SEARCH HERE

Tuesday, 1 January 2019

ತರ್ಪಣ tarpana


Contact list for online shraddha performance in home 
*******

ತರ್ಪಣ 
Uttaradimutt Adhyatmavani 12 July 2020

********
ಪಿತೃಗಳಿಗೆ ತಿಲ ತರ್ಪಣವೇಕೆ ?

ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ).  ಅವು ಅವನ ವೃದ್ಧಿಗೂ ಕಾರಣವಾಗಿವೆ.  ಅವನೇ ಪಿತೃಗಳಿಗೆ ಆಧಾರ.  ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ.  ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ.  ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ.    ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾಲವು ನಡೆಯಲು ಕಾರಣವಾಗಿವೆ.  ಭೂಮಿಯಲ್ಲಿ ೨೪ ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ ಶುಕ್ಲಪಕ್ಷದ ಹದಿನೈದು ದಿನ ರಾತ್ರಿ, ಕೃಷ್ಣಪಕ್ಷದ ಹದಿನೈದು ದಿನ ಹಗಲು ಹೀಗೆ ಒಂದು ತಿಂಗಳ ನಮ್ಮ ಕಾಲವು ಅವರಿಗೆ ಒಂದು ದಿನವಾಗುವುದು.  ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. (ಪೂರ್ಣ ದಿವಾರಾತ್ರಿ) ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ.  ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ.  ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ತ್ವ.  ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.

ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ ?

ದರ್ಬೆ, ಕುಶ,  ಕಾಶ,ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು.  ಒಮ್ಮೆ ಗರುಡನು  ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದ್ರುವಿನಿಂದ ದಾಸ್ಯದ  ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ನೀವೆಲ್ಲರೂ ಸ್ನಾನ ಮಾಡಿ ಶುದ್ಧರಾಗಿ ಬರಲು ಹೇಳುತ್ತಾನೆ. ಮತ್ತು ಆ‌ ಸರ್ಪಗಳು ಪುನಃ: ಬರುವವರೆಗೂ ಅಮೃತವನ್ನು ದರ್ಬೆಯ ಮೇಲೆ ಇಟ್ಟಿರುತ್ತಾನೆ.  ಅಷ್ಟರಲ್ಲಿ ದೇವೇಂದ್ರನು ಬಂದು  ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಭೆಯ ಮೇಲೆ ಬೀಳುತ್ತದೆ.  ಆದ್ದರಿಂದ ದರ್ಭೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.ಅಲ್ಲದೇ ಯಜ್ಞ ವರಾಹ ರೂಪೀ ಭಗವಂತನ ರೋಮದಿಂದ ದರ್ಭೆಯೂ, ಬೆವರಿನಿಂದ ಎಳ್ಳೂ ಹೊರ ಬಂದ ಕಾರಣ ಇವು ಎಲ್ಲಾ ಕಾರ್ಯಗಳಿಗೂ ಪಾವಿತ್ರ್ಯತೆ ನೀಡಲು ಬೇಕಾಗುತ್ತವೆ.
***
ಉಪನೀತನಾದ ಪ್ರತಿಯೊಬ್ಬ ಬ್ರಾಹ್ಮಣನೂ ದೇವ - ಋಷಿ - ಆಚಾರ್ಯ ಮತ್ತು ಪಿತೃ ತರ್ಪಣಗಳನ್ನು ಕೊಡಬೇಕು. ತರ್ಪಣ " ಎರಡು ವಿಧ ".

೧. ಜಲ ತರ್ಪಣ
೨. ತಿಲ ತರ್ಪಣ

ಜಲ ತರ್ಪಣವನ್ನು ಪ್ರತಿನಿತ್ಯ " ಬ್ರಹ್ಮಯಜ್ಞ " ದಲ್ಲಿ ಕೊಡಬೇಕು.

ದರ್ಶ ( ಅಮಾವಾಸ್ಯೆ ) ಪರ್ವಕಾಲ, ಸೂರ್ಯ - ಚಂದ್ರ ಗ್ರಹಣ, ಉತ್ತರ - ದಕ್ಷಿಣಾಯನ - ಮಾತಾ ಪಿತೃಗಳ ಶ್ರಾದ್ಧಗಳಲ್ಲಿ - ಮಹಾಲಯ ಇತ್ಯಾದಿ " ಷಣ್ಣವತಿ " ಅಂದರೆ ೯೬ ಪರ್ವ ಕಾಲಗಳಲ್ಲಿ ಪಿತೃಗಳಿಗೆ " ತಿಲ ತರ್ಪಣ " ಗಳನ್ನು ಕೊಡಬೇಕು. ಹೀಗೆ ತರ್ಪಣ ಕೊಡುವುದರಿಂದ ದೇವ - ಋಷಿ - ಗುರು - ಪಿತೃಗಳು ಸಂತೃಪ್ತರಾಗಿ ಆಶೀರ್ವದಿಸುವರು. ಅದರಿಂದ ಸಮಸ್ತ ಮಂಗಲವಾಗುವುದು!

ಪುಣ್ಯಕ್ಷೇತ್ರ, ಪುಣ್ಯನದಿ, ಸಮುದ್ರ ಅಥವಾ ತೀರ್ಥಗಳಲ್ಲಿ ಸ್ನಾನ ಮಾಡಿದ ನಂತರ ತರ್ಪಣವನ್ನು ಕೊಡಬೇಕು.

ತಿಲ ತರ್ಪಣ ( ಎಳ್ಳು - ನೀರು ಸಮೇತ ) ಕೊಡದ ಸಾಧ್ಯವಿಲ್ಲದ ಪಕ್ಷದಲ್ಲಿ ಜಲ ತರ್ಪಣವನ್ನಾದರೂ ( ಬರೀ ನೀರಿನಿಂದ ) ಕೊಡಲೇಬೇಕು.

ಮೂರು ದರ್ಭೆಗಳಿಂದ ಮಾಡಿದ ಪವಿತ್ರವನ್ನು ಬಲಗೈ ಅನಾಮಿಕ ಬೆರಳಿಗೆ ( ಕಿರು ಬೆರಳಿನ ಪಕ್ಕದ ಬೆರಳು - ಉಂಗರದ ಬೆರಳು ) ತರ್ಪಣ ಕೊಡುವ ಕಾಲದಲ್ಲಿ ಹಾಕಿಕೊಳ್ಳಬೇಕು. ಅದು ಸಾಧ್ಯವಿಲ್ಲದ ಪಕ್ಷದಲ್ಲಿ ಅಂದರೆ ದರ್ಭೆ ದೊರೆಯದೇ ಇದ್ದಾಗ ಚಿನ್ನದ ಅಥವಾ ಬೆಳ್ಳಿಯ ಪವಿತ್ರದ ಉಂಗುರವನ್ನು ಧರಿಸಿಕೊಂಡು ಅಂಗೈಯಲ್ಲಿ ತುಳಸೀದಳವನ್ನಿಟ್ಟುಕೊಂಡು ತರ್ಪಣವನ್ನು ಕೊಡಬೇಕು.

