SEARCH HERE

Tuesday 1 January 2019

ಸಂಸೃತ ಕಲಿ learn sanskrit samsruta







village in north karnataka near chikkodi




Sanskrit learning class had this signature song in radio in 1970s


This was the 'signature tune' (in AIR terminology) for very popular programme on air 'samskrutha parichayam' during 1970s - a sanskrit learning class on AIR. Shriman KeSavapanthula Narasimha Sastry was the producer. The title song was very popular singers being Sri M.Chittaranjan and Smt Pakala Savitri Devi. Well learned sanskrit pandits used to attend as teachers and one and only Sarada Sreenivasan was student for so many years.This sloka was by-heart for most of the radio lovers as this programme was being aired in very prime time before 8AM Hindi news that was from 7.45aM to 8AM. Here is the text of this precious sloka:
Keyuraa na vibhushayanthi purusham haaraa na chandrojjvalaa na snaanam na vilepanam na kusumam naalankrthaa murdhajaah| vaanyekaa samalankaroti purusham yaa samskrthaa dhaaryate ksheeyante khalu bhushanaani satatam vaagbhushanam bhushanam||
September 2019 message

Free Samskrita Speaking Course. 
Festival for Samskrita Lovers! 
Be A Samskrita Speaker in Just  15 Days!
Samskrita Background Not Required! 
All Are Welcome
Samskrita Bharati in Association with Beechi Vidya Kendra is conducting   " Spoken Samskrita Class" 
at _*Beechi Vidya Kendra, 
No 641, Kodigehalli Main Road, Opposite to Chairman Club,
Shahakaranagar, Bengaluru - 92._* 
Contact : 9035302302 / 9686029595
 *Timing : 6:15  to 7:15 pm on Monday to Friday. 
Duration : From 9th Sept Monday to 27th Sept  Friday.* 
All are Welcome, Please Do Invite Dear and Near. 
A Noble Journey For Rastriya Vaibhava Suraksha Abhiyana!
*********

Amazing Sanskrit!
The sentence ‘Able was I ere I saw Elba’ is often quoted as a great example of a palindromic sentence in English as it can be read in reverse too. This is said to be created in the 17th century.

Now, consider the following:
A Sanskrit poet by name Daivagjna Surya Pandita wrote a Sanskrit work by name “Ramakrishna Viloma Kaavyam” in the 14th century (English-equivalent of the word ‘viloma’ is ‘inverse’). This book is supposed to have 40 slokas (a sloka is a Sanskrit poem). Each sloka makes sense both when read in from the beginning of the sloka to the end AS WELL AS from the end to the beginning of the sloka (a sort of palindrome). 

Now comes the best part. When each sloka is read in the forward direction, the book deals with the story of Ramayana and when each sloka is read in the reverse direction, the book deals with the story of Maha Bharata.

One sloka is given below (in devanagari font)

तां भूसुता मुक्ति मुदारहासं
वंदेयतो लव्य भवं दयाश्री 

The same sloka, read in backward direction is given below:

श्री यादवं भव्य लतोय देवं 
संहारदामुक्ति मुता सुभूतां 

In the first sloka, भूसुता implies Sita and hence, Ramayana story and in the second sloka, श्री यादवं implies Lord Krishna. 

The meaning of the first sloka is “I pray to Sita, the incarnation of Lakshmi who is affectionate towards a smiling Lava (Sita’s son)”.

The meaning of the second sloka is “The teachings of Gita, bestowed upon us by Lord Krishna who draws people towards him with his benevolence, destroy evil and are close to our heart”

And there are 39 more shlokas like this.

Need one say more about Sanskrit or the people who created many wonders in ancient India?
-- by Venkata Ramana Muthom
****

Dear Friends,
This is very important! The 2022 Indian Census is nearing its end.  The Census officials will be visiting you soon to collect data. 

Irrespective of your mother tongue, please specify "Samskritam" as one of the languages you know. Even though everyone may not speak Samskritam but we are definitely using it daily in our prayers, chants, shlokas and all rituals. 

As per the last census, the number of Samskritam-speaking people in India was just a couple of thousands in the entire country. Whereas the number of people speaking Arabic and Persian is much much more, and they are getting funds for developing those languages.  If the numbers keep falling then there is a serious possibility that Samskritam might be declared an 'extinct' language! 

It is the responsibility of all of us in keeping India's most ancient, beautiful, devine language alive. If Samskritam were to be declared as an 'extinct' language then there will not be any funding to develop and spread the language.  And we just might end up losing Sanskritam forever.

Only our conscious efforts can keep Samskritam alive. We're running out of time, but it is not yet too late to turn things around.  Please learn and speak Samskritam as much as possible.

***

A very old sanskrit poem saying that speech is the only true ornament to men.

The following video prompts you to learn Sanskrit.

                                                                   
ಸಂಸ್ಕೃತ ಗುರುಕುಲ 94 48 243724  ಗಣಪತಿ ಹೆಗಡೆ【ಸಂಗ್ರಹ  : ಸ್ವರ್ಣವಲ್ಲೀ ಭಕ್ತವೃಂದ】
missing 7, 9

ಸಂಸ್ಕೃತದ ಹಲವು ಪದಗಳನ್ನು ನಮಗರಿವಿಲ್ಲದೆ ದೈನಂದಿನ ಜೀವನದಲ್ಲಿ ಬಳಸುತ್ತಲೇ ಇರುತ್ತೇವೆ. ಇಲ್ಲಿ ಆರಂಭದಲ್ಲಿ ದಿನಬಳಕೆಗೆ ಉಪಯುಕ್ತವಾದ ಕೆಲವು ಪದಗಳನ್ನು ಕೊಡಲಾಗುತ್ತದೆ. ಇವನ್ನು ತಪ್ಪದೆ ಸಂಗ್ರಹಿಸಿಕೊಳ್ಳುತ್ತ ಬನ್ನಿ. ಕೆಲವು ದಿನಗಳ ನಂತರ ಈ ಪದಗಳನ್ನೇ ಬಳಸಿ ವಾಕ್ಯರಚನೆ ಮಾಡುವುದನ್ನು ಹೇಳಲಾಗುತ್ತದೆ. ಇಲ್ಲಿ ಕೊಟ್ಟಿರುವ ಶಬ್ದಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸುವುದರ ಮೂಲಕ ಸಂಸ್ಕೃತ ಕಲಿಕೆಯ ಶುಭಾರಂಭವಾಗಲಿ.

ನಮಸ್ತೇ / ನಮಸ್ಕಾರಃ / ನಮೋ ನಮಃ / ಪ್ರಣಾಮಃ - ನಮಸ್ಕಾರಗಳು
ಹರಿ ಓಂ / ನಮಸ್ಕಾರಃ - ಹಲೋ, ನಮಸ್ಕಾರ
ಸ್ವಾಗತಂ - ಸ್ವಾಗತ
ಸುಪ್ರಭಾತಂ - ಶುಭಮುಂಜಾನೆ
ಸುಮಧ್ಯಾಹ್ನಂ - ಶುಭಮಧ್ಯಾಹ್ನ
ಸುಸಾಯಂಕಾಲಃ / ಸುಸಂಧ್ಯಾ / ಶುಭಸಾಯಂ - ಶುಭ ಸಂಜೆ
ಶುಭರಾತ್ರಿಃ - ಶುಭರಾತ್ರಿ
ಕೃಪಯಾ - ದಯಮಾಡಿ
ಕ್ಷಮ್ಯತಾಂ - ಕ್ಷಮೆಯಿರಲಿ
ಧನ್ಯವಾದಃ - ಧನ್ಯವಾದಗಳು

ಯಾರಾದರೂ ಎದುರು ಸಿಕ್ಕಾಗ ಪರಸ್ಪರ ಔಪಚಾರಿಕವಾಗಿ ಬಳಸುವ ಪದಗಳಿವು. ಒಂದೇ ಸಂದರ್ಭದಲ್ಲಿ ಎರಡು ಅಥವಾ ಮೂರು ಪದಗಳನ್ನು ಬಳಸಬಹುದು. ಈ ಪದಗಳಿಂದ ಸಂಸ್ಕೃತಾಭ್ಯಾಸ ಆರಂಭವಾಗಲಿ. ನಿತ್ಯವೂ ಕೆಲವು ಪದಗಳನ್ನು ಕೊಡಲಾಗುವುದು. ಆಯಾ ದಿನದ ಸೂಚನೆಗಳಿಗೆ ಅನುಗುಣವಾಗಿ ಸಮಯ, ಸಂದರ್ಭಗಳು ಒದಗಿದಾಗಲೆಲ್ಲ ಈ ಪದಗಳನ್ನು ಪ್ರಯೋಗಿಸುತ್ತ ಬನ್ನಿ.
****

ಸಂಸ್ಕೃತ ಗುರುಕುಲ 【2】

ನಿನ್ನೆ ಕೊಟ್ಟಿದ್ದ ಪದಗಳನ್ನು ಸಂದಭಾ೯ನುಸಾರ ಓದುಗರು ಬಳಸಿರಬಹುದು. ಅದೇ ರೀತಿಯ ಕೆಲವು ಪದಗಳು ಇಲ್ಲಿವೆ.

ಅಭಿನ೦ದನಾನಿ - ಅಭಿನ೦ದನೆಗಳು
ಶುಭಾಶಯಾಃ - ಶುಭಾಶಯಗಳು
ಸಮೀಚೀನಮ್ - ಸರಿಯಾಗಿದೆ
ಉತ್ತಮಮ್ - ಉತ್ತಮವಾಗಿದೆ
ಸಾಧು - ಸರಿಯಾದದು, ಯೋಗ್ಯವಾದುದು.
ಪುನಮಿ೯ಲಾಮಃ - ಮತ್ತೆ ಭೇಟಿಯಾಗೋಣ
ಚಿ೦ತಾ ಮಾಸ್ತು - ಪರವಾಗಿಲ್ಲ
ಅಸ್ತು - ಹಾಗೇ ಆಗಲಿ
ಶುಭಯಾತ್ರಾ / ಸುಖಪ್ರಯಾಣ೦ - ಶುಭ ಪ್ರಯಾಣ
ಶುಭಮಸ್ತು - ಶುಭವಾಗಲಿ
ವಿಜಯೋಸ್ತು - ವಿಜಯವಾಗಲಿ
ಪುನಃ ಪಶ್ಯಾಮಃ - ಮತ್ತೆ ನೋಡೋಣ
ಸುಖೀ ಭವ - ಸುಖವಾಗಿರು
ಚಿರ೦ ಜೀವೀ/ ದೀಘಾ೯ಯುಷೀ ಭವ - ದೀಘಾ೯ಯುಷಿಯಾಗು
ಕುಶಲ೦ ವಾ? - ಕುಶಲವೆ? ಕ್ಷೇಮವೆ? ಆರೋಗ್ಯವೆ?

