ಸಾಷ್ಟಾಂಗ ನಮಸ್ಕಾರ ಎಂದರೆ ಕಾಯಾ, ವಾಚಾ ಮತ್ತು ಮನಸಾ ದೇವತೆಗಳಲ್ಲಿ ಶರಣಾಗಿ ಆತ್ಮಶಕ್ತಿಯನ್ನು ಜಾಗೃತಗೊಳಿಸಿ, ಸ್ಥೂಲದೇಹ ಮತ್ತು ಸೂಕ್ಷ ¾ದೇಹಗಳನ್ನು ಸಂಪೂರ್ಣವಾಗಿ ಶುದ್ಧ ಮಾಡುವುದು.
ಉರಸಾ ಶಿರಸಾದೃಷ್ಟಾ ಮನಸಾ ವಚಸಾ ತಥಾ ||
ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಾಣಮೋಟಿಷ್ಟಾಂಗಮುಚ್ಯತೆ |
ಮೇಲಿನ ಶ್ಲೋಕೊಕ್ತಿಯಂತೆ,
ಎದೆ (1) , ತಲೆ (2), ದೃಷ್ಟಿ (ಕಣ್ಣುಗಳಿಂದ ನಮಸ್ಕಾರ ಮಾಡುವುದು) (3), ಮನಸ್ಸು (ಮನಸ್ಸಿನಿಂದ ನಮಸ್ಕಾರ ಮಾಡುವುದು) (4), ವಾಚಾ (ಬಾಯಿಂದ ನಮಸ್ಕಾರ ಎಂದು ಹೇಳುವುದು) (5), ಕಾಲು (6), ಕೈ (7) ಮತ್ತು ಮೊಣಕಾಲುಗಳನ್ನು (8) ಭೂಮಿಗೆ ತಗುಲಿಸಿ ನಮಸ್ಕಾರ ಮಾಡುವುದು ಎಂದರೆ ಸಾಷ್ಟಾಂಗ ನಮಸ್ಕಾರ ಮಾಡುವುದು.
ಈ ರೀತಿಯಲ್ಲಿ ಮಾಡುವ ನಮಸ್ಕಾರಕ್ಕೆ ಧಿವತ್ ನಮಸ್ಕಾರವೆಂದು ಹೇಳುತ್ತಾರೆ. ಈ ರೀತಿ ಮಾಡುವ ಸಾಷ್ಟಾಂಗ ನಮಸ್ಕಾರದಿಂದ ಆತ್ಮಶಕ್ತಿಯು ಜಾಗೃತವಾಗಿ ಸಂಪೂರ್ಣ ಸ್ಥೂಲದೇಹ ಮತ್ತು ಸೂಕ್ಷ ¾ದೇಹಗಳ ಶುದ್ಧೀಕರಣವಾಗುತ್ತದೆ.
***
*ಸಾಷ್ಟಾಂಗ ನಮಸ್ಕಾರ* - by narahari sumadhwa
ಆಚಾರ್ಯ ಮಧ್ವರು ಬಾಲಕ ವಾಸುದೇವನಾಗಿದ್ದಾಗ ರಜತಪೀಠದ ಅನಂತಾಸನನನ್ನು ನಮಸ್ಕರಿಸುತ್ತಿದ್ದ ರೀತಿಯನ್ನು ಸುಕೃತಾ ಹರಿನಮಸ್ಕೃತಯ ಎಂದಿದ್ದಾರೆ (ಸುಮಧ್ವವಿಜಯ 3.6)
*ಸುಕೃತಾ ಹರಿನಮಸ್ಕೃತಯ:* - ಇಲ್ಲಿ ನಮಸ್ಕಾರ ಚೆನ್ನಾಗಿ ಮಾಡುವುದು ಅಂದರೆ ಏನು ?
*ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ* |
*ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಾಮೋSಷ್ಟಾಂಗ ಈರಿತ :* ||
ನಮಸ್ಕಾರ ಮಾಡುವಾಗ ದೇವರ ಪ್ರತೀಕದ ಎದುರು ಬಲಭಾಗದಲ್ಲಿ ನಿಂತು ಶೇಷಶಾಯಿಯನ್ನು ಸ್ಮರಿಸುತ್ತಾ , ಮನಸ್ಸಿನಿಂದ ಏಕಾಗ್ರತೆಯಿಂದ ಪರಮಾತ್ಮನ ಮೂಲರೂಪಕ್ಕೂ ಅದರ ಪ್ರತೀಕಕ್ಕೂ , ನಮ್ಮ ಹೃದಯದಲ್ಲಿ ಇರತಕ್ಕಂತಹ ದೇವರಿಗೂ ಐಕ್ಯ ಚಿಂತನೆ ಮಾಡಿ, ಮಂತ್ರೋಚ್ಛಾರಣೆ ಸಹಿತ, ಕೈಗಳನ್ನು ಮೇಲೆತ್ತಿ, ಬಲಗಾಲು ಮುಂದಿಟ್ಟು, ಎಡಗಾಲು ಮಂಡಿಯೂರಿ, ನಂತರ ಬಲಮಂಡಿಯೂರಿ ಕಾಲುಗಳನ್ನು ಹಿಂದಕ್ಕೂ, ಕೈಗಳನ್ನು ಮುಂದಕ್ಕೂ ಚಾಚಿ ಪ್ರತೀಕವನ್ನು ನೋಡುತ್ತಾ, ಗುಹ್ಯಪ್ರದೇಶವು ಭೂಸ್ಪರ್ಶ ಆಗದ ಹಾಗೆ , ಎರಡು ಕೈಗಳು, ಕಾಲ್ಗಳು, ಶಿರಸ್ಸು, ಉರಸ್ಸೆಂಬ ಎದೆ, ಎರಡೂ ತೋಳುಗಳನ್ನೂ ಭೂಸ್ಪರ್ಶ ಮಾಡಿ ಅನಂತರ ಕೈಗಳನ್ನು ಹಿಂದಕ್ಕೆ ತೆಗೆದು, ಬಲಮಂಡಿಯನ್ನು ಮೊದಲು ಭೂಸ್ಪರ್ಶವಿಲ್ಲದಂತೆ ಮಾಡಿ, ಮೇಲಕ್ಕೆದ್ದು ಬಲಗಾಲನ್ನು ಹಿಂದಕ್ಕೆ ತೆಗೆದು, ಉರಕ್ಕೆ ಎದುರಾಗಿ ಕೈಮುಗಿದು ಶಿರದ ಮೇಲೆ ಮತ್ತೆ ಕೈಜೋಡಿಸಿ ಮಾಡಿದ ನಮಸ್ಕಾರ.
ಈ ರೀತಿ ಬಾಲಕ ವಾಸುದೇವನು, ನಮಸ್ಕಾರ ಮಾಡುತ್ತಿದ್ದನು.
ಇಲ್ಲಿ ವ್ಯಾಖ್ಯಾನ ಮಾಡುತ್ತಾ ಪ್ರಾತ: ಸ್ಮರಣೀಯ ಶ್ರೀ ವಿಶ್ವನಂದನ ತೀರ್ಥರು ನಮಸ್ಕಾರವನ್ನು ಹೇಗೆ ಮಾಡಿದರೆ ಅದು ಅಶ್ವಮೇಧ ಯಾಗದ ಫಲಕ್ಕಿಂತಲೂ ಶ್ರೇಷ್ಠ ಎಂದು ವಿವರಿಸಿದ್ದಾರೆ.
ಸಂಗ್ರಹ : ನರಹರಿ ಸುಮಧ್ವ
***
ನಮಸ್ಕಾರಗಳಲ್ಲಿ ಸಾಷ್ಟಾಂಗ ನಮಸ್ಕಾರ ಕೂಡ ಒಂದಾಗಿದ್ದು, ಈ ಸಮಯದಲ್ಲಿ ದೇಹದ ಎಲ್ಲಾ ಅಂಗಗಳು ಭೂಮಿಯನ್ನು ಸ್ಪರ್ಶಿಸುತ್ತವೆ. ಇದನ್ನು ದಂಡಾಕಾರ ನಮಸ್ಕಾರ ಮತ್ತು ಉದ್ಧಂಡ ನಮಸ್ಕಾರ ಎಂದೂ ಕರೆಯಲಾಗುತ್ತದೆ. ಇದರ ಸಂಪೂರ್ಣ ಅರ್ಥವೆಂದರೆ ದಂಡ ಎಂದರೆ ಕೋಲನ್ನು ಸೂಚಿಸುತ್ತಿದ್ದು ಉದ್ಧಂಡ ನಮಸ್ಕಾರ ಮಾಡುವುದೆಂದರೆ ನಿಮ್ಮ ದೇಹವನ್ನು ಕೋಲಿನಂತೆ ದೃಢಗೊಳಿಸಿ ದೇವರಿಗೆ ನಮಸ್ಕರಿಸುವುದು ಎಂದಾಗಿದೆ.
ನನ್ನ ಸಂಪೂರ್ಣವನ್ನೂ ನಿನಗೆ ಒಪ್ಪಿಸುತ್ತಿದ್ದೇನೆ, ಇಲ್ಲವೇ ದೇವರೇ ನಿನಗೆ ನಾನು ಶರಣಾಗತಿಯಾಗುತ್ತಿದ್ದೇನೆ ಎಂಬುದು ಈ ಸಾಷ್ಟಾಂಗ ನಮಸ್ಕಾರದ ಅರ್ಥವಾಗಿದೆ. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಈ ರೀತಿಯ ನಮಸ್ಕಾರವನ್ನು ನಮ್ಮ ಅಹಂಕಾರವನ್ನು ದೇವರಿಗೆ ಒಪ್ಪಿಸಿಕೊಂಡು ಸರ್ವವೇ ನೀವೇ ಎಂಬ ಶರಣಾಗತಿಯ ಭಾವವಾಗಿದೆ.