" ತರ್ಪಣದಲ್ಲಿ ದರ್ಭೆಯ ಪವಿತ್ರ "

ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸುವುದೇ ಸರಿಯಾದ ಕ್ರಮ. ಉಳಿದಿದ್ದು ಅಪಧರ್ಮ. ಹಾಗೆಂದು ದರ್ಭೆಯಿಂದ ಮಾಡಿದ ಪವಿತ್ರ ಇರುವಾಗ ಅದನ್ನು ಬಿಟ್ಟು ಬೇರೇ ಪ್ರಯತ್ನ ಮಾಡುವುದು ಸೂಕ್ತವಲ್ಲ.

ದರ್ಭೆಯ ಪವಿತ್ರ ಇಲ್ಲದ ಪಕ್ಷದಲ್ಲಿ ಮೂರು ದರ್ಭೆಗಳನ್ನು ಅನಾಮಿಕಾ ಬೆರಳಿಗೆ ಸುತ್ತಿಕೊಂಡು ತರ್ಪಣ ಕೊಡುವ ಸಂಪ್ರದಾಯವೂ ಉಂಟು.

ದರ್ಭೆಯು ಸಿಕ್ಕದಿದ್ದರೆ ಬೆರಳುಗಳ ಮಧ್ಯದಲ್ಲಿ " ತುಳಸೀದಳ " ವನ್ನು ಸಿಕ್ಕಿಸಿ ಕೊಂದಾದರೂ ತರ್ಪಣವನ್ನು ಕೊಡಬಹುದು.

ತರ್ಪಣಕ್ಕಾಗಿ ಪ್ರತ್ಯೇಕ ಕಲಶೋದಕಕವನ್ನು ಉಪಯೋಗಿಸಬೇಕು. ಅಂದರೆ ಆಚಮನಕ್ಕೆ ಪ್ರತ್ಯೇಕ ನೀರು ಇಟ್ಟುಕೊಳ್ಳಬೇಕು. ತರ್ಪಣದ ಕಲಶಕ್ಕೆ ಸಾಲಗ್ರಾಮ ನಿರ್ಮಾಲ್ಯ ತೀರ್ಥವನ್ನು ಸೇರಿಸಬೇಕು.

" ತರ್ಪಣ ವಿಧಾನ "

ಮಾತಾ ಪಿತೃಗಳ ಶ್ರಾದ್ಧಾಂಗವಾಗಿ " ಪರೇಹನಿ " ಅಂದರೆ ಮಾರನೇ ದಿನ ಕೊಡಬೇಕಾದ ತಿಲ ತರ್ಪಣದಲ್ಲಿ ಮೂರು ಜನಕ್ಕೆ ಮಾತ್ರ ತರ್ಪಣ ಕೊಡಬೇಕು.

" ಮಾತೃ ಶ್ರಾದ್ಧ " ದಲ್ಲಿ....

ಮಾತೃ ( ತಾಯಿ )
ಪಿತಾಮಹಿ ( ತಂದೆಯ ತಾಯಿ )
ಪ್ರಪಿತಾಮಹಿ ( ತಂದೆಯ ತಂದೆಯ ತಾಯಿ )
ಇವರಿಗೆ ಮಾತ್ರ ತರ್ಪಣ ಕೊಡಬೇಕು.

ಇದೇ ರೀತಿ ಪಿತೃ ಶ್ರಾದ್ಧಾಂಗ ತರ್ಪಣವನ್ನು...

ಪಿತೃ ( ತಂದೆ )
ಪಿತಾಮಹ ( ತಂದೆಯ ತಂದೆ )
ಪ್ರಪಿತಾಮಹ ( ತಂದೆಯ ತಂದೆಯ ತಂದೆ )

೧. ತರ್ಪಣ ಕೊಡುವಾಗ ಋಗ್ವೇದಿಗಳು ಮೊದಲು ಹೆಸರು ಹೇಳಿ ನಂತರ ಗೋತ್ರವನ್ನು ಹೇಳಬೇಕು.
೨. ಯಜುರ್ವೇದಿಗಳು ಮೊದಲು ಗೋತ್ರವನ್ನೂ ನಂತರ ಹೆಸರನ್ನೂ ಹೇಳಬೇಕು.
೩. ತರ್ಪಣಕ್ಕೆ ಬಾಧ್ಯಸ್ತರಾಗಿದ್ದು ಗತಿಸಿದವರ ಗೊತ್ತಿಲ್ಲದ ಪಕ್ಷದಲ್ಲಿ " ಯಜ್ಞಪ್ಪ " ಎಂದು ಗಂಡಸರಿಗೂ; " ಯಜ್ಞಮ್ಮ " ಎಂದು ಹೆಂಗಸರಿಗೂ ಹೇಳಬೇಕು.
೪. ಗೋತ್ರ ಗೊತ್ತಿಲ್ಲದ ಪಕ್ಷದಲ್ಲಿ " ಕಾಶ್ಯಪ " ಗೋತ್ರ ಎಂದು ಹೇಳಬೇಕು.
೫. ಪಿತೃಗಳಿಗೆ ತರ್ಪಣವನ್ನು ಬಲ ಅಂಗೈಯಲ್ಲಿ ತಿಲವನ್ನಿಟ್ಟುಕೊಂಡು ಕಲಶದ ನೀರನ್ನು ಹಾಕಿಕೊಂಡು ಬಲಗೈ ಅಂಗುಷ್ಠದ ( ಹೆಬ್ಬಟ್ಟಿನ ) ಮತ್ತು ತೋರು ಬೆರಳಿನ ಬುಡಗಳ ಮಧ್ಯದಿಂದ ಮೂಸಲಾ ತಾಮ್ರದ ಪಾತ್ರೆಯಲ್ಲಿ ಕೊಡತಕ್ಕದ್ದು.
೬. ನೆಲದ ಮೇಲೆ ತರ್ಪಣದ ನೀರು ಬೀಳಬಾರದು.

