SEARCH HERE

Tuesday, 1 January 2019

ಪ್ರದಕ್ಷಿಣೆ ಮಾಡುವ ಕ್ರಮ ಏನು ಫಲ pradakshine krama how to do and phala


ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆ ಅರ್ಥ. 

ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಬಾರಿ ಮಾಡಿದರೆ ಏನು ಫಲ? ಎಂಬುದನ್ನು ತಿಳಿಯೋಣ.

5 ಬಾರಿ ದೇವಸ್ಥಾನದಲ್ಲಿ  ಪ್ರದಕ್ಷಿಣೆ ಮಾಡಿದರೆ ಜಯ ಸಿಗುತ್ತದೆ.
7 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಶತ್ರುಗಳನ್ನು ಪರಜಯ ಮಾಡಬಹುದು.
9 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನಪ್ರಾಪ್ತಿಯಾಗುತ್ತದೆ.
11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ದಿಯಾಗುತ್ತದೆ.
13 ದೇವಸ್ಥಾನಕ್ಕೆ  ಬಾರಿ ಪ್ರದಕ್ಷಿಣೆ ಹಾಕಿದರೆ ಪ್ರಾರ್ಥನೆ ಸಿದ್ದಿಯಾಗುತ್ತದೆ.
15 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿಯಾಗುತ್ತದೆ.
17 ಬಾರಿ ಪ್ರದಕ್ಷಿಣೆ ಮಾಡಿದರೆ ಧನ ವೃದ್ದಿಯಾಗುತ್ತದೆ.
19 ಬಾರಿ ಪ್ರದಕ್ಷಿಸಿದರೆ ರೋಗ ನಿವಾರಣೆಯಾಗುತ್ತದೆ.

ದೇವಸ್ಥಾನಕ್ಕೆ ಬೆಳಗಿನ ಜಾವ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆಯಾಗುತ್ತದೆ.
ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ.
ಸಂಜೆ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರವಾಗುತ್ತದೆ.

ರಾತ್ರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಸಿದ್ದಿಯಾಗುತ್ತದೆ.ಸಿದ್ದಿಯಾಗುತ್ತದೆ.

ಪ್ರದಕ್ಷಿಣ ಎಂದರೆ ಸುತ್ತಿಬರುವುದು ಎಂದರ್ಥ. ಸಂಸ್ಕೃತದಲ್ಲಿ ದಕ್ಷಿಣಾ ಎಂದರೆ ಕಲೆ ಅಥವಾ ಕೌಶಲ್ಯ. ಆಂಗ್ಲಭಾಷೆಯಲ್ಲಿರುವ "dexterious" ಅಥವಾ "dexterity" ಎಂಬ ಪದವು ಸಂಸ್ಕೃತದ "ದಕ್ಷಿಣ" ಎಂಬ ಪದದ ಅಪಭ್ರಂಶ ರೂಪವಾಗಿದೆ ಎಂದು ಹೇಳಬಹುದು. ಪ್ರದಕ್ಷಿಣೆ ಎಂದರೆ ವಿಶಿಷ್ಟವಾಗಿ, ಕಲಾತ್ಮಕವಾಗಿ ಸುತ್ತಿ ಬರುವುದು ಎಂದರ್ಥ.


#ತಂತ್ರಸಾರಸಂಗ್ರಹದ ಪ್ರಕಾರ ಯಾವುದೇ ದೇವಸ್ಥಾನದ ಪ್ರಾಕಾರದ ವಿಭಜನೆಯು ಮೂರು ಹಂತದಲ್ಲಿರುತ್ತದೆ. ಮೊದಲನೆಯದು ಹಸಿರು ತುಂಬಿದ, ಸಸ್ಯಗಳನ್ನು ಬೆಳೆಸಿರುವ ಉದ್ಯಾನವನ. ಎರಡನೆಯದು ಪ್ರದಕ್ಷಿಣೆ ಮಾಡಲು ಅನುಕೂಲವಾಗುವಂತಿರುವ ವಿಶಾಲವಾದ ಪ್ರಾಕಾರ. ಮೂರನೆಯದು ಗರ್ಭಗುಡಿ. ಪ್ರದಕ್ಷಣೆಯ ಸಂಖ್ಯೆಯ ಬಗ್ಗೆ ಯಾವುದೇ ನಿರ್ದಿಷ್ಟ ನಿಯಮವಿಲ್ಲ. ಯಥಾಶಕ್ತಿ, ಯಥಾಮತಿ, ಪ್ರದಕ್ಷಿಣೆಗಳನ್ನು ಹಾಕಬಹುದು. ಪ್ರದಕ್ಷಿಣೆ ಹಾಕುವಾಗ ಯಾವುದೇ ಸಂಭಾಷಣೆಯಲ್ಲಿ ತೊಡಗಿರಕೂಡದು. ಪರಿಶುದ್ಧ ಮನಸ್ಸಿನಿಂದ, ಪ್ರಾರ್ಥನಾ ರೂಪವಾಗಿ ಪ್ರದಕ್ಷಿಣೆ ಹಾಕಬೇಕು. ಸರಿ ಸಂಖ್ಯೆಯಲ್ಲಿ ಪ್ರದಕ್ಷಿಣೆಯನ್ನು ಹಾಕುವುದು ಸತ್ಸಸಂಪ್ರದಾಯವಲ್ಲ. ಸರ್ವದಾ ಬೆಸಸಂಖ್ಯೆ ಎಂದರೆ ೧, ೩, ೫, ೭ ಮುಂತಾಗಿ ಪ್ರದಕ್ಷಿಣೆ ಮಾಡುವುದು ವಿಹಿತ. ಯಾವ ದೇವರ ಸನ್ನಿಧಿಯಲ್ಲಿ ನಮಸ್ಕರಿಸಲು ತೊಡಗಿರುವೆವೋ, ಆ ದೇವರ / ದೇವಿಯ ಸ್ತೊತ್ರಗಳನ್ನು ಪ್ರದಕ್ಷಿಣೆಯ ಸಂದರ್ಭದಲ್ಲಿ ಪಠಿಸಬೇಕು. ಪ್ರದಕ್ಷಿಣೆಯ ಸಂದರ್ಭದಲ್ಲಿ ಹೇಳಬಹುದಾದ ಕೆಲವು ಸಾರ್ವಕಾಲಿಕ, ಸರ್ವಪ್ರಚಲಿತ, ಸಾಮಾನ್ಯ #ಶ್ಲೋಕಗಳು ಇಂತಿವೆ:

ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ |
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ ||

ತೀರ್ಥಕೋಟಿ ಸಹಸ್ರಾಣಿ ವ್ರತಕೋಟಿ ಶತಾನಿ ಚ |
ನಾರಾಯಣ ಪ್ರಣಾಮಸ್ಯ ಕಲಾಂ ನಾರ್ಹಂತಿ ಷೋಡಶೀಮ್ ||

ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ |
ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಾಮೋಷ್ಟಾಂಗ ಈರಿತಃ ||

ನಮೋಸ್ತ್ವನಂತಾಯ ಸಹಸ್ರಮೂರ್ತಯೇ ಸಹಸ್ರ ಪಾದಾಕ್ಷಿ ಶಿರೋರುಬಾಹವೇ |
ಸಹಸ್ರ ನಾಮ್ನೇ ಪುರುಷಾಯ ಶಾಶ್ವತೇ ಸಹಸ್ರಕೋಟಿ ಯುಗಧಾರಿಣೇ ನಮಃ||

ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯ ಚ |
ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ||

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||

ಪರಮಾತ್ಮನೇ ಸತತಮೇಕರೂಪಿಣೇ ದಶರೂಪಿಣೇ ಶತಸಹಸ್ರರೂಪಿಣೇ |
ಅವಿಕಾರಿಣೇ ಸ್ಫುಟಮನಂತರೂಪಿಣೇ ಸುಖಚಿತ್ಸಮಸ್ತ ತನವೇ ನಮೋ ನಮಃ ||  

