SEARCH HERE

Tuesday, 1 January 2019

ದಶಾವತಾರ dashavatara


ವಿಷ್ಣುವಿನ ಅವತಾರಗಳ ಹೆಸರುಗಳು

1) The First Avatar: Matsya (The Fish) ಮೀನ
2) The Second Avatar: Kurma (The Tortoise)  ಮೊಸಳೆ
3) The Third Avatar: Varaha (The Boar) ವರಹಾ
4) The Fourth Avatar: Narasimha (The Man-Lion) ನರಸಿಂಹ
5) The Fifth Avatar: Vamana (The Dwarf) ವಾಮನ
6) The Sixth Avatar: Parasurama (The Angry Man) ಪರುಶರಾಮ
7) The Seventh Avatar: Lord Rama (The Perfect Man) ಶ್ರೀ ರಾಮ
8) The Eighth Avatar: Lord Krishna (The Divine Statesman) ಶ್ರೀ ಕ್ನಷ್ಣ
9) The Ninth Avatar: Balarama (Krishna's Elder Brother) ಬಲರಾಮ 
or The Bouddha Avatara: (proposer of nirvana) ಬುದ್ಧ 
10) The Tenth Avatar: Kalki (The Mighty Warrior) ಕಲ್ಕೀ
**********


ದಶಾವತಾರದ ಸಂಕ್ಷಿಪ್ತ ಪರಿಚಯ

ಬ್ರಹ್ಮದೇವ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿ ಸ್ಥಾಪಕ, ಶಿವಲಯಕರ್ತ. ತ್ರಿಮೂರ್ತಿಗಳಲ್ಲಿ ಸ್ಥಿತಿ ಸ್ಥಾಪಕನಾದ ಶ್ರೀಮನ್ನಾರಾಯಣ ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಟರನ್ನು ಸಂರಕ್ಷಿಸುವ ಸಲುವಾಗಿ ಈ ಧರೆಯಲ್ಲಿ ಹತ್ತು ಅವತಾರಗಳನ್ನೆತ್ತಿಹನು.

ಲೋಕಕಲ್ಯಾಣಾರ್ಥವಾಗಿ ವಿಷ್ಣು ಎತ್ತಿದ ಈ ಎಲ್ಲ ಅವತಾರಗಳ ಹಾಗೂ ವಿಷ್ಣುವಿನ ಮೂರು ಅವತಾರಕ್ಕೆ ಕಾರಣವಾದ ಜಯವಿಜಯರ ಶಾಪವೃತ್ತಾಂತದ ಕಿರುಪರಿಚಯ ಇಲ್ಲಿದೆ.

1) ಮತ್ಸ್ಯಾವತಾರ :

ಪ್ರಳಯ ಕಾಲದಲ್ಲಿ ಅಪೌರುಷೇಯಗಳಾದ ವೇದಗಳನ್ನು ನಾಶವಾಗದಂತೆ ಸಂರಕ್ಷಿಸುವ ಸಲುವಾಗಿ ಹಾಗೂ ಪ್ರಳಯಾನಂತರ ಆ ಮಹಾನ್ ವೇದಗಳನ್ನು ಋಷಿಮುನಿಗಳಿಗೆ ಪುನಾ ನೀಡುವ ಸಲುವಾಗಿ ನಾರಾಯಣನು ಎತ್ತಿದ ಅವತಾರವೇ ಮತ್ಸ್ಯಾವತಾರ.

2) ಕೂರ್ಮಾವತಾರ :

ಕೂರ್ಮ ಅರ್ಥಾತ್ ಆಮೆಯ ಅವತಾರವನ್ನು ವಿಷ್ಣು ಎತ್ತಿದ್ದೂ ಲೋಕಕಲ್ಯಾಣಾರ್ಥವಾಗಿಯೇ. ಕಲ್ಪವೃಕ್ಷ, ಕಾಮಧೇನು, ಐರಾವತ, ಅಮೃತವೇ ಮೊದಲಾದ ಅತ್ಯಮೂಲ್ಯಗಳನ್ನುಪಡೆಯಲು ಮಂದರ ಪರ್ವತವನ್ನು ಕಡೆಗೋಲು ಮಾಡಿ, ವಾಸುಕಿಯೆಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರ ಮಂಥನ ಮಾಡುತ್ತಿದ್ದ ಕಾಲದಲ್ಲಿ ಮಂದರ ಪರ್ವತವು ಸಮುದ್ರದಲ್ಲಿ ಮುಳುಗದಂತೆ ತಡೆಯಲು ವಿಷ್ಣು ಎತ್ತಿದ ಎರಡನೇ ಆವತಾರ ಕೂರ್ಮಾವತಾರ. 