ನಿತ್ಯ ಬಳಸುತ್ತಿರುವ ಆ೦ಗ್ಲಪದಗಳ ಬದಲು ಸ೦ಸ್ಕೃತಪದಗಳನ್ನೇ ಬಳಸತೊಡಗಿದರೆ ಇತರರೂ ಸ೦ಸ್ಕೃತ ಕಲಿಕೆಗೆ ಮು೦ದಾಗಬಹುದು. ದೂರವಾಣಿ ಕರೆ ಮಾಡಿದಾಗ ಅಥವಾ ಕರೆ ಬ೦ದಾಗ "ಹಲೋ' ಬದಲು "ಹರಿ ಓ೦' ಪದ ಬಳಸೋಣ. ಸ೦ಸ್ಕೃತ ಕಲಿಯುವುದರ ಜತೆಗೆ ಸ೦ಸ್ಕೃತದ ವಾತಾವರಣ ನಿಮಾ೯ಣವೂ ಬಹಳ ಮುಖ್ಯ. ಆದ್ದರಿ೦ದ ಸುತ್ತಮುತ್ತ ಸ೦ಸ್ಕೃತ ವಾತಾವರಣ ನಿಮಿ೯ಸೋಣ.
ಗಣಪತಿ ಹೆಗಡೆ【ಸಂಗ್ರಹ : ಸ್ವರ್ಣವಲ್ಲೀ ಭಕ್ತವೃಂದ】
*****

ಸಂಸ್ಕೃತ ಗುರುಕುಲ【3】

ಈಗಾಗಲೇ ಪರಸ್ಪರ ಶಿಷ್ಟಾಚಾರಕ್ಕಾಗಿ ಬಳಸುವ ಕೆಲವು ಪದಗಳನ್ನು ತಿಳಿದಿದ್ದೇವೆ. ಅವನ್ನು ನಿತ್ಯ ಸಂದಭಾ೯ನುಸಾರ ಉಪಯೋಗಿಸಿರುತ್ತೇವೆ. ಇಂದು ಕೂಡ ನಿತ್ಯೋಪಯೋಗಿಯಾದ ಹತ್ತು ಪದಗಳನ್ನು ಕೊಡಲಾಗಿದೆ. ನಿನ್ನೆಯ ಪದಗಳನ್ನು ಬಳಸಿದಂತೆಯೇ ಇವುಗಳನ್ನೂ ಸಂದಭ೯ ಬಂದಾಗ ಬಳಸಬಹುದು.

ಪಿತಾ / ಜನಕಃ - ತಂದೆ
ಅಂಬಾ / ಮಾತಾ / ಜನನೀ - ತಾಯಿ
ಪುತ್ರಃ / ಸುತಃ / ತನಯಃ / ಆತ್ಮಜಃ / ಸೂನುಃ - ಮಗ
ಪುತ್ರೀ / ಸುತಾ / ದುಹಿತಾ / ಆತ್ಮಜಾ / ತನಯಾ - ಮಗಳು
ಪಿತೃವ್ಯಃ - ತಂದೆಯ ಸಹೋದರ
ಪಿತ್ರವ್ಯಾ - ಪಿತೃವ್ಯನ ಪತ್ನೀ
ಪಿತಾಮಹಃ - ಅಜ್ಜ (ತಂದೆಯ ತಂದೆ)
ಪಿತಾಮಹೀ - ಅಜ್ಜಿ (ತಂದೆಯ ತಾಯಿ)
ಮಾತಾಮಹಃ - ತಾತ (ತಾಯಿಯ ತಂದೆ)
ಮಾತಾಮಹೀ - ಅಜ್ಜಿ (ತಾಯಿಯ ತಾಯಿ)
ಇವು ಪರಸ್ಪರ ಸಂಬಂಧ ಸೂಚಿಸುವ ಪದಗಳು. ಈ ಸಂಬಂಧೀ ಪದಗಳನ್ನು ಉಪಯೋಗಿಸುವ ಸಂದಭ೯ ಬಂದಾಗ ಪ್ರಯತ್ನಪೂವ೯ಕವಾಗಿ ಸಂಸ್ಕೃತಪದಗಳನ್ನೇ ಬಳಸೋಣ. "ಮಮ' ಎಂದರೆ "ನನ್ನ' ಎಂದಥ೯. ಈಗ ನಾವು ಚಿಕ್ಕ ಚಿಕ್ಕ ವಾಕ್ಯಗಳನ್ನು ಮಾಡಬಹುದು.
ಉದಾ: ಮಮ ಪಿತಾ.
           ಮಮ ಮಾತಾ.
     ಈ ಪದಗಳ ಸಹಾಯದಿಂದ ಹತ್ತು ವಾಕ್ಯಗಳನ್ನು ನಿಮಿ೯ಸಬಹುದು, ಪ್ರಯತ್ನಿಸಿ, ಒಂದೆಡೆ ಬರೆದಿಡಿ. ಪದಗಳನ್ನು ಪ್ರಯೋಗಿಸಿ ವ್ಯವಹರಿಸುವುದೇ ಸಂಸ್ಕೃತ ಕಲಿಕೆಯಲ್ಲಿ ಬಹಳ ಮುಖ್ಯ.
******

ಸಂಸ್ಕೃತ ಗುರುಕುಲ 【4】

ಕಳೆದ ಮೂರು ದಿನಗಳಿಂದ ತಮ್ಮ ಕಲಿಕೆ ಪ್ರಗತಿಯಲ್ಲಿರಬಹುದು. ಇನ್ನೂ ಕೆಲವು ಸಂಬಂಧಸೂಚಕ ಪದಗಳನ್ನಿಲ್ಲಿ ಗಮನಿಸೋಣ.

ದಂಪತೀ - ದಂಪತಿ
ಪತಿಃ - ಪತಿ,
ಪತ್ನೀ / ಭಾಯಾ೯ / ಜಾಯಾ - ಪತ್ನಿ
ಪೌತ್ರಃ - ಮೊಮ್ಮಗ (ಮಗನ ಮಗ)
ಪೌತ್ರೀ - ಮೊಮ್ಮಗಳು (ಮಗನ ಮಗಳು)
ದೌಹಿತ್ರಃ - ಮೊಮ್ಮಗ (ಮಗಳ ಮಗ)
ದೌಹಿತ್ರೀ - ಮೊಮ್ಮಗಳು (ಮಗಳ ಮಗಳು)
ಸ್ನುಷಾ - ಸೊಸೆ,
ಸಹೋದರಃ / ಭ್ರಾತಾ - ಸಹೋದರ
ಅಗ್ರಜಃ - ಅಣ್ಣ
ಅನುಜಃ - ತಮ್ಮ
ಅಗ್ರಜಾ - ಅಕ್ಕ,
ಅನುಜಾ - ತ೦ಗಿ
ಸಹೋದರೀ/ ಸ್ವಸಾ - ಸಹೋದರಿ
ದೇವರಃ - ಮೈದುನ (ಪತಿಯ ತಮ್ಮ)
"ಮಮ ಪುತ್ರೀ', "ಮಮ ಅನುಜಾ' - ಇಂತಹ ವಾಕ್ಯಗಳಂತೆ ಈ ಪದಗಳ ಸಹಾಯದಿ೦ದ ಇಪ್ಪತ್ತು ವಾಕ್ಯಗಳನ್ನು ರಚಿಸಬಹುದು, ಪ್ರಯತ್ನಿಸಿ. ಆ ನಿಟ್ಟಿನಲ್ಲಿ ನೀವು ಪ್ರಯತ್ನಶಾಲಿಗಳಾದರೆ ಭಾಷಾಕಲಿಕೆ ಸುಲಭ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಪದಗಳನ್ನು ಪ್ರಯೋಗಿಸುತ್ತ ಬನ್ನಿ. ಇತರರೊಂದಿಗೆ ನಾವು ವ್ಯವಹರಿಸುವುದರಿಂದ ಅವರನ್ನೂ ಸಂಸ್ಕೃತಕಲಿಕೆಯತ್ತ ಪ್ರೇರೇಪಿಸಿದಂತಾಗುತ್ತದೆ. ಸಂಸ್ಕೃತಕಲಿಕೆಗೆ ಮುಖ್ಯವಾಗಿ ಬೇಕಾಗಿರುವುದು ಪದಗಳನ್ನು ಪ್ರಯೋಗಿಸಿ ವ್ಯವಹರಿಸುವುದು ಮತ್ತು ನಿತ್ಯವೂ ಕೆಲವು ಕಾಲ ಅಭ್ಯಾಸ ಮಾಡುವುದು. "ಅನಭ್ಯಾಸೇ ವಿಷಂ ವಿದ್ಯಾ' - "ಅಭ್ಯಾಸದಲ್ಲಿರದಿದ್ದರೆ ವಿದ್ಯೆಯೂ ವಿಷವಾಗುವುದು' ಎನ್ನುತ್ತದೆ ಸುಭಾಷಿತ.
********

ಸಂಸ್ಕೃತ ಗುರುಕುಲ 【5】

ಕಳೆದ ನಾಲ್ಕು ದಿನಗಳಿಂದ ಸಂಸ್ಕೃತಾಭ್ಯಾಸ ಮಾಡುತ್ತಿದ್ದೀರಿ. ಈ ದಿನಗಳಲ್ಲಿ ಸಂಸ್ಕೃತ ಕಲಿಕೆಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಿರಬಹುದು. ಮುಂದುವರಿದು ಇನ್ನೂ ಕೆಲವು ಸಂಬಂಧಸೂಚಕ ಪದಗಳನ್ನು ಗಮನಿಸೋಣ.

