*
important- read more here
click
***
Amruteshvara temple
The Amruteshvara temple also spelt "Amrutesvara" or "Amruteshwara", is located in the village of Amruthapura, 67 km north of Chikmagalur town in the Chikkamagaluru district of the Karnataka state, India. Amruthapura is known for the Amruteshvara temple. The temple was built in 1196 C.E. by Amrutheshwara Dandanayaka under Hoysala King Veera Ballala The temple is a built according to Hoysala architecture with a wide open mantapa (hall).[2] The temple has an original outer wall with unique equally spaced circular carvings. The temple has one vimana (shrine and tower) and therefore is a ekakuta design,[3] and has a closed mantapa (hall) that connects the sanctum to the large open mantapa.
***
Kamandala Ganapati Temple Koppa
Kamandala Ganapati Temple, 3 kms from Koppa in Chikmagalur District.
Plus
Brahmi river's origin
Do note this place to visit.
***
Mannur Channakeshava temple
Mannur, Gulbarga District
hot water become cold after abhisheka!
***
ಸಿಂಹಾಸನಪುರಾಧೀಶ್ವರಿ ಹಾಸನಾಂಬೆ opens for 2 weeks during Dasera and Deepavali
ಸಾಮಾನ್ಯವಾಗಿ ಕೆಲವೊಂದು ಊರುಗಳಿಗೆ ದೇವರ ಹಿನ್ನೆಲೆಯಲ್ಲಿ ಬಂದಿರುವಂತಹ ಹೆಸರುಗಳಿವೆ. ಇಂತಹ ಸಾಲಿನಲ್ಲಿ ಸೇರುವ ಊರು 'ಹಾಸನ'. ಈ ನಗರಕ್ಕೆ ತಾಯಿ 'ಹಾಸನಾಂಬೆ'ಯಿಂದಲೇ ಬಂದ ಹೆಸರಿದು.
ಆದಿಶಕ್ತಿಸ್ವರೂಪಿಣಿಯೂ, ವರಪ್ರದಾಯಿನಿಯೂ ಆದ 'ಹಾಸನಾಂಬೆ'ಗೆ ಈ ಹೆಸರು ಸಿಂಹಾಸನಪುರಿ ಎಂಬ ಹೆಸರಿನಿಂದ ಬಂದಿದೆ. ಸಿಂಹಾಸನಪುರವು ಅರ್ಜುನನ ಮೊಮ್ಮಗನಾದ ಜನಮೇಜಯ ಮಹಾರಾಜನ ಸ್ಥಳವಾಗಿತ್ತು. ಸಪ್ತಮಾತೃಕೆಯರಾದ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ; ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಕಾಶಿ ವಾರಣಾಸಿಯಿಂದ ದಕ್ಷಿಣಾಭಿಮುಖವಾಗಿ ಬರುತ್ತಿರುವಾಗ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತರು. ಅವರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗೂ ಬ್ರಾಹ್ಮಿ ದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಇನ್ನುಳಿದ ದೇವತೆಗಳಾದ ಚಾಮುಂಡಿ, ವಾರಾಹಿ, ಇಂದ್ರಾಣಿಯರು ದೇವಿಗೆರೆಯ ಬಳಿ ನೆಲೆಸಿದರು ಎನ್ನಲಾಗುತ್ತದೆ.
ಸಪ್ತಮಾತೃಕೆಯರು ಸದಾ ನಗುವ ದೇವತೆಯಾಗಿರುವ ಕಾರಣದಿಂದ ನಸುನಗುವ ದೇವತೆಗಳು ನೆಲೆಸಿರುವುದರಿಂದ ಹಸನ, ಹಾಸನವಾಗಿದೆ ಎನ್ನಲಾಗುತ್ತದೆ. 'ಹಾಸನಾಂಬ' ಎಂದರೆ ನಸುನಗುತ್ತಾ ಹಸನ್ಮುಖಿಯಾಗಿರುವ ತಾಯಿ ಎಂದೂ ಇರಬಹುದು. ದೇಗುಲದ ಮೂರ್ತಿ ಹುತ್ತದ ಆಕಾರದಲ್ಲಿ ಇರುವುದೇ ವೈಶಿಷ್ಟ್ಯ. ಈಕೆಯ ದರ್ಶನ ವರ್ಷದಲ್ಲಿ ಒಂದು ಬಾರಿ, ಅದೂ ಆಶ್ವಯುಜ ಮಾಸದ ಶುಕ್ಷಪಕ್ಷದ ಪೌರ್ಣಿಮೆಯ ನಂತರ ಬರುವ ಗುರುವಾರ ದೇಗುಲದ ಬಾಗಿಲು ತೆಗೆದರೆ, ಬಲಿಪಾಡ್ಯಮಿಯ ಮಾರನೇ ದಿನ ಬಾಗಿಲು ಮುಚ್ಚುವುದು. ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಉರಿಯುತ್ತದೆ ಎಂಬುದು ದೇವಿಯ ಮಹಿಮೆ, ಮಹಾರಹಸ್ಯ, ಬಿಡಿಸಲಾಗದ ಕಗ್ಗಂಟು!. ಇದಕ್ಕೆಲ್ಲಾ ನಂಬಿಕೆಯೇ ಆಧಾರ.
