SEARCH HERE

Monday, 29 March 2021

ತೀರ್ಥ ಹೇಗೆ ಸ್ವೀಕರಿಸಬೇಕು theertha tirtha Importance teertha

ತೀರ್ಥ ಹೇಗೆ ಸ್ವೀಕರಿಸಬೇಕು 
ಮೂರು ಬಾರಿ ಯಾಕೆ ಸ್ವೀಕರಿಸಬೇಕು ಗೊತ್ತೇ?.  ಮನೆಯಲ್ಲಿ ಪೂಜೆಗಳನ್ನು ಮಾಡಿದಾಗ, ದೇವಸ್ಥಾನದಲ್ಲೋ ಅಥವಾ ಇನ್ನೆಲ್ಲಾದರೂ ದೇವರ ದರ್ಶನ ಪಡೆದ ಬಳಿಕ ತೀರ್ಥ ಸ್ವೀಕರಿಸುತ್ತೇವೆ. ತೀರ್ಥದ ಪ್ರಾಮುಖ್ಯತೆಯನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೀರ್ಥ ಸ್ವೀಕರುಸುವಾಗ ಮೂರು ಬಾರಿ ಕೊಡಲಾಗುತ್ತದೆ. ಆದರೆ ತೀರ್ಥವನ್ನು ಮೂರು ಬಾರಿ ಯಾಕೆ ಸ್ವೀಕರಿಸಬೇಕು. 

ನಮ್ಮ ಪುರಾಣಗಳ ಪ್ರಕಾರ ತೀರ್ಥ ಎಂದರೆ ಮೋಕ್ಷ ಕೊಡುವುದು ಎಂದರ್ಥ. ಇದನ್ನು ಮೂರು ಬಾರಿ ಸ್ವೀಕರಿಸಿದರೆ…ಭೋಜನ ಮಾಡಿದಷ್ಟು ಶಕ್ತಿ ಬರುತ್ತದೆ ಎನ್ನುತ್ತಾರೆ. ತೀರ್ಥ ಸ್ವೀಕರಿಸುವಾಗ ಆರೋಗ್ಯಕರವಾದ ಭಾವದೊಂದಿಗೆ ಸ್ವೀಕರಿಸಬೇಕು. ಈ ತೀರ್ಥ ನನಗೆ ಒಳ್ಳೆಯದು ಮಾಡುತ್ತದೆ, ನನ್ನ ಆರೋಗ್ಯಕ್ಕೆ ಮತ್ತು ನನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಶಕ್ತಿ ಕೊಡುತ್ತದೆ ಎಂಬ ಸದ್ಭಾವನೆಯಿಂದ ತೆಗೆದುಕೊಳ್ಳಬೇಕು. ದೇವರಿಗೆ ಪೂಜೆ ಮಾಡಿದ ಬಳಿಕ ಸ್ವೀಕರಿಸುವ ತೀರ್ಥದಲ್ಲಿ ಪಂಚಾಮೃತ, ತುಳಸಿ ದಳ, ಸುಗಂಧ ದ್ರವ್ಯಗಳು, ಮಂತ್ರಶಕ್ತಿಗಳಿಂದ ತುಂಬಿರುತ್ತವೆ. ಇದರಿಂದ ಆ ತೀರ್ಥ ಅತ್ಯಂತ ಪವಿತ್ರವಾಗಿ ಬದಲಾಗುತ್ತದೆ. ತೀರ್ಥ ಸ್ವೀಕರಿಸುವುದರಿಂದ ನಮ್ಮ ಆರೋಗ್ಯ, ಆಧ್ಯಾತ್ಮಿಕತೆ ಉತ್ತಮಗೊಳ್ಳುತ್ತದೆ.

ಮೊದಲ ಬಾರಿ ತೀರ್ಥ ಸ್ವೀಕರಿಸಿದರೆ ಶಾರೀರಿಕ, ಮಾನಸಿಕ ಶುದ್ಧಿ ನಡೆಯುತ್ತದೆ.
ಎರಡನೇ ಸಲ ತೀರ್ಥ ಸ್ವೀಕರಿಸಿದರೆ ನ್ಯಾಯ, ಧರ್ಮದ ನಡವಳಿಕೆ ಉತ್ತಮಗೊಳ್ಳುತ್ತದೆ.
ಇನ್ನು ಮೂರನೆಯದು ಪರಮೇಶ್ವರನ ಪರಮ ಪದ ಎಂದು ಸ್ವೀಕರಿಸಬೇಕು.

ತೀರ್ಥ ಹೇಗೆ ಸ್ವೀಕರಿಸಬೇಕು
ಮೂರು ಬಾರಿ ಸಹ ಬಲಗೈ ಕೆಳಗೆ ಎಡಗೈ ಇಟ್ಟು ತೀರ್ಥ ಸ್ವೀಕರಿಸಬೇಕು. ಬಲಗೈನ ತೋರು ಬೆರಳು ಮಧ್ಯಕ್ಕೆ ಹೆಬ್ಬೆರಳನ್ನು ಮಡಚಿದರೆ ಗೋಮುಖ ಎಂಬ ಮುದ್ರ ಬರುತ್ತದೆ. ಈ ಮುದ್ರೆಯಲ್ಲಿ ತೀರ್ಥವನ್ನು ಸ್ವೀಕರಿಸಬೇಕು. ತೀರ್ಥವನ್ನು ಸ್ವೀಕರಿಸಿದ ಬಳಿಕ ತಲೆಗೆ ಒರೆಸಿಕೊಳ್ಳುತ್ತಾರೆ. ಆದರೆ ಆ ರೀತಿ ಮಾಡಬಾರದು. ತಲೆಯ ಮೇಲೆ ಬ್ರಹ್ಮ ದೇವರು ಇರುತ್ತಾರೆ. ನಮ್ಮ ಎಂಜಲನ್ನು ಬ್ರಹ್ಮನಿಗೆ ಅರ್ಪಣೆ ಮಾಡಿದವರಾಗುತ್ತೇವೆ. ಆದ್ದರಿಂದ ಕಣ್ಣಿಗೆ ಒತ್ತಿಕೊಳ್ಳುವುದು ಉತ್ತಮ.

