1. ಮಡಿ ಮೈಲಿಗೆ ಅನುಸರಿಸಿ..
೨. ಪ್ರತಿದಿನ ನೈವೇದ್ಯ ಆಗಬೇಕು..
೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ..
೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..
೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.
೪. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ,
ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..
೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ "ನೈವೇದ್ಯ "ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..
೬. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು..
೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)
೮. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನು "ಅರಿಸಿನದ ನೀರಿನಿಂದ ಶುದ್ಧ ಮಾಡಿ..
೯. ದೇವರ ಪೂಜೆಗೆ "ಆಂಜನೇಯ" ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು..
೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ..
೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..
೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ..
೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು..
ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..
೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು..
೧೫. ದೇವರ ಪೂಜೆಗೆ "ಹಸಿಯಾದ ಹಾಲನ್ನು ಮಾತ್ರ ಬಳಸಿ..
೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ..
ನೈವೇದ್ಯ ಮಾಡೋವಾಗ "ತುಳಸೀಪತ್ರೆಯನ್ನು" ಬಳಸಬೇಕು..
೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..
೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ..
೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು..
ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ..
ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು "ಮನೆದೇವರೇ.."!
೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ "ಮಹಾಲಕ್ಷ್ಮೀ" ಸಾನಿಧ್ಯ ಇರುತ್ತದೆ..
೨೧. "ಶ್ರೀ ಚಕ್ರ" , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ .. ಇತ್ಯಾದಿ ಈ ದೇವರುಗಳೆಲ್ಲಾ "ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ..
ಪೂಜೆ ಆರಂಭದಲ್ಲಿ ಸಂಕಲ್ಪ ಮಾಡುತ್ತೀವಿ.
ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು.
ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.
ಸರ್ವಜ್ಞರಾದ ಶ್ರೀ ವಾದಿರಾಜಭಗವತ್ಪಾದರು ವಿರಚಿಸಿದ ಪುಟ್ಟದಾದ ದೇವತಾಹ್ವಾನ ದೇವಪೂಜಾ ಕಾಲದಲ್ಲಿ ಅತ್ಯಂತ ಉಪಯೋಗವಾಗುವುದು.
॥ಸರ್ವಕರ್ಮಕಾರಯಿತೃಭಾರತೀರಮಣಮುಖ್ಯಪ್ರಾಣಾಂತರ್ಗತ- ಅನಂತಗುಣಗಣಪರಿಪೂರ್ಣ- ಅನಂತಾವತಾರಾತ್ಮಕ-ಅನಂತಜೀವಾಂತರ್ಯಾಮಿ ಬಿಂಬನಾಮಕ ಪರಮಾತ್ಮನ್, ಮಯಾ ಪ್ರತಿಕ್ಷಣೇ ಮನೋವಾಕ್ಕಾಯಕರ್ಮಭಿಃ ಕ್ರಿಯಮಾಣಾನ್ ಅನಂತಾಪರಾಧಾನಗಣಯ್ಯ ಮದರ್ಥಮಸ್ಮದ್ಗುರ್ವಂತರ್ಗತಭಾರತೀರಮಣಮುಖ್ಯಪ್ರಾಣೇನಾನಂತವೇದೋಕ್ತಪ್ರಕಾರೇಣ ಕ್ರಿಯಮಾಣಪ್ರಾರ್ಥನೋಪರಿ ದೃಷ್ಟಿಂ ದತ್ವಾ ಮದ್ಧಸ್ತೇನ ಪೂಜಾಂ ಕಾರಯಿತ್ವಾ ಪಾಲಯಿತುಂ ತ್ವತ್ಸಾಕ್ಷಾತ್ಪ್ರತಿಬಿಂಬಭೂತೇನ ಭಾರತೀರಮಣ ಮುಖ್ಯಪ್ರಾಣದ್ವಾರಾ ಮದ್ ಜ್ಞಾನೇಂದ್ರಿಯಕರ್ಮೇಂದ್ರಿಯಾಭಿಮಾನಿದೇವಾನುದ್ಬೋಧಯಿತ್ವಾ ತದ್ದ್ವಾರಾ ಮಾಂ ಚ ಬೋಧಯಿತ್ವಾ ಮದ್ಧೃತಕಮಲಾಕರಸ್ಥಿತತುಲಸೀದಲದ್ವಾರಾ ತ್ವತ್ಪರಿವಾರಭೂತ ರಮಾಬ್ರಹ್ಮಾದಿಭಿಃ ಸಹ ವಾಯುವಾಹನೋ ಭೂತ್ವಾ ವಾಮನಾಸಾಪುಟೇನ ಬಹಿರಾಗತ್ಯ ತತ್ತತ್ಪ್ರತಿಮಾಭಿಮಾನಿದೇವತಾತ್ಮಕತೇಜೋಮಯಮುಖ್ಯಪ್ರಾಣ ಗೋಲಕಾನ್ತರ್ಗತನಿತ್ಯಮುಕ್ತ ರಮಾಗೋಲಕಾಂತರ್ಗತಸ್ವಸ್ವರೂಪಗೋಲಕೇ ಸ್ಥಿತ್ವಾ ಪೂಜಾಂ ಗೃಹೀತ್ವಾ ಮಾಂ ಪಾಲಯ . .. ಇತಿ ಶ್ರೀವಾದಿರಾಜತೀರ್ಥಶ್ರೀಚರಣಕೃತಃ ದೇವತಾಹ್ವಾನಪ್ರಕಾರಃ
*******
devara deepa--> DEVARA DEEPA
Sunday: ಭಾನು ವಾಸರ;
ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮೇಘಾ, ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ, ಹಸ್ತ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠ,ಮೂಲ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ, ಘನಿಷ್ಠಾ, ಶತತಾರಕಾ, ಪೂರ್ವಾಭಾದ್ರಪದಾ, ಉತ್ತರಾಭಾದ್ರಪದಾ, ರೇವತೀ, ಅಭಿಜಿತ
No comments:
Post a Comment