SEARCH HERE

Tuesday, 1 January 2019

ಸರಸ್ವತಿ ಪೂಜಾ saraswati puja ashvina shukla saptami






ಸರಸ್ವತಿ ಪೂಜಾ
ಇಂದಿನ ಶುಭದಿನ ವಿದ್ಯಾಪ್ರದಾಯಿನಿ, ಜ್ಞಾನ ದಾಯಿನೀ ಸರಸ್ವತಿ ಯನ್ನು ಆಹ್ವಾನಿಸಿ ಸಂಭ್ರಮದಿಂದ
ಪೂಜಿಸಿ ವಿದ್ಯಾ, ಜ್ಞಾನ, ದಿವ್ಯ ಮತಿಯನ್ನು ಕೊಡು ಎಂದು ಭಕ್ತಿ ಯಿಂದ ಪ್ರಾರ್ಥಿಸೋಣ.

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು//

ನಮಸ್ತೇ ಶಾರದಾದೇವಿ ಕಾಶ್ಮೀರ ಪುರ ವಾಸಿನಿ/
ತ್ವಾ ಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ
ಚ ದೇಹಿ ಮೇ //
********

ದ್ವಾದಶ ಸರಸ್ವತಿ ನಾಮಾವಳಿ
ಸರಸ್ವತಿ ತ್ವಯಮ್ ದೃಷ್ಟ್ವ  ವೀಣಾ ಪುಸ್ತಕ ಧಾರಿಣಿ ।
ಹಂಸ ವಾಹಿನಿ ಸಂಯುಕ್ತ ವಿದ್ಯಾ ದಾನಕರಿ ಮಮ ।।

ಪ್ರಥಮಂ ಭಾರತಿ ನಾಮ ದ್ವಿತೀಯಂ ಚ ಸರಸ್ವತಿ ।
ತೃತೀಯಂ ಶಾರದಾದೇವಿ ಚತುರ್ಥಂ ಹಂಸವಾಹಿನಿ ।।

ಪಂಚಮಂ ಜಗತೀ  ಕೀಯತಾಮ್  ಷಷ್ಠಮ್ ವಾಗೀಶ್ವರೀ  ತಥಾ ।
ಸಪ್ತಮಮ್  ಕೌಮಾರೀ ಪ್ರೋಕ್ತಾಮ್ ಅಷ್ಟಮಂ  ಬ್ರಹ್ಮಚಾರಿಣೀ ।।

ನವಮಂ ಬುದ್ಧಿಧಾತ್ರೀ  ಚ ದಶಮಂ ವರದಾಯಿನೀ ।
ಏಕಾದಶಂ ಕ್ಷುದ್ರ ಘಂಟಾ ದ್ವಾದಶಂ ಭುವನೇಶ್ವರಿ ।

ಬ್ರಾಹ್ಮೀ  ದ್ವಾದಶೈತಾನೀ  ನಾಮಾನಿ ತ್ರಿಸಂಧ್ಯಂ ಯಃ ಪಠೇನರಃ ।
ಸರ್ವ ಸಿದ್ಧಿಕರೀ  ತಸ್ಯ ಪ್ರಸನ್ನ ಪರಮೇಶ್ವರೀ ।।


।ಸಾಮೆ  ಜಿಹ್ಹ್ವಾಗ್ರೇ  ವಸತೇ ನಿತ್ಯಂ ಬ್ರಹ್ಮರೂಪ  ಸರಸ್ವತೀ ।
**********


ನಲಿದಾಡೆ ಎನ್ನ ನಾಲಿಗೆ ಮೇಲೆ - ಶಾರದಾ ದೇವಿ
ಕುಣಿದಾಡೇ ಎನ್ನ ನಾಲಿಗೆ ಮೇಲೆ//

ಘಿಲು ಘಿಲು ಘಿಲು ಗೆಜ್ಜೆಯ ನಾದ ಪೊಳೆವ ಅಂದುಗೆ
ರುಳಿ ಪೈಜಣವಿಟ್ಟು ಪುಟ್ಟ ಪಾದ ಸುರವರನುತ ಪಾದ

ಸರಸಿಜೋದ್ಭವನ ವದನ ನಿಲಯಳೆ
ಕರುಣದಿಂದ ಪರಿಪಾಲಿಸು ಮಾತೆ.//೧//

ನಸುನಗೆ ಮುಖವು ನಾಸಾಭರಣ - ಎಸೆವ ಕಪೋಲ
ಹೊಸ ಮುತ್ತಿನ ಚಳ್ಳತುಂಬಿಟ್ಟಾ ಶ್ವವಣ

ತಿಲಕವು ಹಸನ ಶಶಿಸೂರ್ಯರ ಆಭರಣ ಶೋಭಿತಳೆ
ಕುಸುಮ ಮುಡಿದ ಮೂರ್ಧಜವುಳ್ಳವಳೇ///೨//

ಶೃಂಗಾರ ವಾದ ಜಡೆ ಬಂಗಾರ ರಾಗುಟಿ ಚೌರಿ
ಹೊಂಗ್ಯಾದಿ ಗೊಂಡೆ ಮುತ್ತಿನ ಹಾರ ರಂಗು ಮನೋಹರ/

ಮಂದಗಮನೆ ಅರವಿಂದ ನಯನೆ  ಶ್ರೀ
ರಂಗವಿಠಲನ ತೋರೆ ಶುಭಾಂಗೀ.//೩//
**********


ಹಾಡಲು ಏಳುಸ್ವರಗಳ ನೀಡಿದ ದೇವಿ ನಿನ್ನನು ಮರೆತು ಇರಲಾರೆನು ನಾನು ಚಿತ್ತದಿ ನಿತ್ಯ ನೆಲೆಸು ಸರಸ್ವತಿ ದೇವಿ
||ಹಾಡಲು||

ಮಣಿನುಂಗುರ ಧರಿಸಿ ಕುಳಿತ

ಹರಿಣಿನ ನಿಧಿಯಾಗಿಹೆ ದೇವಿ
ಮನದ ಗುಡಿಯ ಒಳಗೆ ಬಾರೇಲ
ಮಧುರ ಭಾಷಿಣಿ ಭಾರತಿ ದೇವಿ
ಚಿನ್ನದ ವೀಣೆ ಪಿಡಿದ ಸರಸ್ವತಿದೇವಿ ನೀಲವೇಣಿ ನೀರಜಾಕ್ಷಿ ಸರಸ್ವತಿದೇವಿ
 ||ಹಾಡಲು||

ನಿನ್ನ ಮುಗುಳುನಗೆಯಲ್ಲಿ

ನಾಗೋಪಾಸನೆ ಕಂಡೆನು ತಾಯಿ ನಿನ್ನ ಕಂಗಳ ಕಾಂತಿಯಲ್ಲಿ ವೇದೋಪಾಸನೆ ಕಂಡೆನು ತಾಯಿ 
ಬೇಡಿದ ವರವ ನೀಡುವ ಸರಸ್ವತಿದೇವಿ
ಅಕ್ಷರ ಮಾಲೆ ಧರಿಸಿದ
ಸರಸ್ವತಿದೇವಿ
||ಹಾಡಲು||

ನಿನ್ನ ನಾಮದ ಸುಧೆಯಲ್ಲಿ 

ಅಭಿಷೇಕಾಮೃತ ಕಂಡೆನು ನಾನು ನಿನ್ನ ಕರುಣ‌ಬೆಳಕಿನಲ್ಲಿ
ದೀಪಾರಾಧನೆ ಕಂಡೆನು ನಾನು
ಪ್ರೀತಿಯಾ ಎಂದೆಂದು ತೋರುವ ಸರಸ್ವತಿದೇವಿ
ಅಕ್ಷರರೂಪಿಣಿ ದೇವಿ ಸರಸ್ವತಿದೇವಿ ||ಹಾಡಲು||

ನಿನ್ನ ದಯೆಯಾ ಮಳೆಯಲ್ಲಿ

ಪಾವನಗಂಗಾ ಜಲವ ತಂದೆ
ನಿನ್ನರುಷದ ಗುಣಗೈಯಲ್ಲಿ
ಶಾಂತಿಯಾ ಕ್ರಮವ ಕಂಡೆ 
ಬೇಡಿದ ವರವ ನೀಡುವ ಸರಸ್ವತಿದೇವಿ ಅಕ್ಷರ ರೂಪಿಣಿ

ಸರಸ್ವತಿದೇವಿ ||ಹಾಡಲು||
****

ಮಾಧ್ವವಾಙ್ಮಯದಲ್ಲಿ ಶ್ರೀಸರಸ್ವತೀಸ್ತುತಿ
🔯🔯🔯🔯🔯🔯

ತತ್ವಪ್ರಪಂಚದಲ್ಲಿ ಸರ್ವೋತ್ತಮದೇವತೆಯಾದ ಶ್ರೀಹರಿಯನ್ನೇ ಸಕಲಶಬ್ದಗಳೂ ಸ್ತುತಿಸುತ್ತವೆ.ಅವನೇ ಸರ್ವಜೀವರಿಂದಲೂ ಮುಖ್ಯೋಪಾಸ್ಯ.
ಶ್ರೀಹರಿಯ ನಂತರ ರಮಾಬ್ರಹ್ಮಾದಿ ಸಕಲದೇವತೆಗಳೂ ಶ್ರೀಹರಿಯ ಕುಟುಂಬದವರಾಗಿ ಪೂಜ್ಯರಾಗಿದ್ದಾರೆ. ಹೀಗೆ ಶ್ರೀಹರಿಯಿಂದಾರಂಭಿಸಿ ಸಕಲಸ್ವೋತ್ತಮರೂ ಪೂಜ್ಯರೇ ,ಇವರ ಅನುಗ್ರಹವಿಲ್ಲದೆ ಶ್ರೀಹರಿಯ ತತ್ವಜ್ಞಾನ ಅಸಾಧ್ಯ. ಈ ನಿಟ್ಟಿನಲ್ಲಿ 
ವಿಶೇಷವಾಗಿ ಶ್ರಿಹರಿಯ ಮುದ್ದಿನಸೋಸೆಯಾದ , ಶ್ರೀಬ್ರಹ್ಮದೇವರ ಪತ್ನಿಯಾದ, ಸಕಲವಚನಚೇತೋದೇವತೆಯಾದ ವೇದಾದಿಸಕಲವಿದ್ಯಾಭಿಮಾನಿನಿಯಾದ  ಶ್ರೀಸರಸ್ವತೀದೇವಿಯರ ಅನುಗ್ರಹ ಸಾಧಕನಾದವನಿಗೆ ಅತ್ಯಂತಮುಖ್ಯವಾದುದು.

(ಸರಸ್ವತಿದೇವಿಯರಿಗೂ,ಭಾರತೀದೇವಿಯರಿಗೂ ಹೆಸರಿನಲ್ಲೂ, ಲಕ್ಷಣದಲ್ಲೂ ,ರೂಪದಲ್ಲೂ,{ರಮಾನಾರಾಯಣರ ಅವಳಿ ಹೆಣ್ಣುಮಕ್ಕಳಾದ್ದರಿಂದ} ಸಂಪೂರ್ಣಸಾಮ್ಯತೆ ಇರುವುದರಿಂದ ಶಾಸ್ತ್ರಗಳಲ್ಲಿ ಸರಸ್ವತಿಯ ಸ್ತುತಿ ಅದು ಭಾರತೀದೇವಿಯ ಸ್ತುತಿಯಾಗಿಯೂ ಭಾರತೀದೇವಿಯ ಸ್ತುತಿ ಸರಸ್ವತಿಯ ಕುರಿತಾಗಿಯೂ ಕೆಲವುಕಡೆ ಪ್ರಸಿದ್ಧವಾಗಿವೆ. ಎಲ್ಲಿ ಬ್ರಹ್ಮಪತ್ನಿ ವಾಯುಪತ್ನಿ ಇತ್ಯಾದಿ ವಿಶೇಷಣ ಸಹಿತವಾಗಿ,ಅಥವಾ ಪ್ರಸಂಗೋಚಿತವಾಗಿ ಉಲ್ಲೇಖಿಸಲಾಗುವುದೋ ಅಲ್ಲಿ ಸರಸ್ವತೀ-ಭಾರತೀದೇವಿಯರ ವೈಲಕ್ಷಣ್ಯ ತಿಳಿಯಬಹುದು.
ಪ್ರಕೃತದಲ್ಲಿ ಉಭಯಸ್ತುತಿಯನ್ನೂ ಪ್ರತ್ಯೇಕಸ್ತುತಿಯನ್ನೂ ಇಲ್ಲಿ ಏಕತ್ರ ಸಂಗ್ರಹಿಸಿಕೊಡಲಾಗಿದೆ.)

 ಪ್ರಾಯಶ:
ಸಮಗ್ರಮಾಧ್ವವಾಙ್ಮಯದಲ್ಲಿನ ಅಪರೂಪದ  ಸರಸ್ವತೀದೇವಿಯರ ಸ್ತುತಿಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ,
 (ಪ್ರಾಯೇಣ 10ಸ್ತುತಿಗಳು  ಸಿಕ್ಕಿವೆ.) ದಾಸಸಾಹಿತ್ಯದಲ್ಲಿ ಸರಸ್ವತಿಯ ಕುರಿತಾಗಿ ಅನೇಕ ಕೀರ್ತನೆಗಳೂ ಇವೆ.ಅವುಗಳನ್ನು ಹೊರತು ಪಡಿಸಿ ಇಲ್ಲಿ ಸಂಗ್ರಹಿಸಲಾಗಿದೆ.)

(  ಇದಿಷ್ಟು ಶ್ಲೋಕಗಳಲ್ಲದೆ ಮಾಧ್ವವಾಙ್ಮಯದಲ್ಲಿ ಎಲ್ಲಾದರೂ ಸರಸ್ವತಿ ಸ್ತುತಿಗಳು ಸಿಕ್ಕಿದ್ದಲ್ಲಿ ದಯವಿಟ್ಟು ತಿಳಿಸಿ)

🔸🔹🔸🔹🔸🔹🔸🔹

ಉದ್ಯದ್ದಿವಾಕರಸಮೂಹನಿಭಾಂ ಸ್ವಭರ್ತುರಂಕಸ್ಥಿತಾಮಭಯಸದ್ವರಬಾಹುಯುಗ್ಮಾಮ್|ಮುದ್ರಾಂ ಚ ತತ್ವದೃಶಯೇ ವರಪುಸ್ತಕಂ ಚ ದೋರ್ಯುಗ್ಮಕೇನ ದಧತೀಂ ಸ್ಮರತಾತ್ಮವಿದ್ಯಾಮ್||

-ತಂತ್ರಸಾರಸಂಗ್ರಹ
✍️ಶ್ರೀಮನ್ಮಧ್ವಾಚಾರ್ಯರು 

🔸🔹🔸🔹🔸🔹🔸🔹

ಭವತಿ ಯದನುಭಾವಾದೇಡಮೂಕೋಪಿ ವಾಗ್ಮೀ , ಜಡಮತಿರಪಿಜಂತುರ್ಜಾಯತೇ ಪ್ರಾಜ್ಞಮೌಲಿ:|ಸಕಲವಚನಚೇತೋದೇವತಾ ಭಾರತೀ ಸಾ, ಮಮ ವಚಸಿ ನಿಧತ್ತಾಂ ಸನ್ನಿಧಿಂ ಮಾನಸೇ ಚ||

- ಶ್ರೀಮನ್ನ್ಯಾಯಸುಧಾ
✍️ ಶ್ರೀಮಜ್ಜಯತೀರ್ಥರು
🔸🔹🔸🔹🔸🔹🔸🔹

ನಮಾಮಿ ವಾಣೀಂ ಬ್ರಹ್ಮಾಣೀಂ ಕಲ್ಯಾಣೀಂ ಶುದ್ಧಧರ್ಮಿಣೀಮ್ ।
ಅಘೌಘಹಾರಿಣೀಂ ನಿತ್ಯತರುಣೀಂ ಮುಕ್ತಿಕಾರಣೀಮ್॥

ಹರೌ ಭಕ್ತಿಮತೀಂ ಭಾಗ್ಯವತೀಂ ಶತಧೃತೇ: ಸತೀಮ್ ।
ಸರಸ್ವತೀಂ ಪುಣ್ಯವತೀಂ ಸ್ಮರಾಮೀಂದುಸಮದ್ಯುತಿಮ್ ॥

-ಸರಸಭಾರತೀವಿಲಾಸ
✍️ಶ್ರೀಮದ್ವಾದಿರಾಜರು

ಧ್ಯಾನೀ ಯತ್ಕೃಪಯಾ ಜ್ಞಾನೀ ಕ್ಷೋಣೀ ಸಾ ಶಾಸ್ತ್ರಸಂಪದಾಮ್।
ವಾಣೀ ಶುಭಗುಣಶ್ರೇಣೀ ಪ್ರೀಣಾತು ಹಿತಕಾರಿಣೀ॥

ವಿವರಣವ್ರಣ
-✍️ಶ್ರೀಮದ್ವಾದಿರಾಜರು


ತಾಟಂಕದ್ವಯಶೋಭಿಕರ್ಣಯುಗಲಂ  ಭ್ರಾಜದ್ದಯಾವೀಕ್ಷಣಂ, ಪೂರ್ಣೇಂದುದ್ಯುತಿ ವಿದ್ರುಮಾಧರರುಚಾ ವ್ಯಾಮಿಶ್ರಮಂದಸ್ಮಿತಮ್| ಈಷತ್ಕುಂಚಿತಕುಂತಲಂ ಸತಿಲಕಂ ನಾಸೋಲ್ಲಸನ್ಮೌಕ್ತಿಕಮ್, ಭೂಯಾತ್ ಕೂರ್ಮಸದೃಕ್ಷಗಂಡಯುಗಲಂ ವಾಣೀಮುಖಂ ಶ್ರೇಯಸೇ||

ಶ್ರೀನಾಥಕೀರ್ತ್ಯಂಬುಜಸೇವ್ಯಗಂಧಂ ಪ್ರಾಣ:ಸ ಸಂಗೃಹ್ಯವಿಹರ್ತುಮೀಷ್ಟೇ|  ಸೋಹಂ ತದೀಯಾಗಮವಿಸ್ತರಂ ತದ್ವಾಣೀಮುಖಂ ವಾಸಯಿತುಂ ವೃಣೋಮಿ||

-ಶ್ರೀರುಗ್ಮಿಣೀಶವಿಜಯ
✍️ಶ್ರೀಮದ್ವಾದಿರಾಜರು
🔸🔹🔸🔹🔸🔹🔸🔹

ಚತುರವದನನ ರಾಣಿ ಅತಿರೋಹಿತವಿಲವಿಜ್ಜ್ಞಾನಿ ನಿಗಮಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ| ನುತಿಸಿ ಬೇಡುವೆ ಜನನಿ ಲಕ್ಷ್ಮೀಪತಿಯ ಗುಣಗಳ‌ಸ್ತುತಿಪುದಕೆ ಸನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ||

ಸರಸವತಿವೇದಾತ್ಮಿಕಾ ಭುಜಿ ನರಹರೀಗುರುಭಕ್ತಿ ಬ್ರಾಹ್ಮೀ ಪರಮಸುಖಬಲಪೂರ್ಣೆ ಶ್ರದ್ಧಾ ಪ್ರೀತಿ ಗಾಯತ್ರೀ|ಗರುಡಶೇಷರಜನನಿ ಶ್ರೀ ಸಂಕರುಷಣಜಯಾತನುಜೆ ವಾಣೀ ಕರಣನೀಯಾಮಕೆ ಚತುರ್ದಶಭುವನಸನ್ಮಾನ್ಯೆ||

ವಾಸುದೇವನ ಮೂರ್ತಿ ಹೃದಯಾಕಾಶಮಂಡಲಮಧ್ಯದಲಿ ತಾರೇಶನಂದದಿ ಕಾಣುತತಿಸಂತೋಷದಲಿ ತುತಿಪ| ಆ ಸರಸ್ವತಿಭಾರತಿಯರಿಗೆ ನಾ ಸತತ ವಂದಿಸುವೆ ಪರಮೋಲ್ಲಾಸದಲಿ ಸುಜ್ಞಾನಭಕುತಿಯ ಸಲಿಸಲೆಮಗೆಂದು||

ಶ್ರೀಹರಿಕಥಾಮೃಸಾರ
✍️ಶ್ರೀಜಗನ್ನಾಥದಾಸರು

🔸🔹🔸🔹🔸🔹🔸🔹

ಶ್ರೀಸರಸ್ವತೀದೇವಿಯರ ಸ್ತುತಿಯಾಗಿ ಪ್ರಾಯಶಃ ಈ 7- ಶ್ಲೋಕಗಳು & 3- ಪದ್ಯಗಳು ನಮಗೆ ದೊರಕುತ್ತವೆ. ಶ್ರೀಸರಸ್ವತಿದೇವಿಯರ ಅನುಗ್ರಹ ಸಂಪಾದನಾದೃಷ್ಟಿಯಿಂದ ಈ 10 ಸ್ತುತಿಗಳು ಅತ್ಯಂತ ಮಹತ್ವಪೂರ್ಣವಾಗಿದ್ದಾಗಿವೆ.
ಇವುಗಳನ್ನು ಸಾಧಕರು ನಿತ್ಯ ಅನುಷ್ಠಾನದಲ್ಲಿ ರೂಢಿಸಿಕೊಂಡು ಶ್ರೀಸರಸ್ವತೀದೇವಿಯರ ಅನುಗ್ರಹವನ್ನು ಪಡೆದು ತನ್ಮೂಲಕ ಶ್ರೀಹರಿಯ ಅನುಗ್ರಹಪಡೆಯಬಹುದು.

ಶ್ರೀಕೃಷ್ಣಾರ್ಪಣಮಸ್ತು.

✍️ಅನಿಲ ಜೋಷಿ

•||मध्वो देदिप्यतेसौ जगति विजयते सत्सभामङ्गलाय।।•
***

ನವರಾತ್ರಿಯ ಸಪ್ತಮಿ ದಿನ ಶ್ರೀ ಸರಸ್ವತಿ ಆವಾಹನೆ. ಪವಿತ್ರವಾದ ಈ ದಿನದಲ್ಲಿ ವಿದ್ಯಾದಿದೇವತೆಯಾದ ಸರಸ್ವತಿ ಪ್ರಾರ್ಥನೆ ಮಾಡುತ್ತಾ ಅಗಸ್ತ್ಯರಿಂದ ರಚಿತವಾದ ಶ್ರೀ ಸರಸ್ವತಿ ಸ್ತೋತ್ರ ಸಂಗ್ರಹಿಸಿ ಕೊಟ್ಟಿದ್ದೇನೆ.. ಎಲ್ಲರೂ ಒಂದ್ದಲ್ಲ ಒಂದು ರೀತಿಯಲ್ಲಿ ವಿದ್ಯಾಪೇಕ್ಷಿಗಳೇ, ಪರಶುಕ್ಲ ತ್ರಯರಲ್ಲಿ ಒಬ್ಬಳಾದ ಸರಸ್ವತಿ ದೇವಿಯ ಪ್ರಾರ್ಥನೆ ಮಾಡೋಣ.

ಶ್ರೀ ಸರಸ್ವತೀ ಪೂಜೆ ವಿಶೇಷ

 ಅಗಸ್ತ್ಯ ಕೃತ ಸರಸ್ವತೀ ಸ್ತೋತ್ರ 

ಯಾ ಕುಂದೇಂದು ತುಷಾರಹಾರಧವಳಾ ಯಾ ಶುಭ್ರವಸ್ತ್ರಾವೃತಾ
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ ||

ದೋರ್ಭಿರ್ಯುಕ್ತಾ ಚತುರ್ಭಿಃ ಸ್ಫಟಿಕಮಣಿನಿಭೈ ರಕ್ಷಮಾಲಾಂದಧಾನಾ
ಹಸ್ತೇನೈಕೇನ ಪದ್ಮಂ ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ |
ಭಾಸಾ ಕುಂದೇಂದುಶಂಖಸ್ಫಟಿಕಮಣಿನಿಭಾ ಭಾಸಮಾನಾಜ಼್ಸಮಾನಾ
ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ || 

ಸುರಾಸುರೈಸ್ಸೇವಿತಪಾದಪಂಕಜಾ ಕರೇ ವಿರಾಜತ್ಕಮನೀಯಪುಸ್ತಕಾ |
ವಿರಿಂಚಿಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು ವಾಚಿ ಮೇ ಸದಾ || 

ಸರಸ್ವತೀ ಸರಸಿಜಕೇಸರಪ್ರಭಾ ತಪಸ್ವಿನೀ ಸಿತಕಮಲಾಸನಪ್ರಿಯಾ |
ಘನಸ್ತನೀ ಕಮಲವಿಲೋಲಲೋಚನಾ ಮನಸ್ವಿನೀ ಭವತು ವರಪ್ರಸಾದಿನೀ ||

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ || 

ಸರಸ್ವತಿ ನಮಸ್ತುಭ್ಯಂ ಸರ್ವದೇವಿ ನಮೋ ನಮಃ |
ಶಾಂತರೂಪೇ ಶಶಿಧರೇ ಸರ್ವಯೋಗೇ ನಮೋ ನಮಃ || 

ನಿತ್ಯಾನಂದೇ ನಿರಾಧಾರೇ ನಿಷ್ಕಳಾಯೈ ನಮೋ ನಮಃ |
ವಿದ್ಯಾಧರೇ ವಿಶಾಲಾಕ್ಷಿ ಶುದ್ಧಜ್ಞಾನೇ ನಮೋ ನಮಃ || 

ಶುದ್ಧಸ್ಫಟಿಕರೂಪಾಯೈ ಸೂಕ್ಷ್ಮರೂಪೇ ನಮೋ ನಮಃ |
ಶಬ್ದಬ್ರಹ್ಮೀ ಚತುರ್ಹಸ್ತೇ ಸರ್ವಸಿದ್ಧ್ಯೈ ನಮೋ ನಮಃ ||

ಮುಕ್ತಾಲಂಕೃತ ಸರ್ವಾಂಗ್ಯೈ ಮೂಲಾಧಾರೇ ನಮೋ ನಮಃ |
ಮೂಲಮಂತ್ರಸ್ವರೂಪಾಯೈ ಮೂಲಶಕ್ತ್ಯೈ ನಮೋ ನಮಃ || 

ಮನೋನ್ಮನೀ ಮಹಾಭೋಗೇ ವಾಗೀಶ್ವರೀ ನಮೋ ನಮಃ |
ವಾಗ್ಮ್ಯೈ ವರದಹಸ್ತಾಯೈ ವರದಾಯೈ ನಮೋ ನಮಃ || 

ವೇದಾಯೈ ವೇದರೂಪಾಯೈ ವೇದಾಂತಾಯೈ ನಮೋ ನಮಃ |
ಗುಣದೋಷವಿವರ್ಜಿನ್ಯೈ ಗುಣದೀಪ್ತ್ಯೈ ನಮೋ ನಮಃ || 

ಸರ್ವಜ್ಞಾನೇ ಸದಾನಂದೇ ಸರ್ವರೂಪೇ ನಮೋ ನಮಃ |
ಸಂಪನ್ನಾಯೈ ಕುಮಾರ್ಯೈ ಚ ಸರ್ವಜ್ಞೇ ತೇ ನಮೋ ನಮಃ || 

ಯೋಗಾನಾರ್ಯ ಉಮಾದೇವ್ಯೈ ಯೋಗಾನಂದೇ ನಮೋ ನಮಃ |
ದಿವ್ಯಜ್ಞಾನ ತ್ರಿನೇತ್ರಾಯೈ ದಿವ್ಯಮೂರ್ತ್ಯೈ ನಮೋ ನಮಃ || 

ಅರ್ಧಚಂದ್ರಜಟಾಧಾರೀ ಚಂದ್ರಬಿಂಬೇ ನಮೋ ನಮಃ |
ಚಂದ್ರಾದಿತ್ಯಜಟಾಧಾರೀ ಚಂದ್ರಬಿಂಬೇ ನಮೋ ನಮಃ || 

ಅಣುರೂಪೇ ಮಹಾರೂಪೇ ವಿಶ್ವರೂಪೇ ನಮೋ ನಮಃ |
ಅಣಿಮಾದ್ಯಷ್ಟಸಿದ್ಧಾಯೈ ಆನಂದಾಯೈ ನಮೋ ನಮಃ || 

ಜ್ಞಾನ ವಿಜ್ಞಾನ ರೂಪಾಯೈ ಜ್ಞಾನಮೂರ್ತೇ ನಮೋ ನಮಃ |
ನಾನಾಶಾಸ್ತ್ರ ಸ್ವರೂಪಾಯೈ ನಾನಾರೂಪೇ ನಮೋ ನಮಃ ||

ಪದ್ಮಜಾ ಪದ್ಮವಂಶಾ ಚ ಪದ್ಮರೂಪೇ ನಮೋ ನಮಃ |
ಪರಮೇಷ್ಠ್ಯೈ ಪರಾಮೂರ್ತ್ಯೈ ನಮಸ್ತೇ ಪಾಪನಾಶಿನೀ || 

ಮಹಾದೇವ್ಯೈ ಮಹಾಕಾಳ್ಯೈ ಮಹಾಲಕ್ಷ್ಮ್ಯೈ ನಮೋ ನಮಃ |
ಬ್ರಹ್ಮವಿಷ್ಣುಶಿವಾಯೈ ಚ ಬ್ರಹ್ಮನಾರ್ಯೈ ನಮೋ ನಮಃ || 

ಕಮಲಾಕರಪುಷ್ಪಾ ಚ ಕಾಮರೂಪೇ ನಮೋ ನಮಃ |
ಕಪಾಲಿಕರ್ಮದೀಪ್ತಾಯೈ ಕರ್ಮದಾಯೈ ನಮೋ ನಮಃ || 

ಸಾಯಂ ಪ್ರಾತಃ ಪಠೇನ್ನಿತ್ಯಂ ಷಣ್ಮಾಸಾತ್ಸಿದ್ಧಿರುಚ್ಯತೇ |
ಚೋರವ್ಯಾಘ್ರಭಯಂ ನಾಸ್ತಿ ಪಠತಾಂ ಶೃಣ್ವತಾಮಪಿ ||

ಇತ್ಥಂ ಸರಸ್ವತೀ ಸ್ತೋತ್ರಮಗಸ್ತ್ಯಮುನಿ ವಾಚಕಮ್ |
ಸರ್ವಸಿದ್ಧಿಕರಂ ನೃಣಾಂ ಸರ್ವಪಾಪಪ್ರಣಾಶನಮ್

 ಪ್ರೀತೋಸ್ತು ಕೃಷ್ಣ ಪ್ರಭೋ 
 ಫಣೀಂದ್ರ ಕೆ
****


No comments:

Post a Comment