ದಾಸಿಭೂತ ಸಮಸ್ತ ದೇವವನಿತಾಂ ಲೋಕೈಕ ದೀಪಾನ್ಕುರಾಂ ।
ಶ್ರೀ ಮನ್ಮಂದ ಕಟಾಕ್ಷ ಲಬ್ಧವಿಭವತ್ ಬ್ರಹ್ಮೇಂದ್ರ ಗಂಗಾಧರಾಂ
ತ್ವಾಂತ್ರೈಲೋಕ್ಯಕುಟುಂಬಿನೀಂ ಸರಸಿಜಾಂವಂದೇಮುಕುಂದ ಪ್ರಿಯಾಂ ।।
ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಎರಡನೆಯ ಶುಕ್ರವಾರದಂದು ಆಚರಿಸುವರು. ಈ ಹಬ್ಬವನ್ನು ಹಿಂದೂಗಳು ಜಾತಿ ಭೇದವಿಲ್ಲದೆ ಅವರವರ ಸಂಪ್ರದಾಯದ ಪ್ರಕಾರ ಆಚರಿಸುವರು.
ಈ ವ್ರತವನ್ನು ಮದುವೆಯಾದ ಎಲ್ಲಾ ದಂಪತಿಗಳು ಆಚರಣೆ ಮಾಡುವ ವಾಡಿಕೆ ಉಂಟು . ಈ ವ್ರತದ ಹಿನ್ನಲೆಯಲ್ಲಿ ಒಂದು ಕಥೆ ಈ ರೀತಿ ಇದೆ. ಒಮ್ಮೆ ಶಿವ ಪಾರ್ವತಿ ಇಬ್ಬರು ಪಗಡೆ ಆಟವನ್ನು ಆಡುತ್ತಿದ್ದರು . ಪಾರ್ವತಿದೇವಿಯು ಆಡಿದ ಆಟವನೆಲ್ಲಾ ಗೆಲ್ಲುತ್ತಿದ್ದಳು ಆದರೆ ಪರಮಶಿವ ಎಲ್ಲ ಆಟದ ಗೆಲುವನ್ನು ತನ್ನದು ಎಂದು ಘೋಷಿಸಿಕೊಳ್ಳುತಿದ್ದ ಪಾರ್ವತಿ ದೇವಿಯನ್ನು ಛೇಡಿಸಲು . ಹೀಗಾಗಿ ಪಾರ್ವತಿ ದೇವಿಯು ಆಟದಲ್ಲಿ ಮೋಸ ಆಗಬಾರದು ಎಂದು ತೀರ್ಪುಗಾರರು ಇರಲಿ ಎಂದು ಶಿವನಿಂದ ಸೃಷ್ಟಿಸಲ್ಪಟ್ಟ ಚಿತ್ರನೇಮಿಯನ್ನು ನೇಮಿಸಿದಳು ಆದರೆ ಚಿತ್ರನೇಮಿಯೋ ಶಿವನ ಭಂಟ ಶಿವನದೆ ಎಲ್ಲವು ಗೆಲುವು ಎಂದು ತೀರ್ಪು ನೀಡಿದ್ದರಿಂದ ಕುಪಿತಗೊಂಡ ಪಾರ್ವತಿಯು ಆತನನ್ನು ಭೂಲೋಕದಲ್ಲಿ ಜನಿಸಿ ಕುಷ್ಟರೋಗಿಯಾಗೆಂದು ಶಾಪವನಿತ್ತಳು . ಆಗ ಪರಮಶಿವನು ಪಾರ್ವತಿ ದೇವಿಗೆ ತಾನು ಮಾಡಿದ್ದ ವೃತ್ತಾಂತವನ್ನು ವಿವರಿಸಿದನು ; ಪಾರ್ವತಿ ದೇವಿಗೆ ಅನ್ಯಾಯವಾಗಿ ಶಾಪವಿತ್ತನಲ್ಲ ಎಂದು ಭಾವಿಸಿದಳು.ಚಿತ್ರನೇಮಿಯು ತನ್ನ ಶಾಪದ ವಿಮೋಚನೆ ಹೇಗೆ ತಾಯಿ ಎಂದು ಕೇಳಿಕೊಂಡನು ಆಗ ತಾಯಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿದರೆ ನಿನ್ನ ಕುಷ್ಟ ರೋಗವು ಪರಿಹಾರವಾಗಿ ಮಂಗಳವಾಗುವುದು .
ಹೀಗೆ ಈ ವ್ರತದ ಆಚರಣೆಯನ್ನು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯಿಂದ ಭೂಲೋಕದಲ್ಲಿ ಎಲ್ಲರೂ ಆಚರಿಸುವ ಪರಿ ಶುರುವಾಯಿತು . ಈ ವ್ರತವನ್ನು ಯಾರು ಆಚರಿಸುವರೋ ಅವರಿಗೆ ಸಕಲ ಸೌಭಾಗ್ಯ ಮತ್ತು ಸಂಪತ್ತುಗಳಿಂದ ತಾಯಿ ವರಮಹಾಲಕ್ಷ್ಮೀ ದೇವಿಯು ಕರುಣಿಸುವಳು .
ಮೊದಲು ವಿನಾಯಕನ ಪೂಜೆ , ಯಮುನಾ ದೇವಿ ಕಲಶಕ್ಕೆ ಪೂಜೆ ಸಲ್ಲಿಸಿ ತದನಂತರ ತುಲಸಿ ಪೂಜೆ ಮಾಡಿ , ನಂತರ ವರಮಹಾಲಕ್ಷ್ಮೀ ಪೂಜೆಯನ್ನು ಆಚರಿಸಬೇಕು . ಯಮುನಾ ಕಲಶದ ಆಚರಣೆ ಸಂಪ್ರದಾಯವಿದ್ದರೆ ಆಚರಿಸಬೇಕು .ಅವರವರ ಗುರು -ಹಿರಿಯರಲ್ಲಿ ವಿಚಾರಣೆ ಮಾಡಿ ಆಚರಣೆ ಮಾಡಬಹುದು .
ಯಮುನಾ ಕಲಶ ಪೂಜೆ
ಧ್ಯಾನ :
ಲೋಕಪಾಲಸ್ತುತಾಂ ದೇವೀಂ ಇಂದ್ರನೀಲ ಸಮಪ್ರಭಾಮ್ ।
ಯಮುನೇ ತ್ವಾಮಹಂ ಧ್ಯಾಯೇತ್ಸರ್ವಕಾಮ್ಯಾರ್ಥಸಿದ್ಧಯೇ ।।
ಶ್ರೀ ಯಮುನಾಯೈ ನಮಃ । ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು .
ಆವಾಹನೆ :
ಕ್ಷೀರೋದಾರ್ಣವಸಂಭೂತೇ ಕ್ಷೀರವರ್ಣೋದಶೋಭಿತೇ ।
ಪ್ರಸನ್ನಾ ಭಾವ ಮೇ ದೇವಿ ಯಮುನೇ ತೇ ನಮೋ ನಮಃ ।।
ಶ್ರೀ ಯಮುನಾಯೈ ನಮಃ ।ಆವಾಹಯಾಮಿ ।ಆವಾಹನಂ ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು.
ಸಿಂಹಾಸನ :
ಸಿಂಹಾಸನ ಸಮಾರೂಢೇ ದೇವಶಕ್ತಿ ಸಮನ್ವಿತೇ ।
ಸರ್ವಲಕ್ಷಣ ಸಂಪೂರ್ಣೇ ಯಮುನಾಯೈ ನಮೋಸ್ತುತೇ ।।
ಶ್ರೀ ಯಮುನಾಯೈ ನಮಃ । ಸಿಂಹಾಸನಂ ಸಮರ್ಪಯಾಮಿ ।। ಹೂವಿನಿಂದ ಪೂಜೆ ಮಾಡುವುದು.
ಪಾದ್ಯ :
ಗರುಡಾಗ್ರಜಸಂಭೂತೇ ಶಂಕರಪ್ರಿಯಭಾಮಿನಿ ।
ಸರ್ವಕಾಮಪ್ರದೇ ದೇವಿ ಯಮುನೇ ತೇ ನಮೋ ನಮಃ ।।
ಶ್ರೀ ಯಮುನಾಯೈ ನಮಃ । ಪಾದಯೋಃ ಪಾದ್ಯಂ ಪಾದ್ಯಂ ಸಮರ್ಪಯಾಮಿ ।। ಒಂದು ಉದ್ದರಣೆ ನೀರನ್ನು ಯಮುನಾ ಕಲಶಕ್ಕೆ ತೋರಿಸಿ ಅರ್ಘ್ಯ ಪಾತ್ರೆಗೆ ಬಿಡುವುದು .
ಅರ್ಘ್ಯ :
ರುದ್ರಪಾದೇ ನಮಸ್ತುಭ್ಯಂ ಸರ್ವಲೋಕ ಹಿತೇ ಶುಭೇ ।
ಸರ್ವಪಾಪ ಪ್ರಶಮನೀ ತರಂಗಿಣ್ಯೈ ನಮೋಸ್ತುತೇ ।।
ಶ್ರೀ ಯಮುನಾಯೈ ನಮಃ । ಹಸ್ತಯೋಃ ಅರ್ಘ್ಯಮರ್ಘ್ಯಂ ಸಮರ್ಪಯಾಮಿ ।। ಒಂದು ಉದ್ದರಣೆ ನೀರನ್ನು ಯಮುನಾ ಕಲಶಕ್ಕೆ ತೋರಿಸಿ ಅರ್ಘ್ಯ ಪಾತ್ರೆಯಲ್ಲಿ ಬಿಡುವುದು .
ಪಂಚಾಮೃತ ಸ್ನಾನ :
ನಂದಿಪಾದೇ ನಮಸ್ತುಭ್ಯಂ ಶಂಕರಾರ್ಧಶರೀರಿಣಿ ।
ಸರ್ವಲೋಕಹಿತೇ ದೇವಿ ಭೀಮರಥ್ಯೈ ನಮೋ ನಮಃ ।।
ಪಂಚಮೃತಸ್ನಾನಮಿದಂ ದಧ್ಯಾಜ್ಯಮಧು ಸಂಯುತಮ್ ।
ಶರ್ಕರಾಕ್ಷೀರ ಸಂಯುಕ್ತಂ ಗೃಹಾಣ ಜಗದೀಶ್ವರಿ ।।
ಶ್ರೀ ಯಮುನಾಯೈ ನಮಃ । ಪಂಚಾಮೃತ ಸ್ನಾನಂ ಸಮರ್ಪಯಾಮಿ ।। ಒಂದು ಹೂವಿನಿಂದ ಹಾಲು ,ಮೊಸರು ತುಪ್ಪ, ಸಕ್ಕರೆ , ಜೇನುತುಪ್ಪದಲ್ಲಿ ಅದ್ದಿ ಕಲಶದ ಮೇಲೆ ಪ್ರೋಕ್ಷಿಸುವುದು .
ಗೋದಾವರ್ಯೈ ನಮಸ್ತುಭ್ಯಂ ಗೌತಮಸ್ಯಾಘನಾಶಿನಿ ।
ಸರ್ವಪಾಪ ಪ್ರಶಮಿನೀ ಶಿವರೂಪಿ ನಮೋಸ್ತುತೇ ।।
ಶ್ರೀ ಯಮುನಾಯೈ ನಮಃ ।ಶುದ್ಧೋದಕ ಸ್ನಾನಂ ಸಮರ್ಪಯಾಮಿ ।। ನೀರಿನಿಂದ ಪ್ರೋಕ್ಷಣೆ ಮಾಡುವುದು .
ಸ್ನಾನಾಂಗಮಾಚಮನಂ ಸಮರ್ಪಯಾಮಿ ।।ಒಂದು ಉದ್ದರಣೆ ನೀರನ್ನು ಅರ್ಘ್ಯ ಪಾತ್ರೆಗೆ ಬಿಡುವುದು .
ವಸ್ತ್ರ :
ವಿಷ್ಣುಪಾದಾಬ್ಜಸಂಭೂತೇ ಗಂಗೇ ತ್ರಿಪಥಗಾಮಿನಿ ।
ಸರ್ವಪಾಪಹರೇ ದೇವಿ ಭಾಗೀರಥ್ಯೈ ನಮೋಸ್ತುತೇ ।।
ಶ್ರೀ ಯಮುನಾಯೈ ನಮಃ । ಶ್ವೇತವಸ್ತ್ರದ್ವಯಂ ಸಮರ್ಪಯಾಮಿ ।। ಗೆಜ್ಜೆವಸ್ತ್ರವನ್ನು ಕಲಶಕ್ಕೆ ಇಡುವುದು .
ರವಿಕೆ :
ತ್ರ್ಯಂಬಕಸ್ಯ ಜಟೋ ದ್ಭೂತೇ ದಿವ್ಯಶಕ್ತಿ ಸಮನ್ವಿತೇ ।
ಸಪ್ರಥಾ ಪ್ರಾಗತಂ ಯಾತೇ ಗಂಗಾಯೈ ತೇ ನಮೋ ನಮಃ ।।
ಶ್ರೀ ಯಮುನಾಯೈ ನಮಃ । ಕಂಚುಕಂ ಸಮರ್ಪಯಾಮಿ ।। ರೇಷ್ಮೆಯ ಕಣ ಇಡುವುದು .
ಉಪವೀತ :
ಸೌವರ್ಣಂ ಬ್ರಹ್ಮಸೂತ್ರಂ ಚ ಬ್ರಹ್ಮಣಾ ನಿರ್ಮಿತಂ ಪುರಾ ।
ಅಹಂ ದಾಸ್ಯಾಮಿ ದೇವೇಶೀ ಯಮುನಾಯೈ ನಮೋಸ್ತುತೇ ।।
ಶ್ರೀ ಯಮುನಾಯೈ ನಮಃ । ಯಜ್ಞೋಪವೀತಂ ಸಮರ್ಪಯಾಮಿ ।।ಹೂವು ಮಂತ್ರಾಕ್ಷತೆಗಳನ್ನು ಅರ್ಪಿಸುವುದು .
ಗಂಧ :
ಚಂದನಾಗರು ಕಸ್ತೂರೀ ರೋಚನಂ ಕುಂಕುಮಂ ತಥಾ ।
ಕರ್ಪೂರೇಣ ಸಮಾಯುಕ್ತಾಂ ಗಂಧಂ ದಧ್ಮಿ ಚ ಭಕ್ತಿತಃ ।।
ಶ್ರೀ ಯಮುನಾಯೈ ನಮಃ । ನಾನಾವಿಧ ಆಭರಣಾನಿ ಸಮರ್ಪಯಾಮಿ ।। ಆಭರಣಗಳಿಂದ ಅಲಂಕರಿಸುವುದು .
ಪುಷ್ಪ :
ಮಂದಾರಮಾಲತೀಜಾಜೀ ಕೇತಕೀಪಾಟಲೈಶ್ಯುಭ್ಯೈಃ ।
ಪೂಜಯಾಮಿ ಸದಾ ದೇವಿ ಯಮುನೇ ಭಕ್ತವತ್ಸಲೇ ।।
ಶ್ರೀ ಯಮುನಾಯೈ ನಮಃ ।ನಾನಾವಿಧ ಪರಿಮಳ ಪುಷ್ಪಾಣಿ ಸಮ ಸಮರ್ಪಯಾಮಿ ।। ಹೂವಿನ ಮಾಲಿಕೆಯನ್ನು ಅರ್ಪಿಸುವುದು .
