SEARCH HERE

Tuesday 1 January 2019

ವೇದ ಬಹಳಷ್ಟು ಆಚರಣೆಗಳು ವೇದ ವಿರುದ್ಧವಾಗಿವೆ customs which are against veda


{ವೇದಧರ್ಮ ಮಾತ್ರ ಎಲ್ಲರನ್ನು ಮನುಷ್ಯರಾಗಿರೆಂದರೇ(ಋಗ್ವೇದ-10-53-6), ಮಿಕ್ಕೆಲ್ಲಾ ಮತಗಳು ನಾನಾ ಹೆಸರಿನಿಂದ ಮಾನವರನ್ನು ಬೇರೆ-ಬೇರೆ ಮಾಡುತ್ತದೆ}
 ಪುರಾಣದಲ್ಲಿ ವರ್ಣಿಸಿರುವ ಹರಿ-ಹರ-ಬ್ರಹ್ಮ-ಲಕ್ಷ್ಮೀ-ಪಾರ್ವತೀ- ಮತ್ಸ್ಯ –ಕೂರ್ಮ ಇತ್ಯಾದಿ ಅವತಾರಗಳು ಏಕದೇಶೀಯ-ಸಾಕಾರವಾದ್ದರಿಂದ ಇವುಗಳ ವಿಗ್ರಹ ಮಾಡಲು ಸಾಧ್ಯ. (ವೇದಗಳಲ್ಲಿ ಇವುಗಳ ಆಕಾರ ವರ್ಣನೆಯಿಲ್ಲ)ಈ ವಿಗ್ರಹ ಗಳಿಗೆ ರೂಪ-ವೇಷ-ವಾಹನ-ಹೆಂಡತಿ-ಮಕ್ಕಳು ಇತ್ಯಾದಿ ಮನುಷ್ಯೋಚಿತ ಗುಣಗಳೂ, ಈರ್ಷ್ಯಾದ್ವೇಷಾದಿ ಗುಣಗಳಿ ರುವುದರಿಂದ ಇವುಗಳ ಉಪಾಸನೆ ವೇದವಿರುದ್ದವಾಗಿದೆ.
 ವೇದದಲ್ಲಿ ಹೇಳಿರುವ ಮಾನವೀಯ ಗುಣಗಳನ್ನು ಹೊಂದಿರುವವರು ಏನು ಮಾಡುತ್ತಾರೆ—ಏನು ಮಾಡಬೇಕು:-ನೋಡಿ-  [ ಋಗ್ವೇದ-10-134-7.] ಅರ್ಥ;-“ ವೇದ ಜ್ಞಾನದಿಂದ ಶುಭ ಗುಣ ಪಡೆದವರು, ಜಾಗರೂಕರೂ ಆದ ನಾವು- ಯಾರನ್ನು ಹಿಂಸಿಸುವುದಿಲ್ಲ, -ಒಂದುಗೂಡಿದ ಜನಸಮೂದಾಯವನ್ನು ಒಡೆಯುವುದಿಲ್ಲ. ವೇದಮಂತ್ರಗಳಲ್ಲಿ ನಾವು ಆಲಿಸಿದ ಜ್ಞಾನವನ್ನು ಕಾರ್ಯರೂಪಕ್ಕೆ ತರುತ್ತೇವೆ. ಸಮಾಜವು ಬಿಟ್ಟುಹೋಗಿರುವರನ್ನೂ – ತಿರಸ್ಕರಿಸಿರುವವರನ್ನೂ ಸೇರಿಸಿಕೊಂಡು ಎಲ್ಲೆಡೆಯಿಂದಲೂ ಕಾರ್ಯೋನ್ಮುಕರಾಗುತ್ತೇವೆ.”

 [ಅಥರ್ವ-7-105-1]“ಓ ಮಾನವ ಮಾನವಿ ವಾಣಿಯನ್ನು ಬದಿಗೆ ಸರಿಸುತ್ತಾ,  ಈಶ್ವರೀ ವಾಣಿ(ವೇದ) ಯನ್ನು ಸ್ವೀಕರಿಸುತ್ತಾ ನಿನ್ನ ಮಿತ್ರರೇ ಆಗಿರುವ ಸಮಸ್ತ ಜೀವರೊಂದಿಗೆ ಉತ್ತಮ ನೀತಿಯನ್ನು ಎಲ್ಲಡೆಯಿಂದಲೂ ವ್ಯವಹರಿಸು”.