ಜಯ-ವಿಜಯರ ಶಾಪ ವೃತ್ತಾಂತ : ವೈಕುಂಠದ ದ್ವಾರಪಾಲಕರಾಗಿದ್ದ ಜಯ-ವಿಜಯರು ದುರಹಂಕಾರದಿಂದ ವೈಕುಂಠಕ್ಕೆ ಬಂದ ಸನಕ, ಸನಂದನ, ಸನತ್ಕುಮಾರ್ ಮತ್ತು ಸನತ್ ಸುಜಾತ ಎಂಬ ಬಾಲಯೋಗಿಗಳನ್ನು ದ್ವಾರದಲ್ಲೇ ತಡೆದು ಶಾಪಗ್ರಸ್ಥರಾದರು.  ಭಕ್ತರ ಶಾಪವನ್ನು ತಡೆಯಲು ಸಾಧ್ಯವಿಲ್ಲ ಎಂದ ವಿಷ್ಣು ಜಯ-ವಿಜಯರಿಗೆ ತನ್ನ ಮಿತ್ರರಾಗಿ ಭೂಮಿಯಲ್ಲಿ 7 ಜನ್ಮ ಎತ್ತುವಿರೋ ಇಲ್ಲ ನನ್ನ ಶತ್ರುಗಳಾಗಿ 3 ಜನ್ಮ ಎತ್ತುವಿರೋ ಎಂದು ಕೇಳಿದಾಗ, ಜಯ-ವಿಜಯರು ವೈಕುಂಠಕ್ಕೆ ಬರುವ ಆತುರದಲ್ಲಿ ಶತ್ರುಗಳಾಗೇ ಹುಟ್ಟುತ್ತೇವೆಂದು ಹೇಳಿದರು.  ಇದರ ಫಲವಾಗಿ ಜಯ-ವಿಜಯರು ಭೂಮಿಯಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪುವಾಗಿ, ರಾವಣ - ಕುಂಭಕರ್ಣರಾಗಿ ಹಾಗೂ ಮೂರನೆಯ ಜನ್ಮದಲ್ಲಿ ಶಿಶುಪಾಲ - ದಂತವಕ್ತ್ರರಾಗಿ ಜನಿಸಿ ಅನುಕ್ರಮವಾಗಿ ವರಹಾವತಾರ, ನರಸಿಂಹಾವತಾರ, ರಾಮಾವತಾರ, ಕೃಷ್ಣಾವತಾರ ಎತ್ತಿದ ವಿಷ್ಣುವಿನಿಂದಲೇ ಹತರಾದರು.

3) ವರಹಾವತಾರ : 

ದಾನವನಾದ ಹಿರಣ್ಯಾಕ್ಷನು ತನ್ನ ಶಕ್ತಿ ಬಲ, ವರಬಲ ಗರ್ವದಿಂದ ಭೂದೇವಿಯನ್ನು ಸಮುದ್ರದಲ್ಲಿ ಬಚ್ಚಿಟ್ಟ ಸಂದರ್ಭದಲ್ಲಿ ಭೂದೇವಿಯನ್ನು ರಕ್ಷಿಸುವ ಸಲುವಾಗಿ ಹಾಗೂ ದುಷ್ಟನಾಗಿದ್ದ ಹಿರಣ್ಯಾಕ್ಷನ ಸಂಹರಿಸುವ ಸಲುವಾಗಿ ವಿಷ್ಣು ಎತ್ತಿದ ಅವತಾರ ವರಹಾವತಾರ.