ಶ್ವಶುರಃ - ಮಾವ (ಪತ್ನಿಯ ತಂದೆ)
ಶ್ವಶ್ರೂಃ - ಅತ್ತೆ (ಪತ್ನಿಯ ತಾಯಿ)
ಭ್ರಾತೃಜಾಯಾ - ಸಹೋದರನ ಪತ್ನೀ
ಮಾತುಲಃ - ಮಾವ (ತಾಯಿಯ ಸಹೋದರ)
ಮಾತುಲಾನೀ - ಅತ್ತೆ (ಮಾತುಲನ ಪತ್ನೀ)
ಜಾಮಾತಾ - ಅಳಿಯ
ಭಾಗಿನೇಯಃ - ಅಕ್ಕನ ಮಗ
ಆವುತ್ತಃ - ಭಾವ (ಸಹೋದರಿಯ ಪತಿ)
ಶ್ಯಾಲಃ - ಭಾವಮೈದುನ
ಶಿಶುಃ - ಮಗು
ಯಮಲಃ - ಅವಳಿ
ಪ್ರಪೌತ್ರಃ - ಮರಿ ಮೊಮ್ಮಗ
ಸಖಾ / ಮಿತ್ರಮ್ / ವಯಸ್ಯಃ / ಸ್ನೇಹಿತಃ - ಗೆಳೆಯ
ದಾಯಾದಃ - ದಾಯಾದಿ

ಸಂಬಂಧ ಸೂಚಿಸುವ ಆಯಾ ಪದಗಳಿಂದಲೇ ಸಂಬಂಧಿಗಳನ್ನು ಕರೆಯೋಣ. ಇದರಿಂದ ಸಂಸ್ಕೃತಾಭ್ಯಾಸ ಸುಗಮವಾಗುತ್ತದೆ.
‘ಮಮ ಭಾಗಿನೇಯಃ’,
‘ಮಮ ಭ್ರಾತೃಜಾಯಾ’
 ಈ ವಾಕ್ಯಗಳಂತೆ ಮೇಲಿನ ಪದಗಳ ಸಹಾಯದಿಂದ ಇಪ್ಪತ್ತು ವಾಕ್ಯಗಳನ್ನು ರಚಿಸಬಹುದು. ಹಿಂದಿನ ಪಾಠಗಳಲ್ಲಿನ ವಾಕ್ಯಗಳನ್ನು ಮತ್ತೊಮ್ಮೆ ಬರೆದು ಅಭ್ಯಾಸ ಮಾಡಿ.
*****

ಸಂಸ್ಕೃತ ಗುರುಕುಲ 【6】

ಇ೦ದಿನಿ೦ದ ಸ೦ಸ್ಕೃತಭಾಷೆಯಲ್ಲಿ ವ್ಯವಹರಿಸುವುದನ್ನು ಅಭ್ಯಾಸ ಮಾಡೋಣ. ಯಾರಾದರೂ ಎದುರಾದಾಗ ಪರಿಚಯಿಸಿಕೊಳ್ಳಲು ಈ ವಾಕ್ಯಗಳನ್ನು ಬಳಸಿ.

ಶ್ರೀಮನ್/ ಮಹೋದಯ/ ಮಾನ್ಯ  -  ಮಾನ್ಯರೇ
ಈ ಪದಗಳನ್ನು ಬಳಸಿ ಪುರುಷರನ್ನು ಮಾತಿಗೆಳೆಯಬಹುದು. ಪುರುಷರು ಎದುರಾದಾಗ,
 "ಮಹೋದಯ! ನಮಸ್ಕಾರಃ" ಎ೦ದು ಆರ೦ಭಿಸಿ.
ಉದಾ  -
ಮಮ ನಾಮ ಶಂಕರಃ. ಭವತಃ ನಾಮ ಕಿಮ್?
(ನನ್ನ ಹೆಸರು ಶಂಕರ. ನಿಮ್ಮ ಹೆಸರೇನು?)

ಮಮ ನಾಮ ಗೋಪಾಲಃ. ಭವತಃ ನಾಮ ಕಿಮ್?
(ನನ್ನ ಹೆಸರು ಗೋಪಾಲ. ನಿಮ್ಮ ಹೆಸರೇನು?)

ಆಯೆ೯/ಮಹೋದಯೇ/ ಮಾನ್ಯೇ - ಮಾನ್ಯಳೇ
ಈ ಪದಗಳನ್ನು ಬಳಸಿ ಮಹಿಳೆಯರನ್ನು ಮಾತನಾಡಿಸಬಹುದು. ಸ್ತ್ರಿಯರು ಎದುರಾದಾಗ
 "ಮಾನ್ಯೇ! ನಮಸ್ಕಾರಃ" ಎ೦ದು ಆರ೦ಭಿಸಿ.

ಉದಾ -
ಮಮ ನಾಮ ಕಮಲಾ. ಭವತ್ಯಾಃ ನಾಮ ಕಿಮ್?
(ನನ್ನ ಹೆಸರು ಕಮಲಾ. ನಿಮ್ಮ ಹೆಸರೇನು?)

ಮಮ ನಾಮ ಶ್ವೇತಾ. ಭವತ್ಯಾಃ ನಾಮ ಕಿಮ್?
(ನನ್ನ ಹೆಸರು ಶ್ವೇತಾ. ನಿಮ್ಮ ಹೆಸರೇನು?)

ಹೀಗೆ ಪರಿಚಯಿಸಿಕೊಳ್ಳುವ ವಾಕ್ಯಗಳನ್ನು ಪ್ರಯೋಗಿಸುತ್ತ ಕಡಿಮೆಯೆ೦ದರೂ ಐವತ್ತು ಜನರನ್ನು ಮಾತಾಡಿಸಿ ಈ ಸ೦ಭಾಷಣೆಯನ್ನು ಆರ೦ಭಿಸಿ.
ಸ೦ಸ್ಕೃತದಲ್ಲಿ "ನಿಮ್ಮ" ಎ೦ಬುದಕ್ಕೆ ಪುಲ್ಲಿ೦ಗದಲ್ಲಿ "ಭವತಃ" ಎ೦ದೂ, ಸ್ತ್ರಿ ಲಿ೦ಗದಲ್ಲಿ "ಭವತ್ಯಾಃ" ಎ೦ದೂ ಹೇಳುತ್ತಾರೆ.
******

ಸಂಸ್ಕೃತ ಗುರುಕುಲ【8】

ಇಂದಿನ ಪಾಠದಲ್ಲಿ ಶರೀರದ ಅವಯವಗಳನ್ನು ಸಂಸ್ಕೃತದಲ್ಲಿ ಪರಿಚಯಿಸಿಕೊಳ್ಳೋಣ. ಆಯಾ ಅವಯವಗಳನ್ನು ಸ್ಪರ್ಶಿಸುತ್ತ ಶಬ್ದಗಳನ್ನು ಜೋರಾಗಿ ಹೇಳಿಕೊಂಡರೆ ಇನ್ನೂ ಬೇಗ ಅರ್ಥವಾಗುತ್ತದೆ ಹಾಗೂ ಪದಗಳು ನೆನಪಿನಲ್ಲಿರುತ್ತವೆ.

ಮಸ್ತಕಮ್ / ಶಿರಃ - ತಲೆ
ಮಸ್ತಕಾಗ್ರಮ್ - ನೆತ್ತಿಯ ಭಾಗ
ಮಸ್ತಿಷ್ಕಮ್ - ಮಿದುಳುಕೇಶಃ - ಕೂದಲು
ಮುಖಮ್ / ವದನಮ್ - ಮುಖ
ಲಲಾಟಃ - ಹಣೆ
ಭ್ರೂಃ - ಹುಬ್ಬು
ನಯನಮ್ / ನೇತ್ರಮ್ - ಕಣ್ಣು
ನಾಸಿಕಾ - ಮೂಗು
ನಾಸಾರಂಧ್ರಮ್ - ಮೂಗಿನ ಹೊಳ್ಳೆ
ಕಪೋಲಃ - ಕೆನ್ನೆ
ಚಿಬುಕಮ್ - ಗದ್ದ
ಶ್ಮಶ್ರುಃ - ದಾಡಿ
ಸೂಚನೆ:
‘ಮಮ’ ಎಂದರೆ ‘ನನ್ನ’ ಹಾಗೂ ‘ಭವತಃ’ ಮತ್ತು ‘ಭವತ್ಯಾಃ’ ಎಂದರೆ ಪುಲ್ಲಿಂಗ, ಸೀಲಿಂಗಗಳಲ್ಲಿ ಕ್ರಮವಾಗಿ ‘ನಿಮ್ಮ’ ಎಂಬುದನ್ನು ನಿನ್ನೆ ತಿಳಿದುಕೊಂಡಿದ್ದೇವೆ. ಹಿಂದಿನ ದಿನದಲ್ಲಿ ಅಭ್ಯಾಸ ಮಾಡಿದಂತೆಯೇ

ಈ ಪದಗಳನ್ನು ಸೇರಿಸಿ ಚಿಕ್ಕ ಚಿಕ್ಕ ವಾಕ್ಯಗಳನ್ನು ರಚಿಸಬಹುದು.
ಉದಾ:
ಮಮ ಮಸ್ತಕಮ್ (ನನ್ನ ತಲೆ)
(ಪುರುಷರಿಗೆ) ಭವತಃ ಕಪೋಲಃ (ನಿಮ್ಮ ಕೆನ್ನೆ)

(ಪುರುಷರಿಗೆ)
ಭವತಃ ಶ್ಮಶ್ರುಃ (ನಿಮ್ಮ ದಾಡಿ)

(ಸ್ತ್ರೀಯರಿಗೆ)
ಭವತ್ಯಾಃ ಮುಖಮ್ (ನಿಮ್ಮ ಮುಖ)
ಈ ಪದಗಳನ್ನು ಬಳಸಿ ಮೂವತ್ತಕ್ಕೂ ಹೆಚ್ಚು ವಾಕ್ಯಗಳನ್ನು ರಚಿಸಿ. ಈ ಮೊದಲು ರಚಿಸಿದ ವಾಕ್ಯಗಳನ್ನು ಮನನ ಮಾಡಿ.
*********

ಸಂಸ್ಕೃತ ಗುರುಕುಲ 【10】

‘ಅವನು’ ಎಂಬರ್ಥದ ‘ಸಃ’ ಪದದ ಬಳಕೆಯನ್ನು ಗಮನಿಸೋಣ.

