಸಮಯದಲ್ಲಿ ನೈವೇದ್ಯಕ್ಕೆ ತುಳಸಿದಳಗಳನ್ನು ಸೇರಿಸುವುದು ಇದರ ಪಾವಿತ್ರ್ಯ್ಕೆ ಸಾಕ್ಷಿ. ದಾನ ಕೊಡುವ ಸಂದರ್ಭದಲ್ಲಿಯೂ ತುಳಸಿದಳ ಹಾಕಬೇಕು ಎಂಬುದು ಸಂಪ್ರದಾಯ. ಹೀಗೆ ತುಳಸಿಯ ಮೃತ್ತಿಕೆ, ತೀರ್ಥ, ದಳ, ತೆನೆ ಎಲ್ಲವೂ ನಿತ್ರ ಪವಿತ್ರವೇ. ಇಂಥ ಪವಿತ್ರ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ತುಳಸಿಗೆ ಉತ್ಥಾನ ದ್ವಾದಶಿಯಂದು ಪೂಜೆ ಸಲ್ಲಿಸಿ ಧನ್ಯರಾಗೋಣ.
**********
ಶ್ರೀ ತುಳಸಿ ಮಹಿಮೆಯ ಹಾಡು
ರಾಗ: ಭೂಪಾಳಿ
ಶ್ರೀ ತುಳಸಿಯಾ ಸೇವಿಸಿ ||ಪ||
ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ
ಗಾತರದ ಮಲವಳಿದು ಮಾತೆಯೆಂಬನಿತರೊಳು
ಪಾತಕ ಪರಿಹರಿಸಿ ಪುನೀತರನು ಮಾಡುವಳು
ಯಾತಕನುಮಾನವಯ್ಯಾ ||ಅ||ಪ||
ಸುಧೆಗಡಲ ಮಧಿಸುವ ಸಮಯದಲಿ ವೈದ್ಯನಾಗಿ
ಪದುಮನಾಭನು ತಾನು ಉದುಭವಿಸಿ ಬರಲ೦ದು
ಉದುರಿದವು ಕಣ್ಣಿಂದ ಉದಕ ಉತ್ಸಾಹದಿಂದಲದೆ
ತುಳಸಿನಾಮವಾಗೇ ||
ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು
ಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ
ತ್ಪದವಿಗೆ ಸಿದ್ದವೆಂದು ಮುದದಿಂದ ತಿಳಿದು
ವೃಂದಾವನ ರಚಿಸಿದರಯ್ಯಾ ||೧||
ರಾಗ: ಮಲಯಮಾರುತ
ಮೂಲದಲಿ ಸರ್ವತೀರ್ಥಗಳುಂಟು ತನ್ಮಧ್ಯೆ
ಕಾಲ ಮೀರದೆ ಸರ್ವನದನದಿಗಳಮರಗಣ
ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು
ವಾಲಯವಾಗಿಪ್ಪುದು ||
ಮೂರ್ಲೋಕಗಳ ಧರ್ಮವ್ರತಕೆ ಮಿಗಿಲೆನಿಸುವುದು
ನೀಲೆಮೇಘಶ್ಯಾಮ ಗರ್ಪಿಸಿದ ತುಳಸಿ ನಿ
ರ್ಮಾಲ್ಯವನು ಸತತ ಕರ್ಣದಲಿ ಧರಿಸಿದ ಮನುಜ
ಕಾಲನಾಳಿಗೆ ಶೂಲನೋ ||೨||
ರಾಗ: ರಂಜಿನಿ
ಉದಯದೊಳಗೆದ್ದು ನೀರೆರೆದು ಮಜ್ಜನಗೈದು
ತುದಿಬೆರಳಿನಿಂದ ಮೃತ್ತಿಕೆ ಫಣೆಯೊಳಿಟ್ಟು
ಮುದದಿಂದಲೊಂದು ಪ್ರದಕ್ಷಿಣೆ ನಮಸ್ಕಾರ
ತದನಂತರದಲಿ ಭಜನೇ ||
ವದನದೊಳುಗೈಯೆ ಧರೆಯಮೇಲಿದ್ದ ಸರ್ವ
ನದನದಿಗಳಿಗೆ ನೂರ್ಮಡಿಯಾತ್ರೆ ಮಾಡಿದ ಫಲ
ಒದಗುವುದು ಹಿಂದಣಾನಂತ ಜನ್ಮಗಳಘವ
ತುದಿಮೊದಲು ದಹಿಪುದಯ್ಯಾ ||೩||
ರಾಗ: ಬಿಲಹರಿ
ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ
ಆವವನ ಮನೆಯಲ್ಲಿ ಹರಿದಾಸರಾ ಕೂಟ
ಆವವನ ಭುಜದಲ್ಲಿ ತಪ್ತ ಮುದ್ರಾಂಕಿತವು
ಪಾವಮಾನಿಯ ಮತದೊಳು
ಆವವನು ಕಾಲತ್ರಯ ಕಳೆವನಾವಲ್ಲಿ
ಶ್ರೀ ವಾಸುದೇವ ಮುನಿದೇವಾದಿ ಗಣಸಹಿತ
ಕಾವುತ್ತಲಿಪ್ಪ ಬಲಿಗೊಲಿದಂತೆ ತೊಲಗದೆಲೆ
ಭಾವಿಸಿರಿ ಭಾವಜ್ಜ್ನರೂ ||೪||
ರಾಗ: ಅಠ್ಠಾಣ:
ಕಂಡರೆ ದುರಿತಕ್ಕೆ ಕೆಂಡವನು ಬೀರುವುದು
ಕೊಂಡಾಡಿದರೆ ಪುಣ್ಯವಪರಿಮಿತ ಉಂಟು ಮೈ
ದಿಂಡುಗೆಡಹಿದರೆ ಪುನರಪಿಜನನವಿಲ್ಲ ಸಲೆ
ದಂಡವಿಟ್ಟವ ಮುಕ್ತನೋ ||
ಚಂಡಾಲಕೇರಿಯೊಳು ಇರಲು ಹೀನಯವಲ್ಲ
ಪಾಂಡುರಂಗಕ್ಷೇತ್ರ ಸರಿಮಿಗಿಲು ಎನಿಸುವುದು
ತಂಡತಂಡದ ಕುಲಕೆ ಅವರವರ ಯೋಗ್ಯಫಲ
ಕಂಡವರಿಗುಂಟೆ ಅಯ್ಯಾ ||೫||
ರಾಗ: ಮೋಹನ:
ಚಿತ್ತಶುದ್ದನ ಆಗಿ ಮುಂಜಾನೆಯೊಳು ತುಳಸಿ
ಸ್ತೋತ್ರವನು ಮಾಡುತ್ತ ದಿವ್ಯವಾಗಿಹ ತ್ರಿದಳ
ಪ್ರತ್ಯೇಕ ಪಾತ್ರೆಯಲಿ ತೆಗೆದು ಶೋಧಿಸಿ ತುಂಬಿ
ವಿತ್ತಾದಿಯಲಿತಾರದೇ ||
ಮತ್ತೆ ವಸ್ತ್ರದಿ ಹಸ್ತಶಿಲೆ ಆರ್ಕಏರಂಡ
ಪತ್ರದಲಿ ತಾರದೆಲೆ ಭೂಮಿಯೊಳಗಿಡದೆ ಪೂ
ರ್ವೋತ್ತರಭಿಮುಖನಾಗಿ ಭಕ್ತಿಯಿಂ ತರಬೇಕು
ಹೊತ್ತು ಮೀರಿಸಲಾಗದು ||೬||
ರಾಗ: ಷಣ್ಮುಖಪ್ರಿಯ:
ಕವಿ ಮಂಗಳವಾರ ವೈಧೃತಿ ವೃತೀಪಾತ
ರವಿಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಟ ಉಪರಾಗ ಪಿತೃಶ್ರಾದ್ದ
ಇವುಗಳಲಿ ತೆಗೆಯದಿರೀ ||