ಐತಿಹಾಸಿಕ ಕಥೆಯ ಪ್ರಕಾರ ಹಾಸನವು ಚೋಳರಸರ ಅಧಿಪತಿಯಾದ ಬುಕ್ಕ ನಾಯಕ ಮತ್ತು ಅವನ ವಂಶಸ್ಥರಾದಾಗಿತ್ತು. ಹೊಯ್ಸಳರಿಗೂ ಪೂರ್ವಕಾಲದಲ್ಲಿ ಇದು ಗಂಗರ ಆಡಳಿತಕ್ಕೆ ಒಳಪಟ್ಟಿತ್ತು. ಬುಕ್ಕನಾಯಕನ ನಂತರ 12ನೆಯ ಶತಮಾನದಲ್ಲಿ ಕೃಷ್ಣಪ್ಪನಾಯಕ ಎಂಬ ಪಾಳೇಗಾರನಿಗೆ ಸೇರಿತ್ತು.
ನಾಯಕನು ಒಮ್ಮೆ ಪ್ರಯಾಣ ಹೊರಟಾಗ ಮೊಲವೊಂದು ಅಡ್ಡ ಬಂದು ಪಟ್ಟಣವನ್ನು ಪ್ರವೇಶಿಸಿತು. ಈ ಅಪಶಕುನದಿಂದ ನಾಯಕನು ನೊಂದುಕೊಂಡನು. ಆಗ ಅವನ ಕನಸಿನಲ್ಲಿ ಹಾಸನಾಂಬೆಯು ಪ್ರತ್ಯಕ್ಷಳಾಗಿ 'ಮಗು, ಖಿನ್ನ ಮನಸ್ಸು ಬಿಡು, ಈ ಸ್ಥಳದಲ್ಲಿ ಕೋಟೆಯನ್ನು ಕಟ್ಟು, ಇಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ' ಎಂದು ಹೇಳಿದಳಂತೆ. ಹೀಗಾಗಿ ಕೋಟೆಯನ್ನು ಕಟ್ಟಿದ ಕೃಷ್ಣಪ್ಪನಾಯಕನು, ಅದಕ್ಕೆ 'ಹಾಸನಾಂಬೆ' ಎಂದು ಹೆಸರಿಟ್ಟನು. ಹಾಸನ ತಾಲ್ಲೂಕಿನ ಕುದುರುಗುಂಡಿ ಗ್ರಾಮದಲ್ಲಿರುವ ಕ್ರಿ.ಶ. 1140 ರ ವೀರಗಲ್ಲಿನ ಶಿಲಾ ಶಾಸನದಲ್ಲಿ ಇದನ್ನು ವಿವರಿಸಲಾಗಿದೆ.
☆ ಹಾಸನಾಂಬೆಯ ಪೂಜಾ ವಿಧಿ
ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ಬಾಗಿಲನ್ನು ತೆರೆಯುವ ದಿನ ಎಲ್ಲಾ ತಳವಾರ ಮನೆತನದವರು ಹಾಜರಿರುತ್ತಾರೆ. ಗರ್ಭಗುಡಿಯ ಮುಂದೆ ಬಾಳೆಯ ಕಂದನ್ನು ಅರಸು ಮನೆತನದವರಿಂದ ನೆಟ್ಟು ದೇವಿಯನ್ನು ಭಜಿಸುತ್ತಾ, ಅರಸು ಮನೆತನದವರು ಬಾಳೆ ಕಂದನ್ನು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲನ್ನು ತೆರೆಯುವುದು ಇಲ್ಲಿನ ಸಂಪ್ರದಾಯ.
ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ಭಕ್ತರು ಹಾಸನಾಂಬೆಯ ದರ್ಶನ ಮಾಡಬಾರದು ಎನ್ನುವ ನಿಯಮವಿದೆ. ಇದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚು ಎನ್ನುವುದು ಜನರ ನಂಬಿಕೆ. ಈ ಕಾರಣಕ್ಕಾಗಿ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಮರುದಿನ ಭಕ್ತರಿಗೆ ಪ್ರವೇಶವನ್ನು ನೀಡಲಾಗುತ್ತದೆ.
ಮೊದಲನೇ ದಿನ ಹಾಸನಾಂಬೆಗೆ ಯಾವುದೇ ರೀತಿಯ ಅಲಂಕಾರವನ್ನು ಮಾಡಲಾಗುವುದಿಲ್ಲ. ಎರಡನೇ ದಿನ ದೇವಿಯ ಆಭರಣ, ವಸ್ತ್ರಗಳನ್ನು ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ತಂದು ತಾಯಿಯನ್ನು ಅಲಂಕರಿಸಿ ಪೂಜೆ ಮಾಡಿ, ನೈವೇದ್ಯವನ್ನು ಅರ್ಪಿಸಲಾಗುತ್ತದೆ. ದೇವಿಯ ವಸ್ತ್ರಗಳನ್ನು ಹುಣಸಿನ ಕೆರೆಯಲ್ಲಿರುವ ಮಡಿವಾಳರು ಒಗೆದ ನಂತರ ಪುರೋಹಿತರು ಮಡಿಯಲ್ಲಿ ಅಮ್ಮನವರ ಮೀಸಲು ಮನೆಯಲ್ಲಿ ನಮಸ್ಕರಿಸಿ ಇಡುತ್ತಾರೆ. ಈ ಬಾರಿ 10 ದಿನಗಳ ಕಾಲ ಹಾಸನಾಂಬೆಯ ದರ್ಶನ ಇರಲಿದೆ.
ಬಲಿಪಾಡ್ಯಮಿಯಂದು ತುಪ್ಪದ ದೀಪವನ್ನು ಬೆಳಗಿಸಿ ಹಾಸನಾಂಬೆಯ ಗರ್ಭಗುಡಿಯೊಳಗೆ ಇಡಲಾಗುತ್ತದೆ. ಜೊತೆಗೆ ಹೂಗಳೊಂದಿಗೆ ಬೇಯಿಸಿದ ಅನ್ನವನ್ನು ನೈವೇದ್ಯವಾಗಿ ಇಡಲಾಗುತ್ತದೆ. ಪವಾಡವೆಂದರೆ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ದೀಪ ಉರಿಯುತ್ತಲೇ ಇದ್ದು, ಹೂಗಳು ತಾಜವಾಗಿರುತ್ತದೆ. ಹಾಗೂ ಪ್ರಸಾದವು ಕೂಡಾ ಹಾಳಾಗದೆ ಇರುತ್ತದೆ.
☆ ಕಳ್ಳಪ್ಪನ ಗುಡಿ
ಒಮ್ಮೆ ದೇವಿಯ ವಿಗ್ರಹದ ಆಭರಣಗಳನ್ನು ಕದಿಯಲು ನಾಲ್ಕು ಜನ ಕಳ್ಳರು ದೇವಾಲಯಕ್ಕೆ ಪ್ರವೇಶಿಸಿದರು. ಇದರಿಂದ ಕುಪಿತಳಾದ ದೇವಿಯು ಅವರಿಗೆ ಶಾಪವನ್ನು ನೀಡಿ ಕಲ್ಲಾಗುವಂತೆ ಪರಿವರ್ತಿಸುತ್ತಾಳೆ. ಅಂದಿನಿಂದ ಇದು ಕಳ್ಳಪ್ಪನ ಗುಡಿಯೆಂದೇ ಪ್ರಸಿದ್ಧವಾಗಿದೆ.
☆ ಸಿದ್ಧೇಶ್ವರ ದೇವಾಲಯ
ಹಾಸನಾಂಬೆಯ ದೇವಾಲಯವನ್ನು ಪ್ರವೇಶಿಸಿದ ತಕ್ಷಣವೇ ಕಾಣುವ ದೇವಾಲಯವೇ ಸಿದ್ಧೇಶ್ವರ ದೇಗುಲ. ಲಿಂಗ ರೂಪದ ಈ ಉದ್ಭವ ಮೂರ್ತಿಯು ಈಶ್ವರನು ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ರೀತಿಯಲ್ಲಿದೆ. ಪ್ರತಿ ಅಮಾವಾಸ್ಯೆಯಂದು ರಾವಣೋತ್ಸವ, ಬಲಿಪಾಡ್ಯಮಿಯಂದು ಚಂದ್ರಮಂಡಲ ರಥೋತ್ಸವವು ಇಲ್ಲಿ ನಡೆಯುತ್ತದೆ.
