ಅಧಿಕಮಾಸ ಮಹತ್ವ ಮತ್ತು ಫಲ
ಚಾಂದೊ ಮಾಸೋ ಹ್ಯಸಂಕ್ರಾಂತೋ ಮಲಮಾಸಃ ಪ್ರಕೀರ್ತಿತಃ | - ಸ್ಮೃತಿಮುಕ್ತಾವಳಿಯ ವಾಕ್ಯದಂತೆ – ಯಾವ ಚಾಂದ್ರಮಾಸದಲ್ಲಿ ಒಂದೂ ಸಂಕ್ರಮಣವೂ ಸಂಭವಿಸುವುದಿಲ್ಲವೋ ಅದಕ್ಕೆ ಅಧಿಕಮಾಸ ಅಥವಾ ಮಲಮಾಸ ಎಂದು ಹೆಸರು, ಪುರುಷೋತ್ತಮರೂಪಿ ಪರಮಾತ್ಮನು
ಈ ಮಾಸದ ನಿಯಾಮಕನಾದುದರಿಂದ ಪುರುಷೋತ್ತಮ ಮಾಸ ಎಂದೂ, ಅನೇಕ ಮಂರ್ಗಗಳಿಗೆ ನಿಷಿದ್ಧವಾದ ಈ ಮಾಸವು ಮಲಮಾಸವೆಂದು ಕರೆಯಲ್ಪಡುತ್ತದೆ. ಮರು ತಿಂಗಳಿಗೊಮ್ಮೆ ಬರುವ ಅಧಿಕ ಮಾಸದಲ್ಲಿ ಆಚರಿಸಬೇಕಾದ ಕೆಲವು ವಿಶಿಷ್ಟವಾಗಳು, ಅನೇಕ ದಾನಗಳು ಮತ್ತು ಅವುಗಳ ಫಲ- ೧) ಉಪವಾಸ ವ್ರತ, ಏಕ ಭುಕ್ತ, ನಭೋಜನ, ಆಯಾಚಿತ, ಭಾರಣಪಾರಣ ಈ ಪ್ರಕಾರ ಐದು ವತಗಳಲ್ಲಿ ಒಂದೊಂದನ್ನು ಒಂದು ತಿಂಗಳು ಪುರ್ತಿ ಮಾಡುವುದರಿಂದ ವಿಶೇಷ ಪುಣ್ಯಪ್ರಾಪ್ತಿ ಇದೆ. ೨) ಒಂದು ತಿಂಗಳು ಪ್ರತೀದಿನ ತಾಂಬೂಲದಾನದಿಂದ ಸೌಭಾಗ್ಯ ಪ್ರಾಪ್ತಿ, ೩) ಒಂದು ತಿಂಗಳು ಪ್ರತಿದಿನ ದೇವರ ಹಾಗು ಗುರುಗಳ ಸನ್ನಿಧಿಯಲ್ಲಿ ಅಖಂಡ ದೀಪದಾನದಿಂದ ಲಕ್ಷ್ಮಿ ಪ್ರಾಪ್ತಿ. ೪) ಪ್ರತೀದಿನ ಗಂಗಾ ಮೊದಲಾದ ಮಹಾನದಿಗಳಲ್ಲಿ ಪ್ರಾತಃ ಸ್ನಾನದಿಂದ ಸರ್ವ ಪಾಪ ನಿವೃತ್ತಿ ೫) ಒಂದು ತಿಂಗಳು ಪ್ರತಿದಿನ ೩೩ ಆಪೂಪ (ಅತಿರಸ) ದಾನ ದಿಂದ ಅನಿಷ್ಠ ನಿವೃತ್ತಿ ಪೂರ್ವಕ ಇಷ್ಟಾರ್ಥಸಿದ್ಧಿ, ಪ್ರತಿದಿನ ದಾನಕೊಡಲು ಶಕ್ತಿ ಇಲ್ಲದಿದ್ದರೆ, ತಿಂಗಳಲ್ಲಿ ಒಂದು ದಿನವಾದರೂ ಅಧಿಕ ಬಾಗಣವನ್ನು (೩೩ ಅಪೂಪಗಳನ್ನು ಪಾತ್ರ ಸಹಿತವಾಗಿ) ಕೊಡಬೇಕು, ದಾನಕ್ಕೆ ಶುಕ್ಲ, ಕೃಷ್ಣಪಕ್ಷದ ದ್ವಾದಶಿ, ಪೌರ್ಣಿಮಾ, ಅಮಾವಾಸ್ಯೆ, ನವಮಿ, ಚತುರ್ದಶಿ ತಿಥಿಗಳು, ವೈಧೃತಿ, ವ್ಯತೀಪಾತ ಯೋಗಗಳು ಶ್ರೇಷ್ಠ
ದಾನ ಸಂಕಲ್ಪ –
ಆಚಮ್ಯ, ಪ್ರಾಣಾನಾಯಮ್ಯ, ದೇಶಕಾಲ್ ಸಂಕೀರ್ತ್ಯ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥ್ ತ್ರಯಃತ್ರಿಂಶತ್ ಕೋಟಿ ದೇವತಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುರೂಪಿಪುರುಷೋತ್ತಮ ಪ್ರೇರಣಯಾ | ಪರುಷೋತ್ತಮ ಪ್ರೀತ್ಯರ್ಥಂ ........ಅಮುಕ ಗೋತ್ರಸ್ಯ.....ಅಮುಕ ಶರ್ಮಣಃ ಮಮ' ಧರ್ಮ-ಅರ್ಥ-ಕಾಮ-ಮೋಕ್ಷಪ್ರಾಪ್ತ್ಯರ್ಥಂ, ಜ್ಞಾನ-ಭಕ್ತಿ-ವೈರಾಗ್ಯಸಿದ್ಧ್ಯರ್ಥಂ ಅಖಿಲಪಾಪಕ್ಷಯಶಮನಪೂರ್ವಕ ಪುತ್ರ-ಪೌತ್ರ-ಧನ-ಧಾನ್ಯ-ಕ್ಷೇಮ-ಸಮೃದ್ಧಿ-ಲೋಕದ್ದಯ ಮುಖಹೇತು, ಭೂದಾನ ಫಲಪ್ರಾಪ್ಸ್ ಅಪೂಪಛಿದ್ರಸಮಸಂಖ್ಯವರ್ಷ ಸಹ ಸಾವಧಿ ಸ್ವರ್ಲೋಕ ವಾಸಾದಿಫಲಸಿದ್ಧರ್ಥಂ ಮಲಮಾಸಪಯುಕ್ತ ತಯತ್ರಿಂಶತ್ ಅಪೂಪದಾನಮಹಂ ಕರಿಷ್ಯೇ ॥ ಎಂದು ಸಂಕಲ್ಪ ಮಾಡಿ, ಯೋಗ್ಯ ಬ್ರಾಹ್ಮಣರಿಗೆ ಅಪಪ ದಾನವನ್ನು ನೀಡಬೇಕು.
ಪ್ರಾರ್ಥನಾಮಂತ್ರ -
ವಿಷ್ಣುರೂಪೀ ಸಹಸ್ರಾಂಶುಃ ಸರ್ವಪಾಪಪ್ರಣಾಶನಃ | ಅಪೂಪಾನ್ನಪ್ರದಾನೇನ ಮಮ ಪಾಪಂ ವ್ಯಪೋಹತು | ನಾರಾಯಣ ಜಗದ್ದೀಜ ಭಾಸ್ಕರಪ್ರತಿರೂಪಕ | ವ್ರತೇನಾನೇನ ಪುತ್ರಾಂಶ ಸಂಪದಂ ಚಾಪಿ ವರ್ಧಯ ॥ ಯಸ್ಯ ಹಸ್ತೇ ಗದಾ ಚಕ್ರೇ ಗರುಡೋ ಯಸ್ಯ ವಾಹನಃ | ಶಂಖಂ ಕರತಲೇ ಯಸ್ಯ ಸ ಮೇ ವಿಷ್ಣುಃ ಪ್ರಸೀದತು |
ಕಲಾಕಾಷ್ಠಾದಿರೂಪೇಣ ನಿಮಷಘಟಿಕಾದಿನಾ |
ಯೋ ವಂಚಯತಿ ಭೂತಾನಿ ತಸ್ಕೃ ಕಾಲಾತ್ಮನೇ ನಮಃ | ಕುರುಕ್ಷೇತ್ರಮಯಂ ದೇಶಃ ಕಾಲಪರ್ವೋ ದ್ವಿಜೋ ಹರಿಃ | ಪೃಥ್ವಿಸಮಮಿದಂ ದಾನಂ ಗೃಹಾಣ ಪುರುಷೋತ್ತಮ ಮಲಾನಾಂ ಚ ವಿಶುದ್ಧರ್ಥ೦ ಪಾಪಪ್ರಶಮನಾಯ ಚ | ಪುತ್ರಪೌತ್ರಾಭಿವೃದ್ಧರ್ಥಂ ತವ ದಾಸ್ಯಾಮಿ ಭಾಸ್ಕರ |
ಇದಂ ಸೋಪಸ್ಕರ ತ್ರಯಸ್ಮಿಂಶದಪೂಪದಾನಂ ಸದಕ್ಷಿಣಾಕಂ ಸತಾಂಬೂಲಂ
ಶ್ರೀಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀಪುರುಷೋತ್ತಮಪ್ರೀತಿಂ ಕಾಮಯಮಾನಃ ತುಭ್ಯಮಹಂ
ಸಂಪ್ರದದೇ ನ ಮಮ || ಅನೇನ ಅಪೂಪದಾನೇನ ಶ್ರೀಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀಪುರುಷೋತ್ತಮ ಪ್ರಿಯತಾಂ ಪ್ರೀತೋ ಭವತು ಶ್ರೀಕೃಷ್ಣಾರ್ಪಣ ಮಸ್ತು ಎಂದು ದಾನವನ್ನು ನೀಡಿ ಕೃಷ್ಣಾರ್ಪಣ ಬಿಡಬೇಕು.
#ವೃತಗಳುಮತ್ತುದಾನಗಳು
ಚಾತುರ್ಮಾಸ್ಯ ರಂಗೋಲಿ ವೃತ
ಮೂವತ್ತ್ಮೂರು ಶಂಖ , ಚಕ್ರ , ಪದ್ಮ ರಂಗೋಲಿ ವೃತ
ಮೂವತ್ತ್ಮೂರು ಸ್ವಸ್ತೀಕ ರಂಗೋಲಿ ಶ್ರೀಕಾರ ರಂಗೋಲಿ ವೃತ
ಮೂವತ್ತ್ಮೂರು ನಮಸ್ಕಾರ ವೃತ
ಮೂವತ್ತ್ಮೂರು ಗೆಜ್ಜೆವಸ್ತ್ರ ಏರಿಸುವ ವೃತ
ಮೂವತ್ತ್ಮೂರು ತುಪ್ಪದ ಬತ್ತಿ ದಿನಾಲೂ ಹಚ್ಚುವ ವೃತ
ಮೂವತ್ತ್ಮೂರು ಹಾಡು ಹೇಳುವುದು (ದೇವರ ಭಜನೆ)
ದಿನಾಲೂಮೂವತ್ತ್ಮೂರು ಹೂ ಎರಿಸುವ ವೃತ
ಗಂಡಸರು ದಿನಾಲೂ ವಿಷ್ಣು ಸಹಸ್ರ ನಾಮ ಹೇಳುತ್ತಾ ಮೂವತ್ತ್ಮೂರು ತುಳಸಿ ಏರಿಸಿ
ಮೂವತ್ತ್ಮೂರು ಆಕಳುಕರು ದಾನ ನಿಮ್ಮ ಆರ್ಥಿಕ ಅನಕೂಲ ಬೆಳ್ಳಿ ಅಥವಾ ಹಿತ್ತಾಳೆ
ಮುವತ್ತ್ಮೂರು ವಿಷ್ಣುಪಾದ ದಾನ
ಮೂವತ್ತ್ಮೂರು ಅನ್ನಪೂರ್ಣೇಶ್ವರಿ ಮೂರ್ತಿ ದಾನ
ಮೂವತ್ತ್ಮೂರುಅರಿಷಿಣ ಕುಂಕುಮ ಬಟ್ಟಲು ದಾನ (ಆರ್ಥಿಕ ಅನಕೂಲ ಅನುಸಾರ ಬೆಳ್ಳಿ ಹಿತ್ತಾಳೆ , ಸ್ಟೀಲ ಮಾತ್ರ ಬೇಡ)
ಮೂವತ್ತ್ಮೂರು ಮುತ್ತೈದೆಯರಿಗೆ ಉಡಿ ತುಂಬುವ ವೃತ
ಮೂವತ್ತ್ಮೂರು ಮುತ್ತೈದೆಯರಿಗೆ ಬಳೆ ಇಡಿಸುವ ವೃತ
ಒಂದು ವಟುವಿಗೆ ದಿನಾಲೂ ಊಟ ಹಾಕುವ ವೃತ
ಒಂದು ಮತ್ತೈದೆಗೆ ದಿನಾಲೂ ಹರಳು ಹಾಕಿ ಹೂ ಮುಡಿಸುವ ವೃತ ..
ಒಂದು ಬ್ರಾಹ್ಮಣ ಮುತ್ತೈದೆಗೆ ದಿನಾಲೂ ತಾಂಬೂಲಧಕ್ಷಿಣೆ ವೃತ
ತುಳಸಿ ಸಸಿಗಳನ್ನು ಹಚ್ಚಿ ದಾನ ಮಾಡಿ
ಸಾಲಿಗ್ರಾಮ ದಾನ (,ಗಂಡಸರು)
ಒಂದು ಒಣಖೊಬ್ಬರೆ ಗಿಟುಕಿನಲ್ಲಿ ರಂದ್ರಮಾಡಿ ಅಕ್ಕಿಯನ್ನು ತುಂಬಿ ಕೃಷ್ಣನ ಮೂರ್ತಿಯನ್ನು ಇಟ್ಟು ಮತ್ತೆ ಗಿಕಿನ ರಂದ್ರ ಮುಚ್ಚಿ ತಾಂಬೂಲಧಕ್ಷಿಣೆ ಸಹಿತ ದಾನ ಮಾಡಿದರೆ ಗೋವರ್ಧನ ಪರ್ವತ ದಾನ ಮಾಡಿದ ಫಲ ಪ್ರಾಪ್ತಿ.....
ಮೂವತ್ತ್ಮೂರು ಮುತ್ತೈದೆಯರಿಗೆ ವಸ್ತ್ರ ದಾನ
ಮೂವತ್ತ್ಮೂರು ವಟುಗಳಿಗೆ ಸಂಧ್ಯಾವಂದನೆ ಸಾಮಗ್ರಿ ಅಂದರೆ ಥಾಲಿ ತಾಬಾಣ ತೀರ್ಥದ ಸೌಟು ದಾನ
ಮೂವತ್ತ್ಮೂರು ಮರದ ಬಾಗಿಣ ಸಹಿತ ಮೂವತ್ತ್ಮೂರು ದಂಪತಿ ಭೋಜನ
ಮೂವತ್ತ್ಮೂರು ಚವರಿ ದಾನ ಅಂದರೆ ಹೆರಳಲ್ಲಿ ಹಾಕಿಕೊಳ್ಳುವ ಸಪ್ಲಿಮೆಂಟ ಕೂದಲು ದಾನ
ಮೂವತ್ತ್ಮೂರು ಜೊತೆ ದೀಪ ದಾನ ಅದು ಕೂಡಾ ಬೆಳ್ಳಿ ಹಿತ್ತಾಳೆ .
ಹಾಲು ಮೊಸರು ತುಂಬಿದ ಪಾತ್ರೆಗಳ ದಾನ
ತೊಟ್ಲು + ಕೃಷ್ಣ
ಅರಿಶಿನ+ ಕುಂಕುಮ+ ಕನ್ನಡಿ + ಬಾಚಣಿಗೆ + ಬಳೆ + ಕರಿಮಣಿ –ದಾನ
ದೇವರ ಪುಸ್ತಕ ದಾನ
ಉದಕುಂಭ ದಾನ
ನೆಲ್ಲಿ ಕಾಯಿ ದಾನ
ತೆಂಗಿನಕಾಯಿದಾನ
ಅಪೂಪ ದಾನ ವಿಷೇಶ ವಾದದ್ದು ಅಂದೆ ಅಕ್ಕಿ ಬೆಲ್ಲ ತುಪ್ಪ ದಿಂದ ಮಾಡಿದ ಭಕ್ಷ್ಯ ಮೂವತ್ತ್ಮೂರು ಒಂದು ತಟ್ಟೆಯಲ್ಲಿಟ್ಟು ತಟ್ಟೆ ಸಮೇತ ಬ್ರಾಹ್ಮಣ ನಿಗೆ ಅಥವಾ ಅಳಿಯನಿಗೆ ,ಅಣ್ಣ ತಮ್ಮಂದಿರಿಗೆ ದಾನ ಕೊಡಬೇಕು .
ಹುಣ್ಣಿಮೆಯ ನಂತರದ ವಿದವಾ ಸ್ತ್ರೀಯರು ದಾನ ಕೊಡಬೇಕು ....
ಅವರು ಕೂಡಾ ಅಧಿಕದಲ್ಲಿ ವಿಷ್ಣು ಪಾದಪೂಜೆ ಮಾಡಿ ವಿಷ್ಣುಪಾದ ದಾನ ಮಾಡಬಹುದು
ಪ್ರತಿದಿನ ವಿಷ್ಣುವಿನ ಪಾದಕ್ಕೆ 33 ತುಳಸಿ ಏರಿಸಬಹುದು
33 ಶಂಕಚಕ್ರ ಹಾಕಿ 33 ಚಕ್ಕುಲಿ , 33 ಕರ್ಚಿಕಾಯಿ ದಾನ ಕೊಡಬೇಕು ..(ತಟ್ಟೆ ಸಮೇತ)
33 ಪದ್ಮ ಹಾಕಿ ಅನಾರಸ ದಾನ ಕೊಡಬೇಕು (ತಟ್ಟೆ ಸಮೇತ)
ಅನಾರಸ ಶ್ರೇಷ್ಠ , ಖರ್ಚಿಕಾಯಿ , ಬೇಸನಲಾಡು , ಅಥವಾ ನಿಮಗೆ ಏನು ಅನಕೂಲ ಅದನ್ನು ಮಾಡಿ ದಾನ ಮಾಡಿ ......ಅಪೂಪ ದಾನ ಹುಣ್ಣಿಮೆ ಯ ಒಳಗೆ
ಮುತ್ತೈದೆಯರು ಹುಣ್ಣಿಮೆ ಒಳಗೆ ದಾನ ಕೊಡಬೇಕು
ನಂತರ ಮೂವತ್ತ್ಮೂರು ಫಲ ದಾನ....