ಮನೆಯಲ್ಲಿ ತೀರ್ಥ ಸ್ವೀಕರಿಸುವಾಗ ಕೆಳಗೆ ಕೂತು ಸ್ವೀಕರಿಸಬೇಕು. ದೇವಸ್ಥಾನದಲ್ಲಾದರೆ ನಿಂತುಕೊಂಡು ಸ್ವೀಕರಿಸಬೇಕು.


ದೇವಸ್ಥಾನಕ್ಕೆ ಹೋಗ ಬೇಕೆ ?


ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ...!!! ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟ ವಿಷಯ..


ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ ಇರುತ್ತವೆ... ಹೇಗೆ ಗೊತ್ತೇ...?? ದೇವರ ಮೂಲಸ್ಥಾನ ಗರ್ಭಗುಡಿ... ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು... ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ ಇರುತ್ತದೆ... ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ... ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು. ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ . ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ... ಮುಖ್ಯದ್ವಾರವೊಂದೇ ತೆರೆದಿರುತ್ತದೆ... ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ ಜೋರಾಗಿ ಚಿಮ್ಮುತ್ತದೆ... ಆದ್ದರಿಂದ ಮುಖ್ಯದ್ವಾರದ ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ... ಒಂದೆಡೆ ದೇವರ ದರ್ಶನ , ಇನ್ನೊಂದೆಡೆ ಆಯಾಸ ಪರಿಹಾರ...  ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy), ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ (Sound Energy), ಹೂಗಳ ಪರಿಮಳದಿಂದ, ಕರ್ಪೂರದ ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy), ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ, ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ ಶಕ್ತಿ..!! 


ತೀರ್ಥವನ್ನು ಮಾಡುವುದು ಹೇಗೆ ?

ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ... ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ... ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ... ಚೈತನ್ಯ ಮೂಡುತ್ತದೆ... ಆರೋಗ್ಯಕರವೂ ಹೌದು... ಹೇಗೆಂದರೆ, ಲವಂಗ ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ, ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ... ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ.

ತೀರ್ಥ ತಯಾರಿಯ ಬಗ್ಗೆ  ಪ್ರಶ್ನೆ. ಇಲ್ಲಿ ಎರಡು ನಿಯಮಗಳನ್ನು ಅನ್ವಯಿಸುತ್ತದೆ.

೧.ನಾವು ನಿತ್ಯ ಪೂಜೆಯ ಸಮಯದಲ್ಲಿ ಭಗವಂತನ ಮೇಲೆ ಸ್ನಾನದ ಪ್ರಯುಕ್ತ ಅಭಿಷೇಕ ಮಾಡುವ ಪದ್ಧತಿ.


ಅವುಗಳಲ್ಲಿ ನಾಲ್ಕು ವಿಧದ ಅಭಿಷೇಕ. ೧. ಮಲಾಪಕರ್ಷಣ. ೨. ಪಂಚಾಮೃತ ಸ್ನಾನ. ೩. ಶುದ್ಧೋದಕ ಸ್ನಾನ. ೪. ಅಮೃತ ಅಭಿಷೇಕ. ಇವುಗಳಲ್ಲದೆ ಹಲವಾರು ದ್ರವ್ಯಗಳ ಸ್ನಾನ ಮಾಡುತ್ತಾರೆ. ಇವುಗಳಲ್ಲಿ ಅಮೃತ ಅಭಿಷೇಕ ಶಂಖದ ಮೂಲಕ ಮಾಡುವುದು. ಇದನ್ನು ತೀರ್ಥ ಎಂದು ಸೇವಿಸುತ್ತೇವೆ. ಒಂದು ಮಾತು ಕೇಳಿರಬಹುದು. ಶಂಖದಿಂದ ಬಂದರೆ ತೀರ್ಥ. ಇವೆಲ್ಲವೂ ಪುರಾಣೋಕ್ತ ಪೂಜೆ. ಇನ್ನು ಬರೀ ಜಲವನ್ನು ತೀರ್ಥವೆಂದು ತಿಳಿಯುವ ಬಗ್ಗೆ ಕೂಡಾ ಸರಿಯಾಗಿ ಇದೆ. ಗಂಗಾನದಿಯ ನೀರನ್ನು ಸ್ನಾನ ಪಾನ ಮೊದಲಾದ ಉಪಯೋಗ ಮಾಡುವುದು. ಇದರಲ್ಲಿ ವೈಜ್ನಾನಿಕತೆ ಅಡಗಿದೆ. ಹಿಮಾಲಯದ ತಪ್ಪಲಲ್ಲಿರುವ ವನಸ್ಪತಿ ಹಾಗೂ ಖನಿಜಗಳನ್ನು ಹಾದು ಬರುವ ಪರಿಣಾಮ ಆರೋಗ್ಯ ದಾಯಕವಾಗಿದೆ. ಇಲ್ಲಿ ಪರಿಶುದ್ಧತೆಗೆ ಮಾತ್ರ ಪ್ರಾಮುಖ್ಯತೆ ಇರುವುದು. ಬದಲಾಗಿ ಅವೈಜ್ಞಾನಿಕ ಸಂಪ್ರದಾಯ ಇರಬಾರದು. ಇನ್ನು ತೀರ್ಥ ಎಂದರೆ ಕೇವಲ ಜಲ ಸಂಬಂಧಿಸಿದಂತೆ ಮಾತ್ರ ಅಲ್ಲ.


