SEARCH HERE

Thursday, 8 April 2021

ಪುರಾಣ purana



ಭಾರತದ ಮಹಾನ್ ಪುರಾಣಗಳು ‌                        ‌      ‌       ‌                                                                                        ಅಷ್ಟಾದಶ ಪುರಾಣಗಳೆಂದು ಪ್ರಖ್ಯಾತವಾಗಿರುವ ಹದಿನೆಂಟು ಪುರಾಣಗಳನ್ನು ಭಗವಾನ್ ವೇದವ್ಯಾಸ ಮಹರ್ಷಿಗಳು ಬರೆದಿದ್ದಾರೆ. ಆ ಹದಿನೆಂಟು ಪುರಾಣಗಳು ಹೀಗಿವೆ :

ಮದ್ವಯಂ ಭದ್ವಯಂಚೈವ ಬ್ರತ್ರಯಂ ವ ಚತುಷ್ಟಯಂ ಅ ನಾ ಪ ಲಿಂ ಗ ಕೂ ಸ್ಕಾ ನಿ ಪುರಾಣಾನಿ ಪ್ರಚಕ್ಷತಃ

- ಮ ಕಾರದಿಂದ ಎರಡು ಪುರಾಣಗಳು 

- ಭ ಕಾರದಿಂದ ಎರಡು ಪುರಾಣಗಳು

- ಬ್ರ ಕಾರದಿಂದ ಮೂರು ಪುರಾಣಗಳು

- ವ ಕಾರದಿಂದ ನಾಲ್ಕು ಪುರಾಣಗಳು

- ಅ ಕಾರದಿಂದ ಒಂದು 

- ನ ಕಾರದಿಂದ ಒಂದು

- ಪ ಕಾರದಿಂದ ಒಂದು 

- ಲಿಂ ಕಾರದಿಂದ ಒಂದು 

- ಗ ಕಾರದಿಂದ ಒಂದು 

- ಕೂ ಕಾರದಿಂದ ಒಂದು 

-ಸ್ಕಾ ಕಾರದಿಂದ ಒಂದು ಒಟ್ಟು ಹದಿನೆಂಟು ಪುರಾಣಗಳಿವೆ.

 ‌                                                                                                              ೧ ಮತ್ಸ್ಯ ಪುರಾಣ 

೨ ಮಾರ್ಕಂಡೇಯ ಪುರಾಣ 

೩ ಭಾಗವತ ಪುರಾಣ 

೪ ಭವಿಷ್ಯತ್ ಪುರಾಣ 

೫ ಬ್ರಹ್ಮ ಪುರಾಣ

೬ ಬ್ರಹ್ಮಾಂಡ ಪುರಾಣ

೭ ಬ್ರಹ್ಮ ವೈವರ್ತ ಪುರಾಣ

೮ ವರಾಹ ಪುರಾಣ

೯ ವಾಮನ ಪುರಾಣ

೧೦ ವಾಯು ಪುರಾಣ

೧೧ ವಿಷ್ಣು ಪುರಾಣ

೧೨ ಅಗ್ನಿ ಪುರಾಣ

೧೩ ನಾರದ ಪುರಾಣ

೧೪ ಪದ್ಮ ಪುರಾಣ

೧೫ ಲಿಂಗ ಪುರಾಣ

೧೬ ಗರುಡ ಪುರಾಣ

೧೭ ಕೂರ್ಮ ಪುರಾಣ

೧೮ ಸ್ಕಂದ ಪುರಾಣ

                                                                                                        ೧ ಮತ್ಸ್ಯ ಪುರಾಣ

                                                                                                                                    ಈ ಮತ್ಸ್ಯ ಪುರಾಣದಲ್ಲಿ ೧೪೦೦೦ ಶ್ಲೋಕಗಳಿವೆ. ಪುರಾಣಗಳಲ್ಲಿ ಅತೀ ಪ್ರಾಚೀನವಾದುದು ಎಂದು ಕೆಲವು ವಿದ್ವಾಂಸರುಗಳ ಅಭಿಪ್ರಾಯ. ಇದರಲ್ಲಿ ಮಹಾವಿಷ್ಣುವಿನ ಪ್ರಥಮ ಅವತಾರವಾದ ಮತ್ಸ್ಯಾವತಾರ ಧರಿಸಿದ ಶ್ರೀಮನ್ನಾರಾಯಣನು ಈ ಪುರಾಣವನ್ನು ಮನುವಿಗೆ ಬೋಧಿಸಿದ್ದಾನೆ. ಸಾವಿತ್ರಿ ಚರಿತ್ರೆ, ಕಾರ್ತಿಕೇಯ ಚರಿತ್ರೆ, ಯಯಾತಿ ಚರಿತ್ರೆ ಮತ್ತು ಮಾನವ ಧರ್ಮಾಚರಣೆಯ ವಿಷಯಗಳು ವಾರಣಾಸಿ ಪ್ರಯಾಗ, ತ್ರಿಪುರದಹನ  ಮುಂತಾದ ಕ್ಷೇತ್ರ ವಿವರಗಳು ಈ ಪುರಾಣದಲ್ಲಿವೆ.

 ‌                                                                                         ೨ ಮಾರ್ಕಂಡೇಯ ಪುರಾಣ

 ‌                                                                                                                                                                       ಈ ಪುರಾಣದಲ್ಲಿ ೯೦೦೦ ಶ್ಲೋಕಗಳಿವೆ. ಇದು ‌ಜೈಮಿನಿ ಹಾಗೂ ಮಾರ್ಕಂಡೇಯ‌ ಮುನಿಗಳ ನಡುವಿನ ಸಂಭಾಷಣೆಯ ರೂಪದಲ್ಲಿದೆ. ಮಾರ್ಕಂಡೇಯ ಮಹಾಮುನಿಗಳಿಂದ ವಿವರಿಸಲ್ಪಟ್ಟ ಪುರಾಣವಿದು. ಇದರಲ್ಲಿ ಜಗತ್ತಿನ ಸೃಷ್ಟಿ, ಅಗ್ನಿ, ಸೂರ್ಯ, ಬ್ರಹ್ಮಾದಿ ದೇವತೆಗಳ ಸ್ತುತಿ ಇವೆ.  ಶಿವ ವಿಷ್ಣುಗಳ ಮಹಾತ್ಮೆಗಳು ಮತ್ತು ಇಂದ್ರ, ಅಗ್ನಿ ಸೂರ್ಯರ ಮಹಿಮೆಗಳು ಮತ್ತು ಇದರ ಮುಖ್ಯ ಭಾಗವಾಗಿ ಸುಪ್ರಸಿದ್ಧ ಸಪ್ತಶತಿ ಎಂಬ ದೇವಿ ಮಹಾತ್ಮೆ ಮುಂತಾದ ವಿಷಯಗಳಿವೆ. ಈಗ ನಾವು ಮಾಡುತ್ತಿರುವ ಚಂಡಿಯಾಗ, ಶತ ಚಂಡಿಕಾ ಹೋಮ, ಸಹಸ್ರ ಚಂಡಿಯಾಗ ಮುಂತಾದ ಯಾಗಗಳಿಗೆ ಮಾರ್ಕಂಡೇಯ ಪುರಾಣವೇ ಆಧಾರವಾಗಿದೆ.

                                                                                                                                  ೩ ಭಾಗವತ ಪುರಾಣ

                                                                                ಈ ಮಹಾ ಪುರಾಣದಲ್ಲಿ ೧೮೦೦೦ ಶ್ಲೋಕಗಳಿವೆ. ಈ ಪುರಾಣವನ್ನು ವ್ಯಾಸ ಮಹರ್ಷಿಗಳು ಶುಕಮಹರ್ಷಿಗೆ ಬೋಧಿಸಿದ್ದಾರೆ. ಹದಿನೆಂಟು ಪುರಾಣಗಳಲ್ಲೇ ಬಹಳ ಪ್ರಸಿದ್ಧವಾಗಿದೆ. ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ. ಜ್ಞಾನ ಹಾಗೂ ಭಕ್ತಿ ಎರಡೂ ‌ವಿಚಾರಗಳೂ ಭಾಗವತದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಶುಕ ಮಹರ್ಷಿಗಳು ಪರೀಕ್ಷಿತ್ ಮಹಾರಾಜ (ಅಭಿಮನ್ಯುಮಗ ) ನಿಗೆ ಬೋಧಿಸಿದ್ದಾರೆ. ಈ ಭಾಗವತ ಪುರಾಣದಲ್ಲಿ ಹನ್ನೆರಡು ಸ್ಕಂದಗಳಿವೆ. ಶ್ರೀಮನ್ನಾರಾಯಣನ ದಶಾವತಾರ ಕಥೆಗಳು ಈ ಪುರಾಣದಲ್ಲಿವೆ. ರಾಮಾಯಣ ಮಹಾಭಾರತಗಳಿಗಿರುವ ಪ್ರಾಶಸ್ತ್ಯವೇ ಈ ಭಾಗವತ ಪುರಾಣಕ್ಕಿದೆ. ವಿಷ್ಣು ಭಕ್ತರಿಗೆ ಈ ಪುರಾಣ ಅಮೃತ ಸಮಾನವಾಗಿದೆ.

