.
> Meaning....
Maruthim namatha Rakshasanthakam
> at any time or in any place.
अजाड्यं वाक्पटुत्वंच हनूमत् स्मरणं भवेत् ।
> speech vigor (VaAkk-Pattutva)
********
*******
ಹನುಮಜ್ಜಯಂತಿ - ಹನುಮ ವಿಶೇಷ
ಹನುಮಂತ ದೇವರು ಅವತರಿಸಿದ ದಿನ ಹನುಮಜ್ಜಯಂತಿಯ ಆಚರಣೆ ಅತ್ಯಂತ ವೈಭವದಿಂದ ಜಗತ್ತಿನಲ್ಲೆಲ್ಲ ನಡೆಯುತ್ತದೆ. ( ಕೆಲ ದೇಶಗಳಲ್ಲಿ ನಾನಳೆಯ ಪೌರ್ಣಿಮೆ ಅಲ್ಲದೆ ಬೆರೆ ಕಾಲದಲ್ಲೂ ಆಚರಿಸುತ್ತಾರೆ.)
ಹನುಮಂತನಾರು.....
ಅನೇಕರು ಹೇಳುವದುಂಟು ಹನುಂತ ಶಿವನ ಅವತಾರಿ ಎಂದು. ಅಂಜೆನಾ ದೇವಿಯ ಪತಿ ವಾಯು. ಹಾಗಾಗಿ ವಾಯುಪುತ್ರ ಎಂದು ಪ್ರಸಿದ್ಧ ಎಂದು. ಅದೆಲ್ಲ ಅಷ್ಟು ಸರಿಯಾದ ತತ್ವವಲ್ಲ.
ಅಂಜನಾ ದೇವಿ ಹಾಗೂ ಕೇಸರಿ ಎಂಬ ದಂಪತಿಗಳಲ್ಲಿ, ಮೂಲರೂಪಿಯಾದ ವಾಯುದೇವರ ಅನುಗ್ರಹದಿಂದ, ವಾಯುದೇವರೇ ಮೊಟ್ಟ ಮೊದಲು ಅವತಾರ ರೂಪದಿಂದ ಹನೂಮಾನ್ ಎಂದು ಜನಿಸಿ ಬಂದರು. ಇದು ರಾಮಾಯಣ ಪ್ರಸಿದ್ಧ. ವೇದಸಿದ್ಧ.
ಹನೂಮಂತದೇವರಲ್ಲಿಯ ಗುಣ ಶಕ್ತಿಗಳು
"ಹನು" ಜ್ಙಾನ. ಹನೂಮಾನ್ ಅನಂತ ಜ್ಙಾನ ಸ್ವರೂಪಿಯಾಗಿರುವವರು ಹನೂಮಂತ ದೇವರು. ಕೇವಲ ಜ್ಙಾನಮಾತ್ರವಲ್ಲ, "ಧರ್ಮ, ವಿಜ್ಙಾನ, ವೈರಾಗ್ಯ, ಐಶ್ವರ್ಯ, ಬುದ್ಧಿ, ಪ್ರಜ್ಙಾ, ಮೇಧಾ, ಧೃತಿ, ಸ್ಥೈರ್ಯ, ಬಲ, ಭಕ್ತಿ, ಸಹನೆ, ದಯೆ, ಕ್ಷಮೆ, ಸಾಮರ್ಥ್ಯ, ವಿನಯ, ಮುಂತಾದ ಅನಂತಾನಂತ ಗುಣಗಳು ಮೂಲರೂಪದಲ್ಕಿ ಇವೆಯೋ ಆ ಎಲ್ಲ ಗುಣಗಳೂ ಈ ಹನುಮಂತ ರೂಪದಲ್ಲಿ ಇವೆ" ಎಂದು ಬಳಿತ್ಥಾಸೂಕ್ತದಲ್ಲಿ ಸ್ಪಷ್ಟ ಪಡಿಸುತ್ತಾರೆ.
ಹನುಮಂತದೇರು - ನಾವು...
ಹನುಮಂತ ದೇವರಲ್ಲಿ ಅನಂತ ಗುಣಗಳಿವೆ. ಆ ಗುಣಗಳೆಲ್ಲದರಲ್ಲಿ ನಮ್ಮ ಶಕ್ತಿಗನುಗುಣವಾಗಿ ನಾವು ಏನೆಲ್ಲ ಗುಣಗಳನ್ನು ತಿಳಿಯುತ್ತೇವೆಯೋ ಆ ಎಲ್ಲ ಗುಣಗಳಿಂದ ಹನುಮಂತದೇವರು ನಮ್ಮಲ್ಲಿ ಪ್ರವೇಶಿಸುತ್ತಾರೆ. ಸ್ವಾರ್ಥಕ್ಕೋಸ್ಕರವಾಗಿಯಾದರೂ ನಿತ್ಯ ಹನುಮಂತ ದೇವರ ಗುಣಗಳನ್ನು ತಿಳಿದು ಅಭಿಷೇಕ ಸ್ತೋತ್ರ ಚಿಂತನೆ ಧ್ಯಾನ ಮಾಡುವದು ಅನಿವಾರ್ಯ.
******
ಶಿವದ್ರೂಪ ಹನೂಮ - ಹನುಮಂತನನ್ನು ಪುರಾಣಗಳಲ್ಲಿ ಶಿವನ ಒಂದು ಅಂಶ , ಶಿವದ್ರೂಪ ಅಂತ ಹೇಳುತ್ತೇವೆ , ಹೇಗೆ ಅನ್ನುವದು ಕೆಲವರಿಗೆ ಗೊತ್ತಿರಲಿಕ್ಕಿಲ್ಲ ?
ಸಮುದ್ರ ಮಂಥನ ಸಮಯದಲ್ಲಿ ಧನ್ವಂತರಿ ಅಮೃತ ಕಲಶವನ್ನು ಹಿಡಿದು ಬಂದಾಗ ರಾಕ್ಷಸರೆಲ್ಲ ಅವನನ್ನು ಬೆನ್ನಟ್ಟಿದರು , ಆಗ ವಿಷ್ಣು ಹೆಣ್ಣು ರೂಪವನ್ನು ಧರಿಸಿ ಅವರನ್ನೆಲ್ಲ ತನ್ನ ಮೊಹಕ ರೂಪದಲ್ಲಿ ಮೋಹಗೊಳಸಿದ . ಆ ಮೋಹಿನಿ ರೂಪವನ್ನು ಕಂಡು ಸಾಕ್ಷಾತ್ ಲಕ್ಷೀ ಕೂಡಾ ಇವನಿಗೆ ಅನ್ಯರೇಕೆ ಎಂದು ಬೆರಗುಗೊಂಡಳು.....
