ಗರುಡ ಪುರಾಣ
ಗರುಡ ಪುರಾಣವು ಹಿಂದೂ ಪುರಾಣಗಳಲ್ಲಿ ಒಂದು. ೧೯,೦೦೦ ಶ್ಲೋಕಗಳನ್ನು ಹೊಂದಿರುವ ಈ ಪುರಾಣವು ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿದೆ.
ಸಾವಿನ ನಂತರ ಗರುಡ ಪುರಾಣವನ್ನೇಕೇ ಪಠಿಸಬೇಕು..?
ಅಗಲಿದ ಆತ್ಮಕ್ಕೆ ತರ್ಪಣವನ್ನು ನೀಡಿದರೂ ಕೂಡ ಕೆಲವೊಮ್ಮೆ ಆತ್ಮಗಳು ಮುಕ್ತಿ ಸಿಗದೆ ಅಲೆದಾಡುತ್ತಿರುತ್ತದೆ. ಆದ್ದರಿಂದ ನಾವು ಅಗಲಿದ ಆತ್ಮಕ್ಕೆ ಮುಕ್ತಿ ಅಥವಾ ಮೋಕ್ಷವನ್ನು ನೀಡಲು ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಈ ಗರುಡ ಪುರಾಣ ಓದುವುದರ ಪ್ರಯೋಜನವೇನು..? ಗರುಡ ಪುರಾಣಕ್ಕೂ ಅಗಲಿದ ಆತ್ಮಕ್ಕೂ ಇರುವ ಸಂಬಂಧವೇನು..?
ಹಿಂದೂ ಧರ್ಮದ ಪ್ರಕಾರ ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಸತ್ತಾಗ ಗರುಡ ಪುರಾಣವನ್ನು 13 ದಿನಗಳವರೆಗೆ ಪಠಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಆತ್ಮವು ಎರಡನೇ ಜನ್ಮವನ್ನು ಪಡೆಯಲು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ ಕೆಲವು ಆತ್ಮಗಳು 10 ರಿಂದ 13 ದಿನಗಳನ್ನು ತೆಗೆದುಕೊಳ್ಳುತ್ತವೆ. ಒಂದು ತಿಂಗಳ ನಂತರ ಅದು ಮತ್ತೊಂದು ದೇಹವನ್ನು ಸೇರುತ್ತದೆ. ಆದರೆ, ಅಕಾಲಿಕ ಮರಣಹೊಂದಿದರೆ ಮತ್ತೊಂದು ಜನ್ಮ ಪಡೆಯಲು ಆತ್ಮವು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಸತ್ತವರ ಆತ್ಮಕ್ಕೆ ಮುಕ್ತಿ ನೀಡಲು ಕೊನೆಯ ತರ್ಪಣವನ್ನು ಮೂರನೇ ವರ್ಷದಲ್ಲಿ ನಡೆಸಲಾಗುತ್ತದೆ. ಆದರೂ ಅನೇಕ ಆತ್ಮಗಳು ಮುಕ್ತಿ ಸಿಗದೆ ಅಲೆದಾಡುತ್ತಿರುತ್ತವೆ. ಆದ್ದರಿಂದ ಅಗಲಿದ ಆತ್ಮಕ್ಕಾಗಿ ಗರುಡ ಪುರಾಣ ಪಠಿಸಲಾಗುತ್ತದೆ. ಈ ಗರುಡ ಪುರಾಣ ಪಠಣದಿಂದಾಗಿ ಏನೇನು ಪ್ರಯೋಜನ ಎಂಬುದನ್ನು ತಿಳಿಯೋಣ.
ಗರುಡ ಪುರಾಣ ಓದುವ ಸಮಯ:
ಗರುಡ ಪುರಾಣದಲ್ಲಿ, ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸತ್ತವರಿಗೆ ಪಠಿಸಲಾಗುತ್ತದೆ. ಓರ್ವ ವ್ಯಕ್ತಿಯ ಮರಣಾನಂತರ ಗರುಡ ಪುರಾಣವನ್ನು ಓದಲಾಗುತ್ತದೆ. ಒಮ್ಮೆ, ಗರುಡನು ವಿಷ್ಣುವಿಗೆ ಜೀವಿಗಳ ಸಾವು, ಯಮ ಲೋಕದ ಪ್ರಯಾಣ, ನರಕ ಮತ್ತು ಮೋಕ್ಷದ ಬಗ್ಗೆ ಹಲವಾರು ನಿಗೂಢ ಮತ್ತು ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ವಿಷ್ಣು ಅದೇ ಪ್ರಶ್ನೆಗಳಿಗೆ ವಿಸ್ತಾರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ಸರಣಿಯೇ ಗರುಡ ಪುರಾಣ.
ಗರುಡ ಪುರಾಣವನ್ನೇಕೇ ಓದಬೇಕು..?
13 ದಿನಗಳವರೆಗೆ ಮೃತನು ಅವನ ಅಥವಾ ಅವಳ ಪ್ರೀತಿಪಾತ್ರರ ನಡುವೆ ಉಳಿದಿರುತ್ತಾರೆ. ಈ ಸಮಯದಲ್ಲಿ, ಗರುಡ ಪುರಾಣದ ಪಠ್ಯವನ್ನು ಪಠಿಸಿದರೆ ಸ್ವರ್ಗ ಮತ್ತು ನರಕ, ವೇಗ, ಮೋಕ್ಷ, ಪಾತಾಳ, ಅವನತಿ ಮುಂತಾದ ಚಲನೆಗಳ ಬಗ್ಗೆ ಮೃತರು ತಿಳಿದುಕೊಳ್ಳುತ್ತಾರೆ.
ಆತ್ಮಗಳಿಗೆ ಮರುಜನ್ಮ ಪಡೆಯಲು ಮಾರ್ಗ:
ಗರುಡ ಪುರಾಣದ ಮೂಲಕ ಮುಂದಿನ ಪ್ರಯಾಣದಲ್ಲಿ ಅವನು/ಳು ಎದುರಿಸಬೇಕಾದ ವಿಷಯಗಳು ಯಾವುವು ಎಂಬುದನ್ನು ಕಲಿಯುತ್ತಾನೆ. ಈ ಪಠಣದ ಮೂಲಕ ಆತ್ಮವು ತಮ್ಮ ಕುಟುಂಬದವರ ಪ್ರೀತಿಯನ್ನು ಪಡೆಯುತ್ತದೆ.
ಸ್ವರ್ಗ - ನರಕ ಪ್ರಾಪ್ತಿ:
ಸಾವಿನ ನಂತರ ಗರುಡ ಪುರಾಣ ಓದುವುದರಿಂದ ಆ ವ್ಯಕ್ತಿಯು ಬದುಕಿದ್ದಾಗ ಏನೆಲ್ಲಾ ಒಳ್ಳೆಯ ಕೆಲಸ ಮಾಡಿದ್ದ, ಏನೆಲ್ಲಾ ಕೆಟ್ಟ ಕೆಲಸ ಮಾಡಿದ್ದ ಎಂಬುದು ಅವರ ಸಂಬಂಧಿಕರಿಗೆ ತಿಳಿಯುತ್ತದೆ. ಆತ ಒಳ್ಳೆಯ ಕೆಲಸ ಮಾಡಿದ್ದಾನೆ ಎಂದು ಸಂಬಂಧಿಕರೆಲ್ಲರೂ ಅಂದುಕೊಂಡರೆ ಆತ್ಮಕ್ಕೆ ಮೋಕ್ಷ ಸಿಗುತ್ತದೆ. ಮುಂದಿನ ಪ್ರಯಾಣಕ್ಕೆ ದಾರಿ ಸಿಗುತ್ತದೆ.
ಮೋಕ್ಷ:
ಗರುಡ ಪುರಾಣವು ಸತ್ಕರ್ಮಕ್ಕೆ ಸ್ಫೂರ್ತಿ ನೀಡುತ್ತದೆ. ಮೋಕ್ಷ ಮತ್ತು ವಿಮೋಚನೆ ಸಾಧಿಸುವುದು ಒಳ್ಳೆಯ ಕಾರ್ಯಗಳು ಮತ್ತು ದಯೆಯಿಂದ ಮಾತ್ರ. ಮನುಷ್ಯನು ಜೀವಿತಾವಧಿಯಲ್ಲಿ ಮಾಡಿದ ಪಾಪ ಕರ್ಮಗಳಿಗೆ ಅನುಗುಣವಾಗಿ ಸ್ವರ್ಗ - ನರಕ ಎನ್ನುವಂತಹದ್ದು ನಿರ್ಧಾರವಾಗುತ್ತದೆ.
ಗರುಡ ಪುರಾಣದಲ್ಲಿ ಶಿಕ್ಷೆ:
ಗರುಡ ಪುರಾಣದಲ್ಲಿ, ವ್ಯಕ್ತಿಯ ಕಾರ್ಯಗಳ ಆಧಾರದ ಮೇಲೆ ವಿವಿಧ ಶಿಕ್ಷೆಗಳು ಕಂಡುಬರುತ್ತವೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಮೋಕ್ಷದ ಕಡೆಗೆ ಯಾವ ವಿಷಯಗಳನ್ನು ಕೊಂಡೊಯ್ಯುತ್ತಾನೆ ಎಂಬುದಕ್ಕೆ ಭಗವಾನ್ ವಿಷ್ಣು ಉತ್ತರವನ್ನು ನೀಡಿದ್ದಾನೆ. ಅವನು ಮೋಕ್ಷವನ್ನು ಪಡೆಯಬೇಕೆಂದರೆ ಜೀವಿತಾವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕು.
