A must visit place is Vaishnodevi
*****
ವೈಷ್ಣೋದೇವಿ
#ಜೈಮಾತಾದಿ - ಇದು ದೇವಿ ಭಕ್ತರು ಮಾಡುವ ಹರ್ಷೋದ್ಗಾರ
ವೈಷ್ಣೋದೇವಿ ಜನಿಸಿದ್ದು ದಕ್ಷಿಣ ಭಾರತದ ರತ್ನಾಕರ ಸಾಗರನೆಂಬ ಬ್ರಾಹ್ಮಣನ ಮನೆಯಲ್ಲಿ. ಮಗುವಿಗೆ ತ್ರಿಕೂಟ್ ವೆಂದು ನಾಮಕರಣ ಮಾಡಿದರು. 'ವಿಷ್ಣು ವಂಶೋಧ್ಬವೆ’ಯಾದ್ದರಿಂದ ವೈಷ್ಣೋದೇವಿ ಎಂಬ ಹೆಸರು ಬಂತು. 9 ವರ್ಷದ ಪ್ರಾಯದಲ್ಲಿ ತನ್ನ ತಂದೆಯ ಅನುಮತಿ ಪಡೆದು ದಕ್ಷಿಣ ಸಾಗರದ ತಟದಲ್ಲಿ ಮಹಾ ವಿಷ್ಣುವನ್ನು ಕುರಿತು ತಪಸ್ಸು ಮಾಡಿದಳು.
ಸೀತೆಯನ್ನು ಹುಡುಕುತ್ತಾ ಶ್ರೀರಾಮರು ಅಲ್ಲಿಗೆ ಬಂದರು. ತ್ರಿಕೂಟ ಶ್ರೀರಾಮರಲ್ಲಿ ತನ್ನನ್ನು ಪತ್ನಿಯಾಗಿ ಸ್ವೀಕರಿಸುವಂತೆ ಬೇಡಿಕೊಂಡಾಗ, ತಾವು ಈ ಯುಗದಲ್ಲಿ ಏಕಪತ್ನೀ ವ್ರತಸ್ಥನಾಗಿರುವ ಕಾರಣದಿಂದ ವರಿಸಲಾಗುವುದಿಲ್ಲ. ಮುಂದೆ ಕಲಿಯುಗದಲ್ಲಿ ಕಲ್ಕಿಯು ಅವತಾರ ಎತ್ತುವುದರಿಂದ ಆಗ ಆಕೆಯನ್ನು ವರಿಸುವುದಾಗಿ ಭರವಸೆ ನೀಡಿದರು.
ಆಕೆಗೆ ಉತ್ತರ ಭಾರತದ ತ್ರಿಕೂಟ ಪರ್ವತದಲ್ಲಿ ತಪಸ್ಸಾನ್ನಾಚರಿಸಲು ಆದೇಶ ನೀಡಿದರು. ಆಕೆಯ ರಕ್ಷಣೆಗಾಗಿ, ಬಿಲ್ಲು ಬಾಣಗಳನ್ನು ಕೊಟ್ಟು ಕಪಿಸೈನ್ಯ ಹಾಗೂ ಒಂದು ಸಿಂಹ ವನ್ನೂ ಜೊತೆಯಾಗಿ ಕಳುಹಿಸಿದರು. ಈ ತರಹ ತ್ರಿಕೂಟ ಪರ್ವತದಲ್ಲಿ ತಪಸ್ಸಾನಚರಿಸುತ್ತಿರುವ ದೇವಿಗೆ ವೈಷ್ಣೋದೇವಿ ಎಂಬ ಹೆಸರು ಬಂತು.