4) ನರಸಿಂಹಾವತಾರ :

ಹಿರಣಾಕ್ಷನ ಸೋದರನಾದ ಹಿರಣ್ಯಕಶಿಪು ವರಬಲದಿಂದ ಹಾಗೂ ಭುಜಬಲದಿಂದ ನರರನ್ನೂ ದೇವಾನು ದೇವತೆಗಳನ್ನೂ ಕಾಡಿ, ಮಹಾ ಗರ್ವಿಷ್ಠನಾಗಿ, ಧರ್ಮವನ್ನೇ ಮರೆತು ದುರಾಚಾರಿಯಾದಾಗ, ಆತನ ಮಗ ಪರಮ
ವಿಷ್ಣುಭಕ್ತನಾದ ಬಾಲ ಪ್ರಹ್ಲಾದನ ಮೊರೆಗೆ ಕಂಬದಿಂದವತರಿಸಿ, ಹಿರಣ್ಯ ಕಶಿಪುವನ್ನು ಸಂಹರಿಸಲು ವಿಷ್ಣು ಎತ್ತಿದ ಅವರಾತ ನರಸಿಂಹಾವತಾರ.

5) ವಾಮನಾವತಾರ : 

ಇಂದ್ರಪದವಿಯ ಮೇಲೆ ಕಣ್ಣಿಟ್ಟಿದ್ದ ದಾನವಾಸುರನಾದ ಬಲಿಚಕ್ರವರ್ತಿಯಿಂದ ಮೂರು ಅಡಿ ಜಾಗವನ್ನು ದಾನವಾಗಿ ಪಡೆದು, ಒಂದು ಅಡಿಯಲ್ಲಿ ಭೂಮಿಯನ್ನೂ ಮತ್ತೊಂದು ಅಡಿಯಲ್ಲಿ ಆಕಾಶವನ್ನೂ ಅಳೆದ ವಾಮನ ಮೂರನೇ ಅಡಿಯನ್ನು ಬಲಿಯ ತಲೆಯಮೇಲಿಟ್ಟು ಪಾತಳಕ್ಕೆ ತುಳಿದ. ಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ.

6) ಪರಶುರಾಮಾವತಾರ :

ಲೋಕಕಂಟಕರಾಗಿ ಮುಗ್ಧ ಜನರ ಮೇಲೆ ಹಾವಳಿ ಮಾಡುತ್ತಿದ್ದ ಕ್ಷತ್ರಿಯ ಕುಲವನ್ನೇ ನಾಶಮಾಡಲು ವಿಷ್ಣು ಎತ್ತಿದ ಅವತಾರ ಪರಶುರಾಮಾವತಾರ. ಈ ಅವತಾರದಲ್ಲಿ ಪರಶುರಾಮರು 21 ಬಾರಿ ಭೂ ಪ್ರದಕ್ಷಿಣೆ ಮಾಡಿ ದುಷ್ಟರಾದ ಎಲ್ಲ ಕ್ಷತ್ರಿಯರನ್ನೂ ಸಂಹರಿಸುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದರು.

7) ರಾಮಾವತಾರ :

ಏಕಪತ್ನೀ ವ್ರತಸ್ಥನೂ, ಮರ್ಯಾದಾ ಪುರುಷೋತ್ತಮನೂ ಆದ ಶ್ರೀರಾಮನು, ತನ್ನ ಪತ್ನಿಯನ್ನೇ ಅಪಹಿರಿಸದ ದುಷ್ಟ ರಾವಣ ಹಾಗೂ ಆತನ ಸೋದರ ಕುಂಭಕರ್ಣರ ಸಂಹಾರ ಮಾಡಲು ಮತ್ತು ಭೂಮಂಡಲವನ್ನು ಸಂರಕ್ಷಿಸಲು ಎತ್ತಿದ ಅವತಾರವೇ ರಾಮಾವತಾರ.

8) ಕೃಷ್ಣಾವತಾರ :

ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ ಪವಡಿಸಿದ ಪರಮಾತ್ಮನಾದ ಕೃಷ್ಣ, ಧರ್ಮಸಂಸ್ಥಾಪನಾರ್ಥವಾಗಿ ಈ ಧರೆಯಲ್ಲಿ ಅವತರಿಸಿದ ಶ್ರೀಮನ್ನಾರಾಯಣ. ಶಿಶುಪಾಲ ಮತ್ತು ದಂತವಕ್ತ್ರರ ಸಂಹಾರವೇ ಈ ಅವತಾರದ ಪ್ರಮುಖ ಕಾರಣವಾದರೂ, ಕಂಸ, ಚಾಣೂರ, ಪೂತನಿ, ಜರಾಸಂಧ, ಕೌರವರೇ ಮೊದಲಾದ ಲೋಕಕಂಟಕರ ನಾಶಕ್ಕೂ ಕೃಷ್ಣ ಕಾರಣನಾದ. ಭಗವದ್ಗೀತೆಯೆಂಬ ಮಹಾನ್ ಕೊಡುಗೆಯನ್ನೂ ಈ ನಾಡಿಗೆ ನೀಡಿದ.

