SEARCH HERE

Tuesday, 1 January 2019

ಪೂಜಾ ಸಾಮಾಗ್ರಿ ಪೂಜೆ ಶುರು ಮಾಡುವ ಮುನ್ನ pooja items prior to start puja




Pooja Items ಪೂಜಾ ಸಾಮಾಗ್ರಿ - ಪೂಜೆ ಶುರು ಮಾಡುವ ಮುನ್ನ, ಅಲಂಕಾರ, ಅಣಿ ಮಾಡಿಕೊಳ್ಳಕ್ಕೆ ಸುಮಾರು ಹೊತ್ತು ಆಗುತ್ತೆ. ಪೂಜೆ ಅಂದರೆ ಎಷ್ಟೊಂದು ಸಾಮಗ್ರಿ ಉಪಯೋಗಿಸುತ್ತೀವಿ , ಪೂಜೆ ಮಾಡೋ ಸಡಗರದಲ್ಲಿ ಕೆಲವೊಮ್ಮೆ ಒಂದೆರಡು ಸಾಮಾನು ಮರೆಯುವ ಸಾಧ್ಯತೆಗಳು ಇದೆ.   ಹೀಗೆ ಆಗದೆ ಇರಲಿ ಅಂತ ಪೂಜಾ ಸಾಮಾನುಗಳ ಒಂದು ಪಟ್ಟಿ.ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು:

ರಂಗೋಲಿ, ಮಣೆ / ಮಂಟಪ
ದೇವರ ವಿಗ್ರಹ, ದೇವರ ಪಟ
ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ
ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು
ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ.
ಅರಿಶಿನ, ಕುಂಕುಮ, ಮಂತ್ರಾಕ್ಷತೆ
ಶ್ರೀಗಂಧ, ಊದಿನ ಕಡ್ಡಿ
ಹೂವು, ಪತ್ರೆ, ಗೆಜ್ಜೆ ವಸ್ತ್ರ
ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ
ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ
ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ
ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ
ಆರತಿ ತಟ್ಟೆ, ಸೊಡಲು, ಹೂಬತ್ತಿ.

ಕೆಲವು ಪೂಜೆಗಳಲ್ಲಿ ಅಧಿಕವಾಗಿ ಇನ್ನಷ್ಟು ಸಾಮಗ್ರಿಗಳನ್ನು ಉಪಯೋಗಿಸುತ್ತೀವಿ :

ಕಳಶ, ಅರಿಶಿನದ ಕೊನೆ, ಜನಿವಾರ, ಅರಿಶಿನ ದಾರ
ಮರದ ಜೊತೆ / ಬಾಗಿನ
ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ರವಿಕೆ ಬಟ್ಟೆ
ಸೋಬಲಕ್ಕಿ, ಉಪಾಯನ ದಾನ
ನವಗ್ರಹ ಮಂಡಲ ......ಇತ್ಯಾದಿ

ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು ಮುಖ್ಯವಾಗಿ ಅಲಂಕಾರ ಮಾಡುವುದಕ್ಕೆ. ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಅಲಂಕಾರಿಕ ಸಾಮಾನು ದೊರೆಯುತ್ತದೆ . ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ.
***