ಸ್ವಯಂ ಜ್ಞಾನವೇ ಗರುಡ ಪುರಾಣದ ಮುಖ್ಯ ವಿಷಯ:
ಗರುಡ ಪುರಾಣದಲ್ಲಿ ನಮ್ಮ ಜೀವನದ ಬಗ್ಗೆ ಅನೇಕ ನಿಗೂಢ ವಿಷಯಗಳನ್ನು ಹೇಳಲಾಗಿದೆ. ವ್ಯಕ್ತಿಯ ಬಗ್ಗೆ ತಿಳಿದಿರಬೇಕು. ಸ್ವಯಂ ಜ್ಞಾನದ ಪ್ರವಚನವು ಗರುಡ ಪುರಾಣದ ಮುಖ್ಯ ವಿಷಯವಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಸಾವಿರ ವಚನಗಳ ಪೈಕಿ ಏಳು ಸಾವಿರ ವಚನಗಳಲ್ಲಿ ಜ್ಞಾನ, ಧರ್ಮ, ನೀತಿ, ರಹಸ್ಯ, ಪ್ರಾಯೋಗಿಕ ಜೀವನ, ಸ್ವಯಂ, ಸ್ವರ್ಗ, ನರಕ ಮತ್ತು ಇತರ ಲೋಕಗಳನ್ನು ವಿವರಿಸಲಾಗಿದೆ.
ಸಂಪತ್ತಿನ ಬಗ್ಗೆ ಹೆಮ್ಮೆ ಪಡಬೇಡಿ:
ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಸಂಪತ್ತಿನ ಬಗ್ಗೆ ಹೆಮ್ಮೆ ಪಡಬಾರದು. ಇದನ್ನು ಮಾಡುವುದರಿಂದ, ಅವನಲ್ಲಿ ದುರಾಹಂಕಾರವು ಬೆಳೆಯುತ್ತದೆ. ಇದು ಅವನ ಬೌದ್ಧಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮತ್ತು ಅವನು ಇತರರನ್ನು ಅವಮಾನಿಸಲು ಪ್ರಾರಂಭಿಸುತ್ತಾನೆ. ಯಾವುದೇ ವ್ಯಕ್ತಿಯನ್ನು ನಿರಾಕರಿಸುವುದು ಅಥವಾ ಅವಮಾನಿಸುವುದು ಗರುಡ ಪುರಾಣದಲ್ಲಿ ಪಾಪ ಎಂದು ವಿವರಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಲಕ್ಷ್ಮಿ ಸಂಪತ್ತಿನ ಅಧಿದೇವತೆ. ಆದ್ದರಿಂದ ಯಾವ ವ್ಯಕ್ತಿಯು ತನ್ನ ಸಂಪತ್ತಿನ ಬಗ್ಗೆ ಹೆಮ್ಮೆಪಡುತ್ತಾನೋ ಆ ವ್ಯಕ್ತಿಯ ಮೇಲೆ ಲಕ್ಷ್ಮಿ ದೇವಿಯು ಕೋಪಿಸಿಕೊಳ್ಳುತ್ತಾಳೆ. ಮತ್ತು ಅಂತಹ ಜನರ ಸಂಪತ್ತು ನಾಶವಾಗಲು ಪ್ರಾರಂಭಿಸುತ್ತದೆ.
ದುರಾಸೆ:
ಗರುಡ ಪುರಾಣದ ಪ್ರಕಾರ, ದುರಾಸೆಯ ವ್ಯಕ್ತಿಯ ಜೀವನವು ಎಂದಿಗೂ ಬೆಳವಣಿಗೆಯನ್ನು ಹೊಂದಲು ಸಾಧ್ಯವಿಲ್ಲ. ದುರಾಸೆಯುಳ್ಳ ವ್ಯಕ್ತಿಯು ಇನ್ನೊಬ್ಬರ ಸಂಪತ್ತನ್ನು ನೋಡಿದ ನಂತರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಹಣಕ್ಕಾಗಿ ದುರಾಸೆ ಅಥವಾ ಇತರರ ಸಂಪತ್ತನ್ನು ಪಡೆಯಲು ಪ್ರಯತ್ನಿಸುವುದು ಈ ಜೀವನದಲ್ಲಿ ಮಾತ್ರವಲ್ಲದೆ ಮುಂದಿನ ಜನ್ಮದಲ್ಲೂ ಕೂಡ ಆ ವ್ಯಕ್ತಿಯನ್ನು ತೃಪ್ತಿಪಡಿಸುವುದಿಲ್ಲ.
ಇತರರನ್ನು ಅವಮಾನಿಸುವುದು:
ಇತರರನ್ನು ಅವಮಾನಿಸುವುದು ಮತ್ತು ಕೀಳಾಗಿ ನೋಡುವುದನ್ನು ದೊಡ್ಡ ಪಾಪ ಎಂದು ಗರುಡ ಪುರಾಣ ಹೇಳುತ್ತದೆ. ಇತರರನ್ನು ಖಂಡಿಸುವಾಗ ಅಥವಾ ಅವಮಾನಿಸುವಾಗ ಒಬ್ಬ ವ್ಯಕ್ತಿಯು ತುಂಬಾ ಸಂತೋಷವಾಗಿರುತ್ತಾನೆ ಎಂದು ಅದು ಹೇಳುತ್ತದೆ, ಆದರೆ ವಾಸ್ತವದಲ್ಲಿ ಅವನು ಇದನ್ನು ಮಾಡುವ ಮೂಲಕ ತನ್ನ ಸಮಯವನ್ನು ವ್ಯರ್ಥಮಾಡುತ್ತಾನೆ. ಇತರರನ್ನು ಅವಮಾನಿಸುವ ವ್ಯಕ್ತಿಯು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ ಎನ್ನುತ್ತೆ ಗರುಡ ಪುರಾಣ.
***
ಗರುಡ ಪುರಾಣ: ಆತ್ಮವು ನಿಮ್ಮ ದೇಹವನ್ನು ಹೇಗೆ ತೊರೆಯುತ್ತದೆ ಎಂಬುದು ನಿಮ್ಮ ಕರ್ಮವನ್ನು ನಿರ್ಧರಿಸುತ್ತದೆ
ಸಾವು ಯಾರೂ ನಿರಾಕರಿಸಲಾಗದ ಒಂದು ಸತ್ಯ. ಸಾವಿನ ನಂತರ, ಸ್ವರ್ಗ ಮತ್ತು ನರಕದ ನಂಬಿಕೆ ಇದೆ. ಪುರಾಣಗಳ ಪ್ರಕಾರ ನಮ್ಮ ಜೀವನದಲ್ಲಿ ಪುಣ್ಯ ಕಾರ್ಯಗಳನ್ನು ಮಾಡಿದರೆ ಸ್ವರ್ಗಕ್ಕೆ ಹೋಗುತ್ತೇವೆ. ಹಾಗೂ ಯಾರು ಪಾಪಗಳನ್ನು ಮಾಡುತ್ತಾರೋ ಅವರು ನರಕವನ್ನು ತಲುಪುತ್ತಾರೆ. ಆದರೆ, ಆತ್ಮ ಯಮಲೋಕಕ್ಕೆ ಹೋಗಿ ಯಮರಾಜನ ಬಳಿ ತೆರಳುವುದು ಹೇಗೆ? ಈ ಭಾಗವನ್ನು ಗರುಡ ಪುರಾಣದಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೆ, ಒಬ್ಬರು ಹೇಗೆ ಸಾಯುತ್ತಾರೆ, ಅವರು ತಮ್ಮ ತೀರ್ಪನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ಆತ್ಮದ ರೂಪವನ್ನು ಪಡೆದುಕೊಳ್ಳುತ್ತಾರೆ ಎಂಬುದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ.
ಸಾಯುವ ವ್ಯಕ್ತಿ, ತಾನು ಬಯಸಿದರೂ ಮಾತನಾಡಲು ಸಾಧ್ಯವಿಲ್ಲ. ಆತನ ಜೀವನದ ಕೊನೆಯ ಕ್ಷಣಗಳಲ್ಲಿ, ದಿವ್ಯ ದೃಷ್ಟಿಯು ಅವನೊಳಗೆ ಸಿದ್ಧಿಸುತ್ತದೆ ಮತ್ತು ಅದರಿಂದ ಆತನು ಇಡೀ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ಆತನ ಎಲ್ಲಾ ಇಂದ್ರಿಯಗಳೂ ನಾಶವಾಗುತ್ತವೆ, ಅವನಿಗೆ ಚಲಿಸಲು ಸಾಧ್ಯವಾಗುವುದಿಲ್ಲ ಮತ್ತು ಗಟ್ಟಿಯಾಗಿ ಹೋಗುತ್ತದೆ.
ಇದರ ನಂತರ, ಲಾಲಾರಸವು ಅವನ ಬಾಯಿಯಿಂದ ಹೊರಗೆ ಬರಲು ಪ್ರಾರಂಭಿಸುತ್ತದೆ. ಜೀವನದಲ್ಲಿ ಅನೇಕ ಪಾಪಗಳನ್ನು ಮಾಡಿದ ವ್ಯಕ್ತಿಯು ತನ್ನ ಜೀವನವನ್ನು ಕೆಳಗಿನಿಂದ ಕಳೆದುಕೊಳ್ಳುತ್ತಾನೆ. ಆ ಸಮಯದಲ್ಲಿ ಸಾವಿನ ಇಬ್ಬರು ದೇವರು (ಯಮದೂತರು) ಭಯಂಕರವಾಗಿ ಕಾಣುತ್ತಾರೆ. ಯಮದೂತರು ಕಾಗೆಗಳಂತೆ ಕಪ್ಪಗಿದ್ದರೆ, ಅವರ ಮುಖಗಳು ಆಕಾರವಿಲ್ಲದವು ಮತ್ತು ಉಗುರುಗಳು ಅವರ ಆಯುಧಗಳಾಗಿವೆ.
ಅಂತಹ ವ್ಯಕ್ತಿತ್ವವನ್ನು ನೋಡಿ, ಮನುಷ್ಯನು ಭಯಭೀತರಾಗುತ್ತಾನೆ ಮತ್ತು ಮೂತ್ರ ವಿಸರ್ಜಿಸಲು ಅಥವಾ ಅವರ ಗ್ಯಾಸ್ಟ್ರಿಕ್ ಚಲನೆಯ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ.
