|| ಶ್ರೀಗುರುರಾಜೋ ವಿಜಯತೇ ||
Vrundavana or Brundavana Brindavana
॥ ಮ್ರತ್ತಿಕಾ ಮಹತ್ವ ॥
ಯತಿ ವೃಂದಾವನ ಪವಿತ್ರತೆ
ವೃಂದಾವನವೆಂದರೆ ಪವಿತ್ರವಾದ ತುಲಸಿಯ ಕಟ್ಟೆ. ಮಾದ್ವ ಪರಂಪರೆಯಲ್ಲಿ ಕೀರ್ತಿಶೇಷರಾದ ಯತಿಗಳ ಭೌತಿಕ ದೇಹವನ್ನು ಭೂಸ್ಠಾಪನೆ ಮಾಡಿ ಮೇಲೆ ತುಲಸಿ ವೃ಼ಕ಼್ವನ್ನು ನೆಡುವ ಸಂಪ್ರದಾಯವಿದೆ “ಪರಮಹಂಸಸ್ಯ ಸ್ಥಲೇ ಸಮಧಿಃ ಮುಖ್ಯಃ ಜಲೇ ಮಧ್ಯಮಃ” ಎಂದಿರುವದರಿಂದ ಮೃತ ಯತಿಯ ಶರೀರವನ್ನು ಆಳವಾದ ತೆಗ್ಗು ತೆಗದು ಅದರ ಒಳಗೆ ಆಳವಾದ ತೆಗ್ಗಿನಲ್ಲಿ ಪದ್ಮಾಸನದಲ್ಲಿ ಕುಡಿಸಿ ದಂಡಕಮಲುಗಲನ್ನು ಕೊಟ್ಟು ಸಮಾಧಿ ಮಾಡುವರು. ಶುನಕ ಮಹರ್ಷಿಗಳಿಂದ ಉಕ್ತವಾದ ವಿಧಾನ ರೀತ್ಯಾ ಈ ಸಂಸ್ಕಾರವನ್ನು ನಡೆಸಿ ಮೇಲೆ ಕಲ್ಲಿನ ಕಟೆಯನ್ನು ಕಟ್ಟಿ ಅದರ ಮೇಲೆ ತುಳಸಿಯನ್ನು ನೆಡುವರು. ಇದೇ ಆಯಾ ಯತಿಗಳ ವೃಂದಾವನ ಎನ್ನಿಸಿಕೊಳ್ಳುತ್ತದೆ. ಮುಂದೆ ೪-೬ ತಿಂಗಳಲ್ಲಿ “ಕಳಾಕರ್ಷಣ” ವಿದಿ ನಡೆದು ಯತಿಗಳ ಶಾಶ್ವತತವಾದ ಸ್ಥಿರ ವೃಂದಾವನವು ಸಿದ್ದವಾಗುವದು. ಇದನ್ನು ಅವರ ನಿತ್ಯ ಪೂಜೆ ಅಭಿಷೇಕ ಪಂಚಾಮೃತ, ಹಸ್ತೋದಕಗಳಿಗಾಗಿ ಯತ್ಟಿಗಳ ಪ್ರತೀಕವೆಂದು ಬಳಸಲಾಗುತ್ತದೆ. ಅಲ್ಲದೇ ಪ್ರತಿ ವಾರ್ಷಿಕ ಆರಾಧನೆಯಲ್ಲಿ ವಿಶೇಷ ಪೂಜೆ ಅಲಂಕಾರಗಳು ನಡೆಯುವವು.
ನಮ್ಮ ಪರಂಪರೆಯಲ್ಲಿ ಶ್ರೀ ಮನ್ಮಧ್ವಾಚಾರ್ಯರು ಇಂದಿಗೂ ಬದರಿಕಾಶ್ರಮ ದಲ್ಲಿ ಶ್ರೀ ವೇದವ್ಯಾಸ ದೇವರ ಹತ್ತಿರ ಅಧ್ಯಯನ ಮಾಡುತ್ತಿರುವುದರಿಂದ ಅವರ ವೃಂದಾವನದ ಪ್ರಶ್ನೆಯೇ ಬರುವ.ದಿಲ್ಲ.