 ‌                                                                                ೪ ಭವಿಷ್ಯತ್ ಪುರಾಣ

                                                                                    ಈ ಪುರಾಣದಲ್ಲಿ ೧೪೫೦೦ ಶ್ಲೋಕಗಳಿವೆ. ಮನು ಬ್ರಹ್ಮ ನಿಗೆ ಸೂರ್ಯ ದೇವನು ಈ ಪುರಾಣವನ್ನು ಬೋಧಿಸಿದ್ದಾನೆ. ಈ ಪುರಾಣದಲ್ಲಿ ಸೂರ್ಯದೇವೋಪಾಸನೆ ಅಗ್ನಿದೇವೋಪಾಸನೆ ಮತ್ತು ಚತುರ್ವಿಧ ವರ್ಣಾಶ್ರಮ ಧರ್ಮಗಳು ತಿಳಿಸಲಾಗಿದೆ. ಮುಖ್ಯವಾಗಿ ಭವಿಷ್ಯತ್ ಕಾಲದಲ್ಲಿ ನಡೆಯಲಿರುವ ಅನೇಕ ಆಶ್ಚರ್ಯಕರ ವಿಷಯಗಳು ಈ ಪುರಾಣದಲ್ಲಿ ನಿಕ್ಷಿಪ್ತವಾಗಿವೆ.

 ‌                                                                                                           ೫ ಬ್ರಹ್ಮ ಪುರಾಣ

 ‌                                                                                                  ಈ ಪುರಾಣದಲ್ಲಿ ೧೦,೦೦೦ ಶ್ಲೋಕಗಳಿವೆ. ಈ ಪುರಾಣವನ್ನು ಆದಿ ಪುರಾಣವೆಂದು ಸೂರ್ಯ ಪುರಾಣವೆಂದು ಕರೆಯುವ ರೂಢಿ ಇದೆ. ಇದರಲ್ಲಿ ಎರಡು ಭಾಗಗಳಿವೆ. ಪೂರ್ವ ಭಾಗದಲ್ಲಿ ಬ್ರಹ್ಮಾಂಡದ ರಚನೆಯ ಬಗ್ಗೆ ಮಾಹಿತಿ ಇದೆ. ಎರಡನೇ ಭಾಗವಾದ ಉತ್ತರ ಭಾಗದಲ್ಲಿ ರಾಮ ಹಾಗೂ ಕೃಷ್ಣರ ಕಥೆಗಳು ‌ಬರುತ್ತವೆ. ಬ್ರಹ್ಮ ದೇವರು ಈ ಪುರಾಣವನ್ನು ದಕ್ಷ ಬ್ರಹ್ಮ ( ಪಾರ್ವತಿಯ ತಂದೆ) ನಿಗೆ ಬೋಧಿಸಿದ್ದಾನೆ ಈ ಪುರಾಣದಲ್ಲಿ ಕೃಷ್ಣ ಮಾರ್ಕಂಡೇಯ ಕಶ್ಯಪರ ಚರಿತ್ರೆಗಳು ವರ್ಣಾಶ್ರಮ ಧರ್ಮದ ವಿಷಯಗಳು ಧರ್ಮ ಮಾರ್ಗದ ವಿಷಯಗಳು ಸ್ವರ್ಗ ನರಕಲೋಕದ ವಿಷಯಗಳು ಈ ಪುರಾಣದಲ್ಲಿವೆ.

 ‌                                                                                                                     ೬ ಬ್ರಹ್ಮಾಂಡ ಪುರಾಣ

 ‌                                                                                                                 ಈ ಪುರಾಣದಲ್ಲಿ ೧೨,೦೦೦ ಶ್ಲೋಕಗಳಿವೆ. ಮರೀಚಿ ಮಹರ್ಷಿ  ಸೃಷ್ಟಿಕರ್ತ ಬ್ರಹ್ಮನಿಗೆ ಬೋಧಿಸಿದ ಪುರಾಣವಿದು. ಈ ಪುರಾಣದಲ್ಲಿ ರಾಧಾಕೃಷ್ಣ ವೃತ್ತಾಂತಗಳು, ರಾಮ ಪರಶುರಾಮ ಚರಿತ್ರೆಗಳು, ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ, ಶಿವ ಸ್ತೋತ್ರ, ಕೃಷ್ಣ ಸ್ತೋತ್ರ, ಗಂಧರ್ವ ಶಾಸ್ತ್ರ ಖಗೋಳ ಶಾಸ್ತ್ರ, ಪಾಪ ಪುಣ್ಯಗಳ ವಿವರಣೆಗಳು ಈ ಪುರಾಣದಲ್ಲಿವೆ.

 ‌                                                                                                                             ೭ ಬ್ರಹ್ಮ ವೈವರ್ತ ಪುರಾಣ

                                                                                    ಈ ಪುರಾಣದಲ್ಲಿ ೧೮,೦೦೦ ಶ್ಲೋಕಗಳಿವೆ. ಇದು ನಾಲ್ಕು ಭಾಗಗಳಲ್ಲಿ ಇದೆ. ಮೊದಲನೆಯ ಭಾಗದಲ್ಲಿ ಪ್ರಕೃತಿಯ ಸೃಷ್ಟಿಯ ಬಗ್ಗೆ, ಎರಡನೇ ಭಾಗದಲ್ಲಿ ‌ಪ್ರಕೃತಿಯ ಭಾಗವಾದ ಸ್ತ್ರೀ ದೇವತೆಗಳ ಬಗ್ಗೆ, ಮೂರನೆಯ ಭಾಗದಲ್ಲಿ ಗಣೇಶ, ಪಾರ್ವತಿ, ಶಿವ ಮುಂತಾದವರ ಬಗ್ಗೆ, ನಾಲ್ಕನೇ ಭಾಗದಲ್ಲಿ ಕೃಷ್ಣನ ಜನ್ಮ ವೃತ್ತಾಂತದ ಬಗ್ಗೆ ವಿವರಗಳಿವೆ.  ಸಾವರ್ಣೀ ಬ್ರಹ್ಮನಿಂದ ನಾರದ ಮಹರ್ಷಿಗಳಿಗೆ ಉಪದೇಶ ಮಾಡಿರುವ ಪುರಾಣವಿದು. ಸ್ಕಂದ ಗಣೇಶ ರುದ್ರ ಕೃಷ್ಣ ವೈಭವಗಳು ದುರ್ಗಾ ಲಕ್ಷ್ಮಿ ಸರಸ್ವತಿ ಸಾವಿತ್ರಿ ರಾಧ ಮುಂತಾದವರ ಚರಿತ್ರೆಗಳು ಈ ಪುರಾಣದಲ್ಲಿವೆ. ಪಂಚ ಶಕ್ತಿಗಳ ( ಪೃಥ್ವಿ ಅಪ್ ತೇಜೋ ವಾಯು ಆಕಾಶಗಳು ) ಪ್ರಭಾವ ಮತ್ತು ಸೃಷ್ಟಿಗೆ ಕಾರಣವಾದ ಭೌತಿಕ ಜಗತ್ತು ಮುಂತಾದ ವಿಷಯಗಳು ಈ ಪುರಾಣದಲ್ಲಿವೆ.

 ‌                                                                           ೮ ವರಾಹ ಪುರಾಣ

 ‌                                                                                                                                     ಈ ಪುರಾಣದಲ್ಲಿ ೨೪,೦೦೦ ಶ್ಲೋಕಗಳಿವೆ.

ವರಹಾವತಾರ ಧರಿಸಿ ಶ್ರೀ ವಿಷ್ಣು ಭೂದೇವಿಗೆ ಬೋಧಿಸಿದ ಪುರಾಣವಿದು. ನಾರಾಯಣ ಉಪಾಸನಾ ವಿಧಾನ ಮತ್ತು ಪಾರ್ವತಿ ಪರಮೇಶ್ವರರ ಚರಿತ್ರೆಗಳು, ಧರ್ಮಶಾಸ್ತ್ರ ಮತ್ತು ವ್ರತಕಲ್ಪಗಳು ಪುಣ್ಯ ಕ್ಷೇತ್ರಗಳ ವಿವರಣೆಗಳು ಈ ಪುರಾಣದಲ್ಲಿವೆ.

 ‌                                                                                       ೯ ವಾಮನ ಪುರಾಣ

 ‌                                                                                                  ಈ ಪುರಾಣದಲ್ಲಿ ೧೦,೦೦೦ ಶ್ಲೋಕಗಳಿವೆ.

ಪುಲಸ್ತ್ಯ ಋಷಿ ನಾರದರಿಗೆ ಉಪದೇಶ ಮಾಡಿದ ಪುರಾಣವಿದು. ಶಿವಲಿಂಗೋಪಾಸನೆ, ಶಿವಪಾರ್ವತಿಯರ ಕಲ್ಯಾಣ, ಶಿವ ಚರಿತ್ರೆ, ಗಣೇಶ್ವರ ಚರಿತ್ರೆ, ಕಾರ್ತಿಕೇಯ ಚರಿತ್ರೆ, ಭೂಗೋಳ ಚರಿತ್ರೆ ಋತು ವಿಶೇಷಗಳು ಈ ಪುರಾಣದಲ್ಲಿವೆ. ವಿಷ್ಣುವಿನ ವಾಮನ‌ ಅವತಾರದ ಕಥೆಗಳು, ಸಾತ್ವಿಕನ ಗುಣ ಲಕ್ಷಣಗಳು, ದಾನದ ಮಹತ್ವ ಮುಂತಾದ ವಿಚಾರಗಳನ್ನು ಇದರಲ್ಲಿ ವಿವರಿಸಲಾಗಿದೆ.

