SEARCH HERE

Friday 1 February 2019

ಗಂಗಾಸ್ತೋತ್ರ ಶಂಕರಾಚಾರ್ಯ ganga stotra by shankaracharya


ಶ್ರೀ ಗಂಗಾಸ್ತೋತ್ರವನ್ನು ಶ್ರೀಶಂಕರಾಚಾರ್ಯರು ರಚಿಸಿದ್ದಾರೆ. ಶ್ರೀಗಂಗಾ ಸ್ತೋತ್ರದಲ್ಲಿ 14 ಪರಮ ಪವಿತ್ರವಾದ ರೋಗನಾಶಕವಾದ ಹಾಗೂ ಅತೀ ರಹಸ್ಯವುಳ್ಳ ಶ್ಲೋಕಗಳನ್ನು ರಚಿಸಿದ್ದಾರೆ..
ಶ್ರೀ ಗಂಗಾಸ್ತೋತ್ರವನ್ನು ಓದುತ್ತಿರುವವರಿಗೆ ಜೀವನದಲ್ಲಿ ಯಾವುದೇ ತರಹದ ಖಾಯಿಲೆಗಳು, ಚಿಂತೆಗಳು, ಯೋಚನೆಗಳು ಬರದೆ ದೇಹವು ವಜ್ರಕಾಯ ಶರೀರವಾಗುತ್ತದೆ..
🖎ಯಾರಿಗೆ ಹಾಸಿಗೆಯಿಂದ ಎದ್ದಾಗ ತಲೆ ಸುತ್ತು ಬರುತ್ತದೆಯೋ , ಯಾರಿಗೆ ಆಚೆಕಡೆ ಸುತ್ತಾಡಿದರೆ ತಲೆನೋವು ಬರುತ್ತದೆಯೋ , ಯಾರಿಗೆ B.P.ಇದ್ದು ಎಷ್ಟು ಮಾತ್ರೆ ತೆಗೆದುಕೊಂಡರೂ ಕಡಿಮೆಯಾಗುವುದಿಲ್ಲವೋ, ಯಾರಿಗೆ ತಮ್ಮ ಖಾಯಿಲೆಯನ್ನು ವೈದ್ಯರ ಬಳಿಗೆ ಹೇಳಿದರೆ ಅರ್ಥವಾಗುವುದಿಲ್ಲವೋ, ಅಂತಹವರು "ಶ್ರೀ ಗಂಗಾದೇವಿ" ಸ್ತೋತ್ರವನ್ನು ಓದಿದರೆ ಬಹಳ ಅನುಕೂಲವಾಗುತ್ತದೆ...
🖎ಯಾರು ತುಂಬಾ ಯೋಚನೆಯನ್ನು ಮಾಡುತ್ತಾರೋ, ಯಾರಿಗೆ ನಿದ್ದೆ ಬರುವುದಿಲ್ಲವೋ, ಯಾರು ಮನೋರೋಗಿಯಾಗಿರುತ್ತಾರೋ, ಯಾರಿಗೆ ಮಾತನಾಡುವಾಗ ದೇಹ ಅದರುತ್ತದೆಯೋ, ಯಾರಿಗೆ ಬೆವರು ಜಾಸ್ತಿ ಬರುತ್ತದೆಯೋ, ಯಾರಿಗೆ ಭಯ ಜಾಸ್ತಿ ಆಗುತ್ತಿದೆಯೋ, ಯಾರು ಶವವನ್ನು ನೋಡಿದರೆ ಭಯ ಪಡುತ್ತಾರೆಯೋ, ಯಾರು ಕನಸಿನಲ್ಲಿ ಬೆಚ್ಚಿ ಬೀಳುತ್ತಾರೋ, ಯಾರಿಗೆ ಕೆಟ್ಟ ಕನಸುಗಳು ಪದೇಪದೇ ಬರುತ್ತಿರುತ್ತದೆಯೋ ಅಂತಹವರು ಗಂಗಾದೇವಿಯ ಸ್ತೋತ್ರವನ್ನು ಓದಿ ಸುಮಂಗಲಿಯರಿಗೆ ತಾಂಬೂಲದಾನ ಮಾಡಿದರೆ ಸಕಲ ದೋಷಗಳು ನಿವಾರಣೆಯಾಗುತ್ತದೆ..
ರಾತ್ರಿ ಮಲಗುವ ಮುನ್ನ ಗಂಗಾದೇವಿ ಸ್ತೋತ್ರದ ಎರಡನೇ ಶ್ಲೋಕವನ್ನು ಹೇಳಿಕೊಂಡು ಮಲಗುವುದು ಶುಭ..
🖎ಯಾರಿಗೆ ಹೆಚ್ಚು ವಿದ್ಯೆ ಕಲಿಯಲು ಆಸಕ್ತಿ ಇದ್ದು , ಎಷ್ಟು ಓದಿದರೂ ಮರೆತು ಹೋಗುತ್ತಿದ್ದರೆ , ಯಾರಿಗೆ ಓದುವಾಗ ಹೆಚ್ಚು ಯೋಚನೆಗಳು ಬರುತ್ತಿದ್ದರೆ, ಯಾರಿಗೆ ಪರಿಕ್ಷಾ ಸಮಯದಲ್ಲಿ ದೇಹವು ಸರಿ ಇರುವುದಿಲ್ಲವೋ, ಅಂತವರು "ಶ್ರೀಗಂಗಾ ಸ್ತೋತ್ರ"ದ ೨ ನೇ ಶ್ಲೋಕವನ್ನು 7 ಸಾರಿ ನೀರಿನಲ್ಲಿ ಅಭಿಮಂತ್ರಿಸಿ, ಮಂತ್ರಿಸಿದ ನೀರನ್ನು ತಲೆಗೆ, ಕಣ್ಣುಗಳಿಗೆ, ಹಚ್ಚಿ ಉಳಿದ ನೀರಿನಿಂದ ಮುಖವನ್ನು ತೊಳೆದುಕೊಂಡರೆ ಮಹಾವಿದ್ಯಾವಂತರಾಗುತ್ತಾರೆ..
🖎ಯಾರಿಗೆ ಸಕ್ಕರೆ ಖಾಯಿಲೆ ಇದ್ದು ತುಂಬಾ ಏರುಪೇರಾಗುತ್ತಿರುತ್ತದೆಯೋ ಅಂತಹವರು ಗಂಗಾದೇವಿಯ ದೇವಾಲಯದಲ್ಲಿ ಪೂಜೆ ಮಾಡಿಸಿ ಪಾನಕ ಕೋಸಂಬರಿ ಹಂಚಿದರೆ ಸಕ್ಕರೆ ಖಾಯಿಲೆಯು ಸಮತೋಲನದಲ್ಲಿರುತ್ತದೆ. ಆರೋಗ್ಯವಾಗಿರುತ್ತಾರೆ..
🖎ಯಾರು ಪ್ರತಿದಿವಸ ಸ್ನಾನ ಮಾಡುವಾಗ "ಶ್ರೀ ಗಂಗಾ ಸ್ತೋತ್ರವನ್ನು" ಹೇಳಿ ಸ್ನಾನವನ್ನು ಮಾಡಿದರೆ ಸರ್ವಪಾಪಗಳೂ ನಿವಾರಣೆಯಾಗಿ ದೇಹವು ವಜ್ರಕಾಯವಾಗುತ್ತದೆ..
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೇಜೋವಂತರಾಗಿಯೂ, ಕಾಂತಿವಂತರಾಗಿಯೂ, ದೈವಾಂಶರಾಗಿಯೂ ಕಾಣುತ್ತಾರೆ..
🖎ಹೀಗೆ  ಒಂದೊಂದು  ಸ್ತೋತ್ರಕ್ಕೂ ಒಂದೊಂದು  ಅರ್ಥ ಮತ್ತು ಮಹತ್ವವಿದೆ. ವಿಶೇಷ ಶಕ್ತಿಯಿದೆ..