9) ಬೌದ್ಧಾವತಾರ :
ಪ್ರಶ್ನೆ: -

ಆಚಾರ್ಯರೇ ಒಂದು ವಿನಂತಿ 
ಬುದ್ಧ ಗೂ ಮತ್ತು dashavarada ಬೌದ್ಧಗೂ ಏನು ವ್ಯತ್ಯಾಸ ಮತ್ತು ಭಗವಂತನ ಬೌದ್ಧ ಅವತಾರದ ಬಗ್ಗೆ ವಿವರಣೆ, ಮಹಿಮೆ ಬಗ್ಗೆ ತಿಳಿಸಿ ಕೊಡಬೇಕಾಗಿ ವಿನಂತಿ.


ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್ |
ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ ||-(ಶ್ರೀಮದ್ಭಾಗವತಮ್-ಪ್ರಥಮ ಸ್ಕಂಧ - ಅಧ್ಯಾಯ ೩ - ೨೪ನೆಯ ಶ್ಲೋಕ) 
     ಕೃಷ್ಣಾವತಾರದ ನಂತರ ಕಲಿಯುಗದ ಸಂಧಿಕಾಲವು ಪ್ರಾರಂಭವಾದಾಗ ದೈತ್ಯರನ್ನು ಮೋಹಗೊಳಿಸಲು ಕೀಕಟದೇಶದ ಮಧ್ಯದಲ್ಲಿ ಗಮ್ಯ ಪ್ರದೇಶದಲ್ಲಿ ಬುದ್ಧನೆಂಬ ಹೆಸರಿನಿಂದ ಅವತರಿಸಿದ ಮಗನು ಜಿನನ ಮಗನೆಂದು ಭಾವಿಸಲ್ಪಡುವನು . 
    ಶ್ಲೋಕಕ್ಕೆ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ತಾತ್ಪರ್ಯ ಬರೆಯುತ್ತಾ - 
ಮೋಹನಾರ್ಥಂ ದಾನವಾನಾಂ ಬಾಲರೂಪಂ ಪಥಿ ಸ್ಥಿತಂ |
ಪುತ್ರಂ ತಂ ಕಲ್ಪಯಾಮಾಸ ಮೂಢಬುದ್ಧಿರ್ಜಿನಸ್ವಯಂ|| 
ತತಃ ಸಂಮೋಹಮಾಸ ಜಿನಾದ್ಯಾನಸುರಾಂಶಕಾನ್ |
ಭಗವಾನ್ ವಾಗ್ಭಿರುಗ್ರಾಭಿಃ ಹರಿಂ ಸಾ ವಾಚಿಭಿರ್ಹರಿಃ ||- ಇತಿ ಬ್ರಹ್ಮಾಂಡೇ ||

     ದಾನವರನ್ನು ಮೋಹಿಸುವದಕ್ಕಾಗಿ ಬಾಲರೂಪಿಯಾಗಿ ದಾರಿಯಲ್ಲಿದ್ದ ಶ್ರೀಹರಿಯನ್ನು ದುರ್ಬುದ್ಧಿಯದ ಜಿನನು ತಾನಾಗಿಯೇ ಮಗನೆಂದು ಕಲ್ಪಿಸಿಕೊಂಡನು . ಆಮೇಲೆ ಶ್ರೀಹರಿಯು ಅಹಿಂಸೆಯ ಮುಖ್ಯಧರ್ಮವೆಂದು ಹೇಳುವ ಕ್ರೂರ ಮಾತುಗಳಿಂದ ಜಿನ ಮುಂತಾದ ಅಸುರಾಂಶರರನ್ನು ವಂಚಿಸಿದನು . ಎಂದು ಬ್ರಹ್ಮಾಂಡಪುರಾಣದಲ್ಲಿದೆ . 
     ಕಲಿಯುಗ ಪ್ರಾರಂಭದ ಮೊದಲು ತ್ರಿಪುರವಾಸಿಗಳಾದ ದೈತ್ಯರು ವೇದಮಾರ್ಗದಲ್ಲಿ ಪ್ರವೃತ್ತರಾದಾಗ ಅವರನ್ನು ಮೋಹಿಸಲು ಮಗಧ ದೇಶದ ಮಧ್ಯವಾದ ಗಯಾ ಪ್ರದೇಶದಲ್ಲಿ ಬುದ್ಧನೆಂಬ ಹೆಸರಿನಿಂದ ಜಿನಸುತನೆಂದು ಶ್ರೀಹರಿಯು ಕಲ್ಪಿಸಲ್ಪಟ್ಟವನೆಂದು ಭಾವ . 
     ಇದು ಭಗವಂತನ ಬುದ್ಧಾವತಾರ . 

