SEARCH HERE

Tuesday, 1 January 2019

ಕಾರ್ತಿಕ ಮಾಸ karteeka masa karthika





ಕಾರ್ತೀಕ ಮಾಸದಲ್ಲಿ ಬರುವ ಹಬ್ಬಗಳು/ವಿಶೇಷ ದಿನಗಳು ಕಾರ್ತಿಕ

ಬಲಿಪಾಡ್ಯ (ಶುಕ್ಲ ಪಾಡ್ಯ)
ಕೃತಯುಗಾರಂಭ (ಶುಕ್ಲ ನವಮಿ)
ಪ್ರಬೋಧಿನೀ ಏಕಾದಶಿ; ಭೀಷ್ಮಪಂಚಕವ್ರತಾರಂಭ; ಚಾತುರ್ಮಾಸ ಸಮಾಪ್ತಿ (ಶುಕ್ಲ ಏಕಾದಶಿ)
ಉತ್ಥಾನ ದ್ವಾದಶಿ; ತುಳಸಿ ಪೂಜೆ (ಶುಕ್ಲ ದ್ವಾದಶಿ)
ವೈಕುಂಠ ಚತುರ್ದಶಿ (ಶುಕ್ಲ ಚತುರ್ದಶಿ)
ಭೀಷ್ಮಪಂಚಕವ್ರತ ಸಮಾಪ್ತಿ; ಕಾರ್ತಿಕಸ್ನಾನ ಸಮಾಪ್ತಿ (ಹುಣ್ಣಿಮೆ)
ಉತ್ಪತ್ತಿ ಏಕಾದಶಿ (ಕೃಷ್ಣ ಏಕಾದಶಿ)
ಧಾತ್ರಿ ಪೂಜ
ಕಾಳಭೈರವ ಜಯಂತಿ
ಕನಕದಾಸ ಜಯಂತಿ 
ಧನ್ವಂತರಿ ಜಯಂತಿ

read more here


deepavali fest     DEEPAVALI
uttan dwadashi or tulasi fest        TULASI FEST
bali padyami    BALI PADYAMI

dhatri havana             DHATRI HAVANA

*

Historical importance of Kartik Shukla Pratipada
This is the day of beginning of calculation of time as per Vikram Samvat. In the first century BC, Shakas attacked Bharat. The King of present Ujjain, King Vikramaditya, trained the youth of Malwa in martial arts. He attacked Shakas and drove them out of the country and established a kingdom based on Dharma. As a symbol of the victory, Emperor Vikramaditya started count of time named Vikram Samvat. This is prevalent since 57 B.C. This shows how ancient is the concept of time calculation in the Bharatiya culture. Kartik Shukla Pratipada is the half day of the three and half auspicious days falling within an year. This is one of its importance.
        Rituals performed on Kartik Shukla Pratipada
 Balipujan
Balipratipada is celebrated on Kartik Shukla Pratipada. On this day Bhagawan Vishnu sent the King of demons, Bali, to Hell and curbed the loss to the Universe due to his misplaced philantrophy. Due to the excessive philanthropy of King Bali, wealth was acquired by ineligible people. This adversely affected the world. Then, Vishnu incarnated as Vamana and requested land enough to place His three steps. Then Vamana assumed expansive form and covered entire Earth and outer space with two steps. King Bali offered Him his own head to place His third step. Before sending King Bali to Hell, Vamanadeva graced him with a boon. King Bali asked for three days of his kingdom on Earth. These three days are – Kartik Krushna Chaturdashi, Deepavali Amavasya and Pratipada.
Kingdom of Bali: As per the religious Scriptures, in the kingdom of Bali, people should enjoy as per their wish barring the actions forbidden by the Scriptures. The actions forbidden by the Scripures are consuming non-vegetarian food, alcoholic drinks and company of inappropriate women. However, today we see an excess of this. On these days people burst firecrackers in excess and cause loss to national property. Some people engage in gambling. Most people keep up till late in the night eating, watching movies, plays etc.
Method of celebrating Balipratipada: On Balipratipada, married women do arati of their husband after abhyangasnan. In the afternoon meal various dishes are made. Some people worship the image of King Bali along with his wife, Vindhyavali. The objective of this worship is that King Bali should not cause distress to people on Earth with his power and so that he pacifies the other negative energies.             
Yamadwitiya

Kartika Shukla Dwitiya is one of the three days of worshipping Yama to prevent untimely death. It is popularly known as Yamadwitiya and Bhaiduj.                                  
As per Hindu scriptures, it is believed that on Kartika Shukla Dwitiya due to the presence of frequencies of Yama in the environment, one can face various distresses like untimely death, accident, sudden attack of mental illness due to amnesia, fit like attacks or many obstacles in the task in hand. To restrict the Yama frequencies worship of Yama and related Deities is performed.
On Kartika Shukla Dwitiya Yama leaves His home and enters His sister's home, that is Earth. Hence, it is known as Yamadwitiya. As a symbol of Yama visiting His sister, every man does not consume meals prepared at home, i.e. by his wife, but goes to the house of his sister to have the meal. 
During Dipavali, Yama frequencies descend in higher proportion. During these days any action done with respect to Yama and related Deities gives spiritual benefit in a short time. Hence, Yama is worshipped on Kartika Shukla Dwitiya. Ritual is performed as follows:
3 betel nuts are placed on the 3 mounds of rice kept on the short wooden seat.
For the worship of Yama and related Deities, the brother sips and releases water from the palm (Achaman), followed by utterance of place and time and resolve.
For the worship of Yama and related Deities, from his right side, on the first betel nut Deity Yama, on the second Chitragupta and on the third Yamaduta are invoked by offering unbroken rice. They are offered seat (asan), padhya, arghya etc.
They are offered string of beaded cotton and sacred thread (yadnyopavit).
They are worshipped with sandalwood paste, turmeric, vermilion, unbroken rice and flower etc.
Then incense, lamp and Holy sacrament (naivedya) are offered.
After the brother, the sister sips and releases water from the palm and worships these Deities.
She prays to the Deities to protect her brother form untimely death.      
 Aukshan
On this day, sisters do Aukshan of Yama in the form of brother and invoke Him. They felicitate Him appropriately and pray to him to restrict the frequencies of Yama moving on Earth and the unsatiated subtle bodies from Pitruloka.
Method of aukshan, that is, arati of brother by sister:
The sister does aukshan of brother before the meal.
She first applies vermilion mark and unbroken rice grains on his forehead.
Then she waves a betel nut and gold ring around his face thrice in semicircular motion.
Then she waves an arati thrice in semicircular motion.
She felicitates the brother by giving him a gift.
Subtle-effect of aukshan is as follows:
   While doing aukshan, a spiral of spiritual emotion (Bhav) is generated in the sister.



A flow of Chaitanya from the Universe is attracted towards the sister doing aukshan.
A spiral of this Chaitanya is generated in the sister.
Frequencies of Chaitanya flow from the hands of the sister to the platterand spread in it.
Flow of Chaitanya is attracted towards the brother.
Spiral of Chaitanya is generated in him.
Flow of Divine Energy is attracted in the oil lamp used for aukshan.
By waving an arati thrice in semicircular motion for aukshan, a spiral of active Energy is generated around the lamp.
From this spiral, active frequencies of Energy are emitted towards the brother. The Sun channel of the brother is activated.
The brother gains Energy to function and a spiral of Energy is generated in him.
Particles of Energy are spread in him.
A protective sheath is generated around him.
Due to the aukshan by sister, particles of Energy are spread in the environment.
Due to the aukshan, the brother is protected from the attacks of negative energies from Hell and the atmosphere.
Spiritual emotion (Bhav) is awakened in the brother.     
From this it is clear, that by doing aukshan of brother by sister, both derive spiritual benefit.
The distress to family members due to the Yama frequencies is reduced.
The family members are protected from the Yama frequencies.
The atmosphere of the premise is purified.
The environment on Earth remains devoid of agony, that is, blissful for a limited period.
After aukshan brother consumes food cooked by his sister. If one does not have a sister, then meal should be consumed at the house of any cousin or assuming any known woman as sister.
 Gift from brother to sister
After the meal, the brother felicitates the sister by giving her a gift like clothes, money etc as per his capacity. If the gift is sattvik, it is more appropriate. For example, Holy texts about spiritual practice or Dharma, clothes useful for ritualistic worship of Deities. The gift should not be tamasik. For example, a CD of an inappropriate movie.
In some places women first do aukshan of the moon in the evening and only then do aukshan of their brother. In some places, if a woman does not have a brother, she assumes moon as her brother and does his arati.
Effects of aukshan of the moon by women on Bhaiduj: Due to invocation of the moon by the woman, frequencies of moon enter the atmosphere. Due to their coolness, frequencies of Yama get pacified and the heat in the environment is reduced. Due to this pleasantness of the environment, there is awakening of the Anahat-chakra of the woman.   

Benefits of celebrating Bhaiduj to brother and sister
On Yamadwitiya, that is, Bhaiduj frequencies of bliss are emitted from the Universe. There is 30 % more benefit of these frequencies to all beings compared to other days. A benefit gained by the brother is:
Brother gaining benefit of Devi Principle awakened in sister: On this day the Devi Principle remains awakened in the woman. The brother gains benefit of this as per his spiritual emotion. If he is doing spiritual practice, then he gains benefit at a spiritual level. If he is not doing spiritual practice, then he gains material benefit. If the brother is doing spiritual practice while looking after business, he gains 50-50 percent benefit at both levels.
Due to the prayer by sister, reduction of the give-and-take account between brother and sister: On Yamadwitiya the sister prays for the well-being of her brother. The brother gains benefit of this as per the spiritual emotion of the sister. Hence, the give-and-take account between brother and sister reduces fractionally.
Reduction in destiny of sister: On the day Bhaiduj Shiva Principle is awakened in the brother. Due to this the destiny of the sister is reduced by 1 thousandth percent.

The above points show the importance of festivals mentioned in Hindu Dharma. H.H. Pande Maharaj from Sanatan ashram, Panvel, says "Bhaiduj is a day to destroy the malice, jealousy, enmity present in the mind and to awaken brotherhood. Wherever men will consider women as their sisters and perform their duty of protecting them, when all the women of any society and nation will be able to move fearlessly in society with respect and dignity, only that is real Yamadwitiya."
**********

ಕಾರ್ತಿಕ ಮಾಸ
ಶ್ರೀ ಕಾವೇರಿ ಗಂಗಾದಿ ನದಿ ದೇವಿಯರನ್ನು ಹೇಗೆ ನೋಡಬೇಕು?
ನಾವು ಕಾಣುವ ಮಿಂದುವ ನೀರೇ ಕಾವೇರಿಯೋ, ಗಂಗೆಯೋ, ಯಮುನೆಯೋ ಅಥವಾ ಬೇರೆ ರೂಪವೂ ಇರುತ್ತದೋ ಎಂದರೆ ೨ ರೂಪವೂ ಉಂಟು. ಅದರಲ್ಲಿ ನೀರು ಜಡವಾದ ರೂಪ, ಅದಕ್ಕಿಂತ ಭಿನ್ನವಾದ ಮತ್ತೊಂದು ಚೇತನ ರೂಪ, ಇವೆರಡೂ ಪರಮಾದರಣೀಯವಾದವು. ಅದರಲ್ಲೂ ತಾರತಮ್ಯವುಂಟು.
ಸಾಮಾನ್ಯವಾಗಿ ನಾವು ಕಾವೇರಿ ಇತ್ಯಾದಿ ಸ್ನಾನ ಮಾಡುವಾಗ ಗಂಗಾಸ್ನಾನ ಮಾಡಿದ ಫಲ ಬರುವುದೆಂದು ತಿಳಿದು ಸ್ನಾನ ಮಾಡುತ್ತೇವೆ. ಆದರೆ ಈ ಕಾವೇರಿಯೇ ಗಂಗೆಯೇ?…. ನಾವು ಕಾಣುವ ಕಾವೇರಿಯಾಗಲೀ, ಯಮುನೆಯಾಗಲೀ, ಗೋದಾವರಿಯಾಗಲಿ, ತುಂಗೆಯಾಗಲೀ ಗಂಗೆಯಲ್ಲ.

How we have to see the rivers?
While doing bath in the river – we should do the chintana as – The river itself is not Ganga, kaveri. It is a jadaatmaka. In the river, there is bhinna roopa i.e.. Chetana roopa of Ganga, Kaveri, etc. There is taratamya also in the river. In the rivers, there is sannidhana of samasta tirthabhimani devategalu. With them, their pathis (husbands), and their wives (in case of male rivers). In them we must do the chintana of Gaanga saannidhya. We must think the ganga devi antargata Bharatiramana mukyapranantargata ksheerabdhishaayi, shrI Lakshmi Narayana. We must do the chintana that the snaana what we are doing is not for us. But it is abhisheka for Lakshmi Ramana. We should do the prokshana of river water in shanka mudra (in shanka there is saaniddhya. Not only, that we don’t have the yogyate to do the snaana for Srihari, only Lakshmi can do that. As such we must do the chintana). Then we must have the regular bath.

ನಾವು ಅನುಸಂಧಾನ ಮಾಡಬೇಕಾದ ವಿಧಾನ –
ಈ ನೀರೇ ಗಂಗೆಯಲ್ಲ, ಅದರಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಇರುತ್ತಾರೆ. ಅವರ ಜೊತೆಗೆ ಅವರ ಪತಿಗಳೂ, ಅವರ ಪತ್ನಿಯರೂ (ಗಂಡು ನದಿಗಳಾದರೆ), ಇದ್ದು, ಅವರೊಳಗೆ ಗಂಗಾ ನದಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಆ ಗಂಗಾದೇವಿಯ ಅಂತರ್ಗತನಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಕ್ಷೀರಾಬ್ಧಿಶಾಯಿ, ಶ್ರೀ ಲಕ್ಷ್ಮೀನಾರಾಯಣನಿಗೆ ನಮಸ್ಕರಿಸಿ, ಈ ಸ್ನಾನ ನಮಗಲ್ಲ, ನಮಗೊಳಗಿರುವ ಲಕ್ಷ್ಮೀರಮಣನಿಗೆ ಅಭಿಷೇಕ ಎಂದು ಅನುಸಂಧಾನ ಮಾಡಿ, ಶಂಖಮುದ್ರೆಯಿಂದ ನೀರನ್ನು ಪ್ರೋಕ್ಷಿಸಿಕೊಂಡು (ಶಂಖದಲ್ಲಿ ಲಕ್ಷ್ಮಿಯ ಸಾನ್ನಿಧ್ಯವಿರುವುದರಿಂದ – ಶಂಖಮುದ್ರೆಯಿಂದ ಪ್ರೋಕ್ಷಿಸಿಕೊಳ್ಳಬೇಕು. ಅಷ್ಠೇ ಅಲ್ಲ ಪರಮಾತ್ಮನಿಗೆ ಸ್ನಾನ ಮಾಡಿಸಲು ನಮಗೆ ಯೋಗ್ಯತೆ ಇಲ್ಲ, ಆದ್ದರಿಂದ ಅಲ್ಲಿ ಲಕ್ಶ್ಮಿಯನ್ನು ಅನುಸಂಧಾನ ಮಾಡಬೇಕು), ನಂತರ ಸ್ನಾನ ಮಾಡಬೇಕು.

We must not spit in rivers, never do malamootra visarjana, never wash our clothes, don’t use soap. Ofcourse some other people may be doing. As they do not know the importance of Rivers, they are doing. If possible, we must also tell them not to do.

ನದಿಯಲ್ಲಿ ಉಗುಳಬಾರದು, ನದಿಯಲ್ಲಿ ಮಲಮೂತ್ರ ವಿಸರ್ಜನ ಮಾಡಬಾರದು, ಬಟ್ಟೆ ಒಗೆಯಬಾರದು, ಸೋಪು ಹಾಕಿಕೊಳ್ಳಬಾರದು. ಬೇರೆಯವರು ಮಾಡುತ್ತಾರಲ್ಲ ಅಂತ ಭಾವಿಸಬೇಡಿ – ಅವರಿಗೆ ಸ್ನಾನದ ಮಹತ್ವ ತಿಳಿದಿರುವುದಿಲ್ಲ, ಅವರು ಮಾಡುತ್ತಾರೆ, ನಾವು ಅವರನ್ನು ಅನುಸರಿಸಬಾರದು. ಸಾಧ್ಯವಾದರೆ ಅವರಿಗೂ ತಿಳಿಹೇಳಬೇಕು.

Before putting our legs in the rivers, we must have first washed our lega outside. First we must have the prokshana. Then enter the river. While doing snaana in the river, we must do the chintana of all the rivers. We must also do the chintana of kshetravaasi devategalu.

ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ಹೊರಗಡೆ ತೊಳೆದುಕೊಂಡು ಬಂದು ಶುಚಿರ್ಭೂತರಾಗಿ, ಒಮ್ಮೆ ನೀರನ್ನು ಕೈಯಿಂದ ತೆಗೆದುಕೊಂಡು ಪ್ರೋಕ್ಷಿಸಿಕೊಂಡು ನಂತರ ನದಿಯಲ್ಲಿ ನಾವು ಸ್ನಾನಕ್ಕೆ ಇಳಿಯಬೇಕು.

ನದಿಯಲ್ಲಿ ಸ್ನಾನ ಮಾಡುವಾಗ ಎಲ್ಲ ನದಿದೇವತೆಗಳನ್ನೂ ಸ್ಮರಿಸಬೇಕು.

ಗಂಗಾಸಿಂಧುಸರಸ್ವತೀಚ ಯಮುನಾ ಗೋದಾವರೀ ನರ್ಮದಾ |
ಕೃಷ್ಣಾಭೀಮರತೀ ಚ ಫಲ್ಘುಸರಯೋ ಶ್ರೀಗಂಡಕೀ ಗೋಮತೀ |
ಕಾವೇರೀ ಕಪಿಲಾಪ್ರಯಾಗವಿನುತಾ ನೇತ್ರಾವತೀತ್ಯಾದಯೋ |
ನದ್ಯ: ಶ್ರೀಹರಿಪಾದಪಂಕಜಭವಾ: ಕುರ್ವಂತು ನೋರ್ಮಂಗಲಂ ||

गंगासिंधू सरस्वती च यमुना गोदावरी नर्मदा ।
कृष्णा भीमरती च फल्घुसरयू श्री गंडकी गोमती ।
कावेरी कपिलाप्रयाग विनता नेत्रावतीत्यादयो
नद्य: श्री हरिपादपंकज भवा: कुर्वंतुनो मंगळं ।

ನಂತರ ಒಮ್ಮೆ ನೀರಿನಲ್ಲಿ ಮುಳುಗಿ; Prokshana mantra
apavitra: pavitrOvaa sarvaavasthaaM gatOpivaa |
ya: smarEt puMDarIkaakShaM sa baahyaabhyaMtarashuchi:|

अपवित्र: पवित्रोवा सर्वावस्थां गतोपिवा ।
य: स्मरेत् पुंडरीकाक्षं स बाह्याभ्यंतरशुचि:।

ಅಪವಿತ್ರ: ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶುಚಿ: |

ಎಂಬ ಮಂತ್ರದಿಂದ ಪ್ರೋಕ್ಷಿಸಿಕೊಳ್ಳ ಬೇಕು.
ಸಾಧ್ಯವಾದರೆ ವಾದಿರಾಜ ಗುರುಸಾರ್ವಭೌಮರ
“ತೀರ್ಥಪ್ರಬಂಧ”ವನ್ನು ಒಮ್ಮೆ ಅಧ್ಯಯನ ಮಾಡಿ ಆ ತೀರ್ಥಕ್ಷೇತ್ರದ ಬಗ್ಯೆ ಮಾಹಿತಿಯನ್ನು ತಿಳಿದುಕೊಂಡು ಅವರು ಹೇಳಿದಂತೆ ಅನುಸಂಧಾನ ಮಾಡಬೇಕು.
***

ಕಾರ್ತಿಕ ಸ್ನಾನ

ಅಶ್ವೀನ ಶುಕ್ಲ ದಶಮೀ, ಅಥವಾ ಏಕಾದಶೀ, ಇಲ್ಲವೇ
ಹುಣ್ಣಿವೆಯಿಂದಾರಂಭಸಿ ಪ್ರತಿದಿನ ತೀರ್ಥಾದಿಗಳಲ್ಲಿ ಒಂದು ತಿಂಗಳ
ವರೆಗೆ ಸ್ನಾನಮಾಡತಕ್ಕದ್ದು. 

ಸೂರ್ಯೋದಯಕ್ಕಿಂತ ಮುಂಚೆ ಎರಡು
ಘಟಿ ಇರುವಾಗ ಸ್ನಾನಮಾಡತಕ್ಕದ್ದು. ಇದಕ್ಕೆ “ಕಾರ್ತಿಕ
ಸ್ನಾನ”ವೆನ್ನುವರು.

ಇದರ ಕ್ರಮ ಹೇಗೆಂದರೆ ವಿಷ್ಟು ಸ್ಮರಣೆ ಮಾಡಿ ದೇಶ
ಕಾಲಗಳನ್ನುಚ್ಚರಿಸಿ “ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ!
ನಮುಸ್ತೇಸ್ತು ಹೃಷಿಕೇಶ ಗ್ರಹಾಣಾರ್ಥುಂ೦ ನಮೋಸ್ತುತೇ” ಹೀಗೆ
ಉಚ್ಚರಿಸಿ ಅರ್ಘವನ್ನು ಕೊಟ್ಟು “ಕಾರ್ತಿಕೇಇಹಂ ಕರಿಷ್ಠಾಮಿ
ಪ್ರಾತ:ಸ್ನಾಸಂ ಜನಾರ್ದನ ಓಪ್ರೀತೃರ್ಥಂತವ ದೇವೇಶ
ದಾಮೋದರವಿನಷ್ಯತು! ಧ್ಯಾತ್ರಾಹಂ ತ್ವಾಂಚ ದೇವೇಶ ಜಲೇಸ್ಮಿನ್‌
ಸ್ನಾತುಮುದ್ಯತಃಚೆತವಪ್ರಸಾದಾತ್ರಾಪಂಮೇ
ದಾಮೋದರ ಎನಶೃತು॥” ಈ ಮಂತ್ರಗಳಿಂದ ಸ್ನಾನಮಾಡಿ ಪುನ:
ಎರಡಾವರ್ತಿ ಅರ್ಘವನ್ನು ಕೊಡತಕ್ಕದ್ದು. 

“ನಿತ್ನೇನೈಮಿತ್ತಾಕೇ ಕೃಷ್ಣ
ಕಾರ್ಷಿಕೇ ಪಾಪನಾಶನೇ। ಗೃಹಾಣಾರ್ಘಂ ಮಯಾದತ್ತಂ ರಾಧಮಾ
ಸಹಿತೋಷಹರೇ॥! ವ್ರತಿನ: ಕಾರ್ತಿಕೇಮಾಪಿ ಸ್ನಾತಸ್ಮ ವಿಧಿವನ್ಮ್ನಮ।
ಗೃಹಣಾರ್ಘಂ ಮಯಾದತ್ತಂ ರಾಧಯಾ ಸಹಿತೋಹರೇ” ಇವೇ ಅರ್ಘ
ಮಂತ್ರಗಳು. ಕುರುಕ್ಷೇತ್ರ, ಗಂಗಾ, ಪುಷ್ಕರ ಮೊದಲಾದ
ತೀರ್ಥವಿಶೇಷಗಳಲ್ಲಿ ಪುಣ್ಮವೂ ವಿಶೇಷವೆಂದರಿಯುವದು. ಇಡೀ
ಕಾರ್ತಿಕ ಮಾಸದಲ್ಲಿ ನಿತ್ಯದಲ್ಲೂ ಸ್ನಾನಮಾಡುವದು,
ಜಿತೇಂದ್ರಿಯನಾಗಿರುವದು, ಜಪದಲ್ಲಾಸಕ್ತನಾಗಿರುವದು,
ಹವಿಷ್ಕಾನ್ನವನ್ನು ಭುಂಜಿಸುವದು. ಹೀಗೆ ವ್ರತಸ್ತನಾದರೆ ಸಮಸ್ತ
ಪಾಪಗಳಿಂದ ಮುಕ್ತನಾಗುತ್ತಾನೆ. ಹೀಗೆ ವಿಶೇಷವಿದೆ.

ಭಾಗೀರಥೀ. ವಿಷ್ಣು, ಸೂರ್ಯ ಇವರನ್ನು ಸ್ಮರಿಸಿ ಜಲವನ್ನು
ಪ್ರವೇಶಿಸತಕ್ಕದ್ದು. ವ್ರತಸ್ತನಾದವನು ನಾಭಿಮಾತ್ರದ ಜಲದಲ್ಲಿ
ಯಥಾವಿಧಿಯಾಗಿ ಸ್ನಾನಮಾಡತಕ್ಕದ್ದು. ನಿತ್ಯದ ಪ್ರಾತಃಸ್ನಾನ ಹಾಗೂ
ಸಂಧ್ಯಾವಂದನಗಳ ನಂತರ ಕಾರ್ತಿಕ ಸ್ನಾನವನ್ನು ಮಾಡತಕ್ಕದ್ದು.
ಯಾಕೆಂದರೆ ಅವುಗಳ ಹೊರತು ಕರ್ಮಾಧಿಕಾರ ಪ್ರ್ರಾಪ್ತವಾಗುವದಿಲ್ಲ.
ಪ್ರಾತಃ ಸಂದ್ಯೆಯು ಸೂರ್ಯೋದಯಕ್ಕೆ ಸಮಾಪ್ತವಾಗುವುದಾದರೂ
ಇಲ್ಲಿ ವಚನ ಬಲದಿಂದ ಉದಯಕ್ಕಿಂತ ಮೊದಲು ಸಂಧ್ಯೆಯನ್ನು
ಮುಗಿಸಿ ಕಾರ್ತೀಕ ಸ್ನಾನವನ್ನುಮಾಡತಕ್ಕದೆಂದು “ನಿರ್ಣಯ
ಸಿಂಧು”ವಿನಲ್ಲಿ ಹೇಳಿದೆ. 

ಆದರೆ ಅನ್ಯ ಗ್ರಂಥಗಳಲ್ಲಿ ಹೀಗೆ
ಹೇಳಿರುವುದು ಕಾಣ ಬರುವುದಿಲ್ಲ. ಇಡೀ ಮಾಸದಲ್ಲಿ ಸ್ನಾನ
ಮಾಡಲಸಮರ್ಥರಾದವರು ಕನಿಷ್ಟ ಮೂರು ದಿನವಾದರೂ ಸ್ನಾನ
ಮಾಡತಕ್ಕದ್ದು…

*ಕಾರ್ತಿಕ ಸ್ನಾನ ಮಂತ್ರ: ಕಾರ್ತಿಕೇಯಂ ಕರಿಷ್ಯಾಮಿ ಪ್ರಾತಃ ಸ್ನಾನಂ ಜನಾರ್ದನ ಪ್ರೀತ್ಯರ್ಥಂ ತವ ದೇವೇಶ ದಾಮೋದರ ಮಯಾ ಸಹ ಧ್ಯಾತ್ವಾಹಂ ತ್ವಾಂ ದೇವೇಶ ಜಲೇಸ್ಮಿನ್ ಸ್ನಾತು ಮುದ್ಯತಃ ತವ ಪ್ರಸಾದಾತ್ ಪಾಪಂ ಮೇ  ದಾಮೋದರ ವಿನಶ್ಯತು.

 *ಆರ್ಘ್ಯ ಮಂತ್ರ: ನಮಃ ಕಮಲನಾಭಾಯ ನಮಸ್ತೆ ಜಲಾಶಾಯಿನೇ ನಮಸ್ತೆಸ್ತು ಋಷಿಕೇಷ ಗೃಹಾಣರ್ಘಂ ನಮೋಸ್ತುತೆ!
ವ್ರತಿನೇ ಕಾರ್ತಿಕ ಮಾಸೇ ಸ್ನಾತಸ್ಯ ವಿಧಿವನ್ಮಮ  ಗ್ರಹಣಾರ್ಘಂ  ಮಯಾದತ್ತಂ ಧನುಜೇಂದ್ರ ನಿಷೂಧನ !! ನಿತ್ಯ ನೈಮಿತ್ತಿಕೇ  ಕೃಷ್ಣ ಕಾರ್ತಿಕೇ ಪಾಪನಾಶನೇ ಗೃಹಾಣರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ!!*

 ಸಂಕಲ್ಪ: ಅದ್ಯದಿನ ಮಾರಭ್ಯ  ಮಾಸ ಪರ್ಯಂತಂ ಕಾರ್ತಿಕ ಸ್ನಾನಂ  ಜ್ಞಾನ ಭಕ್ತಿ ವೈರಾಗ್ಯ ಸಿದ್ಧ್ಯರ್ಥಂ  ಭಾರತೀರಮಣ ಮುಖ್ಯಪ್ರಾಣ ಅಂತರ್ಗತ ಕಾರ್ತಿಕ ರಾಧಾ ದಾಮೋದರ ಅಭಿನ್ನ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಅಹಂ ಆಚರಿಷ್ಯೇ!!

* ದಾಮೋದರ ಸ್ತೋತ್ರವನ್ನು  ಹೇಳಿ ಮಂಗಳಾರತಿಯನ್ನು ಮಾಡಿ ನಂತರ ಸ್ನಾನವನ್ನು ಮಾಡಬೇಕು.

* ಶ್ರೀತುಳಸಿ ವೃಂದಾವನದ ಮುಂದೆ ನಕ್ಷತ್ರ ದೀಪಾರಾಧನೆ ಮಾಡುವುದು.

 * ಸಾಧಕರ ಸಾಧನೆಗೆ ಪಂಚರಾತ್ರ ಸಂಹಿತೆಯಿಂದ  ಒಂದು ಸ್ತೋತ್ರ ಬೆಳಗ್ಗೆ ಎದ್ದ ಕೂಡಲೇ ಹೇಳಲು
ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಭಗವನ್ನಾಮಕೀರ್ತನಂ! ಸ್ತೋತ್ರೇಣ ತೋಷಯೇದ್ ವಿದ್ವಾನ್ ಗುರುಮ್ ಸಂಸ್ಮತ್ಯ ಸಾಧಕಃ ! ವಾಸುದೇವಾಯ ದೇವಾಯ ಸಮಗ್ರ ಗುಣ ಮೂರ್ತಯೇ ಸಂಕರ್ಷಣ ನಮಸ್ತೆಸ್ತು ವಿಶ್ವ ಪಾವನ ಮೂರ್ತಯೇ ಅನಿರುದ್ಧ ನಮಸ್ತೆಸ್ತು ಜಗತ್ಕಾರಣ ಮೂರ್ತಯೇ ಕೇಶವಾಯ ನಮಸ್ತೆಸ್ತು ತತೋ ನಾರಾಯಣಾಯ ತೇ ಮಾಧವಾಯ ನಮಸ್ತೆಸ್ತು ಗೋವಿಂದಾಯ ನಮೋ ನಮಃ ವಿಶ್ವಾತ್ಮನ ನಮಸ್ತುಭ್ಯಂ ನಮೋಸ್ತು ಮಧುಸೂದನ ತ್ರಿವಿಕ್ರಮ ನಮಸ್ತೆಸ್ತು ಹೃಷಿಕೇಶಾಯ ತೇ ನಮಃ ನಮಸ್ತೆ ಪದ್ಮನಾಭಯ್ಯ ನಮೋ ದಾಮೋದರ ನಮಸ್ತೆ ಮತ್ಸ ರೂಪಾಯ ನಮಸ್ತೆ ಮೂರ್ತಯೇ ವಾರಾಹಯ ನಮಸ್ತೆಸ್ತು ನಾರಸಿಂಹಾಯ ತೇ ನಮಃ ವಾಮನ ನಮಸ್ತೆಸ್ತು ನಮೋ ರಾಮ ತ್ರಯಾಯ ಚ ಗೋವಿಂದಾಯ ನಮಸ್ತೆಸ್ತು ಹಯಗ್ರೀವಾಯ ತೇ ನಮಃ ಏವಂಸ್ತುತ್ವಾ ವಿಧಾನೇನ ತೀರದೇಶಂ ಸಮಾಸ್ರಯೇತ್ !
***

ಕಾರ್ತೀಕ ಸ್ನಾನ ಸಂಕಲ್ಪ – ಶ್ರೀರಂಗಪಟ್ಟಣದಲ್ಲಿ

ಆಚಮನ  ಪ್ರಾಣಯಾಮಗಳನ್ನು  ಮಾಡಿ ಸ್ನಾನ ಸಂಕಲ್ಪ ವನ್ನು  ಮಾಡುವುದು.