☆ ದಂತಕಥೆ
ಒಂದು ದಂತಕಥೆಯ ಪ್ರಕಾರ ಒಬ್ಬ ಸೊಸೆಗೆ ಆಕೆಯ ಅತ್ತೆಯು ಬಹಳ ಕಷ್ಟ ಕೊಡುತ್ತಿದ್ದಳು. ಆ ಸೊಸೆಯು ಪ್ರತೀ ನಿತ್ಯ ದೇವಸ್ಥಾನಕ್ಕೆ ಬರುತ್ತಿದ್ದಳು. ದೇವತೆಯರು ಅವಳನ್ನು ಮಾತನಾಡಿಸುತ್ತಿದ್ದರು ಮತ್ತು ಈ ವಿಷಯ ಯಾರ ಬಳಿಯೂ ಹೇಳಬಾರದೆಂದು ಹೇಳಿದ್ದರು. ಒಂದು ದಿನ ಸೊಸೆ ದೇಗುಲಕ್ಕೆ ಹೊರಟಾಗ, ಅತ್ತೆ ಅವಳನ್ನು ಹಿಂಬಾಲಿಸಿ ಬಂದು ನೋಡಿದಾಗ ಅಮ್ಮನವರ ಮುಂದೆ ನಿಂತಿದ್ದ ಸೊಸೆಯನ್ನು ಕಂಡು ಸಿಟ್ಟಾಗಿ ತಲೆ ಮೇಲೆ ಕುಟ್ಟಿದಳು, ನೋವಿನಿಂದ ಸೊಸೆಯು ‘ಅಮ್ಮ ಹಾಸನಾಂಬೆ’ ಎಂದು ಕೂಗಿದಾಗ ದೇವಿಯು ಆಕೆಯ ಭಕ್ತಿಗೆ ಮೆಚ್ಚಿ ನನ್ನ ಸನ್ನಿಧಿಯಲ್ಲೇ ಯಾವಾಗಲೂ ಕಾಣುವಂತಿರು ಎಂದು ಹರಸಿದ್ದರಿಂದ ಸೊಸೆ ಕಲ್ಲಾಗಿ ಬಿಟ್ಟಳು. ಆ ಕಲ್ಲು ಈಗಲೂ ಕಾಣಿಸುತ್ತದೆ. ಆ ಕಲ್ಲು ಪ್ರತೀ ವರ್ಷ ಬತ್ತದ ಕಾಳಿನ ಮೊನೆಯಷ್ಟು ಚಲಿಸುತ್ತದೆ. ಅದು ಸಂಪೂರ್ಣ ಚಲಿಸಿ ದೇವಿ ಪಾದ ತಲುಪಿದ ದಿನ ಕಲಿಯುಗದ ಅಂತ್ಯವೆಂದು ನಂಬಿಕೆ ಇದೆ.
ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಹಚ್ಚಿಡುತ್ತಾರೆ. ಮರು ವರ್ಷ ದೇಗುಲದ ಬಾಗಿಲು ತೆರೆಯುವವರೆಗೆ ಆ ಹೂವು ಬಾಡದೆ, ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರುತ್ತದೆ. ನಂದಾದೀಪ ಆರಿ, ಹೂವು ಬಾಡಿದ್ದಲ್ಲಿ ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ ಎಂಬ ನಂಬಿಕೆ ಇದೆ.
ಬೆಳಿಗ್ಗೆ 4ರಿಂದ ರಾತ್ರಿ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ತಾಯಿ ಹಾಸನಾಂಬೆಯ ದರ್ಶನಗೈದು ಆಕೆಯ ಕೃಪೆಗೆ ಪಾತ್ರರಾಗೋಣ. ಶುಭವಾಗಲಿ.
