SEARCH HERE

Tuesday 1 January 2019

hanumad vruta ಹನುಮದ್ ವೃತ margashira shukla trayodashi


Click below and Read 

HANUMAD VRUTA

The story of Hanumad vratha can be found in Vedavyasa praNIta bhaviShyOttarapuraNa.

This is the Vratha which was told by sakshaat Sri Vedavyasadevaru to Dharmaraja.    Once, Sri Vedavyasaru came to Dwaithavana, during Pandavaas vanavaasa period.  Dharmaraja welcomed Vedavyasa devaru and performed all the poojaa to the Bhagavan.  Sri Vedavyasaru told Dharmaraja that he will now tell the vratha which can fetch back their kingdom. 

Dharmaraja questioned.  What is the name of the vratha?, What are the details?. Who is the devate?,  What is the method/rules of the vratha?  Who had done it before?

After being posed many questions by  Dharmaraja, Vedavyasaru told “The vratha is called as Hanumad Vratha.  By chanting the name of the vratha itself it can remove all the obstacles.  

Why Pandavas had to go to forest?
Sri Vedavyasaru narrated/reminded the story of Draupadi/Arjuna to Pandavaas –
Draupadi had performed this Vratha under the guidance of Sri krishna Paramathma.   Draupadi did the Vratha and was wearing  in her hands  “Dora” (“ದೋರ”) which contained 13 knots – yellow colour thread.  Seeing “dOra” (“ದೋರ”) in her hands Arjuna, with Kalyavesha, told her ”I have tied your monkey (Hanuman) to my chariot’s flag.  He is after all a monkey.  Throw the dOra”.  (“ದೋರ”).  The remembrance of Hanuman itself, we get Buddhi, balam, Yashassu, Dhairya, which,  Arjuna neglected him because of his Kalyavesha.  It is because of this reason that the Pandavaas had to struggle a lot, they had to stay in the forest for 13 years by neglecting the 13 knotted dOra.  Then Draupadi also confirmed the incident of Arjuna neglecting the Hanumad dOra.

Vedavyasaru explained the circumstances which made the importance of Hanumad Vratha-
Hanumantha got the blow from the vajraayudha of Indradevaru, when he tried to catch Raahu affected sun (eclipse).   Though the sun’s heat burnt his face, Hanumantha was obstinate and continued to fly towards, the sun.  Indra, the swargadipathi thought, that the sun may be caught by Hanumantha. So he hit at Hanumantha with his terrible weapon Vajrayudha. Hanumantha fell down and was hurt. His left cheek became swollen.

Some versions says that Hanumantha thought that Sun was a fruit, as he was hungry, he flew to catch it.  (Note – Hanumantha does not have ajnaana.  He can’t think that Sun is a fruit.   He is a sarvajna whether he is in moola roopa or in his avataara roopa).  Hanumantha pretended to have lost his balance and acted as if he is unconscious.  (Indra devaru is very much low when compared to Vayudevaru in Kakshya.  Indra is subject to Kalyavesha, but never in case of  Vayudevaru).  Vayudevaru picked Hanumantha and went inside a cave.

Vayudevaru was angry and he did not come out of the cave and the entire world suffered as no one in the world was able to breath. All the devategalu, approached Brahmadeva, who in turn went to Vayudeva and assured him and that no weapon can kill this boy and that his son Hanumantha will be Chiranjeevi, and he will perform Raamakaarya.  Further Brahmadeva also gave anugraha, that those who perform ‘Hanumad Vratha’ in Abhijin Muhurtha, on Margashira Shudda Trayodashi will succeed in all their endeavours.  This vrata is observed for good health and prosperity.

Who has done it in the past? –
Sri Ramachandra himself did the vratha (even though he need not have done any vratha), he did it with the prarthane of Hanuman to make it popular.
Draupadi Devi has done this vratha
Sugreeva has done and got his istaartha siddhi.
By doing this Vibheeshana got Lanka Samrajyadhipatya.
Pooja of Hanuman to be done with Yellow colour items – Yellow flowers, arishina, Yellow vastra, etc

=============

Pooja Vidhana –

We have to chant “Om namO vaayu nandanaaya Om” and do the avaahana of Sri Hanumanta Devaru.   We have to give upayana daana of wheat.  We have to do the pooja of Hanumantaryami Sri Ramachandra with Shodachopachara, archane and naivedya, and vayana daana.  During Margashira Maasa, vibhutiroopa of Srihari is there.

Hanumatpooja- Achamana, Prananayamya,… shubatithou ,…….. nakshatre,  yoge, …… karane… Sri hanumadh antargata Seetapati Sri Ramachandra Preranaya Sri hanumadantargata Seetapati Sri Ramachandra preetyartham Jnaana Bhakti Vairaagyadi siddyartham hanumadvrataanga hanumatpOjaaM kariShyE |  We have to wet vastra in Kumkuma water and place that vastra on Pampa kalasha.  Then we have to do the pooja of Turmeric (arishina) for the doora with 13 granthees.  Then Avahana, Shodashopachara pooja to be done.

Hanuman dora bhandana (“ದೋರ ಬಂಧನ”) mantra –
हनूमन् दोररूपेण संस्थितो मै सर्वदा ।
सर्वापद्भ्यो रक्ष रक्ष प्रसीद कपिपुंगव ।
ಹನೂಮನ್ ದೋರರೂಪೇಣ ಸಂಸ್ಥಿತೋ ಮೈ ಸರ್ವದಾ |
ಸರ್ವಾಪದ್ಭ್ಯೋ ರಕ್ಷ ರಕ್ಷ ಪ್ರಸೀದ ಕಪಿಪುಂಗವ |
hanUman dOrarUpENa saMsthitO mai sarvadaa |
sarvaapadbhyO rakSha rakSha prasIda kapipuMgava |
———————————————————-
hanumad arGyamantra-
namastE vaayuputraaya dhvamsitaamaravairiNE | sujanaambudhichandraaya bhaviShyat brahmaNE nama: |
shrI hanumatE nama: idamarGyam samarpayaami |

हनुमद् अर्घ्यमंत्र–
नमस्ते वायुपुत्राय ध्वंसितामरवैरिणे । सुजनांबुधिचंद्राय भविष्यत् ब्रह्मणे नम: । श्री हनुमते नम: इदमर्घ्यं समर्पयामि

————————————-–
praarthane – baLitthaadi trayivEdya trirUpaaya mahaatmanE | bhaktaabhIShThapradaayaastu namastE bhaaratIpatE |

बळित्थादि त्रयिवेद्य त्रिरूपाय महात्मने ।
भक्ताभीष्ठप्रदायास्तु नमस्ते भारतीपते ।
ಬಳಿತ್ಥಾದಿ ತ್ರಯಿವೇದ್ಯ ತ್ರಿರೂಪಾಯ ಮಹಾತ್ಮನೇ |
ಭಕ್ತಾಭೀಷ್ಠಪ್ರದಾಯಾಸ್ತು ನಮಸ್ತೇ ಭಾರತೀಪತೇ |
Hanumad Vratha AcharaNa phala –

One who hears the story of Hanumadvratha with devotion will get all desires fulfilled.
By performing this vratha, Brahmin will get shastra praaveeNya in Veda Vedaanta; Kshatriyas will get raajya laabha, Vaishyaas will get wealth; shoodra will get good crop.
Those who are having diseases will be free from the diseases.
Putrapekshi will get good santhaana. Mokshapekshi will get saadhana maarga for moksha.  (MBTN Adhyaaya 1, shloka 78) ವಿಷ್ಣುರ್ಹಿ ದಾತಾ ಮೋಕ್ಷಸ್ಯ ವಾಯುಶ್ಚ ತದನುಜ್ಞಯಾ, विष्णुर्हि दाता मोक्षस्य वायुश्च तदनुज्ञया).
This vratha is shIgra phaladaayaka. Gives the result early.
|| satyaM satyaM puna: satyaM vratamEtat sumaMgalaM || – This vratha is mangalakara.  This is True.
Clarification on Hanumad Vratha/Jayanthi :

Margashira shudda trayodashi is Hanumad Vratha day.  Not Hanumad Jayanthi.      We are seeing many banners by many Hanuman temples that Hanumad Jayanthi will be celebrated.   This is not correct.  This is not jayanthi day.  This is Hanumad Vratha day, which is different from Hanumad Jayanthi.    Hanumad Jayanthi falls on Chaitra Shuddha Hunnime. 

Hanumad Vratha represents the day on which with the Brahma’s wishes, the day to be recognised the worshipping Hanuman with 13 dora vratha. Sri Ramachandra himself did the Vratha for the first time to give importance to Hanuman, Sugreeva, Vibheeshana also did in Tretayuga, followed by Draupadi as per the directions of Sri Krishna, and many have done it in the past.  Hanumad Vratha is observed on Margashira Shukla Trayodashi

Hanumad Jayanthi represents the day on which Hanumantha was born.  Hanumad Jayanthi is observed on Chaitra Hunnime

Many people  call this day as Hanuma Jayanthi.  Because they are not aware of the importance of this day.  As such, this clarification.
***
Hanumad Vruta
Dedicated to Lord Hanuman, sukla Trayodasi during Margasira maAsa is reckoned as Hanumad Vrata. This we find mostly being observed in South especially in Karnataka and Andhra Pradesh states.

On this day Lord Hanuman is exclusively worshiped by one and all for good health, peace, relief from struggles and overall prosperity.

He is worshiped on this day with a yellow coloured thread having 13 knots called Thora and worn by the devotees after pooja/rituals.

On the advice of Lord Sri Vedavyasa who had narrated the significance of this Vratha to Dharmaraja, Draupadi Devi performed this Vratha under the guidance of Lord Sri Krishna.

> Hanumad Vratha Vs Hanuman Jayanthi...

There is some confusion among the public as they assume Hanumad Vratha as Hanuman Jayanthi (the day Hanuman was born). But, both are different.

Chaithra Sukla Pournami (full moon day) in the lunar month of Chaithra maasa is purported to be the day Lord Hanuman was born celebrated as Hanuman Jayanthi. read more here HANUMAN JAYANTI 

Whereas, Hanumad Vratha (Margasira Sukla Trayodasi), is the day exclusively earmarked for worshiping Lord Hanuman.

A reference to Hanumadvratha is believed to have been made in Bhavishyottara Purana;

Worship of Lord Hanuman is prevailing in Hindu religion since Ramayana days and Lord Hanuman is one of the best known and most widely worshiped Deity. All walks of people worship Lord Hanuman regardless of affiliations.


Lord Hanuman, the personification of true and resolute devotion to Lord Sri Rama is known for his righteousness, courage, strength, valor, discriminative intelligence etc.

He is an all powerful Deity capable of eradicating grief and providing solution to the mundane problems and sufferings of the individuals.

मनोजवं मारुततुल्यवेगं
जितेन्द्रियं बुद्धिमतां वरिष्ठ ।
वातात्मजं वानरयूथमुख्यं
श्रीरामदूतं शरणं प्रपद्ये ।

Mano-Javam Maaruta-Tulya-Vegam
Jite[a-I]ndriyam Buddhi-Mataam Varishttha |
Vaata-Atmajam Vaanara-Yuutha-Mukhyam
Shriiraama-Duutam Sarannam Prapadye |

> Meaning....

Lord Hanuman is as swift as the mind and as fast as the Wind God (VaAyu);

He is the one who has conquered the senses; a master of Senses who keeps them always under his control;

foremost among the intelligentsia,

honoured for his learning, intelligence and wisdom;

who is the son (Pavana Puthra) and incarnation of the Wind God (VaAyu);

who is the chief of the army of Vanaras (Monkeys);

who is the messenger (emissary) of Lord Sri Rama;

I surrender to such mighty God, Lord Hanuman.

Yathra Yathra Raghunatha Keerthanam
Tathra Tathra Kruthamasthakanjalim
Bhashpavari Paripoorna Lochanam
Maruthim namatha Rakshasanthakam

Above prayer sloka says that,

wherever RAMA naama is sung, Hanuman is present though not visible, with his eyes full of tears (as a mark of his unstinted devotion to Lord Sri Rama) and with his hands folded in prayer/obeisance to His Lord Sri Rama.

buddhau cha nAnyo hanumatsamAnaH
pumAn kadAchit kva cha kashchanaiva ||
(Mahabharata Tatparya Nirnaya)

There is no other person equal to Hanuman in...

> knowledge,
> renunciation,
> devotion to Lord SriHari,
> fortitude,
> steadiness,
> vitality,
> strength,
> zeal and intelligence
> at any time or in any place.

Worshipping such mighty Hanuman one will be blessed with....

Buddhir balam yaso dhairyam Nirbhayatvam arogata
Ajaadyam vaak patuthvam cha Hanumath smaranaath bhavet;

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ಪಟುತ್ವಂಚ ಹನೂಮತ್ ಸ್ಮರಣಂ ಭವೇತ್ |

बुद्धिर्बलं यशोधैर्यं निर्भयत्वं अरोगता ।
अजाड्यं वाक्पटुत्वंच हनूमत् स्मरणं भवेत् ।

Above sloka from Aanjaneya Stuthi is just an example of the benefits one derives by praying Lord Hanuman. One will be blessed with,

> wisdom (Buddhi)
> strength (Balam)
> fame (Yashas)
> valor (Dhairya)
> fearlessness (Nirbhayatva)
> good health (Aarogya)
> dearth of lethargy (AjaAddya) and
> speech vigor (VaAkk-Pattutva)
by worshiping Lord Hanuman.

There is nothing that Lord Hanuman cannot bestow upon his true devotee. He is also capable of revitalizing the spiritual qualities in an individual and putting him on the right track towards the ultimate goal of salvation.
SRI RAMA JAYA RAMA JAYA JAYA RAMA...
Sri Krushnaarpanamasthu
Hari Sarvottama - Vaayu Jeevottama
Sri GururaajoVijayate
******

ಹನುಮದ್ವ್ರತ Hanumadvratha - from NARAHARI SUMADHWA

नमस्ते नमस्ते महावायुसूनो । नमस्ते नमस्ते भविष्यद् विधाता ।
नमस्ते नमस्ते महाभीष्टदाता । नमस्ते नमस्तेऽनिशं रामभक्त ।

buddhirbalam yashOdhairyam nirbhayatvam arOgatA 
ajADyam vAkpaTutvancha hanUmat smaraNam BhavEt |

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ|
ಅಜಾಡ್ಯಂ ವಾಕ್ಪಟುತ್ವಂಚ ಹನೂಮತ್ ಸ್ಮರಣಂ ಭವೇತ್ |

बुद्धिर्बलं यशोधैर्यं निर्भयत्वं अरोगता ।
अजाड्यं वाक्पटुत्वंच हनूमत् स्मरणं भवेत् ।

Hanumad Vratha Day – Margashira Shudda Trayodashi

ಹನುಮದ್ವ್ರತ

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ಪಟುತ್ವಂಚ ಹನೂಮತ್ ಸ್ಮರಣಂ ಭವೇತ್ |
ಹನುಮಂತ ದೇವರ ಸ್ಮರಣೆಯಿಂದ ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತ್ವ, ಆರೋಗ್ಯ, ವಾಕ್‌ಪಟುತ್ವ, ಇವೆಲ್ಲವೂ ತಾವಾಗಿಯೇ ಒಲಿದು ಬರುತ್ತವೆ.    ರಾಮಾಯಣದ ಸುಂದರಕಾಂಡ ಮತ್ತು ಯುದ್ಧಕಾಂಡಗಳಲ್ಲಿ ಹನುಮಂತನ ಚಾಕಚಕ್ಯತೆ, ಬಲ, ಧೈರ್ಯ ಎಲ್ಲವೂ ಕಾಣಬರುತ್ತದೆ. ಅವರ ವಾಕ್ಪಟುತ್ವವನ್ನು ಶ್ರೀ ರಾಮಚಂದ್ರನೇ ಹೊಗಳಿದ್ದಾನೆ.
ಮನೋಜವಂ ಮಾರುತತುಲ್ಯವೇಗಂ                ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ।                  ವಾತಾತ್ಮಜಂ ವಾನರಯೂತಮುಖ್ಯಂ            ಶ್ರೀರಾಮದೂತಂ ಶರಣಂ ಪ್ರಪದ್ಯೇ ।
ಮನಸ್ಸಿನ ವೇಗಕ್ಕಿಂತ ವೇಗವಾದ, ವಾಯುವಿನ ವೇಗಕ್ಕೆ ಸೋಮವಾರ, ಇಂದ್ರಿಯ ನಿಗ್ರಹವುಳ್ಳ, ಬುದ್ಧಿವಂತರಲ್ಲಿ ವರಿಷ್ಠನಾದ,  ವಾಯುಪುತ್ರನಾದ,  ವಾನರಸೇನೆಗೇ ಮುಖ್ಯವಾದ , ಶ್ರೀರಾಮದೂತನಾದ ಹನುಮಂತನನ್ನು ಶರಣು ಹೋಗುತ್ತೇನೆ.
ಹನುಮದ್ವ್ರತವನ್ನು ಮಾರ್ಗಶಿರ ಶುದ್ಧ ತ್ರಯೋದಶಿಯಂದು ಆಚರಿಸಲಾಗುತ್ತದೆ. ಆದರೆ ಕೆಲವರು ತಿಳುವಳಿಕೆಯಿಲ್ಲದೆ ಈ ದಿನವನ್ನು ಹನುಮ ಜಯಂತಿ ಎಂದು ಕರೆಯುತ್ತಾರೆ. ಇದು ತಪ್ಪು. ಹನುಮ ಜಯಂತಿ ಆಚರಣೆ ಚೈತ್ರ ಶುದ್ಧ ಹುಣ್ಣಿಮೆ ಯಂದು ಹನುಮಂತ ಅವತರಿಸಿದ ದಿನವಾದರೆ ಮಾರ್ಗಶಿರ ಶುದ್ದ ತ್ರಯೋದಶಿಯಂದು ಹನುಮದ್ ವ್ರತವನ್ನು ಬ್ರಹ್ಮದೇವರ ಆದೇಶದಂತೆ ದೇವತೆಗಳೂ ಆಚರಿಸಿ, ಪ್ರಖ್ಯಾತಗೊಳಿಸಿದ್ದಾರೆ ..
“ಹನುಮದ್ವ್ರತ” ಕಥೆಯನ್ನು ಭವಿಷ್ಯೋತ್ತರ ಪುರಾಣದಲ್ಲಿ ವಿವರಿಸಿದ್ದಾರೆ.
ಒಮ್ಮೆ ಪಾಂಡವರು ಕೌರವರ ದುರಾಸೆ ಮತ್ತು ವಂಚನೆಯಿಂದ ಹನ್ನೆರಡು ವರ್ಷಗಳ ವನವಾಸ ನಿಮಿತ್ತ, ದ್ವೈತವನದಲ್ಲಿದ್ದಾಗ ಅಲ್ಲಿಗೆ ವೇದವ್ಯಾಸರು ಬಂದರು. ಬಂದ ದೇವಶ್ರೇಷ್ಠನನ್ನು ಧರ್ಮರಾಜನು ಶೋಡಷೋಪಚಾರದಿಂದ ಪೂಜಿಸಿದನು. ಪಾಂಡವರ ಯೋಗಕ್ಷೇಮ ವಿಚಾರಿಸಿದ ವೇದವ್ಯಾಸರು ಅವರಿಗೆ ಹಲವು ಉತ್ತಮ ಉಪದೇಶ ನೀಡಿ ಹೇಳುತ್ತಾರೆ – ನಿಮಗೆ ಒಂದು ವಿಶಿಷ್ಟ ವ್ರತವನ್ನು ಹೇಳುತ್ತೇನೆ. ಅದು ಹನುಮದ್ವ್ರತ ಎಂಬ ಬಹಳ ಶ್ರೇಷ್ಠವೂ ಫಲದಾಯಕವೂ ಆದ ವ್ರತವೊಂದಿದೆ ಅದರ ಆಚರಣೆಯಿಂದ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗಿ ನಷ್ಟವಾದ ರಾಜ್ಯ ಪುನರ್ ಪ್ರಾಪ್ತಿಯಾಗುತ್ತದೆ ಎಂದರು. ಆಗ ಧರ್ಮರಾಜನು ಕೇಳುತ್ತಾನೆ – ಆ ವ್ರತವಾವುದು ? ಅದರ ಆಚರಣೆ ಹೇಗೆ ? ಯಾರು ದೇವತೆ? ಹಿಂದೆ ಯಾರು ಯಾರು ಈ ವ್ರತವನ್ನು ಮಾಡಿ ಉದ್ಧಾರವಾಗಿದ್ದಾರೆ ಎಂದನು. ಆಗ ವೇದವ್ಯಾಸರು ಹೇಳುತ್ತಾರೆ – ಈ ವ್ರತದ ಹೆಸರು – ಹನುಮದ್ವ್ರತ – ಇದನ್ನು ಮಾರ್ಗಶಿರ ಶುದ್ಧ ತ್ರಯೋದಶಿ ದಿನ ಆಚರಿಸತಕ್ಕದ್ದು. ಇದರ ದೇವತೆ ವಾಯುವಿನ ಅವತಾರವಾದ ಹನುಮಂತ ದೇವರು. ‌ಭಕ್ತಿ ಶ್ರದ್ಧೆಯಿಂದ ಹನುಮಂತ ದೇವರನ್ನು ಉಪಾಸನೆ ಮಾಡಬೇಕು, ಹಿಂದೆ ಈ ವ್ರತವನ್ನು ಶ್ರೀ ರಾಮಚಂದ್ರನೇ ಮಾಡಿ ತನ್ನ ಭಕ್ತನ ಅನುಗ್ರಹಿಸಿದ್ದ ಎಂದರು.
ಒಮ್ಮೆ ಹನುಮಂತ ದೇವರು ಸೂರ್ಯನಿಗೆ ರಾಹುಗ್ರಹಣವಾದ ಸಂದರ್ಭದಲ್ಲಿ ಮೇಲೆ ಹಾರಿದಾಗ, ಸ್ವರ್ಗಾಧಿಪತಿಯು ಸೂರ್ಯನನ್ನು ಹನುಮಂತ ಹಿಡಿಯಬಹುದೆಂದು ಭಾವಿಸಿ, ವಜ್ರಾಯುಧ ಪ್ರಹಾರ ಮಾಡಿದಾಗ, ಹನುಮಂತ ಲೋಕರೀತ್ಯ ಪೆಟ್ಟಾದವನಂತೆ ಕೆಳಗೆ ಬಿದ್ದನು. ಆಗ ವಾಯುದೇವರು ಹನುಮಂತನನ್ನು ಕರೆದುಕೊಂಡು ಒಂದು ಗುಹೆಗೆ ಪ್ರವೇಶಿಸಿದರು. ಆಗ ಪ್ರಪಂಚವೆಲ್ಲ ಉಸಿರಾಟದ ತೊಂದರೆಗೊಳಗಾಯಿತು. ಎಲ್ಲಾ ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಲು, ಬ್ರಹ್ಮದೇವರು ವಾಯುವಿನ ಬಳಿಗೆ ಬಂದು ನಿನ್ನ ಮಗನಿಗೆ ಯಾವ ಆಯುಧದಿಂದಲೂ ಏನೂ ಆಗುವುದಿಲ್ಲ, ಅವನು ಚಿರಂಜೀವಿಯಾಗುತ್ತಾನೆ, ಮತ್ತು ಮಾರ್ಗಶಿರ ಶುದ್ದ ತ್ರಯೋದಶಿ ದಿನದಂದು ಹನುಮದ್ ವ್ರತ ವನ್ನು ಆಚರಿಸಿದವರಿಗೆ ಸಕಲ ಅಭೀಷ್ಟವೂ ಲಭ್ಯವಾಗುವುದು ಎಂದು ವರವನ್ನು ಕೊಟ್ಟಿರುತ್ತಾರೆ.
ಪಾಂಡವರಿಗೆ ವನವಾಸವಾಗಲು ಹನುಮಂತನ ಅವಕೃಪೆ ಕಾರಣ :
ಹಿಂದೆ ಒಮ್ಮೆ ದ್ರೌಪದಿಯು ಕೃಷ್ಣ ಪರಮಾತ್ಮನ ಅನುಜ್ಜೆಯಂತೆ ಹನುಮದ್ವ್ರತವನ್ನು ಆಚರಿಸಿದ್ದಳು. ವ್ರತವನ್ನಾಚರಿಸಿದ ನಂತರ ತನ್ನ ಕೈಗೆ ದೋರವನ್ನು ಧರಿಸಿದ್ದಳು. ಈ ದೋರವನ್ನು ಗಮನಿಸಿದ ಅರ್ಜುನನು (ಕಲಿಯ ಆವೇಶದಿಂದ) , ನಾನು ಆ ಹನುಮಂತನನ್ನು ನನ್ನ ರಥದ ದ್ವಜಕ್ಕೆ ಕಟ್ಟಿರುವೆ. “ಅವನೊಬ್ಬ ಸಾಮಾನ್ಯ ಮಂಗ ” ಎಂದು ಹೇಳಿ ಆ ದೋರವನ್ನು ಬಿಸಾಡಲು ಹೇಳಿದನು. ಹನುಮಂತ ದೇವರನ್ನು ನೆನೆದರೇ ಬುದ್ಧಿ, ಬಲ, ಯಶಸ್ಸು, ಧೈರ್ಯ, ಎಲ್ಲವೂ ಪ್ರಾಪ್ತವಾಗುತ್ತದೆಂದಾಗ, ಅರ್ಜುನ ಕಲಿ ಪ್ರಭಾವಕ್ಕೊಳಗಾಗಿಯೇ ಅದನ್ನು ಬಿಸಾಡಲು ಹೇಳಿದನು. ಇದೇ ಕಾರಣದಿಂದ ಪಾಂಡವರು ವನವಾಸಕ್ಕೆ ದ್ಯೂತ ನಿಮಿತ್ತ ಹೋಗಬೇಕಾಯಿತು, ಎಂದು ವೇದವ್ಯಾಸರು ಹೇಳಿದಾಗ ದ್ರೌಪದಿಯೂ ಕೂಡ ಆ ಘಟನೆಯನ್ನು ನೆನಪಿಸಿದಳು.
ಈ ವ್ರತವನ್ನು ಹಿಂದೆ ಯಾರು ಮಾಡಿರುತ್ತಾರೆ ?
ಹಿಂದೆ ಶ್ರೀ ರಾಮಚಂದ್ರನು, ಹನುಮಂತನಿಗೆ ಅನುಗ್ರಹಿಸಲು, ಹನುಮನ ಪ್ರಾರ್ಥನೆಯಂತೆ ಮಾಡಿದನು. ದ್ರೌಪದಾದೇವಿ ಮಾಡಿದ್ದಳು. ಸುಗ್ರೀವ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಮಾಡಿದ್ದನು. ವಿಭೀಷಣನು ಈ ವ್ರತವನ್ನು ಮಾಡಿ ಲಂಕಾಧಿಪನಾದನು.
ವ್ರತದ ಕ್ರಮ
ಹನುಮಂತದೇವನನ್ನು ಹದಿಮೂರು ಗ್ರಂಥಿಗಳುಳ್ಳ ಹಳದಿ ವರ್ಣದ ದಾರದಲ್ಲಿ ಓಂ ನಮೋ ವಾಯುನಂದನಾಯ ಓಂ ಎಂದು ಆವಾಹಿಸಬೇಕು. ಹನುಮಂತನ ಅಂತರ್ಯಾಮಿಯಾದ ಶ್ರೀರಾಮಚಂದ್ರನನ್ನು ಷೋಡಶೋಪಚಾರಗಳಿಂದ ಅರ್ಚಿಸಿ ನಂತರ ನೈವೇದ್ಯಾದಿಗಳಿಂದ ಪೂಜಿಸಿ ವಾಯನದಾನವನ್ನು ಮಾಡಬೇಕು. ಗೋಧೂಮ (ಗೋಧಿ) ಧಾನ್ಯವನ್ನು ವಾಯನದಲ್ಲಿ ಕೊಡಬೇಕು. ಈ ದಿನ ಹನುಮಂತ ದೇವರನ್ನು ಪೂಜಿಸಿ, ಹದಿಮೂರು ಘಂಟುಗಳುಳ್ಳ ಹನುಮದೋರವನ್ನು ಕಟ್ಟಿಕೊಳ್ಳಬೇಕು
. ಈ ವ್ರತವನ್ನು ಹದಿಮೂರು ವರ್ಷಗಳ ಕಾಲ ಮಾಡಿ ನಂತರ ಉದ್ಯಾಪನೆಯನ್ನು ಮಾಡಬೇಕು. ಈ ವ್ರತವನ್ನು ಮಾರ್ಗಶಿರಮಾಸ ಶುಕ್ಲ ತ್ರಯೋದಶಿಯಂದು ರೋಹಿಣೀ ನಕ್ಷತ್ರವಿರುವಾಗ ಆಚರಿಸಬೇಕು. ಈ ವ್ರತಾಚರಣೆಯನ್ನು ಪೂರ್ವವಿದ್ಧವಾದ (ದ್ವಾದಶಿಯುಕ್ತ) ತ್ರಯೋದಶಿಯಲ್ಲಿ ಮಾಡುವುದು ಪ್ರಶಸ್ತವಲ್ಲ.
ಪಂಪಾ ಪೂಜೆ
ಹನುಮಂತದೇವರು ಋಷ್ಯಮೂಕಪರ್ವತದಲ್ಲಿ ವಾಸವಾಗಿದ್ದರು. ಋಷ್ಯಮೂಕ ಪರ್ವತದ ಪಂಪಾಪತಿಯಾದ ವಿರೂಪಾಕ್ಷನು ವಾಸವಾಗಿರುವ ಜಾಗೃತ ಸ್ಥಳವಾಗಿದೆ. ಪಂಪಾದೇವಿಯು ತನ್ನ ನಾಮೋಚ್ಛಾರಣ ಮಾತ್ರದಿಂದಲೇ ಪಾಪಗಳನ್ನು ತಿರುವು ಮುರುವು ಮಾಡುವವಳು. ಹನುಮನ ಪೂಜೆಯನ್ನು ಮಾಡುವ ಪೂಜಕನು ಮೊದಲು ಪಂಪಾಸ್ಮರಣೆಯಿಂದ ಪಾಪಗಳನ್ನು ದೂರೀಕರಿಸಿ ನಂತರ ಚಿತ್ತಶುದ್ಧನಾಗಿ ಹನುಮನ ಪೂಜೆಯನ್ನು ಮಾಡಲೆಂದೇ ಪಂಪಾದೇವಿಯ ಪೂಜೆಯನ್ನು ವಿಧಿಸಲಾಗಿದೆ. ಹೀಗೆ ಆವಾಹಿತಳಾದ ಪಂಪಾದೇವಿಯನ್ನು ಷೋಡಶೋಪಚಾರಗಳಿಂದ ಅರ್ಚಿಸಬೇಕು.
ಹನುಮದ್ವ್ರತ ಆಚರಣ ಫಲ : ಈ ವ್ರತವು ಶೀಘ್ರ ಫಲದಾಯಕ ಮತ್ತು ಮಂಗಳಾಕರ. ಹನುಮದ್ವ್ರತ ಕಥೆಯನ್ನು ಆಲಿಸುವುದರಿಂದ ಇಷ್ಟಾರ್ಥ ಪ್ರಾಪ್ತಿ. ಈ ವ್ರತಾಚರಣೆಯಿಂದ ಬ್ರಾಹ್ಮಣನು ವೇದ ವೇದಾಂತ ಪ್ರಾವೀಣ್ಯತೆ, ಕ್ಷತ್ರಿಯನು ರಾಜ್ಯಲಾಭ, ವೈಶ್ಯರು ಧನ, ಶೂದ್ರರು ಉತ್ತಮ ಬೆಳೆ ಪಡೆಯುವರು. ಪುತ್ರಾರ್ತಿಯು ಪುತ್ರರನ್ನೂ, ಮೋಕ್ಷಾಪೇಕ್ಷಿಯು ಸಾಧನ ಮಾರ್ಗವನ್ನು, ಪಡೆಯುವನು.
ವೇದವ್ಯಾಸರ ಸಲಹೆಯಂತೆ ಪಾಂಡವರೂ ಈ ವ್ರತವನ್ನಾಚರಿಸಿದರು.
end
***
ದೋರ ಬಂಧನ ಮಂತ್ರ
ಹನೂಮನ್ ದೋರರೂಪೇಣ ಸಂಸ್ಥಿತೋ ಮೈ ಸರ್ವದಾ |
ಸರ್ವಾಪದ್ಭ್ಯೋ ರಕ್ಷ ರಕ್ಷ ಪ್ರಸೀದ ಕಪಿಪುಂಗವ |
ಹನುಮದ್ ಅರ್ಘ್ಯಮಂತ್ರ –
ನಮಸ್ತೇ ವಾಯುಪುತ್ರಾಯ ಧ್ವಂಸಿತಾಮರವೈರಿಣೇ |
ಸುಜನಾಂಬುಧಿಚಂದ್ರಾಯ ಭವಿಷ್ಯತ್ ಬ್ರಹ್ಮಣೇ ನಮ: |
ಶ್ರೀ ಹನುಮತೇ ನಮ: ಇದಮರ್ಘ್ಯಂ ಸಮರ್ಪಯಾಮಿ |
 