ಯಮದೂತರು ತಕ್ಷಣವೇ ಸತ್ತ ವ್ಯಕ್ತಿಯ ಆತ್ಮವನ್ನು ಕಟ್ಟಿಹಾಕಿ ಅದನ್ನು ತೆಗೆದುಕೊಂಡು ಹೋಗುತ್ತಾನೆ. ಯಮಲೋಕಕ್ಕೆ ಹೋಗುವ ದಾರಿಯಲ್ಲಿ, ಆತ್ಮವು ದಣಿದಾಗ, ವಿಶ್ರಾಂತಿಗಾಗಿ ಅದನ್ನು ನಿಲ್ಲಿಸಲು ಯಮದೂತರು ಅನುಮತಿ ನೀಡುವುದಿಲ್ಲ. ಬದಲಾಗಿ, ಯಮಲೋಕದಲ್ಲಿರುವಾಗ ಅನುಭವಿಸಬೇಕಾದ ನೋವುಗಳ ಬಗ್ಗೆ ಆತ್ಮವನ್ನು ಹೆದರಿಸುತ್ತಾರೆ.
ಯಮಲೋಕದ ಬಗ್ಗೆ ಈ ಭಯಭೀತ ಕಥೆಗಳನ್ನು ಕೇಳಿದ ಆತ್ಮಗಳು ಜೋರಾಗಿ ಅಳಲು ಆರಂಭಿಸುತ್ತವೆ. ಆದರೆ ಯಮದೂತರು ಯಾವುದೇ ಸಹಾನುಭೂತಿಯನ್ನು ತೋರಿಸುವುದಿಲ್ಲ. ಇದರ ನಂತರ, ಆತ್ಮವು ತನ್ನ ಜೀವನದುದ್ದಕ್ಕೂ ಮಾಡಿದ ಪಾಪಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಬೆಂಕಿಯಂತೆ ಬಿಸಿಯಾಗಿರುವ ಮರಳಿನ ಮೇಲೆ ನಡೆಯಲು ಆತ್ಮಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಅದು ಹಸಿವಿನಿಂದ ಬಳಲುತ್ತಿದೆ. ಈ ವೇಳೆ ಯಮದೂತರು ಆತ್ಮವನ್ನು ಚಾವಟಿಯಿಂದ ಹೊಡೆಯಲು ಆರಂಭಿಸುತ್ತಾರೆ. ಆ ಆತ್ಮವು ಹಲವಾರು ಬಾರಿ ಕೆಳಗೆ ಬೀಳುತ್ತದೆ, ಮೂರ್ಛೆ ಹೋಗುತ್ತದೆ ಮತ್ತು ನಂತರ ಮತ್ತೆ ನಡೆಯಲು ಎಚ್ಚರಗೊಳ್ಳುತ್ತದೆ. ಕತ್ತಲೆಯ ಪ್ರಯಾಣದ ಮೂಲಕ ಸಾವಿನ ದೇವರುಗಳು ಆತ್ಮವನ್ನು ಯಮಲೋಕಕ್ಕೆ ಕರೆದೊಯ್ಯುತ್ತಾರೆ.
ಯಮಲೋಕದಲ್ಲಿ ಆತ್ಮವು ತಾನು ವಾಸಿಸುವ ಸ್ಥಳವನ್ನು ತೋರಿಸಲಾಗುತ್ತದೆ ಮತ್ತು ನಂತರ ಅಂತಿಮವಾಗಿ ಆತನ ಆತ್ಮ ಯಮರಾಜನನ್ನು ಭೇಟಿಯಾಗುತ್ತದೆ. ಆತನ ಅನುಮತಿಯೊಂದಿಗೆ ಸ್ವಲ್ಪ ಸಮಯದವರೆಗೆ ಆತ್ಮವು ಸತ್ತ ಸ್ಥಳಕ್ಕೆ ಮರಳುತ್ತದೆ.
ತನ್ನ ದೇಹವನ್ನು ತಲುಪಿದ ನಂತರ, ಆತ್ಮವು ಮತ್ತೆ ತನ್ನ ದೇಹವನ್ನು ಪ್ರವೇಶಿಸುವಂತೆ ಮನವಿ ಮಾಡುತ್ತದೆ. ಆದರೆ ಯಮದೂತರು ಅದಕ್ಕೆ ಅನುಮತಿ ನೀಡುವುದಿಲ್ಲ. ಈ ಹಿನ್ನೆಲೆ ಆತ್ಮ ಯಮಲೋಕಕ್ಕೆ ವಾಪಸ್ ತೆರಳಬೇಕಾಗುತ್ತದೆ.
ಇದರ ನಂತರ, ಕುಟುಂಬ ಸದಸ್ಯರು ಸತ್ತ ವ್ಯಕ್ತಿಗೆ ಪ್ರಾರ್ಥನೆ ಸಲ್ಲಿಸದಿದ್ದರೆ, ಆತ್ಮವು ಅಲೆದಾಡುತ್ತಲೇ ಇರುತ್ತದೆ ಮತ್ತು ಕಾಡುಗಳಂತಹ ನಿರ್ಜನ ಸ್ಥಳಗಳಲ್ಲಿ ವಾಸಿಸುತ್ತದೆ.
ಒಬ್ಬ ವ್ಯಕ್ತಿ ಸತ್ತ ಬಳಿಕ 10 ದಿನಗಳೊಳಗೆ ಆತನ ಕುಟುಂಬ ಸದಸ್ಯರು ಪಿಂಡದಾನ ಮಾಡಬೇಕು ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ.
********* vijaya karnataka july 3, 2019
|| ಶ್ರೀಕಲ್ಹಳ್ಳಿ ಶ್ರೀಲಕ್ಷ್ಮೀವೇಂಕಟೇಶಃ ಪ್ರಸೀದತು||
||ಅಥ ಶ್ರೀಮದ್ಗರುಡಪುರಾಣಾಂತರ್ಗತ ಶ್ರೀಮದ್ವೇಂಕಟೇಶಮಾಹಾತ್ಮ್ಯಮ್||
ಶ್ರೀಗುರುಭ್ಯೋ ನಮಃ || ಹರಿಃ ಓಂ||
ಶ್ರಿಯಃ ಕಾಂತಾಯ ಕಲ್ಯಾಣನಿಧಯೇ ನಿಧಯೇsರ್ಥಿನಾಮ್|
ಶ್ರೀವೇಂಕಟನಿವಾಸಾಯ ಶ್ರೀನಿವಾಸಾಯ ಮಂಗಲಮ್||
ಶ್ರೀಲಕ್ಷ್ಮೀರಮಣ , ಅನಂತಕಲ್ಯಾಣಗುಣಪರಿಪೂರ್ಣ , ಅರ್ಥಿಜನರ ಇಷ್ಟಾರ್ಥನಿಧಿಯಾದ ಶ್ರೀವೇಂಕಟಾಚಲ ನಿವಾಸಿಯಾದ ಶ್ರೀನಿವಾಸ ದೇವರಿಗೆ ಮಂಗಳವು .
ಶ್ರೀವೇಂಕಟಾಚಲಾಧೀಶಂ ಶ್ರಿಯಾಧ್ಯಾಸಿತವಕ್ಷಸಮ್|
ಶ್ರಿತಚೇತನಮಂದಾರಂ ಶ್ರೀನಿವಾಸಮಹಂ ಭಜೇ ||
ಶ್ರೀವೇಂಕಟಾಚಲಪತಿಯಾದ ಶ್ರೀಲಕ್ಷ್ಮೀದೇವಿಯಿಂದ ಶೋಭಿತವಾದ ವಕ್ಷಸ್ಥಳವುಳ್ಳ ಆಶ್ರಿತಜನಮಂದಾರನಾದ ಶ್ರೀನಿವಾಸದೇವರನ್ನು ನಾನು ಸ್ತುತಿಸುತ್ತೇನೆ .
ಶ್ರೀಗರುಡ ಉವಾಚ -
ಅರುಂಧತೀ ಸಮಸ್ತಾನಾಮಂಗನಾನಾಂ ಪತಿವ್ರತಾ|
ಪತಿಂ ಸ್ವಂ ಪರಿಪಪ್ರಚ್ಛ ಲೋಕಾನಾಂ ಹಿತಕಾಮ್ಯಯಾ ||೧||
ಗರುಡನು ವೇಂಕಟೇಶಮಹಾತ್ಮೆಯನ್ನು ನಿರೂಪಿಸಲು ಬಯಸಿ ಅರುಂಧತಿ-ವಸಿಷ್ಠರ ಸಂವಾದವನ್ನೇ ಅನುವಾದಿಸುತ್ತಾ ಋಷಿಗಳನ್ನು ಕುರಿತು ಹೇಳಿದನು -
"ಸಮಸ್ತ ಸ್ತ್ರೀಯರಲ್ಲಿ ಶ್ರೇಷ್ಠಳಾದ ಪತಿವ್ರತೆಯಾದ ಅರುಂಧತಿಯು ಲೋಕಗಳಿಗೆ ಹಿತವನ್ನು ಬಯಸಿ ತನ್ನ ಪತಿಯಾದ ವಸಿಷ್ಠರನ್ನು ಕುರಿತು ಹೀಗೆ ಪ್ರಶ್ನಿಸಿದಳು ".
ಅರುಂಧತ್ಯುವಾಚ -
ಬ್ರಹ್ಮಾತ್ಮಜ ನಮಸ್ತುಭ್ಯಮಿದಂ ವಿಜ್ಞಾಪನಂ ಶೃಣು|
ಪತಿಶುಶ್ರೂಷಣಾದನ್ಯಃ ಸ್ತ್ರೀಣಾಂ ಧರ್ಮೋ ನ ವಿದ್ಯತೇ ||೨||
ವಸಿಷ್ಠರನ್ನು ಕುರಿತು ಅರುಂಧತಿಯು ಪ್ರಾರ್ಥಿಸಿಕೊಳ್ಳುತ್ತಿದ್ದಾಳೆ -
" ಬ್ರಹ್ಮದೇವರ ಮಾನಸಪುತ್ರರಾದ ಹೇ ವಸಿಷ್ಠರೇ ! ನಿಮಗೆ ಭಕ್ತಿಪೂರ್ವಕ ನಮಸ್ಕಾರಗಳು . ನನ್ನ ವಿಜ್ಞಾಪನೆಯನ್ನು ಆಲಿಸಿರಿ . ಪತಿಶುಶ್ರೂಣೆಯನ್ನು ಹೊರತುಪಡಿಸಿ ಯಾವ ಪ್ರತ್ಯೇಕ ಧರ್ಮಗಳೂ ಸಹ ಸ್ತ್ರೀಯರಿಗೆ ಇರುವದಿಲ್ಲ .