ಅಧಿಕಮಾಸದ ಕಥೆ :
ಅಧಿಕಮಾಸದ ಕಥೆಯನ್ನು ನಮಗೆ ಶ್ರವಣ ಮಾಡಿಸಿರಿ ಮತ್ತು ಈ ಮಾಸಕ್ಕೆ ಪುರುಷೋತ್ತಮ ಮಾಸ ಎಂದು ಏಕೆ ಕರೆಯುತ್ತಾರೆ, ಈ ಮಾಸದಲ್ಲಿ ಮಾಡುವ ದಾನಧರ್ಮಗಳಿಗೆ ಮಹತ್ವ ಏಕೆ, ಮುಂತಾಗಿ ಸೂತಪುರಾಣಿಕರನ್ನು ಋಷಿಗಳು ಎಲ್ಲವನ್ನು ಸವಿಸ್ತಾರವಾಗಿ ಹೇಳಿರಿ ಎಂದೂ ವಿನಂತಿಸಿಕೊಂಡಾಗ, ಸೂತರು ಹೇಳುತ್ತಾರೆ. ಹಿಂದೆ ಶ್ರೀ ಕೃಷ್ಣನು ಧರ್ಮರಾಜನಿಗೆ ಹೇಳಿದ ಕಥೆಯನ್ನೇ ಹೇಳುತ್ತೀನಿ ಕೇಳಿರಿ ಎಂದರು.
ಹಿಂದೆ ಒಮ್ಮೆ ಅಧಿಕಮಾಸವು ತಾನು ಎಲ್ಲ ಮಾಸಗಳಿಗಿಂತ ಕೀಳು ಎಂದು ಭಾವಿಸಿ ವೈಕುಂಠಲೋಕಕ್ಕೆ ಹೋಗಿ ಪಿತಾಂಬರಧಾರಿಯೂ, ಶಂಖ ಚಕ್ರ ಗದಾಪದ್ಮಗಳಿಂದ ಅಲಂಕೃತನಾದ ವೈಕುಂಠಪತಿಗೆ ನಮಸ್ಕರಿಸಿ ತನ್ನ ವ್ಯಥೆ ಹೇಳಿಕೊಂಡಿತು. “ಹೇ ದೇವ ದೇವೋತ್ತಮಾ ವರ್ಷದ ಹನ್ನೆರಡು ತಿಂಗಳುಗಳಲ್ಲಿ ಏನಾದರೊಂದು ಹಬ್ಬ, ವೃತ, ನಿಯಮಗಳು ಇದ್ದು ಪ್ರತಿಯೊಂದಕ್ಕೂ ವಿಶೇಷತೆ ಇದೆ. ನನ್ನ ಮಾಸದಲ್ಲಿ ಒಂದು ಸಂಕ್ರಮಣವು ಇಲ್ಲದೇ ಮಲ ಮಾಸ ಎಂದೂ ಕರೆಸಿಕೊಳ್ಳುತ್ತಿದ್ದೇನೆ. ದೇವಾ ನನ್ನ ಮೇಲೆ ಕರುಣೆ ತೋರು” ಎಂದು ಪ್ರಾರ್ಥನೆ ಮಾಡಿತು. ಅದಕ್ಕೆ ಸಂತೋಷಗೊಂಡ ವೈಕುಂಠಪತಿಯು, ಅಧಿಕಮಾಸದ ರೋದನಕ್ಕೆ ಹೇ ಅಧಿಕ ಮಾಸವೇ ಇದೂ ವೈಕುಂಠ ಲೋಕ. ಇಲ್ಲಿ ಎಲ್ಲರೂ ಸಂತೋಷದಿಂದ ಇರುವರು. ದುಃಖದ ನೆರಳೂ ಇಲ್ಲಿ ಇಲ್ಲ. ಶ್ರೀಹರಿಯು ಹೇಳಿದನು – “ಎಲೈ ಅಧಿಕ ಮಾಸವೇ ಇನ್ನೂ ಮೇಲಿಂದ ನೀನು ದುಃಖಿಸುವ ಕಾರಣ ಇಲ್ಲ. ನಿನ್ನ ಮಾಸದಲ್ಲಿ ಸ್ವತಃ ನಾನೇ ಪುರುಷೋತ್ತಮ ರೂಪದಿಂದ ಇರುವೆ. ಅದಲ್ಲದೇ ನಿನ್ನ ಮಾಸದಲ್ಲಿ ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು ಅದಲ್ಲದೇ ಪ್ರಜಾಪತಿ ಮತ್ತು ವಷಟ್ಕಾರರು ನಿನ್ನ ಮಾಸಕ್ಕೆ ಅಭಿಮಾನಿಗಳಾಗಿ ಇರುತ್ತಾರೆ.
ನಿನ್ನ ಮಾಸದಲ್ಲಿ ಯಾವ ಮಾನವ ನಮ್ಮೆಲ್ಲರ ಪ್ರೀತಿಗಾಗಿ ದಾನ ಧರ್ಮ ನೇಮ ಆಚರಣೆ ಮಾಡುವನೋ ಅವನಿಗೇ ಉಳಿದ ದಿನಗಳಿಗಿಂತ ಅಧಿಕ ಪುಣ್ಯ ದೊರಕಲಿ. ಎಂದೂ ವೈಕುಂಠಪತಿಯು ಅಧಿಕಮಾಸಕ್ಕೆ ಸಾಂತ್ವನ ಮಾಡಿ ಆ ಮಾಸಕ್ಕೆ ಪುರುಷೋತ್ತಮ ಮಾಸ ಎಂದೂ ಹೆಸರು ಬರಲೆಂದು” ಹಾರೈಸಿ ಕಳಿಸಿದನು.
ಒಮ್ಮೆ ಜ್ಞಾನಿಯೂ ಜಿತೇಂದ್ರಿಯನೂ ಆದ ಕೌಶಿಕನೆಂಬ ಬ್ರಾಹ್ಮಣನೊಬ್ಬನಿದ್ದನು. ಅವನಿಗೆ ಮೈತ್ರೇಯನೆಂಬ ಕಾಮಾಂಧನಾದ ಸುತನಿದ್ದನು. ಒಮ್ಮೆ ಈ ಮೈತ್ರೇಯನು ಒಬ್ಬ ಬ್ರಾಹ್ಮಣನ ಕೊಂದು ಅವನ ಬಳಿಯಿದ್ದದ್ದೆಲ್ಲವನ್ನೂ ಅಪಹರಿಸಿದನು. ಅವನಿಗೆ ಮರಣಾನಂತರ ಬ್ರಹ್ಮಹತ್ಯಾ ದೋಷದಿಂದ ಯಮಲೋಕದಲ್ಲಿ ಘೋರ ನರಕವನ್ನು ಅನುಭವಿಸಿದನು. ಇದನ್ನು ತಿಳಿದ ಅವನ ತಂದೆ ಎಲ್ಲಾ ಶಾಸ್ತ್ರಘ್ನರ ಸಂಪರ್ಕಿಸಿ ಕೊನೆಗೆ ಅಧಿಕಮಾಸ ವ್ರತಾಚರಣೆ ಮಾಡಿ ಸಂಕಲ್ಪಪುರಸ್ಸರವಾಗಿ ಮೂವತ್ತಮೂರು ಅಪೂಪದಾನ ಯಥಾಶಕ್ತಿ ಮಾಡಿದನು. ಇದರಿಂದ ಅವನ ಮಗನಿಗೆ ನರಕ ಶಿಕ್ಷೆಯಿಂದ ವಿನಾಯಿತಿ ಪಡೆದ.
ಅರ್ಥಾತ್ ನಮ್ಮ ಪಾಪ ಪರಿಹಾರ ಮಾಡಿ ಒಳ್ಳೆಯ ಲೋಕ ಪ್ರಾಪ್ತವಾಗುತ್ತದೆ.
ನರಹರಿ ಸುಮಧ್ವ
ಅಧಿಕಮಾಸದಲ್ಲಿ ಚಿಂತಿಸಬೇಕಾದ 33 ದೇವತೆಗಳು :
ಅಷ್ಟವಸುಗಳು 8 ; ಏಕಾದಶ ರುದ್ರರು 11 ;
ದ್ವಾದಶಾದಿತ್ಯರು 12; ಪ್ರಜಾಪತಿ 1, ವಷಟ್ಕಾರ 1
ಅಪೂಪದಾನಕಾಲದಲ್ಲಿ ಚಿಂತಿಸಬೇಕಾದ ಭಗವದ್ರೂಪಗಳು :
ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಹರಿಂ ಕೃಷ್ಣಮಧೋಕ್ಷಜಂ |
ಕೇಶವಂ ಮಾಧವಂ ರಾಮಂ ಅಚ್ಯುತಂ ಪುರುಷೋತ್ತಮಂ |
ಗೋವಿಂದಂ ವಾಮನಂ ಶ್ರೀಶಂ ಶ್ರೀಕಂಠಂ ವಿಶ್ವಸಾಕ್ಷಿಣಂ |
ನಾರಾಯಣಂ ಮಧುರಿಪುಂ ಅನಿರುದ್ಧಂ ತ್ರಿವಿಕ್ರಮಂ |
ವಾಸುದೇವಂ ಜಗದ್ಯೋನಿಮನಂತಂ ಶೇಷಶಾಯಿನಂ |
ಸಂಕರ್ಷಣಂ ಚ ಪ್ರದ್ಯುಮ್ನಂ ದೈತ್ಯಾರಿ ವಿಶ್ವತೋಮುಖಂ |
ಜನಾರ್ದನಂ ಧರಾವಾಸಂ ದಾಮೋದರಮಘಾರ್ದನಂ |
ಶ್ರೀಪತಿಂ ಚ ತ್ರಯಸ್ತ್ರಿಂಶದುದ್ದಿಶ್ಯ ಪ್ರತಿನಾಮಭಿ: |
ಮಂತ್ರೈರೇತೈಶ್ಚ ಯೋ ದದ್ಯಾತ್ ತ್ರಯಸ್ತ್ರಿಂಶದಪೂಪಕಂ |
ಪ್ರಾಪ್ನೋತಿ ವಿಪುಲಾಂ ಲಕ್ಷ್ಮೀ ಪುತ್ರಪೌತ್ರಾದಿಸಂತತಿಂ |
ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವಂತಹ ಮಾಸ ಅಂದರೆ ಅದು ಅಧಿಕಮಾಸ (ಪುರುಷೋತ್ತಮಮಾಸ). ಈ ಮಾಸದಲ್ಲಿ ನಾವು ಏನೇನು ಮಾಡ್ತಿವೋ ಅದಕ್ಕೆ ಅಧಿಕವಾದ ಫಲ ಇದೆ. ಈ ಮಾಸದ ದೇವತೆ ಸಾಕ್ಷಾತ್ ನಾರಾಯಣ (ಪುರುಷೋತ್ತಮ). ಇಂಥ ಪುರುಷೋತ್ತಮ ಮಾಸದಲ್ಲಿ ೩೩ ಸಂಖ್ಯೆಗೆ ಬಹಳ ಮಹತ್ವ ಇದೆ. ಏನೇ ದಾನ ಮಾಡಿದರೂ ೩೩ ಮಾಡಬೇಕು. ಏನೇ ಪ್ರದಕ್ಷಿಣೆ ನಮಸ್ಕಾರ ಮಾಡಿದರೂ ೩೩ ಮಾಡಬೇಕು. ಯಾಕೆ ಅಷ್ಟು ಮಹತ್ವ ಅಂದರೆ ಈ ಮಾಸದಲ್ಲಿ ೩೩ ದೇವತೆಗಳು ಅಭಿಮಾನಿಗಳು.
ಅಷ್ಟವಸುಗಳು (೮)
ಏಕಾದಶರುದ್ರರು (೧೧)
ದ್ವಾದಶಾದಿತ್ಯರು (೧೨)
ಪ್ರಜಾಪತಿ & ವಷಟ್ಕಾರ (೨)
ಹೀಗೆ ೩೩ ದೇವತೆಗಳು ಅಭಿಮಾನಿಗಳು ಇವರಿಗೆಲ್ಲಾ ನಿಯಾಮಕನಾಗಿ ಮುಖ್ಯ ಅಭಿಮಾನಿಯಾದವನು ಪುರುಷೋತ್ತಮನು.* ಅಂಥ ಪುರುಷೋತ್ತಮಮಾಸದ ಕಾಲದಲ್ಲಿ ಪ್ರತಿನಿತ್ಯ ೩೩ ದೇವತೆಗಳು ಯಾರು ಎಂದು ದಿನಕ್ಕೊಬ್ಬರ ಸ್ಮರಣೆ ಮಾಡಿ ಪುರುಷೋತ್ತಮನ ಅನುಗ್ರಹಕ್ಕೆ ಪಾತ್ರರಾಗೋಣ.
***
ಅಧಿಕ ಮಾಸವನ್ನು ನಾವು ಮಲ ಮಾಸ ಅಂತ ಕರಿಯುತ್ತೇವೆ. ಮಲ ಅಂದರೆ ಕೆಟ್ಟ ಅದಕ್ಕಾಗಿ ಈ ಮಾಸದಲ್ಲಿ ಯಾವದೇ ಶುಭ ಕಾರ್ಯಗಳನ್ನು ಮಾಡಬಾರದು ..... ಈ ಮಾಸದಲ್ಲಿ ನಮ್ಮ ಎಲ್ಲ ಕಾರ್ಯಗಳು ದೇವರ ಮುಡಿಪಾಗಿ ಇಡಬೇಕು. ದೇವರ ನಾಮಸ್ಮರಣೆ , ಹಾಡು ಹಸೆ , ರಂಗೋಲಿ ದಾನ ಧರ್ಮ
ನೀವು ಎಷ್ಟು ಶ್ರದ್ಧೆಯಿಂದ ಮಾಡತೀರೊ ಅಷ್ಟು ಅಧಿಕ ಅಧಿಕ ಫಲವನ್ನು ಪಡಿಯುತ್ತೀರಾ .ಇದು ಶತಃ ಸಿದ್ಧ.... ವಿವರವಾಗಿ ಹೇಳುತ್ತೇನೆ
ಅಧಿಕಮಾಸ ಎಂದರೇನು ?
ಯಾವಚಾಂದ್ರಮಾಸದಲ್ಲಿ ಸಂಕ್ರಮಣವೇ ಬರುವುದಿಲ್ಲವೋ ಅಥವ ಎರಡು ಸಂಕ್ರಾಂತಿಗಳು. ಬರುತ್ತವೆಯೋ ಅಂತಹ ಚಾಂದ್ರಮಾಸಕ್ಕೆ ಮಲಮಾಸ(ಅಧಿಕಮಾಸ) ಎಂದು ಹೆಸರು .
ಈ ವಿಷಯವನ್ನು ಕಾಠಕಗೃಹ್ಯಸೂತ್ರದಲ್ಲಿ ಹೇಳಿದ್ದಾರೆ. ಯಾವ ತಿಂಗಳಲ್ಲಿ ಸಂಕ್ರಾಂತಿಯೇ ಇಲ್ಲವೋ ಅದನ್ನು ಮಲಮಾಸ ಅಂದರೆ ಅಧಿಕಮಾಸ ಎಂದು ತಿಳಿಯಬೇಕು. ಸಾಧರಣವಾಗಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ತಿಂಗಳಾಗುತ್ತವೆ ಅಧಿಕಮಾಸವು ಹದಿಮೂರನೆಯ ತಿಂಗಳು ಆಗುತ್ತದೆ .
ಹಾಗೇಯೇ ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ .ಸಂಕ್ರಾಂತಿ ಇಲ್ಲದಿರುವ ಚಾಂದ್ರಮಾನ ಮಾಸವನ್ನು ಮಲಮಾಸ .(ಅಧಿಕ ಮಾಸ)ಎಂಬುದಾಗಿ ಹೇಳುತ್ತಾರೆ ಎಂದು ಬ್ರಹ್ಮಸಿದ್ಧಾಂತದಲ್ಲಿ ಹೇಳಿದ್ದಾರೆ .
ಅಧಿಕಮಾಸದ ಮಹತ್ವ
ಮಲವನ್ನು ಕಳೆಯುವ ಮಾಸ ವಾದ್ದರಿಂದ ಅಧಿಕಮಾಸಕ್ಕೆ. ಮಲಮಾಸ ಎಂದು ಹೆಸರು ಎಂಬುದಾಗಿ ಪುರಾಣ ಮತ್ತು ವೇದಗಳನ್ನು ಬಲ್ಲ ವಸಿಷ್ಠಾದಿ ಜ್ಞಾನಿಗಳು ನಿರ್ಣಯಿಸಿ ಹೇಳಿರುವರು ಮಲ ಎಂದರೆ ಪಾತಕ . ಸ್ನಾನ ದಾನ ,ದೀಪಗಳಿಂದ ಪುರುಷೋತ್ತಮನನ್ನು ಆರಾಧಿಸಿದರೆ ಎಲ್ಲ ಪಾತಕವೂ ಬೂದಿಯಾಗುವುದು .(ಶುಭಕಾರ್ಯಗಳಿಗೆ ನಿಷಿದ್ಧವಾದ ಕಾರಣದಿಂದಲೂ ಇದಕ್ಕೆ ಮಲಮಾಸ ಎಂದು ಹೆಸರು ).