ಅರಿಶಿನ :
ಸೌಭಾಗ್ಯ ಸುಖದೇ ದೇವಿ ಸರ್ವಮಂಗಳದಾಯಿಕೇ ।
ಹರಿದ್ರಾಂ ತೇ ಪ್ರಯಚ್ಛಾಮಿ ಗ್ಗೃಹಾಣ ವರದಾ ಭವ ।।
ಶ್ರೀ ಯಮುನಾಯೈ ನಮಃ । ಹರಿದ್ರಾಚೂರ್ಣಂ ಸಮರ್ಪಯಾಮಿ ।। ಅರಿಶಿನದಿಂದ ಪೂಜಿಸುವುದು .
ಕುಂಕುಮ :
ಕುಂಕುಮಂ ಕಾಂತಿದಂ ದಿವ್ಯಂ ಸರ್ವಕಾಮಫಲಪ್ರದಂ ।
ಸರ್ವದೇವೈಶ್ಚ ಸಂಪೂಜ್ಯೇ ಗೃಹಾಣ ಪರಮೇಶ್ವರೀ ।।
ಶ್ರೀ ಯಮುನಾಯೈ ನಮಃ । ಕುಂಕುಮಚೂರ್ಣಂ ಸಮರ್ಪಯಾಮಿ ।। ಕುಂಕುಮದಿಂದ ಪೂಜೆ ಮಾಡುವುದು .
ಚಂದ್ರ :
ಮಹಾದೇವಿ ನಮಸ್ತುಭ್ಯಂ ಸಂಧ್ಯಾವಂದರುಣಪ್ರಭಮ್ ।
ವೀರಾಲಂಕರಣಂ ದಿವ್ಯಂ ಸಿಂಧೂರಂ ಪ್ರತಿಗುಹ್ಯತಾಮ್ ।।
ಶ್ರೀ ಯಮುನಾಯೈ ನಮಃ । ಸಿಂಧೂರಂ ಸಮರ್ಪಯಾಮಿ ।। ಚಂದನದಿಂದ ಪೂಜೆ ಮಾಡುವುದು .
ಅಂಗ ಪೂಜಾ
ಓಂ ಚಂಚಲಾಯೈ ನಮಃ ಪಾದೌ ಪೂಜಯಾಮಿ
ಓಂ ಚಪಲಾಯೈ ನಮಃ ಜಾನುನೀಂ ಪೂಜಯಾಮಿ
ಓಂ ಭಕ್ತವತ್ಸಲಾಯೈ ನಮಃ ಕಟಿಂ ಪೂಜಯಾಮಿ
ಓಂ ಮಹೋದರಾಯೈ ನಮಃ ನಾಭಿಂ ಪೂಜಯಾಮಿ
ಓಂ ಭಾಗೀರಥ್ಯೈ ನಮಃ ಹೃದಯಂ ಪೂಜಯಾಮಿ
ಓಂ ಕೃಷ್ಣವೇಣ್ಯೈ ನಮಃ ಸ್ತನೌ ಪೂಜಯಾಮಿ
ಓಂ ಲಲಿತಾಯೈ ನಮಃ ಭುಜೌ ಪೂಜಯಾಮಿ
ಓಂ ನೀಲವರ್ಣಾಯೈ ನಮಃ ಸ್ಕಂದೌ ಪೂಜಯಾಮಿ
ಓಂ ಉತ್ಕಂಠ್ಯೈ ನಮಃ ಕಂಠಮ್ ಪೂಜಯಾಮಿ
ಓಂ ರಮಾಯೈ ನಮಃ ಮುಖಂ ಪೂಜಯಾಮಿ
ಓಂ ತ್ರೈಲೋಕ್ಯಜನನ್ಯೈ ನಮಃ ಲಲಾಟಂ ಪೂಜಯಾಮಿ
ಓಂ ಭಾಗೀರಥ್ಯೈ ನಮಃ ಶಿರಃ ಪೂಜಯಾಮಿ
ಓಂ ಯಮುನಾಯೈ ನಮಃ ಸರ್ವಾಣ್ಯಂಗಾನಿ ಪೂಜಯಾಮಿ
ನಾಮ ಪೂಜಾ
ಓಂ ಯಮುನಾಯೈ ನಮಃ ಓಂ ಸಂಸರತ್ಯೈ ನಮಃ
ಓಂ ಸೀತಾಯೈ ನಮಃ ಓಂ ಕಾವೇರ್ಯೈ ನಮಃ
ಓಂ ವಿಮಲಾಯೈ ನಮಃ ಓಂ ಸಿಂಧವೇ ನಮಃ
ಓಂ ಉತ್ಪಲಾಯೈ ನಮಃ ಓಂ ಗೌತಮ್ಯೈ ನಮಃ
ಓಂ ಅಭೀಷ್ಟದಾಯೈ ನಮಃ ಓಂ ಗಾಯತ್ರ್ಯೈ ನಮಃ
ಓಂ ನರ್ಮದಾಯೈ ನಮಃ ಓಂ ಗರುಡಾಯೈ ನಮಃ
ಓಂ ಗೌರ್ಯೈ ನಮಃ ಓಂ ಗಿರಿಜಾಯೈ ನಮಃ
ಓಂ ಭಾಗೀರಥ್ಯೈ ನಮಃ ಓಂ ಚಂದ್ರಚೂಡಾಯೈ ನಮಃ
ಓಂ ತುಂಗಾಯೈ ನಮಃ ಓಂ ಸರ್ವೈಶ್ವರ್ಯೈ ನಮಃ
ಓಂ ಭದ್ರಾಯೈ ನಮಃ ಓಂ ಮಹಾಲಕ್ಷ್ಮ್ಯೈ ನಮಃ
ಓಂ ಕೃಷ್ಣವೇಣ್ಯೈ ನಮಃ ಓಂ ಯಮುನಾಯೈ ನಮಃ
ಓಂ ಭವನಾಶಿನ್ಯೈ ನಮಃ ಓಂ ಹರಿಹರರೂಪಿಣ್ಯೈ ನಮಃ
ಸರ್ವಪಾಪಹರೇ ದೇವೀ ಸರ್ವೋಪದ್ರವನಾಶಿನೀ ।
ಸರ್ವಸಂಪತ್ಪ್ರದೇ ದೇವೀ ಯಮುನಾಯೈ ನಮೋಸ್ತುತೇ ।।
ನಾಮಪೂಜಾಂ ಸಮರ್ಪಯಾಮಿ ।।
ಧೂಪ :
ದಶಾಂಗಂ ಗುಗ್ಗುಲೋಪೇತಂ ಸುಗಂಧಂ ಚ ಮನೋಹರಮ್ ।
ಕಪಿಲಾಘೃತ ಸಂಯುಕ್ತಂ ಧೂಪಂ ಸ್ವೀಕುರು ಸೂರ್ಯಜೇ ।।
ಶ್ರೀ ಯಮುನಾಯೈ ನಮಃ । ಧೂಪಮಾಘ್ರಾಪಯಾಮಿ ।। ಅಗರಬತ್ತಿ ಬೆಳಗುವುದು .
ಏಕಾರ್ತಿದೀಪ :
ಘೃತವರ್ತಿ ಸಮಾಯುಕ್ತಂ ವಹ್ನಿನಾ ಯೋಜಿತಂ ಮಯಾ ।
ಗೃಹಾಣ ದೀಪಂ ದೇವಿ ತ್ವಂ ಸರ್ವೈಶ್ವರ್ಯಪ್ರದಾಯಿನೀ ।।
ಶ್ರೀ ಯಮುನಾಯೈ ನಮಃ ।ಏಕಾರ್ತಿದೀಪಂ ದರ್ಶಯಾಮಿ ।। ಮೂರು ತುಪ್ಪದ ಬತ್ತಿಗಳನ್ನು ಹಚ್ಚಿ ಬೆಳಗುವುದು .
ಧೂಪದೀಪಾನಂತರೇ ಆಚಮನಮ್ ।ಆಚಮನಾನಂತರೇ ಪತ್ರಪುಷ್ಪಾಣಿ ಸಮರ್ಪಯಾಮಿ ।। ಒಂದು ಉದ್ಧರಣೆ ನೀರನ್ನು ಬಿಟ್ಟು ಹೂವನ್ನು ಪೂಜಿಸುವುದು .
ನೈವೇದ್ಯ :
ಸರ್ವಭಕ್ಷ್ಯೈಶ್ಚಭೋಜ್ಯೈಶ್ಚ ರಸೈಃ ಷಡ್ಭಿಃ ಸಮನ್ವಿತಂ ।
ನೈವೇದ್ಯಂ ಚ ಸಮಾನೀತಂ ಸ್ವೀಕುರುಷ್ವ ಮಹೇಶ್ವರೀ ।।
ಮಂಡಲ ಮಾಡಿ , ನೈವೇದ್ಯಕ್ಕೆ ಇಟ್ಟು, ಪ್ರೋಕ್ಷಿಸಿ , ಪ್ರದಿಕ್ಷಿಣಾಕಾರವಾಗಿ ಪರಿಷೇಚನ ಮಾಡುವುದು .
ಓಂ ವಿಶ್ವಾಮಿತ್ರ ಋಶಿಃ । ಸವಿತಾ ದೇವತಾ ಗಾಯತ್ರಿ ಛಂದಃ ।
ಓಂ ತತ್ಸ .......................................... ಪ್ರಚೋದಯಾತ್ ।
ಸತ್ಯಂತ್ವರ್ತೇನ ಪರಿಷಿಂಚಾಮಿ ।।
ಓಂ ಪ್ರಾಣಾಯ ಸ್ವಾಹಾ । ಓಂ ಅಪಾನಾಯ ಸ್ವಾಹಾ । ಓಂ ವ್ಯಾನಾಯ ಸ್ವಾಹಾ । ಓಂ ಉದಾನಾಯ ಸ್ವಾಹಾ । ಓಂ ಸಮಾನಾಯ ಸ್ವಾಹಾ । ಓಂ ಬ್ರಹ್ಮಣೇ ಸ್ವಾಹಾ ।। ಶ್ರೀ ಯಮುನಾಯೈ ನಮಃ ।ನಾನಾವಿಧ ನೈವೇದ್ಯಂ ಸಮರ್ಪಯಾಮಿ ।
ನಾರಿಕೇಳಫಲಂ (ತೆಂಗಿನಕಾಯಿ ) ಕದಲೀಫಲಂ (ಬಾಳೆಹಣ್ಣು ) ನಿವೇದಯಾಮಿ ।। ಹಸ್ತಪ್ರಕ್ಷಾಲನಂ ಸಮರ್ಪಯಾಮಿ ।
ಪಾದಪ್ರಕ್ಷಾಲನಂ , ಪುನರಾಚಮನಂ ಸಮರ್ಪಯಾಮಿ ।। ಮೂರು ಸಾರಿ ನೀರನ್ನು ಬಿಡುವುದು .
ತಾಂಬೂಲ :
ಫೂಗೀಫಲ ಸಮಾಯುಕ್ತಂ ನಾಗವಲ್ಲೀದಳೈರ್ಯುತಮ್ ।
ಕರ್ಪೂರಚೂರ್ಣಸಂಯುಕ್ತಂ ತಾಂಬೂಲಂ ಪ್ರತಿಗುಹ್ಯತಾಂ ।।
ಶ್ರೀ ಯಮುನಾಯೈ ನಮಃ ।ಫೂಗೀಫಲ ತಾಂಬೂಲಂ ಸಮರ್ಪಯಾಮಿ ।।ಸುವರ್ಣಪುಷ್ಪದಕ್ಷಿಣಾಂ ಸಮರ್ಪಯಾಮಿ ।। ತಾಂಬೂಲ , ದಕ್ಷಿಣೆ ಸಹಿತ ನೀರು ಬಿಡುವುದು .
ತಾಂಬೂಲಾನಂತರೇ ಆಚಮನಂ ಸಮರ್ಪಯಾಮಿ । ಆಚಮನಾನಂತರೇ ಪತ್ರಪುಷ್ಪಾಣಿ ಸಮರ್ಪಯಾಮಿ ।। ಒಂದು ಉದ್ಧರಣೆ ನೀರನ್ನು ಬಿಟ್ಟು ಹೂಗಳನ್ನು ಸಮರ್ಪಿಸುವುದು .
ನೀರಾಜನಂ :
ನೀರಾಜನಂ ಸಕರ್ಪೂರಂ ಘೃತವರ್ತಿ ಸಮನ್ವಿತಂ ।
ಗೃಹಾಣ ಮಂಗಳಂ ದೀಪಂ ಯಮುನಾಯೈ ನಮೋಸ್ತುತೇ ।।
ಶ್ರೀ ಯಮುನಾಯೈ ನಮಃ ।ಕರ್ಪೂರ ಮಂಗಳ ನೀರಾಜನಂ ದರ್ಶಯಾಮಿ ।। ಅಗರಬತ್ತಿ ಹಚ್ಚಿ , ಕರ್ಪೂರ ಮಂಗಳಾರತಿ ಮಾಡುವುದು .
ನೀರಜನಾನಂತರೇ ಆಚಮನಮ್ । ಆಚಮನಾನಂತರೇ ಪತ್ರಪುಷ್ಪಾಣಿ ಸಮರ್ಪಯಾಮಿ ।। ಒಂದು ಉದ್ಧರಣೆ ನೀರು ಹಾಕಿ ಹೂವನ್ನು ಸಮರ್ಪಿಸುವುದು .
ಪ್ರದಕ್ಷಿಣೆ :
ಕೇತಕೀಜಾಜಿಕುಸುಮೈಃ ಮಲ್ಲಿಕಾಮಾಲತೀಶುಭ್ಯೈಃ ।
ಪುಷ್ಪಾಂಜಲಿರ್ಮಯಾದತ್ತೋರುದ್ರಪ್ರೀತ್ಯೈ ನಮೋಸ್ತುತೇ ।।
ಶ್ರೀ ಯಮುನಾಯೈ ನಮಃ ।ಪುಷ್ಪಾಂಜಲೀಂ ಸಮರ್ಪಯಾಮಿ । ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ।। ಪ್ರದಕ್ಷಿಣೆ ನಮಸ್ಕಾರ ಮಾಡಬೇಕು .
ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಪೂಜಾ ಕ್ರಿಯಾದಿಷು ।
ನ್ಯೂನ್ಯಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ವಿಷ್ಣುಪ್ರಿಯಾಮ್ ।।
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಹರಿವಲ್ಲಭೇ ।
ಯತ್ಪೂಜಿತಂ ಮಯಾ ದೇವಿ ಪರಿಪೂರ್ಣಂ ತದಸ್ತು ಮೇ ।।
ಅನೇನ ಶ್ರೀ ಯಮುನಾ ಪೂಜಾವಿಧಾನೇನ ಭಗವತೀ ಸರ್ವಾತ್ಮಿಕಾ ಶ್ರೀ ಯಮುನಾದೇವೀ ಸುಪ್ರೀತಾ ಸುಪ್ರಸನ್ನಾ ವರದಾ ಭವತು ।ಒಂದು ಉದ್ಧರಣೆ ನೀರು ಬಿಡುವುದು .