ನವವಸನಪೊದ್ದು ಊಟವ ಮಾಡಿ ತಾಂಬೂಲ
ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ
ಸುವುದುಚಿತವಲ್ಲೆಂದು ತಿಳಿದು ಕೊಂಡಾಡುತಿರಿ
ದಿವಸ ದಿವಸಗೊಳೊಳಯ್ಯಾ ||೭||
ರಾಗ: ಸಿಂಧುಭೈರವಿ
ದಳವಿದ್ದರೇ ಒಳಿತು ಇಲ್ಲದಿದ್ದರೆ ಕಾಷ್ಟ
ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು
ತುಳಸಿ ನಿರ್ಮಾಲ್ಯವಾದರೂ ತ್ರಿವಾರದಲಿ ತೊಳೆದು
ತೊಳೆದೇರಿಸಲಿ ಬಹುದೂ ||
ತುಳಸಿ ಒಣಗಿದ್ದರೂ ಲೇಶದೋಶಗಳಲ್ಲ
ತುಳಸಿ ವಿರಹಿತ ಪೂಜೆಯದು ಸಲ್ಲದೋ
ತುಳಸೀ ತುಳಸೀ ಎಂದು ಸ್ಮರಣೆಯಾದರೂ ಮಾಡಿ
ಜಲಜಾಕ್ಷನರ್ಚಿಸಿರಯ್ಯಾ ||೮||
ರಾಗ: ಕಾನಡ
ತುಳಸಿ ಇಲ್ಲದ ಸದನ ಹೊಲೆಮಾದಿಗರ ಸದನ
ತುಳಸಿ ಇಲ್ಲದ ಬೀದಿ ನರಕಕೆಳೆಸುವ ಹಾದಿ
ತುಳಸಿ ಇಲ್ಲದ ತೀರ್ಥವೆಂದಿಗಿದ್ದರೂ ವ್ಯರ್ಥ
ತುಳಸಿ ಬಲು ಪ್ರಾಧಾನ್ಯವೋ ||
ತುಳಸಿ ಮಿಶ್ರಿತವಾದ ನೈವೇದ್ಯಗತಿ ಸಾಧ್ಯ
ತುಳಸಿ ಧರಿಸಿದ ದೇಹ ಪರಮ ಸಾರ್ಥಕವೈಯ್ಯ
ತುಳಸಿದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ
ನೆಲೆಯ ನಾಗಾಣೆನಯ್ಯಾ ||೯||
ರಾಗ: ಸುರುಟಿ
ಶಿವನ ಸತಿ ಪ್ರಹ್ಲಾದ ನಾರದ ವಿಭೀಷಣನು
ಧ್ರುವ ಅಂಬರೀಶ ಶಶಿಬಿಂದು ರುಕುಮಾಂಗದನು
ಇವರೆ ಮೊದಲಾದವರು ಭಕುತಿ ಪೂರ್ವಕದಿಂದ
ವಿವರವನು ತಿಳಿದರ್ಚಿಸೀ ||
ತವಕದಿಂ ತಂತಮ್ಮ ಘನಪದವನೈದಿದರು
ಭುವನದೊಳಗುಳ್ಳ ನಿರ್ಮಲಜನರು ಭಜಿಸಿದರು
ಜವಭಟರನೋಡಿಸೀ ಜಡದೇಹವನು ನೀಗಿ
ಭವ ದೂರರಾದರಯ್ಯಾ ||೧೦||
ರಾಗ: ಮಧ್ಯಮಾವತಿ:
ಉದಯಕಾಲದೊಳೆದ್ದು ಆವನಾದರೂ ತನ್ನ
ಹೃದಯನಿರ್ಮಲನಾಗಿ ಭಕುತಿಪೂರ್ವಕದಿಂದ
ಸದಮಲಾ ತುಳಸಿಯನು ಸ್ತೋತ್ರಮಾಡಿದ ಕ್ಷಣಕೆ
ಮದಗರ್ವ ಪರಿಹಾರವೋ ||
ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿ
ನದಿಯ ತೀರದಲ್ಲೊಬ್ಬ ಭೂಸುರ ಪದಕೆ ಪೋದ
ಪದೆಪದೆಗೆ ಸಿರಿ ವಿಜಯ ವಿಠ್ಠಲಗೆ ಪ್ರಿಯಳಾದ
ಮದನತೇಜಳ ಭಜಿಸಿರಯ್ಯಾ ||೧೧||
ಶ್ರೀ ತುಳಸಿಯಾ ಸೇವಿಸಿ ||ಪ||
************
**********
ತಂ ನಾರಸಿಂಹಂ ನಮಾಮಿ !
ತುಳಸೀ ಮಾಹಾತ್ಮ್ಯಂ :-
(ತುಳಸೀದೇವಿಸ್ತೋತ್ರಂ)
ಪುಷ್ಕರಾದ್ಯಾನಿ ತೀರ್ಥಾನಿ
ಗಂಗಾದ್ಯಾಃ ಸರಿದಸ್ತಥಾ !
ವಾಸುದೇವಾದಯೋ ದೇವಾಃ
ವಸಂತಿ ತುಳಸೀವನೇ !! ೨ !!
ಅರ್ಥ :- ಪುಷ್ಕರತೀರ್ಥವೇ ಮೊದಲಾದ ಸಕಲತೀರ್ಥಗಳು, ಹಾಗೂ ಗಂಗಾನದಿಯೇ ಮೊದಲಾದ ಸಕಲನದಿಗಳು ಹಾಗೂ ನಾರಾಯಣದೇವರು ಅವನ ಜೊತೆಗೆ ಸಕಲದೇವತೆಗಳು ತುಳಸೀವನದಲ್ಲಿ (ತುಳಸೀಗಿಡದಲ್ಲಿ) ವಾಸವಾಗಿರುತ್ತಾರೆ. ವಿಶೇಷವಾಗಿ ಸನ್ನಿಹಿತರಾಗಿರುತ್ತಾರೆ.
ತುಳಸೀಗಿಡದಲ್ಲಿ ಎಲ್ಲಾ ದೇವತೆಗಳ, ಎಲ್ಲಾ ನದಿಗಳ, ಎಲ್ಲಾ ತೀರ್ಥಗಳ ವಿಶೇಷ ಸನ್ನಿಧಾನ ಇರುತ್ತದೆ. ಆದ್ದರಿಂದಲೇ ತುಳಸಿದೇವಿಗೆ ಅಪಾರವಾದ ಮಹತ್ವ ಕೊಟ್ಟಿದ್ದಾರೆ.
ಎಲ್ಲರಿಗೂ ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲಾ ನದಿ ತೀರ್ಥಸ್ನಾಗಳ ಪುಣ್ಯವನ್ನು ಕರುಣಿಸಿ ಅನುಗ್ರಹಿಸಲಿ.
ಎಲ್ಲರಿಗೂ ಬಲಿಪ್ರತಿಪದಾ ಹಬ್ಬದ ಹಾರ್ದಿಕ ಶುಭಾಷಯಗಳು
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
*******
ತಂ ನಾರಸಿಂಹಂ ನಮಾಮಿ !
ತುಳಸೀಮಾಹಾತ್ಮಂ :-
(ತುಳಸಿದೇವಿಸ್ತೋತ್ರಂ)
ತುಳಸೀಕಾನನಂ ಯತ್ರ
ಯತ್ರ ಪದ್ಮವನಾನಿ ಚ !
ವಸಂತಿ ವೈಷ್ಣವಾ ಯತ್ರ
ತತ್ರ ಸನ್ನಿಹಿತೋ ಹರಿಃ !! ೩ !!
ಅರ್ಥ :- ಎಲ್ಲಿ ತುಳಸೀವನ (ತುಳಸೀಗಿಡ) ಇರುತ್ತೋ, ಎಲ್ಲಿ ಪದ್ಮವನ ಇರುತ್ತವೋ, ಎಲ್ಲಿ ವೈಷ್ಣವರು ವಾಸವಾಗಿರ್ತಾರೋ ಅಲ್ಲೆಲ್ಲಕಡೆಗೂ ದೇವರು ವಿಶೇಷವಾಗಿ ಸನ್ನಿಹಿತನಾಗಿರ್ತಾನೆ.