ಒಂದಾನೊಂದು ಸಮಯದಲ್ಲಿ ಶಂಭುವಿಗೆ ವಿಷ್ಣುವಿನ ಮೋಹಿನಿ ರೂಪದ ದರ್ಶನ ವಾಯಿತು. ಅವನು ಕೂಡಾ ಮೋಹಿನಿ ರೂಪಕ್ಕೆ ಮೋಹಿತನಾದನು. ಕಾಮಬಾಣದಿಂದ ಆಹತನಾದ ಶಂಭುವಿನ ವೀರ್ಯಪಾತವಾಯಿತು. ಆಗ ಸಪ್ತ ಋಷಿಗಳು ಆ ವೀರ್ಯ ವನ್ನು ಪತ್ರ ಸಂಪುಟದಲ್ಲಿಟ್ಟು ಜತನ ಮಾಡಿದರು . ಮುಂದೆ ವಿಷ್ಣು ರಾಮನವತಾರದಲ್ಲಿ ಭೂಲೋಕದಲ್ಲಿ ಜನ್ಮ ತಾಳಿದಾಗ ಶಿವನ ಪ್ರೇರಣೆಯಂತೆ ರಾಮ ಕಾರ್ಯ ದುರಂಧರನ ನಿರ್ಮಾಣಕ್ಕಾಗಿ ಆ ವೀರ್ಯವು ಗೌತಮ ಪುತ್ರಿ ಅಂಜನಾದೇವಿ ಕರ್ಣದ್ವಾರವಾಗಿ ಅವಳ ದೇಹದಲ್ಲಿ ಸ್ಥಾಪಿಸಲ್ಪಟ್ಟಿತು. ಯೋಗ್ಯ ಕಾಲದಲ್ಲಿ ಅವಳು ಹನೂಮಂತನನ್ನು ಪ್ರಸವಿಸಿದಳು. ಆಂಜನೇಯನು ಅದ್ಭುತ ಕಾರ್ಯವನ್ನು ಮಾಡಿದನು . ಅವನು ರಾಮಕಾರ್ಯಕ್ಕಾಗಿ ಜನ್ಮ ತಾಳಿದ್ದರಿಂದ ಅತ್ಯಂತ ನಿಷ್ಠೆಯಿಂದ ರಾಮನ ಸೇವೆ ಮಾಡಿದನು. ಇವನು ಸುಗ್ರೀವ ನ ಮಂತ್ರಿಯಾಗಿಯೂ ರಾಮನ ಸೇವಕನಾಗಿಯೂ ದುಡಿದನು . ಇವನಿಂದಲೇ ಲಕ್ಷ್ಮಣನು ಮರು ಜನ್ಮ ಪಡೆದನು. ಭೂಮಂಡಲದಲ್ಲಿ ಶ್ರೀರಾಮ ಭಕ್ತನೆನಿಸಿದ.....
ಜೈ ಶ್ರೀರಾಮ ವೀಣಾ ಜೋಶಿ..
*******
ವಾಯು ಮಹಿಮಾ.... ೦೧
*****
ಕಾಣಿಸುತ್ತಿರುವ ಎಲೆಯನ್ನು ಸರಿಯಾಗಿ ನೋಡಿ....
ಆ ಎಲೆಯ ಎರಡೂ ಬದಿಯಲ್ಲಿ ಹನುಮಂತನ ರೂಪ ಕಾಣುತ್ತದೆ.....
ಅದೇ ಈ ಎಲೆಯ ವಿಶೇಷ.
ಹನುಮದ್ಬಿರಮ್ ಎಂದು ಹೇಳಲ್ಪಡುವ ಈ ಮರಗಳು ಶ್ರೀಶೈಲ ಆರಣ್ಯದಲ್ಲಿ ಕಂಡು ಬರುತ್ತವೆ.
ಪ್ರಕೃತಿ ಚಿತ್ರಿತ ಈ ಎಲೆಯ ಮರಗಳು ಪ್ರಪಂಚದ ಮತ್ತೆ ಎಲ್ಲಿಯೂ ಕಂಡು ಬರುವುದಿಲ್ಲ.
********
ಹನುಮಂತನ 108 ಹೆಸರುಗಳು
1.ಆಂಜನೇಯ
2.ಮಹಾವೀರಾಯ.
3.ಹನುಮತೇ
4.ಮಾರುತಾತ್ಮಜಾಯ.
5.ತತ್ತ್ವಜ್ಞಾನ ಪ್ರದಾಯ
6.ಸೀತಾದೇವಿ ಮುದ್ರಾ ಪ್ರದಾಯಕಾಯ
7.ಅಶೋಕವನ ಚರಿತ್ರೆ
8.ಸರ್ವ ಮಯಿ ವಿಭಾನನಾಯ.
9.ಸರ್ವ ಬಂಧ ವಿಮೋಕ್ಟ್ರೆ
10.ರಕ್ಷೋ ವಿದ್ವಾನ್ ಸಾಕಾರಕಾಯ.
11.ಪರವಿದ್ಯಾ ಪರಿಹಾರಾಯ.
12.ಪರ ಶೌರ್ಯ ವಿನಾಶ ಕಾಯ.
13.ಪರ ಮಂತ್ರ ನಿರಾಕರತ್ರೆ.
14.ಪರ ಯಂತ್ರ ಪ್ರಬೋಧ ಕಾಯ.
15.ಸರ್ವಗ್ರಹ ವಿನಾಶಿನೆ.
16.ಭೀಮ ಸೇನ ಸಹಾಯಕ್ರಿತೆ .
17.ಸರ್ವ ದುಃಖ ಹರಾಯ.
18.ಸರ್ವಲೋಕ ಚಾರಿಣೆ.
19.ಮನೋಜವಾಯ.
20.ಪಾರಿಜಾತ ದೃಮೂಲಸ್ಥಾಯ.
21.ಸರ್ವ ಮಂತ್ರ ಸ್ವರೂಪಾಯ.
22.ಸರ್ವ ತಂತ್ರ ಸ್ವರೂಪಿಣಿ.
23.ಸರ್ವ ಯಂತ್ರಾತ್ಮಕಾಯ.
24.ಕಪೀಶ್ವರಾಯ.
25.ಮಹಾ ಕಾಯಾಯ.
26.ಸರ್ವರೋಗ ಹರಾಯ.
27.ಪ್ರಭಾವೆ.
28.ಬಲ ಸಿದ್ದಿ ಕರಾಯ.
29.ಸರ್ವ ವಿದ್ಯಾ ಸಂಪತ್ತು ಪ್ರದಾಯಕಾಯ.
30.ಕಪಿ ಸೇನಾನಾಯಕಾಯ.
31.ಭವಿಷ್ಯತ್ ಚತುರಾನನಾಯ.
32.ಕುಮಾರ ಬ್ರಹ್ಮಚಾರಿಣೆ.
33.ರತ್ನ ಕುಂಡಲಾಯ.
34.ದೀಪ್ತಿ ಮತೆ.
35.ಚಂಚಲ ದ್ವಾಲಸನ್ನದಾಯ.
36.ಲಂಬಾ ಮಾನಶೀಕೋ ಜ್ವಾಲಾಯ.
37.ಗಂಧರ್ವ ವಿಧ್ಯಾಯ.
38.ತತ್ತ್ವಜ್ಞಾನಾಯ.
39.ಮಹಾಬಲ ಪರಾಕ್ರಮಾಯ.
40.ಕಾರಾಗ್ರಹ ವಿಮೋಕ್ತ್ರೆ.
41.ಶ್ರೀoಕಲ ಬಂದ ಮೋಚಕಾಯ.
42.ಸಾಗರೋತ್ತರಕಾಯ.
43.ಪ್ರಗ್ಯಾಯ .
44.ರಾಮದೂತಾಯ.
45.ರಾಮ ದೇವತೆಯ
46.ಪ್ರತಾಪವತೆ.
47.ಕೇಸರಿ ಸುತಾಯ.
48.ಸೀತಾ ಶೋಕ ನಿವಾರಕಾಯ.
49.ಅಂಜನಾ ಗರ್ಭ ಸಂಭೂತಾಯ.
50.ಬಾಲ ರಕ್ಷಾದ್ರಶಾನನಾಯ.
51.ವಿಭೀಷಣ ಪ್ರಿಯಕರಾಯ.
52.ದಶಗ್ರೀವ ಕೂಲಂಥಕಾಯ.
53.ಲಕ್ಷ್ಮಣ ಪ್ರಾಣ ದಾತ್ರೆ.
54.ವಜ್ರಕಾಯಾಯ.
55.ಮಹಾದ್ಯುತಾಯ.
56.ಚಿರಂಜೀವಿನೆ.
57.ರಾಮ ಭಕ್ತಾಯ.
58.ದೈತ್ಯ ಕಾರ್ಯ ವಿಗಾನಕಾಯ.