ಕಲಿಯುಗದಲ್ಲಿ
'ಭೈರವದೇವ'ನೆಂಬ ತಾಂತ್ರಿಕ ಗುರು ವಧೆ ಮಾಡಲು ಬೆನ್ನಟ್ಟಿ ಬಂದ. ಅವನಿಂದ ಕಣ್ಣು ತಪ್ಪಿಸಿ 'ತ್ರಿಕೂಟ ಪರ್ವತ ಶ್ರೇಣಿ'ಗಳ ನಡುವೆ ತಿರುಗಿದಳು. ಈ ಮಧ್ಯೆ ದಾಹವಾದಾ ಗ, ತಣಿಸಲು ನೆಲಕ್ಕೆ ಬಾಣ ಬಿಟ್ಟಾಗ ಝರಿ ಸೃಷ್ಟಿಯಾಗಿ ನದಿಯಾಗಿ ಪ್ರವಹಿಸಿತು. ಇದೇ ಬಾಣಗಂಗ ಎಂದು ಪ್ರಸಿದ್ಧಿಯಾಯಿತು. ನದಿಯ ಬದಿಯಲ್ಲಿರುವ ಬೃಹದ್ ಬಂಡೆ ಗಳ ಮೇಲೆ ದೇವಿಯ ಪಾದಗಳ ಗುರುತುಗಳಿವೆ. ಇವನ್ನು ಚರಣ್ ಪಾದುಕಾ ಎನ್ನುತ್ತಾರೆ.
ಭೈರವನಾಥನಿಂದ ಕಣ್ಣಿಗೆ ಬೀಳದೆ, ವೈಷ್ಣೋದೇವಿ ತಪಸ್ಸಿಗೆ ಆಧಕವರಿ ಬೆಟ್ಟದ ಗುಹೆಯೊಂದರಲ್ಲಿ ಕುಳಿತು ತಪಸ್ಸನ್ನಾಚರಿಸಿದಳು. ಭೈರವನಾಥನು ಅವಳನ್ನು ಅರಸುತ್ತಾ ಸುಮಾರು ೯ ತಿಂಗಳು ಅಲೆದಾಡಿ, ವಧೆ ಮಾಡಲು ಬಂದನು. ಆಗ ದೇವಿ ಕಾಳಿಯ ರೂಪ ಧರಿಸಿ ಅವನ ತಲೆಯನ್ನು ಕತ್ತರಿಸಿದಳು. ಭೈರವನಾಥನ ರುಂಡ ಹಾರಿ ೨.೫ ಕಿ.ಮೀ ದೂರದ ಭೈರವ ಘಾಟ್ ನಲ್ಲಿ ಬಿದ್ದಿತು. ಮರಣದ ಸಮಯದಲ್ಲಿ ದೇವಿಯ ಕ್ಷಮಾಪಣೆಯನ್ನು ಯಾಚಿಸಿದ್ದರಿಂದ ಮೋಕ್ಷವನ್ನು ದಯಪಾಲಿಸಿದಳು.
ಭಕ್ತಾದಿಗಳು ವೈಷ್ಣೋದೇವಿಯ ದರ್ಶನದ ನಂತರ ಭೈರವನಾಥ್ ಮಂದಿರಕ್ಕೆ ಭೇಟಿ ಕೊಡಬೇಕು. ಭೈರವ ವಧೆಯ ನಂತರ ವೈಷ್ಣೋದೇವಿಯು ೩ ಪಿಂಡಿಗಳ ಕಲ್ಲಿನ ರೂಪ ತಳೆದು ಅಲ್ಲಿಯೇ ಶಾಶ್ವತ ತಪಸ್ಸಿನಲ್ಲಿ ಲೀನಳಾದಳು. ಈ ಮೂರು ಪಿಂಡಿಗಳಿಗೆ,ಮಹಾಕಾಲಿ ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿ ಎಂದು ಹೆಸರಿದೆ. ಸಮುದ್ರ ಮಟ್ಟದಿಂದ ಸುಮಾರು ೫,೨೦೦ ಅಡಿ ಎತ್ತರದಲ್ಲಿರುವ ಉತ್ತರಭಾರತದ ಸುಪ್ರಸಿದ್ಧ ಯಾತ್ರಾಸ್ಥಳಗಳಲ್ಲೊಂದು. ೮೦ ಲಕ್ಷಕ್ಕೂ ಹೆಚ್ಚು ಭಕ್ತರು ಬೆಟ್ಟದ ದಾರಿಗುಂಟಾ ನಡೆದು ದೇವಿಯ ದರ್ಶನ ಮಾಡುತ್ತಾರೆ...
ಮೊದಲು ಕಷ್ಟವಾಗಿದ್ದ ವೈಷ್ಣೋದೇವಿ ದರ್ಶನ ಈಗ ಸುಲಭವಾದೆ ದಾರಿ ಕೂಡ ಸುಗಮಗೊಳಿಸಿದ್ದಾರೆ..
**********
***
No comments:
Post a Comment