ಶುಭೇ ಶೋಭನೇ ಮಹೂರ್ತೇ-ಆದ್ಯಬ್ರಹ್ಮಣ: ದ್ವಿತೀಯ ಪರಾರ್ಧೇ-ಶಾಲಿವಾಹನಶಕೆ,ಬೌದ್ಧವತಾರೆ -ರಾಮಕ್ಷೆತ್ರೇ-ಅಸ್ಮಿನ್  ವರ್ತಮಾನೆ -ಸಂವತ್ಸರೇಋತೌ-ಮಾಸೇ-ಪಕ್ಷೆ -ತಿಥೌ-ವಾಸರೇ-ನಕ್ಷತ್ರೇ-ಯೋಗೆ-ಕರಣೆ-ಏವಂ ಗುಣವಿಶಿಷ್ಟಾಯಾo-ಶುಭ ತಿಥೌ-ಸಾರ್ಧತ್ರಿಕೋಟಿ  ಸಮಸ್ತ ತೀರ್ಥಾಭಿಮಾನಿ ದೇವತಾ ಸನ್ನಿಧೌ,ಸಾಲಿಗ್ರಾಮ ,ಚಕ್ರಂಕಿತ -ವಿಷ್ಣು-ವೈಷ್ಣವ-ಗೊ-ತುಳಸಿ -ವೃಂದಾವನ ಸನ್ನಿಧೌ-ಶ್ರೀಭಾರತೀರಮಣಮುಖ್ಯಪ್ರಾಣoತರ್ಗತ  ಶ್ರೀತುಲಸೀ ರಾಧಸಮೇತ ಮಾಸನಿಯಾಮಕ ಕಾರ್ತಿಕದಾಮೋದರ ಫ್ರೇರಣಯಾ  ಶ್ರೀಕಾರ್ತೀಕದಾಮೋದರಪ್ರೀತ್ಯಾರ್ಥಂ  ಕಾರ್ತೀಕಸ್ನಾನಮಹಂ ಕರಿಷ್ಯೇ ಎಂದು ಸಂಕಲ್ಪಮಾಡಬೇಕು.

praNamasyaa….. shrI ………… saMvatsarE, ………. AyaNE, ……….Rutou…….., maasE, …….. pakShE, ………..tithou, , ….. vaasarE, shrI bhaaratIramaNa muKyapraaNaaMtargata shrI lakShmI narasiMha/

vEMkaTEsha prEraNaya, ……prItyarthaM, sakala gaMgaadi tIrthaabhimaani sannidhou, shrI raMganaatha sannidhou, ashwattha sannidhou, kaartIka tulaamaasa prayukta gaMgaasnaanamah

aM kariShyE,

प्रणमस्या….. श्री ………… संवत्सरे, ………. आयणे, ……….ऋतौ…….., मासे, …….. पक्षे, ………..तिथौ, , ….. वासरे, श्री भारतीरमण मुख्यप्राणांतर्गत श्री लक्ष्मी नरसिंह/वेंकटेश प्रेरणय, ……प्रीत्यर्थं, सकल गंगादि तीर्थाभिमानि सन्निधौ, श्री रंगनाथ सन्निधौ, अश्वत्थ सन्निधौ, कार्तीक तुलामास प्रयुक्त गंगास्नानमहं करिष्ये

ಪ್ರಣಮಸ್ಯ…………………………..ಶ್ರೀ ...............ನಾಮಸಂವತ್ಸರೇ, ದಕ್ಷಿಣಾಯಣೇ, ಶರದೃತು, ಕಾರ್ತೀಕಮಾಸೇ,………ಪಕ್ಷೇ……ತಿಥೌ, …….ವಾಸರೇ, ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೇರಣೆಯ,……….ಪ್ರೀತ್ಯರ್ಥಂ,ಸಕಲ ಗಂಗಾದಿತೀರ್ಥಾಭಿಮಾನಿ ಸನ್ನಿಧೌ, ಶ್ರೀರಂಗನಾಥ ಸನ್ನಿಧೌ, ಅಶ್ವತ್ಥ ಸನ್ನಿಧೌ, ಕಾರ್ತೀಕ ತುಲಾಮಾಸ ಪ್ರಯುಕ್ತ ಗಂಗಾಸ್ನಾನಮಹಂ ಕರಿಷ್ಯೇ.

ಕಾರ್ತೀಕ ಸ್ನಾನ ಮಂತ್ರಕಾರ್ತಿಕೇಹಂ ಕರಿಷ್ಯಾಮಿ ಪ್ರಾತಸ್ನಾನಂ ಜನಾರ್ದನ,

ಪ್ರೀತ್ಯರ್ಥಂ ತವ ದೇವೇಶ ದಾಮೋದರ ತ್ವಯಾ ಸಹ |
ಧ್ಯಾತ್ವಾಹಂ ತ್ವಾಂಚ ದೇವೇಶ ಜಲೇಸ್ಮಿನ್ ಸ್ನಾತುಮುದ್ಯತ
ತವ ಪ್ರಸಾದಾತ್ ಪಾಪಂ ಮೇ ದಾಮೋದರ ವಿನಶ್ಯತು |

कार्तिकेहं करिष्यामि प्रातस्नानं जनार्दन,
प्रीत्यर्थं तव देवेश दामोदर त्वया सह ।
ध्यात्वाहं त्वांच देवेश जलेस्मिन् स्नातुमुद्यत
तव प्रसादात् पापं मे दामोदर विनश्यतु ।

ಅರ್ಘ್ಯಮಂತ್ರ

ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ |
ನಮಸ್ತೇಸ್ತು ಹೃಷೀಕೇಶ ಗೃಹಾಣಾರ್ಘ್ಯಂ ನಮೋಸ್ತುತೇ |
ವ್ರತಿನ: ಕಾರ್ತಿಕೇ ಮಾಸಿ ಸ್ನಾತಸ್ಯ ವಿಧಿವನ್ಮಮ |
ಗೃಹಾಣಾರ್ಘ್ಯಂ ಮಯಾದತ್ತಂ ದನುಜೇಂದ್ರನಿಷೂದನ |
ನಿತ್ಯನೈಮಿತ್ತಿಕೇ ಕೃಷ್ಣ ಕಾರ್ತಿಕೇ ಪಾಪನಾಶನೇ |
ಗೃಹಾಣಾರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ ||

नम: कमलनाथाय नमस्ते जलशायिने ।
नमस्तेस्तु हृशीकेश गृहाणार्घ्यम् नमोस्तु ते ।
व्रतिन: कार्तिके मासि स्नातस्य विधिवन्मम ।
गृहाणार्घ्यम् मया दत्तं दनुजेंद्र निशूदन ।
नित्य नैमित्तिके कृष्ण कार्तिके पाप नाशिने ।
गृहाणर्घ्यम् मया दत्तं राधया सहितो हरे ।

ಕಾವೇರಿ ನದಿ ಸ್ತೋತ್ರ –

“ಓಮ್ ಕಾವೇರ್ಯೈ ನಮ:”
“ಓಮ್ ಅಗಸ್ತ್ಯ ಪತ್ನ್ಯೈ ನಮ:”
“ಓಮ್ ಸರ್ವಪಾವನ್ಯೈ ನಮ:”
“ಓಮ್ ಮಹಾ ಪುಣ್ಯಾಯೈ ನಮ:”
“ಓಮ್ ಸ್ನಾನ ಮಾತ್ರೇಣ ಸರ್ವ
ಪಾಪ ಪ್ರಸಮನ್ಯೈ ನಮ:”
“ಓಮ್ ಮೋಕ್ಷದಾತ್ರ್ಯೈ ನಮ:”

(This is as per the directions of paramapoojya, prata: smaraNIya srI dEvEmdra tirtha sripadangalavaru)
**********

parihara on 
karteeka pournima read---> KARTEEKA POURNIMA PARIHARA

********

ಮನೆಯಲ್ಲಿ ಕಾರ್ತೀಕಸ್ನಾನ
ಸಂಕಲ್ಪ 
ಆಚಮನ  ಪ್ರಾಣಯಾಮಗಳನ್ನು  ಮಾಡಿ ಸ್ನಾನ ಸಂಕಲ್ಪ ವನ್ನು  ಮಾಡುವುದು.

ಶುಭೇ ಶೋಭನೇ ಮಹೂರ್ತೇ-ಆದ್ಯಬ್ರಹ್ಮಣ: ದ್ವಿತೀಯ ಪರಾರ್ಧೇ-ಶಾಲಿವಾಹನಶಕೆ,ಬೌದ್ಧವತಾರೆ -ರಾಮಕ್ಷೆತ್ರೇ-ಅಸ್ಮಿನ್  ವರ್ತಮಾನೆ -ಸಂವತ್ಸರೇಋತೌ-ಮಾಸೇ-ಪಕ್ಷೆ -ತಿಥೌ-ವಾಸರೇ-ನಕ್ಷತ್ರೇ-ಯೋಗೆ-ಕರಣೆ-ಏವಂ ಗುಣವಿಶಿಷ್ಟಾಯಾo-ಶುಭ ತಿಥೌ-ಸಾರ್ಧತ್ರಿಕೋಟಿ  ಸಮಸ್ತ ತೀರ್ಥಾಭಿಮಾನಿ ದೇವತಾ ಸನ್ನಿಧೌ,ಸಾಲಿಗ್ರಾಮ ,ಚಕ್ರಂಕಿತ -ವಿಷ್ಣು-ವೈಷ್ಣವ-ಗೊ-ತುಳಸಿ -ವೃಂದಾವನ ಸನ್ನಿಧೌ-ಶ್ರೀಭಾರತೀರಮಣಮುಖ್ಯಪ್ರಾಣoತರ್ಗತ  ಶ್ರೀತುಲಸೀ ರಾಧಸಮೇತ ಮಾಸನಿಯಾಮಕ ಕಾರ್ತಿಕದಾಮೋದರ ಫ್ರೇರಣಯಾ  ಶ್ರೀಕಾರ್ತೀಕದಾಮೋದರಪ್ರೀತ್ಯಾರ್ಥಂ  ಕಾರ್ತೀಕಸ್ನಾನಮಹಂ ಕರಿಷ್ಯೇ ಎಂದು ಸಂಕಲ್ಪಮಾಡಬೇಕು.

ಈ ಕೆಳಗಿನ ಎರಡು ಮಂತ್ರಗಳನ್ನು ಹೇಳಿಕೂಂಡು ಸ್ನಾನ ಮಾಡಬೇಕು

ಕಾರ್ತಿಕೇಹಂ ಕರಿಷ್ಯಾಮಿ ಪ್ರಾತಃ ಸ್ನಾನಂ ಜನರ್ಧನ |
ಪ್ರೀತ್ಯರ್ಥಂ  ತವ ದೇವೇಶ ದಾಮೋದರ ಮಯಾ ಸಹ ||

ಧ್ಯಾತ್ವಾಹಂ ತ್ವಾಂ ಚ ದೇವೇಶ ಜಲೇಸ್ಮಿನ್ ಸ್ನಾತುಮುದ್ಯತಃ  |
ತವಪ್ರಸಾದಾತ್ ಪಾಪಂ ಮೇ ದಾಮೋದರ ವಿನಶ್ಯತು||

ಸ್ನಾನ ನಂತರ ಈ ಕೆಳಗಿನ ಎರಡು ಮಂತ್ರಗಳಿಂದ ಅರ್ಘ್ಯ ಕೊಡಬೇಕು

ನಿತ್ಯನೈಮಿತ್ತಿಕೇ ಕೃಷ್ಣ  ಕಾರ್ತೀಕೇ  ಪಾಪನಾಶನೇ |
ಗೃಹಾಣಾರ್ಘ್ಯಂ   ಮಯಾ ದತ್ತಂ ರಾಧಯಾ ಸಹಿತೋ ಹರೇ l|

ವೃತಿನಃ ಕಾರ್ತಿಕೇ ಮಾಸಿ  ಸ್ನಾತಸ್ಯ ವಿಧಿವನ್ಮಮ l
ಗೃಹಾಣಾರ್ಘ್ಯಂ ಮಯಾ ದತ್ತಂ  ರಾಧಯಾ ಸಹಿತೋ ಹರೇ  ||


ಸೂಚನೆ-ಮನೆಯಲ್ಲಿ ಕಾರ್ತೀಕಸ್ನಾನ ಮಾಡುವವರು ಈ ಸಂಕ್ಷಿಪ್ತ ವಿಧಿಯನ್ನು  ಆಚರಿಸಿ.
*********


ಹುಣ್ಣಿಮೆ ಯಿಂದ ಆರಂಭಿಸಿ  ಪ್ರತಿದಿನ ಒಂದು ತಿಂಗಳವರೆಗೆ ಸೂರ್ಯೋದಯಕ್ಕಿಂತ  ಮೊದಲು ಸ್ನಾನ ಮಾಡತಕ್ಕದ್ದು ...

ಕಾರ್ತೀಕಸ್ನಾನ (ಸಂಕಲ್ಪ)ವಿಧಿ.... 2nd  version

ಆಚಮನ ಪ್ರಾಣಯಾಮಗಳನ್ನು ಮಾಡಿ ಸ್ನಾನ ಸಂಕಲ್ಪ ವನ್ನು ಮಾಡುವುದು

ಶುಭೇ ಶೋಭನೇ ಮಹೂರ್ತೇ-ಆದ್ಯಬ್ರಹ್ಮಣ: ದ್ವಿತೀಯ ಪರಾರ್ಧೇ-ಶಾಲಿವಾಹನಶಕೆ,ಬೌದ್ಧವತಾರೆ -ರಾಮಕ್ಷೆತ್ರೇ-ಅಸ್ಮಿನ್ ವರ್ತಮಾನೆ -ಸಂವತ್ಸರೇಋತೌ-ಮಾಸೇ-ಪಕ್ಷೆ -ತಿಥೌ-ವಾಸರೇ-ನಕ್ಷತ್ರೇ-ಯೋಗೆ-ಕರಣೆ-ಏವಂ ಗುಣವಿಶಿಷ್ಟಾಯಾo-ಶುಭ ತಿಥೌ-ಸಾರ್ಧತ್ರಿಕೋಟಿ ಸಮಸ್ತ ತೀರ್ಥಾಭಿಮಾನಿ ದೇವತಾ ಸನ್ನಿಧೌ,ಸಾಲಿಗ್ರಾಮ ,ಚಕ್ರಂಕಿತ -ವಿಷ್ಣು-ವೈಷ್ಣವ-ಗೊ-ತುಳಸಿ -ವೃಂದಾವನ ಸನ್ನಿಧೌ-ಶ್ರೀಭಾರತೀರಮಣಮುಖ್ಯಪ್ರಾಣoತರ್ಗತ ಶ್ರೀತುಲಸೀ ರಾಧಸಮೇತ ಮಾಸನಿಯಾಮಕ ಕಾರ್ತಿಕದಾಮೋದರ ಫ್ರೇರಣಯಾ ಶ್ರೀಕಾರ್ತೀಕದಾಮೋದರಪ್ರೀತ್ಯಾರ್ಥಂ ಕಾರ್ತೀಕಸ್ನಾನಮಹಂ ಕರಿಷ್ಯೇ ಎಂದು ಸಂಕಲ್ಪಮಾಡಬೇಕು.

ಈ ಕೆಳಗಿನ ಎರಡು ಮಂತ್ರಗಳನ್ನು ಹೇಳಿಕೂಂಡು ಸ್ನಾನ ಮಾಡಬೇಕು

ಕಾರ್ತಿಕೇಹಂ ಕರಿಷ್ಯಾಮಿ ಪ್ರಾತಃ ಸ್ನಾನಂ ಜನರ್ಧನ |

ಪ್ರೀತ್ಯರ್ಥಂ ತವ ದೇವೇಶ ದಾಮೋದರ ಮಯಾ ಸಹ ||

ಧ್ಯಾತ್ವಾಹಂ ತ್ವಾಂ ಚ ದೇವೇಶ ಜಲೇಸ್ಮಿನ್ ಸ್ನಾತುಮುದ್ಯತಃ |

ತವಪ್ರಸಾದಾತ್ ಪಾಪಂ ಮೇ ದಾಮೋದರ ವಿನಶ್ಯತು||

ಸ್ನಾನ ನಂತರ ಈ ಕೆಳಗಿನ ಎರಡು ಮಂತ್ರಗಳಿಂದ ಅರ್ಘ್ಯ ಕೊಡಬೇಕು

ನಿತ್ಯನೈಮಿತ್ತಿಕೇ ಕೃಷ್ಣ ಕಾರ್ತೀಕೇ ಪಾಪನಾಶನೇ |

ಗೃಹಾಣಾರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ l|

ವೃತಿನಃ ಕಾರ್ತಿಕೇ ಮಾಸಿ ಸ್ನಾತಸ್ಯ ವಿಧಿವನ್ಮಮ l

ಗೃಹಾಣಾರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ ||

ಸೂಚನೆ-ಮನೆಯಲ್ಲಿ ಕಾರ್ತೀಕಸ್ನಾನ ಮಾಡುವವರು ಈ ಸಂಕ್ಷಿಪ್ತ ವಿಧಿಯನ್ನು ಆಚರಿಸಿ.
|| ಶ್ರೀಕೃಷ್ಣಾರ್ಪಣ ಮಸ್ತು ||

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
*********

ಕಾರ್ತಿಕಮಾಸದ ಮಹತ್ವ ಸಂಚಿಕೆ-1

ಕಾರ್ತೀಕಮಾಸದ ಆಚರಣೆಯ  ಪರಿಚಯ

ಕಾರ್ತಿಕ ಮಾಸವು ಶ್ರೀಹರಿಗೆ ಅತಿಪ್ರಿಯವಾದ ಮಾಸವೆನಿಸಿದೆ ಕಾರ್ತೀಕಮಾಸಕ್ಕೆ ಶ್ರೀದಾಮೋದರರೂಪಿ ಪರಮಾತ್ಮನು ನಿಯಾಮಕನು  ಶ್ರೀಹರಿಯ ಪ್ರೀತಿಯನ್ನುದ್ದೇಶಿಸಿ ಈಮಾಸದಲ್ಲಿ ಮಾಡುವ ಸ್ನಾನ ದಾನ ವ್ರತ ಇತ್ಯಾದಿ ಗಳು ಅಕ್ಷಯ ಫಲವನ್ನು ನಿಡುತ್ತವೆ ..ಅಂತೆಯೇ 

ನ ಕಾರ್ತಿಕ ಸಮೋ ಮಾಸೋ ನ ಕೃತೇನ ಸಮಂ ಯುಗಂ |
ನ ವೇದಸದೃಶಂ ಶಾಸ್ತ್ರಂ ನ ತೀರ್ಥಂ ಗಂಗಯಾ ಸಮಮ್ ||

ಸ್ಕಂದಪುರಾಣ

ಕಾರ್ತೀಕಮಾಸಕ್ಕೆ ಸಮನಾದ ಮಾಸವಿಲ್ಲ .ಕೃತಯುಗಕ್ಕೆ ಸಮಾನವಾದ ಯುಗವಿಲ್ಲ ವೇದಗಳಿಗೆ ಸಮಾನವಾದ ಶಾಸ್ತ್ರವಿಲ್ಲ .ಗಂಗಾನದಿಗೆ ಸಮಾನವಾದ ತೀರ್ಥವಿಲ್ಲ .

ಈ ಕಾರ್ತೀಕಮಾಸದಲ್ಲಿ ಯಾವುದೇ ಪುಣ್ಯಕಾರ್ಯಮಾಡಿದರೂ ವಿಶಿಷ್ಟವಾದ ಪುಣ್ಯ ಲಭಿಸುತ್ತದೆ ಕಾರ್ತೀಕಮಾಸದಲ್ಲಿ ಪ್ರಾತಃಸ್ನಾನ , ದೀಪದಾನ ,ಭಗವಧ್ಯಾನ ,ದೀಪೋತ್ಸವ, ನಾಮಸಂಕಿರ್ತನೆ , ಪುರಾಣಶ್ರವಣ ,ತುಲಸೀವೃಕ್ಷ ಬೆಳೆಸುವುದು ,ನೀರುಹಾಕುವುದು ಧಾತ್ರೀ(ನೆಲ್ಲಿ)ವೃಕ್ಷದ ಪೂಜೆ ಮುಂತಾದ ಕಾರ್ಯಗಳನ್ನು ನಿಷ್ಕಾಮ ಬುದ್ಧಿ ಯಿಂದ ಭಗವಂತನ ಪ್ರೀತ್ಯರ್ಥವಾಗಿ ಮಾಡಬೇಕು.

ಕಾರ್ತಿಕಮಾಸದಲ್ಲಿ ಭಗವದ್ಗೀತೆ ಹಾಗೂ ಭಾಗವತಗ್ರಂಥಗಳ ಶ್ರವಣ ಪಠಣ ಪಾರಾಯಣ ಮಾಡಬೇಕು.

ಗೀತಾಪಾಠಂ ತು ಯಃ ಕುರ್ಯಾತ್ ಕಾರ್ತೀಕೇ ವಿಷ್ಣುವಲ್ಲಭೇ |
ತಸ್ಯಪುಣ್ಯಫಲಂ ವಕ್ತುಂ ನಾಲಂ ವರ್ಷಶತೈರಪಿ |

ಶ್ರೀಮದ್ ಭಾಗವತಸ್ಯಪಿ ಶ್ರವಣಂ ಯಃ ಸಮಾಚರೇತ್
ಸರ್ವಪಾಪ ವಿನಿರ್ಮುಕ್ತ ಪರಂ ನಿರ್ವಾಣಮೃಚ್ಛತಿ ||

ಗೀತಾಪಾಠ ಪಠಣಾದಿಗಳನ್ನು ಕಾರ್ತಿಕ ಮಾಸದಲ್ಲಿ ಯಾರು ಮಾಡುವರೋ ಅವರಪುಣ್ಯದ ಫಲವನ್ನು ನೂರುವರಷಗಳವರೆಗೆ ಹೇಳಿದರೂ ಸಾಲದು ಮತ್ತು ಶ್ರೀಮದ್ ಭಾಗವತದ ಶ್ರವಣ ಯಾರು ಮಾಡುವರೋ ಅವರು ಎಲ್ಲ ಪಾಪಗಳಿಂದ ಮುಕ್ತರಾಗಿ ಸದ್ಗತಿಭಾಗಿಯಾಗುತ್ತಾರೆ .

ಕಾರ್ತಿಕಮಾಸದ ಶುಕ್ಲಪಕ್ಷದ ಕೂನೆಯ ಮೂರು ತಿಥಿಗಳು ತ್ರಯೋದಶಿ ,ಚತುರ್ದಶೀ ,ಪೌರ್ಣಿಮೆ ಇವು ಮೂರು ಲೋಕಕ್ಕೆ ಕಲ್ಯಾಣ ಕಾರಕವಾಗಿವೆ ಇವುಗಳಿಗೆ ಅಂತ್ಯಪುಷ್ಕರಿಣೀ ಎಂದು ಹೆಸರು .ಪೂರ್ತಿ ಒಂದು ತಿಂಗಳು ಕಾರ್ತೀಕ ಸ್ನಾನ ಮಾಡಲಾಗದಿದ್ದರೂ  ಈ ಮೂರುದಿನಗಳಲ್ಲಿ ಪ್ರಾತಃಸ್ನಾನ ಮಾಡಿದರೆ ಕಾರ್ತೀಕವ್ರತದ ಪುಣ್ಯಕ್ಕೆ ಭಾಗಿಯಾಗುತ್ತಾರೆ.
*******

ಕಾರ್ತೀಕ ಮಾಸದ ಮಹತ್ವ ಸಂಚಿಕೆ- 3

ಉತ್ಥಾನ ದ್ವಾದಶಿ ಮಹತ್ವ ಮತ್ತು ತುಲಸೀವಿವಾಹವಿಧಿ

ಚಾತುರ್ಮಾಸ್ಯದಲ್ಲಿ ಆಷಾಢಶುಕ್ಲ ಏಕಾದಶಿಯoದು ಮಲಗಿದಂತೆ ನಟಿಸಿದ ಭಗವಂತನು ಭಾದ್ರಪದ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಮಗ್ಗಲು ಬದಲಿಸುವನು.ಕಾರ್ತೀಕ ಮಾಸದ ಶುಕ್ಲಪಕ್ಷದ ದ್ವಾದಶಿ ಯಂದು ಭಗವಂತನು ಏಳುವನು ಇದನ್ನೇ ಉತ್ಥಾನದ್ವಾದಶೀ ಎಂದು ಕರೆಯುವರು ದ್ವಿದಳವ್ರತ ಮತ್ತು ಚಾತುರ್ಮಾಸ್ಯದ ಸಮಾಪ್ತಿಯು ಇಂದೇ.

ಪ್ರಭೋಧಿನೀ ದ್ವಾದಶೀ ಮಹಾತ್ಮೇ

ಶುಕ್ಲಕಾರ್ತೀಕಮಾಸಸ್ಯ  ದ್ವಾದಶ್ಯಾo ಪರಮೋತ್ಸವಂ
ಪ್ರಾತರಾರಭ್ಯ ಯಃ ಕುರ್ಯಾತ್ ಸ್ನಾನದಾನದಿಕಂ ತಥಾ |
ದ್ವಾದಶೀ ಪುಣ್ಯದಾ ಪ್ರೋಕ್ತಾ ಸರ್ವಪಾಪೌಘನಾಶಿನೀ ||

ಪ್ರಭೋಧಿನಿ ದ್ವಾದಶಿಯಂದು ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಶುದ್ಧವಾದ ವಸ್ತ್ರವನ್ನು ಧರಿಸಿ ನಂತರ ನಿತ್ಯ ನೈಮಿತ್ತಿಕ ಕಾರ್ಯಗಳನ್ನು ಮುಗಿಸಿ ದಾಮೋದರನನ್ನು ನಾನಾವಿಧ ಪುಷ್ಪ ತುಲಸೀ ಧಾತ್ರೀ ಇವುಗಳಿoದ ಪೂಜಿಸಬೇಕು.ಧಾತ್ರೀ ದೀಪಗಳನ್ನು ಬೆಳಗಬೇಕು ನಾನಾವಿಧ ಭಕ್ಷ್ಯಗಳ ಜೊತೆ ಸೂಪ(ತೊವ್ವೆಯನ್ನು)ವನ್ನು ಮಾಡಿ ನಿವೇದಿಸಬೇಕು.

ಯಸ್ತಸ್ಯ ಸೂಪನೈವೇದ್ಯಂ ನ ದದಾತಿ ನರಾಧಮಃ
ನರಕೇ ನಿಯತಂ ಪಾಪಃ ಭವತೀತ್ಯನುಶುಶ್ರಮ  ||

ಉತ್ಥಾನ ದ್ವಾದಶಿಯಂದು ಬ್ರಾಹ್ಮಣಭೋಜನವನ್ನು ಮಾಡಿಸಬೇಕು. ಧಾತ್ರಿಯ ನೆರಳಿನಲ್ಲಿ ಯಾರು ಕಾರ್ತೀಕ ದಾಮೋದರನನ್ನು ಪೂಜಿಸುರೋ ಅವನ ಪುಣ್ಯಕ್ಕೆ ಇತಿ ಮಿತಿಯಿಲ್ಲ ಕಾರ್ತೀಕದಲ್ಲಿ ಧಾತ್ರಿಯ ಹಾಗೂ ತುಲಸಿಯ ಮಹಿಮೆಯನ್ನು ಶ್ರವಣ ಮಾಡಿದರೊ .ಮಹಿಮೆಯನ್ನು ವರ್ಣಿಸಿದರೊ ಸಂಸಾರದಿoದ ಮುಕ್ತಿ.ವಿಷ್ಣುವಿಗೇ ಧಾತ್ರೀ ಹಾಗೂ ತುಲಸಿಯು ಅತ್ಯoತ ಪ್ರೀತಿಕರಗಳಾಗಿವೆ.

ಉತ್ತಿಷ್ಠೋತಿಷ್ಠ ಗೋವಿoದ ತ್ಯಜ ನಿದ್ರಾಂ ಜಗತ್ಪತೇ  |
ತ್ವಯಿ ಸೂಪ್ತೇ ಜಗನ್ನಾಥ ಜಗತ್ಸುಪ್ತಂ ಭವೇದಿದಂ |
ಉತ್ಥಿತೇ ಸರ್ವಮುತ್ತಿಷ್ಥೇತ್ ಉತ್ತಿಷ್ಠೋತ್ತಿಷ್ಠ ಮಾಧವ. ||

ಇಯಂ ತು ದ್ವಾದಶೀದೇವ ಪ್ರಭೋದಾರ್ಥಂ ವಿನಿರ್ಮೀತಾ
ತ್ವಯೈವ ಸರ್ವಲೋಕಾನಂ ಹಿತಾರ್ಥಂ ಶೇಷಶಾಯಿನಾ ||

ಹೀಗೆ ಪರಮಾತ್ಮನನ್ನು ಪ್ರಾರ್ಥಿಸಿ ಅರ್ಘ್ಯವನ್ನು ಕೂಡಬೇಕು  ಇದಂ ವಿಷ್ಣುರ್ವಿಚಕ್ರಮೆ ಎಂದು ವಿಷ್ಣುಸೂಕ್ತವನ್ನು ಪಠಿಸಿ ಭಗವಂತನನ್ನು ಏಳಲು ಪ್ರಾರ್ಥಿಸಬೇಕು.

ತುಲಸೀ ವಿವಾಹವಿಧಿ

ಉತ್ಥಾನದ್ವಾದಶಿಯಂದು ಸಂಜೆ ವೃoದಾವನದಲ್ಲಿ ತುಲಸೀ ಹಾಗೂ ದಾಮೋದರನ ವಿವಾಹೊತ್ಸವವನ್ನು ಮಾಡಬೇಕು.
ಮಹಾರಾಜೋಪಚಾರವನ್ನು ಮಾಡಬೇಕು. 

ದ್ವಾದಶ್ಯಾಂ ಕಾರ್ತಿಕೇಮಾಸೀ ರಾತ್ರೌ ವೃoದಾವನೇ ಶುಭೇ ಪೂಜಯೇತ್

ತುಲಸೀ ವಿವಾಹ ಸಂಕಲ್ಪ

ಶುಭತಿಥೌ-ಭಾರತೀರಮಣ

ಮುಖ್ಯಪ್ರಾಣಾಂತರ್ಗತ

ಶ್ರೀಕಾರ್ತೀಕ ದಾಮೋದರ ಫ್ರೆರಣಯಾ ಪ್ರೀತ್ಯರ್ಥಂ ಪ್ರಭೋಧೋತ್ಸವಂಂ ತಥಾ ತುಲಸೀ ದಾಮೋದರ ವಿವಾಹo ಚ ಕರಿಷ್ಯೇ

ಹೀಗೆ ಸಂಕಲ್ಪಿಸಿ ದಾಮೋದರರೂಪಿ ಪರಮಾತ್ಮನಿಗೆ  ಪುರುಷಸೂಕ್ತದಿoದ ಷೋಡಷೋಪಚಾರಪೂಜೆಯನ್ನು  ಮಾಡಬೇಕು  ಹಾಗೆಯೇ ಶ್ರೀಸೂಕ್ತದಿಂದ ತುಲಸಿಗೆ ಷೋಡಶೋಪಚಾರಪೂಜೆಯನ್ನು ಮಾಡಬೇಕು.