ನ ಯಾಗಯೋಗೌ ನ ತಪೋ ನ ತೀರ್ಥಂ ನ ಸುರಾರ್ಚನಮ್|
ಸರ್ವಧರ್ಮಾಧಿಕಂ ಸ್ತ್ರೀಣಾಂ ಪತ್ಯುರೇವ ಪ್ರಹರ್ಷಣಮ್ ||೩||
ಯಾಗ , ಯೋಗ , ತಪಸ್ಸು , ತೀರ್ಥಕ್ಷೇತ್ರದರ್ಶನ , ದೇವತೆಗಳ ಆರಾಧನೆ ಇವ್ಯಾವುಗಳೂ ಸಹ ಸುಮಂಗಲೀ ಸ್ತ್ರೀಯರು ಮಾಡುವ ಪತಿಸೇವೆಗೆ ಸಮವಾದುದಲ್ಲ . ಆದ್ದರಿಂದ ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠವಾದದ್ದು ಪತಿಯನ್ನು ಸಂತೋಷಗೊಳಿಸುವದೇ ಆಗಿದೆ .
ಇತಿ ಶ್ರುತಂ ಮಯಾ ತ್ವತ್ತ ಋಷಿಭ್ಯೋsನ್ಯೇಭ್ಯಃ ಏವ ಚ|
ತಥಾಪಿ ಜಾಯತೇ ಪ್ರೀತಿರ್ಮಮ ಕಾಚಿದ್ಗರೀಯಸೀ ||೪||
ಹೀಗೆ ಎಲ್ಲ ಧರ್ಮ ಈ ಎಲ್ಲ ವಿಷಯಗಳನ್ನು ನಿಮ್ಮ ಮುಖದಿಂದ ಮತ್ತು ಇತರ ಋಷಿಮುನಿಗಳಿಂದ ಕೇಳಿದ್ದೇನೆ . ಆದರೂ ಸಹ ನನಗೆ ಒಂದು ಬಯಕೆ ಇರುವದು .
ವಿಷ್ಣುಕ್ಷೇತ್ರೇ ಕ್ವಚಿತ್ಪುಣ್ಯೇ ತೀರ್ಥೇ ಸರ್ವಾತಿಶಾಯಿನಿ|
ಕಂಚಿತ್ಕಾಲಂ ತಪಃ ಕೃತ್ವಾ ವಿಷ್ಣುಮುದ್ದಿಶ್ಯ ಯತ್ನತಃ ||೫||
ವಿಷ್ಣೋರ್ಮುಖೇನ ಸದ್ಧರ್ಮಂ ವಾಚಯಿತ್ವಾ ಜಗತ್ಕೃತೇ|
ಸರ್ವಧರ್ಮೋತ್ತಮಂ ನೃಣಾಂ ದರ್ಶಯಾಮೀತಿ ಮೇ ಮತಿಃ||೬||
ಅನುಜ್ಞಯಾ ಸ್ತ್ರೀಯೋ ಭರ್ತುರ್ದ್ಧರ್ಮಾಚರಣಮುತ್ತಮಮ್|
ವಿಷ್ಣುಕ್ಷೇತ್ರಂ ತಾದೃಶಂ ಮೇ ವದ ತೀರ್ಥೋತ್ತಮಂ ತಥಾ ||೭||
ಅತ್ಯಂತ ಪುಣ್ಯಕರವಾದ ವಿಷ್ಣುವಿನ ಕ್ಷೇತ್ರದಲ್ಲಿದ್ದು ವಿಷ್ಣುವನ್ನು ಕುರಿತು ಕೆಲ ಕಾಲ ತಪಸ್ಸನ್ನಾಚರಿಸಿ ಅವನನ್ನು ಪ್ರಸನ್ನೀಕರಿಸಿ , ಅವನ ಬಾಯಿಂದ ಸರ್ವೋತ್ಕೃಷ್ಟವಾದ ಧರ್ಮಗಳನ್ನು ಕೇಳಬಯಸಿರುವೆನು . ಯಾವಾಗಲೂ ಪತಿಯ ಆಜ್ಞೆಯಿಂದ ಆಚರಿಸಿದ ಧರ್ಮವು ಸ್ತ್ರೀಯರಿಗೆ ಫಲಪ್ರದವಾಗಿರುವದರಿಂದ ನನಗೆ ಅಪ್ಪಣೆಯನ್ನು ಕೊಡಿರಿ . ಪರಮಾತ್ಮನ ಅನುಗ್ರಹವನ್ನು ಶೀಘ್ರದಲ್ಲಿ ದೊರಕಿಸಿಕೊಡುವ ಶ್ರೇಷ್ಠವಾದ ಕ್ಷೇತ್ರವನ್ನು ಮತ್ತು ಮನಶ್ಶುದ್ಧಿಕರವಾದ ತೀರ್ಥವನ್ನು ಸಹ ನನಗೆ ತಿಳಿಸಿರಿ " ಎಂದು ಪ್ರಾರ್ಥಿಸಿದಳು .
ಶ್ರೀಹರಿವಾಯುಗುರುಗಳ ನಾಮಸ್ಮರಣೆಗಳೊಂದಿಗೆ ಶುಭೋದಯ ಶುಭದಿನ🙏🏽🙇♂ ಹರೇ ಶ್ರೀನಿವಾಸಾ 🙇♂🙏🏽
***********
ಶ್ರೀಗರುಡ ಪುರಾಣಾಂತರ್ಗತ ಶ್ರೀಮದ್ವೇಂಕಟೇಶಮಾಹಾತ್ಮ್ಯಮ್
ಗರುಡ ಉವಾಚ-
ಅರುಂಧತ್ಯಾ ಪೃಷ್ಟ ಇತ್ಥಂ ವಸಿಷ್ಠೋ ವಾಕ್ಯಮಬ್ರವೀತ್ |
ಸಮ್ಯಕ್ಪೃಷ್ಟಮಿದಂ ದೇವಿ ಸರ್ವಲೋಕಹಿತೇಚ್ಛಯಾ ||೮||
ಹೀಗೆ ಅರುಂಧತಿಯಿಂದ ಸಂಪೃಷ್ಟರಾದ ವಸಿಷ್ಠ ಮಹರ್ಷಿಗಳು "ನಿನ್ನ ಈ ಪ್ರಶ್ನೆಯು ಅತ್ಯಂತ ಯೋಗ್ಯವಾಗಿದ್ದು ಲೋಕಹಿತದಾಯಕವಾಗಿರುವದು .
ತಥಾ ವದಾಮಿ ಶೃಣು ಮೇ ಯಥಾ ಹೃತ್ಸಂಪ್ರಹೃಷ್ಯತಿ|
ಶ್ರೋತರ್ಯಪ್ರತಿಪತ್ತೌ ತು ವಕ್ತುರ್ವಾಕ್ಯಂ ತಥಾ ಭವೇತ್ ||೯||
ನಾನು ಹೇಳುವದನ್ನು ಲಕ್ಷ್ಯವಿಟ್ಟು ಕೇಳು . ನಿನಗೆ ಸಂತೋಷವಾಗುವ ರೀತಿಯಲ್ಲಿ ವಿಷ್ಣುಕ್ಷೇತ್ರ- ತೀರ್ಥಮಾಹಾತ್ಮ್ಯವನ್ನು ನಿನಗೆ ಹೇಳುವೆನು ಕೇಳು .
ಯಥಾಂಧೇ ಭರ್ತರಿ ಸ್ತ್ರೀಣಾಂ ಸೌಂದರ್ಯಂ ಸಕಲಂ ವೃಥಾ|
ಸಾವಧಾನಮನಾ ಭೂತ್ವಾ ಶೃಣು ತಸ್ಮಾದ್ವಚೋ ಮಮ||೧೦||
ಹೇಗೆ ಅಂಧನ ಪತ್ನಿಯ ಅಲಂಕಾರವು ತನ್ನ ಪತಿಗೆ ಆನಂದದಾಯಕವಲ್ಲದ್ದರಿಂದ ವ್ಯರ್ಥವೆನಿಸುವದೋ , ಹಾಗೆಯೇ ತಿಳಿಯಬಯಸಿ ಪ್ರಶ್ನಿಸಿದ ವ್ಯಕ್ತಿಗೆ ತಿಳಿಯುವಂತೆ ಉತ್ತರಿಸದೇ ಹೋದಲ್ಲಿ , ಆ ಉತ್ತರವು ವ್ಯರ್ಥವೆನಿಸುವದು . ಆದ್ದರಿಂದ ನಿನಗೆ ತಿಳಿಯುವಂತೆ ನಾನು ಹೇಳುವೆನು . ಸಮಾಧಾನಮನಸ್ಕಳಾಗಿ ಕೇಳು .