ಇದು ಪದ್ಮಪುರಾಣ 6 /27 ,28*
ಯಸ್ಮಿನ್ ಮಾಸೇ ನ ಸಂಕ್ರಾಂತಿಃ ಸಂಕ್ರಾಂತಿ ದ್ವಯಮೇವ ವಾ |
ಮಲಮಾಸಕ್ಷಯೌ ಜ್ಞೇಯೌ ಸರ್ವಧರ್ಮ ವಿವರ್ಜಿತೌ ||
ಯಾವ ತಿಂಗಳಲ್ಲಿ ರವಿಸಂಕ್ರಾಂತಿ ಇರುವುದಿಲ್ಲವೋ ಅದು ಅಧಿಕಮಾಸ; ಎರಡು ರವಿ ಸಂಕ್ರಮಣಗಳು ಬಂದರೆ ಅದು ಕ್ಷಯಮಾಸ ....ಇದು ಭವಿಷ್ಯೋತ್ತರ ಪುರಾಣ
ಹಾಗಾದರೆ ನಾವು ಯಾವ ವೃತ ನೇಮ ನಿತ್ಯವನ್ನು ಆಚರಣೆ ಮಾಡಬೇಕು...
ನೀವು ಮಲಮಾಸದಲ್ಲಿ ಹೊಸ ವೃತ ಧಾರಣೆ ಮಾಡಲು ಬರುವದಿಲ್ಲ ಅದಕ್ಕೆ ಮೊದಲು ಅಧಿಕಮಾಸ ಪ್ರಾರಂಭವಾಗುವ ಮೊದಲು ಮೂರುದಿನ ನೀವು ಹಿಡಿಯುವ ವೃತ ಆಚರಣೆ ಮಾಡಿ ನಂತರ ಅಧಿಕದಲ್ಲಿ ಮಾಸದಲ್ಲಿ ಸಂಕಲ್ಪ ಪೂರ್ವಕ ವೃತ ಧಾರಣೆ ಮಾಡಿ ನೀವೂ ಯಾವದೇ ವೃತ ಒಂದು ತಿಂಗಳ ಮಾಡಿದರೂ ಚಾತುರ್ಮಾಸ್ಯ ಆಚರಣೆ ಫಲ ಸಿಗುತ್ತೆ
ವೃತಗಳು
ಚಾತುರ್ಮಾಸ್ಯ ರಂಗೋಲಿ ವೃತ
ಮೂವತ್ತ್ಮೂರು ಶಂಖ , ಚಕ್ರ , ಪದ್ಮ ರಂಗೋಲಿ ವೃತ
ಮೂವತ್ತ್ಮೂರು ಸ್ವಸ್ತೀಕ ರಂಗೋಲಿ ಶ್ರೀಕಾರ ರಂಗೋಲಿ ವೃತ
ಮೂವತ್ತ್ಮೂರು ನಮಸ್ಕಾರ ವೃತ
ಮೂವತ್ತ್ಮೂರು ಗೆಜ್ಜೆವಸ್ತ್ರ ಏರಿಸುವ ವೃತ
ಮೂವತ್ತ್ಮೂರು ತುಪ್ಪದ ಬತ್ತಿ ದಿನಾಲೂ ಹಚ್ಚುವ ವೃತ
ಮೂವತ್ತ್ಮೂರು ಹಾಡು ಹೇಳುವುದು (ದೇವರ ಭಜನೆ)
ದಿನಾಲೂಮೂವತ್ತ್ಮೂರು ಹೂ ಎರಿಸುವ ವೃತ
ಗಂಡಸರು ದಿನಾಲೂ ವಿಷ್ಣು ಸಹಸ್ರ ನಾಮ ಹೇಳುತ್ತಾ ಮೂವತ್ತ್ಮೂರು ತುಳಸಿ ಏರಿಸಿ
ಮೂವತ್ತ್ಮೂರು ಆಕಳುಕರು ದಾನ ನಿಮ್ಮ ಆರ್ಥಿಕ ಅನಕೂಲ ಬೆಳ್ಳಿ ಅಥವಾ ಹಿತ್ತಾಳೆ
ಮುವತ್ತ್ಮೂರು ವಿಷ್ಣುಪಾದ ದಾನ
ಮೂವತ್ತ್ಮೂರು ಅನ್ನಪೂರ್ಣೇಶ್ವರಿ ಮೂರ್ತಿ ದಾನ
ಮೂವತ್ತ್ಮೂರುಅರಿಷಿಣ ಕುಂಕುಮ ಬಟ್ಟಲು ದಾನ (ಆರ್ಥಿಕ ಅನಕೂಲ ಅನುಸಾರ ಬೆಳ್ಳಿ ಹಿತ್ತಾಳೆ , ಸ್ಟೀಲ ಮಾತ್ರ ಬೇಡ)
ಮೂವತ್ತ್ಮೂರು ಮುತ್ತೈದೆಯರಿಗೆ ಉಡಿ ತುಂಬುವ ವೃತ
ಮೂವತ್ತ್ಮೂರು ಮುತ್ತೈದೆಯರಿಗೆ ಬಳೆ ಇಡಿಸುವ ವೃತ
ಒಂದು ವಟುವಿಗೆ ದಿನಾಲೂ ಊಟ ಹಾಕುವ ವೃತ
ಒಂದು ಮತ್ತೈದೆಗೆ ದಿನಾಲೂ ಹರಳು ಹಾಕಿ ಹೂ ಮುಡಿಸುವ ವೃತ ..
ಒಂದು ಬ್ರಾಹ್ಮಣ ಮುತ್ತೈದೆಗೆ ದಿನಾಲೂ ತಾಂಬೂಲಧಕ್ಷಿಣೆ ವೃತ
ತುಳಸಿ ಸಸಿಗಳನ್ನು ಹಚ್ಚಿ ದಾನ ಮಾಡಿ
ಒಂದು ಒಣಖೊಬ್ಬರೆ ಗಿಟುಕಿನಲ್ಲಿ ರಂದ್ರಮಾಡಿ ಅಕ್ಕಿಯನ್ನು ತುಂಬಿ ಕೃಷ್ಣನ ಮೂರ್ತಿಯನ್ನು ಇಟ್ಟು ಮತ್ತೆ ಗಿಕಿನ ರಂದ್ರ ಮುಚ್ಚಿ ತಾಂಬೂಲಧಕ್ಷಿಣೆ ಸಹಿತ ದಾನ ಮಾಡಿದರೆ ಗೋವರ್ಧನ ಪರ್ವತ ದಾನ ಮಾಡಿದ ಫಲ ಪ್ರಾಪ್ತಿ.....
ಮೂವತ್ತ್ಮೂರು ಮುತ್ತೈದೆಯರಿಗೆ ವಸ್ತ್ರ ದಾನ
ಮೂವತ್ತ್ಮೂರು ವಟುಗಳಿಗೆ ಸಂಧ್ಯಾವಂದನೆ ಸಾಮಗ್ರಿ ಅಂದರೆ ಥಾಲಿ ತಾಬಾಣ ತೀರ್ಥದ ಸೌಟು ದಾನ
ಮೂವತ್ತ್ಮೂರು ಮರದ ಬಾಗಿಣ ಸಹಿತ ಮೂವತ್ತ್ಮೂರು ದಂಪತಿ ಭೋಜನ
ಮೂವತ್ತ್ಮೂರು ಚವರಿ ದಾನ ಅಂದರೆ ಹೆರಳಲ್ಲಿ ಹಾಕಿಕೊಳ್ಳುವ ಸಪ್ಲಿಮೆಂಟ ಕೂದಲು ದಾನ
ಮೂವತ್ತ್ಮೂರು ಜೊತೆ ದೀಪ ದಾನ ಅದು ಕೂಡಾ ಬೆಳ್ಳಿ ಹಿತ್ತಾಳೆ .
ಹಾಲು ಮೊಸರು ತುಂಬಿದ ಪಾತ್ರೆಗಳ ದಾನ
ದೇವರ ಪುಸ್ತಕ ದಾನ
ಹಾಲು ಮೊಸರು ತುಂಬಿದ ಪಾತ್ರೆಗಳ ದಾನ
ತೊಟ್ಲು + ಕೃಷ್ಣ
ಅರಿಶಿನ+ ಕುಂಕುಮ+ ಕನ್ನಡಿ + ಬಾಚಣಿಗೆ + ಬಳೆ + ಕರಿಮಣಿ –ದಾನ
ದೇವರ ಪುಸ್ತಕ ದಾನ
ಉದಕುಂಭ ದಾನ
ನೆಲ್ಲಿ ಕಾಯಿ ದಾನ
ತೆಂಗಿನಕಾಯಿದಾನ
ಅಪೂಪ ದಾನ ವಿಷೇಶ ವಾದದ್ದು ಅಂದೆ ಅಕ್ಕಿ ಬೆಲ್ಲ ತುಪ್ಪ ದಿಂದ ಮಾಡಿದ ಭಕ್ಷ್ಯ ಮೂವತ್ತ್ಮೂರು ಒಂದು ತಟ್ಟೆಯಲ್ಲಿಟ್ಟು ತಟ್ಟೆ ಸಮೇತ ಬ್ರಾಹ್ಮಣ ನಿಗೆ ಅಥವಾ ಅಳಿಯನಿಗೆ ,ಅಣ್ಣ ತಮ್ಮಂದಿರಿಗೆ ದಾನ ಕೊಡಬೇಕು .
ಹುಣ್ಣಿಮೆಯ ನಂತರದ ವಿದವಾ ಸ್ತ್ರೀಯರು ದಾನ ಕೊಡಬೇಕು ....
ಅವರು ಕೂಡಾ ಅಧಿಕದಲ್ಲಿ ವಿಷ್ಣು ಪಾದಪೂಜೆ ಮಾಡಿ ವಿಷ್ಣುಪಾದ ದಾನ ಮಾಡಬಹುದು
ಪ್ರತಿದಿನ ವಿಷ್ಣುವಿನ ಪಾದಕ್ಕೆ 33 ತುಳಸಿ ಏರಿಸಬಹುದು
33 ಶಂಕಚಕ್ರ ಹಾಕಿ 33 ಚಕ್ಕುಲಿ , 33 ಕರ್ಚಿಕಾಯಿ ದಾನ ಕೊಡಬೇಕು ..(ತಟ್ಟೆ ಸಮೇತ)
33 ಪದ್ಮ ಹಾಕಿ ಅನಾರಸ ದಾನ ಕೊಡಬೇಕು (ತಟ್ಟೆ ಸಮೇತ)
ಅನಾರಸ ಶ್ರೇಷ್ಠ , ಖರ್ಚಿಕಾಯಿ , ಬೇಸನಲಾಡು , ಅಥವಾ ನಿಮಗೆ ಏನು ಅನಕೂಲ ಅದನ್ನು ಮಾಡಿ ದಾನ ಮಾಡಿ ......ಅಪೂಪ ದಾನ ಹುಣ್ಣಿಮೆ ಯ ಒಳಗೆ
ಮುತ್ತೈದೆಯರು ಹುಣ್ಣಿಮೆ ಒಳಗೆ ದಾನ ಕೊಡಬೇಕು
ನಂತರ ಮೂವತ್ತ್ಮೂರು ಫಲ ದಾನ....
#ಇನ್ನೂಶ್ರಾದ್ಧದವಿಚಾರ .... ಆಶ್ವಯುಜ ಮಾಸದಲ್ಲಿ ಶ್ರಾದ್ಧವಿದ್ದವರು ಎರಡೂ ಶ್ರಾದ್ಧವನ್ನೂ ಮಾಡಬೇಕು ಅಧಿಕ ಅಶ್ವಯುಜ ಶ್ರಾದ್ಧ ಮತ್ತು ನಿಜ ಅಶ್ವಯುಜ ಮಾಸದ ಶ್ರಾದ್ಧ... ಅಧಿಕ ಶ್ರಾದ್ಧವನ್ನು ಹಾಲು ಹಣ್ಣು ಕೊಟ್ಟು ಮಾಡಿ ನಂತರ ನಿಜ ಶ್ರಾದ್ಧದಲ್ಲಿ ಭೋಜನ ಹಾಕಬಹುದು....
ಈ ಮುವತ್ತ್ಮೂರು ದಾನಗಳು ಯಾರು ಯಾರಿಗೆ ಮುಟ್ಟುತ್ತದೆ... ಮೂವತ್ಮೂರು ದೇವತೆಗಳ ಮಹತ್ವ
ಪುರಾಣಗಳಲ್ಲಿ ಹಾಗೂ ಬೃಹದಾರಣ್ಯಕ ಉಪನಿಷತ್ತಿನಲ್ಲಿ, ಮುವತ್ಮೂರು ದೇವತೆಗಳನ್ನು ಹೇಳಿದ್ದಾರೆ.
ಪೃಥ್ವಿ ಸ್ಥಾನದ ಎಂಟು ವಸುಗಳು;
ಮಧ್ಯಸ್ಥಾನದ ಹನ್ನೊಂದು ರುದ್ರರು;
ಸ್ವರ್ಗಸ್ಥಾನದ ಹನ್ನೆರಡು ಆದಿತ್ಯರು;
ಹಾಗೂ ಪ್ರಜಾಪತಿ ಮತ್ತು ವಷಟ್ಕಾರರೇ ಈ ಮುವತ್ಮೂರು ದೇವತೆಗಳು. 33 ದೇವರುಗಳ ಪರಿವಾರವೆಂದು..
ಅವು :
12 ಆದಿತ್ಯರು + 11 ರುದ್ರರು + 8 ವಸುಗಳು + ಪ್ರಜಾಪತಿ ಬ್ರಹ್ಮ + ಶ್ರೀಹರಿ ವಿಷ್ಣು = ಒಟ್ಟಿಗೆ 33 ದೇವಕುಟುಂಬಗಳು..
12 ಆದಿತ್ಯರು (ದ್ವಾದಶಾದಿತ್ಯರು) -
1. ತ್ವಷ್ಟ ,
2. ಪೂಷ ,
3. ವಿವಸ್ವಾನ್ ,
4. ಮಿತ್ರ ,
5. ಧಾತಾ ,
6. ವಿಷ್ಣು ,
7. ಭಗ ,
8. ವರುಣ ,
9. ಸವಿತೃ ,
10. ಶಕ್ರ ,
11. ಅಂಶ ,
12. ಅರ್ಯಮಾ.
11 ರುದ್ರರು (ಏಕಾದಶರುದ್ರಾಃ) -
1. ಮನ್ಯು ,
2. ಮನು ,
3. ಮಹಿನಸ ,
4. ಮಹಾನ್ ,
5. ಶಿವ ,
6. ಋತಧ್ವಜ ,
7. ಉಗ್ರರೇತಾ ,
8. ಭವ ,
9. ಕಾಲ ,
10. ವಾಮದೇವ ,
11. ಧೃತವೃತ..
8 ವಸುಗಳು (ಆಷ್ಟವಸವಃ) -
1. ದ್ರೋಣ ,
2. ಪ್ರಾಣ ,
3. ಧ್ರುವ ,
4. ಅಕ ,
5. ಅಗ್ನಿ ,
6. ದೋಷ ,
7. ವಸು ,
8. ವಿಭಾವಸು.
ಈ ಜಗತ್ತಿನ ಸೃಷ್ಟಿಕರ್ತ ಬ್ರಹ್ಮ ಹಾಗೂ ಜಗತ್ತಿನ ಪರಿಪಾಲಕ ಮಹಾವಿಷ್ಣು..
ಅಪೂಪ ದಾನ ವಿಷೇಶ ವಾದದ್ದು ಅಂದೆ ಅಕ್ಕಿ ಬೆಲ್ಲ ತುಪ್ಪ ದಿಂದ ಮಾಡಿದ ಭಕ್ಷ್ಯ ಮೂವತ್ತ್ಮೂರು ಒಂದು ತಟ್ಟೆಯಲ್ಲಿಟ್ಟು ತಟ್ಟೆ ಸಮೇತ ಬ್ರಾಹ್ಮಣ ನಿಗೆ ಅಥವಾ ಅಳಿಯನಿಗೆ ,ಅಣ್ಣ ತಮ್ಮಂದಿರಿಗೆ ದಾನ ಕೊಡಬೇಕು .
ಅನಾರಸ ಶ್ರೇಷ್ಠ , ಖರ್ಚಿಕಾಯಿ , ಬೇಸನಲಾಡು , ಅಥವಾ ನಿಮಗೆ ಏನು ಅನಕೂಲ ಅದನ್ನು ಮಾಡಿ ದಾನ ಮಾಡಿ ......ಅಪೂಪ ದಾನ ಹುಣ್ಣಿಮೆ ಯ ಒಳಗೆ ಶ್ರೇಷ್ಠ.
ನಂತರ ಮೂವತ್ತ್ಮೂರು ಫಲ ದಾನ....
ಇನ್ನೂ ಶ್ರಾದ್ಧದ ವಿಚಾರ .... ಜೇಷ್ಠದಲ್ಲಿ ಶ್ರಾದ್ಧವಿದ್ದವರು ಎರಡೂ ಶ್ರಾದ್ಧವನ್ನೂ ಮಾಡಬೇಕು ಅಧಿಕ ಜೇಷ್ಠ ಶ್ರಾದ್ಧ ಮತ್ತು ನಿಜ ಜೇಷ್ಠ ಶ್ರಾದ್ಧ... ಅಧಿಕ ಶ್ರಾದ್ಧವನ್ನು ಹಾಲು ಹಣ್ಣು ಕೊಟ್ಟು ಮಾಡಿ ನಂತರ ನಿಜ ಶ್ರಾದ್ಧದಲ್ಲಿ ಭೋಜನ ಹಾಕಬಹುದು....
--ವೀಣಾ ಜೋಶಿ....