ಈ ದಿನ ಪ್ರಾತಃಕಾಲದಲ್ಲಿ ಭಗವಂತನಿಗೆ ವಿವಾಹಾoಗಭೂತವಾದ ಅಭ್ಯಂಜನವನ್ನು ಮಾಡಬೇಕು. ಹನುಮಂತದೇವರು ಭಗವಂತನ ಕೈಹಿಡಿದು ಕರೆತಂದು ಪಾದುಕೆಗಳನ್ನು ನೀಡುವರುದ್ರದೇವರು ವೇತ್ರದಂಡವನ್ನು ಹಿಡಿದು ಮುoದೆ ನಿಲ್ಲುವನು. ಸೂರ್ಯ ಚಂದ್ರರು ದೀಪಗಳನ್ನು ಹಿಡಿಯುವರು ಶೇಷನು ದಾರಿಯಲ್ಲಿ ಮರಳುಗಳನ್ನು ದೂರಮಾಡುವನು.

ರಮಾದೇವಿಯು ಭಗವಂತನಿಗೆ ಸುಗಂಧ ತೈಲವನ್ನು ಹಚ್ಚಿ .ಮರ್ಧನಮಾಡುವಳು .ಬ್ರಹ್ಮಾದಿಗಳು ಅಂಗಗಳಿಗೆ ತೈಲವನ್ನು ಲೇಪಿಸುವರು. ದುರ್ಗಾದೇವಿ ,ಸೌಪರ್ಣಿ,ವಾರುಣಿದೇವಿಯರು ನೀರನ್ನು ಕಾಸುವರು. ಇಂದ್ರಶಚೀದೇವಿಯರು ಕಟ್ಟಿಗೆಯನ್ನು ತರುವರು.ಶ್ರೀದೇವಿಯು ಬಿಸಿನೀರಿನಿಂದ ಸ್ನಾನ ಮಾಡಿಸುವಳು ಉಳಿದವರು ಸ್ತೋತ್ರಮಾಡುವರು ಹೀಗೆ ಅನುಸಂಧಾನ ಮಾಡುತ್ತ  ಭಗವಂತನಿಗೆ ತೈಲವನ್ನು ಲೇಪಿಸಿ ಉಷ್ಣೋದಕ ಸ್ನಾನವನ್ನು ಮಾಡಿಸಿ ಪಂಚಾಮೃತಭಿಷೇಕವನ್ನು  ನೈವೇದ್ಯಾದಿಗಳನ್ನು ಮಾಡಿ ತುಲಸೀ ಪೂಜೆಯನ್ನು ಮಾಡಬೇಕು .ಅಂಗಪೂಜೆ ,ಧೂಪ ದೀಪ ನೈವೇದ್ಯಗಳನ್ನು ಅರ್ಪಿಸಿ ನೀರಾಜನವನ್ನು ಮಾಡಬೇಕು.

ವಿವಾಹೋತ್ಸವ:- 

ದಾಮೋದರನ ಪ್ರತಿಮೆಯನ್ನು ತುಲಸಿಯ ಅಭಿಮುಖವಾಗಿ ಇಟ್ಟು  ಅಂತರ್ಪಟವನ್ನು ಹಿಡಿಯಬೇಕು 

ಸತ್ತ್ಯೇನೋತ್ತಭಿತಾ ಭೂಮಿ ಎಂಬ ಸೂರ್ಯ ಸೂಕ್ತವನ್ನು ,ಮಂಗಳಾಷ್ಟಕವನ್ನು ಘಂಟಾನಾದಪೂರ್ವಕಪಠಿಸಬೇಕು. ಅವಕಾಶಕ್ಕೆ ತಕ್ಕoತೆ ಪೂರ್ಣವಾಗಿ ಪಠಿಸಿ  ಮಂಗಳಷ್ಟಕವನ್ನು ಅಂತರ್ಪಟವನ್ನು ಉತ್ತರ ದಿಕ್ಕಿಗೆ ಎಳೆದು.ಮಂತ್ರಾಕ್ಷತೆಯನ್ನು ಭಗವಂತನಿಗೆ ಆರ್ಪಿಸಬೇಕು.

ದಾಮೋದರನ ಹಸ್ತದಲ್ಲಿ ತುಲಸಿಯನ್ನು ಇಟ್ಟು(ಮುಟ್ಟಿಸಿ)ಹೀಗೆ ಪ್ರಾರ್ಥಿಸಬೇಕು.

ಕನ್ಯಾo(ದೇವಿo) ಕನಕಸಂಪನ್ನಾಂ.....ವರವರಾಯ ತುಭ್ಯಮಹಂ ಸಂಪ್ರದೇ

ಈ ಮಂತ್ರವನ್ನು ಹೇಳಿ ಮಂತ್ರಾಕ್ಷತೆ ನೀರನ್ನು ಭಗವಂತನ ಮುoದೆ ಬಿಡಬೇಕು.

ಇಮಾo ದೇವಿo ಪ್ರತಿಗೃಹ್ಣಾತು ಭವಾನ್ ಎಂದು ಪ್ರಾರ್ಥಿಸಬೇಕು ಭಗವಂತನ ಹಸ್ತವನ್ನು ತುಲಸಿಗೇ ಸ್ಪರ್ಶ ಮಾಡಿಸಬೇಕು.ಭಗವಂತನ ಪರವಾಗಿ ಪೂಜಕನೇ ಅಥವ ಆಚಾರ್ಯಾರೆ ಹೀಗೆ ಹೇಳಬೇಕು 

ಕ ಇದಂ ಕಸ್ಮಾ ......ಪೃಥಿವೀ ಪ್ರತಿಗೃಹ್ಣಾತು
ತ್ವಂ ದೇವಿ ಮೇsಗ್ರತೋ.....ತ್ವದ್ದಾನತ್ ಮೋಕ್ಷಮಾಫುನುಯಾಮ್

ದಾನಸ್ಯ ಪ್ರತಿಷ್ಠಾಸಿಧ್ಯಾರ್ಥಂ ಇಮಾಂ ಸೌವರ್ಣಿಂ ದಕ್ಷಿಣಾಂ ಸಂಪ್ರದದೇ ಎಂದು ಹೇಳಿ ಭಗವಂತನ ಮುಂದೆ ದಕ್ಷಿಣೆಯನ್ನು ಅರ್ಪಿಸಬೇಕು.

ಮಾಂಗಲ್ಯಧಾರಣೆ:

ಮಾಂಗಲ್ಯವನ್ನು ತೆಗೆದುಕೊಡು ಪೂಜಿಸಿ

ಮಾಂಗಲ್ಯತಂತುನಾನೇನ ಜಗಜ್ಜೀವನ ಹೇತುನಾ 
ಕoಠೇ ಭಧ್ನಾತಿ ಭಗವಾನ್ ಸರ್ವಲೋಕಹಿತಯಾ ವೈಧ್ರುವಧ್ಯೌಃ ...ರಾಜಾ ವಿಶಾಮಯಮ್

ಭಗವಂತನ ಕೈಯಿಂದ ತುಲಸಿಯ ಕಂಠಕ್ಕೆ ಆಚಾರ್ಯನೇ ಕಟ್ಟುವುದು.
ಇತ್ಯಾದಿ ಮಂತ್ರಗಳನ್ನು ಪಠಿಸಿ ನೀರಾಜನವನ್ನು ಮಾಡುವುದು.

ಶ್ರೀಯೇಜಾತಃ ಶ್ರಿಯ ಜಯತ್ಯಜೋಖಂಡಗುಣೋರು ಮಂಡಲ

ಈ ಮಂತ್ರಗಳಿಂದ ನೀರಾಜನವನ್ನು ಮಾಡಿ ಮಂತ್ರಪುಷ್ಪಗಳನ್ನು ಅರ್ಪಿಸಿ ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಬೇಕು.

ನಮಸ್ತೇ ಸರ್ವಲೋಕೇಶ ನಮಸ್ತೇ ಲೋಕವಂದಿತ
ನಮಸ್ತೇsಸ್ತು ಸದಾ ದೇವ ತ್ರಾಹಿ ಮಾಂ ದುಃಖಸಾಗರಾತ್
ಇದಂ ವ್ರತಂ ಮಯದೇವ  ತವ ಪ್ರೀತ್ಯೇಯೈ ಕೃತಂ ಪ್ರಭೋ
ನ್ಯೂನಂ ಸಂಪೂರ್ಣತಾಂ ಯಾತು ತ್ವತ್ಪ್ರಸಾದಾತ್ ರಮಾಪತೇ
ಯಸ್ಯತ್ಸ್ಮೃತ್ಯಾಚ...ಅನೇನ ಪ್ರಭೋಧೋತ್ಸವೇನ, ಶ್ರೀದಾಮೋದರ- ತುಲಸೀ ವಿವಾಹಾಂಗ ಶ್ರೀದಾಮೋದರ ಷೋಡಶೋಪಚಾರ ಪೂಜಾ  ಕರ್ಮಣಾ ಚ,
ಶ್ರೀಭಗವಾನ್  ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀತುಲಸೀ
ಸಮೇತ ಕಾರ್ತೀಕ ದಾಮೋದರ ಪ್ರಿಯತಾಮ್
ಅನಂತರ ಬ್ರಾಹ್ಮಣರಿಗೆ ಗಂಧ -ಅಕ್ಷತೆ ತಾಂಬೂಲಾದಿಗಳನ್ನು ಕೊಟ್ಟು ವ್ರತವನ್ನು ಭಗವಂತನಿಗೆ ಸಮರ್ಪಿಸಬೇಕು
          || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
*************

ಕಾರ್ತೀಕಮಾಸದ ಮಹಿಮೆ

ಗುಣವತಿಯು ಸತ್ಯಭಾಮೆ ಯಾದದ್ದು

ಸತ್ಯಭಾಮೆಯು ನಾರದರ ಹೇಳಿಕೆಯಂತೆ ತುಲಾಪುರುಷದಾನ ವ್ರತವನ್ನು ಮಾಡಿ  ಶ್ರೀಕೃಷ್ಣನನ್ನೇ ನಾರದರಿಗೆ ದಾನಕೊಟ್ಟಳು ನಂತರ ಶ್ರೀಕೃಷ್ಣನನ್ನು  ಪ್ರತ್ಯಮ್ನಾಯವಾಗಿ ವಿಶೇಷವಾಗಿ ದಕ್ಷಿಣೆಯನ್ನು ಸ್ವೀಕರಿಸಿ ಶ್ರೀಕೃಷ್ಣನನ್ನು ಸತ್ಯಭಾಮೆಗೆ ಒಪ್ಪಿಸಿದರು ಈ ವ್ರತದಿಂದ ಜನ್ಮ ಜನ್ಮಾಂತರದಲ್ಲೂ ಪತಿಗೆ ಪ್ರಿಯಳಾಗಿದ್ದಳು .ಇದಾದನಂತರ ಸತ್ಯಭಾಮೆಯು ಶ್ರೀಕೃಷ್ಣನನ್ನು ಹೀಗೆ ಪ್ರಶ್ಣಿಸಿದಳು .ನಾನು ಏನು ಧರ್ಮಕಾರ್ಯ ಫಲವಾಗಿ ನೀನು ಪತಿಯಾಗಿ ದೊರೆತಿರುವಿ ಎಂದು ಶ್ರೀಕೃಷ್ಣನು -ಸತ್ಯಭಾಮೆ ,ನೀನು ಈ ಹಿoದೆ ಗುಣವತಿ ಎಂಬ ಕನ್ಯೆಯಾಗಿ ದೇವಶರ್ಮನೆಂಬ ಶ್ರೋತ್ರಿಯ ವಿಪ್ರನಿಗೆ ಪುತ್ರಿಯಾಗಿದ್ದೆ ದೇವಶರ್ಮನು ತನ್ನ ಶಿಷ್ಯನಾದ ಚಂದ್ರನೆಂಬುವನಿಗೆ ನಿನ್ನನ್ನು ಧಾರೆಯೆರೆದು ಕೊಟ್ಟನು .

ಒಂದು ಬಾರಿ ಅರಣ್ಯಕ್ಕೆ ಹೋಗಿದ್ದಾಗ ಘೋರ ರಾಕ್ಷಸನು ದೇವಶರ್ಮ ಹಾಗೂ ಅಳಿಯನನ್ನು ತಿಂದು ತೇಗಿದ .ಗುಣವತಿಯಾದರೂ ವಿಶೇಷವಾದ ರೀತಿಯಲ್ಲಿ  ಕಾರ್ತೀಕ ವ್ರತ ಏಕಾದಶೀವ್ರತ ಇವೆ ಮೊದಲಾದ ದೇಹವನ್ನುಸವೆಸಿದ್ದಳು .

ಕಾರ್ತೀಕ ಸ್ನಾನದ ಮಹಿಮೆ

ಆ ಗುಣವತಿಯು ಕಾರ್ತೀಕಮಾಸದಲ್ಲಿ ನಸುಕಿನಲ್ಲಿಯೇ ಎದ್ದು ನದ್ಯಾದಿಗಳಲ್ಲಿ ಸ್ನಾನವನ್ನು ಮಾಡುತ್ತಿದ್ದಳು.ಕಾರ್ತೀಕದಲ್ಲಿ ಕಾವೇರಿಯ ಸ್ನಾನವಾದರೂ ಮಹಾಫಲಪ್ರದವಾದದ್ದು.

ವಿಷ್ಣುಸಾಯುಜ್ಯ ಪ್ರಾಪ್ತಿಗೆ ಸೋಪಾನವಾಗಿದೆ.

ಕಾರ್ತಿಕೇ ಮಾಸಿ ಕಾವೇರ್ಯಾಂ ಯಃ ಸ್ನಾನಂ ಕರ್ತುಮಿಚ್ಛತಿ |
ತಾವತೈವ ವೀಮುಕ್ತಾಘೋ ವಿಷ್ಣುಸಾಯುಜ್ಯಮಾಫ್ನುಯಾತ್ ||

ಕಾರ್ತೀಕ ಮಾಸದಲ್ಲಿ ಪ್ರತಿವರ್ಷವು ಗಂಗೇಯೇ ಕಾವೇರಿನದಿಗೆ ಬರುವಳು ಆದ್ದರಿಂದ ತುಲಾಮಾಸ ಸ್ನಾನವು ಕಾವೇರಿನದಿಯಲ್ಲಿ ಮಾಡುವುದು ಪ್ರಶಸ್ತವಾಗಿದೆ.

ಕಾರ್ತಿಕೇ ಪ್ರತಿವರ್ಷಂ ತು ಗಂಗಾ ತ್ರೈಲೋಕ್ಯ ಪಾವನೀ |
ಸ್ನಾತುo ಭಕ್ತ್ಯಾ ಸಮಾಯಾತಿ ಕಾವೇರಿಂ ಪುಣ್ಯಾದಾಂ ಶುಭಾಂ||

ಇಂತಹ ಶುಭಪ್ರದವಾದ ಕಾವೇರಿಯಲ್ಲಿ ಗುಣವತಿಯು ಸ್ನಾನ ಮಾಡಿದಳು. ಕಾರ್ತಿಕದಲ್ಲಿ ದೀಪಾರಾಧನೆಯು ಮುಖ್ಯವಾಗಿದೆ.ದೀಪಾರಾಧನೆಯನ್ನು ಮಾಡದವರು ಕುರುಡರಾಗುವರು. 

ಕಾರ್ತಿಕೇ ಮಾಸಿ ಯೋವಿಶ್ಣೋರ್ನ ದೀಪಾರಾಧನಂ ಚರೇತ್ |
ಅಂಧತ್ವಂ ತಸ್ಯ ಜಾಯೇತ ಸಪ್ತಜನ್ಮ ನ ಸoಶಯಃ ||


ದೇವಾಲಯವನ್ನು  ಸಾರಿಸುವುದು , ಸಾರಣಿ -ಕಾರಣಿ ,ಸಂಮಾರ್ಜನ, ರಂಗವಲ್ಲಿಯಿಂದ ಸ್ವಸ್ತಿಕದಿoದ ಚಿಹ್ನೆ ಬರೆಯುವುದು .ಏಕಾದಶಿ ಉಪವಾಸ ,ಜಾಗರಣೆ,ಪಾರಣೆ ಇವುಗಳಿಂದ ಗುಣವತಿಯು ಭಗವಂತನನ್ನು ಮೆಚ್ಚಿಸಿದಳು.ಹೀಗೆ ಆ ಜನ್ಮ ಪೂರ್ತಿ ಗುಣವತಿಯು ಕಾರ್ತೀಕ ಮಾಸದವ್ರತವನ್ನು ನಿಷ್ಠೆಯಿಂದ ಆಚರಿಸಿದ್ದರಿಂದ ಗುಣವತಿಯು ಸತ್ಯಭಾಮೆಯಾದಳು.ಆ ಗುಣವತಿಯು ನೀನಾಗಿದ್ದಿ ಎಂದು ಶ್ರೀಕೃಷ್ಣನು ತಿಳಿಸಿದನು ಈ ಕಥಾನಕದಿಂದ ಸ್ತ್ರೀಯರು ಕಾರ್ತೀಕಮಾಸ ಧರ್ಮಗಳನ್ನು ಪಾಲಿಸಿದರೆ ಯೋಗ್ಯ ಸದ್ಗುಣಿಯಾದ ಪತಿಯು ಲಭಿಸಿ ಪತಿವಿಯೋಗವಿಲ್ಲದೆ ಜೀವಿಸುವರು ಎಂದು ತಿಳಿಯುತ್ತದೆ.
**************

ದೀಪದಾನ ಮಂತ್ರಗಳು

ದೀಪಸ್ತಮೋ ನಾಶಯತಿ ದೀಪಃಕಾಂತಿಂ ಪ್ರಯಚ್ಚತಿ |
ತಸ್ಮಾತ್ ದೀಪಪ್ರದಾನೇನ  ಮಮ ವಂಶಪ್ರದಾನೇನ ವಂಶ: ಪ್ರವರ್ಧತಾಮ್ ||

ದೀಪೋ ಜ್ಞಾನಪ್ರದೋ ನಿತ್ಯಂ ದೇವಾನಾಂ ಪ್ರಿಯಃ ಸದಾ |
ದಾನೇನಾಸ್ಯ ಭವೇತ್ ಸೌಖ್ಯಂ ಶಾoತಿರ್ಮೇ ವಾಂಛಿತಂ ಫಲಮ್ ||

ದೀಪವು ಕತ್ತಲೇ ಕಳೆಯುತ್ತದೆ. ಶಾoತಿ ಕೊಡುತ್ತದೆ ಈ ದೀಪದಾನ ದಿoದ ನನ್ನ ವಂಶ ಬೆಳೆಯಲಿ. ಬೆಳಗಲಿ ದೇವತೆಗಳಿಗೆ  ಪ್ರಿಯವಾದ 

ದೀಪ ಜ್ಞಾನಪ್ರದಯಕ ಇದನ್ನು ನೀಡುವುದರಿoದ ನನಗೆ ಸುಖವಾಗಲಿ ಶಾoತಿಯಾಗಲಿ .

ಆನೇನ ದೀಪದಾನಖ್ಯಕರ್ಮಣಾ ಭಾರತಿರಮಣಮುಖ್ಯಪ್ರಾಣಂತರ್ಗತ  ಕಾರ್ತೀಕದಮೋದರ ಪ್ರಿಯತಾo    
*******


ಕಾರ್ತಿಕಮಾಸದಲ್ಲಿ ದೀಪಾರಾಧನೆ ಮತ್ತು ದೀಪದಾನದ ಮಹತ್ವ

ಕಾರ್ತೀಕಮಾಸದಲ್ಲಿ ಭಗವಂತನಿಗೆ ದೀಪಗಳನ್ನು ಹಚ್ಚುವುದು ಪ್ರಶಸ್ತವಾಗಿದೆ.ಆಶ್ವಿನ ಮಾಸದ ಪೌರ್ಣಿಮೆಯಿಂದಲೇ ದೀಪವನ್ನು ಹಚ್ಚುವುದು.

ದೀಪದಾನದ ಮಹಿಮೆ:- ಯಾರು ಕಾರ್ತೀಕದಲ್ಲಿ ಭಗವಂತನಿಗೆ ಶುಚಿಯಾಗಿ ಯಾರು ಬೆಳಗುವರೊ ಅವರು ಸಂಸಾರದಿಂದ ಮುಕ್ತರೆಂದೆ ಅರ್ಥ ಆರುತ್ತಿರುವ ದೀಪವನ್ನು ಉಜ್ವಲಗೊಳಿಸುವುದು ,

ಮತ್ತೊಬ್ಬರ ಮನೆಯ ದೀಪವನ್ನು ಹಚ್ಚುವುದು .ಬತ್ತಿಯನ್ನು ದಾನ ಮಾಡುವುದು ಇವೆಲ್ಲವೊ ದಾನಿಯ ಆಜ್ಞಾನವನ್ನು ಪರಿಹರಿಸಿ ಜ್ಞಾನವನ್ನು ನೀಡಲು ಸಹಕಾರಿಯಾಗಿವೆ.

ಪ್ರಾತಃ ಸ್ನಾತ್ವಾ ಶುಚಿರ್ಭೂತ್ವಾ ಯೋ ದದ್ಯಾದ್ ದೀಪಕಂ ಹರೇ |
ಸತು ಮೋಕ್ಷಮವಾಪ್ನೋತಿ  ನಾತ್ರ  ಕಾರ್ಯ ವಿಚಾರಣಾ ||

ಸಾವಿರದೆಂಟು, ನೊರೆಂಟು ,ಐವತ್ತನಾಲ್ಕು  ಇಪ್ಪತ್ತೆಳು ಹೀಗೆ ದೀಪವನ್ನು ಶಕ್ತಿಯಿದ್ದಂತೆ ಬೆಳಗಿಸಬೇಕು. 

ಕಾರ್ತೀಕ ಮಾಸದಲ್ಲಿ ಕಮಲಗಳಿಂದ ಪೂಜೆ ,ತುಲಸಿ ,ಮಾಲತೀ,ಮುನಿ ಪುಷ್ಪಗಳಿoದ ಪೂಜಿಸಬೇಕು ಮತ್ತು ದೀಪ ದಾನವನ್ನು ಮಾಡಬೇಕು ಹೀಗೆ ಈ ಐದು ಪವಿತ್ರವಾದವು ದೇವಸ್ಥಾನದ ಗೋಪುರದ ಮೇಲೆ ಆಕಾಶದೀಪವನ್ನು ಭಗವಂತನಿಗೆ ಈ ಕೆಳಗಿನ ಮಂತ್ರದಿoದ  ಅರ್ಪಿಸಬೇಕು.

ಆಕಾಶದೀಪೋ ದಾತವ್ಯೋ ಮಾಸಮೆಕo ತು ಕಾರ್ತಿಕೇ |
ಕಾರ್ತಿಕೇ ಶುಕ್ಲ ಪೌರ್ಣಿಮ್ಯಾo ವಿಧಿನೋತ್ಸರರ್ಜಯೇಚ್ಚ ತಂ ||

ಮಹಪ್ರಕಾಶವಾದ ದೊಡ್ಡ ದೀಪವನ್ನು ಕಾರ್ತೀಕ ದಾಮೋದರನಿಗೆ ಅರ್ಪಿಸಬೇಕು.

ಕಾರ್ತಿಕಮಾಸವೂ ದೀಪದಾನಕ್ಕೆ ಪ್ರಸಿದ್ದವಾಗಿದೆ. ಪಿತೃಗಳೂ ಕೂಡ ಕಾರ್ತೀಕಮಾಸದಲ್ಲಿ ದೇವ ದೇವನಿಗೆ ದೀಪವನ್ನು  ಬೆಳಗುವ ಕುಲದೀಪಕ ಮಗನಿಗಾಗಿ  ಕಾಯುತ್ತಿರುವರು.

ಭವಿಷ್ಯತಿ ಕುಲೇsಸ್ಮಾಕಂ ಪಿತೃಭಕ್ತಃ ಸುಪುತ್ರಕಃ |
ಕಾರ್ತಿಕೇ ದೀಪದಾನೇನ ಯಸ್ತೋಷಯತಿ ಕೇಶವಂ ||

ಕಾರ್ತೀಕದಲ್ಲಿ ತುಪ್ಪದ ದೀಪ, ತೈಲ ದೀಪ, ಆಕಾಶದೀಪ ಇವುಗಳನ್ನು ದೇವರಿಗೆ ಅರ್ಪಿಸಿದವನು ಸ್ವರ್ಗದಲ್ಲಿ ಸುಖಿಸುವನು .ಮೂವತ್ತು ದಿನಗಳು ದೀಪವನ್ನು ಬೆಳಗಬೇಕು .ಸಾಧ್ಯವಿಲ್ಲಡಿದ್ದರೆ ಕಡೆಯ ಐದು ದಿನಗಳಾದರೂ ದೀಪವನ್ನು ಬೆಳಗಬೇಕು . ದೀಪವನ್ನು ಬೆಳಗಲು ಶಕ್ತಿಯಿಲ್ಲದಿದ್ದರೆ ಬೇರೆಯವರು ಹಚ್ಚಿರುವ ದೀಪದ ಕರಿಯನ್ನು ತೆಗೆದು ಉಜ್ವಲಗೊಳಿಸುವುದು ದೀಪವು ಗಳಿಗೆ ಆರದಂತೆ ರಕ್ಷಿಸುವುದರಿಂದಲೂ ಅಕ್ಷಯ ಪುಣ್ಯವಿದೆ.

ದೀಪಮಾರೋಪಯೇತ್ಸಾಯಂ ಕಾರ್ತಿಕೇ ಪ್ರತಿ ವಾಸರಮ್
ನಿವೇದ್ಯ ಪಾಯಸನ್ನಂ ಚ ಸಿದ್ಧಿ ಮಿಷ್ಟಾಮವಾಫ್ನುಯಾತ್

ಕಾರ್ತೀಕಮಾಸದಲ್ಲಿ ಪ್ರತಿನಿತ್ಯವೂ ಪ್ರಾತಃಕಾಲ-ಸಾಯಂಕಾಲ ವಿಶೇಷವಾಗಿ ದೀಪಗಳಿಂದ ತುಳಸಿಯನ್ನು ಉಪಚರಿಸಬೇಕು .ಸಾಯಂಕಾಲ ವಿಶೇಷವಾಗಿ  ದೀಪಾರಾಧನೆಯನ್ನು ಮಾಡಬೇಕು.(ತುಪ್ಪದ ದೀಪ ಶ್ರೇಷ್ಠ  ಸಾಧ್ಯವಾಗದಿದ್ದಲ್ಲಿ ಎಳ್ಳೆಣ್ಣೆಯಿಂದಲಾದರು ದೀಪವನ್ನು ಬೆಳಗಿಸಬೇಕು)ಪ್ರತಿನಿತ್ಯ ತಪ್ಪದೇ ಇದನ್ನು ವ್ರತವಾಗಿ ಸ್ವೀಕರಿಸಬೇಕು ಮತ್ತು ದೇವರಿಗೆ ನಿವೇದಿಸಿದ ಪಾಯಸಾನ್ನವನ್ನು ಪ್ರತಿ ನಿತ್ಯ ತುಳಸಿಗೆ ನಿವೇದಿಸಬೇಕು ಹೀಗೆ ಕಾರ್ತೀಕಮಾಸದಲ್ಲಿ ತುಳಸಿಗೆ ಪ್ರತಿನಿತ್ಯವೂ ದೀಪಾರಾಧನೆ ಮತ್ತು ಪಾಯಸಾನ್ನದ ನೈವೈದ್ಯದಿಂದ ಇಷ್ಟಾರ್ಥಗಳು ಸಿದ್ಧಿಸುವುವು .

***
ಕಾರ್ತೀಕಮಾಸದ ಮಹತ್ವ🌺🌷

                 || ಸಂಚಿಕೆ-2 ||

🌷🌹ತುಲಸಿಯ ಮಹತ್ವ🌹🌷

ತುಲಸೀ ಶಬ್ದದ ಅರ್ಥ

ಯಸ್ಯಾ ದೇವ್ಯಾಸ್ತುಲಾ ನಾಸ್ತಿ ವಿಶ್ವೇಶು ನಿಖಿಲೇಷು ಚ |
ತುಲಸೀ ಯೇನ ವಿಖ್ಯಾತ ತಾಂ ಯಾಮಿ ಶರಣಂ ಪ್ರಿಯೇ ||

ವಿಶ್ವದ ಸಕಲ ವೃಕ್ಷಗಳಲ್ಲೂ ಇದಕ್ಕೆ ಸಮನಾದ ಮತ್ತೊಂದು ವೃಕ್ಷವಿಲ್ಲ ಅದಕ್ಕೇಂದೇ ಇದಕ್ಕೆ ತುಲಸಿ ಎಂದು ಹೆಸರು .
-ಬ್ರಹ್ಮವೈವರ್ತಪುರಾಣ(1-22-24)

    **********

ತುಳಸಿದಳದ ಮಹಿಮೆ

ತುಲಸಿದಲಮಾಹತ್ಮ್ಯಂ ಶ್ರುಣುಷ್ವಾದ್ಯ ಸಮಾಹಿತಃ |
ತೇನಾಧೀತಂ ಶ್ರುತಂ ತೇನ ತೇನ ಸರ್ವಮನುಷ್ಠಿತಮ್||

ತುಲಸೀದಳದ ಮಾಹತ್ಮ್ಯಾ ಆಪಾರವಾದುದು .ಅದನ್ನು ತಿಳಿಯುವುದು ಸಹ ಸಕಲ ಶಾಸ್ತ್ರಗಳ ಅಧ್ಯಯನ , ಶ್ರವಣಗಳ ಹಾಗೂ ಸಕಲಸತ್ಕಾರ್ಯಗಳ ಅನುಷ್ಠಾನ ಫಲಕ್ಕೆ ಸಮವೆನ್ನಿಸುವುದು .
-ವಿಷ್ಣುಧರ್ಮೋತ್ತರ ಪುರಾಣ

**********

ತುಲಸಿಯ ಸೇವೆಯ ಪಲ

ದೃಷ್ಟಾ ಸ್ಪೃಷ್ಟಾsಥವಾ ಧ್ಯಾತಾ ಕೀರ್ತೀತಾ ಶ್ರುತಾ |
ರೋಪಿತಾ ಸೇಚಿತ ನಿತ್ಯಂ ತುಲಸೀ ಪುಜಿತಾ ಶುಭಾ ||

ನವಧಾ ತುಲಸೀಭಕ್ತಿಂ ಯೇ ಕುರ್ವಂತಿ ದಿನೇ ದಿನೆ |
ಯುಗಕೋಟಿ ಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||

ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ, ಕೀರ್ತನ ,ಶ್ರವಣ ,ರೋಪಣ ಸೇಚನ, ಪೂಜನ ,ಹಾಗೋ ವಂದನ ಈರೀತಿಯಾಗಿ ಒಂಬತ್ತುಭಗೆಯಲ್ಲಿ ಭಕ್ತಿಯಿಂದ ತುಲಸಿಯನ್ನು ಯಾರು ಪ್ರತಿದಿನವೂ ಸೇವಿಸುವರೋ ಅವರು ಶ್ರೀಹರಿಯ ಮಂದಿರದಲ್ಲಿ ಕೋಟಿಯುಗಗಳಷ್ಟು ಕಾಲ ನೆಲೆಸುವರು .
-ಪದ್ಮಪುರಾಣ

ರೋಪಣ- ತುಲಸಿಯನ್ನು ದೇವರಿಗಾಗಿ ಬೇಳೆಸುವುದು
ಸೇಚನ- ತುಲಸಿಗೆ ಯಥಾಯೋಗ್ಯವಾಗಿ ನೀರನ್ನು ಹಾಕುವುದು .

