SEARCH HERE

Tuesday, 1 January 2019

ನೈವೇದ್ಯ ಮಂತ್ರ ವಿಶ್ಲೇಷಣೆ ಫಲ naivaidya mantra and other details phala


Naivediya Pooja

ps: ನೈವೇದ್ಯಕ್ಕೆ ಮೊದಲಿನ ಧೂಪಾರತಿ, ಏಕಾರತಿಗಳು ದೈತ್ಯೋಚ್ಚಾಟನಕ್ಕೆ, ಅವನ್ನು ಸ್ವೀಕರಿಸಬಾರದು. (ಶ್ರೀ ದೇವೇಂದ್ರ ತೀರ್ಥರ ನುಡಿಮುತ್ತುಗಳು) 
***
ಓಂ ಸತ್ಯಂತ್ವರ್ತೇನಪರಿಷಿಂಚಾಮಿ|
ಓಂ ಅಮೃತಾಪಿಸ್ತ ರಣಮಸಿಸ್ಚಾಹಾ|
ಓಂ ಪ್ರಾಣಾಯ ಸ್ವಾಹಾ ಶ್ರೀ ಅನಿರುದ್ಧಾಯ ಇದಂ ನಮಮ|
ಓಂ ಅಪಾನಾಯ ಸ್ವಾಹಾ ಶ್ರೀ ಪ್ರದ್ಯುಮ್ನಾಯ ಇದಂ ನಮಮ|
ಓಂ ವ್ಯಾನಾಯ ಸ್ವಾಹಾ ಶ್ರೀ ಸಕರ್ಷ್ಣಯ ಇದಂ ನಮಮ|
ಓಂ ಉದಾನಾಯ ಸ್ವಾಹಾ ಶ್ರೀ ವಸುದೇವಾಯ ಇದಂ ನಮಮ|
ಓಂ ಸಮಾನಾಯ ಸ್ವಾಹಾ ಶ್ರೀ ನಾರಾಯಣಾಯ ಇದಂ ನಮಮ|
ಓಂ ಅಮೃತಾಪಿಧಾನ ಮರೆ ಸ್ವಾಹಾ|
ಉತ್ತರಾಪೋಷನಓ ಸ|
ಹಸ್ತಪ್ರಕ್ಷಾಲನಂ ಸ|
ಆಚಮನಂ ಸ|
ತಾಂಬೂಲಂ ಸ|
ಹಿರಣ್ಯಂ ಸ|
ಅನೇನ ಯಥಶಕ್ತಿ ಯಥಾಮತಿ ಸಂಪಾದಿತ ದ್ರವ್ಯೈ: ನೈವೇದ್ಯಾರ್ಪಣೇನ್ ಸಶ್ರಿಕಃ ಸಪರಿವಾರಃ ಶ್ರೀ ಸಿಲಕ್ಷ್ಮಿನಾರಯನಾ ಪ್ರೀಯತಾಂ ಸುಪ್ರೀತೋ ವರದೋ ಭವತು|
ಶ್ರೀ ಕೃಷ್ಣಾರ್ಪಣಮಸ್ತು|

ಸರಳ ಪರಿಹಾರ
*********


ನೈವೇದ್ಯ : ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು?
ನಿಮ್ಮ ದೇವರು ನೈವೇದ್ಯ ತಿಂತಾನಾ? ಒಂದು ಅದ್ಭುತ ವಿಚಾರದ  ವಿಶ್ಲೇಷಣೆಯ ಸಂವಾದ ಈ ಕೆಳಗಿದೆ. ಇದು ನಂಬಿಕೆಯಿಲ್ಲದವರ ಪ್ರಶ್ನೆ. ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ.

ಒಬ್ಬ ಗುರು ಮತ್ತು ಶಿಷ್ಯರ ಸಂವಾದ ಹೀಗೆ ನಡೆದಿತ್ತು.

ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ.

ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ ತಯಾರಾಗಲು ಆದೇಶಿಸಿದರು.

ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ' ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು.

ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ ಕಂಠಸ್ಥ ಹೇಳಿ, ಒಪ್ಪಿಸಿದ.

ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ.

" ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು.

ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.

"ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಲ ವಿಷಯಗಳನ್ನು ಗಮನಿಸಿ.