***
ಮೊದಲಕಲ್ಲು
ಮೊದಲಕಲ್ಲು ಅಥವಾ ಆದಿಶಿಲೆ ಎಂಬುದು ಗದ್ವಾಲ ಕ್ಷೇತ್ರದಲ್ಲಿ ತುಂಗಭದ್ರಾ-ಕೃಷ್ಣಾ ನದಿಗಳ ಮಧ್ಯದಲ್ಲಿರುವ ಕ್ಷೇತ್ರ. ಅದು ಸ್ವಯಂವ್ಯಕ್ತ ಶ್ರೀನಿವಾಸನ ಪುಣ್ಯಭೂಮಿ. ಅಲ್ಲಿರುವ ಕೊಳ ಸ್ವಾಮಿಪುಷ್ಕರಣಿಯೆಂದು ಪ್ರಸಿದ್ದವಾಗಿದೆ.
***
ಮಧುಗಿರಿ
ಸುಮಾರು 1630ರಲ್ಲಿ ಆಗಿದ್ದ ಪಾಳೆಗಾರನಿಗೆ ಸ್ವಪ್ನದಲ್ಲಿ ಶ್ರೀನಿವಾಸ ಬಂದು, ಹತ್ತಿರದಲ್ಲಿರುವ ಕೆರೆಯಲ್ಲಿ ತನ್ನ ವಿಗ್ರಹವು ಮುಳುಗಿರುವುದಾಗಿಯೂ, ಮೇಲೆತ್ತಿ ಪ್ರತಿಷ್ಟಾಪನೆ ಮಾಡಬೇಕೆಂದೂ ಸೂಚನೆ ಕೊಟ್ಟನು. ಅದರಂತೆಯೇ ನಡೆದು, ಸುತ್ತಲೂ ಕೋಟೆ ಕಟ್ಟಿ ಪೂಜೆ ಇಂದಿಗೂ ನಡೆಯುತ್ತಿದೆ. ಬಹಳ ಜಾಗೃತ ಕ್ಷೇತ್ರ. ಪಕ್ಕದಲ್ಲೇ, ಬೃಹತ್ ಲಿಂಗರೂಪದಲ್ಲಿ ರುದ್ರದೇವರ ಕಾಡುಮಲ್ಲೇಶ್ವರ ಎಂಬ ಗುಡಿಯಿದೆ.
***
ಶಾರದೆ ದೇವಿ ಶೃಂಗೇರಿ sharada devi sringeri
ವಿಶ್ವಾಸ್ ಎಸ್. ಭಟ್ ಶೃಂಗೇರಿ
ಶೃಂಗೇರಿ ಶಾರದಾಪೀಠದ ದಕ್ಷಿಣದಿಕ್ಕಿನಲ್ಲಿರುವುದೇ ವಿದ್ಯಾರಣ್ಯಪುರ ಅಗ್ರಹಾರ. ಇಲ್ಲಿಗೆ ಸಮೀಪದಲ್ಲಿಯೇ ದುರ್ಗಾ ಮಲ್ಲಿಕಾರ್ಜುನ ದೇವಾಲಯವಿದೆ. ಇಲ್ಲಿರುವ ಮಲ್ಲಿಕಾರ್ಜುನ ಸ್ವಾಮಿಯ ಲಿಂಗವು ಸ್ವಯಂಭೂ (ಉದ್ಭವ) ಲಿಂಗವಾಗಿದೆ. ಇದು ‘ಹರನು ಒಲಿದ’ ಜಾಗವಾದ ಕಾರಣ ಮುಂದೆ ಜನರ ಮಾತಿನಲ್ಲಿ ‘ಹರಾವರಿ’’ ಎಂದು ರೂಢಿಗೆ ಬಂದಿತು.
ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಇಲ್ಲಿ ದುರ್ಗಮ್ಮನವರ ಮೂರ್ತಿಯನ್ನು ಶಿವಲಿಂಗದ ಎಡಭಾಗದಲ್ಲಿ ಪ್ರತಿಷ್ಠಾಪಿಸಿದರು. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ದಿಕ್ಪಾಲಕ ದೇವಸ್ಥಾನಗಳಲ್ಲಿ ಈ ದುರ್ಗಮ್ಮನವರು ದಕ್ಷಿಣ ದಿಕ್ಕಿನ ರಕ್ಷಣಾದೇವತೆ ಆಗಿದ್ದು, ಇಲ್ಲಿ ಮಾತ್ರ ರಥೋತ್ಸವ ನಡೆಯುತ್ತದೆ. ಇದನ್ನು ಆಡುಭಾಷೆಯಲ್ಲಿ ದುರ್ಗಾ ದೇವಸ್ಥಾನದ ಜಾತ್ರೆ ಎಂದು ಹೇಳುವುದು ವಾಡಿಕೆ. ರಥೋತ್ಸವದ ದಿನ ಪ್ರಾತಃಕಾಲದಲ್ಲಿ ಜಗದ್ಗುರುಗಳಿಂದ ವಿಶೇಷ ಪೂಜೆ ನೆರವೇರಿದ ಮೇಲೆ ತಾಯಿ ರಥಾರೂಢಳಾಗುತ್ತಾಳೆ. ಸ್ವಲ್ಪ ದೂರ ಕ್ರಮಿಸಿದ ನಂತರ ಸಂಧ್ಯಾಕಾಲದಲ್ಲಿ ರಥೋತ್ಸವ ಜರುಗುತ್ತದೆ.