 [ಯಜುರ್ವೇದ—32—6] ಅರ್ಥ:-“ಯಾರು ಈ ಕಂಪಾಯಮಾನ  ಭೂಮಿ,ಸೂರ್ಯ, ನಕ್ಷತ್ರಾದಿಗಳನ್ನು ದೃಡಪಡಿಸಿದ್ದಾನೋ(ಹಿಡಿದ್ದಿಟ್ಟಿದ್ದಾನೋ), ಯಾರು ಅಂತರಿಕ್ಷದ ಮದ್ಯೆಯಲ್ಲಿ ಅನ್ನ, ಆಹಾರಾದಿ ಗಳಿಂದ ನಮಗೆ ಸುಖಮಯವಾದ ಲೋಖವನ್ನು ಉಂಟುಮಾಡಿದ್ದಾನೋ, ಗ್ರಹೋಪಗ್ರಹಗಳನ್ನು ಆಕಾಶದಲ್ಲಿ ತೇಲುವಂತೆ ಮಾಡಿ ವಿಶೇಷ ಗೌರವಕ್ಕೆ ಪಾತ್ರನಾಗಿದ್ದಾನೋ, ಆ ವಿಶ್ವಚೇತನ ಪರಮಾತ್ಮನಿಗೆ ಶುಭಗುಣಗಳೊಂದಿಗೆ  ನನ್ನ ಆತ್ಮ ಸಮರ್ಪಣೆ ಮಾಡಿಕೊಳ್ಳುತ್ತೇನೆ”.
 ಜಗತ್ತನ್ನು ಎತ್ತಿ ಹಿಡಿದು, ಪಾಲನೇ- ಪೋಷಣೆ ಮಾಡುತ್ತಿರುವ ಪರಮಾತ್ಮನ ವಿಷಯದಲ್ಲಿ ಸ್ಪಷ್ಟ ನಿರ್ಣಯವಾಗದೇ, ಯಾವುದೇ ಧರ್ಮ ವ್ಯಾಖ್ಯಾನ ವ್ಯರ್ಥ.

 {ಯಜುರ್ವೇದ-1-5, = “ಹೇ ವ್ರತಗಳ ಪಾಲಕನಾದ ಪರಮಾತ್ಮನೇ, ನಾನು ಅಸತ್ಯದಿಂದ ಸರಿದು ಸತ್ಯದ ಗ್ರಹಣವನ್ನು ಮಾಡುವ ವ್ರತವನ್ನು ಕೈಗೊಂಡಿರುವೆನು, ಈ ವ್ರತವನ್ನು ಸಿದ್ಧಿಮಾಡಿಕೊಳ್ಳುವಂತಹ ಸಾಮರ್ಥ್ಯವನ್ನು ನೀಡು.” ಅಂದರೇ, ನಾನು ನನ್ನ ವ್ರತದಂತೆ ಹೃದಯಪೂರ್ವಕವಾಗಿ ನಡೆದುಕೊಳ್ಳುತ್ತೇನೆಂದರ್ಥ.} [ವ್ರತ ಶಬ್ದದ ಧಾತು “ವೃತು= ವರ್ತನೇ” ಎಂದಾಗಿದೆ. ಸತ್ಕರ್ಮಗಳ ನಿರಂತರ ಅಭ್ಯಾಸವೇ ವ್ರತ, ವ್ರತದಿಂದ ಯಾವ ವರ್ತನೆಗಳು ನಮ್ಮಲ್ಲಾಗುತ್ತವೋ ಅವುಗಳೇ ವ್ರತದ ಫಲವಾಗಿದೆ. ಕೆಲವು ಘಂಟೆಗಳ ಕಾಲ- ಕೆಲವು ದಿನ ಅಥವಾ ಕೆಲವು ತಿಂಗಳಕಾಲ ಮಾಡುವ ಕಾರ್ಯ- ಅಭ್ಯಾಸ ವ್ರತವಲ್ಲ, ಯಾವ ಅಭ್ಯಾಸದಿಂದ ಜೀವನಪರ್ಯಂತದ (ನಿರಂತರ) ವರ್ತನೇ ನಮ್ಮಲ್ಲುಂಟು ಮಾಡುತ್ತದೋ ಅದು ವ್ರತ.] ( ವೇದವು ಹೇಳುವ ವ್ರತಗಳಾವುದೆಂದರೇ, {ಅಹಿಂಸೆ= ಯಾರಿಗೂ ಹಿಂಸೆ ಮಾಡದಿರುವುದು.} {ಸತ್ಯಾಚರಣೆ= ಇರುವುದನ್ನು ಇರುವಂತೆಯೇ ತಿಳಿದು ವ್ಯವಹರಿಸುವುದು.} {ಆಸ್ತೇಯ= ಬೇರೊಬ್ಬರಿಗೆ ಸೇರಿದ ಏನನ್ನು ಅಪಹರಿಸದಿರುವುದು.} {ಬ್ರಹ್ಮಚರ್ಯ= ಜ್ಞಾನ- ಶಕ್ತಿ ಪ್ರಾಪ್ತಿಗಾಗಿ ಇಂದ್ರಿಯ ನಿಗ್ರಹ.} {ಅಪರೀಗ್ರಹ= ಅವಶ್ಯಕತೆಗಿಂತ ಹೆಚ್ಚಿನ ಶೇಖರಣೆ ಮಾಡದಿರುವುದು.} {ಶೌಚ= ಶರೀರದ ಒಳಗಿನ- ಹೊರಗಿನ ಸ್ವಚ್ಛತೆ ಕಾಪಾಡಿಕೊಳ್ಳುವುದು.} {ಸಂತೋಷ= ಸಂಪೂರ್ಣ ಪುರುಷಾರ್ಥದ ನಂತರ ಏನು ಸಿಗುತ್ತದೋ ಅದರಲ್ಲಿ ತೃಪ್ತಿಯಿಂದಿರುವುದು.} {ತಪಃ= ಶೀತ- ಉಷ್ಣ- ಸುಖ- ದುಖಃ- ಸ್ಥಾನ- ಮಾನಗಳಲ್ಲಿ ಒಂದೇ ರೀತಿಯಲ್ಲಿರುವುದು.} {ಸ್ವಾಧ್ಯಾಯ= ಪ್ರತಿನಿತ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು.} {ಈಶ್ವರ ಪ್ರಣೀಧಾನ= ಎಲ್ಲಾ ಕಾರ್ಯಗಳನ್ನು ಪರಮಾತ್ಮನಿಗೆ ಅರ್ಪಿಸುವ ದೃಷ್ಟಿಯಿಂದ ಮಾಡುವುದು.} ಈಗ ನಾವು ವೇದದ ಹೆಸರಲ್ಲಿ ಮಾಡುತ್ತಿರುವ “ಸಿದ್ಧಿ ವಿನಾಯಕ ವ್ರತ- ಸ್ವರ್ಣಗೌರಿ ವ್ರತ- ಲಕ್ಷ್ಮಿ ವ್ರತ- ಸತ್ಯನಾರಾಯಣ ವ್ರತಗಳು ವ್ರತಗಳಲ್ಲ ಮತ್ತು ವೇದ ವಿರುದ್ದವೂ ಆಗಿದೆ. ಇವುಗಳಿಂದ ಸಮಾಜಕ್ಕೆ ಯಾವ ಲಾಭವೂ ಇಲ್ಲವಾಗಿದೆ.