 ‌                                                                                        ೧೦. ವಾಯು ಪುರಾಣ

 ‌                                                                                                                      ಈ ಪುರಾಣದಲ್ಲಿ ೨೪,೦೦೦ ಶ್ಲೋಕಗಳಿವೆ. ಮಹಾ ಶಕ್ತಿಶಾಲಿಯಾದ ವಾಯುದೇವನಿಂದ ಹೇಳಲಾಗಿರುವುದರಿಂದ ಈ ಪುರಾಣಕ್ಕೆ ವಾಯು ಪುರಾಣವೆಂದು ಹೆಸರು ಬಂದಿದೆ. ಮಹೇಶ್ವರನ ಮಹಾತ್ಮೆ, ಕಾಲಮಾನ ವಿವರಣೆ ಮತ್ತು ಭೂಮಂಡಲ ಸೌರಮಂಡಲ ವಿಶೇಷಗಳು ರಹಸ್ಯಗಳು ಈ ಪುರಾಣದಲ್ಲಿವೆ. ಜಗತ್ತನ್ನು ಏಳು ದ್ವೀಪಗಳ ವಿಭಾಗ ಮಾಡಿ ಅದರ ವಿವರ, ಬೇರೆಬೇರೆ ಖಂಡಗಳಲ್ಲಿರುವ ಜನರ ಜೀವನ ವಿಚಾರ, ಏಳು ಲೋಕಗಳ ವಿವರ, ನಾಲ್ಕು ಯುಗಗಳ ವಿಚಾರ, ಸಂಗೀತ ವಿದ್ಯೆ, ವೇದ ವಿದ್ಯೆ, ವಿವಿಧ ವರ್ಣಾಶ್ರಮ ಧರ್ಮಗಳ ಕರ್ತವ್ಯ ಜವಾಬ್ದಾರಿಗಳ ವಿವರ ಇತ್ಯಾದಿ ಇದರಲ್ಲಿ ಅಡಕವಾಗಿವೆ.

 ‌                                                                               ೧೧ ವಿಷ್ಣು ಪುರಾಣ

                                                                                                                                                          ಈ ಪುರಾಣದಲ್ಲಿ ೨೩,೦೦೦ ಶ್ಲೋಕಗಳಿವೆ. ಪರಾಶರ ಮಹರ್ಷಿ (ವ್ಯಾಸರ ತಂದೆ) ತನ್ನ ಶಿಷ್ಯನಾದ ಮೈತ್ರೇಯ ಮುನಿಗೆ ಬೋಧಿಸಿದ ಪುರಾಣವಿದು. ಶ್ರೀ ಮಹಾವಿಷ್ಣುವಿನ ಮಹಾತ್ಮೆಯ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ಶ್ರೀ ಕೃಷ್ಣ ಧೃವ ಪ್ರಹ್ಲಾದ ಭರತರಾಜನ ಚರಿತ್ರೆಗಳು ಈ ಪುರಾಣದಲ್ಲಿವೆ.

 ‌      ‌                                                                                    ೧೨ ಅಗ್ನಿ ಪುರಾಣ

                                                                                                                            ಈ ಪುರಾಣದಲ್ಲಿ ೧೫,೪೦೦ ಶ್ಲೋಕಗಳಿವೆ. ಅಗ್ನಿದೇವರಿಂದ ವಶಿಷ್ಠ ಮಹರ್ಷಿಗಳಿಗೆ ಈ ಪುರಾಣವನ್ನು ಬೋಧಿಸಲಾಗಿದೆ. ವೇದಗಳಲ್ಲಿ ಹೇಳಲಾಗಿರುವ ಅಗ್ನಿದೇವತೆಯ ಕುರಿತಾದ ‌ಕಾವ್ಯ, ನಾಟಕಗಳ ಲಕ್ಷಣಗಳು, ರಸ ವರ್ಣನೆಗಳು, ಮಂತ್ರ ಮತ್ತು ಮಂತ್ರ ‌ವಿಧಾನಗಳು, ರಾಜಧರ್ಮ ಮುಂತಾದ ‌ವಿಚಾರಗಳು ಹೇಳಲ್ಪಟ್ಟಿದೆ. ಇದರಲ್ಲಿ ಶಿವ ಗಣೇಶ ದುರ್ಗಾ ಉಪಾಸನಾ ವಿಷಯಗಳಿವೆ ಮತ್ತು ವ್ಯಾಕರಣ ಛಂದಸ್ಸು ಜ್ಯೋತಿಷ್ಯ ಆಯುರ್ವೇದ ರಾಜಕೀಯ ಲೌಕಿಕ ಭೂಗೋಳ ಖಗೋಳ ವಿಷಯಗಳನ್ನು ವಿಶದೀಕರಿಸಲಾಗಿದೆ. ಧರ್ಮಶಾಸ್ತ್ರ, ‌ಆಯುರ್ವೇದ, ಅಲಂಕಾರ, ಛಂದಸ್ಸು ಮುಂತಾದ ಅನೇಕ ವಿಷಯಗಳನ್ನು ಒಳಗೊಂಡಿದೆ.

 ‌                                                                                                      ೧೩ ನಾರದ ಪುರಾಣ

                                                                                                ಈ ಪುರಾಣದಲ್ಲಿ ೨೫,೦೦೦ ಶ್ಲೋಕಗಳಿವೆ. ಬ್ರಹ್ಮ ಮಾನಸ ಪುತ್ರರಾಗಿರುವ ಸನಕ, ಸನಂದನ , ಸನತ್ಕುಮಾರ, ಸನಾತನ ಎಂಬ ನಾಲ್ಕು ಜನರಿಗೆ ನಾರದ ಮಹರ್ಷಿಗಳು ಬೋಧಿಸಿದ ಪುರಾಣವಿದು. ಅತೀ ಪವಿತ್ರ ಪ್ರಸಿದ್ದವಾದ ವೇದ ಪಾದಸ್ತವಂ ( ಶಿವ ಸ್ತೋತ್ರ) ಈ ಪುರಾಣದಲ್ಲಿದೆ. ವೇದಾಂಗ ವಿಷಯಗಳು ವ್ರತ, ನಿಯಮ ವಿಷಯಗಳು ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ.

 ‌                                                                                                                                                                             ೧೪ ಸ್ಕಂದ ಪುರಾಣ

                                                                                      ಹದಿನೆಂಟು ಪುರಾಣಗಳಲ್ಲಿ ಈ ಪುರಾಣವೇ ವಿಸ್ತೃತವಾಗಿದೆ. ಸ್ಕಂದ ಪುರಾಣದಲ್ಲಿ ೮೧,೦೦೦ ಶ್ಲೋಕಗಳಿವೆ.  ಪರಮೇಶ್ವರನ‌ ಕುಮಾರನಾದ ಸುಬ್ರಹ್ಮಣ್ಯ ಸ್ವಾಮಿಯ‌ ಜೀವನ ‌ಲೀಲೆಗಳ ಕುರಿತಾದ ‌ವಿವರಣೆಯೇ‌ ಈ ಪುರಾಣದಲ್ಲಿವೆ. ಈ ಪುರಾಣದೊಳಗೆ ಕಾಶೀಖಂಡ, ಕೇದಾರಖಂಡ, ರೇವಖಂಡ, ವೈಷ್ಣವಖಂಡ, ಉತ್ಕಳಖಂಡ, ಕುಮಾರಿಕಾಖಂಡ, ಬ್ರಹ್ಮ ಖಂಡ, ಬ್ರಹ್ಮೋತ್ತರಖಂಡ, ಅವಂತಿಕಾಖಂಡ ಮುಂತಾದ ಖಂಡಗಳಿವೆ. ಅನೇಕಾನೇಕ ವಿಷಯಗಳು ಸ್ಕಂದ ಪುರಾಣದಲ್ಲಿವೆ. ಅಷ್ಟಾದಶ ಪುರಾಣಗಳಲ್ಲಿ ಈ ಪುರಾಣಕ್ಕೆ ಪ್ರತ್ಯೇಕ ಪ್ರಾಮುಖ್ಯತೆಯಿದೆ. ವೆಂಕಟಾಚಲ ಮಹಾತ್ಮ (ತಿರುಮಲ ) ವೈಷ್ಣವ ಖಂಡದಲ್ಲಿದೆ. ಜಗನ್ನಾಥ ಕ್ಷೇತ್ರದ ಬಗ್ಗೆ ಉತ್ಕಳ ಖಂಡದಲ್ಲಿದೆ ಅರುಣಾಚಲದ ಬಗ್ಗೆ ಕುಮಾರಿಕಾ ಖಂಜದಲ್ಲಿದೆ ಸತ್ಯ ನಾರಾಯಣ ಸ್ವಾಮಿಯ ಬಗ್ಗೆ ರೇವಾ ಖಾಂಡದಲ್ಲಿದೆ.