" ದರ್ಶನ ಕಾಲದ ಆಚರಣೆ "

ಪ್ರತಿ ತಿಂಗಳು ಅಮಾವಾಸ್ಯೆಯ ದಿನ ದ್ವಾದಶ ಪಿತೃಗಳಿಗೆ ( ೧೨ ಜನಕ್ಕೆ ) ತಿಲ ತರ್ಪಣ ಕೊಡಬೇಕು. ದ್ವಾದಶ ಪಿತೃಗಳು ಯಾರೆಂದರೆ...

೧. ಪಿತೃ ವರ್ಗ ( ೩ ) = ಪಿತೃ, ಪಿತಾಮಹ, ಪ್ರಪಿತಾಮಹ
೨. ಮಾತೃ ವರ್ಗ ( ೩ ) = ಮಾತೃ, ಪಿತಾಮಹಿ, ಪ್ರಪಿತಾಮಹಿ
೩. ಮಾತಾಮಹ ವರ್ಗ ( ೩ ) = ಮಾತಾ ಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ
೪. ಮಾತಾಮಹಿ ವರ್ಗ ( ೩ ) = ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ

ತಂದೆ ಅಥವಾ ತಾಯಿಯ ಪ್ರತಿವರ್ಷದ ತಿಥಿ ಮತ್ತು ಪ್ರತಿ ತಿಂಗಳ ಅಮಾವಾಸ್ಯೆ ಈ ಎರಡು ಸಂದರ್ಭಗಳು ವಿನಃ ಮಿಕ್ಕ ಇತರ ಕಾಲಗಳಲ್ಲಿ ಅಂದರೆ ಸೂರ್ಯ - ಚಂದ್ರ ಗ್ರಹಣ, ಪ್ರತಿ ತಿಂಗಳಲ್ಲೂ ಬರುವ ಸಂಕ್ರಮಣ, ಮಹಾಲಯ ಪಕ್ಷ, ಉಪಾಕರ್ಮ ಇತ್ಯಾದಿ ಪುಣ್ಯ ಕಾಲಗಳಲ್ಲಿ, ಪುಣ್ಯ ನದಿ, ತೀರ್ಥ ಕ್ಷೇತ್ರ ಮತ್ತು ಸಮುದ್ರಗಳಲ್ಲಿ ಸಮಸ್ತ ಪಿತೃಗಳಿಗೂ ತರ್ಪಣ ಕೊಡಬೇಕು.

ತಿಲ ತರ್ಪಣವನ್ನು ಮೃತರಾದವರಿಗೆ ಕೊಡಬೇಕೇ ವಿನಃ ಜೀವಂತರಿಗೆ ಕೊಡಬಾರದು.

ಮೇಲ್ಕಂಡ ೪ ವರ್ಗಗಳಲ್ಲಿ ೧ನೇಯ ವರ್ಗದಲ್ಲಿನ ಪಿತೃ ಜೀವಂತವಾಗಿದ್ದರೆ ಕರ್ತೃ ತಂದೆ ಬದುಕಿರುವವರು ಎಂದು ಕರೆಯಲ್ಪಡುತ್ತಾರೆ. ಅವರಿಗೆ ಪಿತೃ ತರ್ಪಣದಲ್ಲಿ ಅಧಿಕಾರವಿಲ್ಲ. ಆದರೆ ಬ್ರಹ್ಮಯಜ್ಞ ಮತ್ತು ಉಪಾಕರ್ಮಗಳಲ್ಲಿ...

ಭೂ ಪಿತೃ೦ ತರ್ಪಯಾಮಿ
ಭುವಃ ಪಿತೃ೦ ತರ್ಪಯಾಮಿ
ಸ್ವ: ಪಿತೃ೦ ತರ್ಪಯಾಮಿ
ಭೂರ್ಭವಸ್ವ: ಪಿತೃ೦ ತರ್ಪಯಾಮಿ

ಎನ್ನುವ ತರ್ಪಣಕ್ಕೆ ಅಧಿಕಾರ ಉಂಟು. ನಂತರ ಮೇಲೆ ಹೇಳಿದ ವರ್ಗಗಳ ಸಾಕ್ಷಾತ್ ಪಿತೃಗಳಿಗೆ ತರ್ಪಣ ಕೊಡಲು ಅಧಿಕಾರವಿಲ್ಲ!

ಮೇಲೆ ಹೇಳಿದ ೪ ವರ್ಗಗಳು ಅಂದರೆ...

೧. ಪಿತೃ ವರ್ಗ
೨. ಮಾತೃ ವರ್ಗ
೩. ಮಾತಾಮಹ ವರ್ಗ
೪. ಮಾತಾಮಹಿ ವರ್ಗ

ವರ್ಗಳಗಲ್ಲಿ ಮೃತರಾಗುವ ತನಕ ಮಿಕ್ಕವರಿಗೆ ತರ್ಪಣ ಹುಟ್ಟುವುದಿಲ್ಲ. ಉದಾಹರಣೆಗೆ...

೧. ತಂದೆ ಜೀವಂತವಾಗಿರುವ ತನಕ ತರ್ಪಣದ ಅಧಿಕಾರ ಬರುವುದಿಲ್ಲ.

೨. ತಾಯಿ ಜೀವಂತವಾಗಿರುವ ತನಕ ಮಾತೃ ವರ್ಗ ತರ್ಪಣಕ್ಕೆ ಬರುವುದಿಲ್ಲ.

೩. ಹಾಗೆಯೇ ಮಾತಾಮಹ ವರ್ಗ ಅಂದರೆ ತಾಯಿಯ ತಂದೆ ಮತ್ತು ತಾಯಿಯ ತಾಯಿ ಜೀವಂತವಿರುವ ತನಕ ಆಯಾ ವರ್ಗದವರಿಗೆ ತರ್ಪಣ ಹುಟ್ಟುವುದಿಲ್ಲ.

೪. ಇನ್ನು ಪ್ರತಿಯೊಂದು ವರ್ಗದಲ್ಲಿಯೂ ಮೊದಲಿನವರು ಮೃತರಾಗಿ ಎರಡನೇಯವರಾಗಲೀ ಅಥವಾ ಮೂರನೇಯವರಾಗಲೀ ಜೀವಂತರಾಗಿದ್ದರೆ ಅವರ ಮುಂದಿನವರಿಗೆ ತರ್ಪಣ ಕೊಡಬೇಕಾದ ವಿಚಾರವನ್ನು ವಿದ್ವಾಂಸರನ್ನು ವಿಚಾರಿಸಿ ತಿಳಿದು ಕೊಳ್ಳಬೇಕು!!

