SEARCH HERE

Monday 1 April 2019

ರಥಸಪ್ತಮಿ rathasapthami magha shukla saptami







ರಥಸಪ್ತಮಿ ಮಾಘ ಶುಕ್ಲ ಸಪ್ತಮಿ magha shukla saptami,fest rathasapthami magha shukla saptami,
Ratha Saptami
What is Rathasaptami?
It is on this day that Surya rided the chariot to kill Mandeha named Daithya.  ವೈವಸ್ಘತ ಮನ್ವಂತರ ಮಾಘ  ಶುದ್ಧ ಸಪ್ತಮಿ ದಿನ ಸೂರ್ಯ ರಥವನೇರಿ ಮಂದೇಹನೆಂಬ ದೈತ್ಯನ ಕೊಂದನು.
It is on this day that Vishwakarma prepared the Chariot for Rudradevaru to kill Tripurasura.  ಇದೇ ದಿನ ತ್ರಿಪುರಾಸುರ ಸಾವಿಗಾಗಿ ರುದ್ರದೇವರಿಗೆ ವಿಶ್ವಕರ್ಮ ರಥವ ಸಿದ್ಧಪಡಿಸಿದ್ದು.
The Sun Chariot has one wheel, seven horses, Aruna will be the sarathi, and on this Surya – tadantargatha Suryanarayana will be riding. 
ಸೂರ್ಯನ ರಥಕ್ಕೆ ಒಂದು ಚಕ್ರ, ಸಪ್ತ ಕುದುರೆಗಳಿಂದ ಅರುಣನ ಸಾರಥ್ಯದಲ್ಲಿ ರಥಾರೂಢನಾಗಿರುತ್ತಾನೆ ಸೂರ್ಯಾಂತರ್ಗತ ನಾರಾಯಣ.
If on Magha Shudda saptami Bhanuvara and Revathi nakshatra falls, it is termed as Padmaka Yoga and is equal to Thousand Suryagrahana Maha parvakala.
If on Magha Shudda Saptami Surya moves to the next Rashi it is termed as Mahajaya and snaana, daana, tapassu, pitru tarpana will fetch more punya than any other day.
We have to do the snaana with seven saptarka parna ಎಕ್ಕದೆಲೆಗಳಿಂದ ಸ್ನಾನ ರಥಸಪ್ತಮಿ ದಿನ ವಿಶೇಷ.
We have to do the naivedya of Ellu-bella (like Makarasankranthi)

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ “ರಥಸಪ್ತಮಿ” ಬಗ್ಗೆ ಹೇಳಿದ ಕಥೆಯಿದೆ.  ಹಿಂದೆ ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನು ಜನ್ಮದಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳನ್ನು ವಿಚಾರಿಸಲು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು.
ಸೂರ್ಯಾರಾಧನೆ ಮಾಡಿದ ಬೇರೆ ಸನ್ನಿವೇಶಗಳು :
 ಅ. ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ “ಅಕ್ಷಯ ಪಾತ್ರೆ” ಪಡೆದಿದ್ದರು .
ಆ. ಶ್ರೀ ರಾಮಚಂದ್ರ ರಾವಣನ ವಿರುದ್ಧ ಯುದ್ಧ ಪೂರ್ವದಲ್ಲಿ ಅಗಸ್ತ್ಯರಿಂದ ಉಪದೇಶ ಪಡೆದು ಆದಿತ್ಯ ಹೃದಯ ಮೂಲಕ ಸೂರ್ಯಾರಾಧನೆಯ ಮಾಡಿದನು.
ಇ. ಸತ್ರಾಜಿತ ಸೂರ್ಯಾರಾಧನೆ ಮಾಡಿ ಸ್ಯಮಂತಕಮಣಿ ಪಡೆದಿದ್ದ.
***

Ratha Saptami

Ratha Saptami is symbolic of the change of season to spring and the start of the harvesting season. For most Indian farmers, it is an auspicious beginning of the New Year. The festival is observed by all Hindus in their houses and in innumerable temples dedicated to Surya, across India.”
We celebrate Rathasapthami to pray to Lord Surya (Sun God) and thank him for helping with the harvest.

Preparation –
On the Paat (Plank) draw the chariot (Rath) using Geru with decoration such as flags on the top, plantain trees on the sides, sun and moon inside and a chain with people pulling the chariot. On the 2 sides draw 2 rectangles with 10 boxes each – this is for filling with pulses and vegetables which represents the shops on the side of the pathway. It is also representative of the harvest.
In these boxes on one side fill with Haldi, Kumkum, toor Dal, Tamarind, Jaggery, Chilli, Jeera, Pepper.
On the other side fill with Vegetables like a small piece of Red pumpkin, sugarcane, elandapazham/bora, Sweet potato piece, Avarakkai. Refer to the sample photo below (Note : I will get a better picture next time from my Mom/MIL and change this one. Apart from the drawing (which is flawed) I did not have all the items mentioned above for filling the boxes)
Paat with Surya Rath
Make a rangoli outside the house also in a similar fashion.
Now get the leaves (Errukku leaves) ready for bathing. For men 7 leaves(2 on left shoulder, 2 on right shoulder,3 – head) , For women 7 leaves (4 on left shoulder, 3 on right shoulder)
Put Haldi, Kumkum and rice on all these. (Important – While going for a bath, remember and remind others to take this along  :D). [Note: For men who do Tarpan for their parents, instead of haldi and kumkum, Black Til/Sesame seed should be kept)
Milk-weed leaves

Place these on shoulder and head as mentioned above, and take a bath to wash it down.Prepare neivaidya kheer as mentioned in the below section. Traditionally, the kheer is prepared on the terrace or in the open in a charcoal stove and offered to Surya. If that is not possible, you can do the neivaidhya and Pooja from the house itself.If possible give Vida/Tamboolam (Beetel leaf, Dakshina, Coconut/Fruit, Supari) to other Sumangalis.
**********


click
       ರಥಸಪ್ತಮಿ 
**********
ಹರಿ ಓಂ

ರಥ ಸಪ್ತಮಿ

ಮಾಘಮಾಸದ ಶುಕ್ಲಪಕ್ಷ ಸಪ್ತಮಿಯಂದು ಸೂರ್ಯನ ಜನನ ವಾಯಿತು. ಕಶ್ಯಪ ಮತ್ತು ಅದಿತಿ ದೇವಿಯರ ಪುತ್ರ.

 ಹುಟ್ಟಿದೊಡನೆ ಏಳು ಅಶ್ವಗಳು ಎಳೆಯುವ ರಥವನ್ನೇರಿ , ಏಳು ಲೋಕಗಳ ಸಂಚಾರಕ್ಕೆ ಹೊರಟ. ಆದಕ್ಕೆ ಇದು ರಥಸಪ್ತಮಿ.

ಶಿವನಿಗೆ ಹೇಗೆ ‘ಬಿಲ್ವಪತ್ರ ’ಪ್ರಿಯವೊ, ವಿಷ್ಣವಿಗೆ’ತುಳಸಿ’ ಪ್ರಿಯವೊ ಹಾಗೆ ಸೂರ್ಯನಿಗೆ ‘ಅರ್ಕ’ದ ಎಲೆ ಪ್ರಿಯವಂತೆ.

🎙️ ಸ್ನಾನ ಕ್ರಮ::--

           ಆಚಮನಾದಿಗಳನ್ನು ಮಾಡಿ, ಸಂಕಲ್ಪದಲ್ಲಿ '......ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರಿತ್ಯರ್ಥಂ ರಥಸಪ್ತಮೀ ಮಹಾಪರ್ವಕಾಲನಿಮಿತ್ತ ಅರುಣೋದಯೇ ಮಾಘಸ್ನಾನಂ ಕರಿಷ್ಯೇ'/ ಎಂದು ಸೇರಿಸಿಕೊಳ್ಳಬೇಕು. 

ನದಿಗಳಲ್ಲಿ ಪ್ರವಾಹಾಭಿಮುಖವಾಗಿ, ಇತರ ಜಲಾಶಯಗಳಲ್ಲಿ ಸೂರ್ಯಾಭಿಮುಖವಾಗಿ ಮುಳುಗಬೇಕು. ಪ್ರತೀ ಒಬ್ಬರು ಮಾಡಲೇ ಬೇಕಾದ ವೃತ ಇದು. ರಥ ಸಪ್ತಮೀ ದಿನ ತೀರ್ಥ ಸ್ನಾನಕ್ಕೆ ಬಹಳ ಮಹತ್ವವಿದೆ . ಆದಿನ ಎಲ್ಲಿಯೂ ತೀರ್ಥಸ್ನಾನಕ್ಕೆ ಹೋಗಲು ಅನಕೂಲವಾಗದಿದ್ದರೆ ಮನೆಯಲ್ಲೇ ಸ್ನಾನದ ವಿಧಿಯನ್ನು ಮಾಡಿ ...