 ‌                                                                                                                                       ೧೫ ಲಿಂಗ ಪುರಾಣ

                                                                                                                                                                                                                  ಲಿಂಗ ಪುರಾಣದಲ್ಲಿ ಶಿವದೇವನ ಉಪದೇಶಗಳು, ಮಹಾತ್ಮೆ, ಲೀಲೆಗಳು, ಲಿಂಗದ ಮಹಿಮೆ‌ ಮುಂತಾದವುಗಳು ಈ ಪುರಾಣದ ಮುಖ್ಯ ವಸ್ತು. ಲಿಂಗ ರೂಪದ ಶಿವನ ಮಹಿಮೆ ಆರಾಧನೆ ವ್ರತಗಳು ಈ ಪುರಾಣದಲ್ಲಿವೆ. ಲಿಂಗದಿಂದ ಉಂಟಾಗಿರುವ ಸೃಷ್ಟಿ ಸ್ಥಿತಿ ಲಯ ರೂಪಗಳಾದ ಭಗವಂತನ ಲೀಲೆಗಳು, ನೀತಿ ಬೋಧೆಗಳು, ಖಗೋಳ ಜ್ಯೋತಿಷ್ಯ ಶಾಸ್ತ್ರಗಳು ಸಹ ಈ ಪುರಾಣದಲ್ಲಿವೆ. 

                                                                                                                                                                                                              ೧೬ ಗರುಡ ಪುರಾಣ

 ‌                                                                                             ಈ ಪುರಾಣದಲ್ಲಿ ೧೯,೦೦೦ ಶ್ಲೋಕಗಳಿವೆ. ಈ ಪುರಾಣವನ್ನು ಶ್ರೀ ಮಹಾವಿಷ್ಣು ಗರುಡನಿಗೆ ಉಪದೇಶ ಮಾಡಿದ್ದಾನೆ. ಜನನ ಮರಣದ ವಿಷಯಗಳು ಮತ್ತು ಮರಣದ ನಂತರ ಮನುಷ್ಯನಿಗೆ ಸಿಗುವ ಸ್ವರ್ಗ ನರಕಗಳು ನರಕ ಲೋಕದಲ್ಲಿ ಯಾವ ಯಾವ ತಪ್ಪು ಮಾಡಿದವರಿಗೆ ಯಾವ ಯಾವ ಶಿಕ್ಷೆಗಳನ್ನು ವಿಧಿಸುತ್ತಾರೆಂಬುದು ಈ ಪುರಾಣದಲ್ಲಿ ತಿಳಿಯಬಹುದು.

 ‌                                                                                                                                       ೧೭ ಕೂರ್ಮ ಪುರಾಣ

 ‌                                                                                                              ಈ ಪುರಾಣದಲ್ಲಿ ೧೭,೦೦೦ ಶ್ಲೋಕಗಳಿವೆ. ಕೂರ್ಮಾವತಾರ ವರಾಹ ನರಸಿಂಹ ಅವತಾರ ವಿಷಯಗಳು ಲಿಂಗರೂಪದಲ್ಲಿ ಶಿವನನ್ನು ಪೂಜಿಸುವ ವಿಷಯ ಖಗೋಳ ಭೂಗೋಳ ವಿಷಯಗಳು ಕಾಶಿ ಪ್ರಯಾಗಾದಿ ಪುಣ್ಯ ಕ್ಷೇತ್ರ ಮಹಿಮೆಗಳು ಈ ಪುರಾಣದಲ್ಲಿವೆ.

 ‌                                                                                                                                              ೧೮ ಪದ್ಮ ಪುರಾಣ

                                                                                                                          ಈ ಮಹಾ ಪುರಾಣದಲ್ಲಿ ೮೫,೦೦೦ ಶ್ಲೋಕಗಳಿವೆ. ಪದ್ಮ ಪುರಾಣವನ್ನು ಓದಿದರೂ ಕೇಳಿದರೂ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಹದಿನೆಂಟು ಪುರಾಣಗಳಲ್ಲಿ ಪದ್ಮಪುರಾಣವೇ ದೊಡ್ಡದು.  ಪದ್ಮ ಪುರಾಣದಲ್ಲಿ ಐದು ಕಾಂಡಗಳಿವೆ. ಪ್ರಥಮ ‌ಸೃಷ್ಟಿ ಕಾಂಡದಲ್ಲಿ ‌ಭೀಷ್ಮ ಹಾಗೂ ಮುನಿ ಪುಲಸ್ಯರ ನಡುವಿನ ಸಂಭಾಷಣೆ ಇವೆ. ಇದರಲ್ಲಿ ಗ್ರಹಗಳ ಬಗ್ಗೆ, ಪುಷ್ಕರದ ಬಗ್ಗೆ ವಿವರಗಳಿವೆ. ಎರಡನೆಯ ಭೂಮಿ ಕಾಂಡದಲ್ಲಿ ಪೃಥ್ವಿಯ ಬಗ್ಗೆ ವಿವರಗಳಿವೆ. ಇದು ಆ ಕಾಲದ ಭೌಗೋಳಿಕ ಮಾಹಿತಿಯನ್ನು ನೀಡುತ್ತವೆ. ಮೂರನೆಯ ಸ್ವರ್ಗ ಕಾಂಡದಲ್ಲಿ ಅಂತರಿಕ್ಷ ಹಾಗೂ ಜಂಬೂದ್ವೀಪದ ಬಗ್ಗೆ ವಿವರಗಳಿವೆ. ನಾಲ್ಕನೆಯ ಪಾತಾಳ ಕಾಂಡದಲ್ಲಿ ರಾಮ ಹಾಗೂ ಕೃಷ್ಣರ ಬಗ್ಗೆ ವಿವರಗಳಿವೆ. ಕೊನೆಯ ಉತ್ತರ ಕಾಂಡದಲ್ಲಿ ಶಿವ ಹಾಗೂ ಪಾರ್ವತಿಯವರ ನಡುವಿನ ‌ಸಂಭಾಷಣೆಯ ರೂಪದಲ್ಲಿ ಧರ್ಮದ ವಿವಿಧ ವಿಷಯಗಳ ಬಗ್ಗೆ ಮಾಹಿತಿಗಳಿವೆ.

***


ವ್ಯಾಸಂ ವಸಿಷ್ಠನಪ್ತಾರಂ ಶಕ್ತೇ: ಪೌತ್ರಮಕಲ್ಮಶಮ್ | ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ||*
_ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣುವೇ | ನಮೋ ವೈ ಬ್ರಹ್ಮ ನಿಧಯೇ ವಾಸಿಷ್ಠಾಯ ನಮೋ ನಮ: |_
ವೇದವ್ಯಾಸರು ರಚಿಸಿರುವ 18 ಪುರಾಣಗಳು ಹಾಗೂ ಅದರ ಸಂಕ್ಷಿಪ್ತ ಮಾಹಿತಿ...
1. *ಬ್ರಹ್ಮ ಪುರಾಣ*
ಧರ್ಮವೇ ದೊಡ್ಡದೆಂದು ಧರ್ಮವನ್ನು ರಕ್ಷಿಸಬೇಕು ಯಾವ ಧರ್ಮವನ್ನಾದರು ನಾವು ಆದರಿಸಿ ಅದನ್ನು ಕಾಪಡಿದಾಗಲೇ ಆ ಧರ್ಮದಿಂದ ನಮಗೆ ರಕ್ಷಣೆ ಲಭಿಸುತ್ತದೆ. ಧರ್ಮವೆಂದರೆ ಮಾನವರು ಅನುಸರಿಸಬೇಕಾದ ಧಾರ್ಮಿಕ ಸೂತ್ರಗಳು.

2. *ಪದ್ಮ ಪುರಾಣ*
ಶ್ರೀಮನ್ನಾರಾಯನನ ಬಗ್ಗೆ ನಾರಯಣಯನ ಶಕ್ತಿಯ ಬಗ್ಗೆ ನಾರಾಯಣನ ಲೀಲೆಗಳ ಬಗ್ಗೆ ಈ ಪುರಣವು.

3. *ವಿಷ್ಣು ಪುರಾಣ*
ಮಹೇಶ್ವರನು, ಮಹಾ ವಿಷ್ಣುವೂ ಇಬ್ಬರು ಒಂದೇ ನಾಣ್ಯದ ಎರಡು ಮುಖಗಳು, ಹರಿಹರರಿಗೆ ಬೇಧವಿಲ್ಲ. ಇಬ್ಬರೂ ಸಮಾನವಾದ ಅದ್ವೈತ ರೂಪಗಳೇ ಎಂದು ಈ ಪುರಾಣ ಹೇಳಿತ್ತದೆ.

4. *ವಾಯು ಪುರಾಣ*
ಪುಣ್ಯ ಕ್ಷೇತ್ರಗಳ ಮಹಿಮೆಇದರಲ್ಲಿದೆ.

5. *ಭಾಗವತ ಪುರಾಣ*
ಅಮರತ್ವ ಸಿದ್ದಿ ಹೊಂದಲು, ಮರುಜನ್ಮವಿಲ್ಲದ ಮೋಕ್ಷ ಸಿದ್ಧಿಯನ್ನು ಸಾಧಿಸಲು ಮಾನವರೆಲ್ಲಾರಿಗೂ ಭಕ್ತಿ ಮಾರ್ಗವೇ ಉತ್ತಮ ಮಾರ್ಗವೆಂದು ದೇವರನ್ನು ನಂಬಿದವರಿಗೆ ಎಂದು ಕಷ್ಟಗಳು ಬರುವುದಿಲ್ಲವೆಂದು ಈ ಪುರಾಣ ಹೇಳುತ್ತದೆ.