ಸ್ಥಾನಮಾನದ ವ್ಯವಹಾರ ಬಂದಾಗ ಸ್ವಾಮಿಗಳ ಹೆಸರಿನ ಮುಂದೆ ತೀರ್ಥ ಎಂದು ಸೇರಿದ ವಿಷಯ ನಿಮಗೆ ತಿಳಿದಿರ ಬಹುದು. ಅವರವರ ಅರ್ಹತಾ ರೀತಿಯ ಚಿಂತನೆ ಯಾಗಿದೆ.  ವಂದನೆಗಳು.


ದೀಪಾರಾಧನೆ, ವಿಶೇಷಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ ಹೆಚ್ಚು - ಹೆಚ್ಚು ಸಕಾರಾತ್ಮಕಶಕ್ತಿಯ ಸಂಚಾರವಾಗುತ್ತಿರುತ್ತದೆ... ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು... ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ ನಿವಾರಣೆಯಾಗುತ್ತದೆ... ಆ ಕಾರಣದಿಂದಲೇ ಪುರುಷರು  ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು ಹೋಗುವುದು ಒಳ್ಳೆಯದು... ಮಹಿಳೆಯರು ಜಾಸ್ತಿ ಒಡವೆಗಳನ್ನು ಹಾಕಿಕೊಂಡು ಹೋಗುವುದು ಒಳ್ಳೆಯದು... ಏಕೆಂದರೆ ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತ
ದೆ.

ತೀರ್ಥ ಎಂಬುದು ಹಿಂದೂಸಂಸ್ಕೃತಿಯದೇ ವಿಶೇಷ ಶಬ್ದ. ಸಾಧಾರಣವಾಗಿ ದೇವರಿಗೆ ಅಭಿಷೇಕ ಮಾಡಲ್ಪಟ್ಟ ನೀರು ತೀರ್ಥ, ಎಂದರೆ ಪವಿತ್ರ ಎನ್ನಿಸುತ್ತದೆ. ಅನೇಕ ಜಲಾಶಯಗಳು, ಬಾವಿ, ಕೆರೆ, ನದಿ, ಸಮುದ್ರಗಳು ಎಲ್ಲಿ ದೈವಸನ್ನಿಧಿ, ಋಷಿಸನ್ನಿಧಿ ಇರುವುದೋ ಅವು ತೀರ್ಥಗಳಾಗುತ್ತವೆ. ಕೆಲ ಸಂನ್ಯಾಸಿಗಳ ಹೆಸರಿನ ಕೊನೆಯಲ್ಲಿ ತೀರ್ಥ ಎಂಬ ಶಬ್ದವೂ ಬರುತ್ತದೆ. ಅಲ್ಲೂ ಪವಿತ್ರ ಎಂಬರ್ಥ ಬರುತ್ತದೆ. ಹೀಗೆ ಎಲ್ಲಿ ಹೋಗುವುದರಿಂದ ಪುಣ್ಯ ಬರುವುದೋ ಆ ಸ್ಥಾನವನ್ನು ತೀರ್ಥ ಎನ್ನುತ್ತಾರೆ. ಕ್ಷೇತ್ರ ಎನ್ನುತ್ತಾರೆ. ತೀರ್ಥಕ್ಷೇತ್ರ ಎಂದೂ ಹೇಳುತ್ತಾರೆ.

ಯಾತ್ರೆ ಎಂದರೇನು ? 

ಯಾತ್ರೆ ಎಂದರೆ ನಿರ್ದಿಷ್ಟ ಉದ್ದೇಶದಿಂದ ಹೊರಡುವ ಪ್ರಯಾಣ ‘ದಂಡಯಾತ್ರೆ’, ‘ತೀರ್ಥಯಾತ್ರೆ’, ‘ಅಂತ್ಯಯಾತ್ರೆ’ ಇತ್ಯಾದಿ. ಶಬ್ದಗಳೇ ಉದ್ದೇಶವನ್ನೂ ಸ್ಪಷ್ಟಗೊಳಿಸುತ್ತವೆ. ಮನೋರಂಜನೆಗಾಗಿಯೇ ಸ್ವಹಿತಕ್ಕಾಗಿಯೇ ವ್ಯಾಪಾರಕ್ಕಾಗಿಯೇ ಮಾಡುವ ಪ್ರಯಾಣ ಯಾತ್ರೆ ಎನ್ನಿಸದು. ಧಾರ್ವಿುಕ ದೃಷ್ಟಿಯಿಂದ ಮಾಡುವ ಪ್ರಯಾಣ ತೀರ್ಥಯಾತ್ರೆ. ಮಂಗಳಕರ ಕ್ಷೇತ್ರಗಳಿಗೆ ಹೋಗುವುದು.
******

ತೀರ್ಥ ಸರ್ವವ್ಯಾಧಿ ನಿವಾರಕದೇವಸ್ಥಾನದಲ್ಲಿ ಅರ್ಚಕರು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ತೀರ್ಥವನ್ನು ಕೊಡುತ್ತಾರೆ.  ಎಂಟು ಘಂಟೆಗಳಿಗಿಂತಲೂ  ಹೆಚ್ಚು ಶುದ್ಧನೀರು ಹಾಗೂ ತುಳಸಿ ಎಲೆಗಳು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿದ್ದರೆ ಅದು ತ್ರಿದೋಷಗಳನ್ನು (ವಾತ,ಪಿತ್ಥ,ಕಫ) ನಿವಾರಿಸುವ ಔಷಧಿಯಾಗುತ್ತದೆ ಎನ್ನುತ್ತದೆ ಆಯುರ್ವೇದ.

