SEARCH HERE

Wednesday, 24 March 2021

ಗಣಪತಿ ಅಥರ್ವಶೀರ್ಷ ganapati atharvasheesha

ಗಣಪತಿ ಅಥರ್ವಶೀರ್ಷದ ಮಹತ್ವ - ಗಣಪತಿ ಅಥರ್ವಶೀರ್ಷ ಅಥವಾ ಗಣೇಶೋಪನಿಷತ್ ಎಂದು ಕರೆಯಲ್ಪಡುವ ಗಣಪತಿಸ್ತುತಿಯ ಮಂತ್ರ ಪ್ರಸಿದ್ಧವಾದುದು.  ಇದನ್ನು ಕೇಳುತ್ತಿದ್ದರೆ, ಕರ್ಣಾನಂದದ ಜೊತೆಗೆ ಮನಸ್ಸಿಗೂ ಆನಂದವಾಗುತ್ತದೆ. ನಿರ್ವಿಘ್ನದಾಯಕನಾದ ಗಣಪತಿ ಆದಿಪೂಜಿತನಾಗಿರುವುದರ ಜೊತೆಗೆ, ಹೆಚ್ಚಿನ ಜನರು ಇಷ್ಟಪಡುವ ದೇವನಾಗಿದ್ದಾನೆ. ಹಾಗಾಗಿಯೇ  ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ | ಅನೇಕ ದಂತಂ ಭಕ್ತಾನಾಮ್ ಏಕದಂತಮುಪಾಸ್ಮಹೇ ||, ಎಂಬ ಶ್ಲೋಕ ಹುಟ್ಟಿಕೊಂಡಿದ್ದು.

ಈ ಅಥರ್ವಶೀರ್ಷವನ್ನು ಯಾರು ಅಧ್ಯಯನ ಮಾಡುತ್ತಾರೋ ಅವರು ಬ್ರಹ್ಮಸಾûಾತ್ಕಾರಕ್ಕೆ ಅರ್ಹರಾಗುತ್ತಾರೆ ಎನ್ನಲಾಗಿದೆ.  ಅವರು ವಿಘ್ನಗಳಿಗೊಳಗಾದರೆ, ವಿಘ್ನಗಳೇ ಅವರಿಂದ ದೂರವಾಗಿಬಿಡುತ್ತವೆ. ಅವರು ಸುಖವನ್ನೇ ಹೊಂದುವವರಾಗುತ್ತಾರೆ. ಪಂಚ ಮಹಾಪಾಪಗಳಿಂದಲೂ ಬಿಡುಗಡೆ ಹೊಂದುತ್ತಾರೆ. ಸಂಜೆ ಇದನ್ನು ಪಠಿಸಿದರೆ ಹಗಲಿನಲ್ಲಿ ಮಾಡಿದ ಪಾಪಗಳನೂ, ಬೆಳಗ್ಗೆ ಪಠಿಸಿದರೆ ರಾತ್ರಿಯಲ್ಲಿ ಮಾಡಿದ ಪಾಪಗಳನ್ನೂ ಕಳೆದುಕೊಳ್ಳುತ್ತಾರೆ. ಸಂಜೆ ಮತ್ತು ಬೆಳಗ್ಗೆ ಎರಡೂ ಸಮಯದಲ್ಲಿ ಪಠಿಸಿದರೆ ಪಾಪರಹಿತರಾಗುತ್ತಾರೆ. ಸದಾ ಇದನ್ನು ಪಠಿಸುವವರು ವಿಘ್ನರಹಿತರಾಗುತ್ತಾರೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ$ ಎಂಬ ಪುರುಷಾರ್ಥಗಳನ್ನು ಹೊಂದುತ್ತಾರೆ.

ಓಂ ನಮೋ ವ್ರಾತಪತಯೇ ನಮೋ ಗಣಪತೆಯೇ ನಮಃ ಪ್ರಮಥಪತೆಯೇ ನಮಸ್ತೇಸ್ತು
ಲಂಬೋದರಾಯೈಕದಂತಾಯ ವಿಘ್ನನಾಶಿನೇ ಶಿವಸುತಾಯ ಶ್ರೀ ವರವರದಮೂರ್ತಯೇ ನಮಃ||
*****

No comments:

Post a Comment