ಪಂಚ ಪಾತ್ರೆಯ ಮಹತ್ವ..! ---------------------------------------- ಸಾಮಾನ್ಯವಾಗಿ ನಮ್ಮ ಪೂಜೆ ಪುನಸ್ಕಾರಗಳಲ್ಲಿ ಕೇಳಿ ಬರುವ ಈ "ಪಂಚಪಾತ್ರೆ"ಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಪಂಚಪಾತ್ರೆ --ಎಂದರೆ ಬರೀ ಒಂದೇ ಪಾತ್ರೆಯಲ್ಲ. ಐದು ಬೇರೆ ಬೇರೆ ಪಾತ್ರೆಗಳಲ್ಲಿ ಪೂಜೆಗಾಗಿ ಶುದ್ಧ ನೀರು ತೆಗೆದುಕೊಳ್ಳಬೇಕು. ನಾವು ಎಲ್ಲವನ್ನೂ ಒಂದೇ ಪಾತ್ರೆಯಲ್ಲಿ ಇಡುತ್ತೇವೆ ಮತ್ತು 'ಮಮ' ಎಂದು ಹೇಳುತ್ತೇವೆ. ಮೊದಲನೆಯದು 'ಅರ್ಘ್ಯ' ಪಾತ್ರೆ - ಭಗವಂತನ ಕೈಗಳನ್ನು ತೊಳೆಯಲು ಅರ್ಪಿಸಲಾಗುವ ಶುದ್ಧ ನೀರನ್ನು ಹೊಂದಿರುವ ಪಾತ್ರೆ ಎರಡನೆಯದು 'ಪಾದ್ಯ' ಪಾತ್ರೆ - ಇದು ಭಗವಂತನ ಪಾದಗಳನ್ನು ಶುದ್ಧೀಕರಿಸಲು ಅರ್ಪಿಸಬೇಕಾದ ಶುದ್ಧ ನೀರನ್ನು ಹೊಂದಿರುವ ಪಾತ್ರೆಯಾಗಿದೆ ಮೂರನೆಯ ಪಾತ್ರೆ - ' ಆಚಮನೀಯ' ಪಾತ್ರೆ: ಇದು ಭಗವಂತನಿಗೆ ಮುಕ್ಕಳಿಸಲು ಅರ್ಪಿಸಬೇಕಾದ ಶುದ್ಧ ನೀರಿನಿಂದ ತುಂಬಿದ ಪಾತ್ರೆ. ನಾಲ್ಕನೆಯದು 'ಸ್ನಾನ'ದ ಪಾತ್ರೆ - ಇದು ಭಗವಂತನಿಗೆ ಸ್ನಾನ ಮಾಡಿಸಲು ಅಗತ್ಯವಾದ ಶುದ್ಧನೀರಿನಿಂದ ತುಂಬಿದ ಪಾತ್ರೆ ಐದನೇ ಪಾತ್ರೆ - "'ಶುದ್ಧೋದಕ" ಪಾತ್ರೆ - ದೇವರಿಗೆ ಅರ್ಪಿಸಲು ನೀರು ತುಂಬಿದ ಪಾತ್ರೆ ಇವು ಐದು ಪಾತ್ರೆಗಳು. ಇವುಗಳಲ್ಲದೆ "ಪ್ರತಿಗ್ರಾಹಕ" ಪಾತ್ರೆ - ಭಗವಂತನ ಉಪಚಾರಗಳನ್ನು ಮಾಡಿದ ನಂತರ ನಿರ್ಮಾಲ್ಯವನ್ನು , ನೀರನ್ನು ತುಂಬುವ ಪಾತ್ರೆ, ಮತ್ತು ಸರ್ವಾರ್ಥ ಜಲ ಪಾತ್ರೆ - ನಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಮತ್ತು ಪ್ರತಿ ಉಪಚಾರದ ನಡುವೆ ಉದ್ಧರಣೆ (ಚಮಚೆ)ಯನ್ನು ಶುಚಿಗೊಳಿಸಲು ಬಳಸಬಹುದಾದ ಶುದ್ಧ ನೀರಿನಿಂದ ತುಂಬಿದ ಪಾತ್ರೆಯಾಗಿದೆ. (ಸಂಗ್ರಹ- ಲೇಖನ ).. ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ !! ಶ್ರೀಕೃಷ್ಣಾರ್ಪಣಮಸ್ತು !!
**

ಸಂಕ್ಷಿಪ್ತ ದೇವರ ಪೂಜಾ ಪದ್ದತಿಃ

ಸ್ನಾನ ಮಾಡಿ ಮಡಿಬಟ್ಟೆಯನ್ನುಟ್ಟು ನಾಮ ಮುದ್ರಾಧಾರಣೆ ಹಾಗೂ ಸಂದ್ಯಾವಂದನೆಯನ್ನು ಮಾಡಿ ದೇವರ ಪೂಜೆಯನ್ನು ಮಾಡಬೇಕು 