ತುಳಸಿದೇವಿ ಅವಳ ಅಂತರ್ಗತ ದಾಮೋದರನು ಎಲ್ಲರಿಗೂ ಜ್ಞಾನವನ್ನು ನೀಡಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
********
ತಂ ನಾರಸಿಂಹಂ ನಮಾಮಿ !
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಯನ್ಮೂಲೇ ಸರ್ವತೀರ್ಥಾನಿ
ಯನ್ಮಧ್ಯೇ ಸರ್ವದೇವತಾಃ !
ಯದಗ್ರೇ ಸರ್ವವೇದಾಶ್ಚ
ತುಲಸಿ ತ್ವಾಂ ನಮಾಮ್ಯಹಂ !! ೪ !!
ಅರ್ಥ :- ಯಾವ ಗಿಡದ ಮೂಲದಲ್ಲಿ (ಬೇರು ಇರುವ ಸ್ಥಳದಲ್ಲಿ) ಸಕಲತೀರ್ಥಗಳು ಇವೆಯೋ, ಯಾವ ಗಿಡದ ಮಧ್ಯಭಾಗದಲ್ಲಿ ಸಕಲದೇವತೆಗಳು ವಾಸವಾಗಿದ್ದಾರೋ, ಯಾವ ಗಿಡದ ಮೇಲಿನ ಭಾಗದಲ್ಲಿ ಸಕಲವೇದಗಳು ಇವೆಯೋ ಅಂಥ ತುಳಸಿದೇವಿಯೇ ನಿನಗೆ ನಾನು ನಮಸ್ಕಾರ ಮಾಡುತ್ತೇನೆ ಅಂತ ಪ್ರಾರ್ಥನೆ.
ತುಳಸೀಗಿಡದ ಕೆಳಗಿನ ಭಾಗದಲ್ಲಿ ಸಕಲತೀರ್ಥಗಳು ಸನ್ನಿಹಿತವಾಗಿವೆ, ಮಧ್ಯಭಾಗದಲ್ಲಿ ಎಲ್ಲಾ ದೇವತೆಗಳು ಸನ್ನಿಹಿತರಾಗಿದ್ದಾರೆ, ಮೇಲಿನ ಭಾಗದಲ್ಲಿ ಎಲ್ಲಾ ವೇದಗಳು ಸನ್ನಿಹಿತವಾಗಿವೆ ಇಷ್ಟೆಲ್ಲಾ ಸನ್ನಿಧಾನದಿಂದ ಕೂಡಿದ್ದು ತುಳಸೀಗಿಡ.
ತುಳಸಿದೇವಿಯು ಅಂತರ್ಗತ ದಾಮೋದರನು ನಮ್ಮನ್ನು ಪವಿತ್ರರನ್ನಾಗಿ ಮಾಡಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
*******
ತಂ ನಾರಸಿಂಹಂ ನಮಾಮಿ !
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ತುಳಸ್ಯಮೃತಜನ್ಮಾsಸಿ
ಸದಾ ತ್ವಂ ಕೇಶವಪ್ರಿಯೇ !
ಕೇಶವಾರ್ಥೇ ಚಿನೋಮಿ ತ್ವಾಂ
ವರದಾ ಭವ ಶೋಭನೇ !! ೭ !!
ಅರ್ಥ :- ಹೇ ತುಳಸಿದೇವಿ ನೀನು ಜನ್ಮ ಮರಣ ಇಲ್ಲದೇ ಯಾವಾಗಲೂ ಇರುವವಳು. ಯಾವಾಗಲೂ ದೇವರಿಗೆ ಪ್ರಿಯಳಾದವಳು. ಅಂಥ ದೇವರಿಗೆ ಪ್ರಿಯಳಾದ ನಿನ್ನನ್ನು ದೇವರ ಪೂಜೆಗೋಸ್ಕರ ಉಪಯೋಗಿಸುತ್ತೇವೆ ನಮಗೆ ಮಂಗಳವನ್ನುಂಟು ಮಾಡು ಅಂತ ಪ್ರಾರ್ಥನೆ.
ತುಳಸಿದೇವಿ ಅಂತರ್ಗತ ದಾಮೋದರನು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ.
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಮೋಕ್ಷೈಕಹೇತೋರ್ಧರಣೀಧರಸ್ಯ
ವಿಷ್ಣೋಃ ಸಮಸ್ತಸ್ಯ ಗುರೋಃ ಪ್ರಿಯಸ್ಯ !
ಆರಾಧನಾರ್ಥಂ ಪುರುಷೋತ್ತಮಸ್ಯ
ಛಿಂದೇ ದಲಂ ತೇ ತುಳಸಿ ಕ್ಷಮಸ್ವ !! ೮ !!
ಅರ್ಥ :- ಹೇ ತುಳಸಿದೇವಿ ಮೋಕ್ಷವನ್ನು ಕೊಡಲಿಕ್ಕೆ ಮುಖ್ಯ ಕಾರಣನಾದ, ಭೂಮಿಯನ್ನು ಧರಿಸಿದ, ಎಲ್ಲಾ ಗುರುಗಳಿಗೂ ಪ್ರಿಯನಾದ, ಆ ಪುರುಷೋತ್ತಮಸ್ವರೂಪಿಯಾದ ವಿಷ್ಣುವಿನ ಆರಾಧನೆಗಾಗಿ (ಪೂಜೆಗಾಗಿ) ನಿನ್ನನ್ನು (ನಿನ್ನ ದಳವನ್ನು) ಛೇದಿಸುತ್ತೇನೆ (ಬಿಡಿಸುತ್ತೇನೆ) ಅಂತ ಪ್ರಾರ್ಥನೆ ಮಾಡಿ ತುಳಸೀದಳಗಳನ್ನು ಬಿಡಿಸಬೇಕು.
ತುಳಸಿದೇವಿಯ ಅಂತರ್ಗತ ದಾಮೋದರನು ಮೋಕ್ಷವನ್ನು ಕರುಣಿಸಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
************
ತಂ ನಾರಸಿಂಹಂ ನಮಾಮಿ !
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ತುಳಸ್ಯಮೃತಜನ್ಮಾsಸಿ
ಸದಾ ತ್ವಂ ಕೇಶವಪ್ರಿಯೇ !
ಕೇಶವಾರ್ಥೇ ಚಿನೋಮಿ ತ್ವಾಂ
ವರದಾ ಭವ ಶೋಭನೇ !! ೭ !!
ಅರ್ಥ :- ಹೇ ತುಳಸಿದೇವಿ ನೀನು ಜನ್ಮ ಮರಣ ಇಲ್ಲದೇ ಯಾವಾಗಲೂ ಇರುವವಳು. ಯಾವಾಗಲೂ ದೇವರಿಗೆ ಪ್ರಿಯಳಾದವಳು. ಅಂಥ ದೇವರಿಗೆ ಪ್ರಿಯಳಾದ ನಿನ್ನನ್ನು ದೇವರ ಪೂಜೆಗೋಸ್ಕರ ಉಪಯೋಗಿಸುತ್ತೇವೆ ನಮಗೆ ಮಂಗಳವನ್ನುಂಟು ಮಾಡು ಅಂತ ಪ್ರಾರ್ಥನೆ.
ತುಳಸಿದೇವಿ ಅಂತರ್ಗತ ದಾಮೋದರನು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ.
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಮೋಕ್ಷೈಕಹೇತೋರ್ಧರಣೀಧರಸ್ಯ
ವಿಷ್ಣೋಃ ಸಮಸ್ತಸ್ಯ ಗುರೋಃ ಪ್ರಿಯಸ್ಯ !
ಆರಾಧನಾರ್ಥಂ ಪುರುಷೋತ್ತಮಸ್ಯ
ಛಿಂದೇ ದಲಂ ತೇ ತುಳಸಿ ಕ್ಷಮಸ್ವ !! ೮ !!