ನಾವು ನಿಂತುಕೊಂಡು ನಮಸ್ಕರಿಸುವಾಗ ಇಲ್ಲವೇ ಕುಳಿತು ನಮಸ್ಕರಿಸುವಾಗ ದೇಹಕ್ಕೆ ಗಾಯ ಇಲ್ಲವೇ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಸಾಷ್ಟಾಂಗ ನಮಸ್ಕಾರವನ್ನು ಮಾಡುವಾಗ ಯಾವುದೇ ಗಾಯಗಳು ದೇಹಕ್ಕೆ ಉಂಟಾಗುವ ಸಂಭವ ತುಂಬಾ ಕಡಿಮೆ ಇರುತ್ತದೆ. ಸಾಷ್ಟಾಂಗ ನಮಸ್ಕಾರದಲ್ಲಿ ನಮ್ಮ ಅಹಂಕಾರ ಹಿರಿತನವನ್ನು ಬದಿಗಿಟ್ಟು ಮಾನವೀಯತೆಯನ್ನು ಬೆಳೆಸಿಕೊಳ್ಳುವ ಸ್ಥಿತಿ ಏರ್ಪಡುತ್ತದೆ. ಇತರರು ನಮ್ಮ ತಲೆಯನ್ನು ಕೆಳಕ್ಕೆ ಬಾಗುವಂತೆ ಮಾಡಿದರೆ ಅದು ಅಪಕೀರ್ತಿಯಾಗುತ್ತದೆ. ಆದರೆ ಸ್ವತಃ ನಾವೇ ನಮ್ಮ ತಲೆಯನ್ನು ತಗ್ಗಿಸಿದರೆ ಇದು ಪುರಸ್ಕಾರ ಮತ್ತು ಗೌರವದ ಸಂಕೇತವಾಗಿದೆ. ನೀವು ಗುರು ಹಿರಿಯರಿಗೆ ಈ ರೀತಿಯ ನಮಸ್ಕಾರವನ್ನು ಮಾಡುವುದು ಎಂದರೆ ನೀವು ದೇವರಿಗೆ ನಮಸ್ಕಾರವನ್ನು ಮಾಡಿದಂತೆ. ನಿಮ್ಮ ಸಂಕಷ್ಟವನ್ನು ಅಪರ್ಣೆಯನ್ನು ಅವರುಗಳ ಮೂಲಕ ನೀವು ದೇವರಿಗೆ ಮಾಡುತ್ತಿದ್ದೀರಿ ಎಂದರ್ಥವಾಗಿದೆ…
ಸಾಷ್ಟಾಂಗ ನಮಸ್ಕಾರ ಮಹತ್ವ
ದೇವರ ಮುಂದೆ ನಮ್ಮ ಅಹಂಕಾರವನ್ನು ತ್ಯಜಿಸುವುದು ಇದರರ್ಥ ಕೂಡ. ತಲೆಯನ್ನು ಬೇರೆಯವರು ತಗ್ಗಿಸುವಂತೆ ಮಾಡಿದರೆ ಅದು ಅಗೌರವ. ಆದರೆ ನಾವಾಗಿಯೇ ತಲೆಯನ್ನು ತಗ್ಗಿಸಿದರೆ ಅದು ಗೌರವ ಎನ್ನುವುದು ನಮಸ್ಕಾರದ ಅರ್ಥವಾಗಿದೆ. ಸನ್ಯಾಸಿಗಳು, ಗುರುಗಳು ಹಾಗೂ ಹಿರಿಯರ ಮುಂದೆ ಇಂತಹ ನಮಸ್ಕಾರ ಮಾಡಿದಾಗ ನಿಮ್ಮ ಪ್ರಾರ್ಥನೆಯು ಅವರ ಮೂಲಕ ದೇವರಿಗೆ ತಲುಪಲಿದೆ ಎನ್ನುವ ನಂಬಿಕೆಯಿದೆ. ನಮಸ್ಕಾರವನ್ನು ಸ್ವೀಕರಿಸುವಾತ ಇದು ತನಗೆ ಮಾಡಿದಂತಹ ನಮಸ್ಕಾರವಲ್ಲ, ಇದನ್ನು ದೇವರಿಗೆ ಮುಟ್ಟಿಸಿ ನಮಸ್ಕಾರ ಮಾಡಿದಾತನಿಗೆ ಅದರ ಶ್ರೇಯಸ್ಸನ್ನು ತಲುಪಿಸಬೇಕಾಗಿದೆ ಎಂದು ಭಾವಿಸಬೇಕು.
ಹಾಗಿದ್ದರೆ, ಈ ನಮಸ್ಕಾರವನ್ನು ಹೇಗೆ ಮಾಡಲಾಗುತ್ತದೆ?
ಈ ನಮಸ್ಕಾರವನ್ನು ಪುರುಷರು ಮಾಡುವಾಗ ಕೈಗಳು, ಹೊಟ್ಟೆ, ಮಂಡಿ, ಕಾಲುಗಳನ್ನು ಮಡಚಿಕೊಂಡು ಭೂಮಿಗೆ ಸ್ಪರ್ಶವಾಗುವಂತೆ ನಮಸ್ಕಾರ ಮಾಡುವುದಾಗಿದೆ. ಇನ್ನು ಸ್ತ್ರೀಯರು ಕೈ ಮತ್ತು ಮಂಡಿಯನ್ನು ಮಡಿಚಿಕೊಂಡು ಭೂಮಿಗೆ ಸ್ಪರ್ಶವಾಗುವಂತೆ ನಮಸ್ಕರಿಸುತ್ತಾರೆ.
ಮಹಿಳೆಯರು ಸಾಷ್ಟಾಂಗ ನಮಸ್ಕಾರವನ್ನು ಏಕೆ ಮಾಡಬಾರದು?
ಮಹಿಳೆಯರು ಪಂಚಾಂಗ ನಮಸ್ಕಾರವನ್ನು ಮಾಡಬೇಕು ಸಾಷ್ಟಾಂಗ ನಮಸ್ಕಾರವನ್ನು ಮಾಡಬಾರದು. ಪಂಚಾಂಗ ನಮಸ್ಕಾರದಲ್ಲಿ ಮಹಿಳೆಯು ಮಂಡಿಯೂರಿ ನಮಸ್ಕಾರವನ್ನು ಮಾಡುತ್ತಾರೆ. ಮಹಿಳೆಯ ಸ್ತನದ ಭಾಗವು ಮಗುವಿನ ಪೋಷಣೆಯನ್ನು ಮಾಡುತ್ತದೆ ಅಂತೆಯೇ ಆಕೆಯ ಹೊಟ್ಟೆಯ ಭಾಗವು ಮಗುವನ್ನು ಹೊರುವ ಕಾರ್ಯವನ್ನು ಮಾಡುವುದರಿಂದ ಈ ಭಾಗಗಗಳು ಭೂಮಿಯನ್ನು ಸ್ಪರ್ಶಿಸುವುದು ನಿಷಿದ್ಧವಾಗಿದೆ.
ಸ್ತ್ರೀಯರಿಗೆ ಶಾಷ್ಟಾಂಗ ನಮಸ್ಕಾರ ನಿಷೇಧ, ಅವರು ಕೇವಲ ಕೈ ಜೋಡಿಸಿ ಅಥವಾ ಬಾಗಿ ನಮಸ್ಕರಿಸಬೇಕು.
ಕೆಲವು ಯೋಗ ಕೇಂದ್ರಗಳಲ್ಲಿ ಸ್ತ್ರೀಯರಿಗೆ ಹೇಳಿಕೊಡಲು ಸ್ತ್ರೀಯರೇ ಇರುತ್ತಾರೆ. ಅವರೆಲ್ಲರು ಪ್ರತಿ ದಿನ ದೀರ್ಘ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಅವರು ಯೋಗಾಸನ ಮಾಡುವಾಗ ಸೂರ್ಯ ನಮಸ್ಕಾರ ಮಾಡುತ್ತಾರೆ. ಆಗ ಇಡೀ ದೇಹ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಇದರ ಬಗ್ಗೆ....
ಶಾಸ್ತ್ರದ ಪ್ರಕಾರ, ದೇವರಿಗೆ & ಗುರು-ಹಿರಿಯರಿಗೆ ನಮಸ್ಕಾರ ಮಾಡುವಾಗ ಸ್ತ್ರೀಯರ ಎದೆ ಭಾಗ, ಹೊಟ್ಟೆಯ ಭಾಗ ಭೂಮಿಗೆ/ನೆಲಕ್ಕೆ ತಗಲಬಾರದು. ಇದಕ್ಕಾಗಿ ಸ್ತ್ರೀಯರಿಗೆ ಸಾಷ್ಟಾಂಗ ನಮಸ್ಕಾರ ನಿಷಿದ್ಧ. ಹಣೆ, ಕೈ-ಕಾಲು, ಮಂಡಿಯೂರಿ ನಮಸ್ಕಕರಿಸಬೇಕು.