ಸುರಾಸುರೇಂದ್ರಾದಿ ಕಿರೀಟ ಮೌಕ್ತಿಕೈಃಯುಕ್ತಂ ಸದಾಯುತ್ತವ ಪಾದಪಂಕಜಮ್ ।
ಪರಾರವಂ ಪಾತು ವರಂ ಸುಮಂಗಳಂ ನಮಾಮಿ ಭಕ್ತ್ಯಾ ಮಾಮ ಕಾಮ ಸಿದ್ಧಯೇ ।।
ನಮಸ್ಕರಿಸಿ ಪ್ರಸಾದ ತೆಗೆದುಕೊಳ್ಳುವುದು . ಕರ್ತೃವು ಯಮುನಾ ಕಲಶದ ತಟ್ಟೆಯನ್ನು ಕೈಯಲ್ಲಿ ಹಿಡಿದು ಉತ್ತರ ಅಥವಾ ಪೂರ್ವದಿಕ್ಕಿಗೆ ನಿಂತುಕೊಳ್ಳುವುದು . ಆರತಿ ಮಾಡಿದ ಮೇಲೆ ಶಂಖ , ಜಾಗಟೆ , ಘಂಟೆ ಮುಂತಾದ ಮಂಗಳವಾದ್ಯದೊಡನೆ ಗೃಹಪ್ರವೇಶ ಮಾಡುವುದು . ಯಮುನಾ ಕಲಶದ ನೀರನ್ನು ಕಲಶಗಳಿಗೆ ಹಾಕುವುದು
ಯಮುನಾ ಪೂಜೆಯ ನಂತರ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಬೇಕು .
********

varamahalakshmi vruta
ಲಕ್ಷ್ಮೀ ದೇವಿಯ ಬಗ್ಗೆ ಕೆಲವು ಪ್ರಶ್ನೆಗಳು
೧ ವರಮಹಾಲಕ್ಷ್ಮಿ ಹಬ್ಬ ಎಂದು ಆಚರಿಸಲಾಗುತ್ತದೆ?
ಉತ್ತರ: ಶ್ರಾವಣ ಹುಣ್ಣಿಮೆಯ ಸಮೀಪದ ಶುಕ್ರವಾರ ( ಎರಡನೇ ಅಥವಾ ಮೂರನೇ ಶುಕ್ರವಾರ)
೨ ಲಕ್ಷ್ಮೀದೇವಿಯನ್ನು ದಾಸರು ಎಲ್ಲಿಯ ನಿವಾಸಿನಿ ಎಂದಿದ್ದಾರೆ?
ಉತ್ತರ: ಕರವೀರನಿವಾಸಿನಿ
೩ ತ್ರಿವಿಕ್ರಮ ದೇವರ ಪತ್ನಿಯಾದ ಲಕ್ಷ್ಮಿ ದೇವಿಯ ಹೆಸರೇನು ?
ಉತ್ತರ: ರಮಾದೇವಿ
೪ ಜಯಂತಿ ಎಂಬ ಹೆಸರಿನಿಂದ ಯಾವ ಪರಮಾತ್ಮನ ಅವತಾರದಲ್ಲಿ ಲಕ್ಷ್ಮೀ ಇದ್ದಳು ?
ಉತ್ತರ: ಋಷಭಾವತಾರದಲ್ಲಿ
೫. ಭಾರ್ಗವಿ ಎಂಬ ಹೆಸರಿನ ಲಕ್ಷ್ಮೀದೇವಿ ಯಾರ ಮಗಳು ?
ಉತ್ತರ: ಭೃಗುಋಷಿಗಳು
೬. ಚಂದ್ರ ಮತ್ತು ಲಕ್ಷ್ಮೀ ಯಾರ ಮಕ್ಕಳೆಂದು ಪ್ರಸಿದ್ಧಿ ?
ಉತ್ತರ: ಸಮುದ್ರರಾಜ
೭ ಪುರಂದರದಾಸರು ಲಕ್ಷ್ಮೀದೇವಿಯನ್ನು ಹೇಗೆ ಬರಲು ಕೋರಿದ್ದಾರೆ ?
ಉತ್ತರ: ಪರಮಾತ್ಮನ ಹೆಜ್ಜೆಯನ್ನು ಅನುಸರಿಸಿ (ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಬಾ)
೮. ಯಾವ ರಾಗದಿಂದ ಹರಿಯ ಸೇವೆ ಮಾಡುತಿಹಳು ಎಂದಿದ್ದಾರೆ - ದಾಸರು ?
ಉತ್ತರ: ಸಾನುರಾಗದಿಂದ
೯. ದಾಸರ ಒಂದು ಕೃತಿಯಲ್ಲಿ - ಲಕ್ಷ್ಮೀ ರಮಣೀಯ ಸ್ವರೂಪಿ ಆದರೆ ಶ್ರೀಹರಿ ಎಂತವನೆಂದಿದ್ದಾರೆ?
ಉತ್ತರ : ರಮಣೀಯ ಸ್ವರೂಪಿ ನೀನು
ಅಮಿತ ಘೋರ ರೂಪಿ ಅವನು
(ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ - ನಿಂದಾಸ್ತುತಿ)
೧೦. ಪುರಂದರದಾಸರು ತಮ್ಮ ಒಂದು ಕೃತಿಯಲ್ಲಿ ಲಕ್ಷ್ಮೀ ದೇವಿಯು ಮೂರು ರೂಪಗಳಿಂದ ಪರಮಾತ್ಮನ ಎಲ್ಲೆಲ್ಲಿ ಇಹಳೆಂದು ಕೃತಿಯಿದೆ ?
ಉತ್ತರ: ಎಡಕೆ ಭೂ ಬಲಕೆ ಶ್ರೀ ಎದುರು ದುರ್ಗಾ
Narahari Sumadhwa
ಸುಮಧ್ವ ಸೇವಾ
***
"ವಿಶೇಷ ವಿಚಾರಗಳು"
೧. ವರಮಹಾಲಕ್ಷ್ಮೀ ಹಬ್ಬದ ದಿನ ರಾತ್ರಿ ದಂಪತಿಗಳು "ತಾಂಬೂಲ" ಹಾಕಿಕೊಳ್ಳುವುದು ಕಡ್ಡಾಯವಾಗಿರುತ್ತದೆ.. ಇದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾರೆ..
೨. ಆದಷ್ಟೂ ಹಸಿರು ಸೀರೆ ಅಥವಾ ರೇಷ್ಮೆಯ ಸೀರೆ ಉಟ್ಟು ಪೂಜೆ ಮಾಡಿ..
೩. ವಿನಾಯಕನ ಪೂಜೆ,ಯಮುನಾ ಪೂಜೆಯ ನಂತರ ವರಮಹಾಲಕ್ಷ್ಮೀ ಪೂಜೆ ಪ್ರಾರಂಭಿಸಬೇಕು..
ವಿನಾಯಕ :
ಅರಿಶಿನವನ್ನು ಗಟ್ಟಿಯಾಗಿ ಕಲೆಸಿಕೊಂಡು ವಿನಾಯಕನನ್ನು ಮಾಡಬೇಕು..
ಪೂಜಾ ಸಮಯದಲ್ಲಿ ಕಳಸದ ಬಲಭಾಗ ಇಟ್ಟು ಪೂಜಿಸಬೇಕು..
ದೂರ್ವಾಗಣಪತಿಯೂ ಅತ್ಯಂತ ಶ್ರೇಷ್ಠ..
೭. ಕಲಶ ವಿಸರ್ಜನೆಯ ಸಮಯವನ್ನು ಹಿರಿಯರಿಂದ ಅಥವಾ ಗುರುಗಳಿಂದ ತಿಳಿದು ಮಾಡಿ..
"ಕಲಶದ ಕೆಳಗೆ " ಅಷ್ಟದಳಪದ್ಮ" ರಂಗೋಲಿ ಹಾಕಿ , ಇದು ಅತ್ಯಂತ ಶ್ರೇಷ್ಠ..
ಲಕ್ಷ್ಮೀ ಅನುಗ್ರಹ ಬೇಗ ಆಗುತ್ತದೆ..
"ಪೂರ್ಣಫಲ" ಎಂದರೆ "ಸಿಪ್ಪೆ ಇರುವ ಪೂರ್ತಿ ತೆಂಗಿನಕಾಯಿ"..!
ಇದಕ್ಕೆ " ಗಂಡು ತೆಂಗಿನಕಾಯಿ" ಅಂತನೂ ಕರೆಯುತ್ತಾರೆ, "ನಾರಾಯಣ" ಅಂತಲೂ ಹೇಳುತ್ತಾರೆ..
ತಾಂಬೂಲ ಕೊಡೊವಾಗ "ಸಿಪ್ಪೆ ಸುಲಿದಿರುವ ತೆಂಗಿನಕಾಯಿ ಮಾತ್ರ ಕೊಡಬೇಕು..
" ಸಿಪ್ಪೆ" ಸುಲಿದಿರೋ "ತೆಂಗಿನಕಾಯಿ" ಗೆ "ಲಕ್ಷ್ಮೀ" ಅಂತ ಅಥವಾ "ಹೆಣ್ಣು ತೆಂಗಿನಕಾಯಿ" ಅಂತಾರೆ..
ಹೀಗೆ "ತೆಂಗಿನಕಾಯಿ" ಯು "ಲಕ್ಷ್ಮೀನಾರಾಯಣ" ರ ಸಂಗಮವಾದ್ದರಿಂದ ಅತ್ಯಂತ ಶ್ರೇಷ್ಠ..
ತೆಂಗಿನಕಾಯಿ ಗೆ "ಸಂತಾನಲಕ್ಷ್ಮೀ" ಅಂತನೂ ಮತ್ತೊಂದು ಹೆಸರಿದೆ..
*****
ಈ ವ್ರತವನ್ನು "ಶ್ರಾವಣಮಾಸದ" ಎರಡನೇ ಶುಕ್ರವಾರ ಮಾಡಲಾಗದವರು "ಮೂರನೆಯ" ಶುಕ್ರವಾರ ಮಾಡಬಹುದು..
"ಕಲಶಕ್ಕೆ" "ವೀಳ್ಯದೆಲೆ" ಇಡುವ ಸಂಪ್ರದಾಯವಿದ್ದರೆ, ವಿಸರ್ಜನೆಯ ನಂತರ ಆ ವೀಳ್ಯದೆಲೆಯನ್ನು..
೧. ಮನೆಯ ಹಿರಿಯರು ಮಾತ್ರ ತಿನ್ನಬೇಕು, ಅಥವಾ ಮಗಳು ಅಳಿಯ, ಮಗ ಸೊಸೆ ತಿನ್ನಬಹುದು..
೨. ಈ ವೀಳ್ಯದೆಲೆ ತಿನ್ನುವುದರಿಂದ ರೋಗ ನಿವಾರಣೆ, ದಾರಿದ್ರ್ಯ ನಿವಾರಣೆಯಾಗುತ್ತದೆ..
೩. ಮನೆಗೆ ಬರಬೇಕಾದ ಹಣ ಬಹಳ ಬೇಗ ಬರುವುದು, ಮನೆಯಲ್ಲಿ ಶುಭಕಾರ್ಯಗಳು ಬೇಗ ಜರುಗುತ್ತವೆ...
********
ಪ್ರಶ್ನೆ
ವರಮಹಾಲಕ್ಷ್ಮೀಯ ಪೂಜೆಯಲ್ಲಿ ಕಲಶದಲ್ಲಿ ಏನೇನು ಹಾಕಬೇಕು..?
ಯಮುನಾ ಪೂಜೆ ಮಾಡೋ ಕಲಶದಲ್ಲಿ ನೀರು, ತುಳಸಿ, ಖರ್ಜೂರ, ಹಾಲು , ಗೋರೋಚನ, ಕಸ್ತೂರಿ, ಪಚ್ಚೆಕರ್ಪೂರ, ಬೆಳ್ಳಿಯ ಲಕ್ಷ್ಮೀ ವಿಗ್ರಹ ಹಾಕಿರಬೇಕು.. ಅದರ ಮೇಲೆ ಮಾವಿನ ಎಲೆ ಇಟ್ಟು, ತೆಂಗಿನಕಾಯಿ ಇಡಬೇಕು..
ವರಮಹಾಲಕ್ಷ್ಮೀ ಕಲಶದಲ್ಲಿ ನೀರು, ತುಳಸೀದಳ, ಖರ್ಜೂರ, ಒಣದ್ರಾಕ್ಷೀ, ಕೇಸರಿ, ಪಚ್ಚಕರ್ಪೂರ, ಏಲಕ್ಕಿ ಪುಡಿ, ಕಸ್ತೂರಿ, ಹಾಕಿ ಅದರ ಮೇಲೆ ಮಾವಿನ ಕುಡಿ ಇಟ್ಟು ತೆಂಗಿನಕಾಯಿ ಇಡಬೇಕು.
ನಂತರ ಲಕ್ಷ್ಮೀ ಮುಖವಾಡ, ಆಭರಣ, ವಸ್ತ್ರಗಳು ಹಾಕಿ ಪೂಜೆ ಮಾಡಬೇಕು..
*******
ವರಮಹಾಲಕ್ಷ್ಮಿಹಬ್ಬದಹಿನ್ನೆಲೆ
"ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪಾಂತ್ಯಭಾಗವೇ|
ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿಪ್ರದಾಯಕಮ್
(ಸರ್ವಮಾಂಗಲ್ಯಸಿದ್ಧಯೇ)||"
ನಿಜ ಶ್ರಾವಣ ಶುಕ್ಲಪೂರ್ಣಿಮೆ ದಿವಸ ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ, ಅಥವಾ ಶುಕ್ಲಪೂರ್ಣಿಮೆಯ ಅತಿ ಹತ್ತಿರದ ಶುಕ್ರವಾರದಂದು, ವರಲಕ್ಷ್ಮೀ ಆರಾಧನೆ ಮಾಡಬೇಕು ಎಂಬ ಶಾಸ್ತ್ರವಿಧಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು ನವರಾತ್ರಿಯ ಶುಕ್ರವಾರದಂದು ಮಾಡಬಹುದು.
ವರಗಳನ್ನು ದಯಪಾಲಿಸುವುದರಿಂದ ಮತ್ತು ಶ್ರೇಷ್ಠಳಾಗಿರುವುದರಿಂದ ಆಕೆಯು ವರಮಹಾಲಕ್ಷ್ಮೀ. ಒಮ್ಮೆ ದುರ್ವಾಸಮಹರ್ಷಿಗಳ ಶಾಪದಿಂದ ಇಂದ್ರನು ರಾಜ್ಯಭ್ರಷ್ಟನಾಗಲು, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನುಬಿಟ್ಟು ವೈಕುಂಠವನ್ನು ಸೇರಿದಳು. ಆಗ ಪರಮದುಃಖಾಕ್ರಾಂತರಾದ ದೇವತೆಗಳೆಲ್ಲರೂ ಚತುರ್ಮುಖ ಬ್ರಹ್ಮನನ್ನು ಮುಂದಿಟ್ಟುಕೊಂಡು (ಪುರಸ್ಕರಿಸಿ), ವೈಕುಂಠದಲ್ಲಿ ಪರಮಾತ್ಮನನ್ನು ಶರಣುಹೊಂದಿದರು. ಪರಮದಯಾಳುವಾದ ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ
ಕ್ಷೀರಸಮುದ್ರವನ್ನು ಮಥಿಸಲು, ಮಹೇಂದ್ರನಸಂಪತ್ಸ್ವರೂಪಿಣಿಯಾದ ಮಹಾಲಕ್ಷ್ಮಿಯು ಅಲ್ಲಿ ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿದಳು ಹಾಗೂ ಮಹಾವಿಷ್ಣುವಿನ ಪಾಣಿಗ್ರಹಣ ಮಾಡಿದಳು(ವಿವಾಹವಾದಳು).