ಅರ್ಥ :- ಹೇ ತುಳಸಿದೇವಿ ಮೋಕ್ಷವನ್ನು ಕೊಡಲಿಕ್ಕೆ ಮುಖ್ಯ ಕಾರಣನಾದ, ಭೂಮಿಯನ್ನು ಧರಿಸಿದ, ಎಲ್ಲಾ ಗುರುಗಳಿಗೂ ಪ್ರಿಯನಾದ, ಆ ಪುರುಷೋತ್ತಮಸ್ವರೂಪಿಯಾದ ವಿಷ್ಣುವಿನ ಆರಾಧನೆಗಾಗಿ (ಪೂಜೆಗಾಗಿ) ನಿನ್ನನ್ನು (ನಿನ್ನ ದಳವನ್ನು) ಛೇದಿಸುತ್ತೇನೆ (ಬಿಡಿಸುತ್ತೇನೆ) ಅಂತ ಪ್ರಾರ್ಥನೆ ಮಾಡಿ ತುಳಸೀದಳಗಳನ್ನು ಬಿಡಿಸಬೇಕು.
ತುಳಸಿದೇವಿಯ ಅಂತರ್ಗತ ದಾಮೋದರನು ಮೋಕ್ಷವನ್ನು ಕರುಣಿಸಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
********
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಕೃಷ್ಯಾರಂಭೇ ತಥಾ ಪುಣ್ಯೇ
ವಿವಾಹೇ ಚಾರ್ಥಸಂಗ್ರಹೇ !
ಸರ್ವಕಾರ್ಯೇಷು ಸಿಧ್ಯರ್ಥಂ
ಪ್ರಸ್ಥಾನೇ ತುಳಸೀಂ ಸ್ಮರೇತ್ !! ೯ !!
ಅರ್ಥ :- ಕೃಷಿ ಮಾಡುವ ಆರಂಭದಲ್ಲಿ ಹಾಗೆ ಪುಣ್ಯಕರವಾದ ವಿವಾಹಮಾಡುವ ಆರಂಭದಲ್ಲಿ ಹಾಗೆ ಧನಸಂಪಾದನೆ ಮಾಡುವ ಆರಂಭದಲ್ಲಿ ಒಟ್ಟು ಎಲ್ಲಾ ಕೆಲಸಗಳು ಅನಾಯಾಸವಾಗಿ ಮುಗಿಯಬೇಕು ಅಂತಾದರೆ ಆ ಕೆಲಸಗಳ ಆರಂಭದಲ್ಲಿ ತುಳಸಿದೇವಿಯ ಸ್ಮರಣೆ ಮಾಡಿದರೆ ಸಾಕು ಆ ವ್ಯಕ್ತಿ ಎಲ್ಲಾ ಕಾರ್ಯಗಳಲ್ಲಿ ವಿಜಯಿಯಾಗುತ್ತಾನೆ. ಅಷ್ಟು ಶಕ್ತಿ ತುಳಸಿದೇವಿಯ ಸ್ಮರಣೆಗೆ ಇದೆ.
ಎಲ್ಲರಿಗೂ ತುಳಸಿದೇವಿ ಅಂತರ್ಗತ ದಾಮೋದರನು ಎಲ್ಲಾ ಕಾರ್ಯಗಳಲ್ಲಿ ಜಯವನ್ನು ನೀಡಿ ಅನುಗ್ರಹಿಸಲಿ .
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
**********
ತಂ ನಾರಸಿಂಹಂ ನಮಾಮಿ !
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಯಃ ಸ್ಮರೇತ್ ತುಳಸೀಂ ಸೀತಾಂ
ರಾಮಂ ಸೌಮಿತ್ರಿಣಾ ಸಹ !
ವಿನರ್ಜಿತ್ಯ ರಿಪೂನ್ ಸರ್ವಾನ್
ಪುನರಾಯಾತಿ ಕಾರ್ಯಕೃತ್ !! ೧೦ !!
ಅರ್ಥ :- ಲಕ್ಷ್ಮಣನಿಂದ ಕೂಡಿದ ಸೀತಾರಾಮರನ್ನು ಹಾಗೂ ತುಳಸಿದೇವಿಯನ್ನು ಯಾರು ಸ್ಮರಣೆ ಮಾಡ್ತಾರೋ ಅವರು ಜೀವನದಲ್ಲಿ ಎಲ್ಲಾ ಶತ್ರುಗಳನ್ನು ಗೆಲ್ಲುತ್ತಾರೆ. ನಿಜವಾದ ಶತ್ರುಗಳು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಆರು ವೈರಿಗಳನ್ನು ಗೆಲ್ಲುತ್ತಾರೆ. ಮತ್ತೆ ಸಂಸಾರಕ್ಕೆ ಬರೋದಿಲ್ಲ ಅಷ್ಟು ಶಕ್ತಿ ಸ್ಮರಣೆಗೆ ಇದೆ.
ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರಿಗೂ ಷಡ್ವೈರಿಗಳನ್ನು ನಾಶಮಾಡಿ ಜ್ಞಾನವನ್ನು ಕರುಣಿಸಲಿ .
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
********
ತಂ ನಾರಸಿಂಹಂ ನಮಾಮಿ !
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಯಾ ದೃಷ್ಟಾ ನಿಖಿಲಾಘಸಂಘಶಮನೀ
ಸ್ಪೃಷ್ಟಾ ವಪುಃ ಪಾವನೀ
ರೋಗಾಣಾಮಭಿವಂದಿತಾ ನಿರಸನೀ
ಸಿಕ್ತಾಂತಕತ್ರಾಸಿನೀ !
ಪ್ರತ್ಯಾಸತ್ತಿವಿಧಾಯಿನೀ ಭಗವತಃ
ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ
ತಸ್ಯೈ ತುಲಸ್ಯೈ ನಮಃ !! ೧೧ !!
ಅರ್ಥ :- ಯಾರನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಪಾಪಗಳ ಸಮೂಹಗಳು ಸುಟ್ಟು ಭಸ್ಮ ಆಗ್ತಾವೋ, ಯಾರನ್ನು ಸ್ಪರ್ಶ ಮಾಡಿದರೆ ಸಾಕು ನಮ್ಮ ದೇಹ, ಮನಸ್ಸು ಪವಿತ್ರವಾಗ್ತಾವೋ, ಯಾರನ್ನು ನಮಸ್ಕಾರ ಮಾಡಿದರೆ ನಮ್ಮ ಎಲ್ಲಾ ರೋಗಗಳು (ಸಂಸಾರ ಎಂಬ ರೋಗ) ನಾಶವಾಗ್ತಾವೋ, ಅಂಥ ತುಳಸಿದೇವಿಯ ಚರಣಗಳಲ್ಲಿ ನಮ್ಮ ತಲೆಯನ್ನು ಇಟ್ಟರೆ (ನಮಸ್ಕಾರ ಮಾಡಿದರೆ) ಅವಳು (ತುಳಸಿದೇವಿಯು) ಭಗವಂತನ ಬಗ್ಗೆ ಯಥಾರ್ಥಜ್ಞಾನವನ್ನು ನೀಡಿ ಮೋಕ್ಷಫಲವನ್ನು ಕೊಡುತ್ತಾಳೆ. ಕೊಡುವ ಶಕ್ತಿ ದೇವರ ಅನುಗ್ರಹದಿಂದ ಅವಳಿಗೆ ಇದೆ. ಅಂಥ ತುಳಸೀದೇವಿಗೆ ನಮಸ್ಕಾರಗಳು.
ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರಿಗೂ ಯಥಾರ್ಥಜ್ಞಾನವನ್ನು ನೀಡಿ ಮೋಕ್ಷವನ್ನು ದಯಪಾಲಿಸಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
****************
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಚತುಃಕರ್ಣೇ ಮುಖೇ ಚೈಕಂ
ನಾಭಾವೇಕಂ ತಥೈವ ಚ !
