SEARCH HERE

Tuesday, 1 January 2019

ಮೃತ್ತಿಕಾ ಪ್ರಸಾದ ಮಹತ್ವ mruthika prasada importance


ಮೃತ್ತಿಕಾ ಪ್ರಸಾದ ಮತ್ತು ಮಹತ್ವಗಳು.. - “ಮೃತ್ತಿಕಾ ಪ್ರಸಾದ ” ಎಂದರೆ ದೇವಾಲಯಗಳಲ್ಲಿ ಪ್ರಸಾದ ರೂಪವಾಗಿ “ಮಣ್ಣು” ಕೊಡುತ್ತಾರೆ..!
ಉದಾಹರಣೆಗೆ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇರುವ “ಆದಿ ಸುಬ್ರಹ್ಮಣ್ಯ” ದೇವಾಲಯದಲ್ಲಿ ಭಕ್ತಾದಿಗಳಿಗೆ “ವಾಲ್ಮೀಕಿ ಮೃತ್ತಿಕಾ” ಅಂದರೆ ಹುತ್ತದ ಮಣ್ಣನ್ನು ಪ್ರಸಾದವಾಗಿ ಕೊಡುತ್ತಾರೆ..!

ಮೃತ್ತಿಕೆ ಪ್ರಸಾದದ ವಿವರಗಳು.
೧. ಮೃತ್ತಿಕೆ ಪ್ರಸಾದವನ್ನು ಯಾರು ಧರಿಸಿಕೊಳ್ಳುತ್ತಾರೋ ಅವರಿಗೆ ನಾಗರ ಭಯವಿಲ್ಲ, ನಾಗದೇವತೆ ಆಶೀರ್ವಾದ ಯಾವಾಗಲೂ ಇರುತ್ತದೆ ..
೨.ಯಾರು ಹಾವು ಕಂಡರೆ ಭಯಪಡುತ್ತಾರೋ , ಯಾರಿಗೆ ಕನಸಿನಲ್ಲಿ ಹಾವುಗಳು ಜಾಸ್ತಿ ಬರುತ್ತವೆಯೋ ಅಂಥವರು ಮೃತ್ತಿಕೆ ಧಾರಣೆ ಮಾಡಿದರೆ ಸರ್ಪಗಳ ಭೀತಿ ಹೊರಟು ಹೋಗುತ್ತದೆ..
೩. ಯಾರು ಮಾತನಾಡುವಾಗ ತೊದಲುತ್ತಾರೆಯೋ ಅಂಥವರು ಒಂದು ಲೋಟ ನೀರಿಗೆ ಚಿಟಿಕೆ ಮೃತ್ತಿಕೆ ಹಾಕಿ ಕುಡಿಯುತ್ತಿದ್ದರೆ ತೊದಲು ನಿವಾರಣೆಯಾಗುತ್ತದೆ ..
೪. ಯಾವ ಹೆಣ್ಣುಮಕ್ಕಳು ಎಷ್ಟೇ ಗಂಡುಗಳು ಬಂದರೂ ಕೂಡ ವಿವಾಹಕ್ಕೆ ಒಪ್ಪುವುದಿಲ್ಲವೋ ಅಂತಹ ಹೆಣ್ಣು ಅಥವಾ ಗಂಡುಗಳು,
ಹುಡುಗ/ಹುಡುಗಿ ನೋಡೋಕೆ ಬರುವ ದಿನ, ಶ್ರೀ ಸುಬ್ರಹ್ಮಣ್ಯ ದೇವರನ್ನು ಧ್ಯಾನಿಸಿ , ಒಂದು ಚಿಟಿಕೆ ಮೃತ್ತಿಕೆಯನ್ನು, ಒಂದು ಚಿಟಿಕೆ ಅರಿಸಿನವನ್ನು ಸ್ನಾನ ಮಾಡೋ ನೀರಿಗೆ ಹಾಕಿ ಸ್ನಾನ ಮಾಡಿ, ಶುಭ್ರ ವಸ್ತ್ರ ಉಟ್ಟು ದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿದರೆ, ಶೀಘ್ರದಲ್ಲಿ ವಿವಾಹ ನಿಶ್ಚಯವಾಗುತ್ತದೆ..
೫. ಯಾವ ಮಕ್ಕಳಿಗೆ ಬಾಲಗ್ರಹ ದೋಷ ಇದ್ಯೋ, ತುಂಬಾ ಹಲ್ಲು ಉದುರುತ್ತವೆಯೋ, ಬೆಚ್ಚಿ ಬೀಳುವುದು, ಒಂದೇ ಸಮನೆ ನೋಡುವುದು, ಅಳುವುದು ಹೀಗೆ ಮಾಡುತ್ತಿದ್ದರೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ಮಾಡಿಸಿ, ಮೃತ್ತಿಕಾ ಪ್ರಸಾದವನ್ನು ಮಗುವಿನ ಹಣೆಗೆ ಇಟ್ಟರೆ ಮಗು ಆರೋಗ್ಯವಾಗಿರುತ್ತದೆ..