ಅಸ್ಥಮಾ,ನೆಗಡಿ,ಕೆಮ್ಮು,ಶ್ವಾಸ ಹಾಗೂ ಹೃದಯಸಂಬಂಧಿಕಾಯಿಲೆಗಳನ್ನು ಹಾಗೂ ಇತ್ತೀಚಿನ ಮಾರಕ ರೋಗ ಡೆಂಗ್ಯೂವನ್ನೂ ಸಹ ತುಳಸಿಯ ಮೂಲಕ ನಿಯಂತ್ರಿಸಬಹುದೆಂದು  ಆಯುರ್ವೇದ ತಿಳಿಸುತ್ತದೆ.

ಪಚನಕ್ರಿಯೆಗೂ ತುಳಸಿ ಸಹಕಾರಿ.ಊಟದ ನಂತರ ತುಳಸಿ ಎಲೆಗಳನ್ನು ತಿಂದರೆ ಜೀರ್ಣಶಕ್ತಿಯ ಉದ್ದೀಪನವಾಗುತ್ತದೆಂದು ಆಯುರ್ವೇದ ಹೇಳಿದೆ.ಹಾಗಾಗಿ ತುಳಸಿನೀರಿನಿಂದ ತಯಾರಿಸಲ್ಪಟ್ಟ ತೀರ್ಥವೂ ಸಹ ಔಷಧಿಯೇ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ತಾಮ್ರ,ಬೆಳ್ಳಿ ಹಾಗೂ ಮಣ್ಣಿನ ಪಾತ್ರೆಗಳಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಪಥ್ಯಕರ ಎಂಬುದು ಸಾಬೀತಾಗಿದೆ.

ತಾಮ್ರ ಅಥವಾ ಬೆಳ್ಳಿಯ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ಕುಡಿಯುವುದರಿಂದ ದೇಹದ ಮೇಲಾಗುವ ಪರಿಣಾಮಗಳನ್ನು ಅಮೇರಿಕದ ಒಂದು ವೈಜ್ಞಾನಿಕ ಸಂಸ್ಥೆ ಈ ರೀತಿ ತಿಳಿಸಿದೆ.

Helps the digestive system perform better ಪಚನಕ್ರಿಯೆಯನ್ನು ಉತ್ತಮಗೊಳಿಸುತ್ತದೆ. Aids in weight loss ದೇಹದ ತೂಕದ ಪ್ರಮಾಣವನ್ನು ಇಳಿಸಲು ಸಹಕಾರಿ. Helps heal wounds faster ದೇಹದ ಮೇಲಿನ ಗಾಯವನ್ನು ಬೇಗ ಗುಣಪಡಿಸುತ್ತದೆ. Helps maintain cardiovascular health and beats hypertension ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. Can kill bacteria ನೀರಿನಲ್ಲಿರುವ ವಿಷಾಣುಗಳನ್ನು ಕೊಲ್ಲುತ್ತದೆ. Regulates the working of the thyroid gland ಥೈರಾಡ್ ಸಮಸ್ಯೆಗಳನ್ನು ನಿವಾರಿಸುತ್ತದೆ. Skin health and melanin production ಚರ್ಮ ಆರೋಗ್ಯಕರವಾಗಿರುವಂತೇ ಮಾಡುತ್ತದೆ. 

ಹಾಗೇ, ಶಂಖದಲ್ಲಿಟ್ಟ ನೀರನ್ನು ತೀರ್ಥಕ್ಕೆ ಬಳಸುತ್ತಾರೆ. ಆಯುರ್ವೇದದ ಪ್ರಕಾರ ಶಂಖದಲ್ಲಿ ೧೦ ಘಂಟೆ ಇಟ್ಟಂತಹ ನೀರಿಗೆ ಅನೇಕ ಔಷಧೀಯ ಗುಣಗಳಿರುತ್ತವೆ. ಇದು ಹೊಟ್ಟೆನೋವು, ತಲೆನೋವು,ಅಜೀರ್ಣತೆ,ದೃಷ್ಟಿ ಸಂಬಂಧಿ, ಚರ್ಮಸಂಬಂಧಿ ದೋಷಗಳನ್ನು ನಿವಾರಿಸುತ್ತದೆ.ಇದರ ಜೊತೆ ದೇವರ ಕಲ್ಲಿನ ಪ್ರತಿಮೆ ಅಥವಾ ಪಂಚಲೋಹವಿಗ್ರಹದ ಮೇಲೆ ಅಭಿಷೇಕ ಮಾಡಿದ ನೀರನ್ನೂ ಸಹ ತೀರ್ಥಕ್ಕೆ ಸೇರಿಸುವುದರಿಂದ ಪ್ರತಿಮೆಯಲ್ಲಿರುವ ಅನೇಕ ಸಕಾರಾತ್ಮಕ ಅಂಶಗಳೂ ತೀರ್ಥದೊಂದಿಗೆ ಸೇರುತ್ತವೆ. ತುಳಸಿ,ತಾಮ್ರ ಅಥವಾ ಬೆಳ್ಳಿ ಪಾತ್ರೆಯಲ್ಲಿನ ನೀರು, ಶಂಖದ ನೀರು,ದೇವರ ವಿಗ್ರಹದ ನೀರು, ಈ ಎಲ್ಲವುಗಳ ಸಮ್ಮಿಶ್ರಣ ತೀರ್ಥ.ಹಾಗಾಗಿ ತೀರ್ಥವೂ ಸಹ ಔಷಧಿಯೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಪ್ರಾರ್ಥನೆಗಳೊಂದಿಗೆ ತೀರ್ಥವನ್ನು ಸೇವಿಸಬೇಕು