*****

೧. ಪ್ರದಕ್ಷಿಣೆಗಳನ್ನು ಹಾಕುವುದರಿಂದ ದೇವತೆಯ ಎಲ್ಲ ಅಂಗಗಳಿಂದ ಹೊರ ಬೀಳುವ ವಿವಿಧ ರೀತಿಯ ಸ್ಪಂದನಗಳನ್ನು ಭಕ್ತನು ಗ್ರಹಿಸಬಲ್ಲನು.
೨. ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವಗಳಿಗೆ ಗರ್ಭಗುಡಿಯಲ್ಲಿನ ಸತ್ತ್ವ ಲಹರಿಗಳ ಲಾಭವು ಹೆಚ್ಚಿಗೆ ಆಗುವುದು : ‘ದೇವಸ್ಥಾನದ ಗರ್ಭಗುಡಿಯಲ್ಲಿರುವ ಸತ್ತ್ವಲಹರಿಗಳು ಗರ್ಭಗುಡಿಯಲ್ಲಿ ಮತ್ತು ಗರ್ಭಗುಡಿಯ ಸುತ್ತಲೂ ಗೋಲಾಕಾರವಾಗಿ ತಿರುಗುತ್ತಿರುತ್ತವೆ. ದೇವಸ್ಥಾನವನ್ನು ಪ್ರವೇಶಿಸಿದ ಬಳಿಕ ಈ ಲಹರಿಗಳಿಂದ ಜೀವದ ಮೇಲೆ ಸೂಕ್ಷ್ಮದಿಂದ ಪರಿಣಾಮವಾಗತೊಡಗುತ್ತದೆ. ದೇವತೆಯ ದರ್ಶನ ಪಡೆದ ನಂತರ ಜೀವದ ಸುಷುಮ್ನಾನಾಡಿಯು ಜಾಗೃತವಾಗತೊಡಗುತ್ತದೆ. ದೇವತೆಯ ಸುತ್ತಲೂ ಪ್ರದಕ್ಷಿಣೆಗಳನ್ನು ಹಾಕಿದಾಗ ಈ ಲಹರಿಗಳ ಪ್ರಭಾವವು ಪ್ರದಕ್ಷಿಣೆ ಹಾಕುವವರ ಮೇಲಾಗುತ್ತದೆ ಮತ್ತು ಅವರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಈ ಸತ್ತ್ವಲಹರಿಗಳ ಲಾಭವಾಗುತ್ತದೆ.’

೩. ಪ್ರದಕ್ಷಿಣೆಗಳನ್ನು ಹಾಕುವುದರಿಂದ ಮಾಂತ್ರಿಕರು ಜೀವದ ಸುತ್ತಲೂ ನಿರ್ಮಿಸಿದ ಕಪ್ಪು ಆವರಣವು ನಾಶವಾಗುವುದು : ಸಾಮಾನ್ಯವಾಗಿ ಮಾಂತ್ರಿಕರು (ಬಲಾಢ್ಯ ಅಸುರೀ ಶಕ್ತಿಗಳು) ಜೀವದ ಮನಸ್ಸು ಮತ್ತು ಬುದ್ಧಿಯನ್ನು ಕೇಂದ್ರವನ್ನಾಗಿಸಿ ಅವುಗಳ ಸುತ್ತಲೂ ಅಚಕ್ರಾಕಾರ ಪದ್ಧತಿಯಲ್ಲಿ (ಪ್ರದಕ್ಷಿಣೆಯ ವಿರುದ್ಧ ದಿಕ್ಕಿನಲ್ಲಿ) ಕಪ್ಪು ಆವರಣವನ್ನು ನಿರ್ಮಿಸುತ್ತಾರೆ ಮತ್ತು ಆ ಆವರಣವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಇದರಿಂದ ಜೀವಕ್ಕೆ ಈಶ್ವರೀ ಶಕ್ತಿಯು ಸಿಗುವುದು ನಿಂತುಹೋಗುತ್ತದೆ.



ಜೀವವು ಚಕ್ರಾಕಾರ ಪದ್ಧತಿಯಿಂದ ಪ್ರದಕ್ಷಿಣೆಗಳನ್ನು ಹಾಕುವುದರಿಂದ ದೇವತೆಯ ಸುತ್ತಲಿರುವ ಇಂಧನವು (ಶಕ್ತಿಯು) ಜೀವದ ಸುತ್ತಲೂ ಚಕ್ರಾಕಾರ ದಿಕ್ಕಿನಲ್ಲಿ ಗತಿಮಾನವಾಗಲು ಪ್ರಾರಂಭವಾಗುತ್ತದೆ. ಇದರಿಂದ ಜೀವದ ಸುತ್ತಲೂ ಇರುವ ಕಪ್ಪು ಆವರಣ ಮತ್ತು ಈಶ್ವರೀ ಶಕ್ತಿ ಇವುಗಳ ನಡುವೆ ಯುದ್ಧವಾಗುತ್ತದೆ ಮತ್ತು ಕಪ್ಪು ಶಕ್ತಿಯು ವಿಘಟನೆಯಾಗಿ ಜೀವದ ಸುತ್ತಲಿರುವ ಇರುವ ಕಪ್ಪು ಆವರಣವು ನಾಶವಾಗುತ್ತದೆ. – ಒಂದು ಅಜ್ಞಾತ ಶಕ್ತಿ (ಸೌ. ಕ್ಷಿಪ್ರಾ ದೇಶಮುಖರವರ ಮಾಧ್ಯಮದಿಂದ, ೨೧.೯.೨೦೦೬, ಬೆಳಗ್ಗೆ ೭.೪೦)

೪. ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವದ ಸುತ್ತಲೂ ಸಾತ್ತ್ವಿಕ ಕ್ಷೇತ್ರವು ನಿರ್ಮಾಣವಾಗುವುದರಿಂದ ಜೀವದ ಸಪ್ತಚಕ್ರಗಳಲ್ಲಿನ ಅಡಚಣೆಗಳು ದೂರವಾಗಿ ಅವುಗಳ ಜಾಗೃತಿಯಾಗಲು ಸಹಾಯವಾಗುವುದು : ಜೀವವು ಚಕ್ರಾಕಾರ ಪದ್ಧತಿಯಲ್ಲಿ ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವದ ಕಡೆಗೆ ಊರ್ಧ್ವದಿಕ್ಕಿನಿಂದ ಈಶ್ವರೀ ಚೈತನ್ಯವು ಬರುತ್ತದೆ. ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವಕ್ಕೆ ದೇವತೆಯ ಚಿತ್ರ ಅಥವಾ ಮೂರ್ತಿಯಿಂದ ಪ್ರಕ್ಷೇಪಿತವಾಗುವ ಶಕ್ತಿಯು ಸಿಗುತ್ತದೆ. ಇದರಿಂದಾಗಿ ಜೀವದ ಸುತ್ತಲೂ ಸಾತ್ತ್ವಿಕ ಕ್ಷೇತ್ರ ನಿರ್ಮಾಣವಾಗುತ್ತದೆ. ಇದರಿಂದ ಜೀವದ ಸಪ್ತಚಕ್ರಗಳಲ್ಲಿರುವ ಅಡಚಣೆಗಳು ದೂರವಾಗಿ ಅವುಗಳ ಜಾಗೃತಿಯಾಗಲು ಸಹಾಯವಾಗುತ್ತದೆ.’ – ಒಂದು ಅಜ್ಞಾತ ಶಕ್ತಿ (ಸೌ. ಕ್ಷಿಪ್ರಾ ದೇಶಮುಖರವರ ಮಾಧ್ಯಮದಿಂದ, ೨೧.೯.೨೦೦೬, ಬೆಳಗ್ಗೆ ೭.೪೦)

೫. ಪ್ರದಕ್ಷಿಣೆಗಳಿಂದ ಜೀವದ ಸುತ್ತಲೂ ರಕ್ಷಾಕವಚ ನಿರ್ಮಾಣವಾಗುವುದು : ‘ದೇವಸ್ಥಾನದಲ್ಲಿ ದೇವತೆಯ ದರ್ಶನವನ್ನು ಪಡೆದುಕೊಳ್ಳುವುದರಿಂದ ದೇವತೆಯ ಸಗುಣ ಚೈತನ್ಯದಿಂದ ಜೀವದ ದೇಹದ ಶುದ್ಧಿಯಾಗುತ್ತದೆ; ಆಮೇಲೆ ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವದ ಸುತ್ತಲೂ ರಕ್ಷಾಕವಚ ನಿರ್ಮಾಣವಾಗಿ ಜೀವದ ದೇಹದಲ್ಲಿರುವ ಚೈತನ್ಯವು ದೀರ್ಘಕಾಲ ಉಳಿದುಕೊಳ್ಳುತ್ತದೆ ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ಸಹಾಯವಾಗುತ್ತದೆ’ – ಓರ್ವ ವಿದ್ವಾಂಸ [(ಪೂ.) ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೫.೨.೨೦೦೭, ರಾತ್ರಿ ೯.೧೯]

ದೇವತೆಗೆ ಪ್ರದಕ್ಷಿಣೆಗಳನ್ನು ಹಾಕುವ ವ್ಯವಸ್ಥೆ ಇರುವುದು ಅಥವಾ ಇಲ್ಲದಿರುವುದು

೧. ಪ್ರದಕ್ಷಿಣಾಪ್ರಧಾನ ದೇವತೆಗಳು : ವಿಶೇಷವಾಗಿ ದತ್ತಕ್ಷೇತ್ರಗಳಲ್ಲಿ ಪ್ರದಕ್ಷಿಣೆಗಳನ್ನು ಹಾಕಿ ಉಪಾಸನೆಯನ್ನು ಮಾಡುವ ಪರಂಪರೆಯಿದೆ.