ನಿತ್ಯ ಶುದ್ಧ-ಬುದ್ಧ-ಮುಕ್ತಸ್ವರೂಪಳೂ,ನಿತ್ಯಸಿದ್ಧಳೂ ಆದ ಈ ಮಂಗಲದೇವತೆಯ ಮಹಿಮೆಯನ್ನು ವರ್ಣಿಸುವ ಶಾಸ್ತ್ರಗಳಲ್ಲೇ ಆಕೆಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನ ತಂಗಿ, ಯಜ್ಞಕುಂಡದಲ್ಲಿ ಉದ್ಭವವಾದವಳು, ಕಮಲದಲ್ಲಿ ಆವಿರ್ಭವಿಸಿದವಳು-ಇತ್ಯಾದಿ ಅಭಿಪ್ರಾಯಗಳನ್ನು ಕಾಣುತ್ತೇವೆ.
ಶುಕ್ರವಾರದ ದಿನ, ಸಾಯಂಕಾಲದವರೆವಿಗೂಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸುವರು. ಕಲಶದಲ್ಲಿ ಅಕ್ಕಿತುಂಬಿಸಿ ಖರ್ಜೂರ, ಗೋಡಂಬಿ,ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸುವರು. ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ.ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಲಾಗುತ್ತದೆ. ಈ ಪೂಜೆಯಲ್ಲಿ ವಿಶೇಷವಾದ ದಾರಗಳಿಗೆ ಪೂಜೆಯನ್ನು ಸಲ್ಲಿಸುವರು. ಈ ದಾರವನ್ನು ದೋರವೆಂದು ಕರೆವರು. ಹೊಸದಾದ ೧೨ ದಾರಗಳಿಗೆ ೧೨ ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸುವರು.ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡುವರು. ಹನ್ನೆರಡು ಹೆಸರುಗಳನ್ನು ಉಚ್ಚರಿಸಿ ದ್ವಾದಶನಾಮಾವಳಿಯೆಂದು ಪೂಜಿಸುವರು. ಆ ನಾಮಾವಳಿಗಳು ಹೀಗಿವೆ -ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ. ಈ ದಾರಕ್ಕಾಗಿ ವಿಶೇಷವಾದ ನೈವೇದ್ಯವಾದ ಸಜ್ಜಪ್ಪವನ್ನುಅರ್ಪಿಸುವರು. ಅಂದು ಶ್ರೀಸೂಕ್ತವನ್ನು ಪಠಿಸುವುದೂ ಒಳ್ಳೆಯದು.ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ,ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವರು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನುಕೊಡುವರು. ಈ ಸಮಯದಲ್ಲಿ ಹೇಳುವ ಶ್ಲೋಕ ಹೀಗಿದೆ.[೨]
"ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ:
ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ"
ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ|
ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಾಮ್||
ಶ್ರೀಮನ್ಮಂದಕಟಾಕ್ಷಲಬ್ಧವಿಭವಬ್ರಹ್ಮೇಂದ್ರಗಂಗಾಧರಾಂ|
ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ
ವಂದೇ ಮುಕುಂದಪ್ರಿಯಾಮ್||"
ವಂದೇ ಮುಕುಂದಪ್ರಿಯಾಮ್||"
ಕ್ಷೀರಸಮುದ್ರರಾಜನ ಮಗಳಾದ, ಶ್ರೀರಂಗಧಾಮದ ಒಡೆಯಳಾದ, ಸಮಸ್ತ ದೇವತಾಸ್ತ್ರೀಯರಿಂದ ಸೇವಿಸಲ್ಪಡುವ, ಜಗತ್ತಿಗೇ ದಾರಿದೀಪವಾದ, ಬ್ರಹ್ಮ-ಇಂದ್ರ-ಶಂಕರಾದಿಗಳಿಗೆ ತನ್ನ ಕೃಪಾಕಟಾಕ್ಷದಿಂದಲೇ ಸಕಲವೈಭವಗಳನ್ನಿತ್ತ, ಮೂರುಲೋಕಗಳಿಗೂ ಮಾತೆಯಾದ, ಕಮಲಜೆ ಹಾಗೂ ಪದ್ಮಾಸನೆಯಾದ, ಶ್ರೀಹರಿಪ್ರಿಯೆಯಾದ ಹೇ ಮಹಾಲಕ್ಷ್ಮಿಯೇ! ನಿನ್ನನ್ನು ವಂದಿಸುತ್ತೇನೆ.
"ನಮಸ್ತೇsಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ|
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ! ನಮೋsಸ್ತು ತೇ||"
ಹೇ ಮಹಾಮಾಯೇ! ಶ್ರೀಪೀಠದಲ್ಲಿ ದೇವತೆಗಳಿಂದಲೂ ಪೂಜಿತಳಾದವಳೇ! ಶಂಖ-ಚಕ್ರ-ಗದೆಗಳನ್ನು ಕೈಗಳಲ್ಲಿ ಧರಿಸಿದವಳೇ! ಹೇ ಮಹಾಲಕ್ಷ್ಮಿಯೇ! ನಿನಗೆ ನಮಸ್ಕಾರವಿರಲಿ.
" ಯಾ ರಕ್ತಾಂಬುಜವಾಸಿನೀ ವಿಲಸಿನೀ ಚಂಡಾಶು ತೇಜಸ್ವಿನೀ|
ಆರಕ್ತಾ ರುಧಿರಾಂಬರಾ ಹರಿಸಖೀ ಯಾ ಶ್ರೀ ಮನೋಹ್ಲಾದಿನೀ||
ಯಾ ರತ್ನಾಕರಮಂಥನಾತ್ಪ್ರಘಟಿತಾ ವಿಷ್ಣೋಶ್ಚ ಯಾ ಗೇಹಿನೀ|
ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾಲಯಾ|| "
ಭಾವಾರ್ಥ- ಯಾವ ವರಲಕ್ಷ್ಮಿಯು ಕೆಂದಾವರೆಯಲ್ಲಿ ಕುಳಿತು ಕೋಟಿಸೂರ್ಯಸಮಪ್ರಭಳೋ, ಕೆಂಪುವಸ್ತ್ರವನ್ನುಟ್ಟು ಶ್ರೀಹರಿಯ ಹೃದಯವಲ್ಲಭೆಯೋ, ಯಾವಳು ಸಮುದ್ರಮಥನದಲ್ಲಿ ಉದ್ಭವಿಸಿ ಭಗವಾನ್ ಮಹಾವಿಷ್ಣುವಿನ ಪತ್ನಿಯಾದಳೋ, ಅಂತಹ ಮನಸ್ಸಿಗೆ ಮುದನೀಡುವ, ಪದ್ಮವನ್ನೇ ಆಲಯವನ್ನಾಗಿಸಿಕೊಂಡ, ಭಗವತೀ ಲಕ್ಷ್ಮಿಯು ನನ್ನನ್ನು ರಕ್ಷಿಸಲಿ.
*********
*********
ಹರಿದಾಸರ ಪದ ಹಾಗೂ ಸಂಪ್ರದಾಯದ ಪದಗಳ ಮೂಲಕ ಶ್ರೀ ಮಹಾಲಕ್ಷ್ಮೀ ಪೂಜೆ
ಭಾಗ-೩
ಶ್ರೀ ದೇವಿಯರನ್ನು ಆಹ್ವಾನಿಸಿ, ಪೂಜಿಸಿ, ಸ್ತುತಿಸಿ ಮಂಗಳಾರತಿ ಮಾಡಿದ ಮೇಲೆ, ಲಕ್ಷ್ಮೀ ಪ್ರಸನ್ನಕಾಲದಲ್ಲಿ ಅನನ್ಯ ಭಕ್ತಿಯಿಂದ ಆಕೆಯಲ್ಲಿ ವರ ಬೇಡುವ ಮಹತ್ವದ ಘಟ್ಟದಲ್ಲಿ ಹಾಡುವ ಪದಗಳು ಈ ಶುಭದಿನದಂದು ಹಂಚಿಕೊಳ್ಳುತ್ತಿದ್ದೇವೆ.
ಶ್ರೀ ವರಮಹಾಲಕ್ಷ್ಮೀ ದೇವಿಯರಲ್ಲಿ ವರವ ಬೇಡುವ ಹಾಡುಗಳು
ಪದ-೧೬
ವಂದಿಸಿ ಬೇಡುವೆ ನಾ ವರಗಳ
ವಂದಿಸಿ ಬೇಡುವೆ ನಾ||ಪ||
ವಂದಿಸಿ ಬೇಡವೆ ಇಂದಿರೆ ಮುಡಿದಂಥ ಕುಂದ ಮಂದಾರ ನಾಗಸಂಪಿಗೆ||ಅ.ಪ||
ಹಸಿರು ಶ್ಯಾವಂತಿಗೆ ಕುಸುಮ ಮಲ್ಲಿಗೆದಂಡೆ|
ಎಸೆವೋ ಕ್ಯಾದಿಗೆ ಪಾರಿಜಾತದ ವರಗಳ ನಾ||1||
ಕಟ್ಟಿದ್ದ ಮಾಂಗಲ್ಯ ಕುಂಕುಮ ಗಾಜಿನಬಳೆ|
ಮುತ್ತೈದೆತನ ಸಂಪತ್ತು ಸಂತಾನಕೆ ನಾ||2||
ಕಮಲಾಕಾಂತ ಭೀಮೇಶಕೃಷ್ಣನ ರಾಣಿ ಮುಡಿದ|
ಕಮಲ ಮಲ್ಲಿಗೆ ಕಾಮಿತಾರ್ಥದ ವರಗಳ ನಾ||3||
ಪದ-೧೭
ದೇವಿ ನಿನ್ನಯ ಮುಡಿ ಮೇಲಿದ್ದ ಮಲ್ಲಿಗೆ ಹೂವ ಕೊಡೇ ತಾಯಿ ವರವ ಕೊಡೇ
ಕಟ್ಟುವ ತೊಟ್ಟಿಲಲ್ಲಿ ಗಂಡು ಮಕ್ಕಳು ಮುತ್ತೈದೆತನವ ಮುದದಿಂದ...
ಮುತ್ತೈದೆತನವ ಮುದದಿಂದ ಬೇಡುವೆ ಶ್ರೀ ಮಹಾಲಕುಮಿಯೇ ದಯಮಾಡು
ಅಂದಣ ರಥವು ಬಂದು ಹೋಗೋ ಹೆಣ್ಣುಮಕ್ಕಳು ಬಂಧುಗಳಿಗೆ ಬಲು ಕ್ಷೇಮ....
ಬಂಧುಗಳಿಗೆ ಬಲು ಕ್ಷೇಮವಿರುವಂತೆ ಇಂದಿರಾದೇವಿಯೇ ದಯಮಾಡಿ
ದೇವಿ ನಿನ್ನಯ ಮುಡಿ ಮೇಲಿದ್ದ ಮಲ್ಲಿಗೆ ಹೂವ ಕೊಡೇ ತಾಯಿ ವರವ ಕೊಡೇ
ದಂಪತ್ತಿನಲಿ ಸುತ ಸಂಪತ್ತು ಸೌಭಾಗ್ಯ ಇಂಥ ಮಂದಿರಕೆ ಬಹುಮಾನ.....
ಇಂಥ ಮಂದಿರಕೆ ಬಹುಮಾನವಿರುವಂತೆ ಸಂತೋಷದಿ ವರವ ದಯಮಾಡು
ದೇವಿ ನಿನ್ನಯ ಮುಡಿ ಮೇಲಿದ್ದ ಮಲ್ಲಿಗೆ ಹೂವ ಕೊಡೇ ತಾಯಿ ವರವ ಕೊಡೇ
ಅನ್ನ ಗೋವುಗಳು ದಿವ್ಯಕನ್ಯಾ ಭೂದಾನ ಹಿರಣ್ಯದಾನಗಳ ಹಿತದಿಂದ...
ಹಿರಣ್ಯದಾನಗಳ ಹಿತದಿಂದ ಮಾಡುವಂತೆ ಸಂಪನ್ನೆ ನೀ ವರವ ದಯಮಾಡು
ದೇವಿ ನಿನ್ನಯ ಮುಡಿ ಮೇಲಿದ್ದ ಮಲ್ಲಿಗೆ ಹೂವ ಕೊಡೇ ತಾಯಿ ವರವ ಕೊಡೇ
ಇಂದಿಗೆ ಮನೋಭೀಷ್ಠ ಎಂದಿಗೆ ನಿಮ್ಮ ಪಾದ ಹೊಂದಿರುವಂತೆ ಮರೆಯದೆ....
ಹೊಂದಿರುವಂತೆ ಮರೆಯದೆ ಭೀಮೇಶಕೃಷ್ಣನರ್ಧಾಂಗಿಯೇ ದಯಮಾಡಿ
ದೇವಿ ನಿನ್ನಯ ಮುಡಿ ಮೇಲಿದ್ದ ಮಲ್ಲಿಗೆ ಹೂವ ಕೊಡೇ ತಾಯಿ ವರವ ಕೊಡೇ
ಪದ-೧೮
ವರವ ಕೊಡಮ್ಮಾ ತಾಯಿ ವರವ ಕೊಡೆ||ಪ||
ಶರಧಿಕನ್ಯೆ ಕೇಳು ಸಂಪನ್ನೆ ಸೆರಗೊಡ್ಡಿ ಬೇಡಿದಂಥ ವರವ ಕೊಡೇ||ಅ.ಪ||
ಸಿರಿಯು ಸಂಪತ್ತು ಎರಡೂ ಸ್ಥಿರವಾಗಿರುವಂತೆ
ವರವ ಕೊಡಮ್ಮಾ ತಾಯಿ ವರವ ಕೊಡೆ
ಕಟ್ಟಿದ್ದ ಮಾಂಗಲ್ಯ ಇಟ್ಟ ಗಾಜಿನ ಬಳೆ ಸ್ಥಿರವಾಗಿರುವಂತೆ
ವರವ ಕೊಡಮ್ಮಾ ತಾಯಿ ವರವ ಕೊಡೆ
ಮನೆ ಮುಂದೆ ತೋರಣ ಮದುವೆ-ಮುಂಜಿ ನಾಮಕರಣ ಯಾವಾಗಲೂ ಇರುವಂತೆ ವರವ ಕೊಡಮ್ಮಾ ತಾಯಿ ವರವ ಕೊಡೆ
ಮಾಳಿಗೆ ಮನೆಯಲ್ಲಿ ಜೋಡು ತೊಟ್ಟಿಲು ಕಟ್ಟಿ ಜೋಗುಳ ಪಾಡುವಂತೆ
ವರವ ಕೊಡಮ್ಮಾ ತಾಯಿ ವರವ ಕೊಡೆ
ಗಂಡುಮಕ್ಕಳ ಪಡೆದು ಬಿಂದಲಿಯ ಹಿಡಿದು ಮದುವೆ ಮುಂಜಿ ಮಾಡುವಂತೆ
ವರವ ಕೊಡಮ್ಮಾ ತಾಯಿ ವರವ ಕೊಡೆ
ಹೆಣ್ಣುಮಕ್ಕಳ ಪಡೆದು ಹೊನ್ನು ಸೆರಗಲಿ ಕಟ್ಟಿ ಕನ್ಯಾದಾನ ಮಾಡುವಂತೆ
ವರವ ಕೊಡಮ್ಮಾ ತಾಯಿ ವರವ ಕೊಡೆ
ಶಾಲ್ಯನ್ನ ಸಘೃತ ಪಂಚಭಕ್ಷ್ಯ ಪರಮಾನ್ನ ನೈವೇದ್ಯ ಇಡುವಂತೆ
ವರವ ಕೊಡಮ್ಮಾ ತಾಯಿ ವರವ ಕೊಡೆ
ಬಂದ ಬ್ರಾಹ್ಮಣರಿಗೆ ಆನಂದದಿ ಭೋಜನ ಮಾಡಿಸಿ ತಣಿಸುವಂತೆ
ವರವ ಕೊಡಮ್ಮಾ ತಾಯಿ ವರವ ಕೊಡೆ
ಅನ್ನದಾನ ಭೂದಾನ ಗೋದಾನ ವಸ್ತ್ರದಾನ ಯಾವಾಗಲೂ ಮಾಡುವಂತೆ
ವರವ ಕೊಡಮ್ಮಾ ತಾಯಿ ವರವ ಕೊಡೆ
ಶರಧಿಕನ್ಯೆ ಕೇಳು ಸಂಪನ್ನೆ ಸೆರಗೊಡ್ಡಿ ಬೇಡಿದಂಥ ವರವ ಕೊಡೇ
ವರವ ಕೊಡಮ್ಮಾ ತಾಯಿ ವರವ ಕೊಡೆ
ಈ ರೀತಿ ಹರಿದಾಸರ ಪದಗಳು ಹಾಗೂ ಸಂಪ್ರದಾಯದ ಪದಗಳಿಂದ ಪೂಜೆಗೊಂಡ ಶ್ರೀ ವರಮಹಾಲಕ್ಷ್ಮೀ ದೇವಿ ನಾವು ಬೇಡಿದ ವರಗಳನ್ನು ಕರುಣಿಸಿ ಸದಾ ಕಾಪಾಡಲಿ.
