SEARCH HERE

Friday, 9 April 2021

ಮನಸ್ಸಾಕ್ಷಿ mana saakshi

ನೀವು ಗುಟ್ಟಾಗಿ ಯಾವ ಕೆಲಸ ಮಾಡಿದ್ರು ಈ 18 ಮಂದಿ ಸಾಕ್ಷಿಯಾಗಿ ನೋಡುತ್ತಿರುತ್ತಾರೆ,ಯಾರ್ ಆ 18 ಮಂದಿ ಗೊತ್ತಾ

ನಾವು ಮಾಡುತ್ತಿರುವ ಕೆಲಸಗಳನ್ನು ಹದಿನೆಂಟು ಮಂದಿ ಸಾಕ್ಷಿಯಾಗಿ ನೋಡುತ್ತಿರುತ್ತಾರೆ.ಎಂದು ನಿಮಗೆ ಗೊತ್ತಾ ?ಯಾರು ಆ 18 ಜನ ?
ನಾವು ಮಾಡುವ ಕರ್ಮಗಳಾದರೂ, ಎಂತಹ ಕೆಲಸವಾದರೂ ಸರಿ ನಮ್ಮನ್ನು ಯಾರೂ ನೋಡುತ್ತಿಲ್ಲ ಎಂದು ಅಂದುಕೊಳ್ಳುತ್ತೇವೆ. ಆದರೆ ನಿಮಗೆ ಒಂದು ವಿಷಯ ಗೊತ್ತೇ ? ನಮ್ಮ ಕರ್ಮಗಳನ್ನು ಹದಿನೆಂಟು ಮಂದಿ ಸಾಕ್ಷಿಯಾಗಿ ನೋಡುತ್ತಿರುತ್ತಾರೆ. ಸುತ್ತಮುತ್ತಲು ಯಾರು ಇಲ್ಲವೆಂದು ತಪ್ಪು ಕೆಲಸವನ್ನು ಮಾಡುವುದು ನಮ್ಮ ಬಲಹೀನತೆ. ಆದರೆ ನಾನು ಒಬ್ಬನೇ ಇದ್ದೇನೆ. ನನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದು ಮನುಷ್ಯ ಅಂದುಕೊಳ್ಳುವುದು ತುಂಬಾ ತಪ್ಪಾಗುತ್ತದೆ.

ಮನುಷ್ಯನು ಯಾವ ಕೆಲಸ ಮಾಡುತ್ತಿದ್ದರು, ನಿಶ್ಯಬ್ದವಾಗಿ ಗಮನಿಸುವುದು ಮೂಕ ಸಾಕ್ಷಿಗಳು. ಆ 18 ಸಾಕ್ಷಿಗಳು ಇರುತ್ತವೆ. ಅದು 
ನಾಲ್ಕು ವೇದಗಳು, 
ಪಂಚಭೂತಗಳು, 
ಮನಸ್ಸಾಕ್ಷಿ, 
ಧರ್ಮ, 
ಯಮನು, 
ಉದಯ ಸಂಧ್ಯಗಳು, 
ಸೂರ್ಯ, 
ಚಂದ್ರ, 
ಬೆಳಕು,
ಕತ್ತಲು, 
ಇವುಗಳನ್ನು ಅಷ್ಟ ದಶ ಮಹಾ ಪದಾರ್ಥಗಳು ಎನ್ನುತ್ತಾರೆ. ಈ ಮೂಕ ಸಾಕ್ಷಿಗಳು ಮನುಷ್ಯನನ್ನು ಪ್ರತಿಕ್ಷಣ ನೆರಳಾಗಿ ನೋಡುತ್ತಾ ಇರುತ್ತಾರೆ. ಇವು ಈ ಲೋಕದಲ್ಲಿ ನ್ಯಾಯ ಸ್ಥಾನದಲ್ಲಿ ಸಾಕ್ಷಿ ಹೇಳುತ್ತವೆ.ಇವುಗಳ ಗಮನದಿಂದ ಮನುಷ್ಯನು ತಪ್ಪಿಸಿಕೊಳ್ಳುವುದು ಅಸಾಧ್ಯ.

ಇವುಗಳನ್ನು ಗುರುತಿಸದ ಮಟ್ಟಿ ಗಮಣಿಸದ ಕಾರಣಗಳಿಂದಲೇ ಇವುಗಳನ್ನು ನಿರ್ಜೀವ ವಸ್ತುಗಳು ಇವುಗಳಿಗೆ ಸಾಕ್ಷಿ ಹೇಳಲು ಬಾಯಿ ಇಲ್ಲವೆಂದು ಮಾನವನು ಭ್ರಮೆಯಲ್ಲಿ ಇರುತ್ತಾನೆ. ಈ ಮಹಾ ಪದಾರ್ಥಗಳ ರಹಸ್ಯ ಯಂತ್ರ ಅಂತಹದು. ಇವು ಮನುಷ್ಯನ ಪ್ರತಿಕ್ರಿಯೆಯನ್ನು ನಮೂದನೆ ಮಾಡುತ್ತವೆ. ಈ ನಮೂನೆಗಳನ್ನು ನಿಧಿಗೆ ಹೇಳುತ್ತವೆ. ಇವು ಮತ್ತೆ ಕರ್ಮಗಳಾಗಿ ಬದಲಾಗುತ್ತದೆ.