ಸ್ವರ್ಣಮುಖರೀತೀರೇ ಕಶ್ಚಿದಸ್ತಿ ಮಹೀಧರಃ|
ವೇಂಕಟಾಚಲನಾಮಾಸೌ ಸರ್ವಭೂಭೃತ್ಕುಲೋತ್ತಮಃ||೧೧||
ಅತಿಪ್ರೀತಿರ್ಮಹಾವಿಷ್ಣೋಸ್ತತ್ರ ವೇಂಕಟಭೂಧರೇ|
ಶ್ವೇತದ್ವೀಪಾಚ್ಚ ವೈಕುಂಠಾದ್ಭಾನುಮಂಡಲ ಮಧ್ಯತಃ ||೧೨||
ಸುವರ್ಣಮುಖರೀನದಿಯ ದಡದಲ್ಲಿ ವೇಂಕಟಾಚಲವೆಂಬ ಪರ್ವತಶ್ರೇಷ್ಠವಿರುವದು , ಅದು ಭಗವಂತನಿಗೆ ಅತ್ಯಂತ ಪ್ರಿಯವಾಗಿದ್ದು , ಶ್ವೇತದ್ವೀಪ ಲೋಕದಿಂದ ಆಕಾಶಮಾರ್ಗವಾಗಿ ಶ್ರೀನಿವಾಸನ ವಿಹಾರಾರ್ಥವಾಗಿ ಗರುಡನಿಂದ ತರಲ್ಪಟ್ಟಿರುವದು .
*************
ಶ್ರೀಗರುಡಪುರಾಣಾಂತರ್ಗತ ಶ್ರೀಮದ್ವೇಂಕಟೇಶಮಹಾತ್ಮ್ಯಮ್
ಯನ್ನಾಮ ಕೀರ್ತಯುತ್ವಾsಪಿ ಸರ್ವಪಾಪಕ್ಷಯೋ ಭವೇತ್ |
ಸಮಸ್ತಶ್ರೇಯಸಾಂ ಸಿದ್ಧಿಸ್ತಾದೃಶೋ ವೇಂಕಟಾಚಲಃ ||೧೩||
ಯಾವ ಪರ್ವತವನ್ನು ಕೀರ್ತನ ಮಾಡಿದರೂ ಸಹ ಎಲ್ಲ ಪಾಪಗಳೂ ನಾಶವನ್ನು ಹೊಂದಿ ಸಮಸ್ತ ಪುಣ್ಯಗಳು , ಸಿದ್ಧಿಗಳು ಲಭಿಸುವದೋ ಅಂತಹ ಕ್ಷೇತ್ರವೇ ಶ್ರೀಮದ್ವೇಂಕಟಾಚಲ ವಾಗಿರುವದು .
ಯಸ್ಮೈ ವೇಂಕಟಶೈಲಾಯ ನಮಸ್ಕೃತ್ಯಾಪಿ ದೂರತಃ|
ಸರ್ವಪಾಪೈಃ ಪ್ರಮುಚ್ಯೇತ ತತ್ಪುಣ್ಯಂ ಕ್ಷೇತ್ರಮುತ್ತಮಮ್ ||೧೪||
ಯಾವ ವೇಂಕಟಾಚಲವನ್ನು ಕುರಿತು ದೂರದಿಂದಲೇ ಭಕ್ತಭರಿತರಾಗಿ ನಮಸ್ಕರಿಸುವದರಿಂದ ನಮ್ಮ ಸಮಸ್ತ ಪಾಪಗಳೂ ನಾಶ ಹೊಂದುವವೋ ಅಂತಹ ವೇಂಕಟಾಚಲವು ಅತ್ಯಂತ ಪುಣ್ಯತಮ ಉತ್ತಮೋತ್ತಮ ಕ್ಷೇತ್ರವಾಗಿದೆ .
ತತ್ರ ಸ್ವಾಮಿಸರೋ ನಾಮ ತಿರ್ಥಮೇಕಂ ವಿರಾಜತೇ |
ತತ್ಪಶ್ಚಿಮೇ ಭೂಮಿಕೋಲಸ್ತಟೇ ರಾಜತಿ ದೇವರಾಟ್ ||೧೫||
ಅಲ್ಲಿ ಸ್ವಾಮಿಪುಷ್ಕರಣೀ ಎಂಬ ತೀರ್ಥವೊಂದಿದ್ದು ಅದರ ದಡದಲ್ಲಿಯೇ ದೇವಾಧಿದೇವನಾದ ಭೂವರಾಹಸ್ವಾಮಿಯು ವಾಸವಾಗಿರುವನು .
ಶ್ರೀಮದ್ವರಾಹದೇವಸ್ಯ ವೇಂಕಟಾಚಲವಾಸಿನಃ|
ನ ಮಯಾ ಶಕ್ಯತೇ ವಕ್ತುಂ ಮಹಿಮಾ ಬಹು ಹಾಯನೈಃ ||೧೬||
ವೇಂಕಟಾಚಲದಲ್ಲಿರುವ ವರಾಹದೇವರ ಮಹಿಮೆಯನ್ನು ಬಹು ವರ್ಷಗಳಷ್ಟು ಕಾಲ ವರ್ಣಿಸಿದರೂ ಸಹ ಮುಗಿಯದು . ಅಷ್ಟು ವಿಸ್ತಾರವಾದ ಅವನ ಮಹಿಮೆಯನ್ನು ವರ್ಣಿಸಲು ನಾನು ಸಮರ್ಥನಲ್ಲ .
ಶ್ರೀಹರಿವಾಯುಗುರುಗಳ ನಾಮಸ್ಮರಣೆಗಳೊಂದಿಗೆ ಶುಭೋದಯ ಶುಭದಿನ 🙏🏽🙇♂ಹರೇ ಶ್ರೀನಿವಾಸಾ 🙇♂🙏🏽
***
|| ಶ್ರೀಕಲ್ಹಳ್ಳಿ ಶ್ರೀಲಕ್ಷ್ಮೀವೇಂಕಟೇಶಃ ಪ್ರಸೀದತು||
||ಅಥ ಶ್ರೀಮದ್ಗರುಡಪುರಾಣಾಂತರ್ಗತ ಶ್ರೀಮದ್ವೇಂಕಟೇಶಮಾಹಾತ್ಮ್ಯಮ್||
ಶ್ರೀಗುರುಭ್ಯೋ ನಮಃ || ಹರಿಃ ಓಂ||
ಶ್ರಿಯಃ ಕಾಂತಾಯ ಕಲ್ಯಾಣನಿಧಯೇ ನಿಧಯೇsರ್ಥಿನಾಮ್|
ಶ್ರೀವೇಂಕಟನಿವಾಸಾಯ ಶ್ರೀನಿವಾಸಾಯ ಮಂಗಲಮ್||
ಶ್ರೀಲಕ್ಷ್ಮೀರಮಣ , ಅನಂತಕಲ್ಯಾಣಗುಣಪರಿಪೂರ್ಣ , ಅರ್ಥಿಜನರ ಇಷ್ಟಾರ್ಥನಿಧಿಯಾದ ಶ್ರೀವೇಂಕಟಾಚಲ ನಿವಾಸಿಯಾದ ಶ್ರೀನಿವಾಸ ದೇವರಿಗೆ ಮಂಗಳವು .
ಶ್ರೀವೇಂಕಟಾಚಲಾಧೀಶಂ ಶ್ರಿಯಾಧ್ಯಾಸಿತವಕ್ಷಸಮ್|
ಶ್ರಿತಚೇತನಮಂದಾರಂ ಶ್ರೀನಿವಾಸಮಹಂ ಭಜೇ ||
ಶ್ರೀವೇಂಕಟಾಚಲಪತಿಯಾದ ಶ್ರೀಲಕ್ಷ್ಮೀದೇವಿಯಿಂದ ಶೋಭಿತವಾದ ವಕ್ಷಸ್ಥಳವುಳ್ಳ ಆಶ್ರಿತಜನಮಂದಾರನಾದ ಶ್ರೀನಿವಾಸದೇವರನ್ನು ನಾನು ಸ್ತುತಿಸುತ್ತೇನೆ .
ಶ್ರೀಗರುಡ ಉವಾಚ -
ಅರುಂಧತೀ ಸಮಸ್ತಾನಾಮಂಗನಾನಾಂ ಪತಿವ್ರತಾ|
ಪತಿಂ ಸ್ವಂ ಪರಿಪಪ್ರಚ್ಛ ಲೋಕಾನಾಂ ಹಿತಕಾಮ್ಯಯಾ ||೧||
ಗರುಡನು ವೇಂಕಟೇಶಮಹಾತ್ಮೆಯನ್ನು ನಿರೂಪಿಸಲು ಬಯಸಿ ಅರುಂಧತಿ-ವಸಿಷ್ಠರ ಸಂವಾದವನ್ನೇ ಅನುವಾದಿಸುತ್ತಾ ಋಷಿಗಳನ್ನು ಕುರಿತು ಹೇಳಿದನು -
"ಸಮಸ್ತ ಸ್ತ್ರೀಯರಲ್ಲಿ ಶ್ರೇಷ್ಠಳಾದ ಪತಿವ್ರತೆಯಾದ ಅರುಂಧತಿಯು ಲೋಕಗಳಿಗೆ ಹಿತವನ್ನು ಬಯಸಿ ತನ್ನ ಪತಿಯಾದ ವಸಿಷ್ಠರನ್ನು ಕುರಿತು ಹೀಗೆ ಪ್ರಶ್ನಿಸಿದಳು ".
ಅರುಂಧತ್ಯುವಾಚ -
ಬ್ರಹ್ಮಾತ್ಮಜ ನಮಸ್ತುಭ್ಯಮಿದಂ ವಿಜ್ಞಾಪನಂ ಶೃಣು|
ಪತಿಶುಶ್ರೂಷಣಾದನ್ಯಃ ಸ್ತ್ರೀಣಾಂ ಧರ್ಮೋ ನ ವಿದ್ಯತೇ ||೨||
ವಸಿಷ್ಠರನ್ನು ಕುರಿತು ಅರುಂಧತಿಯು ಪ್ರಾರ್ಥಿಸಿಕೊಳ್ಳುತ್ತಿದ್ದಾಳೆ -
" ಬ್ರಹ್ಮದೇವರ ಮಾನಸಪುತ್ರರಾದ ಹೇ ವಸಿಷ್ಠರೇ ! ನಿಮಗೆ ಭಕ್ತಿಪೂರ್ವಕ ನಮಸ್ಕಾರಗಳು . ನನ್ನ ವಿಜ್ಞಾಪನೆಯನ್ನು ಆಲಿಸಿರಿ . ಪತಿಶುಶ್ರೂಣೆಯನ್ನು ಹೊರತುಪಡಿಸಿ ಯಾವ ಪ್ರತ್ಯೇಕ ಧರ್ಮಗಳೂ ಸಹ ಸ್ತ್ರೀಯರಿಗೆ ಇರುವದಿಲ್ಲ .