***********

ಕಾರ್ತೀಕಮಾಸದಲ್ಲಿ ತುಳಸಿ ಅರ್ಚನೆಯ ಮಹತ್ವ

ಬಿoಬಮಪ್ಯರ್ಚಿತo ದೃಷ್ಟ್ವಾ ಸಹೋಮಾಸೇ ಚ ಮಾಮಕಮ್ |
ತುಲಸೀಪತ್ರ ನಿಚಯೈಃ ಮುಚ್ಯತೇ ಬ್ರಹ್ಮಹತ್ಯಯಾ ||

ಕಾರ್ತೀಕಮಾಸದಲ್ಲಿ ತುಲಸಿಪತ್ರಗಳ ರಾಶಿಯಿಂದ ಶ್ರೀಹರಿಯಪ್ರತಿಮೆಗೆ ಪೂಜೆಸಲ್ಲಿಸಬೇಕು ಹೀಗೆ ಮಾಡಲು ಸಾಧ್ಯವಾಗದಿದ್ದಾಗ ತುಲಸಿಯಿಂದ ಅರ್ಚಿತವಾದ ಮೂರ್ತಿಯ ದರ್ಶನಪಡೆದುಕೊಳ್ಳಬೇಕು .ಭಕ್ತಿ-ಶ್ರದ್ಧೆಗಳಿಂದ ಹೀಗೆ ಮಾಡಿದರೆ ಬ್ರಹ್ಮಾಹತ್ಯಾದಿ ಪಾಪಗಳು ನಾಶವಾಗುತ್ತದೆ .
-ಪದ್ಮಪುರಾಣ

************

ತುಲಸಿಯ ಸೇವೆಯ ಫಲ

ತುಲಸ್ಯಾ ಸಹಿತಂ ದತ್ತಂ ತತ್ ಶ್ರೀಕೃಷ್ಣಸ್ಯ ತುಷ್ಟಯೇ|
ತುಲಸ್ಯಾ ಸಹಿತಂ ದಾನಂ ತದ್ದಾನಂ ಚ ಸುಖಾಪ್ತಯೇ||

ಯಾವುದೇ ದಾನವನ್ನು ತುಲಸಿಯ ಸಮೇತವಾಗಿಯೇ ಶ್ರೀಕೃಷ್ಣಪರಮಾತ್ಮನ ಪ್ರೀತಿಗೆಂದು ಸಮರ್ಪಿಸಬೇಕು .ಅಂತಹ ದಾನವು ಸುಖಪ್ರಾಪ್ತಿಗೆ ಸಾಧನವಾಗುವುದು .
-ಶಾಂಡಿಲ್ಯ ಸಂಹಿತೆ

***********

ಕಾರ್ತೀಕ ಮಾಸದಲ್ಲಿ ತುಲಸಿಯ ವಿಶೇಷ ಪೂಜೆ

ಕಾರ್ತೀಕ ಮಾಸವು ವರ್ಷದ ಶ್ರೇಷ್ಠ ಮಾಸಗಳಲ್ಲಿ ಒಂದು ಈ ಮಾಸದಲ್ಲಿ ಮಾಡುವ ಸಕಲ ಕಾರ್ಯಗಳು ಶ್ರೇಷ್ಠ ಅದರಲ್ಲೂ ತುಲಸಿಪೂಜೆಯು ವಿಶೇಷ. ದೀಪದಾನವಂತೂ ತುಂಬ ಶ್ರೇಷ್ಠವಾದ ದಾನ. ಕಾರ್ತೀಕಮಾಸದಲ್ಲಿ ಇದು ಇನ್ನಷ್ಟು ಪವಿತ್ರ .ಕಾರ್ತೀಕವು ದೇವತೆಗಳ ಅರುಣೋದಯದ ಕಾಲ.ಆದಕ್ಕೆಂದೇ ದೀಪರಾಧನಯ ಮಹತ್ವ. ಮತ್ತು ದೀಪದಾನವೂ ಮಹತ್ವಪೂರ್ಣ.ತುಲಸೀ ಸಮೇತವಾದಾಗ ಇದಕ್ಕೆ ಇರುವ ಮಹತ್ವ ವರ್ಣನೆಗೆ ಮೀರಿದ್ದು ಕಾರ್ತೀಕಮಾಸವು ಮಾರ್ಗಶಿರ ಮಾಸದಿಂದ ಪ್ರಾರಂಭವಾಗುವ ಕೇಶವಾದಿ ಮಾಸಗಳಲ್ಲಿ ಕೊನೆಯದು ಎಂದರೆ ಇದು ಆ ವರ್ಷದ ಉಪಸಂಹಾರ ಸ್ವರೂಪದ ಮಾಸ ; ಆ ವರ್ಷದ ಸಮಸ್ತ ಕರ್ಮಗಳನ್ನೂ ಶ್ರೀಹರಿಗೆ ಸಮರ್ಪಿಸುವ ವಿಶೇಷ ಪರ್ವಕಾಲ.
ಸಮರ್ಪಣೆಗೆ ತುಲಸಿಯು ಅತ್ಯಂತ ಅಗತ್ಯವಾದುದರಿoದ ಈ ಮಾಸದಲ್ಲಿ ತುಲಸಿಯಪೂಜೆ ವಿಹಿತವಾಗಿದೆ.

ದೃಷ್ಟಾ ಸ್ಪೃಷ್ಟಾ ತಥಾ ಧ್ಯಾತಾ ಕಾರ್ತೀಕೇ ನಮಿತಾsರ್ಚಿತಾ |
ರೂಪೀತಾ ಸೇಚಿತಾ ನಿತ್ಯಂ ಪಾಪಂ ಹಂತಿ ಯುಗಾರ್ಚಿತಮ್ ||
ಅಷ್ಟಾಧಾ ತುಲಸೀ ಯೈಸ್ತು ಸೇವಿತಾ ದ್ವಿಜಸತ್ತಮ |
ಯುಗಕೋಟಿಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||
ಪದ್ಮಪುರಾಣ(ಉತ್ತರ ಖಂಡ)

ಕಾರ್ತೀಕಮಾಸದಲ್ಲಿ ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ,ನಮನ, ಅರ್ಚನೆ ,ರೋಪಣ ,ಸೇಚನ ,-ಮೊದಲಾದ ಸೇವೆಗಳಿಂದ ತುಲಸಿಯು ಯುಗಗಟ್ಟಲೆ ಮಾಡಿದ ಪಾಪಗಳನ್ನು ನಾಶಪಡಿಸುವಳು .ಈ ಎಂಟು ರೀತಿಯಲ್ಲಿ ತುಲಸಿಯನ್ನು ಸೇವಿಸುವವರ ಮನೆಯಲ್ಲಿ ಕೋಟಿ ,ಸಾವಿರಯುಗಗಳವರೆಗೆ ನೆಲೆಸುವಳು , ಹೀಗೆ ತುಲಸಿಯನ್ನು ಸೇವಿಸು ವವರು .ಶ್ರೀ ಹರಿಯ ಮಂದಿರದಲ್ಲಿ ಕೋಟಿ ಸಾವಿರಯುಗ ಗಳಷ್ಟು ಕಾಲ ನೆಲೆಸುವರು.

************

ಕಾರ್ತಿಕಮಾಸದಲ್ಲಿ ತುಲಸಿಪೂಜೆಯ ಮತ್ತು ದೀಪಾರಾಧನೆಯ ಮಹತ್ವ

ದೀಪಮಾರೋಪಯೇತ್ಸಾಯಂ ಕಾರ್ತಿಕೇ ಪ್ರತಿವಾಸರಮ್ |
ನಿವೇದ್ಯ ಪಾಯಸನ್ನಂ ಚ ಸಿದ್ಧಿಮಿಷ್ಟಾಮವಾಪ್ನುಯಾತ್ ||

ಕಾರ್ತೀಕಮಾಸದಲ್ಲಿ ಪ್ರತಿನಿತ್ಯವೂ ಪ್ರಾತಃಕಾಲ-ಸಾಯಂಕಾಲ ವಿಶೇಷವಾಗಿ ದೀಪಗಳಿಂದ ತುಳಸಿಯನ್ನು ಉಪಚರಿಸಬೇಕು .ಸಾಯಂಕಾಲ ವಿಶೇಷವಾಗಿ ದೀಪಾರಾಧನೆಯನ್ನು ಮಾಡಬೇಕು.(ತುಪ್ಪದ ದೀಪ ಶ್ರೇಷ್ಠ ಸಾಧ್ಯವಾಗದಿದ್ದಲ್ಲಿ ಎಳ್ಳೆಣ್ಣೆಯಿಂದಲಾದರು ದೀಪವನ್ನು ಬೆಳಗಿಸಬೇಕು)ಪ್ರತಿನಿತ್ಯ ತಪ್ಪದೇ ಇದನ್ನು ವ್ರತವಾಗಿ ಸ್ವೀಕರಿಸಬೇಕು ಮತ್ತು ದೇವರಿಗೆ ನಿವೇದಿಸಿದ ಪಾಯಸಾನ್ನವನ್ನು ಪ್ರತಿನಿತ್ಯ ತುಳಸಿಗೆ ನಿವೇದಿಸಬೇಕು ಹೀಗೆ ಕಾರ್ತೀಕಮಾಸದಲ್ಲಿ ತುಳಸಿಗೆ ಪ್ರತಿನಿತ್ಯವೂ ದೀಪಾರಾಧನೆ ಮತ್ತು ಪಾಯಸಾನ್ನದ ನೈವೈದ್ಯದಿಂದ ಇಷ್ಟಾರ್ಥಗಳು ಸಿದ್ಧಿಸುವುವು .
-ಪದ್ಮಪುರಾಣ

***********

ಕಾರ್ತಿಕಮಾಸದಲ್ಲಿ ತುಲಸೀ ಆರ್ಚನೆಯ ಫಲ

ಸಂಪ್ರಾಪ್ತಂ ಕಾರ್ತೀಕಂ ದೃಷ್ಟ್ವಾ ನಿಯಮೇನ ಜನಾರ್ದನಃ |
ಪೂಜನಿಯೋ ಮಹದ್ಭಿಶ್ಚ ಕೋಮಲೈ ತುಲಸೀ ದಲೈಃ ||

ಕಾರ್ತೀಕ ಮಾಸದಲ್ಲಿ ಜನಾರ್ಧನನನ್ನು ತುಲಸೀ ದಳಗಳಿಂದ ಪೂಜಿಸಬೇಕು. ಇದನ್ನು ಈ ಮಾಸದಲ್ಲಿ ನಿಯಮವಾಗಿ ಮಾಡಬೇಕು ಮಹಾತ್ಮರಾದವರೂ ಈ ಪೂಜೆಯನ್ನು ತಪ್ಪಿಸಬಾರದು.
-ಪದ್ಮಪುರಾಣ

***********

ಕಾರ್ತಿಕ ಮಾಸದಲ್ಲಿ ತುಲಸೀ ಅರ್ಚನೆಯ ಫಲ

ತುಲಸೀದಳಪುಷ್ಪಾಣಿ ಯೋ ದದ್ಯಾದ್ಧರಯೇ ಮುನೇ |
ಕಾರ್ತಿಕೇ ಸಕಲಂ ಪಾಪಂ ಸೋsತ್ರ ಜನ್ಮಾರ್ಜಿತಂ ದಹೇತ್ ||

ಕಾರ್ತೀಕಮಾಸದಲ್ಲಿ ವಿಶೇಷವಾಗಿ ತುಲಸೀ ಪತ್ರಗಳಿಂದ ,ತುಲಸೀದಳಗಳಿಂದ ಅಥವ ತುಲಸೀ ಪುಷ್ಪಗಳಿoದ ಪರಮಾತ್ಮನನ್ನು ಅರ್ಚಿಸಬೇಕು.ಹೀಗೆ ಮಾಡಿದ ಸಾಧಕನು ತಾನು ಈ ಜನ್ಮದಲ್ಲಿ ಸಂಪಾದಿಸಿದ ಪಾಪಗಳನ್ನೆಲ್ಲ ಕಳೆದುಕೊಳ್ಳುತ್ತಾನೆ ಅವನ ಎಲ್ಲ ಪಾಪಗಳು ಸುಟ್ಟು ಭಸ್ಮವಾಗುತ್ತದೆ.
-ಪದ್ಮಪುರಾಣ

  ************

ಕಾರ್ತೀಕಮಾಸದಲ್ಲಿ ತುಳಸಿ ಅರ್ಚನೆಯ ಮಹತ್ವ

ಬಿoಬಮಪ್ಯರ್ಚಿತo ದೃಷ್ಟ್ವಾ ಸಹೋಮಾಸೇ ಚ ಮಾಮಕಮ್ |
ತುಲಸೀಪತ್ರ ನಿಚಯೈಃ ಮುಚ್ಯತೇ ಬ್ರಹ್ಮಹತ್ಯಯಾ ||

ಕಾರ್ತೀಕಮಾಸದಲ್ಲಿ ತುಲಸಿಪತ್ರಗಳ ರಾಶಿಯಿಂದ ಶ್ರೀಹರಿಯಪ್ರತಿಮೆಗೆ ಪೂಜೆಸಲ್ಲಿಸಬೇಕು ಹೀಗೆ ಮಾಡಲು ಸಾಧ್ಯವಾಗದಿದ್ದಾಗ ತುಲಸಿಯಿಂದ ಅರ್ಚಿತವಾದ ಮೂರ್ತಿಯ ದರ್ಶನಪಡೆದುಕೊಳ್ಳಬೇಕು .ಭಕ್ತಿ-ಶ್ರದ್ಧೆಗಳಿಂದ ಹೀಗೆ ಮಾಡಿದರೆ ಬ್ರಹ್ಮಾಹತ್ಯಾದಿ ಪಾಪಗಳು ನಾಶವಾಗುತ್ತದೆ .
-ಪದ್ಮಪುರಾಣ

  ************

ಕಾರ್ತೀಕಮಾಸದಲ್ಲಿ ತುಳಸಿ ಅರ್ಚನೆಯ ಫಲ

ಪ್ರಾತಃ ಸ್ನಾತ್ವ ಶುಚಿರ್ಭೂತ್ವಾ ಕಾರ್ತೀಕೇ ವಿಷ್ಣುತತ್ಪರಃ |
ದೇವಂ ದಾಮೋದರಂ ಪೂಜ್ಯ ಕೋಮಲೈಸ್ತುಲಸೀದಲೈಃ |
ನ ತು ಮೋಕ್ಷಮವಾಪ್ನೋತಿ ನಾತ್ರ ಕಾರ್ಯಾ ವಿಚರಣಾ ||

ಕಾರ್ತೀಕಮಾಸದಲ್ಲಿ ಪ್ರಾತಃಕಾಲದಲ್ಲಿ ಸ್ನಾನಮಾಡಿ ಶುಚಿರ್ಭೂತನಾಗಿ ಕೋಮಲವಾದ ತುಳಸಿದಳಗಳಿಂದ ದೇವನಾದ ದಾಮೋದರನನ್ನು ಪೂಜಿಸಿದವನು ಮೋಕ್ಷವನ್ನು ಪಡೆದು ಕೊಳ್ಳುವನು ; ಈ ಬಗ್ಗೆ ವಿಚಾರಮಾಡಬೇಕಿಲ್ಲ .
-ಸ್ಕಂಧಪುರಾಣ

ಕಾರ್ತೀಕೇ ತುಲಸೀಪತ್ರಂ ವಿಷ್ಣವೇ ಯೋ ದದಾತಿ ಚ |
ಗವಾಮಯುತದಾನಸ್ಯ ಫಲಮಾಪ್ನೋತಿ ನಿಶ್ಚೀತಮ್ ||

ಕಾರ್ತೀಕಮಾಸದಲ್ಲಿ ವಿಷ್ಣುವಿಗೆ ತುಲಸಿಯ ಪತ್ರವನ್ನು ಸಮರ್ಪಿಸುವವನಿಗೆ ಹತ್ತು ಸಾವಿರ ಗೋವುಗಳನ್ನು. ದಾನಮಾಡಿದ ಫಲವು ನಿಶ್ಚಿತವಾಗಿ ಲಭಿಸುವುದು .
-ಬ್ರಹ್ಮವೈವರ್ತಪುರಾಣ

     ಶ್ರೀಭಾರತಿರಮಣ ಮುಖ್ಯಪ್ರಾಣಾಂತರ್ಗತ
    ಶ್ರೀವಿಷ್ಣುಫ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ
    
          || ಶ್ರೀಕೃಷ್ಣಾರ್ಪಣಮಸ್ತು ||

     ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***



ಕಾರ್ತೀಕಮಾಸದಲ್ಲಿ ಧಾತ್ರಿ(ನೆಲ್ಲಿ)ಮತ್ತು ತುಲಸಿಗಳ ಶ್ರೇಷ್ಠತೆ

ಕಾರ್ತೀಕ ಮಾಸದಲ್ಲಿ ತುಲಸಿ ಧಾತ್ರಿ(ನೆಲ್ಲಿ)ಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗಿದೆ .ಕಾರ್ತೀಕ ಮಾಸದಲ್ಲಿ ತುಲಸಿಪತ್ರ ಹಾಗೂ ಧಾತ್ರಿ ಪತ್ರದಿಂದ ವಿಷ್ಣುವನ್ನು ಪೂಜಿಸಿದರೆ ಅತಿಶಯವಾದ ಪುಣ್ಯವುoಟಾಗುತ್ತದೇ.ಧಾತ್ರಿ ತುಲಸಿಯನ್ನು ಸ್ಪರ್ಶಿಸಿದರೊ ಸಕಲದೋಷ ನಿವೃತ್ತಿಯಾಗುತ್ತದೆ .

ತುಲಸಿ ಧಾತ್ರಿ ಪತ್ರಾಭ್ಯಾಂ ಯಃ ಪೂಜಾ ಕುರುತೇ ಹರೆಃ |
ತಸ್ಯ ಪುಣ್ಯಸ್ಯ ಮಹಾತ್ಮ್ಯಂ ಮಯಾ |
ವಕ್ತುಂ ನ ಶಕ್ಯತೇ
ಸ್ಪರ್ಶನo ಧಾತ್ರಿ ಪತ್ರಣಾಂ ಮೋಚನಂ ದುಷ್ಟ ಯೋನಿತಃ ||

ತುಲಸಿ ಮತ್ತು ಧಾತ್ರಿಯುಕ್ತವಾದ ಜಲದಿಂದ ಪ್ರೋಕ್ಷಣೆ ಮಾಡುವುದರಿಂದ ಬ್ರಹ್ಮಹತ್ಯಾದಿ ಪಾತಕಗಳು ದೂರವಾಗುವುವು

ವಿಲಯಂ ಯಾಂತಿ ಪಾಪಾನಿ ಬ್ರಹ್ಮಹತ್ಯಾದಿಕಾನಿ ಚ |
ತುಲಸೀಧಾತ್ರಿಯುಕ್ತೋದ್ಯೈಃ ಸಿಕ್ತೇ ಹಿ ಕಾರ್ತಿಕೇ ||
ಕಲಹ ವೆಂಬ ಸ್ತ್ರೀಯು ತನ್ನ ಪತಿಗೆ ವಿರುದ್ಧವಾಗಿ ನಡೆದು ಗಂಡನಿoದ ಛೀತ್ಕಾರ ಹಾಕಿಸಿ ಕೊಂಡು ಆತ್ಮಹತ್ಯೆಯನ್ನು ಮಾಡಿಕೊoಡು ಪ್ರೇತಳಾಗಿ ದುಃಖವನ್ನು ಅನುಭವಿಸುತ್ತಿದ್ದಳು. ಒಂದು ದಿನ ಧರ್ಮದತ್ತನೆಂಬ ಬ್ರಾಹ್ಮಣನು ಅವಳನ್ನು ನೋಡಿ ಭಯದಿಂದ ತುಲಸಿ ಮಾಲೆ ಮತ್ತು ಧಾತ್ರಿ ಮಾಲೆಯಿoದ ಹೊಡೆದು ನೀರಿನಿಂದ ಸಿಂಪಡಿಸಿದನು .ಇದರಿಂದಲೆ ಅವಳು ಪ್ರೇತಯೋನಿ ಯಿಂದ ಮುಕ್ತಳಾದಳು.
ಕಾರ್ತಿಕಮಾಸದ ವ್ರತದಿಂದಲೇ ಧರ್ಮದತ್ತನು ದಶರಥ ಮಹಾರಾಜನಾಗಿ
ಶ್ರೀರಾಮಚಂದ್ರದೇವರ ಪಿತೃವೆನಿಸಿದನು.

ತುಲಸಿಯ ಪ್ರಾಧಾನ್ಯತೇ -ಕಾರ್ತಿಕಮಾಸದಲ್ಲಿ ತುಲಸಿಯಿoದ ನಾರಾಯಣನನ್ನು ಪೂಜಿಸಿದರೆ ಅಶ್ವಮೇಧಯಾಗದ ಫಲವುಲಭಿಸುತ್ತದೆ . ಕಾರ್ತೀಕ ಮಾಸದಲ್ಲಿ ತುಲಸಿಯನ್ನು ನೋಡುವುದು,ಸ್ಪರ್ಶಿಸುವುದು ,ಧ್ಯಾನ,ನಾಮೋಚ್ಚಾರಣೆ ,ತುಲಸಿಯ ಸ್ತೋತ್ರ ಮಾಡುವುದು.ನೀರು ಹಾಕಿ ಬೆಳೆಸುವುದು,ಪೂಜೆ ಮಾಡುವುದು ,ನೀರನ್ನು ಹಾಕುವುಡು ಇವುಗಳು ಶುಭಕಾರಿ .
ದೃಷ್ಟಾ ಸ್ಪೃಷ್ಟಾ ತಥಾ ಧ್ಯಾತಾ ಕೀರ್ತಿತ ನಾಮತಸ್ತುತಾ |
ರೋಪಿತಾ ಸಿಂಚಿತಾ ನಿತ್ಯಂ ಪೂಜಿತಾ ತುಲಸೀ ಶುಭಾ |
ನವಧಾ ತುಲಸೀ ಭಕ್ತಿಂ ಯೇ ಕುರ್ವಂತಿ ದಿನೆ ದಿನೇ ||

ಸರ್ವಜನ ಸುಖಿನೋಭವಂತು


| ಶ್ರೀಕೃಷ್ಣಾರ್ಪಣಮಸ್ತು ||
*****


||ಶ್ರೀ ಕಾತಿ೯ಕ ಮಾಸ ಮಹಾತ್ಮೆ||

"ನ ಕಾತಿ೯ಕಸಮೋ ಮಾಸೋ, ನ ದೈವ೦ ಕೇಶವಾತ್ ಪರ೦|

ನ ವೇದಸದೃಶ೦ ಶಾಸ್ತ್ರ೦, ನ ತೀಥ೯೦ ಗ೦ಗಯಾ ಸಮ೦||" ಕಾತಿ೯ಕ ಮಾಸಕ್ಕೆ ಸಮನಾದ ಮಾಸವಿಲ್ಲಾ.ಕೇಶವನಿಗೆ ಸಮರಾದ ದೇವರಿಲ್ಲಾ ವೇದಕ್ಕೆ ಸದೃಶವಾದ ಶಾಸ್ತ್ರವಿಲ್ಲಾ ಗ೦ಗೆಗೆ ಸಮವಾದ ತೀಥ೯ವಿಲ್ಲಾ. ಕಾತಿ೯ಕ ಮಾಸವು ಪ್ರತಿ ಸ೦ವತ್ಸರದಲ್ಲಿ ಬರುವ ಎ೦ಟನೆಯ ಮಾಸವಾಗಿದೆ. ಶ್ರೀಕೃಷ್ಣ ಪರಮಾತ್ಮನು ದೇವಕಿ ದೇವಿಯ ಅಷ್ಟಮ (ಎ೦ಟನೆಯ) ಮಗನಾಗಿ ಅವತಾರ ಮಾಡಿದಾ. ದೇವರ ಅನೇಕ ಅವತಾರಗಳಿದ್ದರೂ ಶ್ರೀಕೃಷ್ಣನ ಅವತಾರಕ್ಕೆ ವಿಶೇಷತೆ ಇದೆ.ಹಾಗೆಯೇ ಎ೦ಟೆನೆಯ ಮಾಸವಾದ ಕಾತಿ೯ಕ ಮಾಸಕ್ಕೆ ವಿಶೇಷತೆ ಇದೆ. ಕೃತಿಕಾ ನಕ್ಷತ್ರದ ಸ೦ಬ೦ಧವುಳ್ಳ ಹುಣ್ಣಿವೆಯ ಮಾಸವನ್ನು ಕಾತಿ೯ಕಮಾಸವೆ೦ದು ಕರೆಯುವರು. ಇದನ್ನು "ವೈಷ್ಣವಮಾಸ" ಎ೦ದು ಸಹಾ ಹೇಳುತ್ತಾರೆ.ಮಾಸ ನಿಯಾಮಕ ಶ್ರೀಇ೦ದಿರಾದಾಮೋದರ "ಕಾತಿ೯ಕ೦ ಸವ೯ಮಾಸೇಭ್ಯ: ಸಹಸ್ರಫಲದ೦ ವಿದು:" ಈ ಮಾಸದಲ್ಲಿ ಮಾಡಿದ ಧಮ೯ ಕಾರ್ಯಗಳಿಗೆ ಸಹಸ್ರ ಫಲ.ಆದುದರಿ೦ದ ಕಾತಿ೯ಕ ಸ್ನಾನ, ದಾನ, ದೀಪಾರಾಧನೆ ಇವೆಲ್ಲವೂ ಶ್ರೀವಿಷ್ಣುವಿಗೆ ಪ್ರಿಯಕರವಾದವುಗಳು. ಈ ಮಾಸದಲ್ಲಿ ಕಾವೇರಿ ನದಿಯ ಸ್ನಾನದಿ೦ದ ಅಧಿಕ ಫಲ, ವಿಷ್ಣುಸಾಯುಜ್ಯಕ್ಕೆ ಸೋಪಾನವಾಗಿದೆ. ಈ ಮಾಸದಲ್ಲಿ ಮುಖ್ಯವಾಗಿ ಅನ್ನದಾನ.ತಿಲದಾನ, ಬೆಳ್ಳಿ, ಬ೦ಗಾರದಾನ,ಭೂಮಿದಾನ,ವಸ್ತ್ರದಾನ, ಗೋದಾನ ಮತ್ತು ಬ್ರಾಹ್ಮಣರಿಗೆ ಮೃಷ್ಟಾನ್ನ ಭೋಜನ ಇವುಗಳೆಲ್ಲಾ ಶ್ರೇಷ್ಟವಾಗಿವೆ. ನಿಷಿದ್ಧ ಕಮ೯ಗಳು: ಈ ಮಾಸದಲ್ಲಿ ತೈಲಾಭೃ೦ಗವನ್ನು ಮಾಡಬಾರದು.ಪರಾನ್ನವನ್ನು ತಿನ್ನಬಾರದು.ಪರಾನ್ನವನ್ನು ಬಿಟ್ಟರೆ ಚ೦ದ್ರಾಯಣವ್ರತದ ಫಲವು,ಪರಾ೦ಗನೆ ಸಹವಾಸ,ಪರನಿ೦ದೆ ಮಾಡಲೇಬಾರದು.ಈರುಳ್ಳಿ,ಬೆಳ್ಳುಳ್ಳಿ,ನುಗ್ಗೆಕಾಯಿ,ನಾಯಿಕೊಡೆ,ದೇಟು,ಮೂಲ೦ಗಿ,ಕೆ೦ಪು ಇ೦ಗು,ಸೂರೆಕಾಯಿ,ಬದನೆಕಾಯಿ,ಬೂದುಗು೦ಬಳ,ಸೀಮೆಬದನೆಕಾಯಿ ಇವುಗಳನ್ನು ತಿನ್ನಲೇಬಾರದು.ದ್ವಿದಲ ಧಾನ್ಯಗಳು ವಜ್ಯ೯. ಈ ಮಾಸದಲ್ಲಿ ತುಳಸಿ, ಧಾತ್ರೀಗಳಿಗೆ ಪ್ರಾಧಾನ್ಯತೆ ಇದೆ.ತುಳಸಿಪತ್ರ,ಧಾತ್ರಿ ಪತ್ರಗಳಿ೦ದ ಶ್ರೀವಿಷ್ಣುವನ್ನು ಪೂಜಿಸಿದರೆ ಅತಿಶಯವಾದ ಪುಣ್ಯ ಉ೦ಟಾಗುತ್ತದೆ.ಈ ಎರಡು ಪತ್ರಗಳ ಸ್ಪಶ೯ದಿ೦ದ ಸಕಲದೋಷ ಪರಿಹಾರ ವಾಗುತ್ತವೆ. "ವಿಲಯ೦ ಯಾ೦ತಿ ಪಾಪಾನಿ ಬ್ರಹ್ಮಹತ್ಯಾದಿಕಾನಿ ಚ| ತುಲಸಿಧಾತ್ರೀಯುಕ್ರೋದೈ: ಸಿಕ್ರೇ ಸತಿ ಹಿ ಕಾತಿ೯ಕೇ"|| ತುಲಸೀ ಧಾತ್ರೀಯುಕ್ತವಾದ ಜಲದಿ೦ದ ಪ್ರೋಕ್ಷಣೆಮಾಡುವದರಿ೦ದ ಬ್ರಹ್ಮಹತ್ಯಾದಿ ಪಾಪಗಳು ದೂರವಾಗುವವು.ತುಲಸಿಯಿ೦ದ ನಾರಾಯಣನನ್ನು ಪೂಜಿಸಿದರೆ ಅಶ್ವಮೇಧ ಫಲ, ನಿತ್ಯ ತುಳಸಿ ದಶ೯ನ,ಸ್ಪಶ೯,ಗಿಡಕ್ಕೆ ನೀರುಹಾಕುವದು,ತುಳಸಿ ಸ್ತೋತ್ರ, ನಾಮೋಚ್ಚಾರಣೆ ಇವೆಲ್ಲ ಶುಭಕರ.ಬ್ರಹ್ಮದೇವರ ಆನ೦ದಾಶ್ರಗಳಿ೦ದ ಧಾತ್ರೀ ಎ೦ಬ ಗಿಡ ಜನಿಸಿತು.ಈ ಧಾತ್ರೀಯು ಸಕಲ ಜನರನ್ನು ಪೋಷಿಸುವದರಿ೦ದ ಧಾತ್ರೀ ಎ೦ದು, ರೋಗಪರಿಹಾರಕವಾದುದರಿ೦ದ "ಅಮೃತಾ" ಎ೦ದು ಹೆಸರನ್ನು ಪಡೆಯಿತು.ಧಾತ್ರೀಯು ಸಪ್ತಮಿ,ನವಮಿ, ಭಾನುವಾರ,ಅಮವಾಸ್ಯೆ,ಸ೦ಕ್ರಮಣ, ಗ್ರಹಣಕಾಲದಲ್ಲಿ ಸ್ನಾನಕ್ಕಾಗಲೀ,ತಿನ್ನುವದಕ್ಕಾಗಲೀ ನಿಷಿದ್ಧವಾಗಿದೆ.ಧಾತ್ರೀಯ ನೆರಳು ಪಿತೃಗಳಿಗೆ ಪ್ರಿಯವಾದದ್ದು, ಧಾತ್ರೀ ನೆರಳಿನಲ್ಲಿ ಪಿ೦ಡ ಪ್ರಾದನ ಮಾಡಿದರೆ ಜನಾಧ೯ನನು ಪ್ರೀತನಾಗಿ ಪಿತೃಗಳು ಮುಕ್ತರಾಗುವರು. ಬಲಿಪಾಡ್ಯ ಇ೦ದು ತೈಲಾಭೃ೦ಗ ಮಾಡಬೇಕು.ಇದು ಸ್ವಯ೦ ಸಿದ್ಧ ಶುಭ ಮೂಹುತ೯.ಬೆಳಗಿನ ಜಾವ ಗೋಪೂಜೆಯನ್ನು ಮಾಡಬೇಕು. ಲಕ್ಷ್ಮೀಪೂಜೆ ಕುಬೇರ ಪೂಜೆಯನ್ನು ಮಾಡಬೇಕು.ಮಾರನೆದಿನ ಯಮದ್ವೀತಿಯಾ ಭಗಿನಿ ಪೂಜೆ.ತೃತಿಯಾ "ವಿಷ್ಣುಗೌರಿ ವ್ರತ".ಪ೦ಚಮಿಯ೦ದು "ಜಯಾವೃತ".ಕಾತಿ೯ಕ ಮಾಸದಲ್ಲಿ ಶುಕ್ಲ ಷಷ್ಟಿಯನ್ನು "ಮಹಾ ಷಷ್ಟಿಯ೦ದು" ಕರೆಯಲಾಗಿದೆ. ಶುಕ್ಲ ಸಪ್ತಮಿಯ೦ದು "ಶಾಕ ಸಪ್ತಮಿ".ಇದನ್ನು ಪಲ್ಯೇದ ಹಬ್ಬವೆ೦ದು ಸಹಾ ಹೇಳುತ್ತಾರೆ.ಮರು ದಿನ "ಗೋಪಾಷ್ಟಮಿ" ಗೋಪೂಜೆ,ಗೋಗ್ರಾಸ,ಗೋಪ್ರದಕ್ಷಣೆ, ಮತ್ತು ಕರುಸಹಿತವಾದ ಗೋವನ್ನು ತ೦ದು ಗವ೦ತಯಾ೯ಮಿ "ಶ್ರೀಗೋಪಾಲ ಕೃಷ್ಣಾಯ ನಮಾ:" ಎ೦ದು ಗೋ ಮತ್ತು ಕರುವನ್ನು ಪೂಜಿಸಬೇಕು.ನವಮಿ ಅಕ್ಷಯ ನವಮಿ ,ಆರೋಗ್ಯ ನವಮಿ.ಇ೦ದು ಮಥುರಾ ಪ್ರದಕ್ಷಿಣೆ, ಕೂಷ್ಮಾ೦ಡ ದಾನವನ್ನು ಮಾಡಬೇಕು.ದಶಮಿಯ೦ದು ಸಾವ೯ಭೌಮ ವೃತ.ಏಕಾದಶಿ ದಿನದ೦ದು ದೀಪ ವೃತ.ಕಾತಿ೯ಕಶುದ್ಧ ಏಕಾದಶಿಯು "ಪ್ರಭೋಧಿನಿ" ಏನಿಸಿದೆ.ಇದೇ ದಿವಸ "ಭೀಷ್ಮ ಪ೦ಚಕ ವೃತ".ಮಾರನೆದಿನ "ಉತ್ಥಾನದ್ವಾದಶಿ" "ತುಲಸಿ ವಿವಾಹ" "ಪ್ರಬೋಧೋತ್ಸವ".ಮರುದಿನ "ವೈಕು೦ಠ ಚತುದ೯ಶಿ". ಕಾತಿ೯ಕ ಮಾಸದ ಹುಣ್ಣಿಮೆಯ೦ದು ಕೃತಿಕಾ ನಕ್ಷತ್ರವು ಸೇರಿದ್ದರೆ ಅದನ್ನು "ಮಹಕಾತಿ೯ಕೀ" ಎ೦ದು ಕರೆಯುತ್ತರೆ.ಕಾತಿ೯ಕ ಪೂಣಿ೯ಮಾ ವೇದವ್ಯಾಸ ಪೂಜೆ.ಸಾಯ೦ಕಾಲ ಮತ್ಸ ಜಯ೦ತಿ.ಇ೦ದು ದೀಪೋತ್ಸವನ್ನು ಮಾಡಬೇಕು.ಧಾತ್ರೀಹೊಮ.ರಕ್ಷಾಹೋಮ. ಇನ್ನು ಕಾತಿ೯ಕ ಮಾಸದ ಕೃಷ್ಣಪಕ್ಷದಲ್ಲಿ "ರಮಾ ಏಕಾದಶಿ,ದ್ವಾದಶಿ ಧನ್ವ೦ತರೀ ಜಯ೦ತೀ,ಧನ್ವ೦ತರೀ ಹೋಮ,ಗೋವತ್ಸ ದ್ವಾದಶಿ, ಹಾಗೂ ವೈಕು೦ಠ ಚತುದ೯ಶಿ" ಮುಖ್ಯವಾದುವಗಳು.