ಸಂಕಲ್ಪ:- ಆಚಮ್ಯ, ಪ್ರಾಣಾನಾಯಮ್ಯ ದೇಶಕೌಲೌ ಸಂಕೀರ್ತ್ಯ, ಗೋವಿಂದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ವಿಷ್ಣು  ಪ್ರೀತ್ಯರ್ಥಂ ದೇವತಾಪೂಜಾಂಕರಿ ಷ್ಯೇ|| 

ವಂದೇ ವಿಷ್ಣು ನಮಾಮಿ ಶ್ರಿಯಮಥ ಚ ಭುವಂ ಬ್ರಹ್ಮವಾ ಯೂ ಚ ವಂದೇ|
ಗಾಯತ್ರೀಂ ಭಾರತೀಂ ತಾಮಪಿ ಗರುಮನಂತಂ ಭಜೇ ರುದ್ರದೇವಂ || 

ದೇವಿ ವಂದೇ ಸುಪರ್ಣಿಮಹಿಪತಿದ ಯಿತಾಂ ವಾರುಣೀಮಪ್ಯುಮಾಂತಾಂ |
ಇಂದ್ರಾದೀನ್ ಕಾಮಮುಖ್ಯಾನಪಿ ಸಕಲಸುರಾನ್ ತದ್ಗುರೂನ್ ಮದ್ಗುರೂಂಶ್ಚ || 

ದ್ವಾರದೇವತಾಭ್ಯೋನಮಃ||
ಸರ್ವಾರಿಷ್ಟನಿರಶನಮಸ್ತು||

ದೀಪ ಪ್ರಜ್ಚಾಲನ ಮಾಡಿ ಘಂಟೆ ಯನ್ನು ಬಾರಿಸಬೇಕು. 

ಶಾಲಿಗ್ರಾಮ ೧ 
ಶಂಖ ೧ 
ಪ್ರಾಣದೇವರು೧ 
ಗರುಡಶೇಷ
ಗುರುಗಳು ಇವುಗಳನ್ನು ಬೇರೆ ಬೇರೆ ತಟ್ಟೆಯಲ್ಲಿ ಇಡಬೇಕು. 

ನಿರ್ಮಾಲ್ಯವಿಸರ್ಜನೆ :- {ದೇವರಿಗೆ ಏರಿಸಿದ ಹೂ ತುಳಸಿಗಳ ನ್ನು ತೆಗೆಯುವುದು}

ಓಂ ಹಂ ರುದ್ರೇ  {ಈ ಮಂತ್ರದಿಂದ} 

ನಿರ್ಮಾಲ್ಯಾಭಿಷೇಕ {ಶಾಲಿಗ್ರಾಮಕ್ಕೆ} 

ಓಂ ಸಹಸ್ರ ಶೀರ್ಷಾಪುರುಷಃ {ಈ ಮಂತ್ರದಿಂದ} 
ಶಾಲಿಗ್ರಾಮವನ್ನು ತೆಗೆದಿಟ್ಟು ತೀರ್ಥವನ್ನು ಇಟ್ಟುಕೊಳ್ಳಬೇಕು

ಶಂಖಾಭಿಷೇಕ:-
ಹಿರಣ್ಯವರ್ಣಾಂ ಹರೀಣಿಂ {ಈ ಮಂತ್ರದಿಂದ} 

ಪ್ರಾಣದೇವರ ಅಭಿಷೇಕ:-

ಮಾತರ್ಮೇ ಮಾತರಿಶ್ವನ್ ಪಿತರ ತುಲಗುರೋಭ್ರಾತರಿಷ್ಟಾಪ್ತಬಂಧೋ|
ಸ್ವಾಮಿನ್ ಸರ್ವಾಂತರಾತ್ಮನ್ನ ಜರಜರಯಿತರ್ಜುನ್ಮಮೃತ್ಯಾಮಯಾನಾಂ||
ಗೋವಿಂದೇ ದೇಹಿ ಭಕ್ತಿಂ ಭವತಿ ಚ ಭಗವನ್ನೂರ್ಜಿತಾಂನಿರ್ನಿಮಿತ್ತಾಂ |
ನಿರ್ವ್ಯಾಜಾಂ ನಿಶ್ಚಲಾಂ ಸದ್ಗುಣಗಣಬೃಹತೀಂಶಾಶ್ವತೀಮಾ ಶುದೇವಾ||