೨. ದರ್ಶನಪ್ರಧಾನ ದೇವತೆಗಳು : ತಿರುಮಲೈ, ಗುರುವಾಯೂರು, ರಾಮೇಶ್ವರ, ವಾರಾಣಸಿ, ಪಂಢರಪುರ, ಪುರಿ ಮುಂತಾದ ಕ್ಷೇತ್ರಗಳಲ್ಲಿರುವ ದೇವತೆಗಳ ದರ್ಶನವನ್ನು ಒಂದು ಸಲ ಪಡೆದುಕೊಂಡ ನಂತರ ಪುನಃ ದರ್ಶನವನ್ನು ಪಡೆಯುವ ಅಥವಾ ಪ್ರದಕ್ಷಿಣೆಗಳನ್ನು ಹಾಕುವ ವ್ಯವಸ್ಥೆಯಿರುವುದಿಲ್ಲ. ಇಂತಹ ಕ್ಷೇತ್ರಗಳಲ್ಲಿ ನಾಮಸಂಕೀರ್ತನೆಯಿಂದ ಉಪಾಸನೆಯನ್ನು ಮಾಡಲಾಗುತ್ತದೆ.
***

ಪ್ರದಕ್ಷಿಣೆಯ ರಹಸ್ಯ - 

ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಎಷ್ಟೋ ಜನ ಮಹಿಳೆಯರು, ಮಹನೀಯರು ಯಾವು ಯಾವುದೋ ಮಂತ್ರವನ್ನು ಹೇಳಿಕೊಳ್ಳುತ್ತಾ ಮರವನ್ನೋ, ದೇವಾಲಯವನ್ನೋ ಅಥವಾ ಕಲ್ಲನಾಗರಗಳನ್ನೋ ಸುತ್ತುವುದನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿರುತ್ತಾರೆ. 

ಈ 'ಸುತ್ತುವುದೇ' ಸಂಸ್ಕೃತದಲ್ಲಿ ಪ್ರದಕ್ಷಿಣೆಯಾಗಿದೆ 'ದಕ್ಷಿಣ' ಎಂದರೆ ಬಲಭಾಗ. ಪೂಜ್ಯ ವಸ್ತುಗಳನ್ನು ಅಂದರೆ ಅಶ್ವತ್ಥವೃಕ್ಷ, ದೇವಸ್ಥಾನ, ದೇವಮೂರ್ತಿ ಮುಂತಾದವುಗಳನ್ನು ಬಲಗೊಂಡು ಸುತ್ತುವುದಕ್ಕೆ ಪ್ರದಕ್ಷಿಣೆ ಎಂದು ಹೆಸರು. 

ನವ ವಿಧ ಭಕ್ತಿಗಳಲ್ಲಿ ಒಂದಾದ 'ವಂದನಾ' ಭಕ್ತಿಯಲ್ಲಿ ಇದೂ ಒಂದು ಪ್ರಭೇದವೆನ್ನಬಹುದು. 

ಅವರವರ ಉದ್ದೇಶ, ಆರಾಧ್ಯ ದೇವತೆ ಇವುಗಳಿಗೆ ತಕ್ಕಂತೆ ಭಕ್ತರು ಒಂದು ಸಲ, ಮೂರು ಸಲ ಅಥವಾ ನೂರೆಂಟು ಸಲ ಇತ್ಯಾದಿಯಾಗಿ ಪ್ರದಕ್ಷಿಣೆ ಹಾಕುತ್ತಾರೆ. 

'ಕರ್ಮಲೋಚನ'ವೆಂಬ ಗ್ರಂಥದಲ್ಲಿ ದೇವಿಗೆ ಒಂದು ಸಲ, ಸೂರ್ಯನಿಗೆ ಏಳು ಸಾರಿ, ವಿನಾಯಕನಿಗೆ ಮೂರು ಸಾರಿ, ವಿಷ್ಣುವಿಗೆ ನಾಲ್ಕುಸಾರಿ, ಶಿವನಿಗೆ ಅರ್ಧಸಾರಿ, ಹೀಗೆ ಪ್ರದಕ್ಷಿಣೆ ಹಾಕಬೇಕೆಂದು ಹೇಳಲಾಗಿದೆ. 

ಒಬ್ಬೊಬ್ಬ ದೇವರಿಗೆ ಇಂತಿಷ್ಟು ಸಾರಿ ಪ್ರದಕ್ಷಿಣ ಹಾಕಬೇಕೆಂಬ ನಿಯಮ. ಇನ್ನು ಈ ಪ್ರದಕ್ಷಿಣೆಯನ್ನು ಹೇಗೆ ಹಾಕಬೇಕೆಂಬುದರ ಬಗ್ಗೆ 'ಕಾಲಿಕಾಪುರಾಣದಲ್ಲಿ' ವರ್ಣನೆಯಿದೆ. 

ಬಲಗೈಯನ್ನು ಇಳಿಬಿಟ್ಟುಕೊಂಡು, ತಲೆಯನ್ನು ವಿನಯದಿಂದ ಬಗ್ಗಿಸಿ ದೇವರು ತನ್ನ ಬಲಭಾಗದಿಂದ ಬಗ್ಗಿಸಿ ದೇವರು ತನ್ನ ಬಲಭಾಗದಲ್ಲಿ ಬರುವಂತೆ, ಚಿತ್ತ ಚಾಂಚಲ್ಯವಿಲ್ಲದೆ ಭಕ್ತಿಯಿಂದ ಸುತ್ತಬೇಕು - ಅದು ನಿಜವಾದ ಪ್ರದಕ್ಷಿಣೆ ಎನ್ನಲಾಗಿದೆ. 

ಈ ಪ್ರದಕ್ಷಿಣೆಯ ರಹಸ್ಯವೇನು? ಅದರ ಹಿಂದಿರುವ ನೆಲೆಗಟ್ಟು ಯಾವುದು? ಯಾವ ಉದ್ದೇಶಕ್ಕೆ ಈ ಪದ್ಧತಿ ಬಳಕೆಗೆ ಬಂದಿತು? ಎಂಬಿತ್ಯಾದಿ ಪ್ರಶ್ನೆಗಳೇಳುವುದು ಸಹಜ, 

ಅನೇಕರು ಅನೇಕರೀತಿಯಿಂದ ಈ ಪ್ರದಕ್ಷಿಣೆಯ ಹಿಂದಿನ ತತ್ತ್ವವನ್ನು ವಿಶ್ಲೇಷಿಸಿದ್ದಾರೆ. 

ಈ ಅನಂತವಿಶ್ವದ ಪ್ರತಿಯೊಂದು ಅಣುವು ತನ್ನ ಸುತ್ತಲು ತಿರುಗುತ್ತಲೇ ಇದೆ. ಭೂಮಿ ಮತ್ತು ಇತರ ಗ್ರಹಗಳು ಸೂರ್ಯನ ಸುತ್ತಲೂ, ಸೂರ್ಯ ಗ್ರಹ, ಉಪಗ್ರಹಗಳೊಂದಿಗೆ ಬೇರೊಂದು ಆಕಾಶಕಾಯವನ್ನು, ಅದು ಮತ್ತೊಂದನ್ನು, ಹೀಗೆ ಸಕಲವೂ ಸುತ್ತುತ್ತಲೇ ಇವೆ. 

ಈ ಸುತ್ತುವಿಕೆಗೆ ಪ್ರೇರಣೆ. 'ಅನಂತಶಕ್ತಿ'ಯೊಂದು ದೊರೆತಿದ್ದು, ಅದನ್ನೇ ನಮ್ಮ ಪೂರ್ವಜರು 'ದೇವರು' ಎಂಬ ಹೆಸರಿನಿಂದ ಕರೆದರು. 

ಆ 'ದೇವರ' ಕೃಪೆಯನ್ನು ಪಡೆಯಲು ಆತನೇ ರಚಿಸಿದ ಸೃಷ್ಟಿ ನಿಯಮದಂತೆ ಆತನ 'ಮೂರ್ತಿ'ಯನ್ನು ಸುತ್ತು ಹಾಕುವ ಪದ್ಧತಿಯನ್ನು ಜಾರಿಗೆ ತಂದಿರಬಹುದೆಂದು ಕೆಲವರ ಅಭಿಪ್ರಾಯ. 

ಋಗ್ವೇದ ಮತ್ತು ಉಪನಿಷತ್ತುಗಳಲ್ಲಿ ಒಂದು ಸುಂದರ ರೂಪಕವಿದೆ. ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಕುಳಿತಿರುವುವು. ಒಂದು ಆ ವೃಕ್ಷದ ಮೇಲಿನ ಟೊಂಗೆಯ ತುದಿಯಲ್ಲಿ ಅತ್ಯಾನಂದವನ್ನು ಅನುಭವಿಸುತ್ತ, ತನ್ನನ್ನೇ ಮರೆತು ಕುಳಿತುಕೊಂಡಿದೆ. 