ಸಃ ಬಾಲಕಃ - ಅವನು ಹುಡುಗ
ಸಃ ಪುರುಷಃ - ಅವನು ಪುರುಷ
ಸಃ ರಾಮಃ - ಅವನು ರಾಮ
ಸಃ ಪಿತಾ - ಅವನು ತಂದೆ
ಸಃ ಅನುಜಃ - ಅವನು ತಮ್ಮ
ಮೇಲಿನ ಉದಾಹರಣೆಗಳಂತೆ ‘ಸಃ’ ಎಂಬ ಸರ್ವನಾಮ ಪದಕ್ಕೆ ಸೇವಕಃ, ಧನಿಕಃ, ಶಿಷ್ಯಃ, ಶಿಕ್ಷಕಃ, ತಂತ್ರಜ್ಞಃ, ಚಾಲಕಃ, ಗಣೇಶಃ, ಗಿರೀಶಃ ಇತ್ಯಾದಿ ಪದಗಳನ್ನು ಸೇರಿಸಿ ವಾಕ್ಯಗಳನ್ನು ರಚಿಸಬಹುದು.

ಉದಾ: ‘ಸಃ ಸೇವಕಃ’ | ‘ಸಃ ಕಃ?’
ಪುಲ್ಲಿಂಗದಲ್ಲಿರುವ ಇಲ್ಲಿನ ‘ಕಃ’ ಎಂಬ ಪ್ರಶ್ನಾರ್ಥಕ ಪದಕ್ಕೆ ‘ಯಾರು’ ಎಂದರ್ಥ.
‘ಸಃ ಕಃ?’ ಎಂಬ ಪ್ರಶ್ನೆಗೆ ಉತ್ತರವಾಗಿ
‘ಸಃ ಗಣೇಶಃ’,
‘ಸಃ ಲೇಖಕಃ’,
‘ಸಃ ಸ್ನೇಹಿತಃ’ ಎಂದು ಉತ್ತರಿಸಬಹುದು. ‘ಸಃ’ ಎಂಬುದು ಏಕವಚನ ಪುಲ್ಲಿಂಗ ಪದವಾದ್ದರಿಂದ ‘ಕಃ?’ (ಯಾರು?) ಎಂಬುದೂ ಏಕವಚನದಲ್ಲೇ ಇರುತ್ತದೆ. ಈ ಹಿಂದೆ ಕೊಟ್ಟಿರುವ ಪಾಠಗಳಲ್ಲಿ ‘ಪುತ್ರಃ, ಭಾಗಿನೇಯಃ, ಜನಕಃ, ಪಿತಾಮಹಃ, ಮಾತಾಮಹಃ, ಪಿತೃವ್ಯಃ’ ಇತ್ಯಾದಿ ಅನೇಕ ಪುಲ್ಲಿಂಗ ಪದಗಳನ್ನು ನೀಡಲಾಗಿದೆ. ಅವುಗಳನ್ನು ಪುನಃ ಮನನ ಮಾಡಿ ಹೊಸ ವಾಕ್ಯಗಳನ್ನು ರಚಿಸಬಹುದು. ಈ ಪದಗಳಿಗೆ ‘ಸಃ’ ಎಂಬುದನ್ನು ಸೇರಿಸಿದಾಗ ವಾಕ್ಯವಾಗುತ್ತದೆ.
ಉದಾ: ‘ಸಃ ಪುತ್ರಃ’,
           ‘ಸಃ ಅಗ್ರಜಃ’
‘ಸಃ’ ಎಂಬುದು ಏಕವಚನದ ಸರ್ವನಾಮ ಪದ. ಆದ್ದರಿಂದ ಇದನ್ನು ಏಕವಚನದಲ್ಲಿ ಬಳಸಬೇಕು. ಆದರೆ ಗೌರವಸೂಚಕವಾಗಿ ಬಳಸುವುದರಲ್ಲಿ ತಪ್ಪೇನಿಲ್ಲ.
********

ಸಂಸ್ಕೃತ ಗುರುಕುಲ 【11】

"ಸಃ' ಎ೦ದರೆ ಅವನು ಎ೦ದಥ೯. ಅದರ೦ತೆಯೇ ವಾಕ್ಯಗಳಲ್ಲಿ ಸ್ತ್ರಿ ಲಿ೦ಗ ಪದಗಳನ್ನು ಬಳಸುವ ರೀತಿಯನ್ನು ಗಮನಿಸೋಣ.

 "ಸಾ' ಎ೦ದರೆ ಅವಳು ಎ೦ದಥ೯. ಇದು ಸ್ತ್ರಿ ಲಿ೦ಗ ಸವ೯ನಾಮ ಪದ.

ಸಾ ಬಾಲಿಕಾ - ಅವಳು ಬಾಲಕಿ
ಸಾ ಮಹಿಲಾ - ಅವಳು ಮಹಿಳೆ
"ಸಾ ಸಖೀ' - ಅವಳು ಗೆಳತಿ
"ಸಾ ಲಲಿತಾ' - ಅವಳು ಲಲಿತಾ
"ಸಾ ಶಾರದಾ' - ಅವಳು ಶಾರದಾ
"ಸಾ ವೈದ್ಯಾ' - ಅವಳು ವೈದ್ಯೆ
ಇದೇ ರೀತಿ "ಅಧ್ಯಾಪಿಕಾ, ವಿದ್ಯಾಥಿ೯ನೀ, ಭಗಿನೀ, ರಾಧಾ, ಸೀತಾ, ಮಾಲಾ ಮು೦ತಾದ ಪದಗಳಿಗೆ "ಸಾ' ಎ೦ಬುದನ್ನು ಸೇರಿಸಿ ವಾಕ್ಯಗಳನ್ನು ರಚಿಸಬಹುದು. ಪ್ರಶ್ನಾಥ೯ಕ ಪದವಾದ "ಕಾ' ಎ೦ದರೆ "ಯಾರು?' ಎ೦ದಥ೯. ಸ್ತ್ರಿ ಲಿ೦ಗರೂಪ ಏಕವಚನದಲ್ಲಿರುವ ಇದನ್ನು ಬಳಸುವ ರೀತಿ ಹೀಗಿದೆ. ಉದಾ:
"ಸಾ ಕಾ?"  (ಅವಳು ಯಾರು?) ಎ೦ಬ ಪ್ರಶ್ನೆಗೆ
"ಸಾ ಮಾತಾ" (ಅವಳು ತಾಯಿ),
"ಸಾ ಭಗಿನೀ" (ಅವಳು ಸಹೋದರೀ),
"ಸಾ ಪುತ್ರೀ (ಅವಳು ಮಗಳು)" ಎ೦ದು ಉತ್ತರಿಸಬಹುದು. "ಸಾ" ಎ೦ಬುದು ಏಕವಚನದಲ್ಲಿರುವುದರಿ೦ದ "ಕಾ?" ಎ೦ಬ ಪ್ರಶ್ನಾಥ೯ಕ ಪದವನ್ನೂ ಏಕವಚನದಲ್ಲೇ ಬಳಸಬೇಕಾಗುತ್ತದೆ. ಅ೦ತೆಯೇ "ಸಾ' ಎ೦ಬುದನ್ನು ಕನ್ನಡಕ್ಕೆ ಭಾಷಾ೦ತರಿಸಿದಾಗ "ಅವಳು' ಎ೦ದಾದರೂ ಗೌರವಸೂಚಕವಾಗಿ ಬಳಸುವುದರಲ್ಲಿ ತಪ್ಪೇನೂ ಇಲ್ಲ. ಈ ಹಿ೦ದಿನ ಪಾಠಗಳಲ್ಲಿ ನೀಡಿರುವ ಸ೦ಬ೦ಧಸೂಚಕ ಸ್ತ್ರಿ ಲಿ೦ಗ ಪದಗಳು ಹಾಗೂ ಸ್ತ್ರಿ ಲಿ೦ಗ ಸವ೯ನಾಮಪದವಾದ "ಸಾ' ಬಳಸಿ ವಾಕ್ಯ ರಚಿಸಬಹುದು. "ಮಾತೃಭಗಿನೀ', "ಪಿತೃವ್ಯಾ' - ಈ ಪ್ರತಿ ಪದಕ್ಕೂ "ಸಾ ಕಾ?' ಎ೦ಬ ಪ್ರಶ್ನವಾಕ್ಯಗಳನ್ನು ಮಾಡುತ್ತ ಹೋದ೦ತೆ ಹೆಚ್ಚು ಹೆಚ್ಚು ಅಭ್ಯಾಸ ಮಾಡಿದ೦ತಾಗುತ್ತದೆ. ಹಿ೦ದಿನ ಪಾಠಗಳಲ್ಲಿ ಕೊಟ್ಟಿರುವ ಸ್ತ್ರಿ ಲಿ೦ಗ ಪದಗಳನ್ನೂ ಪಟ್ಟಿ ಮಾಡಿಕೊ೦ಡು ವಾಕ್ಯಗಳಲ್ಲಿ ಬಳಸಿ.
******

ಸಂಸ್ಕೃತ ಗುರುಕುಲ 【12】

ಈಗಾಗಲೇ ‘ಸಃ’ ಎಂದರೆ ಅವನು, ‘ಸಾ’ ಎಂದರೆ ಅವಳು ಎಂಬುದನ್ನು ತಿಳಿದುಕೊಂಡಿದ್ದೇವೆ. ‘ತತ್’ ಎಂದರೆ ಅದು ಎಂದರ್ಥ. ನಪುಂಸಕಲಿಂಗ ಪದಗಳನ್ನು ಬಳಸುವಾಗ ತತ್ ಶಬ್ದ ಬಳಸಬೇಕು.

ತತ್ ವಾಹನಂ - ಅದು ವಾಹನ
ತತ್ ಕಂಕಣಂ - ಅದು ಬಳೆ
ತತ್ ಪುಸ್ತಕಂ - ಅದು ಪುಸ್ತಕ
ತತ್ ದ್ವಾರಂ - ಅದು ಬಾಗಿಲು
ಅದರಂತೆಯೇ ‘ನೇತ್ರಂ’, ‘ಆಭರಣಂ’, ‘ವನಂ’ - ಈ ಪದಗಳಿಗೆ ‘ತತ್’ ಎಂಬುದನ್ನು ಸೇರಿಸಿದಾಗ ವಾಕ್ಯವಾಗುತ್ತದೆ.