      ಇನ್ನು ಈಗ ನಾವು ನೋಡುವ ಕೇಳುವ ಗೌತಮ ಬುದ್ಧ ಇವನೊಬ್ಬ ದೈತ್ಯ , ಈ ದೈತ್ಯನು ಭಗವಂತನ ಬುದ್ಧಾವತಾರದ ನಂತರ ಎಷ್ಟೋವರ್ಷಗಳ ನಂತರ ಹುಟ್ಟಿದವನು , ಇವನು ಎಷ್ಟೋವರ್ಷ ಬೋಧಿವೃಕ್ಷದ ಕೆಳಗಡೆ ಕುಳಿತು ತಪಸ್ಸನ್ನಾಚರಿಸಿದ್ದರಿಂದ ಈತನಿಗೆ ಬುದ್ಧ ಎಂಬ ಹೆಸರು ಬಂತು , ಈ ದೈತ್ಯ ಏನ ಮಾಡಿದ ಅಂದ್ರ , ಭಗವಂತನು ಬುದ್ಧಾವತಾರದಿಂದ ಉಪದೇಶಿಸಿದ ತತ್ತ್ವಗಳನ್ನು ತನಗೆ ಹೇಗೆ ಬೇಕೋ ಹಾಗೆ ತಿರುಚಿ ಅಪದ್ಧವಾಗಿ ಬೋಧನೆ ಮಾಡಿದ , ಮುಂದೆ ಇದೇ ಬೌದ್ಧ ಮತ ಎಂದು ಪ್ರಸಿದ್ಧಿಗೆ ಬಂತು 🙏🏼
(following writeup is usually seen in books.  But, this is wrong- buddha of buddhism and boudhaavatara as per brahminism are different persons-
ದೈವತ್ವವನ್ನು ಮರೆತು, ಸ್ವಾರ್ಥ ಸಾಧಕರಾಗುತ್ತಿದ್ದ ಮನುಕುಲಕ್ಕೆ, ಸನ್ಮಾರ್ಗವನ್ನು ತೋರಲು ವಿಷ್ಣು ಎತ್ತಿದ ಅವತಾರವೇ ಬೌದ್ಧಾವತಾರ.  ರಾಜ್ಯ, ಕೋಶ, ಅರಮನೆಯೆಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಿ, ಆಸೆಯೇ ದುಃಖಕ್ಕೆ ಕಾರಣ ಎಂದು ಸಾರಿದ ಬುದ್ಧ , ಅಹಿಂಸೆಯೇ ಪರಮೋಧರ್ಮ ಎಂಬ ಮೂಲಭೂತ ತತ್ವಗಳನ್ನು ಸಾರಲು ನರರಲ್ಲಿ ನರನಾಗಿ ಹುಟ್ಟಿದ ಶ್ರೀಮನ್ನಾರಾಯಣ.
-above is not correct)


10) ಕಲ್ಕಿ ಅವತಾರ :

ತ್ರೇತಾಯುಗದಲ್ಲಿ ರಾಮನಾಗಿ, ದ್ವಾಪರದಲ್ಲಿ ಕೃಷ್ಣನಾಗಿ ಅವತರಿಸಿದ ನಾರಾಯಣ ಕಲಿಯುಗದಲ್ಲಿ ಕಲ್ಕಿಯಾಗಿ ಅವತಾರ ಎತ್ತುತಿಹನು. ಈ ಅವತಾರದ ಮೂಲ ಉದ್ದೇಶವೂ ದುಷ್ಟ ಶಿಕ್ಷಣೆ - ಶಿಷ್ಠ ರಕ್ಷಣೆಯೇ. ಕುದುರೆಯ ಮೇಲೆ ಕುಳಿತು, ಹಿರಿದ ಖಡ್ಗ ಹಿಡಿದ ಕಲ್ಕಿಯು ಕಲಿಯುಗದಲ್ಲಿಯೂ ಧರ್ಮ ಸಂಸ್ಥಾಪನೆ ಮಾಡಿಯೇ ಮಾಡುತ್ತಾನೆ ಎಂಬುದು ನಂಬಿಕೆ.
***********