Kannada and English Translation
Adhika Maasa (ಅಧಿಕ ಮಾಸ - ದಾನ ವಿವರಗಳು) Daana Details
1. ಅಪೂಪ (Apoopa) -33 Nos
2. ಅರಿಶಿನ+ ಕುಂಕುಮ –ಲೋಹದ ಬಟ್ಟಲು (Turmeric + Kumkum in Metal cups)
3. (Missing)
4. ತುಳಸಿ ಪೂಜಾ ಸಾಮಗ್ರಿ (Tulasi pooja items)
5. ಸಾಲಿಗ್ರಾಮ ಪೂಜಾ ಸಾಮಗ್ರಿ (Saligrama pooja items)
6. ರವೇ ಉಂಡೆ – 33 (Rave Unde)
7. ಪಾಯಸ + ಪಾತ್ರೆ (Payasa= Paatre)
8. ಅರುಳು ಉಂಡೆ – 33 (Arulu unde0
9. ಗಂಡಸರ ಪಂಚ ಮುದ್ರೆ (Men’s pancha Mudra)
10. ಗೋಪಿ ಚಂದನ – 33 (Gopi Chandana)
11. ಜನಿವಾರ – 33 ಜನಕ್ಕೆ ( Janeu for 33 people)
12. ತೊಟ್ಲು + ಕೃಷ್ಣ (Cradle + Krishna)
13. ಘಂಟೆ(Bell)
14. ಜಾಗಟೆ (set) – Gong-set
15. ಫಲ ದಾನ (Plates with fruits)
16. ದಂಪತಿ ತಾಂಬೂಲ - 33 (Betel leaves+ Betel nuts + Coconut + Dakshina)
17. ವಸ್ತ್ರ (ಸುಮಂಗಲಿ/ ದಂಪತಿ) (Vastra – Sumangali/ couple)
18. ಮರದ ಬಾಗಿನ (Murada Baagina)
19. ದೀಪ - 33 ಜನಕ್ಕೆ (Deepa – for 33 people)
20. ಜೇನು + ತುಪ್ಪ (Honey+ Ghee)
21. ಶಯ್ಯಾ ದಾನ (ಜಮಖಾಳ+ಹೊದ್ದಿಕೆ+ದಿಂಬು Set (Shayya Daana Durrie+Blanket+pillow )
22. ಮಂದಾಸನ (Mandaasana)
23. ತರಕಾರಿಗಳು (Vegetables)
24. ಭೋಜನ ಸಾಮಾನುಗಳು (Food items – may be groceries))
25. ಶ್ರೀಗಂಧ (Sandal paste)
26. ಸಾಣೆಕಲ್ಲು + ಶ್ರೀ ಗಂಧ ಚೆಕ್ಕೆ (Sadalwood extracting stone and wood piece)
27. ಸಾಲಿಗ್ರಾಮ (saligrama)
28. ಗೋದಾನ (Godana)
29. ಸ್ವರ್ಣದಾನ (Swarna daana)
30. ಗೃಹದಾನ (Written as graha daana, must be Griha daana)
31. ಉದಕುಂಭ ದಾನ (Waterpot )
32. ಬೆಳ್ಳಿ ದಾನ (Silver gift)
33. ಪುಸ್ತಕ ದಾನ (Book )
34. ಚಕ್ರಾಣಿಕೆ (Chakraanike)
35. ಆಸನ (ಮಣೆ – ಪೀಠ) – Asana (Plank)
36. ಸಕ್ಕರೆ /ಕಲ್ಲುಸಕ್ಕರೆ (Sugar/ sugar-candy)
37. ಪಾನಕ / ಮಜ್ಜಿಗೆ (Paanaka / Buttermilk)
38. ಮೊಸರನ್ನ /ಪುಳಿಯೋಗರೆ (Curd rice / Tamarind rice)
39. ಕೊಡೆ (Umbrella)
40. ಚೆಪ್ಲಿ (Chappal)
41. ತುಳಸಿ ಮಣಿ (Tulasi bead)
42. ಚಾಪೆ – ಜತೆ ( Mat – pair)
43. ವಿಷ್ಣು ಪಾದ (Vishnu Paada)
44. 100 Nos ಹೂ ಬತ್ತಿ (100 nos -Hoo Batti)
45. ಗೆಜ್ಜೆವಸ್ತ್ರ - 33 Nos (Gejjevastar)
46. ಹಾಲು + ಲೋಟ (Milk+ Tumbler)
47. ಮೊಸರು(Curd)
48. 100 Nos ಮಂಗಳ ಹಾರತಿ ಬತ್ತಿ (100 nos -Managala Haarati Batti)
49. ಸಕ್ಕರೆ ಪೊಂಗಲ್/ ಬೆಣ್ಣೆ ಪೊಂಗಲ್ (ಹುಗ್ಗಿ) – (Sweet pongal/ Pongal)
50. ನಾಣ್ಯ -33 (Coins-33)
51. ಭೂ ದಾನ (Bhoomi daana)
52. ಕನ್ನಡಿ (Mirror)
53. ನೆಲ್ಲಿ ಕಾಯಿ – 33 Nos (Amla -33)
54. ವಿಗ್ರಹ (Vigraha)
55. ಅರಿಶಿನ+ ಕುಂಕುಮ+ ಕನ್ನಡಿ + ಬಾಚಣಿಗೆ + ಬಳೆ + ಕರಿಮಣಿ – (Full set -for 33 people)
56. ತೆಂಗಿನಕಾಯಿ (Coconut)
57. ಕೈಕೋಲು (Walking stick)
58. ಅನ್ನ ದಾನ ( Anna daana)
59. ನೋಟು ಪುಸ್ತಕ + ಪೆನ್ನು+ ಪೆನ್ಸಿಲ್ (Notebook + Pen + pencil)
60. ವಾದ್ಯ ಬಗೆ (Types of Musical instruments).
ಅಧಿಕಮಾಸದಲ್ಲಿ ನಿತ್ಯ ದಾನ
ಶುಕ್ಲ ಪಕ್ಷ
ಪಾಡ್ಯ:- ಅರಿಶಿನ ಕುಂಕುಮ ಎಲೆಅಡಿಕೆದಕ್ಷಿಣೆ
ಬಿದಿಗೆ:- ಕುಂಕುಮ ಅರಿಶಿನ ಎಲೆಅಡಿಕೆದಕ್ಷಿಣೆ
ತದಿಗೆ:- ಕೊಬ್ಬರಿ ಸಕ್ಕರೆ
ಚೌತಿ:- ನಿಂಬೆ ಹಣ್ಣು ಸಕ್ಕರೆ ಏಲಕ್ಕಿ
ಪಂಚಮಿ:- ಅಕ್ಕಿ ಎಲೆ ಅಡಿಕೆ ದಕ್ಷಿಣೆ
ಷಷ್ಠಿ:- ಮೊಸರು
ಸಪ್ತಮಿ:- ಹಣ್ಣು
ಅಷ್ಟಮಿ:- ತೊಗರಿಬೇಳೆ
ನವಮಿ:- ಗೋರಿಕಾಯಿ
ದಶಮಿ:- 2 ಬೆಲ್ಲದ ಅಚ್ಚು
ದ್ವಾದಶಿ:- ಹಾಲು
ತ್ರಯೋದಶಿ:- ಗೋಧಿಹಿಟ್ಟು
ಚತುರ್ದಶಿ:- ಮಲ್ಲಿಗೆ ಹೂವು
ಹುಣ್ಣಿಮೆ:- ಸೌತೆಕಾಯಿ
ಕೃಷ್ಣ ಪಕ್ಷ
ಪಾಡ್ಯ:- ಹೀರೇಕಾಯಿ
ಬಿದಿಗೆ:- ಗೆಡ್ಡೆ ಗೆಣಸು
ತದಿಗೆ:- ಕುಪ್ಪಸ ಎಲೆ ಅಡಿಕೆ ದಕ್ಷಿಣೆ
ಚೌತಿ:- ಹುರಿಗಡಲೆ
ಪಂಚಮಿ:- ಕಡಲೆಕಾಯಿ ಬೀಜ
ಷಷ್ಠಿ:- ರವೆ ಎಲೆ ಅಡಿಕೆ ದಕ್ಷಿಣೆ
ಸಪ್ತಮಿ:- ಶ್ರೀ ಕೃಷ್ಣ ಸಮೇತ ತುಳಸಿ ದಾನ
ಅಷ್ಟಮಿ:- ಹತ್ತಿ
ನವಮಿ:- ಕಡ್ಲೆಹಿಟ್ಟು
ದಶಮಿ:- ಗಾಜಿನ ಬಳೆ
ದ್ವಾದಶಿ:- ಹೆಸರುಬೇಳೆ
ತ್ರಯೋದಶಿ:- ಅವಲಕ್ಕಿ
ಚತುರ್ದಶಿ:- ಕಡ್ಲೆಕಾಯಿ ಎಣ್ಣೆ
ಅಮಾವಾಸ್ಯೆ:- ಕಡ್ಲೆಬೇಳೆ
ಶುದ್ಧ ಪಾಡ್ಯ:- ಕುಪ್ಪಸ ಎಲೆ ಅಡಿಕೆ ದಕ್ಷಿಣೆ
************
one more
ಅಧಿಕ ಮಾಸದಲ್ಲಿ ನಿತ್ಯ ದಾನ :
ಪಾಡ್ಯ : ಅರಿಶಿನ ಕುಂಕುಮ ಎಲೆ ಅಡಿಕೆ ಎಲ್ಲದಕ್ಕೂ ದಕ್ಷಿಣೆ
ಬಿದಿಗೆ : ಕುಂಕುಮ ಅರಿಶಿನ ಎಲೆ ಅಡಿಕೆ
ತದಿಗೆ : ಕೊಬ್ಬರಿ ಸಕ್ಕರೆ
ಚೌತಿ : ನಿಂಬೆಹಣ್ಣು , ಸಕ್ಕರೆ , ಏಲಕ್ಕಿ
ಪಂಚಮಿ : ಅಕ್ಕಿ ,ಎಲೆ ಅಡಿಕೆ
ಷಷ್ಠಿ : ಮೊಸರು
ಸಪ್ತಮಿ : ಹಣ್ಣು
ಅಷ್ಟಮಿ : ತೊಗೋರಿಬೇಳೆ
ನವಮಿ : ಗೋರಿಕಾಯಿ (ಚೌಳಿ ಕಾಯಿ)
ದಶಮಿ : ಬೆಲ್ಲದ 2 ಅಚ್ಚು
ದ್ವಾದಶಿ : ಹಾಲು
ತೈಯೋದಶಿ : ಗೋಧಿ ಹಿಟ್ಟು
ಚತುರ್ದಶಿ : ಮಲ್ಲಿಗೆ ಹೂವು
ಹುಣ್ಣಿಮೆ : ಸೌತೆಕಾಯಿ
ಬಹುಳ ಪಾಡ್ಯ : ಹಿರೇ ಕಾಯಿ
ಬಿದಿಗೆ : ಗಡ್ಡೆ ಗೆಣಸು
ತದಿಗೆ : ಕಪ್ಪು ಎಲೆ ಅಡಿಕೆ
ಚೌತಿ : ಹುರಿ ಗಡಲೇ
ಪಂಚಮಿ : ಸೇಂಗಾ
ಷಷ್ಠಿ : ರವೆ ,ಎಲೆ, ಅಡಿಕೆ
ಸಪ್ತಮಿ : ಶ್ರೀಕೃಷ್ಣ ಸಮೇತ ತುಳಸಿ ದಾನ
ಅಷ್ಟಮಿ : ಹತ್ತಿ
ನವಮಿ : ಕಡಲೆ ಹಿಟ್ಟು
ದಶಮಿ : ಗಾಜಿನ ಬಳೆ
ದ್ವಾದಶಿ : ಹೆಸರು ಬೆಳೆ
ತೈಯೋದಶಿ : ಅವಲಕ್ಕಿ
ಚತುರ್ದಶಿ : ಎಣ್ಣೆ (ಸೇಂಗಾ)
ಅಮಾವಾಸ್ಯೆ : ಕಡಲೆ ಬೆಳೆ
ಶುದ್ಧ ಪಾಡ್ಯ : ಕುಪ್ಪಸದ ಬಟ್ಟೆ ,ಎಲೆ, ಅಡಿಕೆ + dakshine
ಅಧಿಕಾಮಾಸ ಆರಂಭವಾಗುತ್ತಿದಂತೆಯೇ ಉಪವಾಸವ್ರತ , ಧರಣಿ-ಪಾರಣಿ ಮುಂತಾದ ವ್ರತಗಳಲ್ಲಿ ಯಾವುದಾದರೂ ಒಂದುನ್ನು ಧಾರಣಿಮಾಡಿ ಒಂದು ಮಾಸ ಪರ್ಯಂತ ಆಚರಿಸಬೇಕು. ನಿತ್ಯ ತಾಂಬೂಲ ದಾನದಿಂದ ಅಖಂಡ ಸೌಭಾಗ್ಯ ಪ್ರಾಪ್ತಿಯಾಗುವುದು. ದೇವರ ಸನ್ನಿಧಾನದಲ್ಲಿ ಅಖಂಡ ದೀಪಸ್ಥಾಪನೆಯಿಂದ ಸಂಪತ್ತು ಪ್ರಾಪ್ತಿಯಾಗುವುದು. ಈ ಮಾಸದಲ್ಲಿ ಗಂಗಾ-ಕಾವೇರಿ ಮೊದಲಾದ ಸ್ನಾನದಿಂದ ಪಾಪ ನಾಶವಾಗುವುದು.
ವಿ.ಸೂ :ಅಧಿಕ ಮಾಸದಲ್ಲಿ ಕ್ಷೀರ ವ್ರತ ಇರುವುದರಿಂದ ಹಾಲು ದಾನವಾಗಿ ಕೊಡಬಾರದು.
ಅಧಿಕಮಾಸದ ಮಹತ್ವ 🌷🌹
|| ಸಂಚಿಕೆ-7 ||
ಅಧಿಕಮಾಸದಲ್ಲಿ ನಿಷಿದ್ಧಕಾರ್ಯಗಳು
ಅನಿತ್ಯಮನಿಮಿತ್ತಂ ಚ ದಾನಂ ಚ ಮಹಾದಾನಾದಿಕಮ್
ಅಗ್ನ್ಯಾಧಾನಧ್ವರಾ ಪೂರ್ವತೀರ್ಥ ಯಾತ್ರಾ ಮರೇಕ್ಷಣಂ ||
ದೇವಾರಾಮತಟಾಕಾದಿಪ್ರತಿಷ್ಠಾಂ ಮೌಂಜಿಬಂಧನಮ್ |
ಆಶ್ರಮಸ್ವೀಕೃತಿಂ ಕಾಮ್ಯವೃಷೋತ್ಸರ್ಗಂ ಚ ನಿಷ್ಕ್ಕ್ರಮ ಮ್ ||
ರಾಜ್ಯಾಭಿಷೇಕಂ ಪ್ರಥಮಂ ಚೂಡಾಕರ್ಮವ್ರತಾನಿ ಚ |
ಅನ್ನಪ್ರಾಶನಮಾರಂಭಂ ಸಮಾಪ್ತಿಂ ಚ ಕಾಮ್ಯಕರ್ಮ ಚ ಪಾಪ್ಮಾನಾಮ್ ||
ರಾಜ್ಯಾಭಿಷೇಕಂ ಪ್ರಥಮಂ ಚೂಡಾಕರ್ಮವ್ರತಾನಿ ಚ |
ಅನ್ನಪ್ರಾಶನಮಾರಂಭಂ ಗ್ರಹಾಣಾಂ ಚ ಪ್ರವೇಶನಮ್ ||
ಸ್ನಾನಂ ವಿವಾಹಂ ನಾಮಾತಿಪನ್ನಂ ದೇವಮಹೋತ್ಸವಮ್ |
ವ್ರತರಂಭಂ ಸಮಾಪ್ತಿಂ ಚ ಕಾಮ್ಯಕರ್ಮ ಚ ಪಾಪ್ಮಾನಾಮ್ ||
ಪ್ರಾಯಶ್ಚಿತ್ತಂ ಚ ಸರ್ವಸ್ಯ ಮಲಮಾಸೇ ವಿವರ್ಜಯೇತ್ ||
ತುಲಾಪುರುಷದಾನದಿ ಮಹಾದಾನಗಳು ಅಗ್ನ್ಯಾಧಾನ ,ಯಜ್ಞ ,ಉದ್ಯಾನವನಗಳ ನಿರ್ಮಾಣ ಕೆರೆ ಕಟ್ಟಿಸುವುದು ,ಉಪನಯನ , ಸಂನ್ಯಾಸ ಸ್ವೀಕಾರ ,ಜ್ಯೋತಿಷ್ಟೋಮಾದಿ ಕಾಮ್ಯಕಾರ್ಮಗಳು ಮಗುವನ್ನು. ಮೊದಲಬಾರಿಗೆ ಮನೆಯಿಂದ ಹೊರಕ್ಕೆ ಕರೆದೊಯ್ಯುವ ಕಾರ್ಯ ,ಚೌಲ ,ಉಪನಯನ ,ವಿಶೇಷರೀತಿಯ ವ್ರತಗಳು ,ಅನ್ನಪ್ರಾಶನ ,ಗೃಹಾರಂಭ ,
ಗೃಹಪ್ರವೇಶ ,ವಿಶೇಷ ತೀರ್ಥಸ್ನಾನ ವಿವಾಹ ,ಪಾಪಗಳಿಗೆ ಪ್ರಾಯಶ್ಚಿತ್ತ ,ಈ ಕಾರ್ಯಗಳನ್ನು.ಅಧಿಕಮಾಸದಲ್ಲಿ ಮಾಡಕೊಡದು .(ಅಧಿಕಮಾಸದಲ್ಲಿ ಬಿಡುವ ಈ ಮೇಲಿನ ಕಾರ್ಯಗಳನ್ನು ಮುಂದೆಶುದ್ಧಮಾಸದಲ್ಲಿಯೇ ಮಾಡಬೇಕು..)ಅಧಿಕಮಾಸಕ್ಕಿಂತ ಮುಂಚಿತವಾಗಿ ಪ್ರಾರಂಭಿಸಿದ (ವಿಷ್ಣುಪಂಚಕಾದಿ) ವ್ರತ ಮತ್ತು ವೈಶಾಖ ಸ್ನಾನಾದಿಕಾರ್ಯಗಳನ್ನು ಮಾತ್ರ ಅಧಿಕಮಾಸದಲ್ಲಿ ಮುಂದುವರಿಸಬೇಕು.