ದೇವಿ! ಸುರೇಶ್ವರಿ! ಭಗವತಿ! ಗಂಗೇ ತ್ರಿಭುವನತಾರಿಣಿ ತರಳತರಂಗೇ |
ಶಂಕರಮೌಳಿವಿಹಾರಿಣಿ ವಿಮಲೇ ಮಮ ಮತಿರಾಸ್ತಾಂ ತವ ಪದಕಮಲೇ || 1 ||

ಭಾಗೀರಥಿಸುಖದಾಯಿನಿ ಮಾತಸ್ತವ ಜಲಮಹಿಮಾ ನಿಗಮೇ ಖ್ಯಾತಃ |
ನಾಹಂ ಜಾನೇ ತವ ಮಹಿಮಾನಂ ಪಾಹಿ ಕೃಪಾಮಯಿ ಮಾಮಙ್ಞಾನಮ್ || 2 ||

ಹರಿಪದಪಾದ್ಯತರಂಗಿಣಿ ಗಂಗೇ ಹಿಮವಿಧುಮುಕ್ತಾಧವಳತರಂಗೇ |
ದೂರೀಕುರು ಮಮ ದುಷ್ಕೃತಿಭಾರಂ ಕುರು ಕೃಪಯಾ ಭವಸಾಗರಪಾರಮ್ || 3 ||

ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತಃ ಕಿಲ ತಂ ದ್ರಷ್ಟುಂ ನ ಯಮಃ ಶಕ್ತಃ || 4 ||

ಪತಿತೋದ್ಧಾರಿಣಿ ಜಾಹ್ನವಿ ಗಂಗೇ ಖಂಡಿತ ಗಿರಿವರಮಂಡಿತ ಭಂಗೇ |
ಭೀಷ್ಮಜನನಿ ಹೇ ಮುನಿವರಕನ್ಯೇ ಪತಿತನಿವಾರಿಣಿ ತ್ರಿಭುವನ ಧನ್ಯೇ || 5 ||

ಕಲ್ಪಲತಾಮಿವ ಫಲದಾಂ ಲೋಕೇ ಪ್ರಣಮತಿ ಯಸ್ತ್ವಾಂ ನ ಪತತಿ ಶೋಕೇ |
ಪಾರಾವಾರವಿಹಾರಿಣಿ ಗಂಗೇ ವಿಮುಖಯುವತಿ ಕೃತತರಲಾಪಾಂಗೇ || 6 ||

ತವ ಚೇನ್ಮಾತಃ ಸ್ರೋತಃ ಸ್ನಾತಃ ಪುನರಪಿ ಜಠರೇ ಸೋಪಿ ನ ಜಾತಃ |
ನರಕನಿವಾರಿಣಿ ಜಾಹ್ನವಿ ಗಂಗೇ ಕಲುಷವಿನಾಶಿನಿ ಮಹಿಮೋತ್ತುಂಗೇ || 7 ||

ಪುನರಸದಂಗೇ ಪುಣ್ಯತರಂಗೇ ಜಯ ಜಯ ಜಾಹ್ನವಿ ಕರುಣಾಪಾಂಗೇ |
ಇಂದ್ರಮುಕುಟಮಣಿರಾಜಿತಚರಣೇ ಸುಖದೇ ಶುಭದೇ ಭೃತ್ಯಶರಣ್ಯೇ || 8 ||

ರೋಗಂ ಶೋಕಂ ತಾಪಂ ಪಾಪಂ ಹರ ಮೇ ಭಗವತಿ ಕುಮತಿಕಲಾಪಮ್ |
ತ್ರಿಭುವನಸಾರೇ ವಸುಧಾಹಾರೇ ತ್ವಮಸಿ ಗತಿರ್ಮಮ ಖಲು ಸಂಸಾರೇ || 9 ||

ಅಲಕಾನಂದೇ ಪರಮಾನಂದೇ ಕುರು ಕರುಣಾಮಯಿ ಕಾತರವಂದ್ಯೇ |
ತವ ತಟನಿಕಟೇ ಯಸ್ಯ ನಿವಾಸಃ ಖಲು ವೈಕುಂಠೇ ತಸ್ಯ ನಿವಾಸಃ || 10 ||

ವರಮಿಹ ನೀರೇ ಕಮಠೋ ಮೀನಃ ಕಿಂ ವಾ ತೀರೇ ಶರಟಃ ಕ್ಷೀಣಃ |
ಅಥವಾಶ್ವಪಚೋ ಮಲಿನೋ ದೀನಸ್ತವ ನ ಹಿ ದೂರೇ ನೃಪತಿಕುಲೀನಃ || 11 ||

ಭೋ ಭುವನೇಶ್ವರಿ ಪುಣ್ಯೇ ಧನ್ಯೇ ದೇವಿ ದ್ರವಮಯಿ ಮುನಿವರಕನ್ಯೇ |
ಗಂಗಾಸ್ತವಮಿಮಮಮಲಂ ನಿತ್ಯಂ ಪಠತಿ ನರೋ ಯಃ ಸ ಜಯತಿ ಸತ್ಯಮ್ || 12 ||

ಯೇಷಾಂ ಹೃದಯೇ ಗಂಗಾ ಭಕ್ತಿಸ್ತೇಷಾಂ ಭವತಿ ಸದಾ ಸುಖಮುಕ್ತಿಃ |
ಮಧುರಾಕಂತಾ ಪಂಝಟಿಕಾಭಿಃ ಪರಮಾನಂದಕಲಿತಲಲಿತಾಭಿಃ || 13 ||

ಗಂಗಾಸ್ತೋತ್ರಮಿದಂ ಭವಸಾರಂ ವಾಂಛಿತಫಲದಂ ವಿಮಲಂ ಸಾರಮ್ |b
ಶಂಕರಸೇವಕ ಶಂಕರ ರಚಿತಂ vm ಪಠತಿ ಸುಖೀಃ ತವ ಇತಿ ಚ ಸಮಾಪ್ತಃ || 14 ||
******

No comments:

Post a Comment