ಈ ಸಂದರ್ಭದಲ್ಲಿ ದುರ್ಗಾಂಬೆಗೆ ಬೆಳ್ಳಿಯಲ್ಲಿ ಮಾಡಿದ ಆಕೃತಿಗಳನ್ನು ಸಮರ್ಪಿಸುವುದು ಪದ್ಧತಿ. ಅವುಗಳೆಂದರೆ – ಬೆಳ್ಳಿಯ ನಾಲಿಗೆ: ಇದರ ಸಮರ್ಪಣೆಯಿಂದ ವಾಗ್ದೋಷ ಪರಿಹಾರ; ಬೆಳ್ಳಿಯ ಜಾನುವಾರು: ಜಾನುವಾರುಗಳು ಕಳೆದುಹೋದಾಗ, ಅವುಗಳಿಗೆ ರೋಗ-ರುಜಿನಗಳು ಬಂದಾಗ; ತೊಂದರೆ ಆದಾಗ; ಬೆಳ್ಳಿಯ ಕಣ್ಣು: ದೃಷ್ಟಿದೋಷ ಮತ್ತು ಕಣ್ಣಿನ ತೊಂದರೆ ನಿವಾರಣೆ; ಬೆಳ್ಳಿಯ ತೊಟ್ಟಿಲು: ಸಂತಾನದೋಷ ನಿವಾರಣೆ; ಬೆಳ್ಳಿಯ ಚರ್ಮದಾಕೃತಿ: ಚರ್ಮರೋಗಗಳ ಪರಿಹಾರ; ಮೊಸರನ್ನ: ಆರೋಗ್ಯಕ್ಕಾಗಿ – ಹೀಗೆ. ಇಂತಹ ಹಲವಾರು ನಂಬಿಕೆಗಳಿವೆ. ದುರ್ಗಾಂಬೆಯ ಅನುಗ್ರಹಲೀಲೆಗಳು ಇಂದಿಗೂ ನಡೆಯುತ್ತಿದೆ. ಮೂರು ದಿನಗಳ ಕಾಲ ಆಗಮೋಕ್ತವಾಗಿ ನಡೆಯುವ ಜಾತ್ರಾಮಹೋತ್ಸವ, ರಥೋತ್ಸವದ ಮರುದಿನ ನಡೆಯುವ ಅವಭೃಥಸ್ನಾನಕ್ಕೂ ಜನರು ಸಾಲುಗಟ್ಟಿ ನಿಲ್ಲುವುದು ವಿಶೇಷ.
19ನೆಯ ಶತಮಾನದ ಉತ್ತರಾರ್ಧ ಹಾಗೂ 20ನೆಯ ಶತಮಾನದ ಪೂರ್ವಾರ್ಧದಲ್ಲಿ ಇಡೀ ಭಾರತದೇಶವೇ ಪ್ಲೇಗ್ನಿಂದ ತತ್ತರಿಸಿತು. ಸರಿಯಾದ ಔಷಧೋಪಚಾರವಿಲ್ಲದೆ ಸಹಸ್ರಾರು ಜನರು ಮೃತಪಟ್ಟರು. ಶೃಂಗೇರಿ ಜಹಗೀರು ಪ್ರದೇಶದಲ್ಲಿಯೂ ಈ ಪ್ಲೇಗ್ ರೋಗ ಕಾಣಿಸಿಕೊಂಡಿತು. ಜನರು ಕಂಗೆಟ್ಟು, ಪರಿಹಾರ ಕಾಣದೆ ಕೊನೆಗೆ ಆ ಕಾಲಘಟ್ಟದಲ್ಲಿ ವಿರಾಜಮಾನರಾಗಿದ್ದ 33ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತಿ ಮಹಾಸ್ವಾಮಿಗಳ (ಕ್ರಿ.ಶ. 1879-1912) ಬಳಿ ತಮ್ಮ ಅಳಲನ್ನು ಹೇಳಿಕೊಂಡು ರಕ್ಷಿಸಬೇಕೆಂದು ಅವರಿಗೆ
ಶರಣಾದರು. ಶಿಷ್ಯಜನರ ಈ ದೀನಸ್ಥಿತಿಯನ್ನು ನೋಡಿ ಮರುಗಿದ ಗುರುವರ್ಯರು ಮರುಕ್ಷಣದಲ್ಲಿ ತಾವೇ ಸ್ತೋತ್ರವೊಂದನ್ನು ರಚಿಸಿ ದುರ್ಗಾಂಬೆಯನ್ನು ಸ್ತುತಿಸಿದರು.