ಸಪ್ತಮಿಯ ದಿನ ಅದರಲ್ಲೂ ವಿಶೇಷವಾಗಿ ಕಾರ್ತಿಕ ಮಾಸದ ಸಪ್ತಮಿಯ ದಿನ ದೀಪಾರಾಧನೆ

ಕಾರ್ತಿಕ ಮಾಸ ಪ್ರಾರಂಭವಾದ ದಿನದಿಂದ ಕೂಡಲೇ ಆ ದಿನ ಸಂಜೆಯಿಂದಲೇ ಒಂದು ದೀಪವನ್ನು ಹಚ್ಚಲಾಗುತ್ತದೆ ಅಂದರೆ ಆಜ್ಞಾನ ಎನ್ನುವುದನ್ನು ತೊಲಗಿಸಿ ಸುಜ್ಞಾನ ಎನ್ನುವುದು ಶಿವನಿಂದ ಪ್ರಾಪ್ತಿಯಾಗಬೇಕು ಎಂದು ಈ ಕಾರ್ತಿಕ ಮಾಸದಲ್ಲಿ ಶಿವನ ಕೂಡ ಆರಾಧನೆ ಮಾಡಲಾಗುತ್ತದೆ.

ಕಾರ್ತಿಕ ಮಾಸದಲ್ಲಿ ಬಹಳಷ್ಟು ವಿಧವಿಧವಾದ ದೀಪಗಳನ್ನು ಆರಾಧನೆ ಮಾಡಲಾಗುತ್ತದೆ. ನಂದಾದೀಪ , ಕಂಬದ ದೀಪ, ನೀರಿನ ದೀಪ, ಕುಷ್ಮಾಂಡ ದೀಪ, ಇದರ ಜೊತೆಗೆ ಅಮಕಲ ದೀಪ ಅಂದರೆ ನೆಲ್ಲಿಕಾಯಿಯ ದೀಪ, ಗೂಡು ದೀಪ, ಗೂಡುದೀಪ ಎಂಬುದನ್ನು ನೀವು ಕೇಳಿರಬಹುದು ಹಳ್ಳಿಗಳ ಕಡೆ ಇಂದಿಗೂ ಕೂಡ ಯಾವುದಾದರೂ ಗ್ರಾಮದೇವತೆಗಳ ಹಬ್ಬಗಳನ್ನು ಮಾಡುವಾಗ ತಂಬಿಟ್ಟನ್ನು ಮಾಡುತ್ತಾರೆ, ಬೆಲ್ಲದಲ್ಲಿ ದೀಪವನ್ನು ಹಚ್ಚುವುದು ಕೂಡ ಇದೆ. ಅದರ ಜೊತೆಗೆ ತಂಬಿಟ್ಟಿನ ಮಧ್ಯದಲ್ಲಿ ತಂಬಿಟ್ಟಿನ ದೀಪವನ್ನು ಅಥವಾ ತುಪ್ಪದ ದೀಪವನ್ನು ಇಟ್ಟು ಕೊಂಡು ಹೋಗಿ ದೇವರಿಗೆ ಅರ್ಪಿಸುವ ಪದ್ಧತಿಯೂ ಇದೆ.

ಇಂದು ಕಾರ್ತಿಕ ಮಾಸದ ಏಳನೇ ದಿನಕ್ಕೆ ನಾವು ಕಾಲಿಟ್ಟಿದ್ದೇವೆ. ಇಂದು ಸಪ್ತಮಿ ತಿಥಿ, ಬುಧವಾರದ ದಿನ, ಇಂದಿನಿಂದಲೇ ದೀಪವನ್ನು ಬೆಳಗಿಸುವುದು ಪ್ರಾರಂಭ ಮಾಡಿ. ದೀಪವನ್ನು ಹಚ್ಚಿದ ನಂತರ ಅಥವಾ ಹಚ್ಚುವಾಗ ಈ ಶ್ಲೋಕವನ್ನು ಹೇಳಿ “ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ, ಓಂ ಶಾಂತಿ ಶಾಂತಿ ಶಾಂತಿಹಿ” ಈ ಮಂತ್ರವನ್ನು ಹೇಳಿಕೊಂಡು ದೀಪವನ್ನು ಹಚ್ಚಬೇಕು.


ಯಾರು ಕಾರ್ತಿಕ ಮಾಸದಲ್ಲಿ ವ್ಯವಸ್ಥಿತವಾಗಿ ದೀಪವನ್ನು ಹಚ್ಚುತ್ತಾರೋ, ದೀಪಾರಾಧನೆ ಯನ್ನು ಮಾಡುತ್ತಾರೋ ಅಂಥವರಿಗೆ ನಿಮ್ಮ ಮನೆಯಲ್ಲಿ ಯಾವುದೇ ಮೃತ್ಯು ದೋಷಗಳು ಇರುವುದಿಲ್ಲ ಮನೆಯಲ್ಲಿ ಸುಜ್ಞಾನ ಎನ್ನುವುದು ಇರುತ್ತದೆ.ಆಯಾ ಕಾಲಕ್ಕೆ ಬುದ್ಧಿ ಶಕ್ತಿ ಎನ್ನುವುದು ಪ್ರಾಪ್ತಿಯಾಗುತ್ತದೆ. ಕುಟುಂಬದಲ್ಲಿ ಅನ್ಯೋನ್ಯತೆ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸಾಂಸಾರಿಕ ಜೀವನದಲ್ಲಿ ಕೌಟುಂಬಿಕ ಆನ್ಯೂನ್ಯತೆಯು ಪ್ರಾಪ್ತಿಯಾಗುತ್ತದೆ .
************


ದೀಪಾವಳಿಯ ನಂತರ ಕಾರ್ತಿಕ ಮಾಸವು ಶುರುವಾಗುತ್ತದೆ. 

ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ.

ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ.

ಕಾರ್ತಿಕ ಮಾಸದಲ್ಲಿ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ವಸಿಷ್ಠ ಋಷಿಗಳು ಕೆಲವೊಂದು ವಿಧಾನಗಳನ್ನು ಸೂಚಿಸಿದ್ದಾರೆ.

ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಹೆಚ್ಚು ಫಲಪ್ರದವಾಗುತ್ತದೆ.

ಕಾರ್ತಿಕ ಮಾಸದಲ್ಲಿ ಪವಿತ್ರ ಸ್ನಾನ

ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಮೂರು ಬಾರಿ ಸ್ನಾನ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ಸ್ನಾನ ಮಾಡುವುದರಿಂದ, ಭೌತಿಕವಾಗಿ ದೇಹದ ಕಲ್ಮಷಗಳನ್ನು ತೊಳೆದುಕೊಳ್ಳಬಹುದು. ಅದರೊಂದಿಗೆ ಮನಸ್ಸಿನ ಕಲ್ಮಷಗಳನ್ನು ಕಳೆದುಕೊಳ್ಳುವುದರೊಂದಿಗೆ, ನಮ್ಮ ಭಾವನೆಗಳನ್ನು, ಮನಸ್ಸಿನ ಕೋಪ, ತಾಪವನ್ನು ನಿಯಂತ್ರಿಸಿಕೊಳ್ಳಬಹುದು. ನದಿ ತೀರಗಳಲ್ಲಿ ಮಾಡುವ ಜಲ ಸ್ನಾನವು ಜಲ ಚಿಕಿತ್ಸೆಗೆ ಪೂರಕವಾಗಿದೆ. ಪವಿತ್ರ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸು ಎರಡು ಶುದ್ಧವಾಗುತ್ತದೆ.

ದೀಪಗಳನ್ನು ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತ ಬೆಳಗಬೇಕೆಂಬ ನಿಯಮವಿದೆ. ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ. ತುಪ್ಪದ ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗುತ್ತವೆ. ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತದೆ. ಅದರೊಂದಿಗೆ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಹೀಗೆ ಮನೆಯಲ್ಲಿ ದೀಪ ಬೆಳಗುವುದರಿಂದ. ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗುತ್ತದೆ.

ದೀಪ ಹಚ್ಚಿದ ನಂತರ ತುಳಸಿ ದೇವಿಯ ಪೂಜೆ ಮಾಡಬೇಕು. ತುಳಸಿ ಒಂದು ಗಿಡಮೂಲಿಕಾ ಸಸ್ಯವಷ್ಟೇ ಅಲ್ಲ, ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ಶಕ್ತಿಯಾಗಿದೆ. ತುಳಸಿ ಪೂಜೆಯನ್ನು ಪ್ರತಿನಿತ್ಯ ಮಾಡುವ ಮಹಿಳೆಯರಿಗೆ ಸೌಭಾಗ್ಯ ಸಿದ್ಧಿಸುತ್ತದೆ. ತುಳಿಸಿ ಗಿಡದ ಮುಂದೆ ದೀಪಾರಾಧಾನೆ ಮಾಡುವುದು ತ್ಯಾಗದ ಸಂಕೇತವಾಗಿದೆ.

ಶಿವ ಮತ್ತು ವಿಷ್ಣುವಿನ ಆರಾಧನೆಯೊಂದಿಗೆ ಶಿವ ಮತ್ತು ವಿಷ್ಣು ಎರಡೂ ಒಂದೇ ಎನ್ನುವ ಭಾವ ಮೂಡತ್ತದೆ. ಶಿವ ಪ್ರಜ್ಞೆಯ ಸಂಕೇತವಾದರೆ, ವಿಷ್ಣುವು ಸ್ಥಿತಿಕಾರನಾಗಿದ್ದಾನೆ. ಹೇಗೆ ಬ್ರಹ್ಮಾಂಡವು ಸ್ಥಿತಿ ಮತ್ತು ಪ್ರಜ್ಞೆಯಿಂದ ಆವೃತ್ತವಾಗಿದೆಯೋ ಹಾಗೆಯೇ ಶಿವ ಮತ್ತು ವಿಷ್ಣುವಿನ ಪ್ರಜ್ಞೆಯು ನಮ್ಮಲ್ಲಿ ಅಡಕವಾಗಿದೆ. ಇಂತಹ ಪ್ರಜ್ಞೆಯೇ ನಮ್ಮನ್ನು ಅಧ್ಯಾತ್ಮ ಸಾಧನೆಯತ್ತ ಮುನ್ನಡೆಸುತ್ತದೆ.

ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರದ ಅಧಿಪತಿ ಚಂದ್ರ. ಚಂದ್ರ ಮನೋಕಾರರ ಅಂದರೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವವ. ಯಾರು ತಮ್ಮ ಮನಸ್ಸನನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ. ಅದರೊಂದಿಗೆ ತಮ್ಮ ವ್ಯಕ್ತಿತ್ವ ಬೆಳವಣಿಗೆಗೂ ಪೂರಕವಾಗುತ್ತಾರೆ.


ಸೋಮವಾರದಂದು ಪ್ರದೋಷ ವ್ರತವನ್ನು ಆಚರಿಸುತ್ತಾರೋ, ಮನೋಕಾರಕ ಚಂದ್ರನನ್ನೇ ತನ್ನ ಶಿರದಲ್ಲಿ ಧಾರಣೆ ಮಾಡಿಕೊಂಡಿರುವ ಶಿವನನ್ನು ಕುರಿತು ಧ್ಯಾನ ಮಾಡುತ್ತಾರೋ, ಅವರು ಅತ್ಯುತ್ತಮ ಜ್ಞಾನವಂತರಾಗುತ್ತಾರೆ.
*********


ದೀಪೋತ್ಸವ - ಒಂದು ಚಿಂತನೆ "

ಕಾರ್ತೀಕ ಮಾಸದಲ್ಲಿ ಕೃತ್ತಿಕಾ ನಕ್ಷತ್ರದಲ್ಲಿ ಸಾಯಂಕಾಲ ಚಿಕ್ಕ ಮತ್ತು ದೊಡ್ಡ ಅನಿಲ ದೀಪಗಳನ್ನು ಮನೆಯಲ್ಲಿ ಒಳಗೂ, ಹೊರಗೂ, ಸುತ್ತಲೂ ಹಚ್ಚಬೇಕು ಎಂದು " ಜ್ಯೋತಿಸ್ಸಿದ್ಧಾಂತ " ದಲ್ಲಿಯೂ, ಹಾಗೆಯೇ ಭಾರದ್ವಾಜ ಸ್ಮೃತಿಯಲ್ಲಿಯೂ ಕಾರ್ತೀಕ ಮಾಸದ ಹುಣ್ಣಿಮೆಯ ದಿನ ದೀಪ ದಾನ ಮಾಡಬೇಕು ಎಂದು ಹೇಳಿರುವುದರಿಂದ ಹುಣ್ಣಿಮೆಯ ತಿಥಿಯು ಇರುವ ಸಾಯಂಕಾಲದಲ್ಲಿಯೇ ದೀಪೋತ್ಸವ ಆಚರಿಸಬೇಕೆಂದು ನಿರ್ಣಯದಿಂದ ತಿಳಿದು ಬರುತ್ತದೆ.

ತತ್ರೈವ ತತ್ಪೂಜಾಪ್ರಕಾರಃ ಪಂಚರಾತ್ರೇ ವಿಸ್ತರಣೇ ಅಭಿಮತಃ ।

ಶ್ರೀ ಬ್ರಹ್ಮೋವಾಚ ...

ದೇವದೇವ! ಜಗನ್ನಾಥ! ವಾಂಛಿತಾರ್ಥ ಫಲಪ್ರದ ।
ದೀಪೋತ್ಸವ ವಿಧಾನಂ ಮೇ ಬ್ರೂಹಿ ಲಕ್ಷಣತಃ ಪ್ರಭೋ ।।

ಶ್ರೀ ಭಗವಾನ್ ಉವಾಚ :-

ದೀಪೋತ್ಸವ: ಕೃತೋ ಯೇನ ಸರ್ವಾಭೀಷ್ಟಪ್ರದಾಯಕಃ ।
ವರ್ಧಂತೇ ತಸ್ಯ ಸತತಂ ಜ್ಞಾನಸೌಭಾಗ್ಯಸಂಪದಃ ।।
ದೀಪೋತ್ಸವಂ ಯಃ ಕುರುತೇ ತಂ ಯಮೋಪಿ ನ ಪಶ್ಯತಿ ।
ಅಧಯೋ ವ್ಯಾಧಯೋ ಬ್ರಹ್ಮನ್ ! ನ ಸ್ಪೃಶಂತಿ ಕದಾಚನ ।।

ಊರ್ಜೆ ಸೀತೇ ಪೂರ್ಣಿಮಾಯಾ೦ ಕೃತೇ ಸ್ನಾನಾದಿ ಸತ್ಕ್ರಿಯಃ ।
ದೀಪಸ್ಯ ಪುರತೋ ಮಂತ್ರಮಿಮಮುಚ್ಚಾರಯೇಚ್ಚುಚಿ: ।।

ಆದ್ಯ ದೀಪೋತ್ಸವಂ ದೇವ ಕರಿಷ್ಯೆ ತ್ವತ್ ಪ್ರಸಾದತಃ ।
ನಿರ್ವಿಘ್ನ೦ ಸಿದ್ಧಿಮಾಯಾತು ಯಥೋಕ್ತ ಫಲದೋ ಭವ ।
ಇತಿ ಸಂಕಲ್ಪ್ಯ ದೀಪಸ್ಯ ಪಾತ್ರಾಣಿ ಪರಿಸಾದಯೇತ್ ।।

ದೀಪೋತ್ಸವ ರೀತಿಯನ್ನು " ಪಂಚರಾತ್ರ " ದಲ್ಲಿ ವಿಸ್ತಾರವಾಗಿ ಹೇಳಿದ್ದಾರೆ.
ಶ್ರೀ ಚತುರ್ಮುಖ ಬ್ರಹ್ಮದೇವರು ಹೀಗೆ ಹೇಳುತ್ತಾರೆ..

" ಜಗತ್ತಿಗೆ ಒಡೆಯನಾದ - ದೇವದೇವೋತ್ತಮನಾದ - ಸರ್ವೋತ್ತಮನಾದ - ಇಷ್ಟಾರ್ಥ ಕೊಡುವ ಸರ್ವ ಸಮರ್ಥನಾದ ಶ್ರೀ ಹರಿಯೇ! ದೀಪೋತ್ಸವ ಮಾಡುವ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನನಗೆ ಹೇಳುವ ಕೃಪೆ ಮಾಡು " ಯೆಂದು ಶ್ರೀ ಚತುರ್ಮುಖ ಬ್ರಹ್ಮದೇವರು ಪ್ರಾರ್ಥಿಸಿದಾಗ..
ಶ್ರೀ ಹರಿ ಪರಮಾತ್ಮನು...
ದೀಪೋತ್ಸವವು ಸಕಲ ಅಭೀಷ್ಟಗಳನ್ನೂ ಕೊಡುತಕ್ಕಂತಹುದಾಗಿದೆ. ಇಂಥಹಾ ದೀಪೋತ್ಸವವನ್ನು ಯಾವನು ಮಾಡುತ್ತಾನೋ ಅವನಿಗೆ ನಿರಂತರವಾಗಿ ಜ್ಞಾನಾಭಿವೃದ್ಧಿಯಾಗುತ್ತದೆ ಮತ್ತು ಅವನ ಮನೆಯಲ್ಲಿ ನಿರಂತರವಾಗಿ ಸೌಭಾಗ್ಯ ಸಂಪದ ಹೆಚ್ಚುತ್ತದೆ.
ಯಾವ ಮಾನವನು ದೀಪೋತ್ಸವವನ್ನು ಮಾಡುತ್ತಾನೋ ಅವನನ್ನು " ಯಮ " ನೂ ಕಣ್ಣೆತ್ತಿ ನೋಡುವುದಿಲ್ಲ.
ಮಾನಸಿಕ ವ್ಯಥೆಯೂ ಅವನನ್ನು ಎಂದೂ ಪೀಡಿಸುವುದಿಲ್ಲ. ಅವನಿಗೆ ಶರೀರದಲ್ಲಿ ರೋಗಾದ್ಯುಪದ್ರವಗಳು ಎಂದೂ ಉಂಟಾಗುವುದಿಲ್ಲ.
ಕಾರ್ತೀಕ ಶುಕ್ಲ ಹುಣ್ಣಿಮೆಯ ದಿನ ಸ್ನಾನ ಮುಂತಾದ ದೈನಂದಿನ ಕಾರ್ಯವನ್ನು ಪೂರೈಸಿ ಶುಚಿಯಾಗಿ ಈ ಮಂತ್ರವನ್ನು ಉಚ್ಛರಿಸಬೇಕು. ಆ ಮಂತ್ರ ಹೀಗಿದೆ..

ಆದ್ಯ ದೀಪೋತ್ಸವಂ ದೇವ ಕರಿಷ್ಯೆ ತ್ವತ್ಪ್ರಸಾದತಃ ।
ನಿರ್ವಿಘ್ನ೦ ಸಿದ್ಧಮಾಯಾತು ಯಥೋಕ್ತ ಫಲದೋ ಭವ ।।

ಪರಮಾತ್ಮನೇ! ಈ ದಿನ ನಿನ್ನ ಅನುಗ್ರಹದಿಂದ ದೀಪೋತ್ಸವವನ್ನು ಮಾಡಲಿದ್ದೇನೆ. ಈ ದೀಪೋತ್ಸವವು ವಿಘ್ನವಿಲ್ಲದೇ ನಡೆಯುವಂತಾಗಲಿ. ನನಗೆ ನಿನ್ನ ಅನುಗ್ರಹದಿಂದ ದೀಪೋತ್ಸವದ ಶಾಸ್ತ್ರೋಕ್ತವಾದ ಫಲಗಳು ಉಂಟಾಗಲಿ. ಈ ಅಭಿಪ್ರಾಯದ ಮಂತ್ರವನ್ನು ಹೇಳಿ ಸಂಕಲ್ಪ ಮಾಡಿ ದೀಪದ ಪಾತ್ರಗಳನ್ನೆಲ್ಲಾ ಒದಗಿಸಿಕೊಳ್ಳಬೇಕು.
" ದೀಪಾ ಪಾತ್ರಾಣಿ ( ದೀಪದ ಪಾತ್ರಗಳು ) "
ಅಯೋಮಯಾನಿ ತಾಮ್ರಾಣಿ ಕಾಂಸ್ಯ ಸ್ವರ್ಣಮಯಾನಿ ಚ ।।
ದೀಪದ ಪಾತ್ರಗಳು :-
ಕಬ್ಬಿಣ, ತಾಮ್ರ, ಕಂಚು ಮತ್ತು ಬಂಗಾರ ಮುಂತಾದವುಗಳಿಂದ ನಿರ್ಮಿತವಾಗಿರಬಹುದು.
" ಪಾತ್ರಾ ವಿಶೇಷೇ - ಫಲ ವಿಶೇಷಃ "
ದೇವತೆಗಳಿಗೆ ಅಧಿಪತಿಯಾದ ಬ್ರಹ್ಮನೇ!
1. ಯಾವನು ಮಣ್ಣಿನ ಪಾತ್ರೆಯಲ್ಲಿ ಹಸುವಿನ ತುಪ್ಪದಿಂದ ದೀಪ ಹಚ್ಚಿ ದಾನ ಮಾಡುತ್ತಾನೋ ಅಥವಾ ನನಗೆ ಅರ್ಪಿಸುತ್ತಾನೋ ಅವನು ಜ್ಞಾನಿಯೂ - ಯೋಗಿಯೂ - ಸುಖವಂತನೂ ಆಗುತ್ತಾನೆ.
2. ಕಬ್ಬಿಣದಿಂದ ನಿರ್ಮಿತವಾದ ಪಾತ್ರೆಯಿಂದ ಶ್ರೀ ಹರಿಗೆ ದೀಪವನ್ನು ಸಮರ್ಪಿಸಿದವನಿಗೆ ಅಂಥಹಾ ೧೦೦ ದೀಪಗಳನ್ನು ಅರ್ಪಿಸಿದರೆ ಮಾತ್ರವೇ ಫಲ ಸಿದ್ಧಿಯಾಗುತ್ತದೆ.
3. ಕಂಚಿನ ಪಾತ್ರೆಯಲ್ಲಿ ದೀಪವನ್ನು ಹಚ್ಚಿ ಯಾವ ಮಾನವನು ಶ್ರೀ ಹರಿಯನ್ನು ಪೂಜಿಸುತ್ತಾನೋ ಅವನಿಗೆ ಒಳ್ಳೆಯ ತೇಜಸ್ಸು, ಉತ್ತಮವಾದ ಸೌಭಾಗ್ಯವೂ ಹೆಚ್ಚುತ್ತದೆ.
4. ಯಾವನು ತಾಮ್ರದ ಪಾತ್ರೆಯಲ್ಲಿ ದೀಪವನ್ನು ಹಚ್ಚಿ ಭಕ್ತಿಯಿಂದ ದಾನ ಮಾಡುತ್ತಾನೋ ಅಂಥವನು ೧೦೦೦ ದೀಪಗಳನ್ನು ಹಚ್ಚಿ ಸಮರ್ಪಿಸಿದರೆ ಉತ್ತಮ ಫಲಗಳನ್ನು ಪಡೆಯುತ್ತಾನೆ.
5. ಬೆಳ್ಳಿಯ ಪಾತ್ರೆಯಲ್ಲಿ ಯಾವನು ದೀಪವನ್ನು ಹಚ್ಚಿ ಸಮರ್ಪಿಸುತ್ತಾನೋ ಆ ಮನುಷ್ಯನ ಪುಣ್ಯವು " ಲಕ್ಷ ಪಾಲು " ಹೆಚ್ಚುತ್ತದೆ.
6. ಯಾವನು ಬಂಗಾರದ ಪಾತ್ರೆಯಲ್ಲಿ ದೀಪವನ್ನು ಉರಿಸಿ ಶ್ರೀ ಹರಿಗೆ ಸಮರ್ಪಿಸುತ್ತಾನೋ ಅವನಿಗೆ ಅನಂತ ಸಂಖ್ಯೆಯಿಂದ ಗುಣಿತವಾದ ( ಲೆಕ್ಕವಿಲ್ಲದಷ್ಟು ಸಂಖ್ಯೆಯ ) ಫಲವು ಉಂಟಾಗುತ್ತದೆ.

ಅವನು ನನ್ನನ್ನೇ ( ಶ್ರೀ ಹರಿಯನ್ನೇ ) ಹೊಂದುತ್ತಾನೆ ಇದರಲ್ಲಿ ಸಂಶಯವಿಲ್ಲ!

ದೇವಪಾರ್ಶ್ವೇ ಸ್ವರ್ಣರೌಪ್ಯತಾಮ್ರಕಾಂಸ್ಯಸಾಪಿಷ್ಟಕೈ: ।
ಅಲಾಭೇ ಮೃನ್ಮ ಯೇನಾಪಿ ದೀಪಾ ದೇಯಾ ವಿಚಕ್ಷನೈ ।।

ದೇವರ ಪಾರ್ಶ್ವದಲ್ಲಿ ದೀಪ ಹಚ್ಚಲು ಬಂಗಾರ - ಬೆಳ್ಳಿ - ತಾಮ್ರ - ಕಂಚು ಅಥವಾ ಹಿಟ್ಟು ಇವುಗಳಿಂದ ದೀಪದ ಪಾತ್ರೆಯನ್ನು ಮಾಡಬೇಕು. ಹೀಗೆ ಮಾಡಲು ಸಾಧ್ಯವಾಗದಿದ್ದರೆ ಮಣ್ಣಿನಿಂದ ಮಾಡಿದ ದೀಪದ ಪಾತ್ರೆಯನ್ನು ಸಂಗ್ರಹಿಸಬೇಕು. ಹರಿಪ್ರಸಾದಾಕಾಂಕ್ಷಿಗಳಾದ ಕುಶಲ ಜೀವರು ಆಯಾ ದೀಪದ ಪಾತ್ರೆಗಳಲ್ಲಿ ಶ್ರೀಹರಿಯ ಪ್ರೀತ್ಯರ್ಥವಾಗಿ ದೀಪಗಳನ್ನು ಹಚ್ಚಿ ಶ್ರೀ ಹರಿಗೆ ಸಮರ್ಪಿಸಬೇಕು.
1. ಯಾವನು ಪರಿಶುದ್ಧವಾದ ಮನಸ್ಸುಳ್ಳವನಾಗಿ ನನಗೆ ( ಶ್ರೀ ಹರಿಗೆ " ಕರ್ಪೂರದ ದೀಪ " ಸಮರ್ಪಿಸುತ್ತಾನೋ ೧೦೦ ವರ್ಷಗಳ ವರೆಗೂ ಅವನ ಪುಣ್ಯ ಮುಗಿಯುವುದಿಲ್ಲ.
2. " ಹಸುವಿನ ತುಪ್ಪ " ದಿಂದ ದೀಪವನ್ನು ಹಚ್ಚಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ.
3. " ಕುಸುಬೆ ಎಣ್ಣೆ " ಯಿಂದ ದೀಪವನ್ನು ಬೆಳಗಿಸಿದರೆ ಅಮಂಗಲ ಪರಿಹಾರವಾಗುತ್ತದೆ ಮತ್ತು ಕೀರ್ತಿಯೂ ಹೆಚ್ಚುತ್ತದೆ.
4. " ಕೊಬ್ಬರಿ ಎಣ್ಣೆ " ಯಿಂದ ದೀಪವನ್ನು ಹಚ್ಚಿದರೆ ಸೌಖ್ಯವು ಹೆಚ್ಚಾಗುತ್ತದೆ.
ವಿಶೇಷ ವಿಚಾರ : -
ಹರಳೆಣ್ಣೆ ಮತ್ತು ಎಮ್ಮೆಯ ತುಪ್ಪವನ್ನು ದೀಪ ಹಚ್ಚಲು ಸರ್ವಥಾ ಉಪಯೋಗಿಸಬಾರದು.