ನ ಯಾಗಯೋಗೌ ನ ತಪೋ ನ ತೀರ್ಥಂ ನ ಸುರಾರ್ಚನಮ್|
ಸರ್ವಧರ್ಮಾಧಿಕಂ ಸ್ತ್ರೀಣಾಂ ಪತ್ಯುರೇವ ಪ್ರಹರ್ಷಣಮ್ ||೩||
ಯಾಗ , ಯೋಗ , ತಪಸ್ಸು , ತೀರ್ಥಕ್ಷೇತ್ರದರ್ಶನ , ದೇವತೆಗಳ ಆರಾಧನೆ ಇವ್ಯಾವುಗಳೂ ಸಹ ಸುಮಂಗಲೀ ಸ್ತ್ರೀಯರು ಮಾಡುವ ಪತಿಸೇವೆಗೆ ಸಮವಾದುದಲ್ಲ . ಆದ್ದರಿಂದ ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠವಾದದ್ದು ಪತಿಯನ್ನು ಸಂತೋಷಗೊಳಿಸುವದೇ ಆಗಿದೆ .
ಇತಿ ಶ್ರುತಂ ಮಯಾ ತ್ವತ್ತ ಋಷಿಭ್ಯೋsನ್ಯೇಭ್ಯಃ ಏವ ಚ|
ತಥಾಪಿ ಜಾಯತೇ ಪ್ರೀತಿರ್ಮಮ ಕಾಚಿದ್ಗರೀಯಸೀ ||೪||
ಹೀಗೆ ಎಲ್ಲ ಧರ್ಮ ಈ ಎಲ್ಲ ವಿಷಯಗಳನ್ನು ನಿಮ್ಮ ಮುಖದಿಂದ ಮತ್ತು ಇತರ ಋಷಿಮುನಿಗಳಿಂದ ಕೇಳಿದ್ದೇನೆ . ಆದರೂ ಸಹ ನನಗೆ ಒಂದು ಬಯಕೆ ಇರುವದು .
ವಿಷ್ಣುಕ್ಷೇತ್ರೇ ಕ್ವಚಿತ್ಪುಣ್ಯೇ ತೀರ್ಥೇ ಸರ್ವಾತಿಶಾಯಿನಿ|
ಕಂಚಿತ್ಕಾಲಂ ತಪಃ ಕೃತ್ವಾ ವಿಷ್ಣುಮುದ್ದಿಶ್ಯ ಯತ್ನತಃ ||೫||
ವಿಷ್ಣೋರ್ಮುಖೇನ ಸದ್ಧರ್ಮಂ ವಾಚಯಿತ್ವಾ ಜಗತ್ಕೃತೇ|
ಸರ್ವಧರ್ಮೋತ್ತಮಂ ನೃಣಾಂ ದರ್ಶಯಾಮೀತಿ ಮೇ ಮತಿಃ||೬||
ಅನುಜ್ಞಯಾ ಸ್ತ್ರೀಯೋ ಭರ್ತುರ್ದ್ಧರ್ಮಾಚರಣಮುತ್ತಮಮ್|
ವಿಷ್ಣುಕ್ಷೇತ್ರಂ ತಾದೃಶಂ ಮೇ ವದ ತೀರ್ಥೋತ್ತಮಂ ತಥಾ ||೭||
ಅತ್ಯಂತ ಪುಣ್ಯಕರವಾದ ವಿಷ್ಣುವಿನ ಕ್ಷೇತ್ರದಲ್ಲಿದ್ದು ವಿಷ್ಣುವನ್ನು ಕುರಿತು ಕೆಲ ಕಾಲ ತಪಸ್ಸನ್ನಾಚರಿಸಿ ಅವನನ್ನು ಪ್ರಸನ್ನೀಕರಿಸಿ , ಅವನ ಬಾಯಿಂದ ಸರ್ವೋತ್ಕೃಷ್ಟವಾದ ಧರ್ಮಗಳನ್ನು ಕೇಳಬಯಸಿರುವೆನು . ಯಾವಾಗಲೂ ಪತಿಯ ಆಜ್ಞೆಯಿಂದ ಆಚರಿಸಿದ ಧರ್ಮವು ಸ್ತ್ರೀಯರಿಗೆ ಫಲಪ್ರದವಾಗಿರುವದರಿಂದ ನನಗೆ ಅಪ್ಪಣೆಯನ್ನು ಕೊಡಿರಿ . ಪರಮಾತ್ಮನ ಅನುಗ್ರಹವನ್ನು ಶೀಘ್ರದಲ್ಲಿ ದೊರಕಿಸಿಕೊಡುವ ಶ್ರೇಷ್ಠವಾದ ಕ್ಷೇತ್ರವನ್ನು ಮತ್ತು ಮನಶ್ಶುದ್ಧಿಕರವಾದ ತೀರ್ಥವನ್ನು ಸಹ ನನಗೆ ತಿಳಿಸಿರಿ " ಎಂದು ಪ್ರಾರ್ಥಿಸಿದಳು .
ಶ್ರೀಹರಿವಾಯುಗುರುಗಳ ನಾಮಸ್ಮರಣೆಗಳೊಂದಿಗೆ ಶುಭೋದಯ ಶುಭದಿನ🙏🏽🙇♂ ಹರೇ ಶ್ರೀನಿವಾಸಾ 🙇♂🙏🏽
***********
ಶ್ರೀಗರುಡ ಪುರಾಣಾಂತರ್ಗತ ಶ್ರೀಮದ್ವೇಂಕಟೇಶಮಾಹಾತ್ಮ್ಯಮ್
ಗರುಡ ಉವಾಚ-
ಅರುಂಧತ್ಯಾ ಪೃಷ್ಟ ಇತ್ಥಂ ವಸಿಷ್ಠೋ ವಾಕ್ಯಮಬ್ರವೀತ್ |
ಸಮ್ಯಕ್ಪೃಷ್ಟಮಿದಂ ದೇವಿ ಸರ್ವಲೋಕಹಿತೇಚ್ಛಯಾ ||೮||
ಹೀಗೆ ಅರುಂಧತಿಯಿಂದ ಸಂಪೃಷ್ಟರಾದ ವಸಿಷ್ಠ ಮಹರ್ಷಿಗಳು "ನಿನ್ನ ಈ ಪ್ರಶ್ನೆಯು ಅತ್ಯಂತ ಯೋಗ್ಯವಾಗಿದ್ದು ಲೋಕಹಿತದಾಯಕವಾಗಿರುವದು .
ತಥಾ ವದಾಮಿ ಶೃಣು ಮೇ ಯಥಾ ಹೃತ್ಸಂಪ್ರಹೃಷ್ಯತಿ|
ಶ್ರೋತರ್ಯಪ್ರತಿಪತ್ತೌ ತು ವಕ್ತುರ್ವಾಕ್ಯಂ ತಥಾ ಭವೇತ್ ||೯||
ನಾನು ಹೇಳುವದನ್ನು ಲಕ್ಷ್ಯವಿಟ್ಟು ಕೇಳು . ನಿನಗೆ ಸಂತೋಷವಾಗುವ ರೀತಿಯಲ್ಲಿ ವಿಷ್ಣುಕ್ಷೇತ್ರ- ತೀರ್ಥಮಾಹಾತ್ಮ್ಯವನ್ನು ನಿನಗೆ ಹೇಳುವೆನು ಕೇಳು .
ಯಥಾಂಧೇ ಭರ್ತರಿ ಸ್ತ್ರೀಣಾಂ ಸೌಂದರ್ಯಂ ಸಕಲಂ ವೃಥಾ|
ಸಾವಧಾನಮನಾ ಭೂತ್ವಾ ಶೃಣು ತಸ್ಮಾದ್ವಚೋ ಮಮ||೧೦||
ಹೇಗೆ ಅಂಧನ ಪತ್ನಿಯ ಅಲಂಕಾರವು ತನ್ನ ಪತಿಗೆ ಆನಂದದಾಯಕವಲ್ಲದ್ದರಿಂದ ವ್ಯರ್ಥವೆನಿಸುವದೋ , ಹಾಗೆಯೇ ತಿಳಿಯಬಯಸಿ ಪ್ರಶ್ನಿಸಿದ ವ್ಯಕ್ತಿಗೆ ತಿಳಿಯುವಂತೆ ಉತ್ತರಿಸದೇ ಹೋದಲ್ಲಿ , ಆ ಉತ್ತರವು ವ್ಯರ್ಥವೆನಿಸುವದು . ಆದ್ದರಿಂದ ನಿನಗೆ ತಿಳಿಯುವಂತೆ ನಾನು ಹೇಳುವೆನು . ಸಮಾಧಾನಮನಸ್ಕಳಾಗಿ ಕೇಳು .
ಸ್ವರ್ಣಮುಖರೀತೀರೇ ಕಶ್ಚಿದಸ್ತಿ ಮಹೀಧರಃ|
ವೇಂಕಟಾಚಲನಾಮಾಸೌ ಸರ್ವಭೂಭೃತ್ಕುಲೋತ್ತಮಃ||೧೧||
ಅತಿಪ್ರೀತಿರ್ಮಹಾವಿಷ್ಣೋಸ್ತತ್ರ ವೇಂಕಟಭೂಧರೇ|
ಶ್ವೇತದ್ವೀಪಾಚ್ಚ ವೈಕುಂಠಾದ್ಭಾನುಮಂಡಲ ಮಧ್ಯತಃ ||೧೨||
ಸುವರ್ಣಮುಖರೀನದಿಯ ದಡದಲ್ಲಿ ವೇಂಕಟಾಚಲವೆಂಬ ಪರ್ವತಶ್ರೇಷ್ಠವಿರುವದು , ಅದು ಭಗವಂತನಿಗೆ ಅತ್ಯಂತ ಪ್ರಿಯವಾಗಿದ್ದು , ಶ್ವೇತದ್ವೀಪ ಲೋಕದಿಂದ ಆಕಾಶಮಾರ್ಗವಾಗಿ ಶ್ರೀನಿವಾಸನ ವಿಹಾರಾರ್ಥವಾಗಿ ಗರುಡನಿಂದ ತರಲ್ಪಟ್ಟಿರುವದು .