6. *ನಾರದ ಪುರಾಣ*
ಧಾರ್ಮಿಕ ವಿಷಯಗಳು, ವ್ರತಗಳು, ತಿಥಿ ವಿಶೇಷಗಳು, ವ್ರತ ನಿಯಮಗಳು, ವ್ರತ ಫಲಗಳು ಇಲ್ಲಿ ಇವೆ.

7. *ಮಾರ್ಕಂಡೇಯ ಪುರಾಣ*
ಇದರಲ್ಲಿ ದೇವಿ ಅನುಗ್ರಹದ ವಿಷಯಗಳಿವೆ.

8. *ಅಗ್ನಿ ಪುರಾಣ*
ಸೃಷ್ಟಿ, ಸ್ಥಿತಿ, ಲಯಗಳು ಮತ್ತು ಮಾನವರೆಲ್ಲರ ಜೀವನ್ಮರಣಗಳು, ತಿಳಿಯಬೇಕಾಗಿರುವ ವಿದ್ಯೆ, ತಿಳಿಯಲಾರದ ಅವಿದ್ಯೆ, ಸರ್ವವೂ ನಾರಾಯಣನೆಂದು ಭಗವಂತನ ಬಗ್ಗೆ ತಿಳಿಯಪಡಿಸುವುದೇ ಈ ಪುರಾಣ.

9. *ಭವಿಷ್ಯ ಪುರಾಣ*
ಸರ್ವ ಪ್ರಾಣಕೋಟಿಗೂ, ಆಹಾರವನ್ನು ಆರೋಗ್ಯವನ್ನು, ಪ್ರಾಣಶಕ್ತಿಯನ್ನು ಪ್ರಸದಿಸುವ ಸೂರ್ಯ ಭಗವಾನನ ಮಹಿಮೆಗಳು ಇದರಲ್ಲಿವೆ.

10. *ಬ್ರಹ್ಮ ವೈವರ್ತ ಪುರಾಣ*
ಅತಿಥಿ ದೇವರುಗಳ ಬಗ್ಗೆ ಬೋಧಿಸುತ್ತದೆ.

11. *ಲಿಂಗ ಪುರಾಣ*
ವಿಶ್ವೇಶ್ವರನ ಕಾಶಿಕ್ಷೆತ್ರದ ಮಹಿಮೆಯನ್ನು ವಿವರಿಸಲಾಗಿದೆ.

12. *ವರಾಹ ಪುರಾಣ*
ಯಮುನಾ, ಸರಸ್ವತಿ, ನದಿಗಳ ಸಂಗಮ ಸ್ಥಳ, ವಿಷ್ಣು ಪೂಜೆಗಳಿಗೆ ಪವಿತ್ರವಾದುದೆಂದು, ನದೀ ಸಂಗಮ ಮಹಿಮೆಯನ್ನು ವಿವರಿಸುತ್ತದೆ.

13. *ಸ್ಕಂದ ಪುರಾಣ*
ಶಿಥಿಲವಾದ ದೇವಸ್ಥಾನಗಳನ್ನು ಪುನರುಜ್ಜೀವ ಗೊಳಿಸುವುದರಿಂದ, ಕೆರೆಗಳನ್ನು, ಬಾವಿಗಳನ್ನು ಸಾಯಿಪಡಿಸುವುದರಿಂದ, ಯಜ್ಞ ಯಾಗದಿಗಳ ಫಲವು ಲಭಿಸುತ್ತೆಂದು ಸ್ಕಂದ ಪುರಾಣವು ಹೇಳುತ್ತದೆ.

14. *ವಾಮನ ಪುರಾಣ*
ಈ ಪುರಾಣದಲ್ಲಿ ವಿಷ್ಣು ಭಕ್ತರ ವಿವರಣೆಗಳಿವೆ ಮಾತ್ತು ವೈಷ್ಣವ ಮಹಿಮೆಗಳಿವೆ.

15. *ಕೂರ್ಮ ಪುರಾಣ*
ಪುಣ್ಯಕ್ಷೇತ್ರಗಳ ದರ್ಶನವು ದೊಡ್ಡದೇ ! ಆದರೇ ಅದಕ್ಕಿಂತಲೂ ಮನುಷ್ಯನಿಗೆ ತನ್ನ ಜವಾಬ್ದಾರಿಗಳು ದೊಡ್ಡವು. ತಾನು ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸದೆ ನಂತರವೇ ದಿವ್ಯ ಕ್ಷೇತ್ರಗಳ ದರ್ಶನವನ್ನು ಮಾಡಬೇಕು.

ದೇಹ ಮಾತ್ರ ದೇವರ ಮುಂದೆ ಧ್ಯಾನವೆಲ್ಲಾ ಮನೆಯ ಕಡೆಗೆ ಇರಬಾರದು ಎಂದು ಹೇಳುತ್ತದೆ ಈ ಪುರಾಣ.
16. *ಮತ್ಸ್ಯ ಪುರಾಣ*
ಪಿತೃ ದೇವತೆಗಳಿಗೆ ಶ್ರಾದ್ಧಾದಿ ಕರ್ಮ ಕಾಂಡಗಳು, ವರ್ಷ ತಿಥಿಗಳನ್ನು ನಡೆಸುವುದರಿಂದ ಪಿತೃ ದೇವತೆಗಳು ಸ್ವರ್ಗಲೋಕದಲ್ಲಿ ಸಂತೋಷಿಸುತ್ತಾರೆಂದು ಈ ಪುರಾಣ ಹೇಳುತ್ತದೆ.

17. *ಗರುಡ ಪುರಾಣ*
ಸ್ವರ್ಗ ನರಕ ವಿಷಯಗಳು ಇದರಲ್ಲಿವೆ, ಇದರಲ್ಲಿ ಯಮಲೋಕ, ಅಲ್ಲಿನ ಶಿಕೆಗಳನ್ನು, ಸ್ವರ್ಗಲೋಕ ಅದರಲ್ಲಿರುವ ಸುಖಗಳನ್ನು ವಿವರಿಸಲಾಗಿದೆ.

18. *ಬ್ರಹ್ಮಾಂಡ ಪುರಾಣ*
ಜಂಬೂದ್ವೀಪದೊಂದಿಗೆ ನವ ಖಂಡಗಳ ವರ್ಣನೆ ಈ ಪುರಾಣದಲ್ಲಿದೆ. ಅಖಂಡ ಭಾರತದೇಶದ ವಿವರಗಳು, ವಿಶೇಷಗಳೆಲ್ಲವೂ ಇವೆ. ನದಿಗಳು, ಪರ್ವತಗಳು, ಜನಪದಗಳ ವಿಶೇಷಗಳು ಇದರಲ್ಲಿದೆ.

*ಈ ಪುಣ್ಯ ಭರತ ಭೂಮಿಯಲ್ಲಿ ಹುಟ್ಟಿ ವ್ಯಾಸ ಮಹರ್ಷಿಗಳು ಧನ್ಯರಾಗಿದ್ದರೆ. ವೇದವ್ಯಾಸರು ಭಾರತೀಯರನ್ನು ಚರಿತಾರ್ಥರನ್ನಾಗಿ ಮಾಡಿದ್ದಾರೆ. ಅವರು ಬರೆದುರುವ ಕಾವ್ಯಗಳು ಓದುತ್ತಾ ನಾವೆಲ್ಲರು ಧನ್ಯರಾಗೋಣ.
*****


[9:09 AM, 2/2/2019] Roopa Admin Adhyatmkika Gr: ಪುರಾಣ ಪುಟ 
 ಮಾರ್ಕಂಡೇಯ ಪುರಾಣ
  ವೃಕ್ಷ, ಪರ್ವತ, ಉದಕ ಮತ್ತು ಪುರಾದಿದುರ್ಗ 
– ಈ ನಾಲ್ಕು ಬಗೆಯ ದುರ್ಗಗಳಲ್ಲಿ ಮೊದಲಿನ ಮೂರು ದುರ್ಗಗಳು ಸ್ವಾಭಾವಿಕವಾದುವು. ನಾಲ್ಕನೆಯ ದುರ್ಗವು ಕೃತಕವು. ಪ್ರಯತ್ನದಿಂದ ರಚಿಸಿಕೊಂಡವುಗಳು.