ಶಂಖಮಧ್ಯೇ ಸ್ಥಿತಂ ತೋಯಂ ಭ್ರಾಮಿತಂ ಕೇಶವೋಪರಿ /
ಅಂಗಲಗ್ನಂ ಮನುಷ್ಯಾಣಾಂ ಬ್ರಹ್ಮಹತ್ಯಾಯುತಂ ದಹೇತ್ //

ಅಕಾಲಮೃತ್ಯುಹರಣಂ ಸರ್ವವ್ಯಾಧಿನಿವಾರಣಮ್ /
ಸರ್ವಪಾಪೋಪಶಮನಂ ವಿಷ್ಣುಪಾದೋದಕಂ ಶುಭಮ್ //

ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಲೇವರೇ /
ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ //

ಇದು ತೀರ್ಥಪ್ರಾಶನದ ಮಹತ್ವ.ಹಾಗಾಗಿ ತೀರ್ಥಪ್ರಾಶನವೆಂದರೆ ಮೌಢ್ಯವಲ್ಲ. ಮೂಢನಂಬಿಕೆಯೂ ಅಲ್ಲ.ಅದಕ್ಕೊಂದು ವೈಜ್ಞಾನಿಕ ಹಿನ್ನೆಲೆಯಿದೆಯೆಂದು ಕಂಡು ಬರುತ್ತದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು.
ಕೃಷ್ಣಪ್ರಸನ್ನ ಆಚಾರ್ ದಾವಣಗೆರೆ
***

ಮೂರು ಸಾರಿ ನಿರ್ಮ್ಯಾಲ್ಯ ತೀರ್ಥ ಪ್ರಾಶನ ಕಾಲಕ್ಕೆ
ವಿಶ್ವ - ತೈಜಸ - ಪ್ರಾಜ್ಞ ನಾಮಕ ಪರಮಾತ್ಮನನ್ನೂ
ಮೂರು ಸಾರಿ
 ತೀರ್ಥ ಪ್ರಾಶನ
 ಕಾಲಕ್ಕೆ 
ರಾಮ - ಕೃಷ್ಣ - ವೇದವ್ಯಾಸ
ಎಂತಲೂ 
ಸಂಕರ್ಷಣ - ವಾಸುದೇವ - ನಾರಾಯಣ
ನಾಮಕ ಪರಮಾತ್ಮನನ್ನೂ ಸ್ಮರಿಸಬೇಕು 
ಒಟ್ಟಾರೆ ಆಯಾ ಕಾಲಕ್ಕೆ ಆಯಾ ಕರ್ಮಗಳ ಅನುಷ್ಠಾನಿಸುವಾಗ ಆಯಾ ಭಗವದ್ರೂಪಗಳ ಸ್ಮರಣೆ ಚಿಂತನೆ ಅತ್ಯವಶ್ಯಕ ಕಡ್ಡಾಯವೆಂದೇ ತಿಳಿದು ಸ್ಮರಿಸಿದಾಗ ಕ್ರಮೇಣ ರೂಢಿಯಾಗಿ ಅಭ್ಯಾಸ ಬಲದಿಂದ ತನ್ನಷ್ಟಕ್ಕೆ ತಾನೇ
ಸಹಜವಾಗಿ ನಾಮಸ್ಮರಣೆಯಾಗುವುದರಲ್ಲಿ ಸಂದೇಹವೇ ಇಲ್ಲ ಪುಣ್ಯಪ್ರದ ಫಲಪ್ರದವೂ ಹೌದು....

ನಾಮ್ನೋಸ್ತಿ ಯಾವತೀ ಶಕ್ತಿ:!
ಪಾಪ ನಿರ್ಹರಣೇ ಹರೇ!
ತಾವತ್ಕರ್ತುಂ ನ ಶಕ್ನೋತಿ !
ಪಾತಕಂ ಪಾತಕೀ ಜನಾ:!!

ಹರಿಯ ನಾಮವೇ ಇನ್ನು ಅಮೃತ ಪಾನ

 ಹರಿಯ ನಾಮ
ಮುಕುತಿಗೆ ಸೋಪಾನ
****


ಸಂಧ್ಯಾವಂದನೆಯ ಆರಂಭದಲ್ಲಿ ದೇಹದ ಅಂತರ ಪಾವಿತ್ರ್ಯದಲ್ಲಿ ನಿರ್ಮಾಲ್ಯ ತೀರ್ಥಪ್ರಾಶನ ಮಹತ್ವಪೂರ್ಣವಾದ ಸ್ಥಾನವನ್ನು ಪಡೆದಿದೆ..ತುಳಸಿಯನ್ನು ಮಾತ್ರ ಹಾಕಿದ,ಗಂಧಪುಷ್ಪಪತ್ರಗಳನ್ನೆಲ್ಲ ಹಾಕಿರದ ತೀರ್ಥವಿದು..ಪ್ರಾಶನಗೈದರೆ ನೀರು ಕುಡಿದಂತೆ ಎನಿಸುವುದಿಲ್ಲ..ಜಪಾನುಷ್ಠಾನಕ್ಕೆ ಭಂಗ ಬರುವುದಿಲ್ಲ..ಹನ್ನೆರಡು ವರ್ಷ ಉಪವಾಸದ ಫಲವನ್ನೇ ಕೊಡಲಿದೆ..ಎಂದು ಸ್ಕಾಂದಪುರಾಣ ಹೇಳಿದೆ..