 ರಥಸಪ್ತಮಿ ದಿನ ಏಳು ಅರ್ಕದ ಎಲೆಗಳನ್ನು (ಒಂದು ತಲೆಯ ಮೇಲೆ, ಎರಡೆರಡುಭುಜಗಳು಼, ಎದೆ,  ಪಾದಗಳಲ್ಲಿ ಎರಡು, ಹಾಗೂ ತೊಡೆಗಳಮೇಲೆ) ಇಟ್ಟು ಕೊಂಡು ಏಳು ಸಲ ನದಿ ನೀರಿನಲ್ಲಿ ಅಥವಾ ಸರೋವರಗಳಲ್ಲಿ ಮುಳುಗಿ ಸ್ನಾನ ಮಾಡಿದರೆ ಏಳು ಜನ್ಮಗಳ ಷಾಪ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ.ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು಼, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

🎙️ ಪಾಪಗಳಲ್ಲಿ ಏಳು ವಿಧ ::--

1.ಈ ಜನ್ಮದಲ್ಲಿ ಮಾಡಿದ ಪಾಪಗಳು,
2. ಹಿಂದಿನ ಆರು ಜನ್ಮಗಳ ಪಾಪಗಳು, 
3. ಕಾಯ(ಶರೀರದ/ದೇಹದ) ಮೂಲಕಮಾಡಿದ ಪಾಪಗಳು 
4. ವಾಚ( ಮಾತಿನ) ಮೂಲಕ ಮಾಡಿದ ಪಾಪಗಳು 
5. ಮನಸಾ(ಮನಸಿಸನ) ಮೂಲಕ ಮಾಡಿದ ಪಾಪಗಳು 6.ತಿಳಿದು ಮಾಡಿದ ಪಾಪಗಳು 
7. ತಿಳಿಯದೇ ಮಾಡಿದ ಪಾಪಗಳು.

🎙️ ಸ್ನಾನದ ವಿಧಿ ಸಂಕಲ್ಪ....

ಮಮ ಇಹ ಜನ್ಮನಿ ಜನ್ಮಾಂತರೇ ಚ ಸಪ್ತವಿಧವಾಪಕ್ಷಯಾರ್ಥಂ ತೀರ್ಥ ಸ್ನಾನಂ ಕರಿಷ್ಯೇ.

🎙️ರಥಸಪ್ತಮಿ ಮಂತ್ರಗಳು ::--

ಏಳುಬಗೆಯ ಪಾಪಪರಿಹಾರಕ್ಕಾಗಿ ಏಳುಬಾರಿ ಮುಳಗಬೇಕು. ಆ ಪಾಪಗಳನ್ನು ಉಲ್ಲೇಖಿಸಿ, ಅವುಗಳಿಂದ ಪರಿಹಾರ ಒದಗಿಸುವಂತೆ ಪ್ರಾರ್ಥಿಸುತ್ತ ಪಠಿಸಬೇಕಾದ ಮಂತ್ರಗಳು ಹೀಗಿವೆ -

ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||
ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ |
ಸಪ್ತವ್ಯಾದಿಸಮಾಯುಕ್ತಂ ಹರ ಮಾಕರಿ ಸಪ್ತಮೀ ||

ಮಾ - ಎಂದರೆ ಸಂಪತ್ತು ಹಾಗೂ ವಿದ್ಯೆ - ಇವೆರಡನ್ನೂ ನೀಡಬಲ್ಲ ರಥಸಪ್ತಮಿಯ ಅಭಿಮಾನಿದೇವತೆ ಸೂರ್ಯನನ್ನು ಸಂಬೋಧಿಸಿ, ತಾನು ಎಸಗಿದ ಏಳು ಬಗೆಯ ಪಾಪದ ಪರಿಹಾರಕ್ಕಾಗಿ ನಿವೇದಿಸಿಕೊಳ್ಳಲಾಗುವದು.

ನಂತರ ಯಥಾ ಶಕ್ತಿ ಯಿಂದು ಒಂದು ಮಣೆ ಮೇಲೆ ಸೂರ್ಯ ರಥದಲ್ಲಿರುವಂತೆ ರಂಗವಲ್ಲಿಹಾಕಿ .....ಪ್ರಾರ್ಥನೆ ಮಾಡಿಕೊಳ್ಳಬೇಕು ..

ಜನನಿ ಸರ್ಮ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll🙏

ನಂತರ ಗಂಧ ಅಕ್ಷತೆ ಹೂವುಗಳಿಂದ ಪೂಜಿಸಿ ನಮಸ್ಕಾರ ಮಾಡಿ,

ನಮಃ ಸವಿತ್ರೇ ಜಗದೇಕ ಚಕ್ಷುಷೇ ಜಗತ್ ಪ್ರಸೂತಿಸ್ಥಿತಿ ನಾಶಹೇತವೇ lತ್ರಯಾಮಯಾಯ ತ್ರಿಗುಣಾತ್ಮ ಧಾರಿಣೆ
ವಿರಿಂಚಿನಾರಾಯಣ ಶಂಕರಾತ್ಮನೇ ll 🙏

🎙️ ಸೂರ್ಯಾಂತರ್ಗತ ಸವಿತೃನಾರಾಯಣನಿಗೆ ಅರ್ಘ್ಯ:

ಸೂರ್ಯಾಂತರ್ಗತ ಸವಿತೃನಾರಾಯಣನಿಗೆ ಹೀಗೆ ಅರ್ಘ್ಯ ಕೊಡಬೇಕು -

🎙️ ಸೂರ್ಯನಿಗೆ ಹನ್ನೇರಡು ಅರ್ಘ್ಯವನ್ನು ಕೊಡಬೇಕು ..

ಮಿತ್ರಾಯನಮಃ  🙏 ಇದಮರ್ಘ್ಯಂ ದತ್ತಂ ನಮಮ
ರವಯೇ ನಮಃ. 🙏
ಸೂರ್ಯಾಯ ನಮಃ 🙏
ಭಾನವೇ ನಮಃ 🙏
ಖಗಾಯ ನಮಃ 🙏
ಪೂಷ್ಣೇ ನಮಃ 🙏
ಹಿರಣ್ಯಗರ್ಭಾಯ ನಮಃ 🙏
ಮರೀಚಯೇ ನಮಃ 🙏
ಆದಿತ್ಯಾಯ ನಮಃ 🙏
ಸವಿತ್ರೇ ನಮಃ 🙏
ಅರ್ಕಾಯ ನಮಃ 🙏
ಭಾಸ್ಕರಾಯ ನಮಃ 🙏
ಇದಮರ್ಘ್ಯಂ ದತ್ತಂ ನಮಮ
ನಂತರ ಇದ್ದಿಲುಒಲೆ ಇಟ್ಟು ರಂಗವಲ್ಲಿಹಾಕಿ ಇದ್ದಿಲು ಹಾಕಿ ಹಚ್ಚಿ ಅದಕ್ಕೆ ಅರಿಷಿಣ ಕುಂಕುಮ ಎರಿಸಿ ಪೂಜಿಸಿ ಹಾಲನ್ನು ಉಕ್ಕಿಸಿ ಅದೇ ಹಾಲಿನಿಂದ ಗೋದಿ ಪಾಯಸ ಮಾಡಿ ಸೂರ್ಯನಿಗೆ ನೈವಿದ್ಯ ಮಾಡಿದಲ್ಲಿ ಖಂಡಿತ ನೌಮ್ಮ ದಾರಿದ್ರ್ಯ ಹೋಗುತ್ತದೆ಼....

ಸಪ್ತಸಪ್ತಿಬಹುಪ್ರೀತ ಸರ್ವಲೋಕಪ್ರದೀಪನ |
ಸಪ್ತಮೀಸಹಿತೋ ದೇವ ಗೃಹಣಾರ್ಘ್ಯಂ ದಿವಾಕರ ||🙏

 🎙️ ರಥ ಸಪ್ತಮಿ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ 
 
ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ... ಅಮಾವಾಸ್ಯೆಯವರೆಗೆ ಕಂಠಪಾಠ ಮಾಡಿಸುವಾಗ ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು.