ಪುರಂ ಚ ಖೇಟಕಂ ಚೈವ ತದ್ವದ್ದ್ರೋಣೀಮುಖಂ ದ್ವಿಜ |
ಶಾಖಾನಗರಕಂ ಚಾಪಿ ತಥಾ ಖರ್ವಟಕಂ ದ್ರಮೀ ||

ಪುರ, ಖೇಟ, ದ್ರೋಣೀಮುಖ, ಶಾಖಾನಗರ, ಖರ್ವಟ 
ಮತ್ತು ದ್ರಮೀ ಎಂಬುವು ಕೆಲವು ದುರ್ಗಗಳಾಗಿವೆ. ಅವುಗಳಲ್ಲಿ ಗ್ರಾಮಗಳು, ಗೋಶಾಲೆಗಳು ಮುಂತಾದುವುಗಳನ್ನು ನಿರ್ಮಿಸಿಕೊಂಡು ಅಲ್ಲಿ ವಾಸಗೃಹಗಳನ್ನು ನಿರ್ಮಿಸಿಕೊಂಡರು. ಇವುಗಳಲ್ಲಿ- ನಾಲ್ಕು ಕಡೆಯೂ ಎತ್ತರವಾದ ಪ್ರಾಕಾರಗಳಿಂದಲೂ, ನೀರಿನ ಕಂದಕಗಳಿಂದಲೂ ಸುತ್ತುವರಿದ, ಎರಡು ಕ್ರೋಶಗಳು ಉದ್ದವಾಗಿಯೂ ಅದರ ಎಂಟನೇ 
ಒಂದು ಭಾಗದಷ್ಟು ಅಗಲವಾಗಿಯೂ ಇರುವುದು ಪುರದುರ್ಗವು.ಅದರ ಪೂರ್ವ ಅಥವಾ ಉತ್ತರಭಾಗದಲ್ಲಿ 
ಜಲಪ್ರವಾಹವಿರುವುದು ಉತ್ತಮವು.ಇಲ್ಲಿಂದ 
ಹೊರಹೊಗಲು ಬಿದುರಿನ ತೆಪ್ಪಗಳನ್ನು ಉಪಯೋಗಿಸಲಾಗುತ್ತಿತ್ತು. 

ಉದ್ದ ಮತ್ತು ಅಗಲಗಳಲ್ಲಿ ಪುರದ ಅರ್ಧಪ್ರಮಾಣದಿಂದ ಕೂಡಿರುವುದು ಖೇಟವೂ, ಕಾಲುಭಾಗದ ಪ್ರಮಾಣದಿಂದ ಕೂಡಿರುವುದೂ ಖರ್ವಟವು. ಪುರದ ಎಂಟನೆಯ ಒಂದುಭಾಗದ ಪ್ರಮಾಣವುಳ್ಳದ್ದು ಖರ್ವಟಕ್ಕಿಂತಲೂ ಚಿಕ್ಕದಾದ ದ್ರೋಣೀಮುಖವೆಂದು ಕರೆಯಲ್ಪಡುವುದು. ಖರ್ವಟವೆಂಬುದು ಕೋಟೆ-ಕಂದುಕಗಳಿಂದ ರಹಿತವಾದುದು. ಮಂತ್ರಿ ಮತ್ತು ಸಾಮಂತರಾಜರು ವಾಸಮಾಡುವ ಭೋಗಸಾಮಗ್ರಿಗಳನ್ನು ಹೊಂದಿರುವ ಸ್ಥಳವಿಶೇಷವು ಶಾಖಾನಗರವು.ಶೂದ್ರಜನರು ಹೆಚ್ಚಾಗಿ ವಾಸಮಾಡುವ,ಸಮೃದ್ಧಿಯಿಂದ ಕೂಡಿದ ರೈತಜನರುಳ್ಳ ಮತ್ತು ಹೊಲ-ಗದ್ದೆಗಳ ನಡುವೆ ಇರುವ ಪ್ರದೇಶವು ‘ಗ್ರಾಮ’ವೆಂದು ಕರೆಯಲ್ಪಡುತ್ತದೆ. ಮಾನವರು 
ನಗರಾದಿಗಳನ್ನು ಬಿಟ್ಟು ಬೇರೊಂದು ಸ್ಥಳದಲ್ಲಿ ಯಾವುದಾದರೂ ಕಾರ್ಯನಿಮಿತ್ತದಿಂದ ವಾಸಮಾಡಿದರೆ ಅದನ್ನು ವಸತಿ ಎಂಬ ಹೆಸರಿನಿಂದ ಕರೆಯುವರು. ಹೊಲ-ಗದ್ದೆಗಳಿಂದ ರಹಿತವೂ, ದುಷ್ಟಜನರ 
ಗುಂಪಿನಿಂದ ಕೂಡಿರುವುದೂ, ಪರಭೂಮಿಯನ್ನು ಆಕ್ರಮಿಸಿ ಕಲ್ಪಿಸಿ ಕೊಂಡಿರುವುದೂ ಮತ್ತು ರಾಜವಲ್ಲಭರ ಆಶ್ರಯದಿಂದ ಬಲಿಷ್ಠವೂ ಆದ ಗ್ರಾಮವು ದ್ರಮೀ ಎಂಬ ಹೆಸರನ್ನು ಹೊಂದಿರುವುದು. ಗಾಡಿಗಳಲ್ಲಿ 
ಹೇರಿರುವ ಪಾತ್ರೋಪಕರಣಗಳಿಂದ ಕೂಡಿದವರೂ, ಗೋಧನವನ್ನು ಹೊಂದಿದವರೂ ಆದ ಗೋಪಾಲಕರು ವಾಸಮಾಡುವ, ಅಂಗಡಿಗಳಿಲ್ಲದ 
ಸುಲಭವಾಗಿ ಗೋರಸವು ದೊರಕುವಂತಹ ಮತ್ತು ವಾಸಯೋಗ್ಯವಾದ ಭೂಮಿಯು ಯಥೇಚ್ಛವಾಗಿ ದೊರಕುವಂತಹ ಪ್ರದೇಶವು ಘೋಷವೆನಿಸುವುದು. 
ಈ ರೀತಿ ಆ ಪ್ರಜೆಗಳು ದ್ವಂದ್ವದುಃಖಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಗ್ರಾಮ-ನಗರ ಮುಂತಾದುವುಗಳನ್ನು ರಚಿಸಿಕೊಂಡು ಅವುಗಳಲ್ಲಿ ತಮ್ಮ ವಾಸಕ್ಕಾಗಿ ಮನೆಗಳನ್ನು ಕಟ್ಟಿಕೊಂಡರು. ಹಿಂದೆ ಆಕಾಶದಿಂದ ಬಿದ್ದ ಕ್ಷೀರಧಾರೆಗಳು ಯಾವ ರೀತಿಯಲ್ಲಿ ಮನೆಯ ಆಕಾರದ 
ವೃಕ್ಷಗಳಾಗಿದ್ದುವೋ ಮತ್ತು ಅಲ್ಲಿ ಅವರಿಗೆ ಯಾವ ರೀತಿಯ ಸೌಕರ್ಯಗಳು ದೊರೆಯುತ್ತಿದ್ದುವೋ ಅವುಗಳೆಲ್ಲವನ್ನೂ ಸ್ಮರಿಸಿಕೊಂಡು ಪ್ರಜೆಗಳು ಮನೆ ಮುಂತಾದುವುಗಳನ್ನು ಕಲ್ಪಿಸಿಕೊಂಡರು.ಮರಗಳ ಶಾಖೆಗಳಲ್ಲಿ 
ಕೆಲವು ಎತ್ತರ-ತಗ್ಗಾಗಿಯೂ ಮತ್ತೆ ಕೆಲವು ಅಡ್ಡಡ್ಡವಾಗಿಯೂ ಸರ್ವತೋಮುಖವಾಗಿ ಬೆಳೆದುಕೊಂಡಿರುವಂತೆ ಪ್ರಜೆಗಳು ಕೂಡ ಅನೇಕ ವಿಧವಾದ ಮನೆಗಳನ್ನು ನಿರ್ಮಿಸಿಕೊಂಡರು. ಹಿಂದಿನ ಕಾಲದಲ್ಲಿ ಕಲ್ಪವೃಕ್ಷಗಳ ಯಾವ ಶಾಖೆಗಳಿದ್ದುವೋ ಅವುಗಳೇ ಆ ಸಮಯದಲ್ಲಿ ಪ್ರಜೆಗಳಿಗೆ 
ಮನೆಗಳನ್ನು ನಿರ್ಮಿಸಲು ಉಪಕರಣಗಳಾಗಿ ಉಪಯೋಗವಾದುವು. ಈ ರೀತಿ ಮನೆಗಳನ್ನು ನಿರ್ಮಿಸಿಕೊಂಡು ಶೀತೋಷ್ಣವೇ ಮೊದಲಾದ 
ದ್ವಂದ್ವದುಃಖಪರಿಹಾರವನ್ನು ಮಾಡಿಕೊಂಡ ಎಲ್ಲ ಪ್ರಜೆಗಳು ತಮ್ಮ ಜೀವನೋಪಾಯದ ಬಗೆಗೆ ಚಿಂತಿಸತೊಡಗಿದರು. ಏಕೆಂದರೆ ಆ ವೇಳೆಗೆ 
ಸಮಸ್ತ ಕಲ್ಪವೃಕ್ಷಗಳು ಮಧುಸಹಿತವಾಗಿ ನಾಶಹೊಂದಿದ್ದುವು. ಯಾವಾಗ ಪ್ರಜೆಗಳಿಗೆ‌ ಇಷ್ಟಸಿದ್ಧಿಯಾಯಿತೋ ಅವರ ಇಷ್ಟದಂತೆ ಮಳೆಯಾಯಿತು ಮತ್ತು ಮಳೆಯ ನೀರು ತಗ್ಗುಪ್ರದೇಶಗಳಲ್ಲಿ ಹರಿದು 
ಹಳ್ಳಗಳಲ್ಲಿ ತುಂಬಿಕೊಳ್ಳಲಾರಂಭಿಸಿತು. ಮಳೆಯ ನೀರಿನಿಂದ ಪ್ರವಾಹಗಳು, ಕೆರೆ-ಕೊಳಗಳು ಹಾಗೂ ನದಿಗಳು ಉಂಟಾದುವು.ಬಿದ್ದ ಮಳೆಯ ನೀರಿಗೆ ಭೂಮಿಯ ಸಂಪರ್ಕವುಂಟಾಗಿ ಭೂಮಿಯಲ್ಲಿ ಗ್ರಾಮ್ಯ-ಆರಣ್ಯವೆಂಬ 
ಒಟ್ಟು ಹದಿನಾಲ್ಕು ಬಗೆಯ ಸಸ್ಯಗಳು ಹುಟ್ಟಿದುವು. ವೃಕ್ಷಗಳು ಮತ್ತು ಲತೆಗಳಲ್ಲಿ ಋತುಗಳಿಗೆ ಅನುಸಾರವಾಗಿ ಹೂವು ಮತ್ತು ಹಣ್ಣುಗಳು ಬಿಡಲಾರಂಭಿಸಿದುವು. ಹೀಗೆ ಸಸ್ಯವರ್ಗದ ಉತ್ಪತ್ತಿಯು ಮೊದಲನೆಯದಾಗಿ ಕಾಣಿಸಿಕೊಂಡಿತು. ಅದರಿಂದ ಆ ಯುಗದಲ್ಲಿ 