Dashavatara rangoli


*********

ದಶಾವತಾರ
ದೇಹಾತ್ಮಗಳಲ್ಲಿ ಪರಮಾತ್ಮನ ಬಿಂಬಕ್ರಿಯೆ

ಪರಮಾತ್ಮನು ನಮ್ಮಲ್ಲಿ ಸಪ್ತಧಾತುಗಳಲ್ಲಿ, ಚತುರ್ವಿಂಶತಿ ತತ್ವಗಳಲ್ಲಿ, ಪಂಚ ಕೋಷಗಳಲ್ಲಿ, ಎಪ್ಪತೆರಡು ಸಾವಿರ ನಾಡಿಗಳಲ್ಲಿ ಇದ್ದು ವಿಹಾರ ಮಾಡುವಂತೆ ನಮ್ಮಲ್ಲಿ ಉಂಟಾಗುವ ದಶ ಅವಸ್ಥೆಗಳಿಗೂ ನಿಯಾಮಕನಾಗಿದ್ದಾನೆ. ಅಲ್ಲಲ್ಲಿ ಜೀವನ ಯೋಗ್ಯತೆಯನ್ನರಿತು ಆತನು ರೂಪಾಂತರಗಳನ್ನು ಹೊಂದುತ್ತಾ ನಮ್ಮ ದೇಹಗಳಲ್ಲಿ ವಿಹರಿಸಲು ನಮಗೆ ಅವಸ್ಥೆಗಳು ಉಂಟಾಗುತ್ತವೆ. ಒಂದು ಗಿಡದಲ್ಲಿ ಮಿಡಿಯು ಬಲಿತು ಕಾಯಾಗುತ್ತದೆ. ತರುವಾಯ ಹಣ್ಣಾಗುತ್ತದೆ. ಹಸಿರು ಬಣ್ಣದ ಕಾಯಿಯು ಹಳದಿ, ತರುವಾಯ ಕೆಂಪಾಗುತ್ತದೆ. ಒಗರು ಇದ್ದ ಮಿಡಿಯು ಕ್ರಮೇಣ ಹುಳಿ, ಸಿಹಿಯಾಗುತ್ತದೆ. ಇದು ಹೇಗಾಗುತ್ತದೆ? ಯಾರು ಮಾಡುತ್ತಾರೆ? ಇದೇ ರೀತಿಯಾಗಿ ನಮ್ಮ ದೇಹಾತ್ಮಗಳಲ್ಲಿ ಪರಮಾತ್ಮನ ಬಿಂಬಕ್ರಿಯೆಯು ಹಾಸು ಹೊಕ್ಕಾಗಿದೆ. ಅದನ್ನು ಚಿಂತಿಸಬೇಕು.

1) ಮಗು ಹುಟ್ಟಿದಾಗ ಕೈಕಾಲುಗಳಿರುವುದಿಲ್ಲ. (ಇದ್ದರೂ ಪ್ರಯೋಜನಕ್ಕೆ ಬಾರದು). ಇಲ್ಲಿ ಪರಮಾತ್ಮನು ಮತ್ಸ್ಯಾವತಾರ ನಾಗಿದ್ದು ರಕ್ಷಿಸುತ್ತಾನೆ.
2)ಮಗು ಹುಟ್ಟಿ ಆರು ತಿಂಗಳಾದರೆ ಅದು ಬೋರಲಾಗಿ ಬೆನ್ನನ್ನು ತೋರುತ್ತದೆ. ಇಲ್ಲಿ ಪರಮಾತ್ಮನು ಕೂರ್ಮನಾಗಿ ಪರಿವರ್ತಿತನಾದರೆ ಈ ಅವಸ್ಥೆಯು ಮಗುವಿಗೆ ಬರುತ್ತದೆ.
3) ಮಗುವಿಗೆ ಒಂದು ವರ್ಷವಾದರೆ ಅಂಬೆಗಾಲಿಡುತ್ತಾನೆ(ಚತುಷ್ಪಾತ್). ಮಣ್ಣನ್ನು ತಿನ್ನುತ್ತಾನೆ. ಆಗ ಅಲ್ಲಿ ಶ್ರೀ ಹರಿಯು ವರಾಹನಾಗಿ ವರ್ತಿಸುತ್ತಾನೆ.