" ದೀಪದ ಬತ್ತಿಯ ಕುರಿತು ಮಾಹಿತಿ "
1. ತಾವರೆ ನಾರಿನಿಂದ ಬತ್ತಿಯನ್ನು ಮಾಡಿ ದೀಪವನ್ನು ಉರಿಸಿದರೆ ಸಾರ್ವಭೌಮತ್ವವೂ, ಎಲ್ಲಾ ಅಭಿಲಾಷೆಗಳೂ ಸಿದ್ಧಿಯಾಗುತ್ತವೆ.
2. ಅಗಸೆ ನಾರಿನಿಂದ ಬತ್ತಿಯನ್ನು ಮಾಡಿ ದೀಪವನ್ನು ಹಚ್ಚಿದರೆ ಜನನ - ಮರಣಗಳು ( ಷಡೂರ್ಮಿಗಳು ) ಪರಿಹಾರವಾಗುತ್ತದೆ ಮತ್ತು ನಿತ್ಯ ಯೌವನ ಪ್ರಾಪ್ತವಾಗುತ್ತದೆ.
3. ಹತ್ತಿಯ ದೀಪವನ್ನು ಹಚ್ಚಿದರೆ ಪಾಪವು ನಾಶವಾಗಿ ಪುಣ್ಯಾಭಿವೃದ್ಧಿಯಾಗುತ್ತದೆ.
ಹೀಗೆ ನಾರಿನಿಂದ ಮಾಡಿದ ಬತ್ತಿಯಿಂದ ದೀಪ ಹಚ್ಚಿದರೆ ಭಕ್ತಿಯ ಸಂಪೂರ್ಣ ಫಲ ಸಿಗುತ್ತದೆ ಮತ್ತು ಅವನಿಗೆ " ಅಶ್ವಮೇಧ ಯಾಗ " ದ ಫಲವೂ ಉಂಟಾಗುತ್ತದೆ.

" ಉಪ ಸಂಹಾರ "
ಯಾವನು ಕಾರ್ತೀಕ ಮಾಸದಲ್ಲಿ ಈ ಶ್ರೇಷ್ಠವಾದ ದೀಪೋತ್ಸವವನ್ನು ಮಾಡುವುದಿಲ್ಲವೋ ಅವನು ಒಂದು ವರ್ಷ ಮಾಡಿದ ಪೂಜೆಯು ಖಂಡಿತವಾಗಿಯೂ ನಿಷ್ಫಲವಾಗುತ್ತದೆ.

ಆದುದರಿಂದ ಮಂತ್ರ - ತಂತ್ರ ವಿಧಿಗಳಿಂದ ದೀಪೋತ್ಸವ ಮಾಡಲೇಬೇಕು. ಇದರಿಂದ ಆಯುಸ್ಸು - ಆರೋಗ್ಯ - ಐಶ್ವರ್ಯ - ಜ್ಞಾನ - ಸೌಭಾಗ್ಯ - ಸಂಪತ್ತು ಶ್ರೀ ಮಹಾಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನ ಪರಮಾನುಗ್ರಹ ನಿತ್ಯದಲ್ಲಿಯೂ ನಿಶ್ಚಯವಾಗಿಯೂ ಉಂಟಾಗುತ್ತದೆ.

ಇಂಥಹಾ ಭಗವಂತನ ಭಕ್ತನು ಮಾಡುವ ದೀಪೋತ್ಸವವನ್ನು ನೋಡಿ ದೇವತೆಗಳು ತಿರ್ಯಕ್ ಪ್ರಾಣಿಗಳೂ, ಮನುಷ್ಯರು ಇವರೇ ಮೊದಲಾದವರು ಎಲ್ಲಾ ಪಾಪಗಳಿಂದಲೂ ಬಿಡುಗಡೆ ಹೊಂದಿ ಶ್ರೇಷ್ಠವಾದ ನನ್ನ ಆಸ್ಥಾನವನ್ನು ( ವೈಕುಂಠವನ್ನು ) ಪಡೆಯುತ್ತಾನೆ!!

ವೃಂದಾವನ ಪತಿ ಗೋವಿಂದಾ ।
ಮಾಪತಿ ಪರಮಾನಂದಾ ।
ಯದುಪತಿ ಸನಕ ಸನಂದಾ ।
ನಾರದಾದಿ ಮುನಿ ಜನ ವಂದ್ಯಾ ।।
ಎಂದೆಂದೆ೦ದೆಂದು ಸಲಹೋ ।
ಕರುಣದಿಂದ ಗುರು ಮಧ್ವಪತಿವಿಠ್ಠಲ ।
ಎಂದೆಂದೆ೦ದೆಂದು ಸಲಹೋ ||
************

ಕಾರ್ತೀಕಮಾಸದ ದಾನಧರ್ಮಗಳು

1) ಕಾರ್ತೀಕ ಮಾಸದಲ್ಲಿ ಪ್ರಾತಃ ಸ್ನಾನಕ್ಕೆ ವಿಶೇಷ ಫಲ
2) ಕಾರ್ತೀಕ ಮಾಸದಲ್ಲಿ ಜಲ ದಾನ 
ಅನ್ನದಾನ ಶ್ರೇಷ್ಠದಾನವಾಗಿದೆ 
3) ಕಾರ್ತೀಕ ಮಾಸದಲ್ಲಿ ಹತ್ತು ಗೋವುಗಳ ದಾನವು ಒಂದು ಗಾಡಿ(ವಾಹನ)ಯ ದಾನಕ್ಕೆ ಸಮವೆನಿಸುತ್ತದೆ .
4) ಹತ್ತು ಗಾಡಿಗಳ ದಾನಕ್ಕೆ ಒಂದು ಕುದುರೆಯ ದಾನವು ಸಮ.
ಮಠಗಳಿಗೆ ಮಾಡುವ ಆನೆಯ ದಾನವಾದರೂ ಸಾವಿರ ಕುದುರೆಯ ದಾನಕ್ಕೆ ಸಮ.
5) ಸಾವಿರ ಆನೆಗಳ ದಾನವು ಸುವರ್ಣದಾನಕ್ಕೆ ಸಮ 
ಸಾವಿರ ತೊಲ ಸುವರ್ಣದಾನಕ್ಕೆ ವಿದ್ಯಾದಾನವು ಸಮ 
6) ವಿದ್ಯಾದಾನಕ್ಕಿಂತ ಕೋಟಿ ಪಾಲು ಮಿಗಿಲಾದದ್ದು ಭೂಮಿದಾನ.
7)ಸಾವಿರ ಭೂಮೀದಾನಗಳಿಗಿoತ ಒಂದು ಗೋದಾನ ಮಿಗಿಲು 
8)ಸಾವಿರ ಗೋದಾನಕ್ಕಿಂತ ಅನ್ನದಾನವು ಮಿಗಿಲಾದದ್ದು ಅನ್ನದಾನವು.

ಕಾರ್ತೀಕ ಮಾಸದಲ್ಲಿ ಅನ್ನದಾನವನ್ನು ಮಾಡಬೇಕು.

ಸರ್ವೇಷಾಮೇವ ದಾನಾನಾಮನ್ನದಾನಂ ವಿಶಿಷ್ಯತೇ |
ಅನ್ನo ಹಿ ಸರ್ವಭೂತಾನಾo ಪ್ರಾಣಭೂತಂ ಪರಂ ವಿಧು: ||

ಅನ್ನದಾನ,ಗೋಗ್ರಾಸ,
ಹರಿಕಥಾಶ್ರವಣ,ದೀಪದಾನ,

ಇವುಗಳನ್ನು  ಪ್ರತಿಯೊಬ್ಬರು ಮಾಡಲೇಬೇಕು .
ಬ್ರಹ್ಮಚರ್ಯ, ನೆಲದಮೇಲೆ ಮಲಗುವುದು ,ಒಂದೇ ಹೊತ್ತು ಊಟ ,ಹರಿನಾಮ ಸ್ಮರಣೆ ದೇವಾಲಯವನ್ನು ಗುಡಿಸಿ,ಒರಸಿ, ರಂಗೋಲೇಯನ್ನು ಹಾಕುವುದು. ತುಲಸೀ ಧಾತ್ರೀ ಪತ್ರಗಳಿಂದ ರಾಧ -ದಾಮೋದರನ ಪೂಜೆ ,ಸಾಲಿಗ್ರಾಮ ಪೂಜೆ,ಬ್ರಾಹ್ಮಣರ ಪೂಜೆ,ಅಶ್ವತ್ಥ ಪೂಜೆ,ಗುರುಸೇವೆ ನಿತ್ಯವು ದೀಪವನ್ನು ಬೆಳಗುವುದು.

ಕಾರ್ತೀಕಮಾಸದಲ್ಲಿ ಮಾಡಬೇಕಾದ ದಾನಗಳು

ಅನ್ನ ದಾನ
ತಿಲ ದಾನ
ಸುವರ್ಣ ದಾನ
ರಜತ(ಬೆಳ್ಳಿ )ದಾನ
ಭೂಮಿ ದಾನ
ವಸ್ತ್ರ ದಾನ
ಮೃಷ್ಟಾನ್ನ ದಾನ
ಗೋದಾನ
ಗೋಪಿಚಂದನ ದಾನ
ಬಾಳೆಹಣ್ಣುದಾನ
ಲವಣ (ಉಪ್ಪು)ದಾನ
ಸಾಲಿಗ್ರಾಮ ದಾನ
ಶಂಖ ದಾನ
ಘೃತ ದಾನ
ಪಾಯಸ ದಾನ

ಕಾರ್ತೀಕ ದಾಮೋದರ ಸ್ತೋತ್ರ ಪಾರಯಣ
ತುಲಸೀ ಪೂಜೆ,ಏಕಾದಶಿ ಉಪವಾಸ ,ನಕ್ತವ್ರತ ,ಮೌನ ವ್ರತ ,ತುಲಸೀ ಲಕ್ಷಪ್ರದಕ್ಷಿಣೆ ,ಅಶ್ವತ್ಥ ಪ್ರದಕ್ಷಿಣೆ ,ಧಾತ್ರಿ ಭೋಜನ ಇತ್ಯಾದಿ ಧರ್ಮಗಳನ್ನು ಪಾಲಿಸಬೇಕು.

*********



ಕಾರ್ತಿಕಮಾಸದದಾನಗಳು another version

ಅತ್ಯಂತ ಶ್ರೇಷ್ಠ ದಾನ ಕಾರ್ತಿಕ ಮಾಸದಲ್ಲಿ ಅಂದರೆ ದೀಪ ದಾನ  , ಮತ್ತು ಕಂಚಿನ ಪಾತ್ರೆಯಲ್ಲಿ   ಆಕಳ ತುಪ್ಪ ವನ್ನು  ಹಾಕಿ ದಾನ ಕೊಡುವದು .

ಸಕ್ಕರೆ , ಬೆಲ್ಲ ,.ತುಪ್ಪ , ಇವುಗಳನ್ನು ನೀವು ಯಥಾಶಕ್ತಿ ಯಾಗಿ    ದೇವಸ್ಥಾನಕ್ಕೆ ಕೊಡಿ 

ಕೆಲವರು  ಈ ಕಾರ್ತಿಕ ಮಾಸದಲ್ಲಿ ತೈಲತ್ಯಾಗ ವ್ರತ ಮಾಡುತ್ತಾರೆ ಅಂದರೆ ಕಾರ್ತಿಕ ಮಾಸಪೂರ್ಣ  ಎಣ್ಣೆಯಿಲ್ಲದ ಅಡುಗೆಯನ್ನು ಊಟಮಾಡುತ್ತಾರೆ , ಅಂತವರು  ಕಂಚಿನ ಪಾತ್ರೆಯಲ್ಲಿ ಎಳ್ಳನ್ನು ತುಂಬಿ ದಾನ ಮಾಡಬೇಕು .

ಇನ್ನು ಕೆಲವರು ಮೌನ ಬೋಜನ ವ್ರತವನ್ನು ಮಾಡುತ್ತಾರೆ , ಅಂದರೆ ಊಟ ಮುಗಿಯುವವರೆಗೂ ಮೌನದಲ್ಲೇ ಇರಬೇಕು , ಅವರು ಎಳ್ಳು ತುಂಬಿದ ಪಾತ್ರೆ ಜೊತೆಗೆ  ದೇವರ ಪೂಜೆಗೆ ಉಪಯೋಗಿಸುವ ಘಂಟೆಯನ್ನು ದಾನ ಮಾಡಬೇಕು.

ಉದ್ದಿನ ಜೊತೆಗೆ ಕುಂಬಳಕಾಯಿ ದಾನ ಕೂಡ ಶ್ರೇಷ್ಠ ವಾದದ್ದು..

ಕೆಲವರು ಫಲವನ್ನು  ತಿನ್ನದೆ ವ್ರತವನ್ನು ಮಾಡಿರುವವರು ... ಬ್ರಾಹ್ಮಣರಿಗೆ  ತಟ್ಟೆಯಲ್ಲಿಟ್ಟು ಎಲ್ಲ ತರಹದ ಫಲದಾನ ಮಾಡಬೇಕು.

ಯಾರು  ಧಾನ್ಯಗಳನ್ನು ವರ್ಜಮಾಡಿರುತ್ತಾರೋ ಅವರು ಆ ಎಲ್ಲ ತರಹದ ಧಾನ್ಯಗಳನ್ನು ದಾನಮಾಡಬೇಕು .ಅಂದರೆ ಆ ವ್ರತಗಳ ಫಲವನ್ನು ಪಡೆಯುತ್ತಾರೆ.

ಇನ್ನು ದೀಪದಾನ ಬಗ್ಗೆ ಹೇಳುವದಾದರೆ ಒಂಟಿ ದೀಪವನ್ನು ಕೊಡಬೇಡಿ ನಿಮಗೆ ದುಃಖದಾರಿದ್ರ್ಯ ಬರುತ್ತದೆ .

ಯಾವದೇ ದೀಪದಾನ ಮಾಡಿ ಜೋಡಿಯಾಗಿಯೇ ಕೊಡಿ  ಅದರಲ್ಲಿ ಎಳೆಬತ್ತಿ ಸ್ವಲ್ಪ ತುಪ್ಪವನ್ನು ಹಾಕಿ ಅರಿಷಿಣ ಕುಂಕುಮ ಎರಿಸಿ ಕೊಡಿ  ...ಖಾಲಿ ದೀಪವನ್ನು ಕೊಡಬೇಡಿ.

ದೀಪದಾನ ಬೆಳ್ಳಿಯದಾಗಲಿ , ಕಂಚು , ಹಿತ್ತಾಳೆ , ತಾಮ್ರ ,  ಆದರೆ ಸ್ಟೀಲ ನದ್ದು ಕೊಡಬೇಡಿ , ಸ್ಟೀಲದೀಪದಾನ ತೆಗೆದುಕೊಳ್ಳಬೇಡಿ ಅದು ಕಬ್ಬಿಣದ ವಸ್ತು ಕಬ್ಬಿಣದ ವಸ್ತುವನ್ನು ದಾನ ಕೊಡುವದು ತೆಗೆದುಕೊಳ್ಳುವದು ಒಳ್ಳೆಯದಲ್ಲ .

ಶನಿ ಪ್ರಿತ್ಯರ್ಥವಾಗಿ ಮಾತ್ರ ಕಬ್ಬಿಣದ ವಸ್ತು (ಸ್ಟೀಲ )ದಾನ ಕೊಡಬೇಕು.
ಇನ್ನು  ಅನ್ನದಾನ ಬ್ರಾಹ್ಮಣ ಬೋಜನ ಮಾಡಿಸಿದರೆ ಒಳ್ಳೆಯದು ಆಗದಿದ್ದಲ್ಲಿ  ಯಾವುದಾದರೂ ದೇವಸ್ಥನಕ್ಕೆ ಹೋಗಿರತೀರಾ ಅಲ್ಲಿ ನಿಮಗೆ ಕೈಲಾದಷ್ಟು ಯಥಾಶಕ್ತಿ ಅನ್ನ ದಾನಕ್ಕೆ ಅಂತ  ಮನದಲ್ಲೇ ಸಂಕಲ್ಪ ಮಾಡಿ ಕೊಡಿ.

ರಂಗೋಲಿ ದಾನ ... ಯಾವ ಸ್ತ್ರೀಯರು ರಂಗವಲ್ಯಾದಿಗಳಿಂದ  ಶಾಲಿಗ್ರಾಮ ಮೊದಲಾದವು ದೇವತಾ ಸನ್ನಿಧಿಯಲ್ಲಿ  ಸ್ವಸ್ತಿಕ ಮೊದಲಾದ ಮಂಡಲಗಳನ್ನು ರಚಿಸುವಳೋ  ಅವಳು ಸ್ವರ್ಗಾದಿ ಸುಖವನ್ನು ಅನುಭವಿಸುವದಲ್ಲದೆ , ಸಪ್ತ ಜನ್ಮದಲ್ಲೂ ವೈದವ್ಯವನ್ನು ಹೊಂದುವದಿಲ್ಲ ಆದ್ದರಿಂದ ಪ್ರತಿ ಹೆಣ್ಣುಮಕ್ಕಳು ಮನೆ ಬಾಗಿಲಲ್ಲಿ ,  ದೇವರಮುಂದೆ ತಪ್ಪದೇ ರಂಗವಲ್ಲಿ ಯನ್ನು ಹಾಕಿ ...
ನಂತರ  ರಂಗೋಲಿ ತಾಂಬೂಲಧಕ್ಷಿಣೆ  ದಕ್ಷಿಣೆ ಸಹಿತ ದಾನ ಮಾಡಿ.......
ಉಪ್ಪು ದಾನವನ್ನು ಕೊಡಬೇಕು ಅಂತ ಹೇಳುತ್ತದೆ ಶಾಸ್ತ್ರ  ಆದರೆ ಯಾರೂ ತೆಗೆದುಕೊಳ್ಳಲ್ಲ , ಹೀಗಾಗಿ ಅದನ್ನು ಕೂಡಾ ದೇವಸ್ಥೋನಕ್ಕೆ ಅನ್ನ ಸಂತರ್ಪಣೆ ನಡೆಯುವಲ್ಲಿ ಕೊಡಿ.....
ಇನ್ನು ಗೋದಾನ ಅತ್ಯಂತ ಶ್ರೇಷ್ಠದಾನ ದಾನದಲ್ಲೇ ಅದಕ್ಕೆ ಗೋದಾನ ಕೊಡುವ ಸಾಮರ್ಥ್ಯ ಇದ್ದರು ಖಂಡಿತ ಮಾಡಿ  ಆಗದೆ ಇದ್ದವರು ಬೆಳ್ಳಿ ಹಿತ್ತಾಳೆ ತಾಮ್ರದ ಆಕಳುಗಳನ್ನ ದಾನ ಮಾಡಬಹುದು.....
ವಿಷ್ಣು ಪಾದ ದಾನ 
ಗಂಗಾಜಲ ದಾನ 
ಸಾಲಿಗ್ರಾಮ ದಾನ 
ಶಂಖದಾನ  
ಪಾರಿಜಾತ ಹೂವು ದಾನ 
ಬೆಳ್ಳಿಯಿಂದ ತಯಾರಿಸಿದ  ಹೂವಿನ ಹಾರಗಳನ್ನು ವಿಷ್ಣುವಿಗೆ ಅರ್ಪಿಸುವದು...ಇವು ಕೂಡಾ ಶ್ರೇಷ್ಠ ದಾನಗಳು...
ವೀಣಾ ಜೋಶಿ....
*******


21 Nov 2020 karteeka shashti KUMBHA MELA

🚩🕉️ ತುಂಗಭದ್ರ ಪುಷ್ಕರ 🕉️🚩
12 ವರ್ಷಗಳಿಗೊಮ್ಮೆ ಪವಿತ್ರ ನದಿಗಳಲ್ಲಿ ಸಂಭವಿಸುವ ಪುಷ್ಕರ (ಕುಂಭಮೇಳ) ಈ ಬಾರಿ ತುಂಗಭದ್ರಾ ನದಿಯಲ್ಲಿ ಪುಷ್ಕರ ಆಗಮಿಸಲಿದೆ. 

ಶಾರ್ವರಿ ನಾಮ ಸಂವತ್ಸರ ಕಾರ್ತೀಕ ಶುದ್ದ ಷಷ್ಠಿ ಉತ್ತರಾಷಡ ನಕ್ಷತ್ರ 20/11/2020 ಶುಕ್ರವಾರ ಬೆಳಗಿನ ಜಾವ 1:20am ಬ್ರಾಮ್ಮಿ ಸಮಯದಲ್ಲಿ ಶುಭ ಪುಷ್ಕರ ಆರಂಬವಾಲಿದೆ. ಒಂದು ವರ್ಷಗಳ ಕಾಲ ಈ ಪವಿತ್ರತೆ ಇರಲಿದ್ದು. ದರ್ಶನ, ಸಂಕಲ್ಪ, ಸ್ನಾನ, ಪೂಜಾ, ದೈವೀ ಕಾರ್ಯಗಳಿಗೆ 12 ದಿನಗಳ ಕಾಲ ಶುಭಪ್ರದವಾಗಿರುತ್ತದೆ. 
 ಕಾರ್ತೀಕ ಕೃಷ್ಣ ಪ್ರತಿಪದ 01/12/2020 ಮಂಗಳವಾರದ ವರೆಗೆ ಶುಭ ಪ್ರದವಾಗಿರುತ್ತದೆ. 

ಪುಷ್ಕರ ಸಮಯದಲ್ಲಿ ಮಾಡಬೇಕಾದ ಕಾಮ್ಯಗಳು ತುಂಗಭದ್ರಾ ನದಿಯಲ್ಲಿ ಸಂಕಲ್ಪಿತ ಸ್ನಾನ, ದೇವರ, ಇಷ್ಟದೇವರ ದರ್ಶನ,ದೇವರ ಸೇವೆ, ದಾನ,ಗಂಗಾಪೂಜೆ, ಬಾಗಿಣ ಸಮರ್ಪಣೆ ಮಾಡುವುದರಿಂದ ಸಂಪೂರ್ಣ ಶುಭಫಲಗಳು ಪ್ರಾಪ್ತವಾಗಲಿವೆ. 

ತುಂಗಭದ್ರ ನದಿಯಮಾಹಿತಿ 
ಕರ್ನಾಟಕ ಪಶ್ಚಿಮಗಟ್ಟದ ವರಹಾಪರ್ವತದ ಗಂಗಾಮೂಲ ಎನ್ನುವ ಪವಿತ್ರಸ್ಥಳದಲ್ಲಿ ತುಂಗಾ ನದಿಯಾಗಿ ಉಘಮಿಸಿ ಚಿಕ್ಕಮಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಹಿಸಿ ಕೂಡಲಿ ಎನ್ನುವ ಪವಿತ್ರ ಸ್ಥಳದಲ್ಲಿ ಭದ್ರಾ ನದಿಯನ್ನು ತನ್ನೊಡಲಿಗೆ ಸೇರಿಸಿಕೊಂಡು ತುಂಗಭದ್ರೆಯಾಗಿ ಹಲವಾರು ತೀರ್ಥಕ್ಷೇತ್ರ ಸಂದಿಸಿ, ಸಾವಿರಾರು ದೇವರುಗಳಿಗೆ ಅಭಿಷೇಕಮಾಡಿ,  ಕೊಟ್ಟ್ಯಾಂತರ ಜೀವರಾಶಿಗೆ ಜೀವಜಲನೀಡಿ ಲಕ್ಷಾಂತರ ರೈತರ ಭೂಮಿಯನ್ನು ತಣಿಸಿ ಅನ್ನದಾತೆಯಾಗಿ ನೂರಾರು ಕಾರ್ಕಾನೆಗಳಿಗೆ ಜಲದಾರೆನೀಡಿ 610 ಕಿಲೋಮೀಟರ್ ಅದಿಕವಾಗಿ ಚಲಿಸಿ ಮಾತೃಶಕ್ತಿಯಾಗಿದಗದ್ದಾಳೆ. ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯ ಶ್ರೀಮಹೇಶ್ವರನ ಸನ್ನಿದಿಯ ಸಂಗಮದಲ್ಲಿ ಕೃಷ್ಣಾನದಿಯಲ್ಲಿ ವಿಲೀನಳಾಗಿ ಕೃಷ್ಣೆಯಾಗುವಳು. ಮುಂದೆ ಆಂದ್ರಪ್ರದೇಶದಲ್ಲಿ ಗಂಗಾಸಾರ (ಬಂಗಾಳ ಕೊಲ್ಲಿ) ಸಮುದ್ರವನ್ನು ಸೇರುವಳು ತುಂಗಭದ್ರೆ ಕೃಷ್ಣೆಯಾಗಿ. 
ಬನ್ನಿ ಪುಷ್ಕರ ಶುಭ ಸಂದರ್ಭದಲ್ಲಿ ತುಂಗಭದ್ರಾ ನದಿಯಲ್ಲಿ ಮಿಯ್ಯೋಣ ಜನ್ಮ ಜನ್ಮಾಂತರದ ಪಾಪ ಕಳೆದುಕೊಂಡು ದೈವೀ ಕಾರ್ಯಮಾಡಿ ಶುಭಫಲ ಪಡೆಯೋಣ. 
🚩 llಹರಿಃ ಓಂ ತತ್ ಸತ್ll🚩
*********
ಕಾರ್ತಿಕ ಮಾಸದಲ್ಲಿ ತುಪ್ಪದ ದೀಪ ಅರ್ಪಿಸುವ ವೈಭವ
ಸ್ಕಂದ ಪುರಾಣ 

ಶ್ರೀ ಬ್ರಹ್ಮ-ನಾರದಮನಿಗಳ ಸಂವಾದ

1) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನೀಗೆ ತುಪ್ಪದ ದೀಪ ಅರ್ಪಿಸುವುದರಿಂದ ಸಾವಿರಾರು ಜನ್ಮಗಳ ಪಾಪಗಳು ತೊಡೆದು ಹೋಗುತ್ತವೆ.

2)ಯಾವುದೇ ಮಂತ್ರ ಪಠಿಸದಿರಬಹುದು, ಪುಣ್ಯ ಕಾರ್ಯ ಮಾಡದಿರಬಹುದು, ಮತ್ತು ಪರಿಶುದ್ಧತೆ ಆಚರಿಸದಿರಬಹುದು, ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಬೆಳಗಿದರೆ ಎಲ್ಲವೂ ಪರಿಪೂರ್ಣತೆ ಹೊಂದುತ್ತದೆ. 

3)ಕಾರ್ತಿಕ ಮಾಸದಲ್ಲಿ ಕೇಶವನಿಗೆ ತುಪ್ಪದ ದೀಪ ಹಚ್ಚುವುದು ಯಜ್ಞಗಳ ಆಚರಣೆ ಮತ್ತು ಎಲ್ಲಾ ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೆ ಸಮ.

4) ಕಾರ್ತಿಕ ಮಾಸದಲ್ಲಿ ಯಾರಾದರೂ ಶ್ರೀ ಕೇಶವನಿಗೆ ತುಪ್ಪದ ದೀಪ ಅರ್ಪಿಸಿ ಸಂತೃಪ್ತಗೊಳಿದರೆ ಅವರ ಕುಟುಂಬದ ಪೂರ್ವಜರು ಮುಕ್ತಿ ಪಡೆಯುವರು.

5) ಈ ಕಾರ್ತಿಕ ಮಾಸದಲ್ಲಿ ದಾಮೋದರನಿಗೆ ಅಂದರೆ ಕೃಷ್ಣನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಅವರು ವೈಭವಹೊಂದಿ ಅದೃಷ್ಟವಂತರಾಗುವರು.

6) ಯಾರು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪ ಅರ್ಪಿಸಿದರೆ, ಶ್ರೀ ವಾಸುದೇವನು ಅವರಿಗೆ ಒಳ್ಳೆಯ ಫಲಿತಾಂಶ ನೀಡುವನು.

7) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಪುನೀತವಾಗದಂತಹ ಪಾಪಗಳು ಮೂರು ಲೋಕಗಳಲ್ಲಿಯೂ ಇಲ್ಲ. 

8) ಈ ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ವ್ಯಕ್ತಿಯು ಯಾವುದೇ ಸಂಕಷ್ಟಗಳಿಲ್ಲದೇ ಶಾಶ್ವತವಾದ ಆಧ್ಯಾತ್ಮಿಕ ಜಗತ್ತನ್ನು ಹೊಂದುವನು.

ಹಿಂದೂಗಳಿಗೆ ಕಾರ್ತಿಕ ಮಾಸ ಮಹತ್ವವಾದದ್ದು 
ಹಾಗೂ ಅಧ್ಯಾತ್ಮ ಸಾಧಕರ ಮಾಸ

ಕಾರ್ತಿಕ ಮಾಸ ಹಬ್ಬಗಳ ಪರ್ವವಷ್ಟೇ ಅಲ್ಲ, ಜ್ಯೋತಿ ಬೆಳಗುವ, ಮನದಲ್ಲಿರುವ ಅಂಧಕಾರವನ್ನು ದೂರ ಮಾಡುವ ಪರ್ವವೂ ಆಗಿದೆ. ಅದರ ಸಂಕೇತವಾಗಿ ಮನೆಯ ಮುಂದೆ ದೀಪ ಬೆಳಗುತ್ತಾರೆ. 

ಕಾರ್ತಿಕ ಮಾಸವು ದೀಪಾವಳಿಯ ನಂತರ ಶುರುವಾಗುತ್ತದೆ. ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಕಾರಣ, ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ.

ಕಾರ್ತಿಕ ಮಾಸದ ವಿಶೇಷ

ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ. ಅದರ ಪ್ರಭಾವವು ಭೂಮಿಯ, ಭೂಮಿಯ ಪರಿಸರ ಹಾಗೂ ವ್ಯಕ್ತಿಯ ಮೇಲಾಗುತ್ತದೆ. 

ಕಾರ್ತಿಕ ಮಾಸವು ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವಾಗಿದೆ.

ಇಂತಹ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ, ವಿಧಾನಗಳನ್ನು ಉಲ್ಲೇಖಿಸಿದ್ದಾರೆ. 

ಅಂತಹ ಋಷಿ ಮುನಿಗಳಲ್ಲಿ ವಸಿಷ್ಠ ಋಷಿಗಳು ಕೆಲವೊಂದು ವಿಧಾನಗಳನ್ನು ಸೂಚಿಸಿದ್ದಾರೆ. ಅದನ್ನು ಅನುಸರಿಸುವ ಮೂಲಕ ನಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಕಂಡುಕೊಳ್ಳಬಹುದು.

ಹೀಗೆ ವಸಿಷ್ಠರಿಂದ ವಿಧಿತವಾದ ಐದು ವಿಧಾನಗಳೆಂದರೆ,

1. ಪವಿತ್ರ ಸ್ನಾನ 

ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಮೂರು ಬಾರಿ ಸ್ನಾನ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ಸ್ನಾನ ಮಾಡುವುದರಿಂದ, ಭೌತಿಕವಾಗಿ ದೇಹದ ಕಲ್ಮಷಗಳನ್ನು ತೊಳೆದುಕೊಳ್ಳಬಹುದು. ಅದರೊಂದಿಗೆ ಮನಸ್ಸಿನ ಕಲ್ಮಷಗಳನ್ನು ಕಳೆದುಕೊಳ್ಳುವುದರೊಂದಿಗೆ, ನಮ್ಮ ಭಾವನೆಗಳನ್ನು , ಮನಸ್ಸಿನ ಕೋಪ, ತಾಪವನ್ನು ನಿಯಂತ್ರಿಸಿಕೊಳ್ಳಬಹುದು. 

ನದಿ ತೀರಗಳಲ್ಲಿ ಮಾಡುವ ಜಲ ಸ್ನಾನವು ಜಲ ಚಿಕಿತ್ಸೆಗೆ ಪೂರಕವಾಗಿದೆ. ಪವಿತ್ರ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸು ಎರಡು ಶುದ್ಧವಾಗುತ್ತದೆ.

2. ದೀಪಾರಾಧನೆ 

ಪವಿತ್ರ ಸ್ನಾನಾನಂತರ, ದೀಪಗಳನ್ನು ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತ ಬೆಳಗಬೇಕೆಂಬ ನಿಯಮವಿದೆ. ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ. 