ಎಲ್ಲ ಪ್ರಜೆಗಳ ಜೀವನನಿರ್ವಹಣೆಯಾಗಲಾರಂಭಿಸಿತು.
*******


(೧) ಮಹಾಪುರಾಣಗಳು-

ಮ-ದ್ವಯಂ ಭ-ದ್ವಯಂ ಚೈವ ಬ್ರ-ತ್ರಯಂ ವ-ಚತುಷ್ಟಯಮ್ |


ಅ-ನಾ-ಪ-ಲಿಂ-ಗ-ಕೂ-ಸ್ಕಾ-ನಿ ಪುರಾಣಾನಿ ಪ್ರಚಕ್ಷತೇ ||


ಮತ್ಸ್ಯ-ಮಾರ್ಕಂಡೇಯ, ಭವಿಷ್ಯ-ಭಾಗವತ, ಬ್ರಹ್ಮ-ಬ್ರಹ್ಮವೈವರ್ತ-ಬ್ರಹ್ಮಾಂಡ, ವರಾಹ-ವಾಮನ-ವಾಯು-ವಿಷ್ಣು, ಅಗ್ನಿ-ನಾರದ-ಪದ್ಮ-ಲಿಂಗ-ಗರುಡ-ಕೂರ್ಮ-ಸ್ಕಾಂದ - ಇವು ಹದಿನೆಂಟು ಮಹಾಪುರಾಣಗಳೆಂದು ಹೇಳಲ್ಪಡುತ್ತವೆ.


(೨) ಉಪಪುರಾಣಗಳು-


ಆದಿ, ನರಸಿಂಹ, ಕುಮಾರಕೃತ ಸ್ಕಂದ, ಶಿವಧರ್ಮ, ದುರ್ವಾಸ, ನಾರದ, ಕಪಿಲ, ವಿಷ್ಣುಧರ್ಮ, ಔಷನಸ, ಬ್ರಹ್ಮಾಂಡ, ಕಾಲಿಕಾ, ವರುಣ, ಮಾಹೇಶ್ವರ, ಸಾಂಬ, ಸೌರ, ಪರಾಶರ, ಮಾರೀಚ ಹಾಗೂ ಭಾಸ್ಕರ -ಒಟ್ಟು 18.


(೩) ಔಪಪುರಾಣಗಳು-


ಸನತ್ಕುಮಾರ, ಬೃಹನ್ನಾರದೀಯ, ಆದಿತ್ಯ, ಸೂರ್ಯ, ನಂದಿಕೇಶ್ವರ, ಕೂರ್ಮ, ಭಾಗವತ, ವಸಿಷ್ಠ, ಭಾರ್ಗವ, ಮುದ್ಗಲ, ಕಲ್ಕಿ, ದೇವೀ, ಮಹಾಭಾಗವತ, ಬೃಹದ್ಧರ್ಮ, ಪರಾನಂದ, ವಹ್ನಿ, ಪಶುಪತಿ ಮತ್ತು ಹರಿವಂಶ - ಇವೂ ೧೮.
******

ಈ ಪುರಾಣ ಇತಿಹಾಸಗಳಲ್ಲಿ ಕೆಲವರ ಹುಟ್ಟಿನ ರಹಸ್ಯಗಳು ವಿಚಿತ್ರ ವಿಚಿತ್ರವಾಗಿ ಇರುತ್ತವೆ. ಅವುಗಳು ಆ ಯುಗಗಳ ಕಾಲದಲ್ಲಿ ಆಗ್ತಾ ಇತ್ತೇನೋ ಗೊತ್ತಿಲ್ಲ.