ಆ ನಂತರ ಶೃಂಗೇರಿಯ ಜಹಗೀರ್ ಪ್ರದೇಶದಲ್ಲಿ ಮುಂದೆಂದೂ ಪ್ಲೇಗ್ ಕಾಣಿಸಿಕೊಳ್ಳಲಿಲ್ಲ. ಇದೊಂದು ಕೌತುಕ ವಿಚಾರ.
ಈ ತಾಯಿಯ ಮಹಾರಥೋತ್ಸವವು ಪಾಲ್ಗುಣಮಾಸದ ಮೃಗಶಿರಾ ನಕ್ಷತ್ರದಂದು (ಮಾ. 14) ಶ್ರದ್ಧಾಭಕ್ತಿಗಳಿಂದ, ಬಹಳ ವಿಜೃಂಭಣೆಯಿಂದ ಜರುಗಲಿದೆ.
ಮಹಾಸ್ವಾಮಿಗಳಿಂದ ರಚಿತವಾದ ಶ್ರೀ ದುರ್ಗಾಸ್ತವದ ಆಯ್ದ ಭಾಗ ಹೀಗಿದೆ:
ಏತಾವಂತಂ ಸಮಯಂ ಸರ್ವಾಪದ್ಯೋಪಿ ರಕ್ಷಣಂ ಕೃತ್ವಾ |
ಗ್ರಾಮಸ್ಯ ಪರಮಿದಾನೀಂ ತಾಟಸ್ಥ್ಯ ಕೇನ ವಹಸಿ ದುರ್ಗಾಂಬ || 1 ||
(ಹೇ ದುರ್ಗಾಂಬೆ! ಇದುವರೆಗೂ ಎಲ್ಲಾ ರೀತಿಯ ವಿಪತ್ತುಗಳಿಂದಲೂ ಗ್ರಾಮದ (ಶೃಂಗಗಿರಿಯ) ರಕ್ಷಣೆಯನ್ನು ಮಾಡಿ ಇಂದು ಯಾವ ಕಾರಣದಿಂದ ತಟಸ್ಥವಾಗಿದ್ದಿಯಾ?)
ಅಪರಾಧಾ ಬಹುಶಃ ಖಲು ಪುತ್ರಾಣಾಂ
ಪ್ರತಿಪದಂ ಭವಂತ್ಯೇವ |
ಕೋ ವಾ ಸಹತೇ ಲೋಕೇ ಸರ್ವಾಂಸ್ತಾನ್ ಮಾತರಂ ವಿಹಾಯೈಕಾಮ್ || 2 ||
(ಮಕ್ಕಳಿಂದ ಹೆಜ್ಜೆಹೆಜ್ಕೆಗೂ ಅಪರಾಧಗಳು ಅಗುತ್ತಲೇ ಇರುತ್ತವೆಯಷ್ಟೇ. ತಾಯಿಯಾದ ನಿನ್ನೊಬ್ಬಳನ್ನು ಬಿಟ್ಟು ಯಾರು ತಾನೇ ಈ ಲೋಕದಲ್ಲಿ ಅವುಗಳನ್ನೆಲ್ಲ ಸಹಿಸುವರು?)
Image may contain: one or more people and people sitting
ಶೃಂಗೇರಿಯ ದಕ್ಷಿಣ ದಿಕ್ಕಿನಲ್ಲಿ ಜಗದ್ಗುರು ಆದ್ಯ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ರಕ್ಷಣಾ ದೇವತೆ ದುರ್ಗಾದೇವಿಯ ವೈಭವದ ಜಾತ್ರಾ ಮಹೋತ್ಸವ ಇದೇ 2019 ಮಾರ್ಚ್ 14 ರಂದು. ಈ ಸುಸಂಧರ್ಭದಲ್ಲಿ ದುರ್ಗಾಮಾತೆಯನ್ನು ಸ್ಮರಿಸುತ್ತಾ...