59.ಅಕ್ಷಹಂತ್ರೆ.
60.ಕಜಾರಚನಭಯ.
61.ಪಜಂಚ ವಕ್ರತಾಯ.
62.ಮಹಾತಪಸ್ಸೀ.
63.ಲಂಕಿಣಿ ಭಂಜನಾಯ.
64.ಶ್ರೀಮತೆ.
65.ಸಿಂಹಿಕಾ ಪ್ರಾಣ ಭಂಜನಾಯ.
66.ಗಂಧಮಾರನ ಶೈಲಸತಾಯ.
67.ಲಂಕಾಪುರ ವಿದ್ಯಾಯಕಾಯ.
68.ಸುಗ್ರೀವ ಸಚಿವಾಯ.
69.ದೀರಾಯ.
70.ಶೂರಾಯ.
71.ದೈತ್ಯ ಕೂಲಾಂತಕಾಯ.
72.ಸುವರ್ಚಲಾಯ್ ಚಿತಾಯ.
73.ತೇಜಸೇ.
74.ರಾಮಚೂಡಾಮಣಿ ಪ್ರದಾಯ ಕಾಯ.
75.ಕಾಮರೂಪಿಣೆ.
76.ಪಿಂಗಳಾಕ್ಷಯ.
77.ವರಾದಿ ಮಾನಕ ಪೂಜಿತಾಯ.
78.ಕಂಬಳಿ ಕೃತ ಮಾರ್ತಾಂಡ ಮಂಡಲಾಯ.
79.ವಿಜಿತೇಂದ್ರಯಾಯಾ.
80.ರಾಮ ಸುಗ್ರೀವ ಸಂದಾತ್ರೆ.
81.ಮಹೀರಾವಣ ಮರ್ಧನಾಯ.
82.ಸ್ಪತಿಕಾಭಯ.
83.ವಾಗದೀಶಾಯ.
84.ನವ ವ್ಯಾಕ್ರಿತ ಪಂಡಿತಾಯ.
85.ಚತುರಭಾವೆ.
86.ದೀನ ಬಂಧು ಧಾರಾಯ.
87.ಮಾಯಾತ್ಮನೇ.
88.ಭಕ್ತ ವತ್ಸಲಾಯ.
89.ಸಂಜೀವಿನಿ ಆಗ್ಯಾರ್ಥಾಯ.
90.ಸುಚಯೇ.
91.ವಾಗ್ಮಿನೇ.
92.ತ್ರಿದವರ್ತಾಯ.
93.ಕಾಲನೇಮಿ ಪರಮಾತ್ಮನಾಯ.
94.ಹರಿಮರ್ಕಟ ಮರ್ಕಟಾಯ.
95.ದಂತಾಯ.
96.ಶಾಂತಾಯ.
97.ಪ್ರಸನ್ನಾತ್ಮನೇ.
98.ಶಾಂತ ಕಾಂತಮುದ ಪಹರತ್ತೇ.
99.ಯೋಗಿಣೇ.
100.ರಾಮಕಥಾ ಲೋಲಾಯ.
101.ಸೀತಾನ್ವೇಷಣೆ ಪತಿತಾಯ.
102.ವಜ್ರದನುಷ್ಠಾಯ.
103.ವಜ್ರನಾಯಕಾಯ.
104.ರುದ್ರವೀರ್ಯ ಸಮದ್ಭವಾಯ.
105.ಇಂದ್ರಜಿತಪ್ರಹಿತ ಮೋಗರ್ಭ ಬ್ರಹ್ಮಾಸ್ತ್ರ ವಿನಿವಾರಕಾಯ.
106.ಪಾರ್ಥ ಧ್ವಜಗ್ರಸ ವಾಸಿನೇ.
107.ದಶಭಾವೆ.
108.ಲೋಕಪೂಜ್ಯಾಯ.*
******
ಘಟಿಕಾಛಲದಿ ನಿಂತ ಶ್ರೀ ಹನುಮಂತ
ಶ್ರೀ ಹನುಮಂತ ||ಘಟಿಕಾ||
ಘಟಿಕ ಛಲದಿ ನಿಂತ ವಟು ಹನುಮಂತನ||2||
ಪಟನೆಯ ಮಾಡಲು ತಟದಿ ಪೊರೆವೆನೆಂದು||2||
||ಘಟಿಕಾಛಲದಿ||
ಹನುಮಂತ ಹನುಮಂತ ಘಟಿಕಾಛಲದಿನಿಂತ||2||
ಚತುರಾಯುಗದಿ ತಾನು ಅತಿ ಭಲವಂತನು
ಚತುರ್ಮುಖನಯ್ಯನಾ||ಚತುರಾಯುಗದಿ||
ಚತುರಮೂರುತಿಗಳ ಚತುರತನದಿ ಭಜಿಸಿ||2||
ಚತುರ್ಮುಖನಾಗಿ ಚತುರ್ವಿಧ ಫಲ ಕೊಡುತ||2||
||ಘಟಿಕಾಛಲದಿ||
ಹನುಮಂತ ಹನುಮಂತ ಘಟಿಕಾಛಲದಿನಿಂತ||2||
ಸರಸಿಜಭವಗೋಸ್ಕರಾ ಕಲ್ಮಷಾದೂರಾ
ವರಚಕ್ರತೀರ್ಥಸರ ||ಸರಸಿಜ||
ಮೆರೆವ ಛಲದಿ ನಿತ್ಯ ನರಹರಿಗೆದುರಾಗಿ||2||
ಚಿರಯೋಗಾಸನದಿ ವರವ ಕೊಡುವೆನೆಂದು||2||
||ಘಟಿಕಾಛಲದಿ||
ಹನುಮಂತ ಹನುಮಂತ ಘಟಿಕಾಛಲದಿನಿಂತ||2||
ಶಂಖ ಚಕ್ರವ ಧರಿಸಿ ,ಭಕ್ತರ ಮನದಾ
ಭಂಗವ ಪರಿಹರಿಸಿ ||ಶಂಖ||
ಪಂಕಜನಾಭ ಶ್ರೀ ಪುರಂದರವಿಠ್ಠಲನ||2||
ಬಿಂಕದ ಸೇವಕ ಸಂಕಟ ಕಳೆಯುತ||2||
||ಘಟಿಕಾಛಲದಿ||
******
||ನಂಬಿದೆ ನಿನ್ನ ಪಾದ ಗುರು ಮುಖ್ಯ ಪ್ರಾಣ||
🙏🙏🙏🙏
ಸೀತಾದೇವಿಯ ಅನ್ವೇಷಣೆ ಗೆ ಸುಗ್ರೀವನ ಆಜ್ಞೆಯನ್ನು ಪಾಲಿಸಲೋಸುಗ ಕಪಿಗಳ ಸಮೂಹವೆಲ್ಲವು ನಾಲ್ಕು ದಿಕ್ಕಿಗೆ ಹೊರಟಿದ್ದಾರೆ.
ದಕ್ಷಿಣ ದಿಕ್ಕಿಗೆ ಹನುಮಂತ, ಜಾಂಬವಂತ,ಇನ್ನೂ ಅನೇಕ ಕಪಿಗಳ ಸಮೂಹ ಹೊರಟಿದೆ.
ಹನುಮಂತ ದೇವರು ಹೊರಡುವ ಮುನ್ನ ಶ್ರೀ ರಾಮಚಂದ್ರ ದೇವರು ತನ್ನ ಮುದ್ರಿಕೆ ಯನ್ನು ಅವರಿಗೆ ಕೊಟ್ಟಿದ್ದಾರೆ.