*|ಋಶ್ಯಶೃಂಗ|*
ಋಶ್ಯಶೃಂಗನ ಅಪ್ಪ ವಿಭಾಂಡಕ ಋಷಿ. ದಟ್ಟವಾದ ಕಾಡಿನಲ್ಲಿ ಒಂದು ಆಶ್ರಮ. ಅಲ್ಲಿ ಯಾರೂ ಓಡಾಡೋದೇ ಇಲ್ಲದ ಅರಣ್ಯ. ಆಶ್ರಮದ ಪಕ್ಕದಲ್ಲಿ ಒಂದು ಸಣ್ಣ ನದಿ. (ಈಗ ಶೃಂಗೇರಿ ಪಕ್ಕದಲ್ಲಿರೋ "ಕಿಗ್ಗ"ದ ಸುತ್ತಲಿನ ಅರಣ್ಯ ಪ್ರದೇಶ)
ಮಾಮೂಲಿನಂತೆ ಸ್ನಾನಕ್ಕೆ ಹೋದ. ಸ್ನಾನ ಮಾಡ್ತಾ ಇರೋವಾಗ, ದೇವಲೋಕದ ಊರ್ವಶಿ ಮೋಹಕ ವೇಷ ಧರಿಸಿ ವಯ್ಯಾರದಿಂದ ಬಂದು ನಿತ್ಕೊಂಡ್ಲು.
ಸ್ನಾನದಲ್ಲಿದ್ದ ವಿಭಾಂಡಕ ಋಷಿ ಇವಳನ್ನು ನೋಡಿದಾಗ ಏನೋ ಒಂದು ತರಹದ ಉದ್ರೇಕವಾಯ್ತು, ಸ್ಕಲನವೂ ಆಯಿತು. ಸರಿ, ಸ್ನಾನಮಾಡಿ ಆಶ್ರಮಕ್ಕೆ ಹೋಗಿದ್ದಾಯಿತು.
ಅಷ್ಟರಲ್ಲಿ ಬಾಯಾರಿದ ಒಂದು ಜಿಂಕೆ ಬಂದು ಅಲ್ಲಿ ನೀರು ಕುಡೀತು. ವಿಭಾಂಡಕನ ದೇಹದಿಂದ ಹೊರಬಂದಿದ್ದ 'ಅಂಶ' ನೀರಿನಜೊತೆ ಜಿಂಕೆಯ ದೇಹವನ್ನು ಸೇರಿ ಗರ್ಭ ಧರಿಸಿತು.
ನಂತರ ಮಗು ಹುಟ್ಟಿತು. ತನ್ನ ಮಗೂನ ವಿಭಾಂಡಕ ಆಶ್ರಮಕ್ಕೆ ಕರ್ಕೊಂಡು ಹೋದ. ಹುಟ್ಟಿದ ಮಗೂಗೆ ತಲೆಮೇಲೆ ಜಿಂಕೆಗಳಿಗೆ ಇರೋ ಹಾಗೆ ಒಂದು 'ಕೋಡು' (ಶೃಂಗ) ಇತ್ತು, ಹಾಗಾಗಿ "ಋಶ್ಯಶೃಂಗ" ಅಂತ ಹೆಸರಿಟ್ಟ.
*|ಪಾಂಡವರು|*
ಇನ್ನು ಪಾಂಡವರು ಹುಟ್ಟಿದ್ದು ಎಲ್ಲರಿಗೂ ಗೊತ್ತಿದೆ.
ದೂರ್ವಾಸ ಮುನಿ ಕುಂತಿಗೆ ಮಂತ್ರ ಉಪದೇಶ ಮಾಡಿದ. ಮಂತ್ರ ಹೇಳಿದರೆ ಸಾಕು ಗಂಡು ಮಕ್ಕಳು ಹುಟ್ಟುತಾವೆ ಅಂದ. ಕುಂತಿ ಮದುವೆಗೆ ಮುಂಚೇನೆ ಟ್ರೈ ಮಾಡೋಣ ಅಂತ, ಮಂತ್ರ ಹೇಳಿದಳು, ಕರ್ಣ ಹುಟ್ಟದ. ಮದುವೆ ಮಾಡ್ಕೊಂಡಮೇಲೆ ಉಳಿದೋರು ಹುಟ್ಟಿದರು.
ಯಾವ ಆಸ್ಪತ್ರೆನೂ ಇಲ್ಲ, ನರ್ಸಿಂಗ್ ಹೋಮ್ ಇಲ್ಲ. ಒಂದು ರೂಪಾಯಿ ಖರ್ಚು ಆಗ್ಲಿಲ್ಲ. ಹೆರಿಗೆ ನೋವು ಮೊದಲೇ ಇಲ್ಲ.
*|ಕೃಪಾಚಾರ್ಯ|*
ಕೃಪನ ತಂದೆ ಶರದ್ವಂತ ತಪಸ್ಸು ಮಾಡ್ತಾ ಇದ್ದ.
'ಇಂದ್ರ' ತಪಸ್ಸು ಭಂಗ ಮಾಡೋಕೆ ಅಂತ 'ಜಾಲವತಿ' ಅಪ್ಸರೆನ ಕಳಿಸಿದ. ತಪಸ್ಸು ಆದಮೇಲೆ ಎದ್ದು ಹೋದ ಜಾಗದಲ್ಲಿ ಹುಲ್ಲಿನಮೇಲೆ ಬಿದ್ದಿದ್ದ ವೀರ್ಯಾಣುವಿಂದ ಹುಟ್ಟಿದೋರು, ಕೃಪ ಮತ್ತು ಕೃಪಿ ಅವಳಿ ಮಕ್ಕಳು. ಅವರನ್ನು ಬೇಟೆಗೆ ಬಂದ "ಶಂತನು" ಮಹಾರಾಜ ನೋಡಿ ಅರಮನೆಗೆ ಕರ್ಕೊಂಡು ಹೋಗಿ ವಿದ್ಯೆ ಕಲಿಸಿ ಬೆಳಸಿದ
ಈ 'ಕೃಪಿ'ನ ದ್ರೋಣಾಚಾರ್ಯರಿಗೆ ಕೊಟ್ಟು ಮದುವೆ ಮಾಡಿದ, ಅವರ ಮಗನೇ ಅಶ್ವತ್ಥಾಮ.
*|ಅಶ್ವಿನಿ ದೇವತೆಗಳು|*
ಇವರನ್ನ ತಥಾಸ್ತು ದೇವತೆಗಳು ಅಂತನೂ ಕರೀತಾರೆ. ಸಾಯಂಕಾಲದ ಸಮಯದಲ್ಲಿ ಸಂಚರಿಸುವುದು ಜಾಸ್ತಿ.
ಸೂರ್ಯನ ಹೆಂಡತಿ 'ಸರಣ್ಯು' ಗಂಡನ ಶಾಖದ ಬಿಸಿ ತಡೆಯೋಕೆ ಆಗ್ದೆ, ಹಿಮಾಲಯದ ಕಾಡಿಗೆ ಹೋಗ್ತಾಳೆ. ಯಾರಾನ ಗುರುತು ಹಿಡೀತಾರೆ ಅಂತ ಕುದುರೆಯಾಗಿ ಮಾರ್ಪಾಡು ಆಗ್ತಾಳೆ. ಹೆಂಡತಿನ ಹುಡುಕ್ಕೊಂಡು ಬಂದ ಸೂರ್ಯನಿಗೆ, ಇವಳು ಕುದರೆ ಆಗಿರೋದು ಗೊತ್ತಾಯ್ತು, ಸರಿ ಅವನೂ ಕುದುರೆಯಾದ. ಈ ಇಬ್ಬರಿಗೆ ನಂತರ ಹುಟ್ಟಿದವರೇ "ನಸತ್ಯ" ಮತ್ತು "ದರ್ಸ" ಅನ್ನೋ ಅಶ್ವಿನಿ ಕುಮಾರರು.
ಅವರಿಬ್ಬರಿಗೂ ಕುದುರೆಯ ತಲೆ, ಮನುಷ್ಯನ ದೇಹ ಇತ್ತು.
ಹಾಗಾಗಿಯೇ ಹಿಂದಿನ ಹಿರಿಯರು ಹೇಳ್ತಾ ಇದ್ದದ್ದು, ಸಂಜೆಯ ವೇಳೆಯಲ್ಲಿ ಮನೆಯಲ್ಲಿ ಕೆಟ್ಟ ಮಾತು, ಕೆಟ್ಟ ಯೋಚನೆಗಳನ್ನು ಮಾಡಬಾರದು ಅಂತ. ಎಲ್ಲದಕ್ಕೂ ಅಶ್ವಿನಿ ದೇವತೆಗಳು "ತಥಾಸ್ತು" ಅಂತಾರೆ.
*|ಬಲರಾಮ|*
ಈಗ ಬಾಡಿಗೇ ತಾಯಂದಿರು ಇರ್ತಾರಲ್ಲ, ಹಾಗೆ ಆ ಕಾಲ್ದಲ್ಲೇ ಶ್ರೀಕೃಷ್ಣನ ಅಣ್ಣ "ಬಲರಾಮ" ಬಾಡಿಗೆ ತಾಯಿಯ ಹೊಟ್ಟೇಲಿ ಹುಟ್ಟಿದ್ದು.
ಜೈಲಲ್ಲಿದ್ದ ವಸುದೇವ ದೇವಕಿಯರ ಆರನೇ ಮಗುಗೆ ಗರ್ಭಧಾರಣೆಯ ಆದಾಗ ಶ್ರೀ ಮಹಾವಿಷ್ಣು ಮಾಯೆಯನ್ನು ಕಳಿಸಿ, ದೇವಕಿಯ ಗರ್ಭದಲ್ಲಿದ್ದ ಭ್ರೂಣವನ್ನು, ವಸುದೇವನ ಇನ್ನೊಂದು ಹೆಂಡತಿ ರೋಹಿಣಿ ಗರ್ಭದಲ್ಲಿ ಟ್ರಾನ್ಸಪ್ಲಾನ್ಟ್ ಮಾಡಿದ್ದಾಯ್ತು. ಅಲ್ಲಿ ಹುಟ್ಡಿದೋನೇ "ಬಲರಾಮ"
ಅಂದ್ರೆ ಆ ಕಾಲದಲ್ಲೇ ಮೆಡಿಕಲ್ ಟೆಕ್ನಾಲಜಿ ಸೂಪರ್ ಆಗಿತ್ತಲ್ವೇ...?
ಸ್ವಲ್ಪ ಹಾಗೇ ಟೈಂ ಪಾಸ್ನಲ್ಲಿ ಅಂತ ತಮಾಷೆಯಾಗಿ ಬರೆದಿದ್ದರೂ, ಯಾವುದೇ ಮೂಲ ವಿಷಯ ತಿರುಚಿಲ್ಲ ಅನ್ನೋದು ಸತ್ಯ.
ಇನ್ನೂ ಈತರದ್ದು ಬೇಕಾಡಷ್ಟಿದೆ.
ನಿಮುಗೂ ಈ ತರದ ಹೆಚ್ಚು ವಿಚಾರಗಳು ಗೊತ್ತಿದ್ರೆ ಹಂಚಿಕೊಳ್ಳೀ.....
ಧನ್ಯವಾದಗಳು.
ವಿ.ಎಸ್‌ಮಣಿ.
***

Vaishaka Shudda Trayodashi, the avatara day of Shriman Narayana as Shri VedaVyasaru. He was born to Sage Parashara and Satyavathi. He is also known as BAdarayana, Krishna Dwaipayana and Vasishta Krishna.

It is Shri VedaVyasaru who complied the Vedas into four – Rig, Yajur, Sama and Atharvana veda and it is this astounding effort that gave him the title Veda Vyasa.

He wrote the 18 Puranas (main epics) viz.,

Brahma Purana
Padma Purana
Vishnu Purana
Shaiva Purana
Bhagwata Purana
Narayana Purana
Markandeya Purana
Agni Purana
Bhavishyottara Purana
Brahma Vaivarta Purana
Linga Purana
Varaha Purana
Skanda Purana
Vamana Purana
Kurma Purana
Matsya Purana
Garuda Purana
Brahmanda Purana

Out of the 18 puranas, six are Sattvika Puranas and glorify Vishnu ; They tell about Vishnu Sarvottamatva, – Vishnu Purana, Naradiya Purana, Padma Purana, Garuda Purana, Varaha Purana, and Bhagavatha  Purana are Sattvika Puranas.

Six are Rajasa and glorify Lord Brahma; - Brahmanda Purana, Brahmavaivarta Purana, Markandeya Purana, Bhavishya Purana, Vamana Purana, Brahma Purana are Rajasic Puranas.

Six are Tamasa and they glorify Lord Shiva; – Matsya Purana, Kurma Purana, Linga Purana, Shiva Purana, Skanda Purana and Agni Purana are Tamasic Puranas.

Further, 18 Upa-Puranas (subsidiary epics) and 

Shri VedaVyasaru is the author of the grandest and largest epic – the Mahabharat which contains the Bhagawad Geeta -one of the greatest scriptures of the world. He is also the author of the “Bhagavata Purana” and the “Brahma Sutras”.  But for Him, we would not have had so vast a range of Sanatana literature.

Jagadguru Shriman Madhwacharya and His shishyas have written several commentaries on works of Shri Vedavyasaru to simplify the understanding. 

Lets pray through our gurugalu to our paramagurugalu through them to Shri VedaVyasaru to give us Jnana Bhakti and Vairagya🙏🏻

|| Shri Krishnarpanamasthu
**


No comments:

Post a Comment