SEARCH HERE

Friday, 1 February 2019

ಸೊಪ್ಪು green leafage


Eat Soppu...and be healthy
*ಸೊಪ್ಪು...

ಮುದ್ದೆ ಬಸ್ಸಾರಿಗೆ ಹರಿವೇ ಚಿಲಕರಿವೆ ಸೊಪ್ಪು...
ಬಾಯಿ ಹುಣ್ಣಿಗೆ ಬಸಳೇ ಸೊಪ್ಪು...
ಮಧುಮೇಹಿಗಳಿಗೊಳಿತು ಮೆಂತೆ ಸೊಪ್ಪು

ತಂಪಾಗಲು ಬಳಸಿ ದಂಟಿನ‌‌ ಸೊಪ್ಪು..
ಅಪರೂಪಕೆ ಬಳಸಿ ಗೋಣಿ‌ ಸೊಪ್ಪು
ಕೆಮ್ಮು ಶೀತ ನೆಗಡಿಗೆ ಗಾಣಿಕೆ ಸೊಪ್ಪು...
ಉಪ್ಪು ಸಾರಿಗೆ ಬಳಸಿ ಕೀರೆ ಸೊಪ್ಪು...
ಬೆರಕೆ ಮಾಡಿ ಬಳಸಲು ಸೀಗೆ ಸೊಪ್ಪು...
ಕಣ್ಣಿಗೆ ಒಳ್ಳೇದು ಒನಗೊನ್ನೇ ಸೊಪ್ಪ...
ಕರುಳಿಗೆ ಒಳ್ಳೇದು ಕೆಸವೇ ಸೊಪ್ಪು...
ಕಾಮಾಲೆಗೆ ಮದ್ದು ಹಸಿರು ಸೊಪ್ಪು...
ಎಲ್ಲಾ ಜ್ವರಕ್ಕೆ ಮದ್ದು ಪರಂಗಿ ಸೊಪ್ಪು...
ಚೆಂದ ಕಾಣಲು ತಿನ್ನಿ ಚಕೋತ ಸೊಪ್ಪು...
ಘಮ ಘಮ ಅಡುಗೆಗೆ ಪುದೀನ ಸೊಪ್ಪು...
ಮಸೊಪ್ಪಿಗೆ ಚೆನ್ನ ಕುಂಬಳ ಸೊಪ್ಪು...
ಸರ್ವ ರೋಗಗಳಿಗೂ
ಜಾಗಡಿ ಸೊಪ್ಪು..
ವಡೆ ಪಕೊಡಕೆ ಸಬ್ಬಕ್ಕಿ ಸೊಪ್ಪು...

ಒಗ್ಗರಣೆಗೆ ಬೇಕು ಕರಿಬೇವಿನ‌ ಸೊಪ್ಪು
ನೆನಪಿನ‌ ಶಕ್ತಿ ಹೆಚ್ಚಲು ಸರಸ್ವತಿ ಸೊಪ್ಪು
ಪಚನವಾಗಲು ಸಬ್ಬಸಿಗೆ ಸೊಪ್ಪು

ನಮ್ಮಜ್ಜಿ‌ ಇಷ್ಟದ ಕನ್ನೇ ಸೊಪ್ಪು..
ಬೆನ್ನೆಲುಬು ಕಾಯಲು ಅಣ್ಣೆ ಸೊಪ್ಪು...
ನನ್ಮಗಳ‌ ಇಷ್ಟದ ಪಾಲಕ್ ಸೊಪ್ಪು
ನನ್ನಾಕೆ ಇಷ್ಟದ ಒಂದೆಲಗದ ಸೊಪ್ಪು

ತುಸುವೇ ಹುಳಿಯಾಗಿರುವ ಪುಂಡಿ ಸೊಪ್ಪು
ಮಲಬದ್ಧತೆಗೆ ಒಳಿತಂತೆ ಆಕ್ರಿಕಿ ಸೊಪ್ಪು
ಬಹುಸೊಪ್ಪುಗಳನಾಕಿ ಮಾಡುವ ಹುಣ್ಷೆಪ್ಪು

ಪಿಜ್ಜಾ ಬರ್ಗರಿಗೆ ಲೆಟ್ಯೂಸ್ ಸೊಪ್ಪು
ಪರದೇಸಿಗಳಿಷ್ಟ ಪಾರ್ಸ್ಲಿ ಸೊಪ್ಪು
ಮತ್ತೆ ಕೆಲವರಿಗಿಷ್ಟ ಸೆಲೆರಿ ಸೊಪ್ಪು
ಲವಲವಿಕೆಗೆ ಒಳ್ಳೇದು ಲೀಕ್ಸ್ ಸೊಪ್ಪು...
ಪಲ್ಯಕೆ ಇರಲಿ ಈರುಳ್ಳಿ ಸೊಪ್ಪು,
ಕಬ್ಬಿಣದಂಶ ಹೆಚ್ವಿರುವ ನುಗ್ಗೇ ಸೊಪ್ಪು
"ಸಿ" ಜೀವಸತ್ವ ಹೆಚ್ಚಿರುವ ಹುಳಿ ಸೊಪ್ಪು
ನಾರಿನಂಶಕೆ ಬಳಸಿ ಬಗೆಬಗೆಯ ಸೊಪ್ಪು
ಗೊಜ್ಜಿಗೆ ಬೇಕೇ ಬೇಕು ಗೋಂಗುರು ಸೊಪ್ಪು..
ಹುಡುಕಿ ತಂದು ತಿನ್ನಿ ಅಡುಕು ಪುಡುಕನ ಸೊಪ್ಪು
ಸರ್ವ ರೋಗಗಳಿಗೂ ಅಮೃತಬಳ್ಳಿ ಸೊಪ್ಪು...
ಸಕ್ಕರೆ ಖಾಯಿಲೆಗೆ ಮಧುನಾಶಿನಿ ಸೊಪ್ಪು..
ಬಹೂಪಯೋಗಿ ಚಕ್ರಮುನಿ ಸೊಪ್ಪು,
ಆಗೊಮ್ಮೆ ಹೀಗೊಮ್ಮೆ ಬಳಸಿ ಮೂಲಂಗಿ ಸೊಪ್ಪು,
ಘಮಘಮ್ಮೆನ್ನುವ ಕಸ್ತೂರಿ ಸೊಪ್ಪು,
ದೇವಪೂಜೆಗೆ ತುಳಸಿ ಮರುಗದ ಸೊಪ್ಪು
ಕಸೂರಿ‌ ಮೇಥಿ ಘಮ್ಮೆನ್ನುವ ಸೊಪ್ಪು
ಮರೆತೇ ಬಿಟ್ಟಿದ್ದೆ ನೋಡಿ ಕೊತ್ತಂಬರಿ ಸೊಪ್ಪು

ಈಗಲೇ ಬೆಳೆಸಿ..ಬಳಸಿ..ಉಳಿಸಿ... ಈ‌ ಸೊಪ್ಪುಗಳನು.....

*******

No comments:

Post a Comment