ಶ್ರೀ ರಮಾರಮಣ ಶ್ರೀ ಚರಣಾರ್ಪಣಮಸ್ತು
ಕಲಿಕಾಲಕೆ ಸಮಯುಗವು ಇಲ್ಲವೈಯ್ಯಾ
ಕಲುಷ ಹರಿಸಿ ಕೈವಲ್ಯವೀವುದಯ್ಯಾ
ಸಲೆ ನಾಮಕಿರ್ತನೆ ಸ್ಮರಣೆ ಸಾಕಯ್ಯಾ
ಸ್ಮರಿಸಲು ಸಾಯುಜ್ಯಪದವಿವುದಯ್ಯಾ
ಬಲವಂತ ಶ್ರೀ ರಂಗವಿಠಲನ ನೆನೆದರೆ
ಕಲಿಯುಗವೆ ಕೃತಯುಗವಾಗುವುದೈಯ್ಯಾ
ಭಯನಿವಾರಣವು ಶ್ರೀಹರಿಯನಾಮ,ಜಯಪಾಂಡುರಂಗವಿಠಲ ನಿನ್ನ ನಾಮ/
ಚರಣದಲಹಲ್ಯೆಯನ್ನು ಸೆರೆಯ ಬಿಡಿಸಿದ ನಾಮ
ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ
ತೊರೆಯಲಕ್ರೂನಿಗೆ ನಿಜವ ತೋರಿದ ನಾಮ,
ಸ್ಮರಿಪ ಜನರಿಗೆ ಸಮಸ್ತವನಿತ್ತ ನಾಮ
*******
ಶುಭ ಶುಕ್ರವಾರ
“ಶ್ರೀ ಮಹಾಲಕ್ಷ್ಮೀ” ಪೂಜೆಯನ್ನು ಮಾಡುವ ಸ್ತ್ರೀಯರು “ತೆಂಗಿನಕಾಯಿ” ಯನ್ನು ಪುರುಷರಿಂದ ಒಡೆಸಿ, ನೀವು ಬೇಡ..!
“ತೆಂಗಿನಕಾಯಿ” ಯನ್ನು ತಾಂಬೂಲದೊಡನೆ ದಾನ ಮಾಡಿದರೆ , ಅಷ್ಟನಿಧಿ ನವನಿಧಿಗಳು ಪ್ರಾಪ್ತಿಯಾಗುತ್ತದೆ..!
“ಪ್ರತಿದಿವಸ ” ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರದಿಂದ ತಮ್ಮ ಕುಲದೇವರಿಗೆ ಅಭಿಷೇಕವನ್ನು ಮಾಡಿದರೆ ಎಲ್ಲ ತರಹದ “ಸ್ತ್ರೀ ದೋಷ, ಸ್ತ್ರೀ ಶಾಪ, ಸುಮಂಗಲೀ ದೋಷಗಳು ನಿವಾರಣೆಯಾಗುತ್ತದೆ..!
“ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರದಿಂದ “ಶ್ರೀ ಮಹಾಲಕ್ಷ್ಮಿ” ಯನ್ನು ಪೂಜಿಸಿ “ತಾವರೇ” ಹೂವಿನಿಂದ ಪೂಜಿಸಿದರೆ ..
ಸತ್ಸಂತಾನ ಭಾಗ್ಯವಾಗುತ್ತದೆ.
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
ಮಕ್ಕಳು ಹೇಳಿದ ಮಾತು ಕೇಳಿ ದೈವಭಕ್ತಿ ಜಾಸ್ತಿ ಇದ್ದು ಗುಣವಂತರಾಗುತ್ತಾರೆ..!”
“ಸಾಲದಭಾದೆ ನಿವಾರಣೆ”: ಪ್ರತಿದಿನ ಮನೆಯನ್ನು ” ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರ ಹೇಳಿ , ಅರಿಸಿನ ಹಾಕಿದ ನೀರಿನಿಂದ ಸಾರಿಸಿದರೆ ..
“ಸಾಲದ ಭಯ ಇರುವುದಿಲ್ಲ..”!
ಸಾಲದ ಹಣ ಬಹಳ ಬೇಗ ತಿರುಗಿ ಬರುತ್ತದೆ..!
ನಿಮಗೆ ಯಾರಾದರೂ ಹಣವನ್ನು ಕೊಡಬೇಕಿದ್ದರೆ ಬಹಳ ಬೇಗ ತಂದುಕೊಡುತ್ತಾರೆ..”!
ಎಚ್ಚರಿಕೆ : ನೆಲ ಒರೆಸಿದ ನಂತರ ಪೂರ್ಣವಾಗಿ ಒಣಗುವವರೆಗೂ ಯಾರೂ ನೆಲವನ್ನು ತುಳಿಯಬಾರದು..!”
“ಶ್ರೀ ಮಹಾಲಕ್ಷ್ಮೀ” ಪೂಜೆ ಮಾಡುವವರು, ಅಥವಾ ಯಾರೇ ಆಗಲಿ “ಬೇರೆಯವರ ಮನೆಯಲ್ಲಿ ” ತಾಂಬೂಲ” ಕೊಟ್ಟಾಗ, ಅದನ್ನು ಮನೆಗೆ ತರದೇ ಬೇರೆಯವರಿಗೆ ಕೊಟ್ಟರೆ..
ನಿಮಗೆ ಬರಬೇಕಾದ ಹಣ ಸಕಾಲದಲ್ಲಿ ಬರುವುದಿಲ್ಲ..
ನಿಮ್ಮ ಸಂಪತ್ತು ಕಡಿಮೆಯಾಗುತ್ತದೆ..!
ಆದ್ದರಿಂದ ನಿಮಗೆ ಕೊಟ್ಟ ತಾಂಬೂಲವನ್ನು ಯಾರಿಗೂ ಕೊಡದೆ ಮನೆಗೆ ತಂದು ದೇವರಿಗೆ ಅರ್ಪಿಸಬೇಕು..
ನಂತರ ಬೇಕಾದರೆ ಕೊಡಬಹುದು..!
“ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರ ಪೂಜೆಯನ್ನು “ಬಿಲ್ವದಳ” ದಿಂದ ಪೂಜಿಸಿದರೆ ಬಹಳ ಬೇಗ “ಶ್ರೀಮಂತರಾಗುತ್ತಾರೆ..”!
” ವಿಗ್ರಹವಿಲ್ಲದೇ “ಶ್ರೀ ಮಹಾಲಕ್ಷ್ಮೀ” ಅಷ್ಟೋತ್ತರ ವನ್ನು ವೀಳ್ಯದೆಲೆಯಲ್ಲಿ ಅರ್ಚಿಸುವವರು..
ಒಂದು ವೀಳ್ಯದೆಲೆಯಲ್ಲಿ ಅರ್ಚಿಸಬಾರದು..! ಅರ್ಚಿಸಿದರೆ ನಿತ್ಯದಾರಿದ್ರ್ಯ ಅನುಭವಿಸಬೇಕಾಗುತ್ತದೆ..
ಆದ್ದರಿಂದ ಎರಡು ವೀಳ್ಯದೆಲೆಯಲ್ಲಿ ಅರ್ಚಿಸಬೇಕು..!
“ಕುಂಕುಮ” ಅರ್ಚನೆ ಮಾಡಿದ “ವೀಳ್ಯದೆಲೆ”ಯನ್ನು ಯಾರಿಗೂ ಕೊಡಬಾರದು, ಬಿಸಾಕಬಾರದು..!
ಬಿಸಾಕಿದರೆ , ಬೇರೆಯವರಿಗೆ ಕೊಟ್ಟರೆ ಧನದಾರಿದ್ರ್ಯ, ಉಂಟಾಗುತ್ತದೆ..!
” ಆ ವೀಳ್ಯದೆಲೆ “ಯನ್ನು ಪೂಜೆಯಾದ ಮಾರನೇ ದಿನ ” ಮನೆಯ ಯಜಮಾನರು, ಅಥವಾ ಹಿರಿಯ ದಂಪತಿಗಳು, ಮಾತ್ರ ಎಲೆ ಅಡಿಕೆ ಹಾಗೂ ಸುಣ್ಣದ ಸಮೇತ ತಾಂಬೂಲ ಹಾಕಿಕೊಂಡರೆ, ನಿಮಗೆ ಬಹಳ ಬೇಗ “ಶ್ರೀ ಮಹಾಲಕ್ಷ್ಮೀ” ಅನುಗ್ರಹವಾಗುತ್ತದೆ..!
” ಶುಕ್ರವಾರದ ದಿವಸ “ಶ್ರೀ ಮಹಾಲಕ್ಷ್ಮೀ ” ಯನ್ನು ಪೂಜೆ ಮಾಡಿ, “ಮೊಸರನ್ನ” ಮತ್ತು ನೆಲ್ಲಿಕಾಯಿಯ ಗೊಜ್ಜು ಅಥವಾ ಮೊರಬ್ಜ ನೈವೇದ್ಯ ಮಾಡಿ, “ಗೋವು ” ಪೂಜೆಯನ್ನು ಮಾಡಿ, ಬ್ರಾಹ್ಮಣ ದಂಪತಿಗಳಿಗೆ ದಾನ ಮಾಡಿದರೆ “ನಿತ್ಯ ದಾರಿದ್ರ್ಯ” , ಅನ್ನದಾರಿದ್ರ್ಯ, ವಸ್ತ್ರದಾರಿದ್ರ್ಯ, ಧನದಾರಿದ್ರ್ಯ ನಿವಾರಣೆಯಾಗುತ್ತದೆ..!
“ಶ್ರೀ ಮಹಾಲಕ್ಷ್ಮೀ” ಅನುಗ್ರಹ ಎಲ್ಲರಿಗೂ ದೊರಕಲಿ..
**********
ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರ ಪಾರಾಯಣ
ಲಕ್ಷ್ಮೀ ಪ್ರೀತಿಕರ ಮತ್ತು ಸರ್ವಾಭೀಷ್ಠ ಫಲಪ್ರದವೆಂದು ನಂಬಿಕೆ
ಮಹಾಲಕ್ಷ್ಮೀ ಅಷ್ಟೋತ್ತರ ಶತನಾಮಸ್ತೋತ್ರ
ದೇವ್ಯುವಾಚ
ದೇವದೇವ! ಮಹಾದೇವ! ತ್ರಿಕಾಲಙ್ಞ! ಮಹೇಶ್ವರ!
ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ||
ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ||
ಈಶ್ವರ ಉವಾಚ
ದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಮ್ |
ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಮ್ ||
ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಮ್ |
ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಮ್ ||
ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಮ್ |
ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಮ್ ||
ಸಮಸ್ತ ದೇವ ಸಂಸೇವ್ಯಮ್ ಅಣಿಮಾದ್ಯಷ್ಟ ಸಿದ್ಧಿದಮ್ |
ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಮ್ ||
ತವ ಪ್ರೀತ್ಯಾದ್ಯ ವಕ್ಷ್ಯಾಮಿ ಸಮಾಹಿತಮನಾಶ್ಶೃಣು |
ಅಷ್ಟೋತ್ತರ ಶತಸ್ಯಾಸ್ಯ ಮಹಾಲಕ್ಷ್ಮಿಸ್ತು ದೇವತಾ ||
ಕ್ಲೀಂ ಬೀಜ ಪದಮಿತ್ಯುಕ್ತಂ ಶಕ್ತಿಸ್ತು ಭುವನೇಶ್ವರೀ |
ಅಂಗನ್ಯಾಸಃ ಕರನ್ಯಾಸಃ ಸ ಇತ್ಯಾದಿ ಪ್ರಕೀರ್ತಿತಃ ||
ಧ್ಯಾನಮ್
ವಂದೇ ಪದ್ಮಕರಾಂ ಪ್ರಸನ್ನವದನಾಂ ಸೌಭಾಗ್ಯದಾಂ ಭಾಗ್ಯದಾಂ
ಹಸ್ತಾಭ್ಯಾಮಭಯಪ್ರದಾಂ ಮಣಿಗಣೈಃ ನಾನಾವಿಧೈಃ ಭೂಷಿತಾಮ್ |
ಭಕ್ತಾಭೀಷ್ಟ ಫಲಪ್ರದಾಂ ಹರಿಹರ ಬ್ರಹ್ಮಾಧಿಭಿಸ್ಸೇವಿತಾಂ
ಪಾರ್ಶ್ವೇ ಪಂಕಜ ಶಂಖಪದ್ಮ ನಿಧಿಭಿಃ ಯುಕ್ತಾಂ ಸದಾ ಶಕ್ತಿಭಿಃ ||
ಸರಸಿಜ ನಯನೇ ಸರೋಜಹಸ್ತೇ ಧವಳ ತರಾಂಶುಕ ಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಙ್ಞೇ ತ್ರಿಭುವನ ಭೂತಿಕರಿ ಪ್ರಸೀದಮಹ್ಯಮ್ ||
ಓಂ
ಪ್ರಕೃತಿಂ ವಿಕೃತಿಂ ವಿದ್ಯಾಂ ಸರ್ವಭೂತ ಹಿತಪ್ರದಾಮ್ |
ಶ್ರದ್ಧಾಂ ವಿಭೂತಿಂ ಸುರಭಿಂ ನಮಾಮಿ ಪರಮಾತ್ಮಿಕಾಮ್ || 1 ||
ವಾಚಂ ಪದ್ಮಾಲಯಾಂ ಪದ್ಮಾಂ ಶುಚಿಂ ಸ್ವಾಹಾಂ ಸ್ವಧಾಂ ಸುಧಾಮ್ |
ಧನ್ಯಾಂ ಹಿರಣ್ಯಯೀಂ ಲಕ್ಷ್ಮೀಂ ನಿತ್ಯಪುಷ್ಟಾಂ ವಿಭಾವರೀಮ್ || 2 ||
ಅದಿತಿಂ ಚ ದಿತಿಂ ದೀಪ್ತಾಂ ವಸುಧಾಂ ವಸುಧಾರಿಣೀಮ್ |
ನಮಾಮಿ ಕಮಲಾಂ ಕಾಂತಾಂ ಕಾಮಾಕ್ಷೀಂ ಕಮಲ ಸಂಭವಾಮ್ || 3 ||
ಅನುಗ್ರಹಪರಾಂ ಬುದ್ಧಿಂ ಅನಘಾಂ ಹರಿವಲ್ಲಭಾಮ್ |
ಅಶೋಕಾಂ ಅಮೃತಾಂ ದೀಪ್ತಾಂ ಲೋಕಶೋಕ ವಿನಾಶಿನೀಮ್ || 4 ||
ನಮಾಮಿ ಧರ್ಮನಿಲಯಾಂ ಕರುಣಾಂ ಲೋಕಮಾತರಮ್ |
ಪದ್ಮಪ್ರಿಯಾಂ ಪದ್ಮಹಸ್ತಾಂ ಪದ್ಮಾಕ್ಷೀಂ ಪದ್ಮಸುಂದರೀಮ್ || 5 ||
ಪದ್ಮೋದ್ಭವಾಂ ಪದ್ಮಮುಖೀಂ ಪದ್ಮನಾಭಪ್ರಿಯಾಂ ರಮಾಮ್ |
ಪದ್ಮಮಾಲಾಧರಾಂ ದೇವೀಂ ಪದ್ಮಿನೀಂ ಪದ್ಮಗಂಧಿನೀಮ್ || 6 ||
ಪುಣ್ಯಗಂಧಾಂ ಸುಪ್ರಸನ್ನಾಂ ಪ್ರಸಾದಾಭಿಮುಖೀಂ ಪ್ರಭಾಮ್ |
ನಮಾಮಿ ಚಂದ್ರವದನಾಂ ಚಂದ್ರಾಂ ಚಂದ್ರಸಹೋದರೀಮ್ || 7 ||
ಚತುರ್ಭುಜಾಂ ಚಂದ್ರರೂಪಾಂ ಇಂದಿರಾಂ ಇಂದುಶೀತಲಾಮ್ |
ಆಹ್ಲಾದ ಜನನೀಂ ಪುಷ್ಟಿಂ ಶಿವಾಂ ಶಿವಕರೀಂ ಸತೀಮ್ || 8 ||
ವಿಮಲಾಂ ವಿಶ್ವಜನನೀಂ ತುಷ್ಟಿಂ ದಾರಿದ್ರ್ಯ ನಾಶಿನೀಮ್ |
ಪ್ರೀತಿ ಪುಷ್ಕರಿಣೀಂ ಶಾಂತಾಂ ಶುಕ್ಲಮಾಲ್ಯಾಂಬರಾಂ ಶ್ರಿಯಮ್ || 9 ||
ಭಾಸ್ಕರೀಂ ಬಿಲ್ವನಿಲಯಾಂ ವರಾರೋಹಾಂ ಯಶಸ್ವಿನೀಮ್ |
ವಸುಂಧರಾಂ ಉದಾರಾಂಗಾಂ, ಹರಿಣೀಂ ಹೇಮಮಾಲಿನೀಮ್ || 10 ||
ಧನಧಾನ್ಯಕರೀಂ ಸಿದ್ಧಿಂ ಸ್ರೈಣಸೌಮ್ಯಾಂ ಶುಭಪ್ರದಾಮ್ |
ನೃಪವೇಶ್ಮಗತಾನಂದಾಂ ವರಲಕ್ಷ್ಮೀಂ ವಸುಪ್ರದಾಮ್ || 11 ||
ಶುಭಾಂ ಹಿರಣ್ಯಪ್ರಾಕಾರಾಂ ಸಮುದ್ರತನಯಾಂ ಜಯಾಮ್ |
ನಮಾಮಿ ಮಂಗಳಾಂ ದೇವೀಂ ವಿಷ್ಣು ವಕ್ಷಃಸ್ಥಲ ಸ್ಥಿತಾಮ್ || 12 ||
ವಿಷ್ಣುಪತ್ನೀಂ ಪ್ರಸನ್ನಾಕ್ಷೀಂ ನಾರಾಯಣ ಸಮಾಶ್ರಿತಾಮ್ |
ದಾರಿದ್ರ್ಯ ಧ್ವಂಸಿನೀಂ ದೇವೀಂ ಸರ್ವೋಪದ್ರವ ವಾರಿಣೀಮ್ || 13 ||
ನವದುರ್ಗಾಂ ಮಹಾಕಾಳೀಂ ಬ್ರಹ್ಮ ವಿಷ್ಣು ಶಿವಾತ್ಮಿಕಾಮ್ |
ತ್ರಿಕಾಲಜ್ಞಾನ ಸಂಪನ್ನಾಂ ನಮಾಮಿ ಭುವನೇಶ್ವರೀಮ್ || 14 ||
ಲಕ್ಷ್ಮೀಂ ಕ್ಷೀರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಮ್ |
ದಾಸೀಭೂತ ಸಮಸ್ತದೇವ ವನಿತಾಂ ಲೋಕೈಕ ದೀಪಾಂಕುರಾಮ್ ||
ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವದ್-ಬ್ರಹ್ಮೇಂದ್ರ ಗಂಗಾಧರಾಮ್ |
ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ || 15 ||
ಮಾತರ್ನಮಾಮಿ! ಕಮಲೇ! ಕಮಲಾಯತಾಕ್ಷಿ!
ಶ್ರೀ ವಿಷ್ಣು ಹೃತ್-ಕಮಲವಾಸಿನಿ! ವಿಶ್ವಮಾತಃ!
ಕ್ಷೀರೋದಜೇ ಕಮಲ ಕೋಮಲ ಗರ್ಭಗೌರಿ!
ಲಕ್ಷ್ಮೀ! ಪ್ರಸೀದ ಸತತಂ ಸಮತಾಂ ಶರಣ್ಯೇ || 16 ||
ತ್ರಿಕಾಲಂ ಯೋ ಜಪೇತ್ ವಿದ್ವಾನ್ ಷಣ್ಮಾಸಂ ವಿಜಿತೇಂದ್ರಿಯಃ |
ದಾರಿದ್ರ್ಯ ಧ್ವಂಸನಂ ಕೃತ್ವಾ ಸರ್ವಮಾಪ್ನೋತ್-ಯಯತ್ನತಃ |
ದೇವೀನಾಮ ಸಹಸ್ರೇಷು ಪುಣ್ಯಮಷ್ಟೋತ್ತರಂ ಶತಮ್ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ || 17 ||
ಭೃಗುವಾರೇ ಶತಂ ಧೀಮಾನ್ ಪಠೇತ್ ವತ್ಸರಮಾತ್ರಕಮ್ |
ಅಷ್ಟೈಶ್ವರ್ಯ ಮವಾಪ್ನೋತಿ ಕುಬೇರ ಇವ ಭೂತಲೇ ||
ದಾರಿದ್ರ್ಯ ಮೋಚನಂ ನಾಮ ಸ್ತೋತ್ರಮಂಬಾಪರಂ ಶತಮ್ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ || 18 ||
ಭುಕ್ತ್ವಾತು ವಿಪುಲಾನ್ ಭೋಗಾನ್ ಅಂತೇ ಸಾಯುಜ್ಯಮಾಪ್ನುಯಾತ್ |
ಪ್ರಾತಃಕಾಲೇ ಪಠೇನ್ನಿತ್ಯಂ ಸರ್ವ ದುಃಖೋಪ ಶಾಂತಯೇ |
ಪಠಂತು ಚಿಂತಯೇದ್ದೇವೀಂ ಸರ್ವಾಭರಣ ಭೂಷಿತಾಮ್ || 19 ||
ಇತಿ ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ಸಂಪೂರ್ಣಮ್
****

ವರಮಹಾಲಕ್ಷ್ಮಿ ಹಬ್ಬದ ಬಗ್ಗೆ ಕೆಲವು ಮಾಹಿತಿ - by ನರಹರಿ ಸುಮಧ್ವ
ಪ್ರಶ್ನೆ: ವರಮಹಾಲಕ್ಷ್ಮಿ ವ್ರತವನ್ನು ಎಂದು ಆಚರಿಸಲಾಗುತ್ತದೆ?
ಉತ್ತರ : ಈ ವ್ರತ ಯಾವುದೇ ತಿಥಿಗೆ ಸಂಬಂಧಿಸಿದ್ದಲ್ಲ. ಶ್ರಾವಣಮಾಸದ ಹುಣ್ಣಿಮೆಯ ಸಮೀಪದ ಶುಕ್ರವಾರ, ಸಾಮಾನ್ಯವಾಗಿ ಎರಡನೇ ಶುಕ್ರವಾರ ಅಥವಾ ಕೆಲವೊಮ್ಮೆ ಮೂರನೇ ಶುಕ್ರವಾರ ಆಚರಿಸಲಾಗುತ್ತದೆ.
ಪ್ರಶ್ನೆ : ವರಮಹಾಲಕ್ಷ್ಮಿ ಹಬ್ಬವನ್ನು ಎರಡನೇ ಶುಕ್ರವಾರವೇ ಮಾಡಬೇಕೇ ಅಥವಾ ಹುಣ್ಣಿಮೆಯ ಸಮೀಪದ ಶುಕ್ರವಾರ ಮಾಡಬಹುದಾ ?
ಉತ್ತರ : ಭವಿಷ್ಯೋತ್ತರ ಪುರಾಣ ವಾಕ್ಯ ರೀತ್ಯಾ
"ಶ್ರಾವಣೇ ಶುಕ್ಲಪಕ್ಷೇ ತು ಪೂರ್ಣಿಮೋಪಾಂತ್ಯಭಾರ್ಗವೇಮತ್ತು
"ಶುಕ್ಲಪಕ್ಷೇ ಪೌರ್ಣಮಾಸ್ಯಾಂ ಶ್ರಾವಣ್ಯಾಂ ತು ಭೃಗೋರ್ದಿನೇ" "ಶ್ರಾವಣಮಾಸದ ಹುಣ್ಣಿಮೆಯ ಶುಕ್ರವಾರದಂದು" ಎಂದು ಹೇಳಲ್ಪಟ್ಟಿದೆ. ಹುಣ್ಣಿಮೆಯಂದೇ ಶುಕ್ರವಾರ ಬಂದರೆ ಅದಕ್ಕಿಂತ ಹತ್ತಿರದ ಶುಕ್ರವಾರ ಬೇರೆ ಯಾವುದು ಆಗಲು ಸಾಧ್ಯ.
ಹೀಗಾಗಿ "ಶ್ರಾವಣಮಾಸದ ಹುಣ್ಣಿಮೆಯ ದಿನದಂದು ಶುಕ್ರವಾರ ಬಂದರೆ ಅದು ಮೂರನೇ ಶುಕ್ರವಾರ ಆದರೂ ಅಂದೇ ಈ ವ್ರತವನ್ನು ಆಚರಿಸಬೇಕು. ಹುಣ್ಣಿಮೆಯ ದಿನದಂದು ಶುಕ್ರವಾರ ಇಲ್ಲದಿದ್ದರೆ ಹುಣ್ಣಿಮೆಗೆ ಹತ್ತಿರದಲ್ಲಿ ಇರುವ ಶುಕ್ರವಾರದಂದು (ಎರಡನೇ ಶುಕ್ರವಾರ) ಆಚರಣೆ ಮಾಡಬೇಕು. ಹುಣ್ಣಿಮೆಯಂದು ಶುಕ್ರವಾರ ಬರುವುದು ಅಪರೂಪ ಆದ್ದರಿಂದ ಎರಡನೇ ಶುಕ್ರವಾರದಂದೇ ಈ ಹಬ್ಬವನ್ನು ಆಚರಣೆ ಮಾಡುತ್ತಾ ಬರುತ್ತಿದ್ದೇವೆ.
ಪ್ರಶ್ನೆ : ವರಮಹಾಲಕ್ಷ್ಮಿ ಪೂಜೆಗೆ ಲಕ್ಷ್ಮೀ ಜೊತೆಗೆ ಶ್ರೀಹರಿಯನ್ನೂ ಪೂಜಿಸಬೇಕೆ ?
ಉತ್ತರ : ಹೌದು. ಶ್ರೀಹರಿ ಮತ್ತು ಲಕ್ಷ್ಮೀ ದೇವಿಯರು ನಿತ್ಯಾವಿಯೋಗಿಗಳು. ಪರಮಾತ್ಮನ ಪೂಜೆ ಸಮಯದಲ್ಲೂ ಮತ್ತು ಲಕ್ಷ್ಮೀ ಪೂಜೆಯಲ್ಲೂ ಲಕ್ಷೀಸಮೇತನಾದ ಶ್ರೀಹರಿಯನ್ನೇ ಪೂಜಿಸಬೇಕು.
ಪ್ರಶ್ನೆ: ಏಕಾದಶಿ ವರಮಹಾಲಕ್ಷ್ಮಿ ಹಬ್ಬ ಬಂದರೆ ಏನು ಮಾಡಬೇಕು?
ಉತ್ತರ : ಅಂದು ಪೂಜೆ ಮಾಡಿ ನೈವೇದ್ಯವನ್ನು ದ್ವಾದಶಿ ದಿನ ಮಾಡತಕ್ಕದ್ದು. ಲಕ್ಷ್ಮೀದೇವಿಗೆ ಕೂಡ ಅಂದು ನೈವೇದ್ಯವಿಲ್ಲ.
ಪ್ರಶ್ನೆ : ಮಹಾಲಕ್ಷ್ಮಿ ಎಷ್ಟನೇ ಕಕ್ಷ್ಯ?
ಉತ್ತರ : ಮಹಾಲಕ್ಷ್ಮಿ ಎರಡನೇ ಕಕ್ಷ್ಯ.
ಪ್ರಶ್ನೆ : ಮಹಾಲಕ್ಷ್ಮಿ ಪರಮಾತ್ಮನ ದೇಹದ ಯಾವ ಭಾಗದಲ್ಲಿ ಎಂದೆಂದೂ ಇರುತ್ತಾಳೆ ?
ಉತ್ತರ : ಪರಮಾತ್ಮನ ವಕ್ಷಸ್ಥಳದಲ್ಲಿ.
ಪ್ರಶ್ನೆ : ಮಹಾಲಕ್ಷ್ಮಿ ಪರಮಾತ್ಮನ ಯಾವ ರೂಪದಲ್ಲಿ ಪದ್ಮಾವತಿಯಾಗಿ ವರಿಸಿದ್ದಳು ?
ಉತ್ತರ : ಪರಮಾತ್ಮನ ಶ್ರೀನಿವಾಸ ರೂಪದಲ್ಲಿ ಪದ್ಮಾವತಿಯಾಗಿ ವರಿಸಿದ್ದಳು
ಪ್ರಶ್ನೆ: ಕೃಷ್ಣಾವತಾರದಲ್ಲಿ ಮಹಾಲಕ್ಷ್ಮಿ ಯಾರಾಗಿ ಅವತರಿಸಿದ್ದಳು ?
ಉತ್ತರ : ಕೃಷ್ಣಾವತಾರದಲ್ಲಿ ರುಕ್ಮಿಣಿ ಸತ್ಯಭಾಮಳಾಗಿಯೂ ಅವತರಿಸಿದ್ದಳು
ಪ್ರಶ್ನೆ : ಮಹಾಲಕ್ಷ್ಮಿ ಪರಮಾತ್ಮನ ಯಾವ ಮೂರು ಪ್ರಸಿದ್ಧ ರೂಪಗಳಿಂದ ಸೇವಿಸುತ್ತಾಳೆ ?
