SEARCH HERE

Tuesday, 1 January 2019

ಸರ್ವ ರೋಗ ನಿವಾರಣೆ ಓಂ ಮಂತ್ರ ದಿಂದ chant OM and be healthy


"ಓಂ" ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ - ಹಿಂದೂ ಧರ್ಮದ ಅನುಸಾರ ಓಂ ಗೆ ತನ್ನದೇ ಆದ ಮಹತ್ವ ಇದೆ. ಓಂ ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ ಓಂ ಉಚ್ಛಾರ ಮಾಡದೇ ಮಂತ್ರ ಹೇಗೆ ಪೂರ್ಣಗೊಳ್ಳುವುದು..? ಆದರೆ 'ಓಂ'ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.?

'ಓಂ' ನಿಂದ ಉಂಟಾಗುವ ರಹಸ್ಯಮಯ ಶಾರೀರಿಕ ಉಪಯೋಗಗಳನ್ನು ಹೇಳುತ್ತೇವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ.

'ಓಂ' ಮತ್ತು ಥೈರಾಯ್ಡ್‌:
'ಓಂ' ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್‌ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

ಓಂ ಮತ್ತು ಭಯ : ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು 'ಓಂ' ಎಂದು ಉಚ್ಛರಿಸಿ.

ಓಂ ಮತ್ತು  ಒತ್ತಡ :
ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ.
ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.

ಓಂ ಮತ್ತು ರಕ್ತ ಸಂಚಾರ :  ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. 'ಓಂ' ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.

ಓಂ ಮತ್ತು ಪಚನ ಕ್ರಿಯೆ : ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.

'ಓಂ' ಮತ್ತು ಸ್ಫೂರ್ತಿ : ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.

ಓಂ ಮತ್ತು ಸುಸ್ತು : ಆಯಾಸವನ್ನು ದೂರ ಮಾಡಲು ಸುಲಭ ಉಪಾಯ 'ಓಂ' ಉಚ್ಛಾರ ಮಾಡುವುದು.

ಓಂ ಮತ್ತು ನಿದ್ರೆ : ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

ಓಂ ಮತ್ತು ಶ್ವಾಸಕೋಶ : 'ಓಂ' ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.

ಓಂ ಮತ್ತು ಬೆನ್ನೆಲುಬು : 'ಓಂ' ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ..
 "ಓಂ" ಕಾರ ಎಂಬ ಮಂತ್ರದ ಹಿಂದಿರುವ " ವಿಜ್ಞಾನ "

ಭಾರತೀಯ ವೇದ ಪರಂಪರೆಗೆ ಬಹುದೊಡ್ಡ ಇತಿಹಾಸ ಇದೆ.ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ವೇದ ಮಂತ್ರಗಳು ಮನುಷ್ಯನನ್ನು ಆರೋಗ್ಯಕರವಾದ ಮಾರ್ಗದಲ್ಲಿ ಮುನ್ನಡೆಸಲು ಸಹಕಾರಿಯಾಗಿದೆ

ಈ ಮಾರ್ಗದಲ್ಲಿ ಪ್ರಥಮವಾಗಿ ನಿಲ್ಲುವುದೇ "ಓಂ" ಕಾರದ ಮಂತ್ರ ಈ "ಓಂ" ಕಾರವನ್ನು ಮಹಿಳೆಯರು - ಪುರುಷರು ಯಾರೇ ಆಗಲಿ "ಸ್ವರ ಕ್ರಮ" ವನ್ನು ಅನುಸರಿಸಿ ಉಚ್ಚರಿಸಿದರೆ ದೇಹ ಮತ್ತು ಆತ್ಮದ ಸಾಕ್ಷಾತ್ಕಾರವನ್ನು ಅನುಭವಿಸಬಹುದು

"ಓಂ" ಎನ್ನುವ ಮಂತ್ರ "ಅ ವು ಅಂ " ಎಂಬ ಮೂರು ಶಬ್ದಗಳನ್ನು ಒಳಗೊಂಡಿದೆ.ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಸೂರ್ಯೋದಯದ ಸಮಯದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಏಕಾಂತದಲ್ಲಿ ಕುಳಿತು (ಚಿತ್ರ ನೋಡಿ) ಓಂಕಾರ ಮಂತ್ರವನ್ನು ಜಪಿಸಿದರೆ ನಿಮ್ಮ ಇಡೀ ದೇಹ (ಮೆದುಳಿನಿಂದ ಪಾದದವರೆಗೂ) ಕಂಪಿಸುತ್ತದೆ. ಪರಿಣಾಮ ದೇಹದ ಜೊತೆಯಲ್ಲಿ ಆತ್ಮವೂ ಜಾಗೃತ ವಾಗುವುದರಿಂದ ದೇಹದ ನರ ನಾಡಿಗಳು ಚೈತನ್ಯಪೂರ್ವಕವಾಗಿ ಕೆಲಸ ಮಾಡುತ್ತದೆ

ಓಂಕಾರವನ್ನು ಕಣ್ಣುಗಳನ್ನು ಮುಚ್ಚಿಕೊಂಡು ಹೀಗೆ ಜಪಿಸಬೇಕು....

ಆರಂಭದ ಓ..ಎನ್ನುವ ಶಬ್ದವನ್ನು ಜೋರಾಗಿ ಕನಿಷ್ಟ ಪಕ್ಷ 10 ಸೆಕೆಂಡುಗಳು  ಹೇಳುತ್ತಾ ತುಟಿಗಳನ್ನು ತೆರೆದು ಉಚ್ಚರಿಸಿ

ಅಂ ಎನ್ನುವ ಶಬ್ಧ ಬಂದಾಗ ತುಟಿಗಳನ್ನು ಮುಚ್ಚಿಕೊಂಡು" ಮ್" ಎಂದು ಹತ್ತು ಸೆಕೆಂಡುಗಳು ಉಚ್ಚರಿಸಿ ಹೀಗೆ ತುಟಿಗಳನ್ನು ಮುಚ್ಚಿಕೊಂಡು "ಮ್" ಶಬ್ದವನ್ನು ನೀವು ಉಚ್ಚರಿಸುವಾಗ ನಿಮ್ಮ ಮೆದುಳಿನ ನರಗಳು ಅಲುಗಾಡುವ ಅದ್ಭುತವಾದ ಅನುಭವ ನಿಮಗಾಗುತ್ತದೆ

ಹೀಗೆ ಈ ಕ್ರಮವನ್ನು ಅನುಸರಿಸಿ ಪ್ರತಿನಿತ್ಯ "ಓಂ" ಕಾರ ಮಂತ್ರವನ್ನು 100 ಸಲ ಜಪಿಸುತ್ತಾ ಬಂದರೆ ಮಾನಸಿಕ ಖಾಯಿಲೆಗಳು ದೈಹಿಕ ಖಾಯಿಲೆಗಳಾದ ಸುಸ್ತು..ತಲೆನೋವು ..ಹೃದಯ ಸಂಬಂಧಿ ಖಾಯಿಲೆಗಳು ರಕ್ತದೊತ್ತಡ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.ಮಕ್ಕಳಿಗೆ ಈ ಓಂಕಾರದ ಮಂತ್ರದ ಜಪದ ಅಭ್ಯಾಸ ಮಾಡಿಸಿದರೆ ಓದಿನಲ್ಲಿ ಏಕಾಗ್ರತೆ ಮೂಡುವುದರ ಜೊತೆಯಲ್ಲಿ ನೆನಪಿನ ಶಕ್ತಿಯೂ ಹೆಚ್ಚುತ್ತದೆ!!
******

No comments:

Post a Comment