ಮುಖ್ಯವಾಗಿ ಈ ವೃಂದಾವನಗಳಲ್ಲಿ ವಿಶೇಷತ: ದೇವರ, ಪ್ರಾಣದೇವರ ಹಾಗೂ ಆಯಾ ಯತಿಗಳ ಸನ್ನಿಧಾನವಿರುತ್ತದೆ. ಆರಾಧನಾ ದಿನಗಳಲ್ಲಂತೂ ಗುರುಗಲ ವಿಶೇಷತ: ಅನುಗ್ರಹೋನ್ಮುಖರಾಗುತ್ತಾರೆ. ಎಲ್ಲ ಯತಿಗಳು ವೃಂದಾವನಸ್ಠರಾದಮೇಲೆ ಅವರ ಮಹಿಮೆಯನ್ನು ತಿಲಿಸುವ ಒಂದು ಶ್ಲೋಕವನ್ನು ರಚಿಸಲಾಗುತ್ತದೆ. ಇದಕ್ಕೆ ಚರಮ ಶ್ಲೋಕವೆಂದು ಹೇಳುತ್ತಾರೆ. ಈ ಶ್ಲೋಕದಲ್ಲಿ ಆಯಾ ಯತಿಗಳ ದೀಕೆ಼ ಕೊಟ್ಟ ಗುರುಗಳ ಹೆಸರನ್ನೂ ಪ್ರಸ್ತಾಪಿಸಲಾಗುತ್ತದೆ.’ವೃಂದಾವನವೆಂದರೆ ಪವಿತ್ರವಾದ ತುಲಸಿಯ ಕಟ್ಟೆ. ಮಾದ್ವ ಪರಂಪರೆಯಲ್ಲಿ ಕೀರ್ತಿಶೇಷರಾದ ಯತಿಗಳ ಭೌತಿಕ ದೇಹವನ್ನು ಭೂಸ್ಠಾಪನೆ ಮಾಡಿ ಮೇಲೆ ತುಲಸಿ ವೃ಼ಕ಼್ವನ್ನು ನೆಡುವ ಸಂಪ್ರದಾಯವಿದೆ “ಪರಮಹಂಸಸ್ಯ ಸ್ಥಲೇ ಸಮಧಿಃ ಮುಖ್ಯಃ ಜಲೇ ಮಧ್ಯಮಃ” ಎಂದಿರುವದರಿಂದ ಮೃತ ಯತಿಯ ಶರೀರವನ್ನು ಆಳವಾದ ತೆಗ್ಗು ತೆಗದು ಅದರ ಒಳಗೆ ಆಳವಾದ ತೆಗ್ಗಿನಲ್ಲಿ ಪದ್ಮಾಸನದಲ್ಲಿ ಕುಡಿಸಿ ದಂಡಕಮಲುಗಲನ್ನು ಕೊಟ್ಟು ಸಮಾಧಿ ಮಾಡುವರು. ಶುನಕ ಮಹರ್ಷಿಗಳಿಂದ ಉಕ್ತವಾದ ವಿಧಾನ ರೀತ್ಯಾ ಈ ಸಂಸ್ಕಾರವನ್ನು ನಡೆಸಿ ಮೇಲೆ ಕಲ್ಲಿನ ಕಟೆಯನ್ನು ಕಟ್ಟಿ ಅದರ ಮೇಲೆ ತುಳಸಿಯನ್ನು ನೆಡುವರು. ಇದೇ ಆಯಾ ಯತಿಗಳ ವೃಂದಾವನ ಎನ್ನಿಸಿಕೊಳ್ಳುತ್ತದೆ. ಮುಂದೆ ೪-೬ ತಿಂಗಳಲ್ಲಿ “ಕಳಾಕರ್ಷಣ” ವಿದಿ ನಡೆದು ಯತಿಗಳ ಶಾಶ್ವತತವಾದ ಸ್ಥಿರ ವೃಂದಾವನವು ಸಿದ್ದವಾಗುವದು. ಇದನ್ನು ಅವರ ನಿತ್ಯ ಪೂಜೆ ಅಭಿಷೇಕ ಪಂಚಾಮೃತ, ಹಸ್ತೋದಕಗಳಿಗಾಗಿ ಯತ್ಟಿಗಳ ಪ್ರತೀಕವೆಂದು ಬಳಸಲಾಗುತ್ತದೆ. ಅಲ್ಲದೇ ಪ್ರತಿ ವಾರ್ಷಿಕ ಆರಾಧನೆಯಲ್ಲಿ ವಿಶೇಷ ಪೂಜೆ ಅಲಂಕಾರಗಳು ನಡೆಯುವವು.