ಮನುಷ್ಯನು ಮಾಡುವ ಕೆಲಸಗಳು ಒಳ್ಳೆಯದಾದರೆ ಸತ್ಕರ್ಮವಾಗಿ ಕೆಟ್ಟ ಕೆಲಸಗಳು ಆದರೆ ದುಷ್ಟ ಕರ್ಮಗಳಾಗಿ ನೀತಿ ನಿರ್ಣಯಿಸುತ್ತದೆ. ಸತ್ಕರ್ಮಗಳಿಗೆ ಸತ್ಕಾರಗಳು ದುಷ್ಟ ಕರ್ಮಗಳಿಗೆ ಕೆಟ್ಟ ಮಾನಗಳು ಸಿಗುತ್ತವೆ.ಇದು ಯಾವ ಜನ್ಮಗಳಿಗೂ ವರ್ಗಾವಣೆಯಾಗುವುದಿಲ್ಲ. ಈ ಜನ್ಮದಲ್ಲಿಯೇ ಅನುಭವಿಸಬೇಕಾಗುತ್ತದೆ. ಇದು ನಿರಂತರವಾಗಿ ಸೃಷ್ಟಿಯ ಪರಿಣಾಮ ಕ್ರಿಯೆ.

ಮನಸ್ಸಾಕ್ಷಿ ಎನ್ನುವುದು ಒಂದು ಇರುತ್ತದೆ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಅದು ನಾವು ಮಾಡುವ ಕೆಲಸಗಳು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ಆಗಲೇ ಹೇಳುತ್ತಾ ಇರುತ್ತದೆ. ಆದರೆ ಆವೇಶ ಕೋಪದಿಂದ ಹತೋಟಿಯನ್ನು ತಪ್ಪಿದ ಬುದ್ಧಿ ಸಲಹೆಗಳನ್ನು ತೆಗೆದುಕೊಳ್ಳುವುದಿಲ್ಲ. ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.ಒಂದೊಂದು ಬಾರಿ ನಾವು ತಪ್ಪು ಮಾಡಿದಾಗ ನಮ್ಮ ಮನಸ್ಸಾಕ್ಷಿ ನಮ್ಮನ್ನು ಪ್ರಶ್ನಿಸುತ್ತದೆ. ಆಗ ನಾವು ನಾಚಿಕೆಯಿಂದ ತಲೆ ತಗ್ಗಿಸುತ್ತೇವೆ. ಆದರೆ ಇದನ್ನೇ ನಾವು ಯಾರ ಹತ್ತಿರವೂ ಸಹ ಹೇಳಿಕೊಳ್ಳುವುದಿಲ್ಲ. ಆದ್ದರಿಂದ ನಮ್ಮ ಮನಸ್ಸಾಕ್ಷಿ ಅನುಭವವಾಗಿ ನಿಜವಾದ ಮಿಕ್ಕ 17 ಸಾಕ್ಷಿಗಳು ಸಹ ನಿಜಗಳೆಂದು ಗ್ರಹಿಸುವುದು ವಿವೇಕ.

ನಾಲ್ಕು ಜನರಿಗೆ ತಿಳಿಯುವ ಹಾಗೆ ದಾನ, ಧರ್ಮಗಳು, ವ್ರತಗಳು ಮತ್ತು ಪೂಜೆಗಳನ್ನು ನಿರ್ವಹಿಸಬೇಕು ಎನ್ನುವ ಕುತೂಹಲ ಅ ವಿವೇಕ ಅಷ್ಟದಶ ಸಾಕ್ಷಿಗಳು ಯಾವಾಗಲೂ ನಮ್ಮನ್ನು ಗಮನಿಸುತ್ತಾ ಇರುತ್ತದೆ. ಆದ್ದರಿಂದ ಇದನ್ನು ತಿಳಿದುಕೊಂಡ ವ್ಯಕ್ತಿ ಯಾವ ತಪ್ಪುಗಳನ್ನು ಮಾಡಲು ಸಾಹಸ ಮಾಡುವುದಿಲ್ಲ. ಜ್ಞಾನದಿಂದ ಮನುಷ್ಯ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಯತ್ನ ಮಾಡುತ್ತಾ ಸುಖ ಶಾಂತಿಯಿಂದ ಜೀವನವನ್ನು ನಡೆಸಬೇಕು.
*****

No comments:

Post a Comment