ಜನ್ಮ ನಕ್ಷತ್ರದಿಂದ ಆರಂಭಿಸಿ ನಿರ್ದಿಷ್ಟ ಶುಭ ಕಾರ್ಯ ಮಾಡುವ ದಿನದಂದು ಇರುವ ನಕ್ಷತ್ರದವರೆಗೆ ಎಣಿಸಬೇಕು. ಬಂದ ಸಂಖ್ಯೆಯನ್ನು ಆ ನಂತರ ಒಂಬತ್ತರಿಂದ ಭಾಗಿಸಬೇಕು. ಭಾಗಿಸಿದ ನಂತರ ಉಳಿದ ಶೇಷ ಸಂಖ್ಯೆಯ ಆಧಾರದಲ್ಲಿ ಶುಭ ಕಾರ್ಯ ಮಾಡಬಹುದೋ ಬೇಡವೋ ಎಂಬ ನಿರ್ಧಾರ ತೆಗೆದುಕೊಳ್ಳಬಹುದು.
ಇನ್ನು ಮಂಗಳವಾರ, ಶನಿವಾರಗಳಂದು ವಾರ ದೋಷ ಎಂಬ ಕಾರಣಕ್ಕೆ ಶುಭ ಕಾರ್ಯಗಳನ್ನು ಆರಂಭಿಸುವುದಿಲ್ಲ. ಅದೇ ರೀತಿ ಹುಣ್ಣಿಮೆ, ಅಮಾವಾಸ್ಯೆ, ನವಮಿ, ಅಷ್ಟಮಿ, ಪಾಡ್ಯ ತಿಥಿಗಳಂದು, ಆಷಾಢ, ಧನುರ್ಮಾಸ ಹಾಗೂ ಗ್ರಹಗಳ ಅಸ್ತ ಕಾಲದಲ್ಲೂ ಶುಭ ಕಾರ್ಯಾರಂಭ ಮಾಡುವುದಿಲ್ಲ. ಇಲ್ಲಿ ಕೊಟ್ಟಿರುವ ನಕ್ಷತ್ರಗಳ ಪೈಕಿ ನಿಮ್ಮ ಪಾಲಿಗೆ ಸಾಧಕ ತಾರೆ, ಸಂಪತ್ತಾರೆ, ಕ್ಷೇಮ ತಾರೆ, ಪರಮೈತ್ರ ತಾರೆ ಯಾವುದೆಂದು ತಿಳಿದು ಬರೆದಿಟ್ಟುಕೊಂಡು, ಆ ನಕ್ಷತ್ರಗಳು ಇರುವ ದಿನ ಕೆಲಸ ಆರಂಭಿಸಿ. ಒಂದು ವೇಳೆ ಇಲ್ಲಿ ತಿಳಿಸಿದ ನಕ್ಷತ್ರಗಳು ನಿಮ್ಮ ಜನ್ಮ ನಕ್ಷತ್ರದಿಂದ ಎಣಿಸಿದಾಗ ವಿಪತ್ತು, ಪ್ರತ್ಯಕ್ ಅಥವಾ ವಧ ತಾರೆ ಆಗಬಾರದು.
ಅನಿವಾರ್ಯವಾಗಿ ಆ ಕಾರ್ಯ ಮಾಡಲೇಬೇಕಿದ್ದಲ್ಲಿ ವಿಪತ್ತು ತಾರೆ ಆಗಿದ್ದಲ್ಲಿ ಬೆಲ್ಲ, ಪ್ರತ್ಯಕ್ ತಾರೆ ಆಗಿದ್ದಲ್ಲಿ ಉಪ್ಪು ಹಾಗೂ ವಧ ತಾರೆ ಆಗಿದ್ದಲ್ಲಿ ಕರಿ ಎಳ್ಳು ಅಥವಾ ವಸ್ತ್ರ ದಾನ ಮಾಡಿದರೆ ದೋಷ ಪರಿಹಾರ ಆಗುತ್ತದೆ
ಹೊಸ ವಸ್ತ್ರ ಧರಿಸಲು ಅಥವಾ ಖರೀದಿಗೆ ಶುಭ ದಿನಗಳು:
ಬುಧವಾರ, ಗುರುವಾರ, ಶುಕ್ರವಾರ ಶುಭ ತಿಥಿ: ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ ಹಾಗೂ ತ್ರಯೋದಶಿ ಶುಭ ನಕ್ಷತ್ರ: ರೋಹಿಣಿ, ಪುನರ್ವಸು, ಪುಷ್ಯ, ಉತ್ತರ, ಹಸ್ತ, ಚಿತ್ತ, ಸ್ವಾತಿ, ಅನೂರಾಧ, ಉತ್ತರಾಷಾಢ, ಶತಭಿಷಾ, ಉತ್ತರಾಭಾದ್ರ ಹಾಗೂ ರೇವತಿ
ಬೋರ್ ವೆಲ್ ಕೊರೆಸಲು ಶುಭ ದಿನಗಳು
ಸೋಮವಾರ, ಗುರುವಾರ, ಶುಕ್ರವಾರ ಶುಭ ತಿಥಿ: ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ ಹಾಗೂ ತ್ರಯೋದಶಿ (ಕೃಷ್ಣ ಪಕ್ಷದಲ್ಲಿ ಪಂಚಮಿ ದಾಟಬಾರದು) ಶುಭ ನಕ್ಷತ್ರ: ರೋಹಿಣಿ, ಪುಷ್ಯ, ಮಖಾ, ಹಸ್ತ, ಅನೂರಾಧ, ಶ್ರವಣ, ಉತ್ತರಾಭಾದ್ರ, ರೇವತಿ
ಭೂಮಿ ಪೂಜೆ ಮಾಡಿ ಗೃಹ ನಿರ್ಮಾಣ ಆರಂಭ ಶುಭ ದಿನಗಳು:
ಗುರುವಾರ, ಶುಕ್ರವಾರ ಶುಭ ತಿಥಿ: ತದಿಗೆ, ಪಂಚಮಿ, ಸಪ್ತಮಿ, ದಶಮಿ (ಕೃಷ್ಣ ಪಕ್ಷದಲ್ಲಿ ಪಂಚಮಿ ದಾಟ ಬಾರದು) ಶುಭ ನಕ್ಷತ್ರಗಳು: ಅಶ್ವಿನಿ, ರೋಹಿಣಿ, ಮೃಗಶಿರಾ, ಪುಷ್ಯ, ಉತ್ತರ, ಹಸ್ತ, ಚಿತ್ತಾ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರ
ಮಗುವಿನ ಅಕ್ಷರಾಭ್ಯಾಸಕ್ಕೆ ಶುಭ ದಿನಗಳು:
ಸೋಮವಾರ, ಬುಧವಾರ, ಗುರುವಾರ ಶುಭ ತಿಥಿ: ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ (ಕೃಷ್ಣ ಪಕ್ಷದಲ್ಲಿ ಪಂಚಮಿ ದಾಟಬಾರದು) ಶುಭ ನಕ್ಷತ್ರಗಳು: ಅಶ್ವಿನಿ, ಆರಿದ್ರಾ, ಪುನರ್ವಸು, ಹಸ್ತ, ಚಿತ್ತ, ಸ್ವಾತಿ, ಅನೂರಾಧ, ಶ್ರವಣ, ರೇವತಿ
ಈ ದಿನಗಳಲ್ಲಿ ಸಾಲ ಕೊಡುವುದು, ತರುವುದು ಮಾಡಬಾರದು
ಭಾನುವಾರ ಹಾಗೂ ಮಂಗಳವಾರ, ಸಂಕ್ರಮಣ ಸಮಯದಲ್ಲಿ ಅಥವಾ ಚರ್ತುರ್ದಶಿ, ಅಮಾವಾಸ್ಯೆ ತಿಥಿ ಇರುವಾಗ, ಹಸ್ತಾ ನಕ್ಷತ್ರ ಇದ್ದರೆ, ಗ್ರಹಣದ ಸಮಯದಲ್ಲಿ ಸಾಲ ಕೊಡುವುದಾಗಲಿ ಸಾಲ ಮಾಡುವುದಾಗಲಿ ಮಾಡಬಾರದು.
ನೂತನ ವ್ಯಾಪಾರ ಆರಂಭಕ್ಕೆ ಶುಭ ದಿನಗಳು:
ಶುಕ್ರವಾರ, ಸೋಮವಾರ, ಗುರುವಾರ, ಬುಧವಾರ ಶುಭ ತಿಥಿಗಳು: ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ಹಾಗೂ ದಶಮಿ (ಕೃಷ್ಣ ಪಕ್ಷದಲ್ಲಿ ಪಂಚಮಿ ದಾಟಬಾರದು) ಶುಭ ನಕ್ಷತ್ರಗಳು: ಅನೂರಾಧ , ಉತ್ತರಾ, ಪುಷ್ಯ, ರೇವತಿ, ರೋಹಿಣಿ, ಮೃಗಶಿರ, ಹಸ್ತಾ, ಚಿತ್ತಾ, ಅಶ್ವಿನಿ
ಕಿವಿ ಚುಚ್ಚಿಸಲು ಶುಭ ದಿನಗಳು:
ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಶುಭ ತಿಥಿ: ಬಿದಿಗೆ, ತದಿಗೆ, ಪಂಚಮಿ, ಸಪ್ತಮಿ, ದಶಮಿ, ತ್ರಯೋದಶಿ (ಕೃಷ್ಣ ಪಕ್ಷದಲ್ಲಿ ಪಂಚಮಿ ದಾಟಬಾರದು) ಶುಭ ನಕ್ಷತ್ರಗಳು: ಮೃಗಶಿರ, ಆರಿದ್ರಾ, ಪುನರ್ವಸು, ಪುಷ್ಯ, ಉತ್ತರ, ಹಸ್ತಾ, ಚಿತ್ತಾ, ಉತ್ತರಾಷಾಢ, ಶ್ರವಣ, ಧನಿಷ್ಠ, ಉತ್ತರಾಭಾದ್ರ, ರೇವತಿ
ಶುಭ ಕಾರ್ಯಕ್ಕೆ ದ್ವಿಗುಣ ಫಲ
ಗುರುವಾರ ಪುಷ್ಯಮಿ ನಕ್ಷತ್ರ ಬಂದರೆ ಅದನ್ನು ಗುರು-ಪುಷ್ಯ ಯೋಗದ ದಿನ ಎಂದು ಶಾಸ್ತ್ರ ತಿಳಿಸುತ್ತದೆ. ಈ ದಿನ ಮಾಡಿದ ಶುಭ ಕಾರ್ಯಗಳಿಗೆ ಉತ್ತಮ ಫಲ ಲಭಿಸುವುದು ಒಂದು ಕಡೆಯಾದರೆ, ದೈವೀ ಕಾರ್ಯಗಳನ್ನು ಮಾಡಿದರೆ ದ್ವಿಗುಣ ಪುಣ್ಯ ಲಭಿಸುತ್ತದೆ.
*****
No comments:
Post a Comment