********
ನಿತ್ಯವು ತಂದೆತಾಯಿಯರ,ಗುರು- ಹಿರಿಯರ ಪಾದ ಸ್ಪರ್ಶ ಮತ್ತು ಆಶೀರ್ವಾದ ಪಡೆಯುದರ ಪ್ರಯೋಜನ
ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನಲೆಯ ವ್ಯಕ್ತಿಗಳು ಆಗಿರುತ್ತಾರೆ. ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ ( ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ). ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ (ಇದನ್ನು ಕರುಣಾ ಎಂದು ಕರೆಯುತ್ತಾರೆ). ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು ಹೆಚ್ಚಿಸುತ್ತದೆ ಮತ್ತು ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಎರಡು ಮನಸ್ಸು, ಹೃದಯಗಳನ್ನು ಬೆಸೆಯುತ್ತದೆ. (ಇದೇ ಕ್ರಿಯೆಯನ್ನು ಹಸ್ತ ಲಾಘವ ಮಾಡುವ ಮೂಲಕ ಸಹ ಮಾಡಬಹುದು) ಮೆದುಳಿನಿಂದ ಆರಂಭವಾಗುವ ನರಗಳು ನಿಮ್ಮ ಇಡೀ ದೇಹದ ತುಂಬಾ ಹರಡಿಕೊಂಡಿರುತ್ತವೆ. ಈ ನರಗಳು ನಿಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ.ಯಾವಾಗ ನೀವು ನಿಮ್ಮ ಕೈಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ " ಧಾರಕಗಳಾಗಿ" ಕಾರ್ಯನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿಯನ್ನು " ನೀಡುವ" ಅಂಶವಾಗಿ ಗುರುತಿಸಲ್ಪಡುತ್ತದೆ.
ಭಾವನಾತ್ಮಕವಾಗಿ ಈ ಆಶೀರ್ವಾದ ನಮ್ಮನ್ನು ಸದಾಕಾಲ ರಕ್ಷಿಸುತ್ತದೆ.
*****
ನಿತ್ಯವು ತಂದೆತಾಯಿಯರ,ಗುರು- ಹಿರಿಯರ ಪಾದ ಸ್ಪರ್ಶ ಮತ್ತು ಆಶೀರ್ವಾದ ಪಡೆಯುದರ ಪ್ರಯೋಜನ
ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನಲೆಯ ವ್ಯಕ್ತಿಗಳು ಆಗಿರುತ್ತಾರೆ. ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ ( ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ). ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ (ಇದನ್ನು ಕರುಣಾ ಎಂದು ಕರೆಯುತ್ತಾರೆ). ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು ಹೆಚ್ಚಿಸುತ್ತದೆ ಮತ್ತು ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಎರಡು ಮನಸ್ಸು, ಹೃದಯಗಳನ್ನು ಬೆಸೆಯುತ್ತದೆ. (ಇದೇ ಕ್ರಿಯೆಯನ್ನು ಹಸ್ತ ಲಾಘವ ಮಾಡುವ ಮೂಲಕ ಸಹ ಮಾಡಬಹುದು) ಮೆದುಳಿನಿಂದ ಆರಂಭವಾಗುವ ನರಗಳು ನಿಮ್ಮ ಇಡೀ ದೇಹದ ತುಂಬಾ ಹರಡಿಕೊಂಡಿರುತ್ತವೆ. ಈ ನರಗಳು ನಿಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ.ಯಾವಾಗ ನೀವು ನಿಮ್ಮ ಕೈಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ " ಧಾರಕಗಳಾಗಿ" ಕಾರ್ಯನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿಯನ್ನು " ನೀಡುವ" ಅಂಶವಾಗಿ ಗುರುತಿಸಲ್ಪಡುತ್ತದೆ.
ಭಾವನಾತ್ಮಕವಾಗಿ ಈ ಆಶೀರ್ವಾದ ನಮ್ಮನ್ನು ಸದಾಕಾಲ ರಕ್ಷಿಸುತ್ತದೆ.
*****
ನಿಮಗೂಗೊತ್ತಿರಲಿಅಂತ
ನಾವು ಪೂಜೆ ಮಾಡುವಾಗ ಸ್ತ್ರೀ ದೇವತೆಗೆ ತುದಿಯಲ್ಲಿ ದೀರ್ಘ ಸೇರಿಸಿ ಹೇಳ ಬೇಕು.
ಉದಾ : ಸರಸ್ವತೀ ; ಬನಶಂಕರೀ ಗಾಯತ್ರೀ ಅಂಬಿಕಾ - ಲಕ್ಷ್ಮೀ ಈ ರೀತಿಯಾಗಿ ಮತ್ತೆ ನಮಸ್ಕಾರ ಮಾಡುವಾಗ ಹೀಗೆ ; ನಮಃ ಹೇಳುವಾಗ - ಸರಸ್ವತ್ಯೈ (ತ್+ತ್+ಐ) ಅಂಬಿಕಾಯೈ ನಮಃ ; ಲಕ್ಷ್ಮೀ ದೇವ್ಯೈ ನಮಃ|| ಐ ,ಕಾರ ನನ್ನು ಸೇರಿಸಿ ಹೇಳಬೇಕು .
ಮತ್ತು ಪುರುಷ ದೇವತೆಗಳಿಗೆ ನಮಸ್ಕರಿಸುವಾಗ ಅ ಕಾರ ಮತ್ತು ಏ ಕಾರ ನನ್ನು ಸೇರಿಸಬೇಕು
ಓಂ ಗುರವೇ ನಮಃ ; ಶ್ರೀವಿಷ್ಣುವೇ ನಮಃ || ಓಂ ಅಥವಾ ಶ್ರೀ ಸೇರಿಸಿ ಅಥವಾ ಎರಡನ್ನೂ ಸೇರಿಸಿ ಹೇಳಬಹುದು .. - ಶಿವನಿಗೆ ಶಿವಾಯ ನಮಃ ,
ದೇವಾಯ ನಮಃ ಪುಲ್ಲಿಂಗ , ದೇವೈ ನಮಃ ಸ್ತ್ರೀ ಲಿಂಗ.
*****
ನಮಸ್ಕಾರ
ನಮಸ್ಕಾರ - ಚಮತ್ಕಾರ
ಗುರುಹಿರಿಯರಿಗಾಲಿ, ದೇವರಿಗಾಗಲಿ
ಸಾಷ್ಟಾಂಗವಾಗಲಿ, ಹಾಗೇ ಆಗಲಿ
ಶಿರ ಬಾಗಿ, ಎರಡೂ ಕೈ ಜೋಡಿಸಿಯೇ ನಮಸ್ಕರಿಸುತ್ತೇವೆ. ವಿದೇಶಿ ಸಂಸ್ಕ್ರತಿ
ಯಂತೆ ಕೈ ಎತ್ತಿಯೋ ,ಬೀಸಿಯೋ ಅಲ್ಲ. ಇದು ನಮ್ಮ ಅಮೂಲ್ಯ ಸಂಸ್ಕ್ರತಿ.
ಗುರು ಹಿರಿಯರಿಗಾಗಲಿ ಯಾರಿಗೇ ಆಗಲಿ ನಮಸ್ಕಾರ ಮಾಡಿದರೂ ಅದು
'ಗುಹಾಶಯೈವ' ಅವರ ಅಂತರ್ಯಾಮಿ ಪರಮಾತ್ಮನಿಗೇ ಎಂಬುದು ಅನುಸಂಧಾನ.
ಸರ್ವ ನಮಸ್ಕಾರ ಕೇಶವಂ ಪ್ರತಿ ಗಚ್ಛತಿ.
ಎರಡೂ ಕೈ ಜೋಡಿಸುವದ್ಯಾತಕೆ ? ಎಂಬ ಚಿಂತನೆ.
- ಕೈ ಎರಡೂ ಜೋಡಿಸುತ್ತೇವೆ.
- ಕಾಯಾ
ಶಿರ ಬಾಗುತ್ತೇವೆ. - ಮನಸಾ
ಕೃಷ್ಣಾ ನಿನಗೆ ನಮಸ್ಕಾರ ಎನ್ನುತ್ತೇವೆ.
-ವಾಚಾ.
ಕಾಯಾ, ವಾಚಾ, ಮನಸಾ ನಾನು ನಿನ್ನ ಅಧೀನ. ನಿನ್ನಲ್ಲಿ ಶರಣಾಗತಿ.
ಎನ್ನ ಉದ್ಧಾರ ನಿನ್ನ ಹೊಣೆ - ಎಂಬ ಭಾವ.
- ಎರಡು ಕೈ ಎದುರು ಬದಿರು.
ದೇವರು ಮತ್ತು ಜೀವ.
ಆತ ಬಿಂಬ ನಾವು ಪ್ರತಿ ಬಿಂಬರು.
ಪ್ರತಿ ಬಿಂಬ ಎಂದಿಗೂ ಬಿಂಬನ ಅಧೀನ.
ಹೆಬ್ಬೆರಳುಗಳು ನಮ್ಮೆಡೆ. ಉಳಿದೆಲ್ಲ ಬೆರಳುಗಳು ಅವನೆಡೆ.
ಸ್ವಾಮಿ ನಾನು ನಿನ್ನ ಅಧೀನ.
ನೀನು ಈಶ.ನಾನು ದಾಸಎಂಬ ಭಾವ.