ಗರುಡ ಶೇಷಾಭಿಷೇಕ:-

ಗರುಡಾಯನಮಃ ಶೇಷಾಯನಮಃ

ಗುರುಗಳ ಅಭಿಷೇಕ;-

ಬ್ರಹ್ಮಾಂತಾ ಗುರವಃ ಸಾಕ್ಷಾದಿಷ್ಟಂ ದೈವಂಶ್ರಿಯಃಪತಿಃ|
ಆಚಾರ್ಯಃ ಶ್ರೀಮದಾಚಾರ್ಯಸ್ಸಂತು ಮೇ ಜನ್ಮಜನ್ಮನಿ||

ದೇವರ ನಿರ್ಮಾಲ್ಯತೀರ್ಥವನ್ನು ಶಂಖ, ಪ್ರಾಣದೇವರು, ಗರುಡಶೇಷರು ಗುರುಗಳು ಎಲ್ಲರಿ ಗೂ ಮೂರು ಸಲ ಕೊಡಬೇಕು. ಆಮೇಲೆ ಶಂಖಾದಿಗಳನ್ನು ಒರಿಸಿ ಇಡಬೇಕು. { ನಂತರ ಗಂಧ, ಸ್ವಾದೋದಕ, ಅಕ್ಷತೆಗಳನ್ನು ಸಿದ್ದ ಮಾಡಬೇಕು.} 

ಕಲಶ ಪೂಜಾ:- {ಕಲಶದಲ್ಲಿ ನೀರು ತುಂಬಿ, ತುಳಸಿಯನ್ನು ಹಾಕಿ ಗಂಧ ಅಕ್ಷತೆ ಹಚ್ಚಿ ಅಭಿಮಂತ್ರಣ ಮಾಡಬೇಕು} 

ಕಲಶದೇವತಾಭ್ಯೋನಮಃ ಅಜಾದಿದೇವತಾಭ್ಯೋನಮಃ

{ಓಂ ನಾರಾಯಣಾಯ ಓಂ ೮ಸಲ ಅನ್ನಬೇಕು}

ಶುದ್ಧಾಭಿಷೇಕ:- 

ಸಹಸ್ರಶೀರ್ಷಾ....... ಈ ಮಂತ್ರವನ್ನು ಹೇಳುತ್ತಾ ಕಲಶದಲ್ಲಿರುವ ನೀರನ್ನು ತೆಗೆದು ಕೊಂಡು ಶಂಖದಿಂದ ಅಭಿಷೇಕ ಮಾಡಬೇಕು. ಸ್ವಾದೋದಕದಿಂದ ಲೂ ಅಭಿಷೇಕ ಮಾಡಬೇಕು. ಶಾಲಿಗ್ರಾಮವನ್ನು ತೆಗೆದಿಟ್ಟು ತೀರ್ಥವನ್ನು ಇಟ್ಟುಕೊಳ್ಳಬೇಕು. 

ಅರ್ಚನೆ ಕೇಶವಾಯನಮಃ 

ನಮೋಸ್ತ್ವನಂತಾಯ ಸಹಸ್ರಮೂರ್ತಯೇ ಸಹಸ್ರ ಪಾದಕ್ಷಿಶಿರೋರು ಬಾಹುವೇ|
ಸಹಸ್ರನಾಮ್ನೇಪುರುಷಾಯಶಾಶ್ವತೇ ಸಹಸ್ರಕೋಟಿಯುಗಧಾರಿಣೇ ನಮಃ||

ಈ ಮಂತ್ರವನ್ನು ಹೇಳುತ್ತಾ ಗಂಧ ತುಳಸೀ, ಪುಷ್ಪಗಳನ್ನು ದೇವರಿಗೆ ಸಮರ್ಪಿಸಿಬೇಕು. 