" ತರ್ಪಣ ವಿಧಿ ನಿಯಮಗಳು "

೧. ಆಚಮನ
೨. ದರ್ಭೆ ಪವಿತ್ರವನ್ನು ಬ್ರಾಹ್ಮಣರ ಕೈಯಿಂದ ಸ್ವೀಕಾರ ಮಾಡಿ ಪವಿತ್ರವನ್ನು ಧರಿಸುವ ಮುಂಚೆ ಈ ಕೆಳಕಂಡ ಮಂತ್ರವನ್ನು ಪಠಿಸಬೇಕು.

ಋಗ್ವೇದಿಗಳಿಗೆ...
ಓಂ ಪವಿತ್ರ೦ತೇ ವಿತತಂ ಬ್ರಹ್ಮಣಸ್ಪತಿ ।
ಪ್ರಭುರ್ ಗಾತ್ರಾಣಿ ಪರ್ಯಾಸು ವಿಶ್ವತಃ ।
ಅತಪ್ತತನೂರ್ನತ ದಾಮೋ ಆಶ್ನುತೇ 
ಶೃತಾಸ ಇದ್ವಹಂತಸ್ ತತ್ ಸಮಾಶತ ।।

ಯಜುರ್ವೇದಿಗಳಿಗೆ...
ಪವಿತ್ರವಂತಃ ಪರಿವಾಜ ಮಾಸತೇ ಪಿತೇಷಾ೦ ಪ್ರತ್ನೋ ಅಭಿರಕ್ಷತಿ ।
ವ್ರತಂ ಮಹಃ ಸಮುದ್ರಂ ವರುಣಸ್ತೀರೋ ದಧೇ ಧೀರಾ ಇಚ್ಛೇ ಕುರ್ಧರಣೇಷ್ಟಾರಭಮ್ ।।

೩. ಪುನರಾಚಮನ
೪. ಪ್ರಾಣಾಯಾಮ
೫. ದೇಶಕಾಲಾದಿ ಉಚ್ಛಾರಣೆ
೬. ಸಂಕಲ್ಪ
೭. ಮಾಸ ಸಂಕ್ರಮಣ, ಗ್ರಹಣ, ಉತ್ತರ - ದಕ್ಷಿಣಾಯನ ಪರ್ವಕಾಲದ ಸಂಕಲ್ಪ

" ತರ್ಪಣ ಕ್ರಮ "
ಕರ್ತನು ಪೂರ್ವಾಭಿಮುಖವಾಗಿ ಕುಳಿತು ಆಚಮನ ಮಾಡಿ ದೇವೀ ಗಾಯತ್ರೀ ಛಂದಃ ಎಂಬ ಮಂತ್ರವನ್ನು ಪಠಿಸಿ ದೇಶ ಕಾಲಾದಿಗಳನ್ನು ಉಚ್ಛರಿಸಿ ಸಂದರ್ಭಕ್ಕೆ ತಕ್ಕ ಸಂಕಲ್ಪ ಮಾಡಿ ಜನಿವಾರವನ್ನು ಎಡಕ್ಕೆ ಹಾಕಿಕೊಂಡು ದಕ್ಷಣಾಭಿಮುಖವಾಗಿ ತಿರುಗಿಕೊಂಡು ಬಲ ಮೊಣಕಾಲನ್ನು ನೆಲಕ್ಕೆ ಊರಿ ಬಲಗೈಯಲ್ಲಿ ತಿಲವನ್ನು ಹಾಕಿಕೊಂಡು ಉದ್ಧರಣೆಯಿಂದ ಕಲಶೋದಕವನ್ನು ಬಲಗೈಗೆ ಹಾಕಿಕೊಂಡು ಹೆಬ್ಬರಳು ಮತ್ತು ತೋರು ಬೆರಳುಗಳ ಬುಡದ ಮಧ್ಯದಿಂದ ತರ್ಪಣವನ್ನು ಮೂರುಸಲ ತರ್ಪಯಾಮಿ - ತರ್ಪಯಾಮಿ - ತರ್ಪಯಾಮಿ ಎಂದು ಕೊಡಬೇಕು.

* ಕಲಶದ ನೀರಿಗೆ ನಿರ್ಮಾಲ್ಯ ತೀರ್ಥವನ್ನು ಹಾಕಬೇಕು.
* ತರ್ಪಣವನ್ನು ನೆಲದ ಮೇಲೆ ಕೊಡಬಾರದು.
* ತರ್ಪಣ ಕೊಟ್ಟ ನೀನು ನೆಲದ ಮೇಲೆ ಬೀಳಬಾರದು.
* ತಾಮ್ರದ ಪಾತ್ರೆಯಲ್ಲಿ ತರ್ಪಣ ಕೊಡಬೇಕು.

* ಸಂದರ್ಭಾನುಸಾರ ೩, ೧೨ ಅಥವಾ ಸಮಸ್ತ ಪಿತೃಗಳಿಗೆ ತರ್ಪಣ ಕೊಟ್ಟಾಗ ಜನಿವಾರವನ್ನು ವನಮಾಲೆಯಾಗಿ ಹಾಕಿಕೊಳ್ಳಬೇಕು. ಉಳಿದಿರುವ ಎಳ್ಳು ಅಷ್ಟನ್ನೂ ಈ ಕೆಳಗಿನ ೨ ಮಂತ್ರಗಳನ್ನು ಹೇಳಿ ತರ್ಪಣ ಕೊಡಬೇಕು.

ಆಬ್ರಹ್ಮಸ್ತ೦ಭ ಪರ್ಯಂತ ಡೆತ್ ಋಷಿ ಪಿತೃ ಮಾನವಾ: ।
ತೃಪ್ತ್ಯ೦ತು ಪಿತರೇಸ್ಸರ್ವೇ ಮಾತೃ ಮಾತಾ ಮಹಾದಯಃ ।।

ಅತೀತ ಕುಲ ಕೋಟಿನಾ೦ ಸಪ್ತದ್ವೀಪ ನಿವಾಸಿನಾಮ್ ।
ಆಬ್ರಹ್ಮ ಭುವನಾಲ್ಲೋಕಂ ಇದಮಸ್ತು ತಿಲೋದಕಂ ।।

ಜನಿವಾರದ ಬ್ರಹ್ಮಗಂಟನ್ನು ಕಲಶೋದಕ ನೀರಿನಲ್ಲಿ ಅದ್ದಿ ಬಲಗಣ್ಣು ನಂತರ ಎಡಗಣ್ಣಿಗೆ ಈ ಕೆಳಗಿನ ಮಂತ್ರ ಹೇಳಿ ಒತ್ತಿಕೊಳ್ಳಬೇಕು.