"ವಿಷ್ಣುಪಾದೋದಕಂ ಪುಣ್ಯಂ ಪ್ರಾಶಯೇದ್ಯೋ ದಿನೇದಿನೇ..ದ್ವಾದಶಾಬ್ದೋಪವಾಸಸ್ಯ ಫಲಂ ಪ್ರಾಪ್ನೋತ್ಯಸಂಶಯಃ"

ತೀರ್ಥಮಾಡಿಕೊಳ್ಳುವಲ್ಲಿ ಪ್ರತಿಮೆಯ ಜೊತೆ ಮುಖ್ಯವಾಗಿ ಸಾಳಗ್ರಾಮ ಇದ್ದಿರಲೇಬೇಕು..ಚಕ್ರಾಣಿಕೆ ಮತ್ತು ವಿಷ್ಣುಪಾದವೂ ಇರಬೇಕು.ದೇವರ ಮೇಲೆ ಮೂಲಮಂತ್ರದಿಂದ ತುಳಸಿಯನ್ನಿಟ್ಟು ಪುರುಷಸೂಕ್ತ ಹೇಳುತ್ತಿ ಶಂಖದಿಂದ ಘಂಟಾಮಣಿಯ ನಾದದೊಡನೆ ಅಭಿಷೇಕಗೈಯಬೇಕು ಎಂದು ವಾರಾಹದ ನುಡಿ

"ಸಾಳಗ್ರಾಮೋದ್ಭವೋ ದೇವೋ ದೇವೋ ದ್ವಾರವತೀಭವಃ..ತುಳಸೀ ಶಂಖತೋಯಂ ಚ ಪು಼ಂಸೂಕ್ತೇನ ಚ ಮಂತ್ರತಃ..ಏತಾನಿ ಪಂಚತೀರ್ಥಾನಿ ಪಂಚಪಾತಕನಾಶನೇ

ಈ ತೀರ್ಥವನ್ನು ತಲೆಗೂ ಪ್ರೋಕ್ಷಿಸಿಕೊಳ್ಳಬೇಕು..ಇದರಿಂದ ಜಪ ಮಾಡುವವನು ಎಲ್ಲ ತೀರ್ಥಗಳಲ್ಲಿ ಸ್ನಾನ ಮಾಡಿದಂತೆ..ಎಲ್ಲ ಮಂತ್ರಗಳ ಜಪಕ್ಕೂ ದೀಕ್ಷೆ ಪಡೆದಂತೆ...

"ಸ ಸ್ನಾತಃ ಸರ್ವತೀರ್ಥೇಷು      ಸರ್ವಯಜ್ಞೇಷು ದೀಕ್ಷಿತಃ..ಯೋ ವಹೇಚ್ಛಿರಸಾ ನಿತ್ಯಂ ಸಾಳಗ್ರಾಮಶಿಲಾಜಲಮ್(ವೃದ್ಧಹಾರೀತ ಸ್ಮೃತಿ)

ಸಾಳಗ್ರಾಮಶಿಲಾವಾರಿ ಶಿರಸಾ ಧಾರಯೇತ್ತತಃ(ವಾಯುಪುರಾಣ)

ಜಪದಲ್ಲಿ ಆಗುವ ಮಂತ್ರಗಳ ಉಚ್ಚಾರಣೆಯಲ್ಲಿನ ದೋಷಗಳು ತೀರ್ಥಪ್ರೋಕ್ಷಣೆಯಿಂದ  ನಾಶಗೊಳ್ಳುವವು..ತೀರ್ಥವನ್ನು ಕಣ್ಣುಗಳೆರಡಕ್ಕೂ ಸ್ಪರ್ಶಿಸಿಕೊಳ್ಳಬೇಕು.ಬಾಹ್ಯಶುದ್ಧಿಗೆ ಪ್ರೋಕ್ಷಣೆ,ಅಂತರ ಶುದ್ಧಿಗೆ ಪ್ರಾಶನ-

"ವಿಷ್ಣುಪಾದೋದಕಂ ಪುಣ್ಯಂ ಪೀತ್ವಾ ಯಸ್ತು ಸ್ವಮಸ್ತಕೇ..ಪ್ರಕ್ಷೇಪಣಂ ಪ್ರಕುರ್ವೀತ ಬ್ರಹ್ಮಹತ್ಯಾಂ ವ್ಯಪೋಹತಿ..ವಿಷ್ಣೋಃ ಪಾದೋದಕಂ ಪೂರ್ವಂ ಆಸಿಚ್ಯ ಚ ಶಿರೋಮುಖೇ..ನೇತ್ರೇ ಚ ತ್ರಿಃ ಪಿಬೇತ್ ಪಶ್ಚಾತ್ ತಾಪತ್ರಯನಿವಾರಣಮ್..