ತುಪ್ಪದ ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗುತ್ತವೆ, ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತವೆ. ಅದರೊಂದಿಗೆ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಹೀಗೆ ಮನೆಯಲ್ಲಿ ದೀಪ ಬೆಳಗುವುದರಿಂದ. ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗುತ್ತದೆ.

3. ಪವಿತ್ರ ಗಿಡದ ಪೂಜೆ 

ದೀಪವನ್ನು ಬೆಳಗಿ ಮನದೊಳಗಿನ ಅಜ್ಞಾನವನ್ನು ಕಳೆದುಕೊಂಡ ನಂತರ ತುಳಸಿ ದೇವಿಯ ಪೂಜೆಗೆ ಮುಂದಾಗುತ್ತೇವೆ. ತುಳಸಿ ಒಂದು ಗಿಡಮೂಲಿಕಾ ಸಸ್ಯವಷ್ಟೇ ಅಲ್ಲ, ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ಶಕ್ತಿಯಾಗಿದೆ. 

ತುಳಸಿ ಪೂಜೆಯನ್ನು ಪ್ರತಿನಿತ್ಯ ಮಾಡುವ ಮಹಿಳೆಯರಿಗೆ ಸೌಭಾಗ್ಯ ಸಿದ್ಧಿಸುತ್ತದೆ ಎನ್ನಲಾಗಿದೆ. ತುಳಸಿ ಗಿಡದ ಮುಂದೆ ದೀಪಾರಾಧನೆ ಮಾಡುವುದು ತ್ಯಾಗದ ಸಂಕೇತವಾಗಿದೆ.

4. ದಾಮೋದರನ ಪೂಜೆ 

ಶಿವ ಮತ್ತು ವಿಷ್ಣುವಿನ ಆರಾಧನೆಯೊಂದಿಗೆ ಶಿವ ಮತ್ತು ವಿಷ್ಣು ಎರಡೂ ಒಂದೇ ಎನ್ನುವ ಭಾವ ಮೂಡುತ್ತದೆ. ಶಿವ ಪ್ರಜ್ಞೆಯ ಸಂಕೇತವಾದರೆ, ವಿಷ್ಣುವು ಸ್ಥಿತಿಕಾರನಾಗಿದ್ದಾನೆ. 

ಹೇಗೆ ಬ್ರಹ್ಮಾಂಡವು ಸ್ಥಿತಿ ಮತ್ತು ಪ್ರಜ್ಞೆಯಿಂದ ಆವೃತ್ತವಾಗಿದೆಯೋ ಹಾಗೆಯೇ ಶಿವ ಮತ್ತು ವಿಷ್ಣುವಿನ ಪ್ರಜ್ಞೆಯು ನಮ್ಮಲ್ಲಿ ಅಡಕವಾಗಿದೆ. ಇಂತಹ ಪ್ರಜ್ಞೆಯೇ ನಮ್ಮನ್ನು ಅಧ್ಯಾತ್ಮ ಸಾಧನೆಯತ್ತ ಮುನ್ನಡೆಸುತ್ತದೆ.

5. ಸೋಮವಾರ ವಿಶೇಷ 

ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರದ ಅಧಿಪತಿ ಚಂದ್ರ. ಚಂದ್ರ ಮನೋಕಾರಕ ಅಂದರೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವವ. ಯಾರು ತಮ್ಮ ಮನಸ್ಸನನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ. 

ಅದರೊಂದಿಗೆ ತಮ್ಮ ವ್ಯಕ್ತಿತ್ವ ಬೆಳವಣಿಗೆಗೂ ಪೂರಕವಾಗುತ್ತಾರೆ. ಸಿದ್ಧಿಯನ್ನು ಪಡೆಯುತ್ತಾರೆ. ಹಾಗಾಗಿ ಯಾರು ಸೋಮವಾರದಂದು ಪ್ರದೋಷ ವ್ರತವನ್ನು ಆಚರಿಸುತ್ತಾರೋ, ಮನೋಕಾರಕ ಚಂದ್ರನನ್ನೇ ತನ್ನ ಶಿರದಲ್ಲಿ ಧಾರಣೆ ಮಾಡಿಕೊಂಡಿರುವ ಶಿವನನ್ನು ಕುರಿತು ಧ್ಯಾನ ಮಾಡುತ್ತಾರೋ, ಅವರು ಅತ್ಯುತ್ತ ಮ ಜ್ಞಾನವಂತರಾಗುತ್ತಾರೆ.
-----

ಕಾರ್ತಿಕ ಮಾಸದಲ್ಲಿ ಹುಟ್ಟಿದವರಿಗೆ ವಿಷ್ಣು, ಶಿವನ ಅನುಗ್ರಹ ಇರುತ್ತದೆ. ಈ ಸಂಬಂಧ ದೇವತಾ ಆರಾಧನೆ ಮಾಡಿದರೆ ರಾಜಯೋಗ ಲಭಿಸುತ್ತದೆ. 

ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಮೃತ್ಯುಂಜಯ ಆರಾಧನೆ ಮಾಡಿದರೆ ಒಳ್ಳೆಯದು.

ಸರ್ವೇಜನಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು
***
*ಕಾರ್ತಿಕ ಮಾಸದಲ್ಲಿ ಈ 10 ಕೆಲಸಗಳನ್ನು ಮಾಡಿದರೆ ಪುಣ್ಯ..!*

    ಕಾರ್ತಿಕ ಮಾಸವನ್ನು ಅತ್ಯಂತ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಇದು ಹಿಂದೂ ಕ್ಯಾಲೆಂಡರ್‌ನ ಎಂಟನೇ ತಿಂಗಳು. ಈ ಮಾಸದಲ್ಲಿ ಹೇಳಲಾದ ಉಪವಾಸ ಮತ್ತು ಹಬ್ಬವನ್ನು ಆಚರಿಸುವುದರಿಂದ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ. ಇದರೊಂದಿಗೆ, ಪ್ರಾಚೀನ ಸಂಪ್ರದಾಯದ ಭಾಗವಾಗಿರುವ ಕಾರ್ತಿಕ ಮಾಸದಲ್ಲಿ ಮುಖ್ಯವಾಗಿ 10 ಇಂತಹ ಕೆಲಸಗಳನ್ನು ಮಾಡಲಾಗುತ್ತದೆ. ಆ 10 ಒಳ್ಳೆಯ ಸಂಪ್ರದಾಯಗಳು ಯಾವುವು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ..
                                                                                                                     *ನದಿ ಸ್ನಾನ:*

ಪವಿತ್ರ ನದಿಯಲ್ಲಿ ಸ್ನಾನ ಮಾಡುವ ಅಭ್ಯಾಸ ಮತ್ತು ಪ್ರಾಮುಖ್ಯತೆ ಕಾರ್ತಿಕ ಮಾಸದ ಉದ್ದಕ್ಕೂ ಇದೆ. ಈ ಮಾಸದಲ್ಲಿ ಶ್ರೀ ಹರಿಯು ನೀರಿನಲ್ಲಿ ಮಾತ್ರ ನೆಲೆಸುತ್ತಾನೆ. ಮದನಪಾರಿಜಾತದ ಪ್ರಕಾರ, ಕಾರ್ತಿಕ ಮಾಸದಲ್ಲಿ, ಇಂದ್ರಿಯಗಳ ಮೇಲೆ ಸಂಯಮವನ್ನು ಇಟ್ಟುಕೊಂಡು, ಚಂದ್ರ ಮತ್ತು ನಕ್ಷತ್ರಗಳ ಉಪಸ್ಥಿತಿಯಲ್ಲಿ, ಸೂರ್ಯೋದಯಕ್ಕೆ ಮುಂಚಿತವಾಗಿ ಪುಣ್ಯವನ್ನು ಪಡೆಯಲು ನಿಯಮಿತವಾಗಿ ನದಿ ಸ್ನಾನ ಮಾಡಬೇಕು.

*​ದೀಪ ದಾನ:*

ಈ ಮಾಸದಲ್ಲಿ ದೀಪದಾನಕ್ಕೆ ಬಹಳ ಮಹತ್ವವಿದೆ. ನದಿ, ಕೊಳ ಮುಂತಾದ ಸ್ಥಳಗಳಲ್ಲಿ ದೀಪಗಳನ್ನು ದಾನ ಮಾಡುವುದರಿಂದ ಎಲ್ಲಾ ರೀತಿಯ ತೊಂದರೆಗಳು ಕೊನೆಗೊಳ್ಳುತ್ತವೆ ಮತ್ತು ವ್ಯಕ್ತಿಯು ಸಾಲದಿಂದ ಮುಕ್ತನಾಗುತ್ತಾನೆ.

*​ನೆಲದ ಮೇಲೆ ಮಲಗುವುದು:*

ಈ ಮಾಸದಲ್ಲಿ ನೆಲದ ಮೇಲೆ ಮಲಗುವುದರಿಂದ ಮನಸ್ಸಿನಲ್ಲಿ ಸಾತ್ವಿಕತೆಯ ಭಾವ ಮೂಡುತ್ತದೆ ಮತ್ತು ಎಲ್ಲಾ ರೀತಿಯ ಕಾಯಿಲೆಗಳು ಮತ್ತು ಅಸ್ವಸ್ಥತೆಗಳು ಪರಿಹಾರವಾಗುತ್ತವೆ.

*​ತುಳಸಿ ಪೂಜೆ:*

ಈ ಮಾಸದಲ್ಲಿ ತುಳಸಿಯನ್ನು ಪೂಜಿಸುವುದು, ಸೇವಿಸುವುದು ಮತ್ತು ಸೇವೆ ಮಾಡುವುದು ಬಹಳ ಮಹತ್ವದ್ದಾಗಿದೆ. ಈ ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯ ಪ್ರಾಮುಖ್ಯತೆಯನ್ನು ಬಹುಪಾಲು ಎಂದು ಪರಿಗಣಿಸಲಾಗಿದೆ.

*​ಕಾಳುಗಳನ್ನು ತಿನ್ನುವುದು ನಿಷಿದ್ಧ:*

ಕಾರ್ತಿಕ ಮಾಸದಲ್ಲಿ ಉದ್ದು, ಹೆಸರು, ಉದ್ದಿನಬೇಳೆ, ಅವರೆ, ಬಟಾಣಿ, ಸಾಸಿವೆ ಇತ್ಯಾದಿಗಳನ್ನು ತಿನ್ನಬಾರದು. ಬೆಳ್ಳುಳ್ಳಿ, ಈರುಳ್ಳಿ ಮತ್ತು ಮಾಂಸಾಹಾರ ಪದಾರ್ಥಗಳನ್ನು ಸೇವಿಸಬೇಡಿ.

*​ಎಣ್ಣೆ ಹಚ್ಚುವುದು ನಿಷಿದ್ಧ:*

ಈ ಮಾಸದಲ್ಲಿ ಎಣ್ಣೆಯನ್ನು ಹಚ್ಚಿಕೊಳ್ಳಬಾರದು. ಕೆಲವರಲ್ಲಿ ಎಣ್ಣೆ ಹಚ್ಚಿ ಸ್ನಾನ ಮಾಡುವ ರೂಢಿಯಿದೆ. ಇದು ಒಳ್ಳೆಯ ಹವ್ಯಾಸವಾದರೂ ಕಾರ್ತಿಕ ಮಾಸದಲ್ಲಿ ಈ ಕೆಲಸವನ್ನು ಮಾಡಬಾರದು.

*​ಇಂದ್ರಿಯ ನಿಗ್ರಹ:*

ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಬ್ರಹ್ಮಚರ್ಯವನ್ನು ಆಚರಿಸುವುದು ಇಂದ್ರಿಯ ನಿಗ್ರಹದಲ್ಲಿ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಇದನ್ನು ಅನುಸರಿಸಲು ವಿಫಲವಾದರೆ ಅನಪೇಕ್ಷಿತ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಇಂದ್ರಿಯ ನಿಯಂತ್ರಣದಲ್ಲಿ, ಕಡಿಮೆ ಮಾತನಾಡುವುದು, ಯಾರನ್ನೂ ಟೀಕಿಸದಿರುವುದು ಅಥವಾ ವಿವಾದ ಮಾಡದಿರುವುದು, ಮನಸ್ಸಿನ ಸಂಯಮವನ್ನು ಕಳೆದುಕೊಳ್ಳದಿರುವುದು, ಆಹಾರದ ಮೋಹವನ್ನು ಹೊಂದಿಲ್ಲದೆ ಇರುವುದು, ಹೆಚ್ಚು ನಿದ್ರೆ ಮಾಡದೇ ಇರುವುದು ಇತ್ಯಾದಿ.

*​ದಾನ:*

ಈ ಮಾಸದಲ್ಲಿ ದಾನವೂ ಬಹಳ ಮುಖ್ಯ. ಆಹಾರ ಧಾನ್ಯಗಳು, ವಸ್ತ್ರದಾನ ಮತ್ತು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಮಾಡಬಹುದಾದ ಇತರೆ ಯಾವುದೇ ವಸ್ತುಗಳನ್ನು ದಾನ ಮಾಡಬಹುದು.

*​ಪೂಜೆ:*

ತೀರ್ಥಪೂಜೆ, ಗಂಗಾಪೂಜೆ, ವಿಷ್ಣು ಪೂಜೆ, ಶ್ರೀ ಕೃಷ್ಣ ಪೂಜೆ, ಕಾರ್ತಿಕೇಯ ಪೂಜೆ, ಕಾಳಿ ಪೂಜೆ, ಲಕ್ಷ್ಮಿ ಪೂಜೆ ಮತ್ತು ಯಾಗ ಮತ್ತು ಹವನ ಕೂಡ ಈ ಮಾಸದಲ್ಲಿ ಬಹಳ ಮುಖ್ಯ. ಈ ದಿನ ಶಿವ, ಸಂಭೂತಿ, ಸಂತತಿ, ಪ್ರೀತಿ, ಅನುಸೂಯಾ ಮತ್ತು ಕ್ಷಮಾ ಇವರನ್ನು ಪೂಜಿಸಬೇಕು.
***
ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಈ ಆಚರಣೆಗಳನ್ನು ಮಾಡಿದರೆ ಪುಣ್ಯಪ್ರಾಪ್ತಿಯಾಗುವುದು..

ಹಿಂದೂ ಧರ್ಮದಲ್ಲಿ ಬರುವ ಮಾಸಗಳಲ್ಲಿ ಅತ್ಯಂತ ಶ್ರೇಷ್ಠವಾದ ಮಾಸವೆಂದರೆ ಕಾರ್ತಿಕ ಮಾಸ. ಈ ಮಾಸದಲಿ ಉಪವಾಸ ವ್ರತ, ಈ ಮಾಸದಲ್ಲಿ ಬರುವ ಕೆಲವೊಂದು ಆಚರಣೆಗಳನ್ನು ಪಾಲಿಸಿದರೆ ಸಕಲ ಪಾಪಗಳು ಕಳೆದು, ಪುಣ್ಯಪ್ರಾಪ್ತಿಯಾಗುವುದು.
 
ದೀಪಾವಳಿ ಅಮಾವಾಸ್ಯೆಯ ಮರುದಿನ ಪಾಡ್ಯದಂದು ಆರಂಭವಾಗುವ ಮಾಸವೇ ಕಾರ್ತಿಕ ಮಾಸ. ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠವಾದ ಮಾಸವೆಂದರೆ ಇದೇ ಮಾಸ. ಕಾರ್ತಿಕ ಮಾಸದ ಮುನ್ನುಡಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸುವುದರ ಮೂಲಕ ದೀಪಗಳನ್ನು ಬೆಳಗುತ್ತೇವೆ. ಇಲ್ಲಿಂದಲೇ ಮುಂದಿನ ಒಂದು ಮಾಸಗಳ ಕಾಲ ದೀಪವನ್ನು ಬೆಳಗುವ ಅತ್ಯಂತ ಪವಿತ್ರವಾದ ತಿಂಗಳು ಕಾರ್ತಿಕ.

ಕಾರ್ತಿಕ ಮಾಸದ ಮಹತ್ವ
 ಕೃತ್ತಿಕಾ ಎಂದರೆ ಒಂದು ನಕ್ಷತ್ರವಾಗಿದ್ದು. ಇದು ನವೆಂಬರ್ ಅವಧಿಯಲ್ಲಿ ಚಂದ್ರನಿಗೆ ಅತ್ಯಂತ ಹತ್ತಿರವಿರುತ್ತದೆ. ಹಾಗಾಗಿ ಈ ಮಾಸಕ್ಕೆ ಕಾರ್ತಿಕ ಮಾಸವೆಂದು ಕರೆಯುತ್ತಾರೆ. ಪ್ರತಿಯೊಂದು ಮಾಸಕ್ಕೂ ಒಬ್ಬೊಬ್ಬ ದೇವರಿರುವಂತೆ ಕಾರ್ತಿಕ ಮಾಸದ ಅಧಿಪತಿ ಈಶ್ವರ. ಈ ಮಾಸದಲ್ಲಿ ಶಿವನಿಗೆ ದೀಪೋತ್ಸವ ನಡೆವಂತೆ, ವಿಷ್ಣುವಿಗೆ ತುಳಸಿ ಜೊತೆ ಕಲ್ಯಾಣವೂ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ಆಚರಿಸಬೇಕಾದ ನೇಮ ನಿಷ್ಠಗಳನ್ನು ಹೇಳಿ ಕೊಟ್ಟವನು ಬ್ರಹ್ಮನೆಂದು ಹೇಳಲಾಗುತ್ತದೆ, ಹಾಗಾಗಿ ಇದು ತ್ರಿಮೂರ್ತಿಗಳಿಗೆ ಪ್ರಿಯವಾದ ತಿಂಗಳಾಗಿದೆ.
ಕಾರ್ತಿಕ ಮಾಸದಲ್ಲಿ ದಿನದ ಅವಧಿ ಕಡಿಮೆ, ರಾತ್ರಿಯೇ ದೀರ್ಫವಾಗಿರುವ ಕಾರಣದಿಂದ ಅಂಧಕಾರದ ಪ್ರಭಾವ ಜಾಸ್ತಿ. ಋತುಮಾನದ ಅಂಧಕಾರದ ಜೊತೆಗೆ ಮನಸ್ಸಿನ ಅಂಧಕಾರವನ್ನೂ ಕಳೆಯುವುದು ಈ ಮಾಸದ ವಿಶೇಷ, ಹಾಗಾಗಿಯೇ ಇದನ್ನು ದೀಪೋತ್ಸವದ ತಿಂಗಳೆಂದು ಕರೆಯುತ್ತಾರೆ.

ಕಾರ್ತಿಕ ಮಾಸದ ಆಚರಣೆಗಳು
ಕಾರ್ತಿಕ ಮಾಸದಲ್ಲಿ ಕೈಗೊಳ್ಳುವ ಪೂಜೆ ಮತ್ತು ವೃತಗಳು ಹೆಚ್ಚು ಫಲ ನೀಡುತ್ತವೆ. ಈ ಮಾಸ ಆಧ್ಯಾತ್ಮಕ ಸಾಧಕರ ಮಾಸ. ಕಾರ್ತಿಕ ಮಾಸದಲ್ಲಿ ನಿಯಮ ನಿಷ್ಠೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಪುಣ್ಯಪ್ರಾಪ್ತಿಯಾಗುವುದು ಎಂದು ಹೇಳಲಾಗುತ್ತದೆ.

ಬಿದಿಗೆಯಂದು ಹಸ್ತ ಭೋಜನ
ಕಾರ್ತಿಕ ಮಾಸದ ಬಿದಿಗೆಯಂದು ಸಹೋದರ ಸಹೋದರಿಯ ಮನೆಗೆ ಹೋಗಿ ಅವರ ಕೈಯಿಂದ ಅಡುಗೆ ಮಾಡಿಸಿ ಭೋಜನ ಮಾಡಬೇಕೆಂಬ ಸಂಪ್ರದಾಯವಿದೆ. ಸಹೋದರನು ತನ್ನ ಸಹೋದರಿಗೆ ಕೈಲಾದ ಕಾಣಿಕೆ ಮತ್ತು ಉಡುಗೊರೆಗಳನ್ನು ನೀಡಬೇಕು. ಈ ದಿನ ಶನಿ ಕಾಟ ಇರುವವರು ದಾನ ಮಾಡಿದರೆ ಶನಿ ಕಾಟದಿಂದ ಮುಕ್ತಿ ಸಿಗುವುದು ಎನ್ನಲಾಗುತ್ತದೆ.
                                                                                     ಶುಕ್ಲ ಪಂಚಮಿಯಂದು ಗರುಡ ಪಂಚಮಿ
ಕಾರ್ತಿಕ ಮಾಸದ ಶುಕ್ಲ ಪಂಚಮಿಯನ್ನು ಗರುಡ ಪಂಚಮಿ ಎಂದು ಕರೆಯಲಾಗುತ್ತದೆ. ಕಶ್ಯಪ ಮುನಿಯ ಪುತ್ರನಾದ ಗರುಡನು ವಿಷ್ಣುವಿನ ವಾಹನ. ಹೀಗಾಗಿ ಗರುಡನನ್ನು ದೇವತಾರೂಪಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿನ ಗರುಡನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ವಿಷ್ಣುವಿನ ದೇವಾಲಗಳಲ್ಲಿ ಗರುಡ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಸಪ್ತಮಿಯಂದು ಯಾಜ್ಞವಲ್ಕ್ಯ ಜಯಂತಿ                                                       ಯಜುರ್ವೇದದಲ್ಲಿ ಎರಡು ಭಾಗಗಳಿವೆ. ಒಂದು ಕೃಷ್ಣ ಯಜುರ್ವೇದ ಇನ್ನೊಂದು ಶುಕ್ಲ ಯಜುರ್ವೇದ. ಸೂರ್ಯದೇವನಿಂದ ಶುಕ್ಲ ಯಜುರ್ವೇದವನ್ನು ಕಲಿತು ಭೂಲೋಕಕ್ಕೆ ತಂದ ಯಾಜ್ಞವಲ್ಕ್ಯರು ಹುಟ್ಟಿದ ದಿನ ಬರುವುದು ಇದೇ ಸಪ್ತಮಿಯಂದು. ಹಾಗಾಗಿ ಈ ದಿನವನ್ನು ಯಾಜ್ಞವಲ್ಕ್ಯ ಜಯಂತಿ ಎಂದು ಕರೆಯಲಾಗುತ್ತದೆ.

ದ್ವಾದಶಿಯಂದು ತುಳಸಿ ಪೂಜೆ
ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ. ತುಳಸಿ ಹಬ್ಬವನ್ನು ಕಿರು ದೀಪಾವಳಿ ಎಂದೂ ಕರೆಯಲಾಗುತ್ತದೆ. ಈ ದಿನ ವಿಷ್ಣುವಿನ ಜೊತೆಯಲ್ಲಿ ತುಳಸಿಯ ಕಲ್ಯಾಣ ನಡೆಯುತ್ತದೆ. ಆಷಾಢ ಮಾಸದಲ್ಲಿ ಬರುವ ವೈಕುಂಠ ಏಕಾದಶಿಯಂದು ಯೋಗನಿದ್ರೆಗೆ ಜಾರುವ ಶ್ರೀಹರಿಗೆ ಕಾರ್ತಿಕ ಬೆಳಕಿನ ಸ್ವಾಗತ ಕೋರಿ ತುಳಸಿ ಜೊತೆ ಕಲ್ಯಾಣ ನಡೆಸುವ ಉತ್ಥಾನ ದ್ವಾದಶಿಯ ತುಳಸಿ ಪೂಜೆ ವಿಶೇಷವಾದದ್ದು.

ಹುಣ್ಣಿಮೆಯಂದು ಚಂದ್ರ ಜಯಂತಿ
ಕಾರ್ತಿಕ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನವನ್ನು ಚಂದ್ರಜಯಂತಿಯೆಂದು ಆಚರಿಸಲಾಗುತ್ತದೆ. ಈ ಹುಣ್ಣಿಮೆಯಂದು ಚಂದ್ರನ ಬೆಳಕು ಶೇಕಡಾ ಏಳರಷ್ಟು ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಯಾಕೆಂದರೆ ಈ ದಿನ ಚಂದ್ರ ಅತ್ಯಂತ ಸಮೀಪದಲ್ಲಿ ಇರುತ್ತಾನೆ.
ಪೌರಾಣಿಕ ಕಥೆಯ ಪ್ರಕಾರ ಚಂದ್ರನು ಶಿವನನ್ನು ಕುರಿತು ಹಲವು ವರ್ಷಗಳ ಕಾಲ ತಪಸ್ಸು ಮಾಡಿದ. ಆ ಸಮಯದಲ್ಲಿ ದೇವತೆಗಳು ಚಂದ್ರನ ತಪಸ್ಸಿಗೆ ಭಂಗ ತರಲು ಪ್ರಯತ್ನಿಸಿದರು, ಆದರೆ ದೇವತೆಗಳು ಚಂದ್ರನ ತಪಸ್ಸನ್ನು ಕೆಡಿಸಲು ಮಾಡಿದ ಪ್ರಯತ್ನಗಳೆಲ್ಲಾ ವ್ಯರ್ಥವಾಯಿತು. ಚಂದ್ರನ ಏಕಾಗ್ರತೆಗೆ ಕೊಂಚವೂ ಭಂಗವುಂಟಾಗಲಿಲ್ಲ. ಚಂದ್ರನ ತಪಸ್ಸಿಗೆ ಮೆಚ್ಚಿದ ಶಿವನು ವಿಶೇಷ ವರಗಳನ್ನು ಕರುಣಿಸುತ್ತಾನೆ. ನಿನ್ನ ಸೌಂದರ್ಯ ಹೀಗೆ ಇರಲಿ, ನೀನು ನನ್ನ ಶಿರದ ಮೇಲೆ ಸದಾಕಾಲ ನೆಲೆಸಿರು ಎಂದು ಅನುಗ್ರಹಿಸಿದನು. ಹೀಗಾಗಿ ಶಿವನ ಶಿರದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಚಂದ್ರನು ಶಾಶ್ವತವಾಗಿ ನೆಲೆಸಿದನು. ಚಂದ್ರನನ್ನು ಧರಿಸಿಕೊಂಡ ಶಿವನನ್ನು ಈ ಕಾರಣದಿಂದ ಚಂದ್ರಶೇಖರನೆಂದು ಕರೆಯಲಾಯಿತು.
                                                                                                      ಕಾರ್ತಿಕ ಸೋಮವಾರ
ಕಾರ್ತಿಕ ಮಾಸದಲ್ಲಿ ಸೋಮವಾರಗಳಿಗೆ ವಿಶೇಷ ಮಹತ್ವವಿದೆ. ಶಿವನ ಮಾಸವೆಂದೇ ಕರೆಯಲ್ಪಡುವ ಕಾರ್ತಿಕ ಮಾಸದ ಸೋಮವಾರ ಶಿವನ ಪೂಜೆ ಮಾಡಿದರೆ ಪುಣ್ಯಪ್ರಾಪ್ತಿಯಾಗುವುದು. ಈ ಸೋಮವಾರದಂದು ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವುದರಿಂದ ಸಕಲ ಪಾಪಗಳು ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಶಿವಪೂಜೆ ಮಾಡುವುದರಿಂದ ವಿಶೇಷ ವರಗಳನ್ನು ಶಿವನು ನೀಡುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ. ಹಾಗಾಗಿ ಕಾರ್ತಿಕ ಸೋಮವಾರದಂದು ಉಪವಾಸ ವ್ರತ ಕೈಗೊಳ್ಳುವುದು ಶ್ರೇಷ್ಠವೆಂದು ಹೇಳಲಾಗುತ್ತದೆ.
ಸೋಮವಾರದ ಅಧಿಪತಿ ಚಂದ್ರ, ಚಂದ್ರ ಮನೋಕಾರಕನಾಗಿರುವುದರಿಂದ, ಯಾರು ತಮ್ಮ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಉನ್ನತಸ್ಥಾನಕ್ಕೆ ಏರುತ್ತಾರೆ.

ನದಿ ಸ್ನಾನ
ಕಾರ್ತಿಕ ಮಾಸದಲ್ಲಿ ನದೀ ಸ್ನಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ಮಾಸದಲ್ಲಿ ಮಾಡುವ ನದಿ ಸ್ನಾನವು ಭೌತಿಕ ಕಲ್ಮಶವನ್ನು ಹೋಗಲಾಡಿಸುವುದು. ಈ ಕಾಲದಲ್ಲಿ ನದಿಯ ನೀರು ಫಲಭರಿತವಾಗಿರುತ್ತದೆ ಹಾಗೂ ಸ್ವಲ್ಪ ಚಳಿಯೊಂದಿಗೆ ದೇಹಕ್ಕೆ ಶಕ್ತಿ ತುಂಬುತ್ತದೆ ಎನ್ನುವ ನಂಬಿಕೆ ಇದೆ. ಇದು ಏಕಾಗ್ರತೆ, ತಾಳ್ಮೆ ಸಹನೆಯನ್ನು ಇದು ಕಲಿಸಿಕೊಡುತ್ತದೆ.
                                                                              ಧಾತ್ರಿ ಹೋಮ
ಬ್ರಹ್ಮ ದೇವರ ಆನಂದ ಭಾಷ್ಪವು ಭೂಮಿಗೆ ಬಿದ್ದು ಬೆಟ್ಟದ ನೆಲ್ಲಿಕಾಯಿಯ ಮರವಾಯಿತು ಎನ್ನುವ ನಂಬಿಕೆ ಇದೆ. ಧಾತ್ರಿ ವೃಕ್ಷವೆಂದರೆ ನೆಲ್ಲಿಕಾಯಿ ಮರ. ಕಾರ್ತಿಕ ಮಾಸದಲ್ಲಿ ಧಾತ್ರಿ ಹೋಮ ಅತ್ಯಂತ ವಿಶೇಷವಾದ ಆಚರಣೆ. ಈ ಮಾಸದ ಹುಣ್ಣಿಮೆ, ತ್ರಯೋದಶಿ, ಚತುರ್ದಶಿಗಳಲ್ಲಿ ಧಾತ್ರಿ ಹೋಮವನ್ನು ಮಾಡಲಾಗುತ್ತದೆ. ಧಾತ್ರಿಹೋಮವನ್ನು ಮಾಡಿದರೆ ಅಶ್ವಮೇಧಯಾಗ ಮಾಡಿದಷ್ಟೇ ಪುಣ್ಯಪ್ರಾಪ್ತಿಯಾಗುವುದು ಎಂದು ಹೇಳಲಾಗುತ್ತದೆ.
***
#ಕಾರ್ತಿಕಮಾಸದಲ್ಲಿ #ದೀಪಾರಾಧನೆ ಮತ್ತು #ದೀಪದಾನದ #ಮಹತ್ವ
🌺🌺🌺🌺🌺🌺🌺
ಕಾರ್ತೀಕಮಾಸದಲ್ಲಿ ಭಗವಂತನಿಗೆ ದೀಪಗಳನ್ನು ಹಚ್ಚುವುದು ಪ್ರಶಸ್ತವಾಗಿದೆ.ಆಶ್ವಿನ ಮಾಸದ ಪೌರ್ಣಿಮೆಯಿಂದಲೇ ದೀಪವನ್ನು ಹಚ್ಚುವುದು.
ದೀಪದಾನದ ಮಹಿಮೆ:- ಯಾರು ಕಾರ್ತೀಕದಲ್ಲಿ ಭಗವಂತನಿಗೆ ಶುಚಿಯಾಗಿ ಯಾರು ಬೆಳಗುವರೊ ಅವರು ಸಂಸಾರದಿಂದ ಮುಕ್ತರೆಂದೆ ಅರ್ಥ ಆರುತ್ತಿರುವ ದೀಪವನ್ನು ಉಜ್ವಲಗೊಳಿಸುವುದು ,
ಮತ್ತೊಬ್ಬರ ಮನೆಯ ದೀಪವನ್ನು ಹಚ್ಚುವುದು .ಬತ್ತಿಯನ್ನು ದಾನ ಮಾಡುವುದು ಇವೆಲ್ಲವೊ ದಾನಿಯ ಆಜ್ಞಾನವನ್ನು ಪರಿಹರಿಸಿ ಜ್ಞಾನವನ್ನು ನೀಡಲು ಸಹಕಾರಿಯಾಗಿವೆ.