ಯೇ ಕೇ ಚಾಸ್ಮತ್ ಕುಲೇ ಜಾತಾ ಅಪುತ್ರಾ ಗೋತ್ರಣೋ ಮೃತಾಃ ।
ತೇ ಗೃಹ್ಣ೦ತು ಮಯಾ ದತ್ತಂ ಸೂತ್ರ ನಿಷ್ಪೀದನೋದಕಂ ।।

ಪೂರ್ವಕ್ಕೆ ತಿರುಗಿಕೊಂಡು ಸರಿಯಾಗಿ ಪದ್ಮಾಸನದಲ್ಲಿ ಕುಳಿತುಕೊಂಡು ನಂತರ ಜನಿವಾರವನ್ನು ಬಲಕ್ಕೆ ಹಾಕಿಕೊಂಡು...

ಯಸ್ಯಾಸ್ಮೃತ್ಯಾಚ ನಾಮೋಕ್ತ್ಯಾ ತಪಃ ತರ್ಪಣ ಕ್ರಿಯಾದಿಷು ।
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ।।

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನಃ ।
ಯತ್ಕೃತಂತು ಮಯಾದೇವಂ ಪರಿಪೂರ್ಣ೦ ತದಸ್ತುಮೇ ।।

ಎಂದು ಹೇಳಿ..

ಅನೇನ ಶ್ರಾದ್ಧಾಂಗ ( ಶ್ರಾದ್ಧ ಮಾಡಿದಾಗ ) ತಿಲ ತರ್ಪಣೇನ ಅಥವಾ ಅನೇನ ( ಶ್ರಾದ್ಧ ಮಾಡದೇ ಇದ್ದಾಗ ) ತಿಲ ತರ್ಪಣೇನ ಪಿತೃ೦ತರ್ಯಾಮಿ ಅಥವಾ ಪಿತ್ರಾದಿ ದ್ವಾದಶ ಪಿತೃಣಾ೦ ಅಥವಾ ಪಿತ್ರಾದಿ ಸಮಸ್ತ ಪಿತೃಣಾ೦ತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮಧ್ವವಲ್ಲಭ ಜನಾರ್ದನ ವಾಸುದೇವ ಪ್ರೀಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು!!

ಎಂದು ಹೇಳಿ ಅಕ್ಕಿ ನೀರು ಅಥವಾ ಬರೀ ನೀರನ್ನು ಅರ್ಘ್ಯ ಪಾತ್ರೆಯಲ್ಲಿ ಬಿಡಬೇಕು.

ನಂತರ ೨ ಬಾರಿ ಆಚಮನ ಮಾಡಬೇಕು.

ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪ ದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೆ ।।

ಅಚ್ಯುತಾಯ ನಮಃ - ಅನಂತಾಯ ನಮಃ - ಗೋವಿಂದಾಯ ನಮಃ - ಎಂದು ೩ ಬಾರಿ,

ಅಚ್ಯುತಾನಂತ ಗೋವಿಂದೇಭ್ಯೋ ನಮಃ - ಎಂದು ೧ ಬಾರಿ ಹೇಳಬೇಕು.

ಮಂತ್ರ ಮಧ್ಯೇ ಕ್ರಿಯಾ ಮಧ್ಯೇ ವಿಷ್ಣೋ ಸ್ಮರಣ ಪೂರ್ವಕಂ ।

ಯತ್ಕಿಂಚಿತ್ ಕ್ರಿಯತೇ ಕರ್ಮ ತತ್ಕರ್ಮ ಸಫಲಂ ಕುರು ।।

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇ: ಸ್ವಭಾವಾತ್ ।

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ।।

" ತರ್ಪಣಕ್ಕೆ ಬರುವ ಸಮಸ್ತ ಪಿತೃಗಳು "

ಆದೌ ಪಿತಾ ತಥಾ ಮಾತಾ । ಸ ಪತ್ನೀ ಜನನೀ ತಥಾ ।
ಮಾತಾಮಹಾಸ್ಸಪತ್ನಿಕಾ: ।ಆತ್ಮಪತ್ನೀತ್ವನಂತರಂ ।।

ಸುತಾಭ್ರಾತೃಪಿತ್ರವ್ಯಾಚ್ಯ । ಮತುಲಾ ಸಹ ಭಾರ್ಯಕಾ: ।
ದುಹಿತಾ ಭಗಿನೀ ಚೈವ: ದೌಹಿತ್ರೋಭಾಗಿನೇಯಕಾ: ।।

ಪಿತೃತ್ವಸಾ ಮಾತೃಶ್ವಸಾ । ಜಾಮಾತಾ ಭಾವುಕ ಸ್ನುಷಾ ।
ಶ್ವಶುರ ಸ್ಯಾಲಕಶ್ಚ್ಯೆವ । ಶಿಷ್ಯಾಪ್ತ ಗುರು ಬಾಂಧವಾ: ।।
( ಪಾಠಾ೦ತರ ) ಸ್ವಾಮಿನೋ ಗುರುರಿಥ್ವಿನಂ ।।

ಅಂತೂ ಭಗವಂತನು ಪಂಚ ರೂಪಗಳಿಂದ ಪಿತೃಯಜ್ಞ ಮಾಡುವ ಕರ್ತೃ, ಕರ್ಮ, ಕ್ರಿಯೆಗಳಲ್ಲಿ, ಆಕಾಲದಲ್ಲಿ ಭೋಕ್ಷ್ಯ - ಭೋಜ್ಯಗಳಲ್ಲಿ ಹೀಗೆ ಎಲ್ಲಾ ಹಂತಗಳಲ್ಲಿ ಆಯಾ ನಾಮಗಳಿಂದ ( ಎಂದರೆ ಕರ್ತೃ, ಕರ್ಮ, ಕ್ರಿಯಾ, ಭೋಕ್ತಾ, ಭೋಜ್ಯ ನಾಮಗಳಿಂದ ) ೯೬ ರೂಪಗಳಿಂದ " ಷಣ್ಣವತಿ " ಎಂಬ ನಾಮದಿಂದಲೂ ಇದ್ದು " ಪಿತೃಯಜ್ಞ " ಮಾಡಿಸುತ್ತಾನೆ!!!