ಇನ್ನೊಂದು ಕೆಳಗಿನ ಟೊಂಗೆಯಲ್ಲಿ ಕುಳಿತಿದ್ದು ತುಂಬ ಚಂಚಲವಾಗಿದೆ. ಆ ವೃಕ್ಷದಲ್ಲಿ ಹಣ್ಣುಗಳು ಹೇರಳವಾಗಿದ್ದುದರಿಂದ ಅದು ಆ ಹಣ್ಣುಗಳನ್ನು ಸವಿಯಬೇಕೆಂಬ ಆಸೆಯಿಂದ ಒಂದು ಹಣ್ಣನ್ನು ಕಚ್ಚುತ್ತದೆ ಅದು ತುಂಬ ರುಚಿಯಾಗಿರುತ್ತದೆ. 

ಆಗ ಸಂತೋಷಪಟ್ಟು ಮತ್ತೊಂದು ಹಣ್ಣನ್ನು ಕಚ್ಚುವುದು ಆದರೆ ಅದು ಕಹಿಯಾಗಿದೆ! ಆಗ ಅದಕ್ಕೆ ಆ ಹಣ್ಣುಗಳ ಬಗ್ಗೆ ಉದಾಸೀನತೆ ಮೂಡುತ್ತದೆ. 

ಆಗ ಮರದ ತುದಿಯಲ್ಲಿ ಕುಳಿತ ಪಕ್ಷಿಯನ್ನು ನೋಡಿ ತಾನೂ ಅದರಂತಾಗಲು ಬಯಸಿ ಅದರ ಸಮೀಪಕ್ಕೆ ಹಾರುತ್ತಲಿದ್ದಾಗಲೇ ಮತ್ತೊಂದು ಹಣ್ಣು ಕಂಡು ಮೇಲೆ ಕುಳಿತ ಪಕ್ಷಿಯನ್ನು ಮರೆತು ಹಣ್ಣನ್ನು ಕಚ್ಚುವುದು ಹೀಗೆಯೇ ಸಾಗುವುದು ಅದರ ಪಯಣ ಕೊನೆಗೊಮ್ಮೆ ಈ ಸಿಹಿ-ಕಹಿಗಳಿಂದ ಬೇಸತ್ತು ಮೇಲೆ ಕುಳಿತ ಪಕ್ಷಿಯಂತಾಗಲು ಬಯಸಿ, ಅದರ ಹತ್ತಿರ ಬಂದು ಅದನ್ನು ಸುತ್ತತೊಡಗುವುದು, 

ಸುತ್ತುತ್ತಲೇ ಅದರಲ್ಲಿ ಆ ಪಕ್ಷಿಯೇ ತಾನು ಎಂಬ ಭಾವ ಮೂಡಿ ಅದೇ ಇದಾಗುವುದು. ಈ ರೂಪಕದಲ್ಲಿ ಮೇಲಿನ ಟೊಂಗೆಯ ಪಕ್ಷಿ ಶಿವ ಮತ್ತು ಕೆಳಗಿನ ಟೊಂಗೆಯಲ್ಲಿ ಕುಳಿತ ಪಕ್ಷಿಯೆಂದರೆ ಜೀವ, ಸಂಸಾರದ ಸಿಹಿ ಕಹಿ ಫಲಗಳನ್ನು ತಿಂದು ಬೇಸತ್ತು ಆ ಶಿವನಲ್ಲಿ ಐಕ್ಯತೆ ಹೊಂದಲು ಜೀವ ಚಡಪಡಿಸುತ್ತದೆ. 

ಅದಕ್ಕಾಗಿ ಆ ಶಿವನನ್ನು ಸುತ್ತವರೆಯುತ್ತದೆ. ಕೊನೆಗೆ ಅದೇ ತಾನೆಂಬ ಅರಿವು ಮೂಡಿ ಶಿವನಲ್ಲಿ ಐಕ್ಯವಾಗುತ್ತದೆ. 

ಜೀವವನ್ನು ಧರಿಸಿದ ದೇಹದ ಮೂಲಕ ಶಿವನನ್ನು ಕಲ್ಪಿಸಿಕೊಂಡ ಮೂರ್ತಿಯನ್ನು ಸುತ್ತುವುದರಿಂದ ಮುಕ್ತಿ ಅಥವಾ ಶಿವನಲ್ಲಿ ಏಕಾತ್ಮತೆ ಸಾಧ್ಯ ಎಂಬ ಕಾರಣಕ್ಕಾಗಿ ಪ್ರದಕ್ಷಿಣೆಯ ಪದ್ಧತಿಯು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿ ಬಂದಿತೆಂದು ಬಲ್ಲವರ ಕೆಲವರ ಅಭಿಪ್ರಾಯವಾಗಿದೆ. 

ಪ್ರದಕ್ಷಿಣೆಯ ಅರ್ಥ ನಿರೂಪಿಸುವ ಪ್ರಸಂಗವೊಂದು ರಾಮಾಯಣದಲ್ಲಿದೆ, 

ರಾಮನು ರಾವಣನನ್ನು ಕೊಂದನಂತರ ವಿಭೀಷಣನನ್ನು ಲಂಕೆಗೆ ರಾಜನನ್ನಾಗಿ ಮಾಡಿ ತನ್ನ ಪತ್ನಿ ಸೀತೆಯಿಂದ ಒಡಗೂಡಿ ಬಂದಾಗ, ವಾನರ ಸೇನೆಗೆಲ್ಲ ತುಂಬ ಸಂತೋಷವಾಯಿತಂತೆ, 

ಆಗ ಅವರೆಲ್ಲ ರಾಮನ ಜಯ ಜಯಕಾರ ಮಾಡುತ್ತಾ ಅತನ ಸುತ್ತಲು ಸಂತೋಷದಿಂದ ಕುಣಿಯತೊಡಗಿದಂತೆ! 

ಆ ಸಂತೋಷದ ಅತಿರೇಕದಲ್ಲಿ ಅವರೆಲ್ಲ ತಮ್ಮ  'ದೇಹಾಭಿಮಾನ'ವನ್ನು ಬಿಟ್ಟು ರಾಮನ 'ಜಯಕಾರ'ದ ಆನಂದದಲ್ಲಿ ತಲ್ಲೀನರಾಗಿ ಸುತ್ತುತ್ತಿದ್ದರಂತೆ, ಅದರಿಂದ ರಾಮನು ಸುಪ್ರಿತನಾದನಂತೆ, 

ಆದುದರಿಂದ ದೇವರನ್ನು ಸುಪ್ರೀತಗೊಳಿಸಲು ನಮ್ಮ ದೇಹಾಬಿಮಾನ ಮರೆತು ಅವನನ್ನು ಕೊಂಡಾಡುತ್ತಾ ಕುಣಿಯಬೇಕು. ಈ ಕುಣಿತವೇ ಪರಿಷ್ಕೃತಗೊಂಡು ಪ್ರದಕ್ಷಿಣೆ ಯಾಗಿರಬಹುದಲ್ಲವೇ. 

ಇಂದಿಗೂ ಪಾಂಡುರಂಗನ ಭಕ್ತರು (ಸಂತರು) ಹಾಡುತ್ತ ಕುಣಿಯುತ್ತ ದೇವರನ್ನು ಸುತ್ತುವುದನ್ನು ಕಾಣುತ್ತೇವೆ. 

ಇಲ್ಲ ದೇಹದ ಮೇಲಿನ ಅತಿಯಾದ ಅಭಿಮಾನ ತೊರೆದು 'ದೇವ' ಒಡೆಯನೆಂಬ ತಾನು ದಾಸನೆಂಬ ಭಾವವನ್ನು ಪ್ರಕಟಿಸುವುದೇ ಪ್ರದಕ್ಷಿಣೆಯೆಂಬ ಅರ್ಥ ಸ್ಪಷ್ಟವಾಗುತ್ತದೆ. 

ಗೀತೆಯ 11ನೇ ಅಧ್ಯಾಯದಲ್ಲಿ "ನಮಃ ಪುರಸ್ತಾತ್ ಅಥ ಪೃಷ್ಠತಾತ್| ನಮೋ ಸ್ತುತೇ ಸರ್ವತ ಏವ ಸರ್ವ" ಎಂದು ಹೇಳಲಾಗಿದೆ, 

ಅಂದರೆ ಸರ್ವತೋಮುಖಿಯಾದ ದೇವನನ್ನು ಮುಂದಿನಿಂದ, ಹಿಂದಿನಿಂದ ಮತ್ತು ಎಲ್ಲಾ ಕಡೆಯಿಂದಲೂ ನಮಿಸುತ್ತೇನೆ ಎಂದರ್ಥ. 

ಸರ್ವತೋಮುಖನಾದ ಭಗವಂತನ ಸರ್ವಮುಖಗಳಿಗೆ ನಮಿಸಬೇಕಾದರೆ, ಭಕ್ತನು ಆತನ ಸುತ್ತಲೂ ತಿರುಗಲೇಬೇಕಾಗುತ್ತದೆ. 

ಆದ್ದರಿಂದಲೆ ದೇವರ ಮೂರ್ತಿಗಳಿಗೆ ಪ್ರದಕ್ಷಿಣೆ ಹಾಕುವುದು ಎಂದು ಭಗವಂತನ ಸರ್ವತೋಮುಖ ತತ್ವವನ್ನು ಪ್ರತಿಪಾದಿಸುವುದು ವಾದಿಸುತ್ತಾರೆ. 