- ಎರಡೂ ಕೈ - ಐದೈದು ಬೆರಳು ಜೋಡಿಸಿರುತ್ತೇವೆ.
ಪ್ರಾಣಾದಿ ಪಂಚರೂಪದಿಂದ
ಮುಖ್ಯ ಪ್ರಾಣ ನಮ್ಮಲ್ಲಿ
ಇದ್ದು ಉಸಿರಾಟಾದಿ ಪ್ರಕ್ರಿಯೆ ಮಾಡಿ ನಮ್ಮ ಅಸ್ತಿತ್ವಕ್ಕೆ ಕಾರಣ.
ನಾರಾಯಣಾದಿ ಐದು ರೂಪಗಳಿಂದ
ಪರಮಾತ್ಮ ಅಲ್ಲಿದ್ದು ನಿಯಮನ ಮಾಡುತ್ತಾನೆ.
ಹೀಗೆ ನಮ್ಮ ಪ್ರಾಣ ಮುಖ್ಯ ಪ್ರಾಣ. ಅವನಿಗೂ ಪ್ರಾಣ ಪರಮಾತ್ಮ.
ಈ ಅನುಸಂಧಾನ ಇಲ್ಲುಂಟು.
- ಒಂದು ಕೈಯ ಐದು ಬೆರಳುಗಳು - ಕಣ್ಣು ಕಿವಿ ಮೊದಲಾದ ಪಂಚ ಜ್ಞಾನೇಂದ್ರಿಯದ ಪ್ರತೀಕ.
ಇನ್ನೈದು ಬೆರಳುಗಳು,
ಕೈ ಕಾಲು ಮೊದಲಾದ ಪಂಚ ಕರ್ಮೇಂದ್ರಿಯಗಳ ಪ್ರತೀಕ.
ಬಾಗಿದ ಶಿರ ಅಲ್ಲಿರುವ ಮನಸ್ಸಿನ ಪ್ರತೀಕ.
ಈ ಏಕಾದಶ ಇಂದ್ರಿಯಗಳು ನೀನು
ಪ್ರೇರಿಸಿದರೆ ಉಂಟು. ಇಲ್ಲದಿರೆ ಇಲ್ಲ.
ಸತ್ ಪಥದಲ್ಲಿ ಸದಾ ಅವುಗಳನ್ನು ಸಾಗಿಸು ಸ್ವಾಮಿ ಎಂಬ ಪ್ರಾರ್ಥನೆ ಹುದುಗಿದೆ ಈ ನಮಸ್ಕಾರದಲ್ಲಿ.
ಮತ್ತೆ ಈ ಏಕಾದಶ ಇಂದ್ರಿಯಗಳ ನಿನಗೆ ಸಮರ್ಪಿಸುವೆ. ನಿನ್ನ ಧ್ಯಾನದಲ್ಲಿಡುವೆ. ಎನಗೆ ಅನುಗ್ರಹಿಸು
ಪ್ರಭು.
ದಶ ಇಂದ್ರಿಯಗಳ ಮೇಲೆ ಮನಸಿನ ನಿಯಂತ್ರಣ.
ಮತ್ತೆ 'ತೈಲ ಧಾರೆಯಂದದಿ ನಿನ್ನಲ್ಲಿ ಮನವ ಕೊಡು ಹರಿಯೇ' ಎಂಬ ಪ್ರಾರ್ಥನೆ ನಮನದಲ್ಲಿದೆ.
- ಭೂಮಿ,ನೀರು,ಅಗ್ನಿ,ವಾಯು,ಆಕಾಶ
ಇವು ಪಂಚಭೂತಗಳು.
ಗಂಧ,ರಸ,ರೂಪ, ಸ್ಪರ್ಶ,ಶಬ್ದ ಇವು ಪಂಚ ತನ್ಮಾತ್ರಾಗಳು.
ಇವೆಲ್ಲ ನಿನ್ನ ಸೃಷ್ಟಿ. ನಮಗೆ ಕೊಟ್ಟಿ.
ನಿನ್ನ ಕರುಣೆ.
ಸತ್ ಸಾಧನೆಗೆ ಹಚ್ಚು. ನಿನಗೆ ನಾನು ಚಿರಋಣಿ. ಎಂಬ ಕೃತಾರ್ಥ ಭಾವವೂ ಅಡಗಿದೆ ನಮ್ಮ ನಮಸ್ಕಾರದಲ್ಲಿ.
'ದ್ವಾ ಸುಪರ್ಣಾ -' ಶಾಸ್ತ್ರದ ಮಾತು.
'ಹಕ್ಕಿಗಳೆರಡು ಐದಾವಪ್ಪಾ --' ಪುರುಂದರ ದಾಸರ ಮಾತು.
ಈ ದೇಹದಲ್ಲಿ ಎರಡು ಹಕ್ಕಿಗಳಿವೆ
'ಆತ್ಮ', 'ಪರಮಾತ್ಮ'.
ಎರಡೂ ಜೊತೆಯೆ ಇರುತ್ತವೆ.
ನಮಸ್ಕಾರದಲ್ಲಿ ಎರಡೂ ಕೈ ಜೋಡಿಸಿವೆ.
ಒಂದು ಆತ್ಮ ಇನ್ನೊಂದು ಪರಮಾತ್ಮ.
ಇಂಥ ಅನವರತ ಅಗಲದ ಸಖ ನೀನಾಗಿರು
ಎಂಬ ಬಯಕೆ ನಮ್ಮ ಮನದಲ್ಲಿ
ಮತ್ತೆ ನಮನದಲ್ಲಿ.
ಒಂದು ಕೈ ಅಂತರಂಗ.
ಇನ್ನೊಂದು ಬಹಿರಂಗದ ಪ್ರತೀಕ.
ಎರಡೂ ಒಂದಾಗ ಬೇಕು.
ಇಲ್ಲವಾದರೆ ಡಂಭಾಚಾರವಾದೀತು.
ಅದು ಪರಮಾತ್ಮನಿಗೆ ಸೇರದು.
ಅದಕ್ಕಾಗಿ ಎರಡೂ ಕೈ ಜೋಡಣೆ.
ಎರಡನ್ನು ಒಂದು ಮಾಡೆಂಬ ಪ್ರಾರ್ಥನೆ.
ಒಂದು ಕೈ - ಮನ. ಇನ್ನೊಂದು ಬುದ್ಧಿ.
ಎರಡೂ ನಿನ್ನ ಚರಣದಲ್ಲಿ.
ಒಂದು ಕೈ - ಜ್ಞಾನ. ಇನ್ನೊಂದು ಭಕ್ತಿ.
ನಿನ್ನ ಮಹಿಮೆಯ ಜ್ಞಾನ ಕೊಡು.
ನಿನ್ನಲ್ಲಿ ಅಚಲ ಭಕ್ತಿ ಕೊಡು.
ಅದಕ್ಕಾಗಿಯೇ ಎರಡೂ ಕೈ ಜೋಡಣೆ.
ಧನ ಕನಕಾದಿ ಏನು ತುಂಬಿ ಕೊಟ್ಟರೂ
ಒಲಿಯದ ಭಗವಂತನನ್ನು
ಭಕ್ತಿ ತುಂಬಿದ ನಮಸ್ಕಾರ ಸೆಳೆದು ತಂದು ಕೊಡುವದೇ ಚಮತ್ಕಾರ.
ಇಂಥ ಮುಖ್ಯ ಪ್ರಾಣಾಂತರ್ಗತ ಲಕ್ಮೀನರಸಿಂಹ ದೇವರಿಗೆ ಶಿ ಸಾ ನಮಸ್ಕಾರ ಮಾಡೋಣ.
ಡಾ.ವಿಜಯೇಂದ್ರ ದೇಸಾಯಿ.
ಶ್ರೀ ಕೃಷ್ಣಾರ್ಪಣಮಸ್ತು
***
ನಮಸ್ಕಾರದಿಂದ ಆಯುಷ್ಯವು ವೃದ್ಧಿಯಾಗುತ್ತದೆ
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ
ಮಾರ್ಕಂಡೇಯ ಮುನಿಗಳು ದೀರ್ಘಾಯುಷಿ ಯಾದುದರ ಬಗೆಗಿನ ಹಲವು ಕಥೆಗಳಲ್ಲಿ ಇದು ಒಂದು.
ಮೃಕಂಡು ಮನಿಗಳ ಮಗನಿಗೆ 9 ವರ್ಷಕ್ಕೆ ಮರಣ ಯೋಗ ಇತ್ತು. ಏಳನೇ ವರ್ಷಕ್ಕೆ ಉಪನಯನ ಮಾಡಿದ ಮುನಿಗಳು ಮಗನಿಗೆ ಹೀಗೆಂದರು.
"ಮಗು ಸಾತ್ವಿಕರು ಹಿರಿಯರು ಕಂಡಲ್ಲಿ ನಮಸ್ಕಾರ ಮಾಡು ಅವರ ಆಶೀರ್ವಾದವನ್ನು ಪಡೆದುಕೋ."