ನಮ್ಮ ಪರಂಪರೆಯಲ್ಲಿ ಶ್ರೀ ಮನ್ಮಧ್ವಾಚಾರ್ಯರು ಇಂದಿಗೂ ಬದರಿಕಾಶ್ರಮ ದಲ್ಲಿ ಶ್ರೀ ವೇದವ್ಯಾಸ ದೇವರ ಹತ್ತಿರ ಅಧ್ಯಯನ ಮಾಡುತ್ತಿರುವುದರಿಂದ ಅವರ ವೃಂದಾವನದ ಪ್ರಶ್ನೆಯೇ ಬರುವ.ದಿಲ್ಲ.
ಮುಖ್ಯವಾಗಿ ಈ ವೃಂದಾವನಗಳಲ್ಲಿ ವಿಶೇಷತ: ದೇವರ, ಪ್ರಾಣದೇವರ ಹಾಗೂ ಆಯಾ ಯತಿಗಳ ಸನ್ನಿಧಾನವಿರುತ್ತದೆ. ಆರಾಧನಾ ದಿನಗಳಲ್ಲಂತೂ ಗುರುಗಲ ವಿಶೇಷತ: ಅನುಗ್ರಹೋನ್ಮುಖರಾಗುತ್ತಾರೆ. ಎಲ್ಲ ಯತಿಗಳು ವೃಂದಾವನಸ್ಠರಾದಮೇಲೆ ಅವರ ಮಹಿಮೆಯನ್ನು ತಿಲಿಸುವ ಒಂದು ಶ್ಲೋಕವನ್ನು ರಚಿಸಲಾಗುತ್ತದೆ. ಇದಕ್ಕೆ ಚರಮ ಶ್ಲೋಕವೆಂದು ಹೇಳುತ್ತಾರೆ. ಈ ಶ್ಲೋಕದಲ್ಲಿ ಆಯಾ ಯತಿಗಳ ದೀಕೆ಼ ಕೊಟ್ಟ ಗುರುಗಳ ಹೆಸರನ್ನೂ ಪ್ರಸ್ತಾಪಿಸಲಾಗುತ್ತದೆ.’
**********
॥ ಮ್ರತ್ತಿಕಾ ಮಹತ್ವ ॥
ನಾವು ಪ್ರತಿನಿತ್ಯ ದೇವರ ತೀರ್ಥವನ್ನು ಮತ್ತುಪಾದೋದಕವನ್ನು ಹೇಗೆ ಪ್ರಾಶನ ಮಾಡುತ್ತೆವೆಯೋ , ಅದರಂತೆ ಮ್ರತ್ತಿಕಾ ತೀರ್ಥ ಪ್ರಾಶನ ಮಾಡುವುದು ಶಿಷ್ಟ
ಸಮ್ಮತವಾಗಿದೆ. ಯತಿಗಳ ಬ್ರಂದಾವನಗತ ಮ್ರತ್ತಿಕೆಯು ಉತ್ತಮವಾದ ದಿವ್ಯೌಷಧವಿದ್ದಂತೆ "ಸಕಲ ರೋಗ ನಿವಾರಕವೂ ,ಪಾಪ ಪರಿಹಾರಕವೂ , ಮನೋರೋಗ ನಿವಾರಕವು , ಉತ್ತಮಲೋಕ ಪ್ರಾಪ್ತಿ ಸಾಧಕವೂ ,ಸಕಲಇಷ್
ಪ್ರದವೂ , ತಾಪತ್ರಯ ನಿವಾರಕವು , ಭೂತಪ್ರೇತಪಿಶಾಚಾದಿಗಳನ್ನು ಉಚ್ಛಾಟನೆ ಮಾಡುವ ಶಕ್ತಿಯುಳ್ಳದ್ದಾಗಿದೆ ಪರಂಪರೆಯಿಂದ ಮೋಕ್ಷಾದಿ ಪುರುಷಾರ್ಥಪ್ರದವು ಆಗಿದೆ . ಇಂತಹ ಮ್ರತ್ತಿಕೆಯನ್ನು ಪ್ರತಿನಿತ್ಯ ನಮ್ಮ ದೇಹಕ್ಕೆ ಲೇಪಿಸಿಕೊಂಡರೆ
ಉತ್ತಮವಾದ ಕಾಂತಿ ಉಂಟಾಗುತ್ತದೆ .