ಧೂಪದೀಪ{ಕೆಂಡದ ಮೇಲೆ ದಶಾಂಗವನ್ನು ಹಾಕಿ ಧೂಪಾರತಿ ಯನ್ನು ಮಾಡಬೇಕು .ಧೂಪಂ ಸಮರ್ಪಯಾಮಿ || ೩ಎಳಿ ಬತ್ತಿಗಳಿಂದ ಏಕಾರತಿಯನ್ನು ಮಾಡಬೇಕು . ದೀಪಂ ಸಮರ್ಪಯಾಮಿ||

ನೇವೇದ್ಯ:- ನೀರಿನಿಂದ ಚತುಸ್ರಮಂಡಲ ಮಾಡಿ ಅದರ ಮೇಲೆ ನೈವೇದ್ಯವನ್ನು ಇಟ್ಟು ಅಭಿಘಾರಮಾಡಿ, ಗಾಯತ್ರೀ ಮಂತ್ರ ಹೇಳಿ, ಪ್ರೋಕ್ಷಣೆ ಮಾಡಿ ತುಳಸೀದಳಹಾಕಿ ಪರಿಷೇಚನೆ ಮಾಡಬೇಕು ಆಮೇಲೆ ಆಮೇಲೆ ಶಂಖ ಚಕ್ರ ಧೇನು ತಾರ್ಕ್ಷ್ಯ, ಮೇರು ಚಂದ್ರ, ಈ ಮುದ್ರೆಗಳನ್ನು ತೋರಿಸಬೇಕು.

ಆಮೇಲೆ ಓಂ ಓಂ ನಮೋ ನಾರಾಯಣಾಯ ಓಂ ಈ ಮಂತ್ರವನ್ನು ೧೨, ಅಥವಾ ೧೦೮, ಯಥಾಶಕ್ತಿ ಪಠಿಸಬೇಕು, ಅನ್ನದಲ್ಲಿ ರುವ ದೇವರು ಪ್ರತಿಮೆಯಲ್ಲಿರುವ ದೇವರು ತನ್ನಲ್ಲಿರುವದೇವರು ಒಂದೇ ಎಂದು ಸ್ಮರಿಸಬೇಕು. 

ಆಪೋಶನಂ ಸಮರ್ಪಯಾಮಿ|| ಅಮೃತೋಪಸ್ತರಣ ಮಸಿಸ್ವಾಹಾ|
ಪ್ರಾಣಾಯಸ್ವಾಹಾ|| ಅಪಾನಾಯಸ್ವಾಹಾ|| ವ್ಯಾನಾಯ ಸ್ವಾಹಾ||
ಉದಾನಾಯಸ್ವಾಹಾ|| ಸಮನಾಯಸ್ವಾಹಾ||
ಉತ್ತರಾಪೋಶನಂ ಸಮರ್ಪಯಾಮಿ| ಅಮೃತಾಪಿಧಾನಮಸಿ ಸ್ವಾಹಾ||

ಈ ಮಂತ್ರಗಳಿಂದ ಶುದ್ದವಾದ ನೀರನ್ನು ಶಂಖದಿಂದ ಪಾತ್ರೆಯಲ್ಲಿ ಬಿಡಬೇಕು. 

ಮಹಾಮಂಗಳಾರತಿ:-

ಜಯತಿ ಹರಿಚಿಂತ್ಯಃ ಸರ್ವದೇವೈ ಕವಂದ್ಯಃ|
ಪರಮ ಗುರುಭೀಷ್ಟಾವಾಪ್ತಿದಃ ಸಜ್ಜನಾನಾಂ||
ನಿಖಿಲಗುಣಾಗಣಾರ್ಣೋ ನಿತ್ಯನಿರ್ಮುಕ್ತದೋಷಃ||
ಸರಸಿಜನಯನೋಸೌ ಶ್ರೀಪತಿರ್ಮಾನದೋನಃ||

