೧. ವೀಳ್ಯದೆಲೆ ತಾಂಬೂಲ ಕೊಡೋವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ.....
"ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ ..
ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ ..
ಹಣಕಾಸಿಗೆ ಪರಾದಟವಾಗುತ್ತದೆ...
೨. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದ್ದರೆ...
ಅತಿಯಾದ ನಷ್ಟ, ಅನಾರೋಗ್ಯವಾಗುತ್ತದೆ.., ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ ...
೩. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ...
೪. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೆ ಎಲ್ಲಿಯಾದರೂ ಬಿಟ್ಟು ಬಂದರೆ...
"ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ.., ಶುಭ ಕಾರ್ಯ ನಿಧಾನವಾಗುತ್ತದೆ...
ಮಕ್ಕಳ ಮಾನಸಿಕ ಬೆಳವಣಿಕೆ ಕಮ್ಮಿಯಾಗುತ್ತದೆ...
೫. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ ...
೬. ತಾಂಬೂಲ ಕೊಡೊವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. .
ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ.
******
ವೀಳ್ಯೆದೆಲೆಯ ವೈಶಿಷ್ಟ್ಯತೆಯೇನು ?
ಶುಭಕರವಾದ ಅಷ್ಟವಸ್ತುಗಳಲ್ಲಿ ವೀಳ್ಯೆದೆಲೆಯೂ ಸಹ ಒಂದು ಎಂದು ನಮ್ಮ ಸಂಪ್ರದಾಯ ತಿಳಿಸುತ್ತದೆ. ವೀಳ್ಯೆದೆಲೆ ಇಂತಹ ಶುಭ ಲಕ್ಷಣವನ್ನು ಹೊಂದಿರುವುದರಲ್ಲಿ ಅನೇಕ ದೇವತೆಗಳ ಗುಣವನ್ನು ಅಡಗಿಸಿಕೊಂಡಿದೆ. ವಿಳ್ಳೆಯದೆಲೆ ಮೊದಲಲ್ಲಿ ಲಕ್ಷ್ಮಿದೇವಿ, ಮಧ್ಯ ಭಾಗದಲ್ಲಿ ಸರಸ್ವತಿ ಹಾಗೂ ಕೊನೆಯ ಭಾಗದಲ್ಲಿ ಜ್ಯೇಷ್ಠ ಭಗವತಿ ನೆಲೆಸಿರುವ ರೆಂಬ ಒಂದು ನಂಬಿಕೆ. ಈ ಎಲೆಯ ಎಡಭಾಗದಲ್ಲಿ ಪಾರ್ವತಿ ಮಾತೆ, ಬಲಭಾಗದಲ್ಲಿ ಭೂದೇವಿ, ಮುಂದಿನ ಭಾಗದಲ್ಲಿ ಶಿವನು ಎಲೆಯ ಪೂರ್ತಿಯಾಗಿ ಮೇಲ್ಭಾಗದಲ್ಲಿ ವಿಷ್ಣು ದೇವರು ತಮ್ಮ ತಮ್ಮ ಸ್ಥಾನಗಳನ್ನು ಹೊಂದಿರುವರೆಂಬ ನಂಬಿಕೆ. ಈ ದೇವತೆಗಳೇ ಅಲ್ಲದೆ ಶುಕ್ರನು, ಇಂದ್ರನು, ಸೂರ್ಯನು ಹಾಗೂ ಕಾಮದೇವನೂ ಸಹ ವೀಳ್ಯದೆಲೆಯ ಮೇಲೆ ವಿವಿಧ ಭಾಗಗಳಲ್ಲಿ ಅವರವರ ಸ್ಥಾನಗಳಲ್ಲಿ ಇರುವರೆಂದು ನಮ್ಮ ಶಾಸ್ತ್ರಗಳು ಹೇಳುತ್ತಿವೆ.ವಾಸ್ತವವಾಗಿ ಈ ವಿವಿಧ ದೇವತೆಗಳು ವೀಳ್ಯದೆಲೆಯ ಅನೇಕ ಶುಭ ಗುಣಗಳ ತತ್ವಗಳನ್ನು ವ್ಯಕ್ತಪಡಿಸುತ್ತಿದ್ದಾರೆ.ಈ ಕಾರಣದಿಂದಲೇ ವೀಳ್ಯದೆಲೆಯ ವಿನಿಯೋಗವನ್ನು ವಿವಿಧ ವಿಧಗಳಾಗಿ ಉಪಯೋಗಿಸುವ ಹಾಗೆ ನಮ್ಮ ಹಿರಿಯರು ಶಾಸ್ತ್ರಗಳನ್ನು ರಚಿಸಿರುವರು. ಎಲೆ ಒಣಗಿ ಹೋದರೂ, ರಂಧ್ರ ಬಿದ್ದಿದ್ದರೂ, ಹರಿದು ಹೋಗಿದ್ದರೂ ಸುಕ್ಕಾಗಿದ್ದರೂ ಸಹ ಈ ಎಲೆಗಳನ್ನು ಉಪಯೋಗಿಸಬಾರದೆಂದು ತಿಳಿಸಿರುವರು. ವೀಳ್ಯದೆಲೆಯನ್ನು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಸೇವಿಸುವುದು ಒಳ್ಳೆಯದೆಂದು ತಿಳಿಸಲಾಗಿದೆ. ಆದರೆ ಉಪವಾಸ ದೀಕ್ಷೆಯಲ್ಲಿ ಇರುವ ದಿನಗಳಲ್ಲಿ ಮಾತ್ರ ವೀಳ್ಯದೆಲೆಯನ್ನು ಸೇವಿಸುವುದನ್ನು ನಿಲ್ಲಿಸಬೇಕು.
ವೈಜ್ಞಾನಿಕವಾಗಿ ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಅದು ನಮ್ಮ ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತದೆ ಹಾಗೂ ಇದರಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಹಲವಾರು ಜನ ವೈದ್ಯರು ನಮಗೆ ತಿಳಿಸಿದ್ದಾರೆ.
" ನಮ್ಮ ಸನಾತನ ಧರ್ಮದ ಪ್ರತಿಯೊಂದು ಆಚರಣೆಯಲ್ಲೂ ವೈಜ್ಞಾನಿಕ ಅರ್ಥವಿದೆ "

No comments:
Post a Comment