ಪ್ರತಿನಿತ್ಯ ಯತಿಗಳ ಬ್ರಂದಾವನಗತ ಮ್ರತ್ತಿಕೆ ತೀರ್ಥ ಪ್ರಾಶನ , ಹಣೆಯಲ್ಲಿ ಮ್ರತ್ತಿಕೆ ಧಾರಣೆ ಮತ್ತು ದೇಹಕ್ಕೆ ಲೇಪಿಸಿಕೊಳ್ಳುವುದು ಪ್ರಾಚೀನ ಕಾಲದಿಂದಲೂ (ಪ್ರಾಜ್ಞ )
"ಜ್ಞಾನಿಸಮ್ಮತ" ವಾಗಿರುವದಲ್ಲದೆ , ಇವತ್ತಿಗೂ ಮಾಧ್ವ ಜನಾಂಗದಲ್ಲಿ ಪೂಜ್ಯನಿಯ ಆಚರಣೆ ಕಂಡುಬರುತ್ತದೆ .ಅದರಲ್ಲೂ "ಭಾವಿಸಮೀರ ಶ್ರೀ ವಾದಿರಾಜರ ಮ್ರತ್ತಿಕೆ " ಹಾಗೂ "ಮಂತ್ರಾಲಯ ಪರಿಮಳಾಚಾರ್ಯರ ಮ್ರತ್ತಿಕೆ "ನಂಬಿದ ಭಕ್ತರಿಗೆ ಪರಮಾನಂದ ವಿಷಯವಾಗಿದೆ .
"ವೃಂದಾವನಗತ ಮ್ರತ್ತಿಕೆಯ ಮಹತ್ವ
1) " ಶ್ರೀ ರಾಘವೇಂದ್ರ ಗುರುಪಾದಜಲಂ ಕಷಾಯಂ
ಮಾತ್ರೋತ್ತಮಾಂ ಗುರುಶಿರೋಗತಮ್ರತ್ತಿಕಾಂ ಚ ।
ಸೇವೆ ಸದಾ ಸಕಲರೋಗ ನಿವ್ರತ್ತಿಹೇತುಂ
ತಂ ಪ್ರಾಪ್ಯ ಸದ್ಗುಣಗಣಂ ಗುರು ರಾಘವೇಂದ್ರಂ " ॥
ಅರ್ಥ : ಶ್ರೀ ರಾಯರ ಪಾದೋದಕವು ಕಷಾಯವಿದ್ದಂತೆ.
ಸಕಲ ರೋಗಗಳನ್ನು ನಿವ್ರತ್ತಿಗೊಳಿಸುತ್ತದೆ . ಶ್ರೀರಾಯರ ಶಿರೋಗತವಾದ ಮ್ರತ್ತಿಕೆಯು ಉತ್ತಮವಾದ ಮಾತ್ರೆಯಿದ್ದಂತೆ , ಇಂತಹ ಶ್ರೀ ರಾಯರ ಪಾದೋದಕವನ್ನು ಮತ್ತು ಮ್ರತ್ತಿಕಾ ತೀರ್ಥವನ್ನು ಸೇವಿಸುತ್ತೇನೆ ಎಂಬ ಶುದ್
ಸಾತ್ವಿಕ ಭಾವನೆಯಿಂದ ಪ್ರತಿನಿತ್ಯ ಸೇವಿಸಬೇಕು .
2) ಕ್ರಷ್ಣಾವಧೂತರು ಶ್ರೀ ರಾಘವೇಂದ್ರತಂತ್ರದಲ್ಲಿ -
"ಮ್ರತ್ತಿಕಾ ಸೇವನೇನೈವ ಸರ್ವರೋಗನಿವಾರಣ :।
ಮೇಧಾವೀ ಮೇಹರೋಗಘ್ನ :ಮೇಧ್ಯರೂಪಶ್ಚ ಮೇಧುರ":॥
ಅರ್ಥ -ಮ್ರತ್ತಿಕೆಯನ್ನು ಸೇವಿಸುವುದರಿಂದ ಶ್ರೀರಾಘವೇಂದ್ರ
ಸ್ವಾಮಿಗಳು ಸರ್ವರೋಗಗಳನ್ನು ನಿವಾರಿಸುತ್ತಾರೆ .