 [ಅಥರ್ವ-8-1-4] “ಓ ಜೀವನೇ ಸಾವಿನ ಭಯವನ್ನು ಕಳಚಿಹಾಕಿ, ಈಗಿರುವ ಮಟ್ಟದಿಂದ ಮೇಲಕ್ಕೆರು. ದುಖಃದಲ್ಲಿ ಹರ್ಷವನ್ನು ಹರಡು, ಅನ್ಯರಲ್ಲಿ ಸ್ಪೂರ್ತಿ ತುಂಬಿಸು”

 {“ಅಜ ಏಕಪಾತ್”- ಯಜು-34-35} {“ಸ ಪರ್ಯಗಾಚ್ಛುಕ್ರಮಕಾಯಂ”-ಯಜು-40-8} ಈ ಮೊದಲಾದ ವೇದ ವಚನ ದಿಂದ ಪರಮಾತ್ಮನು ಜನ್ಮವೆತ್ತುವುದಿಲ್ಲವೆಂದು ಸಿದ್ದವಾಗುತ್ತದೆ.

 ಅವತರಣಿಕೆಯೆಂದರೇ, ಇಳಿಯುವವುದೆಂದರ್ಥ. ಮೇಲಿದ್ದು, ಕೆಳಗಿಲ್ಲದಿದ್ದಲ್ಲಿ ಇಳಿಯಬಹುದು, ಎಲ್ಲಡೆಯಿದ್ದಲ್ಲಿ ಇಳಿಯುವುದಕ್ಕೆ ಅರ್ಥವಿಲ್ಲ, ಹಾಗೆಯೇ, ಸರ್ವವ್ಯಾಪಕನಾಗಿದ್ದಲ್ಲಿ ಮಾತ್ರ- ಸರ್ವಜ್ಞ- ಸರ್ವಾಂತರ್ಯಾಮಿ ಆಗಿರಲು ಸಾಧ್ಯ. ಹೀಗಿದ್ದಲ್ಲಿ ಮಾತ್ರ, ಸರ್ವಶಕ್ತಿವಂತನಾಗಿ, ಸೃಷ್ಟಿ- ಸ್ಥಿತಿ- ಲಯಾದಿ ಕಾರ್ಯಗಳನ್ನು ಸ್ವತಃ ಮಾಡಬಲ್ಲ.