ರಮಾದಿಪೂಜೆ:- ಶಂಖಾದಿಗಳಿ ಗೆ ತೀರ್ಥ, {೩ಸಲ ನಿರ್ಮಾಲ್ಯ ಗಂಧ ತುಳಸೀ ಪುಷ್ಪಗಳನ್ನು ಸಮರ್ಪಿಸಿ, ನೈವೇದ್ಯವನ್ನು ಮಾಡಬೇಕು  {ಒಂದು ತಟ್ಟೆಯಲ್ಲಿ ವೈಶ್ವದೇವಕ್ಕೆ ಅನ್ನವನ್ನು ಇಟ್ಟುಕೊಂಡು ಗರುಡಶೇಷರಿಗೆ ಬೇರೆ ಬೇರೆ ಅನ್ನವನ್ನು ತೆಗೆದು ಇಡಬೇಕು. }

ರಮಾಬ್ರಹ್ಮಾದಯೋದೇವಾಃ ಸನಕಾಧ್ಯಾಃ ಶುಕಾದಯಾಃ|
ಶ್ರೀನೃಸಿಂಹಪ್ರಸಾದೋsಯಂ ಸರ್ವೇಗೃಹ್ಣಂತು ವೈಷ್ಣವಾಃ||

ಈ ಮಂತ್ರದಿಂದ ನೈವೇದ್ಯಮಾಡಿ ಮಂಗಳಾರತಿಯನ್ನು ಮಾಡಬೇಕು‌

ಬ್ರಹ್ಮಾಂತಾಗುರುವಃ....... ಈ ಮಂತ್ರದಿಂದ ಹಸ್ತೋದಕ ಮಾಡಬೇಕು ನಂತರ ದೇವರನ್ನು ಭುಜಂಗಿಸಬೇಕು.

ಯಸ್ಯಸ್ಮೃತ್ಯಾಚನಾಮೋಕ್ತ್ಯಾತಪಃ ಪೂಜಾಕ್ರಿಯಾದಿಷು|
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ||
ಯತ್ಕೃತಂತು ಮಯಾದೇವ ಪರಿಪೂರ್ಣಂ ತದುಸ್ತುಮೇ||

ಅನೇನ ದೇವ ಪೂಜನೇನ ಭಾರತೀರಮಣಮುಖ್ಯಪ್ರಾಣಂತರ್ಗತ ಲಕ್ಷ್ಮೀನಾರಾಯಣಃ ಪ್ರಿಯತಾಂ ಪ್ರೀತೋಭವತು||
||ಶ್ರೀಕೃಷ್ಣಾರ್ಪಣಮಸ್ತು||

ಸೂಚನೆ:- ಏಕಾದಶಿ ದಿವಸಾ ಶಂಖಾದಿಗಳಿಗೆ ಒಂದು ಸಲ ತೀರ್ಥ ಕೊಡಬೇಕು. ಮತ್ತು ಗಂಧ ನೈವೇದ್ಯ ಸಮರ್ಪಣೆ ಇರುವುದಿಲ್ಲಾ ದೇವರಿಗೂ ಸ್ವಾದೋಕದಿಂದ ಅಭಿಷೇಕ ಮತ್ತು ಅನ್ನಾದಿಗಳ ನೈವೇದ್ಯ ಇರುವುದಿಲ್ಲ. ಕೇವಲ ಫಲ ಸಮರ್ಪಣೆ ಮಾಡಬೇಕು 

ಸಂಗ್ರಹ ಲೇಖನ 
...........ಅನಂತಾರ್ಯದಾಸ.......
ಪಂ.ಮುಕುಂದಾಚಾರ್ಯ.ಧ್ರು.ಜೋಶಿ
ಶ್ರೀ ಗೋಪಾಲ ಸಂಸ್ಕ್ರತ ಪಾಠಶಾಲಾ 
             ಸತ್ಯನಾಥಕಾಲೋನಿ
                    ರಾಯಚೂರ
******







No comments:

Post a Comment