SEARCH HERE

Tuesday 1 January 2019

ಗುಡಿಗೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ಅಷ್ಟೆ ಯಾಕೆ why only plantain and coconut to temple


ಗುಡಿಗೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ಅಷ್ಟೆ  ಯಾಕೆ ತೆಗೆದುಕೊಂಡು ಹೋಗುತ್ತೇವೆ  
ಬೇರೆ ಯಾವ ಹಣ್ಣನ್ನು ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ. 
ಸಾಮಾನ್ಯವಾಗಿ ನಾವು ಯಾವುದೇ ಹಣ್ಣು ಅಥವಾ ಕಾಯಿಯನ್ನು ಅದರ ಪ್ರತ್ಯೇಕ ಹೆಸರನ್ನು ಬಳಸಿಯೇ ಹೇಳುತ್ತೇವೆ. ಆದರೆ ಬರೀ ಕಾಯಿ ಎಂದರೆ ಅದು ತೆಂಗಿನಕಾಯಿ, ಹಣ್ಣು ಎಂದರೆ ಬಾಳೆಹಣ್ಣನ್ನೇ ಸೂಚಿಸುತ್ತದೆ. ಮನೆಯ ಹಿರಿಯರು ದೇವಸ್ಥಾನಕ್ಕೆ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬಾ ಎನ್ನುತ್ತಾರೆ.ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ.

ಹೆಚ್ಚಾಗಿ ನಾವು ಒಂದು ಹಣ್ಣನ್ನೂ ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.
ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೆ ಎಸೆದರು ಅದು ಮತ್ತೆ ಬೆಳೆಯುವುದಿಲ್ಲ. ತೆಂಗಿನಕಾಯಿಯೂ ಅಷ್ಟೆ ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ .

"ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರುವರು".
ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ. ಅಷ್ಟೇ ಅಲ್ಲ ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ;ಉಪಯೋಗಿಸದ ತೆಂಗು ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.

ಪರಿಶುದ್ಧವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ
*****
ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ಮಹತ್ವ

ಭಕ್ತರು ದೇವರ ದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ. ತೆಂಗಿನಕಾಯಿ, ಬಾಳೆಹಣ್ಣು , ಹೂವು ತೆಗೆದುಕೊಂಡು ಹೋಗುವರು. 

ದೇವರಿಗೆ ತೆಂಗಿನಕಾಯಿ, ಬಾಳೆಹಣ್ಣನ್ನೇ ಏಕೆ ಅರ್ಪಿಸಬೇಕೆಂದರೆ ಇವೆರಡೂ ಪವಿತ್ರ ಫಲಗಳು.


ಭೂಮಿಯಲ್ಲಿ ಬೆಳೆಯುವ ಎಲ್ಲಾ ಗಿಡದ ಹಣ್ಣುಗಳನ್ನು ಪಶು, ಪಕ್ಷಿಗಳು ತಿಂದು ಹಿಕ್ಕೆ ಹಾಕುತ್ತವೆ. 


ಆ ಹಿಕ್ಕೆಯಲ್ಲಿ ಬೀಜಗಳೂ ಇರುತ್ತವೆ. ಮಾನವನೂ ಹಣ್ಣುಗಳನ್ನು ತಿಂದು ಬೀಜವನ್ನು ಎಸೆಯುತ್ತಾನೆ. 


ಆ ಬೀಜದಿಂದ ಬೆಳೆದ ಗಿಡ ಮರಗಳು ಎಂಜಲಿನಿಂದ ಬೆಳೆದಂತೆ ಆಯಿತು. ಆಗ ಆ ಫಲಗಳು ಪವಿತ್ರವಾಗುವುದಿಲ್ಲ. 


ಆದ್ದರಿಂದ ದೇವರಿಗೆ ಇಂಥ ಫಲಗಳು ಪೂಜೆಯ ಹೆಸರಿನಲ್ಲಿ ಸಮರ್ಪಿಸಿ ನೈವೇದ್ಯ ಮಾಡುವುದು ಶ್ರೇಷ್ಠವಲ್ಲ.


ತೆಂಗಿನಕಾಯಿ ಹಾಗೂ ಬಾಳೆಹಣ್ಣು ಈ ವರ್ಗಕ್ಕೆ ಸೇರದೇ ಇರುವ ಪವಿತ್ರ ಫಲಗಳು. .. ತೆಂಗಿನಕಾಯಿಯನ್ನು ಸಿಪ್ಪೆ ಸಹಿತ ಅಥವಾ ಒಂದು ತಿಂಗಳು ನೀರಿನ ಕುಂಭದಲ್ಲಿಟ್ಟು ಭೂಮಿಯಲ್ಲಿ ಹೂತರೆ ಅದು ಮರವಾಗಿ ಬೆಳೆಯುತ್ತದೆ. 


ಆಗ ಎಂಜಲು ಇದಕ್ಕೆ ಅನ್ವಯಿಸುವುದಿಲ್ಲ.

ಬಾಳೆಹಣ್ಣು
ಬಾಳೆಹಣ್ಣು ಯಾವಾಗಲೂ ಬೀಜದಿಂದ ಬೆಳೆಯದೆ ಕಂದಿನ ಸಹಾಯದಿಂದ ಬೆಳೆಯುತ್ತದೆ ಹಾಗೂ ಕಂದಿನಿಂದ ಚಿಗುರಿ ಗಿಡವಾಗಿ ಬಾಳೆ ಫಲ ನೀಡುತ್ತದೆ. 

ಅಲ್ಲದೆ ಒಮ್ಮೆ ಫಲ ಬಿಟ್ಟ ನಂತರ ತನ್ನ ಆಯುಸ್ಸು ಮುಗಿಸುತ್ತದೆ.

ಬಾಳೆ ತನ್ನ ಆಯುಸ್ಸು ಮುಗಿಸುವ ಮೊದಲು ಕಂದುಗಳನ್ನು ಮಾಡಿ ಸಸಿಗಳನ್ನು ಬೆಳೆಸುತ್ತದೆ. 


ಬಾಳೆಹಣ್ಣು ಸಹ ಎಂಜಲಾಗದ ಫಲವಾಗಿದೆ. ಈ ಕಾರಣಕ್ಕಾಗಿ ದೇವರಿಗೆ ತೆಂಗಿನಕಾಯಿ ಬಾಳೆಹಣ್ಣು ಅತಿಶ್ರೇಷ್ಠವಾಗಿದೆ.

******


No comments:

Post a Comment