ನೂರು ಯೋಜನದ ಸಾಗರವನ್ನು ಲಂಘಿಸಿ,ರಕ್ಕಸರನ್ನು ಸಂಹರಿಸಿ ,ಸೀತಾದೇವಿ ಕೊಟ್ಟ ಚೂಡಾಮಣಿ ಯನ್ನು ತಂದು ರಾಮಚಂದ್ರ ದೇವರಿಗೆ ಕೊಟ್ಟಿದ್ದಾರೆ.
ಶ್ರೀರಾಮಚಂದ್ರ ದೇವರು ಸೀತಾ ಅನ್ವೇಷಣೆಗೆ ಹನುಮಂತ ದೇವರ ಜೊತೆಯಲ್ಲಿ ಹೊರಟ ಎಲ್ಲಾಕಪಿಗಳಿಗು ಅನುಗ್ರಹ ಮಾಡಿದ್ದಾರೆ.
ಒಂದು ಪ್ರಶ್ನೆ.??
ನೂರು ಯೋಜನ ಸಾಗರ ದಾಟಿದ್ದು , ರಕ್ಕಸರ ಸಂಹಾರ ಮಾಡಿದ್ದು ಹನುಮಂತ ನಾದರೆ ಈ ಕಪಿಗಳು ಯಾರು ಲಂಕಾ ಪಟ್ಟಣಕ್ಕೆ ಹೋಗಿಲ್ಲ?? ಮತ್ತೆ ಶ್ರೀರಾಮಚಂದ್ರ ದೇವರ ಬಳಿ ಹೋಗುವ ಅರ್ಹತೆ ಹೇಗೆ ಬಂತು??
ಉತ್ತರ.
ಹನುಮಂತದೇವನ ಹಿಂದೆ ಇದ್ದವರು ಎಂಬುದೇ ಶ್ರೀರಾಮಚಂದ್ರದೇವನ ಬಳಿ ಸಾರಲು ಅರ್ಹತೆ..ಇತರ ಕಪಿಗಳು ಸೀತೆಯನ್ನಿರಲಿ, ಸೀತಾಕೃತಿಯನ್ನು ಕೂಡ ಕಂಡವರಲ್ಲ..ಸಮುದ್ರ ದಾಟಿದವರಲ್ಲ..ಅಶೋಕವನ ನಾಶ ಮಾಡಿದವರಲ್ಲ..ರಕ್ಕಸರ ಸಂಹಾರ ಮಾಡಿದವರಲ್ಲ.. ಲಂಕೆಯನ್ನು ಸುಟ್ಟವರಲ್ಲ..
ಆದರೆ
ಅದನ್ನೆಲ್ಲವನ್ನು ಮಾಡಿದ ಹನುಮಂತದೇವನ ಹಿಂದೆ ಇದ್ದವರು ಎಂಬುದೇ ಅವರು ಉಳಿಯಲು ಹಾಗೂ ಶ್ರೀರಾಮಚಂದ್ರ ದೇವನ ಬಳಿ ಸಾರಲು ಅರ್ಹತೆಯಾಯಿತು...
ಅದರಂತೆ ಭಗವತ್ಕಾರ್ಯಸಾಧಕರಾದ ಜೀವೋತ್ತಮರಾದ ಹನುಮಂತ ದೇವರ ಇನ್ನೊಂದು ಅವತಾರವಾದ ಶ್ರೀಮಧ್ವಾಚಾರ್ಯರ ಅನುಯಾಯಿಗಳಾಗಿ ಬದುಕುವುದೇ ಸರ್ವೋತ್ತಮನಾದ ಭಗವಂತನನ್ನು ಸಮೀಪಿಸಲು ಅಪೂರ್ವ ಸಾಧನವಾಗಿದೆ...
🙏ಶ್ರೀ ಕೃಷ್ಣಾರ್ಪಣ ಮಸ್ತು🙏
|ಎಣೆಯಾರೋ ನಿನಗೆ
ಹನುಮಂತ ರಾಯ|
|ಎಣೆಯಾರೋ ನಿನಗೆ ತ್ರಿಭುವನದೊಳಗೆ||🙏
ಶ್ರೀ ಹನುಮಜಯಂತಿಯ ನಮಸ್ಕಾರ ಗಳು ಎಲ್ಲಾ ಹರಿಭಕ್ತರಿಗೆ.
*************
ಇಂದಿನ ಶುಭ ದಿನ ಶುಭ ವಾರ ಮಾಲಿಕೆಯಲ್ಲಿ ಶ್ರೀ ಮುಖ್ಯಪ್ರಾಣ ದೇವರು.
ಶ್ರೀ ಭಾವೀ ಸಮೀರ ವಾದಿರಾಜರು ರಚಿಸಿದ ಶ್ರೀ ಸರಸಭಾರತೀ ವಿಲಾಸದಲ್ಲಿ ಶ್ರೀ ಮುಖ್ಯಪ್ರಾಣ ದೇವರ ,ವಾಯುದೇವರನ್ನು ಜೀವೋತ್ತಮನೆಂದು ವರ್ಣಿಸುವ ಅದ್ಭುತ ಪ್ರಸಂಗ.
ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮ ದೂತಂ ಶಿರಸಾ ನಮಾಮಿ.//.
ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.
ನಮಸ್ತೇ ಪ್ರಾಣೇಶ ಪ್ರಣತವಿಭವಾಯಾನಿಮಗಾ:/
ನಮಃ ಸ್ವಾಮಿನ್ ರಾಮ ಪ್ರಿಯತಮ ಹನೂಮಾನ್ ಗುರುಗುಣ/
ನಮಸ್ತುಭ್ಯಂ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್
ನಮಃ ಶ್ರೀ ಮನ್ ಮಧ್ವ ಪ್ರದಿಶ ಸುದೃಶ್ಯಂನೋ ಜಯ ಜಯ//..
ಶ್ರೀ ಸರಸಭಾರತೀ ವಿಲಾಸದಲ್ಲಿ ಶ್ರೀ ವಾಯುದೇವರು.
ಒಂದಾನೊಂದು ಕಾಲದಲ್ಲಿ ಶಿವ ಮೊದಲಾದ ಇಂದ್ರಿಯಾಧೀಶರು ನಾನು ಶ್ರೇಷ್ಠ ನಾನು ಶ್ರೇಷ್ಠ ಎಂಬ ಅಹಂಕಾರ ಪಟ್ಟರು.
ಇವರೆಲ್ಲಾ ದೇವತೆಗಳು ಬ್ರಹ್ಮಾಪರೋಕ್ಷಿಗಳು ,ಸರ್ವಜ್ಞರೂ ಆಗಿದ್ದರು.ಶುದ್ಧ ಸ್ವಭಾವದ ಇವರಲ್ಲಿ ಕಲಹವನ್ನುಂಟು ಮಾಡುವ ಕಲಿಯ ಪ್ರವೇಶವಾಗಿದ್ದರಿಂದ ಈ ರೀತಿ ಅಹಂಕಾರ ಬುದ್ಧಿ ಉಂಟಾಗುತ್ತದೆ.
ಈ ರೀತಿಯಾದ ಶ್ರೇಷ್ಠ ತೆಯ ಅಹಂಕಾರ ವನ್ನು ದೇವತೆ ಗಳು ಹೊಂದಿ. ಪರಸ್ಪರ ಕಲಹ ಗಳುಂಟಾಯಿತು.
ಶ್ರೀ ಮುಖ್ಯಪ್ರಾಣ ದೇವರು ತನ್ನ ವರಾದ ದೇವತೆಗಳಿಗೆ
ಬುದ್ದಿ ಹೇಳಲು ಶಕ್ತನಾಗಿದ್ದರೂ ಈ ರೀತಿ ಒಂದು ಉಪಾಯ ವನ್ನು ಮಾಡಿಸಿದನು. ತಾನೇ ತನ್ನ ಮಹಿಮೆ ಗಳನ್ನು ಹೇಳಿಕೊಂಡರೆ ನಾನು ಅಹಂಕಾರಿ ಎಂಬ ಭಾವನೆ ಬರುತ್ತದೆ ಎಂದು ಚತುರ್ಮುಖ ಬ್ರಹ್ಮನ ಬಳಿ ಇಂದ್ರಿಯಾಭಿಮಾನಿ ದೇವತೆಗಳೊಂದಿಗೆ ಬ್ರಹ್ಮ ಲೋಕಕ್ಕೆ ಹೋದನು.