೬. ಯಾವ ಮಗುವಿಗೆ ಆರೋಗ್ಯ ಭಾಗ್ಯ ಪದೇ ಪದೇ ಹುಷಾರು ತಪ್ಪುತ್ತದೆಯೋ ಅಂಥಹ ಮಕ್ಕಳಿಗೆ ಒಂದು ಚಿಟಿಕೆ ಮೃತ್ತಿಕೆಯನ್ನು ಸ್ನಾನ ಮಾಡುವ ಬಿಸಿನೀರಿಗೆ ಹಾಕಿ ಸ್ನಾನ ಮಾಡಿಸಿ, ಸುಬ್ರಹ್ಮಣ್ಯ ದೇವರ ಪೂಜೆ ಮಾಡಿ, ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿ, ಅಂದಿನಿಂದ ಮಗು ಆರೋಗ್ಯವಾಗಿರುತ್ತದೆ..
೬. ಯಾವುದೇ ಹೆಣ್ಣುಮಕ್ಕಳಿಗೆ ಋತು ಸಮಯದಲ್ಲಿ ಅಧಿಕವಾದ ಹೊಟ್ಟೆನೋವು ಬರುತ್ತಿರುತ್ತದೆಯೋ ಅಂಥವರು ಋತುಕಾಲಕ್ಕೆ ಮುಂಚೆ, ಒಂದು ಚಿಟಿಕೆ ಮೃತ್ತಿಕೆಯನ್ನು ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಗೆ ಹಾಕಿ , ಆ ಎಣ್ಣೆಯನ್ನು ಹೊಟ್ಟೆಗೆ ಹಚ್ಚಿಕೊಂಡರೆ ಋತುಕಾಲದಲ್ಲಿ ಹೊಟ್ಟೆ ನೋವು ಕಾಣಿಸುವುದಿಲ್ಲ..
೭. ಯಾರಿಗೆ ಪರೀಕ್ಷಾ ಕಾಲದಲ್ಲಿ ಓದಿತ್ತು ಮರೆತು ಹೋಗುತ್ತದೆಯೋ, ಅಂಥವರು ಒಂದು ಚಿಟಿಕೆ ಮೃತ್ತಿಕೆಯನ್ನು ಒಂದು ಲೋಟ ನೀರಿಗೆ ರಾತ್ರಿ ಹಾಕಿಡಿ..
ಬೆಳಗ್ಗೆ ಆ ನೀರನ್ನು ಚೆನ್ನಾಗಿ ಶೋಧಿಸಿ ಕುಡಿಯುತ್ತಾ ಬಂದರೆ ಒಳ್ಳೆಯ ಜ್ಞಾಪಕಶಕ್ತಿ ಬಂದು ಉನ್ನತದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ..
೮. ವಿವಾಹವಾಗಿ ಸಂತಾನಭಾಗ್ಯ ಇಲ್ಲದವರು ಮಂಗಳವಾರ ಶ್ರೀ ಸುಬ್ರಹ್ಮಣ್ಯ ದೇವರ ಪೂಜೆ ಮಾಡಿ ಹಾಲು ನೈವೇದ್ಯ ಮಾಡಿ, ಆ ಹಾಲಿಗೆ ಚಿಟಿಕೆ ಮೃತ್ತಿಕೆ ಹಾಕಿ ಕುಡಿಯುತ್ತಾ ಬಂದರೆ, ಸಂತಾನ ಭಾಗ್ಯವಾಗುತ್ತದೆ..
೯. ಯಾರ ಮನೆಯಲ್ಲಿ ಗಂಡಹೆಂಡತಿ ಹಾಗೂ ಮಕ್ಕಳಲ್ಲಿ ಅಧಿಕವಾದ ಗಲಾಟೆಯಿಂದ ಕೂಡಿರುತ್ತಾರೆಯೋ ಅಂತಹವರು ದೇವರ ಮುಂದೆ ತುಪ್ಪದ ದೀಪ ಹಚ್ಚಿ ಅರಿಶಿನದ ಬಟ್ಟೆಯಲ್ಲಿ ಮೃತ್ತಿಕೆಯನ್ನು ಕಟ್ಟಿ, ಪೂಜಿಸಿ ಸಾಂಬ್ರಾಣಿ ಹೊಗೆ ಹಾಕಿದರೆ ಜಗಳ ಎಲ್ಲಾ ನಿವಾರಣೆಯಾಗಿ, ಮನೆಯಲ್ಲಿ ಎಲ್ಲರೂ ಆರೋಗ್ಯವಂತರಾಗಿರುತ್ತಾರೆ.

ದೇವರ ಪ್ರಸಾದಗಳು” ಪುಸ್ತಕದಿಂದ ಸಂಗ್ರಹ
***

No comments:

Post a Comment