ಪಾಡ್ಯ- ಯುಗಾದಿ ಪಾಡ್ಯ,
ಬಿದಿಗೆ-ಭಾನು ಬಿದಿಗೆ,
ತದಿಗೆ-ಅಕ್ಷ ತದಿಗೆ,
ಚೌತಿ-ವಿನಾಯಕನ ಚೌತಿ. . . .
ಹೀಗೆ
 ‘ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಹಬ್ಬಗಳ ಮಹತ್ವದ ಬಗ್ಗೆ ವಿವರಿಸುತ್ತಿದ್ದರು.
ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ಅರಿತಾಗ ಅರ್ಥಪೂರ್ಣ ಆಚರಣೆಯಾಗುತ್ತದೆ. 

ಯುಗಾದಿ ಹೊಸತನವನ್ನು ಹೊತ್ತು ತಂದರೆ, 
ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ. 
“ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನಂತೆ” ಅಂತ ಅಜ್ಜಿ ಹೇಳುತ್ತಿದ್ದುದು ನೆನಪಾಗುತ್ತದೆ.

 ಅಲ್ಲದೆ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ. ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ. ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟಿ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ಇಂದು (ಮಾಘ ಮಾಸ, ಶುಕ್ಲಪಕ್ಷದ ಸಪ್ತಮಿ ತಿಥಿ-ಶನಿವಾರ) ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ.ಆರೋಗ್ಯಂ ಭಾಸ್ಕರಾದಿಚ್ಛೇತ್... ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ‘

ಆರೋಗ್ಯಂ ಭಾಸ್ಕರಾದಿಚ್ಛೇತ್’ ಅಂದರೆ ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ. ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ಼. ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧ ನೆ ಬಳಕೆಗೆ ಬರುವ ಮುಂಚಿನಿಂದಲೂ ಪ್ರಾಶಸ್ತ್ಯವಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ. ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ.

 ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ಼. ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. 

ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್‌, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ. 

🎙️ ಸೂರ್ಯ ನಮಸ್ಕಾರ 

108 ಸೂರ್ಯ ನಮಸ್ಕಾರ ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

 ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದ ನಡೆಯುತ್ತಿದೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ. ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವ ಅಭ್ಯಾಸವಿದೆ.

🎙️ ಪೌರಾಣಿಕ ಹಿನ್ನೆಲೆಯೇನು ತಿಳಿಯಿರಿ ::--

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮನನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪು಼ತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು. ಅಲ್ಲದೆ ಪಾಂಡವರು ವನವಾಸದಲ್ಲಿ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ.

 ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ಼.

ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. 

ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ'. . . ಎಂಬ ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

🎙️ ಎಕ್ಕದೆಲೆಯ ಸ್ನಾನ 

ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು. ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸುವ ಬದಲು ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಯಾವುದೇ ಜಾತಿಭೇದ, ಧರ್ಮದ ಚೌಕಟ್ಟಿಲ್ಲದ ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದೀನದಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವೇ?

"ಸಪ್ತ  ಸಪ್ತ  ಮಹಾಸಪ್ತ  ಸಪ್ತದ್ವೀಪ  ವಸುಂಧರ ಸಪ್ತರ್ಕ  ಪುನಮಾಧ್ಯಾಯ  ಸಪ್ತಮಿ  ರಥಸಪ್ತಮಿ" 🙏

ಎಂದು  ಈ  ಶ್ಲೋಕವನ್ನು  ಹೇಳಿಕೊಂಡು  
ತಲೆಗೆ  ಸ್ನಾನ  ಮಾಡಿದರೆ  ಒಳ್ಳೆಯದು ಎಂದು ನಮ್ಮ ಹಿಂದೂ ಸಂಪ್ರದಾಯ ಹೇಳುವು಼ದು.

ಹರಿಯೇ ಪರದೈವ
***

ರಥಸಪ್ತಮಿ ದಿನದಂದು 

ಎಕ್ಕದ ಎಲೆಯ ಸ್ನಾನದ ಮಹತ್ವ

ಎಕ್ಕಗಿಡದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು, ಈ ದಿನ ಅರುಣೋದಯಕ್ಕೆ ಎದ್ದು, ಬಿಳಿ ಎಕ್ಕದ ಒಂದು ಎಲೆಯನ್ನು ನೆತ್ತಿಯ ಮೇಲೆ, ಎರಡನ್ನು ಭುಜಗಳ ಮೇಲೆ, ಒಂದನ್ನು ಎದೆಯ ಮೇಲೆ, ಒಂದನ್ನು ಬೆನ್ನಿನ ಮೇಲೆ, ಒಂದನ್ನು ಹಣೆಯ ಮೇಲೆ, ಒಂದನ್ನು ಹೊಟ್ಟೆಯ ಮೇಲೆ –
ಹೀಗೆ ಶರೀರದ ಮೇಲೆ ಎಕ್ಕದ ಎಲೆಗಳನ್ನು ಇರಿಸಿ ಸ್ನಾನ ಮಾಡಿದರೆ ಏಳು ಲೋಕಗಳಲ್ಲೂ ಮಾಡಿರುವ ಪಾಪಶೇಷಗಳು ಹೋಗಿ ಶುಭವುಂಟಾಗುವುದು. ಅಲ್ಲದೆ ಹಿಂದಿನ ಜನ್ಮಗಳಲ್ಲಿನ ಪಾಪ, ಸಪ್ತವ್ಯಾಧಿಗಳು, ಮಾತು, ಮನಸ್ಸು, ದೇಹದಿಂದ ಮಾಡಿದ ಅಪರಾಧಗಳು ನಾಶ ಹೊಂದಿ, ಮುಕ್ತಿ ಲಭ್ಯವಾಗುವುದು.

“Arka” is one among the names of Surya and “ekka” is the tadbhavashabda of arka. Surya or the sun god is the Arogya devadi – Arogyam bhaaskaraadichchEt.  On Magha shudda saptami surya’s rays which are roga nivaraka will fall on arka patra. That is why those who does the snaana on this day will have disease free body. Further the sins done in sapta janma also will be lost by just doing snaana of arka patre. 

We have to keep seven arka patraas one each on our head, both arms, two knees, two foots. We have to brush our body not from soaps but from these leaves only on this day. Due to this our skin diseases will be lost.   The plant of Arka vitiates skin diseases, snake poison, inflammation in the joints, tridoshas, and rabies and chest infection.
On this day we have to sketch the figure of Chariot with 7 horses in front of our Tulasi Vrundavana or in the devaramane and do the pooja of SuryanaaryaaNa
******


"ರಥಸಪ್ತಮಿ":

 ರಥ ಸಪ್ತಮಿ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ

ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ... ಅಮಾವಾಸ್ಯೆಯವರೆಗೆ ಕಂಠಪಾಠ ಮಾಡಿಸುವಾಗ ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು.ಪಾಡ್ಯ- ಉಗಾದಿ ಪಾಡ್ಯ, ಬಿದಿಗೆ-ಭಾನು ಬಿದಿಗೆ, ತದಿಗೆ-ಅಕ್ಷ ತದಿಗೆ, ಚೌತಿ-ವಿನಾಯಕನ ಚೌತಿ. . . . ಹೀಗೆ ‘ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಹಬ್ಬಗಳ ಮಹತ್ವದ ಬಗ್ಗೆ ವಿವರಿಸುತ್ತಿದ್ದರು.ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಗೂಢಾರ್ಥ, ವೈಜ್ಞಾನಿಕ ಅಂಶಗಳನ್ನು ಅರಿತಾಗ ಅರ್ಥಪೂರ್ಣ ಆಚರಣೆಯಾಗುತ್ತದೆ. 

ಯುಗಾದಿ ಹೊಸತನವನ್ನು ಹೊತ್ತು ತಂದರೆ, ಅದಕ್ಕೂ ಮುನ್ನ ಬರುವ ರಥಸಪ್ತಮಿ ಹಳತರ ಜಾಗದಲ್ಲಿ ಹೊಸತನ್ನು ತಂದಿಟ್ಟು ಬದುಕನ್ನು ಆನಂದಮಯವಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ. “ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ದಿನ ಸೂರ್ಯ ಹಳೆಯ ರಥವನ್ನು ಬಿಟ್ಟು ಹೊಸ ರಥ ಹತ್ತುತ್ತಾನಂತೆ” ಅಂತ ಅಜ್ಜಿ ಹೇಳುತ್ತಿದ್ದುದು ನೆನಪಾಗುತ್ತದೆ.