ಆಗ ಎಲ್ಲಾ ದೇವತೆ ಗಳು ಬ್ರಹ್ಮ ದೇವರನ್ನು "ನಮ್ಮಲ್ಲಿ ಯಾರು ಶ್ರೇಷ್ಠರು.? ಎಂದು ಕೇಳುತ್ತಾರೆ.
ಆಗ ಬ್ರಹ್ಮ ದೇವರು "ಯಾರು ಶರೀರದಿಂದ ಮೇಲೆಕ್ಕೆದ್ದು ಹೋದರೆ ಶರೀರವು ಬೀಳುವುದೋ,
ಯಾರು ಪ್ರವೇಶ ಮಾಡಿದರೆ ಶರೀರವು ನಿಲ್ಲುವುದೋ
ಆ ದೇವತೆ ಯು ಗುಣಗಳಿಂದ ಶ್ರೇಷ್ಟನು,ವಯಸ್ಸಿನಿಂದಲೂ ಅವನೇ ಸರ್ವಜ್ಯೇಷ್ಟನು "
ಎಂದು ಹೇಳಿದರು.
ಈ ರೀತಿ ಯಾಗಿ ಹೇಳಿದಾಗ ಆ ದೇವತೆಗಳು ಶರೀರದಿಂದ ಒಬ್ಬೊಬ್ಬರಾಗಿ ಹೊರಬಂದರೂ ಮುಖ್ಯಪ್ರಾಣ ದೇವರ ಬಲದಿಂದ ಆ ದೇಹವು ಬೀಳಲಿಲ್ಲ.
ಹೀಗೆ ಕಣ್ಣು ಕಿವಿಯ ಅಭಿಮಾನಿ ದೇವತೆ ಗಳು ಕ್ರಮವಾಗಿ ಹೊರಬಂದರೂ ಅತ್ಯಂತ ಬಲಶಾಲಿ ಯಾದ ಮುಖ್ಯಪ್ರಾಣನ ಸಾಮರ್ಥ್ಯ ದಿಂದಲೇ ದೇಹವು ಕುಸಿದು ಬೀಳಲಿಲ್ಲ.
ಮನೋಭಿಮಾನಿ,ಕಿವಿಯ ಅಭಿಮಾನಿ ದೇವತೆಗಳು ಒಂದು ವರ್ಷದ ಕಾಲ ಹೊರಗಿದ್ದು ಅನಂತರ ಒಬ್ಬೊಬ್ಬರಾಗಿ ದೇಹವನ್ನು ಪ್ರವೇಶಿಸಿ ತಮ್ಮ ತಮ್ಮ ಇಂದ್ರಿಯಗಳಲ್ಲಿ ವಾಸಮಾಡಿದರು.
ಅಲ್ಲಿಗೆ ಅವರ ಅಹಂಕಾರ ಶಾಂತವಾಗಿತ್ತು.
ಆನಂತರ ತನ್ನ ಸರದಿ ಯೆಂದು ತಿಳಿದು ಮುಖ್ಯಪ್ರಾಣನು ಶರೀರದಿಂದ ಹೊರಗೆ ಬರಲು ಯತ್ನಿಸಿದಾಗ ಎಲ್ಲಾ ಇಂದ್ರಿಯ ದೇವತೆಗಳನ್ನು ಅವರವರ ಸ್ಥಳಗಳಿಂದ ಜಗ್ಗಿ ಎಳೆದಂತಾಯಿತು.
ಪ್ರಾಣದೇವರು ಹೊರಟಾಗ ಅವನ ಹಿಂದೆಯೇ ಹೊರಟರು.
ಆಗ ದೇಹವು ಕುಸಿದು ಬಿತ್ತು.
ಪುನಃ ಮುಖ್ಯಪ್ರಾಣ ನು ತನ್ನ ಜೊತೆಗೆ ಬಂದ ದೇವತೆ ಗಳನ್ನು ಬಿಟ್ಟು ತನ್ನ ಅಪಾರ ಶಕ್ತಿ ಯನ್ನು ತೋರಿಸಲು ತಾನೊಬ್ಬನೇ ಬ್ರಹ್ಮ ದೇಹವನ್ನು ಪ್ರವೇಶಿಸಿ ,ಯಾವ ಶಕ್ತಿಯಿಂದ ಈ ದೇಹವು ಎದ್ದಿತು ಎಂದು ತೋರಿಸಲು
ತಾನಿಲ್ಲದಿದ್ದರೆ ಈ ದೇಹದಲ್ಲಿ ಶಕ್ತಿ ಇಲ್ಲ ವೆಂದು ತಿಳಿಸುವುದಕ್ಕಾಗಿ ಹಗ್ಗದ ಸಮೇತ ಗೂಟ ಕಿತ್ತಿದ ಕುದುರೆ ಯಂತೆ ಎಲ್ಲಾ ದೇವತೆ ಗಳನ್ನು ತನ್ನ ಜೊತೆಗೇ
ಎಳೆದುಕೊಂಡು ಬಂದನು.
ಹೀಗೆ ಎಲ್ಲಾ ಇಂದ್ರಿಯಗಳಿಗಿಂತ ಪ್ರಾಣದೇವರ ಶ್ರೇಷ್ಠ ರೆಂದು ಸ್ಪಷ್ಟ ವಾಗುತ್ತದೆ.
ಎಲ್ಲರೂ ದೇಹದಲ್ಲಿ ಇದ್ದರೂ ಮುಖ್ಯಪ್ರಾಣ ನಿಲ್ಲದೇ ದೇಹವು ಏಳಲಾರದು .
ವಾಯು ದೇವರು ಇದ್ದರೆ ಮಾತ್ರ ವೇ ದೇಹ ನಿಲ್ಲುವುದು,ಕಾರ್ಯ ಸಮರ್ಥ ವಾಗುವುದು ಎಂದು ತಿಳಿದು ಬರುತ್ತದೆ.
ಶ್ರೀಪಾದರಾಜರು ರಚಿಸಿದ ಶ್ರೀ ಮಧ್ವನಾಮದಲ್ಲಿ
ಜಯ ಜಯ ಜಗತ್ರಾಣ/ಜಗದೊಳಗೆ ಸುತ್ರಾಣ/
ಅಖಿಲ ಗುಣ ಸದ್ಧಾಮ ಮಧ್ವನಾಮ//.
ಆವಾತನು ದೇಹದಿರೆ ಹರಿಯು ತಾ ನೆಲೆಸಿರುವ
ಆವಾತನು ತೊಲಗೆ ಹರಿ ತಾ ತೊಲಗುವ/
ಆವಾತನು ದೇಹದೊಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲ ಗುರುರಾಯನು//
ಕರುಣಾಭಿಮಾನಿ ದಿವಿಜರು ದೇಹವನು ಬಿಡಲು
ಕುರುಡ ಕಿವುಡನು ಮೂಕನೆಂದೆನಿಸುವ/
ಪರಮ ಮುಖ್ಯಪ್ರಾಣ ತೊಲಗಾಲ ದೇಹವನು
ಅರಿತು ಪೆಣನೆಂದು ಪೇಳ್ವರು ಬುಧಜನಾ//
ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನೇಮದಿ ನೆಲಿಸಿಹ/
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರು ಕುಲತಿಲಕ ಮುಖ್ಯ ಪವಮಾನನು//
ಎಂದು ವರ್ಣಿಸಿದ್ದಾರೆ.