ಹನುಮದ್ವ್ರತಂ
ಶ್ರೀಗುರುಭ್ಯೋ ನಮ: | ಹರಿ: ಓಂ |   ಆಚಮನ, ಪ್ರಾಣಾನಾಯಮ್ಯ | ದೇಶಕಾಲೌ ಸಂಕೀರ್ತ್ಯ, ಶುಭೇ ಶೋಭನೇ ಮುಹೂರ್ತೇ…… ಸಂವತ್ಸರೇ ಹೇಮಂತಋತೌ ಮಾರ್ಗಶಿರ ಮಾಸೇ ಶುಕ್ಲಪಕ್ಷೇ ತ್ರಯೋದಶ್ಯಾಂ, …. ವಾಸರೇ, …. ಶುಭ ನಕ್ಷತ್ರೆ, ……ಯೋಗೇ, …… ಕರಣೇ…. ಶ್ರೀಮದ್ಧನುಮದಂತರ್ಗತ ಶ್ರೀ ಸೀತಾ ರಾಮಚಂದ್ರ ಪ್ರೇರಣಯ ಹನುಮದಂತರ್ಗತ ಶ್ರೀ ಸೀತಾರಮಚಂದ್ರ ಪ್ರೀತ್ಯರ್ಥ್ಯಂ ಹನುಮದ್ವ್ರತಂ ಕರಿಷ್ಯೇ || ತದಂಗತ್ವೇನ ಪಂಪಾಪೂಜಾಂ ಕರಿಷ್ಯೇ |
ಗಣಪತಿ ಪೂಜೆ , ಕಲಶ ಪೂಜೇ, ಪಂಪಾ ಪೂಜೆ ಮಾಡಬೇಕು.
ಪಂಪಾಪೂಜೆಯಲ್ಲಿ ಆವಾಹನ, ಆಸನಂ, ಅರ್ಘ್ಯಂ, ಪಾದ್ಯಂ, ಆಚಮನ, ಪಂಚಾಮ್ರುತ, ಸ್ನಾನ, ವಸ್ತ್ರಂ, ಗಂಧಂ, ಹರಿದ್ರಾ ಕುಂಕುಮ ಸೌಭಾಗ್ಯಂ, ಪುಷ್ಪಂ, ಸಮರ್ಪಣ ಮಾಡಿ ಅಂಗಪೂಜ, ಧೂಪ, ದೀಪ, ನೈವೇದ್ಯ, ತಾಂಬೂಲ, ಎಲ್ಲವನ್ನು ಪಂಪಾ ಕಲಶಕ್ಕೆ ಮಾಡಬೇಕು.
ನಂತರ ಹನುಮತ್ಪೂಜ :
ಮತ್ತೆ ಆಚಮನ, ಪ್ರಾಣಾನಾಯಮ್ಯ, ದೇಶಕಾಲೌ ಸಂಕೀರ್ತ್ಯ, ಶ್ರೀ ಹನುಮದ್ಭೀಮ ಮಧ್ವಾಂತರ್ಗತ ಶ್ರೀ ಸೀತಾಪತಿ ರಾಮಚಂದ್ರ ಪ್ರೇರಣಯ ಶ್ರೀ ಸೀತಾಪತಿ ರಾಮಚಂದ್ರ ಪ್ರೀತ್ಯರ್ಥಂ ಜ್ಜಾನ ಭಕ್ತಿ ವೈರಾಗ್ಯ ಸಿದ್ಧ್ಯರ್ಥಂ ಹನುಮತ್ಪೂಜಾಂ ಕರಿಷ್ಯೇ.

ಕುಂಕುಮೋದಕ ಸಮ್ಮರ್ದಿತ ನೂತನವಸ್ತ್ರಂ ಪಂಪಕಲಶೋಪರಿ ಸಂಸ್ಥಾಪ್ಯ, ತದುಪರಿ ಹರಿದ್ರಾಸವರ್ಣಕಂ ತ್ರಯೋದಶ ಗ್ರಂಥಿಯುಕ್ತಂ ಹನುಮದ್ಧೋರಕದ್ವಯಂ ನ್ಯಸೇತ್ | ತತ್ರೈವ ಪೂಜಂ ಕರ್ತವ್ಯಾ |
(ಕುಂಕುಮದಲ್ಲಿ ಅದ್ದಿದ ಹೊಸವಸ್ತ್ರವನ್ನು ಪಂಪಾಕಲಶದ ಮೇಲಿಟ್ಟು, ಅದರ ಮೇಲೆ ಅರಿಶಿನ ಬಣ್ಣದ ಹದಿಮೂರು ಗ್ರಂಥಿಗಳುಳ್ಳ ದಾರವನ್ನು ಇಟ್ಟು ಪೂಜಿಸಬೇಕು)
ಪೀಠ ಪೂಜೆ, ಪ್ರಾಣ ಪ್ರತಿಷ್ಟೆ, ತತ್ವನ್ಯಾಸ, ಮಾತೃಕಾನ್ಯಾಸ, ಎಲ್ಲವನ್ನೂ ಮಾಡಬೇಕು.
ನಂತರ ಧ್ಯಾನಂ :
ಆಂಜನೇಯಂ ವಾಯುಸೂನುಂ ರಾಮಕಾರ್ಯ ಧುರಂಧರಂ |
ಲಂಘಿತಾಬ್ದಿಂ ರಾಕ್ಷಸಾರಿಂ ತಂ ಧ್ಯಾಯಮ್ಯತ್ರ ಸಾದರಂ |
ಹನುಮತೇ ನಮ: | ಧ್ಯಾನಂ ಸಮರ್ಪಯಾಮಿ |
ನಂತರ ಕ್ರಮವಾಗಿ, ಆವಾಹನಂ, ಆಸನಂ, ಪಾದ್ಯಂ, ಅರ್ಘ್ಯಂ, ಆಚಮನಂ, ಮಧುಪರ್ಕಂ, ಅಭ್ಯಂಗಂ, ಪಂಚಾಮೃತಂ, ಸ್ನಾನಂ, ವಸ್ತ್ರಂ, ಉತ್ತರೀಯಂ, ಉಪವೀತಂ, ಗಂಧಂ, ಅಕ್ಷತಾನ್, ಆಭರಣಂ, ಪುಷ್ಪಂ,
ಇವುಗಳೆಲ್ಲವನ್ನೂ ಸಮರ್ಪಣೆ ಮಾಡಬೇಕು.

ಹನುಮದ್ವ್ರತದಂದು ಹದಿಮೂರು ಗ್ರಂಥಿಗಳುಳ್ಳ ದೋರ ಸ್ಥಾಪನೆ ಮಾಡಬೇಕು.
ಗ್ರಂಥಿಪೂಜ :
ವಾರನರಕ್ಷಕಾಯ ನಮ: ಪ್ರಥಮಗ್ರಂಥಿಂ ಪೂಜಯಾಮಿ
ರಾಕ್ಷಸಂಹಾರಕಾಯ ನಮ: ದ್ವಿತೀಯ ಗ್ರಂಥಿಂ ಪೂಜಯಾಮಿ
ತೀರ್ಣಸಿಂಧವೇ ನಮ: ತೃತೀಯ ಗ್ರಂಥಿಂ ಪೂಜಯಾಮಿ
ಸೀತಾಶೋಕಹಾರಿಣೇ ನಮ: ಚತುರ್ಥ ಗ್ರಂಥಿಂ ಪೂಜಯಾಮಿ
ರಾಮ ದೂತಾಯ ನಮ: ಪಂಚಮ ಗ್ರಂಥಿಂ ಪೂಜಯಾಮಿ
ಸತತ ಬ್ರಹ್ಮಚಾರಿಣೇ ನಮ: ಷಷ್ಟ ಗ್ರಂಥಿಂ ಪೂಜಯಾಮಿ
ರಾವಣಗರ್ವಾರ್ಪಹರ್ತೇ ನಮ: ಸಪ್ತಮ ಗ್ರಂಥಿಂ ಪೂಜಯಾಮಿ.
ಭವಿಷ್ಯದ್ ಬ್ರಹ್ಮಣೇ ನಮ: ಅಷ್ಟಮ ಗ್ರಂಥಿಂ ಪೂಜಯಾಮಿ
ಅವಿದ್ಯಾ ಸಂಹರ್ತೇ ನಮ: ನವಮ ಗ್ರಂಥಿಂ ಪೂಜಯಾಮಿ
ಭಕ್ತಾಭೀಷ್ಟಪ್ರದಾಯಕಾಯ ನಮ: ದಶಮ ಗ್ರಂಥಿಂ ಪೂಜಯಾಮಿ
ಸಕಲದೇವತಾಸ್ತುತ್ಯಾಯ ನಮ: ಏಕಾದಶ ಗ್ರಂಥಿಂ ಪೂಜಯಾಮಿ
ಜೀವೋತ್ತಮಾಯ ನಮ: ದ್ವಾದಶ ಗ್ರಂಥಿಂ ಪೂಜಯಾಮಿ
ವಾಯುಪುತ್ರಾಯ ನಮ: ತ್ರಯೋದಶ ಗ್ರಂಥಿಂ ಪೂಜಯಾಮಿ
ಅಂಗಪೂಜಾ :
ವಾತಾತ್ಮಜಾಯ ನಮ: ಪಾದೌ ಪೂಜಯಾಮಿ
ಅಂಜನಾನಂದನಾಯ ನಮ: ಜಂಘೇ ಪೂಜಯಾಮಿ
ಗಂಧಮಾದನಧಾರಿಣೇ ನಮ: ಕಟಿಂ ಪೂಜಯಾಮಿ
ಸೀತಾಶೋಕವಿನಾಶಕಾಯ ನಮ: ಮಧ್ಯಂ ಪೂಜಯಾಮಿ
ಕಪೀಶ್ವರಾಯ ನಮ: ನಾಭಿಂ ಪೂಜಯಾಮಿ
ಜಗದ್ಧಾತ್ರೇ ನಮ: ಉದರಂ ಪೂಜಯಾಮಿ
ವಿಶಾಲವಕ್ಷಸೇ ನಮ: ಹೃದಯಂ ಪೂಜಯಾಮಿ
ಸುಗ್ರೀವಪ್ರಿಯಾಯ ನಮ: ಕಂಟಂ ಪೂಜಯಾಮಿ
ದಶಾನನಗರ್ವಭಂಜನಾಯ ನಮ: ವಕ್ತ್ರಂ ಪೂಜಯಾಮಿ
ಪಿಂಗಾಕ್ಷಾಯ ನಮ: ನೇತ್ರೇ ಪೂಜಯಾಮಿ
ಸಕಲಾಗಮಸಂಸ್ತು ತಾಯ ನಮ: ಸರ್ವಾಂಗಂ ಪೂಜಯಾಮಿ |
ಪತ್ರ ಪೂಜಾ
ವಾತಾತ್ಮಜಾಯ ನಮ: ಪಲಾಶ ಪತ್ರಂ ಸಮರ್ಪಯಾಮಿ
ಅಂಜನಾನಂದನಾಯ ನಮ: ಔದುಂಬರ ಪತ್ರಂ ಸಮರ್ಪಯಾಮಿ
ಸಿಂಧುಲಂಘನಕರ್ತ್ರೇ ನಮ: ಅಶ್ವತ್ಥ ಪತ್ರಂ ಸಮರ್ಪಯಾಮಿ
ಉತ್ಕೃಷ್ಟವಿಕ್ರಮಾಯ ನಮ: ಭೃಂಗರಾಜ ಪತ್ರಂ ಸಮರ್ಪಯಾಮಿ
ಗಂಧಮಾದನಧಾರಿಣೇ ನಮ: ಜಟಾಧರ ಪತ್ರಂ ಸಮರ್ಪಯಾಮಿ
ಸೀತಾಶೋಕವಿನಾಶಕಾಯ ನಮ: ಅಶೋಕಪತ್ರಂ ಸಮರ್ಪಯಾಮಿ
ಕಪೀಶ್ವರಾಯ ನಮ: ಕಪಿತ್ಥಪತ್ರಂ ಪತ್ರಂ ಸಮರ್ಪಯಾಮಿ
ಜಗದ್ಧಾತ್ರೇ ನಮ: ವಟಪತ್ರಂ ಪತ್ರಂ ಸಮರ್ಪಯಾಮಿ
ವಿಶಾಲವಕ್ಷಸೇ ನಮ: ಆಮ್ರ ಪತ್ರಂ ಸಮರ್ಪಯಾಮಿ
ಸುಗ್ರೀವಪ್ರಿಯಾಯ ನಮ: ನಾಗವಲ್ಲೀಪತ್ರಂ ಸಮರ್ಪಯಾಮಿ
ದಶಾನನಗರ್ವಭಂಜನಾಯ ನಮ: ಅಪಾಮಾರ್ಗ ಪತ್ರಂ ಸಮರ್ಪಯಾಮಿ
ಪಿಂಗಾಕ್ಷಾಯ ನಮ: ಕರವೀರಪತ್ರಂ ಪತ್ರಂ ಸಮರ್ಪಯಾಮಿ
ಸಕಲಾಗಮಸಂಸ್ತು ತಾಯ ನಮ: ಪುನ್ನಾಗಪತ್ರಂ ಸಮರ್ಪಯಾಮಿ |
ಪುಷ್ಪ ಪೂಜಾ
ವಾನರರಕ್ಷಕಾಯ ನಮ: ಪದ್ಮಪುಷ್ಪಂ ಸಮರ್ಪಯಾಮಿ
ರಾಕ್ಷಸಸಂಹಾರಕಾಯ ನಮ: ಜಾತೀ ಪುಷ್ಪಂ ಸಮರ್ಪಯಾಮಿ
ತೀರ್ಣಸಿಂಧವೇ ನಮ: ಕಲ್ಹಾರ ಪುಷ್ಪಂ ಸಮರ್ಪಯಾಮಿ
ರಾಮದೂತಾಯ ನಮ: ಬಕುಲ ಪುಷ್ಪಂ ಸಮರ್ಪಯಾಮಿ
ಕವಲೀಕೃತಸೂರ್ಯಮಂಡಲಾಯ ನಮ: ಶತ ಪುಷ್ಪಂ ಸಮರ್ಪಯಾಮಿ
ಚಿರಕಾಲ ಜೀವಿತಾಯ ನಮ: ಪುನ್ನಾಗ ಪುಷ್ಪಂ ಸಮರ್ಪಯಾಮಿ
ಸತತ ಬ್ರಹ್ಮಚಾರಿಣೆ ನಮ: ಕರವೀರ ಪುಷ್ಪಂ ಸಮರ್ಪಯಾಮಿ
ರಾವಣಗರ್ವಾಪಹರ್ತ್ರೇ ನಮ: ದತ್ತೂರ ಪುಷ್ಪಂ ಸಮರ್ಪಯಾಮಿ
ಭವಿಷ್ಯದ್ ಬ್ರಹ್ಮಣೇ ನಮ: ಕುಂದ ಪುಷ್ಪಂ ಸಮರ್ಪಯಾಮಿ
ಅವಿದ್ಯಾ ಸಂಹರ್ತ್ರೇ ನಮ: ಮಲ್ಲಿಕಾಪುಷ್ಪಂ ಸಮರ್ಪಯಾಮಿ
ಭಕ್ತಾಭೀಷ್ಟಪ್ರದಾಯಕಾಯ ನಮ: ಮುನಿಪುಷ್ಪಂ ಸಮರ್ಪಯಾಮಿ
ಸಕಲದೇವತಾಸ್ತುತ್ಯಾಯ ನಮ: ಕರ್ಣಿಕಾರಪುಷ್ಪಂ ಸಮರ್ಪಯಾಮಿ
ಧೂಪಂ :
ವನಸ್ಪತ್ಯುದ್ಭವೋ ದಿವ್ಯೋ ಗಂದಾಡ್ಯೋ ಗಂದಮುತ್ತಮಂ |
ಆಘ್ರೇಯ ಸರ್ವದೇವಾನಾಂ ಧೂಪೋಽಯಂ ಪ್ರತಿಗೃಹ್ಯತಾಂ |
ಓಂ ಹನುಮತೇ ನಮ: ಧೂಪಮಾಘ್ರಾಪಯಾಮಿ

ಏಕಾರತಿ
ಅಜ್ಜಾನತಿಮಿರಚ್ಚೇದಿನ್ ಪ್ರಕಾಶಿತ ದಿಗಂತರ
ದೀಪಂ ಗೃಹಾಣ ದೇವೇಶ ವಾಯುಪುತ್ರ ನಮೋಸ್ತುತೇ |
ಹನುಮತೇ ನಮ: ಏಕಾರ್ತಿಕ್ಯ ದೀಪಂ ದರ್ಶಯಾಮಿ
ನೈವೇದ್ಯಂ
ನಾನಾಭಕ್ಷವಿಚಿತ್ರಾನ್ನಂ ಗೋಘ್ರುತಾಕ್ಷಂ ಸುಪಾಯಸಂ | ನಾನಾಶಾಕಸಮಾಯುಕ್ತಂ ನೈವೇದ್ಯಂ ಪ್ರತಿಗೃಹ್ಯತಾಂ | ಹನುಮದಂತರ್ಗತ ಸೀತಾಪತೇ ಶ್ರೀ ರಾಮಚಂದ್ರಾಯ ನಮ: |
ನೈವೇದ್ಯಂ ಸಮರ್ಪಯಾಮಿ | ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಲಾನಂ ಸಮರ್ಪಯಾಮಿ | ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ |

ತಾಂಬೂಲಂ ಸಮರ್ಪಯಾಮಿ
ಸುವರ್ಣದಕ್ಷಿಣಾಂ ಸಮರ್ಪಯಾಮಿ
ನೀರಾಜನಂ ಸಮರ್ಪಯಾಮಿ
ಅಥ ಹನುಮನ್ನೂತನ ದೋರ ಗ್ರಹಣ ಮಂತ್ರ
(ದಾರ ಕಟ್ಟಿಕೊಳ್ಳುವುದು)
ಹನುಮನ್ ದೋರರೂಪೇಣ ಸಂಸ್ಥಿತೋ ಮಯಿ ಸರ್ವದಾ
ಸರ್ವಾಪದ್ಭ್ಯೋ ರಕ್ಷರಕ್ಷ ಪ್ರಸೀದ ಕಪಿಪುಂಗವ|
ನೂತನಂ ದೋರಮಾವಾಹ್ಯ ಯಥಾ ಶಕ್ತ್ಯಾಭಿಪೂಜ್ಯ ಚ |
ಯತೋಽಹಂ ಧೃತವಾನಸ್ಮಿ ಜೀರ್ಣದೋರಮಮುಂ ತ್ಯಜೇ |
ನಂತರ ವಾಯನದಾನ

ನಂತರ ಪ್ರಾರ್ಥನ:
ಬಳಿತ್ಥಾದಿ ತ್ರಯಿವೇದ್ಯ ತ್ರಿರೂಪಾಯ ಮಹಾತ್ಮನೇ |
ಭಕ್ತಾಭೀಷ್ಠಪ್ರದಾಯಾಸ್ತು ನಮಸ್ತೇ ಭಾರತೀಪತೇ |
 
ನಮಸ್ತೇ ಪ್ರಾಣೇಶ ಪ್ರಣತ ವಿಭವಾಯಾವನಿಮಗಾಹ
ನಮಃ ಸ್ವಾಮಿನ್ ರಾಮಪ್ರಿಯತಮ ಹನೂಮಾನ್ ಗುರುಗುಣ |
ನಮಸ್ತುಭ್ಯಂ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್
ನಮ: ಶ್ರೀಮನ್ ಮಧ್ವ ಪ್ರದಿಶ ಸುದೃಶಮ್ ನೊ ಜಯ ಜಯ |

हनुमानञ्जनसूनुर्वायुपुत्रो महाबलः ।
रामेष्टः फाल्गुनसखः पिङ्गाक्षोऽमितविक्रमः ॥१॥
उदधिक्रमणश्चैव सीताशोकविनाशनः ।
लक्ष्मणप्राणदाताश्च दशग्रीवस्य दर्पहा ॥२॥
ಹನೂಮಾನ್ ಅಂಜನಾಸೂನು: ವಾಯುಪುತ್ರೋ ಮಹಾಬಲ: |
ರಾಮೇಷ್ಟ: ಫಲ್ಗುನ ಸಖ: ಪಿಂಗಾಕ್ಷೋಽಮಿತವಿಕ್ರಮ:
ಉದಧಿಕ್ರಮಣಶ್ಚೈವ ಸೀತಾಶೋಕವಿನಾಶನ: |
ಲಕ್ಷ್ಮಣ ಪ್ರಾಣದಾತಾಶ್ಚ ದಶಗ್ರೀವಸ್ಯ ದರ್ಪಹ: |

hanUmaan aMjanaasUnu: vaayuputrO mahaabala: |
raamEShTa: Palguna sakha: piMgaakShO&mitavikrama: |
udadhikramaNashchaiva sItaashOkavinaashana: |
lakShmaNa praaNadaataashcha dashagrIvasya darpaha: |

   ||  shrI hanumad vrataM saMpUrNaM  ||
          || ಶ್ರೀ ಹನುಮದ್ ವ್ರತಂ ಸಂಪೂರ್ಣಂ ||
***

ಹನುಮದ್ವ್ರತವನ್ನು ಮಾರ್ಗಶಿರ ಶುದ್ಧ ತ್ರಯೋದಶಿಯಂದು ಆಚರಿಸಲಾಗುತ್ತದೆ. ಆದರೆ ಕೆಲವರು ತಿಳುವಳಿಕೆಯಿಲ್ಲದೆ ಈ ದಿನವನ್ನು ಹನುಮ ಜಯಂತಿ ಎಂದು ಕರೆಯುತ್ತಾರೆ. ಇದು ತಪ್ಪ. ಹನುಮ ಜಯಂತಿ ವೈಶಾಖ ಬಹುಳ ದಶಮಿ ಯಂದು. ಮಾರ್ಗಶಿರ ಶುದ್ದ ತ್ರಯೋದಶಿಯಂದು ಹನುಮದ್ ವ್ರತ ಆಚರಿಸಲು ಸೂಕ್ತ ಕಾರಣವಿದೆ.