‘ಕಿಂ’ ಎಂದರೆ ‘ಏನು?’
ಎಂದರ್ಥ. ‘ತತ್ ಕಿಂ?’
ಎಂದರೆ ‘ಅದು ಏನು?’
ಎಂದರ್ಥ. ಈ ಪ್ರಶ್ನೆಗೆ ಉತ್ತರವಾಗಿ
ತತ್ ಯಾನಂ - ಅದು ವಾಹನ
ತತ್ ವಸ್ತ್ರಂ - ಅದು ವಸ್ತ್ರ,
ತತ್ ಚಿತ್ರಂ - ಅದು ಚಿತ್ರ
ತತ್ ವ್ಯಜನಂ - ಅದು ಫ್ಯಾನ್ ಎಂದು ಹೇಳಬಹುದು.
‘ತತ್’ ಎಂಬುದು ನಪುಂಸಕಲಿಂಗ ಏಕವಚನದಲ್ಲಿರುವುದರಿಂದ ‘ಕಿಂ’ ಎನ್ನುವುದೂ ನಪುಂಸಕಲಿಂಗ ಏಕವಚನ ರೂಪದಲ್ಲಿರುತ್ತದೆ. ಸಹಾಯಕ್ಕಾಗಿ ಇಲ್ಲಿ ಕೆಲವು ನಪುಂಸಕಲಿಂಗ ಪದಗಳನ್ನು ನೀಡಲಾಗಿದೆ. ‘ತತ್’ ಸೇರಿಸಿ ವಾಕ್ಯ ಮಾಡಲು ಪ್ರಯತ್ನಿಸಿ. ಅಂತೆಯೇ ‘ತತ್ ಕಿಂ’ ಎಂಬ ಪ್ರಶ್ನಾರ್ಥಕ ವಾಕ್ಯವನ್ನೂ ಮಧ್ಯೆ ಮಧ್ಯೆ ಕೇಳಿ ಅಭ್ಯಾಸ ಮಾಡುತ್ತ ಹೋಗಬೇಕು.

ಕಾಷ್ಠಂ - ಕಟ್ಟಿಗೆ 
ಆಮ್ರಫಲಂ - ಮಾವಿನಹಣ್ಣು
ಗೃಹಂ - ಮನೆ 
ಉದ್ಯಾನಂ - ಉದ್ಯಾನ
ಸಸ್ಯಂ - ಗಿಡ   
ಕಾನನಂ/ವನಂ/ಅರಣ್ಯಂ - ಅಡವಿ
ಮಿತ್ರಂ - ಸ್ನೇಹಿತ
ಪೂಜಾಮಂದಿರಂ - ದೇವರ ಕೋಣೆ
ವಾತಾಯನಂ - ಕಿಟಕಿ
ಸೋಪಾನಂ-ಮೆಟ್ಟಿಲು
*****

ಸಂಸ್ಕೃತ ಗುರುಕುಲ 【13】

ಹಿಂದಿನ ಪಾಠಗಳಲ್ಲಿ ‘ಸಃ’ ‘ಎಂದರೆ’ ಅವನು ಎಂಬುದನ್ನು ತಿಳಿದಿದ್ದೇವೆ. ಸಾಮಾನ್ಯವಾಗಿ ದೂರದಲ್ಲಿರುವವರಿಗೆ ‘ಅವನು’, ‘ಅವಳು’ ಅಥವಾ ‘ಅದು’ ಎನ್ನುತ್ತೇವೆ. ಅದಕ್ಕೆ ಸಂಸ್ಕೃತದಲ್ಲಿ ಕ್ರಮವಾಗಿ ‘ಸಃ’, ‘ಸಾ’ ಮತ್ತು ‘ತತ್’ ಎನ್ನಲಾಗುತ್ತದೆ. ‘ಸಃ’ ಬದಲಾಗಿ ‘ಏಷಃ’ ಎಂದು ಬಳಸಿದರೆ ಇವನು ಎಂದಾಗುತ್ತದೆ.

ಉದಾ:
‘ಏಷಃ ರಾಮಃ’ - ಇವನು ರಾಮ
‘ಏಷಃ ಹನುಮಾನ್’ - ಇವನು ಹನುಮ
‘ಏಷಃ ಬಾಲಕಃ’ - ಇವನು ಬಾಲಕ

ಪ್ರಶ್ನಾರ್ಥಕ ವಾಕ್ಯ:
‘ಏಷಃ ಕಃ?’ - ಇವನು ಯಾರು?
‘ಏಷಃ ಕಃ?’
‘ಏಷಃ ಆರಕ್ಷಕಃ|’ - ಇವನು ಪೊಲೀಸ್
‘ಏಷಃ ಕಃ?’
‘ಏಷಃ ಸೈನಿಕಃ|’ - ಇವನು ಸೈನಿಕ
‘ಏಷಃ ಕಃ?’
‘ಏಷಃ ಸೀವಕಃ|’ - ಇವನು ಬಟ್ಟೆ ಹೊಲಿಯುವವ
ಮೇಲಿನ ವಾಕ್ಯಗಳನ್ನು ಹೀಗೂ ಪರಿವರ್ತಿಸಬಹುದು
ಸಃ ರಕ್ಷಕಃ|
ಏಷಃ ರಕ್ಷಕಃ|   
ಸಃ ಸೇವಕಃ|
ಏಷಃ ಸೇವಕಃ|
ಸಃ ಗಾಯಕಃ|
ಏಷಃ ಗಾಯಕಃ|
ಸಃ ಅಧ್ಯಾಪಕಃ|
ಏಷಃ ಅಧ್ಯಾಪಕಃ|
‘ಏಷಃ’ ಬದಲು ‘ಅಯಂ’ ಎಂದರೂ ಅರ್ಥದಲ್ಲಿ ವ್ಯತ್ಯಾಸವಿಲ್ಲ. ‘ಏಷಃ ವೈದ್ಯಃ’ ಎಂಬುದನ್ನು ‘ಅಯಂ ವೈದ್ಯಃ’ ಎಂದೂ ಹೇಳಬಹುದು.

ಈ ಕೆಳಗಿನ ಪದಗಳಿಗೆ ‘ಸಃ’ ಮತ್ತು ‘ಏಷಃ’ ಪದಗಳನ್ನು ಬಳಸಿ ವಾಕ್ಯ ರಚಿಸಿ ಬರೆದಿಡಿ.
ಪಿತಾ,
ಸಹೋದರಃ,
ವೈದ್ಯಃ,
ದಂತವೈದ್ಯಃ ,
ಲೇಖಕಃ,
ವೀಣಾವಾದಕಃ,
ಅರ್ಚಕಃ,
ಜ್ಞಾನೀ
ದಾಯಾದಃ (ದಾಯಾದಿ)
ಕರ್ಮಕರಃ (ಕೆಲಸ ಮಾಡುವವ)
ವರ್ತಕಃ (ವ್ಯಾಪಾರಿ)
ಚೋರಃ(ಕಳ್ಳ)
******

ಸಂಸ್ಕೃತ ಗುರುಕುಲ 【14】

"ಸಾ" ಎಂದರೆ ಅವಳು ಎಂದರ್ಥ. ಸ್ವಲ್ಪ ದೂರದಲ್ಲಿದ್ದರೆ "ಸಾ" ಎನ್ನುತ್ತಾರೆ. ಸಮೀಪದಲ್ಲಿನ ವ್ಯಕ್ತಿಯನ್ನು ಸ್ತ್ರೀಲಿಂಗದಲ್ಲಿ ಹೇಳುವಾಗ ಅಂದರೆ ‘ಇವಳು’ ಎಂಬುದಕ್ಕೆ ‘ಏಷಾ’ ಎನ್ನುತ್ತಾರೆ.

ಉದಾ:
ಸಾ ಭಗಿನೀ|
ಏಷಾ ಭಗಿನೀ|(ಸಹೋದರಿ)
ಏಷಾ ಗಾಯಿಕಾ| (ಇವಳು ಗಾಯಕಿ)
ಏಷಾ ಬಾಲಿಕಾ| (ಇವಳು ಬಾಲಕಿ)
ಏಷಾ ನರ್ತಕೀ| (ಇವಳು ನರ್ತಕಿ.)
ಏಷಾ ಕರ್ಮಕರೀ| (ಇವಳು ಕೆಲಸ ಮಾಡುವವಳು.)
ಪ್ರಶ್ನಾರ್ಥಕ ವಾಕ್ಯಗಳಿಗೆ ಉದಾಹರಣೆ:
ಏಷಾ ಕಾ? (ಇವಳು ಯಾರು)
ಏಷಾ ವನಿತಾ| (ಇವಳು ವನಿತೆ)
ಏಷಾ ಕಾ? ಏಷಾ ವಿದ್ಯಾರ್ಥಿನೀ| (ಇವಳು ವಿದ್ಯಾರ್ಥಿನಿ)
ಸಾ ಕಾ? (ಅವಳು ಯಾರು?)
ಏಷಾ ಸೇವಿಕಾ| (ಇವಳು ಸೇವಕಿ)
ಏಷಾ ಕಾ? (ಇವಳು ಯಾರು?)
ಏಷಾ ಶಾರದಾ| (ಇವಳು ಶಾರದೆ)
"ಸಾ" ಎಂಬುದನ್ನು "ಏಷಾ" ಎಂದು ಈ ಕೆಳಗಿನಂತೆ ಪರಿವರ್ತಿಸಬಹುದು
ಸಾ ವಿದುಷೀ| ಏಷಾ ವಿದುಷೀ| (ವಿದುಷಿ)
ಸಾ ಪ್ರವಾಚಿಕಾ| ಏಷಾ ಪ್ರವಾಚಿಕಾ| (ಓದುತ್ತಿರುವವಳು)
ಸಾ ಪಾಚಿಕಾ| ಏಷಾ ಪಾಚಿಕಾ| (ಅಡುಗೆಯವಳು)
ಏಷಾ ಎಂಬರ್ಥ ನೀಡುವ ‘ಇಯಂ’ ಪದವನ್ನೂ ಬಳಸಬಹುದು.

ಉದಾ:
‘ಸಾ ಭಾರ್ಗವೀ’,
‘ಸಾ ಶ್ರದ್ಧಾ’ ಎಂಬುದನ್ನು ಕ್ರಮವಾಗಿ
‘ಇಯಂ ಭಾರ್ಗವೀ’,
‘ಇಯಂ ಶ್ರದ್ಧಾ’ ಎಂದು ಬಳಸಬಹುದು.