ನಾವು ಉಣ್ಣುವ ಆಹಾರದಲ್ಲಿ 'ಭಕ್ತಿ' ಹೊಕ್ಕರೆ ಅದು ' ಪ್ರಸಾದ' ವಾಗುತ್ತದೆ.....

ನಮ್ಮ ಹಸಿವಿಗೆ 'ಭಕ್ತಿ' ಹೊಕ್ಕರೆ ಅದು ' ಉಪವಾಸ' ವಾಗುತ್ತದೆ......
ನಾವು 'ಭಕ್ತಿ' ಕುಡಿದರೆ ಅದು 'ಚರಣಾಮೃತ' ವಾಗುತ್ತದೆ......
ನಮ್ಮ ಪ್ರಯಾಣ ' ಭಕ್ತಿ' ಪೂರ್ಣವಾದರೆ ಅದು ' ತೀರ್ಥಯಾತ್ರೆ' ಯಾಗುತ್ತದೆ.......

ನಾವು ಹಾಡುವ ಸಂಗೀತ' ಭಕ್ತಿ' ಮಯವಾದರೆ ಅದು 'ಕೀರ್ತನೆ'ಯಾಗುತ್ತದೆ......
ನಮ್ಮ ವಾಸದ ಮನೆಯೊಳಕ್ಕೆ' ಭಕ್ತಿ ' ತುಂಬಿದರೆ ನಮ್ಮ ಮನೆಯೇ ' ಮಂದಿರ ' ವಾಗುತ್ತದೆ.......
ನಮ್ಮ ಕ್ರಿಯೆ ' ಭಕ್ತಿ' ಪೂರಿತವಾದರೆ ನಮ್ಮ ಕಾರ್ಯಗಳು ' ಸೇವೆ' ಯಾಗುತ್ತದೆ.....
ನಾವು ಮಾಡುವ ಕೆಲಸದಲ್ಲಿ' ಭಕ್ತಿ ' ಇದ್ದರೆ ಅದು ನಮ್ಮ ' ಕರ್ಮ ' ವಾಗುತ್ತದೆ.....
ನಮ್ಮ ಹೃದಯದಲ್ಲಿ ' ಭಕ್ತಿ ' ತುಂಬಿದರೆ ನಾವು ಮಾನವರಾಗುತ್ತೇವೆ.
********


ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?

ತುಳಸಿಯ ಗಿಡವು ವಾಯುಮಂಡಲದಲ್ಲಿನ ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ. ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣತತ್ತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿರುತ್ತದೆ.

ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. 

ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ.
***

ದೇವರ ನೈವೇದ್ಯಕ್ಕೆ ಇಡುವ ಪದಾರ್ಥಗಳ ಹೆಸರುಗಳು ಸಂಸ್ಕೃತದಲ್ಲಿ

ಬಾಳೆಹಣ್ಣು-ಕದಳೀ ಫಲಂ
ಮಾವಿನ ಹಣ್ಣು-ಆಮ್ರ ಫಲಂ
ಕಿತ್ತಳೆ-ನಾರಂಗ ಫಲಂ
ತೆಂಗಿನಕಾಯಿ- ನಾರಿಕೇಳ ಫಲಂ
ಸೀಬೆ- ಬಹುಬೀಜ ಫಲಂ
ದಾಳಿಂಬೆ-ದಾಡಿಮ ಫಲಂ
ಹಲಸಿನ ಹಣ್ಣು-ಪನಸ ಫಲಂ
ಎಲಚಿ-ಬದರ ಫಲಂ
ಖರ್ಜೂರ-ಖರ್ಜೂರ ಫಲಂ
ಮೂಸಂಬಿ-ಜಂಬೀರ ಫಲಂ
ದ್ರಾಕ್ಷಿ-ದ್ರಾಕ್ಷಾ ಫಲಂ
ನೇರಳೆ-ಜಂಬೂ ಫಲಂ
ಸೌತೆಕಾಯಿ-ಉರ್ವಾರುಕ ಫಲಂ
ಚಕ್ಕೋತ-ಲಿಕುಚ ಫಲಂ
ಕಬ್ಬು-ಇಕ್ಷು ಖಂಡಮ್
ಕಡಲೆಬೇಳೆ-ಚಣಕ ದಳ
ತಂಬಿಟ್ಟು-ತಂಡುಲ ಚೂರ್ಣ
ಹೆಸರುಬೇಳೆ-ಮುದ್ಗದಳ
ಕಡಲೆಪುರಿ-ಧಾನಾ
ಭ್ರಷ್ಟಯವಃ(ಮಂಡಕ್ಕಿ)
ಒಬ್ಬಟ್ಟು-ಅಪೂಪ (ಪೋಲಿಕಾ)
ಲಾಡು-ಲಡ್ಡು ಕಮ್
ಒಡೆ-ಮಾಷಾ ಪೂಪ
ರೊಟ್ಟಿ-ಕಾಂದವ
ವಾಂಗಿಬಾತು-ವೃಂತಕಾನ್ನಂ
ತಂಬಿಟ್ಟು-ತಂಡುಲ ಚೂರ್ಣ ತಂಡುಲ ಪಿಷ್ಠ
ಪಲ್ಯ-ವ್ಯಂಜನಂ
ಪಾಯಸ-ಪಾಯಸಂ
ಗೋಡಂಬಿ-ಭಾಲ್ಲಾತಕಃ
ಸಿಹಿ ಗಳಿಗೆ-ಮಧುರ
ಬೆಲ್ಲದ ಪಾನಕ-ಗುಡ ಮಿಶ್ರ ಜಲಂ
ಪಾನಕ-ಶರ್ಕರಾಮಿಶ್ರ ಜಲಂ
ಅನಾನಸ್-ಅನಾನಸಂ
ಮೊಸರು ವಡೆ-ದದಿ ಮಾಷಾಪೂಪ
ವೀಳೇದೆಲೆ-ನಾಗವಲ್ಲೀ
ಅಡಿಕೆ-ಕ್ರಮುಖ
ಕುಂಬಳಕಾಯಿ-ಕೂಷ್ಮಾಂಡ
ಹಾಲು-ಕ್ಷೀರ
ಎಳಗಾಯಿ-ಶಲಾಟು
ಕಡುಬು-ಮೋದಕ
ಅತ್ತಿಹಣ್ಣು-ಔದುಂಬರ ಫಲ
ಚಟ್ನಿ-ತಮನಂ, ನಿಷ್ಠಾನಂ
ಅವಲಕ್ಕಿ-ಪೃಥುಕಃ, ಚಿಪಿಟಕಃ
ಗುಗ್ಗುರಿ-ಅಭ್ಯೂಷಃ
ಎಲಚಿ-ಬದರಿ
ಜಾಮೂನ್/ಜಿಲೇಬಿ-ವಿಜಿಲಂ
ಜಾಂಗೀರ್/ಪಲಾವ್-ಪ್ರಯಸ್ತಂ
ಬೆಣ್ಣೆ-ನವನೀತಂ
ನೆಲ್ಲಿಕಾಯಿ-ಆಮಲಕ
ಹುರಿಗಡಲೆ-ಬಾಲ ಭೋಜ್ಯ(ಪಪ್ಪುಲು)
ಪೊಂಗಲ್-ಮುದ್ಗೋದನಂ
ತೊವ್ವೆ-ಸೂಪಂ
ಮೊಸರನ್ನ-ದಧ್ಯನ್ನಂ