ವೇದವ್ಯಾಸರು ಪಾಂಡವರು ದ್ವೈತವನದಲ್ಲಿದ್ದಾಗ ಹನುಮದ್ವ್ರತದ ಕಥೆಯನ್ನು ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು..

ಒಮ್ಮೆ ಹನುಮಂತ ದೇವರು ಸೂರ್ಯನಿಗೆ ರಾಹುಗ್ರಹಣವಾದ ಸಂದರ್ಭದಲ್ಲಿ ಮೇಲೆ ಹಾರಿದಾಗ, ಸ್ವರ್ಗಾಧಿಪತಿಯು ಸೂರ್ಯನನ್ನು ಹನುಮಂತ ಹಿಡಿಯಬಹುದೆಂದು ಭಾವಿಸಿ, ವಜ್ರಾಯುಧ ಪ್ರಹಾರ ಮಾಡಿದಾಗ, ಹನುಮಂತ ಲೋಕಾ ರೀತ್ಯ ಪೆಟ್ಟಾದವನಂತೆ ಕೆಳಗೆ ಬಿದ್ದನು. ಆಗ ವಾಯುದೇವರು ಹನುಮಂತನನ್ನು ಕರೆದುಕೊಂಡು ಒಂದು ಗುಹೆಗೆ ಪ್ರವೇಶಿಸಿದರು. ಆಗ ಪ್ರಪಂಚವೆಲ್ಲ ಉಸಿರಾಟದ ತೊಂದರೆಗೊಳಗಾಯಿತು. ಎಲ್ಲಾ ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಲು, ಬ್ರಹ್ಮದೇವರು ವಾಯುವಿನ ಬಳಿಗೆ ಬಂದು ನಿನ್ನ ಮಗನಿಗೆ ಯಾವ ಆಯುಧದಿಂದಲೂ ಏನೂ ಆಗುವುದಿಲ್ಲ, ಅವನು ಚಿರಂಜೀವಿ ಯಾಗುತ್ತಾನೆ, ಮತ್ತು ಮಾರ್ಗಶಿರ ಶುದ್ದ ತ್ರಯೋದಶಿ ದಿನದಂದು “/ಹನುಮದ್ ವ್ರತ” ವನ್ನು* ಆಚರಿಸಿದವರಿಗೆ ಸಕಲ ಅಭೀಷ್ಟವೂ ಲಭ್ಯವಾಗುವುದು ಎಂದು ವರವನ್ನು ಇತ್ತಿರುತ್ತಾರೆ.

ಹನುಮದ್ವ್ರತ” ಕಥೆಯನ್ನು ಭವಿಷ್ಯೋತ್ತರ ಪುರಾಣದಲ್ಲಿ ವಿವರಿಸಿದ್ದಾರೆ.

ಹನುಮಂತನ ಅವಕೃಪೆಗೆ ಒಳಗಾದ ಪಾಂಡವರು ವನವಾಸಕ್ಕೆ ಹೋಗಬೇಕಾಯಿತು. ಹಿಂದೆ ದ್ರೌಪದಿಯು ಕೃಷ್ಣ ಪರಮಾತ್ಮನ ಅನುಜ್ಞೆಯಂತೆ ಹನುಮದ್ವ್ರತವನ್ನು ಆಚರಿಸಿದ್ದಳು. ವ್ರತವನ್ನಾಚರಿಸಿದ ನಂತರ ತನ್ನ ಕೈಗೆ ದೋರವನ್ನು ಧರಿಸಿದ್ದಳು. ಈ ದೋರವನ್ನು ಗಮನಿಸಿದ ಅರ್ಜುನನು (ಕಲ್ಯಾವೇಶಕ್ಕೊಳಗಾಗಿ), ನಾನು ಆ ಹನುಮಂತನನ್ನು ನನ್ನ ರಥದ ಧ್ವಜಕ್ಕೆ ಕಟ್ಟಿರುವೆ. “ಅವನೊಬ್ಬ ಸಾಮಾನ್ಯ ಮಂಗ” ಎಂದು ಹೇಳಿ ಆ ದೋರವನ್ನು ಬಿಸಾಕಲು ಹೇಳಿದನು.

ಹನುಮಂತ ದೇವರನ್ನು ನೆನೆದರೆ ಬುದ್ಧಿ, ಬಲ, ಯಶಸ್ಸು, ಧೈರ್ಯ, ಎಲ್ಲವೂ ಪ್ರಾಪ್ತವಾಗುತ್ತದೆಂದಾಗ, ಅರ್ಜುನ ಕಲಿ ಪ್ರಭಾವಕ್ಕೊಳಗಾಗಿಯೇ ಅದನ್ನು ಬಿಸಾಡಲು ಹೇಳಿದನು. ಇದೇ ಕಾರಣದಿಂದ ಪಾಂಡವರು ವನವಾಸಕ್ಕೆ ದ್ಯೂತ ನಿಮಿತ್ತ ಹೋಗಬೇಕಾಯಿತು. ಆಗ ದ್ರೌಪದಿಯೂ ಕೂಡ ಆ ಘಟನೆಯನ್ನು ನೆನಪಿಸಿದಳು.

ಈ ಹನುಮದ್ ವ್ರತವನ್ನು ಹಿಂದೆ ಯಾರು ಮಾಡಿರುತ್ತಾರೆ ?
ಹಿಂದೆ ಶ್ರೀ ರಾಮಚಂದ್ರನು, ಹನುಮಂತನಿಗೆ ಅನುಗ್ರಹಿಸಲು, ಹನುಮನ *ಪ್ರಾರ್ಥನೆಯಂತೆ ಮಾಡಿದ್ದನು.
ದ್ರೌಪದಿ ದೇವಿ ಮಾಡಿದ್ದಳು
ಸುಗ್ರೀವ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಮಾಡಿದ್ದನು,
ವಿಭೀಷಣನು ಈ ವ್ರತವನ್ನು ಮಾಡಿ ಲಂಕಾಧಿಪನಾದನು
ದೋರ ಬಂಧನ ಮಂತ್ರ
ಹನೂಮನ್ ದೋರರೂಪೇಣ ಸಂಸ್ಥಿತೋ ಮೈ ಸರ್ವದಾ |
ಸರ್ವಾಪದ್ಭ್ಯೋ ರಕ್ಷ ರಕ್ಷ ಪ್ರಸೀದ ಕಪಿಪುಂಗವ |
ಹನುಮದ್ ಅರ್ಘ್ಯಮಂತ್ರ
ನಮಸ್ತೇ ವಾಯುಪುತ್ರಾಯ ಧ್ವಂಸಿತಾಮರವೈರಿಣೇ |
ಸುಜನಾಂಬುಧಿಚಂದ್ರಾಯ ಭವಿಷ್ಯತ್ ಬ್ರಹ್ಮಣೇ ನಮ: |
ಶ್ರೀ ಹನುಮತೇ ನಮ: ಇದಮರ್ಘ್ಯಂ ಸಮರ್ಪಯಾಮಿ |
 

ಹನುಮದ್ವ್ರತ ಆಚರಣ ಫಲ : ಈ ವ್ರತವು ಶೀಘ್ರ *ಫಲದಾಯಕ ಮತ್ತು *ಮಂಗಳಕರ.
ಹನುಮದ್ವ್ರತ ಕಥೆಯನ್ನು ಆಲಿಸುವುದರಿಂದ ಇಷ್ಟಾರ್ಥ ಪ್ರಾಪ್ತಿ
ಈ ವ್ರತಾಚರಣೆಯಿಂದ ಬ್ರಾಹ್ಮಣನು ವೇದ ವೇದಾಂತ ಪ್ರಾವೀಣ್ಯತೆ, ಕ್ಷತ್ರಿಯನು ರಾಜ್ಯಲಾಭ, ವೈಶ್ಯರು ಧನ, ಶೂದ್ರರು ಉತ್ತಮ ಬೆಳೆ ಪಡೆಯುವರು
ಪುತ್ರಾರ್ತಿಯು ಪುತ್ರರನ್ನೂ, ಮೋಕ್ಷಾಪೇಕ್ಷಿಯು ಸಾಧನ ಮಾರ್ಗವನ್ನು, ಪಡೆಯುವನು
********

ಹನುಮದ್ವ್ರತದ ಮಹತ್ವ - ಮಾರ್ಗಶಿರ ತ್ರಯೋದಶಿ 

ಧರ್ಮರಾಜನಿಗೆ ವೇದವ್ಯಾಸದೇವರು ಉಪದೇಶ ಮಾಡಿದ ವ್ರತವಿದು.

ಪಾಂಚಾಲಿದೇವಿಯು ಈ ವ್ರತವನ್ನು ಭಕ್ತ್ಯಾದರಗಳಿಂದ ಆಚರಿಸಿದಳು.

ಶ್ರೀಕೃಷ್ಣಪರಮಾತ್ಮನಿಂದ ಉಪದೇಶ ಪಡೆದ ದ್ರೌಪದಿಯು ಹನುಮದ್ವ್ರತವನ್ನು ಆಚರಿಸುತ್ತಿದ್ದಳು. ಹನುಮದ್ವ್ರತವನ್ನು ಆಚರಿಸಿ ಹನುಮಂತನ ದೋರವನ್ನು ಕೈಗೆ ಕಟ್ಟಿಕೊಂಡಿದ್ದಳು. ಆ ಅರ್ಜುನನು ದ್ರೌಪದಿಯನ್ನು ಕುರಿತು ಯಾವ ದಾರವನ್ನು ಕಟ್ಟಿಕೊಂಡಿರುವಿ ಎಂದನು.

ದ್ರೌಪದಿಯಾದರೂ ಸಕಲ ಸೌಭಾಗ್ಯಗಳನ್ನು ಕೊಡುವ ಹನುಮದ್ವ್ರತವನ್ನು ಮಾಡಿರುವೆನು. ವ್ರತದ ಪರಿಪೂರ್ಣ ಫಲಪ್ರಾಪ್ತಿಗಾಗಿ ಹದಿಮೂರು ಗಂಟುಗಳುಳ್ಳ ದೋರವನ್ನು ಕಟ್ಟಿಕೊಂಡಿರುವೆನು ಎಂದಳು. ಈ ಮಾತನ್ನು ಕೇಳಿದ ಅರ್ಜುನನು ಕೋಪದಿಂದ ಹೀಗೆ ಹೇಳಿದನು -

"ನೀನು ಯಾವ ಕಪಿಯನ್ನು‌ಪೂಜಿಸುತ್ತಿರುವೆಯೋ ಕಾಡಿನಲ್ಲಿ ಗೆಡ್ಡೆಗೆಣಸು ತಿಂದು ಬದುಕುವ, ಪರಾಧೀನವಾದ, ಚಂಚಲಬುದ್ಧಿಯುಳ್ಳ ಕಪಿಯನ್ನು ನನ್ನ ಧ್ವಜದಲ್ಲಿ ಬಂಧಿಸಿರುವೆನು. ಇಂತಹ ತಿರ್ಯಕ್ ಯೋನಿಯಲ್ಲಿ ಹುಟ್ಟಿರುವ ಕಪಿಯಿಂದ ನಮಗೆ ಏನಾಗಬೇಕು ? ಆ ದೋರವನ್ನು ಬಿಸಾಡು" ಎಂದನು.

ಧ್ವಜ ಏವ ನಿಬದ್ಧೋಽಯಮಯಿ ಶಾಳಾಮೃಗೋ ಮಯಾ |
ಕಿಂ ದಾಸ್ಯತ್ಯಯಮಾಖ್ಯಾಹಿ ವಟುರ್ವನ್ಯಾಶನೋ ಮೃಗಃ ||

- ಭವಿಷ್ಯೋತ್ತರ ಪುರಾಣ

ಯಾವ ಹನುಮಂತನ ಸ್ಮರಣೆಯಿಂದ ಬುದ್ಧಿ, ಬಲ ಯಶಸ್ಸನ್ನು ಪಡೆಯಬಹುದೋ ಅಂತಹ ರಾಮಭಕ್ತನಾದ ಹನುಮಂತನ ಪ್ರತೀಕವಾದ ಹದಿಮೂರು ಗಂಟುಗಳುಳ್ಳ ದೋರವನ್ನು ಅವಮಾನ ಮಾಡಿದ್ದರಿಂದ ಸಕಲ ಸಂಪತ್ತು ಶತ್ರುವಶವಾಗಿ ಹದಿಮೂರು ವರ್ಷಗಳ ಕಾಲ ವನವಾಸಾದಿಗಳನ್ನು ಮಾಡಬೇಕಾಯಿತು.

ತ್ರಯೋದಶಗ್ರಂಥಿಯುಕ್ತದೋರಸ್ಯೋಲ್ಲಂಘನೇನ ವೈ |
ಭವದ್ಭೀರೀದೃಶಂ ಪ್ರಾಪ್ತಂ ವ್ಯಸನಂ ವಸನಂ ವನೇ ||

ಈ ವಿಚಾರವನ್ನು ವೇದವ್ಯಾಸದೇವರಿಂದ ಕೇಳಿದ ಧರ್ಮರಾಜಾದಿಗಳು ದ್ರೌಪದಿಯನ್ನು ಈ ವಿಷಯವಾಗಿ ಕೇಳಿದಾಗ ಸತ್ಯವೆಂದು ತಿಳಿಸಿದಳು.

ಪೂರ್ವದಲ್ಲಿ ಹನುಮಂತನು ಇಂದ್ರದೇವರ ವಜ್ರಾಯುಧದ ಹೊಡೆತಕ್ಕೆ ಮೂರ್ಛೆ ಹೋದಂತೆ ನಟಿಸಿದರು. ಇಂದ್ರದೇವರ ವಜ್ರಾಯುಧದಿಂದ ಹನುವಿನ ಭಂಗದ ಪ್ರಸಕ್ತಿ ಇದ್ದರೂ ಭಂಗವಾಗದೇ ಪ್ರಶಸ್ತವಾದ ಹನುವುಳ್ಳವರಾದ್ದರಿಂದಲೇ ಹನುಮಾನ್ ಎನಿಸಿದನು. ಇಂದ್ರದೇವರು ವಜ್ರಾಯುಧದಿಂದ ತನ್ನ ಪುತ್ರನನ್ನು ಹೊಡೆದರೆಂದು ವಾಯುದೇವರು ಹನುಮಂತನನ್ನು ಎತ್ತಿಕೊಂಡು ಗುಹೆಯೊಳಗೆ ಪ್ರವೇಶಿಸಿದರು.

ಬ್ರಹ್ಮಾದಿದೇವತೆಗಳು ವಾಯುದೇವರನ್ನು ಸಂತೋಷಪಡಿಸಲೆಂದು ಪುತ್ರನಾದ ಹನುಮಂತನಿಗೆ ವರಗಳನ್ನು ನೀಡಿದರು. "ಹನುಮಂತನೇ, ನೀನು ಚಿರಂಜೀವಿಯಾಗು, ಪರಾಕ್ರಮಶಾಲಿಯಾಗಿ ರಾಮಕಾರ್ಯ ಧುರಂಧರರಲ್ಲಿ ಅಗ್ರಗಣ್ಯನಾಗುವೆ. ಮಾರ್ಗಶಿರಮಾಸದ ತ್ರಯೋದಶಿಯಂದು ಯಾರು ನಿನ್ನ ವ್ರತವನ್ನು ಮಾಡುವರೋ ಅವರಿಗೆ ಸಮಸ್ತ ಕಾರ್ಯಗಳಲ್ಲಿ ಜಯವುಂಟಾಗುವುದು" ಎಂದು. ಹನುಮಂತದೇವನನ್ನು ತ್ರಯೋದಶಿಯಂದು ಜಯವೆಂಬ ಹೆಸರುಳ್ಳ ಅಭಿಜಿನ್ ಮುಹೂರ್ತದಲ್ಲಿ ಪೂಜಿಸುವವನು ವಿಶೇಷ ಫಲವನ್ನು ಹೊಂದುವನು.

ವ್ರತದ ಕ್ರಮ

ಹನುಮಂತದೇವನನ್ನು ಹದಿಮೂರು ಗ್ರಂಥಿಗಳುಳ್ಳ ದಾರದಲ್ಲಿ ಓಂ ನಮೋ ವಾಯುನಂದನಾಯ ಓಂ ಎಂದು ಆವಾಹಿಸಬೇಕು. ಹನುಮಂತನ ಅಂತರ್ಯಾಮಿಯಾದ ಶ್ರೀರಾಮಚಂದ್ರನನ್ನು ಷೋಡಶೋಪಚಾರಗಳಿಂದ ಅರ್ಚಿಸಿ ನಂತರ ನೈವೇದ್ಯಾದಿಗಳಿಂದ ಪೂಜಿಸಿ ವಾಯನದಾನವನ್ನು ಮಾಡಬೇಕು. ಗೋಧೂಮ(ಗೋಧಿ) ಧಾನ್ಯವನ್ನು ಗಂಟಿನ ಸಂಖ್ಯೆಯಷ್ಟು ಅಂದರೆ ಹದಿಮೂರು ಸೇರು ವಾಯನದಲ್ಲಿ ಕೊಡಬೇಕು.

ಹನುಮಂತನ ಈ ವ್ರತಾಚರಣೆಯಿಂದ ಸುಗ್ರೀವನು ತನ್ನ ಇಷ್ಟಾರ್ಥವನ್ನು ಪಡೆದನು. ವಿಭೀಷಣನು ಲಂಕಾಸಾಮ್ಯಾಜ್ಯಕ್ಕೆ ಅಧಿಪತಿಯಾದನು. ಈ ವ್ರತವನ್ನು ಹದಿಮೂರು ವರ್ಷಗಳ ಕಾಲ ಮಾಡಿ ನಂತರ ಉದ್ಯಾಪನೆಯನ್ನು ಮಾಡಬೇಕು. ಈ ವ್ರತವನ್ನು ಮಾರ್ಗಶಿರಮಾಸ ಶುಕ್ಲ ತ್ರಯೋದಶಿಯಂದು ರೋಹಿಣೀ ನಕ್ಷತ್ರವಿರುವಾಗ ಆಚರಿಸಬೇಕು. ಈ ವ್ರತಾಚರಣೆಯನ್ನು ಪೂರ್ವವಿದ್ಧವಾದ (ದ್ವಾದಶಿಯುಕ್ತ) ತ್ರಯೋದಶಿಯಲ್ಲಿ ಮಾಡುವುದು ಪ್ರಶಸ್ತವಲ್ಲ.

ಪಂಪಾ ಪೂಜೆ

ಹನುಮಂತದೇವರು ಋಷ್ಯಮೂಕಪರ್ವತದಲ್ಲಿ ವಾಸವಾಗಿದ್ದರು. ಋಷ್ಯಮೂಕ ಪರ್ವತದ ಸಾನು ಪ್ರದೇಶವಾದರೂ ಪಂಪಾಪತಿಯಾದ ವಿರೂಪಾಕ್ಷನು ವಾಸವಾಗಿರುವ ಜಾಗೃತ ಸ್ಥಳವಾಗಿದೆ. ಪಂಪಾದೇವಿಯು ತನ್ನ ನಾಮೋಚ್ಛಾರಣ ಮಾತ್ರದಿಂದಲೇ ಪಾಪಗಳನ್ನು ತಿರುವು ಮುರುವು ಮಾಡುವವಳು (ಪಂಪಾ - ಪಾಪಂ)‌. ಹನುಮನ ಪೂಜೆಯನ್ನು ಮಾಡುವ ಪೂಜಕನು ಮೊದಲು ಪಂಪಾಸ್ಮರಣೆಯಿಂದ ಪಾಪಗಳನ್ನು ದೂರೀಕರಿಸಿ ನಂತರ ಚಿತ್ತಶುದ್ಧನಾಗಿ ಹನುಮನ ಪೂಜೆಯನ್ನು ಮಾಡಲೆಂದೇ ಪಂಪಾದೇವಿಯ ಪೂಜೆಯನ್ನು ವಿಧಿಸಲಾಗಿದೆ. ಹೀಗೆ ಆವಾಹಿತಳಾದ ಪಂಪಾದೇವಿಯನ್ನು ಷೋಡಶೋಪಚಾರಗಳಿಂದ ಅರ್ಚಿಸಬೇಕು.

ಹನುಮತ್ಪೂಜಾ :— ಆಚಮ್ಯ - ಪ್ರಾಣಾನಾಯಮ್ಯ - ಶುಭತಿಥೌ, ಶ್ರೀಮದ್ಹನುಮದಂತರ್ಗತ ಸೀತಾಪತಿ ಶ್ರೀರಾಮಚಂದ್ರ ಪ್ರೀತ್ಯರ್ಥಂ ಜ್ಞಾನಭಕ್ತಿವೈರಾಗ್ಯಾದಿ ಸಿದ್ಧ್ಯರ್ಥಂ ಹನುಮದ್ವ್ರತಾಂಗ ಹನುಮತ್ಪೂಜಾಂ ಕರಿಷ್ಯೇ |

ಈ ಮೇಲಿನಂತೆ ಸಂಕಲ್ಪಿಸಿ ಕುಂಕುಮದ ನೀರಿನಲ್ಲಿ ಒದ್ದೆ ಮಾಡಿದ ನೂತನ ವಸ್ತ್ರವನ್ನು ಪಂಪಾಕಲಶದ ಮೇಲೆ ಇಟ್ಟು ಅರಿಶಿನದಿಂದ ಹಳದಿಬಣ್ಣವಾಗಿಸಿದ ಹದಿಮೂರು ಗ್ರಂಥಿಗಳುಳ್ಳ ದೋರಕವನ್ನು ಇಡಬೇಕು. ಅನಂತರ ಆವಾಹನಾದಿ ಷೋಡಶ ಉಪಚಾರ ಪೂಜೆಯನ್ನು ಮಾಡಬೇಕು.

*ಪೂಜಾಂಗ ಅರ್ಘ್ಯದಾನ :— *

ನಮಸ್ತೇ ವಾಯುಪುತ್ರಾಯ ಧ್ವಂಸಿತಾಮರವೈರಿಣೇ |
ಸುಜನಾಂಬುಧಿ ಚಂದ್ರಾಯ ಭವಿಷ್ಯದ್ ಬ್ರಹ್ಮಣೇ ನಮಃ ||

ದೋರಬಂಧನ ಮಂತ್ರ -

ಹನೂಮಾನ್ ದೋರರೂಪೇಣ ಸಂಸ್ಥಿತೋ ಮಯಿ ಸರ್ವದಾ |
ಸರ್ವಾಪದ್ಭ್ಯೋ ರಕ್ಷ ರಕ್ಷ ಪ್ರಸೀದ ಕಪಿಪುಂಗವ ||

ಪ್ರಾರ್ಥನೆ :—

ಬಳಿತ್ಥಾದಿತ್ರಯೀವೇದ್ಯ ತ್ರಿರೂಪಾಯ ಮಹಾತ್ಮನೇ |
ಭಕ್ತಾಭೀಷ್ಟಪ್ರದಾಯಸ್ತು ನಮಸ್ತೇ ಭಾರತೀಪತೇ ||

ವಾಯನದಾನಂ :—

ಹನೂಮಾನ್ ಪ್ರತಿಗೃಹ್ಣಾತಿ ಹನುಮಾನ್ ವೈ ದದಾತಿ ಚ |
ಹನೂಮಾನ್ ತಾರಕೋಭಾಭ್ಯಾಂ ನತೋಸ್ಮಿ ತ್ವಾಂ ಹನುಮತೇ ||

ಇದಂ ವಾಯನದಾನಂ ಸದಕ್ಷಿಣಾಕಂ ಸತಾಂಬೂಲಂ ಹನೂಮತಃ ಪ್ರೀತಿ ಕಾಮಯಮಾನಃ ತುಭ್ಯಂ ಸಂಪ್ರದದೇ |
ಅನೇನ ಶ್ರೀಹರೀಃ ಪ್ರೀಯತಾಮ್ ||

|| ಶ್ರೀಕೃಷ್ಣಾರ್ಪಣಮಸ್ತು ||
ಕೃಪೆ: ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
*******

" ಹನುಮದ್ವ್ರತ "

" ಶ್ರೀ ವಾಯುದೇವರ ಕಾರುಣ್ಯ ಸ್ಮರಣೆ & ಶ್ರೀ ವಾಯುದೇವರ ಅವತಾರ - ಒಂದು ಚಿಂತನೆ "


ಶ್ರೀ ಮದಾಚಾರ್ಯರು " ಬಳಿತ್ಥಾ ಸೂಕ್ತದ ಅರ್ಥ ವಿವರಣೆ " ಯಲ್ಲಿ...