ಇನ್ನೂ ಸೂಕ್ಷ್ಮವಾಗಿ ವಿಚಾರಿಸಿದ ಕೆಲವರು "ಪ್ರದಕ್ಷಿಣೆ ಮೋಕ್ಷಮಾರ್ಗ"ದ ಸಂಕೇತ ಎಂದು ಹೇಳುತ್ತಾರೆ. 

ಶಾಸ್ತ್ರದಲ್ಲಿ ಜೀವನು ಆವಾಗಮನ ಅವಸ್ಥೆಯುಳ್ಳವನು ಎಂದು ಹೇಳಲಾಗಿದೆ. 

ಆವಾಗಮನ ಎರಡು ವಿಧವಾಗಿದೆ. ಒಂದು ಶುಕ್ಲ ಮಾರ್ಗದ್ದು ಇನ್ನೊಂದು ಕೃಷ್ಣ ಮಾರ್ಗದ್ದು, ಶುಕ್ಲ ಮಾರ್ಗದಿಂದ ಹೋದ ಜೀವ ಕ್ರಮವಾಗಿ ಮೇಲಕ್ಕೆ ಹೋಗುತ್ತ ಮೋಕ್ಷದ ಕಡೆಗೆ ಸಾಗುವುದು. 

ಕೃಷ್ಣ ಮಾರ್ಗದಿಂದ ಹೋದ ಜೀವ ಪುನರಾವರ್ತನೆಯುಳ್ಳದ್ದು. ಈ ಮಾರ್ಗಗಳನ್ನೆ ದಕ್ಷಿಣ ವಾಮ ಮಾರ್ಗಗಳೆಂದು ಹೆಸರಿಸಲಾಗಿದೆ. 

ಉಪಾಸಕನು ತನ್ನ ಉಪಾಸ್ಯ ದೇವತೆಯಲ್ಲಿ ಮೋಕ್ಷದ ಅಪೇಕ್ಷೆಯನ್ನು ವ್ಯಕ್ತ ಗೊಳಿಸುವದಕ್ಕಾಗಿ ದಕ್ಷಿಣಾವರ್ತ (ಶುಕ್ಲಮಾರ್ಗ)ವಾಗಿ ಸುತ್ತುವನು. 

ಬಹು ದುಸ್ತರವಾದ ಈ ಸಂಸಾರಕ್ಕೆ ಪುನಃ ಬರಬಾರದೆಂಬ ಅಪೇಕ್ಷೆ ಇರುವವರು ದೇವರನ್ನು ಬಲಗೊಂಡು ಸುತ್ತಿ, ಅಂದರೆ ಪ್ರದಕ್ಷಿಣೆಯನ್ನು ಹಾಕಿ, ಮೋಕ್ಷಪಡೆಯುತ್ತಾರೆ. 

ಹಳ್ಳಿಯ 'ಗುರು'ವೊಬ್ಬ ಸುಂದರವಾದ ಉದಾಹರಣೆಯ ಮೂಲಕ ಈ ಪ್ರದಕ್ಷಿಣೆಯ ರಹಸ್ಯವನ್ನು ವಿವರಿಸಿದ ಸಂಸಾರ ಒಂದು ಬೀಸುವಕಲ್ಲು. ಅದರ ನಡುವಿನ ಗೂಟವೇ ವಿಶ್ವನಾಥ ಮೇಲಿನಿಂದ ಕಾಳುಗಳನ್ನು ಹಾಕಿದಂತೆ ಅವು ಗೂಟದ ಸುತ್ತಲೂ ಇರುತ್ತವೆ ಆಗ ಅವು ಗಟ್ಟಿಯಾಗಿಯೇ ಇರುತ್ತವೆ ಆದರೆ ಕ್ರಮೇಣ ಅವು ಗೂಟದಿಂದ ದೂರಸರಿದಂತೆ ಒಡೆದು ನುಚ್ಚಾಗಿ, ಹಿಟ್ಟಾಗಿ ಹೋಗುವವು 

ಹಾಗೆಯೇ ಮನುಷ್ಯರೂ ಕೂಡ ಜಗಕ್ಕೆಲ್ಲ ಆಧಾರವಾಗಿರುವ ಆ ವಿಶ್ವನಾಥನನ್ನು ಮರೆತು ದೂರಸರಿದರೆ ನುಚ್ಚುನೂರಾಗಿ ನಾಶವಾಗುತ್ತಾರೆ, 

ಯಾರು ಅವನನ್ನೇ ನಂಬಿ ಆತನ ಸಮೀಪದಲ್ಲಿಯೇ ಇದ್ದು, ಆತನನ್ನೇ ಸುತ್ತುತ್ತ ಸ್ಮರಿಸುತ್ತ ಇರುತ್ತರೆಯೋ ಅವರು ಶಾಶ್ವತವಾದ ಸುಖದಲ್ಲಿ ಇರುತ್ತಾರೆ

ಆದರೆ ಮನಸ್ಸು ಬಹು ಚಂಚಲ ಅದು ಸತತ ದೇವನಾಮಸ್ಮರಣೆಯಲ್ಲಿರಲು ಶಕ್ಯವಿಲ್ಲ, ಅದಕ್ಕಾಗಿ ಭಕ್ತನು ದೇವರ ಸುತ್ತು ಮೂರ್ತಿಗೆ ಪ್ರದಕ್ಷಿಣೆ ಹಾಕುತ್ತಾನೆ. 

ಆಗ ಆತನ ಮನಸ್ಸು ದೇವರನ್ನೇ ಸುತ್ತುತ್ತಿರುತ್ತದೆ. ಮನಸ್ಸಿನ ಈ ಸಾಧನೆಗಾಗಿ ಪ್ರದಕ್ಷಿಣೆಯ ಪದ್ಧತಿಯು ಬಳಕೆಯಲ್ಲಿ ಬಂದಿತು ಎಂದು ಆ 'ಗುರು' ವಿವರಿಸಿದ. 

ಹೀಗೆ ಅನೇಕರು ಅನೇಕ ತೆರವಾಗಿ ಪ್ರದಕ್ಷಿಣೆಯ ಹಿಂದೆ ಅಡಗಿರುವ ತತ್ತ್ವನ್ನು ವಿವರಿಸಿದರೂ ಕೂಡ, ಇವೆಲ್ಲ ಎಷ್ಟು ಸಮಂಜಸ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ ಇವೆಲ್ಲವುಗಳಿಗೂ ವೈಜ್ಞಾನಿಕ ಅಡಿಪಾಯವಿದೇಯೇ? 

ಪ್ರದಕ್ಷಿಣೆಯ ರಹಸ್ಯವನ್ನು ಕುರಿತು ಶ್ರೀದತ್ತ ಅವಧೂತರು ಹೀಗೆ ಹೇಳುತ್ತಾರೆ - ಮನುಷ್ಯನ ಮಸ್ತಿಷ್ಕದಲ್ಲಿ ಮೂಡಿದ ಪ್ರತಿಯೊಂದು ವಿಚಾರ ಭಾವನೆಗಳನ್ನು ಅವನು ಅದನ್ನು ಅಭಿವ್ಯಕ್ತಗೊಳಿಸಿದ್ದ ಸ್ಥಾನದಲ್ಲಿ ವಲಯ ರೂಪವಾಗಿ ಇದ್ದೇ ಇರುತ್ತವೆ. 

ಈ ರೀತಿ ಅನೇಕ ಉನ್ನತ ವಿಚಾರ ಭಾವನೆಗಳನ್ನು ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಅಭಿವ್ಯಕ್ತಗೊಳಿಸುವುದರಿಂದ ಆ ಸ್ಥಳದಲ್ಲಿ ಅಂಥಪವಿತ್ರ ವಿಚಾರಗಳ ಸಾಂದ್ರತೆ ಉಂಟಾಗುವುದು. 

ಹಾಗೆಯೇ ಅನೇಕ ಸಾಧು ಸತ್ಪುರುಷರು ತಮ್ಮ ಘನವಾದ ಆಧ್ಯಾತ್ಮಿಕ ಸಾಧನೆಯಿಂದ ಆಧ್ಯಾತ್ಮಿಕವಲಯ ನಿರ್ಮಿಸಿರುತ್ತಾರೆ ಇದೇ ದೇವಸ್ಥಾನಗಳ ತಾತ್ವಿಕಸ್ವರೂಪ. ಮಂದಿರವೆಂದರೆ ಕೇವಲ ಕಲ್ಲು ಮಣ್ಣಿನ ಕಟ್ಟಡವಲ್ಲ ಅಥವಾ ಸುಂದರ ವಿಗ್ರಹಗಳ ಸಂಗ್ರಹಾಲಯವೂ ಅಲ್ಲ ದೀರ್ಘಕಾಲದವರೆಗೆ ಸಂಗ್ರಹಿತವಾದ ಆಧ್ಯಾತ್ಮ ವಲಯಗಳ ಘನೀಭೂತ ವಾತಾವರಣವೇ ಮಂದಿರ. 