//ಶ್ರೀ ಹರಿ ಸಮರ್ಪಣೆ.//
ಹರಿ ಸರ್ವೋತ್ತಮ ವಾಯು ಜೀವೋತ್ತಮ.//
**********
ಅಂಜನಾ ದೇವಿಗೆ ಸುತನಾಗಿ ಜನಿಸಿದ ಹನುಮ ನಿನಗೆ ನಮೋ ನಮೋ
ಹನುಮ ನಿನಗೆ ನಮೋ ನಮೋ । ಹನುಮ ನಿನಗೆ ನಮೋ ನಮೋ ।।ಅಂಜನಾ ।।
ಅಂಜಾದ್ರಿ ಸೀತೆಗೆ ಉಂಗುರವಿಟ್ಟ ನಿನ್ನ ಚರಣ ಕಮಲಕೆ ನಮೋ ನಮೋ ।।ಅಂಜನಾ ।।
ದುರುಳಾಕ್ಷಯನ ಕೊರಳನು ಕೊಯ್ದ ಶೂರ ಧೀರ ನಮೋ ನಮೋ ।
ಭರದಿ ಲಂಕಾಪುರವನು ಹರಣಕೆ ಆಹುತಿ ಇಟ್ಟನೆ ನಮೋ ನಮೋ ।।ಅಂಜನಾ ।।
ನಂದನ ಕಂದನ ಸುಂದರ ವದನನ ನೆಂಟ ನಿನಗೆ ನಮೋ ನಮೋ ।
ಅಮೃತಶ್ರೀ ಸೌಗಂಧಿಕೆ ತಂದಿಟ್ಟ ಕುಂತಿಯ ಕುಮಾರ ನಮೋ ನಮೋ ।।ಅಂಜನಾ ।।
ಯತಿಯಾಗಿ ಶ್ರೀಪತಿಯ ಪ್ರೀತಿಯ ಪಡೆದ ಮಧ್ವರಾಯ ನಿನಗೆ ನಮೋ ನಮೋ ।
ಗತಿತೋರುವ ತಂದೆ ಪುರಂದರ ವಿಠಲನ ದಾಸಾದಾಯಿಯೇ ನಮೋ ನಮೋ ।।ಅಂಜನಾ ।।
**********
Yalagur Hanuman Temple
Hanuman at Yalagur temple, popularly known as ‘Speaking Hanumantha’ is extremely powerful and popular throughout the country and dearly called ‘Yalagur Hanumappa’. Yalagur is a small village in Muddebihal taluk, Vijayapura district in Karnataka. It is on the banks of river Krishna. The temple is located amidst splendid greenery and serene water body which is extremely soul soothing with a tranquil atmosphere all around. The temple belongs to the Madhwas (a sect of Brahmins-followers of Madhwacharya), and Yalaguresh at the temple is everyday worshipped by the learned Madhwa acharyas of the town.
History of Yalagur goes back to the time of Ramayana. As Shri Yalguresh stands in the village of Yalagur on the order of Shri Rama for seven villages (Elu Uresh = Yalguresh). It means that Lord Hanuman was ordered by Lord Rama to establish himself in seven different places to protect and bless the devotees and also to fulfill all their desires. Bowing down to Lord Rama’s order, Lord Hanuman enforced himself as seven, self-emerged idols and held his true existence in those idols then, now and forever. Yalagur temple is the main temple or the head of all the seven self-emerged temples.
Hence we find seven major Hanuman temples including Yalagur in and around Vijayapura and Bagalkot districts. Lord Hanuman either naturally emerged as idols of the temple or appeared in the dream of great devotees directing them to find the self-emerged idol. The seven temples of Lord Hanuman mostly called by the names of the places are at Yalagur (being the prime of all), Karwar, Tulasigeri, Halagani, Achanur, Govindinne, and Jangwad.
Interesting History
A priest had a dream where God asked him to break open the stone he was performing pooja on. Because there was Shri Hanuman’s idol hidden inside it. As pujari broke the stone irregularly, the idol was broken into pieces. The pujari was worried about the pieces. Again he had a dream and was ordered by Lord Hanuman to bring the pieces to the place (the temple now) and place them in a proper manner and close the door for seven complete days. Pujari being very anxious followed the instructions and opened the door only on the seventh day morning. To his surprise, he saw that the idol was completely joined in the upper part and incomplete in the lower part (even now we can see the unjoined parts).
Again pujari had a dream where he was ordered by God to perform all sacred poojas and rituals from learned Brahmins. Also to bring sacred waters from river Krishna only and offer Abhisheka and perform Pratishthapana. Pujari performed the same as ordered by God. And then Lord Hanuman was in full strength to bless the devotees thereafter. Even now priests of the temple bring holy waters from Krishan river only and perform Abhisheka to Yalaguresh. Even to this day, we have the same descendants of the pujari family performing pooja at the temple with the same devotion, and dedication.
Miracles of Yalguresh!
During British rule, taxes were taken from people who performed seva in temples. So people who performed seva in Yalgur were also asked to pay taxes. People were poor then, they had no crop and hence no money. So the officers punished them and even beat them. There was an extremely humble and surrendered devotee to Lord Hanuman named Daseya. Just to avoid the situation people made use of Daseya’s goodness and made him a fool. And told the officers that, if Daseya pays the taxes then all would pay taxes to them.
Daseya was an extremely poor and a compassionate person. He confessed that he did not have a single pie and that he is unable to pay any tax. The officers beat him so much that he died. The same day Lord Hanuman came in the dream of his other devotee and asked him to keep Daseya’s corpse for three days undisturbed. After 3 days Daseya livens up and starts performing seva and pujas as daily. Seeing this miracle, the officers turned crazily frightened and were awestruck and badly regretted. They said that they would not be collecting taxes anymore and surrendered to Lord Hanuman.
Kartika Utsava also called Yalagur Jatra is an extravaganza in itself and the biggest, lavish, grandeur event the temple witnesses. It falls on the first Saturday after the Poornima day in February every year. Devotees who come from all over India perform Pallakki Seva early in the morning. Then the maha mangalarathi is performed.
*************
ಯಲಗುರ
ಹನುಮ ಜಯಂತಿಯ ನಿಮಿತ್ತ ;
ಅಪ್ಸರಾ ಸ್ತ್ರೀಯರಲ್ಲಿ ಶ್ರೇಷ್ಠಳು ಪುಂಜಿಕಸ್ಥಲಾ ಕುಂಜರನೆಂಬ ವಾನರೇಂದ್ರನ ಮಗಳು ಆತ್ರಿ ಮುನಿಗಳ ಶಾಪದಿಂದ ವಾನರ ಸ್ತ್ರೀಯಾಗಿ ಹುಟ್ಟಿದರೂ ಬಯಸಿದ ರೂಪ ಹೊಂದುವ ಶಕ್ತಳು ಅಂಜನಾ ನಾಮಕಳು. ಮರುತ್ತುಗಳಲ್ಲಿ ಒಬ್ಬನಾದ ಕೇಸರಿ ಕಪಿಯ ಪತ್ನಿ. ಭಾರದ್ವಾಜರ ವರದಿಂದ ಸರ್ವಗುಣಗಳಿಂದ ಮನೋಹರನಾಗಿರುವ ಮುಕುಂದನನ್ನು ಬಿಟ್ಟರೆ ಜೀವಕೋಟಿಯಲ್ಲಿ ಮುಖ್ಯನಾದವನಾದ ಶುಭ ಮೂಹೂರ್ತದಲ್ಲಿ ವಜ್ರದ ಕವಚ ಕುಂಡಲಗಳನ್ನು ಧರಿಸಿದವನಾದ ಪುತ್ರನನ್ನು ಅಂಜನಾ ದಂಪತಿಗಳು ಪಡೆದರು, ಅವರೇ ವಾಯುದೇವರ ಪ್ರಥಮ ಅವತಾರಿ ಹನುಮಂತ. ವಜ್ರ ಶರೀರ, ಗಂಭೀರ, ಮುಕುಟಧರ, ಬಲಿಷ್ಠ, ಜ್ಞಾನಿಯು, ಸಕಲ ಜೀವ ರಾಶಿಗಳ ಪ್ರಾಣದಾಯಕ, ಇಷ್ಟಪ್ರದಾಯಕ, ಸಜ್ಜನೋಪಕಾರಿ ಕಪಿಯ ಬಾಲ ಚೇಷ್ಟೆಯಿಂದ ಆಗ ತಾನೇ ಉದಯಿಸಿದ ಸೂರ್ಯನನ್ನು ಹಿಡಿಯಬೇಕೆಂದು ರಾಹುವು ಬರುತ್ತಿರುವಾಗ ಹನುಮಂತನು ನೋಡಿ ಅದನ್ನು ತಡೆಯಲು ಆಕಾಶಕ್ಕೆ ಹಾರಿದನು. ಆತನ ವೇಗದ ಸಾಮರ್ಥ್ಯ ಗರುಡನಿಗಾಗಲಿ, ಮನಸ್ಸಿಗಾಗಲಿ ಇಲ್ಲವೆಂದು ಹೇಳುವರು.