ಹನ ಶಬ್ದೋ ಜ್ಞಾನವಾಚೀ ಹಣಮಾನ್ ಮತಿ ಶಬ್ದತಃ ।

ರಾಮಸ್ಯ ಸ್ವೃತ ರೂಪಸ್ಯ ವಾಚಸ್ತೇನಾನಯಂತ ಹಿ ।।

ಭೃತಮೋ ಭೀಮ ಇತ್ಯಕ್ತೋ ವಾಚೋ ಮಾ ಮಾತರಃ ಸ್ಮೃತಾಃ ।
ಋಗಾದ್ಯ ಇತಿಹಾಸಶ್ಚ ಪುರಾಣಂ ಪಂಚರಾತ್ರಕಮ್ ।
ಪೋಕ್ತಾಃ ಸಪ್ತಶಿವಾಸ್ತತ್ರ ಶಮೋ ಭೀಮಸ್ತತಃ ಸ್ಮೃತಃ ।।

ಮಧ್ವಿತ್ಯಾನಂದ ಉದ್ಧಿಷ್ಟೋ ವೇತಿ ತೀರ್ಥಮುದಾಹೃತಮ್ ।

ಮಧ್ವ ಆನಂದತೀರ್ಥ: ಸ್ಯಾತ್ ತೃತೀಯಾ ಮಾರುತೀ ತನು: ।।

ಇತಿ ಸೂಕ್ತಗತಂ ರೂಪತ್ರಯ ಮೇತನ್ಮಹಾತ್ಮನಃ ।

ಯೋ ವೇದಾ ವೇದವಿತ್ ಸ ಸ್ಯಾತ್ ತತ್ತ್ವವಿತ್ ತತ್ ಪ್ರಸಾದತಃ ।।

1. " ಹನು " ಎಂದರೆ " ಜ್ಞಾನ ".


" ಹನಗತೌ - ಹನೂಮಾನ್ " ಎಂದರೆ ಸ್ವರೂಪ ಭೂತವಾದ ಅತಿಶಯವಾದ ಜ್ಞಾನ ಉಳ್ಳವರು. ಈ ಅರ್ಥದಲ್ಲೇ ಸೂಕ್ತದಲ್ಲಿ " ಮತಿ = ಜ್ಞಾನ ಸ್ವರೂಪ " ಎಂಬ ಪದದಿಂದ ಕರೆದಿದ್ದಾರೆ.


" ಋತ " ಎಂದರೆ ಯಥಾರ್ಥ ಜ್ಞಾನ ರೂಪವಾದ ನಿರ್ವಿಕಾರನಾದ ವೇದ ವೇದ್ಯನಾದ ಶ್ರೀ ರಾಮಚಂದ್ರ. ಅನಂತ ಜ್ಞಾನಮಯನಾದವನ ಸಂದೇಶವನ್ನು ಜ್ಞಾನಮಯನಾದ ಹನುಮಂತನೇ " ಸೀತೆಗೆ " ಮುಟ್ಟಿಸಿದ.


2. " ಭೀಮ " ಎನ್ನುವುದೂ " ಜ್ಞಾನನಿಧಿ " ಎನ್ನುವ ಅರ್ಥವನ್ನೇ ಹೇಳುವ ಪದ.


ಭೃತ + ಮ " ಮಾ " ಎಂದರೆ " ಸಪ್ತಶಿವಾಸು ಮಾತೃಷು " ಎಂಬಲ್ಲಿ ಮಾತುಗಳೇ ಮಾತೃಗಳು. ಇವುಗಳನ್ನು ಧರಿಸಿದವರೇ " ಶ್ರೀ ಭೀಮಸೇನದೇವರು ".


ನಾಲ್ಕು ವೇದಗಳೂ, ಭಾರತ - ರಾಮಾಯಣಗಳೆಂಬ ಇತಿಹಾಸ - ಪುರಾಣಗಳು ಮತ್ತು ಪಂಚರಾತ್ರ ಇವೇ " ಸಪ್ತಶಿವಗಳು " - ಮಾಂಗಲೀಕ ಮಾತುಗಳು. ಇವುಗಳಲ್ಲಿ ವಿಹರಿಸುವವರೇ ಶ್ರೀ ಭೀಮಸೇನದೇವರು.


3. " ಮಧು " ಎಂದರೆ " ಆನಂದ ".


" ವ " ಎಂದರೆ " ಜ್ಞಾನಪ್ರದವಾದ ಶ್ರಾಸ್ತ್ರತೀರ್ಥ ".


ಆದ್ದರಿಂದ..


" ಮಧು + ವ " ಎಂದರೆ " ಆನಂದತೀರ್ಥ. ಇದು ಶ್ರೀ ವಾಯುದೇವರ ಮೂರನೇ ಅವತಾರ ರೂಪ!


" ಯಜು: ಸಂಹಿತಾ " ದಲ್ಲಿ...


ಸಾಧಕೋ ರಾಮಕಾರ್ಯಾಣಾ೦ ತತ್ ಸಮೀಪಗತಃ ಸದಾ ।

ಹನೂಮಾನ್ ಪ್ರಥಮೋಜ್ಞೇಯೋ ಭೀಮಸ್ತು ಬವಭುಕ್ ಪಿತೋ: ।।

ಪೃತನಾಕ್ಷಿಯಕಾರೀ ಚ ದ್ವಿತೀಯಸ್ತು: ತೃತೀಯಕಃ ।

ಪೂರ್ಣಪ್ರಜ್ಞಸ್ತಥಾssನಂದತೀರ್ಥ ನಾಮಾ ಪ್ರಕೀರ್ತಿತಃ ।।

ದಶೇತಿ ಸರ್ವಮುದ್ದಿಷ್ಟ೦ ಸರ್ವಂ ಪೂರ್ಣಮಿಹೋಚ್ಯತೇ ।

ಪ್ರಜ್ಞಾ ಪ್ರಮತಿರುದ್ಧಿಷ್ಟಾ ಪೂರ್ಣಪ್ರಜ್ಞಸ್ತತಃ ಸ್ಮೃತಃ ।।

ಆ ಸಮಂತಾತ್ ಪತಿತ್ವೇ ತು ಗೂಢ೦ ಕಲಿಯುಗೇ ಹರಿಮ್ ।

ಅಸತ್ಯಮಪ್ರತಿಷ್ಠ೦ ಚ ಜಗದೇತ ದನೀಶ್ವರಮ್ ।।

ವದಬ್ಭಿರ್ಗೂಹಿತಂ ಸಂತಂ ತೃತೀಯೋsಸುಮರ್ಥಾಯತಿ ।

ಯೇನ ವಿಷ್ಣೋ ರ್ಹಿ ವರ್ಪಾಖ್ಯಾನ್ ಗುಣಾನಜ್ಞಾನಿಷು: ಪರಾನ್ ।।

ಈಶಾನಾಸಃ ಸೂರಯಶ್ಚ ನಿಗೂಢಾನ್ ನಿರ್ಗುಣೋಕ್ತಿಭಿ: ।

ತ್ರೇತಾಯಾಂ ದ್ವಾಪರೇ ಚೈವ ಕಲೌ ಚೈತೇ ಕ್ರಮಾತ್ ತ್ರಯಃ ।।

ಏತೇಷಾ೦ ಪರಮೋ ವಿಷ್ಣುರ್ನೇತಾ ಸರ್ವೇಶ್ವರೇಶ್ವರಃ ।

ಸ್ವಯಂಭೂ ಬ್ರಹ್ಮ ಸಂಜ್ನೋಸೌ ಪರೋsಸ್ಮೈ ಬ್ರಹ್ಮಣೇ ನಮಃ ।।

ಶ್ರೀ ರಾಮಚಂದ್ರದೇವರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ( ಸಾಧತೇ ) ರಾಮಚಂದ್ರನ ಬಳಿ ಸಾರಿದ. ಶ್ರೀ ರಾಮನ ಅಂತರಂಗ ಭಕ್ತರಾದ ಶ್ರೀ ಹನುಮಂತದೇವರು " ಪ್ರಾಣಾಗ್ನಿ ಸ್ವರೂಪರಾದ ಶ್ರೀ ವಾಯುದೇವರ ಪ್ರಥಮಾವತಾರ ".


ಬಹು ಅನ್ನವನ್ನುಂಡ ( ಪಿತುಮಾನ್ ) ಸೇನೆಯನ್ನು ಸದೆ ಬಡೆದ ಶ್ರೀ ಭೀಮಸೇನದೇವರು ಶ್ರೀ ವಾಯುದೇವರ ದ್ವಿತೀಯಾವತಾರ.


ಪೂರ್ಣಪ್ರಜ್ಞರೆಂದೂ - ಆನಂದತೀರ್ಥರೆಂದೂ ಪ್ರಖ್ಯಾತರಾದ " ಯತಿ " ಯೇ ಶ್ರೀ ವಾಯುದೇವರ ತೃತೀಯಾವತಾರ.


" ದಶ " ಎಂದರೆ " ಪೂರ್ಣ " ಎಂದರ್ಥ.

" ಪ್ರಮತಿ " ಎಂದರೆ " ಪ್ರಜ್ಞೆ " - ಜ್ಞಾನ.

ಎಲ್ಲವನ್ನೂ ತಿಳಿದವರೇ ಪೂರ್ಣಪ್ರಜ್ಞರು. ಅವರೇ ದಶಪ್ರಮತಿ. ಹೀಗೆ ಮತಿ = ಶ್ರೀ ಹನುಮಂತದೇವರೇ " ದಶಪ್ರಮತಿ " ಯಾದರು!!


ಶ್ರೀ ಹರಿಯೇ ಎಲ್ಲರಿಗೂ ಸ್ವಾಮಿ ( ಆ + ಧವೇ ) " ಸರ್ವೋತ್ತಮ " ಎಂದು ಸಾರಲು ಕಲಿಯುಗದಲ್ಲಿ ಮರೆಯಾದ ಶ್ರೀ ಹರಿಯ ಮಹಿಮೆಯನ್ನೂ; ಈ ಜಗತ್ತು ಮಿಥ್ಯೆ, ಅದಕ್ಕೆ ನೆಲೆಯಿಲ್ಲ, ನೆಲೆಯಾದ ಭಗವಂತನೂ ಇಲ್ಲ ಎಂದು ಹೇಳುವ ದುರಾತ್ಮರು ಮರೆಮಾಚಿದ ಶ್ರೀ ಹರಿಯ ಮಹಿಮೆಯನ್ನು ಶ್ರೀ ಮುಖ್ಯಪ್ರಾಣದೇವರ ಮೂರನೆಯ ರೂಪ ( ಶ್ರೀ ಆಚಾರ್ಯ ಮಧ್ವರು ) ಶಾಸ್ತ್ರಗಳನ್ನು ಮಥನ ಮಾಡಿ ಮತ್ತೆ ಬೆಳಕಿಗೆ ತರುತ್ತದೆ.


ಅದರಿಂದ ಜಗತ್ತಿನ ನಿಯಾಮಕ ಶಕ್ತಿಗಳಾದ ದೇವತೆಗಳೂ; ಇತರೆ ಜ್ಞಾನಿಗಳೂ; ನಿರ್ಗುಣ ವಾದಗಳಿಂದ ಮರೆಯಲ್ಲಿ ಹುದಗಿದ್ದ " ವರ್ಪ " ಗಳೂ ಎಂದು ನಿಗೂಢವಾಗಿಯೇ ಶ್ರುತಿಗಳೂ ಸಾರಿದ ಹರಿಯ ಹಿರಿಯ ಗುಣಗಳನ್ನು ತಿಳಿಯುವಂತಾಯಿತು.

ತ್ರೇತಾ - ದ್ವಾಪರ ಮತ್ತು ಕಲಿ - ಈ ಮೂರು ಯುಗಗಳಲ್ಲಿ ಕ್ರಮವಾಗಿ ಶ್ರೀ ವಾಯುದೇವರ ಈ ಮೂರು ಅವತಾರಗಳಾದವು.


ಈ ಮೂರು ರೂಪಗಳಿಗೂ ನಿಯಾಮಕನಾದವನು ಸರ್ವೋತ್ತಮನಾದ ಶ್ರೀಹರಿಯೊಬ್ಬನೇ.


ಅವನನ್ನೇ " ಸ್ವಯಂಭು " " ಬ್ರಹ್ಮ " ( ತಾನೇ ತಾನಾದ ಪರತತ್ತ್ವ ) ಎಂದು ಶ್ರುತಿಗಳು ಕೊಂಡಾಡುವ ಅಂಥಾ " ಪರತತ್ತ್ವ " ಕ್ಕೆ ನಮಸ್ಕಾರಗಳು!!


" ಶ್ರೀ ಸಹ್ಲಾದಾಂಶ ಜಗನ್ನಾಥಾದಾಸರು " ಹರಿಕಥಾಮೃತಸಾರ - ಮಂಗಳಾಚರಣ ಸಂಧಿ " ಯಲ್ಲಿ...


ಆರು ಮೂರೆರಡೊಂದು ಸಾವಿರ ।

ಮೂರೆರಡು ಶತ ಶ್ವಾಸ ಜಪಗಳ ।
ಮೂರು ವಿಧ ಜೀವರೊಳಗಬ್ಜಜಕಲ್ಪಪರಿಯಂತ ।।
ತಾ ರಚಿಸಿ ಸತ್ವರಿಗೆ ಸುಖ । ಸಂ ।
ಸಾರ ಮಿಶ್ರರಿಗಧಮ । ಜನರಿಗ ।
ಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ ।।

" ಆರು ಮೂರೆರಡೊಂದು ಸಾವಿರ "


 6 x 3 = 18 + 2 + 1 = 21 x 1000 = 21000


" ಮೂರೆರಡು ಶತ "


3 x 2 = 6 x 100 = 600


ಒಟ್ಟು = 21600


" ಶ್ವಾಸ ಜಪಗಳ "


21600 ಶ್ವಾಸ ಜಪಗಳ ಷಡಕ್ಷರ ಹಂಸ ಮಂತ್ರ ಜಪಗಳನ್ನು ಪ್ರತಿ ದಿವಸದಲ್ಲಿ


ಮೂರು ವಿಧ ಜೀವರೊಳಗೆ = ಸಾತ್ವಿಕ, ರಾಜಸ, ತಾಮಸ ಜೀವಿಗಳಲ್ಲಿದ್ದು


ಅಬ್ಜಜ ಕಲ್ಪ ಪರಿಯಂತ = ಶ್ರೀ ಚತುರ್ಮುಖ ಬ್ರಹ್ಮದೇವರ ಕಲ್ಪ ಪರ್ಯಂತ


ತಾ = ತಾವು ( ಶ್ರೀ ವಾಯುದೇವರು


ರಚಿಸಿ = ಜಪಿಸಿ


ಸತ್ವರಿಗೆ ಸುಖ = ಸಾತ್ವಿಕ ಜೀವಿಗಳಿಗೆ ಮುಕ್ತಿ ಸುಖವನ್ನೂ


ಸಂಸಾರ ಮಿಶ್ರರಿಗೆ = ರಾಜಸ ಜೀವಿಗಳಿಗೆ ಸುಖ ದುಃಖ ಮಿಶ್ರವಾದ ಸಂಸಾರವನ್ನು


" ಅಧಮ ಜನರಿಗೆ ಅಪಾರ ದುಃಖಗಳ "


ತಾಮಸ ಜನರಿಗೆ ಸಹಿಸಲಸಾಧ್ಯವಾದ ದುಃಖಗಳುಳ್ಳ ಅಂಧಃತಮಸ್ಸನ್ನು


ಈವ = ಕೊಡುವ


ಗುರು ಪವಮಾನ = ಗುರುಗಳಾದ ಶ್ರೀ ವಾಯುದೇವರೇ ( ಶ್ರೀ ಮುಖ್ಯಪ್ರಾಣದೇವರೇ )


" ಸಲಹೆಮ್ಮ "


ನಮ್ಮನ್ನು ಪಂಚಭೇದ ತಾರತಮ್ಯಾದಿ - ಹರಿ ಸರ್ವೋತ್ತಮತ್ವಾದಿ ಜ್ಞಾನ ಕೊಟ್ಟು ಕಾಪಾಡಿರಿ!!


" ಶ್ರೀ ಮರುದಂಶ ಪ್ರಾಣೇಶದಾಸರು ವದನಾರವಿಂದದಲ್ಲಿ ಹೊರಹೊಮ್ಮಿದ 

ಶ್ರೀ ವಾಯುದೇವರ 32 ಲಕ್ಷಣಗಳ ವಿವರ "

ರಾಗ : ಕಾಂಬೋಧಿ ತಾಳ : ಝಂಪೆ 

ಶ್ರೀ ವಾಯುದೇವರಿಗೆ ನೀತವಾದ ।
ಮೂವತ್ತೆರಡು ಸಲಕ್ಷಣಗಳನು ವರ್ಣಿಸುವೆ ।। ಪಲ್ಲವಿ ।।

ತಾಲು ಜಾನುಗಳು ಸ್ತನತುದಿಯು ನಾಶಿಕ ಚಕ್ಷು ।
ನಾಲಕ್ಕೊಂದು ಧೀರ್ಘ ಜಂಘೆ ಗ್ರೀವ ।
ಆಲಿಂಗ ಪೃಷ್ಠ ನಾಲ್ಕು ಹ್ರಸ್ವ ಕೇಶರದ ।
ಮೇಲಾದ ತ್ವಕು ಬೆರಳು ನಖ ಬೆರಳು ನಖ ಪಂಚ ಸೂಕ್ಷ್ಮ ।। ಚರಣ ।।

ಕಕ್ಷಿ ಕುಕ್ಷಿಯು ವಕ್ಷ ಕರ್ಣ ನಖಸ್ಕಂಧಾರು ।
ರಕ್ಷಜ್ಞನಿಗೆ ಶೋಭಿಪುದು ಉನ್ನತ ।
ಅಕ್ಷಿ ಚರಣ ನಖ ಅಧರ ಜಿಹ್ವೇಣುಜಿಹ್ವೆ ।
ಮೋಕ್ಷದನ ಈ ಏಳು ಅವಯವು ರಕ್ತ ।। ಚರಣ ।।

ಸತ್ವನಾಭಿಯು ಸ್ವರವು ಈ ಗಂಭೀರ ।
ಉತ್ತಮ ಲಲಾಟ ಉರುದ್ವಯ ವಿಸ್ತಾರ ।
ಸಂತ್ಯಸಂಕಲ್ಪ ಶ್ರೀ ಪ್ರಾಣೇಶವಿಠ್ಠಲನ ।
ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ ।। ಚರಣ ।।

ತಾಲು = ಗಲ್ಲ 
ಜಾನು = ಮೊಳಕಾಲು 
ನಾಶಿಕ = ಮೂಗು 
ಚಕ್ಷು = ಕಣ್ಣು 
ನಾಲಕ್ಕೊಂದು = 4 + 1 = 5

ಜಂಘೆ = ಮೊಳಕಾಳು ಕೆಳಗಿನ ಭಾಗ 
ಗ್ರೀವ = ಕುತ್ತಿಗೆ 
ಹ್ರಸ್ವ = ಚಿಕ್ಕದು
ಕೇಶ = ಕೂದಲು 
ರದ = ಹಲ್ಲು 
ತ್ವಕು = ಚರ್ಮ 
ನಖ = ಉಗುರು
ಕಕ್ಷಿ = ಕಂಕುಳು 
ಕುಕ್ಷಿ = ಹೊಟ್ಟೆ 
ವಕ್ಷ = ಎದೆ 
ಕರ್ಣ = ಕಿವಿ 
ನಖ = ಉಗುರು 
ಸ್ಕಂಧ = ಹೆಗಲು 
ರಕ್ಷಜ್ಞನಿಗೆ = ಪಾಲಕನಿಗೆ
ಅಕ್ಷಿ = ಕಣ್ಣು 
ಚರಣ = ಕಾಲು 
ಕರ = ಕೈ 
ನಖ = ಉಗುರು 
ಅಧರ = ತುಟಿ 
ಜಿಹ್ವೆ = ನಾಲಿಗೆ 
ಅಣುಜಿಹ್ವೆ = ಕಿರು ನಾಲಿಗೆ
ಲಲಾಟ ( ಹಣೆ ) ಮತ್ತು ಉರು ( ವಕ್ಷಸ್ಥಳ ) 

ವಿವರಣೆ :

ತಾಲು - ಜಾನು - ಸ್ತನ ತುದಿ - ನಾಶಿಕ - ಚಕ್ಷು = 05 ಈ ಐದು ದೀರ್ಘವಾಗಿವೆ. 
ಜಂಘೆ - ಗ್ರೀವ - ಆಲಿಂಗ - ಪೃಷ್ಠ = 04 ಈ ನಾಲ್ಕು ಚಿಕ್ಕದು
ಕೇಶ - ರದ - ತ್ವಕು - ಬೆರಳು - ನಖ = 05 ಈ ಐದೂ ಸೂಕ್ಷ್ಮ
ಕಕ್ಷಿ - ಕುಕ್ಷಿ - ವಕ್ಷ - ಕರ್ಣ - ನಖ - ಸ್ಕಂಧ = 06 ಈ ಆರೂ ಉನ್ನತ 
ಅಕ್ಷಿ - ಚರಣ - ಕರ - ನಖ - ಆಧಾರ -
ಜಿಹ್ವೆ - ಅಣು ಜಿಹ್ವೆ = 07 ಈ ಏಳೂ ರಕ್ತವರ್ಣ
ಸತ್ವ - ನಾಭಿ - ಸ್ವರ = 03 ಈ ಮೂರೂ ಗಂಭೀರ
ಲಲಾಟ - ಉರ ( ವಕ್ಷಸ್ಥಳ ) = 02 ಈ ಎರಡೂ ವಿಸ್ತಾರ 
ಒಟ್ಟು : 32 ಲಕ್ಷಣಗಳು

ಚತುರಶ್ಚತುರಾನನಃ ಸ್ವಯಂ ಪವನೋ ವಾ ವ್ರತಿರೂಪ ಆವ್ರಜನ್ ।
ಶ್ರುತಿನಾಥದಿಧೃಕ್ಷಯಾನ್ಯಥಾ ನ ಖಲು ಸ್ಯಾನ್ನಿಖಿಲಾಗ್ರ್ಯಲಕ್ಷ್ಮವಾನ್ ।।

ಶ್ರುತಿನಾಥರಾದ ಶ್ರೀ ವೇದವ್ಯಾಸದೇವರನ್ನು ಕಾಣುವ ಬಯಕೆಯಿಂದ ಸ್ವತಃ ಚತುರ್ಮುಖ ಬ್ರಹ್ಮದೇವರೋ ಅಥವಾ ವಾಯುದೇವರೋ ಯತಿ ರೂಪದಿಂದ ಬರುತ್ತಿರುವಂತಿದೆ. ಇಲ್ಲವಾದಲ್ಲಿ ಹೀಗೆ ಸಕಲ ಲಕ್ಷಣಗಳನ್ನು ಹೊಂದಿರಲು ಸಾಧ್ಯವಿಲ್ಲ.

ಮೇಲ್ಕಂಡ 32 ಸಲಕ್ಷಣಗಳಿಂದ ಶ್ರೀ ವಾಯುದೇವರು ( ಶ್ರೀ ಹನುಮಂತ - ಶ್ರೀ ಭೀಮಸೇನ - ಶ್ರೀಮದಾಚಾರ್ಯರು ) ಶೋಭಿಸುತ್ತಿದ್ದಾರೆ೦ದು ಶ್ರೀ ಪ್ರಾಣೇಶದಾಸರು ಸ್ಪಷ್ಟ ವಿವರಣೆ ಕೊಟ್ಟಿದ್ದಾರೆ.

ಮಧ್ವರಾಯರೇ ದಯದಿ ಉದ್ಧರಿಸಿ ಸಲಹೂ ।
ಪದ ಪದ್ಮವನು ನ್ಯೆರೆ ನಂಬಿದೆ ।
ಅದ್ವೈತ ಮತ ತಿಮಿರ ಮಾರ್ತಾಂಡ ಯನ್ನ । ಹೃ ।
ತ್ಪದ್ಮದಲಿ ನ್ಯೆಲಿಸಿ ಶ್ರೀ ಪದ್ಮನಾಭನ ತೋರು ।।
**********

ಹನುಮದ್ವ್ರತ "

ಮೋಕ್ಷಪ್ರದನಾದ ಶ್ರೀ ಮುಕುಂದ ರೂಪಿ ಶ್ರೀ ಹರಿಯಲ್ಲಿ ಮಾಡಿದ ಭಕ್ತಿಯೇ ಮುಕ್ತಿಗೆ ಕಾರಣ. ಶ್ರೀ ಮುಕುಂದನಲ್ಲಿ ಮಾಡುವ ಭಕ್ತಿಯಾದರೋ ವಿಶ್ವಗುರುಗಳೂ, ಜೀವೋತ್ತಮರೂ ಆದ ಶ್ರೀ ವಾಯುದೇವರಲ್ಲಿ ಮಾಡಿದ ಭಕ್ತಿಯಿಂದ ಉತ್ಪಾದಿತವಾಗಿರಬೇಕು. ಹರಿಭಕ್ತಿಗೆ ಗುರುಭಕ್ತಿಯಿಂದ ಜನ್ಯತ್ವವಾದರೋ...

ಗುರುದ್ವಾರಾ ಪ್ರಸಾದಕೃದಹಂ ।

ಯಸ್ಯ ದೇವೇಪರಾ ಭಕ್ತಿರ್ಯಥಾದೇವೇ ತಥಾ ಗುರೌ ।
ಅಗಮ್ಯತ್ವಾದ್ಧರಿಸ್ತಸ್ಮಿನ್ನಾವಿಷ್ಟೋಮುಕ್ತಿದೋ ಭವೇತ್ ।

ಇತ್ಯಾದಿ ಪ್ರಮಾಣಗಳಿಂದ ಸಿದ್ಧವಾಗಿದೆ. ಶ್ರೀ ಹರಿ ವಾಯು ಗುರುಗಳ ಪ್ರಮಾನುಗ್ರದಿಂದ ಅಂಥಾ ದೇವತೆಯನ್ನು ಸ್ತುತಿಸುವ ಚಿಕ್ಕ ಪ್ರಯತ್ನ ಇಲ್ಲಿದೆ.


