(ತಾರಾದರ್ಶಿನಿ ಅಂಕಣದಿಂದ ಸಂಗ್ರಹ)
ನಾವು ದೋಷಗಳ ನಿವಾರಣೆಗೆ "ಫಲದಾನ" ಮಾಡಿರುತ್ತೀವಿ, ಆದರೂ ಫಲ ಸಿಕ್ಕಿರೋಲ್ಲ, ಅಥವಾ ಕೆಲಸಗಳು ನಿಧಾನವಾಗೋದು, ಆಗದಲೇ ಇರೋದು ಆಗುತ್ತೆ.
"ಯಾವುದೇ ಕೆಲಸಗಳಿಗೆ ಮುಂಚೆ "ಹಣ್ಣು" ದಾನ ಮಾಡಿದರೆ, ನಾವು ಮಾಡೋ ಕೆಲಸಗಳೂ ಕೂಡ ಹಣ್ಣಾಗಬೇಕು, ಅಂದರೆ ಶುಭವಾಗಬೇಕು.."!
ಹೀಗೆ ಶುಭವಾಗಬೇಕಾದರೆ ಯಾವ ನಕ್ಷತ್ರಗಳಲ್ಲಿ ಫಲದಾನ ಮಾಡಿದರೆ ಫಲ ಏನು.?
೧. "ಕ್ಷಿಪ್ರ" ಫಲ : ಅಶ್ವಿನಿ, ಹಸ್ತ, ಪುಷ್ಯ ನಕ್ಷತ್ರಗಳು..
೨. ಧಾರುಣ ಫಲ : ಆರಿದ್ರಾ, ಜೇಷ್ಠ, ಆಶ್ಲೇಶ , ಮೂಲ ಇವು ಶುಭಾಶುಭ ಫಲ ಕೊಡುತ್ತವೆ.. ಎರಡೂ ರೀತಿಯ ಫಲ ಕೊಡುವುದು..
೩. ಮೃದು ಫಲ : ಚಿತ್ತ, ರೇವತಿ, ಮೃಗಶಿರ, ಅನೂರಾಧ, ಸ್ವಲ್ಪ ಫಲ ಕೊಡುತ್ತವೆ..
೪. ಸ್ಥಿರ ಫಲ : ರೋಹಿಣಿ, ಉತ್ತರ, ಉತ್ತರಾಷಾಢ, ಉತ್ತರಾಭಾದ್ರ ನಕ್ಷತ್ರಗಳು.. ಕೆಲಸಗಳು ಮುಂದುವರಿಯುವುದಿಲ್ಲ, ಅಥವಾ ನಿಂತು ನಿಂತು ಆಗಬಹುದು, ಆಗದೇನು ಇರಬಹುದು..
೫. ಉಗ್ರ ಫಲ : ಭರಣಿ, ಮಖಾ, ಪುಬ್ಬ, ಪೂರ್ವಾಷಾಢ, ಪೂರ್ವಾಭಾದ್ರ ನಕ್ಷತ್ರಗಳು.. ಕೆಟ್ಟಫಲ ಕೊಡುತ್ತವೆ..
೬. ಸಾಧಾರಣ ಫಲ : ಕೃತ್ತಿಕಾ, ವಿಶಾಖ ನಕ್ಷತ್ರಗಳು..
೭."ಚರ" ಫಲಗಳು : ಸ್ವಾತಿ, ಪುನರ್ವಸು, ಶ್ರವಣ, ಧನಿಷ್ಟ, ಶತಭಿಷ, ...
ನೀವು ಕೋರಿಕೊಂಡ ಬೇಡಿಕೆಗಳು , ಕಾರ್ಯಗಳು ಕೆಲವು ಸಲಬಹಳ ಬೇಗ ನಡೆಯುತ್ತವೆ..., ಕೆಲವು ಸಲ ನಿಧಾನವಾಗಿ ನಡೆಯುತ್ತವೆ.
*****
No comments:
Post a Comment