*************
ಶ್ರೀಗರುಡಪುರಾಣಾಂತರ್ಗತ ಶ್ರೀಮದ್ವೇಂಕಟೇಶಮಹಾತ್ಮ್ಯಮ್
ಯನ್ನಾಮ ಕೀರ್ತಯುತ್ವಾsಪಿ ಸರ್ವಪಾಪಕ್ಷಯೋ ಭವೇತ್ |
ಸಮಸ್ತಶ್ರೇಯಸಾಂ ಸಿದ್ಧಿಸ್ತಾದೃಶೋ ವೇಂಕಟಾಚಲಃ ||೧೩||
ಯಾವ ಪರ್ವತವನ್ನು ಕೀರ್ತನ ಮಾಡಿದರೂ ಸಹ ಎಲ್ಲ ಪಾಪಗಳೂ ನಾಶವನ್ನು ಹೊಂದಿ ಸಮಸ್ತ ಪುಣ್ಯಗಳು , ಸಿದ್ಧಿಗಳು ಲಭಿಸುವದೋ ಅಂತಹ ಕ್ಷೇತ್ರವೇ ಶ್ರೀಮದ್ವೇಂಕಟಾಚಲ ವಾಗಿರುವದು .
ಯಸ್ಮೈ ವೇಂಕಟಶೈಲಾಯ ನಮಸ್ಕೃತ್ಯಾಪಿ ದೂರತಃ|
ಸರ್ವಪಾಪೈಃ ಪ್ರಮುಚ್ಯೇತ ತತ್ಪುಣ್ಯಂ ಕ್ಷೇತ್ರಮುತ್ತಮಮ್ ||೧೪||
ಯಾವ ವೇಂಕಟಾಚಲವನ್ನು ಕುರಿತು ದೂರದಿಂದಲೇ ಭಕ್ತಭರಿತರಾಗಿ ನಮಸ್ಕರಿಸುವದರಿಂದ ನಮ್ಮ ಸಮಸ್ತ ಪಾಪಗಳೂ ನಾಶ ಹೊಂದುವವೋ ಅಂತಹ ವೇಂಕಟಾಚಲವು ಅತ್ಯಂತ ಪುಣ್ಯತಮ ಉತ್ತಮೋತ್ತಮ ಕ್ಷೇತ್ರವಾಗಿದೆ .
ತತ್ರ ಸ್ವಾಮಿಸರೋ ನಾಮ ತಿರ್ಥಮೇಕಂ ವಿರಾಜತೇ |
ತತ್ಪಶ್ಚಿಮೇ ಭೂಮಿಕೋಲಸ್ತಟೇ ರಾಜತಿ ದೇವರಾಟ್ ||೧೫||
ಅಲ್ಲಿ ಸ್ವಾಮಿಪುಷ್ಕರಣೀ ಎಂಬ ತೀರ್ಥವೊಂದಿದ್ದು ಅದರ ದಡದಲ್ಲಿಯೇ ದೇವಾಧಿದೇವನಾದ ಭೂವರಾಹಸ್ವಾಮಿಯು ವಾಸವಾಗಿರುವನು .
ಶ್ರೀಮದ್ವರಾಹದೇವಸ್ಯ ವೇಂಕಟಾಚಲವಾಸಿನಃ|
ನ ಮಯಾ ಶಕ್ಯತೇ ವಕ್ತುಂ ಮಹಿಮಾ ಬಹು ಹಾಯನೈಃ ||೧೬||
ವೇಂಕಟಾಚಲದಲ್ಲಿರುವ ವರಾಹದೇವರ ಮಹಿಮೆಯನ್ನು ಬಹು ವರ್ಷಗಳಷ್ಟು ಕಾಲ ವರ್ಣಿಸಿದರೂ ಸಹ ಮುಗಿಯದು . ಅಷ್ಟು ವಿಸ್ತಾರವಾದ ಅವನ ಮಹಿಮೆಯನ್ನು ವರ್ಣಿಸಲು ನಾನು ಸಮರ್ಥನಲ್ಲ .
ಶ್ರೀಹರಿವಾಯುಗುರುಗಳ ನಾಮಸ್ಮರಣೆಗಳೊಂದಿಗೆ ಶುಭೋದಯ ಶುಭದಿನ 🙏🏽🙇♂ಹರೇ ಶ್ರೀನಿವಾಸಾ 🙇♂🙏🏽
***
ಗರುಡ ಪುರಾಣ
ಗರುಡ ಪುರಾಣವು ಹಿಂದೂ ಪುರಾಣಗಳಲ್ಲಿ ಒಂದು. ೧೯,೦೦೦ ಶ್ಲೋಕಗಳನ್ನು ಹೊಂದಿರುವ ಈ ಪುರಾಣವು ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿದೆ.
ಸಾವಿನ ನಂತರ ಗರುಡ ಪುರಾಣವನ್ನೇಕೇ ಪಠಿಸಬೇಕು..?
ಅಗಲಿದ ಆತ್ಮಕ್ಕೆ ತರ್ಪಣವನ್ನು ನೀಡಿದರೂ ಕೂಡ ಕೆಲವೊಮ್ಮೆ ಆತ್ಮಗಳು ಮುಕ್ತಿ ಸಿಗದೆ ಅಲೆದಾಡುತ್ತಿರುತ್ತದೆ. ಆದ್ದರಿಂದ ನಾವು ಅಗಲಿದ ಆತ್ಮಕ್ಕೆ ಮುಕ್ತಿ ಅಥವಾ ಮೋಕ್ಷವನ್ನು ನೀಡಲು ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಈ ಗರುಡ ಪುರಾಣ ಓದುವುದರ ಪ್ರಯೋಜನವೇನು..? ಗರುಡ ಪುರಾಣಕ್ಕೂ ಅಗಲಿದ ಆತ್ಮಕ್ಕೂ ಇರುವ ಸಂಬಂಧವೇನು..?
ಹಿಂದೂ ಧರ್ಮದ ಪ್ರಕಾರ ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಸತ್ತಾಗ ಗರುಡ ಪುರಾಣವನ್ನು 13 ದಿನಗಳವರೆಗೆ ಪಠಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಆತ್ಮವು ಎರಡನೇ ಜನ್ಮವನ್ನು ಪಡೆಯಲು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ ಕೆಲವು ಆತ್ಮಗಳು 10 ರಿಂದ 13 ದಿನಗಳನ್ನು ತೆಗೆದುಕೊಳ್ಳುತ್ತವೆ. ಒಂದು ತಿಂಗಳ ನಂತರ ಅದು ಮತ್ತೊಂದು ದೇಹವನ್ನು ಸೇರುತ್ತದೆ. ಆದರೆ, ಅಕಾಲಿಕ ಮರಣಹೊಂದಿದರೆ ಮತ್ತೊಂದು ಜನ್ಮ ಪಡೆಯಲು ಆತ್ಮವು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಸತ್ತವರ ಆತ್ಮಕ್ಕೆ ಮುಕ್ತಿ ನೀಡಲು ಕೊನೆಯ ತರ್ಪಣವನ್ನು ಮೂರನೇ ವರ್ಷದಲ್ಲಿ ನಡೆಸಲಾಗುತ್ತದೆ. ಆದರೂ ಅನೇಕ ಆತ್ಮಗಳು ಮುಕ್ತಿ ಸಿಗದೆ ಅಲೆದಾಡುತ್ತಿರುತ್ತವೆ. ಆದ್ದರಿಂದ ಅಗಲಿದ ಆತ್ಮಕ್ಕಾಗಿ ಗರುಡ ಪುರಾಣ ಪಠಿಸಲಾಗುತ್ತದೆ. ಈ ಗರುಡ ಪುರಾಣ ಪಠಣದಿಂದಾಗಿ ಏನೇನು ಪ್ರಯೋಜನ ಎಂಬುದನ್ನು ತಿಳಿಯೋಣ.
ಗರುಡ ಪುರಾಣ ಓದುವ ಸಮಯ:
ಗರುಡ ಪುರಾಣದಲ್ಲಿ, ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸತ್ತವರಿಗೆ ಪಠಿಸಲಾಗುತ್ತದೆ. ಓರ್ವ ವ್ಯಕ್ತಿಯ ಮರಣಾನಂತರ ಗರುಡ ಪುರಾಣವನ್ನು ಓದಲಾಗುತ್ತದೆ. ಒಮ್ಮೆ, ಗರುಡನು ವಿಷ್ಣುವಿಗೆ ಜೀವಿಗಳ ಸಾವು, ಯಮ ಲೋಕದ ಪ್ರಯಾಣ, ನರಕ ಮತ್ತು ಮೋಕ್ಷದ ಬಗ್ಗೆ ಹಲವಾರು ನಿಗೂಢ ಮತ್ತು ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ವಿಷ್ಣು ಅದೇ ಪ್ರಶ್ನೆಗಳಿಗೆ ವಿಸ್ತಾರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ಸರಣಿಯೇ ಗರುಡ ಪುರಾಣ.
ಗರುಡ ಪುರಾಣವನ್ನೇಕೇ ಓದಬೇಕು..?
13 ದಿನಗಳವರೆಗೆ ಮೃತನು ಅವನ ಅಥವಾ ಅವಳ ಪ್ರೀತಿಪಾತ್ರರ ನಡುವೆ ಉಳಿದಿರುತ್ತಾರೆ. ಈ ಸಮಯದಲ್ಲಿ, ಗರುಡ ಪುರಾಣದ ಪಠ್ಯವನ್ನು ಪಠಿಸಿದರೆ ಸ್ವರ್ಗ ಮತ್ತು ನರಕ, ವೇಗ, ಮೋಕ್ಷ, ಪಾತಾಳ, ಅವನತಿ ಮುಂತಾದ ಚಲನೆಗಳ ಬಗ್ಗೆ ಮೃತರು ತಿಳಿದುಕೊಳ್ಳುತ್ತಾರೆ.