ರಾಗ : ಹಂಸಾನಂದೀ       ತಾಳ : ಆದಿ


ವಾಯುನಂದನ ಹನುಮ ಭೀಮ ಮಧ್ವ ಗುರೋ ।

ವಾಯುಜಾತ ಮಧ್ವ ಮತ ಸಂಸ್ಥಾಪಕ ಗುರೋ ।। ಪಲ್ಲವಿ ।।

ಅಂಬುಜಾರಿಧರ ವಂದ್ಯನೇ ।

ಅಂಬುಜ ಸಂಭವ ನೀನಯ್ಯಾ ।। ಚರಣ ।।

ಅಂಚಿವಾಹನ ಮುಖ್ಯಪ್ರಾಣ ಸಲಹೋ ।

ಅಂಜನಾಸುತ ಹನುಮಯ್ಯಾ ।। ಚರಣ ।।

ಭಾವಿ ಅಜನೇ ಮಧ್ವ ಗುರುವೇ ।

ಭಾವಿಸಮೀರ ವಾದಿರಾಜ ಕರುಣಿಸೋ ।। ಚರಣ ।।

ಪ್ರಾಣಪ್ರಭ ಪ್ರಾಣದೇವ ।

ಪ್ರಾಣಸುತ ಪ್ರಾಜ್ಞ ಪ್ರಾಣ ।। ಚರಣ ।।

ಪ್ರಾಣ ಪಂಚಕ ರೂಪ ಹನುಮಾ ।

ಪ್ರಾಣ ವಾಯುಗಳೂ ನೀನೇನಯ್ಯಾ ।। ಚರಣ ।।

ವಾಯ್ವಾವೇಶಯುತ ಪ್ರಹ್ಲಾದರಾಯಾ ।

ವಾಯುನಂದನ ಭೀಮನ ಸೇವಿಪ ಬಾಹ್ಲೀಕರಾಯ ।। ಚರಣ ।।

ವ್ಯಾಸ ಮುನಿ ಪೂಜಿತ ಮಾರುತಿರಾಯಾ ।

ಶ್ರೀಶ ಮೂಲರಾಮಾರ್ಚಕ ರಾಘವೇಂದ್ರ ಪ್ರಿಯಾ ।। ಚರಣ ।।

" ಕೃತಿಯ ವಿಮರ್ಶೆ - ಅರ್ಥ ವಿವರಣೆ "


ವಾಯುನಂದನ = ವಾಯುಪುತ್ರ ( ಹನುಮ, ಭೀಮ, ಮಧ್ವ )

ವಾಯುಜಾತ = ಶ್ರೀ ವಾಯುದೇವರ ಅಂಶ
ಅಂಬುಜಾರಿ = ಚಂದ್ರ
ಅಂಬುಜಾರಿಧರ = ಶಿವ ( ಚಂದ್ರಶೇಖರ )
ಅಂಬುಜ = ಕಮಲ
ಅಂಬುಜಸಂಭವ = ಶ್ರೀ ಚತುರ್ಮುಖ ಬ್ರಹ್ಮದೇವರು
ಅಂಚಿ = ಹಂಸ
ಅಂಚಿ ವಾಹನ = ಹಂಸವಾಹನ

ಭಾವಿ ಅಜನೇ ಮಧ್ವ ಗುರುವೇ ।

ಭಾವಿಸಮೀರ ವಾದಿರಾಜ ಕರುಣಿಸೋ ।। ಚರಣ ।।

" ಹನುಮಾ "


" ಹನ " ಯೆಂದರೆ " ಜ್ಞಾನ ".


" ಹನುಮಾನ್ " ಯೆಂದರೆ ಸ್ವರೂಪ ಭೂತವಾದ ಅತಿಶಯವಾದ ಜ್ಞಾನ ಉಳ್ಳವರು.


ಶ್ರೀಮದಾಚಾರ್ಯರು ಬಲಿತ್ಥಾ ಸೂಕ್ತದ ಅರ್ಥ ವಿವರಣೆಯಲ್ಲಿ...


" ಹನ ಶಬ್ದೋ ಜ್ಞಾನವಾಚೀ ಹನೂಮಾನ್ ಮತಿ ಶಬ್ದಿತಃ " ಯೆಂದು ಹೇಳಿದ್ದಾರೆ.


" ತೈತ್ತಿರೀಯ " ದಲ್ಲಿ...


ನಮಸ್ತೇ ವಾಯೋ।

ತ್ವಮೇವ ಪ್ರತ್ಯಕ್ಷ೦ ಬ್ರಹ್ಮಾಸೀ ।।

" ಮಹಾಭಾರತ ತಾತ್ಪರ್ಯ ನಿರ್ಣಯ ೨-೧೪೮ " ದಲ್ಲಿ....


ವಾಯುರ್ಹಿ ಬ್ರಹ್ಮತಾಮೇತಿ ತಸ್ಮಾದ್ ಬ್ರಹ್ಮೈವ ಸ ಶ್ರುತಃ ।

ನ ಬ್ರಹ್ಮ ಸದೃಶಃ ಕಶ್ಚಿಚ್ಛಿವಾದಿಷು ಕಥಂಚನ ।।

ಎಂದು ತೈತ್ತೀರೇಯೋಪನಿಷತ್ತು ಶ್ರೀ ಮುಖ್ಯಪ್ರಾಣದೇವರನ್ನು ಅನುಭವಗೋಚರರಾದ ಶ್ರೀ ಬ್ರಹ್ಮದೇವರೆಂದೇ ಪರಾಮರ್ಶಿಸಿದೆ.


ಭಾವಿಸಮೀರ ವಾದಿರಾಜ ಕರುಣಿಸೋ ।।


" ಪ್ರಮಾಣಗಳು "


" ಋಕ್ಸಂಹಿತಮ್ " ವಚನದಂತೆ...


ವಾದಿರಾಜಾಭಿದಂ ರೂಪಂ ದಶಪ್ರಮತಿ ಸಂಜ್ಞಿತಮ್ ।।


" ಬ್ರಹ್ಮ ವೈವಸ್ವತ ಪುರಾಣ "


ವ್ಯಾಸ ಸೇವಾರತೋ ನಿತ್ಯಂ ವಾದಿರಾಜ ಋಜುರ್ಯತಿಃ ।।


" ಮಹಾಭಾರತ ತಾತ್ಪರ್ಯ ನಿರ್ಣಯಃ "


ಬ್ರಹ್ಮಯೋಗ್ಯ ಋಜವೋ ನಾಮ ದೇವಾಃ ಪೃತಗ್ಗಣಾಃ ।

ತೈರೇವಾಪ್ಯಂ ತತ್ಪದಂ ತು ನೈವಾನ್ಯೈಃ ಸಾಧನೈರಪಿ ।।

" ಪದ್ಮ ಪುರಾಣ "


ತತ್ಪೂರ್ವಮಸ್ಯ ವಂಶೇ ತು ಋಜುಸ್ಥೋಹಿ ಸುರೇಶ್ವರಃ ।

ವಾದಿರಾಜಯತಿರ್ಭೂತ್ವಾ ಚೈತದ್ವಿಸ್ತಾರಯಿಶ್ಯತಿ ।।

" ಸ್ಕಾಂದ ಪುರಾಣ "


ಸಹೋರೂಪಸ್ಯ ದೇವಸ್ಯ ಲಾತವ್ಯಸ್ಯ ಬಲಾತ್ಮಕಮ್ ।

ರೂಪತ್ರಯಾವತಾರಯ ನಿಹಿತಂ ಹರಿಣಾ ಸ್ವಯಮ್ ।।

ಅಂಡಾದ್ಬಹಿಃ ಸ್ಥಿತಂ ಮೂಲಂ ಸತ್ಯಲೋಕಸ್ಥಿತಂ ಮಹತ್ ।
ಗೃಹೀತ್ವಾ ರುಕ್ಮಿಣೀಪತ್ರಂ ಕೃಷ್ಣಾ೦ತಿಕಮುಪಾಗತಮ್ ।
ವಾದಿರಾಜಭಿದು ಚೇತಿ ಮೂಲಭೇದ ವಿವರ್ಜಿತಮ್ ।।

" ವಾಮನ ಪುರಾಣ "


ವಾಯುಸ್ಥಾನ ಸಮಾರೋಪ ಯೋಗ್ಯೋಯಂ ಯತಿ ರೂಪವಾನ್ ।

ಆಕಲ್ಪಂ ಬ್ರಹ್ಮಣ ಕೃಷ್ಣಾ ಪ್ರಸಾದೈಕ ಭಾಜನಂ
ಕೃಷ್ಣಾರ್ಚಕೋ ಯತಿರ್ಭೂತ್ವಾ ವಾದಿರಾಜೋವದಿಷ್ಯತಿ ।।

ಪ್ರಾಣಪ್ರಭ = ಜೀವರ ಒಡೆಯ

ಪ್ರಾಣಸುತ = ಹನುಮ - ಭೀಮ - ಮಧ್ವರು
ಪ್ರಾಜ್ಞ = ಎಲ್ಲವನ್ನು ಬಲ್ಲವರು = ಸರ್ವಜ್ಞರು
ಪ್ರಾಣ = ಜೀವ / ವಾಯು

ಪ್ರಾಣ ಪಂಚಕ ರೂಪ = ಪ್ರಾಣ - ಅಪಾನ - ವ್ಯಾನ - ಉದಾನ - ಸಮಾನಗಳೆಂಬ ಐದು ರೂಪಗಳು


ಪ್ರಾಣ ವಾಯುಗಳು = ಪ್ರಾಣ - ಅಪಾನ - ವ್ಯಾನ - ಉದಾನ - ಸಮಾನ ವಾಯುಗಳು

***********

ಮಾರ್ಗಶೀರ್ಷ ಮಾಸ ಶುಕ್ಲಪಕ್ಷ  ತ್ರಯೋದಶೀ ಹನುಮದ್ವ್ರತ , ಹನುಮ ಜಯಂತಿ ಅಲ್ಲ
27-12-2020, ರವಿವಾರ
ಹನುಮದ್ವ್ರತ
ಇದು ಅನಂತ ವ್ರತದಂತೆ ಒಂದು ವ್ರತ. 
ಅನಂತ ವ್ರತದಲ್ಲಿ ಯಮುನಾ ಪೂಜೆ ಮಾಡಿದರೆ ಇದರಲ್ಲಿ ಪಂಪಾ ಪೂಜೆ. 
ಅದರಲ್ಲಿ 14 ಗಂಟುಗಳ ದೋರ ಧರಿಸಿದರೆ ಇದರಲ್ಲಿ 13 ಗಂಟುಗಳ ದೋರ ಧರಿಸಬೇಕು.
ಅನಂತನ ದೋರ ರಕ್ತವರ್ಣದ್ದಾದರೇ ಹನುಮದ್ವ್ರತದಲ್ಲಿ ಹಳದೀ ದೋರವನ್ನು ಧರಿಸಬೇಕು.
ಹನುಮನೆಂದರೆ ಜ್ಞಾನ. ಅಂತಹ ಜ್ಞಾನವನ್ನು ಹೊಂದಿರುವವನು ಹನುಮಾನ್.
ಋಜುಗಣದ ಅರಸರಾದ ಹನುಮ ದೇವರು ಯತಾರ್ಥ ಜ್ಞಾನಿಗಳು. ಹೀಗೆ ಇವರನ್ನು ಉಪಾಸಿಸುವುದರಿಂದ ಅವರ ಅನುಗ್ರಹವಾಗಿ ನಮಗೂ ಯತಾರ್ಥ ಜ್ಞಾನವನ್ನು ಕರುಣಿಸುವರು. ಮಕ್ತಿಯೋಗ್ಯನಿಗೆ ಇದು ಅವಶ್ಯಕ.
ಹನುಮದಷ್ಟಕ
ವನಜಲೋಚನಂ ಬಂಧಮೋಚನಂ ಸೃಷ್ಟಿಪಾಲನಂ ಕಷ್ಟನಾಶನಂ |ಮದನಮೋಹನಂ ಪಿಂಗಳಾನನಂ ಮಾರುತಿಂ ಭಜೇ ವಾಯುನಂದನಮ್ ||1||
ಸ್ಮರ್ಯರಕ್ಷಕಂ ದಃಖಮೋಚನಂ ಕುರುಕಲಾಂತಕಂ ದೈತ್ಯವಂಚಕಂ |
ಧರ್ಮಪಾಲಕಂ ಪಾಪನಾಶಕಂ ಮಾರುತಿಂ ಭಜೇ ರಾಮಸೇವಕಂ ||2||

ವಿಭುದತೋಷಿಣಂ ಮಧುರಭಾಷಿಣಂ ದುಷ್ಟಹಾರಿಣಂ ರಾಮಭಾಷಿಣಂ |
ಮಗಧಹಾರಿಣಂ ಸೂರ್ಯಮೋಕ್ಷಿತಂ ಮಾರುತಿಂ ಭಜೇ ಗುಣವಿಭೂಷಿತಂ ||3||

ಭಾಸಕಪ್ರದಂ ರಾಮಭಕ್ತಿದಂ ಪ್ರಣತಕಾಮದಂ ಸತ್ಯದಪ್ರದಂ |
ಭಕ್ತಿಮುಕ್ತಿದಂ ದೈತ್ಯದುಃಖದಂ ಮಾರುತಿಂ ಭಜೇ ನಿಜಸುಖಪ್ರದಂ ||4||

ನಿಜಜನೋದಯಂ ಸ್ವಜನತಾಪ್ರಿಯಂ ಮೋದಜಿನ್ಮಯಂ ನಿರ್ಜಿತಾಮಯಂ |
ದ್ಯುಮಣಿನಿರ್ಜಯಂ ರಾಘವಪ್ರಿಯಂ ಮಾರುತಿಂ ಭಜೇ ಇಂದ್ರಜಿಜ್ಜಯಂ ||5||

ಸನ್ಮನೋಹರಂ ಭಾನುಭಾಸ್ಕರಂ ಸುಗುಣಸಾಗರಂ ಪಾಲಿತಾಮಯಂ |
ಹರಿಹಯಾರ್ಜಿತಂ ಈಶವಂದಿತಂ ಮಾರುತಿಂ ಭಜೇ ದೀಪ್ತಿರಾಜಿತಂ ||6|

ಪಾರ್ಥಸೇವಿತಂ ರಾಮಯಂತ್ರಿತಂ ಕವಿಗುಣಾನ್ವಿತಂ ಶುಕ್ರವಂದಿತಂ |
ಪದ್ಮಜಾರ್ಚಕಂ ಶ್ರೀಮದಾತತಂ ಮಾರುತಿಂ ಭಜೇ ಭಕ್ತಸೇವಿತಂ ||7||