ಶಿರಸ್ಯೇಕಂ ತಥಾ ಪ್ರೋಕ್ತಂ
ತೀರ್ಥತ್ರಯಮುದಾಹೃತಂ !! ೧೩ !!
ಅರ್ಥ :- ದೇವರ ೧೮ ತುಳಸಿ ನಿರ್ಮಾಲ್ಯಗಳನ್ನು ನಮ್ಮ ದೇಹದಲ್ಲಿ ಧರಿಸಬೇಕು. ಎಲ್ಲೆಲ್ಲಿ ಅಂದರೆ?
ಕಿವಿಗಳಲ್ಲಿ ೪,(ಒಂದು ಕಿವಿಯಲ್ಲಿ ೨ ಮತ್ತೊಂದು ಕಿವಿಯಲ್ಲಿ ೨), ಮುಖದಲ್ಲಿ ೧, ನಾಭಿಯಲ್ಲಿ (ಹೊಕ್ಕಳಿನಲ್ಲಿ) ೧, ತಲೆಯಲ್ಲಿ ೧, ತೀರ್ಥದಲ್ಲಿ ೩ (ಒಂದೊಂದು ಸಾರಿ ತೀರ್ಥ ತಗೊಳುವಾಗ ಒಂದೊಂದು ದೇವರ ತುಳಸಿನಿರ್ಮಾಲ್ಯವನ್ನು ಸೇರಿಸಿ ತಗೊಬೇಕು.) ೧೮ ರಲ್ಲಿ ೧೦ ಆಯ್ತು ಇನ್ನೂ ೮ ನಾಳಿನ ಶ್ಲೋಕದಲ್ಲಿ. ಹೀಗೆ ತುಳಸಿನಿರ್ಮಾಲ್ಯವನ್ನು ಧರಿಸಿದರೆ ಆ ವ್ಯಕ್ತಿ ಪವಿತ್ರನಾಗುತ್ತಾನೆ.
ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರನ್ನೂ ಪವಿತ್ರರನ್ನಾಗಿ ಮಾಡಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
*******************
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಖಾದನ್ ಮಾಂಸಂ ಪಿಬನ್ಮದ್ಯಂ
ಸಂಗಚ್ಛನ್ನಂತ್ಯಜಾದಿಭಿಃ !
ಸದ್ಯೋ ಭವತಿ ಪೂತಾತ್ಮಾ
ಕರ್ಣಯೋಸ್ತುಲಸೀಂ ಧರನ್ !! ೧೨ !!
ಅರ್ಥ :- ಕೀಳು ಜಾತಿಯವರ (ಅಸಜ್ಜನರ ದುಷ್ಟರ) ಸಂಗದಿಂದ ಮಾಂಸವನ್ನು ತಿಂದಂಥ ಪಾಪವು, ಮದ್ಯಪಾನವನ್ನು ಮಾಡಿದಂಥ ಪಾಪವು, ಅಂತ್ಯಜಾತಿಯವರ ಸಂಗ ಮಾಡಿದ ಪಾಪವು ಎಲ್ಲವೂ ನಾಶವಾಗಬೇಕಾದರೆ ಕಿವಿಯಲ್ಲಿ ತುಳಸೀದಳವನ್ನು ಧರಿಸಬೇಕು ಧರಿಸಿದರೆ ಎಲ್ಲಾ ಪಾಪಗಳಿಂದ ಮುಕ್ತನಾಗಿ ಪವಿತ್ರನಾಗ್ತಾನೆ ಅಷ್ಟು ಮಹತ್ವ ಒಂದು ದಳ ತುಳಸಿಗೆ ಇದೆ.
ಮಾಂಸವನ್ನು ತಿನ್ನಬಾರದು (ಬೇಕರಿ ಪದಾರ್ಥಗಳು ಕೇಕ್ ಬ್ರೆಡ್ ಇವೆಲ್ಲವೂ ಮಾಂಸದಿಂದ ಕೂಡಿದ ಪದಾರ್ಥಗಳು ಎಂದೂ ತಿನ್ನಬಾರದು ತಿಂದರೆ ಮಹಾಪಾಪ) ಮದ್ಯಪಾನವನ್ನೂ ಕೂಡ ಮಾಡಬಾರದು ಇವಕ್ಕೆಲ್ಲ ಮೂಲ ಕಾರಣವಾದ ದುಷ್ಟರ ಸಂಗವನ್ನು ಮಾಡಲೇಬಾರದು.
ತುಳಸಿದೇವಿಯು ಅಂತರ್ಗತ ದಾಮೋದರನು ದುಷ್ಟಬುದ್ಧಿಯನ್ನು ಹೋಗಿಸಿ ಸದ್ಬುದ್ಧಿಯನ್ನು ನೀಡಿ ಅನುಗ್ರಹಿಸಲಿ.
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
**********
ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)
ಅನ್ನೋಪರಿ ತಥಾ ಪಂಚ
ಭೋಜನಾಂತೇ ದಲತ್ರಯಂ !
ಏವಂ ಶ್ರೀ ತುಳಸೀ ಗ್ರಾಹ್ಯಾ
ಅಷ್ಟಾದಶದಲಾ ಸದಾ !! ೧೪ !!
ಅರ್ಥ :- ನಿನ್ನೆ ೧೮ ರಲ್ಲಿ ೧೦ ತುಳಸೀದಳಗಳನ್ನು ಎಲ್ಲಿ ಧರಿಸಬೇಕು ಅಂತ ತಿಳಿದ್ವಿ. ಇನ್ನೂ ೮ ಎಲ್ಲಿ ಹಾಕಬೇಕು ಅಂದರೆ - ಭೋಜನ ಮಾಡುವ ಆರಂಭದಲ್ಲಿ ಅನ್ನದ ಮೇಲೆ ೫ ದೇವರ ತುಳಸಿನಿರ್ಮಾಲ್ಯಗಳನ್ನು ಹಾಕಬೇಕು ಪ್ರಾಣ ಅಪಾನ ವ್ಯಾನ ಉದಾನ ಸಮಾನ ಈ ೫ ನಾಮಗಳಿಂದ ಅನ್ನವನ್ನು ಸೇವಿಸುವಾಗ ತುಳಸಿನಿರ್ಮಾಲ್ಯದ ಜೊತೆಗೆ ಸೇವಿಸಬೇಕು. ನಂತರ ಭೋಜನ ಆದಮೇಲೆ ತೀರ್ಥತಗೊಳುವಾಗ ೩ ತುಳಸೀದಳಗಳನ್ನು ಸೇವಿಸಬೇಕು. ಹೀಗೆ ಒಟ್ಟು ೧೮ ತುಳಸಿನಿರ್ಮಾಲ್ಯಗಳು ನಮ್ಮ ದೇಹದ ಒಳಗೆ ಮತ್ತು ಹೊರಗೆ ಧಾರಣೆ ಮಾಡಿದರೆ ನಮ್ಮ ಇಡೀ ದೇಹವು ಪವಿತ್ರ (ಶುದ್ಧ)ವಾಗುತ್ತೆ. ಇಷ್ಟು ಮಹತ್ವ ತುಳಸಿಗೆ ಇದೆ .
ಅಂಥ ತುಳಸಿದೇವಿಯು ಅಂತರ್ಗತ ದಾಮೋದರನು ಎಲ್ಲರಿಗೂ ಜ್ಞಾನವನ್ನು ಕೊಟ್ಟು ಕರುಣಿಸಲಿ.
ಇತಿ ತುಳಸೀಮಾಹಾತ್ಮ್ಯಂ !!
(ತುಳಸೀಸ್ತೋತ್ರಂ)
ಇಲ್ಲಿಗೆ (ಇವತ್ತಿಗೆ) ತುಳಸೀಮಾಹಾತ್ಮ್ಯ (ತುಳಸೀಸ್ತೋತ್ರ) ವು ಸಮಾಪ್ತಿಯಾಯಿತು.