ಶ್ರೀಮದಪ್ಪಣಾಚಾರ್ಯರು ಹೀಗೆ ಹೇಳುತ್ತಾರೆ -
"ಯದ್ವ್ರಂದಾವನಸಪ್ರದಕ್ಷಿಣನಮಸ್ಕಾರಭಿಷೇಕ ಸ್ತುತಿ
ಧ್ಯಾನಾರಾಧನ ಮ್ರದ್ವಿಲೇಪನಮುಖಾನೇಕೋಪಚಾರಾನ್ಸದಾ
ಕಾರಂಕಾರಮಭಿಪ್ರಯಾಂತಿ ಚತುರೋ ಲೋಕಾ: ಪುಮರ್ಥಾನ್ಸದಾ
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾಧ್ರುವಂ
ಮಂಗಲಂ ॥
ಅರ್ಥ -ಶ್ರೀರಾಯರ ಬ್ರಂದಾವನಕ್ಕೆ ಪ್ರದಕ್ಷಿಣೆ ಸಹಿತ ನಮಸ್ಕಾರ ಮಾಡುವುದು , ಪಂಚಾಮ್ರತ ಅಭಿಷೇಕ , ಸ್ತೋತ್ರ,ಧ್ಯಾನ , ಪೂಜೆ ,ಮ್ರತ್ತಿಕ ಲೇಪನ ಮಾಡುವ ಜನರು ಸರ್ವದಾ ಸಕಲ ಪುರುಷಾರ್ಥಗಳನ್ನು ಹೊಂದುತ್ತಾರೆ .
ಅದೇ ರೀತಿಯಲ್ಲಿ " ವಾದಿರಾಜ ಕವಚ "ದಲ್ಲಿ
"ಕುಷ್ಟಾಪಸ್ಮಾರಲೂತಾನ್ ತಾನ್ ಬಾಲಸ್ಪೋಟಾದಿಕಾನ್ ಬಹೂನ್ ।
ಮ್ರತ್ತಿಕಾ ನಾಶಯತ್ಯೇವ ವೃಂದಾಗತಾ ಮುನೆ: ॥
ಅರ್ಥ - ಕುಷ್ಠ ,ಅಪಸ್ಮಾರ ,ಲೂತಿ , ಬಾಲಗ್ರಹ ಮುಂತಾದ
ಬಹುತರವಾದ ರೋಗಗಳನ್ನು ಶ್ರೀ ಗುರುವಾದಿರಾಜರ ಬ್ರಂದಾವನದ ಮ್ರತ್ತಿಕೆಯು ಶಮನ ಮಾಡುವುದು .
ಹೀಗೆ ಮ್ರತ್ತಿಕೆಗೆ ವಿಶೇಷ ಮಹತ್ವವನ್ನು ನೀಡಿ , ಭಕ್ತರು ತಾವು ಇರುವಲ್ಲಿಯೇ ಸೇವಾದಿಗಳಿಗೆ ಮ್ರತ್ತಿಕೆಗೆ ಸನ್ನಿಧಾನವಿತ್ತು ಬಹು ಉಪಕಾರ ಮತ್ತು ಅನುಗ್ರಹ ಮಾಡಿದವರು ಸೋದೆ ಪ್ರಭುಗಳು ,ಮತ್ತು ಮಂತ್ರಾಲಯ ಪ್ರಭುಗಳು .
"ನಿರ್ದೋಷರಾದ ಶ್ರೀವಾದಿರಾಜರ" ಮತ್ತು "ದೋಷರಹಿತರಾದ ಮಂತ್ರಾಲಯ ಪ್ರಭುಗಳ " ಮ್ರತ್ತಿಕೆ ತೀರ್ಥ ಪ್ರಾಶನ ಲೇಪನ ಮಾಡಿಕೋಳ್ಳೊಣ
ಹರಿ ವಾಯುರ್ವಾದಿರಾಜರ ಮತ್ತು ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗೋಣ.
|| ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀಗುರ್ವಂತರ್ಗತ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಸೀತಾಪತಿ ಶ್ರೀಮೂಲರಾಮಚಂದ್ರ ಕುಲದೈವಃ ಅಶ್ವಥ್ಥ ಶ್ರೀಲಕ್ಷ್ಮೀನರಸಿಂಹಾರ್ಪಣಮಸ್ತು ||
********
No comments:
Post a Comment