'ಹನು ' ಎಂದರೆ ಜ್ಞಾನ ಮಂತ ಎಂದರೆ ಉಳ್ಳವನು. ಜ್ಞಾನಮಯ, ಅತಿರೋಹಿತ ವಿಮಲ ವಿಜ್ಞಾನಿ ಹನುಮಂತ ದೇವರು. ಕಪಿ ಸ್ವಭಾವವನ್ನು ಲೋಕ ವಿಡಂಬನೆಗಾಗಿ ಪ್ರಕಾಶ ಮಾಡಿದುದು. ಅಪ್ರಮೇಯನಾದ ಕಪಿ ಶ್ರೇಷ್ಠನು ಮೂಲ ರೂಪದಲ್ಲಿ ಮಾಧವನಿಂದ ಸರ್ವ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಅಪಾರ ಜ್ಞಾನಿಯಾಗಿದ್ದರೂ, ಶಾಸ್ತ್ರ ಶ್ರವಣ ಮಾಡಿದಷ್ಟೂ ಸುಕೃತವೂ, ಭಕುತಿಯೂ ಸಂವ್ರುದ್ಧಿ ಯಾಗುವುದರಿಂದ ಇನ್ನೊಂದು ಬಾರಿ ಈ ಅವತಾರದಲ್ಲಿ ದೇವರಿಂದಲೇ ಅಧ್ಯಯನ ಮಾಡಬೇಕೆಂದು ಉರುಕ್ರಮ ನಾಮಕ ಶ್ರೀ ಹರಿಯ ಇದುರಿಗೆ ಕೈ ಮುಗಿದುಕೊಂಡು ಉದಯಾದ್ರಿಯಿಂದ ಅಸ್ತಾದ್ರಿವರೆಗೆ ಆಂತರಿಕ್ಷದಲ್ಲಿ ಹಿಂದೂಮುಂದಾಗಿ ನಡೆದು ಒಂದೇ ದಿನದಲ್ಲಿ ಆ ಗ್ರಂಥ ಸಂಪೂರ್ಣ ಅಧ್ಯಯನ ಗೈದರೆನ್ನುವರು. ಇದನ್ನೇ ಶ್ರೀ ಶ್ರೀಪಾದರಾಜರು ಮಧ್ವನಾಮದಲ್ಲಿ, ತರಣಿ ಗಭೀಮುಖವಾಗಿ ಶಬ್ದ ಶಾಸ್ತ್ರವ ಪಠಸಿ ಉರವಣಿಸಿ
ಹಿಂದೆ ಮುಂದಾಗಿ ನಡೆದ ಎಂದು ಹನುಮನವತಾರದಲ್ಲಿ ತಿಳಿಸುತ್ತಾರೆ. ಇಂತಹ ಭಾಗವತೋತ್ತಮನಾದ ಅಚ್ಚಿನ್ನ ಭಕ್ತನಾದ ಶ್ರೀ ರಾಮನಲ್ಲಿ ಅಸಾಧಾರಣ ಭಕ್ತಿಭಾವ ಹೊಂದಿದ ಸಕಲವೂ ಭಗವದನುಗ್ರಹ ದಿಂದಲೇ ನಡೆಯುವುದೆಂದು ನಂಬಿದ, ಭಗವದ್ಸ್ಮರಣೆ ಯಿಂದಲೇ ಸಕಲ ಕಾರ್ಯಾ ರಂಭಿಸುವ ಹನುಮಂತನು ಶ್ರೀ ರಾಮಚಂದ್ರನ ಸೇವೆ ಮಾಡಿ ಮೌಕ್ತಿಕದಹಾರ ಪಡೆದ ಭಗವದ್ಭಕ್ತ.
ತಾನು ಶ್ರೀ ಹರಿಯ ಆಧೀನ ಸ್ವತಂತ್ರನಲ್ಲ ಎನ್ನುವುದನ್ನು ಲಂಕೆಯ ಪ್ರಸಂಗದಿಂದ ಹಾಗೂ ಸ್ವಾಮಿಕಾರ್ಯದ ಭಕ್ತಿ ಭಾವವನ್ನು ವಿಶ್ರಾಂತಿಲ್ಲದೇ ಸೀತಾನ್ವೇಷಣ ಸಮಯದಲ್ಲಿ ನಿರೂಪಿಸಿದ್ದಾನೆ.ಸೇವಕತನದ ಮೌಲ್ಯ ಅರಿತವನು ಹನುಮಾನೊಬ್ಬನೇ ಎನ್ನುಬವುದು ಪ್ರಖ್ಯಾತಿ. ಈ ಸೇವಕನ ಸೇವೆಗೆ ಮೆಚ್ಚಿ ತನ್ನನ್ನೇ ಅವನಿಗೆ ಕೊಟ್ಟು ಕೊಂಡವನು ಶ್ರೀ ರಾಮ. ಕೊನೆಗೆ ಬೇಡದಲೆ ಸುರರಿಗೆ ವರವ ಕೊಡುವ ಎನ್ನುವುದಕ್ಕೆ ಹನುಮಂತನಿಗೆ ಅಜ ಪದವಿಯನ್ನು ಅವನು ಬೇಡದಲೆ ನೀಡಿದ ಶ್ರೀ ರಾಮ.
ಎಲ್ಲಿ ಹನುಮನೋ ಅಲ್ಲಿ ರಾಮನು, ಎಲ್ಲಿ ರಾಮನೋ ಅಲ್ಲಿ ಹನುಮನು.🙏🙏🙏🙏🙏
ಅಲ್ಪ ಮತಿಗೆ ಹೊಳೆದದ್ದು ತಿಳಿದದ್ದು ಕೇವಲ ವಾಕ್ ಶುದ್ಧಿಗಾಗಿ..
ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ.
ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು
***
ಶ್ರೀಹನುಮಂತದೇವರು ಶ್ರೀರಾಮದೇವರಲ್ಲಿ ಸಲ್ಲಿಸಿದ ಪ್ರಾರ್ಥನೆ
ರಾಮಾವತಾರಕಾಲದಲ್ಲಿ ಯುದ್ಧದಲ್ಲಿ ಉಳಿದೆಲ್ಲರಿಗಿಂತ ಅಧಿಕವಾಗಿ ರಾಮದೇವರ ಸೇವೆಸಲ್ಲಿಸಿದ್ದ ಹನುಮಂತದೇವರಿಗೆ ಶ್ರೀರಾಮಚಂದ್ರದೇವರು ಏನು ಬೇಕು ಕೇಳು ಎಂದಾಗ ಅನುಗಾಲವೂ ನಿನ್ನ ಪಾದಸೇವೆ ಸಲ್ಲಿಸುವಂತಹ ಭಾಗ್ಯಕೊಡು ಎನ್ನುತ್ತಾರೆ ಇದನ್ನು ಶ್ರೀಮಧ್ವಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ತಿಳಿಸಿದ್ದಾರೆ .
ಯಸ್ತೇ ಕಥಾಸೇವಕ ಏವ ಸರ್ವದಾ
ಸದಾರತಿಸ್ತ್ವಯ್ಯಚಲೈಕಭಕ್ತಿಃ |
ಸ ಜೀವಮಾನೋ ನ ಪರಃ ಕಥಂಚಿತ್
ತಜ್ಜೀವನಂ ಮೇ ಸ್ತ್ವಧಿಕಂ ಸಮಸ್ತಾತ್ ||
ಯಾರು ಸದಾಕಾಲವೂ ನಿನ್ನ ಶಾಸ್ತ್ರ ಶ್ರವಣಾದಿಗಳನ್ನು ಮಾಡುವರೋ ಯಾರು ನಿನ್ನಲ್ಲಿ ನೆಲೆಗೊಳಿಸಿ ಅಚಲಭಕ್ತರಾಗಿರುವರೋ ,ಅವರ ಜೀವನವೇ ನಿಜವಾಗಿಯೂ ಧನ್ಯ ಬೇರೆಯವರ ಬದುಕು ಬದುಕೇ ಅಲ್ಲ ಎಲ್ಲದಕ್ಕಿಂತ ಮಿಗಿಲಾದ ನಿನ್ನ ಪಾದಕಮಲದಲ್ಲಿ (ಸೇವಾಭಾಗ್ಯದ) ಭಕ್ತಿಯ ಬದುಕೇ ನನಗೆ ಸದಾ ಇರಲಿ ಎಂದು ಪ್ರಾರ್ಥಿಸಿದ್ದಾರೆ .
ಪ್ರವರ್ಧತಾಂ ಭಕ್ತಿರಲಂ ಕ್ಷಣೇ ಕ್ಷಣೇ
ತ್ವಯೀಶ ಮೇ ಹ್ರಾಸ ವಿವರ್ಜಿತಾ ಸದಾ |
ಅನುಗ್ರಹಸ್ತೇ ಮಯಿ ಚೈವಮೇವ
ನಿರೂಪದೌ ತೌ ಮಮ ಸರ್ವಕಾಮಃ ||
ಪ್ರಭು ನನಗೆ ನಿನ್ನಲ್ಲಿ ಎಂದೂ ಕುಂದದಿರುವ ಭಕ್ತಿ
ಕ್ಷಣ ಕ್ಷಣಕ್ಕೂ ಅಭಿವೃದ್ಧಿಯಾಗುತ್ತಿರಲಿ . ನಿನ್ನ ಅನುಗ್ರಹ ನನಗೆ ಸದಾಕಾಲವಿರಲಿ .ನಿರುಪಧಿಕವಾದ ಈ ಎರಡೇ ನನಗೆ ಸಕಲಪುರುಷಾರ್ಥರೂಪವಾಗಿದೆ ಎಂದು ಶ್ರೀಹನುಮಂತದೇವರು ಶ್ರೀರಾಮದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು .
ಮಹಾಭಾರತತಾತ್ಪರ್ಯನಿರ್ಣಯ 8-246,247
ವಿವರಣೆ- ಭಕ್ತಿಗೆ ಕುಂದುತರುವ ನಿಷಿದ್ಧಕಾಮನೆಗಳನ್ನು ರಾಗ ದ್ವೇಷಾದಿಗಳು ಒಂದೂ ಇಲ್ಲದ ನನಗೆ ನಿನ್ನಲ್ಲಿ ನಿರ್ವ್ಯಾಜವಾದ ಭಕ್ತಿ ಸದಾ ಬೆಳೆಯುತ್ತಿರಲಿ ಸುಖಸಂಪತ್ತು ಕೊಡುವಿ ಎಂದು ನಾನು ನಿನ್ನಲ್ಲಿ ಭಕ್ತಿಮಾಡಬಾರದು ಕಾಣಿಕೆ ನೀಡುವನೆಂದು ನೀನು ನನ್ನಲ್ಲಿ ಅನುಗ್ರಹ ಮಾಡುವುದು ಸಲ್ಲದು ಸನಕಾದಿಗಳು ನಿನಗೆ ಏನು ದ್ರವ್ಯ ಕಾಣಿಕೆಯಾಗಿ ಕೊಡುತಿದ್ದಾರೆ ?
ಧುರ್ಯೋಧನ ಕೊಡಲು ಬಂದರೆ ಕೊಡದ ವಿದುರನನಲ್ಲಿಯೇ ಅನುಗ್ರಹ ಮಾಡಿರುವಿ ತಾನೇ ಅದರಿಂದ ಅನಾದಿ ಅನಂತಕಾಲದಲ್ಲಿಯೂ ನಾನು ನಿನ್ನಲ್ಲಿ ಸ್ವಾಭಾವಿಕವಾದ ಭಕ್ತಿಮಾಡುವವನೆಂದೇ ನೀನು ನನ್ನಲ್ಲಿ ಸ್ವಾಭಾವಿಕವಾದ ಭಕ್ತಿಮಾಡುವವನೆನೆಂದೇ ನೀನು ನನ್ನಲ್ಲಿ ಸ್ವಾಭವಿಕವಾದ ಅನುಗ್ರಹ ಮಾಡುತ್ತಿರಬೇಕು . ಈ ಭಕ್ತಿ ಈ ಅನುಗ್ರಹ ಇವೆರಡೇ ನನ್ನ ಬದುಕಿನ ಮಹಾಪುರುಷಾರ್ಥಗಳು ಎಂದು ಮಹಾಭಾರತತಾತ್ಪರ್ಯನಿರ್ಣಯ ಭಾವಪ್ರಕಾಶಿಕದಲ್ಲಿ ಶ್ರೀವಾದಿರಾಜ ಸ್ವಾಮಿಗಳು ತಿಳಿಸಿದ್ದಾರೆ .
ಶ್ರೀಹನುಮಂತದೇವರ ಈ ಆದರ್ಶ ನಿಜಕ್ಕೂ ಅನುಕರಣೀಯವಾಗಿದೆ .ಕೇವಲ ಮನುಷ್ಯನಾಗಿ ಬದುಕಿದರೆ ಸಾಲದು .ಬದುಕಿರುವಷ್ಟು ಕಾಲ ಭಗವಂತನ ಪಾದಕಮಲಗಳಲ್ಲಿ ಭಕ್ತಿ ಇಟ್ಟಿರಬೇಕು ಭಗವಂತನಲ್ಲಿ ಏನಾದರೂ ಬೇಡುವುದೇ ಆದರೆ ಶ್ರೀಹನುಮಂತದೇವರಂತೆ ಕ್ಷಣ ಕ್ಷಣಕ್ಕೂ ಅಭಿವೃದ್ಧಿ ಯಾಗುವ ಭಕ್ತಿಯನ್ನೇ ಬೇಡುವುದು ಅವಶ್ಯ ಇದರಿಂದ ಆ ಬದುಕು ಸಾರ್ಥಕವಾಗುತ್ತದೆ .
ಹನುಮದ್ ಜಯಂತಿ ಶುಭಾಶಯಗಳು
***
No comments:
Post a Comment