ಶ್ರೀಕೃಷ್ಣಾರ್ಪಣಮಸ್ತು !!
ಇಷ್ಟು ದಿವಸ ಕಾರ್ತೀಕಮಾಸದಲ್ಲಿ ಅವಶ್ಯವಾಗಿ ಪಠಿಸಬೇಕಾದ ತುಳಸೀಸ್ತೋತ್ರದ ಚಿಂತನೆಯನ್ನು ಅರ್ಥಸಹಿತವಾಗಿ ಯಥಾಶಕ್ತಿಯಾಗಿ ಮಾಡಿದ್ದೇವೆ. ಇದು ದೇವರ ಗುರುಗಳ ತಂದೆತಾಯಿಗಳ ಅನುಗ್ರಹದಿಂದ ಇವತ್ತು ಸಮಾಪ್ತಿಗೊಳ್ಳುತ್ತಾಯಿದೆ. ಈ ಸಮಾಪ್ತಿ (ಅರ್ಪಣೆ) ಆಗುವ ಸಂದರ್ಭದಲ್ಲಿ (ಇವತ್ತು) ನಾವು ಶ್ರೀಮನ್ಮೂಲರಾಮಚಂದ್ರದೇವರ ಶ್ರೀ ದಿಗ್ವಿಜಯರಾಮಚಂದ್ರದೇವರ, ಶ್ರೀರಾಮವಿಠಲದೇವರ ಶ್ರೀಮದುತ್ತರಾದಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ, ಶ್ರೀ ಪೇಜಾವರಮಠಾಧೀಶರಾದ ಶ್ರೀ ವಿಶ್ವೇಶತೀರ್ಥರ ಶ್ರೀ ಕಾಣೀಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥರ ಸನ್ನಿಧಿಯಲ್ಲಿ ತಂದೆತಾಯಿಗಳ ಸನ್ನಿಧಿಯಲ್ಲಿ ಇದ್ದೇವೆ. ಅದು ಅವರೆಲ್ಲರ ಪಾದಪದ್ಮಗಳಲ್ಲಿ ಸಮರ್ಪಿತವಾಗ್ತಾಯಿದೆ. ನಾವುನೀವೆಲ್ಲರೂ ಯಥಾಶಕ್ತಿಯಾಗಿ ಚಿಂತನೆ ಮಾಡಿದ್ದೇವೆ. ಎಲ್ಲರನ್ನೂ ಆಯುರಾರೋಗ್ಯಾದಿಗಳ ಜೊತೆಗೆ ಜ್ಞಾನ ಭಕ್ತಿ ವೈರಾಗ್ಯ ಕೊಟ್ಟು ಎಲ್ಲರನ್ನೂ ಅನುಗ್ರಹಿಸಲಿ ಅಂತ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇವೆ. ದೇವರು ಎಲ್ಲರನ್ನೂ ಅನುಗ್ರಹಿಸಲಿ .
ಸರ್ವೇ ಜನಾಃ ಸುಖಿನೋ ಭವಂತು !
ಸುಘೋಷಾಚಾರ್ಯ ಕೊರ್ಲಹಳ್ಳಿ
****
ತುಳಸಿ ಮಾಲೆ ತಯಾರು ಮಾಡುವ ವಿಧಾನ
read more uttan dwadashi ಉತ್ಥಾನ ದ್ವಾದಶಿ
#ಅಷ್ಟೋತ್ತರಶತನಾಮಾವಳಿ
ll ಶ್ರೀ ತುಳಸಿದೇವಿ ಅಷ್ಟೋತ್ತರ ಶತನಾಮಾವಳಿ ll
ಓಂ ತುಲಸ್ಯೈ ನಮಃ
ಓಂ ತುಲಸೀವರ್ಯಾಯೈ ನಮಃ
ಓಂ ತುಮುಲ್ಯೈ ನಮಃ
ಓಂ ತುಮುಲಪ್ರಾಜ್ಞ್ಯೈ ನಮಃ
ಓಂ ತುರಗ್ಯೈ ನಮಃ
ಓಂ ತುರಗಾರೂಢಾಯೈ ನಮಃ
ಓಂ ತುಮುಲಾಸುರಘಾತಿನ್ಯೈ ನಮಃ
ಓಂ ತುಮುಲಕ್ಷತಜಪ್ರೀತಾಯೈ ನಮಃ
ಓಂ ತುಮುಲಾಂಗಣನರ್ತಕ್ಯೈ ನಮಃ
ಓಂ ತುರಂಗಪೃಷ್ಠಗಾಮಿನ್ಯೈ ನಮಃ 10
ಓಂ ತುರಂಗಗಮನಾಹ್ಲಾದಾಯೈ ನಮಃ
ಓಂ ತುರಂಗವೇಗಗಾಮಿನ್ಯೈ ನಮಃ
ಓಂ ತುರೀಯಾಯೈ ನಮಃ
ಓಂ ತುಲನಾಯೈ ನಮಃ
ಓಂ ತುಲ್ಯಾಯೈ ನಮಃ
ಓಂ ತುಲ್ಯವೃತ್ಯೈ ನಮಃ
ಓಂ ತುಲ್ಯಕೃತ್ಯೈ ನಮಃ
ಓಂ ತುಲನೇಶ್ಯೈ ನಮಃ
ಓಂ ತುಲಾರಾಜ್ಞ್ಯೈ ನಮಃ
ಓಂ ತುಲಾರಾಜ್ಞೀತ್ವಸೂಕ್ಷ್ಮವಿದಯೈ ನಮಃ 20
ಓಂ ತುಮ್ಬಿಕಾಯೈ ನಮಃ
ಓಂ ತುಮ್ಬಿಕಾಪಾತ್ರಭೋಜನಾಯೈ ನಮಃ
ಓಂ ತುಮ್ಬಿಕಾರ್ಥಿನ್ಯೈ ನಮಃ
ಓಂ ತುಲಜಾಯೈ ನಮಃ
ಓಂ ತುಲಜೇಶ್ವರ್ಯೈ ನಮಃ
ಓಂ ತುಷಾಗ್ನಿವ್ರತಸನ್ತುಷ್ಟಾಯೈ ನಮಃ
ಓಂ ತುಷಾಗ್ನೆಯೈ ನಮಃ
ಓಂ ತುಷರಾಶಿಕೃತ್ಯೈ ನಮಃ
ಓಂ ತುಷಾರಕರಶೀತಾಂಗ್ಯೈ ನಮಃ
ಓಂ ತುಷಾರಕರಪೂರ್ತಿಕೃತ್ಯೈ 30
ಓಂ ತುಷಾರಾದ್ರ್ಯೈ ನಮಃ
ಓಂ ತುಷಾರಾದ್ರಿಸುತಾಯೈ ನಮಃ
ಓಂ ತುಹಿನದೀಧಿತಯ್ಯೈ ನಮಃ
ಓಂ ತುಹಿನಾಚಲಕನ್ಯಾಯೈ ನಮಃ
ಓಂ ತುಹಿನಾಚಲವಾಸಿನ್ಯೈ ನಮಃ
ಓಂ ತುರ್ಯವರ್ಗೇಶ್ವರ್ಯೈ ನಮಃ
ಓಂ ತುರ್ಯವರ್ಗದಾಯೈ ನಮಃ
ಓಂ ತುರ್ಯವೇದದಾಯೈ ನಮಃ
ಓಂ ತುರ್ಯವರ್ಯಾತ್ಮಿಕಾಯೈ ನಮಃ
ಓಂ ತುರ್ಯಾಯೈ ನಮಃ 40
ಓಂ ತುರ್ಯೇಶ್ವರಸ್ವರೂಪಿಣ್ಯೈ ನಮಃ
ಓಂ ತುಷ್ಟಿದಾಯೈ ನಮಃ
ಓಂ ತುಷ್ಟಿಕೃತ್ಯೈ ನಮಃ
ಓಂ ತುಷ್ಟ್ಯೈ ನಮಃ