ಶ್ರೀ ಹರಿ.
*****
ದೇವರಿಗೆ ನೈವೇದ್ಯ"🪷
🌹ಹಿಂದೂಗಳು ದೇವರಿಗೆ ನೈವೇದ್ಯವನ್ನು ಅರ್ಪಿಸುವ ಅಥವಾ ಆಹಾರವನ್ನು ಅರ್ಪಿಸುವ ಸಂಪ್ರದಾಯವಿದೆ. ಹಲವರಿಗೆ ಇದರ ಹಿಂದಿನ ಕಾರಣ ತಿಳಿದು ಈ ಸಂಪ್ರದಾಯವನ್ನು ಪಾಲಿಸಿದರೆ, ಇನ್ನು ಕೆಲವರು ಇದು ನಮಗೆ ಹಿರಿಯರು ಹೇಳಿಕೊಟ್ಟ ಪದ್ಧತಿಯೆಂದು ಪಾಲಿಸುತ್ತಾರೆ. ಕೆಲವರು ಇದನ್ನು ಕೇವಲ ಆಚರಣೆಯಾಗಿ ನೋಡಬಹುದು, ಇನ್ನು ಕೆಲವರು ಮೂಢನಂಬಿಕೆ ಎಂದು ನೋಡಬಹುದು. ಆದರೆ ವಾಸ್ತವದಲ್ಲಿ, ಇದು ನಮ್ಮನ್ನು ಸ್ವಾರ್ಥದ ಪಾಪದಿಂದ ಮುಕ್ತಗೊಳಿಸಲು ಮಾಡಿದ ಕಾರ್ಯವಾಗಿದೆ.
🌹ಭಗವದ್ಗೀತೆಯ ಪ್ರಕಾರ, ಯಜ್ಞದ ಸಮಯದಲ್ಲಿ ಆಹಾರವನ್ನು ವಿತರಿಸದಿದ್ದರೆ, ಅದು (ತ್ಯಾಗ) ಸ್ವಭಾವದಲ್ಲಿ ತಾಮಸಿಕವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಹಿಂದೂಗಳು ದೇವರಿಗೆ ನೈವೇದ್ಯವನ್ನು ಅರ್ಪಿಸುವ ಸಮರ್ಥನೆಯಾಗಿದೆ. ಅನೇಕ ಜನರು ಇದನ್ನು ಏಕೆ ಮಾಡುತ್ತಾರೆ ಎನ್ನುವುದರ ಕಾರಣ ತಿಳಿಯದೇ ತಾವು ಕೂಡ ಮಾಡುತ್ತಾರೆ. ಇದನ್ನು ಕುಟುಂಬದ ಸಂಪ್ರದಾಯವಾಗಿಯೂ ಪಾಲಿಸುತ್ತಾರೆ. ಆದರೆ ಒಬ್ಬರು ಅರ್ಪಣೆಯನ್ನು ಪ್ರಾಮಾಣಿಕವಾಗಿ ಮಾಡಬೇಕು.
🌹ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ನಾವು ದೇವರಿಗೆ ಸಲ್ಲಿಸಬೇಕಾದ ಋಣವನ್ನು ಮರುಪಾವತಿಸಲು ಇದನ್ನು ಮಾಡಲಾಗುತ್ತದೆ. ಹೀಗಾಗಿ, ಅದರಿಂದ ಉಂಟಾಗುವ ಕರ್ಮ ಮತ್ತು ಆಹಾರದಲ್ಲಿರುವ ನಕಾರಾತ್ಮಕ ಶಕ್ತಿಗಳು ತಟಸ್ಥವಾಗುತ್ತವೆ. ಭಗವದ್ಗೀತೆಯು ದೇವರಿಗೆ ನೈವೇದ್ಯವಿಲ್ಲದೆ ಆಹಾರವನ್ನು ಸೇವಿಸುವ ಜನರು ಪಾಪವನ್ನು ತಿನ್ನುತ್ತಾರೆ ಎಂದು ಹೇಳುತ್ತದೆ.
🌹ಆಹಾರವನ್ನು ಬೇಯಿಸುವ ಜನರು ಮತ್ತು ಅವರು ಅದನ್ನು ಬೇಯಿಸುವ ಮನೋಭಾವವು ಸಹ ಮುಖ್ಯವಾಗಿದೆ ಏಕೆಂದರೆ ಅವರು ಅದನ್ನು ಧನಾತ್ಮಕ ಅಥವಾ ಋಣಾತ್ಮಕ ಚಿಂತನೆಗಳ ಮೂಲಕ ಬೇಯಿಸಿರಬಹುದು. ಆಗ ಅವರ ಭಾವನೆಯು ಸೇವಿಸುವ ಜನರ ಮೇಲೆ ಪ್ರಭಾವ ಬೀರಬಹುದು.