 ಅಲ್ಲದೆ ಈ ದಿನವನ್ನು ಸೂರ್ಯನ ಜನ್ಮದಿನವೆಂದೂ ಪ್ರಾಜ್ಞರು ಹೇಳುತ್ತಾರೆ. ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ. ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟಿ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ಇಂದು (ಮಾಘ ಮಾಸ, ಶುಕ್ಲಪಕ್ಷದ ಸಪ್ತಮಿ ತಿಥಿ-ಶನಿವಾರ) ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ.ಆರೋಗ್ಯಂ ಭಾಸ್ಕರಾದಿಚ್ಛೇತ್... ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ‘

ಆರೋಗ್ಯಂ ಭಾಸ್ಕರಾದಿಚ್ಛೇತ್’ ಅಂದರೆ ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ. ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಚಂದ್ರನ ಬೆಳಕಿನಲ್ಲಿ ವಿಟಮಿನ್ ‘ಬಿ 12’ ಇದ್ದರೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ‘ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧ ನೆ ಬಳಕೆಗೆ ಬರುವ ಮುಂಚಿನಿಂದಲೂ ಪ್ರಾಶಸ್ತ್ಯವಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ. ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ.

 ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ಡಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. 

ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್‌, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ. 108 ಸೂರ್ಯ ನಮಸ್ಕಾರ ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

 ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದ ನಡೆಯುತ್ತಿದೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ. ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವ ಅಭ್ಯಾಸವಿದೆ.

ಪೌರಾಣಿಕ ಹಿನ್ನೆಲೆಯೇನು? 

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮನನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ.

 ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. 

ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ'. . . ಎಂಬಮಂತ್ರದಲ್ಲಿvv ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

ಎಕ್ಕದೆಲೆಯ ಸ್ನಾನ ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು. ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸುವ ಬದಲು ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಯಾವುದೇ ಜಾತಿಭೇದ, ಧರ್ಮದ ಚೌಕಟ್ಟಿಲ್ಲದ ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದೀನದಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವ?

ಸಪ್ತ ಸಪ್ತ ಮಹಾಸಪ್ತ
ಸಪ್ತ ದ್ವೀಪ ವಸುಂಧರ
ಸಪ್ತಾರ್ಕ ಪ್ರಣಮಾಧ್ಯಾಯ
ಸಪ್ತಮಿ ರಥ ಸಪ್ತಮಿ

ಎಂದು ಈ ಶ್ಲೋಕವನ್ನು ಹೇಳಿಕೊಂಡು  ತಲೆಗೆ ಸ್ನಾನ ಮಾಡಿದರೆ ಓಳ್ಳಯದು
ಈ ಮೇಲಿನ ಎಲ್ಲಾ ಸಂಗತಿಗಳನ್ನು ಓದಿ, ನಿಮ್ಮ  ಕುಟುಂಬ, ಬಂದು, ಬಳಗ, ಮತ್ತು ವಿಶೇಷ ವಾಗಿ ಇಂದಿನ ಮಕ್ಕಳಿಗೆ ಮನವರಿಕೆ ಮಾಡಿ. 
ನಮ್ಮ ಸಂಸ್ಕೃತಿ ಉಳಿಸಲು ನಿಮ್ಮ ಕೊಡುಗೆ ಇರಲಿ.
*************


ರಥಸಪ್ತಮೀ
ಮಂಗಲಂ ನಿತ್ಯ ಕಲ್ಯಾಣಂ ಲಕ್ಷ್ಮೀ ಸೌಭಾಗ್ಯವರ್ಧನಂ|
ಲಕ್ಷ್ಮೀ ಮನೋರಥಂ ಪ್ರಾಪ್ತಿಕರಂ ಪಂಚಾಂಗಂ ಫಲಮುತ್ತಮಂ||
ತಿಥೇಶ್ಚ ಶ್ರಿಯಮಾಪ್ನೋತಿ ವಾರದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗ ನಿವಾರಣಂ||
ಕರಣಾತ್ ಚಿಂತಿತಂ ಕಾರ್ಯಂ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾ ಸ್ನಾನಫಲಂ ಲಭೇತ್||

************

ಮಾಘ ಶುದ್ಧ ಸಪ್ತಮಿ : ರಥ ಸಪ್ತಮಿ

ಯನ್ಮಂಡಲಂ ದೀಪ್ತಿಕರಂ ವಿಶಾಲಂ 
ರತ್ನಪ್ರಭಂ ತೀವ್ರಮನಾದಿರೂಪಮ್ । ದಾರಿದ್ರ್ಯದುಃಖಕ್ಷಯಕಾರಣಂ ಚ 
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥

ರಥ ಸಪ್ತಮಿ ದಿನ ವಿಶೇಷ
ಸೂರ್ಯ ಮಂದೇಹ ಎಂಬ ದೈತ್ಯನ ಸಂಹಾರ ಮಾಡಿದ ದಿನ. ದೈತ್ಯ ತ್ರಿಸುಪರ್ಣನನ್ನು ಸಂಹಾರ ಮಾಡಲು ರುದ್ರದೇವರಿಗೆ ದೇವಶಿಲ್ಪಿ ವಿಶ್ವಕರ್ಮ ರಥ ನಿರ್ಮಾಣ ಮಾಡಿದ ದಿನ.

7 ಅರ್ಕದೆಲೆಗಳಿಂದ ಸ್ನಾನ :
ಈ ದಿನದಂದು 7 ಅರ್ಕದೆಲೆಗಳಿಂದ ಸ್ನಾನ ಮಾಡಬೇಕು. ಅರ್ಕದೆಲೆಯ ಸ್ನಾನ ಸೂರ್ಯನಾರಾಯಣನ ಅನುಗ್ರಹದಿಂದ ಸರ್ವವ್ಯಾಧಿಗಳ ನಿವಾರಣೆ ಮತ್ತು ಸಪ್ತಜನ್ಮಗಳ ದುಷ್ಕರ್ಮಗಳ ನಾಶವಾಗುತ್ತೆ.

ಸ್ನಾನ ಮಂತ್ರ :

ಯದ್ಯಜ್ಜನ್ಮಕೃತಂ ಪಾಪಂ 
ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ 
ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ 
ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ 
ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ 
ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ 
ಹರ ಮಾಕರಿ ಸಪ್ತಮಿ |

ಸೂರ್ಯ ಅರ್ಘ್ಯ ಮಂತ್ರ :
ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ 
ದಿವಾಕರ ||

ಕೂಷ್ಮಾಂಡ (ಬೂದಗುಂಬಳಕಾಯಿ) ದಾನ :
ಈ ದಿನ ಕೂಷ್ಮಾಂಡ (ಬೂದಗುಂಬಳಕಾಯಿ) ದಾನ ಮಾಡುವದರಿಂದ ಗರ್ಭ ದೋಷ ನಿವಾರಣೆಯಾಗಿ ವಿಶೇಷ ಸಂತಾನದ ಫಲ ಲಭಿಸುತೇ.

ಕೂಷ್ಮಾಂಡ ದಾನದ ಸಂಕಲ್ಪ :
ಆಚಮನ, ಕೇಶವಾಯಸ್ವಾಹ……… ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶ್ರೀ _____ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ, ಮಮ ಕುಲೇ ಸಕಲ ಗರ್ಭದೋಷ ಪರಿಹಾರಾರಾರ್ಥಂ, ಸೂರ್ಯಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಏತದ್ ಮಾಸ ನಿಯಾಮಕ ಕಮಲಾ ಮಾಧವ ಪ್ರೀತ್ಯರ್ಥಂ, ಅಸ್ಮತ್ ಕುಲದೇವತ ಶ್ರೀಲಕ್ಷ್ಮೀ ನರಸಿಂಹ/ವೇಂಕಟೇಶ ಪ್ರೀತ್ಯರ್ಥಂ, ಕೂಷ್ಮಾಂಡ ದಾನಂ ಕರಿಷ್ಯೇ.