ಅಭಿವಾದನ ಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ| ಚತ್ವಾರಿ ತಸ್ಯ ವರ್ಧಂತೇ ಆಯುಃ ಪ್ರಜ್ಞಾ ಯಶೋ ಬಲಂ॥
ನಮಸ್ಕಾರ ಮಾಡುವುದರಿಂದ; ಜ್ಞಾನ ವೃದ್ಧರ ಸೇವೆಯಲ್ಲಿ ನಿರತರಾದವರಿಗೆ ಆಯುಷ್ಯ ಪ್ರಜ್ಞೆ ಯಶಸ್ಸು ಬಲಗಳು ವೃದ್ಧಿಯಾಗುತ್ತವೆ.
ಬಾಲಕ ಮಾರ್ಕಂಡೇಯ ಹಾಗೆಯೇ ಮಾಡಿದ.
ತನ್ನ ಆಶ್ರಮದ ಮಾರ್ಗದಲ್ಲಿ ಬಂದ ಎಲ್ಲಾ ಹಿರಿಯ ಜ್ಞಾನಿಗಳ ಪಾದಕ್ಕೆ ಅಭಿವಾದನ ಮಾಡಿ ನಮಿಸುತ್ತಿದ್ದ. ದೀರ್ಘಾಯುಷ್ಮಾನ್ ಭವ ಎಂಬ ಆಶೀರ್ವಾದಗಳನ್ನು ಪಡೆದು ಹಿಂತಿರುಗುತ್ತಿದ್ದ.
ಆಶ್ರಮದ ಮಾರ್ಗದಲ್ಲಿ ಬಂದಂತಹ ಸಪ್ತಋಷಿ ಗಳಿಗೂ ಕೂಡ ಬಾಲಕನು ಅಭಿವಾದನ ಮಾಡಿದ. ದೈವ ಸಂಕಲ್ಪದಂತೆ ಪೂರ್ವಾಪರಗಳನ್ನು ಆಲೋಚನೆ ಮಾಡದೆ ಸಪ್ತಋಷಿಗಳು ಬಾಲಕ ಮಾರ್ಕಂಡೇಯನಿಗೆ ದೀರ್ಘಾಯುಷ್ಯ ದ ವರವನ್ನಿತ್ತರು.
ಜ್ಞಾನಿಗಳ ಸಜ್ಜನರ ಮುಖದಿಂದ ಹೊರಟ ಮಾತುಗಳು ಕೂಡ ಸುಳ್ಳಾಗಲು ಪರಮಾತ್ಮ ಬಿಡುವುದಿಲ್ಲ.
ಕಾಲ ಕಳೆಯಿತು.
ನಿತ್ಯ ನಿರಂತರ ಪರಮ ಶಿವನನ್ನು ಆರಾಧಿಸುತ್ತಿದ್ದ ಬಾಲಕ ಮಾರ್ಕಂಡೇಯನ ಜೀವ ಒಯ್ಯಲು ಯಮದೂತರು ಬಂದರು ಅವರಿಗೆ ಬಾಲಕನನ್ನು ಸ್ಪರ್ಶಿಸಲು ಆಗಲಿಲ್ಲ. ಮಹಿಷ ವಾಹನ ನಾಗಿ ಯಮನೇ ಬಂದರೂ ಕೂಡ ಪ್ರಯೋಜನವಾಗಲಿಲ್ಲ. ಬಾಲಕನ ಸುತ್ತ ಆವರಿಸಿದ್ದ ಆಶೀರ್ವಾದದ ಕವಚವನ್ನು ಛೇದಿಸಲು ಸಾಧ್ಯವಾಗಲಿಲ್ಲ. ಶಿವ ಭಕ್ತ ಮಾರ್ಕಂಡೇಯನ ಆಯುಷ್ಯವನ್ನು ಸಪ್ತ ಕಲ್ಪದ ತನಕ ತಿದ್ದಿ ಬಿಡುವಂತೆ ಯಮಧರ್ಮರಾಜನಿಗೆ ಪರಶಿವನು ಸೂಚಿಸುತ್ತಾನೆ.
ಮಾರ್ಕಂಡೇಯ ಋಷಿಗಳನ್ನು ಸ್ಮರಿಸುವವನಿಗೆ ಆಯುಷ್ಯವೂ ವೃದ್ಧಿಯಾಗುತ್ತದೆ.
ಹಿರಿಯರು ಬಂದಾಗ ಎದ್ದು ನಿಲ್ಲುವುದು ಕರ್ತವ್ಯ ದೊಡ್ಡವರು ಸನಿಹದಿಂದ ಸಾಗುತ್ತಿದ್ದಾಗಲೂ ಎದ್ದು ನಿಲ್ಲದವನ ಆಯುಷ್ಯಕ್ಕೆ ಪೆಟ್ಟಿದೆ.
ಊರ್ದ್ವಂ ಪ್ರಾಣ ಉತ್ಕ್ರಾಮಂತಿ ಯೂನಃ ಸ್ಥವಿರ ಆಗತೇ
ಹಿರಿಯರು ಸನಿಹದಿಂದ ಸಾಗುತ್ತಿದ್ದಾಗ ಕಿರಿಯರ ಪ್ರಾಣಶಕ್ತಿ ತಾನಾಗಿ ಮೇಲಕ್ಕೆ ಚಿಮ್ಮುತ್ತದೆ. ಆಗ ಎದ್ದು ನಿಂತಲ್ಲಿ ಅದು ಶಾಂತವಾಗಿ ಶರೀರದಲ್ಲಿಯೇ ನೆಲೆಯಾಗುತ್ತದೆ ಇಲ್ಲವಾದರೆ ಆಯುಷ್ಯ ಕ್ಷೀಣ ವಾಗುತ್ತದೆ.
ಗುರು-ಹಿರಿಯರನ್ನು ತಂದೆತಾಯಿಗಳನ್ನು ಜ್ಞಾನಿಗಳನ್ನು ಗೌರವಿಸುವುದರಿಂದ ; ನಮಸ್ಕರಿಸುವುದರಿಂದ ನಮಗೆ ಸರ್ವ ಸೌಭಾಗ್ಯಗಳು ಲಭಿಸುತ್ತವೆ.
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ
***
|| ಸಾಷ್ಟಾಂಗ ನಮಸ್ಕಾರ ಮಾಡುವ ವಿಧಾನ ||
ಪ್ರಶಾಂತ ಭಟ್
ಉಪಾಸ್ಯ ದೇವತೆಗೆ ಶರೀರದಿಂದ, ಮನಸ್ಸಿನಿಂದ ಮತ್ತು ವಾಣಿಯಿಂದ ಶರಣಾಗಿ ಮಾಡಿದ ನಮಸ್ಕಾರವೆಂದರೆ, ‘ಸಾಷ್ಟಾಂಗ ನಮಸ್ಕಾರ’ !
ಸಾಷ್ಟಾಂಗ ನಮಸ್ಕಾರ ಮಾಡುವ ವಿಧಾನ
ಮೊದಲು ಎರಡೂ ಕೈಗಳನ್ನು ಎದೆಯ ಸಮೀಪ ಜೋಡಿಸಬೇಕು (ನಮಸ್ಕಾರದ ಮುದ್ರೆಯಂತೆ). ನಂತರ ಸೊಂಟ ಬಗ್ಗಿಸಬೇಕು, ನಂತರ ಎರಡೂ ಅಂಗೈಗಳನ್ನು ನೆಲದ ಮೇಲಿಡಬೇಕು, ಮೊದಲು ಬಲಗಾಲನ್ನು, ಆಮೇಲೆ ಎಡಗಾಲನ್ನು ಹಿಂದಕ್ಕೆ ಸರಿಸಿ ಎರಡೂ ಕಾಲುಗಳನ್ನು ನೇರವಾಗಿ ಉದ್ದ ಮಾಡಬೇಕು.
ಕೈಗಳನ್ನು ಮಡಚಿ ತಲೆ, ಎದೆ, ಅಂಗೈ, ಮೊಣಕಾಲು ಮತ್ತು ಕಾಲುಗಳ ಬೆರಳುಗಳು ನೆಲಕ್ಕೆ ತಾಗುವಂತೆ ಮಲಗಬೇಕು ಹಾಗೂ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು.
ಮನಸ್ಸಿನಿಂದ ನಮಸ್ಕರಿಸಬೇಕು ಮತ್ತು ಬಾಯಿಯಿಂದ ‘ನಮಸ್ಕಾರ’ ಎಂದು ಹೇಳಬೇಕು.
ಎದ್ದುನಿಂತು ಎರಡೂ ಕೈಗಳನ್ನು ಅನಾಹತಚಕ್ರದ ಬಳಿ (ಎದೆಯ ಮೇಲೆ) ಜೋಡಿಸಿ ಶರಣಾಗತ ಭಾವದಿಂದ ನಮಸ್ಕಾರ ಮಾಡಬೇಕು.
ಹೀಗೆ ನಮಸ್ಕಾರ ಮಾಡುವುದು ಮನಸ್ಸಿನಿಂದ, ಕೇವಲ ಅಡ್ಡಬೀಳುವುದೇ ನಮಸ್ಕಾರವಲ್ಲ. ನಾವು ಪೂಜಾವಸಾನದಲ್ಲಿ ಹೇಳುವ ನಾಹಂ ಕರ್ತಾ ಹರಿ ಕರ್ತಾ ತತ್ಪೂಜಾ ಕರ್ಮ ಚಾಖಿಲಮ್ ಎನ್ನುವ ಮಾತಿನಂತೆ ಯಾವುದೇ ಕಾರ್ಯ ನಮ್ಮಿಂದಾದರೆ ನಿಜವಾಗಿಯೂ ಆ ಕಾರ್ಯ ನಮ್ಮಿಂದಾದುದಲ್ಲ. ಭಗವಂತನಿಂದಲೇ ಆದದ್ದು ಎನ್ನುವ ಭಾವನೆಯೇ ನಮಸ್ಕಾರ.