ಇಂಥ ಮಂದಿರಗಳಲ್ಲಿ ಪ್ರದಕ್ಷಿಣೆ ಹಾಕುವುದು ಕೂಡ ಒಂದು ಸಾಧನೆಯೇ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆಧ್ಯಾತ್ಮಿಕ ವಲಯಗಳು ಇದ್ದೇ ಇದ್ದು, ಅವು ಆತನ ಸಂಸ್ಕಾರದಿಂದಾಗಿ ದುರ್ಬಲ ಅಥವಾ ಸಬಲವಾಗಿರುತ್ತವೆ. 

ಇವು ಕೂಡಿ ಒಂದು ನಿರ್ದಿಷ್ಟ ದಿಸೆಯಲ್ಲಿ ತಿರುಗುತ್ತಿರುತ್ತವೆ. ಇವುಗಳನ್ನು 'ವೃಷ್ಟಿ ಆಧ್ಯಾತ್ಮಿಕ ವಲಯ' ಎಂದು ಕರೆಯಬಹುದು. 

ಸಾಮಾನ್ಯವಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಇವು ಬಹುಜನರಲ್ಲಿ ಸುಪ್ತವಾಗಿ ಅಥವಾ ದುರ್ಬಲವಾಗಿರುತ್ತವೆ. 

ಇಂಥವರು ಘನೀಭೂತ ಆಧ್ಯಾತ್ಮ ವಲಯವಿರುವ (ಇವುಗಳನ್ನು ಸಮಷ್ಟಿ ವಲಯಗಳೆಂದು ಕರೆಯಬಹುದು) ಸ್ಥಳಗಳಲ್ಲಿ ದಕ್ಷಿಣಾವರ್ತದಲ್ಲಿ ತಿರುಗುವುದರಿಂದ ಚುಂಬಕದ ನಿಯಮದಂತೆ, ಇವೆರಡರ (ವೃಷ್ಟಿ ಮತ್ತು ಸಮಷ್ಟಿ) ಮಧ್ಯೆ ಸಂಘರ್ಷಣವೇರ್ಪಟ್ಟು, ವ್ಯಕ್ತಿಯ ದುರ್ಬಲ ಆಧ್ಯಾತ್ಮಿಕ ವಲಯಗಳು ಉದ್ದೀಪನಗೊಳ್ಳುವುವು. 

ಆಗ ಅವರಲ್ಲಿ ಆಧ್ಯಾತ್ಮಿಕ ವಿಚಾರಗಳಿಗೆ ಅನುಕೂಲಕರವಾದ ಸಂಸ್ಕಾರಗಳ ಉತ್ಥಾಪನೆಯಾಗುವುದು. 

ಅದಕ್ಕಾಗಿ ಭಕ್ತರು ದೇವಾಲಯದಲ್ಲಿ ಪ್ರದಕ್ಷಿಣೆಯನ್ನು ಹಾಕುವರು. ಆ ಮೂಲಕ ಅವರು ಆಧ್ಯಾತ್ಮಿಕ ಸಾಧನೆಯನ್ನು ಮಾಡುವರು. 

ಆದರೆ ಈಶ್ವರ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆಯ ನಿಯಮವಿದೆ ಅಲ್ಲಿ ಹೀಗೆ ವೃಷ್ಟಿ - ಸಮಷ್ಟಿಗಳ ಘರ್ಷಣೆಗಳುಂಟಾಗುತ್ತದೆಯೆಂಬ ಸಂಶಯ ಬರುತ್ತದೆ. 

ಇದಕ್ಕೆ ಶಾಸ್ತ್ರದ್ರಷ್ಟಾರರು ಹೇಳುವುದೇನೆಂದರೆ ಅಲ್ಲಿ ಸಮಷ್ಟಿ ಆಧ್ಯಾತ್ಮಿಕ ವಲಯಗಳು ದಕ್ಷಿಣಾವರ್ತ ಹಾಗೂ ವಾಮಾವರ್ತವಾಗಿ ಸುತ್ತುತ್ತಿರುವುದರಿಂದ ಅರ್ಧ ಪ್ರದಕ್ಷಿಣೆಯನ್ನು ಹಾಕಬೇಕಾಗುತ್ತದೆ. 

ಅದರಿಂದ ಒಮ್ಮೆ ದಕ್ಷಿಣಾವರ್ತವಾಗಿಯೂ ಹಿಂತಿರುಗುವಾಗ ವಾಮಾವರ್ತವಾಗಿಯೂ ಇರುವ ವಲಯಗಳಿಂದ ಘರ್ಷಣೆ ಉಂಟಾಗುತ್ತದೆ. 

ಅದರಿಂದಾಗಿ ಸುಪ್ತಾವಸ್ತೆಯಲ್ಲಿರುವ ವ್ಯಷ್ಟಿ ಆಧ್ಯಾತ್ಮಕವಲಯಗಳು ಚೇತರಿಸಿಕೊಳ್ಳುತ್ತವೆ. 
 ಇನ್ನು ಕೆಲವು ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕಲು ಸ್ಥಳಾವಕಾಶವೇ ಇರುವುದಿಲ್ಲ, 

ಅಲ್ಲಿ ಉಪಾಸಕರು ತಾವೇ ದಕ್ಷಿಣಾವರ್ತವಾಗಿ ಸುತ್ತುವುದುಂಟು. ಇದರರ್ಥ ಯಾವ ಪರಮಾತ್ಮನ ಉಪಾಸನೆಯನ್ನು ನಾವು ಮಾಡುವೆವೋ ಅದೇ ಪರಮಾತ್ಮನು ಚೈತನ್ಯ ರೂಪದಲ್ಲಿ ನಮ್ಮ ಹೃದಯದಲ್ಲೂ ವಾಸ ಮಾಡುತ್ತಿರುವನೆಂಬ ಭಾವನೆಯಿಂದ ನಾವೇ ಸುತ್ತುವ ಅಥವಾ ಆತ್ಮ ಪ್ರದಕ್ಷಿಣೆಯ ಪದ್ಧತಿ ವಾಡಿಕೆಯಲ್ಲಿ ಬಂದಿದೆ. 

ಈ ರೀತಿಯ ಆತ್ಮ ಪ್ರದಕ್ಷಿಣೆಯ ನಮ್ಮ ಅಂತಸ್ಥ ಪರಮಾತ್ಮನ ಅಸ್ಥಿತ್ವದ ಅನುಭವದ ದೃಢಿಕರಣ ಸಾಧನೆಯೂ ಹೌದು. 

ಒಟ್ಟಿನಲ್ಲಿ ಪ್ರದಕ್ಷಿಣೆ ದೇವ ಸಾಕ್ಷಾತ್ಕಾರಕ್ಕೊಂದು ಸಾಧನೆಯೆಂಬ ಕಲ್ಪನೆಯನ್ನಿಟ್ಟು ಕೊಂಡಾದರೂ ನಾವು ದೇವರನ್ನು ಸುತ್ತಿದರೆ, ಅದರಿಂದ ಪ್ರಯೋಜನ ದೊರತೀತೆ ವಿನಃ, ಅದರಲ್ಲಿ ನಂಬಿಕೆ ವಿಶ್ವಾಸಗಳಿಲ್ಲದೆ ಪ್ರದಕ್ಷಿಣೆ ಹಾಕಿದರೆ ಸರ್ವಜ್ಞ ಹೇಳಿದಂತೆ ಎತ್ತು ತಾ ಗಾಣವನ್ನು ಹೊತ್ತು ತಿರುಗಿದಂತೆ ವ್ಯರ್ಥವಾದುದೆಂದು ಹೇಳಬಹುದು.
*****
.
ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಮಾಡುವಾಗ ದೇವಾಲಯದ ಹಿಂದಿನ ಭಾಗ ಅಂದರೆ ಗರ್ಭಗುಡಿಯ ಹಿಂದಿನ ಭಾಗಕ್ಕೆ ಯಾಕೆ ಕೈ ಮುಗಿಯುತ್ತಾರೆ ಗೊತ್ತಾ.....?

