ನಾವು ಬಾಳೆಹಣ್ಣನ್ನು ತಿನ್ನೋದು ಸಹಜ ಮತ್ತು ಅದರ ಆರೋಗ್ಯಕಾರಿ ಲಾಭಗಳು ಸಹ ಗೊತ್ತಿರೋ ಸಂಗತಿ, ಆದರೆ ಬಾಳೆಹಣ್ಣು ಸಿಪ್ಪೆಯಲ್ಲೂ ಸಹ ಹಲವಾರು ಲಾಭಗಳಿವೆ ಆದರೆ ಅದು ನಮಗೆ ಗೊತ್ತಿಲ್ಲದ ಕಾರಣ ಸಿಪ್ಪೆಯನ್ನು ನಾವು ಬಿಸಾಡುತ್ತೇವೆ, ಹಾಗಾದರೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಅಂತಹ ಲಾಭಗಳೇನು ಅಂತೀರಾ ಆ ಕೆಳಗಿನ ಅಂಶಗಳನ್ನು ನೋಡಿ ಗೊತ್ತಾಗುತ್ತೆ.
1. ಬಾಳೆಹಣ್ಣಿನ ಸಿಪ್ಪೆಯಿಂದ 15 ದಿನ ಹಲ್ಲು ತಿಕ್ಕಿ. ಹಲ್ಲಿನ ಮೇಲಿನ ಕಲೆ ಎಲ್ಲಾ ಹೋಗಿ ಹೊಳಪು ಬರುತ್ತೆ.
2. ಸುಮ್ಮನೆ ಒಂದು 30 ನಿಮಿಷ ಬಾಳೆಸಿಪ್ಪಿನಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಇದರಿಂದ ಮೊಡವೆ ಗುಳ್ಳೆ ಮತ್ತೆ ಸುಕ್ಕು ಕಡಿಮೆ ಮಾಡುತ್ತೆ.
3. ಬಾಳೆಯ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ನಾರಿನ ಅಂಶ ಇರುತ್ತದೆ. ಈ ನಾರಿನ ಅಂಶ ದೇಹಕ್ಕೆ ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ಪಚನ ಕ್ರಿಯೆಗೆ ಅತ್ಯಗತ್ಯವಾದ ಅಂಶ. ಈ ನಾರಿನ ಅಂಶವುಳ್ಳ ಪಾನೀಯವನ್ನು ಸೇವಿಸಿದರೆ ಜೀರ್ಣಾಂಗದ ಸಮಸ್ಯೆಗಳು ಕಡಿಮೆಯಾಗುತ್ತವೆ.
4. ಎಲ್ಲಾದರೂ ಮೈ ಕೈ ನೋವು ಇದ್ದಾರೆ ಬಾಳೆಸಿಪ್ಪೆಯನ್ನು ನೋವಾದ ಜಾಗಕ್ಕೆ ಉಜ್ಜಿಕೊಳ್ಳಿ. ನೋವು ಕಡಿಮೆಯಾಗುತ್ತೆ.
5. ಕಿಡ್ನಿಯಲ್ಲಿ ಕಲ್ಲು ಕರಗಿಸುವುದು ಹಾಗೂ ತೂಕ ಇಳಿಸಿಕೊಳ್ಳಲು ಬಾಳೆ ಸಿಪ್ಪೆಯ ಜ್ಯೂಸ್ ಸಹಕಾರಿ.
6. ಅರಿಸಿನ ಮತ್ತು ತುಪ್ಪ ಬೆರೆಸಿ ಗಾಯ ಅಥವಾ ಕಜ್ಜಿಗೆ ಹಚ್ಚಿ ಅದರ ಮೇಲೆ ಬಾಳೆ ಎಲೆ ಕಟ್ಟಿದರೆ ಗಾಯ ಅಥವಾ ಕಜ್ಜಿ ಬೇಗನೆ ಗುಣವಾಗುತ್ತದೆ. ಸೋರಿಯಾಸಿಸ್ (ಫ್ಹಂಗಾಸ್ ಇನ್ಫೆಕ್ಷನ್) ತರೋ ಉರಿ ಮತ್ತೆ ಕೆರೆತವನ್ನು ಕಡಿಮೆ ಮಾಡುತ್ತದೆ.
7. ಸೊಳ್ಳೆ ಕಚ್ಚಿದ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ 5 ನಿಮಿಷ ಮಸಾಜ್ ಮಾಡಿ. 15 ನಿಮಿಷದ ಬಳಿಕ ತಂಪಾದ ನೀರಿನಿಂದ ತೊಳೆಯಿರಿ. ಇದರಿಂದ ಸೊಳ್ಳೆ ಕಚ್ಚಿದ ತುರಿಕೆ ಕಡಿಮೆಯಾಗುತ್ತದೆ.
8. ಕುತ್ತಿಗೆ, ಮುಖದ ಮೇಲೆ ಬರೋ ನರೋಲಿಗಳನ್ನ ಹೋಗಲಾಡಿಸೋಕೆ ಬಾಳೆಹಣ್ಣಿನ ಸಿಪ್ಪೆಯನ್ನು ಅದಕ್ಕೆ ಕಟ್ಟಿ ಒಂದು ಬ್ಯಾಂಡೇಜ್ ಸುತ್ತಿ ರಾತ್ರಿ ಹಾಗೆ ಇಟ್ಟುಕೊಂಡು ಮಲಗಿ. ಬೆಳೆಗ್ಗೆ ತನಗೆ ತಾನೇ ನರೋಲಿಗಳು ಬೀಳುತ್ತವೆ.
*****
No comments:
Post a Comment