ಉತ್ತರ : ತನ್ನ ಶ್ರೀ ಭೂ ಮತ್ತು ದುರ್ಗಾ ರೂಪದಿಂದ ಸೇವಿಸುತ್ತಾಳೆ
ಪ್ರಶ್ನೆ : ಶ್ರಾವಣ ಮಾಸದಲ್ಲಿ ವ್ರತ ಇದ್ದಾಗ ಈ ವ್ರತ ಬಂದರೆ ನೈವೇದ್ಯಕ್ಕೆ ವಿಧವಿಧವಾದ ಹಣ್ಣುಗಳನ್ನು ಇಡಬಹುದಾ?
ಉತ್ತರ : ಇಲ್ಲ. ಮಾವಿನ ಹಣ್ಣು ನೈವೇದ್ಯಕ್ಕೆ ಬರುತ್ತದೆ.
ಉಳಿದ ಹಣ್ಣುಗಳು ಬರುವುದಿಲ್ಲ. ಕೆಲವು ಮಠಗಳಿಗೆ ತೆಂಗಿನಕಾಯಿ, ಕೊಬ್ಬರಿ ಬರುತ್ತದೆ. ಅವರು ಉಪಯೋಗಿಸಬಹುದು
ಪ್ರಶ್ನೆ : ಲಕ್ಷೀದೇವಿಯನ್ನು ದಾಸರು ಎಲ್ಲಿಯ ನಿವಾಸಿನಿ ಎಂದಿದ್ದಾರೆ ?
ಉತ್ತರ : ಕರವೀರನಿವಾಸಿನಿ.
ಪ್ರಶ್ನೆ . : ತ್ರಿವಿಕ್ರಮ ದೇವರ ಪತ್ನಿಯಾದ ಲಕ್ಷ್ಮಿ ರೂಪದ ಹೆಸರೇನು ?
ಉತ್ತರ : ರಮಾ
ಪ್ರಶ್ನೆ : ಜಯಂತಿ ಎಂಬ ಹೆಸರಿನಿಂದ ಯಾವ ಪರಮಾತ್ಮನ ಅವತಾರದಲ್ಲಿ ಪತ್ನಿಯಾಗಿದ್ದಳು ಲಕ್ಷ್ಮೀ ದೇವಿ.
ಉತ್ತರ : ಪರಮಾತ್ಮನ ಋಷಭಾವತಾರದಲ್ಲಿ ಜಯಂತಿ ನಾಮಕಳಾಗಿ ಪತ್ನಿಯಾಗಿದ್ದಳು
ಪ್ರಶ್ನೆ : ಭಾರ್ಗವಿ ನಾಮಕಳಾಗಿ ಲಕ್ಷ್ಮೀ ಯಾರ ಮಗಳಾಗಿ ಅವತರಿಸಿದಳು ?
ಉತ್ತರ : ಭೃಗು ಮಹರ್ಷಿ ಮತ್ತು ಖ್ಯಾತಿ ದಂಪತಿಗಳ ಮಗಳಾಗಿ ಭಾರ್ಗವಿಯಾಗಿ ಅವತರಿಸಿದಳು
ಪ್ರಶ್ನೆ : ಚಂದ್ರನ ಸಹೋದರಿಯಾಗಿ ಲಕ್ಷ್ಮೀ ಯಾರ ಮಗಳಾಗಿ ಅವತರಿಸಿದಳು?
ಉತ್ತರ : ಸಮುದ್ರ ರಾಜನ ಮಕ್ಕಳಾಗಿ ಸಮುದ್ರಮಥನ ಕಾಲದಲ್ಲಿ ಚಂದ್ರ ಮತ್ತು ಲಕ್ಷ್ಮೀ ಅವತರಿಸಿದ್ದರು
- ನರಹರಿ ಸುಮಧ್ವ
******
ಶ್ರೀ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ರೋಧಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಥಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತುಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟ್ಯೈ ನಮಃ
ಓಂ ದಾರಿದ್ರ್ಯ ನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣ ಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮ ಗತಾನಂದಾಯೈ ನಮಃ
ಓಂ ವರಲಕ್ಷ್ಮ್ಯೈ ನಮಃ (90)
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ನಮಃ
ಓಂ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಙ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)
*********
ಶ್ರೀ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ
ಓಂ ಪ್ರಕೃತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸರ್ವಭೂತಹಿತಪ್ರದಾಯೈ ನಮಃ
ಓಂ ಶ್ರದ್ಧಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಾಲಯಾಯೈ ನಮಃ (10)
ಓಂ ಪದ್ಮಾಯೈ ನಮಃ
ಓಂ ಶುಚ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯಪುಷ್ಟಾಯೈ ನಮಃ
ಓಂ ವಿಭಾವರ್ಯೈ ನಮಃ (20)
ಓಂ ಅದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ರೋಧಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ (30)
ಓಂ ಋದ್ಧಯೇ ನಮಃ
ಓಂ ಅನಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತ್ರೇ ನಮಃ (40)
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ (50)
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಥಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ (60)
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತುಲಾಯೈ ನಮಃ
ಓಂ ಆಹ್ಲೋದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ (70)
ಓಂ ತುಷ್ಟ್ಯೈ ನಮಃ
ಓಂ ದಾರಿದ್ರ್ಯ ನಾಶಿನ್ಯೈ ನಮಃ
ಓಂ ಪ್ರೀತಿಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ (80)
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣ ಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮ ಗತಾನಂದಾಯೈ ನಮಃ
ಓಂ ವರಲಕ್ಷ್ಮ್ಯೈ ನಮಃ (90)
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ
ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ನಮಃ
ಓಂ ದೇವ್ಯೈ ನಮಃ
ಓಂ ವಿಷ್ಣು ವಕ್ಷಃಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ (100)
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಙ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ (108)
*********
Kirnotsav at Mahalakshmi temple, Kolhapur
The traditional 3 days long kirnotsav festival (sun ray’s festival) at Karveer Nivasini Goddess Shree Mahalakshmi temple, Kolhapur
The rare festival is celebrated two times in a year, first Jan 31 to February 2 and secondly from November 9 to 11.
In this rare and sacred Sohala (function), rays of west sun fall on goddess Mahalakshmi’s idol, which enter from ‘Garud Mandap’.
On first days , the rays touch the idols feet, on the second day rays fall on feet and stomach and on third day, rays fall on feet, stomach and face of the idol of the goddess.
So great of our ancient architects.
Please enjoy the priceless experience of mata shree mahalakshmi’s divya Darshan with sun rays touching touching the goddess today.
May the goddess bless us all with peace, righteousness.
***
ಲಕ್ಷ್ಮಿ ದೇವಿಯ ಬಗ್ಗೆ ನಿಮಗೆಷ್ಟು ಗೊತ್ತು..? ಈಕೆಯ ಪೂಜೆಯಲ್ಲಿ ಪಠಿಸುವ ಮಂತ್ರಗಳಿವು..!
ಲಕ್ಷ್ಮಿ ದೇವಿಯು ಸಂಪತ್ತಿನ ಅಧಿ ದೇವತೆಯಾದರೆ, ಮತ್ತೊಂದೆಡೆ ಭಗವಾನ್ ವಿಷ್ಣುವಿನ ಪತ್ನಿ. ಅಷ್ಟು ಮಾತ್ರವಲ್ಲ, ಲಕ್ಷ್ಮಿ ದೇವಿಯ ಬಗ್ಗೆ ನಿಮಗೆ ತಿಳಿಯದ ವಿಷಯಗಳು ಸಾಕಷ್ಟಿವೆ... ಆ ವಿಶೇಷ ಸಂಗತಿಗಳಾವುವು..?
ಹಿಂದೂ ಧರ್ಮೀಯರು, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಮತ್ತು ಅದೃಷ್ಟದ ದೇವತೆ ಎಂದು ಪರಿಗಣಿಸುತ್ತಾರೆ. ಮತ್ತೊಂದೆಡೆ, ಸಾಪ್ತಾಹಿಕ ದಿನಗಳಲ್ಲಿ ಅವರ ದಿನವನ್ನು ಶುಕ್ರವಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿನದಂದು ನಾವು ನಿಮಗೆ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಒಂದಿಷ್ಟು ಸರಳ ಮಾರ್ಗಗಳನ್ನು ಹೇಳುತ್ತೇವೆ. 'ಶ್ರೀ' ಅಥವಾ 'ಲಕ್ಷ್ಮಿ' ಯನ್ನು ವೇದಗಳಲ್ಲಿ ಸಂಪತ್ತು ಮತ್ತು ಅದೃಷ್ಟ, ಶಕ್ತಿ ಮತ್ತು ಸೌಂದರ್ಯದ ದೇವತೆಯಾಗಿ ಚಿತ್ರಿಸಲಾಗಿದೆ. ತನ್ನ ಮೊದಲ ಅವತಾರದಲ್ಲಿ, ಪುರಾಣಗಳ ಪ್ರಕಾರ, ಅವಳು ಭೃಗು ಋಷಿಯ ಮುದ್ದಿನ ಮಗಳಾಗಿದ್ದಳು. ಅವಳು ನಂತರ ಸಮುದ್ರದ ಮಂಥನದ ಸಮಯದಲ್ಲಿ ಸಾಗರದಿಂದ ಜನಿಸಿದಳು. ಭಗವಾನ್ ವಿಷ್ಣು ಅವತಾರ ಮಾಡಿದಾಗ ವಿಷ್ಣುವಿನ ಹೆಂಡತಿಯಾಗಿ, ಅವಳು ಆತನ ಜೀವನ ಸಂಗಾತಿಯಾಗಿ ಜನ್ಮ ತೆಗೆದುಕೊಳ್ಳುತ್ತಾಳೆ. ಭಗವಾನ್ ವಿಷ್ಣು ವಾಮನ, ರಾಮ ಮತ್ತು ಕೃಷ್ಣನಂತೆ ಕಾಣಿಸಿಕೊಂಡಾಗ ಅವಳು ಪದ್ಮ (ಅಥವಾ ಕಮಲಾ), ಸೀತಾ ಮತ್ತು ರುಕ್ಮಣಿಯಾಗಿ ಕಾಣಿಸಿಕೊಂಡಳು.
ಲಕ್ಷ್ಮಿಯ ಅರ್ಥ
ಹಿಂದೂಗಳಲ್ಲಿ, ಲಕ್ಷ್ಮಿ ದೇವಿಯೆಂದರೆ ಅದೃಷ್ಟದ ದೇವತೆ. 'ಲಕ್ಷ್ಮಿ' ಎಂಬ ಪದವು ಸಂಸ್ಕೃತ ಪದ "ಲಕ್ಷ್ಯ" ದಿಂದ ಬಂದಿದೆ, ಇದರರ್ಥ ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆ. ಇದಲ್ಲದೆ ಅವಳು ಶುದ್ಧತೆ, ಔದಾರ್ಯ ಮತ್ತು ಸೌಂದರ್ಯ, ಅನುಗ್ರಹ ಮತ್ತು ಆಕರ್ಷಣೆಯ ದೇವತೆಯೂ ಹೌದು. ಲಕ್ಷ್ಮಿ ದೇವಿಯ ಆರಾಧನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಪ್ರದಾಯದ ಒಂದು ಭಾಗವಾಗಿದೆ. ಲಕ್ಷ್ಮಿ ದೇವಿಯನ್ನು ತಾಯಿಯಂತೆ ಪರಿಗಣಿಸಲಾಗುತ್ತದೆ, ಆದ್ದರಿಂದ ಅವಳನ್ನು "ದೇವಿ" (ದೇವತೆ) ಬದಲಿಗೆ "ಮಾತಾ" (ತಾಯಿ) ಎಂದು ಸಂಬೋಧಿಸಲಾಗುತ್ತದೆ. ಅದೃಷ್ಟದ ಜೊತೆಗೆ ಸಂಪತ್ತು ಮತ್ತು ಧಾನ್ಯಗಳನ್ನು ಪಡೆಯಲು ಅಥವಾ ಸಂರಕ್ಷಿಸಲು ಬಯಸುವವರು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ.
ಲಕ್ಷ್ಮಿ ದೇವಿಯು ವಿಷ್ಣುವಿನ ಸಕ್ರಿಯ ಶಕ್ತಿಯಾಗಿದ್ದಾಳೆ. ಅವಳ ನಾಲ್ಕು ಕೈಗಳು ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ದಯಪಾಲಿಸುವ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಜೈನ ಸ್ಮಾರಕಗಳಲ್ಲಿ ಲಕ್ಷ್ಮಿಯ ಪ್ರಾತಿನಿಧ್ಯವೂ ಕಂಡುಬರುತ್ತದೆ. ಟಿಬೆಟ್, ನೇಪಾಳ ಮತ್ತು ಆಗ್ನೇಯ ಏಷ್ಯಾದ ಬೌದ್ಧ ಪಂಥಗಳಲ್ಲಿ, ವಸುಧಾರಾ ದೇವಿಯು ಹಿಂದೂ ದೇವತೆ ಲಕ್ಷ್ಮಿಯ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತಾಳೆ. ಆದರೆ ಇವರಲ್ಲಿ ಸಣ್ಣ ಸಾಂಕೇತಿಕ ವ್ಯತ್ಯಾಸಗಳಿವೆ.
ದೇವತೆ ಲಕ್ಷ್ಮಿ ಪ್ರತಿಮೆ
ಲಕ್ಷ್ಮಿಯ ಚಿತ್ರದಲ್ಲಿ, ಅವಳನ್ನು ಸಾಮಾನ್ಯವಾಗಿ ಆಕರ್ಷಕವಾಗಿ ಸುಂದರವಾಗಿ ವಿವರಿಸಲಾಗಿದೆ ಮತ್ತು ಸರೋವರದ ಮೇಲೆ ತೆರೆದ ಎಂಟು ದಳಗಳ ಕಮಲದ ಹೂವಿನ ಮೇಲೆ ಕುಳಿತು ಅಥವಾ ನಿಂತು ಅವಳ ಎರಡೂ ಕೈಗಳಲ್ಲಿ ಕಮಲವನ್ನು ಹಿಡಿದಿದ್ದಾಳೆ. ಈ ಕಾರಣಕ್ಕಾಗಿ ಆಕೆಗೆ ಪದ್ಮ ಅಥವಾ ಕಮಲಾ ಎಂಬ ಹೆಸರು ಬಂದಿದೆ ಎನ್ನುವ ನಂಬಿಕೆಯಿದೆ. ಅವಳು ಕಮಲದ ಹಾರವನ್ನು ಸಹ ಅಲಂಕರಿಸಿದ್ದಾಳೆ. ಆಗಾಗ್ಗೆ ಅವುಗಳ ಎರಡೂ ಬದಿಗಳಲ್ಲಿ ಆನೆಗಳು ಮಡಿಕೆಯಲ್ಲಿ ನೀರನ್ನು ಚೆಲ್ಲುತ್ತಿರುವಂತೆ ಕೂಡ ಚಿತ್ರಿಸಲಾಗಿದೆ. ಈಕೆಯ ಬಣ್ಣವನ್ನು ಗಾಢ, ಗುಲಾಬಿ, ಚಿನ್ನ, ಹಳದಿ ಅಥವಾ ಬಿಳಿ ಎಂದು ವಿವರಿಸಲಾಗಿದೆ. ಆದರೆ ವಿಷ್ಣುವಿನ ಬಳಿ ಇದ್ದಾಗ ಆಕೆಯನ್ನು ಕೇವಲ 2 ಕೈಗಳಿಂದ ಚಿತ್ರಿಸಲಾಗಿದೆ.