ಓಂ ತೂಣೀರದ್ವಯಪೃಷ್ಠಧೃಷ್ಯೈ ನಮಃ
ಓಂ ತುಮ್ಬುರಾಜ್ಞಾನಸನ್ತುಷ್ಟಾಯೈ ನಮಃ
ಓಂ ತುಷ್ಟಸಂಸಿದ್ಧಿದಾಯಿನ್ಯೈ ನಮಃ
ಓಂ ತೂರ್ಣರಾಜ್ಯಪ್ರದಾಯೈ ನಮಃ
ಓಂ ತೂರ್ಣಗದ್ಗದಾಯೈ ನಮಃ
ಓಂ ತೂರ್ಣಪದ್ಯದಾಯೈ ನಮಃ 50
ಓಂ ತೂರ್ಣಪಾಂಡಿತ್ಯಸನ್ದಾತ್ರ್ಯೈ ನಮಃ
ಓಂ ತೂರ್ಣಾಯೈ ನಮಃ
ಓಂ ತೂರ್ಣಬಲಪ್ರದಾಯೈ ನಮಃ
ಓಂ ತೃತೀಯಾಯೈ ನಮಃ
ಓಂ ತೃತೀಯೇಶ್ಯೈ ನಮಃ
ಓಂ ತೃತೀಯಾತಿಥಿಪೂಜಿತಾಯೈ ನಮಃ
ಓಂ ತೃತೀಯಾಚನ್ದ್ರಚೂಡೇಶ್ಯೈ ನಮಃ
ಓಂ ತೃತೀಯಾಚನ್ದ್ರಭೂಷಣಾಯೈ ನಮಃ
ಓಂ ತೃಪ್ತ್ಯೈ ನಮಃ
ಓಂ ತೃಪ್ತಿಕರ್ಯೈ ನಮಃ 60
ಓಂ ತೃಪ್ತಾಯೈ ನಮಃ
ಓಂ ತೃಷ್ಣಾಯೈ ನಮಃ
ಓಂ ತೃಷ್ಣಾವಿವರ್ಧಿನ್ಯೈ ನಮಃ
ಓಂ ತೃಷ್ಣಾಪೂರ್ಣಕರ್ಯೈ ನಮಃ
ಓಂ ತೃಷ್ಣಾನಾಶಿನ್ಯೈ ನಮಃ
ಓಂ ತೃಷಿತಾಯೈ ನಮಃ
ಓಂ ತೃಷಾಯೈ ನಮಃ
ಓಂ ತ್ರೇತಾಸಂಸಾಧಿತಾಯೈ ನಮಃ
ಓಂ ತ್ರೇತಾಯೈ ನಮಃ
ಓಂ ತ್ರೇತಾಯುಗಫಲಪ್ರದಾಯೈ ನಮಃ 70
ಓಂ ತ್ರೈಲೋಕ್ಯಪೂಜ್ಯಾಯೈ ನಮಃ
ಓಂ ತ್ರೈಲೋಕ್ಯದಾತ್ರ್ಯೈ ನಮಃ
ಓಂ ತ್ರೈಲೋಕ್ಯಸಿದ್ಧಿದಾಯೈ ನಮಃ
ಓಂ ತ್ರೈಲೋಕ್ಯೇಶ್ವರತಾದಾತ್ರ್ಯೈ ನಮಃ
ಓಂ ತ್ರೈಲೋಕ್ಯಪರಮೇಶ್ವರ್ಯೈ ನಮಃ
ಓಂ ತ್ರೈಲೋಕ್ಯಮೋಹನೇಶಾನ್ಯೈ ನಮಃ
ಓಂ ತ್ರೈಲೋಕ್ಯರಾಜ್ಯದಾಯಿನ್ಯೈ ನಮಃ
ಓಂ ತೈತ್ರಿಶಾಖೇಶ್ವರ್ಯೈ ನಮಃ
ಓಂ ತೈತ್ರಿಶಾಖಾಯೈ ನಮಃ
ಓಂ ತೈತ್ರವಿವೇಕವಿದಯೈ ನಮಃ 80
ಓಂ ತೋರಣಾನ್ವಿತಗೇಹಸ್ಥಾಯೈ ನಮಃ
ಓಂ ತೋರಣಾಸಕ್ತಮಾನಸಾಯೈ ನಮಃ
ಓಂ ತೋಲಕಾಸ್ವರ್ಣಸನ್ದಾತ್ರ್ಯೈ ನಮಃ
ಓಂ ತೋಲಕಾಸ್ವರ್ಣಕಂಕಣಾಯೈ ನಮಃ
ಓಂ ತೋಮರಾಯುಧರೂಪಾಯೈ ನಮಃ
ಓಂ ತೋಮರಾಯುಧಧಾರಿಣ್ಯೈ ನಮಃ
ಓಂ ತೌರ್ಯತ್ರಿಕೇಶ್ವರ್ಯೈ ನಮಃ
ಓಂ ತೌರ್ಯತ್ರಿಕ್ಯೈ ನಮಃ
ಓಂ ತೌರ್ಯತ್ರಿಕೋತ್ಸುಕ್ಯೈ ನಮಃ
ಓಂ ತಮೋನುದಾಯೈ ನಮಃ 90
ಓಂ ತಾರಿಣ್ಯೈ ನಮಃ
ಓಂ ತಾರಾಯೈ ನಮಃ
ಓಂ ತಾರಯನ್ತ್ಯೈ ನಮಃ
ಓಂ ತುಷ್ಟ್ಯೈ ನಮಃ
ಓಂ ತ್ರಿವಿಧಾಯೈ ನಮಃ
ಓಂ ತ್ರಿಗುಣಾಯೈ ನಮಃ
ಓಂ ತ್ರಿಗುಣಾಲಯಾಯೈ ನಮಃ
ಓಂ ತ್ರಿವರ್ತ್ಮಗಾಯೈ ನಮಃ
ಓಂ ತ್ರಿಲೋಕಸ್ಥಾಯೈ ನಮಃ
ಓಂ ತ್ರಿವಿಕ್ರಮಪದೋದ್ಭವಾಯೈ ನಮಃ 100
ಓಂ ತ್ರಿಧಾಸೂಕ್ಷ್ಮಾಯೈ ನಮಃ
ಓಂ ತ್ರಿರಾಮೇಶ್ಯೈ ನಮಃ
ಓಂ ತ್ರಿರಾಮಾರ್ಚ್ಯಾಯೈ ನಮಃ
ಓಂ ತ್ರಿರಾಮವರದಾಯಿನ್ಯೈ ನಮಃ
ಓಂ ತ್ರಿದಶಾಶ್ರಿತಪಾದಾಬ್ಜಾಯೈ ನಮಃ
ಓಂ ತ್ರಿದಶಾಲಯಚಂಚಲಾಯೈ ನಮಃ
ಓಂ ತ್ರಿದಶಪ್ರಾರ್ಥ್ಯಾಯೈ ನಮಃ
ಓಂ ತ್ರಿದಶಾಶುವರಪ್ರದಾಯೈ ನಮಃ 108
ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ತುಳಸಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll
***
ತುಳಸೀ ಅಷ್ಟೋತ್ತರಶತ ನಾಮಾವಳಿಃ
ಓಂ ಶ್ರೀ ತುಲಸ್ಯೈ ನಮಃ
ಓಂ ನಂದಿನ್ಯೈ ನಮಃ
ಓಂ ದೇವ್ಯೈ ನಮಃ
ಓಂ ಶಿಖಿನ್ಯೈ ನಮಃ
ಓಂ ಧಾರಿಣ್ಯೈ ನಮಃ
ಓಂ ಧಾತ್ರ್ಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸತ್ಯಸಂಧಾಯೈ ನಮಃ
ಓಂ ಕಾಲಹಾರಿಣ್ಯೈ ನಮಃ
ಓಂ ಗೌರ್ಯೈ ನಮಃ || ೧೦ ||
ಓಂ ದೇವಗೀತಾಯೈ ನಮಃ
ಓಂ ದ್ರವೀಯಸ್ಯೈ ನಮಃ
ಓಂ ಪದ್ಮಿನ್ಯೈ ನಮಃ
ಓಂ ಸೀತಾಯೈ ನಮಃ
ಓಂ ರುಕ್ಮಿಣ್ಯೈ ನಮಃ
ಓಂ ಪ್ರಿಯಭೂಷಣಾಯೈ ನಮಃ