ಮಾ ಭಜ ಮಾ ಭಜ ದುರ್ಗೇ
The Annual ( Jatre ) festival of Sri Durgamba, will be celebrated grandly on 14th of March 2019.
Durgamba was consecrated as protection deity in the southern direction of Sringeri, by Jagadguru Sri Adi Shankaracharya.
On this occasion recalling Sri Durga Maatha..
***
ಶೃಂಗೇರಿಯಿಂದ 23 ಕಿಮೀ ದೂರದಲ್ಲಿ ಕಸವೆ ಎಂಬ ಹಳ್ಳಿ ಇದ್ದು, ಅಲ್ಲಿರುವ ಗಣೇಶನ ದೇವಾಲಯದಲ್ಲಿ, ವರ್ಷ ಪೂರ್ತಿ ನೀರು ಉಕ್ಕುವುದು ಹಾಗು ಅದೇ ನೀರಿನಿಂದ ಗಣೇಶನಿಗೆ ಅಭಿಷೇಕ ಮಾಡಲಾಗುವುದು.
*******
Navarathri
ಶೃಂಗೇರಿಯ ಅಧಿದೇವತೆಯಾದ ಶಾರದಾಪರಮೇಶ್ವರಿಯನ್ನು ಪೂಜಿಸಲು ನವರಾತ್ರಿಯ ಶುಭಸಂದರ್ಭದಲ್ಲಿ ಗಂಗೆಯನ್ನು ಮಲ್ಲಪ್ಪನ ಹೊಳೆಯಿಂದ (ಮಲಹಾನಿಕರೇಶ್ವರ ಬೆಟ್ಟದ ಎದರಿಗೆ ಹರಿಯುವ ತುಂಗಾ ತಟದ ಹಳೆಯ ಹೆಸರು,ಈಗಿನ ಗಾಂಧಿ ಮೈದಾನದ ಒಂದು ಭಾಗ) ಮಂಗಳವಾದ್ಯಗಳೊಂದಿಗೆ ಗಜದ ಮೇಲೆಯಿರಿಸಿಕೊಂಡು ತರುವ ಪದ್ಧತಿ ಶತಶತಮಾನಗಳಿಂದಲೂ ಇದೆ.
To worship Sri Sharada Parameshwari during Navaratri, there is an age old tradition of bringing holy waters from Mallappana holae, (Tunga flowing in front of the mallappana betta) in a procession on an elephant.
kartheeka masa rangoli
Sringeri Swami's Vijaya Yatre 24 Nov 2018 to 26 Nov 2018
***
Pernankila Mahalingeshwara-
Shri Mahaganapathi Temple near Udupi
Pernankila Mahalingeshwara and Shri Mahaganapathi Temple is situated in Pernankila which is about 20 km southeast of Udupi in Karnataka. A scenic pond is present adjacent to temple. Lord Ganesha deity here is believed to remove obstacles from one's life. The Ganapati here is called Udbava Ganapati as it is believed to have self manifested from earth.
Legend has it that Lord Mahalingeshwara idol was installed by Kharasura for Trikala pooja.
It is interesting to note that the Ganesha idol here has only the head and has an interesting folk story associated with it.
According to the legend that Lord Ganapati idol was found by a farmer named Perna while plowing the field and when he curiously checked something caught in the plow, he saw the idol of Balamuri Ganapati. Same night in his dream, he was ordered to take two kopparis and keep one in the place where the idol was found and the other to the side of Shivalaya. After placing the Kopparis, a beautiful idol of Lord Ganesha appeared underneath the Koppari placed at the side of Shivalaya. This is the Udbhava (self manifested) Ganapati. The village was named Pernankila because of Perna.
The historians have dated the idol to early 6th century and the temples to 8th century AD. An inscription of late 13th century can be seen near the pond at Mahalingeshwara temple. It talks about the donations made by the Alupa queen Balla Mahadevi to the temples of Peranankila.
Pernankila Shri Mahaganapati is fond of appams prepared out of rice ghee and jaggery. On the Ganesh Chaturthi day nearly one quintal rice is used to prepare 50,000 appams and distribute among the devotees. Every month nearly 70,000 appams are prepared and distributed as ‘prasad’ to the devotees who visit the temple.
***
No comments:
Post a Comment