ಕೂಷ್ಮಾಂಡಂತಿಲಗವ್ಯಾಢ್ಯಂ ಬ್ರಹ್ಮಣಾ ನಿರ್ಮಿತಂ ಪುರಾ |
ಯಸ್ಮಾದಸ್ಯ ಪ್ರದಾನೇನ ಸಂತತಿರ್ವರ್ಧತಾಂ ಮಮ ||

ಸೂರ್ಯ ದ್ವಾದಶ ಸ್ತೋತ್ರ :

ಆದಿತ್ಯಃ ಪ್ರಥಮಂ ನಾಮ 
ದ್ವಿತೀಯಂ ತು ದಿವಾಕರಃ । 
ತೃತೀಯಂ ಭಾಸ್ಕರಃ ಪ್ರೋಕ್ತಂ 
ಚತುರ್ಥಂ ಚ ಪ್ರಭಾಕರಃ ॥ 
ಪಂಚಮಂ ಚ ಸಹಸ್ರಾಂಶು 
ಷಷ್ಠಂ ಚೈವ ತ್ರಿಲೋಚನಃ । 
ಸಪ್ತಮಂ ಹರಿದಶ್ವಂ ಚ 
ಅಷ್ಟಮಂ ತು ಅಹರ್ಪತಿಃ ॥ 
ನವಮಂ ದಿನಕರಃ ಪ್ರೋಕ್ತಂ 
ದಶಮಂ ದ್ವಾದಶಾತ್ಮಕಃ । 
ಏಕಾದಶಂ ತ್ರಿಮೂರ್ತಿಶ್ಚ 
ದ್ವಾದಶಂ ಸೂರ್ಯ ಏವ ತು ॥

ದ್ವಾದಶಾದಿತ್ಯನಾಮಾನಿ 
ಪ್ರಾತಃಕಾಲೇ ಪಠೇನ್ನರಃ । 
ದುಃಸ್ವಪ್ನೋ ನಶ್ಯತೇ ತಸ್ಯ 
ಸರ್ವದುಃಖಂ ಚ ನಶ್ಯತಿ ॥ 
ದದ್ರುಕುಷ್ಟಹರಂ ಚೈವ 
ದಾರಿದ್ರ್ಯಂ ಹರತೇ ಧ್ರುವಮ್ । 
ಸರ್ವತೀರ್ಥಕರಂ ಚೈವ 
ಸರ್ವಕಾಮಫಲಪ್ರದಮ್ ॥ 
ಯಃ ಪಠೇತ್ ಪ್ರಾತರುತ್ಥಾಯ 
ಭಕ್ತ್ಯಾ ಸ್ತೋತ್ರಮಿದಂ ನರಃ । ಸೌಖ್ಯಮಾಯುಸ್ತಥಾರೋಗ್ಯಂ ಲಭತೇ ಮೋಕ್ಷಮೇವ ಚ ॥

-ಶ್ರೀ ಇಭರಾಮಪುರಾಧೀಶ ವಿಷ್ಣುತೀರ್ಥಚಾರ್ಯ
***********

ರಥಸಪ್ತಮಿಯ ದಿನದಂದು ಎಕ್ಕದ ಎಲೆಯನ್ನು ಇಟ್ಟು ಕೊಂಡು ಸ್ನಾನ ಮಾಡುವಾಗ ಹೇಳುವ ಮಂತ್ರ.

" ಸಪ್ತ ಸಪ್ತ ಮಹಾಸಪ್ತ 
ಸಪ್ತ ದ್ವೀಪ ವಸುಂಧರ
ಸಪ್ತ ಅರ್ಕ ಪರ್ಣ ಮದಾಯ , 
ಸಪ್ತಂಯಾಮ್  ಸ್ನಾನ ಮಾಚರಿತ "

ಬೆಳಿಗ್ಗೆ 4 ರಿಂದ 5 ಗಂಟೆಯೊಳಗೆ ಸ್ನಾನ ಮಾಡಬೇಕು .
ವಿಧಾನ -7 ಎಕ್ಕದ ಎಲೆ ತೆಗೆದುಕೊಂಡು ,
ತಲೆಯ ಮೇಲೆ 1, 
ಬಲಭುಜದ ಎಲೆ 1, 
ಎಡಭುಜದ ಮೇಲೆ 1, 
ಬಲಮಂಡಿಯ ಮೇಲೆ  1, 
ಎಡಮಂಡಿಯ ಮೇಲೆ 1,
ಬಲಪಾದದ ಮೇಲೆ 1, 
ಎಡಪಾದದ ಮೇಲೆ 1, (ಮುಂಗಾಲು)
ಇಟ್ಟು ತಣ್ಣೀರಿನಿಂದ ಸ್ನಾನ ಮಾಡಬೇಕು.
*******

ರಥ ಸಪ್ತಮಿ

ಪ್ರತೀ ಹೆಣ್ಣು ಮಕ್ಕಳು ಮಾಡಲೇ ಬೇಕಾದ ವೃತ ಇದು ..
ರಥ ಸಪ್ತಮೀ ದಿನ ತೀರ್ಥ ಸ್ನಾನಕ್ಕೆ ಬಹಳ ಮಹತ್ವವಿದೆ . ಆದಿನ ಎಲ್ಲಿಯೂ ತೀರ್ಥಸ್ನಾನಕ್ಕೆ ಹೋಗಲು ಅನಕೂಲವಾಗದಿದ್ದರೆ ಮನೆಯಲ್ಲೇ ಸ್ನಾನದ ವಿಧಿಯನ್ನು ಮಾಡಿ ...
ಸ್ನಾನದ ವಿಧಿ
-------------------
ಸಂಕಲ್ಪ....
ಮಮ ಇಹ ಜನ್ಮನಿ ಜನ್ಮಾಂತರೇ ಚ ಸಪ್ತವಿಧವಾಪಕ್ಷಯಾರ್ಥಂ ತೀರ್ಥ ಸ್ನಾನಂ ಕರಿಷ್ಯೇ.

ಈ ಶ್ಲೋಕವನ್ನು ಹೇಳಿ ...

ಯದ್ಯಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು l
ತನ್ಮೇ ಶೋಕಂ ಚ ರೋಗಂ ಚ ಮಾಕರೀ ಹಂತು ಸಪ್ತಮೀll
ಏತ ಜನ್ಮಕೃತಂ ಪಾಪಂ ಯಚ್ಚಜನ್ಮಾಂತರಾರ್ಜಿತಮ್ l
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ ಪುನಃll
ಇತಿ ಸಪ್ತವಿದಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ l
ಸಪ್ತವ್ಯಾಧಿ ಸಮಾಯುಕ್ತಂ ಹರಮಾಕರಿ ಸಪ್ತಮಿ ll

ಒಂದು ಯಕ್ಕದ ಎಲೆಯನ್ನು ತಲೆಯಮೇಲಿಟ್ಟುಕೊಂಡು ಒಂದು ಬಟ್ಟಲು ಕಬ್ಬಿನ ನೀರು (ಹಾಲು) ಹಾಕಿಕೊಂಡು ತಲೆಸ್ನಾನ ಮಾಡಬೇಕು ... ನಂತರ ಯಥಾ ಶಕ್ತಿ ಯಿಂದು ಒಂದು ಮಣೆ ಮೇಲೆ ಸೂರ್ಯ ರಥದಲ್ಲಿರುವಂತೆ ರಂಗವಲ್ಲಿಹಾಕಿ .....ಪ್ರಾರ್ಥನೆ ಮಾಡಿಕೊಳ್ಳಬೇಕು ..

ಜನನಿ ಸರ್ಮ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll

ನಂತರ ಗಂಧ ಅಕ್ಷತೆ ಹೂವುಗಳಿಂದ ಪೂಜಿಸಿ ನಮಸ್ಕಾರಮಾಡಿ,
ನಮಃ ಸವಿತ್ರೇ ಜಗದೇಕ ಚಕ್ಷುಷೇ ಜಗತ್ ಪ್ರಸೂತಿಸ್ಥಿತಿ ನಾಶಹೇತವೇ lತ್ರಯಾಮಯಾಯ ತ್ರಿಗುಣಾತ್ಮ ಧಾರಿಣೆ
ವಿರಿಂಚಿನಾರಾಯಣ ಶಂಕರಾತ್ಮನೇ ll

ಸೂರ್ಯ ನಿಗೆ ಹನ್ನೇರಡು ಅರ್ಘ್ಯವನ್ನು ಕೊಡಬೇಕು ..

ಮಿತ್ರಾಯನಮಃ ಇದಮರ್ಘ್ಯಂ ದತ್ತಂ ನಮಮ
ರವಯೇ ನಮಃ
ಸೂರ್ಯಾಯ ನಮಃ
ಭಾನವೇ ನಮಃ
ಖಗಾಯ ನಮಃ
ಪೂಷ್ಣೇ ನಮಃ
ಹಿರಣ್ಯಗರ್ಭಾಯ ನಮಃ
ಮರೀಚಯೇ ನಮಃ
ಆದಿತ್ಯಾಯ ನಮಃ
ಸವಿತ್ರೇ ನಮಃ
ಅರ್ಕಾಯ ನಮಃ
ಭಾಸ್ಕರಾಯ ನಮಃ ಇದಮರ್ಘ್ಯಂ ದತ್ತಂ ನಮಮ

ನಂತರ ಇದ್ದಿಲುಒಲೆ ಇಟ್ಟು ರಂಗವಲ್ಲಿಹಾಕಿ ಇದ್ದಿಲು ಹಾಕಿ ಹಚ್ಚಿ ಅದಕ್ಕೆ ಅರಿಷಿಣ ಕುಂಕುಮ ಎರಿಸಿ ಪೂಜಿಸಿ ಹಾಲನ್ನು ಉಕ್ಕಿಸಿ ಅದೇ ಹಾಲಿನಿಂದ ಗೋದಿ ಪಾಯಸ ಮಾಡಿ ಸೂರ್ಯನಿಗೆ ನೈವಿದ್ಯ ಮಾಡಿದಲ್ಲಿ ಖಂಡಿತ ನೌಮ್ಮ ದಾರಿದ್ರ್ಯ ಹೋಗುತ್ತದೆ.
********

12 Feb.2020 Why to go Tirupathi ? Lord Venkateshwara visits our home! Today is Ratha Sapthami. Temples in big cities have ceased this activity of pulling chariots, but It still happens in Mysore City. 