ಮಾತಾ
ಭಗಿನೀ
ವೈದ್ಯಾ
ಪಾರ್ವತೀ
ವನಿತಾ
ಗೃಹಿಣೀ
ವೃದ್ಧಾ(ವಯಸ್ಸಾಗಿರುವವಳು)
ಬುದ್ಧಿಮತೀ(ಬುದ್ಧಿವಂತೆ)
ಈ ಕೆಲವು ಪದಗಳನ್ನು ಬಳಸಿ ವಾಕ್ಯ ಮಾಡಲು ಪ್ರಯತ್ನಿಸಿ.
*******

ಸಂಸ್ಕೃತ ಗುರುಕುಲ 【15】

‘ತತ್’ ಎಂದರೆ ‘ಅದು’ ಎಂದು ಈ ಮೊದಲೇ ತಿಳಿದಿದ್ದೇವೆ. ‘ತತ್’ ಎಂಬಲ್ಲಿ ‘ಇದು’ ಎಂಬರ್ಥವುಳ್ಳ ‘ಏತತ್’ ಪದವನ್ನು ಬಳಸಬಹುದು.

ಉದಾ:
ತತ್ ಫಲಂ (ಅದು ಹಣ್ಣು)
 ಏತತ್ ಫಲಂ (ಇದು ಹಣ್ಣು)
ತತ್ ವಾಹನಂ (ಅದು ವಾಹನ)
ಏತತ್ ವಾಹನಂ (ಇದು ವಾಹನ)
‘ತತ್ ಕಿಂ?’
‘ಏತತ್ ಕಿಂ?’ - ಹೀಗೆ ಪ್ರಶ್ನಾರ್ಥಕವಾಕ್ಯ ಮಾಡಬಹುದು.
ಉದಾ:
ಏತತ್ ಕಿಂ? (ಇದು ಏನು?)
ಏತತ್ ಪುಷ್ಪಂ (ಇದು ಹೂವು)
ಏತತ್ ಕಿಂ?
ಏತತ್ ಸಂಗಣಕಯಂತ್ರಂ(ಕಂಪ್ಯೂಟರ್)
ತತ್ ಕಿಂ?
ತತ್ ಗೃಹಂ (ಅದು ಮನೆ)
‘ತತ್’ ಎಂಬುದನ್ನು ‘ಏತತ್’ ಎಂದು ಪರಿವರ್ತಿಸಬಹುದು.
ತತ್ ವನಂ|
ಏತತ್ ವನಂ| 
ತತ್ ಕರವಸ್ತ್ರಂ|
ಏತತ್ ಕರವಸ್ತ್ರಂ|
ತತ್ ಪರ್ಣಂ|
ಏತತ್ ಪರ್ಣಂ|
ತತ್ ಪುಸ್ತಕಂ|
ಏತತ್ ಪುಸ್ತಕಂ|

ಮುಖಂ,
ವದನಂ,
ಉದರಂ,
ಭವನಂ,
ಕಂಕಣಂ (ಬಳೆ),
ಅಂಗುಲೀಯಕಂ (ಉಂಗುರ),
ಜಲಂ (ನೀರು),
ಖಾದ್ಯಂ (ತಿನಿಸು),
ಭೋಜನಂ (ಊಟ),
ಸಸ್ಯಂ (ಗಿಡ) - ಇವನ್ನು ಬಳಸಿ ವಾಕ್ಯ ರಚಿಸಿ.
‘ದೂರದಲ್ಲಿರುವ’ ಮತ್ತು ‘ಸಮೀಪದಲ್ಲಿರುವ’ ವಸ್ತುಗಳಿಗೆ ಸಾಂದರ್ಭಿಕವಾಗಿ ‘ತತ್’ ಮತ್ತು ‘ಏತತ್’ ಸರ್ವನಾಮಪದಗಳನ್ನು ಕ್ರಮವಾಗಿ ಬಳಸಬಹುದು. ಅಂತೆಯೇ ‘ಏತತ್’ಗೆ ಬದಲಾಗಿ ‘ಇದಂ’ ಎಂದೂ ಬಳಸಬಹುದು.

‘ಏತತ್ ಫಲಂ’ ಎಂಬುದಕ್ಕೆ
'ಇದಂ ಫಲಂ’ ಎಂದೂ ಹೇಳಬಹುದು.
‘ಇದಂ ಗೃಹಂ’,
‘ಇದಂ ಕ್ರೀಡಾಂಗಣಂ’ (ಮೈದಾನ) ಎಂದೂ ಪ್ರಯೋಗಿಸಬಹುದು.
*******

ಸಂಸ್ಕೃತ ಗುರುಕುಲ【16】

ಈ 15 ದಿನ ಓದಿದರ ಪಾಠಗಳಿಗೆ ಸಂಬಂಧಿಸಿದಂತೆ ಇಂದು ಸಂಭಾಷಣೆಯೊಂದನ್ನು ನೋಡೋಣ.

ದಿನೇಶಃ - ನಮಸ್ತೇ, ಸುಪ್ರಭಾತಮ್
ವಿಜಯಃ - ನಮಸ್ತೇ, ಸುಪ್ರಭಾತಮ್. ಕುಶಲಂ ವಾ?
ದಿನೇಶಃ - ಆಮ್. ಕುಶಲಂ. ಭವಾನ್ ಕುಶಲೀ ವಾ?
ವಿಜಯಃ - ಆಮ್, ಅಹಂ ಕುಶಲೀ. ಸಃ ಕಃ?
ದಿನೇಶಃ - ವಿಜಯ! ಏಷಾ ಕಾ?
ವಿಜಯಃ - ಏಷಾ ಮಮ ಭಗಿನೀ ಅಸ್ತಿ.
ವನಿತಾ - ಹರಿ ಓಂ. ನಮಸ್ತೇ ದಿನೇಶ ಮಹೋದಯ!
ದಿನೇಶಃ - ನಮಸ್ತೇ ಭಗಿನಿ. ಭವತ್ಯಾಃ ನಾಮ ಕಿಮ್?
ವನಿತಾ - ಮಮ ನಾಮ ವನಿತಾ.
ದಿನೇಶಃ - ಭವತೀ ಕಾ? ಭವತೀ ವಿದ್ಯಾರ್ಥಿನೀ ವಾ?
ವನಿತಾ - ಆಮ್, ಅಹಂ ವಿದ್ಯಾರ್ಥಿನೀ. ಭವಾನ್ ಕಃ?
ದಿನೇಶಃ - ಅಹಂ ಅಧ್ಯಾಪಕಃ.
ವಿಜಯಃ - ಪುನಃ ಮಿಲಾಮಃ (ಮತ್ತೆ ಭೇಟಿಯಾಗೋಣ)

‘ಭವಾನ್’ (ನೀವು) ಪದ ಪುಲ್ಲಿಂಗದಲ್ಲಿದೆ. ಸ್ತ್ರೀಲಿಂಗದಲ್ಲಿರುವ ‘ಭವತೀ’ ಎಂದರೆ ‘ನೀವು’ ಎಂದರ್ಥ.
ಪುಲ್ಲಿಂಗದಲ್ಲಿ
‘ಅಹಂ ಅಧ್ಯಾಪಕಃ’ (ನಾನು ಅಧ್ಯಾಪಕ),
‘ಅಹಂ ವಿದ್ಯಾರ್ಥೀ’ (ನಾನು ವಿದ್ಯಾರ್ಥಿ) ಎಂದೂ;
ಸ್ತ್ರೀಲಿಂಗದಲ್ಲಿ
‘ಅಹಂ ಅಧ್ಯಾಪಿಕಾ’ (ನಾನು ಅಧ್ಯಾಪಕಿ),
‘ಅಹಂ ವಿದ್ಯಾರ್ಥಿನೀ’ (ನಾನು ವಿದ್ಯಾರ್ಥಿನಿ)
ಎಂದೂ ಹೇಳಬಹುದು.
‘ವಾ’ ಎಂಬುದನ್ನು ಬಳಸಿ ಪ್ರಶ್ನಿಸಬಹುದು.
‘ಭವಾನ್ ಮಂತ್ರೀ’ (ನೀನು ಮಂತ್ರಿ) ಎಂಬುದಕ್ಕೆ ‘ವಾ’ ಸೇರಿಸಿ
'ಭವಾನ್ ಮಂತ್ರೀ ವಾ?’ ಎಂದು (ನೀನು ಮಂತ್ರಿಯೆ?) ಪ್ರಶ್ನಿಸಬಹುದು.
********

ಸಂಸ್ಕೃತ ಗುರುಕುಲ 【17】

ಭವತಃ ನಾಮ ಕಿ೦?
ಮಮ ನಾಮ ರಾಜೇಶಃ,
ಭವತ್ಯಾಃ ನಾಮ ಕಿ೦?
ಮಮ ನಾಮ ರಶ್ಮೀ
ಹೀಗೆ ಪರಸ್ಪರ ಪರಿಚಯ ಮಾಡಿಕೊಳ್ಳುವ ಅಭ್ಯಾಸವನ್ನು ಸ೦ಸ್ಕೃತದಲ್ಲಿ ಮಾಡಿಕೊ೦ಡಿದ್ದೇವೆ.

ಸಃ ಕಃ? ಸಃ ಗಿರೀಶಃ.
ಸಾ ಕಾ? ಸಾ ವಿನೀತಾ.
ತತ್ ಕಿ೦? ತತ್ ಫಲ೦,

ಮತ್ತು ಏಷಃ, ಏಷಾ, ಏತತ್ ಎ೦ಬ ಪದಗಳನ್ನು ಉಪಯೋಗಿಸಿ ಚಿಕ್ಕಚಿಕ್ಕ ವಾಕ್ಯಗಳ ನಿಮಾ೯ಣ ಮಾಡುವುದು ಹೇಗೆ ಎ೦ಬುದನ್ನು ಅಭ್ಯಾಸ ಮಾಡುತ್ತಿದ್ದೇವೆ. ಈಗ ಕ್ರಿಯಾಪದಗಳ ಪರಿಚಯ ಮಾಡಿಕೊಳ್ಳೋಣ. ಒ೦ದು ಕ್ರಿಯೆಯನ್ನು ಸೂಚಿಸುವ ಪದವೇ ಕ್ರಿಯಾಪದವಾಗಿದೆ. ಇಲ್ಲಿ ಕೆಲವು ಕ್ರಿಯಾಪದಗಳನ್ನು ಕೊಡಲಾಗಿದೆ, ಗಮನಿಸಿ.