ದೇವಾಲಯದ ಗರ್ಭಗುಡಿಯ ಹಿಂದಿನ ಭಾಗಕ್ಕೆ ನಮಸ್ಕರಿಸುವುದನ್ನು ನಾವು ಪ್ರದಕ್ಷಿಣೆ ಮಾಡುವಾಗ ಸಾಮಾನ್ಯವಾಗಿ ಮಾಡುತ್ತಲೇ ಇರುತ್ತೇವೆ. ಹಾಗೆಯೇ ದೇವಾಲಯದ ಹಿಂದಿನ ಭಾಗವನ್ನು ಸ್ಪರ್ಶಿಸಿ ನಮಸ್ಕರಿಸುವುದು ಉತ್ತಮವಾದದ್ದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅದು ಹಿಂದಿನಿಂದಲೂ ಆಚರಿಸುತ್ತಾ ಬಂದಿರುವ ಪದ್ಧತಿಯಾಗಿದೆ. ಹೇಗೆ ಅನಾದಿ ಕಾಲದಿಂದಲೂ ದೇವಾಲಯಕ್ಕೆ ಹೋದಾಗ, ದರ್ಶನ ಮಾಡಿ ಹಿಂದಿನ ಭಾಗವನ್ನು ಸ್ಪರ್ಶಿಸಿ ನಮಸ್ಕರಿಸುತ್ತಾರೆ. ಕೆಲವರು ಯೋಚಿಸುವ‌ ಪ್ರಕಾರ ಹೀಗೆ ಪ್ರದಕ್ಷಿಣೆ ಮಾಡಿ‌ ನಮಸ್ಕರಿಸಿದರೆ ಒಳ್ಳೆಯದಾಗುತ್ತದೆ ಎಂದು ತಿಳಿದಿದ್ದರೂ ಅದರ ಹಿಂದೆ ಅಡಗಿರುವ ರಹಸ್ಯ ಮಾತ್ರ ಹೆಚ್ಚಿನವರಿಗೆ ಗೊತ್ತಿಲ್ಲ...?

ಗರ್ಭಗುಡಿಯ ಹಿಂದಿರುವ ರಹಸ್ಯ

ಗರ್ಭಗುಡಿಯ ಹಿಂದಿನ ಭಾಗವನ್ನು ನಮಸ್ಕರಿಸುತ್ತಾ ಮುಂದೆ ಸಾಗುವುದರ ಹಿಂದೆ ಒಂದು ಮುಖ್ಯವಾದ ಕಾರಣ ಅಡಗಿದೆಯೆಂದು ಶಾಸ್ತ್ರಕಾರರು ಹೇಳುತ್ತಾರೆ. ಅದೇನಂದರೆ, ದೇವಾಲಯದ ಮೂಲ ವಿಗ್ರಹ, ಅಂದರೆ ಮೂಲ ಮೂರ್ತಿ,  ಗರ್ಭಗುಡಿಯ ನಾಲ್ಕು ಗೋಡೆಗಳ ಮಧ್ಯೆ ಇರುತ್ತದೆ. ಹಿಂದಿನ ಗೋಡೆಗೆ ಸ್ವಲ್ಪ ಹತ್ತಿರವಾಗಿ ಆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಹಾಗೆ ಪ್ರತಿಷ್ಠಾಪಿಸಲಾದ ಮೂರ್ತಿಗೆ ಪೂಜೆ, ಅಭಿಷೇಕ, ಮಂತ್ರ, ತಂತ್ರಗಳಿಂದ ಸಾಕಷ್ಟು ಶಕ್ತಿಗಳನ್ನು ತುಂಬಲಾಗುತ್ತದೆ. ಆದ್ದರಿಂದ ದೇವಾಲಯದ ಗರ್ಭಗುಡಿಯ ಆ ಭಾಗವು ಅತ್ಯಂತ ಪವಿತ್ರತೆಯಿಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಹೀಗೆ ಶಕ್ತಿ ಮತ್ತು ಪವಿತ್ರತೆಯನ್ನು ಹೊಂದಿರುವ ಆ  ಪ್ರದೇಶವು ಹೆಚ್ಚು ಧನಾತ್ಮಕ ಶಕ್ತಿಯನ್ನು ಹೊಂದಿರುವುದೇ ಅಲ್ಲದೆ, ಅದನ್ನು ಅಲ್ಲಿಗೆ ಬರುವ ಭಕ್ತರಿಗೂ ಸಹ ನೀಡುವಂತೆ ಮಾಡುತ್ತದೆ. ಹೀಗೆ ಅಲ್ಲಿಗೆ ಹೋದ ಜನರಿಗೆ ಧನಾತ್ಮಕ ಶಕ್ತಿಯು ಸಿಗುವುದಲ್ಲದೆ, ಆ‌ ಮೂಲ ಮೂರ್ತಿಗೆ ಹೆಚ್ಚು ಆಕರ್ಷಣೆ ಉಂಟಾಗಿ ಶಕ್ತಿಯಿಂದ ಭಕ್ತರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.

ಇದರಿಂದ ಅತಿ ಪ್ರಕಾಶಮಾನವಾದ ಧನಾತ್ಮಕ ಶಕ್ತಿ ಆ ದೇವಾಲಯವನ್ನು ಮತ್ತು ಗರ್ಭಗುಡಿಯನ್ನು ದರ್ಶನ ಮಾಡಿದವರಿಗೆ ಲಭಿಸುತ್ತದೆ. ಇಂತಹ ಮಂತ್ರ ಶಕ್ತಿ ಕೇವಲ ದೇವರ ಮೂರ್ತಿಗೆ ಸೀಮಿತವಾಗಿರದೆ  ಗರ್ಭ ಗುಡಿಯ ಹಿಂದಿನ ಗೋಡೆಯ ಭಾಗಕ್ಕೂ ಪಸರಿರುತ್ತದೆ ಎಂದು ಹೇಳುತ್ತಾರೆ‌ ಶಾಸ್ತ್ರಕಾರರು. ಹೀಗಾಗಿ ಪ್ರದಕ್ಷಿಣೆ ಮಾಡುವಾಗ  ಆ ಜಾಗದಲ್ಲಿ ಒಂದು‌ ಕ್ಷಣ ನಿಂತು ಧ್ಯಾನಮಗ್ನರಾಗಿ, ಗೋಡೆಯನ್ನು ಸ್ಪರ್ಶಿಸಿ ನಮಸ್ಕರಿಸಿದಾಗ ಆ ಧನಾತ್ಮಕ ಶಕ್ತಿಯ ಸ್ಪರ್ಶ ನಮಗಾಗುತ್ತದೆಯಂತೆ.

ಹಿರಿಯರು ಮತ್ತು ಶಾಸ್ತ್ರಕಾರರು ಹೇಳಿರುವುದೇನಂದರೆ.... ಗರ್ಭಗುಡಿಯ ಹಿಂದಿನ ಭಾಗವನ್ನು ಸ್ಪರ್ಶಿಸಿ ನಮಸ್ಕರಿಸಿದರೆ ಜೀವನದಲ್ಲಿ ಶುಭವಾಗುತ್ತದೆ‌ ಎಂದು ಹೇಳಲಾಗುತ್ತದೆ. ಆದ್ದರಿಂದ ಅನಾದಿ ಕಾಲದಿಂದಲೂ ಆ ಗರ್ಭಗುಡಿಯ ಹಿಂದಿನ ಭಾಗವನ್ನು ಶಿಲೆಗಳಿಂದ ಮಾಡಿರುತ್ತಾರೆ, ಅದು‌ ಕೂಡಾ ದೇವತಾ‌ಮೂರ್ತಿಯನ್ನು. ಹೀಗೆ ದೇವತಾ ವಿಗ್ರಹಗಳ ಪಾದವನ್ನು ಸ್ಪರ್ಶಿಸಿ ನಮಸ್ಕರಿಸುವುದು ಅನಾದಿ ಕಾಲದಿಂದಲೂ ನಾವೆಲ್ಲರೂ ಮಾಡುತ್ತಾ ಬಂದಿದ್ದೇವೆ. ಇದೇ ರಹಸ್ಯ. 

ಸಂಗ್ರಹದಿಂದ
**************
WHY WE ARE TOLD NOT TO STEP ON THE HORIZONTAL ROUND STONE AT THE ENTRANCE WHILE ENTERING A TEMPLE ?

Regardless any Hindu temple, a horizontal stone will be placed at the entrance of temple. This stone has a lot of meanings and reasons behind that many people today are not aware or even understand about the value.We are told by the elders not to step on the stone. But have you wonder the reason behind this practice?

The first thing we should do before entering a temple is wash our feet. After we wash our leg, hand and sprinkle a little water onto our head to cleanse off to open our magnetic entrance points of our body, we should stand in front of the Main Entrance, look at the Gopuram and Kalasam to pray and ask for permission from the "Thuarabala or Thuaramala" which you can see at the left and right of the temple at entrance. 

As we enter into the temple, we must cross over the horizontal stone and shall not step on the stone. As we cross over the stone, we should think in our mind that
"I'm leaving all my negatives, worries & bad thoughts behind this point to get the Lord's blessings and obtain the positive energy"
and then step into the temple.

By doing so, it's believed that we will leave all our negatives & bad things outside the temple & go into the temple empty to get the positive vibrations & increase our positive energy.
If we step on the stone and go into the temple, it's believed that we carry everything together with us & we may not get the full benefits of worshipping in a temple.

A temple is a place full of positive energy and vibrations. Thousands of holy scripts and mantra being recited at the temple daily by the priest. We can increase our positive energy and vibration by worshipping in temple for a greater living on this earth.Do visit temple more often to enjoy the positive vibe.