ಚೇತನಾಚೇತನಗಳಲಿ ಗುರು ।
ಮಾತರಿಶ್ವಾ೦ತರ್ಗತ । ಜಗ ।
ನ್ನಾಥವಿಠಲ ನಿರಂತರದಿ ವ್ಯಾಪಿಸಿ ತಿಳಿಸಿಕೊಳ್ಳದಲೆ ।।

ಕಾತುರವ ಪುಟ್ಟಿಸಿ ವಿಷಯದಲಿ ।
ಯಾತುಧಾನರ ಮೋಹಿಸುವ । ನಿ ।
ರ್ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ ।।
*********

ಮಾಘ ಅಮಾವಾಸ್ಯಾದಂದು ಧನಿಷ್ಠಾ ನಕ್ಷತ್ರವಿದ್ದರೆ:-  ಇದಕ್ಕೆ ಯಾವುದೇ ರೂಢ ಹೆಸರು ಇಲ್ಲ.
ಆದರೆ ಪ್ರಮಾಣಗಳಲ್ಲಿ (ವಿಷ್ಣುಪುರಾಣ-ವರಾಹಪುರಾಣ) ಇದರ ಬಗ್ಗೆ ಮಹತ್ತ್ವವನ್ನು ಹೀಗೆ ಹೇಳಿದ್ದಾರೆ -

माघासिते पञ्चदशी कदाचिदुपैति योगं यदि वारुणेन ।
ऋक्षेण कालः परमः पितॄणां न त्वल्पपुण्यैर्द्विज लभ्यतेऽसौ ।। १३.४५ ।।

काले धनिष्ठा यदि नाम तस्मिन् भवेत्तु विप्रेन्द्र सदा पितृभ्यः ।
दत्तं जलान्नं प्रददाति तृप्तिं वर्षायुतं तत्कुलजैर्मनुष्यैः ।। १३.४६ ।।

तत्रैव चेद् भाद्रपदास्तु पूर्वाः काले तदा यैः क्रियते पितृभ्यः ।
श्राद्धं परा तृप्तिमुपेत्य तेन युगं समग्रं पितरः स्वपन्ति ।।

ಮಾಘಮಾಸ ಆಮಾವಾಸ್ಯಾದಂದು -----
1. ಶತಭಿಷಾ ನಕ್ಷತ್ರ - ಪಿತೃಗಳಿಗೆ ತೃಪ್ತಿ - ಅಲ್ಪಪುಣ್ಯದಿಂದ ಸಿಗುವುದಿಲ್ಲ.

2. ಧನಿಷ್ಠಾ ನಕ್ಷತ್ರ - ಪಿತೃಗಳಿಗೆ ತೃಪ್ತಿ - ಹತ್ತುಸಾವಿರ ವರ್ಷದವರೆಗೆ ತೃಪ್ತಿ.

3. ಪೂರ್ವಾಭಾದ್ರಪದಾ ನಕ್ಷತ್ರ - ಪಿತೃಗಳಿಗೆ ತೃಪ್ತಿ - ಒಂದು ಯುಗದವರೆಗೆ ತೃಪ್ತಿ.


ಇದಲ್ಲದೇ ಅಮಾವಾಸ್ಯೆಗೆ ಸಂಬಂಧ ಪಟ್ಟ ಇನ್ನೂ ಕೆಲವು ಯೋಗಗಳು ಹೀಗಿವೆ -

अमावास्यां भवेद्वारो यदा भूमिसुतस्य वै । जाह्नवीस्नानमात्रेण गोसहस्रफलं लभेत् ॥ वी.मि
ಸರ್ವಮಾಸದ ಅಮಾವಾಸ್ಯಾ - ಮಂಗಳವಾರ - ಗಂಗಾಸ್ನಾನ - ಗೋಸಹಸ್ರದಾನದ ಫಲ.

अमा सोमेन भौमेन गुरुणा रविणा तथा । तत्तीर्थं पुष्करं नाम सूर्यग्रहशताधिकम् ॥ वी.मि
अमा सोमेन भौमेन गुरुणा रविणा तथा । तत्पर्व पद्मकं नाम सूर्यग्रहशताधिकम् ॥ स्मृ.मु
ಸರ್ವಮಾಸದ ಅಮಾವಾಸ್ಯಾ - ಸೋಮವಾರ, ಮಂಗಳವಾರ, ಗುರುವಾರ, ರವಿವಾರ- ಪುಷ್ಕರ ಅಥವಾ ಪದ್ಮಕ ಯೋಗ - ನೂರುಸೂರ್ಯಗ್ರಹಣದ ಪುಣ್ಯ.

कृते तु गुरुणा युक्ता त्रेतायां भौमसंयुता । द्वापरे रवियुक्ता सा पुण्या सोमयुता कलौ । 
रविवारयुता पुण्या कलावपि च कीर्तिता ।। स्मृ.मु
ಕಲಿಯುಗದಲ್ಲಿ - ಸರ್ವಮಾಸ ಅಮಾವಾಸ್ಯಾ - ಸೋಮವಾರ, ರವಿವಾರ - ಪುಷ್ಕರ ಅಥವಾ ಪದ್ಮಕ ಯೋಗ - ನೂರುಸೂರ್ಯಗ್ರಹಣದ ಪುಣ್ಯ.

अमावास्या यदा मैत्रविशाखाऋक्षयोगिनी । श्राद्धे पितृगणस्तृप्तिं तद��



अमावास्या यदा मैत्रविशाखाऋक्षयोगिनी । श्राद्धे पितृगणस्तृप्तिं तदाप्नोत्यष्टवार्षिकीम् ॥
ಸರ್ವಮಾಸದ ಅಮಾವಾಸ್ಯಾ - ವಿಶಾಖಾ ಅಥವಾ ಅನುರಾಧಾ - ಎಂಟು ವರ್ಷದ ಶ್ರಾದ್ಧದ ಫಲ.

अमावास्या यदा पुष्ये रौद्रर्क्षे वा पुनर्वसौ । द्वादशाब्दीं तथा तृप्तिं प्रयान्ति पितरोऽर्च्चिताः ॥ वी.मि
ಸರ್ವಮಾಸದ ಅಮಾವಾಸ್ಯಾ - ಪುಷ್ಯ, ಆರ್ದ್ರಾ, ಪುನರ್ವಸು - 12 ವರ್ಷದ ಶ್ರಾದ್ಧದ ಫಲ.

वासवाजैकपादर्क्षे पितॄणां तृप्तिमिच्छता । वारुणे वाऽऽप्यदैवत्ये देवानामपि दुर्ल्लभा || वी.मि
ಸರ್ವಮಾಸದ ಅಮಾವಾಸ್ಯಾ - ಧನಿಷ್ಠಾ, ಪೂರ್ವಾಭಾದ್ರಪದಾ, ಶತಭಿಷಾ, ಪೂರ್ವಾಷಾಢಾ- ದೇವನಾಮಪಿ ದುರ್ಲಭಾ.