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |
ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್ ||
ಎನ್ನುವ ನವವಿಧ ಭಕ್ತಿ ಯಲ್ಲಿ ಆತ್ಮನಿವೇದನೆ ಸೇರಿದಂತೆ ವಂದನವೂ ಸೇರಿದೆ. ಈ ವಂದನದ ಮೂಲಕ ಭಗವಂತನಲ್ಲಿ ಸ್ನೇಹವನ್ನು ಸಂಪಾದಿಸಿ, ಅವನ ದಾಸರಾಗಿ, ಅವನ ಉತ್ಕರ್ಷವನ್ನು ಒಪ್ಪಿಕೊಂಡು ಅವನಿಗೆ ನಮ್ಮ ಆತ್ಮನಿವೇದನೆಯನ್ನು ಮಾಡುವುದರ ಮೂಲಕ ನಮ್ಮ ಒಳಿತು-ಕೆಡಕುಗಳಿಗೆ ಆ ಭಗವಂತನೇ ಕಾರಣ ಎನ್ನುವ ಅನುಸಂಧಾನದ ಮೂಲಕ ಮನಸ್ಸನ್ನು ನಮ್ರವಾಗಿಸುವುದೇ ನಮಸ್ಕಾರದ ಪ್ರಕ್ರಿಯೆ.
ನಮಸ್ಕಾರದಲ್ಲಿ ಎಷ್ಟು ವಿಧಗಳು:
ನಮಸ್ಕಾರವು ಕಾಯಿಕ, ವಾಚಿಕ, ಮಾನಸಿಕ ಎಂದು ಮೂರು ವಿಧವಾಗಿದೆ. ದೇಹ ದಿಂದ ಮಾಡುವ ನಮಸ್ಕಾರವು ಕಾಯಿಕ(ದೈಹಿಕ) ನಮಸ್ಕಾರ ಎನಿಸಿಕೊಂಡರೆ, ಮಾತಿನ ಮೂಲಕ ಮಾಡುವ ನಮಸ್ಕಾರವು ವಾಚಿಕ ನಮಸ್ಕಾರ, ಮನಸ್ಸಿನ ಮೂಲಕ ಮಾಡುವ ನಮಸ್ಕಾರವು ಮಾನಸಿಕ ನಮಸ್ಕಾರ ಎಂದು ಕರೆಸಿಕೊಳ್ಳುತ್ತದೆ. ಈ ಮೂರು ವಿಧವಾದ ನಮಸ್ಕಾರಗಳು ಸೇರಿದಾಗ ಮಾತ್ರ ಅದು ಉತ್ತಮ ನಮಸ್ಕಾರ ಎಂದೆನಿಸಿಕೊಳ್ಳುತ್ತದೆ. ಇದನ್ನೇ ತ್ರಿಕರಣ ಪೂರ್ವಕ ನಮಸ್ಕಾರ ಎನ್ನುತ್ತಾರೆ. ಈ ಮೂರು ವಿಧದ ನಮಸ್ಕಾರಗಳಲ್ಲಿ ಕಾಯಿಕ ನಮಸ್ಕಾರವು ಉತ್ತಮ. ವಾಚಿಕ ನಮಸ್ಕಾರವು ಅಧಮ. ಮಾನಸಿಕ ನಮಸ್ಕಾರವು ಮಧ್ಯಮ ಎಂದು ವಿಭಾಗ ಮಾಡಲಾಗಿದೆ
ಭೂಮಿಯಲ್ಲಿ ದಂಡಾಕಾರವಾಗಿ ಮಲಗಿ, ಹಸ್ತ, ಪಾದಗಳನ್ನು ಚಾಚಿ, ಮಂಡಿ, ತಲೆಗಳಿಂದ ಭೂಮಿಯನ್ನು ಸ್ಪರ್ಶಿಸುತ್ತಾ, ನಮ್ಮ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂತನಲ್ಲಿ ನೆಟ್ಟು ಮಾಡುವ ನಮಸ್ಕಾರವೇ ಕಾಯಿಕ ಉತ್ತಮ ನಮಸ್ಕಾರ. ಈ ರೀತಿಯ ನಮಸ್ಕಾರವನ್ನು ಪುರುಷರು ಮಾತ್ರ ಮಾಡಬೇಕು.
ನಮಸ್ಕಾರ ಎಲ್ಲಿ, ಹೇಗೆ ಮಾಡಬೇಕು
ದೇವಾಲಯಗಳಲ್ಲಿ ಸಿಕ್ಕ ಸಿಕ್ಕ ಕಡೆ ನಮಸ್ಕರಿಸಬಾರದು. ಯಾವ ದೇವಸ್ಥಾನದಲ್ಲಿ ಯೇ ಆಗಲಿ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಅಥವಾ ನಮ್ಮ ಬಲಭಾಗಕ್ಕೆ ದೇವರು, ದೇವರ ಬಲಭಾಗಕ್ಕೆ ನಾವು ಇರುವಂತೆ ನಮಸ್ಕರಿಸಬೇಕು. ಏಕೆಂದರೆ
ಅಗ್ರೇ ಪೃಷ್ಟೇ ವಾಮಭಾಗೇ ಸಮೀಪೇ ಗರ್ಭಮಂದಿರೇ |
ಜಪಹೋಮನಮಸ್ಕಾರಾನ್ ನ ಕುರ್ಯಾತ್ ದೇವಾಲಯೇ ||
ವಿಷ್ಣು ದೇವಾಲಯ, ಶಿವಾಲಯಗಳಲ್ಲಿ ದೇವರ ಎದುರುಗಡೆ ನಾವು ನಮಸ್ಕರಿಸಿದಾಗ ನಮ್ಮ ಕಾಲು ಗರುಡ, ನಂದಿಯ ಕಡೆಗೆ ಇರುತ್ತದೆ. ಇದರಿಂದ ದೇವರ ಮುಂದೆ ಇರುವ ಗರುಡ, ನಂದಿ, ಮೂಷಿಕಾದಿ ದೇವತೆಗಳಿಗೆ ನಾವು ಕಾಲು ತೋರಿಸಿ ಅವರನ್ನು ತಿರಸ್ಕರಿಸಿ ದಂತಾಗುತ್ತದೆ. ಇದರಿಂದ ಪಾಪದ ಲೇಪವಾಗುವುದು. ಏಕೆಂದರೆ ದೊಡ್ಡವರನ್ನು ತಿರಸ್ಕರಿಸುವುದು ಮರಣಕ್ಕೆ ಆಹ್ವಾನ ಕೊಟ್ಟಂತೆ. ಇದೇ ಮಾತನ್ನು ಈ ಪ್ರಮಾಣ ಹೀಗೆ ಹೇಳುತ್ತದೆ. ಅಗ್ರೇ ಮೃತ್ಯುಮವಾಪ್ನೋತಿ ಎಂಬುದಾಗಿ. ಅಲ್ಲದೇ ಬಲಿಪೀಠ, ಧ್ವಜ ಸ್ತಂಭಗಳಿಗೆ ಪಾದವನ್ನು ತೋರಿಸಬಾರದು. ಆದುದರಿಂದ ದೇವರ ಎದುರಿಗೆ ನಮಸ್ಕರಿಸಬಾರದು.
ದೇವರ ಮುಂಭಾಗದಂತೆ ಹಿಂಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ಅಲ್ಲಿ ದೇವರ ಪರಿವಾರದೇವತೆಗಳಿರುತ್ತಾರೆ. ಹಿಂಭಾಗದಲ್ಲಿ ನಮಸ್ಕರಿಸಿದಾಗ ಆ ದೇವತೆ ಗಳಿಗೆ ಪಾದ ತೋರಿಸಿದಂತಾಗುವುದರಿಂದ ದೇವರ ಹಿಂಭಾಗದಲ್ಲಿ ನಮಸ್ಕರಿಸಬಾರದು.
ದೇವರ ಎಡಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ವಾಮಭಾಗೇ ಭವೇನ್ನಾಶಃ ಎಂದು ಹೇಳಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು. ಏಕೆಂದರೆ ದೇವರ ಎಡಕೈಯಲ್ಲಿ ಗದಾ, ತ್ರಿಶೂಲ ಮೊದಲಾದ ಆಯುಧಗಳಿರುತ್ತವೆ. ಆ ಆಯುಧಗಳನ್ನು ಪರಮಾತ್ಮನು ಧರಿಸಿರುವುದರ ಉದ್ದೇಶ ಶತ್ರುಗಳ ನಾಶಕ್ಕಾಗಿ. ಕೊನೆಗೆ ದೇವರ ಬಲಭಾಗದಲ್ಲಿಯೇ ನಮಸ್ಕರಿಸ ಬೇಕೆಂದು ಹೇಳುತ್ತಿದ್ದಾರೆ. ದಕ್ಷಿಣೇ ಸರ್ವಕಾಮದಃ ಎಂಬುದಾಗಿ. ಅಂದರೆ ನಾವು ಯಾವಾಗ ನಮಸ್ಕರಿಸಿದರೂ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಏಕೆಂದರೆ ದೇವರು ನಮಗೆಲ್ಲರಿಗೂ ಅಭಯವನ್ನು, ಜ್ಞಾನವನ್ನು ನೀಡುವುದು ಬಲಗೈಯಿಂದಲೇ. ಆದುದರಿಂದ ಭಗವಂತನ ಅನುಗ್ರಹ, ಅಭಯವನ್ನು ಪಡೆಯಬೇಕಾದ ನಾವು ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು.