SHARE this post on your wall and EDUCATE others on our tradition. Its our responsibility to restore our priceless traditions and customs.

Copied from the article that was written by COACH Subramaniam Suppiah few years ago.
******
ಪ್ರಶ್ನೆ : ದೇವಾಲಯದಲ್ಲಿ ದರ್ಶನ ಮಾಡಿದ ನಂತರ, ಹೊರಗಿನ ಆಸನದ ಮೇಲೆ ಸ್ವಲ್ಪ ಹೊತ್ತು ಏಕೆ ಕುಳಿತುಕೊಳ್ಳಬೇಕು?
ಉತ್ತರ : ದೇವಾಲಯಗಳಿಗೆ ಹೋದಾಗ ದೇವರ ದರ್ಶನ ಮುಗಿಸಿ ನಮಸ್ಕಾರವನ್ನು ಮುಗಿಸಿದ ನಂತರ ಒಂದೆರಡು ನಿಮಿಷ ಹೊರಗೆ ಕುಳಿತು ಕೊಳ್ಳುವದು ಸಂಪ್ರದಾಯ. ಆದರೆ ಕುಳಿತಾಗ ನಾವು ದರ್ಶನ ಮಾಡಿದ ದೇವರನ್ನು ನೆನೆಸಿಕೊಂಡು ಈ ಕೆಳಗಿನ ಶ್ಲೋಕವನ್ನು ಹೇಳಿಕೊಂಡು ಪ್ರಾರ್ಥಿಸಿಕೊಳ್ಳಬೇಕು. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗಿದೆ. ವಾಸ್ತವವಾಗಿ ಇಂದಿನ ಜನರು ಈ ಶ್ಲೋಕವನ್ನು ಮರೆತಿದ್ದಾರೆ. 
ಶ್ಲೋಕ ಹೀಗಿದೆ :-               
  (೧) ಅನಾಯಾಸೇನ ಮರಣಂ|
(೨)ವಿನಾ ದೈನೇನ ಜೀವನಂ•
(೩) ದೇಹಾಂತ ತವ ಸಾನಿಧ್ಯಮ್|
(೪) ದೇಹಿಮೇ ಪರಮೇಶ್ವರ | 
ಈ ಶ್ಲೋಕದ ಅರ್ಥ
ಅನಾಯಾಸೇನ ಮರಣಂ* ಅಂದರೆ ನಮ್ಮ ಅಂತ್ಯಕಾಲದಲ್ಲಿ ಯಾವುದೇ ತೊಂದರೆಯಿಲ್ಲದೆ ಸಾಯಬೇಕು ಮತ್ತು ಅನಾರೋಗ್ಯಕ್ಕೆ ಒಳಗಾದ ನಂತರ ಎಂದಿಗೂ ಹಾಸಿಗೆಯ ಮೇಲೆ ಬೀಳಬಾರದು, ದುಃಖದಿಂದ ಸಾಯಬಾರದು ಮತ್ತು ನಾವು ನಡೆದಾಡುವಾಗಲೇ ನಮ್ಮ  ಜೀವನದ ಅಂತ್ಯ ಆಗಬೇಕು.
ವಿನಾ ದೈನೇನ ಜೀವನಂ ಅಂದರೆ ಎಂದಿಗೂ ಯಾರೊಂದಿಗೂ ಪರಾವಲಂಬಿಯಾಗಿ ಜೀವನ ಇರಬಾರದು. ಒಬ್ಬ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾದಾಗ ಇತರರ ಮೇಲೆ ಅವಲಂಬಿತನಾಗುವಂತೆ,  ಅಥವಾ ಅಸಹಾಯಕನಾಗಿರಬಾರದು.  ದೇವರ ಕೃಪೆಯಿಂದ ಭಿಕ್ಷೆ ಬೇಡದೆ ಜೀವನ ನಡೆಸಬಹುದು.
ದೇಹಾಂತ ತವ ಸಾನಿಧ್ಯಮ್ ಅಂದರೆ ಸಾವು ಬಂದಾಗ ದೇವರು ಮುಂದೆ ಇರಬೇಕು.  ಭೀಷ್ಮ ಪಿತಾಮರ ಮರಣದ ಸಮಯದಲ್ಲಿ, ದೇವರು (ಕೃಷ್ಣ ) ಅವರ ಮುಂದೆ ನಿಂತಿದ್ದರು.  ಅವನನ್ನು ನೋಡಿ ಪ್ರಾಣ ಬಿಟ್ಟರು
 ದೇಹಿಮೇ ಪರಮೇಶ್ವರ
ಅಂದರೆ ಓ ದೇವರೇ, ನಮಗೆ ಅಂತಹ ವರವನ್ನು ನೀಡು. 

* ದೇವರನ್ನು ಪ್ರಾರ್ಥಿಸುವಾಗ ಮೇಲಿನ ಶ್ಲೋಕವನ್ನು ಪಠಿಸಿ. * ಕಾರು, ಬಂಗಲೆ, ಹುಡುಗ, ಹುಡುಗಿ, ಗಂಡ, ಹೆಂಡತಿ, ಮನೆ, ಹಣ ಇತ್ಯಾದಿಗಳನ್ನು ಕೇಳಬೇಡಿ (ಸಂಸಾರಿಕ ವಿಷಯಗಳು), ಈ ಅರ್ಹತೆಯು ನಿಮ್ಮ ಅರ್ಹತೆಗೆ ಅನುಗುಣವಾಗಿ ಈ ದೇವರು ನಿಮಗೆ ನೀಡುತ್ತಾನೆ.  ಅದಕ್ಕಾಗಿಯೇ ದರ್ಶನ ಮಾಡಿದ ನಂತರ ಪ್ರತಿಯೊಬ್ಬರು ಈ ಪ್ರಾರ್ಥನೆಯನ್ನು ಕುಳಿತು ಪ್ರಾರ್ಥಿಸಬೇಕು.  ಇದು ಪ್ರಾರ್ಥನೆ, ವಿಜ್ಞಾಪನೆ ಅಲ್ಲ.  ವಿಜ್ಞಾಪನೆಯು ಲೌಕಿಕ ವಿಷಯಗಳಿಗಾಗಿ.  ಉದಾಹರಣೆಗೆ, ಮನೆ, ವ್ಯವಹಾರ, ಉದ್ಯೋಗ, ಮಗ, ಮಗಳು, ಲೌಕಿಕ ಸುಖಗಳು, ಸಂಪತ್ತು ಅಥವಾ ಇತರ ವಿಷಯಗಳಿಗಾಗಿ, ಬೇಡಿಕೆಯಿಡುವುದು.

      'ಪ್ರಾರ್ಥನೆ' ಎಂಬ ಪದದ ಅರ್ಥ 'ಪ್ರಾ' ಎಂದರೆ 'ವಿಶೇಷ', ವಿಶಿಷ್ಟ, ಉತ್ತಮ ಮತ್ತು 'ಆರ್ಥನಾ' ಎಂದರೆ ವಿನಂತಿ.  ಪ್ರಾರ್ಥನೆ ಎಂದರೆ ವಿಶೇಷ ವಿನಂತಿ. *
           ದೇವಾಲಯದಲ್ಲಿ ದೇವರ ದರ್ಶನವನ್ನು ಯಾವಾಗಲೂ ತೆರೆದ ಕಣ್ಣುಗಳಿಂದ ಮಾಡಬೇಕು.  ಕೆಲವರು ಕಣ್ಣು ಮುಚ್ಚಿಕೊಂಡು ಅಲ್ಲಿ ನಿಲ್ಲುತ್ತಾರೆ.  ಏಕೆ ನಮ್ಮ ಕಣ್ಣುಗಳನ್ನು ಮುಚ್ಚಬೇಕು? ನಾವು ದೇವರ ದರ್ಶನಕ್ಕೆ ಬಂದಿದ್ದೇವೆ.  ದೇವರ ಸ್ವರೂಪವನ್ನು, ಪಾದಗಳಿಂದ ಮುಖದವರೆಗಿನ ಸೌಂದರ್ಯದ ಪೂರ್ಣ ಆನಂದವನ್ನು ಪಡೆಯಿರಿ. ನಿಮ್ಮ ಕಣ್ಣುಗಳನ್ನು ದೇವರ ನ್ವರೂಪದಿಂದ ತುಂಬಿಸಿ. 
       * ನೀವು ದರ್ಶನದ ನಂತರ ಹೊರಗೆ ಕುಳಿತಾಗ, ನಂತರ ನೀವು ಕಣ್ಣುಗಳನ್ನು ಮುಚ್ಚಿಕೊಂಡು ನೋಡಿದ ಸ್ವರೂಪವನ್ನು ಧ್ಯಾನಿಸಿ. 
****

1 comment:

  1. ತುಂಬಾ ಚೆನ್ನಾಗಿ ವಿವರಿಸಿದ್ದಿರ.. ಧನ್ಯವಾದಗಳು

    ReplyDelete