-ಬೃಹಸ್ಪತಿಃ(ಸ್ಮೃತಿಮುಕ್ತಾವಳೀ)
ಮಲ್ಲಿಮ್ಲುಚೇತು ಸಂಪ್ರಾಪ್ತೇ ಕ್ರಿಯಾ ಸರ್ವಾಃಪರಿತ್ಯಜೇತ್ |
ಪಿತೃಕಾರ್ಯಂ ತು ಸಂಪ್ರಾಪ್ತೇ ತೀರ್ಥಯಾತ್ರಾವ್ರತಾದಿಕಮ್ ||
ಕ್ಷೌರಂ ಮೌಂಜಿವಿವಾಹೌ ಚ ವ್ರತಂ ಕಾಮ್ಯೋಪವಾಸಕಮ್ |
ಮಲ್ಲಿಮ್ಲುಚೇ ಸದಾ ತ್ಯಜ್ಯಂ ಗೃಹಸ್ಥೈಶ್ಚ ವಿಶೇಷತಃ ||
ಅಧಿಕಮಾಸವು ಬಂದಾಗ ತೀರ್ಥಯಾತ್ರೆ ಪಿತೃಕಾರ್ಯ ,ತೀರ್ಥಶ್ರಾದ್ಧ ,ಕ್ಷೌರ ,ಉಪನಯನ ,ವಿವಾಹ ಕಾಮ್ಯವ್ರತ , ಕಾಮ್ಯ ಉಪವಾಸ ಮೊದಲದುವುಗಳನ್ನು ಮಾಡಬಾರದು .
-ಬೃಹನ್ನಾರದೀಯ ಪುರಾಣ 3-37 ,38
***********
ಕ್ಷೌರಂ ಮೌಂಜಿ ಕಾಮ್ಯೋಪವಾಸಕಮ್ |
ಮಲ್ಲಿಮ್ಲುಚೇ ಸದಾ ತ್ಯಜ್ಯಂ ಗೃಹಸ್ಥೇನ ವಿಶೇಷತಃ ||
ಮಲ(ಅಧಿಕ)ಮಾಸದಲ್ಲಿ ಕ್ಷೌರ ,ಉಪನಯನ ,ವಿವಾಹ ,ಕಾಮ್ಯವ್ರತ ಹಾಗೂ ಕಾಮ್ಯೋಪವಾಸಗಳನ್ನು ಗೃಹಸ್ಥನಾದವನು ವಿಶೇಷವಾಗಿ ತೊರೆಯಬೇಕು .
-ಭವಿಷ್ಯೋತ್ತರಪುರಾಣ
ಅಧಿಕಮಾಸದ ವಿಶೇಷಪರ್ವಕಾಲಗಳು
ವೈಧೃತಿಶ್ಚ ವ್ಯತಿಪಾತೋ ರಾಕಶ್ಚೈವ ಕುಹೂಸ್ತಥಾ |
ದ್ವಾದಶೀ ಪಂಚಪರ್ವಣಿ ಪರಂಶ್ರೇಷ್ಠಾನ್ಯನುಕ್ರಮಾತ್ ||
ವೈಧೃತಿ ವ್ಯತಿಪಾತ (ಎಂಬ ಎರಡು ಯೋಗಗಳು )ಹುಣ್ಣಿಮೆ ಅಮಾವಾಸ್ಯೆ ಹಾಗೂ ದ್ವಾದಶೀ ಈ ಐದು ಅನುಕ್ರಮವಾಗಿ ಹೆಚ್ಚು ಹೆಚ್ಚು ಮಹತ್ವದ ಅಧಿಕಮಾಸದ ಮಹಾಪರ್ವದಿವಸಗಳು (ಉಭಯ ಪಕ್ಷದ ದ್ವಾದಶಿಗಳು ಮಹಾವಿಶೇಷಪರ್ವಕಾಲಗಳು ಎಂದರ್ಥ)
-ಪದ್ಮಪುರಾಣ 12-4
*********
ಅಧಿಕಮಾಸದಲ್ಲಿ ಉಪವಾಸದ ಮಹತ್ವ
ದ್ವಾತ್ರಿಂಶದ್ಭಿರ್ಗತೈರ್ಮಾಸೈರ್ದಿನೈಷೋರ್ಡಶಭಿಸ್ತಥಾ |
ಘಟಿಕಾನಾಂ ಚತುಷ್ಕೇಣ ಪತತ್ಯಧಿಕಮಾಸಕಃ ||
ಪಂಚಮೇ ಪಂಚಮೇ ವರ್ಷೇ ದೌ ಮಾಸಾವಧಿಮಾಸಕೌ |
ತೇಷಾಂ ಕಾಲತಿರೇಕೇಣ ಗ್ರಹಾಣಾಮತಿಚಾರತಃ ||
ಏಕಮಪ್ಯುಪವಾಸಂ ಯಃ ಕರೋತ್ಯಸ್ಮಿನ್ ತಪೋನಿಧೇ |
ಅಸಾವನಂತಪಾಪಾನಿ ಭಸ್ಮೀಕೃತ್ಯ ದ್ವೀಜೋತ್ತಮ ||
ಸರಾಸರಿ ಲೆಕ್ಕದಲ್ಲಿ ಮೂವತ್ತೆರಡು ತಿಂಗಳು.ಹದಿನಾರು ದಿನಗಳು ಹಾಗೂ ನಾಲ್ಕು ಘಳಿಗೆಯೊಮ್ಮೆ ಅಧಿಕಮಾಸವು ಬರುತ್ತದೆ . ಪ್ರತಿ ಐದುವರ್ಷಗಳಲ್ಲಿ ಎರಡು ಅಧಿಕಮಾಸಗಳಾಗುತ್ತವೆ. ಇಂತಹ ಪವಿತ್ರವಾದ ಅಧಿಕಮಾಸದಲ್ಲಿ ಒಂದುದಿನವಾದರೂ ಉಪವಾಸ ಮಾಡುವವನು ಅನಂತಪಾಪಗಳಿಂದ ಬಿಡುಗಡೆ ಹೊಂದುವನು.
-ಸ್ಮೃತಿ
**********
ಏಕಭುಕ್ತೇನ ನಕ್ತೇನ ತಥೈವಾಯಾಚಿತೇನ ವಾ |
ಉಪವಾಸೇನ ಕುರ್ವೀತ ಮಲಮಾಸವ್ರತಂ ನರಃ ||
ಅಧಿಕಮಾಸದಲ್ಲಿ ಏಕಭುಕ್ತ (ಒಂದೇ ಊಟ)ನಕ್ತಭೋಜನ (ರಾತ್ರಿಯಲ್ಲಿ ಮಾತ್ರ ಭೋಜನ)ಅಥವಾ ಉಪವಾಸ ವ್ರತಗಳನ್ನು ಆಚರಿಸಬೇಕು.
-ಪದ್ಮಪುರಾಣ 2-5
ಅಧಿಮಾಸೇ ನರೋ ನಕ್ತಂ ಯೋ ಭುಂಕ್ತೇ ಸ ನರಾಧಿಪ |
ಸರ್ವಾನ್ ಕಾಮಾನವಾಪ್ನೋತಿ ನರೋ ನೈವಾತ್ರ ಸಂಶಯಃ ||
ಅಧಿಕಮಾಸದಲ್ಲಿ ನಕ್ತ(ರಾತ್ರಿಮಾತ್ರ)ಭೋಜಪವ್ರತವನ್ನು ಮಾಡುವುದು. ಸಹ ವಿಹಿತ ಇದನ್ನು ಆಚರಿಸುವವನು ಸಕಲ ಆಕಾಂಕ್ಷೆಗಳನ್ನು ಈಡೆರಿಸಿಕೂಳ್ಳುವನು ; ಇದು.ನಿಶ್ಚಿತ .
-ಬೃಹನ್ನಾರದೀಯ ಪುರಾಣ 26-16
***********
|| ಏಕಾನ್ನವ್ರತ ||
ಏಕಾನ್ನೇನ ನರೋ ತಸ್ತು ಮಲಮಾಸಂ ನಿಷೇವತೇ.|
ಚತುರ್ಭುಜೋ ನರೋ ಭೂತ್ವಾ ಸ ಯಾತಿ ಪರಮಾಂ ಗತಿಮ್ ||
ಏಕಾನ್ನಾನ್ನಾಪರಂ ಕಿಂಚಿತ್ ಪವಿತ್ರಮೀಹ ವಿದ್ಯತೇ |
ಏಕಾನ್ನಾನ್ಮುನಯಃ ಸಿದ್ಧಾಃ ಪರಂ ನಿರ್ವಾಣಮಾಗತಾಃ ||
ಒಂದುಬಾರಿ ಮಾತ್ರ ಉಂಡ ಊಟ ,ಕುಡಿದ ನೀರು ಎಂಬ ಏಕಾನ್ನಭೋಜನದ ವ್ರತ ಅಧಿಕಮಾಸದಲ್ಲಿ ವಿಶೇಷವಾಗಿ ವಿಹಿತ. ಇದನ್ನು ಆಚರಿಸುವವನು ಚತುರ್ಭುಜದಿಂದ ಕೂಡಿದ ಸಾರೂಪ್ಯಮುಕ್ತಿಯನ್ನು ಪಡೆಯುವನು . ಈ ವ್ರತಕ್ಕೆ ಸಮನಾದ ಬೇರೊಂದು ಪವಿತ್ರವ್ರತ ಇಲ್ಲ ಇದರ ಅನುಷ್ಠಾನದಿಂದ ಮುನಿಗಳು ಶ್ರೇಷ್ಠಸಿದ್ಧಿಯನ್ನು ಮುಂದೆ ಮುಕ್ತಿಯನ್ನು ಪಡೆದಿರುವರು .
-ಬೃಹನ್ನಾರದೀಯ ಪುರಾಣ 26 -14 ,15
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ....
*******************
15 september 2020
ಪುರುಷೋತ್ತಮ ಯೋಗದೊಂದಿಗೆ ಪುರುಷೋತ್ತಮ ಯಾಗ
(ಅಧಿಕಮಾಸದ ಪ್ರಯುಕ್ತ ಜಾಗತಿಕವಾಗಿ ಭಗವದ್ಗೀತೆಯ ೧೫ನೆಯ ಅಧ್ಯಾಯದ ಪಾರಾಯಣ ಕಾರ್ಯಕ್ರಮ)
*******
ಅಧಿಕಮಾಸವನ್ನು ಪುರುಷೋತ್ತಮ ಮಾಸವೆಂದೇ ಹಿರಿಯರು ಕರೆದಿದ್ದಾರೆ. ಭಗವದ್ಗೀತೆಯ 15ನೆಯ ಅಧ್ಯಾಯವು ಪುರುಷೋತ್ತಮ ಯೋಗ ಎನ್ನುವ ಹೆಸರನ್ನು ಪಡೆದಿದೆ. ಈ ಎರಡು ವಿಶಿಷ್ಟ ಅಂಶಗಳ ಹಿನ್ನೆಲೆಯಲ್ಲಿ ಪರಮಪೂಜ್ಯರಾದ ಶ್ರೀಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪುರುಷೋತ್ತಮ ಯಾಗ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ವಿಶ್ವಕಲ್ಯಾಣವೇ ಇದರ ಉದ್ದೇಶ.
ಪುರುಷೋತ್ತಮ ಯಾಗವು ಪುರುಷೋತ್ತಮ ಯೋಗದ ಸಾಮೂಹಿಕ ಪಾರಾಯಣ ಮತ್ತು ಮಂಗಳಮಹೋತ್ಸವದ ಕಾರ್ಯಕ್ರಮ. ಇದು ಈ ಶಾರ್ವರೀ ಸಂವತ್ಸರದ ಅಧಿಕಮಾಸದಲ್ಲಿ ನಡೆಯಲಿದೆ. 29 ದಿನಗಳ ಈ ಅವಧಿಯಲ್ಲಿ ಪ್ರತಿನಿತ್ಯ ಆಸಕ್ತ ಭಕ್ತರು ಗೀತೆಯ 15ನೆ ಅಧ್ಯಾಯವನ್ನು ಯಥಾಶಕ್ತಿ ಪಾರಾಯಣ ಮಾಡುವ ಮೂಲಕ ಭಾಗವಹಿಸಬಹುದು.
ಅಧಿಕಮಾಸದ ಕೊನೆಯಲ್ಲಿ ಪುರುಷೋತ್ತಮಯಾಗದ ಪೂರ್ಣಾಹುತಿಯು ನಡೆಯುತ್ತದೆ. ಪಾರಾಯಣ ಯಜ್ಞದಲ್ಲಿ ಭಾಗವಹಿಸಿದ ಎಲ್ಲರ ಹೆಸರಿನಲ್ಲಿಯೂ ಅಂದು ಪ್ರಾರ್ಥನೆಯು ಸಲ್ಲುತ್ತದೆ. ಶ್ರದ್ಧೆಯಿಂದ ಪಾಲ್ಗೊಂಡವರಿಗೆ ಈ ಯಾಗವು ಎಲ್ಲ ವಿಧವಾದ ಫಲಗಳನ್ನು ಖಂಡಿತವಾಗಿಯೂ ಕೊಡುವುದು.
ಪಾರಾಯಣವನ್ನು ಪ್ರಾರಂಭಿಸಬೇಕಾದ ದಿನಾಂಕ : 18.09.2020
ಮುಕ್ತಾಯದ ದಿನ : 16.10.2020
ಪ್ರ: ಮಾಡಬೇಕಾದದ್ದು ಏನು?
ಉ: ಸರಳ. ಭಗವದ್ಗೀತೆಯ ಹದಿನೈದನೆಯ ಅಧ್ಯಾಯವನ್ನು 29 ದಿನಗಳ ಪ್ರತಿನಿತ್ಯ ಕಾಲ ಪಾರಾಯಣ ಮಾಡಿ.
ಪ್ರ: ಪಾರಾಯಣ ಮಾಡಲು ಏನು ಅರ್ಹತೆ ಇರಬೇಕು?
ಶ್ರೀಕೃಷ್ಣನ ಮೇಲೆ ಪ್ರೀತಿ ಮತ್ತು ಗೀತೆಯ ಮೇಲೆ ಅಚಲವಾದ ವಿಶ್ವಾಸವೇ ಯಾಗದಲ್ಲಿ ಭಾಗವಹಿಸಲು ಇರಬೇಕಾದ ಅರ್ಹತೆ. ಇಷ್ಟು ಇರುವ ಯಾರು ಬೇಕಾದರೂ ಜಾತಿ ಮತ ವಯಸ್ಸಿನ ಭೇದವಿಲ್ಲದೆ ಭಾಗವಹಿಸಬಹುದು.
ಪ್ರ: ಎಷ್ಟು ಸಲ ಮಾಡಬೇಕು?
ಉ: ಒಂದು ಸಲ ಪಾರಾಯಣ ಮಾಡಲು ಸುಮಾರು 5 ನಿಮಿಷಗಳು ಸಾಕು. ಈ ಲೆಕ್ಕದಲ್ಲಿ ನಿಮಗೆ ಎಷ್ಟು ಸಲ ಮಾಡಲು ಅನುಕೂಲವಾಗುವದೋ ಅಷ್ಟು ಮಾಡಿ. ಕೊನೆಯ ದಿನದಂದು ನಿಮ್ಮ ಪಾರಾಯಣ ಒಟ್ಟಾರೆ ಸಂಖ್ಯೆಯನ್ನು ನಮಗೆ ತಲುಪಿಸಿ. ಆದರೆ ಈ ನೆವದಿಂದ ಮನೆಯ ಇನ್ನಿತರ ಕೆಲಸಗಳನ್ನು ತಪ್ಪಿಸದಿರಿ.
ಪ್ರ: ಏನೆಂದು ಸಂಕಲ್ಪ ಮಾಡಬೇಕು?
ಉ : ಶ್ರೀಪುರುಷೋತ್ತಮನ ಪ್ರೀತಿಗಾಗಿ ಈ ಪಾರಾಯಣವನ್ನು ಮಾಡುತ್ತಿದ್ದೇನೆ ಎಂದು ಸಂಕಲ್ಪ ಮಾಡಿ. ನಿಮ್ಮ ನಿಮ್ಮ ಮನೆತನದ ಸಂಪ್ರದಾಯದಂತೆಯೇ ಸಂಕಲ್ಪದ ಪ್ರಕ್ರಿಯೆಯು ಇರಲಿ.
ಪ್ರ: ಈ ಪಾರಾಯಣವನ್ನು ಮಾಡಲು ನಾವು ಉಡುಪಿಗೆ ಬರಬೇಕೆ?
ಉ: ಪುರುಷೋತ್ತಮ ಯಾಗವು ಜಾಗತಿಕ ಮಟ್ಟದ್ದು. ಭಾಗವಹಿಸಲು ನೀವು ಉಡುಪಿಗೆ ಬರಲು ಅನುಕೂಲವಾದಲ್ಲಿ ಉತ್ತಮವೇ. ಆದರೆ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೀವುಗಳು ನಿಮ್ಮ ಮನೆಯಲ್ಲಿಯೇ ಕುಳಿತು ಈ ಪಾರಾಯಣವನ್ನು ಮಾಡಬಹುದು.
ಪ್ರ : ಇದಕ್ಕೆ ಶುಲ್ಕ ಎಷ್ಟು?
ಉ: ಯಾವುದೇ ರೀತಿಯ ಶುಲ್ಕವಿರುವುದಿಲ್ಲ.
ಪ್ರ: ನಾವು ಸೌರಮಾನ ಪದ್ಧತಿಯನ್ನು ಅನುಸರಿಸುವವರು. ಅಧಿಕಮಾಸದ ಆಚರಣೆಯೇ ಇಲ್ಲ ನಮಗೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ?
ಉ: ಖಂಡಿತವಾಗಿಯೂ ಭಾಗವಹಿಸಬಹುದು. ಸೌರಮಾನದಲ್ಲಿ ಅಧಿಕಮಾಸದ ಆಚರಣೆಯು ಇಲ್ಲ. ಆದರೆ ಈ ನಿಗದಿತವಾದ ದಿನಾಂಕಗಳಂತೂ ಎಲ್ಲರಿಗೂ ಒಂದೇ. ಹಾಗಾಗಿ ಸೌರಮಾನದವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಭಗವಂತನ ಆರಾಧನೆಯೇ ನಮ್ಮೆಲ್ಲರ ಧ್ಯೇಯವು.
ಪ್ರ: ಪುರುಷೋತ್ತಮ ಯೋಗದ ಸಾಹಿತ್ಯ ಇಲ್ಲ ನನ್ನಲ್ಲಿ. ಆದರೆ ಕಲಿತು ಪಾರಾಯಣ ಮಾಡಲು ಇಷ್ಟವಿದೆ. ಏನು ಮಾಡಲಿ?