ಈಕೆಯ ನಾಲ್ಕು ಕೈಗಳು ಪದ್ಮ, ಶಂಖ ಚಿಪ್ಪು, ಅಮೃತದ ಕಲಶ ಮತ್ತು ಬಿಲ್ವಾ ಹಣ್ಣುಗಳನ್ನು ಹಿಡಿದಿರುತ್ತವೆ. ಕೆಲವೊಮ್ಮೆ, ಬಿಲ್ವಾ ಬದಲಿಗೆ, ಮತ್ತೊಂದು ರೀತಿಯ ಹಣ್ಣನ್ನು ಕೂಡ ಹಿಡಿದಿರುತ್ತಾಳೆ. ಅವಳ ಕೈಯಿಂದ ಚಿನ್ನದ ನಾಣ್ಯಗಳು ಬೀಳುವುದನ್ನು ಕೂಡ ನೀವು ನೋಡಿರಬಹುದು. ಲಕ್ಷ್ಮಿಯ ಈ ರೂಪವನ್ನು ಆರಾಧಿಸುವವರು ಸಂಪತ್ತನ್ನು ಸಾಧಿಸುತ್ತಾರೆ ಎನ್ನುವ ನಂಬಿಕೆಯೂ ಇದೆ. ಅವಳನ್ನು ಎಂಟು ಕೈಗಳಿಂದ ತೋರಿಸಿದಾಗ, ಅವಳ ಕೈಗಳಲ್ಲಿ ಬಿಲ್ಲು-ಬಾಣ, ಜಟಿಲ ಮತ್ತು ಚಕ್ರವನ್ನು ಜೋಡಿಸಲಾಗುತ್ತದೆ. ಲಕ್ಷ್ಮಿಯು ಈ ರೂಪದಲ್ಲಿ ದುರ್ಗಾ ದೇವಿಯಂತೆ ಕಾಣುತ್ತಾಳೆ. ದುರ್ಗೆಯು ಮಹಾಲಕ್ಷ್ಮಿಯ ಒಂದು ಅಂಶವಾಗಿದ್ದಾಳೆ.
ಲಕ್ಷ್ಮಿ ದೇವಿಯ ಚಿತ್ರ
ಲಕ್ಷ್ಮಿ ದೇವಿಯನ್ನು ಚಿನ್ನ ಅಥವಾ ಹಳದಿ ಬಣ್ಣದಲ್ಲಿ ಚಿತ್ರಿಸಿದರೆ, ಅದು ಅವಳನ್ನು ಎಲ್ಲಾ ಸಂಪತ್ತಿನ ಮೂಲವೆಂದು ಸೂಚಿಸುತ್ತದೆ. ಬಿಳಿಯಾಗಿದ್ದರೆ, ಪ್ರಕೃತಿಯ ಶುದ್ಧ ಸ್ವರೂಪವನ್ನು ಪ್ರತಿನಿಧಿಸುತ್ತದೆ. ಗುಲಾಬಿ ಬಣ್ಣವು ಹೆಚ್ಚು ಸಾಮಾನ್ಯವಾಗಿದೆ, ಅವಳು ಎಲ್ಲರ ತಾಯಿಯಾಗಿರುವುದರಿಂದ ಜೀವಿಗಳ ಬಗ್ಗೆ ಅವಳ ಸಹಾನುಭೂತಿಯನ್ನು ಸೂಚಿಸುತ್ತದೆ. ಕಮಲದ ಹೂವಿನ ವಿವಿಧ ಹಂತಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಜಗತ್ತು ಮತ್ತು ಜೀವಿಗಳನ್ನು ಪ್ರತಿನಿಧಿಸುತ್ತವೆ.
ಲಕ್ಷ್ಮಿಯ ಕೈಯಲ್ಲಿ ಹಣ್ಣುಗಳು
- ಚಿತ್ರದಲ್ಲಿ ಮಾತಾ ಲಕ್ಷ್ಮಿ ತನ್ನ ಕೈಯಲ್ಲಿ ತೆಂಗಿನಕಾಯಿ, ಶಂಖ, ನೀರು ಇತ್ಯಾದಿಗಳನ್ನು ಹಿಡಿದಿದ್ದರೆ ಆಕೆ ಸೃಷ್ಟಿಯ ಮೂರು ಹಂತಗಳನ್ನು ಸೂಚಿಸುತ್ತಿದ್ದಾಳೆ ಎಂದರ್ಥ. - ಮತ್ತೊಂದೆಡೆ, ಅವಳ ಕೈಯಲ್ಲಿ ದಾಳಿಂಬೆ ಅಥವಾ ನಿಂಬೆ ಇದ್ದರೆ, ಅದು ಇಡೀ ಜಗತ್ತು ತನ್ನ ನಿಯಂತ್ರಣದಲ್ಲಿದೆ ಎಂದು ತೋರಿಸುತ್ತದೆ ಮತ್ತು ಅವಳು ಅವೆಲ್ಲವನ್ನೂ ಜಯಿಸುತ್ತಾಳೆ.
- ಅವಳು ಕೈಯಲ್ಲಿ ಬಿಲ್ವಾ ಹಣ್ಣನ್ನು ಹಿಡಿದಿದ್ದರೆ, ಅದು ಪ್ರಾಸಂಗಿಕವಾಗಿ, ತುಂಬಾ ಟೇಸ್ಟಿ ಅಥವಾ ಆಕರ್ಷಕವಾಗಿಲ್ಲ, ಆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು - ಇದು ಮೋಕ್ಷಕ್ಕಾಗಿ ಮತ್ತು ಆಧ್ಯಾತ್ಮಿಕ ಜೀವನದ ಅತ್ಯುನ್ನತ ಫಲವಾಗಿದೆ.
- ಲಕ್ಷ್ಮಿ ದೇವಿಯ ನ್ನುಕೆಲವು ಶಿಲ್ಪಗಳಲ್ಲಿ, ಗೂಬೆಯನ್ನು ಅವಳ ವಾಹಕ-ವಾಹನವೆಂದು ತೋರಿಸಲಾಗಿದೆ. ಅದೇ ಸಮಯದಲ್ಲಿ, ಲಕ್ಷ್ಮಿ ದೇವಿಯ ವಾಹನವನ್ನು ನವಿಲು ಎಂದೂ ಕೂಡ ಚಿತ್ರಿಸಲಾಗಿದೆ.
ಲಕ್ಷ್ಮಿ ಬೀಜ ಮಂತ್ರ
''ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ''
ಮಹಾಲಕ್ಷ್ಮಿ ಮಂತ್ರ
''ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್
ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ||''
''ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್''
''ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೇ ನಮಃ''
ಲಕ್ಷ್ಮಿ ಗಾಯತ್ರಿ ಮಂತ್ರ
''ಓಂ ಶ್ರೀ ಮಹಾಲಕ್ಷ್ಮೈ ಚ ವಿಧ್ಮಹೇ ವಿಷ್ಣುಪತ್ನೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್
ಓಂ ಶ್ರೀ ಮಹಾಲಕ್ಷ್ಮೈ ಚ ವಿಧ್ಮಹೇ ವಿಷ್ಣುಪತ್ನೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ''
***
ವರಮಹಾಲಕ್ಷ್ಮಿ ಹಬ್ಬ ಆಚರಣೆ ಎಂದು ?
ಬೇರೆ ವ್ರತಗಳಂತೆ ಈ ಹಬ್ಬಕ್ಕೆ ಯಾವುದೇ ನಿರ್ದಿಷ್ಟ ತಿಥಿಯಿಲ್ಲ. ಶ್ರಾವಣ ಶುಕ್ಲ ಪಕ್ಷದ ಹುಣ್ಣಿಮೆಯ ಸಮೀಪದ ಶುಕ್ರವಾರ ಅಂದರೆ ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಅಥವಾ ಮೂರನೇ ಶುಕ್ರವಾರ ಈ ವ್ರತವನ್ನು ಆಚರಿಸುವ ಸಂಪ್ರದಾಯ ಅರ್ಥಾತ್ ಶ್ರಾವಣಮಾಸದ ಹುಣ್ಣಿಮೆಯ ಸಮೀಪದ ಶುಕ್ರವಾರ.
ಹೆಜ್ಜೆಯ ಮೇಲೆ ಹೆಜ್ಜೆಯನ್ನಿಕ್ಕುತ್ತಾ ಬಾರಮ್ಮ* – ಲಕ್ಷ್ಮೀ ಬಾರಮ್ಮ
ಪುರಂದರದಾಸರು ತಮ್ಮ ಲಕ್ಷ್ಮೀ ದೇವಿಯ ಕುರಿತಾದ ದೇವರನಾಮ
ಭಾಗ್ಯದ ಲಕ್ಷ್ಮಿ ಬಾರಮ್ಮ ಕೃತಿಯಲ್ಲಿ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ|
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ|
ಎಂದಿದ್ದಾರೆ.
- ಇಲ್ಲಿ ಒಂದು ಪ್ರಶ್ನೆ ಬರುತ್ತದೆ. “ಹೆಜ್ಜೆಯ ಮೇಲೆ ಹೆಜ್ಜೆಯನು ಇಟ್ಟರೆ” ಮುಂದೆ ಹೋಗುವುದು ಹೇಗೆ ?. ಲಕ್ಷ್ಮೀದೇವಿ ತನ್ನ ಹೆಜ್ಜೆಯ ಮೇಲೆ ಹೆಜ್ಜೆಯ ಇಡುವುದಿಲ್ಲ. ಬದಲಾಗಿ ಪರಮಾತ್ಮನ ಅನುಸರಿಸಿ ಅವನು ಹೆಜ್ಜೆಯನು ಇಟ್ಟ ಕಡೆ ತನ್ನ ಹೆಜ್ಜೆಯನ್ನು ಇಟ್ಟು ಬರುತ್ತಾಳೆ. ಅರ್ಥಾತ್ ತಾನು ಬರಬೇಕಾದರೆ ಪರಮಾತ್ಮನ ಅನುಸರಿಸಿಯೇ ಬರುತ್ತಾಳೆ.
ನಾವು ಲಕ್ಷ್ಮೀದೇವಿಯ ಪೂಜಿಸುವಾಗ ಅವಳೊಬ್ಬಳ ಪೂಜಿಸದೆ ಪರಮಾತ್ಮನ ಸಹಿತವಾಗಿ ಪೂಜಿಸಬೇಕು. ಲಕ್ಷ್ಮೀ ದೇವಿ ಯಾವಾಗಲೂ ಪರಮಾತ್ಮನ ಎಡದ ತೊಡೆಯ ಮೇಲೆ ಕುಳ್ಳಿರುತ್ತಾಳೆ. ತನ್ನ ಶ್ರೀ ಭೂ ದುರ್ಗಾದಿ ಮೂರೂ ರೂಪಗಳಿಂದ ಸೇವಿಸುತ್ತಾಳೆ. "ಎಡಕೆ ಭೂಮಿ ಬಲಕೆ ಶ್ರೀಯು ಎದುರಿನಲ್ಲಿ ದುರ್ಗಾದೇವಿ, ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ" ಎಂದಿದ್ದಾರೆ ದಾಸರಾಯರು.
ಎಣೆಯಿಲ್ಲದಷ್ಟು ಭೃತ್ಯರಿದ್ದರೂ ಪರಮಾತ್ಮನ ಸೇವೆಯನ್ನು ತಾನೇ ಮಾಡುತ್ತಾಳೆ. ಛತ್ರ ಚಾಮರ ವ್ಯಜನ ಪರ್ಯಂಕ ರೂಪದಲ್ಲೂ, ಸರ್ವಕಾಲದಲ್ಲೂ, ಸರ್ವದೇಶದಲ್ಲೂ ನಿರಂತರ ಸೇವೆ ಮಾಡುವ ಭಾಗ್ಯವ ದಾಸರು - ಏನು ಧನ್ಯಳೋ ಲಕುಮಿ ಎಂದಿದ್ದಾರೆ.
ಮಹಾಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ದೇಶತ: ಕಾಲತ: ವ್ಯಾಪ್ತತ: ಸಮಳೇ. ಆದ್ದರಿಂದಲೇ ಅವಳಿಗೆ ಸಮನಾ ಎಂಬ ಹೆಸರಿದೆ. ಎಲ್ಲ ರೀತಿಯಿಂದಲೂ ಪರಮಾತ್ಮನಿಗೆ ಸುಳ್ಳಾದರೂ ಗುಣದಲ್ಲಿ ಸಮಳಲ್ಲ, ಅದಕ್ಕೆ ಅವಳನ್ನು ಎರಡನೇ ಕಕ್ಷ ತಾರತಮ್ಮದಲ್ಲಿ ಹೇಳಿದ್ದಾರೆ.
ಅವಳಿಗೆ ಎಂದೆಂದಿಗೂ ದೇಹನಾಶವಿಲ್ಲದುದರಿಂದ ಅಕ್ಷರಾ ಎಂದು ಕರೆಯಲ್ಪಡುತ್ತಾಳೆ.
ಶ್ರೀಹರಿಯ ಪ್ರತಿಯೊಂದು ಅವತಾರದಲ್ಲೂ ತಾನೂ ಅವತರಿಸಿ ಪರಮಾತ್ಮನ ಸೇವೆ ಮಾಡಿದ್ದಾಳೆ. ಋಷಭಾವತಾರದಲ್ಲಿ ಜಯಂತಿ ಎಂಬ ಹೆಸರಿನಿಂದಲೂ, ಮುಂದೆ ಭಾರ್ಗವಿಯಾಗಿ ಭೃಗು ಋಷಿ ಮತ್ತು ಖ್ಯಾತಿ ದಂಪತಿಗಳಲ್ಲೂ, ಸಮುದ್ರತನಯೆಯಾಗಿ ಸಮುದ್ರಮಥನ ಕಾಲದಲ್ಲಿ ಅವತರಿಸಿದ್ದಾಳೆ.
ಹಾಗೆಯೇ ಪರಮಾತ್ಮನ ದಶಾವತಾರಗಳಲ್ಲಿ ; ಮತ್ಸ್ಯಾವತಾರ - ವೇದಾ, ಕೂರ್ಮಾವತಾರ - ವೇದಾವತಿ, ವರಾಹಾವತಾರ - ಧರಿಣಿ/ಧಾತ್ರಿ, ನರಸಿಂಹಾವತಾರದಲ್ಲಿ ನೇರವಾಗಿ ಲಕ್ಷ್ಮೀಯಾಗಿ ಬಂದಳು, ವಾಮನಾವತಾರದಲ್ಲಿ ಸುಖಾ, ಪರಶು ರಾಮಾವತಾರದಲ್ಲಿ ಹರಿಣಿಯಾಗಿ,
ರಾಮಾವತಾರದಲ್ಲಿ ಸೀತೆಯಾಗಿ, ಕೃಷ್ಣಾವತಾರದಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯಾಗಿ, ಬುದ್ಧಾವತಾರದಲ್ಲಿ ರೇವತಿ ಮತ್ತು ಕಲ್ಕಿ ಅವತಾರದಲ್ಲಿ ಪ್ರಭಾ ಎಂಬ ಹೆಸರಿನಿಂದ ಲಕ್ಷ್ಮೀದೇವಿ ಶ್ರೀಹರಿಯ ಸೇವೆ ಮಾಡಿದ್ದಾಳೆ
ನರಹರಿ ಸುಮಧ್ವ
***
Kolhapur Mahalakshmi temple speciality
***
No comments:
Post a Comment