ಮೋಹನಾಶಕಂ ಜ್ಞಾನದಾಯಕಂ ತಮೋನಾಶಕಂ ಸರ್ವರಕ್ಷಕಂ |
ಭಾಷ್ಯಕಾರಕಂ ಮುಕ್ತಿದಾಯಕಂ ಮಾರುತಿಂ ಭಜೇ ಸೇವಕಂ ಹರೇ ||8||
🙏🏼ಇತಿ ಶ್ರೀಹನುಮದಷ್ಟಕ ಸಂಪೂರ್ಣಂ🙏🏼
ಸಂಗ್ರಹ
*******
" ಶ್ರೀ ಮುಖ್ಯಪ್ರಾಣದೇವರ ಹಿರಿಮೆ "
ಪ್ರಥಮೋ ಹನುಮನ್ನಾಮ 
ದ್ವಿತೀಯೋ ಭೀಮ ಏವ ಚ ।
ಪೂರ್ಣಪ್ರಜ್ಞಸ್ತೃತೀಯಸ್ತು 
ಭಗವತ್ಕಾರ್ಯ ಸಾಧಕಃ ।।
ಜೀವೊತ್ತಮರೂ, ತತ್ತ್ವಾಭಿಮಾನಿ ದೇವತೆಗಳಿಗೂ ನಿಯಾಮಕರಾದ ಶ್ರೀ ಮುಖ್ಯಪ್ರಾಣದೇವರ ಉಲ್ಲೇಖ ಎಲ್ಲಾ ಉಪನಿಷತ್ತುಗಳಲ್ಲೂ ಇವೆ. 
" ಷಟ್ ಪ್ರಶ್ನೋಪನಿಷತ್ತು " ನಲ್ಲಿ.. 
ಪಂಚಭೂತಾಭಿಮಾನಿಗಳೂ ಮತ್ತು ಇಂದ್ರಿಯಾಭಿಮಾನಿಗಳೂ ವಾಯು, ಅಗ್ನಿ ಮೊದಲಾದ ದೇವತೆಗಳು ಶರೀರಾದಿಗಳ ಧಾರಕರು ಹಾಗೂ ಪ್ರೇರಕರು ಆಗಿದ್ದಾರೆ. ಅವರಿಗೆ ತಾವೇ ಶ್ರೇಷ್ಠರೆಂಬ ಭ್ರಮೆ ಬಂದಾಗ ಅವರನ್ನು ಕುರಿತು ಶ್ರೀ ಮುಖ್ಯಪ್ರಾಣದೇವರು ತಾವೇ ಶರೀರೇಂದ್ರಿಯ ವಿಧಾರಕರೆಂದು ಸಾಬೀತು ಮಾಡಿದ್ದಾರೆ. 
ಇದರಂತೆ ಶರೀರದಲ್ಲಿರುವ ಹದಿನಾರು ಕಲೆಗಳಿಗೂ ಅಭಿಮಾನಿ ದೇವತೆಗಳ ಸೃಷ್ಟಿಯನ್ನು ನಿರೂಪಿಸುವಾಗ ಭಗವಂತನಿಂದ ಭಿನ್ನರಾದ ನ್ಯಾಸಿಕ ವಾಯು ಮತ್ತು ಭೂತ ವಾಯುಗಳಿಗಿಂತ ಭಿನ್ನರಾದ " ಪ್ರಾಣರ " ಉಲ್ಲೇಖ ಗಮನಾರ್ಹ. 
ಈ ವಿಷಯವನ್ನು  " ಷಟ್ ಪ್ರಶ್ನೋಪನಿಷತ್ತು " ನ 2.2 ಮತ್ತು 6.6 ಮಂತ್ರಗಳನ್ನು ನೋಡುವುದು. 
ಎಲ್ಲ ಇಂದ್ರಿಯಗಳಲ್ಲೂ, ಅವುಗಳ ಅಭಿಮಾನಿ ದೇವತೆಗಳಲ್ಲೂ ಇದ್ದು ಕಾರ್ಯ ಮಾಡುವವರು ಎಂದು " ಛಾಂದೋಗ್ಯೋಪನಿಷತ್ತು ಸಾರಿ ಹೇಳುತ್ತಿದೆ. 
ನ ವೈ ವಾಚೋ ನ ಚಕ್ಷೂ೦ಸಿ 
ಶ್ರೋತ್ರಾಣಿ ನ ಮನಾಂಸೀತ್ಯಾಚಕ್ಷತೇ ।
ಪ್ರಾಣೋ ಹೈವೈತ್ಯಾನಿ ಸರ್ವಾಣಿ ಭವತಿ ।।
" ನಮಸ್ತೇ ವಾಯೋ ತ್ವಮೇವ 
ಪ್ರತ್ಯಕ್ಷಂ ಬ್ರಹ್ಮಾಸೀ " 
ಎಂಬುದಾಗಿ ತೈತ್ತಿರೇಯೋಪನಿಷತ್ ಶ್ರೀ ಮುಖ್ಯಪ್ರಾಣದೇವರನ್ನು ಅನುಭವಗೋಚರರಾದ ಬ್ರಹ್ಮರೆಂದೆ ಪರಾಮರ್ಶಿಸಿದೆ. 
ಹೀಗೆ ಅಸಂಖ್ಯವಾದ ವಾಕ್ಯಗಳು ಜೀವೊತ್ತಮರಾದ, ವಿಶ್ವ ನಿಯಾಮಕಾರಾದ ಶ್ರೀ ಮುಖ್ಯಪ್ರಾಣದೇವರನ್ನು ಪ್ರಸಿಪಾದಿಸುತ್ತವೆ. 
ಈ ಹಿನ್ನೆಲೆಯಲ್ಲಿ ಶ್ರೀ ಮುಖ್ಯಪ್ರಾಣದೇವರು ವೇದೋಪನಿಷತ್ತುಗಳಲ್ಲಿ ಪ್ರಸಿದ್ಧಿ ಮತ್ತು ವಿಜ್ಞೇಯ. ದುರಾಗ್ರಹಿಗಳಾದ ಅಜ್ಞಾನಿಗಳಿಗೆ ಆಜ್ಞೇಯರೂ ಆಗಿದ್ದಾರೆ. 
" ಶ್ರೀ ವಾಯುದೇವರ ವೈಭವ "
ಶ್ರೀ ವಾಯು - ಶ್ರೀ ಬ್ರಹ್ಮದೇವರ ಮಹಿಮೆ ಅಪಾರ. 
ವೇದಗಳಲ್ಲಿ ಬಣ್ಣಿಸಿದ ಶ್ರೀ ಹರಿಯ ಎಲ್ಲಾ ಗುಣಗಳನ್ನೂ ಚಿಂತಿಸುವ ಹಿರಿಮೆ ಅವರಿಗಿದೆ. 
ಆದ್ದರಿಂದ ಅವರನ್ನು.....
 " ಶಾಸ್ತ್ರ ಸಾಹಿತ್ಯ ತ್ಯಕ್ತ ವೈದಿಕ " 
ಎಂದು ಗೌರವಿಸಿದೆ. 
ಇದನ್ನು " ಭಾಗವತ ತಾತ್ಪರ್ಯ " ದಲ್ಲಿ... 
ವೈದಿಕಸ್ತ್ಯಕ್ತ ವೇದಾಶ್ಚ-
ಬ್ರಹ್ಮೈವ ಹಿ ಚತುರ್ಮುಖಃ ।
ಕೇವಲಂ ವೇದ ಶಬ್ದೇನ 
ಜಾನಾನ್ ವೈದಿಕ ಉಚ್ಯತೇ ।
ವೇದಂ ವಿನಾಪ್ಯಭವಾನ್ 
ಜಾನಂತಸ್ತ್ಯಕ್ತವೈದಿಕಾಃ ।।
ಋಷಿಗಳಿಂದ ದೇವತೆಗಳ ವರೆಗೆ ಪ್ರತಿಭೆ ಹೆಚ್ಚುತ್ತಾ ಹೋಗುವುದು. 
ದೇವೋತ್ತಮರಾದ ಶ್ರೀ ವಾಯುದೇವರ ಪ್ರತಿಭೆ ಕಲ್ಪನಾತೀತವಾದದ್ದು. 
ಅವರು ಯಾವಾಗಲೂ ವಿಶ್ವ ಮತ್ತು ಅದನ್ನು ನಿರ್ಮಿಸಿದ ಶ್ರೀ ಹರಿ ಹಾಗೂ ಅವನನ್ನು ಬಣ್ಣಿಸುವ ಸಕಲ ಶಾಸ್ತ್ರಗಳನ್ನೂ ಅರಿತವರು. 
ಹೀಗಿದ್ದರೂ ಅವರು ಕೇವಲ ಶ್ರೀ ಹರಿಯ ಪ್ರೀತಿಗಾಗಿ ಶ್ರವಣ ಮಾಡುತ್ತಾರೆ. 
ಅವರಿಗೆ " ಅಪ್ರತಿಭಾಸ " ( ಮರೆಯುವುದು ಅಥವಾ ಹೊಳೆಯದಿರುವುದು ) ಎಂಬ ಪರಿಸ್ಥಿತಿಯೇ ಇಲ್ಲ. 
ಋಷಿನ್ ಆಜ್ಞಸ್ತಥಾರಭ್ಯ 
ಪ್ರತಿಭಾಭ್ಯಧಿಕ ಕ್ರಮಾತ್ ।
ಯಾವದ್ಬ್ರಹ್ಮ ಬ್ರಹ್ಮಣಸ್ತು 
ಪ್ರಾಯೋನಾsಪ್ರತಿಭಾಸಿತಮ್ ।।
ಶ್ರೀ ವಾಯುದೇವರು ಎಲ್ಲಾ ಜೀವರ ಅಭಿಮಾನಿಗಳು ಮಾತ್ರವಲ್ಲದೇ ಜೀವರ ಜ್ಞಾನಾನಂದಾದಿ ಗುಣಗಳಿಗೆ ಪ್ರತ್ಯೇಕವಾಗಿ ನಿಯಾಮಕರಾಗಿದ್ದಾರೆ. 
ಸರ್ವ ಜೀವಾಭಿಮಾನೀ ತು
ಬ್ರಹ್ಮೈ ವ ಹಿ ಚತುರ್ಮುಖಃ ।
ನ ಕೇವಲಂ ಜೀವ 
ನಿಯಾಮಕೋ ಕಿಂತು 
ಬಲ ಜ್ಞಾನಾದಿ ಗುಣಾನಾಮಪಿ 
ಚಿತ್ತಂ ವಾಯುರ್ಬಲಂ ಧೃತಿಃ ।
ಧೃತಿರ್ಯೋಗಶ್ಚವೈರಾಗ್ಯಂ 
ಜ್ಞಾನಂ ಪ್ರಜ್ಞಾ ಸ್ಮೃತಿಃ ಸುಖಮ್ ।
ಮೇಧಾ ಮುಕ್ತಿರ್ವಿಷ್ಣುಭಕ್ತಿಃ ।।
ಜ್ಞಾನಾನಂದ ರೂಪವಾದ ಜೀವನಿಗೆ ಅನುಭೂತಿ, 
ಇಂದ್ರಿಯ ಮತ್ತು ಮನಸ್ಸುಗಳ ಮೂಲಕ ಜಾಗರ - ಸ್ವಪ್ನಗಳಲ್ಲಿ ಅರಿವಿನ ಮಹಾಪೂರವನ್ನು ಹರಿಸಿ ಜಾಢ್ಯ ಪರಿಹರಿಸುವ ದಯಾಳು ದೇವತೆಯೇ ಶ್ರೀ ಮುಖ್ಯಪ್ರಾಣದೇವರು. 
ಇಂದ್ರಿಯಾಭಿಮಾನಿ ಜೀವರಲ್ಲಿ ಒಂದೊಂದು ರೂಪದಲ್ಲಿರುವುದರ ಜೊತೆಗೆ ಜೀವನಲ್ಲೂ ಇದ್ದು ಮುಖ್ಯವಾದ " ನಾನು " ಎಂಬ ಪ್ರಜ್ಞೆ ನೀಡುವವರೇ ಶ್ರೀ ಮುಖ್ಯಪ್ರಾಣದೇವರು. 
ಇಂದ್ರಿಯಸ್ಥೈಃ ಸ್ವರೂಪೈಸ್ತು 
ಜ್ಞಾನಾನಿ ಜನಯತ್ಯಸೌ ।
ಮನಸ್ಥೇನ ವಿಶೇಷೇಣ
ಕಾಮಕರ್ಮಕೃದೇವ ಚ ।।
ಪೃಥಕ್ ಸ್ಥಿತೇನ ರೂಪೇಣ 
ಜೀವಂ ಧಾರಯತಿ ಪ್ರಭುಃ । 
ಜೀವ ಸ್ಥಿತೇನ ರೂಪೇಣ 
ವೇದಯತ್ಯಹಮಿತ್ಯಪಿ ।।
ಗಾಢ ನಿದ್ದೆಯಲ್ಲಿ ಶಿವ, ಇಂದ್ರ, ಕಾಮ ಮೊದಲಾದ ದೇವತೆಗಳು ತಮ್ಮ ಒಡೆತನಕ್ಕೆ ಒಳಪಟ್ಟು ಇಂದ್ರಿಯ ಕಾರ್ಯಗಳನ್ನು ನಿಲ್ಲಿಸಿ, ದೇಹದಲ್ಲಿ ಶ್ರೀ ಮುಖ್ಯಪ್ರಾಣದೇವರ ಸನಿಹದಲ್ಲಿ ವಿಶ್ರಾಂತಿ ಪಡೆಯುತ್ತಾರೆ. 
ಆಗಲೂ " ನಾನು " ಎಂಬ ಅರಿವು ನೀಡಲು, ಕಾಲ - ಸುಖಗಳ ಪ್ರಜ್ಞೆ ನೀಡಲು ಶ್ರೀ ಪ್ರಾಣದೇವರು ಜಾಗೃತರಾಗಿ ಜೀವರನ್ನು ರಕ್ಷಿಸುತ್ತಾರೆ.
ಇದನ್ನು ಭಾಗವತ ತಾತ್ಪರ್ಯದಲ್ಲಿ... 
ದೇಹಾದ್ದೇಹಾಂತರಗತೌ 
ಪ್ರವೀಶೇತ್ ಪ್ರಾಣಮೇವ ತು ।
ಜೀವಃ ಪ್ರಾಣಃ ಪರಾತ್ಮಾನಮೇವಂ 
ಸುಪ್ತಾವಪಿ ಸ್ಫುಟಮ್ ।।
ತದನ್ಯಾ ದೇವತಾಃ ಸರ್ವೇ 
ಪ್ರಾಣಾಸ್ಯೈವ ವಶೇ ಸ್ಥಿತಾಃ ।
ಈಷಶ್ಚ ಸುಪ್ತವದ್ ಯಾಂತಿ 
ನೈವ ಮಾನುಷ ಜೀವನಾತ್ ।।
ರಮಾನಾರಾಯಣರು ಸಹಜವಾಗಿಯೇ ಬ್ರಹ್ಮಾಂಡದ ಹೊರಗೆ ವ್ಯಾಪ್ತರು. 
ಆದರೆ ಶ್ರೀ ವಾಯುದೇವರು ಪ್ರಕಾಶ ರೂಪದಿಂದ ಬ್ರಹ್ಮಾಂಡದ  ಹೊರಗೂ ವ್ಯಾಪ್ತರು. 
ಪ್ರಾಣ ಏವಾಧಸ್ತಾತ್ ಪ್ರಾಣ 
ಉಪರಿಷ್ಟಾತ್ ಪ್ರಾಣೋ ಮಧ್ಯತಃ ।
ಪ್ರಾಣ ಏವೇದಂ ಸರ್ವಮ್ ।।
ಎಲ್ಲಾ ದೇವತೆಗಳು ದೇಹವನ್ನು ತೊರೆದರೂ ಪ್ರಾಣನಿರುವಾಗ ಅದನ್ನು ಗೌರವಿಸುವರು. 
ಉಳಿದೆಲ್ಲಾ ಇಂದ್ರಿಯಗಳು ಗಟ್ಟಿಯಾಗಿರುವಾಗಲೇ ಶ್ರೀ ಪ್ರಾಣದೇವರು ದೇಹವನ್ನು ತೊರೆದಲ್ಲಿ ಅದನ್ನು " ಹೆಣ ಅಥವಾ ಶವ " ಎನ್ನುತ್ತಾರೆ. ಶ್ರೀ ಪ್ರಾಣದೇವರ ಮಹಿಮೆ ಹೇಗಿದೆ.. 
ಉಳಿದೆಲ್ಲ ದೇವತೆಗಳು ದೇಹದಲ್ಲಿ ತಮ್ಮ ಕೆಲಸ ನಿಲ್ಲಿಸುವುದಿದೆ, 
ಬಳಲುವುದಿದೆ. 
ಆದರೆ ಶ್ರೀ ಮುಖ್ಯಪ್ರಾಣದೇವರಿಗೆ ಬಳಲಿಕೆ ಆಗಲೀ, ಕೆಲಸ ನಿಲ್ಲಿಸುವುದಾಗಲೀ ಇಲ್ಲ. 
ಒಂದು ಸ್ಥೂಲ ದೇಹವನ್ನು ಜೀವನು ತೊರೆದರೆ ಇನ್ನೊಂದು ದೇಹದಲ್ಲಿ ಶ್ರೀ ಪ್ರಾಣದೇವರ ಶ್ವಾಸ ಜಪ ಮುಂದುವರೆಯುವುದು. 
ಬರೀ ಸ್ಥೂಲ ದೇಹದಲ್ಲಿ ಮಾತ್ರವಲ್ಲದೇ ಸ್ವರೂಪ - ಲಿಂಗ - ಅನಿರುದ್ಧ ಶರೀರಗಳಲ್ಲೂ ಕ್ರಮವಾಗಿ 21600  ಹಂಸಮಂತ್ರ ಅಥವಾ ಶ್ವಾಸ ಜಪವನ್ನು ಶ್ರೀ ವಾಯುದೇವರು ನಡೆಸುತ್ತಾರೆ. 
ಪ್ರತಿಯೊಬ್ಬ ಜೀವನ 4 ಶರೀರಗಳಲ್ಲಿದ್ದು ಕೇವಲ ಹರಿ ಪೂಜೆಯೆಂಬ ಅನುಸಂಧಾನದಿಂದ 21600 X 4 = 86400 ಮಂತ್ರ ಜಪವನ್ನು ಶ್ರೀ ವಾಯುದೇವರು ನಡೆಸುತ್ತಾರೆ. 
ಶ್ರೀ ವಾಯುದೇವರು ಒಂದು ಕ್ಷಣ ಜಪ ನಿಲ್ಲಿಸಿದರೆ ಜೀವ - ಜಡಗಳ ನಡುವಣ ಅಂತರವೇ ಹೊರಟು ಹೋಗುತ್ತದೆ. 
ಇಂತಹಾ ಮಹೋಪಕಾರ ಮಾಡುವ ಶ್ರೀ ವಾಯುದೇವರಿಗೆ ಈ ಜೀವ ಸಮುದಾಯ ಭಕ್ತಿ ಶ್ರದ್ಧೆಯ ನಮಸ್ಕಾರ ಮಾಡುವುದಲ್ಲದೆ ಬೇರೇ ಮಾಡಬಲ್ಲದು?
ಮುಖ್ಯಪ್ರಾಣೇನ ಮದ್ದೇಹೇ 
ಮಂತ್ರತ್ರಯಜಪಃ ಸದಾ ।
ಅನುಗ್ರಹಾಯ ಮೇ ವಿಷ್ಣೋಃ 
ಪ್ರೀತಯೇ ಕ್ರಿಯತೇ ಹಿ ಸಃ ।।
ಏಕವಿಂಶತ್ಸಹಸ್ರಾತ್ಮಾ 
ಸಷಟ್ಶತಮಹರ್ನಿಷಂ ।
ಶ್ವಾಸರೂಪೋ ಜಪೋ 
ನಿತ್ಯಮುಭಯೋರ್ವಿದ್ವದಜ್ಞಯೋಃ ।।
ಶ್ರೀ ವಾಯುದೇವರು, ಶ್ರೀಮನ್ನಾರಾಯಣರು ಅಜ್ಞಾನರಲ್ಲ. 
ಆದ್ದರಿಂದ ಸರ್ವ ಶಬ್ದವಾಚ್ಯರೂ, ಶಬ್ದದ ಅರ್ಥವ್ಯಾಪಿ ಸಂಪೂರ್ಣವಾಗಿ ಶ್ರೀ ಹರಿಯಲ್ಲಿ ಇರುವುದಾದರೆ ಶ್ರೀ ವಾಯುದೇವರಲ್ಲಿ ಶಬ್ದವು ಸಾಮಾನ್ಯಾರ್ಥದಲ್ಲಿ ಬಳಿಕೆ ಆಗುವುದು. 
ಶ್ರೀ ರುದ್ರಾದಿ ದೇವತೆಗಳಲ್ಲಿ ಅಮುಖ್ಯವೃತ್ತಿಯಿಂದಲೇ ಬಳಿಕೆ ಆಗುತ್ತದೆ. 
ಆದರೆ ರುದ್ರಾದಿ ದೇವತೆಗಳಿಗಿಂತ ವಿಶಿಷ್ಟರಾದ ಶ್ರೀ ವಾಯುದೇವರಲ್ಲಿ ಮುಖ್ಯವೃತ್ತಿಯಿಂದಲೇ ಶಬ್ದದ ಬಳಿಕೆ ಆಗುತ್ತದೆ.  
ಶ್ರೀ ಹರಿಯಲ್ಲಿ ಮಹಾ ಯೋಗದಿಂದ ಶಬ್ದ ಪ್ರವೃತ್ತಿಯಾದರೆ ಶ್ರೀ ವಾಯುದೇವರಲ್ಲಿ ಯೋಗದಿಂದ ( ಮುಖ್ಯ ವೃತ್ತಿಯಿಂದ ) ಶಬ್ದವು ಪ್ರವೃತ್ತಿಯಾಗುತ್ತದೆ. 
ಹೀಗೆ ವೃತ್ತಿ ಭೇದದಿಂದ ಈರ್ವರಿಗೂ ವೇದ ಪ್ರತಿಪಾದತ್ವವಿದೆ. 
ಶ್ರೀ ವಾಯುದೇವರ ಮೂಲರೂಪ, ಬಲ, ಜ್ಞಾನ, ಪರಿಪೂರ್ಣ. ಅದರಂತೆ ಹನುಮ - ಭೀಮ - ಮಧ್ವ ಎಂಬ ಅವತಾರಗಳೂ ಕೂಡಾ ಪರಿಪೂರ್ಣವೇ. ಇದನ್ನೇ ಬಳಿತ್ಥಾ ಸೂಕ್ತ ಸಾರಿದೆ . 
" ಬಟ್ ತದ್ದರ್ಶನಮಿತ್ಥಮೇವ ನಿಹಿತಮ್ "
ಉಳಿದೆಲ್ಲ ದೇವತೆಗಳಿಗೆ ಮೂಲ ರೂಪದ ಬಲ, ಜ್ಞಾನದಿಗಳು ಅವತಾರ ರೂಪದಲ್ಲಿ ಇರುವುದಿಲ್ಲ. 
ಒಮ್ಮೊಮ್ಮೆ ಶ್ರೀ ಹರಿವಾಯುಗಳ ಕೃಪೆಯಿಂದ ಅವತಾರದಲ್ಲಿ ಮೂಲ ರೂಪದ ಬಲ ವ್ಯಕ್ತವಾಗುತ್ತದೆ. 
ಆದರೆ ಶ್ರೀ ವಾಯುದೇವರಿಗೆ ಅವತಾರ ರೂಪದಲ್ಲಿಯೂ ಮೂಲರೂಪದ ಜ್ಞಾನ ಬಲಗಳು ಶಕ್ತಿ ರೂಪದಲ್ಲಿ ಇರುತ್ತವೆ. 
ಉಳಿದೆಲ್ಲ ದೇವತೆಗಳು ಪ್ರಳಯಕಾಲದಲ್ಲಿ ನಿದ್ರಿಸಿದರೆ ಶ್ರೀ ವಾಯುದೇವರ ಮನಸ್ಸು ನಿರಂತರ ಶ್ರೀ ಹರಿಯ ಚಿಂತನೆಯಲ್ಲೇ ತೊಡಗಿರುತ್ತದೆ. 
ಶ್ರೀ ಹರಿಯ ಹಿರಿಮೆ ಗರಿಮೆಗಳ ನಿತ್ಯ ನಿರಂತರ ಅನುಸಂಧಾನವೇ ಶ್ರೀ ವಾಯುದೇವರ ಭಾಗ್ಯ. 
" ಅನುವ್ಯಾಖ್ಯಾನ " ದಲ್ಲಿ.....
ಪ್ರಲಯೇsಪಿ  ಪ್ರತಿಭಾತಪರಾವರಃ ।
ಮುಖ್ಯವಾಯುರ್ನಿತ್ಯಸಮಃ ।।
" ಬೃಹದ್ಭಾಷ್ಯ " ದಲ್ಲಿ......
ಅಮೃತೋ ವಾಯುರುದ್ದಿಷ್ಟಃ 
ನಿತ್ಯ ಜ್ಞಾನಾತ್ಮಕತ್ವತಃ ।।
ಶ್ರೀ ಹರಿಯು ಸ್ವತಂತ್ರವಾಗಿ ಮುಕ್ತಿ ನೀಡಿದರೆ, ಶ್ರೀ ವಾಯುದೇವರು ಶ್ರೀ ಹರಿಯ ಕೃಪೆಯಿಂದ ಮುಕ್ತಿ ನೀಡಬಲ್ಲರು. 
" ವಿಷ್ಣುರ್ಹಿ ದಾತಾ ಮೊಕ್ಷಸ್ಯ 
ವಾಯುಸ್ತು ತದನುಜ್ಞಯಾ ". 
ಶ್ರೀ ವಾಯುದೇವರು ವೈಕುಂಠಕ್ಕೆ ಈ ದೇಹದಿಂದಲೇ ಹೋಗಿ ಬರಬಲ್ಲರು. 
ಈ ವಿಷಯವು " ಮಹಾಭಾರತ ತಾತ್ಪರ್ಯ ನಿರ್ಣಯ " ದಲ್ಲಿ ಉಲ್ಲೇಖಿತವಾಗಿದೆ. 
ಪಯೋಬ್ಧಿಮಧ್ಯಗಂ ಚ ಮೇ 
ಸುಸದ್ಮ ಚಾನ್ಯದೇವ ವಾ ।
ಯಥೇಷ್ಟತೋ ಗಮಿಷ್ಯಸಿ 
ಸ್ವದೇಹ ಸಂಯುತೋsಪಿಸ್ಯನ್ ।।
ಪಾಪ ಪ್ರಾರಬ್ಧದಿಂದ ಒದಗುವ ಅಪಮೃತ್ಯುವನ್ನು ಋಗ್ವೇದದ...
" ಯದಂತಿ ಯಚ್ಛ ದೂರಕೆ " 
ಇತ್ಯಾದಿ ಮಂತ್ರ ಪಠಣದಿಂದ ಪರಿಹರಿಸುವ ಕರುಣಾಳುಗಳು ಶ್ರೀ ಮುಖ್ಯಪ್ರಾಣದೇವರು. 
ಶುದ್ಧ ಪ್ರತಿಮೆ ಶ್ರೀ ಮುಖ್ಯಪ್ರಾಣದೇವರು.  
ಇದನ್ನು ಛಾಂದೋಗ್ಯೋಪನಿಷತ್ತು........ 
ತಂ ಹ ಅಸುರಾ ಋತ್ವಾ ವಿದಧ್ವಸುಃ 
ಯಥಾ ಅಶ್ಮಾನಮಾಖಣಮೃತ್ವಾ 
ವಿಧ್ವಂಸೇತ ಏವಮ್ ।।
32 ಅಪೂರ್ವ ದಿವ್ಯ ದೇಹ ಲಕ್ಷಣಗಳಿಂದ ಕಂಗೊಳಿಸುವ ಯಾವ ಅವಲಕ್ಷಣವೂ ಇಲ್ಲದ ಪರಿಶುದ್ಧ ದೇಹಧಾರಿಗಳು ಶ್ರೀ ಮುಖ್ಯಪ್ರಾಣದೇವರು. 
ಮೂಲ - ಅವತಾರ ರೂಪಗಳಲ್ಲಿ ಈ ದೇಹ ಧರಿಸುವ ಭಾಗ್ಯ ಮಿಕ್ಕ ದೇವತೆಗಳಿಗೆ ಇಲ್ಲ. 
ಪ್ರಳಯ ಕಾಲದಲ್ಲೂ ಇಂದ್ರಾಗ್ನ್ಯಾದಿ ಸಕಲ ದೇವತೆಗಳ ಸಂಹಾರಕನಾಗಿದ್ದು " ಸಂವರ್ಗ " ಎನ್ನಿಸಿದ್ದಾರೆ ಶ್ರೀ ವಾಯುದೇವರು. 