ಇಲ್ಲಿಯವರೆಗೆ ಪರಮಾತ್ಮನು ತನ್ನ ಮೂಢ ತೆರನಾದ ರೂಪಗಳನ್ನು ಇಟ್ಟಿರುತ್ತಾನೆ.

4) ಮಗುವು ಮೂರು ವರ್ಷಕ್ಕೆ ಕಾಲಿರಿಸಿದರೆ ಓಡಾಟದಲ್ಲಿ ನರ ರೂಪ, ಬುದ್ಧಿಯಲ್ಲಿ(ಶಿರ) ಮೃಗ ರೂಪ ಬರುತ್ತದೆ. ಈ ವಯಸ್ಸಿನ ಬಾಲಕನು ಎತ್ತಿಕೊಳ್ಳುವಷ್ಟು ಚಿಕ್ಕವನಲ್ಲ, ನಡೆಯುವಷ್ಟು ದೊಡ್ಡವನಲ್ಲ. ಮನೆಯಲ್ಲಿ ಇರುವಷ್ಟು ಚಿಕ್ಕವನಲ್ಲ, ಹೊರಗೆ ಹೋಗುವಷ್ಟು ದೊಡ್ಡವನಲ್ಲ. ಚೆಂಡು ಬೇಕೆಂಬ ಜ್ಞಾನವಿದೆ, ತೊಟ್ಟಿಯಲ್ಲಿ ಬೀಳುತ್ತೇನೆಂಬ ಜ್ಞಾನವಿರುವುದಿಲ್ಲ.
ಹಾವು, ಚೇಳು, ಬೆಂಕಿಗಳ ಭಯವಿರುವುದಿಲ್ಲ. ಸಿಕ್ಕಿದ್ದನ್ನು ಕುಡಿಯುವುದು, ಏನೆಲ್ಲಾ ಪರಿಚೇಷ್ಟೆಗಳು ಈ ವಯಸ್ಸಿನ ಬಾಲಕನಲ್ಲಿ!  (ಅಲಕ್ಷ್ಯ ಮಾಡಿದಲ್ಲಿ ಯಾವ  ವೇಳೆಯಲ್ಲಾದರೂ ಅಪಮೃತ್ಯುವು ಘಟಿಸಬಹುದು). ಈ ಕಾಲದಲ್ಲಿ ನಮ್ಮಲ್ಲಿ ಶ್ರೀ ಲಕ್ಷ್ಮೀನರಸಿಂಹ ನೆಲೆಸಿದ್ದು ರಕ್ಷಿಸುತ್ತಾನೆ.

5)ಮನುಷ್ಯನು ಎಂಟನೇ ವರ್ಷ ವಯಸ್ಸಿಗೆ ಬಂದರೆ ಪರಿಪೂರ್ಣವಾದ ಜ್ಞಾನಾರ್ಹವಾಗುತ್ತಾನೆ. ಆಗ ಆ ಅವಸ್ಥೆಗೆ ವಾಮನ ರೂಪವೇ ಕಾರಣ. ಅದಕ್ಕಾಗಿಯೇ ಆ ಅವಸ್ಥೆಯಲ್ಲಿ ಉಪನಯನವನ್ನು ಮಾಡುತ್ತಾರೆ.(ಸಕಲರೂ ಅವರವರ ವೃತ್ತಿ ಧರ್ಮದಲ್ಲಿ ತೊಡಗುತ್ತಾರೆ.)

6) ಉಪನೀತನಾದ ಮೇಲೆ ವೇದಾಧ್ಯಯನವನ್ನು
(ಸ್ವವಿಹಿತ ವೃತ್ತಿಯನ್ನು) ಕೈಕೊಳ್ಳಬೇಕು. ಇದು ಪಿತೃ ಆಜ್ಞೆ- ಮಗುವನ್ನು ಗುರುಕುಲಕ್ಕೆ ಕಳುಹಿಸಿದ
ತಾಯಿಯು ಮೃತ ಪ್ರಾಯಳಾಗಿರುತ್ತಾಳೆ. ಮಗನು ವಿದ್ವಾಂಸನಾಗಿ ಬಂದುದನ್ನು ಕಂಡು ಪುನರ್ಜೀವವನ್ನು ಪಡೆದಂತೆ ಹಿಗ್ಗುತ್ತಾಳೆ. ಇದೇ ಪರಶುರಾಮಾವತಾರ - ಬ್ರಹ್ಮಚಾರಿ.