ಪ್ರಣಾಮ ಎಂದರೇನು?
ಪ್ರಣಾಮವೆಂದರೆ ನಮಗಿಂತ ಹಿರಿಯರ ಮುಂದೆ ನಾನು ಅಲ್ಪ ಎನ್ನುವ ಭಾವನೆಯನ್ನು ಪ್ರತಿಬಿಂಬಿಸುವ ದೈಹಿಕ ವ್ಯಾಪಾರದ ಅನುಸಂಧಾನವೇ ನಮಸ್ಕಾರ ವೆಂದು ಗೊತ್ತಾಗುತ್ತದೆ. ಅಲ್ಲದೇ! ಮೇಲೆ ತಿಳಿಸಿದಂತೆ ಕಾಯವನ್ನು ಭೂಮಿಯಲ್ಲಿ ಬೀಳಿಸಿ, ತಲೆ ಯ ಮೇಲುಗಡೆ ಗುಣಾಕಾರದ ಚಿಹ್ನೆ( ) ಯಂತೆ ಎಡಕೈಯ ಮೇಲೆ ಬಲಕೈ ಬರುವಂತೆ ಮಾಡಿ, ನಮ್ಮ ಬಲಕೈ ಭಗವಂತನ ಬಲಪಾದವನ್ನು, ನಮ್ಮ ಎಡಕೈ ಭಗವಂತನ ಎಡಪಾದವನ್ನು ಮುಟ್ಟು ವಂತೆ ಮಾಡುವ ನಮಸ್ಕಾರವೇ ಪ್ರಣಾಮ .ಇಂತಹ ಪ್ರಣಾಮವು ನಮ್ಮಲ್ಲಿರುವ ಅಹಂಕಾರವನ್ನು ಹೊಡೆದೋಡಿಸಿ, ನಾವು ನಮಸ್ಕಾರಾರ್ಹನಿಗಿಂತ ಸಣ್ಣವರು ಎನ್ನುವ ಭಾವನೆಯನ್ನು ಜಾಗೃತಗೊಳಿಸುತ್ತದೆ.
ಪ್ರಶಾಂತ ಭಟ್
***
ಪ್ರದಕ್ಷಣೆ_ಮತ್ತು_ನಮಸ್ಕಾರ
ReplyDeleteನಾವು ದೇವಸ್ಥಾನಕ್ಕೆ ಹೋದಾಗ ದೇವರಿಗೆ ಹಾಕುವ ಪ್ರದಕ್ಷಿಣೆ ನಮಸ್ಕಾರ ಅತ್ಯಂತ ಮಹತ್ವವಿದೆ , ನಾವು ಎಷ್ಟು ಪ್ರದಕ್ಷಣೆ ಹಾಕಬೇಕು ಅನ್ನುವ ಗೊಂದಲ ಕೆಲವರಿಗೆ ಮತ್ತು ಹೇಗೆ ನಮಸ್ಕಾರ ಹಾಕಬೇಕು ಅನ್ನುವುದು ಕೆಲವರಿಗೆ , ಆದರೆ ಇನ್ನೂ ಕೆಲವರಿಗೆ ಭಗವಂತನಿಗೆ ಹೇಗೆ ನಮಸ್ಕಾರ ಮಡಿದರೂ ಒಪ್ಪಿಸಿಕೊಳ್ಳುತ್ತಾನೆ ಅನ್ನುವ ಕೆಲ ಜನ , ಆದರೆ ನನ್ನ ಪ್ರಕಾರ ಯಾವುದೇ ಒಂದು ಪೂಜೆ ಪುನಸ್ಕಾರ ವಿಧಿವಿಧಾನದಿಂದ ಮಾಡಿದಾಗ ಫಲಪ್ರಾಪ್ತಿಯಾಗುತ್ತದೆ...
https://pradeepkannadaastrology.page.tl/
ಒಂದು ಉದಾಹರಣೆ ಹೇಳುತ್ತೇನೆ ನಾವು ಹುಳಿ ಮಾಡುವಾಗ ಬೇಳೆಯನ್ನು ಸರಿಯಾಗಿ ಬೇಯಿಸಿ , ತರಕಾರಿಯನ್ನು ಸರಿ ಪ್ರಮಾಣದಲ್ಲಿ ಹೆಚ್ಚಿ ಅದನ್ನು ಸರಿಯಾಗಿ ಬೇಯಿಸಿ ಬೇಳೆಯನ್ನು ಹಾಕಿ ಸರಿಪ್ರಮಾಣದಲ್ಲಿ ಹುಳಿ ಉಪ್ಪು ಕಾರ ಬೆಲ್ಲ ಮಸಾಲೆ ಹಾಕಿದಾಗ ಮನೆಗೊಟ್ಟು ಮಾಡಿದಾಗ ಅತ್ಯಂತ ರುಚಿಕರವಾದ ಹುಳಿಯಾಗುತ್ತದೆ ನಮ್ಮ ಹೊಟ್ಟೆ ಹಸಿವನ್ನು ತಣಿಸುತ್ತದೆ, ಅದಲ್ಲದೆ ನಾವು ಒಂದು ಪಾತ್ರೆಯಲ್ಲಿ ಬೇಳೆ ತರಕಾರಿ ಉಪ್ಪು ಖಾರ ಎಣ್ಣೆ ಎಲ್ಲವನ್ನು ಹಾಕಿ ಹಾಗೆ ಕುದಿಯಲಿಟ್ಟು ಎಷ್ಟೆಷ್ಟೋ ಪ್ರಮಾಣದಲ್ಲಿ ಉಪ್ಪು ಖಾರ ಹಾಕಿದರೆ ತಿನ್ನಲು ಯೊಗ್ಯವೇ , ಎಲ್ಲ ಪದಾರ್ಥವೂ ಇದರಲ್ಲಿದೆ ಆದರೂ ತಿನ್ನಲು ಯೋಗ್ಯವಲ್ಲ ಹಾಗೆ ನಾವು ಹಣ ಖರ್ಚು ಮಾಡುತ್ತೇವೆ , ದೇಹ ದಂಡಿಸಿ ಪೂಜೆಯನ್ನು ಮಾಡುತ್ತೇವೆ. ಆದರೆ ಮನಸ್ಸು ಭಗವಂತನಲ್ಲಿ ಇಲ್ಲದಿದ್ದರೆ ಎಲ್ಲವೂ ವ್ಯರ್ಥ ಹಾಗೆ ವಿಧಾನದಿಂದ ಭಕ್ತಿಯಿಂದ ಮಾಡಿದ ಪೂಜೆ ನಮಸ್ಕಾರ ಪ್ರದಕ್ಷಣೆ ಭಗವಂತನಿಗೆ ಮುಟ್ಟುತ್ತದೆ ,ಅಂದರೆ ತಕ್ಕ ಫಲ ಸಿಗುತ್ತದೆ.. ಹೇಳುತ್ತೇನೆ ಕೇಳಿ
#ನಮಸ್ಕಾರ
ಯಾವಾಗಲೂ ದೇವರ ಬಲ ಬಾಗದಲ್ಲಿ ನಮಸ್ಕಾರ ಮಾಡಬೇಕು.ಗಂಡಸರು ಸಾಸ್ಟಾಂಗ ನಮಸ್ಕಾರವನ್ನು, ಹೆಂಗಸರು ಪಂಚಾಂಗ ನಮಸ್ಕಾರ ಮಾಡಬೇಕು ಪಂಚಾಂಗ ನಮಸ್ಕಾರ ಅಂದರೆ ಹೆಣ್ಣುಮಕ್ಕಳು ನಮಸ್ಕಾರ ಮಾಡುವಾಗ ಎದೆಯನ್ನು ಮತ್ತು ಹೊಟ್ಟೆಯನ್ನೂ ನೆಲಕ್ಕೆ ತಗಲಿಸಬಾರದು. ಮೊಣಕಾಲನ್ನು ಮಡಿಚಿ ಮಾಡಬೇಕು ಯಾಕೆ ಅಂದರೆ
https://pradeepkannadaastrology.page.tl/
ಬ್ರಾಹ್ಮಣಸ್ಯ ಗುದಂ ಶಂಖಂ ಯೋಷಿತಃ ಸ್ತನಮಂಡಲಮ್ |
ರೇತಃ ಪವಿತ್ರಗ್ರಂಥಿಂ ಚ ನ ಭೂಃ ಧಾರಯಿತುಂ ಕ್ಷಮಾ ||
#ಅರ್ಥ ಇಡೀ ಭೂ ಮಂಡಲದ ಭಾರವನ್ನು ಹೊತ್ತಿರುವ ಭೂದೇವಿಯು ಬ್ರಾಹ್ಮಣರ ಗುದಪ್ರದೇಶವನ್ನು, ಶಂಖವನ್ನು, ಸ್ತ್ರೀಯರ ಸ್ತನಮಂಡಲವನ್ನು, ಶುಕ್ಲರೂಪದಲ್ಲಿರುವ ರೇತಸ್ಸನ್ನು, ದರ್ಭೆ ಯ ಗ್ರಂಥಿಯನ್ನು ಧರಿಸ ಲಾರಳಂತೆ. ಆದುದರಿಂದ ಸ್ತ್ರೀಯರು ಕಾಯ ಉತ್ತಮ ನಮಸ್ಕಾರವನ್ನು ಮಾಡಬಾರದೆಂದು ತಿಳಿಸುತ್ತಾ ಇದನ್ನು ಕೇವಲ ಪುರುಷರಿಗೆ ಮಾತ್ರ ಉದ್ದಂಡ ನಮಸ್ಕಾರ ಮಾಡಲು ಅಧಿಕಾರ
#ಇನ್ನು_ಪ್ರದಕ್ಷಿಣೆ
ನಾವು ದೇವಸ್ಥಾನ ದ ಸುತ್ತ ಪ್ರದಕ್ಷಿಣೆ ಹಾಕುವಾಗ ಭಗವಂತನ ಕಡೆಗೆ ನಮ್ಮ ಬಲಭಾಗವಿರಬೇಕು ಕಾರಣ
ದಕ್ಷ’ ಎಂದರೆ ಬಲಭಾಗ. ದಕ್ಷಿಣ ಎಂದರೆ ಬಲಭಾಗ ಇರುವುದು ಎಂದರ್ಥ
ಭಗವಂತನ ಪ್ರತೀಕವು ಬಲಭಾಗದಲ್ಲಿರುವಂತೆ ನಡೆಯುವುದಕ್ಕೆ ಪ್ರದಕ್ಷಣೆ ಅನ್ನುವುದು... ನಾವು ಪ್ರದಕ್ಷಣೆ ಹಾಕುವಾಗ ಯಾವ ನಿಯಮವನ್ನು ಪಾಲಿಸಬೇಕು ಅಂದರೆ
https://pradeepkannadaastrology.page.tl/
1.ವಾಗತ್ಯಃ–ಇತರರಲ್ಲಿ ಮಾತಾಡಕೂಡದು.