अमार्कपातश्रवणैर्युक्ता चेत्पुष्यमाघयोः । अर्धोदयः स विज्ञेयः कोटिसूर्यग्रहैः समः ॥ दिवैव योगः शस्तोऽयं न तु रात्रौ कदाचन । वी.मि
ಮಾಘ ಮತ್ತು ಪೌಷ ಅಮಾವಾಸ್ಯಾ - ರವಿವಾರ+ಶ್ರವಣಾ+ವ್ಯತೀಪಾತ - ಅರ್ಧೋದಯ- ಸ್ನಾನ, ದಾನ, ಶ್ರಾದ್ಧ- ಕೋಟಿಸೂರ್ಯಗ್ರಹ.

ಯಾರು ಯಾರಿಗೆ ಯಾವುದು ಯಾವುದು ಆಗತ್ತೋ ಅವುಗಳನ್ನು ನೋಡಿ ಮಾಡಿ.
***
ತರ್ಪಣ #ಕ್ರಮ
ಕರ್ತನು ಪೂರ್ವಾಭಿಮುಖವಾಗಿ ಕುಳಿತು ಆಚಮನ ಮಾಡಿ ದೇವೀ ಗಾಯತ್ರೀ ಛಂದಃ ಎಂಬ ಮಂತ್ರವನ್ನು ಪಠಿಸಿ ದೇಶ ಕಾಲಾದಿಗಳನ್ನು ಉಚ್ಛರಿಸಿ ಸಂದರ್ಭಕ್ಕೆ ತಕ್ಕ ಸಂಕಲ್ಪ ಮಾಡಿ ಜನಿವಾರವನ್ನು ಎಡಕ್ಕೆ ಹಾಕಿಕೊಂಡು ದಕ್ಷಣಾಭಿಮುಖವಾಗಿ ತಿರುಗಿಕೊಂಡು ಬಲ ಮೊಣಕಾಲನ್ನು ನೆಲಕ್ಕೆ ಊರಿ ಬಲಗೈಯಲ್ಲಿ ತಿಲವನ್ನು ಹಾಕಿಕೊಂಡು ಉದ್ಧರಣೆಯಿಂದ ಕಲಶೋದಕವನ್ನು ಬಲಗೈಗೆ ಹಾಕಿಕೊಂಡು ಹೆಬ್ಬರಳು ಮತ್ತು ತೋರು ಬೆರಳುಗಳ ಬುಡದ ಮಧ್ಯದಿಂದ ತರ್ಪಣವನ್ನು ಮೂರುಸಲ ತರ್ಪಯಾಮಿ - ತರ್ಪಯಾಮಿ - ತರ್ಪಯಾಮಿ ಎಂದು ಕೊಡಬೇಕು.

ಕಲಶದ ನೀರಿಗೆ ನಿರ್ಮಾಲ್ಯ ತೀರ್ಥವನ್ನು ಹಾಕಬೇಕು. 

ತರ್ಪಣವನ್ನು ನೆಲದ ಮೇಲೆ ಕೊಡಬಾರದು.

ತರ್ಪಣ ಕೊಟ್ಟ ನೀನು ನೆಲದ ಮೇಲೆ ಬೀಳಬಾರದು.

ತಾಮ್ರದ ಪಾತ್ರೆಯಲ್ಲಿ ತರ್ಪಣ ಕೊಡಬೇಕು.

ಸಂದರ್ಭಾನುಸಾರ 3, 12 ಅಥವಾ ಸಮಸ್ತ ಪಿತೃಗಳಿಗೆ ತರ್ಪಣ ಕೊಟ್ಟಾಗ ಜನಿವಾರವನ್ನು ವನಮಾಲೆಯಾಗಿ ಹಾಕಿಕೊಳ್ಳಬೇಕು.

ಉಳಿದಿರುವ ಎಳ್ಳು ಅಷ್ಟನ್ನೂ ಈ ಕೆಳಗಿನ 2 ಮಂತ್ರಗಳನ್ನು ಹೇಳಿ ತರ್ಪಣ ಕೊಡಬೇಕು.

ಆಬ್ರಹ್ಮಸ್ತ೦ಭ ಪರ್ಯಂತ

ಋಷಿ ಪಿತೃ ಮಾನವಾ: ।

ತೃಪ್ತ್ಯ೦ತು ಪಿತರೇಸ್ಸರ್ವೇ

ಮಾತೃ ಮಾತಾ ಮಹಾದಯಃ ।।

ಅತೀತ ಕುಲ ಕೋಟಿನಾ೦

ಸಪ್ತದ್ವೀಪ ನಿವಾಸಿನಾಮ್ ।

ಆಬ್ರಹ್ಮ ಭುವನಾಲ್ಲೋಕಂ

ಇದಮಸ್ತು ತಿಲೋದಕಂ ।।

ಜನಿವಾರದ ಬ್ರಹ್ಮಗಂಟನ್ನು ಕಲಶೋದಕ ನೀರಿನಲ್ಲಿ ಅದ್ದಿ ಬಲಗಣ್ಣು ನಂತರ ಎಡಗಣ್ಣಿಗೆ ಈ ಕೆಳಗಿನ ಮಂತ್ರ ಹೇಳಿ ಒತ್ತಿಕೊಳ್ಳಬೇಕು.

ಯೇ ಕೇ ಚಾಸ್ಮತ್ ಕುಲೇ ಜಾತಾ

ಅಪುತ್ರಾ ಗೋತ್ರಣೋ ಮೃತಾಃ ।

ತೇ ಗೃಹ್ಣ೦ತು ಮಯಾ ದತ್ತಂ

ಸೂತ್ರ ನಿಷ್ಪೀದನೋದಕಂ ।।

ಪೂರ್ವಕ್ಕೆ ತಿರುಗಿಕೊಂಡು ಸರಿಯಾಗಿ ಪದ್ಮಾಸನದಲ್ಲಿ ಕುಳಿತುಕೊಂಡು ನಂತರ ಜನಿವಾರವನ್ನು ಬಲಕ್ಕೆ ಹಾಕಿಕೊಂಡು...