ಆತ್ಮಗಳಿಗೆ ಮರುಜನ್ಮ ಪಡೆಯಲು ಮಾರ್ಗ:
ಗರುಡ ಪುರಾಣದ ಮೂಲಕ ಮುಂದಿನ ಪ್ರಯಾಣದಲ್ಲಿ ಅವನು/ಳು ಎದುರಿಸಬೇಕಾದ ವಿಷಯಗಳು ಯಾವುವು ಎಂಬುದನ್ನು ಕಲಿಯುತ್ತಾನೆ. ಈ ಪಠಣದ ಮೂಲಕ ಆತ್ಮವು ತಮ್ಮ ಕುಟುಂಬದವರ ಪ್ರೀತಿಯನ್ನು ಪಡೆಯುತ್ತದೆ.
ಸ್ವರ್ಗ - ನರಕ ಪ್ರಾಪ್ತಿ:
ಸಾವಿನ ನಂತರ ಗರುಡ ಪುರಾಣ ಓದುವುದರಿಂದ ಆ ವ್ಯಕ್ತಿಯು ಬದುಕಿದ್ದಾಗ ಏನೆಲ್ಲಾ ಒಳ್ಳೆಯ ಕೆಲಸ ಮಾಡಿದ್ದ, ಏನೆಲ್ಲಾ ಕೆಟ್ಟ ಕೆಲಸ ಮಾಡಿದ್ದ ಎಂಬುದು ಅವರ ಸಂಬಂಧಿಕರಿಗೆ ತಿಳಿಯುತ್ತದೆ. ಆತ ಒಳ್ಳೆಯ ಕೆಲಸ ಮಾಡಿದ್ದಾನೆ ಎಂದು ಸಂಬಂಧಿಕರೆಲ್ಲರೂ ಅಂದುಕೊಂಡರೆ ಆತ್ಮಕ್ಕೆ ಮೋಕ್ಷ ಸಿಗುತ್ತದೆ. ಮುಂದಿನ ಪ್ರಯಾಣಕ್ಕೆ ದಾರಿ ಸಿಗುತ್ತದೆ.
ಮೋಕ್ಷ:
ಗರುಡ ಪುರಾಣವು ಸತ್ಕರ್ಮಕ್ಕೆ ಸ್ಫೂರ್ತಿ ನೀಡುತ್ತದೆ. ಮೋಕ್ಷ ಮತ್ತು ವಿಮೋಚನೆ ಸಾಧಿಸುವುದು ಒಳ್ಳೆಯ ಕಾರ್ಯಗಳು ಮತ್ತು ದಯೆಯಿಂದ ಮಾತ್ರ. ಮನುಷ್ಯನು ಜೀವಿತಾವಧಿಯಲ್ಲಿ ಮಾಡಿದ ಪಾಪ ಕರ್ಮಗಳಿಗೆ ಅನುಗುಣವಾಗಿ ಸ್ವರ್ಗ - ನರಕ ಎನ್ನುವಂತಹದ್ದು ನಿರ್ಧಾರವಾಗುತ್ತದೆ.
ಗರುಡ ಪುರಾಣದಲ್ಲಿ ಶಿಕ್ಷೆ:
ಗರುಡ ಪುರಾಣದಲ್ಲಿ, ವ್ಯಕ್ತಿಯ ಕಾರ್ಯಗಳ ಆಧಾರದ ಮೇಲೆ ವಿವಿಧ ಶಿಕ್ಷೆಗಳು ಕಂಡುಬರುತ್ತವೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಮೋಕ್ಷದ ಕಡೆಗೆ ಯಾವ ವಿಷಯಗಳನ್ನು ಕೊಂಡೊಯ್ಯುತ್ತಾನೆ ಎಂಬುದಕ್ಕೆ ಭಗವಾನ್ ವಿಷ್ಣು ಉತ್ತರವನ್ನು ನೀಡಿದ್ದಾನೆ. ಅವನು ಮೋಕ್ಷವನ್ನು ಪಡೆಯಬೇಕೆಂದರೆ ಜೀವಿತಾವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕು.
ಸ್ವಯಂ ಜ್ಞಾನವೇ ಗರುಡ ಪುರಾಣದ ಮುಖ್ಯ ವಿಷಯ:
ಗರುಡ ಪುರಾಣದಲ್ಲಿ ನಮ್ಮ ಜೀವನದ ಬಗ್ಗೆ ಅನೇಕ ನಿಗೂಢ ವಿಷಯಗಳನ್ನು ಹೇಳಲಾಗಿದೆ. ವ್ಯಕ್ತಿಯ ಬಗ್ಗೆ ತಿಳಿದಿರಬೇಕು. ಸ್ವಯಂ ಜ್ಞಾನದ ಪ್ರವಚನವು ಗರುಡ ಪುರಾಣದ ಮುಖ್ಯ ವಿಷಯವಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಸಾವಿರ ವಚನಗಳ ಪೈಕಿ ಏಳು ಸಾವಿರ ವಚನಗಳಲ್ಲಿ ಜ್ಞಾನ, ಧರ್ಮ, ನೀತಿ, ರಹಸ್ಯ, ಪ್ರಾಯೋಗಿಕ ಜೀವನ, ಸ್ವಯಂ, ಸ್ವರ್ಗ, ನರಕ ಮತ್ತು ಇತರ ಲೋಕಗಳನ್ನು ವಿವರಿಸಲಾಗಿದೆ.
ಸಂಪತ್ತಿನ ಬಗ್ಗೆ ಹೆಮ್ಮೆ ಪಡಬೇಡಿ:
ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಸಂಪತ್ತಿನ ಬಗ್ಗೆ ಹೆಮ್ಮೆ ಪಡಬಾರದು. ಇದನ್ನು ಮಾಡುವುದರಿಂದ, ಅವನಲ್ಲಿ ದುರಾಹಂಕಾರವು ಬೆಳೆಯುತ್ತದೆ. ಇದು ಅವನ ಬೌದ್ಧಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮತ್ತು ಅವನು ಇತರರನ್ನು ಅವಮಾನಿಸಲು ಪ್ರಾರಂಭಿಸುತ್ತಾನೆ. ಯಾವುದೇ ವ್ಯಕ್ತಿಯನ್ನು ನಿರಾಕರಿಸುವುದು ಅಥವಾ ಅವಮಾನಿಸುವುದು ಗರುಡ ಪುರಾಣದಲ್ಲಿ ಪಾಪ ಎಂದು ವಿವರಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಲಕ್ಷ್ಮಿ ಸಂಪತ್ತಿನ ಅಧಿದೇವತೆ. ಆದ್ದರಿಂದ ಯಾವ ವ್ಯಕ್ತಿಯು ತನ್ನ ಸಂಪತ್ತಿನ ಬಗ್ಗೆ ಹೆಮ್ಮೆಪಡುತ್ತಾನೋ ಆ ವ್ಯಕ್ತಿಯ ಮೇಲೆ ಲಕ್ಷ್ಮಿ ದೇವಿಯು ಕೋಪಿಸಿಕೊಳ್ಳುತ್ತಾಳೆ. ಮತ್ತು ಅಂತಹ ಜನರ ಸಂಪತ್ತು ನಾಶವಾಗಲು ಪ್ರಾರಂಭಿಸುತ್ತದೆ.
ದುರಾಸೆ:
ಗರುಡ ಪುರಾಣದ ಪ್ರಕಾರ, ದುರಾಸೆಯ ವ್ಯಕ್ತಿಯ ಜೀವನವು ಎಂದಿಗೂ ಬೆಳವಣಿಗೆಯನ್ನು ಹೊಂದಲು ಸಾಧ್ಯವಿಲ್ಲ. ದುರಾಸೆಯುಳ್ಳ ವ್ಯಕ್ತಿಯು ಇನ್ನೊಬ್ಬರ ಸಂಪತ್ತನ್ನು ನೋಡಿದ ನಂತರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಹಣಕ್ಕಾಗಿ ದುರಾಸೆ ಅಥವಾ ಇತರರ ಸಂಪತ್ತನ್ನು ಪಡೆಯಲು ಪ್ರಯತ್ನಿಸುವುದು ಈ ಜೀವನದಲ್ಲಿ ಮಾತ್ರವಲ್ಲದೆ ಮುಂದಿನ ಜನ್ಮದಲ್ಲೂ ಕೂಡ ಆ ವ್ಯಕ್ತಿಯನ್ನು ತೃಪ್ತಿಪಡಿಸುವುದಿಲ್ಲ.
ಇತರರನ್ನು ಅವಮಾನಿಸುವುದು:
ಇತರರನ್ನು ಅವಮಾನಿಸುವುದು ಮತ್ತು ಕೀಳಾಗಿ ನೋಡುವುದನ್ನು ದೊಡ್ಡ ಪಾಪ ಎಂದು ಗರುಡ ಪುರಾಣ ಹೇಳುತ್ತದೆ. ಇತರರನ್ನು ಖಂಡಿಸುವಾಗ ಅಥವಾ ಅವಮಾನಿಸುವಾಗ ಒಬ್ಬ ವ್ಯಕ್ತಿಯು ತುಂಬಾ ಸಂತೋಷವಾಗಿರುತ್ತಾನೆ ಎಂದು ಅದು ಹೇಳುತ್ತದೆ, ಆದರೆ ವಾಸ್ತವದಲ್ಲಿ ಅವನು ಇದನ್ನು ಮಾಡುವ ಮೂಲಕ ತನ್ನ ಸಮಯವನ್ನು ವ್ಯರ್ಥಮಾಡುತ್ತಾನೆ. ಇತರರನ್ನು ಅವಮಾನಿಸುವ ವ್ಯಕ್ತಿಯು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ ಎನ್ನುತ್ತೆ ಗರುಡ ಪುರಾಣ.
***
No comments:
Post a Comment