ಗಚ್ಛತಿ - ಹೋಗುತ್ತಾನೆ/ಳೆ/ದೆ
ಆಗಚ್ಛತಿ - ಬರುತ್ತಾನೆ /ಳೆ/ದೆ
ಉಪವಿಶತಿ - ಕುಳಿತುಕೊಳ್ಳುತ್ತಾನೆ /ಳೆ/ದೆ
ಉತ್ತಿಷ್ಠತಿ - ನಿಲ್ಲುತ್ತಾನೆ /ಳೆ/ದೆ
ವದತಿ - ಹೇಳುತ್ತಾನೆ /ಳೆ/ದೆ
ಲಿಖತಿ - ಬರೆಯುತ್ತಾನೆ /ಳೆ/ದೆ
ಪಠತಿ ಓದುತ್ತಾನೆ /ಳೆ/ದೆ
ಧಾವತಿ ಓಡುತ್ತಾನೆ/ಳೆ/ದೆ

ಸ೦ಸ್ಕೃತದಲ್ಲಿ ಕ್ರಿಯಾಪದಕ್ಕೆ ಲಿ೦ಗಭೇದವಿಲ್ಲ. ಆದ್ದರಿ೦ದ ಪಠತಿ ಎ೦ದರೆ ಓದುತ್ತಾನೆ, ಓದುತ್ತಾಳೆ, ಓದುತ್ತದೆ ಎ೦ದಾಗುತ್ತದೆ. ಇದೇ ಕ್ರಿಯಾಪದಕ್ಕೆ 'ಸಃ' 'ಸಾ' 'ತತ್' ಮು೦ತಾದ ಸವ೯ನಾಮಗಳನ್ನು ಸೇರಿಸುತ್ತ ಹೋದ೦ತೆ ಅದು ವಾಕ್ಯವಾಗುತ್ತದೆ.
*******

ಸಂಸ್ಕೃತ ಗುರುಕುಲ【18】

ವರ್ತಮಾನಕಾಲದಲ್ಲಿರುವ ಕೆಲವು ಕ್ರಿಯಾಪದಗಳು ಹೀಗಿವೆ:
ಬಾಲಕಃ ಉಪ ವಿಶತಿ (ಬಾಲಕನು ಕುಳಿತುಕೊಳ್ಳುತ್ತಾನೆ)
ಅಧ್ಯಾಪಕಃ ಪೃಚ್ಛತಿ (ಅಧ್ಯಾಪಕರು ಪ್ರಶ್ನಿಸುತ್ತಾರೆ)
ಮಾತಾ ವದತಿ (ತಾಯಿಯು ಹೇಳುತ್ತಾಳೆ)
ಅಗ್ರಜಃ ಪಶ್ಯತಿ (ಅಣ್ಣನು ನೋಡುತ್ತಾನೆ)
ಅನುಜಾ ಕ್ರೀಡತಿ (ತಂಗಿಯು ಆಟವಾಡುತ್ತಾಳೆ.)
ಛಾತ್ರಃ ಲಿಖತಿ ( ವಿದ್ಯಾರ್ಥಿಯು ಓದುತ್ತಾನೆ)
ಯಾನಂ ಚಲತಿ (ವಾಹನವು ಚಲಿಸುತ್ತದೆ)
ಅಶ್ವಃ ಧಾವತಿ (ಕುದುರೆ ಓಡುತ್ತದೆ)

ಸಂಬಂಧಸೂಚಕ ಪದಗಳನ್ನು ಬಳಸಿ ಮೇಲಿನಂತೆ ವಾಕ್ಯಗಳನ್ನು ರಚಿಸಬಹುದು. ಇವುಗಳನ್ನು ಪ್ರಶ್ನೋತ್ತರಗಳಂತೆ ಅಭ್ಯಸಿಸೋಣ.

ಅಧ್ಯಾಪಕಃ ಕಿಂ ಕರೋತಿ? - (ಅಧ್ಯಾಪಕರು ಏನು ಮಾಡುತ್ತಾರೆ?)
ಮಾತಾ ಕಿಂ ಕರೋತಿ? - (ತಾಯಿಯು ಏನು ಮಾಡುತ್ತಾಳೆ?)
ಅಗ್ರಜಃ ಕಿಂ ಕರೋತಿ? - (ಅಣ್ಣ ಏನು ಮಾಡುತ್ತಾನೆ?)
ಅನುಜಾ ಕಿಂ ಕರೋತಿ? - (ತಂಗಿಯು ಏನು ಮಾಡುತ್ತಾಳೆ?)
ಶಿಶುಃ ಕಿಂ ಕರೋತಿ? - (ಶಿಶುವು ಏನು ಮಾಡುತ್ತದೆ?)

ಇನ್ನಷ್ಟು ಕ್ರಿಯಾಪದಗಳು
ಪತತಿ - ಬೀಳುತ್ತಾನೆ/ಳೆ/ದೆ
ಪಚತಿ - ಅಡುಗೆ ಮಾಡುತ್ತಾನೆ/ಳೆ/ದೆ
ಗಾಯತಿ - ಹಾಡುತ್ತಾನೆ/ಳೆ/ದೆ
ನೃತ್ಯತಿ - ನರ್ತಿಸುತ್ತಾನೆ/ಳೆ/ದೆ
ಕ್ರೀಣಾತಿ - ಕೊಳ್ಳುತ್ತಾನೆ/ಳೆ/ದೆ
ಜಾನಾತಿ - ತಿಳಿದಿದ್ದಾನೆ/ಳೆ/ದೆ
ನಮತಿ - ನಮಿಸುತ್ತಾನೆ/ಳೆ/ದೆ
ಪಿಬತಿ - ಕುಡಿಯುತ್ತಾನೆ /ಳೆ/ದೆ
ನಿವಸತಿ - ವಾಸಿಸುತ್ತಾನೆ/ಳೆ/ದೆ
ಕರೋತಿ-ಮಾಡುತ್ತಾನೆ/ಳೆ/ದೆ
********

ಸಂಸ್ಕೃತ ಗುರುಕುಲ【19】

ಕೆಲವು ಸ್ಥಾನಸೂಚಕ ಪದಗಳನ್ನು ವಾಕ್ಯಗಳಲ್ಲಿ ಪ್ರಯೋಗಿಸೋಣ.
ಅತ್ರ - ಇಲ್ಲಿ
ತತ್ರ - ಅಲ್ಲಿ 
ಕುತ್ರ - ಎಲ್ಲಿ?
ಅನ್ಯತ್ರ - ಬೇರೆ ಕಡೆ
ಸರ್ವತ್ರ - ಎಲ್ಲ ಕಡೆ
ಏಕತ್ರ - ಒಂದೇ ಕಡೆ

ಈ ಪದಗಳನ್ನು ಬಳಸಿ ವಾಕ್ಯಗಳನ್ನು ರಚಿಸಿ.

ಮಾತಾ ಕುತ್ರ ಅಸ್ತಿ?  (ಅಮ್ಮ ಎಲ್ಲಿದ್ದಾಳೆ?)
ಮಾತಾ ಅತ್ರ ಅಸ್ತಿ. ( ಅಮ್ಮ ಇಲ್ಲಿ ಇದ್ದಾಳೆ.)
ಭವತಃ ಪಿತಾ ಕುತ್ರ ಅಸ್ತಿ? ( ನಿಮ್ಮ ತಂದೆ ಎಲ್ಲಿದ್ದಾರೆ?)
ಮಮ ಪಿತಾ ತತ್ರ ಅಸ್ತಿ. ( ನಮ್ಮ ತಂದೆ ಇಲ್ಲಿ ಇದ್ದಾರೆ.)
ಅಧ್ಯಾಪಕಃ ಕುತ್ರ ಅಸ್ತಿ? (ಅಧ್ಯಾಪಕರು ಎಲ್ಲಿದ್ದಾರೆ?)
ಅಧ್ಯಾಪಕಃ ಅನ್ಯತ್ರ ಅಸ್ತಿ. (ಅಧ್ಯಾಪಕರು ಬೇರೆ ಕಡೆ ಇದ್ದಾರೆ.)
ದೇವಃ ಕುತ್ರ ಅಸ್ತಿ? (ದೇವರು ಎಲ್ಲಿದ್ದಾನೆ?)
ದೇವಃ ಸರ್ವತ್ರ ಅಸ್ತಿ.  (ದೇವರು ಎಲ್ಲ ಕಡೆ ಇದ್ದಾನೆ)
ಇದೇ ರೀತಿಯ ಇನ್ನಷ್ಟು ಉದಾಹರಣೆಗಳು:

ಭವತ್ಯಾಃ ಅನುಜಃ ಕುತ್ರ ಅಸ್ತಿ?
ಮಮ ಅನುಜಃ ತತ್ರ ಅಸ್ತಿ. (ಅನುಜಃ - ತಮ್ಮ)
ಸಂಸ್ಕೃತಕಕ್ಷ್ಯಾ ಕುತ್ರ ಅಸ್ತಿ? ಸಂಸ್ಕೃತಕಕ್ಷ್ಯಾ ಅನ್ಯತ್ರ ಅಸ್ತಿ.
ವಾಯುಃ ಕುತ್ರ ಅಸ್ತಿ?
ವಾಯುಃ ಸರ್ವತ್ರ ಅಸ್ತಿ.
ದೂರದರ್ಶನಂ ಕುತ್ರ ಅಸ್ತಿ? ದೂರದರ್ಶನಂ ಅತ್ರ ಅಸ್ತಿ.
ಬಾಲಕಃ ಕುತ್ರ ಕ್ರೀಡತಿ?
ಬಾಲಕಃ ತತ್ರ ಕ್ರೀಡತಿ.
ಈ ವಾಕ್ಯಗಳನ್ನು ಪ್ರಶ್ನಾರ್ಥಕರೂಪಕ್ಕೆ ಪರಿವರ್ತಿಸಿ
ಉದಾ:
ವನಿತಾ ಅತ್ರ ಅಸ್ತಿ |
ವನಿತಾ ಕುತ್ರ ಅಸ್ತಿ?
ಮಹಿಲಾ ತತ್ರ ಪಚತಿ |
ರಾಮಃ ಅತ್ರ ನಿವಸತಿ |
ನರ್ತಕೀ ತತ್ರ ನೃತ್ಯತಿ |
*******
1970s fame sanskrit news reader