 [ ಋಗ್ವೇದ- 3-8-9= “ಹಂಸಾ ಇವ ಶ್ರೇಣಿಶೋ ಯಾತಾನಾಃ ಶುಕ್ರಾ ವಸಾನಾಃ ಸ್ವರವೋ…..” = ಸಜ್ಜನರೂ- ಜ್ಞಾನಿಗಳೂ, ಹಂಸಗಳ ಹಾಗೆ ಶ್ರೇಣಿಬದ್ಧವಾಗಿ ಸಾಮಾಜಿಕ ಪ್ರಯತ್ನ ಪಡುತ್ತಾ, ಶುಭ್ರವಾದ- ನಿರ್ಮಲವಾದ ಜೀವನ ನಡೆಸುತ್ತಾ, ಪ್ರೇಮಪೂರ್ವಕವಾಗಿ ಮಾತನಾಡುತ್ತಾ- ವ್ಯವಹರಿಸುತ್ತಾ ನಡೆಯುತ್ತಾರೆ. ] ವಿಶ್ವಚೇತನನ ಈ ರಚನೆಯು ಅತ್ಯಂತ ವೈಜ್ಞಾನಿಕವಾಗಿಯೂ- ವ್ಯವಸ್ಥಿತವಾಗಿಯೂ- ಅತ್ಯಂತ ಸುಂದರವಾಗಿಯೂ- ವೈಭವವಾಗಿಯೂ ರಚನೆಯಾಗಿದೆ. ನಾವು ಹಾಗೆಯೇ, ಸಾಮಾಜಿಕವಾಗಿ- ಕ್ರಮವಾಗಿ- ಶಿಸ್ತಿನಿಂದ ವ್ಯವಹರಿಸುತ್ತಾ, ಪರಮಾತ್ಮನ ಸೃಷ್ಟಿಯ ರಚನಾ ಅನುಸಾರ ನಡೆದಲ್ಲಿ, ಈ ಭೂಮಿಯು ಶಾಂತಿ- ನೆಮ್ಮದಿಯ ತಾಣವಾಗುತ್ತದೆ.

 [ಅಥರ್ವವೇದ-8-2-25] ಅರ್ಥ:-(ಎಲ್ಲಿ ವೇದಜ್ಞಾನವು ಅನುಕೂಲವಾದ ರೀತಿಯಲ್ಲಿ ಜೀವನದ ಸುತ್ತುಗಟ್ಟಾಗಿ ಮಾಡಲ್ಪಡುತ್ತದೋ, ಅಲ್ಲಿ ಮಾನವರೂ, ಗೋವು, ಅಶ್ವ ಇತರ ಜೀವರಾಶಿಗಳು ನಿಜವಾದ ಅರ್ಥದಲ್ಲಿ ಜೀವಿಸುತ್ತವೆ).
ಭಾರತೀಯ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ, 7 ರಲ್ಲಿ- ಕಾಡು, ವನ್ಯ ಜೀವಿಗಳು, ನದಿಗಳು ಸೇರಿದಂತೆ ಪರಿಸರವನ್ನು ಉಳಿಸಿ, ಪ್ರಕೃತಿಯನ್ನು ಸಂರಕ್ಷಿಸುವುದು. 8 ರಂತೆ- ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದು, ಪ್ರಶ್ನೆ ಮಾಡುವ- ಉತ್ತಮ ಬದಲಾವಣೆಗೆ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳುವುದು. 9 ರಂತೆ- ಸಾರ್ವಜನಿಕ ಸ್ವತ್ತನ್ನು ಕಾಪಾಡುವುದು, ಹಿಂಸೆಯನ್ನು ತೊರೆಯುವುದು. 10 ರಂತೆ- ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಮೂಹಿಕವಾಗಿ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸಿ, ಆ ಮೂಲಕ ದೇಶದ ಪ್ರಗತಿಗಾಗಿ ಪ್ರಯತ್ನಿಸುವುದು. ಇತ್ಯಾದಿಗಳು. [ ವೇದಸಂಹಿತೆಗಳು ಇಂತಹ ಆಚರಣೆಗಳನ್ನೇ, ಪರಮಾತ್ಮನ ವಿಶಾಲ ರಚನೆಯ ಪೂಜೆಯೆಂದು ಹೇಳುತ್ತದೆ. ಈಗ ನಾವುಗಳು ಪೂಜೆ ಹೆಸರಿನಲ್ಲಿ ಮಾಡುತ್ತಿರುವ ಬಹಳಷ್ಟು ಆಚರಣೆಗಳು ವೇದ ವಿರುದ್ಧವಾಗಿವೆ.
*******


No comments:

Post a Comment