ವಿಷ್ಣು ವಚನವು ಹೀಗಿದೆ : “ಮಾಘ ಶುಕ್ಲ ಸಪ್ತಮಿಯು ಸೂರ್ಯಗ್ರಹಣಕ್ಕೆ ಸಮಾನವಾಗಿದೆ.  ಅದು ಅರುಣೋದಯದ ಸಮಯದಲ್ಲಿ ಸ್ನಾನಮಾಡಿದರೆ ಮಹಾಫಲ ಲಭ್ಯವಾಗುತ್ತದೆ. ಮತ್ತು ಹೀಗೆ ಹೇಳಲಾಗಿದೆ: ಮಾಘಶುಕ್ಲ ಸಪ್ತಮಿಯನ್ನು ಅರುಣೋದಯದಲ್ಲಿ ಆಚರಿಸುವ ಸೌಭಾಗ್ಯವು ಪ್ರಯಾಗದಲ್ಲಿ ಪ್ರಾಪ್ತವಾದರೆ ಅದು ಕೋಟಿ ಸೂರ್ಯಗ್ರಹಣಕ್ಕೆ ಸಮಾನವಾದ ಫಲ ನೀಡುತ್ತದೆ.


ರಥ ಸಪ್ತಮಿಯ ವಿಶೇಷತೆ - ಮಾಘಶುಕ್ಲ ಸಪ್ತಮಿಯು ರಥ ಸಪ್ತಮಿಯಾಗಿದೆ.  ಇದನ್ನು ಅರುಣೋದಯ ವ್ಯಾಪಿನಿಯಾಗಿ ಗ್ರಹಿಸಬೇಕು. ಚಂದ್ರಿಕಾಲದಲ್ಲಿ ದಿವೋದಾಸನ ಗ್ರಂಥದಲ್ಲಿ ಹೀಗೆ ಹೇಳಿದೆ :

ಅಚಲಾ ಸಪ್ತಮೀ ಎಂದರೆ ರಥ ಸಪ್ತಮಿ, ದುರ್ಗಾಷ್ಟಮೀ ಹಾಗೂ ಶಿವರಾತ್ರಿ ಚತುರ್ದಶೀ, ಮತ್ತು ವತ್ಸಪೂಜೆಯಲ್ಲಿ ದ್ವಾದಶಿ (ಗೋವತ್ಸ ದ್ವಾದಶಿ) ಇವನ್ನು ಯಾವಾಗಲೂ ಪೂರ್ವತಿಥಿಯುಕ್ತವಾಗಿ ಸಂಗ್ರಹಿಸಬೇಕು. ಈ ವಾಕ್ಯಾನುಸಾರ ಅಚಲಾ ಸಪ್ತಮೀಯನ್ನು ಎಂದರೆ ರಥ ಸಪ್ತಮಿಯನ್ನು ಷಷ್ಠೀಯುಕ್ತವಾಗಿ ಆಚರಿಸಲು ಹೇಳಿದೆ. ಈ ವಾಕ್ಯವು ಯಾವಾಗ ಅನ್ವಯವಾಗುತ್ತದೆ ಎಂದರೆ- ಯಾವಾಗ ಮೊದಲದಿನ ಷಷ್ಠಿಯ ಕೇವಲ ಎರಡುಗಳಿಗೆ ಮಾತ್ರ ಇರುತ್ತದೋ ಹಾಗೂ ಕ್ಷಯ ವಾಗುವ ಕಾರಣ ಮರುದಿನ ಸಪ್ತಮಿಯು ಅರುಣೋದಯದ ಮೊದಲಲ್ಲೇ ಸಮಪ್ತವಾಗುತ್ತದೋ ಆವಾಗ. ಅಲ್ಲಿ ಷಷ್ಟಿಯಲ್ಲೇ ಸಪ್ತಮಿ ಕ್ಷಯದ ಪ್ರವೇಶ ಮಾಡಿದೆಯೆಂದು ಭಾವಿಸಿ ಅರುಣೋದಯದಲ್ಲಿ ಸ್ನಾನ ಮಾಡಬೇಕು – ಮದನರತ್ನದಲ್ಲಿ ಭವಿಷ್ಯೋತ್ತರ ಪುರಾಣದ ವಚನವು ಹೀಗಿದೆ : ಮಾಘ ಶಕ್ಲ ಸಪ್ತಮಿಯು ಕೋಟಿ ಭಾಸ್ಕರರಿಗೆ ಸಮಾನವಾಗಿದೆ.

ಆಗ ಸ್ನಾನ, ದಾನ ಹಾಗೂ ಅರ್ಘ್ಯ ನೀಡುವುದರಿಂದ ಈ ಸಪ್ತಮಿಯು ಆಯುಷ್ಯ, ಆರೋಗ್ಯ ಹಾಗು ಐಶ್ವರ್ಯಗಳನ್ನು ಪ್ರದಾನ ಮಾಡುತ್ತದೆ. ಈ ಸಪ್ತಮೀ ಆಚರಣೆಯ
ವಿಧಿಯನ್ನು ಭವಿಷ್ಯ ಪುರಾಣದ ವಾಕ್ಯವನ್ನಾಧರಿಸಿ ಹೇಮಾದ್ರಿಯಲ್ಲಿ ಹೀಗೆ ಹೇಳಿದೆ : “ಷಷ್ಠಯಂದು ಸ್ನಾನ ಮಾಡಿ ಒಂದೇ ಹೊತ್ತು ಭೋಜನ ಮಾಡಬೇಕು. ಸಪ್ತಮೀ ಪ್ತಾತಃಕಾಲದಲ್ಲಿ ತಲೆಯಮೇಲೆ ದೀಪಹೊತ್ತು ನಿಶ್ಚಲ ಜಲವನ್ನು ಕಲಕಬೇಕು. ರಾತ್ರಿಯ ಅಂತ್ಯದಲ್ಲಿ ದೀಪವನ್ನು ಬೆಳಗಿಸಬೇಕು. ತಥಾ ಜಲದ ಪ್ರದಕ್ಷಿಣೆ ಮಾಡಿ ಎಲ್ಲಿಯ ತನಕ ಅದನ್ನು ಯಾವನೂ ಕಲಕುವದಿಲ್ಲವೋ ಅಲ್ಲಿಯ ತನಕ ನಿಶ್ಚಲ ಜಲದಲ್ಲಿ ಸ್ನಾನ ಮಾಡಬೇಕು. ಸುವರ್ಣ, ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ಎಣ್ಣೆ ತುಂಬಿ ಕುಸುಂಭದ ವರ್ಣದಿಂದ ರಂಜಿತವಾದ ಬತ್ತಿಯನ್ನು ಇಡಬೇಕು.