ಪ್ರಾತಃ ಸ್ನಾತ್ವಾ ಶುಚಿರ್ಭೂತ್ವಾ ಯೋ ದದ್ಯಾದ್ ದೀಪಕಂ ಹರೇ |
ಸತು ಮೋಕ್ಷಮವಾಪ್ನೋತಿ ನಾತ್ರ ಕಾರ್ಯ ವಿಚಾರಣಾ ||

ಸಾವಿರದೆಂಟು, ನೊರೆಂಟು ,ಐವತ್ತನಾಲ್ಕು ಇಪ್ಪತ್ತೆಳು ಹೀಗೆ ದೀಪವನ್ನು ಶಕ್ತಿಯಿದ್ದಂತೆ ಬೆಳಗಿಸಬೇಕು.

ಕಾರ್ತೀಕ ಮಾಸದಲ್ಲಿ ಕಮಲಗಳಿಂದ ಪೂಜೆ ,ತುಲಸಿ ,ಮಾಲತೀ,ಮುನಿ ಪುಷ್ಪಗಳಿoದ ಪೂಜಿಸಬೇಕು ಮತ್ತು ದೀಪ ದಾನವನ್ನು ಮಾಡಬೇಕು ಹೀಗೆ ಈ ಐದು ಪವಿತ್ರವಾದವು ದೇವಸ್ಥಾನದ ಗೋಪುರದ ಮೇಲೆ ಆಕಾಶದೀಪವನ್ನು ಭಗವಂತನಿಗೆ ಈ ಕೆಳಗಿನ ಮಂತ್ರದಿoದ ಅರ್ಪಿಸಬೇಕು.

ಆಕಾಶದೀಪೋ ದಾತವ್ಯೋ ಮಾಸಮೆಕo ತು ಕಾರ್ತಿಕೇ |
ಕಾರ್ತಿಕೇ ಶುಕ್ಲ ಪೌರ್ಣಿಮ್ಯಾo ವಿಧಿನೋತ್ಸರರ್ಜಯೇಚ್ಚ ತಂ ||

ಮಹಪ್ರಕಾಶವಾದ ದೊಡ್ಡ ದೀಪವನ್ನು ಕಾರ್ತೀಕ ದಾಮೋದರನಿಗೆ ಅರ್ಪಿಸಬೇಕು.
ಕಾರ್ತಿಕಮಾಸವೂ ದೀಪದಾನಕ್ಕೆ ಪ್ರಸಿದ್ದವಾಗಿದೆ. ಪಿತೃಗಳೂ ಕೂಡ
ಕಾರ್ತೀಕಮಾಸದಲ್ಲಿ ದೇವ ದೇವನಿಗೆ ದೀಪವನ್ನು ಬೆಳಗುವ ಕುಲದೀಪಕ ಮಗನಿಗಾಗಿ ಕಾಯುತ್ತಿರುವರು.

ಭವಿಷ್ಯತಿ ಕುಲೇsಸ್ಮಾಕಂ ಪಿತೃಭಕ್ತಃ ಸುಪುತ್ರಕಃ |
ಕಾರ್ತಿಕೇ ದೀಪದಾನೇನ ಯಸ್ತೋಷಯತಿ ಕೇಶವಂ ||

ಕಾರ್ತೀಕದಲ್ಲಿ ತುಪ್ಪದ ದೀಪ, ತೈಲ ದೀಪ, ಆಕಾಶದೀಪ ಇವುಗಳನ್ನು ದೇವರಿಗೆ ಅರ್ಪಿಸಿದವನು ಸ್ವರ್ಗದಲ್ಲಿ ಸುಖಿಸುವನು .ಮೂವತ್ತು ದಿನಗಳು ದೀಪವನ್ನು ಬೆಳಗಬೇಕು .ಸಾಧ್ಯವಿಲ್ಲಡಿದ್ದರೆ ಕಡೆಯ ಐದು ದಿನಗಳಾದರೂ ದೀಪವನ್ನು ಬೆಳಗಬೇಕು . ದೀಪವನ್ನು ಬೆಳಗಲು ಶಕ್ತಿಯಿಲ್ಲದಿದ್ದರೆ ಬೇರೆಯವರು ಹಚ್ಚಿರುವ ದೀಪದ ಕರಿಯನ್ನು ತೆಗೆದು ಉಜ್ವಲಗೊಳಿಸುವುದು ದೀಪವು ಗಳಿಗೆ ಆರದಂತೆ ರಕ್ಷಿಸುವುದರಿಂದಲೂ ಅಕ್ಷಯ ಪುಣ್ಯವಿದೆ.

ದೀಪಮಾರೋಪಯೇತ್ಸಾಯಂ ಕಾರ್ತಿಕೇ ಪ್ರತಿ ವಾಸರಮ್
ನಿವೇದ್ಯ ಪಾಯಸನ್ನಂ ಚ ಸಿದ್ಧಿ ಮಿಷ್ಟಾಮವಾಫ್ನುಯಾತ್

ಕಾರ್ತೀಕಮಾಸದಲ್ಲಿ ಪ್ರತಿನಿತ್ಯವೂ ಪ್ರಾತಃಕಾಲ-ಸಾಯಂಕಾಲ ವಿಶೇಷವಾಗಿ ದೀಪಗಳಿಂದ ತುಳಸಿಯನ್ನು ಉಪಚರಿಸಬೇಕು .ಸಾಯಂಕಾಲ ವಿಶೇಷವಾಗಿ ದೀಪಾರಾಧನೆಯನ್ನು ಮಾಡಬೇಕು.(ತುಪ್ಪದ ದೀಪ ಶ್ರೇಷ್ಠ ಸಾಧ್ಯವಾಗದಿದ್ದಲ್ಲಿ ಎಳ್ಳೆಣ್ಣೆಯಿಂದಲಾದರು ದೀಪವನ್ನು ಬೆಳಗಿಸಬೇಕು)ಪ್ರತಿನಿತ್ಯ ತಪ್ಪದೇ ಇದನ್ನು ವ್ರತವಾಗಿ ಸ್ವೀಕರಿಸಬೇಕು ಮತ್ತು ದೇವರಿಗೆ ನಿವೇದಿಸಿದ ಪಾಯಸಾನ್ನವನ್ನು ಪ್ರತಿ ನಿತ್ಯ ತುಳಸಿಗೆ ನಿವೇದಿಸಬೇಕು ಹೀಗೆ ಕಾರ್ತೀಕಮಾಸದಲ್ಲಿ ತುಳಸಿಗೆ ಪ್ರತಿನಿತ್ಯವೂ ದೀಪಾರಾಧನೆ ಮತ್ತು ಪಾಯಸಾನ್ನದ ನೈವೈದ್ಯದಿಂದ ಇಷ್ಟಾರ್ಥಗಳು ಸಿದ್ಧಿಸುವುವು .

ಕೃಪೆ :Whatsapp
***
ಈ ಕಾರಣಗಳಿಗೇ ವರ್ಷದ ಎಲ್ಲಾ ತಿಂಗಳಿಗಿಂತ ಕಾರ್ತಿಕ ಮಾಸ ಅತ್ಯಂತ ಮಂಗಳಕರವೆನ್ನುವುದು

ಕಾರ್ತಿಕ ಮಾಸವು ಹಿಂದೂಗಳಲ್ಲಿ ಅತ್ಯಂತ ಮಂಗಳಕರವಾದ ತಿಂಗಳು. ಕಾರ್ತಿಕ ಮಾಸದಲ್ಲಿ ಹಲವಾರು ಪ್ರಮುಖ ಹಬ್ಬಗಳು ಬರಲಿವೆ. ಶಿವ ಹಾಗೂ ವಿಷ್ಣುವಿನ ಆರಾಧನೆಗಾಗಿ ಉತ್ತಮವಾದ ಈ ತಿಂಗಳನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ ಏಕೆಂದರೆ ಈ ಪವಿತ್ರ ಮಾಸದಲ್ಲಿ ಶಿವ ಮತ್ತುವಿಷ್ಣು ಜೊತೆಯಾಗಿ ಇರುತ್ತಾರೆ ಎಂದು ನಂಬಲಾಗಿದೆ.

ಈ ಮಾಸದಲ್ಲಿ ದೀಪಾರಾಧನೆ, ಉಪವಾಸ, ರುದ್ರಾಭಿಷೇಕ, ಬಿಲ್ವಪೂಜೆ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಹೆಚ್ಚಿನ ಪ್ರಯೋಜನಗಳು ಪ್ರಾಪ್ತವಾಗುತ್ತದೆ, ನಮ್ಮನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತದೆ ಎಂಬ ನಂಬಿಕೆಯಿದೆ. ಇಂತಹ ಪವಿತ್ರ ತಿಂಗಳಿನ ಕುರಿತ ಇನ್ನಷ್ಟು ಮಾಹಿತಿ ನಿಮಗಾಗಿ ಇಲ್ಲಿದೆ.

ದೀಪೋತ್ಸವ :-

ಹೆಚ್ಚಿನ ದೇವಾಲಯಗಳ ದೀಪೋತ್ಸವವು ಈ ಸಮಯದಲ್ಲೇ ನಡೆಯುವುದು ಗಮನಿಸಿರಬಹುದು. ಜೊತೆಗೆ ದೀಪಾವಳಿಯೂ ಇದೇ ಸಮಯದಲ್ಲಿ ಬರುವುದು ಇದೇ ಕಾರಣಕ್ಕೆ. ಕಾರ್ತಿಕ ದೀಪೋತ್ಸವವು ದೀಪಗಳ ಬೆಳಕನ್ನು ಸೂಚಿಸುತ್ತದೆ. ದೀಪ ನಮ್ಮ ದೇಹವನ್ನು ಸಂಕೇತಿಸಿದರೆ, ಬೆಳಕು ನಮ್ಮ ಆತ್ಮವನ್ನು ಸಂಕೇತಿಸುತ್ತದೆ. ನಾವು ದೀಪವನ್ನು ಹಚ್ಚಿದಾಗ, ನಮ್ಮ ಮನಸ್ಸು ಶುದ್ಧವಾಗಿ, ಕತ್ತಲೆ, ಅಜ್ಞಾನ, ಕೋಪ, ದುರಾಸೆ, ಅಸೂಯೆ, ದ್ವೇಷ, ಕಹಿ ಮತ್ತು ಅಸಮಾಧಾನದ ರೂಪದಲ್ಲಿ ಸಂಗ್ರಹವಾದ ಎಲ್ಲಾ ನಕಾರಾತ್ಮಕತೆಯಿಂದ ಮುಕ್ತಗೊಳ್ಳುತ್ತೇವೆ ಎಂಬ ನಂಬಿಕೆಯಿದೆ. ಇದು ಆಂತರಿಕ ಆಧ್ಯಾತ್ಮಿಕ ಬೆಳವಣಿಗೆಗೆ ಮತ್ತು ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಇದು ಮುಂದೆ ನೋಡಲು ಉತ್ತಮ ಅವಕಾಶವನ್ನು ನೀಡುತ್ತದೆ. ನಿಜವಾದ ಸಂತೋಷವನ್ನು ಅನುಭವಿಸಲು ಮನಸ್ಸು, ದೇಹ ಮತ್ತು ಆತ್ಮದ ಶುದ್ಧತೆಯನ್ನು ಅಭ್ಯಾಸ ಮಾಡುವುದು ಮತ್ತು ನಮ್ಮ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸುವುದು ಅತ್ಯಂತ ಮುಖ್ಯವಾಗಿದೆ.

ನೆಲ್ಲಿಕಾಯಿ ಮರವನ್ನು ಪೂಜಿಸುವುದು:

ನೆಲ್ಲಿಕಾಯಿ ಮರವನ್ನು ಪವಿತ್ರ ಕಾರ್ತಿಕ ಮಾಸದಲ್ಲಿ ಪೂಜಿಸಲಾಗುತ್ತದೆ. ಕಲ್ಪವೃಕ್ಷ ಮತ್ತು ಅಮೃತಫಲ ಎಂದೂ ಕರೆಯಲ್ಪಡುವ ಈ ಮರವು ಶಿವ ಪುರಾಣದಲ್ಲಿ ಉಲ್ಲೇಖವನ್ನು ಹೊಂದಿದೆ.

ಕಾರ್ತಿಕ ಪೌರ್ಣಮಿ:

ಕಾರ್ತಿಕ ಪೌರ್ಣಿಮೆಯಂದು ಶಿವ ಭೂಮಿಗೆ ಇಳಿದು ಇಡೀ ವಿಶ್ವದೊಂದಿಗೆ ಒಂದಾಗುತ್ತಾನೆ ಎಂದು ನಂಬಲಾಗಿದೆ. ಈ ದಿನ 365 ಬತ್ತಿಯೊಂದಿಗೆ ತುಪ್ಪದ ದೀಪಗಳನ್ನು ಹಚ್ಚುವುದು ವರ್ಷದ ಪ್ರತಿ ದಿನ ದೀಪ ಹಚ್ಚುವುದಕ್ಕೆ ಸಮಾನವಾಗಿರುತ್ತದೆ. ಕಾರ್ತಿಕ ಪೌರ್ಣಮಿಯಂದು ಉಪವಾಸ ಮತ್ತು ಸಾತ್ವಿಕ ಆಹಾರವನ್ನು ಸೇವಿಸುವುದು ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತದೆ. ಈ ದಿನ ಬ್ರಾಹ್ಮಣರಿಗೆ ನೈವೇದ್ಯವನ್ನು ಅಕ್ಕಿ, ಬೆಲ್ಲ, ಹಣ್ಣುಗಳು ಮತ್ತು ಹಾಲಿನ ರೂಪದಲ್ಲಿ ನೀಡಬೇಕು.

ಶಿವಮಂತ್ರ ಪಠಣೆ:

ಓಂ ನಮಃ ಶಿವಾಯಃ ಮಂತ್ರ ಪಠಣವು ನಮ್ಮ ಮನಸ್ಸನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ದೇವಾಲಯ ಅಥವಾ ಮನೆಯಲ್ಲಿಯೇ ಕೂತು ಈ ಮಂತ್ರವನ್ನು ಪಠಿಸಿ.

ಹಬ್ಬಗಳ ಪರ್ವ:

ಈ ಶುಭಮಾಸದಲ್ಲಿ ದೀಪಾವಳಿ, ಏಕಾದಶಿ, ಗೋಪೂಜೆ, ತುಳಸಿ ವಿವಾಹ ಸೇರಿದಂತೆ ನಾನಾ ಹಬ್ಬಗಳು ಬರಲಿವೆ. ಇವುಗಳನ್ನು ಭಕ್ತಿಯಿಂದ ಆಚರಿಸಿದರೆ, ಶಿವನ ಆಶೀರ್ವಾದ ದೊರೆಯಲಿದೆ.

ಸಾಮಾಜಿಕ ಮಹತ್ವ:

ಕಾರ್ತಿಕ ಮಾಸದ ಆಚರಣೆಗಳನ್ನು ಅನುಸರಿಸುವ ಮೂಲಕ ವೈಯಕ್ತಿಕ ಶಿಸ್ತು, ಸಮಾಜದ ಮೌಲ್ಯಗಳನ್ನು ಪಡೆಯಬಹುದು. ನದಿಗಳು ಅಥವಾ ಸರೋವರಗಳ ಬಳಿ ಸೂರ್ಯೋದಯಕ್ಕೆ ಮುಂಚೆ ಸ್ನಾನ ಮಾಡುವುದರಿಂದ ನಾವು ಬೆಳಿಗ್ಗೆ ಬೇಗನೆ ಎದ್ದೇಳಲು ಕಲಿಯುತ್ತೇವೆ. ತಣ್ಣೀರು ಸ್ನಾನದ ಮೂಲಕ ನಾವು ಚಳಿಗಾಲವನ್ನು ಎದುರಿಸಬಹುದು. ನಾವು ನೀರಿನ ಮಾಲಿನ್ಯ ಮತ್ತು ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು.
***
ಕಾರ್ತಿಕ ಮಾಸದಲ್ಲಿ ತುಪ್ಪದ ದೀಪ ಅರ್ಪಿಸುವ ವೈಭವ
ಸ್ಕಂದ ಪುರಾಣ 

ಶ್ರೀ ಬ್ರಹ್ಮ-ನಾರದಮನಿಗಳ ಸಂವಾದ

1) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನೀಗೆ ತುಪ್ಪದ ದೀಪ ಅರ್ಪಿಸುವುದರಿಂದ ಸಾವಿರಾರು ಜನ್ಮಗಳ ಪಾಪಗಳು ತೊಡೆದು ಹೋಗುತ್ತವೆ.

2)ಯಾವುದೇ ಮಂತ್ರ ಪಠಿಸದಿರಬಹುದು, ಪುಣ್ಯ ಕಾರ್ಯ ಮಾಡದಿರಬಹುದು, ಮತ್ತು ಪರಿಶುದ್ಧತೆ ಆಚರಿಸದಿರಬಹುದು, ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಬೆಳಗಿದರೆ ಎಲ್ಲವೂ ಪರಿಪೂರ್ಣತೆ ಹೊಂದುತ್ತದೆ. 

3)ಕಾರ್ತಿಕ ಮಾಸದಲ್ಲಿ ಕೇಶವನಿಗೆ ತುಪ್ಪದ ದೀಪ ಹಚ್ಚುವುದು ಯಜ್ಞಗಳ ಆಚರಣೆ ಮತ್ತು ಎಲ್ಲಾ ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೆ ಸಮ.

4) ಕಾರ್ತಿಕ ಮಾಸದಲ್ಲಿ ಯಾರಾದರೂ ಶ್ರೀ ಕೇಶವನಿಗೆ ತುಪ್ಪದ ದೀಪ ಅರ್ಪಿಸಿ ಸಂತೃಪ್ತಗೊಳಿದರೆ ಅವರ ಕುಟುಂಬದ ಪೂರ್ವಜರು ಮುಕ್ತಿ ಪಡೆಯುವರು.

5) ಈ ಕಾರ್ತಿಕ ಮಾಸದಲ್ಲಿ ದಾಮೋದರನಿಗೆ ಅಂದರೆ ಕೃಷ್ಣನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಅವರು ವೈಭವಹೊಂದಿ ಅದೃಷ್ಟವಂತರಾಗುವರು.

6) ಯಾರು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪ ಅರ್ಪಿಸಿದರೆ, ಶ್ರೀ ವಾಸುದೇವನು ಅವರಿಗೆ ಒಳ್ಳೆಯ ಫಲಿತಾಂಶ ನೀಡುವನು.

7) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಪುನೀತವಾಗದಂತಹ ಪಾಪಗಳು ಮೂರು ಲೋಕಗಳಲ್ಲಿಯೂ ಇಲ್ಲ. 

8) ಈ ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ವ್ಯಕ್ತಿಯು ಯಾವುದೇ ಸಂಕಷ್ಟಗಳಿಲ್ಲದೇ ಶಾಶ್ವತವಾದ ಆಧ್ಯಾತ್ಮಿಕ ಜಗತ್ತನ್ನು ಹೊಂದುವನು.

ಹಿಂದೂಗಳಿಗೆ ಕಾರ್ತಿಕ ಮಾಸ ಮಹತ್ವವಾದದ್ದು 
ಹಾಗೂ ಅಧ್ಯಾತ್ಮ ಸಾಧಕರ ಮಾಸ

ಕಾರ್ತಿಕ ಮಾಸ ಹಬ್ಬಗಳ ಪರ್ವವಷ್ಟೇ ಅಲ್ಲ, ಜ್ಯೋತಿ ಬೆಳಗುವ, ಮನದಲ್ಲಿರುವ ಅಂಧಕಾರವನ್ನು ದೂರ ಮಾಡುವ ಪರ್ವವೂ ಆಗಿದೆ. ಅದರ ಸಂಕೇತವಾಗಿ ಮನೆಯ ಮುಂದೆ ದೀಪ ಬೆಳಗುತ್ತಾರೆ. 

ಕಾರ್ತಿಕ ಮಾಸವು ದೀಪಾವಳಿಯ ನಂತರ ಶುರುವಾಗುತ್ತದೆ. ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಕಾರಣ, ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ.

ಕಾರ್ತಿಕ ಮಾಸದ ವಿಶೇಷ

ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ. ಅದರ ಪ್ರಭಾವವು ಭೂಮಿಯ, ಭೂಮಿಯ ಪರಿಸರ ಹಾಗೂ ವ್ಯಕ್ತಿಯ ಮೇಲಾಗುತ್ತದೆ. 

ಕಾರ್ತಿಕ ಮಾಸವು ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವಾಗಿದೆ.

ಇಂತಹ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ, ವಿಧಾನಗಳನ್ನು ಉಲ್ಲೇಖಿಸಿದ್ದಾರೆ. 

ಅಂತಹ ಋಷಿ ಮುನಿಗಳಲ್ಲಿ ವಸಿಷ್ಠ ಋಷಿಗಳು ಕೆಲವೊಂದು ವಿಧಾನಗಳನ್ನು ಸೂಚಿಸಿದ್ದಾರೆ. ಅದನ್ನು ಅನುಸರಿಸುವ ಮೂಲಕ ನಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಕಂಡುಕೊಳ್ಳಬಹುದು.

ಹೀಗೆ ವಸಿಷ್ಠರಿಂದ ವಿಧಿತವಾದ ಐದು ವಿಧಾನಗಳೆಂದರೆ,

1. ಪವಿತ್ರ ಸ್ನಾನ 

ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಮೂರು ಬಾರಿ ಸ್ನಾನ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ಸ್ನಾನ ಮಾಡುವುದರಿಂದ, ಭೌತಿಕವಾಗಿ ದೇಹದ ಕಲ್ಮಷಗಳನ್ನು ತೊಳೆದುಕೊಳ್ಳಬಹುದು. ಅದರೊಂದಿಗೆ ಮನಸ್ಸಿನ ಕಲ್ಮಷಗಳನ್ನು ಕಳೆದುಕೊಳ್ಳುವುದರೊಂದಿಗೆ, ನಮ್ಮ ಭಾವನೆಗಳನ್ನು , ಮನಸ್ಸಿನ ಕೋಪ, ತಾಪವನ್ನು ನಿಯಂತ್ರಿಸಿಕೊಳ್ಳಬಹುದು. 

ನದಿ ತೀರಗಳಲ್ಲಿ ಮಾಡುವ ಜಲ ಸ್ನಾನವು ಜಲ ಚಿಕಿತ್ಸೆಗೆ ಪೂರಕವಾಗಿದೆ. ಪವಿತ್ರ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸು ಎರಡು ಶುದ್ಧವಾಗುತ್ತದೆ.

2. ದೀಪಾರಾಧನೆ 

ಪವಿತ್ರ ಸ್ನಾನಾನಂತರ, ದೀಪಗಳನ್ನು ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತ ಬೆಳಗಬೇಕೆಂಬ ನಿಯಮವಿದೆ. ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ. 

ತುಪ್ಪದ ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗುತ್ತವೆ, ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತವೆ. ಅದರೊಂದಿಗೆ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಹೀಗೆ ಮನೆಯಲ್ಲಿ ದೀಪ ಬೆಳಗುವುದರಿಂದ. ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗುತ್ತದೆ.

3. ಪವಿತ್ರ ಗಿಡದ ಪೂಜೆ 

ದೀಪವನ್ನು ಬೆಳಗಿ ಮನದೊಳಗಿನ ಅಜ್ಞಾನವನ್ನು ಕಳೆದುಕೊಂಡ ನಂತರ ತುಳಸಿ ದೇವಿಯ ಪೂಜೆಗೆ ಮುಂದಾಗುತ್ತೇವೆ. ತುಳಸಿ ಒಂದು ಗಿಡಮೂಲಿಕಾ ಸಸ್ಯವಷ್ಟೇ ಅಲ್ಲ, ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ಶಕ್ತಿಯಾಗಿದೆ. 

ತುಳಸಿ ಪೂಜೆಯನ್ನು ಪ್ರತಿನಿತ್ಯ ಮಾಡುವ ಮಹಿಳೆಯರಿಗೆ ಸೌಭಾಗ್ಯ ಸಿದ್ಧಿಸುತ್ತದೆ ಎನ್ನಲಾಗಿದೆ. ತುಳಸಿ ಗಿಡದ ಮುಂದೆ ದೀಪಾರಾಧನೆ ಮಾಡುವುದು ತ್ಯಾಗದ ಸಂಕೇತವಾಗಿದೆ.

4. ದಾಮೋದರನ ಪೂಜೆ 

ಶಿವ ಮತ್ತು ವಿಷ್ಣುವಿನ ಆರಾಧನೆಯೊಂದಿಗೆ ಶಿವ ಮತ್ತು ವಿಷ್ಣು ಎರಡೂ ಒಂದೇ ಎನ್ನುವ ಭಾವ ಮೂಡುತ್ತದೆ. ಶಿವ ಪ್ರಜ್ಞೆಯ ಸಂಕೇತವಾದರೆ, ವಿಷ್ಣುವು ಸ್ಥಿತಿಕಾರನಾಗಿದ್ದಾನೆ. 

ಹೇಗೆ ಬ್ರಹ್ಮಾಂಡವು ಸ್ಥಿತಿ ಮತ್ತು ಪ್ರಜ್ಞೆಯಿಂದ ಆವೃತ್ತವಾಗಿದೆಯೋ ಹಾಗೆಯೇ ಶಿವ ಮತ್ತು ವಿಷ್ಣುವಿನ ಪ್ರಜ್ಞೆಯು ನಮ್ಮಲ್ಲಿ ಅಡಕವಾಗಿದೆ. ಇಂತಹ ಪ್ರಜ್ಞೆಯೇ ನಮ್ಮನ್ನು ಅಧ್ಯಾತ್ಮ ಸಾಧನೆಯತ್ತ ಮುನ್ನಡೆಸುತ್ತದೆ.

5. ಸೋಮವಾರ ವಿಶೇಷ 

ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರದ ಅಧಿಪತಿ ಚಂದ್ರ. ಚಂದ್ರ ಮನೋಕಾರಕ ಅಂದರೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವವ. ಯಾರು ತಮ್ಮ ಮನಸ್ಸನನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ. 

ಅದರೊಂದಿಗೆ ತಮ್ಮ ವ್ಯಕ್ತಿತ್ವ ಬೆಳವಣಿಗೆಗೂ ಪೂರಕವಾಗುತ್ತಾರೆ. ಸಿದ್ಧಿಯನ್ನು ಪಡೆಯುತ್ತಾರೆ. ಹಾಗಾಗಿ ಯಾರು ಸೋಮವಾರದಂದು ಪ್ರದೋಷ ವ್ರತವನ್ನು ಆಚರಿಸುತ್ತಾರೋ, ಮನೋಕಾರಕ ಚಂದ್ರನನ್ನೇ ತನ್ನ ಶಿರದಲ್ಲಿ ಧಾರಣೆ ಮಾಡಿಕೊಂಡಿರುವ ಶಿವನನ್ನು ಕುರಿತು ಧ್ಯಾನ ಮಾಡುತ್ತಾರೋ, ಅವರು ಅತ್ಯುತ್ತ ಮ ಜ್ಞಾನವಂತರಾಗುತ್ತಾರೆ.
-----

ಕಾರ್ತಿಕ ಮಾಸದಲ್ಲಿ ಹುಟ್ಟಿದವರಿಗೆ ವಿಷ್ಣು, ಶಿವನ ಅನುಗ್ರಹ ಇರುತ್ತದೆ. ಈ ಸಂಬಂಧ ದೇವತಾ ಆರಾಧನೆ ಮಾಡಿದರೆ ರಾಜಯೋಗ ಲಭಿಸುತ್ತದೆ. 

ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಮೃತ್ಯುಂಜಯ ಆರಾಧನೆ ಮಾಡಿದರೆ ಒಳ್ಳೆಯದು.

ಸರ್ವೇಜನಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು
***
ಕಾರ್ತಿಕ ಮಾಸದಲ್ಲಿ #ನೆಲ್ಲಿಗಿಡದ #ಮಹತ್ವ
🌺🌺🌺🌺🌺🌺🌺

ಸ್ನೇಹಿತರೇ ನೆಲ್ಲಿಕಾಯಿ ಅಂದರೆ ಮಹಾಲಕ್ಷ್ಮೀಗೆ ಬಹಳ ಪ್ರೀತಿ  (ಬೆಟ್ಟದ ನೆಲ್ಲಿಕಾಯಿ) ಈ ಕಾರ್ತಿಕ ಮಾಸದಲ್ಲಂತೂ ವಿಶೇಷವಾಗಿ ನೆಲ್ಲಿಕಾಯಿ ಗಿಡವನ್ನು ದಾಮೋದರ ಮಂತ್ರದಿಂದ ಪೂಜೆ ಮಾಡಿದರೆ ..ಅದನ್ನು ಧಾತ್ರಿ ಹವನ ಅಂತ ಹೇಳ್ತೇವೆ ...  ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿಯ ಮರದ ಕೆಳಗೆ ತುಪ್ಪದ ದೀಪ ಹಚ್ಚಿ  ದಾಮೋದರ ಸ್ತೋತ್ರ ಪಠಣೆ  ದಿನವೂ ಸಂಜೆ ಮತ್ತು ಸೂರ್ಯೋದಯ ಕ್ಕಿಂತ ಮುಂಚೆ ಮಾಡಿದರೆ ಬಹಳ ಅಂದರೆ ಬಹಳ ಪುಣ್ಯ...ಏನಾದರೂ ಮನಸ್ಸಿನಲ್ಲಿ  ಅಂದುಕೊಂಡು ಮಾಡಿದರೆ ಯಶಸ್ಸು ಖಂಡಿತ...
ಇನ್ನು ನೆಲ್ಲಿಕಾಯಿಯಿಂದ ಬೆಲ್ಲವನ್ನು ಹಾಕಿ ಮಾಡಿದ ಪದಾರ್ಥ ಲಕ್ಷ್ಮೀ ಸಹಿತ ನಾರಾಯಣನಿಗೆ ನೈವೇದ್ಯ ಮಾಡಿದರೆ ಬಹಳ ಒಳ್ಳೆಯದು... ಕಾರ್ತಿಕ ಮಾಸದ ನಿಯಾಮಕ ಭಗವಂತ  ದಾಮೋದರನಿಗೆ ತುಳಸಿ ಪತ್ರೆ ಹಾಗೂ ನೆಲ್ಲಿ ಪತ್ರೆಯಿಂದ ಪೂಜಿಸಿದರೆ ಹೇಳಲಾರದಷ್ಟು ಪುಣ್ಯ ಪ್ರಾಪ್ತಿ..
ನೆಲ್ಲಿ ಮರದಲ್ಲಿ ದಾಮೋದರನ ವಾಸ...ಅದಕ್ಕೆ  ಈ ಮಾಸದಲ್ಲಿ ನೆಲ್ಲಿಕಾಯಿ ಮೇಲೆ ಬತ್ತಿ ಇಟ್ಟು ದೀಪ ಹಚ್ಚುತ್ತಾರೆ ,ತುಳಸಿಗೆ  ಆರತಿ ಮಾಡುತ್ತಾರೆ ...
ನೆಲ್ಲಕಾಯಿಯನ್ನು ಸಪ್ತಮಿ, ಭಾನುವಾರ,ಮಂಗಳವಾರ ಮತ್ತು ಶುಕ್ರವಾರ ತಿನ್ನ ಬಾರದು. ಆದ್ದರಿಂದ ಆ ದಿನಗಳಲ್ಲಿ ದಾತ್ರಿ ಹವನ ಮಾಡಬಾರದು.
***

read more here


deepavali fest     DEEPAVALI
uttan dwadashi or tulasi fest        TULASI FEST
bali padyami    BALI PADYAMI

dhatri havana             DHATRI HAVANA

*


No comments:

Post a Comment