ಮೊದಲು ತೀರ್ಥಪ್ರಾಶನಗೈದು ಮತ್ತೆ ತಲೆಗೆ ತೀರ್ಥವನ್ನು ಹಾಕಿಕೊಳ್ಳಬೇಕು..ಇದು ವೈಷ್ಣವತ್ವದ ಸಿದ್ಧಿಗೆ ಪೋಷಕ..ಅಂದರೆ ಇದೊಂದು ವೈಷ್ಣವ ದೀಕ್ಷೆ ಎನ್ನುವುದಾಗಿ "ಕೃಷ್ಣಾಮೃತಮಹಾರ್ಣವ"ದ ಮಾತು..

"ಸ್ನಾನಂ ಪಾದೋದಕಂ ವಿಷ್ಣೋಃ ಪಿಬನ್ ಶಿರಸಿ ಧಾರಯೇತ್..ಸರ್ವಪಾಪವಿನಿರ್ಮುಕ್ತೋ ವೈಷ್ಣವೀಂ ಸಿದ್ಧಿಮಾಪ್ನುಯಾತ್"

ಏಕಾದಶಿಯಂದು ಮತ್ತೆ ದ್ವಾದಶಿಯಂದು(ಬೆಳಗ್ಗೆ) ಒಂದು ಬಾರಿ ನಿರ್ಮಾಲ್ಯತೀರ್ಥವನ್ನು ಸ್ವೀಕರಿಸಬೇಕು..ಉಳಿದ ದಿನ ಜಪಾರಂಭಕ್ಕಿಂತ ಮೊದಲು ಮೂರು ಬಾರಿ ಸ್ವೀಕರಿಸಬೇಕು..ಮೂರು ಬಾರಿ ಸ್ವೀಕರಿಸಿದರ ಫಲವನ್ನು ಪದ್ಮಪುರಾಣ ಹೇಳಿದೆ

"ಆದ್ಯಂ ಕಾಯಸ್ಯ ಶುಧ್ಯರ್ಥಂ  ದ್ವಿತೀಯಂ ಧರ್ಮಸಾಧನಮ್..ತೃತೀಯಂ ಮೋಕ್ಷದಂ ಪ್ರೋಕ್ತಂ ಏವಂ ತೀರ್ಥಂ ತ್ರಿಧಾ ಪಿಬೇತ್"

ಪ್ರತಿನಿತ್ಯ ಜಪಪೂಜಾನಂತರದಲ್ಲಿ ದೇವರಿಗೆ ಅಭಿಷೇಕಗೈದ ಗಂಧಪುಷ್ಪಾದಿಗಳನ್ನು ಹಾಕಿದ್ದ ತೀರ್ಥವನ್ನೂ ನಿರ್ಮಾಲ್ಯತುಳಸಿಯೊಡನೆ ಮೂರು ಬಾರಿ ಸ್ವೀಕರಿಸಬೇಕು..ಏಕಾದಶಿಯಂದು ಜಪಪೂಜೆಯ ಬಳಿಕ ಗಂಧಪುಷ್ಪಾದಿಗಳನ್ನು ಹಾಕಿರದ  ತೀರ್ಥವನ್ನು ಒಂದೇ ಬಾರಿ ಸ್ವೀಕರಿಸಬೇಕು..ಇದರೊಡನೆ ನಿರ್ಮಾಲ್ಯತುಳಸಿಯನ್ನು ತಿನ್ನಬಾರದು ಎಂದು ಪದ್ಮಪುರಾಣ

"ತುಳಸೀಮಿಶ್ರಿತಂ ತೋಯಂ ಏಕಾದಶ್ಯಾಂ ಕದಾಚನ..ನ ಗ್ರಾಹ್ಯಂ ವಿಷ್ಣುಭಕ್ತೈಶ್ಚ ವ್ರತಂ ನಶ್ಯೇಚ್ಚ ಪಾರ್ವತಿ"

ನಾರಾಯಣನ ತೀರ್ಥವನ್ನಲ್ಲದೆ ಬೇರೆ ಯಾವ ದೇವತೆಗಳ ತೀರ್ಥವನ್ನಿಲ್ಲಿ ಉಪಯೋಗಿಸುವಂತಿಲ್ಲ..ಹಾಗೆ ತಪ್ಪೆಸಗಿದರೆ ದೇವರ ನಾಶಕ್ಕೆ ಭಾಗಿಯಾದಾನು!

ಹರೇಃ ಪಾದೋದಕೇಷ್ವನ್ಯದೇವಪಾದೋದಕೇ ತಥಾ..ಕರೋತಿ ಸಮತಾಂ ಯೋ ಹಿ ಬ್ರಹ್ಮಹತ್ಯಾಂ ಲಭೇತ್ತು ಸಃ(ಬ್ರಹ್ಮವೈವರ್ತ)

ನಾರಾಯಣನ ಪಾದೋದಕವೆಂದರೆ ಅಲ್ಲಿ ಗಂಗೆಯ ಸನ್ನಿಧಾನ ನಿತ್ಯ.ಗಂಗೆಯಿರುವಲ್ಲಿ ಮೋಕ್ಷಸಾಧನೆಗೆ ಕಾರಣಗಳಾದ ಎಲ್ಲ ನದೀತೀರ್ಥಗಳು ಮೇಳೈಸಿರುವವು..ಗಂಗೆ ಬರಬೇಕಾದಲ್ಲಿ ದೇವರ ನಿತ್ಯ ಸನ್ನಿಧಾನವಿರುವ ಸಾಳಗ್ರಾಮ ಬೇಕೇಬೇಕು..