ಓಂ ಶ್ರೇಯಸ್ಯೈ ನಮಃ
ಓಂ ಶ್ರೀಮತ್ಯೈ ನಮಃ
ಓಂ ಮಾನ್ಯಾಯೈ ನಮಃ
ಓಂ ಗೌತಮಾರ್ಚಿತಾಯೈ ನಮಃ || ೨೦ ||
ಓಂ ತ್ರೇತಾಯೈ ನಮಃ
ಓಂ ತ್ರಿಪಥಗಾಯೈ ನಮಃ
ಓಂ ತ್ರಿಪಾದಾಯೈ ನಮಃ
ಓಂ ತ್ರೈಮೂರ್ತ್ಯೈ ನಮಃ
ಓಂ ಜಗತ್ರಯಾಯೈ ನಮಃ
ಓಂ ತ್ರಾಸಿನ್ಯೈ ನಮಃ
ಓಂ ಗಾತ್ರಾಯೈ ನಮಃ
ಓಂ ಗಾತ್ರಿಯಾಯೈ ನಮಃ
ಓಂ ಗರ್ಭವಾರಿಣ್ಯೈ ನಮಃ
ಓಂ ಶೋಭನಾಯೈ ನಮಃ || ೩೦ ||
ಓಂ ಸಮಾಯೈ ನಮಃ
ಓಂ ದ್ವಿರದಾಯೈ ನಮಃ
ಓಂ ಆರಾಧ್ಯೈ ನಮಃ
ಓಂ ಯಜ್ಞವಿದ್ಯಾಯೈ ನಮಃ
ಓಂ ಮಹಾವಿದ್ಯಾಯೈ ನಮಃ
ಓಂ ಗುಹ್ಯವಿದ್ಯಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕುಲಾಯೈ ನಮಃ
ಓಂ ಶ್ರೀಯೈ ನಮಃ
ಓಂ ಭೂಮ್ಯೈ ನಮಃ || ೪೦ ||
ಓಂ ಭವಿತ್ರ್ಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸರ್ವವೇದವಿದಾಂವರಾಯೈ ನಮಃ
ಓಂ ಶಂಖಿನ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಾರಿಣ್ಯೈ ನಮಃ
ಓಂ ಚಪಲೇಕ್ಷಣಾಯೈ ನಮಃ
ಓಂ ಪೀತಾಂಬರಾಯೈ ನಮಃ
ಓಂ ಪ್ರೋತ ಸೋಮಾಯೈ ನಮಃ
ಓಂ ಸೌರಸಾಯೈ ನಮಃ || ೫೦ ||
ಓಂ ಅಕ್ಷಿಣ್ಯೈ ನಮಃ
ಓಂ ಅಂಬಾಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಸಂಶ್ರಯಾಯೈ ನಮಃ
ಓಂ ಸರ್ವ ದೇವತ್ಯೈ ನಮಃ
ಓಂ ವಿಶ್ವಾಶ್ರಯಾಯೈ ನಮಃ
ಓಂ ಸುಗಂಧಿನ್ಯೈ ನಮಃ
ಓಂ ಸುವಾಸನಾಯೈ ನಮಃ
ಓಂ ವರದಾಯೈ ನಮಃ
ಓಂ ಸುಶ್ರೋಣ್ಯೈ ನಮಃ || ೬೦ ||
ಓಂ ಚಂದ್ರಭಾಗಾಯೈ ನಮಃ
ಓಂ ಯಮುನಾಪ್ರಿಯಾಯೈ ನಮಃ
ಓಂ ಕಾವೇರ್ಯೈ ನಮಃ
ಓಂ ಮಣಿಕರ್ಣಿಕಾಯೈ ನಮಃ
ಓಂ ಅರ್ಚಿನ್ಯೈ ನಮಃ
ಓಂ ಸ್ಥಾಯಿನ್ಯೈ ನಮಃ
ಓಂ ದಾನಪ್ರದಾಯೈ ನಮಃ
ಓಂ ಧನವತ್ಯೈ ನಮಃ
ಓಂ ಶೋಚಮನಸ್ಯಾಯೈ ನಮಃ
ಓಂ ಶುಚಿನ್ಯೈ ನಮಃ || ೭೦ ||
ಓಂ ಶ್ರೇಯಸ್ಯೈ ನಮಃ
ಓಂ ಪ್ರೀತಿಚಿಂತೇಕ್ಷಣಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಆಕೃತ್ಯೈ ನಮಃ
ಓಂ ಆವಿರ್ಭೂತ್ಯೈ ನಮಃ
ಓಂ ಪ್ರಭಾವಿನ್ಯೈ ನಮಃ
ಓಂ ಗಂಧಿನ್ಯೈ ನಮಃ
ಓಂ ಸ್ವರ್ಗಿನ್ಯೈ ನಮಃ
ಓಂ ಗದಾಯೈ ನಮಃ
ಓಂ ವೇದ್ಯಾಯೈ ನಮಃ || ೮೦ ||
ಓಂ ಪ್ರಭಾಯೈ ನಮಃ
ಓಂ ಸಾರಸ್ಯೈ ನಮಃ
ಓಂ ಸರಸಿವಾಸಾಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಶರಾವತ್ಯೈ ನಮಃ
ಓಂ ರಸಿನ್ಯೈ ನಮಃ
ಓಂ ಕಾಳಿನ್ಯೈ ನಮಃ
ಓಂ ಶ್ರೇಯೋವತ್ಯೈ ನಮಃ
ಓಂ ಯಾಮಾಯೈ ನಮಃ
ಓಂ ಬ್ರಹ್ಮಪ್ರಿಯಾಯೈ ನಮಃ || ೯೦ ||
ಓಂ ಶ್ಯಾಮಸುಂದರಾಯೈ ನಮಃ
ಓಂ ರತ್ನರೂಪಿಣ್ಯೈ ನಮಃ
ಓಂ ಶಮನಿಧಿನ್ಯೈ ನಮಃ
ಓಂ ಶತಾನಂದಾಯೈ ನಮಃ
ಓಂ ಶತದ್ಯುತಯೇ ನಮಃ
ಓಂ ಶಿತಿಕಂಠಾಯೈ ನಮಃ
ಓಂ ಪ್ರಯಾಯೈ ನಮಃ
ಓಂ ಧಾತ್ರ್ಯೈ ನಮಃ
ಓಂ ಶ್ರೀವೃಂದಾವನ್ಯೈ ನಮಃ
ಓಂ ಕೃಷ್ಣಾಯೈ ನಮಃ || ೧೦೦ ||
ಓಂ ಭಕ್ತವತ್ಸಲಾಯೈ ನಮಃ
ಓಂ ಗೋಪಿಕಾಕ್ರೀಡಾಯೈ ನಮಃ
ಓಂ ಹರಾಯೈ ನಮಃ
ಓಂ ಅಮೃತರೂಪಿಣ್ಯೈ ನಮಃ
ಓಂ ಭೂಮ್ಯೈ ನಮಃ
ಓಂ ಶ್ರೀಕೃಷ್ಣಕಾಂತಾಯೈ ನಮಃ
ಓಂ ಶ್ಯಾಮಸುಂದರಾಯೈ ನಮಃ
ಓಂ ಭೂಲೋಕಾಮೃತರೂಪಾಯೈ ನಮಃ
ಇತಿ ಶ್ರೀ ತುಳಸೀ ಅಷ್ಟೋತ್ತರಶತನಾಮಾವಳಿಃ ಸಂಪೂರ್ಣಂ
***
No comments:
Post a Comment