7)ವಿದ್ಯಾಭ್ಯಾಸವು(8 ರಿಂದ 20-25 ವರ್ಷಗಳು) ಮುಗಿದ ಮೇಲೆ ಕಾಯಕದ ಮೂಲಕ ದ್ರವ್ಯಾರ್ಜನೆ(ರಾಜ್ಯಭಾರ), ಕುಟುಂಬ ಪೋಷಣೆಯನ್ನು ಮಾಡಬೇಕು. ಆ ಕಾರ್ಯವನ್ನು ಶ್ರೀರಾಮನಾಗಿ ನಿಂತು ಶ್ರೀ ಹರಿಯು ಮಾಡಿಸುತ್ತಾನೆ.

8) ಆರ್ಜನೆಯು ತೃಪ್ತಿಕರವಾದ ಮೇಲೆ ಮದುವೆ, ಮಕ್ಕಳು. ಇಲ್ಲಿ ಕೃಷ್ಣನಾಗಿ ಶ್ರೀ ಹರಿಯು ತೃಪ್ತಿಪಡಿಸುತ್ತಾನೆ. ಈ ರಾಮ, ಕೃಷ್ಣಾದಿ ರೂಪಗಳು 20-25 ವರ್ಷಗಳಿಂದ 80 ವರ್ಷಗಳವರೆಗೆ ನಮ್ಮಲ್ಲಿ ಸನ್ನಿಹಿತವಾಗಿರುತ್ತವೆ. ಆದ್ದರಿಂದಲೇ ಇದನ್ನು ಸ್ಮರಿಸುತ್ತ ಸದಾ ರಾಮ, ಕೃಷ್ಣಾ ಎಂದು ನುಡಿಯುತ್ತಿರಬೇಕು. ಬರೀ ರಾಮ, ಕೃಷ್ಣ ಎಂದರೆ ಏನೂ ಪ್ರಯೋಜನವಿಲ್ಲ. ಕೊಡುವಾಗ ರಾಮ ರೂಪದಿಂದ, ತೆಗೆದುಕೊಳ್ಳುವಾಗ ಕೃಷ್ಣರೂಪದಿಂದ ಶ್ರೀ ಹರಿಯು ನಮ್ಮಲ್ಲಿರುತ್ತಾನೆಂಬ ಅನುಸಂಧಾನ ಬೇಕು.
9) 80 ರಿಂದ 100 ನೇ ಆಯುರ್ವರೆಗೆ ಮೈಮೇಲೆ ಅರಿವೆಯು ಇದ್ದುದರ, ಇಲ್ಲದುದರ ಪರಿವೆಯು ನಷ್ಷವಾಗಿರುತ್ತದೆ. ಇಲ್ಲಿ ದಿಗಂಬರನ(ಬುದ್ಧ) ವ್ಯಾಪಾರವು ಸಾಗಿರುತ್ತದೆ ಎಂದು ತಿಳಿಯಬೇಕು.

10) 100 ನ್ನು ದಾಟಿದ ಮೇಲೆ ಅಶ್ವಾರೋಹಿ(ಕಲ್ಕಿ)ಯಾಗಲೇ ಬೇಕು.(ಅವಭೃತ).

ಈ ಉಪಾಸನಾ ಕ್ರಮವು ಸಿದ್ಧಿಯಾದವರಿಗೆ ದೇಹಾಭಿಮಾನವಿರುವುದಿಲ್ಲ. ಇದನ್ನು ಓದಿದವರಿಗೆ ಆಯುಷ್ಯ, ಆರೋಗ್ಯ, ಐಶ್ವರ್ಯಾದಿಗಳು ಅಭಿವೃದ್ದಿ ಆಗುವವು.

ಕೃಪೆ: ಪಾಂಡುರಂಗ ಪಾರಿಜಾತ
ವ್ಯಾಖ್ಯಾನಕಾರರು: 

ಪಂ||ವೇ||ಬಿ.ಸತ್ಯನಾರಾಯಣಾಚಾರ್ಯ
********


No comments:

Post a Comment