ಕಲ್ಯಾಣಿದೇವಿ ವಿರಚಿತ ಲಘು ವಾಯುಸ್ತುತಿಯಲ್ಲಿ.......
ದೇವ ಚೂಡಾಮಣಿಂ ಪೂರ್ಣಬೋಧಂ 
ಕೃಷ್ಣ ಪಾದಾರವಿಂದೈಕ ದಾಸಮ್ ।
ತತ್ತ್ವ ಚಿಂತಾಮಣಿಂ ಪೂರ್ಣರೂಪಂ 
ನಂದಯಾಮೋ ವಯಂ ನಂದತೀರ್ಥಂ ।।
ಶ್ರೀ ವಾದಿರಾಜರೂ ಸಹ.. 
ಪೂರ್ವಃ ಪೂರ್ವಃ ಪೂರ್ವಪಕ್ಷಃ 
ಯಾವನ್ಮಧ್ವಮತೋದಯಃ ।
ಅಂತೇ ಸಿದ್ಧಸ್ತು ಸಿದ್ಧಾಂತಃ 
ಮಧ್ವಸಾಮ್ಯಗ ಏವ ಹಿ ।।
ರಾಗ : ಮಾರವಿ   ತಾಳ : ತ್ರಿವಿಡಿ
ಶುಭ ಸುಂದರ ಕಾಯ ।
ವಿಭುವೇ ಸುರ 
ಗುರುರಾಯಾ ।। ಪಲ್ಲವಿ ।।
ನಿರುತ ಅಂತರದೊಳು 
ಹರಿಗೆ ಸಮ್ಮೊಗನಾಗಿ ।
ಕರವ ಜೋಡಿಸಿ 
ಬಿನ್ನೈಪಾ ।
ಗುರುವೇ ಯೆನ್ನಯ 
ಮಾತು ಕೇಳೋ ।
ದುರಿತ ರಾಶಿ ಪರಿಹಾರ 
ಮಾಡೋ ।। ಚರಣ ।।
ಮಾರುತಿ ಸದಾ ಗತಿ  
ಭಾರತೀ ಪತಿ ಯತಿ ।
ಮಾರಾರಾತಿಗೆ ನೀ ಗತಿ ।
ಮಾರುತ್ತರಗಾಣೆ ಮಾರುತಿ ।
ಮಾರಿಗಳಿಗೆ ನಿರುತ 
ಮಾರಕ 
ನೀನಹುದೋ ।। ಚರಣ ।।
ವಾಯು ಎನಗೆ । ಸಂಪೂ ।
ರ್ಣಾಯು ಸರ್ವ 
ಸಾಯುಜ್ಯ ಸಾರೂಪ್ಯನೇ ।
ಕುಯುಕ್ತಿ ಜನರ ಗದಾ
ಯುದ್ಧದಿಂದಟ್ಟಿ ।
ಈ ಯುಗದೊಳು 
ಬಲವಾಗೋ ।। ಚರಣ ।।
ಕಾಯಯ್ಯಾ ಕರುಣದಿ 
ಕಾಯ ನಿನ್ನದು । ಗುಣನಿ ।
ಕಾಯ ನಿರ್ದೋಷ ಕಾಯಾ ।
ಕಾಯಾ ಐದಳಮಾನ
ಕಾಯ್ದ ಕಲಿ ವೈರಿ ।
ಕಾಯಜ ಪಿತನ 
ದೂತ  ।। ಚರಣ ।।
ಪಂಕಜನಾಭನ 
ಅಂಕದಲಿಪ್ಪ ।
ಬಿಂಕವ ತಾಳದಿರೋ ।
ಸಂಕರುಷಣ ನಮ್ಮ
ವಿಜಯವಿಠ್ಠಲನ । ಹೃ ।
ತ್ಪಂಕಜದೊಳು 
ತೋರಿಸೋ ।। ಚರಣ ।।
ಆಚಾರ್ಯ ನಾಗರಾಜು ಹಾವೇರಿ  
ಗುರು ವಿಜಯ ಪ್ರತಿಷ್ಠಾನ
******
" ದಿನಾಂಕ : 27.12.2020 ಭಾನುವಾರ ಶ್ರೀ ಹನುಮದ್ವ್ರತ  "  
" ಶ್ರೀ ಮುಖ್ಯಪ್ರಾಣ - ಒಂದು ಚಿಂತನೆ "
ಲೋಕ ಕಂಟಕರಾದ ರಾವಣಾದಿ ರಾಕ್ಷಸರ ಸಂಹಾರಕ್ಕಾಗಿ ಅವತರಿಸಿದ ಸೀತಾಪತಿ ಶ್ರೀ ರಾಮಚಂದ್ರದೇವರ ಸುತ್ತಮುತ್ತಲೂ ಇದ್ದು ಅಮೋಘ ರೀತಿಯಿಂದ; ಜ್ಞಾನಪೂರ್ಣರಾದ ಅಂತೆಯೇ ಶ್ರೀ ಹನುಮಂತದೇವರೆಂದು ಪ್ರಖ್ಯಾತರಾಗಿ ಸೇವೆ ಮಾಡಿದರು. 
ಕಂಸ ಶಿಶುಪಾಲಾದಿ ದೈತ್ಯರನ್ನು ಸಂಹರಿಸಿ ಭೂಭಾರ ಹರಣಕ್ಕಾಗಿ ಮತ್ತು ಶಿಷ್ಟ ರಕ್ಷಣ ಪೂರ್ವಕ ಧರ್ಮ ಸಂಸ್ಥಾಪನೆಗಾಗಿ ಅವತರಿಸಿದ ಶ್ರೀ ಕೃಷ್ಣನನ್ನು; ಯುದ್ಧಾದಿ ಅನಿತರ ಸಾಧಾರಣ ಭಯಂಕರ ಕೃತಿಗಳಿಂದ ಶ್ರೀ ಭೀಮಸೇನ ರೂಪದಿಂದ ಸಂತೋಷಗೊಳಿಸಿದರು. 
ಮಧುನಾಮಕ ದೈತ್ಯನಿಗೆ ಶತ್ರುವಾದ ಶ್ರೀ ವೇದಾವ್ಯಾಸೋsಭಿನ್ನ ಶ್ರೀ ಹರಿಯ ಸತ್ತತ್ತ್ವ ಪ್ರಸಾರದಲ್ಲಿ ನಾಯಕರಾದ; ಅಂದರೆ ಶ್ರೀ ಮನ್ವೇದವ್ಯಾಸ ಪ್ರಣೀತ ಬ್ರಹ್ಮಮೀಮಾಂಸಾ ಶಾಸ್ತ್ರಕ್ಕೆ ಹಾಗೂ ಅವರಿಗೆ ಸಮ್ಮತವಾದ ಭಾಷ್ಯಗಳನ್ನು ರಚಿಸಿ ಅವರ ಅಪ್ಪಣೆಯಂತೆ ಆ ಬ್ರಹ್ಮ ಮೀಮಾಂಸಾ ಶಾಸ್ತ್ರದ ಪ್ರಸಾರ ಕಾರ್ಯದ ನಾಯಕರಾದ; ಆನಂದಪ್ರದ ಶಾಸ್ತ್ರ ಪ್ರವರ್ತಕರಾದ್ದರಿಂದ " ಶ್ರೀಮನ್ಮಧ್ವಾಚಾರ್ಯ " ರೆಂಬ ಅನ್ವರ್ಥ ನಾಮದಿಂದ ಸೇವಿಸಿದ; ಮಂಗಳಕರ ಮತಿಗಳಾದ ವೇದಾಭಿಮಾನಿನಿಯಾದ ಶ್ರೀ ಭಾರತೀದೇವಿಯರ ಪತಿಗಳೇ ಶ್ರೀ ವಾಯುದೇವರು.  
ಸ್ವಾಮೀ! 
ನೀವು ಪುಂಡರೀಕಾಕ್ಷನೂ, ಸುರಪಕ್ಷಪಾತಿಯೂ, ಪರಮ ಪುರುಷೋತ್ತಮನಾದ ಶ್ರೀ ವಾಸುದೇವನ ಕುಡಿನೋಟದಿಂದ ಸಾಕ್ಷಾತ್ಕರಿಸಿಕೊಂಡ ಸಕಲ ಪುರುಷಾರ್ಥವುಳ್ಳವರೂ; ಯಾವಾಗಲೂ ನೀವು ಮುಕ್ತಿಯೋಗ್ಯ ಸಜ್ಜನರ ಹಿತವನ್ನು ಬಯಸಿ ಅವರಿಗೆ ಬೆಂಬಲರಾಗಿದ್ದೀರಿ. 
" ವಿಷ್ಣುರ್ಹಿ ದಾತಾ ಮೊಕ್ಷಸ್ಯ 
ವಾಯುಸ್ತು ತದನುಜ್ಞಯಾ " 
ಎಂಬ ಪ್ರಮಾಣ ಭಾವ ಇಲ್ಲಿ ಸೂಚಿತವಾಗಿದೆ.
ದಕ್ಷ ಪ್ರಜಾಪತಿಯ ಗರ್ವಹರಣ ನಿಪುಣರಾದ; ವಿಷಮಾಕ್ಷರಾದ ಶ್ರೀ ರುದ್ರದೇವರನ್ನು ಸಂರಕ್ಷಿಸಿದ ಮಹಾನುಭಾವರು ನೀವು ( ಶ್ರೀ ವಾಯುದೇವರು ). 
ಇಲ್ಲಿ..
" ವಾಯುರಸ್ಮಾಉಪಾಮಂಥತ್ಬಿನಿಷ್ಟಸ್ಮಾಕುನನ್ನಾಮ ಕೇಶಿ ವಿಷಸ್ಯ ಮಾತ್ರೇಣ ಯದ್ರುದ್ರೇಣಪಿಬತ್ಸಹ "
ಎಂಬ ಶ್ರುತಿ ಪ್ರತಿಪಾದ್ಯವಾದ ಮಹಿಮೆ ಸೂಚಿತವಾಗಿದೆ. 
ಅಂದರೆ, 
ಅಮೃತ ಮಥನ ಕಾಲದಲ್ಲಿ ಕಾಲಕೂಟ ವಿಷವು ಉದಯಿಸಿದಾಗ ಅದರ ತಾಪ, ಕಷ್ಟಗಳನ್ನು ಸಹಿಸಲಾಗದೇ ದೇವತೆಗಳು ತಲ್ಲಣಿಸುತ್ತಿದ್ದಾಗ ನೀವೇ ( ಶ್ರೀ ವಾಯುದೇವರೇ ) ಆ ಕಾಲಕೂಟ ವಿಷವನ್ನು ಪಾನ ಮಾಡಿ; ಉಳಿದ ಸ್ವಲ್ಪ ಭಾಗವನ್ನು ಕಾರದಿಂದ ಮಥಿಸಿ; ಅದರ ತೀವ್ರತೆಯನ್ನು ನಿವಾರಿಸಿ ಶ್ರೀ ರುದ್ರದೇವರಿಗೆ ಕೀರ್ತಿ ಬರಲೋಸುಗ ಅವರಿಗೆ ಅದನ್ನು ಕೊಟ್ಟು ಶ್ರೀ ರುದ್ರದೇವರನ್ನು ಸಂರಕ್ಷಿಸಿದಿರಿ ಎಂದು ಶ್ರುತಿಯು ಸ್ತೋತ್ರ ಮಾಡಿರುವ ವಿಚಾರವು ಇಲ್ಲಿ ಸೂಚಿತವಾಗಿದೆ. 
ಇಂತು ಮಹಾ ಮಹಿಮೋಪೇತರಾದ ಶ್ರೀ ಪವಮಾನರೇ! 
ಸೃಷ್ಟಿ ಕಾಲದಲ್ಲಿ ಶ್ರೀ ಮಹಾಲಕ್ಷ್ಮೀ ಪತಿಯಾದ ಶ್ರೀಮನ್ನಾರಾಯಣನು ಮೊದಲು ನಿಮ್ಮನ್ನು ಸೃಜಿಸಿದನು. 
ಆದ್ದರಿಂದಲೇ ನೀವು.....
" ಜಗತ್ತ್ರಾಣೋ ಜ್ಯೇಷ್ಠಪುತ್ರಃ " 
ಅಂದರೆ......
ಶ್ರೀ ಹರಿಯ ಜ್ಯೇಷ್ಠ ಪುತ್ರರೆಂದು ಸರ್ವರಿಂದಲೂ ವಂದ್ಯರಾಗಿದ್ದೀರಿ. 
ಅಂಥಾ ಮಹಾ ಮಹಿಮರಾದವರೇ ಶ್ರೀ ಪಾವನ ಪವಮಾನರು!
" ಸರ್ವ ಗುಣ ಭರಿತರು "
ಶ್ರೀ ವಾಯುದೇವರು ಹನುಮ - ಭೀಮ - ಮಧ್ವಾವತಾರಗಳಲ್ಲೂ ಸಕಲ ಗುಣ ಭರಿತರು ಎಂಬುದನ್ನು ಈ ಕೆಳಗಿನ " ಮಹಾಭಾರತ ತಾತ್ಪರ್ಯ ನಿರ್ಣಯದ  2 / 149, 158, 159 ಶ್ಲೋಕ " ಗಳನ್ನು ಅವಲೋಕಿಸಿದರೆ ತಿಳಿಯುತ್ತದೆ. 
ಜ್ಞಾನೇ ವಿರಾಗೇ ಹರಿಭಕ್ತಿಭಾವೇ 
ಧೃತಿಸ್ಥಿತಿ ಪ್ರಾಣಬಲೇಷು ಯೋಗೇ ।
ಬುದ್ಧೌ ಚ ನಾನ್ಯೋ ಹನುಮತ್ಸಮಾನಃ 
ಪುಮಾನ್ ಕದಾಚಿತ್ ಕ್ವಚ ಕಶ್ಚನೈವ ।।
ತತ್ತ್ವಜ್ಞಾನ ವಿಷ್ಣುಭಕ್ತೌ 
ಸ್ಥೈರ್ಯೇ ಧೈರ್ಯೇ ಪರಾಕ್ರಮೇ ।
ವೇಗೇ ಚ ಲಾಘವೇ ಚೈವ 
ಪ್ರಲಾಪಸ್ಯ ಚ ವರ್ಜನೆ ।।
ಭೀಮಸೇನ ಸಮೋ ನಾಸ್ತಿ 
ಸೇನಯೋರುಭಯೋರಪಿ ।
ಪಾಂಡಿತ್ಯೇ ಚ ಪಟುತ್ವೇ ಚ 
ಶೂರತ್ವೇsಪಿ ಬಲೇsಪಿ ಚ ।। 
" ಹನುಮಾನ್ ಶಬ್ದಾರ್ಥ "
ಮತ್ಕರೋತ್ಸೃಷ್ಟವ್ರಜೇಣ 
ಹನುರಸ್ಯ ಯಥಾsಹತಃ ।
ನಾಮ್ನಾ ವೈ ಕಪಿಶಾರ್ದೂಲೋ 
ಭವಿತಾ ಹನುಮಾನಿತಿ ।।
" ಹನುಮಂತ " 
ಎಂಬ ಹೆಸರನ್ನು ಇನ್ನೊಂದು ರೀತಿಯಿಂದ ನೋಡಬಹುದು. 
" ಹನುಮಾನ್ " ಶಬ್ದಕ್ಕೆ....
" ಹನುರಸ್ಯ ಅಸ್ತೀತಿ ಹನುಮಾನ್ " 
ಎಂದು ವಿಗ್ರಹ. 
" ಹನು " 
ಎಂಬುದಕ್ಕೆ 
" ಹನ್ ಹಿಂಸಾಗತ್ಯೋಃ "  
ಎಂಬ ಧಾತು ಪಾಠದಂತೆ. 
" ಗತಿ " 
ಎಂದೂ 
"ಹನುಮಾನ್ " 
ಎಂದರೆ 
" ಗತಿಮಾನ್ " 
ಎಂದರ್ಥ. 
" ಗತಿ " 
ಎಂದರೆ 
" ಜ್ಞಾನ ".
" ಯೇ ಗತ್ಯರ್ಥಕಾಃ ತೇ ಜ್ಞಾನಾರ್ಥಕಾಃ "
ಆದ್ದರಿಂದ....
" ಹನುಮಾನ್ " 
ಎಂದರೆ 
" ಜ್ಞಾನವನ್ " 
ಎಂದರ್ಥ. 
ಜ್ಞಾನ ಎಂಬುದು ವಿಷ್ಣು ಭಕ್ತ್ಯಾದಿ ಇತರ ಸರ್ವ ಗುಣಗಳಿಗೂ ಉಪಲಕ್ಷಕ. 
ಆದುದರಿಂದ 
" ಹನುಮಾನ್ " 
ಎಂಬುದಕ್ಕೆ 
" ಜ್ಞಾನಾದಿ ಸರ್ವ ಗುಣವಾನ್ " 
ಎಂದೇ ಅರ್ಥ. 
ಈ ವಿಷಯವನ್ನು " ಐತರೇಯೋಪನಿಷದ್ಭಾಷ್ಯ " ದಲ್ಲಿ.. 
" ಹನು ಶಬ್ದೋ ಜ್ಞಾನವಾಚೀ 
ಹನುಮಾನ್ ಮತಿಶಬ್ದಿತಃ "
" ಪ್ರಾಣ ಶಬ್ದಾರ್ಥ "
" ಪ್ರಾಣ " 
ಎಂದರೆ....
ಸಕಲೇಂದ್ರಿಯಗಳ ಚಟುವಟಿಕೆಗಳನ್ನೂ ನಡೆಸಲು ಪ್ರೇರೇಪಿಸುವರು. 
ಈ ವಿಷಯವನ್ನು " ಐತರೇಯೋಪನಿಷದ್ಭಾಷ್ಯ "  ಹೀಗೆ ಹೇಳಿದೆ....
ಪ್ರಕರ್ಷೇಣ ಆನಯತಿ 
ಚೇಷ್ಟಯತಿ ತತ್ತದಿಂದ್ರಿಯ  
ವ್ಯಾಪಾರಾನ್ ಕಾರಯತೀತಿ 
ಪ್ರಾಣಃ ಆನ ಚೇಷ್ಟಾಯಮ್ ।।
ಶರೀರವನ್ನು ಬದುಕುವಂತೆ ಮಾಡುವವರಾದ್ದರಿಂದಲೂ " ಪ್ರಾಣ " ಎಂದು ಕರೆಯಲ್ಪಡುವವರು. 
" ಪ್ರಾಣಃ "
ಪ್ರಕರ್ಷೇಣ ಆನಯತಿ 
ಜೀವಯತೀತಿ ಪ್ರಾಣಃ 
ಅನ ಪ್ರಾಣನೇ ।।
ಪೂರ್ಣಾನಂದ ಹೊಂದಿರುವುದರಿಂದ ಆಣಾ = ಭಾರತೀ. 
ಅವಳಗಿಂತಲೂ ಹೆಚ್ಚಿನ ಸುಖವುಳ್ಳವರಾದ್ದರಿಂದ....
ವಾಯು ಪ್ರಾಣಃ. 
ಣ ಇತ್ಯೇವ ಹ್ಯಾನಂದಃ ಸಮುದೀರಿತಃ । 
ಆಣಾ ಸರಸ್ವತೀ ಪ್ರೋಕ್ತಾ 
ತತ್ಪ್ರಕೃಷ್ಟೋ ಸುಖತ್ವತಃ ।।
ಪ್ರಾಣ ಇತ್ಯುಚ್ಯತೇ 
ವಾಯುಃ ಇತಿ ತತ್ತ್ವವಿವೇಕ - ಛಾಂದೋಗ ಉಪನಿಷದ್ಭಾಷ್ಯ!!!
" ಬಲ " 
ರೂಪರಾದುದರಿಂದಲೂ ವಾಯು " ಪ್ರಾಣಃ " 
ಪ್ರಾಣಃ ಬಲಂ ತದಭಿಮಾನಿತ್ವಾತ್ ಪ್ರಾಣಃ ।।
" ಪ್ರಾಣ " 
ಎಂದರೆ.....
ಉಳಿದ ಇಂದ್ರಿಯಾಭಿಮಾನಿಗಳೂ ಆಗುವರೆಂಬ ಕಾರಣದಿಂದ, ಅವರಿಂದ ಪ್ರತ್ಯೇಕತೆಯನ್ನೂ ಮತ್ತು ಶ್ರೇಷ್ಠತೆಯನ್ನೂ ತಿಳಿಸಲು ಶ್ರೀ ವಾಯುದೇವರನ್ನು ಉಪನಿಷತ್ತುಗಳಲ್ಲಿ " ಮುಖ್ಯಪ್ರಾಣ " ಯೆಂತಲೂ, ಪ್ರಾಣಾಗ್ನಿ " ಯೆಂತಲೂ ಉಲ್ಲೇಖಿತವಾಗಿವೆ. 
ಶರೀರ ಪ್ರಾಣಗತವಾಗಿರುವಾಗ ನಮ್ಮೆಲ್ಲರಿಗೂ ಬಿರುದು ಬಾವಲಿಗಳು.
ಆದರೆ ಪ್ರಾಣವಶ ತಪ್ಪಿದರೆ " ಬಿದಿರೇ " ಗಟ್ಟಿ. 
ಕಾರಣ ಎಲ್ಲರ ಶರೀರಕ್ಕೂ ಎರಡಕ್ಷರದ " ಪ್ರಾಣ " ಬಿರುದೇ ಮುಖ್ಯ. 
ಆದ್ದರಿಂದ ಶ್ರೀ ಪ್ರಾಣರನ್ನು " ಶ್ರೀ ಮುಖ್ಯಪ್ರಾಣ " ರೆಂದು ಕರೆಯುತ್ತಾರೆ. 
" ಶ್ರೀ ಮುಖ್ಯಪ್ರಾಣದೇವರ ಕಾರುಣ್ಯವೇ ಮೋಕ್ಷದ ಮೂಲ "
" ಸ ವೇದೈತ್ಯಾತ್ ಪರಮಂ ಬ್ರಹ್ಮಧಾಮ " 
ಎಂಬುದಾಗಿ " ಅಥರ್ವಣೋಪನಿಷತ್ " ಶ್ರೀ ಮುಖ್ಯಪ್ರಾಣದೇವರ ಅನುಗ್ರಹಪಾತ್ರರಿಗೆ ಮಾತ್ರವೇ ಶ್ರೀ ಹರಿಯ ಸಾಕ್ಷಾತ್ಕಾರವೆಂದು ಸ್ಫುಟವಾಗಿ ಪ್ರತಿಪಾದಿಸಿದೆ. 
ಈ ಹಿನ್ನೆಲೆಯಲ್ಲಿ ಜೀವೋತ್ತಮರಾದ ಶ್ರೀ ಮುಖ್ಯಪ್ರಾಣದೇವರ ಮಹಿಮೆಯ ಅರಿವು ಮತ್ತು ಉಪಾಸನೆ ಅರಿಷ್ಟ ನಿವಾರಕ ಹಾಗೂ ಸಕಲ ವಿಧ ಮಂಗಲಕಾರಕ. 
ವೇದಾ - ಶಾಸ್ತ್ರ - ಸರ್ವಮೂಲ ಕೃತಿಗಳಲ್ಲಿ " ಪ್ರಾಣರ " ಮಹಿಮೆ ಅಪಾರವಾಗಿ ವರ್ಣಿತವಾಗಿವೆ. 
" ಶ್ರೀ ಹನುಮದ್ವ್ರತ " 
ಶ್ರೀ ಹನುಮದ್ವ್ರತವನ್ನು ಮಾರ್ಗಶಿರ ಶುದ್ಧ ತ್ರಯೋದಶಿಯಂದು ಆಚರಿಸಲಾಗುತ್ತದೆ. 
ಆದರೆ ಕೆಲವರು ತಿಳುವಳಿಕೆಯಿಲ್ಲದೆ ಈ ದಿನವನ್ನು ಹನುಮ ಜಯಂತಿ ಎಂದು ಕರೆಯುತ್ತಾರೆ. 
ಇದು ತಪ್ಪು. 
ಹನುಮ ಜಯಂತಿ ಚೈತ್ರ ಶುದ್ಧ ಹುಣ್ಣಿಮೆಯಂದು. 
ಮಾರ್ಗಶಿರ ಶುದ್ದ ತ್ರಯೋದಶಿಯಂದು ಹನುಮದ್ ವ್ರತ ಆಚರಿಸಲು ಸೂಕ್ತ ಕಾರಣವಿದೆ.
ಶ್ರೀ ವೇದವ್ಯಾಸದೇವರು ಪಾಂಡವರು ದ್ವೈತ ವನದಲ್ಲಿದ್ದಾಗ " ಶ್ರೀ ಹನುಮದ್ವ್ರತ " ದ ಕಥೆಯನ್ನು ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು. 
ಒಮ್ಮೆ ಶ್ರೀ ಹನುಮಂತ ದೇವರು ಸೂರ್ಯನಿಗೆ ರಾಹುಗ್ರಹಣವಾದ ಸಂದರ್ಭದಲ್ಲಿ ಮೇಲೆ ಹಾರಿದಾಗ, ಸ್ವರ್ಗಾಧಿಪತಿಯು ಸೂರ್ಯನನ್ನು ಶ್ರೀ ಹನುಮಂತದೇವರು  ಹಿಡಿಯಬಹುದೆಂದು ಭಾವಿಸಿ, ವಜ್ರಾಯುಧ ಪ್ರಹಾರ ಮಾಡಿದಾಗ, ಶ್ರೀ ಹನುಮಂತದೇವರು  ಲೋಕ ರೀತ್ಯ ಪೆಟ್ಟಾದವನಂತೆ ಕೆಳಗೆ ಬಿದ್ದನು. 
ಆಗ ಶ್ರೀ ವಾಯುದೇವರು ಶ್ರೀ ಹನುಮಂತದೇವರನ್ನು ಕರೆದುಕೊಂಡು ಒಂದು ಗುಹೆಗೆ ಪ್ರವೇಶಿಸಿದರು. 
ಆಗ ಪ್ರಪಂಚವೆಲ್ಲ ಉಸಿರಾಟದ ತೊಂದರೆಗೊಳಗಾಯಿತು. 
ಎಲ್ಲಾ ದೇವತೆಗಳು ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಪ್ರಾರ್ಥಿಸಲು, ಶ್ರೀ ಚತುರ್ಮುಖ ಬ್ರಹ್ಮದೇವರು ಶ್ರೀ ವಾಯುದೇವರ ಬಳಿಗೆ ಬಂದು ನಿನ್ನ ಮಗನಿಗೆ ಯಾವ ಆಯುಧದಿಂದಲೂ ಏನೂ ಆಗುವುದಿಲ್ಲ, 
ಅವನು ಚಿರಂಜೀವಿಯಾಗುತ್ತಾನೆ ಮತ್ತು ಮಾರ್ಗಶಿರ ಶುದ್ದ ತ್ರಯೋದಶಿ ದಿನದಂದು “ಹನುಮದ್ ವ್ರತ” ವನ್ನು ಆಚರಿಸಿದವರಿಗೆ ಸಕಲ ಅಭೀಷ್ಟವೂ ಲಭ್ಯವಾಗುವುದು ಎಂದು ವರವನ್ನು ಇತ್ತಿರುತ್ತಾರೆ.
by ಆಚಾರ್ಯ ನಾಗರಾಜು ಹಾವೇರಿ 
    ಗುರು ವಿಜಯ ಪ್ರತಿಷ್ಠಾನ
****
ಹನುಮದ್ ವ್ರತದ  ಪ್ರಯುಕ್ತ ಹನುಮಂತನ 
೧೦೮ ಹೆಸರುಗಳು ಮತ್ತು ಅರ್ಥ 