**********

ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳ ವರ್ಣಮಾಲೆ ವಿಜ್ಞಾನದಿಂದ ತುಂಬಿದೆ ಎಂದು ತಿಳಿದಿಲ್ಲದಿರಬಹುದು.  ವರ್ಣಮಾಲೆಯ ಪ್ರತಿಯೊಂದು ಅಕ್ಷರವು ತಾರ್ಕಿಕವಾಗಿದೆ ಮತ್ತು ನಿಖರವಾದ ಲೆಕ್ಕಾಚಾರಗಳೊಂದಿಗೆ ಅನುಕ್ರಮವಾಗಿ ಇರಿಸಲಾಗುತ್ತದೆ.  ಅಂತಹ ವೈಜ್ಞಾನಿಕ ದೃಷ್ಟಿಕೋನವು ಇತರ ವಿದೇಶಿ ಭಾಷೆಗಳ ವರ್ಣಮಾಲೆಯಲ್ಲಿ ಅಡಕವಾಗಿಲ್ಲ.  ಉದಾ.  ನೋಡಿ:

  ಕಖಗಘಙ - ಈ ಐದು ಅಕ್ಷರದ ಗುಂಪನ್ನು ಕಾಂತವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ಗಂಟಲಿನಿಂದ ಶಬ್ದ ಹೊರಬರುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.

  ಚಛಜಝಞ - ಈ ಐದು ಅಕ್ಷರದ ಗುಂಪನ್ನು ಅಂಗುಳ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಅಂಗುಳನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.

 ಟಠಡಢಣ : ಈ ಐದು ಅಕ್ಷರಗಳ ಗುಂಪನ್ನು ಮುರ್ಧನ್ಯಾ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಮುರ್ಧನ್ಯವನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.

  ತಥದಧನ - ಈ ಐದು ಅಕ್ಷರದ ಗುಂಪನ್ನು ದಂತವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಹಲ್ಲುಗಳನ್ನು ಮುಟ್ಟುತ್ತದೆ.  ಒಮ್ಮೆ ಪ್ರಯತ್ನಿಸಿ

  ಪಫಬಭಮ - ಈ ಐದು ಅಕ್ಷರದ ಗುಂಪನ್ನು ಆಷ್ಟವ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸಲು ಎರಡೂ ತುಟಿಗಳು ಭೇಟಿಯಾಗುತ್ತವೆ.  ಒಮ್ಮೆ ಪ್ರಯತ್ನಿಸಿ


  ವಿಶ್ವದ ಬೇರೆ ಯಾವುದೇ ಭಾಷೆಯಲ್ಲಿ ಇಂತಹ ವೈಜ್ಞಾನಿಕ ವಿಧಾನವಿದೆಯೇ?  ನಮ್ಮ ಭಾರತೀಯ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಬೇಕು ಆದರೆ ಅದೇ ಸಮಯದಲ್ಲಿ ಏಕೆ ಎಂದು ನಮಗೆ ತಿಳಿಸಿ ಮತ್ತು ಜಗತ್ತಿಗೆ ತಿಳಿಸಿ.
********

The Brahmins of Mathur and Hosahalli lead a Vedic lifestyle, chant the Vedas and keep Sanskrit alive.

Mathur is a tiny village on the banks of the perennial river Tunga. It is near Shimoga in Karnataka. It has a population of around 1500. Situated in its inner circle are about 256 Brahmin houses in a square type agraharam. It is an agrarian village, which has arecanuts as the primary crop and one acre of it yields a net profit of Rs 90000 on an average per year.

It is one of the two villages in India where Sanskrit is the official language. The villagers speak a dialect called Sanketi, which is a mixture of Sanskrit, Tamil and Kannada. It has no written script. They read only in Devanagiri script and some in Kannada.


It all started around 500 years ago, when scholarly Brahmins migrated from Pudukottai in Tamil Nadu and settled here along the river bed of Tunga as was customary. King Krishnadevaraya, the then ruler of this place, wanted to donate land to these Brahmins, which they refused because accepting Dhaanam would mean accumulating sins. They felt the sins of the King would pass on to them. They only accepted charity from other Brahmins. So the ruler sent his emissary dressed as a Brahmin and donated vast tracts of land to them on which the arecanuts are now grown.

00:3500:52
The entire village is a square, like a typical Mada street, with a temple. This area is called Brahmanaru Mane. Great respect is shown by the rest to these Brahmins. There is a village paatashala, which teaches chanting of Vedas in the traditional way, especially Krishna Yajur Veda along with other ritualistic rites from Bodhayana sutras and Aabhasthamba sutras. Other rituals for yagnas are conducted for learning purposes.

Private funds used
The students learn these meticulously under careful supervision of the elders. At present there are only eight students in this paatashala. Most of them come from nearby villages and they stay at the paatashala till they complete their five-year course. The food and other expenses are funded by the Brahmins as they do not receive any donations.

The ground floor and the contiguous houses of the paatashala are occupied by Venkatesh avadhaani (avadhaani is a family title for a very learned person ) and his brother Kesav avadhaani. These two brothers come from a family of Sanskrit scholars and they are engaged in the research of Vedas and rituals. They collect old Sanskrit palm leaves, expand them on the computer and rewrite the damaged letters. They then rewrite these scripts in present day Sanskrit for the sake of publication to make it available to the common man in text form. On certain palm leaves work has been going on for the last one year. They are keen to get in touch with persons either from the Orissa University or similar places, from where they can obtain old Sanskrit palm leaves.

Special mention has to be made about a sannyasi (in his purvaashrama he was known as Theagarajan, a chartered accountant from Mumbai, who took bhiksha from Jayendrar Swamigal of Kanchi and became a sannyasi in 2001). He lives in a small hut near the paatashala and writes, edits, and translates these old palm leaves. His knowledge of Sanskrit is amazing.

Venkatesh avadhaani has team members who are very well versed in CAD /CAM and other computer tools. They create on the computer, after interpreting from the palm leaves and the shulba sutras (published from Delhi by Sri Sharma), the types and designs of bricks to be laid for the various kinds of yagnas. While I was there, they were developing a Garuda type of Homa Gunda for a special yagna to be conducted on the river bed.

His team consisted of purohits and students and everything was done with precision.

An example of their brilliance was seen when I asked them about this famous verse from Bodhayana Sutra of the Shulba Sutra (around 4000 BC) in Mathematics, ‘Deergachatursasyaa akshanyaa rajjuh: Paarsvamanischa Thiryakmani cha. Yatpruthagbhute kuruthasthatubayam karoti.’ It is nothing but a Pythogaras’ theorem stated in Shulba Sutras, 1000 years before Pythogoras wrote it. Venkatesh avadhaani explained it by drawing a rectangle and a diagonal with a chalk on the floor of his house and showed how these Sanskrit words state that the area of the square on one side of the diagonal is equal to the area of the sum of squares on the side and base of that rectangle.

At the paatashala, the students chant Vedas from 10 a.m. till noon, repeating the same line under the leadership of a senior student.At noon, the students and guests are served simple food consisting of rice, sambar or a kootu and curd. They have light tiffin for breakfast. The dinner is also simple.

After lunch, the students continue the chanting either at the paatashala or at their guru’s house.

There are no fixed gurus for the students as they are taught varied subjects by different scholars.

There is a government school called Saraswathi Vidyalaya adjoining the Brahmin agraharam, where they teach the state board syllabus having Sanskrit as the second language in one section and in the other, pure Sanskrit and the conventional Vedic literature. In the evenings, the students play cricket on the school grounds or in the streets.

A Japanese gentleman has been attending the classes of Chenna Kesava Upadhyaya for the last couple of years, learning and writing advanced Vedic scriptures.

On the other side of the river lies another village called Hosahalli. Hosa in Kannada means new. There too resides Brahmins with a paatashala mainly funded by Sringer Mutt, which also has eight students. Most of the sons of these scholars take to western education and get jobs in Bangalore.


Spoken Sanskrit
There is a Sanskrit scholar, Laxmi Kant Upadhyaya, who comes from Tamil Nadu. He wants to propagate spoken Sanskrit. According to him, Pejawar Mutt Swamiji wanted spoken Sanksrit to be popularised and so he promoted the Hindustan Seva Sangh. But due to lack of funds it was eventually taken over by Samskriti Bharaati, an organisation involved in the propagation of spoken Sanskrit.

The main idea to make Sanskrit an easy language to speak in, is to adopt regional language words (as they are already present now) and use Sanksrit grammar along with these words in conversation. But conventional mutt heads only wanted Sanksrit to be spoken in the prescribed Vedic way, he says. But here the exception prevails in order to propagate Sanskrit.

The Brahmins of these two villages live their lives in the true Vedic sense such as bathing in the river, performing rituals such as sandhya vandana and so on. If they are invited for special discourses outside their villages or perform special poojas inside their villages, they accept whatever is given to them. They never demand monetary compensations. Marriages also take place among the people of these two villages.

On the other side of Shimoga city (about 10 kms ) lies a village, Koodahalli. This is called Sharada Peetam Shaaka. The present senior acharya who lives at this place is 94 years old.

History mentions how the Shankaracharya of Sringeri His holiness Chandrasekara Mahaswami appointed this senior acharya as his successor. But for some reasons the acharya could not be found for 10 years, so His holiness Abhinavateertah was appointed as the successor.

Ironically, the acharya returned after 10 years only to find another successor in his place and so preferred to stay put in this place as the head of the Shaaka of Sringeri Mutt. This Mutt is situated on the banks of Tungabhadra, the sangamam point of Tunga and Bhadra rivers and a dip here is believed to cure all sins.

(This is the article from The Hindu Newspaper dated April 4, 2013 - The writer can be contacted at sbdiaries@gmail.com / Venkatesh avadhaani -09481405166 / Lakshmi Kant Upadhyaya of Hosahalli- 09482029200/ Chenna Kesavan -09449917350)
*****
new year song in Samskruta

Youngest to win highest sanskrit examination conducted by Art of Living year 2023

USE THE CONTACT MOBILE NUMBERS



****

No comments:

Post a Comment