ಏಕಾಗ್ರಮನಸ್ಸಿನಿಂದ ಶಿರಸ್ಸಿನ ಮೇಲೆ ದೀಪವನ್ನಿಟ್ಟು, ಹೃದಯದಲ್ಲಿ ಸೂರ್ಯನ ಧ್ಯಾನ ಮಾಡುತ್ತ ಈ ಮಂತ್ರವನ್ನು ಪಠಿಸಬೇಕು: ” ಹೇ! ರುದ್ರರೂಪನೆ‌! ನೀನು ರಸಗಳ (ಪ್ರಾಣಗಳ) ಒಡೆಯನಾಗಿರುವಿ. ನಿನಗೆ ನಮಿಸುತ್ತೇನೆ. ಹೇ! ನಾರಾಯಣನ ನಿವಾಸವಾದ ವರುಣನೆ! ನಿನ್ನನ್ನು ನಮಿಸುತ್ತೇನೆ.” ಹೀಗೆ ದೇವತೆಯ ಧ್ಯಾನ ಹಾಗು ತರ್ಪಣ ಮಾಡಿ ದೀಪವನ್ನು ಜಲದಲ್ಲಿ ಹರಿಬಿಡಬೇಕು. ನಂತರ ಕರ್ಣಿಕಾ ಸಹಿತ ಶಿವಪಾರ್ವತಿಯರನ್ನು ಚಿತ್ರಿಸಬೇಕು. ನಂತರ ಪೂರ್ವಾದಿ ದಳಗಳ ಮೇಲೆ ಅನುಕ್ರಮವಾಗಿ ರವಿ, ಭಾನು, ವಿವಸ್ವತ್, ಭಾಸ್ಕರ ಸವಿತಾ, ಅರ್ಕ, ಸಹಸ್ರಕಿರಣ ಹಾಗು ಸರ್ವಾತ್ಮಾ ಇವರ ಹೆಸರಿಂದ ಪೂಜೆ ಮಾಡಿ ನಂತರ ಮನೆಗೆ ತೆರಳಬೇಕು.
****
ರಥಸಪ್ತಮಿ ಯು ಜಗತ್ ಚಕ್ಷುವಾದ ಶ್ರೀಸೂರ್ಯದೇವ ನನ್ನು ಆರಾಧಿಸಲು ಮೀಸಲಾದ ದಿನ.
  ಆರೋಗ್ಯಕಾರಕನಾದ ಸೂರ್ಯದೇವ, ಚರ್ಮರೋಗಾದಿಗಳನ್ನು ನಿವಾರಿಸಿ, ನಮ್ಮ ದೇಹವನ್ನು ಸದೃಢಗೊಳಿಸುವ ದಿವಾಕರ ನೂ ಹೌದು. ಇಂತಹ ಖಗ  ಈ ದಿನದಿಂದ ಗತಿ ಬದಲಿಸಲಿದ್ದಾನೆ. ಮಕರ ಸಂಕ್ರಮಣದ ನಂತರ, ಉತ್ತರಕ್ಕೆ ಚಲಿಸುವ ಭಾನು ವಿನ ವೇಗ ಈ ದಿನದಿಂದ ಕ್ಷಿಪ್ರವಾಗಲಿದೆ. 

  ರಥಸಪ್ತಮಿಯ ಪರ್ವಕಾಲದ ನಂತರ ಮಿತ್ರ ನು, ಶಿಶಿರ ಋತುವಿನ ಚಳಿಯನ್ನು ಮಾಯಮಾಡಿ ಸುಡು ಬಿಸಿಲು ಹೆಚ್ಚಿಸಲಿದ್ದಾನೆ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ಅರ್ಕ ನು ನಮ್ಮ ಆರೋಗ್ಯ ಹೆಚ್ಚಿಸಲೆಂದು ಈ ಪರ್ವಕಾಲದಲ್ಲಿ ಪ್ರಾರ್ಥಿಸೋಣ.

ಜಪಾಕುಸುಮ-ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋಽರೀಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ||

 ಈ ದಿನದ ಸ್ನಾನ ಅತಿ ವಿಶೇಷವಾದುದಾಗಿದೆ. 
ವಿಷ್ಣುಸ್ಮೃತಿಃ ಪ್ರಕಾರ, 
ಸೂರ್ಯಗ್ರಹಣತುಲ್ಯಾ ತು ಶುಕ್ಲಾ ಮಾಘಸ್ಯ ಸಪ್ತಮೀ | ಅರುಣೋದಯವೇಲಾಯಾಂ ತಸ್ಯಾಂ ಸ್ನಾನಂ ಮಹಾಫಲಮ್ || ಎಂಬಂತೆ ರಥಸಪ್ತಮಿ ದಿನ ಮಾಡುವ ಸ್ನಾನ ಹೆಚ್ಚಿನ ಫಲ ನೀಡುತ್ತದೆ.
 
  ಈ ದಿನ ಸೂರ್ಯನಿಗೆ ಪ್ರಿಯವಾದ ಏಳು ಎಕ್ಕದ ಎಲೆ ಅಥವಾ ಬೋರೆ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು. 
  (ಪಾದಗಳ ಮೇಲೆ ಒಂದೊಂದು, ಮಂಡಿಗಳ ಮೇಲೆ ಒಂದೊಂದು, ಭುಜಗಳ ಮೇಲೆ ಒಂದೊಂದು ಹಾಗೂ ತಲೆಯ ಮೇಲೆ ಒಂದನ್ನು ಇಟ್ಟುಕೊಂಡು ಸ್ನಾನ ಮಾಡುವ ಪದ್ಧತಿಯೂ ಇದೆ). ನದಿ ಅಥವಾ ಸರೋವರದಲ್ಲಾದರೇ ಏಳು ಸಲ ಮುಳುಗಬೇಕು. ಮನೆಯಲ್ಲಾದರೆ ನೀರನ್ನು ದೇಹದ ಮೇಲೆ ಸುರಿದುಕೊಳ್ಳಬೇಕು. 

 ಧಾರ್ಮಿಕವಾಗಿ ಎಕ್ಕದೆಲೆಯ ಸ್ನಾನಕ್ಕೆ ಮನ್ನಣೆ ನೀಡಲಾಗಿದೆ. ಈ ದಿನ ಎಕ್ಕದೆಲೆಯ ಸ್ನಾನ ಸಪ್ತವಿಧದ ಪಾಪ ನಿವಾರಣೆ ಮಾಡುತ್ತದೆ ಎನ್ನುತ್ತದೆ ಧರ್ಮಶಾಸ್ತ್ರ (೧.ಈ ಜನ್ಮದಲ್ಲಿ ಮಾಡಿದ ಪಾಪ, ೨.ಹಿಂದಿನ ಆರು ಜನ್ಮದಲ್ಲಿ ಮಾಡಿದ ಪಾಪ, ೩.ದೈಹಿಕವಾಗಿ ಮಾಡಿದ ಪಾಪ, ೪.ಮಾತಿನ ಮೂಲಕ ಮಾಡಿದ ಪಾಪ, ೫.ಮನಸ್ಸಿನ ಮೂಲಕ ಮಾಡಿದ ಪಾಪ, ೬.ತಿಳಿದು ಮಾಡಿದ ಪಾಪ, ೭. ತಿಳಿಯದೇ ಮಾಡಿದ ಪಾಪ. ಇವು ಸಪ್ತವಿಧ ಪಾಪಗಳು).
  
   ಇದರ ಜತೆ ವೈಜ್ಞಾನಿಕವಾಗಿಯೂ ಅರ್ಕ ಪತ್ರೆ ಸ್ನಾನ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆಯುರ್ವೇದದ ಪ್ರಕಾರ ದೇಹದ ಕೀಲು, ಹಲ್ಲು ಹಾಗೂ ಹೊಟ್ಟೆ ನೋವು ನಿವಾರಣೆಗೆ ಎಕ್ಕದ ಎಲೆಗಳಲ್ಲಿರುವ ಔಷಧೀಯ ಗುಣಗಳು ಪ್ರಯೋಜನಕಾರಿ ಎನ್ನಲಾಗಿದೆ. ಹಾಗಾಗಿ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

 ಈ ದಿನ ಅರುಣೋದಯ ಕಾಲದಲ್ಲಿ ಎಕ್ಕದ ಎಲೆ ಸಹಿತ ಸ್ನಾನ ಮಾಡುವಾಗ,
ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||
ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ |
ಸಪ್ತವ್ಯಾದಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ಎಂಬ ಶ್ಲೋಕ ಪಠಿಸಬೇಕು.

   ಸ್ನಾನಾನಂತರ ಒಂದು ಮಣೆ ಮೇಲೆ ರಂಗೋಲಿ ಹಿಟ್ಟಿನಿಂದ ಒಂಟಿ ಚಕ್ರದ ರಥದಲ್ಲಿ ಸೂರ್ಯದೇವನು ಕುಳಿತಿರುವಂತೆ ಬರೆದು 
*ಧ್ಯೇಯಃ ಸದಾ ಸವಿತೃಮಂಡಲಮಧ್ಯವರ್ತಿ ನಾರಾಯಣಃ ಸರಸಿಜಾಸನಸನ್ನಿವಿಷ್ಟ: |
ಕೇಯೂರವಾನ್ ಮಕರಕುಂಡಲವಾನ್ ಕಿರೀಟಹಾರೀ ಹಿರಣ್ಮಯವಪುಃ ಧೃತಶಂಖಚಕ್ರಃ ||* ರಂದು ಧ್ಯಾನಿಸಬೇಕು.

  ಜನನಿ ಸರ್ವ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll ಎಂದು ಪ್ರಾರ್ಥಿಸಬೇಕು.