ಉ: ಸಾಹಿತ್ಯ ಹಾಗು ಅದನ್ನು ಪಠಿಸುವ ಶೈಲಿಯನ್ನು ನಾವು ಇಲ್ಲಿ ( https://sripalimarumatha.org/downloads/shri-purushottama-yoga )ಪ್ರಕಟಿಸಿದ್ದೇವೆ. ಬಹಳ ಸರಳವಾಗಿದೆ. ನಿಮ್ಮ ಮೊಬೈಲ್ ಫೋನಿನಲ್ಲಿಯೇ ಅದನ್ನು ನೀವು ಅಭ್ಯಸಿಸಬಹುದು.
ಪ್ರ : ಪಾರಾಯಣ ಮಾಡಿದ ಸಂಖ್ಯೆಯನ್ನು ಹೇಗೆ, ಯಾರಿಗೆ ತಲುಪಿಸಬೇಕು?
ಪುರುಷೋತ್ತಮ ಯಾಗದಲ್ಲಿ ಭಾಗವಹಿಸಲು ನೀವು 18.09.2020ರ ಒಳಗಾಗಿ ನಮ್ಮೊಂದಿಗೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಒಮ್ಮೆ ಪಾರಾಯಣವನ್ನು ಪ್ರಾರಂಭಿಸಿದ ನಂತರ ಪ್ರತಿ ದಿನವೂ ನಿಮ್ಮ ಸಂಖ್ಯೆಯನ್ನು ಸಲ್ಲಿಸುವುದೇನೂ ಕಡ್ಡಾಯವಲ್ಲ. ಆದರೆ 15.10.2020 ಸಂಜೆ 7ಗಂಟೆಯ ಒಳಗಾಗಿ ನಿಮ್ಮ ಪಾರಾಯಣದ ಒಟ್ಟಾರೆ ಸಂಖ್ಯೆಗಳನ್ನು ಸಲ್ಲಿಸತಕ್ಕದ್ದು. 16.10.2020ರ ಬೆಳಿಗ್ಗೆ ಯಥಾಶಕ್ತಿ ಪಾರಾಯಣ ಮಾಡಬಹುದು. ನೋಂದಾಯಿಸಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿರಿ https://forms.gle/LHRWiZedWy9YMKVG9
ನಿಮ್ಮ ಪಾರಾಯಣದ ವಿವರಗಳನ್ನು ಈ ಮಾಹಿತಿ ಪತ್ರದ ಕೊನೆಯಲ್ಲಿ ಕೊಟ್ಟಿರುವ ದೂರವಾಣಿ ಯಾವುದಾದರೂ ಒಂದು ಸಂಖ್ಯೆಗೆ ಈ ಕೆಳಕಂಡಂತೆ ವಾಟ್ಸ್ಯಾಪ್ ಮೂಲಕ ತಲುಪಿಸಿ.
1.ನಿಮ್ಮ ಹೆಸರು 2. ನಿಮ್ಮ ಗೋತ್ರ 3 ನಿಮ್ಮ ನಕ್ಷತ್ರ ಹಾಗು ರಾಶಿ 4. ನಿಮ್ಮ ಊರು.
ಗಮನಿಸಿ: ದಿನಾಂಕ : 18ರ ಒಳಗಾಗಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿರಿ
ನಿಮ್ಮ ಪಾರಾಯಣದ ಸಂಖ್ಯೆಗಳನ್ನು ತಲುಪಿಸಬೇಕಾದ ವಾಟ್ಸ್ಯಾಪ್ ಸಂಖ್ಯೆ
Dr. Vamshi Krishna Acharya : 8123458634 : Tulu, Telugu & Kannada
Smt. Vaishnavi Bankalgi : 77957 47513 Kannada & English
Smt. Bhargavi Madhavan : 97909 02490 Kannada, Tamil & English
*************
18 september 2020
ಅಧಿಕ ಮಾಸದ ಶ್ರೀ ಪುರುಷೋತ್ತಮ ರೂಪಿ ಭಗವಂತನ ರೂಪದ ಚಿತ್ರ..🙏🙏
✍️ಪಾಪ ಬರುವದು ದುಷ್ಕರ್ಮಗಳಿಂದ.
ದುಷ್ಕರ್ಮವಾಗುವದು ಕಲಿಗಾಲದಿಂದ.
ಕಲಿಕಾಲ ಇದ್ದ ಮಾತ್ರಕ್ಕೆ ಏನು ಆಗುವದು??
ವಾಯುದೇವರ ಮತ್ತೊಂದು ಅವತಾರವಾದ ಶ್ರೀ ಮಧ್ವಾಚಾರ್ಯರು ಅವತರಿಸಿದ್ದು ಈ ಕಲಿಯುಗದಲ್ಲಿ ತಾನೇ??
ಅವರೇನು ಪಾಪ ಮಾಡಿದರೇ??
ಕೃತಯುಗ, ತ್ರೇತಾಯುಗ,ದಲ್ಲಿ ಜನಿಸಿದ ದಾನವರು ಮತ್ತು ಮಾನವರು ಪಾಪ ಮಾಡಲಿಲ್ಲವೇ??
ಅವಾಗ ಕಲಿಕಾಲ ಇತ್ತೇ??
ಕಲಿಯ ಪ್ರೇರಣೆ ಆಗಬಾರದು ಎಂದರೆ ಪ್ರಾಣ ದೇವನ ಮತ್ತು ಅವನ ತಂದೆಯಾದ ಪ್ರಾಣಪತಿ ಯಾದ ಭಗವಂತನ ಅನುಗ್ರಹ ಮತ್ತು ಬೆಂಬಲ ಸದಾ ಇರಬೇಕು.
ನಮಗೆ ಸದಾ ಕಾಲ ಗತಿ ಅವರೇ ಆಗಬೇಕು.
ಅದು ಇರದೇ ಇದ್ದವರಿಗೆ ಕಲಿಯೇ ಗತಿ ಮತ್ತು ಅವನೇ ಮತಿ ಆಗುತ್ತಾನೆ.
✍ಶ್ರೀ ವಿಷ್ಣು ತೀರ್ಥ ಗುರುಗಳು.
ಅಧ್ಯಾತ್ಮ ರಸ ರಂಜನೀಯಲ್ಲಿ ಹೇಳಿದ ಮಾತು.
🙏ಶ್ರೀ ಕೃಷ್ಣಾರ್ಪಣಮಸ್ತು🙏
ವರದ ವಿಷ್ಣು ತೀರ್ಥ|
ನೀ ಕೊಡು ಪುರುಷಾರ್ಥ|
🙏ಶ್ರೀ ವಿಷ್ಣುವೆ ನಮಃ
************
ಅಧಿಕ ಮಾಸ ನಿತ್ಯ ಪಠನೀಯ ಸ್ತೋತ್ರ :
ಅಧಿಕ ಮಾಸದಲ್ಲಿ ನಿತ್ಯಪಠನೀಯ ಸ್ತೋತ್ರ :
ಅಧಿಕಮಾಸದಲ್ಲಿ ಈ ಕೆಳಗಿನ ಶ್ಲೋಕವನ್ನು ಪ್ರತಿನಿತ್ಯ “ನಾಹಂ bhಕರ್ತಾ ಹರಿ: ಕರ್ತಾ” ಎಂದು ಅನುಸಂಧಾನ ಮಾಡಿ ಶ್ರೀ ರಾಧಾಪತಿ ಶ್ರೀಪುರುಷೋತ್ತಮನಲ್ಲಿ ಜ್ಞಾನ, ಭಕ್ತಿ, ವೈರಾಗ್ಯವನ್ನು ಬೇಡಿ ಪಠಿಸಬೇಕು. ಅಧಿಕಮಾಸದಲ್ಲಿ ಪ್ರತಿನಿತ್ಯ 33 ಬಾರಿ ಈ ಸ್ತೋತ್ರವನ್ನು ಹೇಳತಕ್ಕದ್ದು.
ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ ! ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯ !!
Adhikamasa” Nitya pataneeya stotra :
During Adhikamaasa the following stotra to be chanted.
” govardhana dharam vande, gopalam gopa rupinam !
gokulutsava me isanam, govindam gopika priyam !! ”
*************
19 sep 2020 mysore UM 2nd day of adhika masa
**********
ಅಧಿಕ ಮಾಸದ ಮಹಾತ್ಮೆಯ ಕಥೆ.
ಸಂಗ್ರಹ : ಮಧುಸೂದನ ಕಲಿಭಟ್. ಭಾಗ 1
ನೈಮಿಷಾರಣ್ಯದಲ್ಲಿ ಸೂತ ಪುರಾಣಿಕರಿಗೆ ಋಷಿಗಳು ಒಮ್ಮೆ ಪ್ರಶ್ನೆ ಮಾಡಿದರು. ಹೇ ಸೂತರುಗಳಿರಾ ಮೂರುವರ್ಷಕ್ಕೆ ಒಮ್ಮೆ ಬರುವ ಅಧಿಕ ಮಾಸದ ಮಹಾತ್ಮೆ ಕಥೆಯನ್ನು ನಮಗೆ ಶ್ರವಣ ಮಾಡಿಸಿರಿ. ಅದಲ್ಲದೇ ಈ ಮಾಸಕ್ಕೆ ಪುರುಷೋತ್ತಮ ಮಾಸ ಎಂದು ಏಕೇ ಹೆಸರು ಬಂದಿತು. , ಈ ಮಾಸದಲ್ಲಿ ಮಾಡುವ ದಾನಧರ್ಮಗಳಿಗೆ ಮಹತ್ವ ಏಕೇ. ಎಲ್ಲವನ್ನು ಸವಿಸ್ತಾರವಾಗಿ ಹೇಳಿರಿ ಎಂದೂ ವಿನಂತಿಸಿಕೊಂಡರು.
ಸೂತರು ಸಂತೋಷದಿಂದ ಹೇಳಿದರು, ಹೇ, ಋಷಿವರ್ಯರೇ ಹಿಂದಕ್ಕೆ ಶ್ರೀ ಕೃಷ್ಣನು ಧರ್ಮರಾಜನಿಗೆ ಹೇಳಿದ ಕಥೆಯನ್ನೇ ನಿಮಗೇ ತಿಳಿಸುವೆ ಸಾವಧಾನವಾಗಿ ಕೇಳಿರಿ ಎಂದರು. ಹಿಂದೆ ಒಮ್ಮೆ ಅಧಿಕ
ಮಾಸವು ತಾನು ಎಲ್ಲಕ್ಕಿಂತಲೂ ಕೀಳು ಎಂದೂ ಭಾವಿಸಿ ವೈಕುಂಠಲೋಕಕ್ಕೆ ಹೋಗಿ ಪಿತಾಂಬರಧಾರಿಯು, ಶಂಖ ಚರ ಗದಾ ಪದ್ಮ ಗಳಿಂದ ಅಲಂಕೃತನಾದ ವೈಕುಂಠಪತಿಗೆ ನಮಸ್ಕರಿಸಿ ತನ್ನ ಗೋಳು ಹೇಳಿಕೊಂಡಿತು. ಹೇ ದೇವದೇವೋತ್ತಮಾ ವರ್ಷದ ಹನ್ನೆರಡು ತಿಂಗಳುಗಳಲ್ಲಿ ಏನಾದರೊಂದು ಹಬ್ಬ, ವೃತ, ನಿಯಮಗಳು ಇದ್ದು ಪ್ರತಿಯೊಂದಕ್ಕೂ ವಿಶೇಷತೆ ಇದೆ. ನನ್ನ ಮಾಸದಲ್ಲಿ ಒಂದು ಸಂಕ್ರಮಣವು ಇಲ್ಲದೇ ಮಲ ಮಾಸ ಎಂದೂ ಕರೆಸಿಕೊಳ್ಳುತ್ತಿದ್ದೇನೆ. ದೇವಾ ನನ್ನ ಮೇಲೆ ಕರುಣೆ ತೋರು ಎಂದು ಪ್ರಾರ್ಥನೆ ಮಾಡಿತು. ಅದಕ್ಕೆ ಸಂತೋಷಗೊಂಡ ವೈಕುಂಠಪತಿಯು, ಅಧಿಕಮಾಸದ ರೋದನಕ್ಕೆ ಹೇ ಅಧಿಕ ಮಾಸವೇ ಇದೂ ವೈಕುಂಠ ಲೋಕ. ಇಲ್ಲಿ ಎಲ್ಲರೂ ಸಂತೋಷದಿಂದ ಇರುವರು. ದುಃಖದ ನೆರಳೂ ಇಲ್ಲಿ ಇಲ್ಲ. ನೀನು ಮೊದಲು ನಿನ್ನ ರೋದನ ನಿಲ್ಲಿಸು ಎಂದನು., ಪಿತಾಂಬರಧಾರಿಯು ಅಧಿಕಮಾಸದ ಕಷ್ಟಗಳನ್ನು ಕೇಳಿ, ಎಲೈ ಅಧಿಕ ಮಾಸವೇ ಇನ್ನೂ ಮೇಲಿಂದ ನೀನು ದುಃಖಿಸುವ ಕಾರಣ ಇಲ್ಲ. ನಿನ್ನ ಮಾಸದಲ್ಲಿ ಸ್ವತಃ ನಾನೇ ಪುರುಷೋತ್ತಮ ರೂಪದಿಂದ ಇರುವೆ. ಅದಲ್ಲದೇ ನಿನ್ನ ಮಾಸದಲ್ಲಿ ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು ಅದಲ್ಲದೇ ಪ್ರಜಾಪತಿ ಮತ್ತು ವಷಟ್ಕಾರರು ನಿನ್ನ ಮಾಸಕ್ಕೆ ಅಭಿಮಾನಿ ಗಳಾಗಿ ಇರುತ್ತಾರೆ.
ನಿನ್ನ ಮಾಸದಲ್ಲಿ ಯಾವ ಮಾನವ ನಮ್ಮೆಲ್ಲರ ಪ್ರೀತಿಗಾಗಿ ದಾನ ಧರ್ಮ ನೇಮ ಆಚರಣೆ ಮಾಡುವನೋ ಅವನಿಗೇ ಉಳಿದ ದಿನಗಳಿಗಿಂತ ಅಧಿಕ ಪುಣ್ಯ ದೊರಕಲಿ. ಎಂದೂ ವೈಕುಂಠಪತಿಯು ಅಧಿಕಮಾಸಕ್ಕೆ ಸಾಂತ್ವನ ಮಾಡಿ ಆ ಮಾಸಕ್ಕೆ ಪುರುಷೋತ್ತಮ ಮಾಸ ಎಂದೂ ಹೆಸರು ಬರಲೆಂದು ಹಾರೈಸಿ ಕಳಿಸಿದನು.
******
ಓರ್ವ ಬ್ಯಾಂಕ್ ನ ಪೆನ್ಷನ್ ಪ್ರಾಸೆಸಿಂಗ್ ವಿಭಾಗದ ಮುಖ್ಯಸ್ಥರು ಎಚ್ಚರದಪ್ಪಿ ಬಿದ್ದಿದ್ದರು. ಎಚ್ಚರಿಕೆ ತರಿಸಿ ವಿಚಾರಿಸಿದಾಗ ತಿಳಿಯಿತು . .
ಒಬ್ಬ ಪಿಂಚಣಿ ದಾರರು ಅವರನ್ನು ಕೇಳಿದರಂತೆ . .
ಅಧಿಕ ಮಾಸದ ಪೆನ್ಷನ್ ಈ ತಿಂಗಳ ಪೆನ್ಷನ್ ಜೊತೆ ಕೊಡ್ತೀರಾ ಅಥವಾ ಸೆಪರೇಟೆಡ್ ಆಗಿ ಕೊಡ್ತೀರಾ ಅಂತ ???
********
ಪುರುಷೋತ್ತಮ ಮಾಸದ ಪ್ರಯುಕ್ತ
ಪುರುಷೋತ್ತಮನ ಅನುಗ್ರಹಕ್ಕಾಗಿ ಚಿಂತನೆ
ಉಳಿದ ದಿನಗಳೂ ಹರಿದಿನಗಳೇ
ಕರೋತ್ಯೇಕಂ ನಿಜಂ ಗೇಹಂ
ರಾಜಾ ಸರ್ವಗೃಹಾಧಿಪಃ |
ತಥಾ ಸರ್ವದಿನಾಧೀಶಃ
ಹರಿರೇಕಾದಶೀಂ ತಥಾ || ಅಪೂಪ ೨೬
ರಾಜನ ಅಧೀನವಾಗಿ ಎಲ್ಲಾ ಪ್ರಜೆಗಳು ಇರುತ್ತಾರೆ. ರಾಜ್ಯದಲ್ಲಿ ಇರುವ ಎಲ್ಲಾ ಮನೆಗೂ ರಾಜನೇ ಸ್ವಾಮಿಯಾಗಿದ್ದಾನೆ. ಅವನ ಅಧೀನ ರಾಗಿ ಉಳಿದವರು ಆ ಮನೆಗಳ ಆಧಿಪತ್ಯ ವನ್ನು ಪಡೆಯುತ್ತಾರೆ.
ಹೀಗೆ ರಾಜನು, ಎಲ್ಲಾ ಮನೆಗಳ ಆಧಿಪತ್ಯ ತನಗೆ ಇದ್ದರೂ, ವಿಶೇಷವಾಗಿ ಒಂದು ಮನೆಯನ್ನು ತನಗೋಸ್ಕರ ಇಟ್ಟು ಕೊಂಡಿರುತ್ತಾನೆ. ಆ ಮನೆಯು ರಾಜನ ಮನೆ ಎಂದು ಪ್ರಸಿದ್ಧ ವಾಗುತ್ತದೆ. ವಸ್ತುತಃ ಉಳಿದ ಮನೆಗಳೂ ರಾಜನ ಅಧೀನವಾಗಿವೆ. ಹಾಗಾಗಿ ಅವುಗಳೂ ರಾಜನ ಮನೆಯೇ.
ಆದರೂ ರಾಜನ ವಿಶೇಷ ಆಸಕ್ತಿ ಯಿಂದ ಆ ಮನೆಗೆ ಮಾತ್ರ ರಾಜನ ಮನೆ ಎಂಬ ಹೆಸರು ಉಳಿಯುತ್ತದೆ
ಇದೇ ರೀತಿ ಏಕಾದಶಿಯೂ ಕೂಡ.
ಅನೇಕ ತಿಥಿಗಳ ಮಧ್ಯದಲ್ಲಿ ಏಕಾದಶಿಯೂ ಒಂದು. ಎಲ್ಲಾ ತಿಥಿಗಳ ಆಧಿಪತ್ಯ ದೇವರಿಗೆ ಇದೆ. ಹಾಗಾಗಿ ಪ್ರತಿಯೊಂದು ತಿಥಿಯೂ ಹರಿದಿನವೇ ಆಗಿರುತ್ತದೆ.
ಆದರೂ ದೇವರು, ಬೇರೆ ಎಲ್ಲಾ ತಿಥಿಗಳನ್ನು ಬೇರೆ ಬೇರೆ ದೇವತೆಗಳಿಗೆ ಕೊಟ್ಟು, ಅವರ ಹೆಸರಿನಿಂದ ಪ್ರಸಿದ್ಧಿ ಪಡಿಸಿದ. ತನಗೆ ಏಕಾದಶೀ ತಿಥಿಯನ್ನು ಇಟ್ಟು ಕೊಂಡ. ಅದರ ಮೇಲೆ ತುಂಬಾ ಪ್ರೀತಿ.
ಹಾಗಾಗಿ ಉಳಿದ ತಿಥಿಗಳನ್ನು ಬೇರೆ ಹೆಸರಿನಿಂದ ಕರೆದರೂ, ಏಕಾದಶಿ ತಿಥಿಯನ್ನು ಮಾತ್ರ ಹರಿದಿನ ಎಂದೇ ಕರೆಯುವುದು.
ಎಲ್ಲಾ ದಿನವೂ ಹರಿದಿನವೇ.
ಹಾಗಾಗಿ ಎಲ್ಲಾ ದಿನಗಳಲ್ಲಿ ಹರಿಗೆ ಪ್ರಿಯವಾಗುವ ಕರ್ಮಗಳನ್ನು ಮಾಡೋಣ. ವಿಶೇಷವಾಗಿ ಪರಮಾತ್ಮನಿಗೆ ಅತ್ಯಂತ ಪ್ರಿಯವಾದ ಏಕಾದಶಿಯನ್ನು ಚೆನ್ನಾಗಿ ಆಚರಣೆ ಮಾಡೋಣ. ಅವನ ಜ್ಞಾನವನ್ನು ಪಡೆದುಕೊಂಡು, ಅವನ ಅನುಗ್ರಹಕ್ಕೆ ಪಾತ್ರರಾಗೋಣ.
ಪ್ರಾತಃಸ್ಮರಣೀಯರಾದ ಪಲಿಮಾರು ಭಂಡಾರಕೇರಿ ಉಭಯ ಮಠಾಧೀಶರಾದ ಶ್ರೀಶ್ರೀವಿದ್ಯಾಮಾನ್ಯತೀರ್ಥರು ಶಾಸ್ತ್ರೀಯ ಪ್ರಮೇಯವನ್ನು ಸರಳವಾಗಿ ದೃಷ್ಟಾಂತದ ಮೂಲಕ ನಿರೂಪಣೆ ಮಾಡುತ್ತಿದ್ದರು. ಅವರು ಕೊಟ್ಟ ಅಪೂರ್ವ ದೃಷ್ಟಾಂತಗಳಲ್ಲಿ ಇದೂ ಒಂದು.
ಹೃಷೀಕೇಶ ಮಠದ
॥ श्रीश्रीशभक्तो जयति मध्वो विध्वस्तसाध्वसः ॥
****************
ಹೇ ಎನ್ನ ಬಿಂಬರೂಪಿ ಶ್ರೀ ಹರಿ ಪುರುಷೋತ್ತಮ
ಎನ್ನ ಹೃದಯ ನಿನಗೆ ಮಂಟಪವಾಗಲಿ
ನನ್ನ ಕಣ್ಣುಗಳು ನಂದಾದೀಪವಾಗಲಿ
ಎರಡು ಕೈಗಳು ಚಾಮರವಾಗಲಿ ಶ್ವಾಸವೇ ಮಂತ್ರವಾಗಲಿ ||
ಕೇಳುವ ಧ್ವನಿವಾದ್ಯ ಸ್ತೋತ್ರವಾಗಲಿ
ನಾನು ಉಣ್ಣುವುದು ನಿನಗೆ ನೈವೇದ್ಯ ವಾಗಲಿ
ವೈಶ್ವಾನರ ಯಜ್ಞವಾಗಲಿ | ಉಡುವುದು ಅಲಂಕಾರವಾಗಲಿ | ನಡೆವುದು ಯಾತ್ರೆಯಾಗಲಿ | ನರ್ತನವಾಗಲಿ | ಮಾಡುವ ಸ್ನಾನ ಅಭಿಷೇಕವಾಗಲಿ | ಮಾತುಗಳುಗುಣಗಾನ ಸ್ತೋತ್ರವಾಗಲಿ ||
ಶಯನವೇ ಸಮಸ್ಕಾರವಾಗಲಿ
ಹೇ ಕೃಷ್ಣ ಮೂವತ್ತುಮೂರು ಅನುಸಂಧಾನಸಮರ್ಪಣೆ ಪ್ರಾರ್ಥನಾರೂಪವಾದ ಅಧ್ಯಾತ್ಮ 33 ನಾಮಸ್ಮರಣೆಗಳು ಸ್ವೀಕರಿಸಿ ಪ್ರಸನ್ನನಾಗು ದಿನ ನಿತ್ಯವೂ ಇದನ್ನು ಸಮರ್ಪಿಸುವ ಭಾಗ್ಯ ಕರುಣಿಸು! ನಮ್ಮಢಂಬವ ತೊಲಗಿಸಿ ದಿಂಬದೊಳಗೆ ನಿನ್ನ ಬಿಂಬ ಹೋಳಿಯುವಂತೆ ಮಾಡು ||
ಮಧ್ವಾಂತರ್ಗತ ಶ್ರೀ ಭಾರತೀರ್ಮಾಣ ಮುಖ್ಯಪ್ರಾಣ ಅಂತರ್ಗತ ಅಧಿಕಾಮಾಸ ನಿಯಾಮಕ ಶ್ರೀ ಆನಂದಪುರುಷೋತ್ತಮ ಪ್ರಿಯತಾಂ ಪ್ರಿಯತೋ ವರದೋ ಭವತು ಶ್ರೀ ಕೃಷ್ಣಾರ್ಪಣಾಮಸ್ತು
ಶ್ರೀ ಇಭರಾಮಪುರಾಧೀಶ
**************
||ಶ್ರೀ ಅಶ್ವತ್ಥ ಲಕ್ಷ್ಮೀ ನರಸಿಂಹ ಪ್ರಸನ್ನ||
||ಶ್ರೀ ವಿಜಯದಾಸ ಗುರುಭ್ಯೋ ನಮಃ||
🙏🙏🙏
ಶಾಸ್ತ್ರ ದಲ್ಲಿ ಉಲ್ಲೇಖ ಮಾಡಿದಂತೆ ಅಧಿಕ ಮಾಸದಲ್ಲಿ ಮಾಡುವ ಪ್ರತಿಯೊಂದು ಧರ್ಮ ಕಾರ್ಯವು ನಮಗೆ ಅನಂತ ಫಲವನ್ನು ಕೊಡುತ್ತದೆ ಎಂದು ತಿಳಿಸುತ್ತದೆ.
ಅದರಂತೆ
ಶ್ರೀ ಹರಿವಾಯುಗುರುಗಳ ಪ್ರೇರಣೆಯಿಂದ ಮತ್ತು ಈ ಅಧಿಕ ಆಶ್ವೀಜ ಮಾಸದ ಅಧಿಪತಿ ಯಾದ ಶ್ರೀಪದ್ಮಿನಿ ಪತಿಯಾದ ಪುರುಷೋತ್ತಮ ನಾಮಕ ಪರಮಾತ್ಮನ ಪ್ರೀತಿ ಗಾಗಿ
ಚಿಕ್ಕ ಬದರಿ ಎಂದು ಪ್ರಸಿದ್ಧ ವಾದ ಕ್ಷೇತ್ರದಲ್ಲಿ ಶ್ರೀ ವರಾಹದೇವನ ಪುತ್ರಿಯಾದ ಶ್ರೀ ತುಂಗಾ ನದಿ ತಟದಲ್ಲಿ ಇರುವ, ಶ್ರೀ ಶ್ರೀಪಾದರಾಜ ತೀರ್ಥರು ಪ್ರತಿಷ್ಠಿತ ಶ್ರೀ ಅಶ್ವತ್ಥ ನಾರಸಿಂಹ ದೇವನ ಸನ್ನಿಧಾನ ಮತ್ತು ಅನೇಕಜ್ಞಾನಿಗಳು ಬಂದು ಪಾವನ ಮಾಡಿದ ಸ್ಥಳದಲ್ಲಿ.
ಹಾಗು
ಶ್ರೀ ಭೃಗು ಋಷಿಗಳ ಅವತಾರ ಸ್ಥಳವಾದ ಚೀಕಲಪರ್ವಿಯಲ್ಲಿ
ಶ್ರೀ ವಿಜಯಪ್ರಭುಗಳ ಸನ್ನಿಧಾನ ಇಂದಿಗು ಇರುವ ಶ್ರೀ ವಿಜಯದಾಸರ ಕಟ್ಟಿ ಎಂದು ಪ್ರಸಿದ್ಧ ವಾದ ಸ್ಥಳ.
ಇಂತಹ ಕ್ಷೇತ್ರದಲ್ಲಿ ಮಾಸ ನಿಯಾಮಕನಾದ ಶ್ರೀ ಪುರುಷೋತ್ತಮ ರೂಪಿ ಪರಮಾತ್ಮನ ಪ್ರೀತಿ ಗಾಗಿ ಮತ್ತು ಲೋಕ ಹಿತಕ್ಕಾಗಿ 18.9.20 ರಿಂದ ಆರಂಭವಾದ ಶ್ರೀ ಮನ್ಯುಸೂಕ್ತ ಪುರಶ್ಚರಣೆ ಹೋಮ ಮತ್ತು ಶ್ರೀ ಪವಮಾನ ಹೋಮವನ್ನು 16.10.20 ರವರೆಗೆ ನಿತ್ಯ ದಲ್ಲಿ ಶ್ರೀ ಹರಿ ವಾಯುಗುರುಗಳ ಅನುಗ್ರಹದಿಂದ ಯಾವುದೇ ಅಡೆತಡೆಗಳಿಲ್ಲದೆ ನಿರ್ವಿಘ್ನವಾಗಿ ಮಾಡಲಾಯಿತು.
ಮತ್ತು
ನಿತ್ಯವು ಈ ಕರೋನಾ ರೋಗವು ಆದಷ್ಟು ಬೇಗನೆ ಈ ದೇಶದಿಂದ ನಿರ್ಮೂಲನೆ ಆಗಲೆಂದು ಶ್ರೀ ನಾರಸಿಂಹ ದೇವರ ಬಳಿಪ್ರಾರ್ಥನೆ ಮಾಡಿಕೊಳ್ಳಲಾಯಿತು.
ಈ ಹೋಮವನ್ನು ನಿರ್ವಿರ್ಘ್ನವಾಗಿ ಮಾಡಲು ಶ್ರೀ ವಿಜಯಪ್ರಭುಗಳ ಭಕ್ತರಾದ ತಮ್ಮ ಸಹಕಾರವು ಸಹ ಇದರಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷ ವಾಗಿ ಇದೆ.
ಈ ಹೋಮ ಸೇವೆ ಕಾರ್ಯಕ್ರಮ ದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಾಲ್ಗೊಂಡ ತಮಗೆ ಎಲ್ಲಾ ಶ್ರೀ ವಿಜಯಪ್ರಭುಗಳ ಮತ್ತು ಅವರ ಅಂತರ್ಯಾಮಿಯಾದ ಶ್ರೀ ವಿಜಯವಿಠಲ ಅಭಿನ್ನ ಶ್ರೀ ಲಕ್ಷ್ಮೀ ನಾರಸಿಂಹ ದೇವನ ಕೃಪೆ ಸದಾ ಕಾಲ ಇರಲಿ ಮತ್ತು ಅವರ ಕೋರಿಕೆ ಗಳೆಲ್ಲಾ ನೆರವೇರಲಿ.ಮತ್ತು ಶ್ರೀ ವಿಜಯಪ್ರಭುಗಳ ಅನುಗ್ರಹದಿಂದ ಅವರಿಗೆಲ್ಲ ಆಯುರ್ ಆರೋಗ್ಯ ಜ್ಞಾನ ಭಕ್ತಿ ವೃದ್ದಿಯಾಗಲಿ ಎಂದು ಪ್ರಾರ್ಥನೆ ಮಾಡಿಕೊಂಡಿದ್ದೇವೆ.
ಮತ್ತು ಹಾರೈಕೆ ಮಾಡಿದ್ದೇವೆ.
ಮತ್ತು ತಮಗೆ ಎಲ್ಲಾರಿಗು ಹೋಮದ ಪ್ರಸಾದವನ್ನು ತಾವು ಕಳುಹಿಸುವ ವಿಳಾಸ ಕ್ಕೆ ಕಳುಹಿಸುವ ಪ್ರಯತ್ನ ವನ್ನು ಮಾಡಿದ್ದೇವೆ.
ಮತ್ತೊಂದು ಬಾರಿ ತಮಗೆ ಎಲ್ಲಾ ಶ್ರೀ ವಿಜಯಪ್ರಭುಗಳ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುವೆ.
-16 Oct 2020 ಇಂತಿ ಶ್ರೀ ರಾಘವೇಂದ್ರ ಆಚಾರ್ಯ
ಅರ್ಚಕರು, ಶ್ರೀ ವಿಜಯದಾಸರ ಕಟ್ಟಿ
ಚೀಕಲಪರವಿ, ಮಾನ್ವಿ ತಾಲ್ಲೂಕು
ರಾಯಚೂರು ಜಿಲ್ಲೆ.
***
.ಸ್ತ್ರೀಯರು ಸುಲಭವಾಗಿ ಮಾಡಬಹುದಾದ ದಾನಗಳು.
1. ಮೂವತ್ಮೂರು ಶಂಖ ಚಕ್ರ ಪದ್ಮ ರಂಗೋಲಿ ವ್ರತ.
2. ಮೂವತ್ಮೂರು ಸ್ವಸ್ತಿಕ ರಂಗೋಲಿ ಶ್ರೀಕಾರ ರಂಗೋಲಿ ವ್ರತ. 3. ಮೂವತ್ಮೂರು ನಮಸ್ಕಾರ ವ್ರತ
4. ಮೂವತ್ಮೂರು ಗೆಜ್ಜೆ ಏರಿಸುವ ವ್ರತ
5. ಮೂವತ್ಮೂರು ತುಪ್ಪದ ಬತ್ತಿ ಹಚ್ಚುವ ವ್ರತ
6. ಮೂವತ್ಮೂರು ಹಾಡು ಹೇಳುತ್ತಾ ಭಜನೆ ಮಾಡುವುದು.
7. ಮೂವತ್ಮೂರು ಹೂವು ಏರಿಸುವುದು
8. ನಿತ್ಯವೂ ಲಕ್ಷ್ಮೀಶೋಭಾನ ಪಾರಾಯಣ
9. ಮೂವತ್ಮೂರು ಬೆಳ್ಳಿಯ ಆಕಳುಗಳ ದಾನ
10. ಮೂವತ್ಮೂರು ವಿಷ್ಣುಪಾದ ದಾನ
11. ಮೂವತ್ಮೂರು ಅರಿಷಣ ಕುಂಕುಮ ಬಟ್ಟಲು ದಾನ
12. ಮೂವತ್ಮೂರು ಮುತ್ತೈದೆಯರಿಗೆ ಉಡಿ ತುಂಬುವ ವ್ರತ.
13. ಮೂವತ್ಮೂರು ಮುತ್ತೈದೆಯರಿಗೆ ಬಳೆ ಇಡಿಸುವ ವ್ರತ.
14. ಒಂದು ವಟುವಿಗೆ ನಿತ್ಯ ಊಟ ಹಾಕುವ ವ್ರತ.
15. ಒಂದು ಮುತ್ತೈದೆಗೆ ನಿತ್ಯ ಹರಳು ಹಾಕಿ ಹೂವು ಮುಡಿಸುವ ವ್ರತ.
16. ಒಂದು ಬ್ರಾಹ್ಮಣ ಮುತ್ತೈದೆಗೆ ನಿತ್ಯ ತಾಂಬೂಲ ದಕ್ಷಿಣೆ ವ್ರತ.
17. ಒಂದು ಒಣಕೊಬ್ಬರಿ ಗಿಟುಕಿನಲ್ಲಿ ರಂಧ್ರಮಾಡಿ ಅಕ್ಕಿಯನ್ನು ತುಂಬಿ ಕೃಷ್ಣನ ಮೂರ್ತಿಯನ್ನು ಇಟ್ಟು ಮತ್ತೆ ಗಿಟುಕಿನ ರಂದ್ರ ಮುಚ್ಚಿ ತಾಂಬೂಲ ದಕ್ಷಿಣೆ ಸಹಿತ ದಾನ ಮಾಡಬೇಕು. (ಸಂತಾನ ಪ್ರಾಪ್ತಿಗೆ ).
18. ಮೂವತ್ಮೂರು ಮುತ್ತೈದೆಯರಿಗೆ ವಸ್ತ್ರ ದಾನ
19. ಮೂವತ್ಮೂರು ವಟುಗಳಿಗೆ ಸಂಧ್ಯಾವಂದನೆ ಸಾಮಾಗ್ರಿ ದಾನ.
20. ಮೂವತ್ಮೂರು ಮರದ ಬಾಗಿನ ಸಹಿತ ಮೂವತ್ಮೂರು ದಂಪತಿ ಭೋಜನ.
21. ಮೂವತ್ಮೂರು ಗಣದ ಸೀರಿಯ ದಾನ.
22. ಮೂವತ್ಮೂರು ಜೊತೆ ದೀಪ ದಾನ
ಅಪೂಪದಾನ ವಿಶೇಷವಾದದ್ದು. ಅಂದೆ ಅಕ್ಕಿ ಬೆಲ್ಲ ತುಪ್ಪದಿಂದ ಮಾಡಿದ ಭಕ್ಷ್ಯ 33 ಒಂದು ತಟ್ಟೆಯಲ್ಲಿಟ್ಟು ತಟ್ಟೆ ಸಮೇತ ಆಚಾರವಂತ ಬ್ರಾಹ್ಮಣನಿಗೆ ಅಥವಾ ಆಚಾರವಂತ ಅಳಿಯನಿಗೆ ದಾನ ಮಾಡಬೇಕು.
ಅನಾನಸ್ ಶ್ರೇಷ್ಠ. ಕರ್ಜಿಕಾಯಿ ಬೇಸನ್ ಲಾಡು ಅಥವಾ ನಿಮಗೆ ಏನು ಅನುಕೂಲ ಅದನ್ನು ಮಾಡಿ
ದಾನ ಮಾಡಿ.
ವಿಶೇಷ ವಿಷಯ... ದಯವಿಟ್ಟು ನಿಮ್ಮ ನಿಮ್ಮ ಶಕ್ತ್ಯಾನುಸಾರ ಯಾವುದೇ ದಾನಗಳಗಾಲಿ ಮಾಡಬೇಕು. ಮನೆಯಲ್ಲಿ ಇದ್ದವರ ಗೋಳಾಡಿಸಿ, ಹಣದ ಮುಗ್ಗಟ್ಟಿನಲ್ಲಿ ಸಿಕ್ಕಾಪಟ್ಟೆ ದೇಹವ ದಂಡಿಸಿ, ತೋರಿಕೆಗೆ ಮಾಡಬಾರದು ಅಂತ ಶಾಸ್ತ್ರ ಹೇಳುತ್ತದೆ. ಅನುಕೂಲ ಇದ್ದವರು ಖಂಡಿತ ಮಾಡಬೇಕು. ಆದರೆ ನೀವು ಏನೇ ದಾನ ಮಾಡಿದರೂ ಭಗವಂತನ ಮೂವತ್ಮೂರು ರೂಪಗಳ ಚಿಂತನೆ ಹಾಗೂ ಒಂದೊಂದು ರೂಪಗಳ ಅನುಸಂಧಾನ ಎಲ್ಲಾ ದಾನಕ್ಕಿಂತಲೂ ಶ್ರೇಷ್ಠ. ಹೆಣ್ಣುಮಕ್ಕಳು ವಿಶೇಷವಾಗಿ ಮದ್ವನಾಮ, ಶ್ರೀ ಹರಿಕಥಾಮೃತಸಾರ, ಶ್ರೀ ಲಕ್ಷ್ಮಿ ಶೋಭಾನ, ಹಿಂದಿನ ದಾಸರ ದೇವರ ನಾಮಗಳು, ತುಲಸಿ ಹಾಡುಗಳು ನಿತ್ಯವೂ ಹೇಳಿಕೊಂಡರೆ ಖಂಡಿತ ಭಗವಂತ ನಿಮ್ಮನ್ನ ಬಿಟ್ಟು ಹೋಗಲ್ಲ. ಸದಾ ನಿಮ್ಮ ಹೃದಯದಲ್ಲಿ ಇದ್ದು ಒಳ್ಳೆಯ ಸಾಧನೆ ಮಾಡಿಸುತ್ತಾನೆ.
ಪ್ರಯತ್ನ ಮಾಡಿ. ಮಾಡಿಸೋನು ಅವನು. ಆದರೂ ಮಾಡಿಸೋ ಮಹರಾಯ ಅಂತ ಪ್ರಾರ್ಥನೆ ಮಾಡೋಣ. ಎಸ್ ದಾಸ.
***
ಅಧಿಕಮಾಸದಲ್ಲಿ 1 ಲಕ್ಷ ದೀಪ ಅಥವ 1 ಲಕ್ಷ ಕಮಲದ ಬತ್ತಿ ದೀಪ ಹಚ್ಚುವ ಬತ್ತಿ ಮಾಡುವ ವಿಧಾನ .
ಹತ್ತಿನಲ್ಲಿ ಎಳೆ ತೆಗೆಯಬೇಕು . 10 ಎಳೆ ಸೇರಿಸಬೇಕು . ಅದರಿಂದ ಕಮಲದ ದಳಗಳು ಮಾಡಬೇಕು . 10 ದಳ ಸೇರಿಸಿ ಅದನ್ನ ಹೂಬತ್ತಿ ಥರ ಅಂದರೇ ಸ್ವಲ್ಪ ಹತ್ತಿ ತೊಗೊಂಡು ಹಾಲು ನೀರು ಬೆರಿಸಿ ಅದರಿಂದ ಹೂಬತ್ತಿ ಮಾಡಬೇಕು.
ಆಗ 1 ದಳದಲ್ಲಿ 10 ಎಳೆ ಇರುತ್ತದೆ . 10 ದಳ ಸೇರಿಸಿದರೇ 100 ಎಳೆ ಆಗುತ್ತದೆ . ಅಂದರೇ 1 ಎಳೆ ಅಂದರೇ 1 ಹೂಬತ್ತಿ ಲೆಕ್ಕ . ಅಂದರೇ 10 ದಳ ಸೇರಿಸಿ 1 ಹೂಬತ್ತಿ ಮಾಡುವುದರಿಂದ 100 ಹೂಬತ್ತಿ ಆಗುತ್ತದೆ .
ಕಮಲದ ಹೂಬತ್ತಿ 1 = 100 ಹೂಬತ್ತಿ ಲೆಕ್ಕ .
ಕಮಲದ ಹೂಬತ್ತಿ 2 = 200 ಹೂಬತ್ತಿ ಲೆಕ್ಕ .
ಆಥರ ದಿನಕ್ಕೆ 40 ಬತ್ತಿ ಹಚ್ಚಿದರೇ 40 x100 =4000 . ದಿನಕ್ಕೆ 40 ಬತ್ತಿ ಥರ ಅಧಿಕಮಾಸ 30 ದಿನಕ್ಕೆ
40 x 30 = 1200 ಬತ್ತಿ ಆಗುತ್ತೆ . ಆಗ 1200 x100 = 1 20000 ಕಮಲದ ಬತ್ತಿ ದೀಪ ಹಚ್ಚಿದ ಲೆಕ್ಕ ಬರತ್ತೆ . ಅಂದರೇ 30 ದಿನದಲ್ಲಿ 120000 ದೀಪ ಹಚ್ಚಿದ ಲೆಕ್ಕ ಬರತ್ತೆ .
100000 ದೀಪ ಮತ್ತು 20000 ದೀಪ ಬಡ್ಡಿ ಆಗುತ್ತೆ .
ಲಕ್ಷದ್ದು ಏನುಮಾಡಿದರೂ ಬಡ್ಡಿ ಹಾಕಬೇಕು .
ಎಳ್ಳೆಣ್ಣೆ ಅಥವ ತುಪ್ಪದಲ್ಲಿ ಹಚ್ಚ ಬಹುದು . ಆಮೇಲೆ 1 ಜತೆ ಬೆಳ್ಳಿ ಅಥವ ಹಿತ್ತಾಳೆ ದು ಕಮಲದ ನೀಲಾಂಜನ ತಂದು ಅದರಲ್ಲಿ ಕಮಲದ ಬತ್ತೀ ಗೆ ತುಪ್ಪ ಹಾಕಿ ˌ ಒಂದು ಹಿತ್ತಾಳೆ ತಟ್ಟೆಯಲ್ಲಿ ಅಕ್ಕಿ ಹಾಕಿ ಅದರಮೇಲೆ ದೀಪ 1 ಜತೆ ಇಟ್ಟು ಹಚ್ಚಿ ದಕ್ಷಿಣೆ ತಾಂಬೂಲ ಸಮೇತ ಒಬ್ಬ ಬ್ರಾಹ್ಮಣಗೆ ಸಂಕಲ್ಪಮಾಡಿ ಕೊಟ್ಟು ನಮಸ್ಕಾರ ಮಾಡಬೇಕು .
|| ಶ್ರೀ ಕ್ರಷ್ಣಾರ್ಪಣಮಸ್ತು ||
***
ಅಧಿಕಮಾಸದಲ್ಲಿ ಪ್ರತಿನಿತ್ಯವೂ ಈ 33 ದೇವರನಾಮಗಳನ್ನು ಹೇಳುತ್ತಾ
33 ಪ್ರದಕ್ಷಿಣೆ ಅಥವಾ ನಮಸ್ಕಾರಗಳನ್ನು ಹಾಕುವುದರಿಂದ "ಅಧಿಕಸ್ಯ ಅಧಿಕ ಫಲಂ" ಎಂಬಂತೆ ಗೋಲೋಕಾಧಿಪತಿ "ರಾಧಿಕಾ ಶ್ರೀಪುರುಷೋತ್ತಮ" ಪರಮಾತ್ಮನ ಪೂರ್ಣಾನುಗ್ರಹ ದಿಂದ ಮನಸ್ಸಿನ ಸಕಲ ಮನೋರಥಗಳು ಪೂರ್ಣಗೊಳ್ಳುತ್ತವೆ.
ಅಧಿಕಮಾಸದಲ್ಲಿ 33 ದೇವತೆಗಳ ವಿವರಣೆ:
ಅಷ್ಟ (8) ವಸುಗಳು
ಏಕಾದಶ (11)ರುದ್ರರು
ದ್ವಾದಶ (12) ಆದಿತ್ಯರು.
(1) ಪ್ರಜಾಪತಿ
(1) ವಷಟ್ಕಾರ
ಒಟ್ಟು 33 ದೇವತೆಗಳು.
ಪುರುಷೋತ್ತಮಮಾಸದ ಮೂವತ್ತಮೂರು(ತ್ರಯತ್ರಿಂಶದ್ರೂಪ) ದೇವತಾ ಭಗವದ್ ರೂಪ
1. ದ್ರೋಣ ನಾಮಕ ವಸು ಅಂತರ್ಗತ ಶ್ರೀ ವಿಷ್ಣವೇ ನಮಃ
2. ಪ್ರಾಣ ನಾಮಕ ವಸು ಅಂತರ್ಗತ ಶ್ರೀ ಜಿಷ್ಣವೇ ನಮಃ
3. ಧ್ರುವ ನಾಮಕ ವಸು ಅಂತರ್ಗತ ಶ್ರೀ ಮಹಾವಿಷ್ಣವೇ ನಮಃ
4. ಅರ್ಕ ನಾಮಕ ವಸು ಅಂತರ್ಗತ ಶ್ರೀ ಹರಯೇ ನಮಃ
5. ಅಗ್ನಿ ನಾಮಕ ವಸು ಅಂತರ್ಗತ ಶ್ರೀ ಕೃಷ್ಣಾಯ ನಮಃ
6. ದೋಷ ನಾಮಕ ವಸು ಅಂತರ್ಗತ ಶ್ರೀ ಅಧೋಕ್ಷಜಾಯ ನಮಃ
7. ವಸ್ತು ನಾಮಕ ವಸು ಅಂತರ್ಗತ ಶ್ರೀ ಕೇಶವಾಯ ನಮಃ
8. ವಿಭಾವಸು ನಾಮಕ ವಸು ಅಂತರ್ಗತ ಶ್ರೀ ಮಾಧವಾಯ ನಮಃ
9. ರೈವತ ನಾಮಕ ರುದ್ರ ಅಂತರ್ಗತ ಶ್ರೀ ರಾಮಾಯ ನಮಃ
10. ಅಜ ನಾಮಕ ರುದ್ರ ಅಂತರ್ಗತ ಶ್ರೀ ಅಚ್ಯುತಾಯ ನಮಃ
11. ಭವ ನಾಮಕ ರುದ್ರ ಅಂತರ್ಗತ ಶ್ರೀ ಪುರುಷೋತ್ತಮಾಯ ನಮಃ
12. ಭೀಮ ನಾಮಕ ರುದ್ರ ಅಂತರ್ಗತ ಶ್ರೀ ಗೋವಿಂದಾಯ ನಮಃ
13. ವಾಮದೇವ ನಾಮಕ ರುದ್ರ ಅಂತರ್ಗತ ಶ್ರೀ ವಾಮನಾಯ ನಮಃ
14 , ಉಗ್ರ ನಾಮಕ ರುದ್ರ ಅಂತರ್ಗತ ಶ್ರೀ ಶ್ರೀಶಾಯ ನಮಃ
15. ವೃಷಾಕಪಿ ನಾಮಕ ರುದ್ರ ಅಂತರ್ಗತ ಶ್ರೀ ಶ್ರೀಕಂಠಾಯ ನಮಃ
16. ಅಜೈಕಾಪತ್ ನಾಮಕ ರುದ್ರ ಅಂತರ್ಗತ ಶ್ರೀ ವಿಶ್ವಸಾಕ್ಷಿಣೇ ನಮಃ
17. ಅಹಿರ್ಬುದ್ಧಿ ನಾಮಕ ರುದ್ರ ಅಂತರ್ಗತ ನಾರಾಯಣಾಯ ನಮಃ
18 , ವಿರೂಪಾಕ್ಷ ನಾಮಕ ರುದ್ರ ಅಂತರ್ಗತ ಶ್ರೀ ಮಧುರಿಪವೇ ನಮಃ
19. ಉಮಾಪತಿ ನಾಮಕ ರುದ್ರ ಅಂತರ್ಗತ ಶ್ರೀ ಅನಿರುದ್ಧಾಯ ನಮಃ
20. ವಿವಸ್ವನ್ ನಾಮಕ ಆದಿತ್ಯ ಅಂತರ್ಗತ ಶ್ರೀ ತ್ರಿವಿಕ್ರಮಾಯ ನಮಃ
21. ಆರ್ಯಮನ್ ನಾಮಕ ಆದಿತ್ಯ ಅಂತರ್ಗತ ಶ್ರೀ ವಾಸುದೇವಾಯ ನಮಃ
22. ಪೂಷನ್ ನಾಮಕ ಆದಿತ್ಯ ಅಂತರ್ಗತ ಶ್ರೀ ಜಗದ್ಯೋನಯೇ ನಮಃ
23 , ತ್ವಷ್ಟ ನಾಮಕ ಆದಿತ್ಯ ಅಂತರ್ಗತ ಶ್ರೀ ಅನಂತಾಯ ನಮಃ
24. ಸವಿತ್ರ ನಾಮಕ ಆದಿತ್ಯ ಅಂತರ್ಗತ ಶ್ರೀ ಶೇಷಶಾಯಿನೇ ನಮಃ
25. ಭಗ ನಾಮಕ ಆದಿತ್ಯ ಅಂತರ್ಗತ ಶ್ರೀ ಸಂಕರ್ಷಣಾಯ ನಮಃ
26. ಧಾತೃ ನಾಮಕ ಆದಿತ್ಯ ಅಂತರ್ಗತ ಶ್ರೀ ಪ್ರದ್ಯುಮ್ಯಾಯ ನಮಃ
27. ಪರ್ಜನ್ಯ ನಾಮಕ ಆದಿತ್ಯ ಅಂತರ್ಗತ ಶ್ರೀ ದೈತ್ಯಾರಯೇ ನಮಃ
28. ವರುಣ ನಾಮಕ ಆದಿತ್ಯ ಅಂತರ್ಗತ ಶ್ರೀ ವಿಶ್ವತೋಮುಖಾಯ ನಮಃ
29. ಮಿತ್ರ ನಾಮಕ ಆದಿತ್ಯ ಅಂತರ್ಗತ ಶ್ರೀ ಜನಾರ್ಧನಾಯ ನಮಃ
30. ಶಕ್ತ ನಾಮಕ ಆದಿತ್ಯ ಅಂತರ್ಗತ ಶ್ರೀ ಧರಾವಾಸಾಯ ನಮಃ
31. ಉರುಕ್ರಮ ನಾಮಕ ಆದಿತ್ಯ ಅಂತರ್ಗತ ಶ್ರೀ ದಾಮೋದರಾಯ ನಮಃ
32. ಪ್ರಜಾಪತಿ ಅಂತರ್ಗತ ಶ್ರೀ ಅಘಾರ್ದನಾಯ ನಮಃ
33. ವಷಟ್ಕಾರ ಅಭಿನ್ನ ಶ್ರೀ ಶ್ರೀಪತಯೇ ನಮ*ಅಧಿಕ ಮಾಸ*
ಅಧಿಕ ಮಾಸದಲ್ಲಿ ಅಪೂಪ (ಅತಿರಸ) ದಾನ
ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ 33 ಅಪೂಪ ದಾನಕ್ಕೆ ವಿಶೇಷ ಫಲವಿದೆ. ದಂಪತಿಪೂಜೆ, ದೀಪದಾನಗಳು ವಿಹಿತವಾಗಿವೆ.ಅಪೂಪದಾನದಿಂದ ಪೃಥ್ವೀದಾನದ ಫಲವನ್ನು ಕೊಡುತ್ತದೆ.
ಅಧಿಕಮಾಸದ ಪ್ರತಿದಿನವೂ ಆಗದಿದ್ದರೆ ದ್ವಾದಶಿ, ಹುಣ್ಣಿಮೆ ಮತ್ತಿತರೇ ದಿನಗಳಲ್ಲಿಯಾದರೂ ದೀಪದೊಂದಿಗೆ ಕಂಚಿನಪಾತ್ರೆಯಲ್ಲಿಟ್ಟು ಅಪೂಪವನ್ನು ದಕ್ಷಿಣೆಯೊಂದಿಗೆ ದಾನ ಕೊಡಬೇಕು. ಕೊಡುವಾಗ ಅಪೂಪದಲ್ಲಿರುವ ೩೩ಭಗವದ್ರೂಪಗಳನ್ನು ಚಿಂತಿಸಿ ದಾನ ಮಾಡಬೇಕು. ಹೀಗೆ ದಾನ ಮಾಡಿದರೆ ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲದ ತನಕ ಸ್ವರ್ಗದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ.
***
No comments:
Post a Comment