2.ಧ್ಯಾನತತ್ಪರಃ–ದೇವರನ್ನು ಮನಸ್ಸಿನಲ್ಲಿ ತುಂಬಿ ಕೊಂಡಿರಬೇಕು.
3.ಅಸಂಸಕ್ತಃ– ಸಂಸಾರದ ಯೋಚನೆ ಬಿಟ್ಟಿರಬೇಕು. ಇನ್ನೊಬ್ಬರಿಗೆ
ತಾಗಿಕೊಂಡು ಸುತ್ತು ಬರಕೂಡದು.
4.ವದನ್ ಕಿಂಚಿನ್ಮಂತ್ರಮ್-ಜಿತಂತೇ ಸ್ತೋತ್ರ,’ನತಮಂಹೋ’ ಸೂಕ್ತ
ಮೊದಲಾದವುಗಳನ್ನು ಹೇಳಿಕೊಳ್ಳಬೇಕು.
5.ಕರೌ ಚಲನವರ್ಜಿತೌ- ಕೈಗಳನ್ನು ಮುಂದೆ ಹಿಂದೆ
ಅಲುಗಾಡಿಸಕೂಡದು. ಕೈಜೋಡಿಸಿ ನಡೆಯಬೇಕು.
6.ಪಾದೌಪಾದಾಂತರೇ ಕೃತ್ವಾ–ಬೀಸು ಹೆಜ್ಜೆ ಹಾಕ ಬಾರದು.
ಒಟ್ಟಿ ನಲ್ಲಿ ತುಂಬು ಗರ್ಭಿಣಿಯೋರ್ವಳು ನೀರು ತುಂಬಿದ ಕೊಡವನ್ನು
ಹೊತ್ತು ಮೆಲ್ಲನೆ ನಡೆಯುವಂತೆ ನಿಧಾನಗತಿ ಇರಬೇಕು.
ಹೆಜ್ಜೆಗಳಿಗೆ ಪಾದದಷ್ಟೆ ಅಂತರ ವಿರಬೇಕು.
#ಪ್ರದಕ್ಷಿಣೆ_ಸಂಖ್ಯೆ
ದುರ್ಗೆಗೆ ಒಂದು ಪ್ರದಕ್ಷಿಣೆ. ರವಿಗೆ ಏಳು.ಗಣಪತಿಗೆ ಮೂರು.
ವಿಷ್ಣುವಿಗೆ ನಾಲ್ಕು. ಶಿವನಿಗೆ ಅರ್ದ ಪ್ರದಕ್ಷಿಣೆ. ವರಾಹ ಹೀಗೆಂದಿದೆ.
ವಿಷ್ಣು ತ್ರೀರ್ಥರೂ ನಾಲ್ಕು ಪ್ರದಕ್ಷಿಣೆ ಹಾಕುವಂತೆ ಆದೇಶಿಸುತ್ತಾರೆ.
ಪದ್ಮ-ಬ್ರಹ್ಮಾಂಡ ಮೊದಲಾದ ಪುರಾಣಗಳಲ್ಲಿ ಪ್ರದಕ್ಷಿಣೆ ವಿಚಾರ
ಬಂದೊಡನೆ ನಾಲ್ಕು ಪ್ರದಕ್ಷಿಣೆಗಳನ್ನೇ ಆದೇಶಿಸಲಾಗಿದೆ. ದೇವ
ದೇವನಿಗೆ ನಾಲ್ಕು ಪ್ರದಕ್ಷಿಣೆ ಬಂದಲ್ಲಿ ಅಶ್ವಮೇದ ಫಲ ವೆಂದಿದ್ದಾರೆ.
ಸಾಮಾನ್ಯವಾಗಿ ‘ಮೂರು ಸುತ್ತು ಬರುವುದು’ ಎಂಬ ಭಾವನೆ
ಆದರೆ ಗಣಪತಿ ದೇವಸ್ಥಾನ ಕ್ಕೆ
ಮಾತ್ರ ಮೂರು ಪ್ರದಕ್ಷಿಣೆಗೆ ಅನುಮತಿ. ನಿತ್ಯ ಪೂಜೆಯಲ್ಲಿ ಅಥವ
ವಿಷ್ಣು ದೇವಸ್ಥಾನಗಳಲ್ಲಿ ನಾಲ್ಕು ಪ್ರದಕ್ಷಿಣೆ ಯೆಂಬುದೇ ಪ್ರಶಸ್ತ. ಮೂರು
ಪ್ರದಕ್ಷಿಣೆ ವಿಧಿಸುವ ಪದ್ಮವು ಮೂರು ಪ್ರದಕ್ಷಿಣೆ ಮಾಡಿದ ಮೇಲೆ
ನಮಸ್ಕಾರ ಮಾಡಿ ಮತ್ತೊಂದು ಪ್ರದಕ್ಷಿಣೆ ಬರಬೇಕೆಂದಿದೆ. ಹಾಗಾಗಿ
ಮೂರು ಪ್ರದಕ್ಷಿಣೆ ಬಂದು ದೀರ್ಘದಂಡ ನಮಸ್ಕಾರ ಮಾಡಿ
ಮತ್ತೊಂದು ಪ್ರದಕ್ಷಿಣೆ ಬಂದು ಕೈ ಮುಗಿದು ಬಾಗುವುದು.
ಪ್ರದಕ್ಷಿಣೆಯ ಮೊದಲನೆ ಹೆಜ್ಜೆಯಿಂದ ಮನಸ್ಸಿನಂದ ಮಾಡಿದ
ಪಾಪವು, ಎರಡನೇ ಹೆಜ್ಜೆಯಿಂದ ಮಾತಿನಿಂದ ಪಾಪವು ಮತ್ತು
ಮೂರನೇ ಹೆಜ್ಜೆಯಿಂದ ದೇಹದಿಂದ ಮಾಡಿದ ಪಾಪವು
ನಾಶವಾಗುತ್ತದೆ. (ಪುರಾಣ .ಅಧ್ಯಾಯ9,v28).
ಗಣಪತಿಗೆ ಒಂದು ಪ್ರದಕ್ಷಿಣೆ, ಸುರ್ಯನಿಗೆ ಎರಡು,ಶಿವನಿಗೆ
ಮೂರು,ದೇವಿ ಮತ್ತು ವಿಷ್ಣುವಿಗೆ ನಾಲ್ಕು, ಏಳು ಪ್ರದಕ್ಷಿಣೆ
ಕೇರಳದಲ್ಲಿನ ನಂಬಿಕೆಯೆಂದರೆ ಮೊದಲನೇ ಪ್ರದಕ್ಷಿಣೆ ಬ್ರಹ್ಮಹತ್ಯಾ ದೋಷವನ್ನು,
ಎರಡನೇ ಪ್ರದಕ್ಷಿಣೆ ಸಂಪತ್ತ್ತನ್ನು ಗಳಿಸಲು ಮಾಡಿದ
ಧೋಷವನ್ನು
ಮತ್ತ್ತು ಮೂರನೇ ಪ್ರದಕ್ಷಿಣೆ ಪರಲೋಕ ಸಾಧನೆಗೆ
ಸಹಾಯಮಾಡುತ್ತದೆ. ಸ್ವಯಂಭು ಆಗಮದ ಪ್ರಕಾರ ದಿನಕ್ಕೆ 21
ಪ್ರದಕ್ಷಿಣೆ ಉತ್ತಮ ಫಲ ನೀಡತ್ತದೆ.