ಯಸ್ಯಾಸ್ಮೃತ್ಯಾಚ ನಾಮೋಕ್ತ್ಯಾ

ತಪಃ ತರ್ಪಣ ಕ್ರಿಯಾದಿಷು ।

ನ್ಯೂನಂ ಸಂಪೂರ್ಣತಾಂ

ಯಾತಿ ಸದ್ಯೋ ವಂದೇ ತಮಚ್ಯುತಂ ।।

ಮಂತ್ರಹೀನಂ ಕ್ರಿಯಾಹೀನಂ

ಭಕ್ತಿಹೀನಂ ಜನಾರ್ದನಃ ।

ಯತ್ಕೃತಂತು ಮಯಾದೇವಂ

ಪರಿಪೂರ್ಣ೦ ತದಸ್ತುಮೇ ।।

ಎಂದು ಹೇಳಿ..ಅನೇನ ಶ್ರಾದ್ಧಾಂಗ ( ಶ್ರಾದ್ಧ ಮಾಡಿದಾಗ ) ತಿಲ ತರ್ಪಣೇನ ಅಥವಾ ಅನೇನ ( ಶ್ರಾದ್ಧ ಮಾಡದೇ ಇದ್ದಾಗ ) ತಿಲ ತರ್ಪಣೇನ ಪಿತೃ೦ತರ್ಯಾಮಿ ಅಥವಾ ಪಿತ್ರಾದಿ ದ್ವಾದಶ ಪಿತೃಣಾ೦ ಅಥವಾ ಪಿತ್ರಾದಿ ಸಮಸ್ತ ಪಿತೃಣಾ೦ತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮಧ್ವವಲ್ಲಭ ಜನಾರ್ದನ ವಾಸುದೇವ ಪ್ರೀಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು!!

ಎಂದು ಹೇಳಿ ಅಕ್ಕಿ ನೀರು ಅಥವಾ ಬರೀ ನೀರನ್ನು ಅರ್ಘ್ಯ ಪಾತ್ರೆಯಲ್ಲಿ ಬಿಡಬೇಕು.

ನಂತರ 2 ಬಾರಿ ಆಚಮನ ಮಾಡಬೇಕು.

ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ

ಲೋಪ ದೋಷ ಪ್ರಾಯಶ್ಚಿತ್ತಾರ್ಥಂ

ನಾಮತ್ರಯ ಮಂತ್ರ ಜಪಂ ಕರಿಷ್ಯೆ ।।

ಅಚ್ಯುತಾಯ ನಮಃ - ಅನಂತಾಯ ನಮಃ - ಗೋವಿಂದಾಯ ನಮಃ - ಎಂದು 3 ಬಾರಿ, ಅಚ್ಯುತಾನಂತ ಗೋವಿಂದೇಭ್ಯೋ ನಮಃ - ಎಂದು 1 ಬಾರಿ ಹೇಳಬೇಕು.

ಮಂತ್ರ ಮಧ್ಯೇ ಕ್ರಿಯಾ ಮಧ್ಯೇ

ವಿಷ್ಣೋ ಸ್ಮರಣ ಪೂರ್ವಕಂ ।

ಯತ್ಕಿಂಚಿತ್ ಕ್ರಿಯತೇ ಕರ್ಮ

ತತ್ಕರ್ಮ ಸಫಲಂ ಕುರು ।।

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇ: ಸ್ವಭಾವಾತ್ ।

ಕರೋಮಿ ಯದ್ಯತ್ ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ ।।

" ತರ್ಪಣಕ್ಕೆ ಬರುವ ಸಮಸ್ತ ಪಿತೃಗಳು "

ಆದೌ ಪಿತಾ ತಥಾ ಮಾತಾ ।

ಸ ಪತ್ನೀ ಜನನೀ ತಥಾ ।

ಮಾತಾಮಹಾಸ್ಸಪತ್ನಿಕಾ: ।

ಆತ್ಮಪತ್ನೀತ್ವನಂತರಂ ।।

ಸುತಾಭ್ರಾತೃಪಿತ್ರವ್ಯಾಚ್ಯ ।

ಮತುಲಾ ಸಹ ಭಾರ್ಯಕಾ: ।

ದುಹಿತಾ ಭಗಿನೀ ಚೈವ:

ದೌಹಿತ್ರೋಭಾಗಿನೇಯಕಾ: ।।

ಪಿತೃತ್ವಸಾ ಮಾತೃಶ್ವಸಾ ।

ಜಾಮಾತಾ ಭಾವುಕ ಸ್ನುಷಾ ।

ಶ್ವಶುರ ಸ್ಯಾಲಕಶ್ಚ್ಯೆವ ।

ಶಿಷ್ಯಾಪ್ತ ಗುರು ಬಾಂಧವಾ: ।।

( ಪಾಠಾ೦ತರ ) 

ಸ್ವಾಮಿನೋ ಗುರುರಿಥ್ವಿನಂ ।।

ಅಂತೂ ಭಗವಂತನು ಪಂಚ ರೂಪಗಳಿಂದ ಪಿತೃಯಜ್ಞ ಮಾಡುವ ಕರ್ತೃ, ಕರ್ಮ, ಕ್ರಿಯೆಗಳಲ್ಲಿ, ಆಕಾಲದಲ್ಲಿ ಭೋಕ್ಷ್ಯ - ಭೋಜ್ಯಗಳಲ್ಲಿ ಹೀಗೆ ಎಲ್ಲಾ ಹಂತಗಳಲ್ಲಿ ಆಯಾ ನಾಮಗಳಿಂದ ( ಎಂದರೆ ಕರ್ತೃ, ಕರ್ಮ, ಕ್ರಿಯಾ, ಭೋಕ್ತಾ, ಭೋಜ್ಯ ನಾಮಗಳಿಂದ ) 96 ರೂಪಗಳಿಂದ " ಷಣ್ಣವತಿ " ಎಂಬ ನಾಮದಿಂದಲೂ ಇದ್ದು " ಪಿತೃಯಜ್ಞ " ಮಾಡಿಸುತ್ತಾನೆ!!!

ಚೇತನಾಚೇತನಗಳಲಿ ಗುರು ।

ಮಾತರಿಶ್ವಾ೦ತರ್ಗತ । ಜಗ ।

ನ್ನಾಥವಿಠಲ ನಿರಂತರದಿ 

ವ್ಯಾಪಿಸಿ ತಿಳಿಸಿಕೊಳ್ಳದಲೆ ।।

ಕಾತುರವ ಪುಟ್ಟಿಸಿ ವಿಷಯದಲಿ ।

ಯಾತುಧಾನರ ಮೋಹಿಸುವ । ನಿ ।

ರ್ಭೀತ ನಿತ್ಯಾನಂದಮಯ 

ನಿರ್ದೋಷ ನಿರವದ್ಯ ।।
*******

read related topic--->pitru paksha shraddha ಪಿತೃ ಪಕ್ಷ ಶ್ರಾದ್ಧ
                           
Pitru Paksha Tarpan in HIndi

*

how to do tila tarpana on grahana day etc








*********


No comments:

Post a Comment