ಹನುಮ ಅಷ್ಟೋತ್ತರ ಶತನಾಮಾವಳಿಯಲ್ಲಿ ಹನುಮಂತನ ೧೦೮ ಹೆಸರುಗಳನ್ನು ಹೇಳಿಕೊಂಡು ನಮಸ್ಕರಿಸವುದು ಪರಿಪಾಠ

. ಅಷ್ಟೋತ್ತರ ಶತನಾಮಾವಳಿಯ ಈ ೧೦೮ ಹೆಸರುಗಳು ಮತ್ತು ಕನ್ನಡ ಅರ್ಥ / ಹಿನ್ನೆಲೆ ಇಲ್ಲಿದೆ :

1.ಆಂಜನೇಯ – ಅಂಜನಿಯ ಪುತ್ರನಿಗೆ ನಮಸ್ಕಾರ
2.ಮಹಾವೀರಾಯ – ವೀರರಲ್ಲಿ ವೀರನಾದವನಿಗೆ ನಮಸ್ಕಾರ
3.ಹನುಮತೇ – ಹನುಮಂತನಿಗೆ ನಮಸ್ಕಾರ
4.ಮಾರುತಾತ್ಮಜಾಯ – ಮರುತ್ತಿನ ಪುತ್ರನಿಗೆ ನಮಸ್ಕಾರ
5.ತತ್ತ್ವಜ್ಞಾನ ಪ್ರದಾಯ – ತತ್ವಜ್ಞಾನಿಯೂ, ತತ್ತ್ವಜ್ಞಾನದ ಅರಿವನ್ನು ನೀಡುವವನೂ ಆದವನಿಗೆ ನಮಸ್ಕಾರ
6.ಸೀತಾದೇವಿ ಮುದ್ರಾ ಪ್ರದಾಯಕಾಯ – ಸೀತಾದೇವಿಯ ಬಳಿ ರಾಮನ ಮುದ್ರೆಯನ್ನು ಕೊಂಡೊಯ್ದವನಿಗೆ ನಮಸ್ಕಾರ
7.ಅಶೋಕವನ ಚರಿತ್ರೆ – ಅಶೋಕವನ ಹೊಕ್ಕವನಿಗೆ (ಅಲ್ಲಿ ಸೀತಾದೇವಿಯನ್ನು ಪತ್ತೆ ಮಾಡಿದವನಿಗೆ) ನಮಸ್ಕಾರ
8.ಸರ್ವ ಮಯಿ ವಿಭಾನನಾಯ – ಎಲ್ಲೆಡೆ ತನ್ನ ಕಾಂತಿ ತುಂಬಿ ಶೋಭಿಸುವವನಿಗೆ ನಮಸ್ಕಾರ
9.ಸರ್ವ ಬಂಧ ವಿಮೋಕ್ಟ್ರೆ – ಎಲ್ಲ ಬಗೆಯ ಬಂಧನಗಳಿಂದ ಮುಕ್ತಗೊಳಿಸುವವನಿಗೆ ನಮಸ್ಕಾರ
10.ರಕ್ಷೋ  ವಿದ್ವಾನ್ ಸಾಕಾರಕಾಯ – ಪಾಂಡಿತ್ಯದ ಮೂರ್ತರೂಪನೇ ನಿನಗೆ ನಮಸ್ಕಾರ
11.ಪರವಿದ್ಯಾ ಪರಿಹಾರಾಯ – ಮತ್ತೊಬ್ಬರು ತಮ್ಮ ವಿದ್ಯೆಯಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
12.ಪರ ಶೌರ್ಯ ವಿನಾಶ ಕಾಯ – ಮತ್ತೊಬ್ಬರು ತಮ್ಮ ಶೌರ್ಯದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
13.ಪರ ಮಂತ್ರ ನಿರಾಕರತ್ರೆ – ಮತ್ತೊಬ್ಬರು ಮಂತ್ರಪ್ರಯೋಗದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
14.ಪರ ಯಂತ್ರ ಪ್ರಬೋಧ ಕಾಯ – ಮತ್ತೊಬ್ಬರು ಯಂತ್ರ ಪ್ರಯೋಗದಿಂದ ಉಂಟು ಮಾಡುವ ಅಡ್ಡಿಗಳನ್ನು ನಿವಾರಿಸುವವನಿಗೆ ನಮಸ್ಕಾರ
15.ಸರ್ವಗ್ರಹ ವಿನಾಶಿನೆ – ಗ್ರಹಚಾರಗಳನ್ನು ನಿವಾರಿಸುವವನಿಗೆ ನಮಸ್ಕಾರ
16.ಭೀಮ ಸೇನ ಸಹಾಯಕ್ರಿತೆ – ಭೀಮಸೇನನಿಗೆ ಸಹಾಯ ಮಾಡಿದ ನಿನಗೆ ನಮಸ್ಕಾರ
17.ಸರ್ವ ದುಃಖ ಹರಾಯ – ಎಲ್ಲ ಬಗೆಯ ದುಃಖಗಳನ್ನು ಪರಿಹರಿಸುವವನಿಗೆ ನಮಸ್ಕಾರ
18.ಸರ್ವಲೋಕ ಚಾರಿಣೆ – ಸಕಲ ಲೋಕಗಳಲ್ಲೂ ಸಂಚರಿಸಬಲ್ಲವನಿಗೆ ನಮಸ್ಕಾರ
19.ಮನೋಜವಾಯ – ಮನೋವೇಗದಲ್ಲಿ ಚಲಿಸಬಲ್ಲವನೇ, ನಮಸ್ಕಾರ
20.ಪಾರಿಜಾತ ದೃಮೂಲಸ್ಥಾಯ – ಪಾರಿಜಾತ ವೃಕ್ಷದ ಕೆಳಗೆ ಕುಳಿತವನೇ ನಿನಗೆ ನಮಸ್ಕಾರ
21.ಸರ್ವ ಮಂತ್ರ ಸ್ವರೂಪಾಯ – ಸಕಲ ಮಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
22.ಸರ್ವ ತಂತ್ರ ಸ್ವರೂಪಿಣೇ – ಸಕಲ ತಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
23.ಸರ್ವ ಯಂತ್ರಾತ್ಮಕಾಯ – ಸಕಲ ಯಂತ್ರ ಸ್ವರೂಪಿಯಾದ ನಿನಗೆ ನಮಸ್ಕಾರ
24.ಕಪೀಶ್ವರಾಯ – ಕಪೀಶ್ವರನೇ, ನಿನಗೆ ನಮಸ್ಕಾರ
25.ಮಹಾ ಕಾಯಾಯ – ಮಹಾಕಾಯನಾದ ನಿನಗೆ ನಮಸ್ಕಾರ
26.ಸರ್ವರೋಗ ಹರಾಯ – ಸಕಲ ರೋಗಗಳನ್ನು ಪರಿಹರಿಸುವವನೇ, ನಮಸ್ಕಾರ
27.ಪ್ರಭಾವೇ – ಪ್ರಭಾವಶಾಲಿಯಾದ ನಿನಗೆ ನಮಸ್ಕಾರ
28.ಬಲ ಸಿದ್ದಿ ಕರಾಯ – ಬಲವನ್ನೂ ಸಿದ್ಧಿಯನ್ನೂ ದಯಪಾಲಿಸುವವನೇ, ನಮಸ್ಕಾರ
29.ಸರ್ವ ವಿದ್ಯಾ ಸಂಪತ್ತು ಪ್ರದಾಯಕಾಯ – ಸಕಲ ವಿದ್ಯೆಗಳನ್ನೂ ಸಂಪತ್ತನ್ನೂ ಕರುಣಿಸುವವನೇ, ನಮಸ್ಕಾರ
30.ಕಪಿ ಸೇನಾನಾಯಕಾಯ – ಕಪಿಸೇನೆಯ ನಾಯಕನೇ, ನಮಸ್ಕಾರ
31.ಭವಿಷ್ಯತ್ ಚತುರಾನನಾಯ – ನಾಲ್ಕು ಮುಖಗಳನ್ನು ಹೊಂದಿರುವವನೇ, ನಮಸ್ಕಾರ
32.ಕುಮಾರ ಬ್ರಹ್ಮಚಾರಿಣೆ – ಬ್ರಹ್ಮಚಾರಿಯೇ, ನಿನಗೆ ನಮಸ್ಕಾರ
33.ರತ್ನ ಕುಂಡಲಾಯ – ರತ್ನಕುಂಡಲಗಳನ್ನು ಧರಿಸಿದವನೇ, ನಿನಗೆ ನಮಸ್ಕಾರ
34.ದೀಪ್ತಿ ಮತೇ – ದೀಪದಂತೆ ಬೆಳಗುವವನೇ, ನಮಸ್ಕಾರ
35.ಚಂಚಲ ದ್ವಾಲಸನ್ನದಾಯ – ಚಂಚಲನೇತ್ರನೇ ನಿನಗೆ ನಮಸ್ಕಾರ
36.ಲಂಬಾ ಮಾನಶೀಕೋ ಜ್ವಾಲಾಯ – ಜ್ವಾಲೆಯಂತೆ ಶೋಭಿಸುವವನೇ, ನಮಸ್ಕಾರ
37.ಗಂಧರ್ವ ವಿದ್ಯಾಯ – ಗಂಧರ್ವ ವಿದ್ಯೆ ನಲ್ಲವನೇ, ನಿನಗೆ ನಮಸ್ಕಾರ
38.ತತ್ತ್ವಜ್ಞಾನಾಯ – ತತ್ವಜ್ಞಾನಿಯೇ, ನಿನಗೆ ನಮಸ್ಕಾರ
39.ಮಹಾಬಲ ಪರಾಕ್ರಮಾಯ – ಮಹಾಬಲ – ಪರಾಕ್ರಮಿಯೇ, ನಿನಗೆ ನಮಸ್ಕಾರ
40.ಕಾರಾಗ್ರಹ ವಿಮೋಕ್ತ್ರೆ –  ಸೆರೆಮನೆಯಿಂದ ಮುಕ್ತಗೊಳಿಸುವವನೇ, ನಿನಗೆ ನಮಸ್ಕಾರ
41.ಶ್ರೀಂಕಲ ಬಂಧ ಮೋಚಕಾಯ – ಬಂಧಮುಕ್ತಗೊಳಿಸುವವನೇ, ನಿನಗೆ ನಮಸ್ಕಾರ
42.ಸಾಗರೋತ್ತರಕಾಯ – ಸಾಗರವನ್ನು ದಾಟಿದವನೇ, ನಿನಗೆ ನಮಸ್ಕಾರ
43.ಪ್ರಗ್ಯಾಯ – ಸ್ವತಃ ಪ್ರಜ್ಞೆಯಾಗಿರುವವನೇ, ನಿನಗೆ ನಮಸ್ಕಾರ
44.ರಾಮದೂತಾಯ – ರಾಮದೂತನೇ, ನಿನಗೆ ನಮಸ್ಕಾರ
45.ರಾಮ ದೇವತಾಯ – ಶ್ರೀರಾಮನ ಸಹಚಾರಿಯೇ, ನಿನಗೆ ನಮಸ್ಕಾರ
46.ಪ್ರತಾಪವತೇ – ಪ್ರತಾಪಿಯಾದ ನಿನಗೆ ನಮಸ್ಕಾರ
47.ಕೇಸರಿ ಸುತಾಯ – ಕೇಸರಿಯ ಮಗನೇ ನಿನಗೆ ನಮಸ್ಕಾರ
48.ಸೀತಾ ಶೋಕ ನಿವಾರಕಾಯ – ಸೀತೆಯ ಶೋಕ ಪರಿಹರಿಸಿದ ನಿನಗೆ ನಮಸ್ಕಾರ
49.ಅಂಜನಾ ಗರ್ಭ ಸಂಭೂತಾಯ – ಅಂಜನೆಯ ಗರ್ಭದಲ್ಲಿ ಜನಿಸಿದ ನಿನಗೆ ನಮಸ್ಕಾರ
50.ಬಾಲ ರಕ್ಷಾದ್ರಶಾನನಾಯ – ಮಕ್ಕಳ ರಕ್ಷಣೆ ಮಾಡುವವನೇ, ನಿನಗೆ ನಮಸ್ಕಾರ
51.ವಿಭೀಷಣ ಪ್ರಿಯಕರಾಯ – ವಿಭೀಷಣನಿಗೆ ಪ್ರಿಯನಾದವನೇ, ನಿನಗೆ ನಮಸ್ಕಾರ
52.ದಶಗ್ರೀವ ಕೂಲಂಥಕಾಯ – ದಶಗ್ರೀವನಿಗೆ ಪಾಠ ಕಲಿಸಿದವನೇ, ನಿನಗೆ ನಮಸ್ಕಾರ
53.ಲಕ್ಷ್ಮಣ ಪ್ರಾಣ ದಾತ್ರೇ – ಲಕ್ಷ್ಮಣನ ಪ್ರಾಣ ರಕ್ಷಣೆ ಮಾಡಿದ ನಿನಗೆ ನಮಸ್ಕಾರ
54.ವಜ್ರಕಾಯಾಯ – ವಜ್ರದೇಹಿಯಾದ ನಿನಗೆ ನಮಸ್ಕಾರ
55.ಮಹಾದ್ಯುತಾಯ – ಮಹಾದ್ಯುತಿಯಾದ ನಿನಗೆ ನಮಸ್ಕಾರ
56.ಚಿರಂಜೀವಿನೆ – ಚಿರಂಜೀವಿಯಾದ ನಿನಗೆ ನಮಸ್ಕಾರ
57.ರಾಮ ಭಕ್ತಾಯ – ರಾಮಭಕ್ತನಾದ ನಿನಗೆ ನಮಸ್ಕಾರ
58.ದೈತ್ಯ ಕಾರ್ಯ ವಿಘ್ನಕಾಯ – ದೈತ್ಯರ ಕೃತ್ಯಗಳಿಗೆ ಅಡ್ಡಿಯಾಗಿ ನಿಲ್ಲುವವನೇ, ನಿನಗೆ ನಮಸ್ಕಾರ
59.ಅಕ್ಷಹಂತ್ರೆ – ಅಕ್ಷನಿವಾರಕನೇ ನಿನಗೆ ನಮಸ್ಕಾರ
60.ಕಜಾರಚನಭಯ – ಕಜಾರಚನ ಭಯನೇ ನಿನಗೆ ನಮಸ್ಕಾರ
61.ಪಜಂಚ ವಕ್ರತಾಯ – ಪಜಂಚ ವಕ್ರನೇ ನಿನಗೆ ನಮಸ್ಕಾರ
62.ಮಹಾತಪಸ್ಸೀ – ಮಹಾತಪಸ್ವಿಯೇ, ನಿನಗೆ ನಮಸ್ಕಾರ
63.ಲಂಕಿಣಿ ಭಂಜನಾಯ – ಲಂಕಿಣಿಯನ್ನು ದಮನ ಮಾಡಿದವನೇ ನಿನಗೆ ನಮಸ್ಕಾರ
64.ಶ್ರೀಮತೇ – ಶ್ರೀಮಂತಿಕೆಯಿಂದ ತುಂಬಿದವನೇ, ನಿನಗೆ ನಮಸ್ಕಾರ
65.ಸಿಂಹಿಕಾ ಪ್ರಾಣ ಭಂಜನಾಯ – ಸಿಂಹಿಕೆಯ ಪ್ರಾಣಹರಣ ಮಾಡಿದವನೇ, ನಿನಗೆ ನಮಸ್ಕಾರ
66.ಗಂಧಮಾರನ ಶೈಲಸುತಾಯ – ಗಂಧಮಾದನ ಪರ್ವತದಲ್ಲಿ ಬೆಳೆದವನೇ, ನಿನಗೆ ನಮಸ್ಕಾರ
67.ಲಂಕಾಪುರ ವಿದ್ಯಾಯಕಾಯ – ಲಂಕಾಪುರಿಗೆ ಪಾಠ ಕಲಿಸಿದವನೇ, ನಿನಗೆ ನಮಸ್ಕಾರ
68.ಸುಗ್ರೀವ ಸಚಿವಾಯ – ಸುಗ್ರೀವನ ಮಂತ್ರಿಯಾ ನಿನಗೆ ನಮಸ್ಕಾರ
69.ಧೀರಾಯ – ಧೀರನಾದ ನಿನಗೆ ನಮಸ್ಕಾರ
70.ಶೂರಾಯ – ಶೂರನಾದ ನಿನಗೆ ನಮಸ್ಕಾರ
71.ದೈತ್ಯ ಕೂಲಾಂತಕಾಯ – ದೈತ್ಯರಿಗೆ ಪಾಠ ಕಲಿಸಿದ ನಿನಗೆ ನಮಸ್ಕಾರ
72.ಸುವರ್ಚಲಾಯ ಚಿತ್ತಾಯ – ಸುವರ್ಲೋಕದಲ್ಲಿ ನೆಲೆಸಿದವನೇ, ನಿನಗೆ ನಮಸ್ಕಾರ
73.ತೇಜಸೇ – ತೇಜಸ್ವಿಯೇ ನಿನಗೆ ನಮಸ್ಕಾರ
74.ರಾಮಚೂಡಾಮಣಿ ಪ್ರದಾಯ ಕಾಯ – ರಾಮ ನೀಡಿದ ಚೂಡಾಮಣಿಯನ್ನು ಸೀತೆಗೆ ತಲುಪಿಸದವನೇ, ನಿನಗೆ ನಮಸ್ಕಾರ
75.ಕಾಮರೂಪಿಣೇ – ಕಾಂರೂಪಿಯೇ ನಿನಗೆ ನಮಸ್ಕಾರ
76.ಪಿಂಗಳಾಕ್ಷಯ – ಪಿಂಗಳಾಕ್ಷನೇ, ನಿನಗೆ ನಮಸ್ಕಾರ
77.ವರಾದಿ ಮಾನಕ ಪೂಜಿತಾಯ – ವರಾದಿಗಳಿಂದ ಪೂಜಿಸಲ್ಪಡುವವನೇ, ನಿನಗೆ ನಮಸ್ಕಾರ
78.ಕಂಬಳಿ ಕೃತ ಮಾರ್ತಾಂಡ ಮಂಡಲಾಯ – ಕಂಬಳಿಯಿಂದ ರಚಿಸಲ್ಪಟ್ಟ ಮಾರ್ತಾಂಡ ಮಂಡಲದಲ್ಲಿ ನೆಲೆಸಿದವನೇ, ನಿನಗೆ ನಮಸ್ಕಾರ
79.ವಿಜಿತೇಂದ್ರಯಾಯಾ – ಇಂದ್ರನನ್ನು ಗೆದ್ದವನೇ, ನಿನಗೆ ನಮಸ್ಕಾರ
80.ರಾಮ ಸುಗ್ರೀವ ಸಂದಾತ್ರೇ – ರಾಮ – ಸುಗ್ರೀವರ ನಿಷ್ಠನೇ, ನಿನಗೆ ನಮಸ್ಕಾರ
81.ಮಹೀರಾವಣ ಮರ್ಧನಾಯ – ಮಹಿರಾವಣನನ್ನು ಮರ್ದಿಸಿದವನೇ, ನಿನಗೆ ನಮಸ್ಕಾರ
82.ಸ್ಪತಿಕಾಭಯ – ಸ್ಪತಿಕಾಭಯ ಉಂಟು ಮಾಡಿದವನೇ, ನಿನಗೆ ನಮಸ್ಕಾರ
83.ವಾಗದೀಶಾಯ – ವಾಕ್ಕಿನ ಒಡೆಯನೇ ನಿನಗೆ ನಮಸ್ಕಾರ
84.ನವ ವ್ಯಾಕ್ರಿತ ಪಂಡಿತಾಯ – ವ್ಯಾಕರಣ ಪಂಡಿತನೇ, ನಿನಗೆ ನಮಸ್ಕಾರ
85.ಚತುರಭಾವೇ – ಚತುರಮತಿಯೇ, ನಿನಗೆ ನಮಸ್ಕಾರ
86.ದೀನ ಬಂಧು ಧಾರಾಯ – ದೀನಬಂಧುವೇ, ನಿನಗೆ ನಮಸ್ಕಾರ
87.ಮಾಯಾತ್ಮನೇ – ಮಾಯಾವಿಯೇ, ನಿನಗೆ ನಮಸ್ಕಾರ
88.ಭಕ್ತ ವತ್ಸಲಾಯ – ಭಕ್ತವತ್ಸಲನೇ, ನಿನಗೆ ನಮಸ್ಕಾರ
89.ಸಂಜೀವಿನಿ ಆಗ್ಯಾರ್ಥಾಯ – ಸಂಜೀವಿನಿಯನ್ನು ಹೊತ್ತು ತಂದವನೇ, ನಿನಗೆ ನಮಸ್ಕಾರ
90.ಸುಚಯೇ – ಸುಚಯನೇ, ನಿನಗೆ ನಮಸ್ಕಾರ
91.ವಾಗ್ಮಿನೇ – ವಾಗ್ಮಿಯೇ, ನಿನಗೆ ನಮಸ್ಕಾರ
92.ತ್ರಿದವರ್ತಾಯ – ತ್ರಿದವರ್ತನೇ, ನಿನಗೆ ನಮಸ್ಕಾರ
93.ಕಾಲನೇಮಿ  ಪರಮಾತ್ಮನಾಯ – ಕಾಲನೇಮಿ ಪರಮಾತ್ಮನೇ, ನಿನಗೆ ನಮಸ್ಕಾರ
94.ಹರಿಮರ್ಕಟ ಮರ್ಕಟಾಯ – ಹರಿಮರ್ಕಟ ರೂಪಿಯೇ ನಿನಗೆ ನಮಸ್ಕಾರ
95.ದಂತಾಯ – ಹಲ್ಲುಗಳನ್ನು ತೋರಿಸುತ್ತಾ ಉಗ್ರರೂಪ ತಾಳಿದವನೇ, ನಿನಗೆ ನಮಸ್ಕಾರ
96.ಶಾಂತಾಯ – ಶಾಂತರೂಪನೇ, ನಿನಗೆ ನಮಸ್ಕಾರ
97.ಪ್ರಸನ್ನಾತ್ಮನೇ – ಪ್ರಸನ್ನನಾಗಿ ಕುಳಿತಿರುವ ನಿನಗೆ ನಮಸ್ಕಾರ
98.ಶಾಂತ ಕಾಂತಮುದ ಪಹರತ್ತೇ – ಶಾಂತಿಯ ಕಾಂತಿಯಿಂದ ಶೋಭೀಸುತ್ತಿರುವ ನಿನಗೆ ನಮಸ್ಕಾರ
99.ಯೋಗಿಣೇ – ಯೋಗಿಯಾದ ನಿನಗೆ ನಮಸ್ಕಾರ
100.ರಾಮಕಥಾ ಲೋಲಾಯ – ರಾಮಕಥೆಯಲ್ಲಿ ಸಂತೋಷ ಕಾಣುವವನಾದ ನಿನಗೆ ನಮಸ್ಕಾರ
101.ಸೀತಾನ್ವೇಷಣೆ ಪತಿತಾಯ – ಸೀತಾನ್ವೇಷಣೆಯಲ್ಲಿ ತೊಡಗಿಕೊಂಡಿದ್ದ ನಿನಗೆ ನಮಸ್ಕಾರ
102.ವಜ್ರದನುಷ್ಠಾಯ – ವಜ್ರಧನು ಹಿಡಿದವನಿಗೆ ನಮಸ್ಕಾರ
103.ವಜ್ರನಾಯಕಾಯ – ವಜ್ರದೇಹಿಗಳ ನಾಯಕನಿಗೆ ನಮಸ್ಕಾರ
104.ರುದ್ರವೀರ್ಯ ಸಮದ್ಭವಾಯ – ರುದ್ರನ ವೀರ್ಯದಿಂದ ಜನಿಸಿದವನಿಗೆ ನಮಸ್ಕಾರ
105.ಇಂದ್ರಜಿತಪ್ರಹಿತ ಮೋಗರ್ಭ ಬ್ರಹ್ಮಾಸ್ತ್ರ ವಿನಿವಾರಕಾಯ – ಇಂದ್ರಜಿತನು ಪ್ರಯೋಗಿಸಿದ ಬ್ರಹ್ಮಾಸ್ತ್ರ ನಿವಾರಿಸಿದವನಿಗೆ ನಮಸ್ಕಾರ
106.ಪಾರ್ಥ ಧ್ವಜಾಗ್ರಸ ವಾಸಿನೇ – ಅರ್ಜುನನ ಧ್ವಜದಲ್ಲಿ ನೆಲೆಸಿದವನೇ, ನಿನಗೆ ನಮಸ್ಕಾರ
107.ದಶಭಾವೇ – ದಶಭಾವಯುಕ್ತನೇ, ನಿನಗೆ ನಮಸ್ಕಾರ
108.ಲೋಕಪೂಜ್ಯಾಯ – ಲೋಕಪೂಜಿತನೇ, ನಿನಗೆ ನಮಸ್ಕಾರ

ಸಂಸ್ಕೃತದಲ್ಲಿರುವ ಪ್ರತಿ ಹೆಸರಿಗೂ ‘ನಮಃ’ ಸೇರಿಸಿಕೊಂಡು ಪಠಿಸಬೇಕು. ಹನೂಮದ್ ಅಷ್ಟೋತ್ತರ ಶತನಾಮಾವಳಿಯ ನಿತ್ಯಪಠಣದಿಂದ ವಿದ್ಯಾಬುದ್ಧಿಗಳೂ ಆಯುರಾರೋಗ್ಯ ಐಶ್ವರ್ಯಗಳೂ ವೃದ್ಧಿಯಾಗುವವು. ಶ್ರೀರಾಮನಲ್ಲಿ ಭಕ್ತಿ ನೆಲೆಗೊಳ್ಳುವುದು.  ವಿಶೇಷವಾಗಿ ಶನಿವಾರ ಪಠಿಸಿದರೆ ಶನಿಬಾಧೆ ನಿವಾರಣೆಯಾಗುವುದು.
***
ಒಂದೇ ದಿನದಲ್ಲಿ ಈ ಮೂರು ಮುಖ್ಯಪ್ರಾಣದೇವರ ದರ್ಶನ ವಿಶೇಷ ಫಲ ...ಅದು ಶನಿವಾರ ವಿದ್ದರೆ ಅತ್ಯಂತ ವಿಶೇಷ ಫಲ ಅದು ಅಧಿಕಮಾಸವಾದರಂದು  ಕಾಶೀಯಾತ್ರಾ ವಿಶೇಷ ಫಲ ಅನ್ನುವುದು ಹಿರಿಯರ ಅನುಭವದ ಮಾತುಗಳು.....ಇದಲ್ಲದೇ ಮತ್ತೊಂದು ಅತ್ಯದ್ಭುತವಾದದ್ದು ಏನೆಂದರೆ ಈ ಮೂರು ಪ್ರಾಣದೇವರ ಮೂರ್ತಿಗಳಲ್ಲಿ ಶಾಲಿಗ್ರಾಮಾದಿಗಳ ಸನ್ನಿಧಾನ ವಿರುವುದು ಅದನ್ನು ಅಷ್ಟೊಂದು ಸನ್ನಿಧಾನೊಪೇತ ಕ್ಷೇತ್ರಗಳಾಗಿ ಮನೆ ಮನೆ ಮಾತಾಗಿರುವುದು ದೂರ್ವಾಸರು,ವಶಿಷ್ಠರು (ವ್ಯಾಸರಾಜರಿಂದ ಪುನರ್ಪ್ರತಿಷ್ಠೆಗೊಂಡಿರುವುದು) ಮತ್ತು ಸೂರ್ಯಾಂಶ ಸಂಭೂತರಾದ   ಶ್ರೀಬ್ರಹ್ಮಣ್ಯತೀರ್ಥರಂಥ ಅಪರೋಕ್ಷೀಜ್ಞಾನಿಗಳಿಂದ ಪ್ರತಿಷ್ಠೆ ಮತ್ತು ಪುನರ್ ಪ್ರತಿಷ್ಠಾಪನೆಗೊಂಡಿರುವುವಂಥವುದು...ಹೇಳ್ತಾ ಹೋದ್ರೆ ವಿಶೇಷಗಳ ಮೇಲೆ ವಿಶೇಷ ಸಂಗತಿಗಳ ಮಾಹಿತಿ ಸಿಗುತ್ತಾ ಹೋಗುತ್ತೆ...ಈ ಮೂರು ಮುಖ್ಯಪ್ರಾಣದೇವರು ಅವತಾರತ್ರಯ ರೂಪಗಳಲ್ಲಿವೆ...

ಭ್ರಾಂತೇಶ,ಕಾಂತೇಶ ಮತ್ತು ಶಾಂತೇಶ 

೧) ಶಿಕಾರಿಪುರ (ಶಿವಮೊಗ್ಗ) ಭ್ರಾಂತೇಶ (ಹುಚ್ಚೂರಾಯ ಅಂತಾನು ಕರಿತಾರೆ)...ಮೂಗಿನ ಭಾಗದಲ್ಲಿ ಶಾಲಿಗ್ರಾಮವನ್ನು ಕಾಣಬಹುದು....ಅವತಾರತ್ರಯ ಹನುಮಂತದೇವರ ಅವತಾರದಲ್ಲಿ ನೆಲೆಗೊಂಡು ಭ್ರಾಂತಿಯನ್ನು ಬುಡಸಹಿತ ಕಿತ್ತು ಹಾಕುವವ...ಮೂಗಿನಿಂದ ನಾವುಗಳು ಕೆಟ್ಟ ಉಸಿರನ್ನು ದೇಹದ ಒಳಗೆ ತೆಗೆದುಕೊಂಡಾಗ ನಾನಾ ವಿಧವಾದ ಭ್ರಾಂತಿಗಳು ನಮ್ಮ ಮನಸ್ಸಿಗೆ ಮತ್ತು ದೇಹದೊಳಗೆ ಸೇರಿಕೊಳ್ಳಬಹುದು.
ಭಾಂತಿ ಅಂದರೆ ಹುಚ್ಚು ಈಶ ಅದನ್ನು ಬಡಿಸುವವ... ದರ್ಶನ 
ಅಪೇಕ್ಷಿಗಳಿಗೆ,ಸಾಧಕರಿಗೆ,ಭಕ್ತರಿಗೆ ನಾನಾ ವಿಧವಾದ ಅಜ್ಞಾನದ ಭ್ರಾಂತಿಯನ್ನು ಅಂದರೆ ಹುಚ್ಚನ್ನು ಬಿಡಿಸಿ ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವವ ಎಂದರ್ಥ. 

೨) ಕದರಮಂಡಲಗಿ ಕಾಂತೇಶ:  
ಹಾವೇರಿ ಬ್ಯಾಡಗಿ ತಾಲೂಕಿನಲ್ಲಿ ಬರುವ ಕದರಮಂಡಲಗಿ ಕ್ಷೇತ್ರದಲ್ಲಿ ನೆಲೆಗೊಂಡಿರುವ  ಭೀಮಸೇನ ಅವತಾರದಲ್ಲಿ ನೆಲೆಸಿ  ದರ್ಶನ ಮಾಡುವ ಭಕ್ತರಿಗೆ ಭೂತ,ಪ್ರೇತ-ಪೀಶಾಚಾದಿಗಳಂಥ  ದುಷ್ಟ ಬಾಧೆ ಬಿಡಿಸಲು ಪ್ರಾಣದೇವರ ಕೈಯಲ್ಲಿ ನಾವುಗಳು ಗದೆಯನ್ನು ಕಾಣಬಹುದು. ಎರಡು ಕಣ್ಣುಗಳಲ್ಲಿ ಸೂರ್ಯ ಶಾಲಿಗ್ರಾಮಗಳ ದೃಷ್ಟಿಯಿಂದ ದರ್ಶನಾಪೇಕ್ಶಿಗಳಿಗೆ ಉತ್ತಮವಾದಂಥ ಕಾಂತಿಯನ್ನು ಕೊಡುವವನು.

೩) ಸಾತೇನಹಳ್ಳಿ ಶಾಂತೇಶ :  
ಹಾವೇರಿ ಹಿರೇಕೆರೂರ(ಹಂಸಭಾವಿ) ತಾಲೂಕಿನ ಸಾತೇನಹಳ್ಳಿ ಶಾಂತೇಶ. ಶ್ರೀಆನಂದತೀರ್ಥ ಭಗವದ್ಪಾದಾಚಾರ್ಯರ ಅವತಾರದಲ್ಲಿ ನೆಲೆಗೊಂಡು ಭಕ್ತರಿಗೆ ಭಗವಂತನ ಬಗ್ಗೆ ಶಾಂತವಾದ ಪರಿಶುದ್ಧವಾದ ಜ್ಞಾನವನ್ನು ಕೊಡುವವರು ಎಂಬರ್ಥದಲ್ಲಿ ಈ ಅವತಾರದಲ್ಲಿ ಪ್ರತಿಷ್ಥಿತ ಗೊಂಡಿರುವರು.ಕೆಲವರ ಮಾತು ಪಾದಲ್ಲಿ ಶಾಲಿಗ್ರಾಮವಿದೆ ಅಂತ ಇನ್ನೂ ಕೆಲವರ ಮಾತುಗಳು ಶಿರಭಾಗದಲ್ಲಿ ಶಾಲಿಗ್ರಾಮವಿರುವದು ಅಂತ ನನಗೂ ಕಂಡು ಬಂದಿರುವುದು ಶಿರ ಭಾಗದಲ್ಲಿಯೆ ಶಾಲಿಗ್ರಾಮ ಶ್ರೀಮದಾನಂದತೀರ್ಥಭಗವದ್ಪಾದಾಚಾರ್ಯರ ಅವತಾರ ಸಾಧಕರಿಗೆ ಪರಿಶುದ್ಧವಾದ ವೈರಾಗ್ಯಸಹಿತವಾದಂಥ ಜ್ಞಾನ,ಭಕ್ತಿ  ಅದೆ ಮುಂದೆ ಮೋಕ್ಷಕ್ಕೂ ಕಾರಣ ..ಹೀಗಾಗಿ ಶಿರದಲ್ಲಿಯೇ ಶಾಲಿಗ್ರಾಮವಿರುವುದು ಸೂಕ್ತವೆನಿಸುವುದು...

ವಿಶೇಷ : ಭ್ರಾಂತಿ ಮನಸ್ಸಿನಿಂದ ಆಚೆ ಹೊದರೆ ತಾನೇ ಕಾಂತಿ ಮತ್ತು ಶಾಂತವಾದ ಪರಿಶುದ್ಧವಾದ ಸವೈರಾಗ್ಯಸಹಿತವಾದಂಥ ಜ್ಞಾನದ ಅರಿವು ಸಾಧ್ಯ.


ಸಾಧಕರು,ಭಕ್ತಾದಿಗಳು ನಾನಾವಿಧವಾದ ತಾಪತ್ರಯಗಳಿಂದ ಮುಕ್ತಿಹೊಂದಿ ಭಗವಂತನ ಬಗ್ಗೆ ಸರ್ವೋತ್ತಮನಾದ  ಶ್ರೀಮನ್ ನಾರಾಯಣನ ಬಗ್ಗೆ ಪರಿಶುದ್ಧವಾದ ಜ್ಞಾನವನ್ನು ಪಡೆಯಲು(ಹೊಂದಲು) ಈ ಅವತಾರತ್ರಯ ಮುಖ್ಯಪ್ರಾಣದೇವರ ದರ್ಶನ ಅವಶ್ಯವಾಗಿ ಮಾಡಲು ಪ್ರಯತ್ನಿಸಿರಿ... 

ಗುರ್ವಂತರ್ಯಾಮೀ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನರಸಿಂಹದೇವರು ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ..

|| ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀಕೃಷ್ಣಾರ್ಪಣಮಸ್ತು ||
***






No comments:

Post a Comment