🌹ಸಾಮಾನ್ಯ ಕ್ರಮಗಳನ್ನು ಬಳಸಿಕೊಂಡು ಅಂತಹ ಕಲ್ಮಶಗಳನ್ನು ಆಹಾರದಿಂದ ತೆಗೆದುಹಾಕಲಾಗುವುದಿಲ್ಲ. ನಾವು ಅದನ್ನು ಭಗವಂತನಿಗೆ ಅರ್ಪಿಸಿದಾಗ, ನಾವು ಕಲ್ಮಶಗಳನ್ನು ತಟಸ್ಥಗೊಳಿಸಬಹುದು ಮತ್ತು ಆಹಾರವನ್ನು ಶುದ್ಧ ಮತ್ತು ಪವಿತ್ರಗೊಳಿಸಬಹುದು. ಇದು ತ್ಯಾಗದ ಆಹಾರವಾಗುತ್ತದೆ. ಅದಕ್ಕಾಗಿಯೇ ಹಿಂದೂ ಧರ್ಮವು ಈ ಆಚರಣೆಯನ್ನು ಪ್ರೋತ್ಸಾಹಿಸುತ್ತದೆ. ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಇನ್ನೊಂದು ಪ್ರಮುಖ ಕಾರಣವಾಗಿದೆ. ದೇವರುಗಳು ನಮಗೆ ಸೇವೆ ಸಲ್ಲಿಸುತ್ತಾರೆ ಮತ್ತು ನಮ್ಮ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ.
🌹ಇಡೀ ಜಗತ್ತು ಭಗವಂತನ ಕೊಡುಗೆ ಎಂದು ಉಪನಿಷತ್ತುಗಳು ಪ್ರತಿಪಾದಿಸುತ್ತವೆ. ಸೃಷ್ಟಿಯಲ್ಲಿ ಸಿಗುವ ಎಲ್ಲವೂ ದೇವರಿಗೆ ನೈವೇದ್ಯವಾಗಬಹುದು. ಭಗವದ್ಗೀತೆಯ ಪ್ರಕಾರ, ಕರ್ಮ ಮತ್ತು ಪುನರ್ಜನ್ಮದ ಕಲ್ಮಶಗಳಿಂದ ಮುಕ್ತಿ ಪಡೆಯಲು ಮತ್ತು ಮೋಕ್ಷ ಅಥವಾ ಮುಕ್ತಿಯನ್ನು ಪಡೆಯಲು ಬಯಸಿದರೆ ಪ್ರತಿಯೊಂದು ಕ್ರಿಯೆ, ಗ್ರಹಿಕೆ ಮತ್ತು ಆನಂದವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಬೇಕು.
🌹ಭಗವದ್ಗೀತೆಯ ಪ್ರಕಾರ, "ಆಹಾರದಿಂದ ಜೀವಿಗಳು ಅಸ್ತಿತ್ವಕ್ಕೆ ಬರುತ್ತವೆ, ಮಳೆಯಿಂದ ಆಹಾರ ಸೃಷ್ಟಿಯಾಗುತ್ತದೆ, ತ್ಯಾಗದಿಂದ ಮಳೆ ಉಂಟಾಗುತ್ತದೆ. ಈ ರೀತಿಯಾಗಿ, ತ್ಯಾಗದಿಂದ ಉತ್ಪತ್ತಿಯಾದುದನ್ನು ತ್ಯಾಗದ ಮೂಲಕ ತ್ಯಾಗಕ್ಕೆ ಹಿಂತಿರುಗಿಸಲಾಗುತ್ತದೆ.
🌹ದೇವರು ನಮಗೆ ತಿನ್ನಲು ಆಹಾರವನ್ನು ನೀಡಿರುವುದಕ್ಕಾಗಿ ನಾವು ಅವರಿಗೆ ನೇರವಾಗಿ ಧನ್ಯವಾದವನ್ನು ಹೇಳಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ ನಾವು ಆಹಾರವನ್ನು ತಿನ್ನುವ ಮೊದಲು ದೇವರಿಗೆ ಅರ್ಪಿಸಿ ನಂತರ ತಿನ್ನುತ್ತೇವೆ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
              🌸
L ವಿವೇಕಾನಂದ ಆಚಾರ್ಯ🇮🇳  (Army Rtd) Gubbi.   
🌸ph no :9480916387
***

*********




No comments:

Post a Comment