"ಗಂಗಾ ಗೋದಾವರೀ ರೇವಾ ನದ್ಯೋ ಮುಕ್ತಿಪ್ರದಾಶ್ಚ ಯಾಃ..ನಿವಸಂತಿ ಸತೀರ್ಥಾಸ್ತಾಃ ಸಾಳಗ್ರಾಮಶಿಲಾಜಲೇ"

ಶುದ್ಧಿಗೆ ಪಂಚಗವ್ಯಪ್ರಾಶನ ಮುಖ್ಯ..ಹೀಗೆಂದು ಅಶೌಚ ಶುದ್ಧಿಯ ಸಂದರ್ಭಗಳಲ್ಲಿ ಶುದ್ಧಿಯ ದಿನದಂದು ಜಪಹೋಮಾದಿಗಳ ಮೊದಲು ಪಂಚಗವ್ಯ ಸ್ವೀಕರಿಸುವ ಮಂದಿ ಇದ್ದಾರೆ..ನಿಜವಾಗಿಯೂ ಸಾವಿರಾರು ಪಂಚಗವ್ಯ ಪ್ರಾಶನಗಳಿಗಿಂತ ಮಿಗಿಲಾಗಿ ಶುದ್ಧಿಪ್ರದವಾದ ಸಂಗತಿ ಯೋಗ್ಯರೀತಿಯಿಂದ ತಯಾರಿಸಿದ ಸಾಳಗ್ರಾಮಶಿಲೆಯ ತೀರ್ಥಪ್ರಾಶನ-ನಿರ್ಮಾಲ್ಯತೀರ್ಥ ಸ್ವೀಕಾರ

"ಯೇ ಪಿಬಂತಿ ಸದಾ ನಿತ್ಯಂ ಸಾಳಗ್ರಾಮಶಿಲಾಜಲಮ್..ಪಂಚಗವ್ಯಸಹಸ್ರೈಸ್ತು ಪ್ರಾಶಿತೈಃ ಕಿಂ ಪ್ರಯೋಜನಮ್"(ಪದ್ಮಪುರಾಣ)

ಧರ್ಮಶಾಸ್ತ್ರಕಾರರು ಶುದ್ಧಿಗಾಗಿ,ಪ್ರಾಯಶ್ಚಿತ್ತವಾಗಿ ಹೇಳುವ ಎಲ್ಲ ಬಗೆಯ ಕೃಚ್ಛ್ರಾಚರಣೆಗಿಂತ ಮಿಗಿಲು ತೀರ್ಥಪ್ರಾಶನ

"ತಪ್ತಕೃಚ್ಛ್ರಾನ್ಮಹಾಕೃಚ್ಛ್ರಾತ್ ಪಂಚಗವ್ಯಾದ್ವಿಶಿಷ್ಯತೇ..ಚಾಂದ್ರಾಯಣಾತ್ಸರ್ವಕೃಚ್ಛ್ರಾತ್ ಪರಾಕಾದಪಿ ಸುವ್ರತೇ"(ನಾರದೀಯಪುರಾಣ)

ದಿನನಿತ್ಯ ನಡೆಸುವ ತೀರ್ಥಪ್ರಾಶನದಿಂದ ಅಂತರಂಗವನ್ನು ಶುದ್ಧಿಪಡಿಸಿಕೊಂಡ ಸಾಧಕ ಜ್ಞಾನ ಸಂಪಾದನೆಯ ಮೂಲಕ ದೇವರ ಪ್ರೀತಿಯನ್ನು ಸಂಪಾದಿಸಿ ಕೃಷ್ಣನೆಡೆಗೆ ಸಾಗುವನು..

"ಸಾಳಗ್ರಾಮಜಲಂ ಭಕ್ತ್ಯಾ ನಿತ್ಯಮಶ್ನಾತಿ ಯೋ ನರಃ..ಜೀವನ್ಮುಕ್ತಃ ಸ ಚ ಭವೇತ್ ಯಾತ್ಯಂತೇ ಕೃಷ್ಣಮಂದಿರಮ್"(ಬ್ರಹ್ಮವೈವರ್ತ)

ಹೀಗೆ ಸಾಳಗ್ರಾಮತೀರ್ಥದ ಮಹಿಮೆಯನ್ನು ವೇದವ್ಯಾಸರು ಉದ್ದೇಶಪೂರ್ವಕವಾಗಿಯೇ ಪುರಾಣಗಳಲ್ಲಲ್ಲಿ ಚೆಲ್ಲಿರುವರು..ಚೆಲ್ಲಲ್ಪಟ್ಟ ಈ ಅಮೃತದ ಹನಿಗಳನ್ನು ಉಡುಪಿ ಶ್ರೀ ರಾಮನಾಥ ಆಚಾರ್ಯರು ಸಂಧ್ಯಾಸಮೀಕ್ಷೆಯಲ್ಲಿ ಒಂದೆಡೆ ಸಂಗ್ರಹಿಸಿ ನೀಡಿರುವರು... 

 ಎಲ್ಲೆಲೋ ಅಡಗಿ ಕೂತ  ಮಾತುಗಳನ್ನು ಸೆರೆಹಿಡಿದು ಸಾಧನೆಯ ದಾರಿ ಸುಗಮವಾಗುವಂತೆ ಮಾಡಿದ ಆಚಾರ್ಯರಿಗೆ ಧನ್ಯವಾದಗಳು...🙏🙏
        ಕೃಷ್ಣಸಖ,ಮುದರಂಗಡಿ
***************


*****

************

sep.2020
make in India

************


No comments:

Post a Comment