  ಓಂ ಮಿತ್ರಾಯ ನಮಃ |  ಓಂ ರವಯೇ ನಮಃ |  
ಓಂ ಸೂರ್ಯಾಯ ನಮಃ |  ಓಂ ಖಗಾಯ ನಮಃ |  
ಓಂ ಭಾನುವೇ ನಮಃ |  ಓಂ ಪೂಷ್ಣೇ ನಮಃ | 
ಓಂ ಹಿರಣ್ಯಗರ್ಭಾಯ ನಮಃ |  ಓಂ ಮರೀಚಯೇ ನಮಃ | ಓಂ ಆದಿತ್ಯಾಯ ನಮಃ | ಓಂ ಸವಿತ್ರೇ ನಮಃ |  ಓಂ ಅರ್ಕಾಯ ನಮಃ |  ಓಂ ಭಾಸ್ಕರಾಯ ನಮಃ |ಓಂ ಸರ್ವರೋಗಹರಾಯ ನಮಃ | ಓಂ ಸರ್ವ ಸಂಪತ್ಪದಾಯ ನಮಃ | ಓಂ ಸರ್ವಲೋಕಹಿತಾಯ ನಮಃ | ಎಂದು ಅರ್ಚಿಸಬೇಕು.  

  ಹಾಲು ಮಿಶ್ರಿತ ಗೋಧಿ ಪಾಯಸವನ್ನು ನಿವೇದಿಸಿ ಪೂಜಿಸಬೇಕು.

   ಇದಾದ ಮೇಲೆ ಸೂರ್ಯಾಂತರ್ಗತ ಸವಿತೃನಾಮಕ ಲಕ್ಷ್ಮೀನಾರಾಯಣ ದೇವರಿಗೆ 
ಸಪ್ತ ಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀಸಹಿತೋ ದೇವ ಗೃಹಾಣಾರ್ಘಂ ದಿವಾಕರ || ಎಂದು ಅರ್ಘ್ಯವನ್ನು ನೀಡಬೇಕು.

 ಇದರ ಜತೆ, ಮಿತ್ರಾಯನಮಃ  ಇದಮರ್ಘ್ಯಂ ಎಂದು ಹೇಳಿ, ಇದೇ ರೀತಿ, 
ರವಯೇ ನಮಃ |
ಸೂರ್ಯಾಯ ನಮಃ |
ಭಾನವೇ ನಮಃ | 
ಖಗಾಯ ನಮಃ |
ಪೂಷ್ಣೇ ನಮಃ |
ಹಿರಣ್ಯಗರ್ಭಾಯ ನಮಃ |
ಮರೀಚಯೇ ನಮಃ |
ಆದಿತ್ಯಾಯ ನಮಃ |
ಸವಿತ್ರೇ ನಮಃ | 
ಅರ್ಕಾಯ ನಮಃ |
ಭಾಸ್ಕರಾಯ ನಮಃ 
ಇದಮರ್ಘ್ಯಂ | ಎಂದು 12 ಬಾರಿ ಅರ್ಘ್ಯ ನೀಡಬಹುದು.

     ನಂತರ *ದಿವಾಕರಂ ದೀಪ್ತಸಹಸ್ರರಶ್ಮಿಂ
ತೇಜೋಮಯಂ ಜಗತಃ ಕರ್ಮಸಾಕ್ಷಿಮ್ |* ಎಂದು ನಮಿಸಿ, ಪೂಜೆಯ ನಂತರ ಆರೋಗ್ಯಾದಿ ಸಕಲ ಭಾಗ್ಯ ನೀಡುವಂತೆ ಕುಟುಂಬ ಸಮೇತ ಪ್ರಾರ್ಥಿಸಬೇಕು. ಕೆಂಪು ಹೂವು, ಕೆಂಪು ಬಣ್ಣದ ಗಂಧವನ್ನು ಸಮರ್ಪಿಸುವುದು ವಿಶೇಷವಾಗಿದೆ. 
 
ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ |
ಶ್ವೇತಪದ್ಮಧರಂ ದೇವಂ‌ ತಂ ಸೂರ್ಯಂ ಪ್ರಣಮಾಮ್ಯಹಂ ||

ಶ್ರೀ ಸೂರ್ಯಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನಾರಾಯಣದೇವರು ಎಲ್ಲರನ್ನೂ ಸಲಹಲಿ.

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
***


ರಥಸಪ್ತಮೀ ದಿವಸ ಆಚರಿಸಬೇಕಾದ ಕರ್ತವ್ಯಕರ್ಮಗಳ ಕುರಿತ ವಿವರಣೆ ಕೆಳಗಿನ ಎರಡು ಲೇಖನಗಳಲ್ಲಿವೆ. 

ಸ್ನಾನದ ಕ್ರಮ

 ರಥಸಪ್ತಮಿಯನ್ನು ಎಂದು ಆಚರಿಸಬೇಕು,  ರಥಸಪ್ತಮಿಯ ಆಚರಣೆಯ ಕ್ರಮ,  ಅರುಣೋದಯದಲ್ಲಿ ಸ್ನಾನ,  ಅರುಣೋದಯಕಾಲದಲ್ಲಿ ಗೃಹಸ್ಥರು ಸ್ನಾನ ಮಾಡಬಹುದೇ? ಎಂಬ ಪ್ರಶ್ನೆಗೆ ಉತ್ತರ,  ಸ್ನಾನದ ಸಂಕಲ್ಪ,  ಅರುಣಪ್ರಾರ್ಥನಾಮಂತ್ರ,  ಸ್ನಾನದಲ್ಲಿ ಸಪ್ತಮೀಪ್ರಾರ್ಥನಾಮಂತ್ರಗಳು,  ಸೂರ್ಯದರ್ಶನ,  ಸೂರ್ಯಪ್ರಾರ್ಥನಾಮಂತ್ರ,  ಇಷ್ಟು ವಿಷಯಗಳು ಈ 👇ಲೇಖನದಲ್ಲಿ ಇವೆ. 
http://vishwanandini.com/fullarticle.php?serialnumber=VNA219


ಸೂರ್ಯಪೂಜಾವಿಧಾನ

ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುವ ವಿಧಾನ, ಅರ್ಘ್ಯಪ್ರದಾನ ಮಾಡುವ ರೀತಿ, ಕೂಷ್ಮಾಂಡದಾನನ ಕ್ರಮದ ವಿವರಣೆಯೊಂದಿಗೆ ಶ್ರೇಷ್ಠವಾದ ಆರೋಗ್ಯವನ್ನು ಅನುಗ್ರಹಿಸುವ ಆರೋಗ್ಯಸಪ್ತಮೀವ್ರತದ ಆಚರಣೆಯ ವಿವರಣೆ ಈ👇 ಲೇಖನದಲ್ಲಿದೆ. 

http://vishwanandini.com/fullarticle.php?serialnumber=VNA220

*****

ಮಾಘ ಶುದ್ಧ ಸಪ್ತಮಿ

ಸೂರ್ಯೋದಯದೊಳಗೆ ಎಕ್ಕಿಎಲೆಯನ್ನು ತಲೆಯಮೇಲೆ ಇಟ್ಟುಕೊಂಡು ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ಕೊಡಬೇಕು.
ನಂತರ ರಥದಲ್ಲಿ ಕುಳಿತಿರತಕ್ಕ ಸೂರ್ಯದೇವರ ಪೊಜೆಮಾಡಬೇಕು.

ಸ್ನಾನ ಮಂತ್ರ–
ಯದ್ಯಜ್ಜನ್ಮಕೃತಂ ಪಾಪಂ
ಮಯಾ ಸಪ್ತಸು ಜನ್ಮಸು|
ತನ್ಮೇ ರೋಗಂ ಚ ಶೋಕಂ ಚ
ಮಾಕರೀ ಹಂತು ಸಪ್ತಮಿ||

ಎತಜ್ಜನ್ಮಕೃತಂ ಪಾಪಂ
ಯಚ್ಚ ಜನ್ಮಾಂತರಾರ್ಜಿತಂ|
ಮನೋವಾಕ್ಕಾಯಜಂ ಯಚ್ಚ
ಜ್ಞಾತಾ ಜ್ಞಾತಂ ಚ ಯತ್ಪುನ:||

ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಕೇ| ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ||

ಸೂರ್ಯಾರ್ಘ್ಯಮಂತ್ರ
ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ|ಸಪ್ತಮೀಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ||

ಈ ಮಂತ್ರದಿಂದ ರಥಸಪ್ತಮಿದಿನ ಸೂರ್ಯಾರ್ಘ್ಯ ಕೊಡಬೇಕು.


ಪಂ.ಜಯತೀರ್ಥಾಚಾರ್ಯ ಹಾವನೂರ
********
ರಥ ಸಪ್ತಮಿ




1 comment: